ವಿಷಯಕ್ಕೆ ಹೋಗು

ಸಂತಾಲರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತಾಲರು
ಸಂತಾಲಿ ಕುಣಿತ
ಭಾಷೆಗಳು
ಸಂತಾಲಿ
ಧರ್ಮ
ಸರ್ಣ  • ಸರಿ ದೋರ್ಮ್
ಸಂಬಂಧಿತ ಜನಾಂಗೀಯ ಗುಂಪುಗಳು
ಮುಂಡಸ್  • ಹೊಸ್  • ಕೊಲ್ಸ್

ನಮ್ಮ ಭರತ ಖಂಡದ ಬುಡಕಟ್ಟು ಜನಾಂಗಗಳಲ್ಲಿ ಸಂತಾಲರು ಅತೀ ಪುರಾತನ ಬುಡಕಟ್ಟು ಜನರು. ಜನ ಸಂಖ್ಯೆಯಲ್ಲಿ ಗೊಂಡ, ಬಲ್ಲರ ನಂತರ ಮೂರನೆಯ ಜಾಗದಲ್ಲಿದ್ದಾರೆ. ಸಂತಾಲರು "ಪ್ರೋಟೋ-ಆಸ್ಟ್ರಾಲಾಯ್ದ್"[೧] ಗುಂಪಿಗೆ ಸೇರಿದವರು. ಇವರು ಮಾತಾಡುವ ಭಾಷೆ, ಇವರುಗಳು ತಮ್ಮ ದ್ಯೆಯದ ಒಂದು ಲಿಪಿಯನ್ನೂ ಕೂಡ ಹೊಂದಿದ್ದಾರೆ . ಆ ಲಿಪಿಯನ್ನು ಒಲ್ಚುಕಿ (Olchuki) ಎಂದು ಹೆಸರು.

ಹಂಚಿಕೆ

[ಬದಲಾಯಿಸಿ]

ಈ ಸಂತಾಲರು ಜಾರ್ಖಂಡ್ನಲ್ಲಿ ೨೪,೧೦,೫೦೯[೨], ಪಶ್ಚಿಮ ಬಂಗಾಲದಲ್ಲಿ ೨೨,೮೦,೦೫೪೦ [೩], ಬಿಹಾರ ರಾಜ್ಯದಲ್ಲಿ ೩,೬೭,೬೧೨[೪] ಒಡಿಶಾ ೬,೨೯,೭೮೨, ಒಡಿಶಾ ರಾಜ್ಯದ ಒಟ್ಟು ಪರಿಶಿಷ್ಟ ಪಂಗಡಗಳ ಪೈಕಿ ಸಂತಾಲ, ಕೊಲ್ಹ, ಮುಂಡ, ಶಬರ್, ಭೋಟಡ, ಕೊಂಡ ಮತ್ತು ಗೊಂಡ್ ಜನಾಂಗಗಳು ಸುಮಾರು ೬೪.೨ ರಷ್ಟು ಜನಸಂಖ್ಯೆಯನ್ನು ಹೊಂದಿದಾರೆ [೫], ಮತ್ತು ತ್ರಿಪುರಾ ರಾಜ್ಯದಲ್ಲಿ ೨,೨೦೦ [೬] ಜನಸಂಖ್ಯೆಯನ್ನು ಹೊಂದಿದ್ದು. ಭಾರತದ ಈಶಾನ್ಯ ಭಾಗದ ಅಸ್ಸಾಂ, ಮೇಘಾಲಯ, ಬಾಂಗ್ಲದೇಶ ಮತ್ತು ನೇಪಾಳಗಳಲ್ಲಿ ೨೦೦೨ ಪ್ರಕಾರ ಸುಮಾರು ೮,೯೦,೦೦೦ ಜನಸಂಖ್ಯೆಯನ್ನು ಸಂತಾಲರು ಒಳಗೊಂಡಿದಾರೆ[೭]. ಜಾರ್ಖಂಡಿನ ಸಂತಾಲ ಪರಗಣ ಮತ್ತು ಚೊಟಾನಾಗಪುರ ಪ್ರಸ್ಥ ಭೂಮಿಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿರುವರು.

ದೈಹಿಕ ಲಕ್ಷಣಗಳು

[ಬದಲಾಯಿಸಿ]

ಸಂತಾಲರು ಎತ್ತರದಲ್ಲಿ ಕುಬ್ಜವಾಗಿದ್ದು ಕಪ್ಪು ಮೈಬಣ್ಣವನ್ನು ಹೊಂದಿದ್ದಾರೆ. ಗುಂಡನೆಯ ತಲೆ, ದಪ್ಪ ತುಟಿಗಳು, ಅಗಲವಾದ ಚಪ್ಪಟೆಯ ಗಿಡ್ಡವಾದ ಮೂಗನ್ನು ಹೊಂದಿದ್ದು ಗುಂಗುರಾದ ಒರಟಾದ ತಲೆಗೂದಲು ಮತ್ತು ಹೊರಚಾಚಿಂತೆ ಇರುವ ದವಡೆಗಳು. ಇದು ಸಂತಾಲರ ಪ್ರಮುಖ ದೈಹಿಕ ಲಕ್ಷಣಗಳು.

ವಸತಿಗಳು

[ಬದಲಾಯಿಸಿ]

ಸಂತಾಲರ ವಸತಿಗಳು ಸಾಮಾನ್ಯವಾಗಿ ಗುಡಿಸಲುಗಳನ್ನು ಹೊಂದಿದ್ದು . ಹೆಚ್ಚಾಗಿ ಪುರಾತನ ಮಾದರಿಯಲ್ಲಿ ಕಟ್ಟಿಕೊಂಡಿರುತ್ತಾರೆ, ವಸತಿಗಳ ಗೋಡೆಗಳು ಮಣ್ಣಿನಿಂದ ಕೂಡಿದ್ದು ಮೇಲ್ ಛಾವಣಿ ಗೆ ಬಿದಿರುಗಳನ್ನು ಕಟ್ಟಿ ಹುಲ್ಲುಹೊದಿಕೆ ಮಾಡಿರುತ್ತಾರೆ. ಸಂತಾಲರು ಗುಡಿಸಲುಗಳನ್ನು ಪರಸ್ಪರ ಒತ್ತೊತ್ತಾಗಿ ವೃತ್ತಾಕಾರವಾಗಿ ಕಟ್ಟಿಕೊಂಡಿರುತ್ತಾರೆ. ಗುಡಿಸಲಿನ ಸುತ್ತಲಿನ ಅಂಗಳ ವಿಶಾಲವಾಗಿರಿಸಿಕೊಂಡಿರುತ್ತಾರೆ. ಗೋಡೆ/ಬೇಲಿಯಿಂದ ಕಟ್ಟಿರುವ ವಿಶಾಲವಾದ ಜಾಗವಿರುತ್ತದೆ. ಗುಡಸಿಲಿನ ಗೋಡೆಯಲ್ಲಿ ತೂತು ಅಥವಾ ಬಿರುಕುಗಳುಂಟಾದಾಗ ಮಣ್ಣು, ದನಗಳ ಸಗಣಿಯನ್ನು ಬೆರೆಸಿ ಗೋಡೆಗಳಿಗೆ ಸಾರಿಸಲಾಗುತ್ತದೆ. ಸಾಮಾನ್ಯವಾಗಿ ಗುಡಿಸಲಿನ ಮುಂದೆ ಕಟ್ಟೆ ಇದ್ದು ಬಿಡುವಿನ ವೇಳೆಯಲ್ಲಿ ಅದರ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಾರೆ. ಸಂತಾಲರು ತಮ್ಮ ಊರುಕೇರಿಯನ್ನು ಸ್ವಚ್ಚವಾಗಿರಿಸಿಕೊಳ್ಳುತ್ತಾರೆ. ಸಂತಾಲರು ಯುವಕರ ಶೌರ್ಯದ ಸಂಕೇತವಾಗಿ ಅವರ ಗುಡಿಸಲುಗಳ ಮುಂದೆ ಕೊಳಲು, ಡೋಲು ವಾದ್ಯಾಗಳನ್ನು ನುಡಿಸುವರು. ಒಳ ಅಂಗಳದ ಮೇಲಿನ ಛಾವಣಿಗೆ ಹಾಕಿರುವ ಬಿದಿರುಗಳಿಗೆ ಬಿಲ್ಲು-ಬಾಣಗಳನ್ನು ತೂಗು ಹಾಕಿರುತಾರೆ ಮತ್ತು ಸಂತಾಲರು ತಮ್ಮ ಗುಡಿಸಲುಗಳ ಹಿಂಬದಿಯಲ್ಲಿ ದನ, ಕೋಳಿ, ಮೇಕೆ, ಹಂದಿಗಳ ಸಾಕಣಿಕೆಗಳ ಕೊಟ್ಟಿಗೆಗಳನ್ನು ಗುಡಿಸಲುಗಳಿಗೆ ಹೊಂದಿಕೊಂಡಂತೆ ಪ್ರತ್ಯೆಕವಾಗಿ ಕಟ್ಟಿರುತ್ತಾರೆ. ಹಾಗೂ ತಮ್ಮ ಮನೆಯನ್ನು ಕಾಯಲೂ ಗುಡಿಸಲಿನ ಒಂದು ಮೂಲೆಯಲ್ಲಿ ನಾಯಿಗಾಗಿ ಸಣ್ಣ ಗುಡಿಸಲೊಂದನ್ನು ಕಟ್ಟಿರುತ್ತಾರೆ . ಹಬ್ಬದ ದಿನಗಳಲ್ಲಿ ಪೂಜೆ-ಪ್ರಾರ್ಥನೆ ಸಲ್ಲಿಸಲು ಹಳ್ಳಿಯ ಮಧ್ಯದಲ್ಲಿ "ಮಜಿತಾನ್" ಎಂಬ ಪ್ರಾರ್ಥನಾ ಮಂದಿರವನ್ನು ನಿರ್ಮಿಸುತ್ತಾರೆ.

ಸಂತಾಲರು ಹೆಚ್ಚಾಗಿ ಸಸ್ಯಹಾರಿಗಳು, ಆದರೂ ಕೂಡ ಮೀನು, ಮಾಂಸಗಳನ್ನು ತಿನ್ನುತ್ತಾರೆ. ಜೋಳ ಹಲಾವಾರು ಧಾನ್ಯಗಳನ್ನು ಬಳಸುತ್ತಾರೆ. ಗೆಡ್ಡೆಗೆಣಸು, ಹಣ್ಣುಗಳನ್ನು ಹೆಚ್ಚಾಗಿ ತಿನ್ನುವರು. ಈಗ ಚಹಾದ ಬಳಕೆಯೂ ಕೂಡ ಹೆಚ್ಚು ರೂಢಿಯಲ್ಲಿ ಬಂದಿದೆ.

ಆರ್ಥಿಕ ಜೀವನ

[ಬದಲಾಯಿಸಿ]

ಸಂತಾಲರು ಹೆಚ್ಚಾಗಿ ವ್ಯವಸಾಯ, ಬೇಟೆಗಾರಿಕೆ, ಮೀನುಗಾರಿಕೆ ಮತ್ತು ಸಂಗ್ರಹಣೆಗಳು ಪ್ರಮುಖವಾದ ಕಸುಬುಗಳಾಗಿವೆ. ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಛತ್ತೀಸ್‌ಘಡ್ರಾಜ್ಯಗಳ ಚೊಟನಾಗಪುರ ಪ್ರಸ್ಥಭೂಮಿ ಪ್ರದೇಶದಲ್ಲಿರುವ ಸಂತಾಲರು ಬೇರೆ ಪ್ರದೇಶಗಳಲ್ಲಿ ವಾಸಿಸುವರಿಗಿಂತ ಮುಂದು ವರೆದಿದ್ದಾರೆ. ಕೃಷಿಯನ್ನು ಪ್ರಮುಖ ಕೆಲಸವಾಗಿ ಮೆಚ್ಚಿಕೊಂಡಿದ್ದಾರೆ.

ಸಂತಾಲ ವ್ಯಕ್ತಿ ನುಡಿಸುತ್ತಿರುವ ಒಂದು ರೀತಿಯ ವಾಧ್ಯ

ಜೋಳ, ಸಜ್ಜೆಯಂತಹ ಹಲಾವಾರು ಧಾನ್ಯಗಳನ್ನು ಬೆಳೆಯುವರು[೮]. ಈ ಪ್ರದೇಶದಲ್ಲಿ ಬೇಸಾಯದಲ್ಲಿ ನೀರಾವರಿಯ ಸೌಲಭ್ಯ, ಗೊಬ್ಬರದ ಬಳಕೆಯ ಬಗ್ಗೆ , ನಾಟಿ ಹಾಕುವ ವಿಧಾನ ಮತ್ತು ಪರ್ಯಾಯ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಂಡಿದ್ದಾರೆ. ಇನ್ನೂ ಕೆಲ ಸ೦ತಾಲರು ಕಾರ್ಮಿಕರಾಗಿದ್ದು, ಅಲ್ಲಿನ ಚಹ, ಹತ್ತಿ ಮತ್ತು ಸೆಣಬಿನ ತೋಟ ಗೀರಣಿಗಳಲ್ಲಿ ಕೆಲಸ ಮಾಡುವರು . ಕೆಲ ಸ೦ತಾಲರು ಚೊಟನಾಗಪುರ ಪ್ರಸ್ಥಭೂಮಿ ಪ್ರದೇಶದ ಅಸನ್ಸೋಲ್ ನಗರದ ಪ್ರದೇಶದ ಕಲ್ಲಿದ್ದಿಲುಗಣಿಗಾರಿಕೆಯಲ್ಲಿಯೂ ಕೂಡ ಕೆಲಸ ಮಾಡುವರು[೯] ಇನ್ನೂ ಕೆಲವು ಪ್ರದೇಶ ಗಳಲ್ಲಿ ಇಂದಿಗೂ ಬೇಟೆಗಾರಿಕೆ ಮತ್ತು ಸಂಗ್ರಹಣೆಯ ಕೆಲಸಗಳಲ್ಲಿ ಮುಂದುವರಿದಿದ್ದಾರೆ.

ಸಾಮಾಜಿಕ ಜೀವನ

[ಬದಲಾಯಿಸಿ]

ಸಂತಾಲರದ್ದೆ ಆದ ಆಡಳಿತ ವ್ಯ ವಸ್ಥೆ ಇದ್ದು. ಪ್ರತಿಯೊಂದು ಹಳ್ಳಿಯಲ್ಲಿ ಒಬ್ಬ ಯಜಮಾನನಿದ್ದು ಅವನನ್ನು "ಜೋಗ್ ಮಂಜ್ ಹಿ" (Jog manj hi) ಎಂದು ಕರೆಯುತ್ತಾರೆ. ಹಳ್ಳಿಯ ಎಲ್ಲಾ ದಾರ್ಮಿಕ, ಸಾಮಾಜಿಕ, ಅಥವಾ ಯಾವುದೇ ವಿವಾದಗಳು ಬಂದಲ್ಲಿ ಹಳ್ಳಿಯ ಯಜಮಾನ ಹಳ್ಳಿಯ ಸದಸ್ಯರೊಡನೆ ಚರ್ಚಿಸಿ ತಿರ್ಮಾನ ಕೈಗೊಳ್ಳುವನು ಹಳ್ಳಿಯ ಯಜಮಾನನ ಸಹಯಕನನ್ನು "ಪರ್ ಮಾನಿಕ" ಎಂತಲ್ಲೂ, ಹಳ್ಳಿಯ ಪೂಜಾರಿಯನ್ನು "ನಾಯಕ್" (Naik) ಎಂತಲ್ಲೂ ಕರೆಯುವರು.

ಪ್ರಕೃತಿಯ ಆರಾಧಕರು

[ಬದಲಾಯಿಸಿ]

ಸಂತಾಲರು ಪ್ರಕೃತಿಯ ಆರಾಧಕರು, ಮರ, ಗಿಡ, ಪ್ರಾಣಿ, ಪಕ್ಷಿ, ಸೂರ್ಯ, ಪರ್ವತ, ಬೆಟ್ಟ-ಗುಡ್ಡಗಳನ್ನು ಪೂಜಿಸುತ್ತಾರೆ. ಆದಲ್ಲದೆ ತಂದೆ, ಅಜ್ಜ, ಮುತ್ತಜ್ಜರಾದ ಪೂರ್ವಿಕರನ್ನು ಪೂಜಿಸುತ್ತಾರೆ. ಸೂರ್ಯ[೧೦] ಇವರ ಆರಾಧ್ಯ ದೈವವಾಗಿದ್ದು ಇದನ್ನು " ಸಿಂಗ್ ಬೊಂಗ" ಎಂದು ಕರೆಯುವರು. ಮತ್ತು ಹಿರಿಯರ ಆತ್ಮ ತೃಪ್ತಿಗಾಗಿ ಹುಲ್ಲು, ಕಪ್ಪೆ, ಹುಳುಗಳ ನೈವೇಧ್ಯ ಮಾಡುವ ಸಂಪ್ರದಾಯವಿದೆ . ಸಂತಾಲರೆಲ್ಲ ಪ್ರತಿ ಮನೆಯ ಯಜಮಾನನ್ನು ಕುಟುಂಬದ ದೇವತೆಯ ಹೆಸರನ್ನು ಗುಪ್ತಮಾಡಿಟ್ಟುಕೊಂಡು ಅದನ್ನು ತನ್ನ ಕುಟುಂಬದ ಹಿರಿಯ ಮಗನಿಗೆ ಮಾತ್ರ ಗುಪ್ತವಾಗಿ ತಿಳಿಸುವನ್ನು ಇತಂಹ ರಹಸ್ಯವನ್ನು ತಮ್ಮ ಪತ್ನಿಯರಿಗೂ ಕೂಡ ತಿಳಿಸುವುದಿಲ್ಲ.

ವಿವಾಹ

[ಬದಲಾಯಿಸಿ]

ಸಂತಾಲರು ವಿವಾಹವನ್ನು "ಬಾಪ್ಲಾ" ಎಂದು ಕರೆಯುವರು. ಅವರದೇ ಆದ ಸಂಪ್ರದಾಯಕ ವಿವಾಹಗಳು ಹೆಚ್ಚು. ನಿಶ್ಚಿತಾರ್ಥವಾದ ಮೇಲೆ ವಿವಾಹದ ಸಂಧರ್ಬದಲ್ಲೂ ಕೆಲವು ವಿಧಿವಿಧಾನಗಳನ್ನು ಮುಗಿಸಿ ವಧುವಿನ ಹಣೆಗೆ ತಿಲಕವನ್ನಿಡುವ ಮೂಲಕ ಮೂಹೂರ್ತ ಮುಕ್ತಯಗೊಳ್ಳುವುದು. ಸಂತಾಲರಲ್ಲಿ ಪ್ರೇಮ ವಿವಾಹ ಪದ್ದತಿ ತುಂಬ ಸರಳ ಯುವಕ ಯುವತಿಯರು ಹಳ್ಳಿಯ ಯಜಮಾನನ ಮನೆಗೆ ಹೋಗಿ ಆತನ ಸಮುಖದಲ್ಲಿ ಯುವಕನು ಯುವತಿಯ ಅಣೆಗೆ ಕುಂಕುಮವಿಟ್ಟರೆ ವಿವಾಹವು ಮುಗಿದ ಹಾಗೆಯೇ . ಇದನ್ನು "ರಾಜರಾಜಿ" ಎನ್ನುತ್ತಾರೆ. ಸಂತಾಲರಲ್ಲಿ ಕನ್ಯಾ ಆಪಹರಣದ ಮೂಲಕವೂ ವಿವಾಹಗಳು ನಡೆಯುತ್ತವೆ. ಕೆಲವೊಮ್ಮೆ ಪ್ರೇಮಿಗಳು ಕಾಡಿಗೆಹೋಗಿ ಪರಸ್ಪರ ಮಾಲೆಗಳನ್ನು ಹಾಕಿಕೊಂಡು ದಂಪತಿಗಳಾಗಿ ಮರಳಿ ಹಳ್ಳಿಗೆ ಬರುವ ಮೂಲಕವೂ ವಿವಾಹ ವಾಗುತ್ತದೆ. ಇದನ್ನು "ಬಾಲದೊಬಾಪ್ಲ" ಎಂದು ಕರೆಯುವರು. ಸಂತಾಲರ ಸ್ತ್ರೀಯರಿಗೆ ಇಂದಿಗೂ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ .

ಉಲ್ಲೇಖಗಳು

[ಬದಲಾಯಿಸಿ]
  1. http://santarhpathuagaunta.hpage.co.in/history-of-santals_59487227.html Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. |title = ಪ್ರೋಟೋ-ಆಸ್ಟ್ರಾಲಾಯ್ದ್ ಗುಂಪಿಗೆ ಸೇರಿದ ಜನಾಂಗ
  2. http://censusindia.gov.in/Tables_Published/SCST/dh_st_jharkhand.pdf |title = Jharkhand: Data Highlights the Scheduled Tribes| accessdate = 2010-01-10 | last = | first = | work = Census of India 2001 | publisher = Census Commission of India |format=PDF}}
  3. http://censusindia.gov.in/Tables_Published/SCST/dh_st_westbengal.pdf |title = West Bengal: Data Highlights the Scheduled Tribes| accessdate = 2010-01-10 | last = | first = | work = Census of India 2001 | publisher = Census Commission of India |format=PDF}}
  4. http://censusindia.gov.in/Tables_Published/SCST/dh_st_bihar.pdf |title = Bihar: Data Highlights the Scheduled Tribes| accessdate = 2010-01-10 | last = | first = | work = Census of India 2001 | publisher = Census Commission of India |format=PDF}}
  5. http://censusindia.gov.in/Tables_Published/SCST/dh_st_orissa.pdf |title = ೨೦೦೧ರ ಜನಗಣತಿಯ ಪ್ರಕಾರ ಒಡಿಶಾ ರಾಜ್ಯದಲ್ಲಿನ ಬುಡಕಟ್ಟು ಜನಾಂಗಗಳು
  6. http://prashantcoakley.blogspot.in/2009/04/demography-of-santhals.html |title Demography of santhals ಎಂಬ ಬ್ಲೋಗ್ ನಲ್ಲಿ ಸೂಚಿಸಿರುವ ಅಂಕಿಅಂಶಗಳ ಪ್ರಕಾರ
  7. http://books.google.co.in/books?id=Zu5GpDby9H0C&pg=PA1648&lpg=PA1648&dq=santhala+population+in+tripura&source=bl&ots=IMXdr3gvYG&sig=IK6CCOgB47y34JiyHCitrPAMYBY&hl=en&sa=X&ei=xlbGUvewLcLVrQfelYCoCA&ved=0CEkQ6AEwBA#v=onepage&q=santhala%20population%20in%20tripura&f=false |title =Encyclopedia of the Stateless Nations ಎಂಬ ಗೋಗಲ್ ಪುಸ್ತಕದ ೧೬೪೮ ನೇ ಪುಟದಲ್ಲಿ ಉಲ್ಲೇಖವಾಗಿದೆ
  8. http://www.britannica.com/EBchecked/topic/523210/Santhal |title = ಚೊಟನಾಗಪುರ ಪ್ರಸ್ಥಭೂಮಿ ಪ್ರದೇಶಗಳಲ್ಲಿನ ಸಂತಾಲರು ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿದಾರೆ ಎಂಬುದನ್ನು Encyclopedia Britannica ದಲ್ಲಿ ಉಲ್ಲೇಖಿಸಲಾಗಿದೆ
  9. http://www.britannica.com/EBchecked/topic/523210/Santhal |title = ಚೊಟನಾಗಪುರ ಪ್ರಸ್ಥಭೂಮಿ ಪ್ರದೇಶದ ಅಸನ್ಸೋಲ್ ನಗರದ ಪ್ರದೇಶದ ಕಲ್ಲಿದ್ದಿಲಿನ ಗಣಿಗಳಲ್ಲಿ ಕೆಲಸ ಮಾಡುವರು.
  10. http://santarhpathuagaunta.hpage.co.in/history-of-santals_59487227.html Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. |title =ಸೂರ್ಯ ದೇವರ ಬಗ್ಗೆ ಈ ಮೇಲಿನ ವೇಬ್ ಸೈಟ್ ನಲ್ಲಿ ಉಲ್ಲೇಖಿತವಾಗಿದೆ.
"https://kn.wikipedia.org/w/index.php?title=ಸಂತಾಲರು&oldid=1058647" ಇಂದ ಪಡೆಯಲ್ಪಟ್ಟಿದೆ