ಚಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲೂ ಟಿಕ್ಕಿ

ಚಾಟ್ ಭಾರತ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿ ರಸ್ತೆ ಬದಿಯ ಮಳಿಗೆಗಳು ಅಥವಾ ಆಹಾರ ಗಾಡಿಗಳಲ್ಲಿ ಬಡಿಸಲಾಗುವ ಖಾರದ ಲಘು ಆಹಾರವನ್ನು ವರ್ಣಿಸುವ ಒಂದು ಪದ. ಉತ್ತರ ಪ್ರದೇಶದಲ್ಲಿ ಅದರ ಮೂಲಗಳನ್ನು ಹೊಂದಿರುವ ಚಾಟ್ ದಕ್ಷಿಣ ಏಷ್ಯಾದ ಉಳಿದ ಭಾಗಗಳಲ್ಲಿ ಅಪಾರವಾಗಿ ಜನಪ್ರಿಯವಾಗಿದೆ. ಈ ಶಬ್ದದ ಮೂಲ ಹಿಂದಿಯ ಚಾಟನಾ (ನೆಕ್ಕುವುದು) ದಿಂದ ಬಂದಿದೆ.

ಅವಲೋಕನ[ಬದಲಾಯಿಸಿ]

ಚಾಟ್ ತಿನಿಸುಗಳು ಪ್ರಮುಖವಾಗಿ ಕರಿದ ಹಿಟ್ಟಿನಿಂದ ಮಾಡಿದ ಸಣ್ನ ಪೂರಿಯಿಂದಲೆ ಆಗಿರುತ್ತದೆ. ಮೂಲ ಚಾಟ್ಅನ್ನು ಪೊಟಾಟೊ, ಗರಿಗರಿಯಾದ ಬ್ರೆಡ್, ಮೊಸರು ಹಾಗು ವಡೆ ಅಥವ "ದಹಿವಡಾ", ಬೇಳೆ ಅಥವ ಗಜ್ಜರಿಯ ಜೊತೆಗೆ ಉಪ್ಪು-ಹುಳಿ-ಖಾರದಿಂದ ಕೂಡಿದ ಮನೆಯಲ್ಲೆ ತಯಾರಿಸಿದ ಹುಣಸೆ ಹಣ್ಣಿನ ರಸವನ್ನು ಬಳಸುತ್ತಾರೆ. ಆಲೂ ಟಿಕ್ಕಿ, ಸಮೋಸ, ಬೇಲ್ ಪುರಿ ಪಾನಿಪುರಿ, ಮಾಸಾಲಾಪುರಿ ದಹಿಪುರಿ ಸೇವ್‍ಪುರಿ ಪಾಪ್ರಿ ಚಾಟ್ ಹಿಗೆ ಬೇರೆ ಬೇರೆ ಹೆಸರಿನಲ್ಲಿ ಬೇರೆ ರೀತಿಯ ಚಾಟ್ ತಿನಿಸುಗಳನ್ನು ತಯಾರಿಸುತ್ತಾರೆ.

ಈ ತಿಂಡಿಗಳಲ್ಲಿ ಸಾಮಾನ್ಯವಾದ ಸಮಾನುಗಳು ಮೊಸರು, ತುರಿದ ನೀರಿಳ್ಳಿ, ತುರಿದ ತೊಮೇಟೋ, ತುರಿದ ಕೊತ್ತಂಬರಿ ಸೊಪ್ಪು, ಹುರಿದ ಶೇವಿಗೆ ಅಥವ 'ಸೆವ್' ಹಾಗು ಚಾಟ್ ಮಸಾಲ. ಈ ಮಸಾಲೆಯಲ್ಲಿ ಮಾವಿನ ಹುಡಿ,ಜೀರಿಗೆ ಹುಡಿ,ಕಲ್ಲುಪ್ಪು,ಕೊತ್ತಂಬರಿಹುಡಿ, ಒಣಶೂಂಟಿ, ಉಪ್ಪು, ಒಳ್ಳೆ ಮೆಣಸಿನಕಾಳು ಮತ್ತು ಒಣಮೆಣಸು ಪುಡಿಯ ಮಿಶ್ರದಿಂದ ಮಾಡಿರುತ್ತಾರೆ. ಇದೆಲ್ಲಾ ವಸ್ತುಗಳನ್ನು ಒಟ್ಟುಮಾಡಿ ರುಚಿಗೆ ತಕ್ಕಂತೆ ಮಸಾಲೆಯನ್ನು ಹಾಕಿ ತಟ್ಟೆಗೆ ಹಾಕಿ ತಿನ್ನತಕ್ಕದ್ದು.

ಇತಿಹಾಸ[ಬದಲಾಯಿಸಿ]

ಚಾಟ್ ತಿನಿಸುಗಳು ಮೊದಲಿಗೆ ಹುಟ್ಟಿಕೊಂಡದ್ದು ಉತ್ತರ ಪ್ರದೇಶದಲ್ಲಿ. ಆದರೆ ಈಗ ದೇಶದ ಎಲ್ಲಾ ಭಾಗಗಳಲ್ಲಿ ಇದನ್ನು ತಯಾರಿಸುತ್ತಾರೆ. ಕೆಲವು ಚಾಟ್‍ಗಳು ಸಾಂಸ್ಕೃತಿಕ ಸಮನ್ವಯದಿಂದ ಬಂದದ್ದಾಗಿದದೆ. ಉದಾಹರಣೆಗೆ, ಪಾವ್ ಬಾಜಿ ಅಂದರೆ ಇದಕ್ಕೆ ಪೊರ್ಚುಗೀಸರ ಬನ್ ಸೇರಿಸಿ ಮಾಡನಾಗಿತ್ತದೆ. ಆಮೇಲೆ ಸೆವ್ ಪುರಿ ಹಾಗು ಬೆಲ್ ಪುರಿ ಗುಜರಾತಿನಿಂದ ಬಂದಿದ.

ಪ್ರದೇಶಗಳು[ಬದಲಾಯಿಸಿ]

ಚಾಟ್ ತಿನಿಸು ಸಿಗುವ ಸ್ಥಳಗಳಲ್ಲಿ ಜನಪ್ರಿಯವಾದ ಚಾಟ್ ಅಂಗಡಿಗಳು ಹಾಗು ಧಾಬಾಗಳು ಇವೆ, ಉದಾ. ಮುಂಬೈನ ಚೌಪಾಟಿ ಸಮುದ್ರ. ನಗರದಿಂದ ನಗರಕ್ಕೆ ಚಾಟ್‍ ತಿನಿಸುಗಳು ಬದಾಲಾಗುತ್ತಾ ಹೋಗುತ್ತದೆ. ಅಜಂಗಡ್, ವಾರಾಣಾಸಿ, ಆಗ್ರ, ಮೀರತ್, ಮುಝಫ್ಫರ್ನಗರ ಹಾಗು ಮಥರೆಯ ಚಾಟ್‍ಗಳು ದೆಶದಾದ್ಯಂತ ಜನಪ್ರಿಯ. ಹೈದರಾಬಾದಿನ ಚಾಟ್‍ಗಳು ಬೇರೆ ಸ್ವಾದ ಹೊಂದಿರುತ್ತದೆ, ಏಕೆಂದರೆ ಅದನ್ನು ಬಿಹಾರದವರು ತಯಾರಿಸುತ್ತಾರೆ.

ಚಾಟ್ ವಿಧಗಳು[ಬದಲಾಯಿಸಿ]

  • ಆಲೂ ಚಾಟ್ - ಆಲೂಗಡ್ಡೆಯನ್ನು ಸಣ್ಣದಾಗೆ ತುಂಡುಮಾಡಿ, ಎಣ್ಣೆಯಲ್ಲಿ ಕರಿದಯ ಚಟ್ನಿಯೊಂದಿಗೆ ಬಡಿಸುವುದು.
  • ಆಲೂ ಟಿಕ್ಕಿ
  • ಬೆಡಾಯಿ - ಪುರಿಯೊಳಗೆ ಬೇಳೆ ತುಂಬಿಸಿ ಎಣ್ಣೆಯಲ್ಲಿ ಕರಿದು, ಆಲೂಗಡ್ಡೆ ಪಲ್ಯದೊಂದಿಗೆ ತಿನ್ನುವುದು.
  • ಭಾಲಾ
  • ಬೆಲ್‍ಪುರಿ
  • ರಗ್ಡ ಪಟ್ಟಿಸ್
  • ಛಿಲ - ಕಡ್ಲೆ ಹಿಟ್ಟನಿಂದ ಮಾಡಿದ ಪ್ಯಾನ್ಕೇಕ್ಗಳನ್ನು ಸಿಹಿ ಚಟ್ನಿಯೊಂದಿಗೆ ತಿನ್ನುವಿದು.
  • ದಹಿಪುರಿ
  • ದಹಿ ವಡ
  • ಮಂಗೊಡೆ - ಪಕೋಡದಂತಿರುವ ತಿನಿಸು,
  • ಪಕೋರ - ಪನೇರ್ ಮತ್ತು ಬೇರೆ ಬೇರೆ ವಸ್ತುಗಳನ್ನು ಸೇರಿಸಿ ಕಡ್ಲೆಹಿಟ್ಟನೊಂದಿಗೆ ಬೆರೆಸಿ ಕರಿಯುವುದು.
  • ಪಾನಿಪುರಿ/ ಗೊಲ್‍ಗಪ್ಪ
  • ಮಸಾಲಪುರಿ
  • ಚನಾ ಚಾಟ್
  • ಪಾಪ್ರಿ ಚಾಟ್
  • ಸಮೋಸ ಚಾಟ್
  • ಸೆವ್‍ಪುರಿ
  • ಪಾವ್ ಬಾಜಿ
  • ವಡಾ ಪಾವ್
  • ದಹಿ ಬಲ್ಲಾ ಕಿ ಚಾಟ್
  • ಪನೀರ್ ಚಾಟ್ ಪುರಿ
"https://kn.wikipedia.org/w/index.php?title=ಚಾಟ್&oldid=1161043" ಇಂದ ಪಡೆಯಲ್ಪಟ್ಟಿದೆ