ಸಮುದ್ರವಾಸಿ ಮೊಸಳೆ
Saltwater Crocodile | |
---|---|
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | |
ಪ್ರಜಾತಿ: | C. porosus
|
Binomial name | |
Crocodylus porosus | |
Range of the saltwater crocodile in black |
ಸಮುದ್ರವಾಸಿ ಅಥವಾ ನದೀಮುಖದಲ್ಲಿರುವ ಮೊಸಳೆ ಯು (ಕ್ರಾಕಡೈಲಸ್ ಪೋರೋಸಸ್ ) ಎಲ್ಲಾ ಜೀವಂತ ಸರೀಸೃಪಗಳ ಪೈಕಿ ಅತಿದೊಡ್ಡದು ಎನಿಸಿಕೊಂಡಿದೆ. ಆಸ್ಟ್ರೇಲಿಯಾದ ಉತ್ತರಭಾಗ, ಭಾರತದ ಪೂರ್ವಭಾಗದ ಕರಾವಳಿ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿನ ತನಗೆ ಸರಿಹೊಂದುವ ಆವಾಸಸ್ಥಾನಗಳಲ್ಲಿ ಇದು ಕಂಡುಬರುತ್ತದೆ. ತಾನು ವಾಸಿಸುವಪ್ರದೇಶಗಳ ಸುತ್ತ ಮುತ್ತ ವಾಸಿಸುವ ಮನುಷ್ಯರ ಪಾಲಿಗೆ ಸಮುದ್ರವಾಸಿ ಮೊಸಳೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಮನುಷ್ಯರನ್ನು ಕೊಂದು ತಿಂದ ಹಲವು ಘಟನೆಗಳು ಆಸ್ಟ್ರೇಲಿಯಾದ ಕ್ವೀನ್ಸ್ಲೆಂಡ್, ನಾರ್ದರ್ನ್ ಟೆರಿಟರಿ ಹಾಗೂ ವೆಸ್ಟರ್ನಆಸ್ಟ್ರೇಲಿಯಾ ರಾಜ್ಯಗಳ ಉತ್ತರ ಕಡಲತೀರ ಪ್ರದೇಶಗಳಿಂದ ವರದಿಗಳು ಬಂದದ್ದುಂಟು.
ದೇಹರಚನೆ ಮತ್ತು ರೂಪವಿಜ್ಞಾನ
[ಬದಲಾಯಿಸಿ]ಸಮುದ್ರವಾಸಿ ಮೊಸಳೆಯು ಒಂದು ಉದ್ದನೆಯ ಮುಸುಡಿಯನ್ನು ಹೊಂದಿದ್ದು, ಅದು ಅಗಲ ಮುಸುಡಿಯ ಮೊಸಳೆಯದಕ್ಕಿಂತ ಉದ್ದವಾಗಿರುತ್ತದೆ: ಇದರ ಉದ್ದವು ತಳಭಾಗದಲ್ಲಿನ ಅದರ ಅಗಲಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿರುತ್ತದೆ.[೧] ಮೊಸಳೆ ಜಾತಿಗೆ ಸೇರಿದ ಇತರ ಪ್ರಾಣಿಗಳಿಗೆ ಹೋಲಿಸಿದಾಗ, ಸಮುದ್ರವಾಸಿ ಮೊಸಳೆಯು ಅಲ್ಪವೇ ಎನ್ನಬಹುದಾದ ರಕ್ಷಾಕವಚಗಳನ್ನು ತನ್ನ ಕುತ್ತಿಗೆಯ ಮೇಲೆ ಹೊಂದಿರುತ್ತದೆ. ಇದರ ಅಗಲವಾದ ಶರೀರವು ಬಹುಪಾಲು ಇತರ ತೆಳ್ಳಗಿನ ಮೊಸಳೆಗಳ ಶರೀರಕ್ಕೆ ತದ್ವಿರುದ್ಧವಾಗಿದ್ದು, ಸದರಿ ಸರೀಸೃಪವು ಒಂದು ನೆಗಳು ಆಗಿತ್ತು ಎಂಬಂಥ, ದೃಢಪಡಿಸಲ್ಪಡದ ಆರಂಭಿಕ ಊಹೆಗಳಿಗೆ ಕಾರಣವಾಗುತ್ತದೆ.[೨]
ಸಮುದ್ರವಾಸಿ ವಯಸ್ಕ ಗಂಡು ಮೊಸಳೆಯೊಂದರ ತೂಕವು 600 to 1,000 kilograms (1,300–2,200 lb)ನಷ್ಟಿರುತ್ತದೆ ಮತ್ತು ಉದ್ದವು ಸಾಮಾನ್ಯವಾಗಿ 4.1 to 5.5 metres (13–18 ft)ನಷ್ಟಿರುತ್ತದೆ; ಆದರೂ ಸಹ ಪ್ರೌಢ ಗಂಡು ಮೊಸಳೆಗಳು 6 metres (20 ft)ನಷ್ಟು ಅಥವಾ ಅದಕ್ಕಿಂತ ಹೆಚ್ಚಿರಬಹುದು ಮತ್ತು 1,300 kilograms (2,900 lb)ನಷ್ಟು ಅಥವಾ ಅದಕ್ಕಿಂತ ಹೆಚ್ಚು ತೂಗಬಹುದು.[೩][೪][೫] ಆಧುನಿಕ ಯುಗದ ಮೊಸಳೆ ಜಾತಿಗೆ ಸೇರಿದ ಯಾವುದೇ ಪ್ರಾಣಿಗಳ ಪೈಕಿ ಈ ಜಾತಿಯು ಮಹತ್ತರವಾದ ಲಿಂಗಾಧಾರಿತ ದ್ವಿರೂಪತೆಯನ್ನು ಹೊಂದಿದ್ದು, ಹೆಣ್ಣು ಮೊಸಳೆಗಳು ಗಂಡು ಮೊಸಳೆಗಳಿಗಿಂತ ಸಾಕಷ್ಟು ಸಣ್ಣ ಗಾತ್ರದಲ್ಲಿರುತ್ತವೆ. ವಿಶಿಷ್ಟವಾದ ಹೆಣ್ಣು ಮೊಸಳೆಯ ಶರೀರದ ಉದ್ದವು 2.1 to 3.5 metres (7–11 ft)ರ ಶ್ರೇಣಿಯಲ್ಲಿ ಬರುತ್ತದೆ.[೨][೩][೬] ದಾಖಲೆಯಲ್ಲಿ ನಮೂದಾಗಿರುವ ಅತಿದೊಡ್ಡ ಹೆಣ್ಣು ಮೊಸಳೆಯು ಸುಮಾರು 4.2 metres (14 ft)ನಷ್ಟು ಅಳತೆಯನ್ನು ಹೊಂದಿತ್ತು.[೫] ಸಮಗ್ರವಾಗಿ ಹೇಳುವುದಾದರೆ, ಇದರ ಜಾತಿಯ ಸರಾಸರಿ ತೂಕವು ಸರಿಸುಮಾರಾಗಿ 450 kilograms (1,000 lb)ನಷ್ಟಿರುತ್ತದೆ.[೭]
ಸಮುದ್ರವಾಸಿ ಮೊಸಳೆಗಳು ತಲುಪಬಲ್ಲ ಅತಿದೊಡ್ಡ ಗಾತ್ರವು, ಪರಿಗಣನಾರ್ಹ ವಿವಾದದ ವಿಷಯವಾಗಿದೆ. ಮುಸುಡಿಯಿಂದ-ಬಾಲದವರೆಗೆ ಅಳೆಯಲ್ಪಟ್ಟ ಮತ್ತು ಪರಿಶೀಲಿಸಲ್ಪಟ್ಟ ಇದುವರೆಗಿನ ಅತಿಉದ್ದದ ಮೊಸಳೆಯು, ಸತ್ತ ಮೊಸಳೆಯೊಂದರ ಚರ್ಮವಾಗಿದ್ದು ಇದು 6.1 metres (20 ft)ನಷ್ಟು ಉದ್ದವಿತ್ತು. ಮೃತದೇಹದಿಂದ ತೆಗೆದ ನಂತರ ಚರ್ಮಗಳು ಕೊಂಚಮಟ್ಟಿಗೆ ಮುದುರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತವೆಯಾದ್ದರಿಂದ, ಈ ಮೊಸಳೆಯು ಜೀವಂತವಿದ್ದಾಗಿನ ಉದ್ದವು 6.3 metres (21 ft)ನಷ್ಟಿತ್ತು ಎಂದು ಅಂದಾಜಿಸಲಾಯಿತು, ಮತ್ತು ಇದು ಪ್ರಾಯಶಃ 1,200 kilograms (2,600 lb)ಕ್ಕೂ ಹೆಚ್ಚು ತೂಗುತ್ತಿತ್ತು.[೮] ಅಪೂರ್ಣ ಅವಶೇಷಗಳು (ಒಡಿಶಾದಲ್ಲಿ[೯] ಗುಂಡಿಕ್ಕಿ ಸಾಯಿಸಲಾದ ಮೊಸಳೆಯೊಂದರ ತಲೆಬುರುಡೆ) 7.6-metre (25 ft)ನಷ್ಟಿರುವ ಮೊಸಳೆಯೊಂದರಿಂದ ಬಂದವಾಗಿವೆ ಎಂದು ಸಮರ್ಥಿಸಲ್ಪಟ್ಟಿದೆಯಾದರೂ, ಅದು 7 metres (23 ft)ಕ್ಕಿಂತ ಅಷ್ಟೇನೂ ಹೆಚ್ಚಿರದ ಒಂದು ಉದ್ದವನ್ನು ಹೊಂದಿತ್ತು ಎಂಬುದಾಗಿ ವಿದ್ವತ್ಪೂರ್ಣ ಅವಲೋಕನವು ಸೂಚಿಸಿತು.[೮] 9-metre (30 ft)ರ ಶ್ರೇಣಿಯಲ್ಲಿನ ಮೊಸಳೆಗಳ ಕುರಿತಾಗಿ ಹಲವಾರು ಸಮರ್ಥನೆಗಳು ಮಂಡಿಸಲ್ಪಟ್ಟಿವೆ: 1840ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಸಾಯಿಸಲ್ಪಟ್ಟ ಮೊಸಳೆಯು 10 metres (33 ft)ನಷ್ಟಿತ್ತೆಂದು ವರದಿಮಾಡಲ್ಪಟ್ಟಿತು; ಫಿಲಿಪೈನ್ಸ್‌ನಲ್ಲಿನ ಲುಜಾನ್ ಮುಖ್ಯದ್ವೀಪದಲ್ಲಿರುವ ಜಲಜಾಲ ಎಂಬಲ್ಲಿ 1823ರಲ್ಲಿ ಸಾಯಿಸಲ್ಪಟ್ಟ ಮತ್ತೊಂದು ಮೊಸಳೆಯು 8.2 metres (27 ft)ನಷ್ಟಿತ್ತೆಂದು ವರದಿಮಾಡಲ್ಪಟ್ಟಿತು; 7.6 metres (25 ft)ನಷ್ಟಿತ್ತೆಂದು ವರದಿಮಾಡಲ್ಪಟ್ಟ ಮೊಸಳೆಯೊಂದು ಕಲ್ಕತ್ತಾದ ಆಲಿಪೋರ್ ಜಿಲ್ಲೆಯಲ್ಲಿನ ಹೂಗ್ಲಿ ನದಿಯಲ್ಲಿ ಸಾಯಿಸಲ್ಪಟ್ಟಿತು. ಆದಾಗ್ಯೂ, ಈ ಪ್ರಾಣಿಗಳ ತಲೆಬುರುಡೆಗಳನ್ನು ಅವಲೋಕಿಸಿದಾಗ, ಅವು 6 to 6.6 metres (20–22 ft)ನಷ್ಟು ವ್ಯಾಪ್ತಿಯನ್ನು ಹೊಂದಿದ್ದ ಪ್ರಾಣಿಗಳಿಗೆ ಸೇರಿದ್ದವು ಎಂದು ಸದರಿ ಅವಲೋಕನಗಳು ಸೂಚಿಸಿದವು.
ಸಮುದ್ರವಾಸಿ ಮೊಸಳೆಯ ಆವಾಸಸ್ಥಾನವನ್ನು ಇತ್ತೀಚಿಗೆ ಪುನಃಸ್ಥಾಪನೆ ಮಾಡಿದ್ದರಿಂದಾಗಿ ಹಾಗೂ ಕಳ್ಳಬೇಟೆಯಾಡುವಿಕೆಯು ತಗ್ಗಿದ ಕಾರಣದಿಂದಾಗಿ, 7-metre (23 ft)ನಷ್ಟಿರುವ ಮೊಸಳೆಗಳು ಇಂದು ಜೀವಂತವಾಗಿರುವ ಸಾಧ್ಯತೆಯಿದೆ.[೧೦] ಭಾರತದ[೯][೧೧] ಒಡಿಶಾ ರಾಜ್ಯದಲ್ಲಿನ ಭಿತರ್‌ಕನಿಕಾ ಉದ್ಯಾನದ ವ್ಯಾಪ್ತಿಯೊಳಗೆ, 7-metre (23 ft)ನಷ್ಟಿರುವ ಒಂದು ಸಮುದ್ರವಾಸಿ ಗಂಡು ಮೊಸಳೆಯು ಜೀವಂತವಾಗಿರುವುದರ ಕುರಿತಾದ ಸಮರ್ಥನೆಯೊಂದನ್ನು ಗಿನ್ನೆಸ್ ಅಂಗೀಕರಿಸಿದೆಯಾದರೂ, ಅತ್ಯಂತ ದೊಡ್ಡದಾದ ಜೀವಂತ ಮೊಸಳೆಯೊಂದನ್ನು ಬಲೆಗೆ ಕೆಡವುವಿಕೆ ಮತ್ತು ಅಳೆಯುವಿಕೆಯ ಹಿಂದಿರುವ ಕ್ಲಿಷ್ಟತೆಯ ಕಾರಣದಿಂದಾಗಿ ಈ ಅಳತೆಗಳ ನಿಖರತೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ.
1957ರಲ್ಲಿ ಕ್ವೀನ್ಸ್‌ಲೆಂಡ್‌ನಲ್ಲಿ ಹೊಡೆದುರುಳಿಸಲಾದ ಮೊಸಳೆಯೊಂದು 8.5 metres (28 ft)ನಷ್ಟು ಉದ್ದವಿತ್ತೆಂದು ವರದಿಮಾಡಲ್ಪಟ್ಟಿತಾದರೂ, ಯಾವುದೇ ಪ್ರಮಾಣೀಕರಿಸಲ್ಪಟ್ಟ ಅಳತೆಗಳು ಲಭ್ಯವಾಗಲಿಲ್ಲ ಮತ್ತು ಈ ಮೊಸಳೆಯ ಅವಶೇಷಗಳು ಅಸ್ತಿತ್ವದಲ್ಲಿಲ್ಲ. ಈ ಮೊಸಳೆಯ "ಪ್ರತಿರೂಪ"ವೊಂದನ್ನು ಒಂದು ಪ್ರವಾಸಿ ಆಕರ್ಷಣೆಯನ್ನಾಗಿಸಲಾಗಿದೆ.[೧೨][೧೩][೧೪] 8+ ಮೀಟರುಗಳಷ್ಟು (28+ ಅಡಿ) ಉದ್ದದ ಮೊಸಳೆಗಳ ಕುರಿತಾದ ಇತರ ಅನೇಕ ದೃಢಪಟ್ಟಿಲ್ಲದ ವರದಿಗಳು ಲಭ್ಯವಿವೆಯಾದರೂ,[೧೫][೧೬] ಇವು ತೀರಾ ಅಸಂಭವ ಎಂದು ಹೇಳಬಹುದು.
ಹರಡಿಕೆ
[ಬದಲಾಯಿಸಿ]ಸಮುದ್ರವಾಸಿ ಮೊಸಳೆಯು ಭಾರತದಲ್ಲಿ ಕಂಡುಬರುವ ಮೂರು ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳ ಪೈಕಿ ಒಂದೆನಿಸಿದ್ದು, ಅಗಲ ಮುಸುಡಿಯ ಮೊಸಳೆ ಮತ್ತು ಏಷ್ಯಾದ ಉದ್ದಮೂತಿಯ ಮೊಸಳೆ ಉಳಿದೆರಡು ಬಗೆಗಳಾಗಿವೆ.[೧೭] ಭಾರತದ ಪೂರ್ವಭಾಗದ ಕರಾವಳಿಯನ್ನು ಹೊರತುಪಡಿಸಿ, ಈ ಮೊಸಳೆಯು ಭಾರತೀಯ ಉಪಖಂಡದಲ್ಲಿ ಅತ್ಯಂತ ಅಪರೂಪವಾಗಿದೆ. ಸಮುದ್ರವಾಸಿ ಮೊಸಳೆಗಳ (7 ಮೀಟರು ಉದ್ದದ ಒಂದು ಗಂಡು ಮೊಸಳೆಯೂ ಸೇರಿದಂತೆ ಅನೇಕ ದೊಡ್ಡ ವಯಸ್ಕ ಮೊಸಳೆಗಳನ್ನು ಒಳಗೊಂಡಿರುವ) ಒಂದು ಬೃಹತ್ ಸಂಖ್ಯೆಯು ಒಡಿಶಾದ ಭಿತರ್‌ಕನಿಕಾ ವನ್ಯಜೀವಿಕುಲ ಅಭಯಾರಣ್ಯದ ವ್ಯಾಪ್ತಿಯೊಳಗೆ ಅಸ್ತಿತ್ವದಲ್ಲಿದೆ ಮತ್ತು ಅವು ಸುಂದರಬನಗಳ ಭಾರತೀಯ ಭಾಗ ಮತ್ತು ಬಾಂಗ್ಲಾದೇಶ ಭಾಗಗಳಾದ್ಯಂತವೂ ಸಣ್ಣ ಸಂಖ್ಯೆಗಳಲ್ಲಿ ಇವೆ ಎಂದು ಹೇಳಲಾಗುತ್ತದೆ.
ಆಸ್ಟ್ರೇಲಿಯಾದ ಉತ್ತರಭಾಗದಲ್ಲಿ (ಆಸ್ಟ್ರೇಲಿಯಾದ ಪಶ್ಚಿಮಭಾಗ, ಕ್ವೀನ್ಸ್‌ಲೆಂಡ್ ಮತ್ತು ಉತ್ತರಭಾಗದ ಪ್ರದೇಶದ (ನಾರ್ದರ್ನ್ ಟೆರಿಟರಿ (Northern Territory)) ಅತ್ಯಂತ ಉತ್ತರದಲ್ಲಿರುವ ಭಾಗಗಳನ್ನು ಇದು ಒಳಗೊಂಡಿದೆ) ಸಮುದ್ರವಾಸಿ ಮೊಸಳೆಯು ಹಸನಾಗಿ ವರ್ಧಿಸುತ್ತಿದೆ; ಅದರಲ್ಲೂ ನಿರ್ದಿಷ್ಟವಾಗಿ, ಡಾರ್ವಿನ್ ಸಮೀಪದಲ್ಲಿರುವ ಬಹುವಿಧದ ನದಿ ವ್ಯವಸ್ಥೆಗಳಲ್ಲಿ (ಅಡಿಲೇಡ್, ಮೇರಿ ಮತ್ತು ಡಾಲಿ ನದಿಗಳು, ಅವುಗಳ ಪಕ್ಕದ ತುಂಡುತೊರೆಗಳು ಮತ್ತು ನದೀಮುಖಗಳು ಇವೇ ಮೊದಲಾದವು) ಈ ವಿಶಿಷ್ಟತೆಯು ಕಂಡುಬಂದಿದ್ದು, ಇಲ್ಲಿ ದೊಡ್ಡ ಗಾತ್ರದ (6 ಮೀಟರು +) ಸಮುದ್ರವಾಸಿ ಮೊಸಳೆಗಳು ಸಾಮಾನ್ಯವಾಗಿವೆ. ಆಸ್ಟ್ರೇಲಿಯಾದ ಸಮುದ್ರವಾಸಿ ಮೊಸಳೆಗಳ ಒಟ್ಟುಸಂಖ್ಯೆಯು 100,000 ಮತ್ತು 200,000ದಷ್ಟು ವಯಸ್ಕ ಮೊಸಳೆಗಳಷ್ಟರ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಆಸ್ಟ್ರೇಲಿಯಾದ ಪಶ್ಚಿಮಭಾಗದಲ್ಲಿನ ಬ್ರೂಮೆಯಿಂದ ಮೊದಲ್ಗೊಂಡು ಉತ್ತರಭಾಗದ ಪ್ರದೇಶದ ಸಮಗ್ರ ಕರಾವಳಿಯ ಮೂಲಕ ಹಾದು, ಕ್ವೀನ್ಸ್‌ಲೆಂಡ್‌ನಲ್ಲಿನ ರಾಕ್‌ಹ್ಯಾಂಪ್ಟನ್‌ವರೆಗೆ ಅವುಗಳ ಶ್ರೇಣಿಯು ವ್ಯಾಪಿಸುತ್ತದೆ. ಉತ್ತರಭಾಗದ ಪ್ರದೇಶದಲ್ಲಿಯೂ ವಾಸಿಸುವ ಸಿಹಿನೀರಿನ ಮೊಸಳೆಗಳಿಗೆ ಹೋಲಿಸಲ್ಪಟ್ಟಂತೆ, ನೆಗಳುಗಳಿಗೆ ಸಮುದ್ರವಾಸಿ ಮೊಸಳೆಯ ಹೋಲಿಕೆಯಿರುವುದರ ಕಾರಣದಿಂದಾಗಿ, ಆಸ್ಟ್ರೇಲಿಯಾದ ಉತ್ತರಭಾಗದ ನೆಗಳು ನದಿಗಳು ಆ ರೀತಿಯಲ್ಲಿ ತಪ್ಪಾಗಿ ಹೆಸರಿಸಲ್ಪಟ್ಟಿವೆ. ನ್ಯೂಗಿನಿಯಾದಲ್ಲಿ ಅವೂ ಸಹ ಸಾಮಾನ್ಯವಾಗಿದ್ದು, ವಸ್ತುತಃ ದೇಶದಲ್ಲಿನ ಪ್ರತಿಯೊಂದು ನದಿ ವ್ಯವಸ್ಥೆಯ ಕರಾವಳಿಯ ಅವಿಚ್ಛಿನ್ನ ಹರವುಗಳೊಳಗೆ, ಎಲ್ಲಾ ನದೀಮುಖಗಳು ಮತ್ತು ಮ್ಯಾಂಗ್ರೋವ್‌ಗಳ ಉದ್ದಕ್ಕೂ ಅವು ಕಂಡುಬರುತ್ತವೆ. ಬಿಸ್‌ಮಾರ್ಕ್ ದ್ವೀಪಸಮೂಹ, ಕಾಯ್ ದ್ವೀಪಗಳು, ಅರು ದ್ವೀಪಗಳು, ಮಲುಕು ದ್ವೀಪಗಳು ಹಾಗೂ ಟಿಮೋರ್ ಸೇರಿದಂತೆ ಪ್ರದೇಶದ ವ್ಯಾಪ್ತಿಯೊಳಗಿನ ಇತರ ಅನೇಕ ದ್ವೀಪಗಳು, ಮತ್ತು ಟೋರೆಸ್ ಜಲಸಂಧಿಯ ವ್ಯಾಪ್ತಿಯೊಳಗಿನ ಬಹುತೇಕ ದ್ವೀಪಗಳಾದ್ಯಂತವೂ, ಬದಲಾಗುತ್ತಿರುವ ಸಂಖ್ಯೆಗಳಲ್ಲಿ ಅವು ಕಾಣಿಸಿಕೊಳ್ಳುತ್ತವೆ.
ಐತಿಹಾಸಿಕವಾಗಿ ಹೇಳುವುದಾದರೆ, ಸಮುದ್ರವಾಸಿ ಮೊಸಳೆಯು ಆಗ್ನೇಯ ಏಷ್ಯಾದ ಉದ್ದಗಲಕ್ಕೂ ಕಂಡುಬಂದಿತ್ತಾದರೂ, ಅದರ ಬಹುಪಾಲು ಶ್ರೇಣಿಯು ಈಗ ನಿರ್ನಾಮವಾಗಿದೆ. ಇಂಡೋಚೈನಾದ ಬಹುತೇಕ ಭಾಗಗಳಲ್ಲಿ ಈ ಜಾತಿಯು ಕಾಡುಸ್ಥಿತಿಯಲ್ಲಿರುವುದು ದಶಕಗಳಿಂದಲೂ ವರದಿಮಾಡಲ್ಪಟ್ಟಿಲ್ಲ ಮತ್ತು ಥೈಲೆಂಡ್, ಲಾವೋಸ್, ವಿಯೆಟ್ನಾಂಗಳಲ್ಲಿ, ಹಾಗೂ ಪ್ರಾಯಶಃ ಕಾಂಬೋಡಿಯಾದಲ್ಲಿಯೂ ಇದು ನಿರ್ನಾಮವಾಗಿದೆ. ಮ್ಯಾನ್ಮಾರ್‌ನ ಬಹುತೇಕ ಭಾಗಗಳಲ್ಲಿ ಈ ಜಾತಿಯ ಸ್ಥಿತಿಗತಿಯು ವಿಷಮಸ್ಥಿತಿಯನ್ನು ತಲುಪಿದೆಯಾದರೂ, ಇರಾವ್ಯಾಡಿ ನದೀ ಮುಖಜ ಭೂಮಿಯಲ್ಲಿ ಅಸ್ತಿತ್ವದಲ್ಲಿರುವ ಅನೇಕ ದೊಡ್ಡ ವಯಸ್ಕ ಮೊಸಳೆಗಳಿಂದಾಗಿ ಅಲ್ಲೊಂದು ಸ್ಥಿರವಾದ ಸಮೂಹವಿದೆ ಎಂದು ತಿಳಿದುಬರುತ್ತದೆ.[೧೮] ಮ್ಯಾನ್ಮಾರ್ ದೇಶವು ಈ ಜಾತಿಯ ಕಾಡುಪ್ರಭೇದದ ಸಮೂಹಕ್ಕೆ ಈಗಲೂ ಆಶ್ರಯ ಕೊಟ್ಟಿರುವ ಇಂಡೋಚೈನಾ ವಲಯದ ಏಕೈಕ ದೇಶವಾಗಿರುವ ಸಂಭವವಿದೆ. ಮೆಕಾಂಗ್ ನದೀ ಮುಖಜ ಭೂಮಿಯಲ್ಲಿ (1980ರ ದಶಕದಲ್ಲಿ ಈ ಪ್ರದೇಶದಿಂದ ಅವು ಕಣ್ಮರೆಯಾದವು) ಮತ್ತು ಇತರ ನದಿ ವ್ಯವಸ್ಥೆಗಳಲ್ಲಿ ಸಮುದ್ರವಾಸಿ ಮೊಸಳೆಗಳು ಹಿಂದೊಮ್ಮೆ ಅತ್ಯಂತ ಸಾಮಾನ್ಯವಾಗಿದ್ದವಾದರೂ, ಇಂಡೋಚೈನಾದಲ್ಲಿನ ಈ ಜಾತಿಯ ಭವಿಷ್ಯವು ಈಗ ಕರಾಳವಾಗಿ ಕಾಣಿಸುತ್ತಿದೆ. ಆದಾಗ್ಯೂ, ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳ ವ್ಯಾಪಕ ಹರಡಿಕೆಯ ಕಾರಣದಿಂದಾಗಿ ಮತ್ತು ಆಸ್ಟ್ರೇಲಿಯಾದ ಉತ್ತರಭಾಗ ಹಾಗೂ ನ್ಯೂಗಿನಿಯಾಗಳಲ್ಲಿನ ಹೆಚ್ಚೂಕಮ್ಮಿ ವಸಾಹತಿನ-ಪೂರ್ವದ ಸಂಖ್ಯಾಗಾತ್ರಗಳ ಕಾರಣದಿಂದಾಗಿ, ಈ ಪ್ರಾಣಿಗಳು ಜಾಗತಿಕವಾಗಿ ನಿರ್ನಾಮವಾಗುವ ಸ್ಥಿತಿಯನ್ನು ತಲುಪುವ ಸಾಧ್ಯತೆ ಕಡಿಮೆ ಎನ್ನಬಹುದು.
ಇಂಡೋನೇಷಿಯಾ ಮತ್ತು ಮಲೇಷಿಯಾಗಳಲ್ಲಿ ಇವುಗಳ ಒಟ್ಟುಸಂಖ್ಯೆಯು ವಿರಳವಾಗಿದ್ದರೆ, ಕೆಲವೊಂದು ಪ್ರದೇಶಗಳು (ಉದಾಹರಣೆಗೆ, ಬೋರ್ನಿಯೊ) ದೊಡ್ಡದಾದ ಸಮೂಹಕ್ಕೆ ಆಶ್ರಯ ಕೊಟ್ಟಿವೆ ಹಾಗೂ ಇತರ ಪ್ರದೇಶಗಳು ತೀರಾ ಸಣ್ಣದೆನ್ನಬಹುದಾದ, ಅಪಾಯದಲ್ಲಿರುವ ಸಮೂಹಕ್ಕೆ ಆಶ್ರಯನೀಡಿವೆ (ಉದಾಹರಣೆಗೆ, ಫಿಲಿಪೈನ್ಸ್). ಸುಮಾತ್ರಾ ಮತ್ತು ಜಾವಾ ವಲಯಗಳ ವ್ಯಾಪ್ತಿಯೊಳಗೆ ಈ ಜಾತಿಯ ಸ್ಥಿತಿಗತಿಯೇನಾಗಿದೆ ಎಂಬುದು ಬಹುಮಟ್ಟಿಗೆ ತಿಳಿದುಬಂದಿಲ್ಲ (ಆದರೂ, ಸುಮಾತ್ರಾದ ಪ್ರತ್ಯೇಕಿಸಲ್ಪಟ್ಟ ಪ್ರದೇಶಗಳ ವ್ಯಾಪ್ತಿಯೊಳಗೆ ದೊಡ್ಡ ಮೊಸಳೆಗಳು ಮಾನವರ ಮೇಲೆ ದಾಳಿಗಳನ್ನು ಮಾಡಿರುವುದರ ಕುರಿತಾಗಿ ಸುದ್ದಿ ಸಂಸ್ಥೆಗಳು ಇತ್ತೀಚೆಗೆ ವರದಿಗಳನ್ನು ನೀಡಿದ್ದು, ಅವು ವಿಶ್ವಾಸಾರ್ಹವೆಂದು ಭಾವಿಸಲ್ಪಟ್ಟಿವೆ). ಆಸ್ಟ್ರೇಲಿಯಾದ ಉತ್ತರಭಾಗದ ಮೊಸಳೆಯ ಆವಾಸಸ್ಥಾನಕ್ಕೆ ಅತಿ ಸಾಮೀಪ್ಯವನ್ನು ಹೊಂದಿದ್ದರೂ ಸಹ, ಬಾಲಿಯಲ್ಲಿ ಮೊಸಳೆಗಳು ಕಂಡುಬರುತ್ತಿಲ್ಲ. ದಕ್ಷಿಣ ಪೆಸಿಫಿಕ್‌ನ ಅತ್ಯಂತ ಸೀಮಿತ ಭಾಗಗಳಲ್ಲಿಯೂ ಸಮುದ್ರವಾಸಿ ಮೊಸಳೆಗಳು ಕಂಡುಬರುತ್ತವೆ; ಸಾಲೊಮನ್ ದ್ವೀಪಗಳಲ್ಲಿ ಇವು ಒಂದು ಸಾಧಾರಣವೆನ್ನಬಹುದಾದ ಒಟ್ಟುಸಂಖ್ಯೆಯಿದ್ದರೆ, ವನುವಾಟುವಿನಲ್ಲಿ ಒಂದು ಅತ್ಯಂತ ಸಣ್ಣ, ಆಕ್ರಮಣಶೀಲ ಮತ್ತು ಕೆಲವೇ ದಿನಗಳಲ್ಲಿ ನಿರ್ನಾಮವಾಗಲಿರುವ ಸಮೂಹವಿದೆ (ಇಲ್ಲಿ ಒಟ್ಟುಸಂಖ್ಯೆಯು ಅಧಿಕೃತವಾಗಿ ಕೇವಲ ಮೂರಕ್ಕೆ ನಿಲ್ಲುತ್ತದೆ) ಮತ್ತು ಪಲಾವು ಎಂಬಲ್ಲಿ ಒಂದು ತಕ್ಕಮಟ್ಟಿನ ಆದರೆ ಅಪಾಯದಲ್ಲಿರುವ ಒಟ್ಟುಸಂಖ್ಯೆಯನ್ನು (ಇದು ಮರಳುತ್ತಿರಬಹುದು) ಕಾಣಬಹುದು. ಆಫ್ರಿಕಾದ ಪೂರ್ವ ಕರಾವಳಿಯಿಂದ ಸೆಷೆಲ್ಸ್ ದ್ವೀಪಗಳಲ್ಲಿನ ಪಶ್ಚಿಮ ಕರಾವಳಿಯಷ್ಟು ದೂರದವರೆಗೆ ಸಮುದ್ರವಾಸಿ ಮೊಸಳೆಗಳು ಹಿಂದೊಮ್ಮೆ ವ್ಯಾಪಿಸಿದ್ದವು. ಈ ಮೊಸಳೆಗಳು ನೈಲ್ ಮೊಸಳೆಗಳ ಒಂದು ಸಮೂಹವೆಂದು ಒಮ್ಮೆ ನಂಬಲಾಗಿತ್ತು, ಆದರೆ ಅವು ಕ್ರಾಕಡೈಲಸ್ ಪೋರೋಸಸ್ ಎಂಬುದಾಗಿ ನಂತರದಲ್ಲಿ ಸಾಬೀತಾಯಿತು.[೨]
ಸಮುದ್ರದಲ್ಲಿ ಅತ್ಯಂತ ಸುದೀರ್ಘ ಅಂತರಗಳವರೆಗೆ ಸಂಚರಿಸುವ ಈ ಜಾತಿಯ ಪ್ರವೃತ್ತಿಯಿಂದಾಗಿ, ಪ್ರತ್ಯೇಕ ಸಮುದ್ರವಾಸಿ ಮೊಸಳೆಗಳು ತಾವು ಸ್ಥಳೀಕವಾಗಿಲ್ಲದ ಊಹಿಸಲಾಗದ ಘಟನಾ ಪ್ರದೇಶಗಳಲ್ಲಿ ಸಾಂದರ್ಭಿಕವಾಗಿ ಕಾಣಿಸಿಕೊಳ್ಳುತ್ತವೆ. ಅಲೆದಾಡುವ ಪ್ರತ್ಯೇಕ ಮೊಸಳೆಗಳು ನ್ಯೂ ಕ್ಯಾಲೆಡೋನಿಯಾ, ಇವೋ ಜಿಮಾ, ಫಿಜಿಯಲ್ಲಿ ಮತ್ತು ತುಲನಾತ್ಮಕವಾಗಿ ಕಡುಚಳಿಯನ್ನು ಹೊಂದಿರುವ ಜಪಾನ್‌ನ ಸಮುದ್ರದಲ್ಲಿಯೂ (ತಮ್ಮ ಸ್ಥಳೀಕ ಪ್ರದೇಶದಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿ) ಐತಿಹಾಸಿಕವಾಗಿ ವರದಿಮಾಡಲ್ಪಟ್ಟಿವೆ. 2008ರ ಅಂತ್ಯಭಾಗ/2009ರ ಆರಂಭಿಕ ಭಾಗದಲ್ಲಿ, ಫ್ರೇಸರ್ ದ್ವೀಪದ ನದಿ ವ್ಯವಸ್ಥೆಗಳ ವ್ಯಾಪ್ತಿಯಲ್ಲಿ ಒಂದು ಕೈಬೆರಳೆಣಿಕೆಯಷ್ಟು ಕಾಡುಸ್ಥಿತಿಯ ಸಮುದ್ರವಾಸಿ ಮೊಸಳೆಗಳು ವಾಸಿಸುತ್ತಿರುವುದಾಗಿ ಪ್ರಮಾಣೀಕರಿಸಲ್ಪಟ್ಟವು; ಈ ಪ್ರದೇಶವು ಆ ಮೊಸಳೆಗಳ ಸಾಮಾನ್ಯ ಕ್ವೀನ್ಸ್‌ಲೆಂಡ್ ವ್ಯಾಪ್ತಿಯಿಂದ ನೂರಾರು ಕಿಲೋಮೀಟರುಗಳಷ್ಟು ದೂರವಿರುವ ಪ್ರದೇಶವಾಗಿದ್ದು, ಇಲ್ಲಿನ ನೀರು ಬಹಳಷ್ಟು ತಂಪಾಗಿರುತ್ತದೆ. ಬೆಚ್ಚಗೆ ಮಾಡುವ ಮಳೆಯ ಋತುವಿನ ಅವಧಿಯಲ್ಲಿ ಕ್ವೀನ್ಸ್‌ಲೆಂಡ್‌ನ ಉತ್ತರಭಾಗದದಿಂದ ದಕ್ಷಿಣದ ದ್ವೀಪಕ್ಕೆ ಈ ಮೊಸಳೆಗಳು ಅವಶ್ಯವಾಗಿ ವಲಸೆಹೋಗುತ್ತಿದ್ದವು ಮತ್ತು ಕಾಲೋಚಿತ ತಾಪಮಾನ ಕುಸಿತದ ನಂತರ ಉತ್ತರ ಭಾಗಕ್ಕೆ ಸಂಭಾವ್ಯವಾಗಿ ಮರಳುತ್ತಿದ್ದವು ಎಂಬುದು ಪತ್ತೆಯಾಯಿತು. ಫ್ರೇಸರ್ ದ್ವೀಪ ಸಾರ್ವಜನಿಕರಲ್ಲಿ ಕಂಡುಬರುತ್ತಿದ್ದ ಅಚ್ಚರಿ ಮತ್ತು ಆಘಾತದ ಹೊರತಾಗಿಯೂ, ಇದು ಕಣ್ಣಿಗೆ ಕಾಣುವಂತೆ ಹೊಸ ವರ್ತನೆಯಾಗಿರಲಿಲ್ಲ ಹಾಗೂ ಬಹಳ ಹಿಂದಿನ ಕಾಲದಲ್ಲಿ, ಬೆಚ್ಚಗೆ ಮಾಡುವ ಮಳೆಯ ಋತುವಿನ ಅವಧಿಯಲ್ಲಿ, ಬ್ರಿಸ್ಬೇನ್‌ನಷ್ಟು ದೂರದ ದಕ್ಷಿಣ ಪ್ರದೇಶದಲ್ಲಿ ಕಾಡು ಮೊಸಳೆಗಳು ಸಾಂದರ್ಭಿಕವಾಗಿ ಕಾಣಿಸುತ್ತಿದ್ದವು ಎಂದು ವರದಿಯಾಗಿತ್ತು.
ಆವಾಸ ಸ್ಥಾನ
[ಬದಲಾಯಿಸಿ]ಸಮುದ್ರವಾಸಿ ಮೊಸಳೆಗಳು ವಿಪರೀತಕಾವಿನ ಮಳೆಯ ಋತುವನ್ನು ಸಿಹಿನೀರಿನ ಜವುಗು ಪ್ರದೇಶಗಳು ಮತ್ತು ನದಿಗಳಲ್ಲಿ ಸಾಮಾನ್ಯವಾಗಿ ಕಳೆಯುತ್ತವೆ; ಶುಷ್ಕ ಋತುವಿನಲ್ಲಿ ಅವು ನದಿಯ ಹರಿವಿನ ದಿಕ್ಕಿನಲ್ಲಿ ನದೀಮುಖಗಳಿಗೆ ಚಲಿಸುತ್ತವೆ ಮತ್ತು ಕೆಲವೊಮ್ಮೆ ಬಹಳ ದೂರಕ್ಕೆ ಸಮುದ್ರದೆಡೆಗೆ ಸಂಚರಿಸುತ್ತವೆ. ಅಸ್ತಿತ್ವದ ಪ್ರದೇಶಕ್ಕಾಗಿ ಮೊಸಳೆಗಳು ಪರಸ್ಪರರೊಂದಿಗೆ ಉಗ್ರವಾಗಿ ಪೈಪೋಟಿ ನಡೆಸುತ್ತವೆ; ಅದರಲ್ಲೂ ನಿರ್ದಿಷ್ಟವಾಗಿ, ಶಕ್ತಿಯುತ ಗಂಡು ಮೊಸಳೆಗಳು ಸಿಹಿನೀರಿನ ತೊರೆಗಳು ಮತ್ತು ಹೊಳೆಗಳ ಅತ್ಯಂತ ಯೋಗ್ಯವಾದ ವಿಸ್ತರಣಗಳನ್ನು ಆಕ್ರಮಿಸಿಕೊಳ್ಳುತ್ತವೆ. ಈ ರೀತಿಯಾಗಿ ಕಿರಿಯ ಮೊಸಳೆಗಳು ಎಲ್ಲೆಗೆ ಅತಿ ಸಮೀಪವಿರುವ ನದಿ ವ್ಯವಸ್ಥೆಗಳಿಗೆ ಮತ್ತು ಕೆಲವೊಮ್ಮೆ ಸಾಗರದೊಳಗೆ ತಳ್ಳಲ್ಪಡುತ್ತವೆ. ಈ ಪ್ರಾಣಿಯ ವಿಸ್ತೃತ ಹರಡಿಕೆಯನ್ನು (ಭಾರತದ ಪೂರ್ವ ಕರಾವಳಿಯಿಂದ ಆಸ್ಟ್ರೇಲಿಯಾದ ಉತ್ತರಭಾಗದವರೆಗೆ ವ್ಯಾಪಿಸುವಿಕೆ) ಮಾತ್ರವೇ ಅಲ್ಲದೇ ಒಮ್ಮೊಮ್ಮೆ ಊಹಿಸಲಾಗದ ಸ್ಥಳಗಳಲ್ಲಿನ (ಜಪಾನ್‌ನ ಸಮುದ್ರದಂಥದು) ಕಾಣಿಸಿಕೊಳ್ಳುವಿಕೆಯನ್ನೂ ಇದು ವಿವರಿಸುತ್ತದೆ. ಸಮುದ್ರವಾಸಿ ಮೊಸಳೆಗಳು ಕ್ಲುಪ್ತವಾದ ಕ್ಷಣಕಾಲದ ರಭಸಗಳಲ್ಲಿ 15 to 18 miles per hour (6.7 to 8.0 m/s)ನಷ್ಟು ಈಜಬಲ್ಲವು, ಆದರೆ ಸಾಧಾರಣ ವೇಗದಲ್ಲಿ ಚಲಿಸುವಾಗ 2 to 3 mph (0.9 to 1.3 m/s)ನಷ್ಟು ಚಲಿಸುತ್ತವೆ.
ಆಹಾರಕ್ರಮ ಮತ್ತು ವರ್ತನೆ
[ಬದಲಾಯಿಸಿ]ಸಮುದ್ರವಾಸಿ ಮೊಸಳೆಯು ಸಮಯಸಾಧಕತನದ ಒಂದು ಪರಮಾವಧಿಯ ಪರಭಕ್ಷಕನಾಗಿದ್ದು, ನೀರಿನಲ್ಲಿನ ಅಥವಾ ಶುಷ್ಕ ಭೂಮಿಯ ಮೇಲಿನ ತನ್ನ ಪ್ರದೇಶವನ್ನು ಪ್ರವೇಶಿಸುವ ಬಹುತೇಕವಾಗಿ ಯಾವುದೇ ಪ್ರಾಣಿಯನ್ನು ಎಳೆದುಕೊಂಡು ಹೋಗುವಷ್ಟು ಸಮರ್ಥವಾಗಿರುತ್ತದೆ. ಮೊಸಳೆಗಳ ಪ್ರಾಣಿ ಪ್ರದೇಶಕ್ಕೆ ಪ್ರವೇಶಿಸುವ ಮಾನವರ ಮೇಲೆ ಅವು ದಾಳಿಮಾಡುವುದು ಚಿರಪರಿಚಿತ ಸಂಗತಿಯೇ ಆಗಿದೆ. ಎಳೆ ಹರೆಯದ ಮೊಸಳೆಗಳು ಸಣ್ಣ ಗಾತ್ರದ ಪ್ರಾಣಿಗಳ ಮೇಲೆ ಮಾತ್ರವೇ ದಾಳಿಮಾಡುತ್ತವೆ. ಅವುಗಳೆಂದರೆ, ಕೀಟಗಳು, ನೆಲೆಜಲವಾಸಿಗಳು, ಕಠಿಣಚರ್ಮಿಗಳು, ಸಣ್ಣ ಸರೀಸೃಪಗಳು, ಮತ್ತು ಮೀನುಗಳು. ಮೊಸಳೆಯ ದೊಡ್ಡದಾದಷ್ಟೂ ಅದು ತನ್ನ ಆಹಾರಕ್ರಮದಲ್ಲಿ ಸೇರ್ಪಡೆಮಾಡಿಕೊಳ್ಳುವ ಪ್ರಾಣಿಗಳ ವೈವಿಧ್ಯತೆಯು ಮಹತ್ತರವಾಗಿರುತ್ತದೆಯಾದರೂ, ತುಲನಾತ್ಮಕವಾಗಿ ಸಣ್ಣಗಾತ್ರದಲ್ಲಿರುವ ಬೇಟೆಯು ವಯಸ್ಕ ಮೊಸಳೆಗಳಲ್ಲಿಯೂ ಸಹ ಆಹಾರಕ್ರಮದ ಒಂದು ಪ್ರಮುಖ ಭಾಗವೆನಿಸಿಕೊಳ್ಳುತ್ತದೆ. ದೊಡ್ಡದಾದ ಸಮುದ್ರವಾಸಿ ವಯಸ್ಕ ಮೊಸಳೆಗಳು ತಮ್ಮ ವ್ಯಾಪ್ತಿಯೊಳಗೆ ಬರುವ ಯಾವುದೇ ಪ್ರಾಣಿಗಳನ್ನು ಸಮರ್ಥವಾಗಿ ತಿನ್ನಬಲ್ಲವು. ಅಂಥ ಪ್ರಾಣಿಗಳೆಂದರೆ: ಕೋತಿಗಳು, ಕಾಂಗರೂಗಳು, ಕಾಡು ಹಂದಿ, ಕಾಡುನಾಯಿಗಳು, ವರನಸ್ ಕುಲದ ದೊಡ್ಡ ಹಲ್ಲಿಗಳು, ಪಕ್ಷಿಗಳು, ಸಾಕಿದ ಜಾನುವಾರು, ಮುದ್ದಿನ ಪ್ರಾಣಿಗಳು, ಮಾನವರು, ನೀರೆಮ್ಮೆ, ವನವೃಷಭಗಳು, ಬಾವಲಿಗಳು, ಮತ್ತು ಅಷ್ಟೇ ಏಕೆ ಶಾರ್ಕ್‌ಗಳೂ ಸಹ ಈ ಪಟ್ಟಿಯಲ್ಲಿ ಸೇರಿವೆ.[೧೦][೧೯][೨೦][೨೧] ಒಂದು ಟನ್ನಿಗಿಂತಲೂ ಹೆಚ್ಚು ತೂಗುವ ಸಾಕಿದ ದನ, ಕುದುರೆಗಳು, ನೀರೆಮ್ಮೆ, ಮತ್ತು ವನವೃಷಭ ಇವೇ ಮೊದಲಾದ ಪ್ರಾಣಿಗಳು ಅತಿದೊಡ್ಡ ಬೇಟೆ ಎಂದು ಪರಿಗಣಿಸಲ್ಪಟ್ಟಿದ್ದು, ಗಂಡು ಮೊಸಳೆಗಳು ಇವನ್ನು ಸರಾಗವಾಗಿ ಎಳೆದುಕೊಂಡು ಹೋಗುತ್ತವೆ. ಸಮುದ್ರವಾಸಿ ಮೊಸಳೆಯು ಸಾಮಾನ್ಯವಾಗಿ ಅತ್ಯಂತ ಆಲಸಿಯಾಗಿರುತ್ತದೆ; ಕೆಲವೊಮ್ಮೆ ಆಹಾರವಿಲ್ಲದೆಯೇ ತಿಂಗಳುಗಟ್ಟಲೇ ಅದು ಉಳಿದಿರುವಲ್ಲಿ ಈ ವಿಶೇಷ ಲಕ್ಷಣವು ನೆರವಾಗುತ್ತದೆ. ತನ್ನ ಜಡಸ್ವಭಾವದಿಂದಾಗಿ ಇದು ಸೋಮಾರಿಯಂತೆ ನೀರಿನಲ್ಲಿ ಅಲ್ಲಲ್ಲೇ ಸುತ್ತಾಡುತ್ತಾ ವಿಶಿಷ್ಟವಾಗಿ ಕಾಲ ಕಳೆಯುತ್ತದೆ ಅಥವಾ ದಿನದ ಬಹುಭಾಗದಲ್ಲಿ ಸೂರ್ಯನ ಬೆಳಕಿನಲ್ಲಿ ಬಿಸಿಲು ಕಾಯಿಸಿಕೊಳ್ಳುತ್ತದೆ, ಮತ್ತು ರಾತ್ರಿ ವೇಳೆಯಲ್ಲಿ ಬೇಟೆಯಾಡುವುದಕ್ಕೆ ಆದ್ಯತೆ ನೀಡುತ್ತದೆ. ನೀರಿನಲ್ಲಿದ್ದುಕೊಂಡು ಅಲ್ಲಿಂದ ಒಂದು ದಾಳಿಗೆ ಚಾಲನೆ ನೀಡುವ ಸಂದರ್ಭ ಬಂದಾಗ, ಸ್ಫೋಟಕವೆಂಬಂಥ ವೇಗದ ಕ್ಷಣಕಾಲದ ರಭಸಗಳನ್ನು ಹೊಮ್ಮಿಸುವ ಸಾಮರ್ಥ್ಯವನ್ನು ಸಮುದ್ರವಾಸಿ ಮೊಸಳೆಗಳು ಹೊಂದಿರುತ್ತವೆ. ಮೈದಾನದಲ್ಲಿನ ಅಲ್ಪ ಅಂತರಗಳನ್ನು ದಾಟುವ ಸಂದರ್ಭದಲ್ಲಿ ಮೊಸಳೆಗಳು ಒಂದು ರೇಸಿನ ಕುದುರೆಗಿಂತಲೂ ವೇಗವಾಗಿರುತ್ತವೆ ಎಂಬಂಥ ಕಥೆಗಳು ನಗರ ಪ್ರದೇಶದ ದಂತಕಥೆಗಿಂತಲೂ ಸ್ವಲ್ಪವೇ ಹೆಚ್ಚೆನಿಸುತ್ತದೆ. ಆದಾಗ್ಯೂ, ಪಾದಗಳು ಮತ್ತು ಬಾಲ ಈ ಎರಡರಿಂದಲೂ ಮುನ್ನೂಕುವಿಕೆಯನ್ನು ಅವು ಸಂಯೋಜಿಸಬಲ್ಲಂಥ ನೀರಿನ ಅಂಚಿನಲ್ಲಿ, ಪ್ರತ್ಯಕ್ಷದರ್ಶಿ ದಾಖಲೆಗಳು ಅಪರೂಪವಾಗಿವೆ.
ಸಮುದ್ರವಾಸಿ ಮೊಸಳೆಯು ದಾಳಿಮಾಡುವುದಕ್ಕೆ ಮುಂಚಿತವಾಗಿ ತನ್ನ ಬೇಟೆಯು ನೀರಿನ ಅಂಚಿಗೆ ನಿಕಟವಾಗಿ ಬರಲಿ ಎಂದು ಸಾಮಾನ್ಯವಾಗಿ ಕಾಯುತ್ತದೆ; ನಂತರ ಬೇಟೆಯನ್ನು ನೀರಿಗೆ ಮರಳಿ ಎಳೆದುಕೊಂಡು ಹೋಗುವಲ್ಲಿ ಅದರ ಮಹಾನ್ ಬಲವು ಈ ನಿಟ್ಟಿನಲ್ಲಿ ಅದಕ್ಕೆ ನೆರವಾಗುತ್ತದೆ. ಬಹುತೇಕ ಪ್ರಾಣಿಗಳು ಮೊಸಳೆಯು ಹೊಂದಿರುವ ಮಹತ್ತರವಾದ ದವಡೆಯ ಒತ್ತಡದಿಂದಲೇ ಸಾಯಿಸಲ್ಪಡುತ್ತವೆಯಾದರೂ, ಕೆಲವೊಂದು ಪ್ರಾಣಿಗಳನ್ನು ಮೊಸಳೆಯು ಪ್ರಾಸಂಗಿಕವಾಗಿ ಮುಳುಗಿಸಿ ಉಸಿರುಕಟ್ಟಿ ಸಾಯಿಸುತ್ತದೆ. ಇದೊಂದು ಶಕ್ತಿಯುತ ಪ್ರಾಣಿಯಾಗಿದ್ದು, ಸಂಪೂರ್ಣವಾಗಿ ಬೆಳೆದ ನೀರೆಮ್ಮೆಯೊಂದನ್ನು ಒಂದು ನದಿಯೊಳಗೆ ಎಳೆದುಕೊಂಡು ಹೋಗುವುದಕ್ಕೆ ಬೇಕಿರುವ ಬಲವನ್ನು ಹೊಂದಿರುತ್ತದೆ, ಅಥವಾ ಸಂಪೂರ್ಣವಾಗಿ-ಬೆಳೆದ ಕಾಡೆತ್ತಿನ ತಲೆಬುರುಡೆಯನ್ನು ತನ್ನ ದವಡೆಗಳ ನಡುವೆ ಸಿಕ್ಕಿಸಿಕೊಂಡು ಪುಡಿಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಶಿಷ್ಟವೆನಿಸಿರುವ ಇದರ ಬೇಟೆಯಾಡುವಿಕೆಯ ಕೌಶಲವು "ಸಾವಿನ ಉರುಳಾಟ" ಎಂದು ಕರೆಯಲ್ಪಟ್ಟಿದೆ: ಪ್ರಾಣಿಯ ಮೇಲೆ ಗಬಕ್ಕನೇ ಹಾರಿ ಇದು ಥಟ್ಟನೆ ಹಿಡಿದುಕೊಳ್ಳುತ್ತದೆ ಹಾಗೂ ಶಕ್ತಿಯುತವಾಗಿ ಅದನ್ನು ಸುರಳಿ ಸುತ್ತಿದಂತೆ ಸುತ್ತಿ ಉರುಳಿಸುತ್ತದೆ. ಇದರಿಂದಾಗಿ, ಹೆಣಗಾಡುತ್ತಿರುವ ಯಾವುದೇ ದೊಡ್ಡದಾದ ಪ್ರಾಣಿಯು ತನ್ನ ಸಮತೋಲನವನ್ನು ಕಳೆದುಕೊಳ್ಳುವಂತಾಗುತ್ತದೆ ಮತ್ತು ಆ ಬೇಟೆಯನ್ನು ನೀರಿನೊಳಗೆ ಎಳೆದುಕೊಂಡು ಹೋಗುವ ಕಾರ್ಯವು ಸರಾಗವಾಗಿ ಪರಿಣಮಿಸುತ್ತದೆ. ದೊಡ್ಡಗಾತ್ರದ ಪ್ರಾಣಿಗಳು ಸತ್ತ ನಂತರ ಅವನ್ನು ಹರಿದು ಚಿಂದಿಮಾಡುವುದಕ್ಕಾಗಿಯೂ ಈ "ಸಾವಿನ ಉರುಳಾಟ"ದ ತಂತ್ರವು ಬಳಸಲ್ಪಡುತ್ತದೆ.
ಮೊಸಳೆ ಸೂಚಕ ಹಲ್ಲಿಗಳು, ಪರಭಕ್ಷಕ ಮೀನುಗಳು, ಪಕ್ಷಿಗಳು, ಮತ್ತು ಇತರ ಅನೇಕ ಪರಭಕ್ಷಕ ಪ್ರಾಣಿಗಳಿಗೆ ಎಳೆಯವಯಸ್ಸಿನ ಸಮುದ್ರವಾಸಿ ಮೊಸಳೆಗಳು ಬೇಟೆಯಾಗಿ ಸಿಕ್ಕಿಬೀಳಬಹುದು. ಎಳೆ ಹರೆಯದ ಮೊಸಳೆಗಳು ಕೂಡಾ ಅವುಗಳ ವ್ಯಾಪ್ತಿಯಲ್ಲಿನ ನಿಶ್ಚಿತ ಭಾಗಗಳಲ್ಲಿರುವ ಬಂಗಾಳ ಹುಲಿಗಳು ಮತ್ತು ಚಿರತೆಗಳಿಗೆ ಬೇಟೆಯಾಗಿ ಸಿಕ್ಕಿಬೀಳಬಹುದಾದರೂ, ಇದು ಅಪರೂಪವೆನಿಕೊಂಡಿದೆ.
ಬುದ್ಧಿಸೂಕ್ಷ್ಮತೆ
[ಬದಲಾಯಿಸಿ]ಡಾ. ಆಡಂ ಬ್ರಿಟನ್[೨೨] ಎಂಬ ಓರ್ವ ಸಂಶೋಧಕನು ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳ ಬುದ್ಧಿಸೂಕ್ಷ್ಮತೆಯ ಕುರಿತು ಅಧ್ಯಯನ ಮಾಡುತ್ತಿದ್ದಾನೆ. ಆಸ್ಟ್ರೇಲಿಯಾದ ಸಮುದ್ರವಾಸಿ ಮೊಸಳೆಗಳ ಕೂಗುವಿಕೆಗಳ[೨೩] ಒಂದು ಸಂಗ್ರಹವನ್ನು ಅವನು ಸಂಕಲಿಸಿದ್ದು, ಅವುಗಳಿಗೂ ಮತ್ತು ಮೊಸಳೆಗಳ ವರ್ತನೆಗಳಿಗೂ ಅವನು ಈ ಮೂಲಕ ಸಂಬಂಧ ಕಲ್ಪಿಸಿದ್ದಾನೆ. ಸಸ್ತನಿಗಳ ಮಿದುಳುಗಳ ಗಾತ್ರಕ್ಕಿಂತಲೂ ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳ ಮಿದುಳುಗಳು ಬಹಳಷ್ಟು ಸಣ್ಣವಾಗಿದ್ದರೂ ಸಹ (ಸಮುದ್ರವಾಸಿ ಮೊಸಳೆಯಲ್ಲಿ ಶರೀರ ತೂಕದ 0.05%ನಷ್ಟು ಇರುತ್ತದೆ), ಅತ್ಯಂತ ಅಲ್ಪಪ್ರಮಾಣದಲ್ಲಿ ರೂಢಿಮಾಡಿಸಿದರೂ ಕಷ್ಟಕರವಾದ ಕಾರ್ಯಭಾರಗಳನ್ನು ಅವು ಕಲಿಯಬಲ್ಲವಾಗಿವೆ ಎಂಬುದು ಅವನ ನಿಲುವಾಗಿದೆ. ಮೊಸಳೆಯ ಕೂಗುವಿಕೆಗಳು ಪ್ರಸಕ್ತವಾಗಿ ಅಂಗೀಕರಿಸಲ್ಪಟ್ಟ ಪ್ರಮಾಣಕ್ಕಿಂತ ಆಳವಾಗಿರುವ ಒಂದು ಭಾಷಾ ಸಾಮರ್ಥ್ಯವನ್ನು ಅದು ಹೊಂದಿರುವುದರ ಸುಳುಹನ್ನು ನೀಡುತ್ತದೆ ಎಂಬುದು ಅವನ ತೀರ್ಮಾನವಾಗಿದೆ. ಸಮುದ್ರವಾಸಿ ಮೊಸಳೆಗಳು ಬುದ್ಧಿವಂತ ಪ್ರಾಣಿಗಳಾಗಿದ್ದು ಪ್ರಯೋಗಗಳಿಗೆ ಒಳಪಡಿಸುವ ಇಲಿಗಳಿಗಿಂತಲೂ ಪ್ರಾಯಶಃ ಹೆಚ್ಚು ವೇಗವಾಗಿ ಅವು ಕಲಿಯುತ್ತವೆ ಎಂದು ಅವನು ಸೂಚಿಸುತ್ತಾನೆ. ಋತುಗಳು ಬದಲಾಗುತ್ತಿದ್ದಂತೆ ಬದಲಾಗುವ ತಮ್ಮ ಬೇಟೆಯ ವಲಸೆಯ ಮಾರ್ಗವನ್ನು ಜಾಡುಹಿಡಿಯುವ ಕಲೆಯನ್ನೂ ಅವು ಸಿದ್ಧಿಸಿಕೊಂಡಿವೆ.
ಮಾನವರ ಮೇಲಿನ ದಾಳಿಗಳು
[ಬದಲಾಯಿಸಿ]ದಾಳಿಗಳ ಕುರಿತಾದ ಮಾಹಿತಿಯು ಆಸ್ಟ್ರೇಲಿಯಾದ ಹೊರಭಾಗಕ್ಕೆ ಸೀಮಿತವಾಗಿದೆ. ಆಸ್ಟ್ರೇಲಿಯಾದಲ್ಲಿ ದಾಳಿಗಳು ಅಪರೂಪವಾಗಿದ್ದು, ಅವು ಸಂಭವಿಸಿದಾಗ ರಾಷ್ಟ್ರೀಯ ಸುದ್ದಿ ಪ್ರಕಟಣೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತವೆ. ದೇಶದಲ್ಲಿ ಪ್ರತಿ ವರ್ಷ ಸರಿಸುಮಾರಾಗಿ ಒಂದರಿಂದ ಎರಡು ಮಾರಣಾಂತಿಕ ದಾಳಿಗಳು ವರದಿಯಾಗುತ್ತವೆ.[೨೪] ಆಸ್ಟ್ರೇಲಿಯಾದಲ್ಲಿನ ವನ್ಯಜೀವಿಕುಲ ಇಲಾಖೆಯ ಅಧಿಕಾರಿಗಳು ಅಪಾಯದ ತಾಣಗಳೆನಿಸಿರುವ ಅನೇಕ ತುಂಡುತೊರೆಗಳು, ನದಿಗಳು, ಸರೋವರಗಳು ಮತ್ತು ಸಮುದ್ರ ತೀರಗಳ ಪ್ರದೇಶದಲ್ಲಿ ಮೊಸಳೆಯಿರುವುದರ ಕುರಿತಾದ ಎಚ್ಚರಿಕೆ ಚಿಹ್ನೆಗಳನ್ನು ಲಗತ್ತಿಸುವ ಮೂಲಕ ವ್ಯಾಪಕ ಪ್ರಯತ್ನಗಳನ್ನು ಕೈಗೊಳ್ಳುತ್ತಿರುವುದರಿಂದಾಗಿ ದಾಳಿಗಳ ಮಟ್ಟವು ತಗ್ಗಿರಬಹುದು. ಆರ್ನ್‌ಹೆಮ್ ಲ್ಯಾಂಡ್‌ನ ದೊಡ್ಡ ಮೂಲನಿವಾಸಿ ಸಮುದಾಯದಲ್ಲಿ ದಾಳಿಗಳು ವರದಿಮಾಡಲ್ಪಡದಿರುವ ಸಾಧ್ಯತೆಗಳಿವೆ.[ಸೂಕ್ತ ಉಲ್ಲೇಖನ ಬೇಕು] ಬೋರ್ನಿಯೊ,[೨೫] ಸುಮಾತ್ರಾ,[೨೬] ಭಾರತದ ಪೂರ್ವಭಾಗ (ಅಂಡಮಾನ್ ದ್ವೀಪಗಳಲ್ಲಿ),[೨೭][೨೮] ಮತ್ತು ಮ್ಯಾನ್ಮಾರ್‌ನಲ್ಲಿ ಇತ್ತೀಚೆಗೆ ದಾಳಿಗಳು ಸಂಭವಿಸಿವೆಯಾದರೂ ಅದು ಅಷ್ಟಾಗಿ ಬಹಿರಂಗಗೊಂಡಿಲ್ಲ.[೨೯]
1945ರ ಫೆಬ್ರುವರಿ 19ರಂದು, ರಾಮ್ರೀ ದ್ವೀಪದ ಕದನದಲ್ಲಿ ಜಪಾನಿಯರನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಸಂಭವಿಸಿದ 400 ಮಂದಿ ಜಪಾನಿ ಸೈನಿಕರ ಸಾವುಗಳಿಗೆ ಸಮುದ್ರವಾಸಿ ಮೊಸಳೆಗಳು ಹೊಣೆಗಾರರಾಗಿರಬಹುದು ಎಂದು ಭಾವಿಸಲಾಗಿದೆ. ಜಪಾನಿ ಸೈನಿಕರು ಹಿಮ್ಮೆಟ್ಟುವಾಗ ತೂರಿಕೊಂಡ ಜವುಗು ಪ್ರದೇಶವನ್ನು ಬ್ರಿಟಿಷ್ ಸೈನಿಕರು ಸುತ್ತುವರೆದಾಗ, ಜಪಾನಿ ಸೈನಿಕರು ಒಂದು ರಾತ್ರಿಯ ಮಟ್ಟಿಗೆ ಮ್ಯಾಂಗ್ರೋವ್‌ಗಳಲ್ಲಿ ಉಳಿಯಬೇಕಾಗಿ ಬಂತು; ಇದು ಸಾವಿರಾರು ಸಂಖ್ಯೆಯ ಸಮುದ್ರವಾಸಿ ಮೊಸಳೆಗಳ ಆವಾಸಸ್ಥಾನವಾಗಿತ್ತು. ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ[೩೦] "ದಿ ಗ್ರೇಟೆಸ್ಟ್ ಡಿಸಾಸ್ಟರ್ ಸಫರ್ಡ್ ಫ್ರಂ ಅನಿಮಲ್ಸ್" ಎಂಬ ತಲೆಬರಹದ ಅಡಿಯಲ್ಲಿ ರಾಮ್ರೀ ಮೊಸಳೆ ದಾಳಿಗಳು ಪಟ್ಟಿಮಾಡಲ್ಪಟ್ಟಿವೆ.
ಇವನ್ನೂ ನೋಡಿ
[ಬದಲಾಯಿಸಿ]- ಮೊಸಳೆಯ ದಾಳಿ
ಟಿಪ್ಪಣಿಗಳು
[ಬದಲಾಯಿಸಿ]- ↑ Guggisberg, C.A.W. (1972). Crocodiles: Their Natural History, Folklore, and Conservation. p. 195. ISBN 0715352725.
- ↑ ೨.೦ ೨.೧ ೨.೨ 'ಕ್ರಾಕಡೈಲಸ್ ಪೋರೋಸಸ್' (ಸ್ಕ್ನೀಡರ್, 1801) Archived 2006-01-08 ವೇಬ್ಯಾಕ್ ಮೆಷಿನ್ ನಲ್ಲಿ., -ಆಡಂ ಬ್ರಿಟನ್; ಮೊಸಳೆ ಜಾತಿಗೆ ಸೇರಿದ ಪ್ರಾಣಿಜಾತಿಗಳ ಪಟ್ಟಿಯಿಂದ ಆರಿಸಿದ್ದು.
- ↑ ೩.೦ ೩.೧ "Crocodilian Species - Australian Saltwater Crocodile (Crocodylus porosus)". Flmnh.ufl.edu. Retrieved 2010-12-26.
- ↑ "Saltwater Crocodile". Australianfauna.com. Archived from the original on 2011-07-25. Retrieved 2010-08-18.
- ↑ ೫.೦ ೫.೧ ವುಡ್, ದಿ ಗಿನ್ನೆಸ್ ಬುಕ್ ಆಫ್ ಅನಿಮಲ್ ಫ್ಯಾಕ್ಟ್ಸ್ ಆಂಡ್ ಫೀಟ್ಸ್. ಸ್ಟರ್ಲಿಂಗ್ ಪಬ್ಲಿಷಿಂಗ್ ಕಂ ಇಂಕ್ (1983), ISBN 978-0-85112-235-9
- ↑ http://www.answers.com/topic/saltwater-crocodile-1
- ↑ "Saltwater Crocodiles, Saltwater Crocodile Pictures, Saltwater Crocodile Facts - National Geographic". Animals.nationalgeographic.com. Archived from the original on 2007-06-25. Retrieved 2010-08-18.
- ↑ ೮.೦ ೮.೧ "ವಿಚ್ ಈಸ್ ದಿ ಲಾರ್ಜೆಸ್ಟ್ ಸ್ಪೀಷೀಸ್ ಆಫ್ ಕ್ರಾಕಡೈಲ್?". Archived from the original on 2009-06-18. Retrieved 2011-03-01.
- ↑ ೯.೦ ೯.೧ ಗಿನ್ನೆಸ್: ಇಂಡಿಯಾ ಪಾರ್ಕ್ ಹೋಮ್ ಟು ವರ್ಲ್ಡ್'ಸ್ ಲಾರ್ಜೆಸ್ಟ್ ಕ್ರಾಕಡೈಲ್; 23 ಫೀಟ್
- ↑ ೧೦.೦ ೧೦.೧ ಸೆವೆನ್-ಮೀಟರ್ ಮ್ಯಾನ್ ಈಟಿಂಗ್ ಕ್ರಾಕಡೈಲ್ ಷಾಟ್ ಡೆಡ್, ಡೈಲಿ ಟೆಲಿಗ್ರಾಫ್
- ↑ "ವರ್ಲ್ಡ್'ಸ್ ಲಾರ್ಜೆಸ್ಟ್ ರೆಪ್ಟೈಲ್ ಫೌಂಡ್ ಇನ್ ಇಂಡಿಯಾ: ಜೈಂಟ್ ಎಸ್ಚುವರೈನ್ ಕ್ರಾಕಡೈಲ್ ಫೈಂಡ್ಸ್ ಪ್ಲೇಸ್ ಇನ್ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್". Archived from the original on 2008-01-08. Retrieved 2021-08-23.
- ↑ NORMANTON - ಹೋಮ್ ಆಫ್ ಲಾರ್ಜೆಸ್ಟ್ ಕ್ರಾಕಡೈಲ್ ಎವರ್ ಷಾಟ್!
- ↑ ಕ್ರಿಸ್ ದಿ ಕ್ರಾಕಡೈಲ್, ನಾರ್ಮ್ಯಾಂಟನ್, ಕ್ವೀನ್ಸ್‌ಲೆಂಡ್
- ↑ "ಆರ್ಕೈವ್ ನಕಲು". Archived from the original on 2007-06-25. Retrieved 2011-03-01.
- ↑ ವಾರ್ಮ್, ಫಜಿ, ವಿಯರ್ಡ್, ಫನ್ನಿ: ದಿ ಮ್ಯೂಸಿಯಂ(ಸ್) ಆಫ್ ನ್ಯಾಚುರಲ್ ಹಿಸ್ಟರಿ ಸ್ಪಿನ್ ಸಮ್ ಟಾಲ್ ಟೇಲ್ಸ್, ಆಲ್ವಿನ್ ಪೊವೆಲ್, ಹಾರ್ವರ್ಡ್ ಗೆಜೆಟ್
- ↑ ಸಾಲ್ಟ್‌ವಾಟರ್ ಕ್ರಾಕಟೈಲ್ Archived 2007-06-25 ವೇಬ್ಯಾಕ್ ಮೆಷಿನ್ ನಲ್ಲಿ.; ನ್ಯಾಷನಲ್ ಜಿಯಾಗ್ರಫಿಕ್‌ನಲ್ಲಿರುವಂಥದ್ದು
- ↑ Hiremath, K.G. Recent advances in environmental science. Discovery Publishing House, 2003. ISBN 8171416799, 9788171416790.
{{cite book}}
: Check|isbn=
value: invalid character (help) - ↑ "Crocodile kills man in wildlife sanctuary - World news - World environment - msnbc.com". MSNBC. 2008-04-20. Archived from the original on 2012-11-02. Retrieved 2010-08-18.
- ↑ ನೋ ಬುಲ್: ಸಾಲ್ಟ್‌ವಾಟರ್ ಕ್ರಾಕಡೈಲ್ ಈಟ್ಸ್ ಶಾರ್ಕ್
- ↑ ಶಾರ್ಕ್ ಒಂದನ್ನು ಮೊಸಳೆಯು ತಿನ್ನುತ್ತಿರುವುದರ ಛಾಯಾಚಿತ್ರ
- ↑ "ಮದರ್ಸ್ ಟಗ್-ಆಫ್-ವಾರ್ ವಿತ್ ಚೈಲ್ಡ್-ಈಟಿಂಗ್ ಕ್ರಾಕಡೈಲ್". Archived from the original on 2007-10-29. Retrieved 2021-08-10.
- ↑ "ಬಿಗ್ ಗೆಕೊ". Archived from the original on 2011-08-10. Retrieved 2011-03-01.
- ↑ "ಕ್ರಾಕಡೈಲ್ ಟಾಕ್"
- ↑ "ಕ್ರಾಕಡೈಲ್ ಅಟ್ಯಾಕ್ ಇನ್ ಆಸ್ಟ್ರೇಲಿಯಾ: ಆನ್ ಅನಾಲಿಸಿಸ್ ಆಫ್ ಇಟ್ಸ್ ಇನ್ಸಿಡೆನ್ಸ್ ಅಂಡ್ ರಿವ್ಯೂ ಆಫ್ ಪೆಥಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಆಫ್ ಕ್ರಾಕಡಿಲಿಯನ್ ಅಟ್ಯಾಕ್ಸ್ ಇನ್ ಜನರಲ್". Archived from the original on 2006-04-05. Retrieved 2021-08-10.
- ↑ "Search - Global Edition - The New York Times". International Herald Tribune. 2009-03-29. Archived from the original on 2007-04-29. Retrieved 2010-08-18.
- ↑ Telegraph.co.uk "ವುಮನ್ ಸೇವ್ಸ್ ಡಾಟರ್ ಫ್ರಂ ಕ್ರಾಕಡೈಲ್"
- ↑ "ಕಳಿಂಗ ಟೈಮ್ಸ್ "ಟೂ ಇಂಜೂರ್ಡ್ ಇನ್ ಕ್ರಾಕಡೈಲ್ ಅಟ್ಯಾಕ್"". Archived from the original on 2008-06-07. Retrieved 2011-03-01.
- ↑ "MSNBC ಇಂದು "ಕ್ರಾಕ್ ಕಿಲ್ಸ್ ವುಮನ್ 4 ಇಯರ್ಸ್ ಆಫ್ಟರ್ ಹರ್ ಸಿಸ್ಟರ್'ಸ್ ಡೆತ್"". Archived from the original on 2010-08-09. Retrieved 2011-03-01.
- ↑ "Search - Global Edition - The New York Times". International Herald Tribune. 2009-03-29. Archived from the original on 2008-05-17. Retrieved 2010-08-18.
- ↑ "Massacre by Crocodiles on Ramree Island - Wild world - Nature, conservation and wildlife holidays". Iberianature.com. 1945-02-19. Retrieved 2010-08-18.
ಉಲ್ಲೇಖಗಳು
[ಬದಲಾಯಿಸಿ]- Crocodile Specialist Group (1996). Crocodylus porosus. 2006. IUCN Red List of Threatened Species. IUCN 2006. www.iucnredlist.org. Retrieved on 9 May 2006.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಆಸ್ಟ್ರೇಲಿಯಾದಲ್ಲಿನ ಇತ್ತೀಚಿನ ಮೊಸಳೆ ದಾಳಿಗಳು Archived 2006-06-23 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ವತಂತ್ರವಾಗಿರುವ ಸಮುದ್ರವಾಸಿ ಮೊಸಳೆಗಳು: ವಿಶ್ವಾಸಾರ್ಹ ಚಿತ್ರಗಳು ಮತ್ತು ವಿವರಣೆಗಳು
- ಆಸ್ಟ್ರೇಲಿಯಾದ ಸಮುದ್ರವಾಸಿ ಮೊಸಳೆ ಛಾಯಾಚಿತ್ರಗಳು ಮತ್ತು ದಾಳಿಯ ಕಡತ
- ಡಾ.ಬ್ರಿಟನ್ರವರ crocodilian.com Archived 2011-07-08 ವೇಬ್ಯಾಕ್ ಮೆಷಿನ್ ನಲ್ಲಿ. ತಾಣದಿಂದ ಪಡೆಯಲಾದ ಸಾಲ್ಟ್‌ವಾಟರ್ ಕ್ರಾಕಡೈಲ್ ಕಾಲ್ಸ್
- ಓಡುವ-ಹಲ್ಲಿಯ ಬುದ್ಧಿಸೂಕ್ಷ್ಮತೆಯನ್ನು ಚರ್ಚಿಸುತ್ತಿರುವ ಡಾ. ಬ್ರಿಟನ್ ಮತ್ತು ಇತರರಿಂದ ನಡೆಸಲ್ಪಡುತ್ತಿರುವ ಸಂಕ್ಷಿಪ್ತ ಚರ್ಚೆ Archived 2011-11-20 ವೇಬ್ಯಾಕ್ ಮೆಷಿನ್ ನಲ್ಲಿ.
- Pages using duplicate arguments in template calls
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: ISBN
- Pages using ISBN magic links
- IUCN Red List least concern species
- Articles with 'species' microformats
- Taxobox articles missing a taxonbar
- Articles with unsourced statements from July 2010
- Commons category link is on Wikidata
- ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳು
- ಕ್ರಾಕಡೈಲಿಡೇ
- ಕಡಲಿನ ಸರೀಸೃಪಗಳು
- ಆಸ್ಟ್ರೇಲಿಯಾದ ಸರೀಸೃಪಗಳು
- ಆಸ್ಟ್ರೇಲಿಯಾದ ಪಶ್ಚಿಮಭಾಗದ ಸರೀಸೃಪಗಳು
- ಬಾಂಗ್ಲಾದೇಶದ ಸರೀಸೃಪಗಳು
- ಬ್ರೂನೇ ದೇಶದ ಸರೀಸೃಪಗಳು
- ಕಾಂಬೋಡಿಯಾದ ಸರೀಸೃಪಗಳು
- ಭಾರತದ ಸರೀಸೃಪಗಳು
- ಇಂಡೋನೇಷಿಯಾದ ಸರೀಸೃಪಗಳು
- ಮಲೇಷಿಯಾದ ಸರೀಸೃಪಗಳು
- ಬರ್ಮಾದ ಸರೀಸೃಪಗಳು
- ಪಪುವಾ ನ್ಯೂಗಿನಿಯಾದ ಸರೀಸೃಪಗಳು
- ಫಿಲಿಪೈನ್ಸ್ನ ಸರೀಸೃಪಗಳು
- ಶ್ರೀಲಂಕಾದ ಸರೀಸೃಪಗಳು
- ಥೈಲೆಂಡ್ನ ಸರೀಸೃಪಗಳು
- ವಿಯೆಟ್ನಾಂನ ಸರೀಸೃಪಗಳು
- ಆಸ್ಟ್ರೇಲಿಯಾದ ಬೃಹತ್ ಪ್ರಾಣಿಸಂಕುಲ
- ಯುರೇಷಿಯಾದ ಬೃಹತ್ ಪ್ರಾಣಿಸಂಕುಲ
- ಪ್ರಾಣಿಗಳು