ಆಲೂ ಟಿಕ್ಕಿ
ಗೋಚರ
ಆಲೂ ಟಿಕ್ಕಿ ಬೇಯಿಸಿದ ಆಲೂಗಡ್ಡೆಗಳು, ಈರುಳ್ಳಿ ಮತ್ತು ವಿವಿಧ ಸಂಬಾರ ಪದಾರ್ಥಗಳಿಂದ ತಯಾರಿಸಲಾದ ಭಾರತೀಯ ಉಪಖಂಡದ ಒಂದು ಲಘು ಆಹಾರ. "ಟಿಕ್ಕಿ" ಶಬ್ದದ ಅರ್ಥ ಒಂದು ಚಿಕ್ಕ ಕಟ್ಲೆಟ್ ಅಥವಾ ಕ್ರೋಕೆಟ್. ಅದು ದೆಹಲಿಯಲ್ಲಿ ಅಲ್ಲದೆ ಭಾರತದ ಇತರ ಭಾಗಗಳಲ್ಲಿನ ಬಹುತೇಕ ಪ್ರತಿಯೊಂದುಚಾಟ್ ಅಂಗಡಿಯಲ್ಲಿ ಕಾಣಸಿಗುತ್ತದೆ. ಅದನ್ನು ಬಿಸಿಯಾಗಿ ಸ್ಞೌಠ್, ಹುಣಸೆ ಮತ್ತು ಕೊತ್ತಂಬರಿ- ಪುದೀನ ಸಾಸ್, ಮತ್ತು ಕೆಲವೊಮ್ಮೆ ಮೊಸರು ಅಥವಾ ಬೇಯಿಸಿದ ಕಡಲೆಯ ಜೊತೆಗೆ ಬಡಿಸಲಾಗುತ್ತದೆ.[೧]