ಸಚಿನ್ ದೇವ್‌ ಬರ್ಮನ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sachin Dev Burman

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(೧೯೦೬-೧೦-೦೧)೧ ಅಕ್ಟೋಬರ್ ೧೯೦೬
Comilla, Bangladesh, erstwhile British India
ನಿಧನ October 31, 1975(1975-10-31) (aged 69)
Bombay, ಮಹಾರಾಷ್ಟ್ರ, India
ವರ್ಷಗಳು ಸಕ್ರಿಯ 1933-1975
ಪತಿ/ಪತ್ನಿ Meera Dev Burman, nee Dasgupta (1923-2007)


ಸಚಿನ್ ದೇವ್‌ ಬರ್ಮನ್‌‌ (ಬಂಗಾಳಿ:শচীন দেব বর্মন; 1 ಅಕ್ಟೋಬರ್‌‌ 1906 - 31 ಅಕ್ಟೋಬರ್‌‌ 1975), ಹಿಂದಿ ಚಲನಚಿತ್ರಗಳಿಗೆ ಸಂಬಂಧಿಸಿದಂತಿದ್ದ ಅತ್ಯಂತ ಪ್ರಸಿದ್ಧ ಸಂಗೀತ ಸಂಯೋಜಕರ ಪೈಕಿ ಒಬ್ಬರಾಗಿದ್ದರು ಹಾಗೂ ಓರ್ವ ಬಂಗಾಳಿ ಗಾಯಕ ಮತ್ತು ಸಂಯೋಜಕರಾಗಿದ್ದರು. ಇವರನ್ನು ಬರ್ಮನ್‌‌ ದಾ , ಕುಮಾರ್‌‌ ಸಚಿಂದ್ರ ದೇವ್‌ ಬರ್ಮನ್‌, ಸಚಿನ್‌ ಕರ್ತಾ ಅಥವಾ S. D. ಬರ್ಮನ್‌‌ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. ಅವರ ಮಗನಾದ ರಾಹುಲ್‌ ದೇವ್‌ ಬರ್ಮನ್‌‌ ಕೂಡಾ ತಮ್ಮದೇ ಸ್ವಂತ ಸಾಮರ್ಥ್ಯದಿಂದ ಬಾಲಿವುಡ್‌ನ ಓರ್ವ ಸಂಗೀತ ನಿರ್ದೇಶಕರಾಗಿ ಮಹಾನ್‌ ಯಶಸ್ಸು ಸಾಧಿಸಿದರು. ಬಂಗಾಳಿ ಚಲನಚಿತ್ರಗಳೂ ಸೇರಿದಂತೆ 100 ಚಲನಚಿತ್ರಗಳಿಗೆ S.D.ಬರ್ಮನ್‌‌ ಸಂಗೀತ ಸಂಯೋಜಿಸಿದರು.

ಲತಾ ಮಂಗೇಷ್ಕರ್‌‌, ಮೊಹಮ್ಮದ್‌‌ ರಫಿ, ಗೀತಾ ದತ್‌, ಮನ್ನಾ ಡೇ, ಕಿಶೋರ್‌‌ ಕುಮಾರ್‌‌, ಆಶಾ ಭೋಂಸ್ಲೆ ಮತ್ತು ಶಂಶದ್‌ ಬೇಗಮ್‌‌‌ರಂಥ ಗಾಯಕ-ಗಾಯಕಿಯರು ಮುಖ್ಯವಾಗೆ ಎಸ್ ಡಿ ಬರ್ಮನ್‌‌ರ ಸಂಗೀತ ಸಂಯೋಜನೆಗಳನ್ನು ಬಹುಮಟ್ಟಿಗೆ ಹಾಡಿದ್ದಾರೆ. ಅವರು ಸಂಗೀತ ಸಂಯೋಜಿಸಿದ ಗೀತೆಗಳನ್ನು ಮುಕೇಶ್‌‌ ಮತ್ತು ತಲತ್‌‌ ಮಹಮೂದ್‌ ಕೂಡಾ ಹಾಡಿದ್ದಾರೆ. ಅವರು ಸುಮಾರು 20 ಚಲನಚಿತ್ರ ಗೀತೆಗಳನ್ನೂ (ಬಂಗಾಳಿ ಚಲನಚಿತ್ರಗಳಲ್ಲಿ ಹಾಡಿರುವುದೂ ಸೇರಿದಂತೆ) ಹಾಡಿದರು; ಸದರಿ ಚಲನಚಿತ್ರಗಳಿಗೆ ಅವರು ಸಂಗೀತ ನಿರ್ದೇಶಕರಾಗಿರದಿದ್ದರೂ ಸಹ, ಆ ಗೀತೆಗಳಿಗೆ ಅವರು ಸಂಗೀತವನ್ನು ಸಂಯೋಜಿಸಿದ್ದರು ಎಂಬುದು ಗಮನಾರ್ಹ ಅಂಶ.

ಜೀವನ ಚರಿತ್ರೆ[ಬದಲಾಯಿಸಿ]

ಆರಂಭಿಕ ಜೀವನ[ಬದಲಾಯಿಸಿ]

ಮಣಿಪುರದ ರಾಜಕುಮಾರಿಯಾದ ರಾಜಕುಮಾರಿ ನಿರ್ಮಲಾ ದೇವಿ ಹಾಗೂ ತ್ರಿಪುರಾದ ರಾಜ (ಆಳ್ವಿಕೆಯ ಕಾಲ 1849-1862) 'ಈಶಾನಚಂದ್ರ ದೇವ್‌ ಬರ್ಮನ್‌‌'ರ ಎರಡನೇ ಮಗನಾದ ನಬದ್ವೀಪ್‌ಚಂದ್ರ ದೇವ್‌ ಬರ್ಮನ್‌‌ ಇವರ ಮಗನಾಗಿ, ಈಗ ಬಾಂಗ್ಲಾದೇಶದಲ್ಲಿರುವ, ಬ್ರಿಟಿಷ್‌ ಭಾರತದ ಕೊಮಿಲ್ಲಾ ಎಂಬಲ್ಲಿ 1906ರ ಅಕ್ಟೋಬರ್‌1ರಂದು S.D.ಬರ್ಮನ್‌‌ ಜನಿಸಿದರು. ಸಚಿನ್‌ರವರ ಹೆತ್ತವರು ಒಟ್ಟು ಒಂಬತ್ತು ಮಕ್ಕಳನ್ನು ಹೊಂದಿದ್ದು, ಅವರಲ್ಲಿನ ಐವರು ಗಂಡುಮಕ್ಕಳ ಪೈಕಿ ಸಚಿನ್‌ ಅತ್ಯಂತ ಕಿರಿಯವರಾಗಿದ್ದರು.

ಕಲ್ಕತ್ತಾ ವಿಶ್ವವಿದ್ಯಾಲಯದಿಂದ [೧] ಅವರು ತಮ್ಮ B.A. ಪದವಿಯನ್ನು ಪಡೆದರು. ಪ್ರಸಿದ್ಧ ಸಂಗೀತಗಾರರಾದ K. C. ಡೇ ಮಾರ್ಗದರ್ಶನದಲ್ಲಿ 1925ರಿಂದ 1930ರವರೆಗೆ ತರಬೇತಿಯನ್ನು ಪಡೆಯುವ ಮೂಲಕ, ಅವರು ತಮ್ಮ ಔಪಚಾರಿಕ ಸಂಗೀತ ಶಿಕ್ಷಣವನ್ನು ಆರಂಭಿಸಿದರು; ಅದಾದ ನಂತರ 1932ರಲ್ಲಿ, ತಮಗಿಂತ ಕೇವಲ ಮೂರು ವರ್ಷಗಳಷ್ಟು ಹಿರಿಯರಾಗಿದ್ದ ಭೀಷ್ಮದೇವ್‌ ಚಟ್ಟೋಪಾಧ್ಯಾಯರವರಿಂದ ಸಚಿನ್‌ ಸಂಗೀತ ಶಿಕ್ಷಣವನ್ನು ಪಡೆದರು. ಇದಾದ ನಂತರ ಸಾರಂಗಿ ವಾದಕ ಕಹೀಫಾ ಬಾದಲ್‌ ಖಾನ್‌, ಹಾಗೂ ಉಸ್ತಾದ್‌ ಅಲ್ಲಾವುದ್ದೀನ್‌ ಖಾನ್‌‌‌ರಿಂದ [೨] ಅವರಿಗೆ ತರಬೇತಿ ದೊರೆಯಿತು. ಅಂತಿಮವಾಗಿ, K.C. ಡೇ, ಉಸ್ತಾದ್‌ ಬಾದಲ್‌ ಖಾನ್‌ ಮತ್ತು ಅಲ್ಲಾವುದ್ದೀನ್‌ ಖಾನ್‌ರವರುಗಳು ಅಗರ್ತಲಾಕ್ಕೆ ಬಂದು ಸೇರಿಕೊಂಡರು; ಬಂಗಾಳದ ಖ್ಯಾತ ಕವಿ, ಪ್ರಶಸ್ತಿ ವಿಜೇತರಾದ ಕಾಜಿ ನಜ್ರುಲ್‌ ಇಸ್ಲಾಂ ಕೂಡಾ ಅಗರ್ತಲಾದಲ್ಲಿನ ಸಚಿನ್‌ರವರ ಕುಟುಂಬದ ಮನೆಯಾದ ಕೊಮಿಲ್ಲಾ ಹೌಸ್‌ನಲ್ಲಿ ಒಂದಷ್ಟು ಕಾಲ ಇದ್ದರು.

1930ರ ದಶಕ[ಬದಲಾಯಿಸಿ]

1932ರಲ್ಲಿ ಕಲ್ಕತ್ತಾ ರೇಡಿಯೋ ಕೇಂದ್ರದಲ್ಲಿ ಓರ್ವ ರೇಡಿಯೋ ಗಾಯಕನಾಗಿ ಅವರು ತಮ್ಮ ಕಾರ್ಯನಿರ್ವಹಣೆಯನ್ನು ಆರಂಭಿಸಿದರು. ಅಲ್ಲಿ ಅವರು ಆರಂಭದಲ್ಲಿ ಪ್ರಸ್ತುತಪಡಿಸಿದ ಕೃತಿಯು ಬಂಗಾಳಿ ಜಾನಪದ-ಸಂಗೀತವನ್ನು ಆಧರಿಸಿತ್ತು, ಮತ್ತು ಕೆಲವೇ ದಿನಗಳಲ್ಲಿ ಅವರು ಜಾನಪದ ಮತ್ತು ಲಘು ಶಾಸ್ತ್ರೀಯ ಸಂಗೀತದಲ್ಲಿ ಸ್ವತಃ ಕೀರ್ತಿಯನ್ನು ಗಳಿಸಿದರು. ಇದರ ಪರಿಣಾಮವಾಗಿ ಅವರ ಚಲನಚಿತ್ರ ಸಂಗೀತ ಸಂಯೋಜನೆಗಳು ಜಾನಪದ-ರಾಗಗಳಿಗೆ ಸಂಬಂಧಿಸಿದಂತೆ ಅವರು ಹೊಂದಿದ್ದ ಬೃಹತ್‌ ವಿಷಯ ಭಂಡಾರದಿಂದ ಅನೇಕವೇಳೆ ಪ್ರಭಾವಿತವಾಗಿದ್ದವು; ಬಾಂಗ್ಲಾದೇಶದ ಬಂಗಾಳಿ, ಭಟಿಯಾಲಿ, ಸಾರಿ ಮತ್ತು ಧಮೈಲ್‌ ಜಾನಪದ ಸಂಪ್ರದಾಯಗಳಿಗೆ ಸೇರಿದ ಜಾನಪದ-ರಾಗಗಳು ಅವರ ಈ ಭಂಡಾರದಲ್ಲಿದ್ದವು ಎಂಬುದು ಗಮನಾರ್ಹ ಸಂಗತಿ. ಅದೇ ವರ್ಷದಲ್ಲಿ, ಅವರ ಮೊದಲ ಧ್ವನಿಮುದ್ರಿಕೆಯೂ (ಹಿಂದೂಸ್ತಾನ್‌ ಮ್ಯೂಸಿಕಲ್‌ ಪ್ರಾಡಕ್ಟ್‌) ಬಿಡುಗಡೆಯಾಯಿತು; ಹಿಂದೂಸ್ತಾನ್‌ ರೆಕಾರ್ಡ್ಸ್‌[೩] ಕಂಪನಿಗಾಗಿ ಧ್ವನಿಮುದ್ರಿಸಲಾದ "ಖಮಾಜ್‌" ಅರೆ ಶಾಸ್ತ್ರೀಯ ಗೀತೆಯಾದ ಏ ಪಥೇರಿ ಆಜ್‌ ಎಸೊ ಪ್ರಿಯೋ ಧ್ವನಿಮುದ್ರಿಕೆಯ ಒಂದು ಪಾರ್ಶ್ವದಲ್ಲಿದ್ದರೆ, ದಕ್ಲೆ ಕೋಕಿಲ್‌ ರೋಜ್‌ ಬಿಹಾನೆ ಎಂಬ ಜಾನಪದ ಶೈಲಿಯ ಗೀತೆಯು ಹಿಮ್ಮುಖ ಪಾರ್ಶ್ವದಲ್ಲಿದ್ದು, ಅವು 78 ಆರ್‌ಪಿಎಂ (ರೆವಲ್ಯೂಷನ್ಸ್‌ ಪರ್‌ ಮಿನಿಟ್‌- ಪ್ರತಿ ನಿಮಿಷಕ್ಕಿರುವ ಸುತ್ತುವಿಕೆಗಳು) ಗತಿಯಲ್ಲಿ ಧ್ವನಿಮುದ್ರಿಸಲ್ಪಟ್ಟಿದ್ದವು. ಇದರ ನಂತರದ ದಶಕದಲ್ಲಿ ಓರ್ವ ಗಾಯಕನಾಗಿ ಉತ್ತುಂಗಕ್ಕೇರಿದ ಅವರು ಬಂಗಾಳಿ ಭಾಷೆಯಲ್ಲಿ ಏನಿಲ್ಲವೆಂದರೂ 131 ಗೀತೆಗಳನ್ನು ಧ್ವನಿಮುದ್ರಿಸಿದರು; ಅಷ್ಟೇ ಅಲ್ಲ, ಹಿಮಾಂಗ್ಸು ದತ್ತ, RC ಬೊರಾಲ್‌, ನಜ್ರುಲ್‌ ಇಸ್ಲಾಂ ಮತ್ತು ಶೈಲೇಶ್‌ ದಾಸ್‌‌ ಗುಪ್ತಾರಂತಹ [೪] ಸಂಯೋಜಕರಿಗಾಗಿಯೂ ಹಾಡಿದರು.

1934ರಲ್ಲಿ, ಅಲಹಾಬಾದ್ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಅವರು ಭಾಗವಹಿಸಿ, ತಮ್ಮ ಬಂಗಾಳಿ ಠುಮ್ರಿಯನ್ನು ಪ್ರಸ್ತುತ ಪಡಿಸಿದರು. ವಿಜಯ ಲಕ್ಷ್ಮಿ ಪಂಡಿತ್‌‌‌ ಮತ್ತು ಕಿರಾಣಾ ಘರಾನಾದ ಅನುಪಮ ಗಾಯಕರಾದ ಅಬ್ದುಲ್‌ ಕರೀಮ್‌ ಖಾನ್‌‌‌ರಂತಹ ಹೆಸರಾಂತ ಪ್ರೇಕ್ಷಕರು ಅಲ್ಲಿ ಉಪಸ್ಥಿತರಿದ್ದರು ಎಂಬುದು ಗಮನಾರ್ಹ ಅಂಶ. ಆ ವರ್ಷದಲ್ಲಿಯೇ ನಂತರದಲ್ಲಿ ಕೋಲ್ಕತಾದಲ್ಲಿ ನಡೆದ ಬಂಗಾಳ ಸಂಗೀತ ಸಮ್ಮೇಳನಕ್ಕೆ ಅವರು ಆಹ್ವಾನಿಸಲ್ಪಟ್ಟರು. ಈ ಸಮ್ಮೇಳನವು ರವೀಂದ್ರನಾಥ ಟ್ಯಾಗೋರರಿಂದ ಉದ್ಘಾಟಿಸಲ್ಪಟ್ಟಿತು. ಇಲ್ಲೂ ಸಹ ಅವರು ಮತ್ತೊಮ್ಮೆ ತಮ್ಮ ಠುಮ್ರಿಯನ್ನು ಹಾಡಿದರು, ಮತ್ತು ಅವರಿಗೆ ಬಂಗಾರದ ಪದಕವೊಂದನ್ನು [೪] ನೀಡಲಾಯಿತು.

ಕೋಲ್ಕತಾದ ಬಾಲಿಗಂಜ್‌‌‌ನ ಸೌತ್‌ಎಂಡ್‌ ಪಾರ್ಕ್‌ನಲ್ಲಿ ಅವರು ಮನೆಯೊಂದನ್ನು ನಿರ್ಮಿಸಿದರು. 1937ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಅವರು ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದಲ್ಲಿ ಓರ್ವ ಸಂಗೀತ ವಿದ್ಯಾರ್ಥಿಯಾಗಿದ್ದ ಮೀರಾ ದಾಸ್‌‌ಗುಪ್ತಾ (1923–2007) ಎಂಬುವವರನ್ನು ಭೇಟಿಯಾದರು. ಈಕೆಯು ಢಾಕಾಗೆ ಸೇರಿದ ನ್ಯಾಯಮೂರ್ತಿ ರಾಯ್‌ಬಹಾದೂರ್‌ ಕಮಲ್‌ನಾಥ್‌‌ ದಾಸ್‌‌ಗುಪ್ತಾರವರ ಮೊಮ್ಮಗಳಾಗಿದ್ದರು; ಅನತಿ ಕಾಲದಲ್ಲಿಯೇ ಆಕೆಯು ಅವರ ವಿದ್ಯಾರ್ಥಿಯಾದರು ಮತ್ತು ಕಲ್ಕತ್ತಾದಲ್ಲಿ [೫][೬] 1938ರ ಫೆಬ್ರುವರಿ 10ರಂದು ಅವರು ಮದುವೆಯಾದರು. ಆದರೂ ರಾಜಕುಟುಂಬಕ್ಕೆ ಸೇರದ ಓರ್ವಳನ್ನು ಅವರು ಮದುವೆಯಾದ್ದರಿಂದ, ಆ ರಾಜಕುಟುಂಬದೊಳಗೆ ಒಂದು ರಾದ್ಧಾಂತವೇ ಸೃಷ್ಟಿಯಾಗಿಹೋಯಿತು. ಹೀಗಾಗಿ ಸಚಿನ್‌ರವರು ತರುವಾಯದಲ್ಲಿ ಕುಟುಂಬದೊಂದಿಗಿನ ತಮ್ಮ ಸಂಬಂಧಗಳನ್ನು ಕಡಿದುಕೊಂಡರು, ಮತ್ತು ತಮ್ಮ ಪಿತ್ರಾರ್ಜಿತವಾಗಿ ಬರಬಹುದಾದುದನ್ನು[೭][೮] ಕಳೆದುಕೊಂಡರು. ಈ ಜೋಡಿಯ ಏಕೈಕ ಮಗುವಾದ ರಾಹುಲ್‌ ದೇವ್‌ ಬರ್ಮನ್‌‌ 1939ರಲ್ಲಿ ಜನಿಸಿದರು. ಕಾಲಾನಂತರದಲ್ಲಿ ಮೀರಾ ದೇವಿ ಮತ್ತು ರಾಹುಲ್‌ ಇಬ್ಬರೂ ಸಹ ಕೆಲವೊಂದು ಸಾಂಗೀತಕ ಸಂಯೋಜನೆಗಳೊಂದಿಗೆ [೯][೧೦] S.D. ಬರ್ಮನ್‌ರಿಗೆ ನೆರವಾದರು. ಸೆಲಿಮಾ (1934) ಎಂಬ ಉರ್ದು ಚಲನಚಿತ್ರದಲ್ಲಿ ಒಂದು ಹಾಡುವ ಪಾತ್ರವನ್ನೂ ಸಹ S.D. ಬರ್ಮನ್‌‌ ನಿರ್ವಹಿಸಿದರು ಮತ್ತು ಧೀರೇನ್‌ ಗಂಗೂಲಿಯವರ ಬಿದ್ರೋಹಿ (1935) [೨] ಎಂಬ ಚಲನಚಿತ್ರದಲ್ಲಿಯೂ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಂಡರು.

ಓರ್ವ ಸಂಗೀತ ಸಂಯೋಜಕನಾಗಿ ಸತಿ ತೀರ್ಥ ಮತ್ತು ಜನನಿ ಎಂಬ ಬಂಗಾಳಿ ನಾಟಕಗಳೊಂದಿಗೆ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು, ಮತ್ತು ಅಂತಿಮವಾಗಿ 1937ರಲ್ಲಿ ಬಂದ ರಾಜ್‌ಗೀ ಎಂಬ ಚಲನಚಿತ್ರದಲ್ಲಿ ತಮ್ಮ ಮೊದಲ ಸಂಗೀತ ಸಂಯೋಜನೆಯನ್ನು ಒದಗಿಸಿದರು. ಅವರ ಎರಡನೇ ಚಲನಚಿತ್ರವಾದ ರಾಜ್‌ಕುಮಾರರ್‌‌ ನಿರ್ಬಾಶನ್‌ (1940) ಜನಪ್ರಿಯ ಯಶಸ್ಸನ್ನು ದಾಖಲಿಸಿದ ನಂತರ, ಅವರು ಮತ್ತೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಜೆವಾನ್‌ ಸಂಗಿನಿ , ಪ್ರತಿಶೋಧ್‌‌ (1941), ಅಭೋಯೆರ್‌ ಬಿಯೆ (1942), ಮತ್ತು ಚದ್ದೋಬೆಶಿ (1944) ಇವೇ ಮೊದಲಾದ ಬಂಗಾಳಿ ಚಲನಚಿತ್ರಗಳಲ್ಲಿ ಅವರು ಯಶಸ್ವೀ ಸಂಗೀತವನ್ನು ನೀಡಿದರು; 1944ರಲ್ಲಿ ಅವರು ಬಾಂಬೆಗೆ ತೆರಳಿದ ನಂತರವೂ ಬಂಗಾಳಿ ಚಲನಚಿತ್ರ ರಂಗದಲ್ಲಿ ಸಂಗೀತ ನೀಡುವುದನ್ನು ಅವರು ಮುಂದುವರಿಸಿದರು, ಮತ್ತು ಎಲ್ಲಾ ಸೇರಿಕೊಂಡು[೪] 17ಕ್ಕೂ ಹೆಚ್ಚಿನ ಬಂಗಾಳಿ ಚಲನಚಿತ್ರಗಳಿಗೆ ಸಂಗೀತ ನೀಡುವ ಮೂಲಕ, ತಮ್ಮ ಸಾಂಗೀತಕ ವೃತ್ತಿಜೀವನದ ಎರಡನೇ ಸರದಿಯನ್ನು ಆರಂಭಿಸಿದರು.

ಚಲನಚಿತ್ರದಲ್ಲಿನ ತಮ್ಮ ಹಾಡುಗಾರಿಕೆಯ ಪ್ರಥಮ ಪ್ರವೇಶವನ್ನು ಅವರು ಯಹೂದಿ ಕಿ ಲಡ್ಕಿ (1933) ಚಿತ್ರದಲ್ಲಿ ಕೈಗೊಂಡರಾದರೂ, ಅದರ ಗೀತೆಗಳು ನಿರುಪಯುಕ್ತವೆಂಬಂತೆ ತಿರಸ್ಕರಿಸಲ್ಪಟ್ಟವು ಹಾಗೂ ಅವನ್ನು ಪಹಾರಿ ಸನ್ಯಾಲ್‌‌‌ರಿಂದ ಮತ್ತೊಮ್ಮೆ ಹಾಡಿಸಲಾಯಿತು. ಸಾಂಝೆರ್‌ ಪಿಡಿಮ್‌ (1935) ಎಂಬ ಚಲನಚಿತ್ರವು ಓರ್ವ ಗಾಯಕರಾಗಿ ಅವರ ಮೊದಲ ಚಲನಚಿತ್ರವೆನಿಸಿಕೊಂಡಿತು.

1940ರ ದಶಕ[ಬದಲಾಯಿಸಿ]

1944ರಲ್ಲಿ, ಫಿಲ್ಮಿಸ್ತಾನ್‌‌‌ನ ಶಶಧರ್‌ ಮುಖರ್ಜಿಯವರ ಮನವಿಯ ಮೇರೆಗೆ ಅವರು ಬಾಂಬೆಗೆ ತೆರಳಿದರು. ಅಶೋಕ್‌ ಕುಮಾರ್‌‌ ಪ್ರಮುಖ ತಾರಾಗಣದಲ್ಲಿದ್ದ ಶಿಕಾರಿ (1946) ಮತ್ತು ಆಠ್‌ ದಿನ್‌ [೧೧] ಎಂಬ ಎರಡು ಚಿತ್ರಗಳಿಗೆ ಸಂಗೀತ ಒದಗಿಸಲು ಮುಖರ್ಜಿ ಅವರನ್ನು ಕೇಳಿಕೊಂಡರು. ಆದರೆ ಫಿಲ್ಮಿಸ್ತಾನ್ ಕಂಪನಿಯ ದೋ ಭಾಯಿ (1947) ಚಿತ್ರದೊಂದಿಗೆ ನಂತರದ ವರ್ಷದಲ್ಲಿ ಅವರಿಗೆ ಮೊದಲ ಪ್ರಚಂಡ ಪ್ರವೇಶವು ದೊರಕಿತು. ಗೀತಾ ದತ್‌ ಹಾಡಿದ ಮೇರಾ ಸುಂದರ್ ಸಪ್ನಾ ಬೀತ್‌ ಗಯಾ ಎಂಬ ಗೀತೆಯು ಚಲನಚಿತ್ರೋದ್ಯಮದೊಳಗೆ ಆಕೆಗೆ ಪ್ರಚಂಡ ಪ್ರವೇಶವು ದೊರಕಲು ಕಾರಣವಾಯಿತು. 1949ರಲ್ಲಿ, ಫಿಲ್ಮಿಸ್ತಾನ್‌ ಕಂಪನಿಯೊಂದಿಗಿನ ಅವರ ಮತ್ತೊಂದು ಅತಿದೊಡ್ಡ ಜನಪ್ರಿಯ ಯಶಸ್ಸಿನ ಚಿತ್ರವಾದ ಶಬ್ನಮ್‌ ಬಿಡುಗಡೆಯಾಯಿತು; ಶಂಶದ್‌ ಬೇಗಮ್‌ ಹಾಡಿದ ಯೆಹ್‌ ದುನಿಯಾ ರೂಪ್‌ ಕಿ ಚೋರ್‌ ಎಂಬ ಬಹು-ಭಾಷೆಯ ಜನಪ್ರಿಯ ಯಶಸ್ಸಿನ ಗೀತೆಯಿಂದಾಗಿ ಆ ಚಿತ್ರವು ವಿಶೇಷವಾಗಿ ಗಮನಾರ್ಹವಾಗಿತ್ತು ಮತ್ತು ಆ ದಿನಗಳಲ್ಲಿ [೧೨] ಆ ಗೀತೆಯು ಒಂದು ಜನಮರುಳಿನ ಉತ್ಸಾಹದ ಗೀತೆಯಾಗಿ ಪರಿಣಮಿಸಿತ್ತು.

1950ರ ದಶಕ[ಬದಲಾಯಿಸಿ]

ಐಹಿಕ ವಿಷಯಗಳಿಗೆ ಹೆಚ್ಚು ಗಮನ ಕೊಡುವ ಬಾಂಬೆಯ ಪ್ರವೃತ್ತಿಯಿಂದಾಗಿ ಭ್ರಮನಿರಸನಗೊಂಡ S.D. ಬರ್ಮನ್‌, ಅಶೋಕ್‌ ಕುಮಾರ್‌‌ ಪ್ರಧಾನ ತಾರಾಗಣದಲ್ಲಿದ್ದ ಮಶಾಲ್‌ (1950) ಎಂಬ ಚಿತ್ರವನ್ನು ಅಪೂರ್ಣವಾಗಿರುವಂತೆಯೇ ಬಿಟ್ಟರು ಮತ್ತು ಕಲ್ಕತ್ತಾದೆಡೆಗಿನ ಮೊದಲ ಟ್ರೇನನ್ನು ಹತ್ತಲು ನಿರ್ಧರಿಸಿದರು. ಅದೃಷ್ಟವಶಾತ್‌‌, ಹಾಗೆ ಮಾಡುವುದರಿಂದ ಅವರನ್ನು ತಡೆಯಲಾಯಿತು.

1950ರ ದಶಕದಲ್ಲಿ, ದೇವ್‌ ಆನಂದ್‌‌‌ರವರ ನವಕೇತನ್‌ ಪ್ರೊಡಕ್ಷನ್ಸ್‌ ಜೊತೆಯಲ್ಲಿ ಕೈಜೋಡಿಸಿದ S.D. ಬರ್ಮನ್‌‌, ಟ್ಯಾಕ್ಸಿ ಡ್ರೈವರ್‌‌ (1954), ಮುನಿಮ್‌ಜಿ (1955), ಪೇಯಿಂಗ್‌ ಗೆಸ್ಟ್‌ (1957), ನೌ ದೋ ಗ್ಯಾರಾ (1957) ಮತ್ತು ಕಾಲಾಪಾನಿ (1958) ಇವೇ ಮೊದಲಾದ ಸಾಂಗೀತಕ ಜನಪ್ರಿಯ ಯಶಸ್ಸುಗಳನ್ನು ಸೃಷ್ಟಿಸಿದರು. ಮೊಹಮ್ಮದ್‌‌ ರಫಿ ಮತ್ತು ಕಿಶೋರ್‌‌ ಕುಮಾರ್‌‌‌ರಿಂದ ಹಾಡಲ್ಪಟ್ಟ ಗೀತೆಗಳು ಜನಪ್ರಿಯವಾದವು. ದೇವ್‌ ಆನಂದ್‌‌‌‌‌‌‌ರವರ ನವ್‌ಕೇತನ್‌‌ ನಿರ್ಮಾಣ ಕಂಪನಿಯ ಅಫ್ಸರ್‌‌ (1950) ಎಂಬ ಮೊದಲ ಚಲನಚಿತ್ರಕ್ಕೆ ಬರ್ಮನ್‌‌ ದಾ ಸಂಗೀತ ಸಂಯೋಜಿಸಿದರು. ಕಂಪನಿಯ ಎರಡನೇ ಚಲನಚಿತ್ರವಾದ ಬಾಝಿ (1951) ಕಂಡ ಯಶಸ್ಸಿನಿಂದಾಗಿ ಬರ್ಮನ್‌ ಉತ್ತುಂಗಕ್ಕೇರಿದರು ಹಾಗೂ ನವ್‌ಕೇತನ್‌‌ ಸಂಸ್ಥೆ ಮತ್ತು ದೇವ್‌ ಆನಂದ್‌‌‌‌ ಜೊತೆಗಿನ ಒಂದು ಸುದೀರ್ಘ ಸಂಬಂಧವು ತನ್ನದೇ ಆದ ಹಾದಿಯನ್ನು ಕಂಡುಕೊಂಡಿತು. 'ಬಾಝಿ' ಚಿತ್ರದ ತೀವ್ರಗತಿಯ ಸಂಗೀತ ಸಂಯೋಜನೆಯು ಗಾಯಕಿ ಗೀತಾ ದತ್‌‌‌ರವರ ಗಾಯನದ ಮತ್ತೊಂದು ಮಗ್ಗುಲನ್ನು ಹೊರಹೊಮ್ಮಿಸಿತು; ಏಕೆಂದರೆ ದುಃಖಸೂಚಕ ಗೀತೆಗಳು ಮತ್ತು ಭಜನ್‌‌ಗಳನ್ನು ಹಾಡುವುದಕ್ಕೆ ಸಂಬಂಧಿಸಿದಂತೆ ಆಕೆಯು ಮುಖ್ಯವಾಗಿ ಹೆಸರಾಗಿದ್ದರು. ಸದರಿ ಚಲನಚಿತ್ರದಲ್ಲಿನ ಪ್ರತಿಯೊಂದು ಗೀತೆಯೂ ಜನಪ್ರಿಯ ಯಶಸ್ಸನ್ನು ದಾಖಲಿಸಿತಾದರೂ, "ತದ್‌ಬೀರ್‌ ಸೆ ಬಿಗ್‌ಡೀ ಹುಯಿ ತಕ್‌ದೀರ್‌" ಎಂಬ ಗೀತೆಯು ಒಂದು ವಿಶೇಷ ಆಕರ್ಷಣೆಯಾಗಿ ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಂಡಿತು; ವಾಸ್ತವವಾಗಿ ಇದೊಂದು ಘಜಲ್‌ ಆಗಿದ್ದು, ಇದನ್ನು ಒಂದು ಪ್ರಲೋಭಕ ಗೀತೆಯಾಗಿ ಪಾಶ್ಚಾತ್ಯೀಕರಿಸಲಾಗಿತ್ತು.'ಜಾಲ್‌' ಚಿತ್ರದಲ್ಲಿ ಹೇಮಂತ್‌‌ ಕುಮಾರ್‌‌ ಹಾಡಿರುವ 'ಯೆ ರಾತ್‌ ಯೆ ಚಾಂದ್‌ನಿ' ಎಂಬ ಗೀತೆಯು ಒಂದು ಸಾರ್ವಕಾಲಿಕ ಮಹಾನ್‌ ಶ್ರೇಷ್ಠಗೀತೆಯಾಗಿದೆ.

ಗುರುದತ್‌‌‌‌ರವರ ಮೇರುಕೃತಿಗಳಾದ ಪ್ಯಾಸಾ (1957) ಮತ್ತು ಕಾಗಜ್‌ ಕೆ ಫೂಲ್‌ (1959) ಚಿತ್ರಗಳಿಗೂ ಅವರು ಸಂಗೀತವನ್ನು ರಚಿಸಿದರು. ದೇವ್‌ದಾಸ್‌‌ (1955) ಚಿತ್ರದ ಧ್ವನಿಪಥಕ್ಕೂ ಅವರದೇ ಸಂಗೀತ ಸಂಯೋಜನೆಯಿತ್ತು. ಹೌಸ್‌ ನಂ. 44 (1955), ಫಂತೂಷ್‌ (1956), ಮತ್ತು ಸೋಲ್ವಾ ಸಾಲ್‌ (1958) ಮೊದಲಾದವು S.D. ಬರ್ಮನ್‌‌ರವರ ಜನಪ್ರಿಯ ಯಶಸ್ಸಿನ ಇತರ ಚಿತ್ರಗಳಿಗೆ ಸಾಕ್ಷಿಯಾದವು. 1959ರಲ್ಲಿ ಬಿಮಲ್‌ ರಾಯ್‌ರವರಿಂದ ಸೃಷ್ಟಿಸಲ್ಪಟ್ಟ ಒಂದು ಮೇರುಕೃತಿಯಾದ ಸುಜಾತಾ ಚಿತ್ರವು ಬಿಡುಗಡೆಯಾಯಿತು. ತಲತ್‌‌ ಮಹಮೂದ್‌ರವರ ಗಾಯನದಲ್ಲಿದ್ದ ಈ ಚಿತ್ರದ "ಜಲ್ತೆ ಹೈ ಜಿಸ್ಕೆ ಲಿಯೆ" ಗೀತೆಯೊಂದಿಗೆ S.D. ಮತ್ತೊಮ್ಮೆ ಜಾದೂವನ್ನು ಸೃಷ್ಟಿಸಿದರು. ಬಾಝಿ ಮತ್ತು ಜಾಲ್‌‌ ನಂಥ (1952) ತುಲನಾತ್ಮಕವಾಗಿ ಲಘು-ತೂಕದ ಚಲನಚಿತ್ರಗಳನ್ನು ಗುರುದತ್‌ ರೂಪಿಸಿದಾಗ, ಸುನೋ ಗಜರ್‌ ಕ್ಯಾ ಗಯೆ ಅಥವಾ ದೇ ಭಿ ಚುಕೆ ಹಮ್‌‌ ನಂಥ ಸಂಯೋಜನೆಗಳೊಂದಿಗೆ ಬರ್ಮನ್‌‌ದಾ ಆ ಚಿತ್ರಗಳ ಭಾವಸ್ಥಿತಿಯನ್ನು ಪ್ರತಿಬಿಂಬಿಸಿದರು; ಪ್ಯಾಸಾ (1957) ಮತ್ತು ಕಾಗಜ್‌ ಕೆ ಫೂಲ್‌‌ ನಂಥ (1959) ತಮ್ಮ ವಿಷಣ್ಣ ಮೇರುಕೃತಿಗಳನ್ನು ಗುರುದತ್‌ ರೂಪಿಸಿದಾಗ, ಜಿನ್ಹೆ ನಾಜ್‌ ಹೈ ಹಿಂದ್‌ ಮತ್ತು ವಕ್ತ್‌ ನೆ ಕಿಯಾ ಕ್ಯಾ ಹಸೀನ್‌ ಸಿತಮ್‌‌ ನಂಥ ಗೀತೆಗಳೊಂದಿಗೆ ಬರ್ಮನ್‌‌ದಾ ಸರಿಯಾದ ಗುರಿಯೆಡೆಗೇ ಸಾಗಿದ್ದರು. 2004ರಲ್ಲಿ, ಪ್ಯಾಸಾ ಚಿತ್ರಕ್ಕೆ ಸಂಬಂಧಿಸಿದ ಧ್ವನಿಪಥವನ್ನು ಬ್ರಿಟಿಷ್‌ ಫಿಲ್ಮ್‌ ಇನ್‌‌ಸ್ಟಿಟ್ಯೂಟ್‌‌‌‌ನ ಸೈಟ್‌ & ಸೌಂಡ್‌ ಎಂಬ ನಿಯತಕಾಲಿಕವು, "ಚಲನಚಿತ್ರದಲ್ಲಿನ ಅತ್ಯುತ್ತಮ ಸಂಗೀತ"ದ ಪೈಕಿ ಒಂದು ಎಂಬುದಾಗಿ ಆಯ್ಕೆಮಾಡಿತು.[೧೩]

1957ರಲ್ಲಿ, ಲತಾ ಮಂಗೇಷ್ಕರ್‌‌ ಜೊತೆಯಲ್ಲಿ S.D. ಬರ್ಮನ್‌‌ ಜಗಳವಾಡಿಕೊಂಡರು ಮತ್ತು ಆಕೆಯ ಕಿರಿಯ ಸೋದರಿಯಾದ ಆಶಾ ಭೋಸ್ಲೆಯವರನ್ನು ತಮ್ಮ ಪ್ರಮುಖ ಗಾಯಕಿಯಾಗಿ ಸ್ವೀಕರಿಸಿದರು. S.D. ಬರ್ಮನ್‌‌, ಕಿಶೋರ್‌‌ ಕುಮಾರ್‌‌, ಆಶಾ ಭೋಸ್ಲೆ ಮತ್ತು ಗೀತಸಾಹಿತಿ ಮಜ್ರೂಹ್‌ ಸುಲ್ತಾನ್‌ಪುರಿ ಇವರುಗಳ ತಂಡವು, ಅವರು ಸೃಷ್ಟಿಸಿದ ಯುಗಳ ಗೀತೆಗಳಿಂದಾಗಿ ಜನಪ್ರಿಯವಾಯಿತು. ಈ ರೀತಿಯಲ್ಲಿ, ಆಶಾ ಭೋಸ್ಲೆಯವರನ್ನು ಓರ್ವ ಪ್ರಸಿದ್ಧ ಗಾಯಕಿಯಾಗಿ ರೂಪಿಸುವುದಕ್ಕೆ ಸಂಬಂಧಿಸಿದಂತೆ ಅವರು O.P. ನಯ್ಯರ್‌‌ ಜೊತೆಜೊತೆಗೆ ಹೊಣೆಗಾರರಾಗಿದ್ದರು; ಈಕೆಯೇ ಮುಂದೆ ರಾಹುಲ್‌ ದೇವ್‌ ಬರ್ಮನ್‌‌ರನ್ನು ಮದುವೆಯಾಗಿ S.D. ಬರ್ಮನ್‌‌ರ ಸೊಸೆಯಾದರು.

1958ರಲ್ಲಿ, ಕಿಶೋರ್‌‌ ಕುಮಾರ್‌‌‌ರವರ ಸ್ವಂತ ನಿರ್ಮಾಣದ ಚಲ್ತಿ ಕಾ ನಾಮ್‌ ಗಾಡಿ ಚಿತ್ರಕ್ಕೆ S.D. ಬರ್ಮನ್‌‌ ಸಂಗೀತ ನೀಡಿದರು. ಅದೇ ವರ್ಷದಲ್ಲಿ ಸಂಗೀತ ನಿರ್ದೇಶನಕ್ಕಾಗಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು ಮತ್ತು ಸದರಿ ಪ್ರತಿಷ್ಠಿತ ಪ್ರಶಸ್ತಿಯನ್ನು[೧೪] ಗೆದ್ದ ಏಕೈಕ ಸಂಗೀತ ನಿರ್ದೇಶಕ ಎಂಬ ಕೀರ್ತಿಯು ಈಗಲೂ ಅವರ ಹೆಸರಿನಲ್ಲಿ ಉಳಿದುಕೊಂಡಿದೆ.

1960ರ ದಶಕ[ಬದಲಾಯಿಸಿ]

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಚಲನಚಿತ್ರದಲ್ಲಿನ ನಟರ[೪] ತುಟಿ ಚಲನೆಯೊಂದಿಗೆ ತಮ್ಮ ಧ್ವನಿಯು ಸಮನ್ವಯಿಸಲ್ಪಡುವುದಕ್ಕೆ (ಲಿಪ್‌-ಸಿಂಕ್‌ ಮಾಡುವುದಕ್ಕೆ) ಅವಕಾಶ ನೀಡಲು ಅವರು ನಿರಾಕರಿಸಿದರು. ಇದರ ಪರಿಣಾಮವಾಗಿ, ಅಷ್ಟೇ ಏಕೆ ನಂತರದಲ್ಲೂ, ತೆಳುವಾಗಿದ್ದರೂ ಶಕ್ತಿಯುತವಾಗಿದ್ದ ಅವರ ಧ್ವನಿಯು ಚಿರಕಾಲ ಕಾಡುವ ಅಥವಾ ಬೆಂಬಿಡದ ಗುಂಗಿನಂಥ ಪರಿಣಾಮವನ್ನು ಹೊಂದಿರುವ ಹಾಡುಕವಿಯ ವ್ಯಾಖ್ಯಾನದ ರೂಪದಲ್ಲಿ ಹಿಂದಿ ಚಿತ್ರಗಳಲ್ಲಿ ಅನೇಕ ವೇಳೆ ಬಳಸಲ್ಪಟ್ಟಿತು; ಬಂದಿನಿ (1963) ಚಿತ್ರದಲ್ಲಿನ ಓರೆ ಮಾಝೀ ಮೆರೆ ಸಜನ್‌ ಹೈ ಉಸ್‌ ಪಾರ್‌ ಗೀತೆ, ಗೈಡ್‌ (1965) ಚಿತ್ರದಲ್ಲಿನ ವಹಾಂ ಕೌನ್‌ ಹೈ ತೇರಾ ಗೀತೆ ಮತ್ತು ಅಂತಿಮವಾಗಿ ಆರಾಧನಾ (1969) [೧೫] ಚಿತ್ರದಲ್ಲಿನ ಸಫಲ್‌ ಹೋಗಿ ತೇರಿ ಆರಾಧನಾ ಗೀತೆಗಳು ಇದಕ್ಕೆ ನಿದರ್ಶನಗಳಾಗಿವೆ. 'ಸಫಲ್‌ ಹೋಗಿ ತೇರಿ ಆರಾಧನಾ' ಗೀತೆಗಾಗಿ 1970ರ ವರ್ಷದ ಅತ್ಯುತ್ತಮ ಹಿನ್ನೆಲೆ ಗಾಯಕನಿಗೆ ಮೀಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅವರು ಸ್ವೀಕರಿಸಿದರು.

ಸರಿಯಿಲ್ಲದ ಆರೋಗ್ಯದ ಕಾರಣದಿಂದಾಗಿ 1960ರ ದಶಕದ ಆರಂಭಿಕ ಭಾಗಗಳಲ್ಲಿ ಅವರ ವೃತ್ತಿಜೀವನವು ಒಂದು ಕುಸಿತವನ್ನು ಕಂಡಿತಾದರೂ, 1960ರ ದಶಕದ ದ್ವಿತೀಯಾರ್ಧದಲ್ಲಿ ಅವರು ಜನಪ್ರಿಯ ಯಶಸ್ಸಿನ ಅನೇಕ ಚಲನಚಿತ್ರಗಳನ್ನು ನೀಡಿದರು. 1961ರಲ್ಲಿ, S.D. ಬರ್ಮನ್‌‌ ಮತ್ತು ಲತಾ ಮಂಗೇಷ್ಕರ್‌‌ ಇಬ್ಬರೂ ತಮ್ಮ ಮುನಿಸನ್ನು ತೊರೆದು ಜತೆಗೂಡಿದರು; ಛೋಟೆ ನವಾಬ್‌ (1961) ಚಲನಚಿತ್ರಕ್ಕೆ ಸಂಬಂಧಿಸಿದ R.D. ಬರ್ಮನ್‌‌‌‌‌ರವರ ಮೊದಲ ಗೀತೆಯ ಧ್ವನಿಮುದ್ರಣದ ಸಂದರ್ಭದಲ್ಲಿ ಅವರು ರಾಜಿಯಾದರು ಎಂಬುದು ಕುತೂಹಲಕರ ಸಂಗತಿ. ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡ ಅವರು, ಮತ್ತೆ 1962ರಲ್ಲಿ ಜತೆಗೂಡಿ ಕೆಲಸಮಾಡುವುದುನ್ನು ಪ್ರಾರಂಭಿಸಿದರು.

ನವ್‌ಕೇತನ್‌‌ ಲಾಂಛನದ ಅಡಿಯಲ್ಲಿನ ದೇವ್‌ ಆನಂದ್‌‌‌‌ ಹಾಗೂ S.D. ಬರ್ಮನ್‌‌ರ ಸಹಭಾಗಿತ್ವವು ಮುಂದುವರಿದು, ಸಾಂಗೀತಕ ಜನಪ್ರಿಯ ಯಶಸ್ಸು ಕಂಡ ಚಿತ್ರಗಳನ್ನು ಹೆಚ್ಚೆಚ್ಚು ರೂಪಿಸಿತು; ಬಂಬಯಿ ಕಾ ಬಾಬು (1960), ತೇರೆ ಘರ್‌ ಕೆ ಸಾಮ್‌ನೆ (1963), ತೀನ್‌ ದೇವಿಯಾ (1965), ಗೈಡ್‌ (1965) ಮತ್ತು ಜ್ಯುವೆಲ್‌ ಥೀಫ್‌ (1967) ಮೊದಲಾದ ಚಿತ್ರಗಳು ಇದಕ್ಕೆ ನಿದರ್ಶನಗಳಾಗಿವೆ. 1963ರಲ್ಲಿ, ಮೇರಿ ಸೂರತ್‌ ತೇರಿ ಆಂಖೇ ಚಿತ್ರಕ್ಕಾಗಿ ಅವರು ಗೀತೆಗಳನ್ನು ಸಂಯೋಜಿಸಿದರು ಹಾಗೂ "ಪೂಛೊ ನಾ ಕೈಸೆ ಮೈನೆ" ಎಂಬ ಗೀತೆಯನ್ನು ಮನ್ನಾ ಡೇಯವರು ಅಹಿರ್‌ ಭೈರವ್ ರಾಗದಲ್ಲಿ ಹಾಡಿದರು. ಭೈರವಿ (ಮುಂಜಾನೆ ರಾಗ)[ಸೂಕ್ತ ಉಲ್ಲೇಖನ ಬೇಕು] ರಾಗವನ್ನು ಆಧರಿಸಿ ಕಾಜಿ ನಜ್ರುಲ್‌ ಇಸ್ಲಾಂ ಎಂಬ ಸಂಯೋಜಕರು ಮಾಡಿದ್ದ ಅರುಣೋ-ಕಾಂತಿ ಕೆ ಗೋ ಜೋಗಿ ಭಿಕಾರಿ ಎಂಬ ಒಂದು ಬಂಗಾಳಿ ಸಂಯೋಜನೆಯನ್ನು ಈ ಗೀತೆಯು ಆಧರಿಸಿದೆ.

ಈ ಅವಧಿಯಲ್ಲಿ S.D. ಬರ್ಮನ್‌ರಿಂದ ದಾಖಲಿಸಲ್ಪಟ್ಟ ಇತರ ಜನಪ್ರಿಯ ಯಶಸ್ಸಿನ ಚಿತ್ರಗಳಲ್ಲಿ ಬಂದಿನಿ (1963) ಮತ್ತು ಝಿದ್ದಿ (1964) ಸೇರಿದ್ದವು. ಬಂದಿನಿ ಚಿತ್ರದಲ್ಲಿ, ಸಂಪೂರಣ್‌ ಸಿಂಗ್‌ (ಇವರು ಗುಲ್ಜಾರ್‌‌ ಎಂಬ ಹೆಸರಿನಿಂದಲೇ ಖ್ಯಾತರು) ಓರ್ವ ಗೀತಸಾಹಿತಿಯಾಗಿ ತಮ್ಮ ಪ್ರಥಮ ಪ್ರವೇಶವನ್ನು ದಾಖಲಿಸಿದರು; "ಮೋರಾ ಗೋರಾ ಅಂಗ್‌ ಲೈ ಲೇ, ಮೋಹೆ ಶಾಮ್‌ ರಂಗ್‌ ದಾಯಿ ದೇ" ಎಂಬುದು ಅವರ ಲೇಖನಿಯಿಂದ ಒಡಮೂಡಿದ ಗೀತೆಯಾಗಿತ್ತು. ದೇವ್‌ ಆನಂದ್‌‌‌‌ ಪ್ರಧಾನ ತಾರಾಗಣದಲ್ಲಿದ್ದ ಗೈಡ್‌ (1965) ಚಿತ್ರವು ಪ್ರಾಯಶಃ ಆ ಕಾಲಾವಧಿಯಲ್ಲಿ ಹೊರಬಂದ ಅವರ ಕೃತಿಗಳ ಪೈಕಿ ಅತ್ಯುತ್ತಮವಾಗಿತ್ತು. ಈ ಚಲನಚಿತ್ರವಷ್ಟೇ ಅಲ್ಲದೇ ಅದರ ಎಲ್ಲಾ ಗೀತೆಗಳೂ ಪ್ರಚಂಡ ಜನಪ್ರಿಯ ಯಶಸ್ಸನ್ನು ದಾಖಲಿಸಿದವು; ಆದರೆ ದುರದೃಷ್ಟವಶಾತ್‌‌ ಆ ವರ್ಷಕ್ಕೆ ಸಂಬಂಧಿಸಿದಂತಿದ್ದ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಇದು ಫಿಲ್ಮ್‌ಫೇರ್‌‌ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಇದು ಬಾಲಿವುಡ್‌ ಚಲನಚಿತ್ರ ಪಂಡಿತರ ವಲಯದಲ್ಲಿ ಒಂದು ಚರ್ಚಾವಿಷಯವಾಗಿಯೇ ಉಳಿದುಕೊಂಡಿತು.

ಆರಾಧನಾ (1969) ಚಲನಚಿತ್ರದ ಸಂಗೀತ ಸಂಯೋಜನೆಯು ಬಾಲಿವುಡ್‌ ಇತಿಹಾಸದಲ್ಲಿನ ಒಂದು ಹೆಗ್ಗುರುತಾಗಿ ಪರಿಗಣಿಸಲ್ಪಟ್ಟಿದೆ. ಈ ಚಲನಚಿತ್ರದ ಸಂಗೀತವು ಗಾಯಕ ಕಿಶೋರ್‌‌ ಕುಮಾರ್‌‌, ಗೀತಸಾಹಿತಿ ಆನಂದ್‌‌‌‌ ಬಕ್ಷಿ, ಚಲನಚಿತ್ರೋದ್ಯಮಿ ಶಕ್ತಿಸಾಮಂತ ಮತ್ತು R.D. ಬರ್ಮನ್‌‌ (ಸಹ ಸಂಗೀತ ನಿರ್ದೇಶಕ) ಇವರಗಳ ವೃತ್ತಿಜೀವನಗಳಿಗೆ ಒಂದು ಸ್ಪಷ್ಟವಾದ ಆಕಾರವನ್ನು ನೀಡಿತು. "ಮೇರೆ ಸಪ್ನೋ ಕಿ ರಾನಿ" ಗೀತೆಗಾಗಿ R.D. ಬರ್ಮನ್‌ ಮೌತ್‌ ಆರ್ಗನ್‌[ಸೂಕ್ತ ಉಲ್ಲೇಖನ ಬೇಕು] ವಾದ್ಯವನ್ನು ನುಡಿಸುವಂತೆ ಮಾಡಿದ್ದೇ ಸಚಿನ್‌ ದೇವ್‌ ಬರ್ಮನ್‌.ಪ್ರೇಮ್‌ ಪೂಜಾರಿ (1969) ಚಿತ್ರದಲ್ಲಿ ದೇವ್‌ ಆನಂದ್‌‌‌‌ ಮತ್ತು S.D. ಬರ್ಮನ್‌‌ ತಮ್ಮ ಸಾಂಗೀತಕ ಸಹಯೋಗವನ್ನು ಮುಂದುವರಿಸಿದರು.

ಸ್ವಾಭಿಮಾನದ ಒಂದು ಬಲವಾದ ಪ್ರಜ್ಞೆಯನ್ನು ಹೊಂದಿದ್ದ S.D. ಬರ್ಮನ್‌‌, ಓರ್ವ ನೇರಸ್ವಭಾವದ ಮತ್ತು ಖಂಡಿತವಾದಿಯಾದ ವ್ಯಕ್ತಿಯಾಗಿದ್ದರು. ತಾವು ಯಾರನ್ನು ಇಷ್ಟಪಡಲಿಲ್ಲವೋ ಅಥವಾ ಯಾರ ಸಾಮರ್ಥ್ಯಗಳ ಮೇಲೆ ತಮಗೆ ಶಂಕೆಯಿತ್ತೋ (ಗಾಯಕ ಮುಕೇಶ್‌‌ ಥರದವರು) ಅಂಥವರನ್ನು ಅವರು ಮುಕ್ತವಾಗಿ ಟೀಕಿಸಿದರು. ಆದರೆ ಅವರೊಬ್ಬ ತಿಕ್ಕಲು ಸ್ವಭಾವದ ಅಸಾಧಾರಣ ಪ್ರತಿಭಾಶಾಲಿ ಎಂಬುದಾಗಿ ಉದ್ಯಮದಲ್ಲಿ ವ್ಯಾಪಕವಾಗಿ ಗೌರವಿಸಲ್ಪಟ್ಟರು.

1970ರ ದಶಕ[ಬದಲಾಯಿಸಿ]

ತೇರೆ ಮೇರೆ ಸಪ್ನೆ (1971), ಶರ್ಮಿಲೀ (1971), ಅಭಿಮಾನ್‌ (1973), ಪ್ರೇಮ್‌ ನಗರ್‌‌ (1974), ಸಗೀನಾ (1974), ಚುಪ್ಕೆ ಚುಪ್ಕೆ (1975), ಮತ್ತು ಮಿಲಿ (1975) ಮೊದಲಾದ ಚಿತ್ರಗಳು ಈ ಕಾಲಾವಧಿಯಲ್ಲಿ ಬಂದ ಅವರ ಇತರ ಶ್ರೇಷ್ಠ ಕೃತಿಗಳಾಗಿವೆ.

ಮಿಲಿ ಚಲನಚಿತ್ರಕ್ಕಾಗಿ ಬಡಿ ಸೂನಿ ಸೂನಿ ಎಂಬ ಗೀತೆಯನ್ನು (ಇದನ್ನು ಹಾಡಿದ್ದು ಕಿಶೋರ್‌‌ ಕುಮಾರ್‌‌) ಧ್ವನಿಮುದ್ರಿಸಿದ ನಂತರದ ಕೆಲಹೊತ್ತಿನಲ್ಲಿಯೇ S.D. ಬರ್ಮನ್‌‌ ಪ್ರಜ್ಞಾಹೀನರಾದರು. 1975ರ ಅಕ್ಟೋಬರ್‌‌ 31ರಂದು ಬಾಂಬೆಯಲ್ಲಿ (ಈಗ ಮುಂಬಯಿ ಆಗಿದೆ) ಅವರು ಮರಣ ಹೊಂದಿದರು.

2007ರ ಅಕ್ಟೋಬರ್‌ 1ರಂದು ಅವರ 101ನೇ ಜನ್ಮ ವಾರ್ಷಿಕೋತ್ಸವದ ಗುರುತಿಗಾಗಿ ಭಾರತ ಅಂಚೆ ಇಲಾಖೆಯು ಅಗರ್ತಲಾದಲ್ಲಿ ಒಂದು ಸ್ಮರಣಾರ್ಥವಾದ ಅಂಚೆಚೀಟಿಯನ್ನು ಬಿಡುಗಡೆಮಾಡಿತು. ಈ ಸಂದರ್ಭದಲ್ಲಿ ಅವರ ಜೀವನ ಮತ್ತು ಕೃತಿಗಳ ಕುರಿತಾದ ಸಾರ್ವಜನಿಕ ಪ್ರದರ್ಶನವೊಂದನ್ನೂ ಅಲ್ಲಿ ಉದ್ಘಾಟಿಸಲಾಯಿತು; ತ್ರಿಪುರಾ ರಾಜ್ಯ ಸರ್ಕಾರವೂ ಸಹ ಸಂಗೀತ [೧೬][೧೭] ಕ್ಷೇತ್ರದಲ್ಲಿ 'ಸಚಿನ್‌ ದೇವ್‌ ಬರ್ಮನ್‌‌ ಸ್ಮಾರಕ ಪ್ರಶಸ್ತಿ'ಯನ್ನು ವರ್ಷಕ್ಕೊಮ್ಮೆ ಪ್ರದಾನ ಮಾಡುತ್ತದೆ.

ಸಾಂಸ್ಕೃತಿಕ ಉಲ್ಲೇಖಗಳು[ಬದಲಾಯಿಸಿ]

ದಕ್ಷಿಣ ಏಷ್ಯಾದ ಪರಂಪರೆಯ ಬ್ರಿಟಿಷ್‌ ಗಾಯಕಿಯಾದ ನಜ್ಮಾ ಅಖ್ತರ್‌ ಎಂಬಾಕೆಯು ಶನಾಚೀ ರೆಕಾರ್ಡ್ಸ್‌ ವತಿಯಿಂದ ಬಿಡುಗಡೆಯಾಗಿರುವ ಫರ್ಬಿಡನ್‌ ಕಿಸ್‌: ದಿ ಮ್ಯೂಸಿಕ್‌ ಆಫ್‌ S.D. ಬರ್ಮನ್‌‌ ಎಂಬ ಶೀರ್ಷಿಕೆಯ ಬರ್ಮನ್‌‌ ಕೃತಿಯ CDಯನ್ನು ಧ್ವನಿಮುದ್ರಿಸಿಕೊಟ್ಟಿದ್ದು, ಇದು ಬರ್ಮನ್‌ರ ಸಂಗೀತ‌ ಸಂಯೋಜನೆಗಳನ್ನು ಒಳಗೊಂಡಿರುವ ಒಂದು ಗೀತಸಂಪುಟವಾಗಿದೆ.

ಭಾರತೀಯ ಕ್ರಿಕೆಟ್‌ ಆಟಗಾರರಾದ ಸಚಿನ್‌ ತೆಂಡೂಲ್ಕರ್‌‌‌‌ರವರ ತಾತ ಸಂಗೀತ ಸಂಯೋಜಕ S.D. ಬರ್ಮನ್‌ರವರ ಓರ್ವ ಉತ್ಕಟ ಅಭಿಮಾನಿಯಾಗಿದ್ದರು. ಹೀಗಾಗಿ ತೆಂಡೂಲ್ಕರ್‌ ಹೆಸರಿನೊಂದಿಗೆ 'ಸಚಿನ್‌' ಕೂಡಾ ಸೇರಿಕೊಳ್ಳಲು ಅವರು ಕಾರಣರಾಗಿದ್ದಾರೆ.

S.D. ಬರ್ಮನ್‌ರ ವಿಶಿಷ್ಟತೆಯಾದ ಮೂಗಿನಿಂದ ಉಚ್ಚರಿಸುವ ತಾರಕ-ಸ್ಥಾಯಿಯ ಧ್ವನಿ ಮತ್ತು ಗೀಳಿನ ಹಾಡುವ ಶೈಲಿಯನ್ನು ಗಾಯಕ ಹಾಗೂ ಅನುಕರಣ ಕಲಾವಿದರಾದ ಸುದೇಶ್‌‌ ಭೋಂಸ್ಲೆ ಆಗಿಂದಾಗ್ಗೆ ಹಾಸ್ಯದ ಲೇಪದೊಂದಿಗೆ ಅನುಕರಿಸುತ್ತಾರೆ.

ಶ್ರೇಷ್ಠ ತಬಲಾ ವಾದಕರಾಗಿದ್ದ ದಿವಂಗತ ಬ್ರಜೇನ್‌ ಬಿಸ್ವಾಸ್‌ರವರ ಬಂಗಾಳಿ ಗೀತೆಗಳಿಗಾಗಿ S.D.ಬರ್ಮನ್‌‌ ಅವರ ಜೊತೆ ಕೈಜೋಡಿಸಿದರು.ಈ ಗೀತೆಗಳಿಗಾಗಿ ಬ್ರಜೇನ್‌ ಬಾಬುರವರು ಸೃಷ್ಟಿಸಿರುವ ಲಯಗಳು ಅಥವಾ 'ಠೇಕಾಗಳು' ಅನನ್ಯವಾಗಿವೆ ಮತ್ತು ಮೂಲ 'ಠೇಕಾಗಳಲ್ಲಿ' ಇರುವ ಈ ಗೀತೆಗಳನ್ನು ಪ್ರಪಂಚದಲ್ಲಿ ಬೇರಾರೂ ಹಾಡಲಾರರು.ಎಲ್ಲಾ ಠೇಕಾಗಳೂ ಗೀತೆಗಳ ಭಾವಸ್ಥಿತಿಗೆ ಅನುಸಾರವಾಗಿವೆ.ಆದರೆ ಇತ್ತೀಚೆಗಷ್ಟೇ, ಚಿತ್ರ ಕಲಾವಿದೆ, ಶಿಲ್ಪಿ ಮತ್ತು ಗಾಯಕಿ ರಮಿತಾ ಭಾದುರಿಯವರು 'ಅಮಿ ಛೀನು ಅಕಾ','ರಂಗೀಲಾ','ಆಂಖಿ ದೂತಿ ಝಾರೆ' ಇತ್ಯಾದಿಗಳಂಥ ಕಷ್ಟಕರವೆನಿಸಿದ ಬರ್ಮನ್‌ರ ಗೀತೆಗಳನ್ನು ದಿವಂಗತ ಬ್ರಜೇನ್‌ ಬಿಸ್ವಾಸ್‌ರವರ ತಾಲೀಮಿನ ಮೇಲಿರುವ ಮೂಲ ಠೇಕಾದಲ್ಲಿ ಹಾಡಿದ್ದಾರೆ.ಸದರಿ CDಯನ್ನು ಕೋಲ್ಕತಾದ ಹಿಂದಿನ ಮಹಾಪೌರರಾದ ಶ್ರೀಮಾನ್‌ ಬಿಕಾಶ್‌ ರಂಜನ್‌ ಭಟ್ಟಾಚಾರ್ಯರವರು ಕೋಲ್ಕತಾ ಪ್ರೆಸ್‌ ಕ್ಲಬ್‌ನಲ್ಲಿ 2010ರ ಏಪ್ರಿಲ್‌ 10ರಂದು ಬಿಡುಗಡೆಮಾಡಿದರು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

 • ರಾಜ್‌ಗೀ (1937)
 • ಜಾಖೆರ್‌ ಧನ್ (1939)
 • ಜೆವಾನ್‌ ಸಂಗಿನಿ (1940)
 • ಪ್ರತಿಶೋಧ್‌‌ (1941)
 • ಅಭೋಯೆರ್‌ ಬಿಯೆ (1942)
 • ಚದ್ದೋಬೆಶಿ (1944)
 • ಶಿಕಾರಿ (1945)
 • ಆಠ್‌ ದಿನ್‌ (1946)
 • ಶಬ್ನಮ್‌ (1949)
 • ಬಾಝಿ (1951)
 • ಜಾಲ್‌ (1952)
 • ಬಾಝ್ (1953)
 • ಟ್ಯಾಕ್ಸಿ ಡ್ರೈವರ್‌‌ (1954)
 • ಮುನಿಮ್‌ಜಿ (1954)
 • ದೇವ್‌ದಾಸ್‌‌ (1955)
 • ಪ್ಯಾಸಾ (1957)
 • ನೌ ದೋ ಗ್ಯಾರಾ (1957)
 • ಚಲ್ತಿ ಕಾ ನಾಮ್‌ ಗಾಡಿ (1958)
 • ಸೋಲ್ವಾ ಸಾಲ್‌ (1958)
 • ಕಾಗಜ್‌ ಕೆ ಫೂಲ್‌ (1959)
 • ಸುಜಾತಾ (1959)
 • ಕಾಲಾ ಬಝಾರ್ (1960)
 • ಬಂಬಯಿ ಕಾ ಬಾಬು (1960)
 • ಬಾತ್‌ ಏಕ್‌ ರಾತ್‌ ಕೀ (1962)
 • ತೇರೆ ಘರ್‌ ಕೆ ಸಾಮ್‌ನೆ (1963)
 • ಬಂದಿನಿ (1963)
 • ಝಿದ್ದಿ (1964)
 • ಗೈಡ್‌ (1965)
 • ಜ್ಯುವೆಲ್‌ ಥೀಫ್‌ (1967)
 • ಪ್ರೇಮ್‌ ಪೂಜಾರಿ (1969)
 • ಆರಾಧನಾ (1969)
 • ಇಷ್ಕ್‌ ಪರ್‌‌ ಝೋರ್‌ ನಹೀ (1970)
 • ಶರ್ಮಿಲೀ (1971)
 • ನಯಾ ಝಮಾನಾ (1971)
 • ತೇರೆ ಮೇರೆ ಸಪ್ನೆ (1971)
 • ಅನುರಾಗ್‌ (1972)
 • ಫಗುನ್ (1973)
 • ಜುಗ್ನು (1973)
 • ಛುಪಾ ರುಸ್ತಂ (1973)
 • ಅಭಿಮಾನ್‌ (1973)
 • ಫಗುನ್‌ (1973)
 • ಪ್ರೇಮ್‌ ನಗರ್‌‌ (1974)
 • ಸಗೀನಾ (1974)
 • ಚುಪ್ಕೆ ಚುಪ್ಕೆ (1975)
 • ಮಿಲಿ (1975)

ಪ್ರಶಸ್ತಿಗಳು ಮತ್ತು ಮಾನ್ಯತೆಗಳು[ಬದಲಾಯಿಸಿ]

 • 1934: ಕೋಲ್ಕತಾದಲ್ಲಿ 1934ರಲ್ಲಿ ನಡೆದ ಬಂಗಾಳ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ನೀಡಲಾದ ಬಂಗಾರದ ಪದಕ
 • 1958: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
 • 1958: ಏಷ್ಯಾ ಫಿಲ್ಮ್‌ ಸೊಸೈಟಿ ಪ್ರಶಸ್ತಿ
 • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
  • 1970: ಅತ್ಯುತ್ತಮ ಹಿನ್ನೆಲೆ ಗಾಯಕನಿಗಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಚಿತ್ರ: ಆರಾಧನಾ, ಗೀತೆ: ಸಫಲ್‌ ಹೋಗಿ ತೇರಿ ಆರಾಧನಾ
  • 1974: ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಚಿತ್ರ: ಜಿಂದಗಿ ಜಿಂದಗಿ
 • 1969: ಪದ್ಮಶ್ರೀ
 • ಜಾನಪದ ಸಂಗೀತದ ಕುರಿತಾದ ಅಂತರರಾಷ್ಟ್ರೀಯ ಜ್ಯೂರಿಯ ಗೌರವ
 • ಫಿಲ್ಮ್‌ಫೇರ್ ಪ್ರಶಸ್ತಿಗಳು
  • 1954: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ; ಚಿತ್ರ: ಟ್ಯಾಕ್ಸಿ ಡ್ರೈವರ್‌‌
  • 1973: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ; ಚಿತ್ರ: ಅಭಿಮಾನ್‌
  • 1959: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ನಾಮನಿರ್ದೇಶನ; ಚಿತ್ರ: ಸುಜಾತಾ
  • 1965: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ನಾಮನಿರ್ದೇಶನ; ಚಿತ್ರ: ಗೈಡ್‌
  • 1969: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ನಾಮನಿರ್ದೇಶನ; ಚಿತ್ರ: ಆರಾಧನಾ
  • 1970: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ನಾಮನಿರ್ದೇಶನ; ಚಿತ್ರ: ತಲಾಶ್‌‌
  • 1974: ಫಿಲ್ಮ್‌ಫೇರ್‌‌ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ನಾಮನಿರ್ದೇಶನ; ಚಿತ್ರ: ಪ್ರೇಮ್‌ ನಗರ್‌‌
 • BFJA ಪ್ರಶಸ್ತಿಗಳು
  • 1965: ಅತ್ಯುತ್ತಮ ಸಂಗೀತ (ಹಿಂದಿ ವಿಭಾಗ); ಚಿತ್ರ: ತೀನ್‌ ದೇವಿಯಾ
  • 1966: ಅತ್ಯುತ್ತಮ ಸಂಗೀತ (ಹಿಂದಿ ವಿಭಾಗ); ಚಿತ್ರ: ಗೈಡ್‌
  • 1966: ಅತ್ಯುತ್ತಮ ಹಿನ್ನೆಲೆ ಗಾಯಕ (ಹಿಂದಿ ವಿಭಾಗ); ಚಿತ್ರ: ಗೈಡ್‌
  • 1969: ಅತ್ಯುತ್ತಮ ಸಂಗೀತ (ಹಿಂದಿ ವಿಭಾಗ); ಚಿತ್ರ: ಆರಾಧನಾ
  • 1973: ಅತ್ಯುತ್ತಮ ಸಂಗೀತ (ಹಿಂದಿ ವಿಭಾಗ); ಚಿತ್ರ: ಅಭಿಮಾನ್‌

ಟಿಪ್ಪಣಿಗಳು[ಬದಲಾಯಿಸಿ]

 1. ಕ್ವೀನ್ಸ್‌ಲೆಂಡ್‌ ವಿಶ್ವವಿದ್ಯಾಲಯದಲ್ಲಿರುವ ತ್ರಿಪುರ ವಂಶಾವಳೀ ಕಥನ
 2. ೨.೦ ೨.೧ SD ಬರ್ಮನ್‌‌ "filmreference.com".
 3. ಸೌಲ್‌ ಕಂಪೋಸರ್‌‌... ಟೈಮ್ಸ್ ಆಫ್‌ ಇಂಡಿಯಾ , 1 ಅಕ್ಟೋಬರ್‌‌ 2006.
 4. ೪.೦ ೪.೧ ೪.೨ ೪.೩ "ಸಚಿನ್‌ ಕರ್ತಾ". Archived from the original on 2011-07-21. Retrieved 2011-01-07.
 5. S.D. ಬರ್ಮನ್‌‌’ಸ್‌ ವೈಫ್‌ ಡೆಡ್‌ Archived 2007-10-17 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ , 17 ಅಕ್ಟೋಬರ್‌‌ 2007.
 6. S.D. ಬರ್ಮನ್‌‌'ಸ್‌ ವೈಫ್‌ ಮೀರಾ ಡೆಡ್‌ Archived 2009-08-15 ವೇಬ್ಯಾಕ್ ಮೆಷಿನ್ ನಲ್ಲಿ. ‘ಮ್ಯೂಸಿಕ್‌ ಇಂಡಿಯಾ ಆನ್‌ಲೈನ್‌’.
 7. ಹೌ ತ್ರಿಪುರಾ ಲಾಸ್ಟ್‌ ಆನ್‌ ಐಕಾನ್‌ Archived 2011-05-26 ವೇಬ್ಯಾಕ್ ಮೆಷಿನ್ ನಲ್ಲಿ. ಟೆಲಿಗ್ರಾಫ್‌ , 24 ಫೆಬ್ರುವರಿ 2005.
 8. ಪನ್ನಾಲಾಲ್‌ ರಾಯ್‌ ಬರೆದಿರುವ ಸಚಿನ್‌ ಕರ್ತಾ Archived 2010-11-18 ವೇಬ್ಯಾಕ್ ಮೆಷಿನ್ ನಲ್ಲಿ. tripurainfo.com .
 9. ಬೋಂಧು ರಂಗೀಲಾ ರೆ -- ಎ ಟ್ರಿಬ್ಯೂಟ್‌ ಟು S.D. ಬರ್ಮನ್‌‌ ದೀಮ್ಯೂಸಿಕ್‌ ಮ್ಯಾಗಜೀನ್‌ , 31 ಅಕ್ಟೋಬರ್‌‌ 2002.
 10. ದಿ ಮಿನಿಮಿಲಿಸ್ಟಿಕ್‌ ಮೆಲಡಿ ಆಫ್‌ ಸಚಿನ್‌ ದೇವ್‌ ಬರ್ಮನ್‌‌ - ಬಯಾಗ್ರಫಿ Rediff.com .
 11. SD ಬರ್ಮನ್‌‌ www.downmelodylane.com .
 12. SD ಬರ್ಮನ್‌‌ Upperstall.com .
 13. Olivier Assayas (September 2004). "The Best Music in Film". Sight & Sound. Archived from the original on 2009-05-05. Retrieved 2009-04-26. {{cite web}}: Italic or bold markup not allowed in: |publisher= (help)
 14. ಸಂಗೀತ ನಿರ್ದೇಶನ Archived 2007-08-16 ವೇಬ್ಯಾಕ್ ಮೆಷಿನ್ ನಲ್ಲಿ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಅಧಿಕೃತ ಪಟ್ಟೀಕರಣ.
 15. ಅಗರ್ತಲಾ ಪ್ಯಾಲೇಸ್‌ ಈಸ್‌ ಲಿಟ್‌ - ಸೆಂಟಿನರಿ ಸೆಲೆಬ್ರೇಷನ್ಸ್‌ Archived 2008-06-22 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ , 28 ಜುಲೈ 2006.
 16. 2007 ಅಂಚೆಚೀಟಿಗಳು‌ Archived 2011-04-12 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತೀಯ ಅಂಚೆ ಸೇವೆ ಅಧಿಕೃತ ವೆಬ್‌ಸೈಟ್‌ .
 17. ಪೋಸ್ಟೇಜ್ ಸ್ಟಾಂಪ್‌ ಬ್ರಾಟ್ ಆನ್‌ ಸಚಿನ್‌ ಕರ್ತಾ'ಸ್‌ ಬರ್ತ್‌ ಆನಿವರ್ಸರಿ ಔಟ್‌ಲುಕ್‌ , 1 ಅಕ್ಟೋಬರ್‌‌ 2008.

[೧]

ಉಲ್ಲೇಖಗಳು[ಬದಲಾಯಿಸಿ]

 • ಪನ್ನಾಲಾಲ್‌ ರಾಯ್‌ ಬರೆದಿರುವ "ಸಚಿನ್‌ ಕರ್ತಾ" ಪರುಲ್‌ ಪ್ರಕಾಶನಿ, ಅಗರ್ತಲಾ. 2005.
 • ದಿನೇಶ್‌‌ ರಹೇಜಾ, ಜಿತೇಂದ್ರ ಕೊಥಾರಿ ಬರೆದಿರುವ ದಿ ಹಂಡ್ರೆಡ್‌ ಲ್ಯೂಮಿನರೀಸ್‌ ಆಫ್‌ ಹಿಂದಿ ಸಿನೆಮಾ ಇಂಡಿಯಾ ಬುಕ್‌ ಹೌಸ್‌ ಪಬ್ಲಿಷರ್ಸ್‌, 1996. ISBN 81-7508-007-8, ಪುಟ 1919 .

ಬಾಹ್ಯ ಕೊಂಡಿಗಳು[ಬದಲಾಯಿಸಿ]