ವಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಂತಿ - Vomiting (ವಮನ) ಎಂದರೆ ಬಾಯಿ ಮತ್ತು ಕೆಲವೊಮ್ಮೆ ಮೂಗಿನ ಮೂಲಕ ಹೊಟ್ಟೆಯ ಒಳವಸ್ತುಗಳ ಅನೈಚ್ಛಿಕ, ಬಲಯುತ ಹೊರಹಾಕುವಿಕೆ.[೧]

ವಾಂತಿಯು ವಿವಿಧ ರೀತಿಯ ಪರಿಸ್ಥಿತಿಗಳಿಂದ ಉಂಟಾಗಬಹುದು; ಇದು ಜಠರದುರಿತ ಅಥವಾ ವಿಷ ಸೇವನೆಯಂತಹ ಅಸ್ವಸ್ಥತೆಗಳಿಗೆ ನಿರ್ದಿಷ್ಟ ಪ್ರತಿಕ್ರಿಯೆಯಾಗಿ ವ್ಯಕ್ತವಾಗಬಹುದು, ಅಥವಾ ಮೆದುಳಿನ ಗೆಡ್ಡೆಗಳು ಮತ್ತು ಏರಿದ ಅಂತರ್ಕಪಾಲ ಒತ್ತಡದಿಂದ ಅಯಾನೀಕರಿಸುವ ವಿಕಿರಣಕ್ಕೆ ಅತಿಒಡ್ಡಿಕೆವರೆಗೆ ವ್ಯಾಪಿಸುವ ನಿರ್ದಿಷ್ಟವಲ್ಲದ ಅಸ್ವಸ್ತತೆಗಳ ಅನುಗತ ರೋಗಲಕ್ಷಣವಾಗಿ ವ್ಯಕ್ತವಾಗಬಹುದು. ಇನ್ನೇನು ವಾಂತಿಯಾಗಿಬಿಡುವುದು ಎಂಬ ಅನಿಸಿಕೆಯನ್ನು ವಾಕರಿಕೆ ಎಂದು ಕರೆಯಲಾಗುತ್ತದೆ. ಇದು ಹಲವುವೇಳೆ ವಾಂತಿಗೆ ಮುಂಚೆಗೆ ಆಗುತ್ತದೆ ಆದರೆ ಇದರಿಂದ ವಾಂತಿ ಆಗಬೇಕೆಂದೇನಿಲ್ಲ. ಓಕರಿಕೆ ಮತ್ತು ವಾಂತಿಯನ್ನು ತಡೆಹಿಡಿಯಲು ಕೆಲವೊಮ್ಮೆ ವಾಂತಿ ನಿರೋಧಕ ಔಷಧಿಗಳು ಅಗತ್ಯವಾಗುತ್ತವೆ. ನಿರ್ಜಲೀಕರಣವು ಕಾಣಿಸಿಕೊಳ್ಳುವ ತೀವ್ರ ಪ್ರಕರಣಗಳಲ್ಲಿ, ಅಂತರಭಿಧಮನಿ ದ್ರವ ಅಗತ್ಯವಾಗಬಹುದು. ಸ್ವ-ಪ್ರಚೋದಿತ ವಾಂತಿಯು ಕ್ಷುದ್ರೋಗದಂತಹ ತಿನ್ನುವ ಅಸ್ವಸ್ಥತೆಯ ಘಟಕವಾಗಿರಬಹುದು. ಕ್ಷುದ್ರೋಗವು ಈಗ ಸ್ವತಃ ಒಂದು ತಿನ್ನುವ ಅಸ್ವಸ್ಥತೆಯಾಗಿದೆ (ಶುದ್ಧೀಕರಣ ಅಸ್ವಸ್ಥತೆ).

ವಾಂತಿಯು ಕಾರುವಿಕೆಯಿಂದ ಭಿನ್ನವಾಗಿದೆ. ಆದರೆ ಇವೆರಡೂ ಪದಗಳನ್ನು ಹಲವುವೇಳೆ ಒಂದರ ಬದಲು ಮತ್ತೊಂದನ್ನು ಬಳಸಲಾಗುತ್ತದೆ. ಕಾರುವಿಕೆ ಎಂದರೆ ವಾಂತಿಯೊಂದಿಗೆ ಸಂಬಂಧಿಸಲಾದ ಬಲ ಹಾಗೂ ಅಸಮಾಧಾನ ಇಲ್ಲದೆಯೇ ಜೀರ್ಣವಾಗದ ಆಹಾರವು ಅನ್ನನಾಳದಿಂದ ಹಿಂದಕ್ಕೆ ಬಾಯಿಗೆ ವಾಪಸಾಗುವುದು. ಸಾಮಾನ್ಯವಾಗಿ ಕಾರುವಿಕೆ ಮತ್ತು ವಾಂತಿಯ ಕಾರಣಗಳು ಭಿನ್ನವಾಗಿರುತ್ತವೆ.

ಹೊಟ್ಟೆಯ ಒಳವಸ್ತುವು ಶ್ವಸನ ವ್ಯೂಹವನ್ನು ಪ್ರವೇಶಿಸಿದರೆ ವಾಂತಿಯು ಅಪಾಯಕಾರಿಯಾಗಬಹುದು. ಸಾಧಾರಣ ಸಂದರ್ಭಗಳಲ್ಲಿ ಗ್ರಸನಕೂಪ ಪ್ರತಿಕ್ರಿಯೆ ಮತ್ತು ಕೆಮ್ಮು ಇದು ಉಂಟಾಗದಂತೆ ತಡೆಯುತ್ತದೆ; ಆದರೆ, ಮದ್ಯ ಅಥವಾ ಅರಿವಳಿಕೆಯಂತಹ ಕೆಲವು ಪದಾರ್ಥಗಳ ಪ್ರಭಾವಗಳಲ್ಲಿರುವ ವ್ಯಕ್ತಿಗಳಲ್ಲಿ ಈ ರಕ್ಷಣಾತ್ಮಕ ಪ್ರತಿಕ್ರಿಯೆಗಳು ದುರ್ಬಲವಾಗಿರುತ್ತವೆ. ಆ ವ್ಯಕ್ತಿಗೆ ಉಸಿರುಗಟ್ಟಬಹುದು ಅಥವಾ ಉಸಿರಾಟ ಸಂಬಂಧಿ ನ್ಯುಮೋನಿಯಾವನ್ನು ಅನುಭವಿಸಬಹುದು. ದೀರ್ಘಕಾಲದ ಮತ್ತು ವಿಪರೀತ ವಾಂತಿಯು ದೇಹದಲ್ಲಿಂದ ನೀರನ್ನು ಬರಿದು ಮಾಡುತ್ತದೆ (ನಿರ್ಜಲೀಕರಣ) ಮತ್ತು ವಿದ್ಯುದ್ವಿಚ್ಛೇದ್ಯ ಸ್ಥಿತಿಯನ್ನು ಮಾರ್ಪಡಿಸಬಹುದು. ಜಠರಜನ್ಯ ವಾಂತಿಯಿಂದ ನೇರವಾಗಿ ಆಮ್ಲ ಮತ್ತು ಕ್ಲೋರೈಡ್‍ನ ನಷ್ಟ ಉಂಟಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Tintinalli, Judith E. (2010). Emergency Medicine: A Comprehensive Study Guide (Emergency Medicine (Tintinalli)). New York: McGraw-Hill Companies. p. 830. ISBN 0-07-148480-9.
"https://kn.wikipedia.org/w/index.php?title=ವಾಂತಿ&oldid=941745" ಇಂದ ಪಡೆಯಲ್ಪಟ್ಟಿದೆ