ಪಾನಿ ಪೂರಿ
Jump to navigation
Jump to search
alternate_name = ಪಾನಿ ಪತಾಶಿ (ಹರ್ಯಾಣ, ಉತ್ತರಪ್ರದೇಶ) ಫಲ್ಕಿ (ಮಧ್ಯಪ್ರದೇಶ) Golgappa, ಗೋಲ್ಗಪ್ಪಯ್ ಅಥವಾ ಗೋಲ್ಗಪ್ಪ (ದೆಹಲಿ, ಪಂಜಾಬ್) ಪುಚ್ಕ (ಬಂಗಾಳ, ನೇಪಾಳ, ಝಾರ್ಖಂಡ್) ಫಸ್ಕಾ (ಸಿಲ್ಹೆಟ್ ಮತ್ತು ಚಿತ್ತಗಾಂಗ್) ಗುಪ್ - ಚುಪ್ (ಒಡಿಶಾ, ಬಿಹಾರ, ಝಾರ್ಖಂಡ್, ಛತ್ತೀಸ್ಗಢ) ಪಕೋಡಿ (ಗುಜರಾತ್) | |
ವಿವರಗಳು | |
---|---|
ನಮೂನೆ | ತಿಂಡಿ |
ಮುಖ್ಯ ಘಟಕಾಂಶ(ಗಳು) | ಹಿಟ್ಟು , ಮಸಾಲೆಯುಕ್ತ ನೀರು, ಈರುಳ್ಳಿ , ಆಲೂಗೆಡ್ಡೆ , ಗಜ್ಜರಿ |
ಪಾನಿ ಪೂರಿ ದಕ್ಷಿಣ ಏಶಿಯಾದ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಭಾರತದಲ್ಲಿ ಪ್ರತಿಯೊಂದು ಊರಲ್ಲೂ ಪಾನಿ ಪೂರಿ ಗಾಡಿಗಳು ಕಾಣಸಿಗುತ್ತವೆ. ಉತ್ತರ ಭಾರತದ 'ಗೋಲ್ ಗಪ್ಪ' ಕೂಡ ಪಾನಿ ಪೂರಿ ಮಾಡುವ ಒಂದು ವಿಧಾನ. ಗೋಳಾಕಾರವಾಗಿರುವ ಪೂರಿಯಲ್ಲಿ ಈರುಳ್ಳಿ, ಕ್ಯಾರೆಟ್, ಬೇಯಿಸಿದ ಬಟಾಣಿ, ಆಲೂಗಡ್ಡೆ ಇವುಗಳನ್ನು ಒಂದೊಂದಾಗಿ ತುಂಬಿ, ಮೊದಲೇ ತಯಾರಿಸಿದ ಪಾನಿ ಹಾಗು ಸ್ವೀಟ್ ಜೊತೆ ತಿನ್ನಲು ರುಚಿ. ಇದನ್ನು ಬೇರೆ ಬೇರೆ ವಿಧಾನದಲ್ಲೂ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು[ಬದಲಾಯಿಸಿ]
- ಪಾನಿತಯಾರಿಸಲು:
- ಕೊತ್ತಂಬರಿ ಸೊಪ್ಪು - 1 ಕಟ್ಟು ಪುದೀನಾ ಸೊಪ್ಪು - 1 ಹಸಿಮೆಣಸಿನಕಾಯಿ - 2 ರಿಂದ 3 ಹುಣಸೆಹಣ್ಣು - ದೊಡ್ಡ ನಿಂಬೆಗಾತ್ರದಷ್ಟು ನಿಂಬೆಹಣ್ಣು - 1 ಕಾಳುಮೆಣಸು - 2 ಟೀ ಚಮಚ ಜೀರಿಗೆ - 2 ಟೀ ಚಮಚ ಉಪ್ಪು - ರುಚಿಗೆ ತಕ್ಕಷ್ಟು ಕುದಿಸಿ ಆರಿಸಿದ ನೀರು - ಸುಮಾರು ಒಂದೂವರೆ ಲೀಟರ್
ಆಲೂ ಪಲ್ಯ ತಯಾರಿಸಲು[ಬದಲಾಯಿಸಿ]
1 ದೊಡ್ಡ ಆಲೂಗಡ್ಡೆ ಕೆಂಪು ಮೆಣಸಿನ ಪುಡಿ - 1 / 2 ಚಮಚ ಕಾಳುಮೆಣಸಿನ ಪುಡಿ - 1 / 4 ಚಮಚ ಉಪ್ಪು - ರುಚಿಗೆ ತಕ್ಕಷ್ಟು ಮಾವಿನ ಹಣ್ಣಿನ ಪುಡಿ ( ಆಮ್ ಚ್ಯೂರ್) - 1 / 4 ಚಮಚ ಅಥವಾ ನಾಲ್ಕಾರು ಹನಿ ನಿಂಬೆರಸ ಮಧ್ಯಮಗಾತ್ರದ ಈರುಳ್ಳಿ - 1 ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ
ತಯಾರಿಸುವ ವಿಧಾನ[ಬದಲಾಯಿಸಿ]
- 1. ಕರಿಮೆಣಸು, ಜೀರಿಗೆಯನ್ನು ಹುರಿದು ಪುಡಿಮಾಡಿಕೊಳ್ಳಿ. ಹರಳು ಉಪ್ಪನ್ನು ಸೇರಿಸುವುದಾದರೆ ಅದನ್ನೂ ಸ್ವಲ್ಪ ಹುರಿದುಕೊಳ್ಳಬೇಕು. 2. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹುಣಸೆಹಣ್ಣು, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ರುಬ್ಬಿ, ಚೆನ್ನಾಗಿ ಸೋಸಿ ಇಟ್ಟುಕೊಳ್ಳಬೇಕು. 3. ಸೋಸಿಕೊಂಡ ರಸಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ, ಪುಡಿಮಾಡಿದ ಜೀರಿಗೆ, ಕರಿಮೆಣಸನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲಸಬೇಕು. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಲಿ.
ಆಲೂ ಪಲ್ಯ[ಬದಲಾಯಿಸಿ]
- 1.ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. 2. ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು.3. ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು.ಈಗ ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಂಡು ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿಯನ್ನು ತುಂಬಿಸಿದರೆ ರುಚಿಕರವಾದ ಪಾನಿಪುರಿ ರೆಡಿ.
ನೋಡಿ[ಬದಲಾಯಿಸಿ]
ಹೊರ ಸಂಪರ್ಕ[ಬದಲಾಯಿಸಿ]
ಉಲ್ಲೇಖ[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Panipuri ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |