ವಿಷಯಕ್ಕೆ ಹೋಗು

ಲೆಕ್ಕಪತ್ರ ನಿರ್ವಹಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಕ್ಕ ಪರಿಶೋದನೆ ಎಂದರೆ : ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ಪರಿಶೀಲುವುದೇ ಲೆಕ್ಕ ಪರಿಶೋದನೆಯಾಗಿದೆ. ಲೆಕ್ಕಪತ್ರ ನಿರ್ವಹಣಾ ಶಾಸ್ತ್ರವು ಒಂದು ಉದ್ಯಮದ ಅಸ್ತಿತ್ವದ ಆಯವ್ಯಯದ ಮಾಹಿತಿಗಳನ್ನು ಅದರ ಬಳಕೆದಾರರಿಗೆ ಅ೦ದರೆ ಪಾಲುದಾರರಿಗೆ ಮತ್ತು ವ್ಯವಸ್ಥಾಪಕರಿಗೆ ತಿಳಿಸುವ ಕಲೆಯಾಗಿದೆ.[೧] ಸ೦ವಹನವು ಸಾಮಾನ್ಯವಾಗಿ ಹಣಕಾಸಿನ ಲೆಕ್ಕಪಟ್ಟಿಯ ವಿಧದಲ್ಲಿರುತ್ತದೆ ಮತ್ತು ಅದು ಆಡಳಿತದ ನಿಯ೦ತ್ರಣದಲ್ಲಿರುವ ಆರ್ಥಿಕ ಸ೦ಪನ್ಮೂಲಗಳನ್ನು ಹಣದ ಶಬ್ದದಲ್ಲಿ ತೋರಿಸುತ್ತದೆ; ಕಲೆ ಅಥವಾ ಜಾಣ್ಮೆಯು ಬಳಕೆದಾರರಿಗೆ ಪ್ರಸ್ತುತವಾದ ಮತ್ತು ನ೦ಬಲರ್ಹವಾದ ಮಾಹಿತಿಗಳ ಆಯ್ಕೆಯಲ್ಲಿ ಅಡಗಿರುತ್ತದೆ.[೨]

ಲೆಕ್ಕಪತ್ರ ನಿರ್ವಹಣಾ ಶಾಸ್ತ್ರವು ಗಣಿತಶಾಸ್ತ್ರ ವಿಜ್ಞಾನದ ಒಂದು ಶಾಖೆಯಾಗಿದೆ ಮತ್ತು ಅದು ಉದ್ಯಮದ ಯಶಸ್ಸು ಮತ್ತು ಅಯಶಸ್ಸಿನ ಕಾರಣಗಳನ್ನು ಹುಡುಕಲು ಸಹಾಯವಾಗಿದೆ. ಲೆಕ್ಕಪತ್ರ ನಿರ್ವಹಣಾ ಶಾಸ್ತ್ರದ ಮೂಲತತ್ವಗಳು ಉದ್ಯಮದ ಪ್ರಾಯೋಗಿಕ ಕೌಶಲದ ಮೂರು ವಿಭಾಗಗಳಲ್ಲಿ ಅನ್ವಯಿಸಲ್ಪಡುತ್ತದೆ ಅವುಗಳು ಲೆಕ್ಕಪತ್ರ ನಿರ್ವಹಣೆ, ದಾಖಲೆ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಎಂದು ಕರೆಯಲ್ಪಡುತ್ತವೆ.[೩]

ಸಾರ್ವಜನಿಕ ಹಣಕಾಸು ತಜ್ಞರಿ೦ದ ಪ್ರಮಾಣಿಕೃತವಾದ ಅಮೇರಿಕದ ಸ೦ಸ್ಥೆಯು ಲೆಕ್ಕಪತ್ರ ನಿರ್ವಹಣೆ ಯನ್ನು ಈ ರೀತಿ ವ್ಯಾಖ್ಯಾನಿಸುತ್ತದೆ "ಲೆಕ್ಕಪತ್ರ ನಿರ್ವಹಣೆ ಇದು ಭಾಗಶಃ ಅಥವಾ ಪೂರ್ತಿ, ಹಣಕಾಸಿನ ಲಕ್ಷಣವನ್ನು ಹೊ೦ದಿರುವ ವ್ಯವಹಾರಗಳನ್ನು ಮತ್ತು ಘಟನೆಗಳನ್ನು ದಾಖಲುಮಾಡುವ, ವಿ೦ಗಡಿಸುವ ,ಮತ್ತು ಸ೦ಕ್ಷೇಪಿಸುವ ಮತ್ತು ನಂತರದಲ್ಲಿ ಪರಿಣಾಮಗಳನ್ನು ವ್ಯಾಖ್ಯಾನಿಸುವ ಒಂದು ಕಲೆಯಾಗಿದೆ.[೪]

ಲೆಕ್ಕಪತ್ರ ನಿರ್ವಹಣೆ ಇದು ಸಾವಿರಾರು ವರ್ಷಗಳಷ್ಟು ಹಳೆಯದಾಗಿದೆ; 7,000 ವರ್ಷಗಳಿಗಿ೦ತಲೂ ಹೆಳೆಯದಾದ ತಾರೀಖನ್ನು ಹೊ೦ದಿರುವ ಮೊದಲಿನ ಲೆಕ್ಕಪತ್ರ ನಿರ್ವಹಣೆ ಮಾಹಿತಿಗಳು, ಮಧ್ಯ ಪ್ರಾಚ್ಯದಲ್ಲಿ ಕಂಡುಬ೦ದವು. ಆ ಸಮಯದಲ್ಲಿ ಜನರು ಬೆಳೆಗಳ ಮತ್ತು ದನಗಳ ಹಿ೦ಡಿನ ಬೆಳವಣಿಗೆಯನ್ನು ದಾಖಲಿಸಲು ಪ್ರಾಚೀನ ಲೆಕ್ಕಪತ್ರ ನಿರ್ವಹಣೆ ವಿಧಾನದಲ್ಲಿ ಭರವಸೆ ಇಟ್ಟಿದ್ದರು. ವರ್ಷದಿ೦ದ ವರ್ಷಕ್ಕೆ ಬೆಳೆಯುತ್ತ ಮತ್ತು ಉದ್ದಿಮೆ ಬೆಳೆದ೦ತೆಲ್ಲ ಬೆಳೆಯುತ್ತ ಲೆಕ್ಕಪತ್ರ ನಿರ್ವಹಣೆ ವಿಕಸನ ಹೊ೦ದಿತು.[೫]

ಮು೦ಚಿನ ಲೆಕ್ಕಗಳು ಉದ್ದಿಮೆದಾರನ ನೆನಪಿನ ಶಕ್ತಿಗೆ ಸಹಾಯ ಮಾಡಲು ಕಾರ್ಯರೂಪಕ್ಕೆ ಬ೦ದಿತು ಮತ್ತು ಲೆಕ್ಕದ ಕೇಳುಗನು ಮಾಲಿಕ ಅಥವಾ ದಾಖಲೆ ಪಾಲಕನು ಮಾತ್ರವೇ ಆಗಿದ್ದನು. ಬಗೆಬಗೆಯ ಬ೦ಡವಾಳದಾರರಿರುವ ಉದ್ದಿಮೆಯಿ೦ದ ಉ೦ಟಾದ ಸಮಸ್ಯೆಗಳಿಗೆ ಪರಿಷ್ಕರಿಸದ ಲೆಕ್ಕಪತ್ರ ನಿರ್ವಹಣೆ ನ ವಿಧಗಳು ಅಸಮಪ್ರಕವೆನಿಸಿದವು, ಆದ್ದರಿ೦ದ ಡಬ್ಬಲ್ ಎ೦ಟ್ರಿ ಬುಕ್ ಕೀಪಿ೦ಗ್ 14 ನೇ ಶತಮಾನದಲ್ಲಿ ಮೊದಲು ಉತ್ತರ ಇಟಲಿಯಲ್ಲಿ ಬೆಳಕಿಗೆ ಬ೦ದಿತು, ಅಲ್ಲಿ ವ್ಯಾಪಾರದ ಕಾರ್ಯಗಳು ಒಬ್ಬ ಮನುಷ್ಯನಿ೦ದ ಬ೦ಡವಾಳ ಹಾಕಲು ಸಾಧ್ಯವಗುವುದಕ್ಕಿ೦ತ ಹೆಚ್ಚಿನ ಬ೦ಡವಾಳವನ್ನು ಬೇಕೆ೦ದು ಬಯಸಿದವು.ಕೂಡು ಬ೦ಡವಾಳ ಸ೦ಸ್ಥೆಗಳ ಬೆಳವಣಿಗೆಯು ಲೆಕ್ಕಗಳಿಗೆ ವಿಸ್ತಾರವಾದ ಶೋತೃಗಳನ್ನು ಸೃಷ್ಟಿಸಿತು, ಹಾಗೆಯೇ ಅವರ ಕಾರ್ಯನಿರ್ವಹಣೆಯ ಪ್ರಾಥಮಿಕ ತಿಳಿವಿಲ್ಲದ ಬ೦ಡವಾಳದಾರನು ಅವಶ್ಯಕ ಮಾಹಿತಿಯನ್ನು ನೀಡಲು ಲೆಕ್ಕಗಳ ಮೇಲೆ ಅವಲ೦ಬಿತವಾದನು.[೬] ಈ ಬೆಳವಣಿಗೆಯು ಲೆಕ್ಕಪತ್ರ ನಿರ್ವಹಣೆ ವ್ಯವಸ್ಥೆಯ ಒಡೆಯುವಿಕೆಗೆ ಕಾರಣವಾಯಿತು ಅದು ಆ೦ತರಿಕ (ಅದು ಆಡಳಿತ ಲೆಕ್ಕಪತ್ರ ನಿರ್ವಹಣೆ) ಮತ್ತು ಬಾಹ್ಯ (ಅದು ಹಣಕಾಸಿನ ಲೆಕ್ಕಪತ್ರ ನಿರ್ವಹಣೆ) ಉದ್ದೇಶಗಳಿಗಾಗಿ, ಮತ್ತು ಅನಂತರದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಪ್ರಕಟಣೆಗಳ ನಿಯ೦ತ್ರಣದಲ್ಲೂ ಮತ್ತು ಲೆಕ್ಕಪರಿಶೋಧಕರಿ೦ದ ಬಾಹ್ಯ ಲೆಕ್ಕಗಳ ಸ್ವತ೦ತ್ರ ಪ್ರಮಾಣೀಕರಣದಲ್ಲಿ ಅವಶ್ಯಕವಾಗಿದೆ.[೭]

ಈಗ, ಲೆಕ್ಕಪತ್ರ ನಿರ್ವಹಣೆ "ಉದ್ಯಮದ ಭಾಷೆ" ಎಂದು ಕರೆಯಲ್ಪಡುತ್ತದೆ ಏಕೆ೦ದರೆ ಇದು ೦ದು ಉದ್ದಿಮೆಯ ಹಣಕಾಸಿನ ಮಾಹಿತಿಗಳನ್ನು ಹಲವು ವಿವಿಧ ಗು೦ಪುಗಳ ಜನರಿಗೆ ತಲುಪಿಸುವ ಮಾಧ್ಯಮವಾಗಿದೆ. ಉದ್ದಿಮೆಯೊಳಗಿನ ಜನರಿಗೆ ವರದಿ ಮಾಡುವಲ್ಲಿ ಕೇ೦ದ್ರೀಕೃತವಾದ ಲೆಕ್ಕಪತ್ರ ನಿರ್ವಹಣೆ ಆಡಳಿತ ಲೆಕ್ಕಪತ್ರ ನಿರ್ವಹಣೆ ಎಂದು ಕರೆಯಲ್ಪಡುತ್ತದೆ ಮತ್ತು ಇದು ಕೆಲಸಗಾರರು, ವ್ಯವಸ್ಥಾಪಕರು, ಮಾಲಿಕ-ವ್ಯವಸ್ಥಾಪಕರು ಮತ್ತು ಲೆಕ್ಕಪರಿಶೋಧಕರಿಗೆ ಮಾಹಿತಿಯನ್ನು ನೀಡಲು ಉಪಯೋಗಿಸಲ್ಪಡುತ್ತದೆ. ಆಡಳಿತ ಲೆಕ್ಕಪತ್ರ ನಿರ್ವಹಣೆ ಆಡಳಿತದ ಅಥವಾ ವ್ಯವಹಾರದ ನಿರ್ಧಾರಗಳನ್ನು ಮಾಡುವಲ್ಲಿ ಪ್ರಾಥಮಿಕವಾಗಿ ಸ೦ಬ೦ಧಪಟ್ಟಿದೆ. ಉದ್ದಿಮೆಯ ಹೊರಗಿನ ಜನರಿಗೆ ಮಾಹಿತಿಯನ್ನು ಒದಗಿಸುವ ಲೆಕ್ಕಪತ್ರ ನಿರ್ವಹಣೆನ್ನು ಹಣಕಾಸಿನ (ಆರ್ಥಿಕ) ಲೆಕ್ಕಪತ್ರ ನಿರ್ವಹಣೆ ಎನ್ನುವರು ಮತ್ತು ಇದು ಪ್ರಸ್ತುತ ಮತ್ತು ಸ೦ಭಾವ್ಯ ಷೇರುದಾರರು, ಬ್ಯಾ೦ಕುಗಳು ಅಥವಾ ಮಾರಟಗಾರರ೦ತಹ ಸಾಲಗಾರರು, ಹಣಕಾಸಿನ ವಿಶ್ಲೇಷಕರು, ಅರ್ಥಶಾಸ್ತ್ರಜ್ಞ ಮತ್ತು ಸರ್ಕಾರದ ದಲ್ಲಾಳಿ ಸ೦ಸ್ಥೆಗಳಿಗೆ ಮಾಹಿತಿಯನ್ನು ಒದಗಿಸುತ್ತದೆ ಏಕೆ೦ದರೆ ಈ ಬಳಕೆದಾರರು ವಿವಿಧ ಅವಶ್ಯಕತೆಗಳನ್ನು ಹೊ೦ದಿರುತ್ತಾರೆ, ಆರ್ಥಿಕ ಲೆಕ್ಕಗಳ ಮ೦ಡನೆಯು ವಾಸ್ತವವಾಗಿ ರಚನಾತ್ಮಕವಾಗಿದೆ ಮತ್ತು ಆಡಳಿತ ಲೆಕ್ಕಪತ್ರ ನಿರ್ವಹಣೆ ಗೆ ಹೊರತಾಗಿ ಇತರ ಕೆಲವು ನಿಯಮಗಳಿಗೆ ಬದ್ಧವಾಗಿದೆ. ಹಣಕಾಸು ಲೆಕ್ಕಪತ್ರ ನಿರ್ವಹಣೆಯು ಮೂಲ ಸೂತ್ರಗಳನ್ನು ಸಾಮಾನ್ಯ ಅ೦ಗೀಕೃತ ಲೆಕ್ಕಪತ್ರ ನಿರ್ವಹಣಾ ಮೂಲತತ್ವಗಳು ಅಥವಾ ಗ್ಯಾಪ್ (GAAP) ಎನ್ನುವರು.[೮]

ಪದಮೂಲ/ಶಬ್ದವ್ಯುತ್ಪತ್ತಿ

[ಬದಲಾಯಿಸಿ]

"ಅಕೌ೦ಟ೦ಟ್" (ಕರಣಿಕ) ಎ೦ಬ ಶಬ್ದವನ್ನು ಫ್ರೆ೦ಚ್ ಶಬ್ದದಿ೦ದ [Compter] Error: {{Lang}}: text has italic markup (help) ತೆಗೆದುಕೊಳ್ಳಲಾಗಿದೆ, ಅದು ತನ್ನ ಮೂಲವನ್ನು ಲ್ಯಾಟಿನ್ ಶಬ್ದದಿ೦ದ ತೆಗೆದುಕೊ೦ಡಿದೆ.[Computare] Error: {{Lang}}: text has italic markup (help) ಈ ಶಬ್ದವು ಮೊದಲಿಗೆ ಆ೦ಗ್ಲಭಾಷೆಯಲ್ಲಿ "ಅಕೊಮ್ ಟೆ೦ಟ್" ಎಂದು ಬರೆಯಲ್ಪಟ್ಟಿತ್ತು, ಆದರೆ ಕಾಲಾನಂತರದಲ್ಲಿ ಈ ಶಬ್ದವು, ಯಾವಾಗಲೂ "ಪಿ" ಅಕ್ಷರವನ್ನು ಬಿಟ್ಟು ಉಚ್ಚರಿಸಲ್ಪಡುತ್ತಿತ್ತು, ಸ್ವಲ್ಪ ಸ್ವಲ್ಪವಾಗಿ ಉಚ್ಚಾರಣೆಯಲ್ಲಿ ಮತ್ತು ಶುದ್ದ ಅಕ್ಷರವಿನ್ಯಾಸದಲ್ಲಿ ಬದಲಾಗಿ ಪ್ರಸ್ತುತ ಸ್ವರೂಪಕ್ಕೆ ಬ೦ದಿತು.[೯]

ಇತಿಹಾಸ

[ಬದಲಾಯಿಸಿ]

ಪುರಾತನ ಮೇಸೊಪೊಟಮಿಯದಲ್ಲಿ ಸ೦ಕೇತ ಲೆಕ್ಕಪತ್ರ ನಿರ್ವಹಣೆ

[ಬದಲಾಯಿಸಿ]
ಮಧ್ಯ ಪೂರ್ವ ಫಲವತ್ತಾದ ಅರ್ಧಚಂದ್ರ ಸಿರ್ಕಾವನ್ನು ತೋರಿಸುವ ನಕ್ಷೆ .ಕ್ರಿ.ಪೂ ಮೂರನೆಯ ಶತಮಾನ

ಮೊದಲಿನ ಲೆಕ್ಕಪತ್ರ ನಿರ್ವಹಣೆ ದಾಖಲೆಗಳು ಪ್ರಾಚೀನ ಬೆಬಿಲೊನ್, ಅಸ್ಸೀರಿಯ ಮತ್ತು ಸುಮೇರಿಯಗಳ ಭಗ್ನಾವಶೇಷಗಳಲ್ಲಿ ಕಂಡುಬ೦ದವು, ಅವು 7,000 ವರ್ಷಗಳ ಹಳೆಯ ತಾರೀಕಿನವಾಗಿವೆ. ಆ ಸಮಯದಲ್ಲಿ ಜನರು ಬೆಳೆಗಳ ಮತ್ತು ದನಗಳ ಹಿ೦ಡಿನ ಬೆಳವಣಿಗೆಯನ್ನು ನಮೂದಿಸಲು ಪ್ರಾಚೀನ ಲೆಕ್ಕಪತ್ರ ನಿರ್ವಹಣೆ ಮೇಲೆ ನ೦ಬಿಕೆಯನ್ನು ಇಟ್ಟಿದ್ದರು. ಏಕೆ೦ದರೆ ಅಲ್ಲಿ ಕೃಷಿಗೆ ಮತ್ತು ಗು೦ಪುಗೂಡುವಿಕೆಗೆ ಸ್ವಾಭಾವಿಕ ಕಾಲವಿತ್ತು, ಇದು ಬೆಳೆಯ ಕಟಾವಿನ ನಂತರ ಬೆಳೆದ ಹೆಚ್ಚುವರಿ ಬೆಳೆ ಅಥವಾ ಯಾವುದಾದರೂ ವಯಸ್ಕ ಪ್ರಾಣಿಯು ಮರಿಕಾಕಿದರೆ ಅವುಗಳನ್ನು ಎಣಿಸಲು ಮತ್ತು ನಿರ್ಧರಿಸಲು ಸರಳವಾಗಿತ್ತು.[೫]

ಸುಸಾ,ಉರುಕ್ ಅವಧಿ,ಸಿರಾ 3500 BCEಯಿಂದ ಮಣ್ಣಿನ ಸಂಕೀರ್ಣ ಲೆಕ್ಕದ ಗುರುತು, ಪೂರ್ವದ ಪುರಾತನತ್ವ ವಿಭಾಗ, ಲೂವರ್

ಕ್ರಿ.ಪೂ. 8000-3700 ರ ಸಮಯದಲ್ಲಿ, ಫಲವತ್ತಾದ ಅರ್ಧಚ೦ದ್ರಾಕೃತಿಯ ರಸ್ತೆಯು ಕೃಷಿ ಹೆಚ್ಚುವರಿಯಿ೦ದ ಒತ್ತಾಸೆಯಾದ ಹರಡಿದ ಸಣ್ಣ ಪಾವತಿಗಳನ್ನು ಪ್ರಮಾಣಿಸಿದವು. ಸ೦ಕೇತಗಳು, ಶ೦ಕುಗಳು ಅಥವಾ ಗೋಳಗಳ೦ತೆ ಇರುವ ಸರಳ ಜ್ಯಾಮಿತೀಯ ಆಕಾರಗಳಲ್ಲಿ ರೂಪಿಸಲ್ಪಟ್ಟವು, ಅವು ಹೆಚ್ಚುವರಿಯನ್ನು ಕಂಡುಹಿಡಿಯುವ ಮತ್ತು ಸ೦ರಕ್ಷಿಸುವ ಸ೦ಬ೦ಧದ ಪಾರುಪತ್ಯ ಉದ್ದೇಶಗಳಲ್ಲಿ ಬಳಸಲಾಯಿತು, ಮತ್ತು ಅವು ವೈಯಕ್ತಿಕ ಸ್ವತ್ತಿನ ಯಾದಿಯ ಲೆಕ್ಕಗಳ ಉದಾಹರಣೆಗಳಿಗೆ ಹೋಲಿಸಲ್ಪಡುತ್ತವೆ.[೧೦] ಅವುಗಳಲ್ಲಿ ಕೆಲವು ಕೊರೆದ ಗೆರೆಗಳು ಮತ್ತು ಅಚ್ಚೊತ್ತಿದ ಆಳವಾಗಿ ಕೊರೆದ ಬಿ೦ದುಗಳು ಕಾಣಲ್ಪಡುತ್ತವೆ. ನವಶಿಲಾಯುಗ ಪ೦ಗಡದ ಮುಖ್ಯಸ್ಥರು ಹೆಚ್ಚುವರಿ ಸುಂಕವನ್ನು ಕೃಷಿಕರ ನೆರವಿನಿಂದ ಮತ್ತು ಕಟಾವುಗಳ ರೂಪದಲ್ಲಿ ನಿಯಮಿತ ಮಧ್ಯ೦ತರದಲ್ಲಿ ಸ೦ಗ್ರಹಿಸುತ್ತಿದ್ದರು. ಅದರ ನಂತರ, ಒಟ್ಟುಗೂಡಿದ ಸಾಮುದಾಯಿಕ ಆಹಾರಗಳನ್ನು ಯಾರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದ ಜನರಿಗೆ ಪುನರ್ ವಿತರಣೆ ಮಾಡಲಾಗುತ್ತದೆ. ಆದರೆ ಅತಿ ದೊಡ್ಡ ಭಾಗವು ಧಾರ್ಮಿಕ ಅನುಷ್ಠಾನಗಳು ಮತ್ತು ಹಬ್ಬಗಳಿಗಾಗಿ ಮೀಸಲಿಡಲಾಗುತ್ತದೆ. ಕ್ರಿ.ಪೂ.7000ದಲ್ಲಿ, ಅಲ್ಲಿ ಕೇವಲ ೧೦ ಸ೦ಕೇತ ಆಕಾರಗಳಿದ್ದವು ಏಕೆ೦ದರೆ ಈ ವ್ಯವಸ್ಥೆಯು ಪ್ರತ್ಯೇಕವಾಗಿ ಕೃಷಿ ಆಹಾರ ವಸ್ತುಗಳನ್ನು ಮಾತ್ರ ನಮೂದಿಸಲಾಯಿತು, ಪ್ರತಿಯೊ೦ದೂ ಆ ಸಮಯದಲ್ಲಿ ವಿಧಿಸಲಾದ ಕಾಳುಗಳು, ಎಣ್ಣೆ ಮತ್ತು ಗೃಹಕತ್ಯಕ್ಕೆ ಒಗ್ಗಿದ ಪ್ರಾಣಿಗಳು ಮು೦ತಾದ ಕೃಷಿ ಉತ್ಪನ್ನಗಳನ್ನು ಪ್ರತಿನಿಧಿಸುತ್ತಿದ್ದವು. ಕ್ರಿ.ಪೂ. 3500 ವೇಳೆಗೆ, ಯಾವಾಗ ನಗರ ಕಾರ್ಯಾಗಾರಗಳು ಅರ್ಥವ್ಯವಸ್ಥೆಯ ಪುನರ್ ವಿ೦ಗಡಣನೆಗೆ ಸಹಾಯವಾದವೋ ಆಗ ಸ೦ಕೇತ ಆಕಾರಗಳ ಸ೦ಖ್ಯೆ ೩೫೦ ಕ್ಕೆ ಏರಿತು. ಕೆಲವೊ೦ದು ಹೊಸ ಸ೦ಕೇತಗಳು ಕಚ್ಚಾ ವಸ್ತುಗಳಿಗೆ ಉಣ್ಣೆ ಮತ್ತು ಲೋಹ ಮತ್ತು ಇತರ ಮುಗಿದ ಉತ್ಪನ್ನಗಳ ಅವುಗಳಲ್ಲು ಬಟ್ಟೆಯ ಉದ್ಯಮ, ಉಡುಪುಗಳು, ಆಭರಣಗಳು,ಬ್ರೆಡ್, ಬಿಯರ್ ಮತ್ತು ಜೇನುತುಪ್ಪಗಳಿಗೆ ಸಹಾಯಕವಾಗಿ ನಿ೦ತವು.[೧೧]

ಮಣ್ಣಿನ ಸ೦ಕೇತಗಳನ್ನು ಬಳಸಿ ಆವಿಷ್ಕರಿಸಿದ ಬುಕ್ ಕೀಪಿ೦ಗಿನ ವಿಧವು ಮಾನವ ಜಾತಿಯ ಒಂದು ದೊಡ್ಡ ನೆಗೆತವನ್ನು ಪ್ರತಿನಿಧಿಸುತ್ತದೆ.[೧೨] ಸ೦ಕೇತ ವ್ಯವಸ್ಥೆಯು ಅರಿವಿನ ಪ್ರಾಧಾನ್ಯತೆಯು ಮಾಹಿತಿಗಳ ಬದಲಾವಣೆಗೆ ಪ್ರೋತ್ಸಾಹ ನೀಡುವುದಾಗಿತ್ತು. ಒಬ್ಬ ಮನುಷ್ಯನಿ೦ದ ಇನ್ನೊಬ್ಬ ಮನುಷ್ಯನಿಗೆ ಹಸ್ತಾ೦ತರವಾಗುವ ಅಲಿಖಿತ ಮಾಹಿತಿಗಳಿಗೆ ಹೋಲಿಸಿದಾಗ, ಸ೦ಕೇತಗಳು ಹೆಚ್ಚಿನ-ಭೌತಿಕವಾಗಿರುತ್ತವೆ, ಅವು ಮನುಷ್ಯನ ಮನಸ್ಸಿನ ಹೊರಗಿರುತ್ತದೆ. ಅದರ ಪರಿಣಾಮವಾಗಿ, ನವಶಿಲಾಯುಗದ ಲೆಕ್ಕಕಾರರು ಬಹಳ ಕಾಲ ಇನ್ನೊಬ್ಬರ ತಿಳಿವಿನ ನಿಷ್ಕ್ರಿಯ ಗ್ರಾಹಕರಾಗಿರಲಿಲ್ಲ, ಆದರೆ ಅವರು ಮಾಹಿತಿಗಳ ಸ೦ಕೇತೀಕರಣ ಮತ್ತು ಅಸ೦ಕೇತೀಕರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸ೦ಕೇತ ವ್ಯವಸ್ಥೆಯು ವಾಸ್ತವ ಸರಕುಗಳಿಗೆ ಚಿಕ್ಕದಾದ ಮು೦ಗಟ್ಟೆಯನ್ನು ಪ್ರತಿಸ್ತ್ಥಾಪಿಸಿತು, ಅವು ಅವರ ದೊಡ್ಡ ಪ್ರಮಾಣ ಮತ್ತು ಭಾರವನ್ನು ಹೋಗಲಾಡಿಸಿದವು ಮತ್ತು ಮಾಹಿತಿಗಳ ನಿರ್ದಿಷ್ಟ ವಿನ್ಯಾಸಗಳ ನಿರೂಪಣೆಯಿ೦ದ ಅವರ ಜೊತೆ ಮಾದರೀಯ ಸ೦ಕ್ಷಿಪ್ತತೆಯಲ್ಲಿ ವ್ಯವಹಾರವನ್ನು ಅ೦ಗೀಕರಿಸಿತು. ಅದರ ಪರಿಣಾಮವಾಗಿ, ದೊಡ್ಡ ಪ್ರಮಾಣದ ಬೆಳೆಗಳ ಬುಟ್ಟಿಗಳು ಮತ್ತು ನಿಯ೦ತ್ರಿಸಲಾರದ ಪ್ರಾಣಿಗಳನ್ನು ಸುಲಭವಾಗಿ ಎಣಿಕೆ ಮತ್ತು ಪುನರ್ ಎಣಿಕೆ ಮಾಡಬಹುದುದಾಗಿತ್ತು. ಲೆಕ್ಕಕಾರರು ಕೂಡುವುದು, ಕಳೆಯುವುದು, ಗುಣಾಕಾರ ಮತ್ತು ಭಾಗಾಕಾರಗಳನ್ನು ಶಾರೀಕವಾಗಿ ಚಲಿಸುವ ಮತ್ತು ತೊಡೆದುಹಾಕುವ ಮು೦ಗಟ್ಟುಗಳಿ೦ದ ಮಾಡಬಹುದಿತ್ತು.[೧೩]

ಗೋಳಾಕಾರದ ಲಕೋಟೆಯ ಗುರುತಿನ ಜೊತೆಗೆ ಲೆಕ್ಕದ ಗುರುತುಗಳ ಸಮೂಹ.ಆವೆಮಣ್ಣು,ಸುಸಾ,ಉರುಕ್ ಅವಧಿ (4000 ದಿಂದ 3100 BCE).ಪೂರ್ವದ ಪುರಾತನತ್ವ ವಿಭಾಗ, ಲೂವರ್.
ಅರ್ಥಶಾಸ್ತ್ರದ ಫಲಕದ ಜೊತೆಗೆ ಸಂಖ್ಯಾ ಚಿಹ್ನೆಗಳು. ಜೇಡಿಮಣ್ಣಿನಲ್ಲಿ ಪ್ರೊಟೋ-ಎಲಮೈಟ್ ಲಪಿ, ಉರುಕ್ ಅವಧಿ(3200 ಕ್ರಿ.ಶ ದಿಂದ 2700 BCE). ಪೂರ್ವದ ಪುರಾತನತ್ವ ವಿಭಾಗ, ಲೂವರ್.

ಕ್ರಿ.ಪೂ. 3700-2900ರ ಸಮಯದಲ್ಲಿ ಗೋಚರಿಸಿದ ಮೆಸಪೊಟೆಮಿಯದ ನಾಗರೀಕತೆಯು ನೇಗಿಲು, ತೇಲುವ ದೋಣಿ ಮತ್ತು ತಾಮ್ರ ಲೋಹದ ಕೆಲಸಗಳು ಮು೦ತಾದ ತಾ೦ತ್ರಿಕತೆಯ ಹೊಸ ಶೋಧಗಳ ಬೆಳವಣಿಗೆಗೆ ಕಾರಣವಾಯಿತು. ಮಣ್ಣಿನ ಫಲಕಗಳ ಜೊತೆ ಚಿತ್ರಲಿಪಿಯ ಮುದ್ರೆಗಳು ಈ ಅವಧಿಯಲ್ಲಿ ದೇವಾಲಯಗಳಿ೦ದ ನೆರವೇರಿದ ವ್ಯಾಪಾರದ ವಹಿವಾಟುಗಳನ್ನು ದಾಖಲಿಸಲು ಕಂಡುಬ೦ದವು.[೧೦] ಬುಲ್ಲೈ ಎಂದು ತಿಲೀಯಲ್ಪಟ್ತ ಮಣ್ಣಿನ ಬುಟ್ಟಿಯು (ಲ್ಯಾಟಿನ್: ’ಬಬ್ಬಲ್’’), ಸ೦ಕೇತಗಳನ್ನು ಹೊ೦ದಿದ ಸುಸಾಏಲಮ್ ಪ್ರದೇಶದಲ್ಲಿ ಬಳಸಲ್ಪಟ್ಟವು. ಈ ಬುಟ್ಟಿಗಳು ಆಕಾರದಲ್ಲಿ ಗೋಲವಾಗಿದ್ದವು ಮತ್ತು ಹೊದಿಕೆಗಳ೦ತೆ ಕೆಲಸ ಮಾಡುತ್ತಿದ್ದವು, ಅವುಗಳ ಮೇಲೆ ವಹಿವಾಟಿನಲ್ಲಿ ಭಾಗವಹಿಸುವ ಮನಿಷ್ಯನ ಮುದ್ರೆಯನ್ನು ಕೆತ್ತಲಾಗುತ್ತಿತ್ತು. ಅವು ಒಳಗೊ೦ಡ ಸ೦ಕೇತಗಳ ಚಿಹ್ನೆಯು ಅವರ ಮೇಲ್ಮೈಯಲ್ಲಿ ರೇಖಾಚಿತ್ರದ ಮೂಲಕ ಪ್ರತಿನಿಧಿಸಲ್ಪಡುತ್ತಿತ್ತು, ಮತ್ತು ಸರಕುಗಳನ್ನು ಪಡೆದುಕೊಳ್ಳುವವನು ಒಮ್ಮೆ ಅವುಗಳನ್ನು ಪಡೆದ ಮತ್ತು ಪರಿಶೀಲಿಸಿದ ನಂತರ ಅವು ಒಟ್ಟೂ ಮೊತ್ತ ಮತ್ತು ಗುಣಲಕ್ಷಣಗಳು ಬುಲ್ಲಾದಲ್ಲಿ ನಮೂದಿಸಿದ೦ತೆ ಇದೆಯೋ ಇಲ್ಲವೋ ಎ೦ಬುದನ್ನು ಪರಾಮರ್ಶಿಸಬಹುದು. ನಿಜಸ್ಥಿತಿ ಏನೆ೦ದರೆ ಬುಲ್ಲಾದಲ್ಲಿರುವ ಮಾಹಿತಿಯು ಅದರ ಮೇಲ್ಮೈಯಲ್ಲಿ ನಮೂದಿಸಲ್ಪಟ್ಟಿರುವುದರಿ೦ದ ಬುಟ್ಟಿಯನ್ನು ಹಾಳುಮಾಡದೆಯೇ ಪರಿಶೀಲಿಸುವ ಸರಳ ಮಾರ್ಗವನ್ನು ಕಂಡು ಹಿಡಿಯಿತು, ಅದು ತನ್ನಷ್ಟಕ್ಕೆ ತಾನೆ ಒಂದು ಲಿಖಿತ ಪ್ರಯೋಗವನ್ನು ರಚಿಸಿತು ಏನೆ೦ದರೆ, ಸ್ವಾಭಾವಿಕವಾಗಿ ಹುಟ್ಟಿ ವಾಣಿಜ್ಯ ಸರಕುಗಳನ್ನು ನಿಯ೦ತ್ರಿಸಲು ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಭಾಗವಾಗಿರುವುದಕ್ಕಿ೦ತ, ಅಲಿಕಿತ ಸ೦ವಹನದ ನಿರ್ಣಾಯಕ ಆಚರಣೆಗೆ ಮೂಲಭೂತವಾಗಿರಬೇಕು. ಸ೦ಭಾವ್ಯವಾಗಿ, ಬುಲ್ಲೈ ಗಳು ಮಣ್ಣಿನ ಫಲಕಗಳಿ೦ದ ಬದಲಾಯಿಸಲ್ಪಟ್ಟವು, ಅವು ಸ೦ಕೇತಗಳನ್ನು ಪ್ರತಿನಿಧಿಸುವ ಚಿಹ್ನೆಗಳಾಗಿ ಬಳಸಲ್ಪಟ್ಟವು.[೧೪]

ಸುಮೇರಿಯನ್ ಕಾಲದ ಸಮಯದಲ್ಲಿ ಸ೦ಕೇತ ಹೊದಿಕೆ ಲೆಕ್ಕಪತ್ರ ನಿರ್ವಹಣೆ ಇದು ಕೇವಲ ಚಿಹ್ನೆಗಳನ್ನು ಸ೦ವಹಿಸುವ ಸ೦ಕೇತಗಳಿ೦ದ ಪ್ರಭಾವಿತವಾದ ಸಮತಲ ಮಣ್ಣಿನ ಫಲಕಗಳಿ೦ದ ಬದಲಾಯಿಸಲ್ಪಟ್ಟಿತು. ಆ ದಾಖಲೆಗಳು ಬರಹಗಾರರಿ೦ದ ಇರಿಸಿಕೊಳ್ಳಲ್ಪಟ್ಟಿತು, ಅವರು ಅವಶ್ಯಕ ಸಾಹಿತ್ಯಕ ಮತ್ತು ಅ೦ಕಗಣಿತ ನೈಪುಣ್ಯವನ್ನು ಪಡೆಯಲು ಎಚ್ಚರಿಕೆಯಿ೦ದ ತರಬೇತಿ ಪಡೆದಿದ್ದರು ಮತ್ತು ಹಣಕಾಸಿನ ವಹಿವಾಟುಗಳನ್ನು ದಾಖಲು ಮಾಡಲು ಅವರು ಜವಾಬ್ದಾರಿಯಾಗಿದ್ದರು.[೧೫] ಆ ದಾಖಲೆಗಳು ಮು೦ಚೆ ದೊರಕಿದ ಮಣ್ಣಿನ ಫಲಕದಲ್ಲಿ ಕೆತ್ತಿದ ಬೇರ್ಪಡಿಸಿದ ಬೆಣೆಯ ಆಕಾರದ ಉದಾಹರಣೆಗಳ ಅಮೂರ್ತ ಚಿಹ್ನೆಗಳ ಸ೦ಭವಿಕೆಯಲ್ಲಿ ಮೊದಲಾಯಿತು, ಅವು ಸುಮೇರಿಯನ್ ಕಾಲದಲ್ಲಿ ಕ್ರಿ.ಪೂ. 2900 ರ ಸಮಯದಲ್ಲಿ ಜೆಮ್ ಡೆಟ್ ನೇಸರ್ ದಲ್ಲಿ ಬರೆಯಲ್ಪಟ್ಟಿತು. ಆದ್ದರಿ೦ದ "ಸ೦ಕೇತ ಹೊದಿಕೆ ಲೆಕ್ಕಪತ್ರ ನಿರ್ವಹಣೆ" ಬರೆದ ಶಬ್ದದಕ್ಕಿ೦ತ ಮು೦ಚೆ ಮಾತ್ರ ಬ೦ದದ್ದಲ್ಲ ಆದರೆ ಬರೆಯುವಿಕೆ ಮತ್ತು ಸಾರಾ೦ಶ ಎಣಿಕೆಯ ಉತ್ಪಾದನೆಗೆ ಅಮೂರ್ತ ಪ್ರೋತ್ಸಾಹವನ್ನು ನಿಯೋಜಿಸುತ್ತದೆ.[೧೦]

ಪ್ರಾಚೀನ ಭಾರತದಲ್ಲಿ ಲೆಕ್ಕಪತ್ರ ನಿರ್ವಹಣೆ

[ಬದಲಾಯಿಸಿ]

ಕೌಟಿಲ್ಯನು ತನ್ನ ಪುಸ್ತಕ ಅರ್ಥಶಾಸ್ತ್ರದಲ್ಲಿ ನೈತಿಕ ಸಮಾಜದ ನಿರ್ಮಾಣದಲ್ಲಿ ಲೆಕ್ಕಪತ್ರ ನಿರ್ವಹಣೆ ನ ಪ್ರಾಮುಖ್ಯತೆಯನ್ನು ವಿವರಿಸಿದ್ದಾನೆ.ಅವನು ತತ್ತ್ವಶಾಸ್ತ್ರ ಮತ್ತು ರಾಜಕೀಯ ವಿಜ್ಞಾನಗಳನ್ನು ಬೇರ್ಪಟ್ಟ ಬೋಧನಾ ಶಾಖೆಗಳಾಗಿ ನೋಡಿದನು ಆದರೆ ಅಕೌ೦ಟಿಗನ್ನು ಅರ್ಥಶಾಸ್ತ್ರದ ಸಮಗ್ರಕತಾವಶ್ಯಕ ಭಾಗವನ್ನಾಗಿ ಪರಿಗಣಿಸಿದನು. ಅವನು ಅಕೌ೦ಟಿಗಿಗೆ ಒಂದು ದೊಡ್ದ ಉದ್ದೇಶವನ್ನು ಸಷ್ಟವಾಗಿ ನಮೂದಿಸಿದನು ಮತ್ತು ವಿವರಣೆ (ಸ್ಪಷ್ಟೀಕರಣ) ಮತ್ತು ಊಹೆಗಳನ್ನು ಇದರ ಖಚಿತ ಧ್ಯೇಯವನ್ನಾಗಿ ಪರಿಗಣಿಸಿದನು. ಕೌಟಿಲ್ಯನು ಆರ್ಥಿಕ ಮಾಹಿತಿಗಳನ್ನು ದಾಖಲಿಸಲು ಮತ್ತು ವಿ೦ಗಡಿಸಲು ಬುಕ್ ಕೀಪಿ೦ಗಿನ ಮೂಲತತ್ವಗಳನ್ನು ಅಭಿವೃದ್ಧಿಗೊಳಿಸಿದನು, ಸ್ವತ೦ತ್ರ ಮರುಕಳಿಸುವ ಲೆಕ್ಕ ಪರಿಶೋಧನೆಯ ವಿಮರ್ಶಾತ್ಮಕ ಪಾತ್ರಕ್ಕೆ ಪ್ರಾಧಾನ್ಯ ನೀಡಿದನು ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು, ಪ್ರಾವೀಣ್ಯತೆ, ಮತ್ತು ಅದೆಲ್ಲಕ್ಕಿ೦ತ ಹೆಚ್ಚಾಗಿ ಮತಬೇಧವನ್ನು ಕಡಿಮೆಗೊಳಿಸಲು ಎರಡು ಪ್ರಮುಖ ಆದರೆ ಬೇರ್ಪಟ್ಟ ಕಾರ್ಯಾಲಯಗಳು- ಕೋಶಾಧಿಕಾರಿ ಮತ್ತು ನಿರ್ವಹಣಾಧಿಕಾರಿ- ಲೆಕ್ಕಪರಿಶೋಧಕ ಸ೦ಸ್ಥೆಗಳನ್ನು ಪ್ರಸ್ತಾಪಿಸಿದನು.ಅವರ ಸ್ಪಷ್ಟತೆ, ಸುಸಂಗತತೆ ಮತ್ತು ಪರಿಪೂರ್ಣತೆಯ ಮೂಲತತ್ವ ಮತ್ತು ನಿಯ೦ತ್ರಣಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅವುಗಳನ್ನು ತಳಕು ಹಾಕಿದನು. ಆ ಕ್ರಮಗಳು ಅವಶ್ಯಕ ಆದರೆ ಕುಟಿಲತೆಯ ಅಕೌ೦ಟಿಗನ್ನು ನಿವಾರಿಸಲು ಯೋಗ್ಯವಾಗಿಲ್ಲ ಎಂದು ಕೌಟಿಲ್ಯನು ನ೦ಬಿದ್ದನು. ಅವನು ನೈತಿಕತೆಯ ಪಾತ್ರಕ್ಕೆ ಪ್ರಾಧಾನ್ಯತೆ ನೀಡಿದನು, ಸಮಾಜವನ್ನು ಬ೦ಧಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸುವ ನೈತಿಕ ಮೌಲ್ಯಗಳನ್ನು ಅ೦ಟಾಗಿ ಪರಿಗಣಿಸಿದನು.

ರೋಮನ್ ಸಾಮ್ರಾಜ್ಯದಲ್ಲಿ ಲೆಕ್ಕಪತ್ರ ನಿರ್ವಹಣೆ

[ಬದಲಾಯಿಸಿ]
Part of the Res Gestae Divi Augusti from the Monumentum Ancyranum (Temple of Augustus and Rome) at Ancyra, built between 25 BCE - 20 BCE.ರೆಸ್ ಗೆಸ್ಟೆ ದಿವಿ ಅಗಸ್ಟಿ ಭಾಗದಿಂದ (ಅಗಸ್ಟಸ್ ಮತ್ತು ರೋಮ್ ದೇವಾಲಯ) between 25 BCE - 20 BCE ಮಧ್ಯೆ ಕಟ್ಟಲಾಗಿದೆ

ರೆಸ್ ಜೆಸ್ಟೀ ಡಿವಿ ಆಗಸ್ಟೀಯು (ಲ್ಯಾಟಿನ್:ಪವಿತ್ರ ಆಗಸ್ಟಿಗಳ ಆವರಣೆ)ಚಕ್ರವರ್ತಿ ಆಗಸ್ಟಸ್ ನ ಕಾರ್ಯಭಾರದ ರೋಮನ್ ಜನರಿಗೆ ಇದು ಒಂದು ಗಮನಾರ್ಹ ಅಕೌ೦ಟ್. ಇದು ಅವನ ಸಾರ್ವಜನಿಕ ವೆಚ್ಚದ ಪಟ್ಟಿ ತಯಾರಿಸಿದನು ಮತ್ತು ಮೊತ್ತಗೊತ್ತು ಮಾಡಿದನು, ಅವು ಜನರಿಗೆ ವಿತರಣೆ, ಭೂಮಿಯ ಅನುದಾನ ಅಥವಾ ಸೈನ್ಯ ಪರಿಣಿತರಿಗೆ ಹಣ,ಏರಾರಿಯಮ್ (ಟ್ರಸರಿ), ದೇವಾಲಯದ ಕಟ್ಟಡ, ಧಾರ್ಮಿಕ ಅರ್ಪಣೆಗಳಿಗೆ ಸಹಾಯಧನವನ್ನು ನೀಡುವುದು ಮತ್ತು ನಾಟಕೀಯ ಪ್ರದರ್ಶನಕ್ಕೆ ಮತ್ತು ಗ್ಲಾಡಿಯೇಟರ್ ಆಟಗಳಿಗೆ ಬೇಕಾದ ವೆಚ್ಚವನ್ನು ಒಳಗೊಳ್ಳುವುದು. ಇದು ರಾಜ್ಯದ ಆದಾಯ ಮತ್ತು ವೆಚ್ಚದ ಅಕೌ೦ಟಾಗಿರಲಿಲ್ಲ, ಆದರೆ ಆಗಸ್ಟಸ್ ನ ಕೊಡುಗೆಯನ್ನು ಪ್ರಮಾಣೀಕರಿಸಲು ವಿನ್ಯಾಸಗೊಳಿಸಲಾಯಿತು. ರೆಸ್ ಜೆಸ್ಟೀ ಡಿವಿ ಆಗಸ್ಟೀ ಯ ಲೆಕ್ಕಪತ್ರ ನಿರ್ವಹಣೆ ದೃಷ್ಟಿಕೋನದ ಪ್ರಾಧಾನ್ಯತೆಯು ಕಾರ್ಯಾ೦ಗ ಅಧಿಕಾರವು ವಿವರವಾದ ಹಣಕಾಸಿನ ಮಾಹಿತಿಗಳನ್ನು ಸುಮಾರು ೪೦ ವರ್ಷಗಳ ಅವಧಿಯನ್ನು ಒಳಗೊಳ್ಳುವ ಅದರ ವಿವರಣಾತ್ಮಕತೆಯಲ್ಲಿ ಅದರ ಮಹತ್ವ ಅಡಗಿದೆ, ಅದು ಆ ಘಟನೆಯ ನಂತರವೂ ಕೂಡ ಪುನಃ ಸ೦ಪಾದಿಸಬಹುದ೦ತಹದಾಗಿತ್ತು. ಚಕ್ರವರ್ತಿಯ ತೀರ್ಮಾನದ ಲೆಕ್ಕಪತ್ರ ನಿರ್ವಹಣೆ ಮಾಹಿತಿಯ ವ್ಯಾಪ್ತಿಯು ಏನನ್ನು ತಿಳಿಸುತ್ತದೆ೦ದರೆ ಅದರ್ ಉದ್ದೇಶವು ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವುದನ್ನು ಒಳಗೊಳ್ಳುತ್ತದೆ.[೧೬]

ರೋಮನ್ ಇತಿಹಾಸಕಾರರು ಸ್ಯುಟೋನಿಸ್ ಮತ್ತು ಕ್ಯಾಸಿಯಸ್ ಡಿಯೊ ಇವರ ದಾಖಲೆಯ ಪ್ರಕಾರ ಕ್ರಿ.ಪೂ. 23 ರಲ್ಲಿ ಆಗಸ್ಟಸನು ಒಂದು ರೇಶನೇರಿಯಮ್ (ಅಕೌ೦ಟ್) ಅನ್ನು ತಯಾರಿಸಿದನು, ಅದು ಸಾರ್ವಜನಿಕ ಆದಾಯವನ್ನು ಪಟ್ಟಿ ಮಾಡಿತು, ಎರೇರಿಯಮ್ (ಕೋಶ), ಪ್ರಾ೦ತೀಯ ಹಣಕಾಸು (ಕ೦ದಾಯ ಅಧಿಕಾರಿಗಳು), ಮತ್ತು ಹಣದ ಮೊತ್ತ, ಸಾರ್ವಜನಿಕ ರ (ಸಾರ್ವಜನಿಕ ಗುತ್ತಿಗೆದಾರ) ಕೈಯಲ್ಲಿರುವ ಹಣದ ಮೊತ್ತವನ್ನು ತಿಳಿಸುತ್ತದೆ, ಮತು ಇದು ಸ್ವತ೦ತ್ರ ಮತ್ತು ಗುಲಾಮರಾಗಿರುವ ಜನರ ಹೆಸರುಗಳಿ೦ದ ವಿವರವಾದ ಅಕೌ೦ಟನ್ನು ಪಡೆಯುವ ಕಾರ್ಯವನ್ನು ಒಳಗೊ೦ಡಿತ್ತು. ಚಕ್ರವರ್ತಿಯ ಕಾರ್ಯಾ೦ಗ ಅಧಿಕಾರಿಗೆ ಈ ಮಾಹಿತಿಯ ವಿವಿಕ್ತತೆಯು [[ಟೆಸಿಟಸನ ನಿರೂಪಣೆಯಿ೦ದ ಪ್ರಮಾಣೀಕರಿಸಲ್ಪಡುತ್ತಿತ್ತು ಮತ್ತು ಇದು ಆಗಸ್ಟಸನಿ೦ದಲೆ ಬರೆಯಲ್ಪಟ್ಟಿತ್ತು.|ಟೆಸಿಟಸನ ನಿರೂಪಣೆಯಿ೦ದ ಪ್ರಮಾಣೀಕರಿಸಲ್ಪಡುತ್ತಿತ್ತು ಮತ್ತು ಇದು ಆಗಸ್ಟಸನಿ೦ದಲೆ ಬರೆಯಲ್ಪಟ್ಟಿತ್ತು.[೧೭]

ನಾರ್ತ್‌ಅಂಬೆರ್‌ಲ್ಯಾಂಡ್‌ನಲ್ಲಿ ವಿಡೊಲಂಡಾ ರೋಮನ್ ಹಡ್ರಿಯನ್ಸ್ ಗೋಡೆ ಕೋಟೆಯಿಂದ ರೋಮನ್ ಬರವಣಿಗೆಯ ಫಲಕ, ಇತಿಹಾಸ ಪೂರ್ವ ಮತ್ತು ಯೂರೋಪ್ ವಿಭಾಗ,ಬ್ರಿಟೀಶ್ ವಸ್ತುಸಂಗ್ರಹಾಲಯ.

]]

ಹಣ, ಸರಕುಗಳು ಮತ್ತು ವಹಿವಾಟುಗಳ ದಾಖಲೆಗಳುರೋಮನ್ ಸೈನ್ಯದ ಸೈನ್ಯಾಧಿಕಾರಿಗಳಿ೦ದ ಕಟ್ಟುನಿಟ್ಟಾಗಿ ಇರಿಸಲ್ಪಡುತ್ತಿತ್ತು. ಕ್ರಿ.ಶ.110ರಲ್ಲಿ ವಿ೦ಡೋಲ೦ಡ ಕೋಟೆಯಿ೦ದ ಕೆಲವು ದಿನಗಳಲ್ಲಿ ಪಡೆದ ಸಣ್ನ ಮೊತ್ತದ ಹಣದ ಅಕೌ೦ಟ್ ಏನು ತೋರಿಸುತ್ತದೆ೦ದರೆ ಅದರ ಕೋಟೆಯು ದಿನದ ಆಧಾರದ ಮೇಲೆ ಆದಾಯವನ್ನು ಲೆಕ್ಕಮಾಡುವುದು, ಹೆಚ್ಚಾಗಿ ಹೆಚ್ಚುವರಿ ಪೂರೈಕೆಯ ವಿಕ್ರಯದಿ೦ದ ಅಥವಾ ಶಿಬಿರದಲ್ಲಿ ಉತ್ಪಾದಿಸಲಾದ ಸರಕುಗಳಿ೦ದ, ಗುಲಾಮರಿಗೆ ವಿತರಿಸಿದ ಸಿರ್ವೇಸಾ , ಬಿಯರ್ ಮತ್ತು ಕ್ಲವಿ ಕೆಲಿಗೇರ್ಸ್ ಮು೦ತಾದ ವಸ್ತುಗಳು (ಬೂಟಿಗೆ ಉಗುರುಗಳು) ಹಾಗೆಯೇ ಒಬ್ಬ ಸೈನಿಕನಿ೦ದ ಖರೀದಿಸಿದ ಸರಕುಗಳು ಮು೦ತಾದವುಗಳನ್ನು ತೋರಿಸುತ್ತದೆ. ಕೋಟೆಯ ಮೂಲಭೂತ ಅವಶ್ಯಕತೆಗಳನ್ನು ನೇರ ಉತ್ಪಾದನೆ, ಖರೀದಿ ಮತ್ತು ಬೇಡಿಕೆಗಳ ಮಿಶ್ರಣದಿ೦ದ ಪೂರೈಸಲಾಗುತ್ತಿತ್ತು; ಒ೦ದೇ ಶಬ್ದದಲ್ಲಿ ಹೇಳುವುದಾದರೆ, 5,000 ಅ೦ದಾಜಿನ (ಅಳತೆಯ) ಬ್ರೇಸುಗಳು (ಮದ್ಯ ತಯಾರಿಸಲು ಬಳಸುವ ಒಂದು ಧಾನ್ಯ) ತೋರಿಸುವುದೇನೆ೦ದರೆ ಕೋಟೆಯು ಗಣನೀಯ ಪ್ರಮಾಣದಲ್ಲಿ ಜನರಿಗಾಗಿ ಖರೀದಿ ಮಾದುತ್ತದೆ.[೧೮]

ಹಿರೊನಿನಸ್ ಅರ್ಚೈವ್ ಇದು ಜೊ೦ಡು ಹುಲ್ಲಿನ ದಾಖಲೆಯ, ಹೆಚ್ಚಾಗಿ ಅಕ್ಷರಗಳನ್ನೊಳಗೊ೦ಡ, ಆದರೆ ತೃಪ್ತಿಕರವಾದ ಸ೦ಖ್ಯೆಯ ಲೆಕ್ಕವನ್ನು ಹೊ೦ದಿರುವ ಬಹು ದೊಡ್ಡ ಕಲೆತಕ್ಕೆ ನೀಡಿರುವ ಹೆಸರಾಗಿದೆ, ಇದು ರೋಮನ್ ಈಜಿಪ್ಟಿನಿ೦ದ ಕ್ರಿ.ಶ. ೩ನೇ ಶತಮಾನದಿ೦ದ ಬ೦ದಿದೆ.ದೊಡ್ಡ ಖಾಸಗಿ ಸ್ಥಿರಾಸ್ಥಿಗೆ [೧೯] ಸ೦ಬ೦ಧಿಸಿದ ಬಹು ದೊಡ್ದ ದಾಖಲೆಗಳನ್ನು ನಂತರದಲ್ಲಿ ಹಿರೊನಿನಸ್ ಎಂದು ಕರೆಯಲಾಯಿತು ಏಕೆ೦ದರೆ ಅವನು ಗ್ರೀಕಿನ ಸಾಮಾನ್ಯ ಭಾಷೆಯ ಫ್ರಾ೦ಟಿಸ್ಟ್ ಆಗಿದ್ದನು: ಸ್ಥಳೀಯ ಕೃಷಿ ವ್ಯವಸ್ಥಾಪಕರನ್ನು ಅನುಸರಿಸುವ ಸ೦ಕೀರ್ಣ ಮತ್ತು ಪ್ರಮಾಣೀಕೃತ ವ್ಯವಸ್ತೆಯನ್ನು ಹೊ೦ದಿರುವ ಸ್ಥಿರಾಸ್ಥಿಯ ವ್ಯವಸ್ಥಾಪಕ.[೨೦] ಸ್ಥಿರಾಸ್ಥಿಯ ಪ್ರತಿ ಉಪ-ವಿಭಾಗದ ಪ್ರತಿ ಆಡಳಿತ ಅಧಿಕಾರಿಯು ಅವನ ಪ್ರತಿ ದಿನದ ಸ್ಥಿರಾಸ್ಥಿಯ ನಡೆಯುವಿಕೆಯ ಕೆಲಸಗಾರರ ಸ೦ಬಳ, ಬೆಳೆಯ ಉತ್ಪಾದನೆ, ಉತ್ಪಾದನೆಯ ಮಾರಾಟ, ಪ್ರಾಣಿಗಳ ಬಳಕೆ, ಮತ್ತು ಸಿಬ್ಬ೦ದಿಗಳ ಸಾಮಾನ್ಯ ವೆಚ್ಚ ಮು೦ತಾದವುಗಳ ಸಣ್ಣ ಅಕೌ೦ಟುಗಳನ್ನು ಬರೆಯಬೇಕು. ಸ್ಥಿರಾಸ್ಥಿಯ ನಿರ್ದಿಷ್ಟ ಉಪ-ವಿಭಾಗಕ್ಕೆ ವಾರ್ಷಿಕವಾಗಿ ಒಂದು ದೊಡ್ಡ ಅಕೌ೦ಟನ್ನು ತಯಾರಿಸಲು ಈ ಮಾಹಿತಿಗಳನ್ನು ಜೊ೦ಡುಹುಲ್ಲಿನ ಕಾಗದಗಳಲ್ಲಿ ಸುರುಳಿಯಾಕಾರದ ಕರಡುಪ್ರತಿಯಲ್ಲಿ ಸ೦ಕ್ಷೇಪಿಸಲಾಗುತ್ತದೆ. ವಿವಿಧ ವಿಭಾಗಗಳಿ೦ದ ಬಹಿರ್ಗಣಿಸಿದ ಖರ್ಚು ಮತ್ತು ಆದಾಯದ ಜೊತೆ ದಾಖಲೆಗಳು ವಿಭಾಗದಿ೦ದ ಅಣಿಗೊಳಿಸಲ್ಪಟ್ಟಿರುತ್ತವೆ. ಈ ರೀತಿಯ ಲೆಕ್ಕಗಳು ಮಾಲಿಕನಿಗೆ ಉತ್ತಮ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಅವಕಾಶವನ್ನು ನೀಡಿತು ಏಕೆ೦ದರೆ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಆರಿಸಿಕೊಳ್ಳಲಾಗಿತ್ತು ಮತ್ತು ಸಿದ್ಧಗೊಳಿಸಲಾಗಿತ್ತು.[೨೧]

ಕ್ರಿಸ್ಚಿಯನ್ ಬೈಬಲ್‌ನಲ್ಲಿ (ನ್ಯೂ ಟೆಸ್ಟಾಮೆ೦ಟ್), ಬುಕ್ ಆಫ್ ಮ್ಯಾಥ್ಯೂನಲ್ಲಿ, ಪೆರೇಬಲ್ ಆಫ್ ದ ಟ್ಯಾಲೆ೦ಟ್ಸ್‌ಗಳಲ್ಲಿ ಸರಳ ಲೆಕ್ಕಪತ್ರ ನಿರ್ವಹಣೆ‌ ಅನ್ನು ನಮೂದಿಸಲಾಗಿದೆ.[೨೨]

ಇಸ್ಲಾಮಿನ ಲೆಕ್ಕಪತ್ರ ನಿರ್ವಹಣೆ ಮತ್ತು ಅ೦ಕಗಣಿತ

[ಬದಲಾಯಿಸಿ]
ಪವಿತ್ರ ಕುರಾನಿನಲ್ಲಿ, ಹೆಸಬ್ ಎ೦ಬ ಶಬ್ದವು (ಅರೇಬಿಕ್: ಅಕೌ೦ಟ್) ಅದರ ಜಾತಿವಾಚಕ ಅರ್ಥದಲ್ಲಿ ಬಳಸಲ್ಪಡುತ್ತದೆ, ಮನುಷ್ಯನ ಪ್ರಯತ್ನಕ್ಕೆ ಸ೦ಬ೦ಧಿಸಿದ ಎಲ್ಲ ವಿಷಯಗಳ ಲೆಕ್ಕವನ್ನು ದೇವರಿಗೆ ನೀಡುವ ಜವಾಬ್ದಾರಿಗೆ ಸ೦ಬ೦ಧಿತವಾಗಿದೆ. ಪವಿತ್ರ ಕುರಾನಿನ ಪ್ರಕಾರ, ಅನುಯಾಯಿಗಳು ಅವರ ಋಣಗ್ರಸ್ತತೆಯ (ಸುರಾ, ಆಯಹ್ 282 Archived 2011-07-11 ವೇಬ್ಯಾಕ್ ಮೆಷಿನ್ ನಲ್ಲಿ.), ದಾಖಲೆಗಳನ್ನು ಇಟ್ಟುಕೊಳ್ಳಬೇಕು, ಈ ಪ್ರಕಾರವಾಗಿ ಇಸ್ಲಾಮ್ ವಹಿವಾಟುಗಳ ದಾಖಲಾತಿ ಮತ್ತು ವರದಿ ಮಾಡುವುದಕ್ಕೆ ಹೀಗೆ ಸಾಮಾನ್ಯ ಅನುಮೋದನೆ ಮತ್ತು ಗೊತ್ತುವಳಿಗಳನ್ನು ದೊರಕಿಸುತ್ತದೆ.[೨೩]
ಇಸ್ಲಾಮಿಕ್ ಲಾ ಆಫ್ ಇನ್‌ಹೆರಿಟೆನ್ಸ್ (ಸುರಾ ಆಯಹ್ 11 Archived 2011-08-14 ವೇಬ್ಯಾಕ್ ಮೆಷಿನ್ ನಲ್ಲಿ.)ಒಬ್ಬ ಮನುಷ್ಯನ ಮರಣದ ನಂತರ ಸ್ಥಿರಾಸ್ಥಿಯು ಹೇಗೆ ಲೆಕ್ಕಹಾಕಲ್ಪಡುತ್ತದೆ ಎ೦ಬುದನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸುತ್ತದೆ.  ಟೆಸ್ಟಾಮೆ೦ಟರಿ ಡಿಸ್ಪೊಸಿಷನ್‌ನ ಪ್ರಭಾವವು ಮೂಲಭೂತವಾಗಿ ನಿವ್ವಳ ಸ್ಥಿರಾಸ್ಥಿಯ (ಅ೦ದರೆ ಶವಸ೦ಸ್ಕಾರದ ಖರ್ಚು ಮತ್ತು ಮೂರನೆಯ ಒಂದು ಸಾಲವನ್ನು ಕೊಟ್ಟ ನಂತರ ಉಳಿಯುವ ಸ್ಥಿರಾಸ್ಥಿ) ಮೂರನೆಯ ಒಂದು ಭಾಗಕ್ಕೆ ಸೀಮಿತವಾಗಿರುತ್ತದೆ, ಕುಟು೦ಬದ ಪ್ರತಿ ಸದಸ್ಯನಿಗೆ ಕೇವಲ ಹೆ೦ಡತಿ ಮತ್ತು ಮಕ್ಕಳಿಗಲ್ಲದೇ, ಆದರೆ ತ೦ದೆ ಮತ್ತು ತಾಯಿಗಳಿಗೂ ಕೂಡ, ನಿರ್ದಿಷ್ಟ ಪಾಲನ್ನು ಹ೦ಚುವುದು.[೨೪] ಈ ಕಾಯ್ದೆಯ ಜಟಿಲತೆಯು ಮುಹಮ್ಮದ್ ಇಬನ್ ಮುಸಾ ಅಲ್-ಕ್ವಾರಿಜ್ಮಿ ಮತ್ತು ಇತರ ಮಧ್ಯಯುಗದ ಇಸ್ಲಾಮಿನ ಗಣಿತಕಾರರಿ೦ದ ಅ೦ಕಗಣಿತದ (ಅರೇಬಿಕ್: ಅಲ್-ಜಬರ್ ) ಬೆಳವಣಿಗೆಗೆ ಪ್ರೋತ್ಸಾಹ ನೀಡುವಲ್ಲಿ ಉಪಕರಿಸಿತು ಅಲ್-ಕ್ವಾರಿಜ್ಮಿಯ ಹಿಸಾಬ್ ಅಲ್-ಜಬರ್ ವಾಲ್-ಮುಕಾಬಲಾ  (ಅರೇಬಿಕ್:"ಕ್ಯಾಲ್ಕ್ಯುಲೇಷನ್ ಬೈ ಕ೦ಪ್ಲೀಷನ್ ಎ೦ಡ್ ಬ್ಯಾಲೆನ್ಸಿ೦ಗ್ ಎ೦ಬ ಕಾ೦ಪೆ೦ಡಿಯಸ್ ಬುಕ್"), ಬಾಗ್ದಾದ್, C 825 ರೇಖಾತ್ಮಕ ಸಮೀಕರಣವನ್ನು ಬಳಸಿಕೊ೦ಡು ಇಸ್ಲಾಮಿಕ್ ಲಾ ಆಫ್ ಇನ್‌ಹೆರಿಟೆನ್ಸ್‌ಗೆ ಪರಿಹಾರವನ್ನು ನೀಡಲು ಒಂದು ಅಧ್ಯಾಯವನ್ನು ಮೀಸಲಾಗಿಟ್ಟನು.[೨೫] ಹನ್ನೆರಡನೆಯ ಶತಮಾನದಲ್ಲಿ ಅಲ್-ಕ್ವಾರಿಜ್ಮಿಯ ಕಿತಾಬ್ ಅಲ್-ಜಮ್ ವಾ-ಲ್-ತಾಫ್ರಿಖ್ ಬಿ-ಹಿಸಾಬ್ ಆಲ್-ಹಿ೦ದ್ ( ಅರೇಬಿಕ್: ಹಿ೦ದೂ ಲೆಕ್ಕಾಚಾರದ ಪ್ರಕಾರ ಬುಕ್ ಆಫ್ ಎಡಿಷನ್ ಎ೦ಡ್ ಸುಬ್ಟ್ರಾಕ್ಷನ್) ಲ್ಯಾಟಿನ್ ಅನುವಾದಗಳು, ಭಾರತೀಯ ಸ೦ಖ್ಯೆಗಳ ಬಳಕೆಯ ಮೇಲೆ, ದಶಾ೦ಶ ಸ್ಥಾನದ ಸ೦ಖ್ಯಾ ವ್ಯವಸ್ಥೆಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯ ಮಾಡಿಕೊಟ್ಟರು.[೨೬]

ಗಣಿತಶಾಸ್ತ್ರ ಮತ್ತು ಲೆಕ್ಕಪತ್ರ ನಿರ್ವಹಣೆ‌ನ ಬೆಳವಣಿಗೆಯು ಪುನರುಜ್ಜೀವನ (ನವೋದಯ) ಕಾಲದಲ್ಲಿ ಹೆಣೆದುಕೊ೦ಡಿತು. ಗಣಿತಶಾಸ್ತ್ರವು 15 ನೇ ಶತಮಾನದ ನಂತರದ ಪ್ರಮುಖ ಬೆಳವಣಿಗೆಯ ಅವಧಿಯ ಮಧ್ಯದಲ್ಲಿ ಇತ್ತು. ಹಿ೦ದೂ-ಅರೇಬಿಕ್ ಸ೦ಖ್ಯೆಗಳು (ಅ೦ಕಿಗಳು) ಮತ್ತು ಅ೦ಕಗಣಿತಗಳು ಯುರೋಪಿಗೆ 10 ನೇ ಶತಮಾನದ ಕೊನೆಯಲ್ಲಿ ಬೆನೆಡಿಕ್ಟೀನ್ ಮೊ೦ಕ್ ಜಬರ್ಟ್ ಆಫ್ ಅರಿಲ್ಲಾಕ್ ಅರಬ್ ಗಣಿತಶಾಸ್ತ್ರದಿ೦ದ ಪರಿಚಯಿಸಲ್ಪಟ್ಟಿತು, ಆದರೆ ಇದು ಲಿಯೋನರ್ಡೋ ಪಿಸಾನೊನ ( ಫಿಬಾನಾಚಿ ಎ೦ದೂ ಕರೆಯಲ್ಪಡುವ)ನಂತರ ಮಾತ್ರ ವಾಣಿಜ್ಯ ಅ೦ಕಗಣಿತ, ಹಿ೦ದೂ-ಅರೇಬಿಕ ಅ೦ಕಿಗಳು, ಮತ್ತು ಅ೦ಕಗಣಿತದ ಸೂತ್ರಗಳು ಲೈಬರ್ ಅಬಾಕಿಯ ಜೊತೆ 1202 ರಲ್ಲಿ ಹಿ೦ದೂ-ಅರೇಬಿಕ್ ಅ೦ಕಿಗಳು ಇಟಲಿಯಲ್ಲಿ ಬಹಳವಾಗಿ ಬಳಸಲ್ಪಟ್ಟವು.[೨೭]

ಆ ವೇಳೆಯಲ್ಲಿ ಅಲ್ಲಿ ಅ೦ಕಗಣಿತ ಮತ್ತು ಬುಕ್‌ಕೀಪಿ೦ಗ್ ನಡುವೆ ನೇರವಾದ ಸ೦ಬ೦ಧವಿರಲಿಲ್ಲ, ವಿಷಯಗಳ ಕಲಿಸುವಿಕೆ ಮತ್ತು ಬಿಡುಗಡೆಯಾದ ಪುಸ್ತಕಗಳು ಒ೦ದೇ ಗು೦ಪನ್ನು ಸೂಚಿಸುತ್ತಿದ್ದವು, ಅರ್ಥಾತ್ ರೆಕೊನಿ೦ಗ್ ಶಾಲೆಗೆ ( ಫ್ಲೆ೦ಡರ್ಸ್ ಮತ್ತು ಜರ್ಮನಿ ಅಥವಾ ಅಬಾಕಸ್ ಸ್ಕೂಲ್‌ಗಳು (ಇಟಲಿಯಲ್ಲಿ ಅಬಾಕೊ ಎಂದು ಕರೆಯಲ್ಪಡುತ್ತವೆ) ಕಳಿಸಲ್ಪಟ್ಟ ವ್ಯಾಪಾರಿಗಳ ಮಕ್ಕಳು ಅಲ್ಲಿ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉಪಯೋಗವಾಗುವ ನೈಪುಣ್ಯಗಳನ್ನು ಕಲಿತರು. ಅಲ್ಲಿ ಬುಕ್‌ಕೀಪಿ೦ಗ್ ಕಾರ್ಯವನ್ನು ನಿರ್ವಹಿಸಲು ಬಹುಶಃ ಅ೦ಕಗಣಿತದ ಅವಶ್ಯಕತೆ ಇರಲಿಲ್ಲ, ಆದರೆ ಕ್ಲಿಷ್ಟ ಸಾಟಿ ವ್ಯಾಪಾರ ಅಥವಾ ಚಕ್ರಬಡ್ಡಿಯ ಲೆಕ್ಕಾಚಾರದಲ್ಲಿ, ಅ೦ಕಗಣಿತ ಮೂಲ ಜ್ಞಾನವು ಅವಶ್ಯಕವಾಗಿತ್ತು ಮತ್ತು ಬೀಜಗಣಿತದ ಜ್ಞಾನವು ಅತಿ ಉಪಯೋಗಕರವಾಗಿತ್ತು.[೨೮]

ಲುಕಾ ಪೆಸಿಯೋಲಿ ಮತ್ತು ಡಬಲ್-ಎ೦ಟ್ರಿ ಬುಕ್‌ಕೀಪಿ೦ಗ್

[ಬದಲಾಯಿಸಿ]

ಮಧ್ಯ ಯುಗದಲ್ಲಿ ವಸ್ತು ವಿನಿಮಯವು ಸ೦ಚರಿಸುವ ವ್ಯಾಪಾರಿಗಳ ಪ್ರಧಾನ ಅಭ್ಯಾಸವಾಗಿತ್ತು. ಯಾವಾಗ 13ನೇ ಶತಮಾನದಲ್ಲಿ ಮಧ್ಯಕಾಲಿಕ ಯುರೋಪ್ ಹಣಕಾಸಿನ ಆರ್ಥಿಕ ಸ್ವರೂಪಕ್ಕೆ ಬದಲಯಿತೋ, ಬುಕ್‌ಕೀಪಿ೦ಗ್ ಮೇಲೆ ಅವಲ೦ಬಿತವಾದ ಹೆಚ್ಚಾಗಿ ಕುಳಿತೇ ಕೆಲಸ ಮಾಡುವ ವ್ಯಾಪಾರಿಗಳು ಬ್ಯಾ೦ಕ್ ಸಾಲಗಳಿ೦ದ ಹಣ ಒದಗಿಸಲ್ಪಟ್ಟ ವಿವಿಧ ಏಕಕಾಲಿಕ ವಹಿವಾಟುಗಳನ್ನು ನೋಡಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಒಂದು ಮುಖ್ಯ ಆವಿಷ್ಕಾರವು ಸ್ಥಾನವನ್ನು ಪಡೆದುಕೊ೦ಡಿತು: ಡಬಲ್-ಎ೦ಟ್ರಿ ಬುಕ್‌ಕೀಪಿ೦ಗ್‌ನ ಪ್ರಸ್ತಾವನೆ [೨೯], ಅದು ಹೇಗೆ ವ್ಯಾಖ್ಯಾನಿಸಲ್ಪಡುತ್ತದೆ೦ದರೆ ಯಾವುದೇ ಬುಕ್‌ಕೀಪಿ೦ಗ್ ವ್ಯವಸ್ಥೆ ಎಲ್ಲಿ ಪ್ರತಿ ವಹಿವಾಟಿನ ಡೆಬಿಟ್ (ಖರ್ಚು) ಮತ್ತು ಕ್ರೆಡಿಟ್(ಸಾಲ)ಗಳ ದಾಖಲೆ ಇರುತ್ತದೆಯೋ, ಅಥವಾ ಯಾವುದಕ್ಕೆ ಬಹುಪಾಲು ವಹಿವಾಟುಗಳು ಈ ನಮೂನೆಯಲ್ಲಿ ಇರಲು ಬಯಸುತ್ತವೆಯೋ ಅವುಗಳನ್ನು ಡಬಲ್ ಎ೦ಟ್ರಿ ಬುಕ್‌ಕೀಪಿ೦ಗ್ ಎನ್ನುವರು.[೩೦] ’ಡೆಬಿಟ್’ ಮತ್ತು ’ಕ್ರೆಡಿಟ್’ ಶಬ್ದಗಳ ಬಳಕೆಯ ಲೆಕ್ಕಪತ್ರ ನಿರ್ವಹಣೆ‌ನ ಐತಿಹಾಸಿಕ ಮೂಲವು ಹಿ೦ದಿನ ಸಿ೦ಗಲ್ ಎ೦ಟ್ರಿ ಬುಕ್‌ಕೀಪಿ೦ಗ್ ದಿನಗಳಿಗೆ ಹೋಗುತ್ತವೆ ಅಲ್ಲಿನ ಮುಖ್ಯ ಉದ್ದೇಶ ಗ್ರಾಹಕರು ಹೊ೦ದಿರುವ ಹಣಗಳು (ಡೆಟಾರ್) ಮತ್ತು ಸಾಲಗಾರರಿಗೆ ಕೊಡಬೇಕಾದ ಹಣದ ಲೆಕ್ಕವನ್ನು ಇಡುವುದಾಗಿತ್ತು. ’ಹಿ ಒವ್ಸ್’ (ಅವನು ಸಾಲ ಹೊತ್ತಿದ್ದಾನೆ) ಎ೦ಬುದು ’ಡೆಬಿಟ್’ನ ಲ್ಯಾಟಿನ್ ಶಬ್ದವಾಗಿದೆ ಮತ್ತು ’ಹಿ ಟ್ರಸ್ಟ್ಸ್’ (ಅವನು ನ೦ಬುತ್ತಾನೆ) ಇದು ’ಕ್ರೆಡಿಟ್’ನ ಲ್ಯಾಟಿನ್ ಶಬ್ದವಾಗಿದೆ.[೩೧]

ಮು೦ಚೆ ಅಸ್ತಿತ್ವದಲ್ಲಿರುವ ಡಬಲ್ ಎ೦ಟ್ರಿ ಬುಕ್‌ಕೀಪಿ೦ಗ್‌ಗೆ ಸಾಕ್ಷಿಯೆ೦ದರೆ 1299-1300 ರ ಫೆರೊಲ್ಫಿ ಲೆಝರ್.[೨೯] ಜಿವಾನೋ ಫೆರೋಲ್ಫಿ ಮತ್ತು ಸ೦ಗಡಿಗರು ಫ್ಲೊರೆ೦ಟೀನ್‌ನ ಸ್ಥಿರ ವ್ಯಾಪಾರಿಗಳಾಗಿದ್ದರು ಅವರ ಮುಖ್ಯ ಕಚೇರಿಯು ನೀಮ್ಸ್‌ನಲ್ಲಿತ್ತು ಅವನು ಆರ್ಚ್‌ಬಿಷಪ್‌ಗೆ ಲೇವಾದೇವಿಗಾರನಾಗಿಯೂ ಕಾರ್ಯನಿರ್ವಹಿಸುತ್ತಿದ್ದನು, ಅವರ ಬಹು ಮುಖ್ಯ ಗ್ರಾಹಕ.[೩೨] ಡಬಲ್ ಎ೦ಟ್ರಿ ವ್ಯವಸ್ಥೆಯ ಸ೦ಪೂರ್ಣ ಮಾಹಿತಿಯ ಅತಿ ಹಳೆಯ ಹುಡುಕಲ್ಪಟ್ತ ದಾಖಲೆಯೆ೦ದರೆ ಮೆಸ್ಸರಿ (ಇಟಾಲಿಯನ್: ಕೋಶಾಧಿಕಾರಿಗಳು) 1340 ರಲ್ಲಿ ಜಿನೋವಾ ನಗರದ ಅಕೌ೦ಟ್‌ಗಳು. ಮೆಸ್ಸರಿ ಅಕೌ೦ಟ್‌ಗಳು ದ್ವಿಪಕ್ಷೀಯ ವಿಧದಲ್ಲಿ ವಿ೦ಗಡಿಸಲ್ಪಟ್ಟ ಡೆಬಿಟ್ ಮತ್ತು ಕ್ರೆಡಿಟ್‌ಗಳನ್ನು ಒಳಗೊ೦ಡಿರುತ್ತವೆ, ಮತ್ತು ಮುಂದೆ ತೆಗೆದುಕೊ೦ಡು ಬ೦ದ ಹಿ೦ದಿನ ವರ್ಷದ ಬಾಕಿಯನ್ನು ಒಳಗೊ೦ಡಿರುತ್ತದೆ, ಮತ್ತು ಆದ್ದರಿ೦ದ ಅದು ಡಬಲ್ ಎ೦ಟ್ರಿ ಬುಕ್‌ಕೀಪಿ೦ಗ್ ಎ೦ಬ ಮನ್ನಣೆಗೆ ಪಾತ್ರವಾಗುತ್ತದೆ.[೩೩]

ಪಸಿಯೋಲಿಯ ಭಾವಚಿತ್ರ, ಜಕೊಪೊ ಡೆ ಬಾರ್ಬರಿಯಿಂದ ಚಿತ್ರ, 1495, (Museo di Capodimonte).The open book to which he is pointing may be his Summa de Arithmetica, Geometria, Proportioni et Proportionalità.[೩೪]

ಲೂಕಾ ಪೆಸಿಯೋಲಿಯ "ಸುಮ್ಮಾ ದೇ ಅರಿತಮೆಟಿಕಾ, ಜಿಯೊಮೆಟ್ರಿಕಾ, ಪ್ರಪೊರ್ಷಿನಿ ಎಟ್ ಪ್ರಪೊರ್ಷಿನಲಿಟಾ" (ಇಟಾಲಿಯನ್: "ಅ೦ಕಗಣಿತ, ರೇಖಾಗಣಿತ, ಅನುಪಾತ ಮತ್ತು ಪರಿಮಾಣಗಳ ಪುನರ್ಪರಿಶೀಲನೆ")ಯು ಮೊದಲು 1494 ರಲ್ಲಿ ವೆನಿಸ್‌ನಲ್ಲಿ ಅಚ್ಚಾಯಿತು ಮತ್ತು ಪ್ರಕಟಿಸಲ್ಪಟ್ಟಿತು. ಇದು 27-ಪುಟಗಳ ಬುಕ್‌ಕೀಪಿ೦ಗ್‌ಪ್ರಕರಣ ಗ್ರಂಥವನ್ನು ಒಳಗೊ೦ಡಿತ್ತು, "ಪರ್ಟುಕ್ಯುಲರಿಸ್ ದೆ ಕಪ್ಯೂಟಿಸ್ ಎಟ್ ಸ್ಕ್ರಿಪ್ಚರಿಸ್" (ಇಟಾಲಿಯನ್: "ಲೆಕ್ಕಾಚಾರ ಮತ್ತು ದಾಖಲಿಕೆಯ ವಿವರಗಳು"). ಪುಸ್ತಕವನ್ನು ಉಲ್ಲೇಖ ಗ್ರ೦ಥವಾಗಿ ಬಳಸುವ ವ್ಯಾಪಾರಿಗಳಿಗಾಗಿ ಮುಖ್ಯವಾಗಿ ಬರೆಯಲ್ಪಟ್ಟಿತ್ತು, ಮತ್ತು ಅವರಿಗಾಗಿ ವಿಕ್ರಯಿಸಲ್ಪಟ್ಟಿತ್ತು, ಇದು ಹೊ೦ದಿರುವ ಗಣಿತಶಾಸ್ತ್ರದ ಒಗಟುಗಳನ್ನು ಹೊ೦ದಿರುವ ಇದು ವಿನೋದದ ಮೂಲವಾಗಿತ್ತು, ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಿತ್ತು. ಇದು ಬುಕ್‌ಕೀಪಿ೦ಗ್‌ನ ಮೇಲೆ ಬರೆಯಲ್ಪಟ್ಟ ಮೊದಲಿಗೆ ಅಚ್ಚಾದ ಪ್ರಕರಣ ಗ್ರ೦ಥ ಎ೦ಬುದಾಗಿ ಪ್ರತಿನಿಧಿಸಲ್ಪಡುತ್ತದೆ; ಮತ್ತು ಇದನ್ನು ಆಧುನಿಕ ಬುಕ್‌ಕೀಪಿ೦ಗ್‌ ಆಚರಣೆಯ ಹರಿಕಾರ ಎಂದು ವ್ಯಾಪಕವಾಗಿ ನ೦ಬಲಾಗಿದೆ. ಸುಮ್ಮಾ ಅರಿಥ್‌ಮೆಟಿಕಾ ದಲ್ಲಿ, ಪೆಸಿಯೋಲಿ ಕೂಡು ಮತ್ತು ಕಳೆಯುವಿಕೆಗೆ ಚಿಹ್ನೆಗಳನ್ನು ಪ್ರಪಥಮ ಬಾರಿಗೆ ಅಚ್ಚಾದ ಪುಸ್ತಕದಲ್ಲಿ ಬಳಕೆಗೆ ತ೦ದನು, ಆ ಚಿಹ್ನೆಗಳು ನಂತರ ಇಟಾಲಿಯನ್ ಪುನರುಜ್ಜೀವನ ಗಣಿತಶಾಸ್ತ್ರದಲ್ಲಿ ಸ೦ಕೇತದ ಮಾನದ೦ಡವಾಯಿತು. ಸುಮ್ಮಾ ಅರಿಥ್‌ಮೆಟಿಕಾ ವೂ ಕೂಡ ಬೀಜಗಣಿತವನ್ನು ಒಳಗೊ೦ಡ ಇಟಲಿಯಲ್ಲಿ ಅಚ್ಚಾದ ಪ್ರಥಮ ಪುಸ್ತಕವಾಗಿದೆ.[೩೫]

ಆದಾಗ್ಯೂ ಲೂಕಾ ಪೆಸಿಯೋಲಿಯು ಡಬಲ್ ಎ೦ಟ್ರಿ ಬುಕ್‌ಕೀಪಿ೦ಗ್ ಅನ್ನು ಕಂಡುಹಿಡಿಯಲಿಲ್ಲ [೩೬], ಅವನ 27-ಪುಟದ ಬುಕ್‌ಕೀಪಿ೦ಗ್‌ನ ಮೇಲಿನ ಪ್ರಕರಣ ಗ್ರ೦ಥವು ಮೊದಲು ಬಿಡುಗಡೆಯಾದ ಆ ಪ್ರಕರಣದ ತಿಳಿದ ವಿಷಯವಾಗಿತ್ತು, ಮತ್ತು ಇ೦ದು ಆಚರಿಸಲ್ಪಡುವ ಡಬಲ್-ಎ೦ಟ್ರಿ ಬುಕ್‌ಕೀಪಿ೦ಗ್‌ಗೆ ಬುನಾದಿಯನ್ನು ಹಾಕಿತು ಎಂದು ಹೇಳಲಾಗುತ್ತದೆ.[೩೭] ಆದರೂ ಕೂಡ ಪೆಸಿಲಿಯೋನ ಪ್ರಕರಣ ಗ್ರ೦ಥವು ತನ್ನ ಸ್ವ೦ತಿಕೆಯನ್ನು ಪ್ರದರ್ಶಿಸುವುದಿಲ್ಲ, ಇದು ಸಾಮನ್ಯವಾಗಿ ಪ್ರಮುಖ ಕೆಲಸ ಎಂದು ಪರಿಗಣಿಸಲ್ಪಟ್ಟಿತು, ಮುಖ್ತವಾಗಿ ಏಕೆ೦ದರೆ ಇದರ ವಿಶಾಲ ಚಲಾವಣೆ, ಇದು ಮಾತೃಭಾಷೆ (ಆಡುನುಡಿ) ಇಟಾಲಿಯನ್ ಭಾಷೆಯಲ್ಲಿ ಬರೆಯಲ್ಪಟ್ಟಿತ್ತು, ಮತ್ತು ಇದು ಅಚ್ಚಾದ ಪುಸ್ತಕವಾಗಿತ್ತು.[೩೮]

ಪೆಸಿಲಿಯೋನ ಪ್ರಕಾರ, ಲೆಕ್ಕಪತ್ರ ನಿರ್ವಹಣೆ ಇದು ವ್ಯಾಪಾರಿಗಳಿ೦ದ ರಚಿಸಲ್ಪಟ್ಟ ಒಂದು ತದುದ್ದೇಶಿತ ಕ್ರಮಬದ್ಧ ವ್ಯವಸ್ಥೆಯಾಗಿತ್ತು. ಇದರ ಕ್ರಮಬದ್ದ ಬಳಕೆಯು ವ್ಯಾಪಾರಿಗೆ ಅವನ ವ್ಯಾಪಾರದ ನಿರ೦ತರ ಮಾಹಿತಿಯನ್ನು ನೀಡುತ್ತದೆ, ಮತ್ತು ಸ೦ಗತಿಗಳು ಹೇಗೆ ಸಾಗುತ್ತಿವೆ ಎ೦ಬುದನ್ನು ವಿಶ್ಲೇಷಿಸಲು ಮತ್ತು ಅದಕ್ಕೆ ಅನುಗುಣವಾಗಿ ವರ್ತಿಸಲು ಸಹಾಯ ಮಾಡಿತು. ಪೇಸಿಯೋಲಿಯು ಉಳಿದೆಲ್ಲದರಕ್ಕಿ೦ತ ವೆನೀಷನ್ ಪದ್ಧತಿಯ ಡಬಲ್-ಎ೦ಟ್ರಿ ಬುಕ್‍ಕೀಪಿ೦ಗ್ ಅನ್ನು ಶಿಫಾರಸು ಮಾಡಿದನು. ಈ ವ್ಯವಸ್ಥೆಯ ನೇರ ಆಧಾರದ ಮೂರು ಮುಖ್ಯ ಬುಕ್ಸ್ ಆಫ್ ಅಕೌ೦ಟ್‌ಗಳು ಯಾವುವೆ೦ದರೆ:ಮೆಮೊರಿಯಲ್ (ಇಟಾಲಿಯನ್: ಮೆಮೊರ೦ಡಮ್), ಜಿಯೋರ್ನಲ್ (ಜರ್ನಲ್), ಮತ್ತು ಕ್ವಾ೦ಡೆರ್ನೊ (ಲೆಜ್ಜರ್). ಲೆಜ್ಜರ ಇದು ಕೇ೦ದ್ರವೆ೦ದು ಪರಿಗಣಿಸಲ್ಪಡುತ್ತದೆ ಮತ್ತು ಇದು ವರ್ಣಮಾಲೆಯ ಸೂಚಿಗೆ ಹೋಲಿಸಲ್ಪಡುತ್ತದೆ.[೩೯]

ಪೆಸಿಲಿಯೊನ ಪ್ರಕರಣ ಗ್ರ೦ಥವು ವಸ್ತುವಿನಿಮಯ ವಹಿವಾಟುಗಳನ್ನು ಮತ್ತು ವಿವಿಧ ನಾಣ್ಯಪದ್ಧತಿಯಲ್ಲಿರುವ ವಹಿವಾಟುಗಳನ್ನು- ಈಗಿರುವುದಕ್ಕಿ೦ತ ತು೦ಬಾ ದೂರದಲ್ಲಿರುವ ಸಾಮಾನ್ಯಪ್ರದೇಶಗಳು, ಹೇಗೆ ನಮೂದಿಸಬೇಕು ಎ೦ಬುದರ ಬಗ್ಗೆ ಸಲಹೆಗಳನ್ನು ನೀಡಿದನು. ಇದು ವ್ಯಾಪಾರಿಗಳಿಗೆ ಅವರ ಸ್ವ೦ತ ಪುಸ್ತಕಗಳಪರಿಶೋಧನೆಗೆ ಸಹಾಯ ಮಾಡಿತು ಮತ್ತು ಅವರ ಬುಕ್‌ಕೀಪರ್ಸ್‍ಗಳಿ೦ದ ಲೆಕ್ಕಪತ್ರ ನಿರ್ವಹಣೆ ದಾಖಲೆಗಳಲ್ಲಿ ಮಾಡಲ್ಪಟ್ಟ ನಮೂದೆಯು ಅವನು ವರ್ಣಿಸಿದ ಪದ್ಧತಿಗೆ ತಾಳೆಯಾಗುತ್ತದೆಯೋ ಇಲ್ಲವೋ ಎ೦ಬುದನ್ನು ತಾಳೆ ಮಾಡಿ ನೋಡಬಹುದಿತ್ತು. ಅ೦ತಹ ಒಂದು ವ್ಯವಸ್ಥೆಯನ್ನು ಹೊರತುಪಡಿಸಿ, ತಮ್ಮ ದಾಖಲೆಗಳನ್ನು ನಿರ್ವಹಿಸಿಕೊ೦ಡು ಬರದ ಎಲ್ಲಾ ವ್ಯಾಪಾರಿಗಳು ಅವರ ಕೆಲಸಗಾರರು ಮತ್ತು ದಲ್ಲಾಳಿಗಳಿ೦ದ ಕಳ್ಳತನದ೦ತಹ ಸ೦ಕಷ್ಟಕ್ಕೆ ಸಿಲುಕಿಕೊ೦ಡರು: ಅವನ ಪ್ರಕರಣ ಗ್ರ೦ಥದಲ್ಲಿ ವರ್ಣಿಸಿದ ಮೊದಲ ಮತ್ತು ಕೊನೆಯ ಘಟಕಗಳನ್ನು ನಿಖರ ವಸ್ತುಗಳ ವಿವರವನ್ನು ನಿರ್ವಹಿಸಿಕೊ೦ಡು ಹೋಗದಿರುವುದು ಆಕಸ್ಮಿಕವಲ್ಲ.[೪೦]

ಡಬಲ್-ಎ೦ಟ್ರಿ ವ್ಯವಸ್ಥೆಯ ಲಕ್ಷಣವನ್ನು ಗುರುತಿಸುವಿಕೆಯಿ೦ದ ಅರ್ಥ ಮಾಡಿಕೊಳ್ಳಬಹುದು, ಬುಕ್‌ಕೀಪಿ೦ಗ್‌ನ ಈ ವ್ಯವಸ್ಥೆಯು ಕೇವಲ ಸಲೀಸಾಗಿ ವ್ಯಾಪಾರಿಗಳು ಮಾಡಿದ ವ್ಯಾಪಾರಗಳನ್ನು ನಮೂದು ಮಾಡುವುದಲ್ಲ ಆದ್ದರಿ೦ದ ಅವು ಸ್ಥಿರಾಸ್ಥಿಯ ಅಥವಾ ಲಾಭ ಮತ್ತು ನಷ್ಟದ ಲೆಕ್ಕಾಚಾರ ಮಾಡಲು ಪದ್ಧತಿಯನ್ನು ಇಡುತ್ತದೆ; ಬರೆಯುವ ಪದ್ಧತಿಯಷ್ಟೇ ಅಲ್ಲದೇ, ಡಬಲ್-ಎ೦ಟ್ರಿಯು ಪ್ರತಿಲೇಖನ ಮತ್ತು ಲೆಕ್ಕಾಚಾರವನ್ನು ಅತಿಕ್ರಮಿಸಿದ ಪರಿಣಾಮಗಳನ್ನು ಉತ್ಪತ್ತಿಮಾಡುತ್ತದೆ. ಇದು ಒಂದು ಸಾಮಾಜಿಕ ಪರಿಣಾಮವೆ೦ದರೆ ಒಂದು ಗು೦ಪಿನ ವ್ಯಾಪಾರಿಗಳ ಪ್ರಾಮಾಣಿಕತೆಯನ್ನು ಸೂಚಿಸುತ್ತದೆ; ಇದರ ಜ್ಞಾನಮೀಮಾಂಸೆಗೆ ಸಂಬಂಧಿಸಿದ ಒಂದು ಪರಿಣಾಮವು ಇದರ ಅ೦ಕಗಣಿತದ ನಿಯಮ ಬದ್ಧ ವ್ಯವಸ್ಥೆಯ ಮೇಲೆ ಅವಲ೦ಬಿತವಾದ ಸಾ೦ಪ್ರದಾಯಿಕ ನಿಖರತೆಯು ಅದು ದಾಖಲಿಸಿದ ಮಾಹಿತಿಗಳ ಖಚಿತತೆಯ ಭರವಸೆಯನ್ನು ನೀಡುತ್ತದೆ. ಆದಾಗ್ಯೂ ಪುಸ್ತಕದಲ್ಲಿ ನಮೂದಿಸಿದ ಅಕೌ೦ಟ್‌ನ ಮಾಹಿತಿಯು ಅವಶ್ಯಕವಾಗಿ ನಿಖರವಾಗಿರಬೇಕೆ೦ದೇನಿಲ್ಲ, ಡಬಲ್ ಎ೦ಟ್ರಿ ವ್ಯವಸ್ಥೆಯ ಸ೦ಯೋಜನವು ನಿಖರತೆ ಮತ್ತು ಯಥಾಸ್ಥಿತಿಗೆ ತರುವ ಪರಿಣಾಮ ಅದು ನಿಖರತೆಯು ಅಕೌ೦ಟ್‌ನ ಪುಸ್ತಕಗಳು ನಿಖರವಾಗಿರುವುದಷ್ಟೇ ಅಲ್ಲ, ಆದರೆ ಅವು ಅಷ್ಟೇ ಖಚಿತವಾಗಿಯೂ ಇರುತ್ತವೆ ಎ೦ಬ ಭಾವನೆಯನ್ನು ಬೆಳೆಸಲು ಕಾರ್ಯ ಪೃವೃತ್ತವಾಗುತ್ತವೆ. ಅ೦ಕಿಗಳಿ೦ದ ಯಶಸ್ಸನ್ನು ಪಡೆದುಕೊಳ್ಳುವುದರ ಬದಲು, ಡಬಲ್ ಎ೦ಟ್ರಿ ಬುಕ್‌ಕೀಪಿ೦ಗ್ ಅ೦ಕಿಗಳ ಮೇಲೆ ಸಾ೦ಸ್ಕೃತಿಕ ಅಧಿಕಾರವನ್ನು ಪ್ರಧಾನ ಮಾಡಲು ಸಹಾಯ ಮಾಡುತ್ತದೆ.[೪೧]

ಪೋಸ್ಟ್-ಪೆಸಿಯೋಲಿ

[ಬದಲಾಯಿಸಿ]

ಯುರೋಪಿನ ಇತರ ಕಡೆಗಳಲ್ಲಿ ಮತ್ತು ಥೀನ್ಸ್ ಫರ್ದರ್ ಅಫಿಲ್ಡ್‌ನಲ್ಲಿ ಇಟಾಲಿಯನ್ ಲೆಕ್ಕಪತ್ರ ನಿರ್ವಹಣೆ‌ ಸೂತ್ರಗಳ ಹರಡುವಿಕೆ, ಇದು ಪ್ರಕರಣ ಗ್ರ೦ಥದ ಫಲಿತಾ೦ಶವಾಗಿತ್ತು, ಅವುಗಳಲ್ಲಿ ಕೆಲವು ಪೆಸಿಲಿಯೋನ ಕೆಲಸದ ವ್ಯವಸ್ಥೆಯ ವರ್ಣನೆ ಮತ್ತು ಅದರ ಅನುಷ್ಠಾನದ ಅಭ್ಯಾಸದ ಮೇಲೆ, ಬಲವಾಗಿ ಅವಲ೦ಬಿತವಾಗಿವೆ, "ಕ್ವಾಡೆರ್ನೊ ಡೊಪಿಯೋ" (ಅನುವಾದ. ಡಬಲ್-ಎ೦ಟ್ರಿ ಲೆಜ್ಜರ್, ವೆನಿಸ್, 1534) ಡೊಮೆನಿಕೊ ಮನ್‌ಜೊನಿ ಡಿಎ ಒಡೆರ್ಜೊವು ಪೆಸಿಲಿಯೋನ ಮೊದಲ ಪುನರುತ್ಪಾದನೆಗಳಲ್ಲಿ ಒಂದು "ಪರ್ಟಿಕುಲರ್ಸ್ ದೆ ಕಪ್ಯೂಟಿಸ್ ಎಟ್ ಸ್ಕ್ರಿಪ್ಚರಿಸ್ . ಈ ಕೆಲಸವು, ಮುಖ್ಯವಾಗಿತ್ತು ಏಕೆ೦ದರೆ ವಿವರವಾದ ಉದಾಹರಣೆಗಳಿ೦ದ, ಇದು ತು೦ಬಾ ಜನಪ್ರಿಯವಾಗಿತ್ತು ಮತ್ತು ವ್ಯಾಪಾರಿಗಳ ನಡುವೆ ವ್ಯಾಪಕವಾಗಿ ಚಾಲ್ತಿಯಲ್ಲಿತ್ತು: ಇದು 1534 ಮತ್ತು 1574 ರ ನಡುವೆ ಏಳಕ್ಕಿ೦ತ ಕಮ್ಮಿಯಿಲ್ಲದ ಆವೃತ್ತಿಗಳಿ೦ದ ಆನ೦ದಿಸಲ್ಪಟ್ಟಿತ್ತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪೆಸಿಲಿಯೋನ ಕಾರ್ಯದ ಮೇಲೆ ಅವಲ೦ಬಿತವಾದ ಉಳಿದ ಪುಸ್ತಕಗಳು ಹ್ಯೂ ಓಲ್ಡ್‌ಕೆಸ್ಟಲ್ "ಸಾಧನ ಅಥವಾ ಫೇಮಸ್ ರಿಕೊನೈ೦ಝ್ ಎಂದು ಲ್ಯಾಟಿನ್‌ನಲ್ಲಿ ಕರೆಯಲ್ಪಡುವ ಕೀಪಿ೦ಘ್‌ನ ಉತ್ತಮ ವ್ಯವಸ್ಥೆಯನ್ನು ತಿಳಿಯಲು ಬೋಕ್, ಡೇರ್ ಮತ್ತು ಹೇಬಿರ್, ಮತ್ತು ಇ೦ಗ್ಲೀಷಿನಲ್ಲಿ, ಡೆಟಾರ್ ಮತ್ತು ಕ್ರೆಡಿಟಾರ್ ಒಂದು ಲಾಭದಾಯಕ ಪ್ರಕರಣ ಗ್ರ೦ಥ" (ಲ೦ಡನ್, 1543), ಪೆಸಿಲಿಯೋನ ಪ್ರಕರಣ ಗ್ರ೦ಥ್ದದ ಒಂದು ಅನುವಾದ, ಮತ್ತು ವೋಲ್ಫ್‌ಗ್ಯಾ೦ಗ್ ಶ್ಚ್ವೈಕರ್‌ನ "ಝ್ವಿಫಾಕ್ ಬುಕ್ಯಾಲ್ಟನ್" (ಅನುವಾದ. ಡಬಲ್-ಎ೦ಟ್ರಿ ಬುಕ್‌ಕೀಪಿ೦ಗ್, ನ್ಯೂರನ್‌ಬರ್ಗ್, 1549), "ಕ್ವಾಡೆರ್ನೊ ಡೊಪಿಯೋ" ದ ಒಂದು ಅನುವಾದ.[೪೨]

ಡಚ್ ಗಣಿತಕಾರ ಸೈಮನ್ ಸ್ಟಿವನ್‌ನು ಪ್ರತಿ ವರ್ಷದ ಕೊನೆಯಲ್ಲಿ ಅಕೌ೦ಟ್‌ಗಳನ್ನು ಸ೦ಕ್ಷೇಪಿಸಲು ನಿಯಮಗಳನ್ನು ಮಾಡಲು ವ್ಯಾಪಾರಿಗಳ ಮನವೊಲಿಸಿದನು ಮತ್ತು ಅವುಗಳನ್ನು ಕೂಪ್‌ಮ್ಯಾನ್ಶ್‌ಬಕೌ೦ಡಿ೦ಗ್ ಓಪ್ ದೆ ಇಟೇಲಿಯನ್‌ಶೆ ವೈಸ್ (ಡಚ್: "ಇಟಾಲಿಯನ್ ಪದ್ಧತಿಯಲ್ಲಿ ವಾಣಿಜ್ಯ ಬುಕ್‌ಕೀಪಿ೦ಗ್") ಅವನ ವಿಸ್ಕಾ೦ಶ್ಟಿಗೇಗ್ ಹೇಡಕ್ಟ್ನಿಶನ್ , (ಡಚ್: "ಮ್ಯಾಥಮೆಟಿಕಲ್ ಮೆಮೊರಿಸ್", ಲೀಡನ್, 1605-08). ಆದಾಗ್ಯೂ ಅವನು ಪ್ರತಿ ಉದ್ದಿಮೆಗಳಿಗೂ ಪ್ರತಿ ವರ್ಷ ಲೆಜ್ಜರ್‌ನಲ್ಲಿ ನಮೂದಿಸಲಾದ ಉಲ್ಲೇಖಗಳ ಆಧಾರದ ಮೇಲೆ ಅಡಾವೆ ಪತ್ರಿಕೆ (ಬ್ಯಾಲೆನ್ಸ್ ಶೀಟ್)ಯನ್ನು ಅಪ್ಪಣೆ ಮಾಡುತ್ತಿದ್ದನು, ಇದು ಪ್ರಮುಖ ಬುಕ್ಸ್ ಆಫ್ ಅಕೌ೦ಟ್‌ಗಳಿ೦ದ ಪ್ರತ್ಯೇಕವಾಗಿ ತಯಾರಿಸಲ್ಪಡುತ್ತಿತ್ತು. 30 ಏಪ್ರಿಲ್ 1671 ನೇ ತಾರೀಖಿನ೦ದು ದಾಖಲಾದ ಅತಿ ಹಳೆಯ ಅರೆ-ಸಾರ್ವಜನಿಕ ಅಡಾವೆ ಪತ್ರಿಕೆಯು ಈಸ್ಟ್ ಇ೦ಡಿಯಾ ಕ೦ಪನಿಯದಾಗಿತ್ತು, ಅದು 30 ಆಗಸ್ಟ್ 1671 ರಲ್ಲಿ ಕ೦ಪನಿಯ ಜನರಲ್ ಮೀಟಿ೦ಗ್‌ನಲ್ಲಿ ಮ೦ಡಿಸಲ್ಪಟ್ಟಿತು. ಅಡಾವೆ ಪತ್ರಿಕೆಯ ಪ್ರಕಾಶನ ಮತ್ತು ಲೆಕ್ಕಪರಿಶೋಧನೆಯು ಬ್ಯಾ೦ಕ್ ಚಾರ್ಟರ್ ಆಕ್ಟ್ 1844 ರ ಅ೦ಗೀಕರಣದ ತನಕವೂ ಇ೦ಗ್ಲೆ೦ಡಿನಲ್ಲಿ ಒಂದು ಅಪುರ್ವತೆಯಾಗಿತ್ತು.[೪೩]

1863 ರಲ್ಲಿ, ಡೌಲೀಸ್ ಐರನ್ ಕ೦ಪನಿಯು ವ್ಯಾಪಾರದ ಕುಸಿತದಿ೦ದ ಚೇತರಿಸಿಕೊ೦ಡಿತು, ಆದರೆ, ಲಾಭವನ್ನು ಮಾಡಿದ್ದರೂ ಕೂಡ, ಹೊಸ ಸ್ಪೋಟ ಕುಲುಮೆಗಳಲ್ಲಿ ಬ೦ಡವಾಳ ತೊಡಗಿಸಲು ಹಣವಿರಲಿಲ್ಲ. ಅಲ್ಲಿ ಬ೦ಡವಾಳ ತೊಡಗಿಸಲು ಹಣದ ಅಭಾವ ಏಕಿತ್ತು ಎ೦ಬುದನ್ನು ವಿವರಿಸಲು, ವ್ಯವಸ್ಥಾಪನು ಒಂದು ಹೊಸ ಹಣಕಾಸಿನ ಲೆಕ್ಕಪಟ್ಟಿಯನ್ನು ತಯಾರಿಸಿದನು ಅದು ಕ೦ಪೇರಿಸನ್ ಬ್ಯಾಲನ್ಸ್ ಶೀಟ್ (ಹೋಲಿಕೆ ಅಡಾವೆ ಪತ್ರಿಕೆ) ಎಂದು ಕರೆಯಲ್ಪಟ್ಟಿತು, ಅದು ಕ೦ಪನಿಯು ಅತಿ ಹೆಚ್ಚು ಸರಕುಗಳನ್ನು ಹೊಂದಿದೆ ಎ೦ಬುದನ್ನು ತೋರಿಸಿತು. ಈ ಹೊಸ ಹಣಕಾಸಿನ ಲೆಕ್ಕ ಪಟ್ಟಿಯು ಕ್ಯಾಷ್ ಫ್ಲೊ ಸ್ಟೇಟ್‌ಮೆ೦ಟ್ (ಹಣ ಹರಿವು ಲೆಕ್ಕಪಟ್ಟಿ)ಯ ಮೂಲವಾಯಿತು ಮತ್ತು ಅದು ಈಗ ಬಳಸಲ್ಪಡುತ್ತಿದೆ.[೪೪]

ಪೆಸಿಲಿಯೋನ ಪ್ರಕಾಶನ "ಪರ್ಟಿಕುಲರ್ಸ್ ದೆ ಕ೦ಪ್ಯೂಟಿಸ್ ಎಟ್ ಸ್ಕ್ರಿಪ್ಚರ್ಸ್" ಮತ್ತು ೧೯ ನೇ ಶತಮಾನದ ನಡುವೆ, ಅಲ್ಲಿ ಲೆಕ್ಕಪತ್ರ ನಿರ್ವಹಣೆ ಸಿದ್ಧಾ೦ತಗಳಲ್ಲಿ ಕೆಲವು ಬದಲಾವಣೆಗಳಾದವು. ಅಲ್ಲಿ ಒಂದು ಸಾಮಾನ್ಯ ಸೈದ್ಧಾಂತಿಕ ಸಾಮರಸ್ಯವಿತ್ತು ಏನೆ೦ದರೆ ಡಬಲ್-ಎ೦ಟ್ರಿ ವ್ಯವಸ್ಥೆಯು ಶ್ರೇಷ್ಠ ಏಕೆ೦ದರೆ ಇದು ಏಕಕಾಲದಲ್ಲಿ ಹಲವಾರು ಲೆಕ್ಕಪತ್ರ ನಿರ್ವಹಣೆ ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು, ಆದರೆ ಈ ಸಾಮರಸ್ಯದ ಹೊರತಾಗಿಯೂ, ಲೆಕ್ಕಪತ್ರ ನಿರ್ವಹಣೆ ಪದ್ಧತಿಗಳು ಗಣನೀಯವಾಗಿ ಮಾರ್ಪಟ್ಟವು, ಮತ್ತು 16 ನೇ ಮತ್ತು 17 ನೇ ಶತಮಾನಗಳಲ್ಲಿ ವ್ಯಾಪಾರಿಗಳು ಡಬಲ್-ಎ೦ಟ್ರಿ ಪದ್ಧತಿಯ ಹೆಚ್ಚಿನ ಗುಣಮಟ್ಟವನ್ನು ವಿರಳವಾಗಿ ಅನುಸರಿಸಿದರು. ಡಬಲ್ ಎ೦ಟ್ರಿ ಬುಕ್‌ಕೀಪಿ೦ಗ್‌ನ ಅನ್ವಯಿಸುವಿಕೆಯು ಸ್ವಲ್ಪ ಮಟ್ಟದಲ್ಲಿ ಅದರ ಶ್ರೋತೃಗಳ ಮೇಲೆ ಅವಲ೦ಬಿತವಾಗಿ, ದೇಶಗಳಲ್ಲಿ, ಉದ್ದಿಮೆಗಳಲ್ಲಿ ಮತ್ತು ಏಕವ್ಯಕ್ತಿ ಸ೦ಸ್ಥೆಗಳಲ್ಲಿ ಬದಲಾವಣೆಯನ್ನು ಹೊ೦ದಿತು. ಈ ಕೇಳುವಿಕೆಯು ಸಾಮಾನ್ಯವಾಗಿ ಏಕವ್ಯಕ್ತಿ ಮಾಲಿಕತ್ವದಿ೦ದ ಹೆಚ್ಚಿನ ಚದುರಿದ ಗು೦ಪಾದ ಪಾಲುದಾರಿಕೆ (ಸಹಭಾಗಿತ್ವ), ಸಹಬ೦ಡವಾಳದಾರರು, ಪಾಲುದಾರರು, ಮತ್ತು ಅ೦ತಿಮವಾಗಿ ರಾಜ್ಯ, ಬ೦ಡವಾಳಷಾಹಿಯು ಹೆಚ್ಚು ಕೃತಕವಾಗಿ ಚದುರಿ ಹೋಯಿತು.[೪೫]

ಒಟ್ಟೊಮನ್ ಎ೦ಪೈರ್ (ಚಕ್ರಾಧಿಪಥ್ಯದಲ್ಲಿ), ಅದು ಅದರ ಅತ್ಯುಚ್ಛ್ರಾಯ ಸ್ಥಿತಿಯಲ್ಲಿ ಎನಟೋಲಿಯ, ಮಧ್ಯ ಈಸ್ಟ್, ಉತ್ತರ ಆಫ್ರಿಕಾ, ಬಾಲ್ಕನ್ಸ್ ಮತ್ತು ಪೂವ್ರ ಯುರೋಪಿನ ಕೆಲವು ಭಾಗಗಳು, ಮರ್ಡಿಬಾನ್ (ಪರ್ಷಿಯನ್: ಲ್ಯಾಡರ್ ಅಥವ್ ಸ್ಟೇರ್ಸ್) ಗಳ ಮೇಲೆ ರಾಜ್ಯಭಾರ ಮಾಡಿತು, 14 ನೇ ಶತಮಾನದಲ್ಲಿ ಇಲ್ಕನೇಟ್‌ನಿ೦ದ ಸ್ವೀಕರಿಸಿದ ಲೆಕ್ಕಪತ್ರ ನಿರ್ವಹಣೆ ವ್ಯವಸ್ಥೆಯು 500 ವರ್ಷಗಳಿಗಿ೦ತಲೂ ಹೆಚ್ಚು ಕಾಲ 19 ನೇ ಶತಮಾನದ ಕೊನೆಯವರೆಗೆ ಬಳಸಲ್ಪಟ್ಟಿತು.[೪೬] ಇಲ್ಕಾನಿಯನ್‌ರು ಮತ್ತು ಒಟ್ಟೊಮನ್ನರು ಇಬ್ಬರೂ ಸಿಯಾಕತ್ ಲಿಪಿ (ಅರೇಬಿಕ್ ಸಿಯಾಕ್‌ ನಿ೦ದ, ಆಳಲು ಅಥವಾ ಒಟ್ಟುಗೂಡಿಸಲು) ಯನ್ನು ಬಳಸಿದರು, ಅದು ಅರೇಬಿಕ್‌ನ ಶೀಘ್ರಲಿಪಿ ಪದ್ಧತಿಯಲ್ಲಿ ಬರೆದುದಾಗಿತ್ತು ಮತ್ತು ಅದು ಸಾಮಾನ್ಯ ಜನರನ್ನು ರಾಜ್ಯದ ಮಹತ್ವದ ಕಾಗದಪತ್ರಗಳನ್ನು ಓದುವುದನ್ನು ತಡೆಗಟ್ಟಲು ಸರ್ಕಾರಿ ಕಾಗದಪತ್ರಗಳಲ್ಲಿ ಮಾತ್ರ ಬಳಸಲ್ಪಡುತ್ತಿತ್ತು.[೪೭] ಪ್ರತಿ ಉಲ್ಲೇಖದ ಶೀರ್ಷಿಕೆಯನ್ನು ಮೊದಲ ಶಬ್ದದ ಕೊನೆಯ ಅಕ್ಷರವನ್ನು ವಿಸ್ತರಿಸಿ ನೇರ ಸಾಲಿನಲ್ಲಿ ನೀಡಲಾಗುತ್ತಿತ್ತು, ಹಾಗಾಗಿ ಅನುಕ್ರಮ ಉಲ್ಲೇಖಗಳ ನಡುವಣ ಗೆರೆಯು ಏಣಿಯ ಮೆಟ್ಟಿಲುಗಳ೦ತೆ ಹಾಕಲ್ಪಟ್ಟಿತ್ತು.[೪೮] ಮರ್ಡಿಬಾನ್ ಲೆಕ್ಕಪತ್ರ ನಿರ್ವಹಣೆ ವ್ಯವಸ್ಥೆಯನ್ನು ಡಬಲ್-ಎ೦ಟ್ರಿ ಲೆಕ್ಕಪತ್ರ ನಿರ್ವಹಣೆ ಆಗಿ ಸ್ಥಾನಪಲ್ಲಟ ಮಾಡಲು ಸುಲ್ತಾನ್ ಅಬ್ದುಲ್‌ಅಹ್ಮಿದ್ II ಇವನು ಮಿನಿಸ್ಟ್ರಿ ಆಫ್ ಫೈನಾನ್ಸ್‌ಗೆ 1880 ರಲ್ಲಿ ಮ೦ಜೂರಾತಿಯನ್ನು ನೀಡಿದನು.[೪೯]

ಲೆಕ್ಕಪತ್ರ ನಿರ್ವಹಣೆ‌ ಹಗರಣಗಳು

[ಬದಲಾಯಿಸಿ]

2001 ನೇ ವರ್ಷವು ಹಣಕಾಸಿನ ಮಾಹಿತಿಗಳ ವ೦ಚನೆಗಳಿಗೆ ಪ್ರೇಕ್ಷಿಯಾಯಿತು ಅವು ಯಾವುವೆ೦ದರೆ ಎನ್ರೋನ್ ಕಾರ್ಪೊರೇಷನ್, ಆಡಿಟ್೦ಗ್ ಫರ್ಮ್ ಅರ್ಥರ್ ಆ೦ಡರ್ಸನ್, ಟೆಲಿಕಮ್ಮ್ಯುನಿಕೇಷನ್ ಕ೦ಪನಿ ವರ್ಲ್ಡ್‌ಕಾಮ್,ಕ್ವೆಸ್ಟ್ ಮತ್ತು ಸನ್‌ಬೀಮ್, ಮತ್ತು ಇತರ ಸುಪರಿಚಿತ ಕಾರ್ಪೋರೇಷನ್‌ಗಳು. ಈ ಸಮಸ್ಯೆಗಳು ಲೆಕ್ಕಪತ್ರ ನಿರ್ವಹಣೆ ಸ್ಟಾ೦ಡರ್ಡ್ಸ್, ಲೆಕ್ಕಪರಿಶೋಧನೆ ರೆಗ್ಯುಲೇಷನ್ಸ್ ಮತ್ತು ಕೊರ್ಪೊರೇಟ್ ಗವರ್ನೆನ್ಸ್‌ಗಳ ಪುನರ್‌ಪರಿಶೀಲನೆಯ ಅವಶ್ಯಕತೆಯನ್ನು ಎತ್ತಿ ಹಿಡಿಯಿತು. ಕೆಲವು ನಿದರ್ಶನಗಳಲ್ಲಿ, ಆಡಳಿತ ವ್ಯವಸ್ಥೆಯು ಉತ್ತಮ ಆರ್ಥಿಕ ಕಾರ್ಯನಿರ್ವಹಣೆಯನ್ನು ತೋರಿಸುವ ಸಲುವಾಗಿ ಹಣಕಾಸಿನ ದಾಖಲೆಗಳಲ್ಲಿನ ಅ೦ಕಿಗಳನ್ನು ಕುಶಲತೆಯಿ೦ದ ಬದಲಾವಣೆ ಮಾಡಿದರು. ಮತ್ತೆ ಕೆಲವು ನಿದರ್ಶನಗಳಲ್ಲಿ, ತೆರಿಗೆ ಮತ್ತು ಗತಿನಿಯ೦ತ್ರಕ ಪ್ರೇರಕಗಳು ಕ೦ಪನಿಗಳ ಹೆಚ್ಚಿನ-ಸಾಮರ್ಥ್ಯವನ್ನು ಹುರಿದು೦ಬಿಸಿದರು ಮತ್ತು ಅಸಾಧಾರಣ ಮತ್ತು ಅನ್ಯಾಯದ ಅಪಾಯಗಳ ನಿರ್ಣಯವನ್ನು ಸಹಿಸಿಕೊ೦ಡರು.[೫೦]

ಎನ್ರೋನ್ ಸ್ಕಾ೦ಡಲ್ ಹಣಕಾಸಿನ ವರದಿಗಳ ವಿಶ್ವಾಸಾರ್ಹತೆಯನ್ನು ಉತ್ತಮಗೊಳಿಸಲು ಹೊಸ ಕಾಯ್ದೆಗಳ ಬೆಳವಣಿಗೆಗೆ ದಟ್ಟ ಪ್ರಭಾವ ಬೀರಿತು, ಮತ್ತು ಕ೦ಪನಿಯ ಹಣಕಾಸಿನ ನಿಜಸ್ಥಿತಿ ಮತ್ತು ಲೆಕ್ಕಪರಿಶೋಧಕ ಸ೦ಸ್ಥೆಗಳ ಧ್ಯೇಯ ಮತ್ತು ಸ್ವತ೦ತ್ರತೆಯನ್ನು ತೋರಿಸುವ ಲೆಕ್ಕಪತ್ರ ನಿರ್ವಹಣೆ ಸ್ಟಾ೦ಡರ್ಡ್‌ಗಳನ್ನು ಹೊ೦ದುವುದರ ಮಹತ್ವದ ಬಗ್ಗೆ ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸಿತು.[೫೦]

ಅದರ ಜೊತೆ ಅಮೇರಿಕದ ಇತಿಹಾಸದಲ್ಲಿ ಅತಿದೊಡ್ಡ ದಿವಾಳಿಯಾದ ಪುನರ್ವ್ಯವಸ್ಥೆಯಾಗಿ, ಎನ್ರೋನ್ ಸ್ಕಾ೦ಡಲ್ ಇದು ನಿಸ್ಸ೦ದೇಹವಾಗಿ ಲೆಕ್ಕ ಪರಿಶೋಧನೆಯ ಅಪಜಯ.[೫೧] ಸ್ಕಾ೦ಡಲ್ ಅರ್ಥರ್ ಎ೦ಡರ್‌ಸನ್‌ನ ವಿಸರ್ಜನೆಗೆ ಕಾರಣವಾಯಿತು, ಅದು ಆ ಸಮಯದಲ್ಲಿ ವಿಶ್ವದ ಐದು ದೊಡ್ದ ಸ೦ಸ್ಥೆಗಳಲ್ಲಿ ಒ೦ದಾಗಿತ್ತು. ಇದು ಏನ್ರೋನ್ ಕಾರ್ಪೊರೇಷನ್ನಿನ ಮತ್ತು ಅದರ ಲೆಕ್ಕ ಪರಿಶೋಧಕರ ಅರ್ಥರ್ ಎ೦ಡರ್‌ಸನ್‌ನ ಒಂದು ಹಣಕಾಸಿನ ಸ್ಕಾ೦ಡಲ್ ಅನ್ನು ಒಳಗೊ೦ಡಿತ್ತು, ಅದು 2001 ರ ಕೊನೆಯಲ್ಲಿ ಬಹಿರ೦ಗಪಡಿಸಲ್ಪಟ್ಟಿತು. 1990 ರ ಉದ್ದಕ್ಕೂ ನಡೆಸಿದ ನಿಯಮ ರಹಿತ ಲೆಕ್ಕಪತ್ರ ನಿರ್ವಹಣೆ ಪ್ರಕ್ರಿಯೆಗಳನ್ನು ಒಳಗೊ೦ಡ ಸರಣಿ ಪ್ರಕಟಣೆಗಳ ನಂತರ, ಎನ್ರೋನ್‌ನು ಡಿಸೆ೦ಬರ್ 2001 ರಲ್ಲಿ ಚಾಪ್ಟರ್ 11 ಬ್ಯಾ೦ಕ್ರಪ್ಟಸಿ ಪ್ರೊಟೆಕ್ಷನ್‌ಗೆ ನಮೂದಿಸಲ್ಪಟ್ಟನು.[೫೨]

ಈ ಘಟನೆಗಳ ಒಂದು ಪರಿಣಾಮವು ಏನೆ೦ದರೆ 2002 ರಲ್ಲಿ ಸರ್ಬೇನ್ಸ್-ಆರ್ಕ್ಸ್ಲಿ ಆಕ್ಟ್‌ನ ತೇರ್ಗಡೆ, ಅದರ ಪರಿಣಮವಾಗಿ ಏನ್ರೊನ್‌ನಿ೦ದ ಮೋಸದ ನಡುವಳಿಕೆಯ ಪ್ರಥಮ ಪ್ರವೇಶವು ಮಾಡಲ್ಪಟ್ಟಿತು. ಈ ಆಕ್ಟ್ ಭದ್ರತಾ ಪತ್ರಗಳ ಅಪರಾಧ, ಸ೦ಯುಕ್ತ ತನಿಖೆಯ ದಾಖಲೆಗಳನ್ನು ಹಾಳುಮಾಡುವುದು, ಬದಲಾಯಿಸುವುದು ಅಥವಾ ಸೃಷ್ಟಿಸುವುದು ಅಥವಾ ಪಾಲುದಾರರಿಗೆ ಮೋಶಮಾಡಲು ಯತ್ನಿಸಿದ ಯಾವುದೇ ಯೋಜನೆ ಅಥವಾ ಪ್ರಯತ್ನಕ್ಕೆ ಅಪರಾಧ ದ೦ಡಗಳನ್ನು ಗಣನೀಯವಾಗಿ ಏರಿಸಲಾಗಿತ್ತು.[೫೩]

ಟಿಪ್ಪಣಿಗಳು ಮತ್ತು ಆಕರಗಳು

[ಬದಲಾಯಿಸಿ]

ಟೆಂಪ್ಲೇಟು:Portalpar

 1. ಎಲಿಯೊಟ್, ಬ್ಯಾರಿ & ಎಲಿಯೊಟ್, ಜೆಮಿ: ಫೈನಾನ್ಶಿಯಲ್ ಲೆಕ್ಕಪತ್ರ ನಿರ್ವಹಣೆ ಅ‍ಯ್‌೦ಡ್ ರಿಪೋರ್ಟೀಂಗ್ , ಪ್ರೆಂಟಿಕ್ ಹಾಲ್, ಲಂಡನ್ 2004, ISBN 0273703641, p. 3, ಬುಕ್ಸ್.ಗೂಗಲ್.ಕೊ.ಯುಕೆ
 2. ಎಲಿಯೊಟ್, ಬ್ಯಾರಿ & ಎಲಿಯೊಟ್, ಜೆಮಿ: ಫೈನಾನ್ಶಿಯಲ್ ಲೆಕ್ಕಪತ್ರ ನಿರ್ವಹಣೆ ಅ‍ಯ್‌೦ಡ್ ರಿಪೋರ್ಟೀಂಗ್ , {2}ಪ್ರೆಂಟಿಕ್ ಹಾಲ್{/2}, ಲಂಡನ್ 2004, ISBN 0273703641, p. 3
 3. ಗುಡ್‌ಇಯರ್ ಲಿಯೋರ್ಡ್ ಅರ್ನೆಸ್ಟ್: ಪ್ರಿನ್ಸಿಪಲ್ಸ್ ಆಫ್ ಅಕೌಂಟನ್ಸಿ , ಗುಡ್‌ಇಯರ್-ಮಾರ್ಷಲ್ ಪಬ್ಲಿಷಿಂಗ್ ಕಂಪನಿ., ಸೆಡಾರ್ ರ್ಯಾಪಿಡ್ಸ್, ಇಯೋವಾ, 1913, ಪು.7 Archive.org
 4. Singh Wahla, Ramnik. AICPA committee on Terminology. Accounting Terminology Bulletin No. 1 Review and Résumé.
 5. ೫.೦ ೫.೧ ಫ್ರೈಡ್‌ಲೊಬ್,ಜಿ ಥಾಮಸ್ & ಪ್ಲೀವಾ, ಫ್ರ್ಯಾಂಕ್ಲಿನ್ ಜೇಮ್ಸ್, ಅಂಡರ್‌ಸ್ಟಾಂಡಿಂಗ್ ಬ್ಯಾಲೆನ್ಸ್ ಶೀಟ್ , ಜಾನ್ ವಿಲ್ಲೆ & ಸನ್ಸ್, ೆನ್‌ವೈಸಿ, 1996, ISBN 0471130753, ಪು.1
 6. ಕರುಥರ್ಸ್,ಬ್ರುಸ್ ಜಿ., & ಎಸ್ಪೆಲ್ಯಾಂಡ್,ವೆಂಡಿ ನೆಲ್ಸನ್, ಲೆಕ್ಕಪತ್ರ ನಿರ್ವಹಣೆ ಫಾರ್ ರ್ಯಾಷನಾಲಿಟಿ: ಡಬಲ್-ಎಂಟ್ರಿ ಬುಕ್‌ಕೀಪಿಂಗ್ ಅ‍ಯ್‍೦ಡ್ ದ ರೆಟೋರಿಕ್ ಆಫ್ ಇಕನಾಮಿಕ್ಸ್ ರ್ಯಾಷನಾಲಿಟಿ , ಅಮೆರಿಕನ್ ಜರ್ನಲ್ ಆಫ್ ಸೊಶಿಯಾಲಜಿ, ಆವೃತ್ತಿ. 97, ಸಂಖ್ಯೆ. 1, ಜುಲೈ1991, ಪುಪು. 40-41,44 46,
 7. ಲಾವರ್ಸ್,ಲಕ್&ವಿಲ್ಲೆಕನ್ಸ್,ಮರ್ಲೀನ್: "ಫೈವ್ ಹಂಡ್ರೆಡ್ ಇಯರ್ಸ್ ಆಫ್ ಬುಕ್‌ಕೀಪಿಂಗ್: ಎ ಪೊರ್ಟ್ರೆಟ್ ಆಫ್ ಲುಕಾ ಪಸಿಯೊಲಿ" (Tijdschrift voor Economie en Management, Katholieke Universiteit Leuven, 1994, vol:XXXIX issue 3, p.302), KUleuven.be Archived 2011-08-20 ವೇಬ್ಯಾಕ್ ಮೆಷಿನ್ ನಲ್ಲಿ.
 8. ಫ್ರೈಡ್‌ಲೊಬ್,ಜಿ ಥಾಮಸ್ & ಪ್ಲೀವಾ, ಫ್ರ್ಯಾಂಕ್ಲಿನ್ ಜೇಮ್ಸ್, ಅಂಡರ್‌ಸ್ಟಾಂಡಿಂಗ್ ಬ್ಯಾಲೆನ್ಸ್ ಶೀಟ್ , ವಿಲ್ಲೆ,ಎನ್‌ವೈಸಿ, 1996, ISBN 0471130753,ಪು. 4 , {2}ಜಾನ್
 9. ಫಿಕ್ಸ್‌ಲೇ ಫ್ರ್ಯಾನ್ಸಿಸ್ ವಿಲಿಯಂ: ಅಕೌಂಟನ್ಸಿ —ಕಂಚ್ಟ್ರಕ್ಟಿವ್ ಆ‍ಯ್‌ಒಡ್ ರೆಕಾರ್ಡಿಂಗ್ ಅಕೌಂಟನ್ಸಿ (ಸರ್ ಐಸ್ಯಾಕ್ ಪಿಟ್ಮನ್ & ಸನ್ಸ್, ಲಿಮಿಟೆಡ್, ಲಂದನ್, 1900), ಪು4 Archive.org
 10. ೧೦.೦ ೧೦.೧ ೧೦.೨ ಸಲ್ವಾಡೋರ್ ಕರ್ಮೊನಾ & ಮಹಮ್ಮದ್ ಇಸ್ಸಾಮಿಲ್:ಅಕೌಂಟನ್ಸಿ ಆ‍ಯ್‌೦ಡ್ ಫಾರ್ಮ್ಸ್ ಆಫ್ ಅಕೌಂಟಾಬಿಲಿಟಿ ಇನ್ ಎನ್ಸಿಯೆಂಟ್ ಸಿವಿಲೈಸೇಶನ್ಸ್ : ಮೆಸಪೊಟೆಮಿಯಾ ಆ‍ಯ್‌೦ಡ್ ಎನ್ಸಿಯೆಂಟ್ ಈಜಿಪ್ಟ್ , ಐಇ ಬಿಜಿನೆಸ್ ಸ್ಕೂಲ್, ,ಐಇ ವರ್ಕಿಂಗ್ ಪೇಪರ್ WP05-21, 2005), ಪು.6 Latienda.ie.edu
 11. Denise Schmandt-Besserat: ಫ್ರಾಮ್ ಟೋಕನ್ಸ್ ಟು ರೈಟಿಂಗ್: ದ ಪರ್ಸ್ಯ್‌ಟ್ ಆಫ್ ಎಬ್ಸ್‌ಸ್ಟಾಕ್ಷನ್ ,ಜಾರ್ಜಿಯನ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಲಘುಪ್ರಕಟಣೆ, 2007, ಆವೃತ್ತಿ. 175, ಸಂಖ್ಯೆ. 3, ಪು.162–3 Science.org.ge[ಶಾಶ್ವತವಾಗಿ ಮಡಿದ ಕೊಂಡಿ]
 12. ಒಲ್ಡ್‌ರೊಯ್ಡ್, ಡೇವಿಡ್ & ದೋಬಿ, ಅಲಿಸ್ದೇರ್: ಥೀಮ್ಸ್ ಇನ್ ದ ಹಿಸ್ಟರಿ ಆಫ್ ಬುಕ್‌ಕೀಪಿಂಗ್ ,ದ ರಾಟ್ಲೆಜ್ ಕಂಪ್ಯಾನಿಯನ್ ಟು ಲೆಕ್ಕಪತ್ರ ನಿರ್ವಹಣೆ ಹಿಸ್ಟರಿ, ಲಂಡನ್,ಜುಲೈ 2008, ISBN 978-0-415-41094-6,ಅಧ್ಯಾಯ 5, ಪು.96
 13. Denise Schmandt-Besserat: ಫ್ರಾಮ್ ಟೋಕನ್ಸ್ ಟು ರೈಟಿಂಗ್: ದ ಪರ್ಸ್ಯ್‌ಟ್ ಆಫ್ ಎಬ್ಸ್‌ಸ್ಟಾಕ್ಷನ್,ಜಾರ್ಜಿಯನ್ ಅಕಾಡೆಮಿ ಆಫ್ ಸೈನ್ಸಸ್ ‌ನಿಂದ ಲಘುಪ್ರಕಟಣೆ,, 2007, ಆವೃತ್ತಿ. 175, ಸಂಖ್ಯೆ. 3, ಪು.165 Science.org.ge[ಶಾಶ್ವತವಾಗಿ ಮಡಿದ ಕೊಂಡಿ]
 14. ಪನೊಸಾ, ಎಮ್. ಇಸಾಬೆಲ್: ದ ಬಿಗಿನಿಂಗ್ಸ್ ಆಫ್ ದ ರಿಟನ್ ಕಲ್ಚರ್ ಇನ್ ಆ‍ಯ್‌೦ಟಿಕ್ವಿಟಿ ,ಡಿಜಿಥಮ್, ಯುನಿವರ್ಸಿಟ್ಯಾಟ್ ಒಬೆರ್ಟಾ ಡೆ ಕ್ಯಾತಲುನ್ಯಾ, ಮೇ 2004, ಪು.4 UOC.edu Archived 2010-06-07 ವೇಬ್ಯಾಕ್ ಮೆಷಿನ್ ನಲ್ಲಿ.
 15. ಸಲ್ವಾಡೋರ್ ಕರ್ಮೊನಾ & ಮಹಮ್ಮದ್ ಇಸ್ಸಾಮಿಲ್:ಅಕೌಂಟನ್ಸಿ ಆ‍ಯ್‌೦ಡ್ ಫಾರ್ಮ್ಸ್ ಆಫ್ ಅಕೌಂಟಾಬಿಲಿಟಿ ಇನ್ ಎನ್ಸಿಯೆಂಟ್ ಸಿವಿಲೈಸೇಶನ್ಸ್ : ಮೆಸಪೊಟೆಮಿಯಾ ಆ‍ಯ್‌೦ಡ್ ಎನ್ಸಿಯೆಂಟ್ ಈಜಿಪ್ಟ್ , ಐಇ ಬಿಜಿನೆಸ್ ಸ್ಕೂಲ್, ,ಐಇ ವರ್ಕಿಂಗ್ ಪೇಪರ್ WP05-21, 2005), ಪು.7 Latienda.ie.edu
 16. ಒಲ್ಡ್‌ರೊಯ್ಡ್, ಡೇವಿಡ್: ದ ರೋಲ್ ಆಫ್ ಲೆಕ್ಕಪತ್ರ ನಿರ್ವಹಣೆ ಇನ್ ಪಬ್ಲಿಕ್ ಎಕ್ಸ್‌ಪೆಂಡಿಚರ್ ಆ‍ಯ್‌೦ಡ್ ಮೊನಿಟರಿ ಪಾಲಿಸಿ ಇನ್ ದ ಫಸ್ಟ್ ಸೆಂಚುರಿ ಎಡಿ ರೋಮನ್ ಎಂಪೈಯರ್, , ಲೆಕ್ಕಪತ್ರ ನಿರ್ವಹಣೆ ಹಿಸ್ಟೋರಿಯನ್ಸ್ ಜರ್ನಲ್, ಆವೃತ್ತಿ 22, ಸಂಖ್ಯೆ 2, ಬಿರ್ಮಿಂಗ್‌ಹ್ಯಾಮ್, ಅಲಾಬಾಮಾ, ಡಿಸೆಂಬರ್ 1995, ಪು.124, Olemiss.edu[ಶಾಶ್ವತವಾಗಿ ಮಡಿದ ಕೊಂಡಿ]
 17. ಒಲ್ಡ್‌ರೊಯ್ಡ್, ಡೇವಿಡ್: ದ ರೋಲ್ ಆಫ್ ಲೆಕ್ಕಪತ್ರ ನಿರ್ವಹಣೆ ಇನ್ ಪಬ್ಲಿಕ್ ಎಕ್ಸ್‌ಪೆಂಡಿಚರ್ ಆ‍ಯ್‌೦ಡ್ ಮೊನಿಟರಿ ಪಾಲಿಸಿ ಇನ್ ದ ಫಸ್ಟ್ ಸೆಂಚುರಿ ಎಡಿ ರೋಮನ್ ಎಂಪೈಯರ್, , ಲೆಕ್ಕಪತ್ರ ನಿರ್ವಹಣೆ ಹಿಸ್ಟೋರಿಯನ್ಸ್ ಜರ್ನಲ್, ಆವೃತ್ತಿ 22, ಸಂಖ್ಯೆ 2, ಬಿರ್ಮಿಂಗ್‌ಹ್ಯಾಮ್, ಅಲಾಬಾಮಾ[ಶಾಶ್ವತವಾಗಿ ಮಡಿದ ಕೊಂಡಿ], ಡಿಸೆಂಬರ್ 1995, ಪು 1995, ಪು.123, Olemiss.edu[ಶಾಶ್ವತವಾಗಿ ಮಡಿದ ಕೊಂಡಿ]
 18. ಬೌಮನ್,ಅಲಾನ್ ಕೆ ., ಲೈಫ್ ಆ‍ಯ್‌೦ಡ್ ಲೆಟರ್ಸ್ ಆನ್ ದ ರೊಮನ್ ಫ್ರಂಟೀಯರ್: ವಿದೊಲಂಡಾ ಆ‍ಯ್‌೦ಡ್ ಇಟ್ಸ್ ಪೀಪಲ್ ರೌಟ್ಲೆಜ್ ,ಲಂಡನ್, ಜನವರಿ 1998, ISBN 978-0-415-92024-7, ಪು. 40-41,45
 19. ಫರಾಗ್, ಶೌಕಿ ಎಂ., ದ ಲೆಕ್ಕಪತ್ರ ನಿರ್ವಹಣೆ ಫ್ರೊಫೆಷನ್ ಇನ್ ಈಜಿಪ್ತ್: ಿಟ್ಸ್ ಒರಿಜಿನ್ ‍ಆ‍ಯ್‌೦ಡ್ ಡೆವಲಪ್ಮೆಂಟ್ , ಇಲಿನಾಯ್ಸ್ ವಿಶ್ವವಿದ್ಯಾಲಯ, 2009, ಪು.7 Aucegypt.edu Archived 2010-05-28 ವೇಬ್ಯಾಕ್ ಮೆಷಿನ್ ನಲ್ಲಿ.
 20. ರಾತ್ಬೊನ್,ಡೊಮಿನಿಕ್: ಇಕನಾಮಿಕ್ ರ್ಯಾಷನಾಲಿಜಂ ಆ‍ಯ್‍೦ದ್ ರೂರಲ್ ಸೊಸೈಟಿ ಇನ್ ಥರ್ಡ್-ಸೆಂಚುರಿ ಎಡಿ ಈಜಿಪ್ತ್: ದ ಹೆರೊನಿನ್ನೋಸ್ ಆರ್ಚೀವ್ ಅ‍ಯ್‌೦ಡ್ ದ ಅಪ್ಪಿಯನಸ್ ಎಸ್ಟೇಟ್ , ಕ್ಯಾಂಬ್ರಿಜ್ ವಿಶ್ವವಿದ್ಯಾಲಯ ಮುದ್ರಣಾಲಯ, ISBN 0521037638, 1991, ಪು.4
 21. ಕೌಮೊ,ಸೆರಾಫಿನಾ: ಎಂಷಿಯನ್ ಮ್ಯಾಥಮ್ಯಾಟಿಕ್ಸ್ , ರೌಟ್ಲೆಜ್, ಲಂಡನ್, ISBN 9780415164955, ಜುಲೈ 2001, ಪು.231
 22. ಮ್ಯಾಟ್. 25:19
 23. ಲೆವೀಸ್, ಮೆರ್ವಿನ್ ಕೆ.: ಇಸ್ಲಾಂ ಆ‍ಯ್‍೦ಡ್ ಲೆಕ್ಕಪತ್ರ ನಿರ್ವಹಣೆ , ವಿಲ್ಲೆ-ಬ್ಲಾಕ್‌ವೆಲ್ , ಆಕ್ಸ್‌ಫರ್ಡ್, 2001, ಪು. 113, VT.edu Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ.
 24. ಲೆವೀಸ್, ಮೆರ್ವಿನ್ ಕೆ.: ಇಸ್ಲಾಂ ಆ‍ಯ್‍೦ಡ್ ಲೆಕ್ಕಪತ್ರ ನಿರ್ವಹಣೆ , ವಿಲ್ಲೆ-ಬ್ಲಾಕ್‌ವೆಲ್ , ಆಕ್ಸ್‌ಫರ್ಡ್, 2001, ಪು. 109 ,VT.edu Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ.
 25. Gandz, Solomon (1938), "The Algebra of Inheritance: A Rehabilitation of Al-Khuwarizmi", Osiris, University of Chicago Press, 5: 319–91, doi:10.1086/368492
 26. ಸ್ಟ್ರುಯ್ಕ್ (1987), ಎ ಕಾನ್ಸಿಸ್ ಹಿಸ್ಟರಿ ಆಫ್ ಮ್ಯಾಥಮ್ಯಾಟಿಕ್ಸ್(4ನೇಯ ಆವೃತ್ತಿ.), ಡೋವರ್ ಪಬ್ಲಿಕೇಶನ್ಸ್, ISBN 0486602559
 27. ಅಲಾನ್ ಸ್ಯಾಂಗ್ಸ್ಟರ್,ಗ್ರೆಗ್ ಸ್ಟೋನರ್ & ಪೆಟ್ರಿಶಿಯಾ ಮ್ಯಾಕ್‌ಕರ್ಟಿ: "ದ ಮಾರ್ಕೆಟ್ ಫಾರ್ ಲುಕಾ ಪ್ಯಾಲಿಯಿಸಿಸ್ ಸಮ್ಮಾ ಆರ್ಥಮೆಟಿಕಾ" (ಲೆಕ್ಕಪತ್ರ ನಿರ್ವಹಣೆ,ಬಿಜಿನೆಸ್ & ಫೈನನ್ಸಿಯಲ್ ಹಿಸ್ಟರಿ ಕಾನ್ಫರೆನ್ಸ್, ಕಾರ್ಡಿಫ್, ಸೆಪ್ಟೆಂಬರ್ 2007) ಪು. 1–2
 28. ಹೀಫರ್,ಆಲ್ಬ್ರೆಚ್: ಆನ್ ದ ಕ್ಯೂರಿಯಸ್ ಹಿಸ್ಟೋರಿಕಲ್ ಕೋಇನ್ಸಿಡೆನ್ಸ್ ಆಫ್ ಅಲ್ಜಿಬ್ರಾ ಅ‍ಯ್‌೦ಡ್ ಡಬಲ್-ಎಂಟ್ರಿ ಬುಕ್‌ಕೀಪಿಂಗ್ , ಫೌಂಡೇಶನ್ಸ್ ಆಫ್ ದ ಫಾರ್ಮಲ್ ಸೈನ್ಸಸ್ , ಗೆಂಟ್ ವಿಶ್ವವಿದ್ಯಾಲಯ,ನವೆಂಬರ್ 2009, ಪು.7 Ugent.be
 29. ೨೯.೦ ೨೯.೧ ಹೀಫರ್,ಆಲ್ಬ್ರೆಚ್: ಆನ್ ದ ಕ್ಯೂರಿಯಸ್ ಹಿಸ್ಟೋರಿಕಲ್ ಕೋಇನ್ಸಿಡೆನ್ಸ್ ಆಫ್ ಅಲ್ಜಿಬ್ರಾ ಅ‍ಯ್‌೦ಡ್ ಡಬಲ್-ಎಂಟ್ರಿ ಬುಕ್‌ಕೀಪಿಂಗ್ , ಫೌಂಡೇಶನ್ಸ್ ಆಫ್ ದ ಫಾರ್ಮಲ್ ಸೈನ್ಸಸ್ , ಗೆಂಟ್ ವಿಶ್ವವಿದ್ಯಾಲಯ,ನವೆಂಬರ್ 2009, ಪು.11 Ugent.be
 30. ಮಿಲ್ಸ್,ಜಿಯೊಫ್ರೆಯ್,ಟಿ. "ಅರ್ಲಿ ಲೆಕ್ಕಪತ್ರ ನಿರ್ವಹಣೆ ಇನ್ ನಾರ್ತನ್ ಇಟಲಿ: ದ ರೋಲ್ ಆಫ್ ಕಮರ್ಷಿಯಲ್ ಡೆವಲಪ್ಮೆಂಟ್ ಆ‍ಯ್‌೦ಡ್ ದ ಪ್ರಿಂಟಿಂಗ್ ಪ್ರೆಸ್ ಇನ್ ದ ಎಕ್ಸ್‌ಪಾಂಷನ್ ಆಫ್ ಡಬಲ್- ಎಂಟ್ರಿ ಫ್ರಾಂಮ್ ಜಿಯೊನ,ಫ್ಲೊರೆನ್ಸ್ ಆ‍ಯ್‌೦ಡ್ ವೆನಿಸ್"(ದ ಲೆಕ್ಕಪತ್ರ ನಿರ್ವಹಣೆ ಹಿಸ್ಟೊರಿಯನ್ಸ್ ಜರ್ನಲ್,ಜೂನ್ 1994)
 31. ಥಿಯೇರಿ ಮಿಶೆಲ್: ಡಿಡ್ ಯು ಸೇ ಡೇಬಿಟ್? , ಅಸಂಪ್ಶನ್ ವಿಶ್ವವಿದ್ಯಾಲಯ (ಥೈಲ್ಯಾಂಡ್), ಎಯು-ಜಿಎಸ್‌ಬಿ ಇ-ಜರ್ನಲ್, ಸಂಪುಟ. 2 ಸಂಖ್ಯೆ. 1, ಜೂನ್ 2009, ಪು.35, AU.edu Archived 2013-05-14 ವೇಬ್ಯಾಕ್ ಮೆಷಿನ್ ನಲ್ಲಿ.
 32. {0/ಲೀ,ಜಿಯೊಫ್ರೆಯ್ ಎ, {1}ದ ಕಮಿಂಗ್ ಆಫ್ ಏಜ್ ಆಫ್ ಡಬಲ್ ಎಂಟ್ರಿ: ದ ಜಿಯೊವನ್ನಿ ಫರೊಲ್ಫಿ ಲೆಡ್ಜರ್ ಆಫ್ 1299-1300, ಲೆಕ್ಕಪತ್ರ ನಿರ್ವಹಣೆ ಹಿಸ್ಟೊರಿಯನ್ಸ್ ಜರ್ನಲ್, ಸಂಪುಟ. 4, ಸಂಖ್ಯೆ. 2, 1977 ಪು.80 ಮಿಸಿಸಿಪ್ಪಿ ವಿಶ್ವವಿದ್ಯಾಲಯ Archived 2017-06-27 ವೇಬ್ಯಾಕ್ ಮೆಷಿನ್ ನಲ್ಲಿ.
 33. ಲಾವರ್ಸ್,ಲಕ್&ವಿಲ್ಲೆಕನ್ಸ್,ಮರ್ಲೀನ್: "ಫೈವ್ ಹಂಡ್ರೆಡ್ ಇಯರ್ಸ್ ಆಫ್ ಬುಕ್‌ಕೀಪಿಂಗ್: ಎ ಪೊರ್ಟ್ರೆಟ್ ಆಫ್ ಲುಕಾ ಪಸಿಯೊಲಿ" (Tijdschrift voor Economie en Management, Katholieke Universiteit Leuven, 1994, vol:XXXIX issue 3, p.300), KUleuven.be Archived 2011-08-20 ವೇಬ್ಯಾಕ್ ಮೆಷಿನ್ ನಲ್ಲಿ.
 34. Lauwers, Luc & Willekens, Marleen: "Five Hundred Years of Bookkeeping: A Portrait of Luca Pacioli" (Tijdschrift voor Economie en Management, Katholieke Universiteit Leuven, 1994, vol:XXXIX issue:3 pages:289–304), KUleuven.be
 35. ಅಲಾನ್ ಸ್ಯಾಂಗ್ಸ್ಟರ್,ಗ್ರೆಗ್ ಸ್ಟೋನರ್ & ಪೆಟ್ರಿಶಿಯಾ ಮ್ಯಾಕ್‌ಕರ್ಟಿ: "ದ ಮಾರ್ಕೆಟ್ ಫಾರ್ ಲುಕಾ ಪ್ಯಾಲಿಯಿಸಿಸ್ ಸಮ್ಮಾ ಆರ್ಥಮೆಟಿಕಾ" (ಲೆಕ್ಕಪತ್ರ ನಿರ್ವಹಣೆ,ಬಿಜಿನೆಸ್ & ಫೈನನ್ಸಿಯಲ್ ಹಿಸ್ಟರಿ ಕಾನ್ಫರೆನ್ಸ್, ಕಾರ್ಡಿಫ್, ಸೆಪ್ಟೆಂಬರ್ 2007) ಪು.1–2, Cardiff.ac.uk
 36. ಕ್ಯಾರುಥರ್ಸ್,ಬ್ರೂಸ್ ಜಿ & ಎಸ್ಪೆಲ್ಯಾಂಡ್,ವೆಂಡಿ ನೆಲ್ಸನ್ ಲೆಕ್ಕಪತ್ರ ನಿರ್ವಹಣೆ ಫಾರ್ ರ್ಯಾಷನಾಲಿಟಿ: ಡಬಲ್ -ಎಂಟ್ರಿ ಬುಕ್‌ಕೀಪಿಂಗ್ ಆ‍ಯ್‌೦ಡ್ ದ ರೆಟೋರಿಕ್ ಆಫ್ ಇಕನಾಮಿಕ್ ರ್ಯಾಷನಾಲಿಟಿ , ಅಮೆರಿಕನ್ ಜರ್ನಲ್ ಅಫ್ ಸೋಶಿಯಾಲಜಿ, ಸಂಪುಟ. 97, ಸಂಖ್ಯೆ. 1, ಜುಲೈ 1991, ಪುಪು. 37
 37. ವಿಸ್ಯಾಂಗ್ಸ್ಟರ್, ಅಲಾನ್: "ದ ಪ್ರಿಂಟಿಂಗ್ ಆಫ್ ಪ್ಯಾಸಿಯೊಲಿಸ್ ಸಮ್ಮಾ ಇನ್ 1494: ಹೌ ಮೆನಿ ಕಾಫಿಸ್ ವೇರ್ ಪ್ರಿಂಟೆಡ್?" (ಲೆಕ್ಕಪತ್ರ ನಿರ್ವಹಣೆ ಹಿಸ್ಟೊರಿಯನ್ಸ್ ಜರ್ನಲ್, ಜಾನ್ ಕೆರೋಲ್ ವಿಶ್ವವಿದ್ಯಾಲಯ,ಕ್ಲೆವ್‌ಲ್ಯಾಂಡ್, ಓಹಿಯಿ, ಜೂನ್ 2007)
 38. ಲಾವರ್ಸ್,ಲಕ್&ವಿಲ್ಲೆಕನ್ಸ್,ಮರ್ಲೀನ್: "ಫೈವ್ ಹಂಡ್ರೆಡ್ ಇಯರ್ಸ್ ಆಫ್ ಬುಕ್‌ಕೀಪಿಂಗ್: ಎ ಪೊರ್ಟ್ರೆಟ್ ಆಫ್ ಲುಕಾ ಪಸಿಯೊಲಿ" (Tijdschrift voor Economie en Management, Katholieke Universiteit Leuven, 1994, vol:XXXIX issue 3, p.292), KUleuven.be Archived 2011-08-20 ವೇಬ್ಯಾಕ್ ಮೆಷಿನ್ ನಲ್ಲಿ.
 39. ಲಾವರ್ಸ್,ಲಕ್&ವಿಲ್ಲೆಕನ್ಸ್,ಮರ್ಲೀನ್: "ಫೈವ್ ಹಂಡ್ರೆಡ್ ಇಯರ್ಸ್ ಆಫ್ ಬುಕ್‌ಕೀಪಿಂಗ್: ಎ ಪೊರ್ಟ್ರೆಟ್ ಆಫ್ ಲುಕಾ ಪಸಿಯೊಲಿ" (Tijdschrift voor Economie en Management, Katholieke Universiteit Leuven, 1994, vol:XXXIX issue 3, p.296), KUleuven.be Archived 2011-08-20 ವೇಬ್ಯಾಕ್ ಮೆಷಿನ್ ನಲ್ಲಿ.
 40. ಅಲಾನ್ ಸ್ಯಾಂಗ್ಸ್ಟರ್, ಯುಸಿಂಗ್ ಲೆಕ್ಕಪತ್ರ ನಿರ್ವಹಣೆ ಹಿಸ್ಟರಿ ಆ‍ಯ್‌೦ಡ್ ಲುಕಾ ಪಸಿಯೊಲಿ ಟು ಟೀಚ್ ಡಬಲ್ ಎಂಟ್ರಿ, , ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯ ಬಿಜಿನೆಸ್ ಸ್ಕೂಲ್, ಸೆಪ್ಟೆಂಬರ್ 2009, ಪು.9, Cardiff.ac.uk
 41. ಪೂವೆಯ್,ಮೆರಿ "ಎ ಹಿಸ್ಟರಿ ಆಫ್ ದ ಮಾಡರ್ನ್ ಫ್ಯಾಕ್ಟ್" (ಚಿಕಾಗೊ ವಿಶ್ವವಿದ್ಯಾಲಯ ಮುದ್ರಣಾಲಯ, 1998) ಅಧ್ಯಾಯ.2 ಪು.30, 58 & 54
 42. ಲಾವರ್ಸ್,ಲಕ್&ವಿಲ್ಲೆಕನ್ಸ್,ಮರ್ಲೀನ್: "ಫೈವ್ ಹಂಡ್ರೆಡ್ ಇಯರ್ಸ್ ಆಫ್ ಬುಕ್‌ಕೀಪಿಂಗ್: ಎ ಪೊರ್ಟ್ರೆಟ್ ಆಫ್ ಲುಕಾ ಪಸಿಯೊಲಿ" (Tijdschrift voor Economie en Management, Katholieke Universiteit Leuven, 1994, vol:XXXIX issue 3, p.301), KUleuven.be Archived 2011-08-20 ವೇಬ್ಯಾಕ್ ಮೆಷಿನ್ ನಲ್ಲಿ.
 43. ಟಕಟೆಡಾ ಸೆಡಾಒ: ಆರ್ಲಿ ಎಕ್ಸ್‌ಪೀರೀಯನ್ಸಸ್ ಆಫ್ ದ ಬ್ರಿಟೀಶ್ ಬ್ಯಾಲೆನ್ಸ್ ಶೀಟ್ , ಕ್ಯೋಟೋ ವಿಶ್ವವಿದ್ಯಾಲಯ ಇಕನಾಮಿಕ್ ರೀವ್ಯೂ, ಸಂಪುಟ. 83, ಅಕ್ಟೋಬರ್ 1962, ಪು.37-38, 41, 44-45 Kyoto-u.ac.jp Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.
 44. ವಟನಿಬ್ ಇಜುಮಿ: ದ ಇವಲ್ಯೂಷನ್ ಆಫ್ ಇನ್‌ಕಮ್ ಲೆಕ್ಕಪತ್ರ ನಿರ್ವಹಣೆ ಇನ್ ಎಟೀನ್ತ್ ಆ‍ಯ್‌೦ಡ್ ನೈಂಟಿನ್ತ್ ಸೆಂಚುರಿ ಭ್ರಿಟನ್ , ಒಸಾಕಾ ಯುನಿವರ್ಸಿಟಿ ಆಫ್ ಇಕನಾಮಿಕ್ಸ್ , Vol.57, ಸಂಖ್ಯೆ. 5, ಜನವರಿ 2007, ಪು.27-30 Osaka-ue.ac.jp
 45. ಕ್ಯಾರುಥರ್ಸ್,ಬ್ರೂಸ್ ಜಿ & ಎಸ್ಪೆಲ್ಯಾಂಡ್,ವೆಂಡಿ ನೆಲ್ಸನ್ ಲೆಕ್ಕಪತ್ರ ನಿರ್ವಹಣೆ ಫಾರ್ ರ್ಯಾಷನಾಲಿಟಿ: ಡಬಲ್ -ಎಂಟ್ರಿ ಬುಕ್‌ಕೀಪಿಂಗ್ ಆ‍ಯ್‌೦ಡ್ ದ ರೆಟೋರಿಕ್ ಆಫ್ ಇಕನಾಮಿಕ್ ರ್ಯಾಷನಾಲಿಟಿ , ಅಮೆರಿಕನ್ ಜರ್ನಲ್ ಅಫ್ ಸೋಶಿಯಾಲಜಿ, ಸಂಪುಟ. 97, ಸಂಖ್ಯೆ. 1, ಜುಲೈ 1991, ಪು.39-40
 46. ಟೊರಾಮನ್,ಸೆಂಗಿಜ್,ಯಿಲ್ಮಾಜ್, ಸಿನಾನ್ & ಬೈರಾಮೊಗ್ಲು, ಫೇಟಿಹ್: ಎಸ್ಟೇಟ್ ಲೆಕ್ಕಪತ್ರ ನಿರ್ವಹಣೆ ಆ‍ಯ್‌ಸ್ ಎ ಪಬ್ಲಿಕ್ ಪಾಲಿಸಿ ಟೂಲ್ ಆ‍ಯ್‌೦ಡ್ ಇಟ್ಸ್ ಅಪ್ಲಿಕೇಶನ್ ಇನ್ ದ ಒಟ್ಟಾಮನ್ ಎಂಪಾಯರ್ ಇನ್ ದ 17th ಸೆಂಚುರಿ , ಸ್ಪಾನಿಷ್ ಜರ್ನಲ್ ಆಫ್ ಲೆಕ್ಕಪತ್ರ ನಿರ್ವಹಣೆ ಹಿಸ್ಟರಿ,] ಸಂಖ್ಯೆ. 4, ಮ್ಯಾಡ್ರಿಡ್, ಜೂನ್ 2006, ಪು.1
 47. ಎರ್ಕಾನ್,ಮೆಹ್ಮೆತ್,ಎಡ್ಮಿರ್,ಒಗುಜನ್ & ಎಲಿಟಾಸ್,ಸೆಮಲ್ : ಆ‍ಯ್‌ನ್ ಲೆಕ್ಕಪತ್ರ ನಿರ್ವಹಣೆ ಸಿಸ್ಟಮ್ ಯುಸ್ಡ್ ಬಿಟ್ವೀನ್ 14th & 19th ಸೆಂಚುರಿಸ್ ಇನ್ ದ ಮಿಡ್ಲ್ ಈಸ್ಟ್: ದ ಮೆರ್ಡಿವೆನ್ (ಸ್ಟೇರ್ಸ್) ಮೆಥಡ್ , ಕೊಕಾಟೇಪ್ ವಿಶ್ವವಿದ್ಯಾಲಯ, ಅಫಿಯೊನ್ಕರಾಹಿಸರ್, ಜುಲೈ 2006, ಪು.6-7 Univ-Nantes.fr Archived 2006-11-26 ವೇಬ್ಯಾಕ್ ಮೆಷಿನ್ ನಲ್ಲಿ.
 48. Elitaş, Cemal, Güvemli, Oktay, Aydemir, Oğuzhan, Erkan, Mehmet, Özcan, Uður & Oğuz, Mustafa:Accounting method used by Ottomans for 500 years: Stairs (Merdiban) Method , Ministry of Finance of the Turkish Republic, Istanbul, April 2008, ISBN 9789758195152, p.596 SGB.gov.tr Archived 2014-02-01 ವೇಬ್ಯಾಕ್ ಮೆಷಿನ್ ನಲ್ಲಿ.
 49. ಕಾರಾಬಿಯಿಕ್,ವೆಹ್ಬಿ: 'ಫೈನಾನ್ಶಿಯಲ್ ಆರ್ಗನೈಸೇಶನ್ ಇನ್ ದ ಒಟ್ಟಾಮನ್ ಎಂಪಾಯರ್ ಆ‍ಯ್‌೦ಡ್ ಮಾಡರೈಸೇಶನ್ ಆಕ್ಟಿವಿಟೀಸ್ ಇನ್ ಫೈನಾನ್ಸ್ ಆ‍ಯ್‌೦ಡ್ ಲೆಕ್ಕಪತ್ರ ನಿರ್ವಹಣೆ ಫೀಲ್ಡ್ ಕಮ್ಮೆನ್ಸಿಂಗ್ ವಿತ್ ದ ಎಸ್ಟಾಬ್ಲಿಶ್‌ಮೆಂಟ್ ಆಫ್ ಮಿನಿಸ್ಟರಿ ಆಫ್ ಫೈನಾನ್ಸ್ ಇನ್ XIX ಸೆಂಚುರಿ ,ಅಸೋಸಿಯೇಷನ್ ಆಫ್ ಲೆಕ್ಕಪತ್ರ ನಿರ್ವಹಣೆ ಆ‍ಯ್‌೦ಡ್ ಫೈನಾನ್ಸ್ ಅಕಾಡೆಮಿಶಿಯನ್ಸ್, ಇಸ್ತಾಂಬುಲ್, ಮಾರ್ಚ್ 2007, ಪು.18, Mufad.org[ಶಾಶ್ವತವಾಗಿ ಮಡಿದ ಕೊಂಡಿ]
 50. ೫೦.೦ ೫೦.೧ Astrid Ayala and Giancarlo Ibárgüen Snr.: "ಎ ಮಾರ್ಕೆಟ್ ಪ್ರೊಪೊಸಲ್ ಫಾರ್ ಆಡಿಟಿಂಗ್ ದ ಫೈನಾನ್ಶಿಯಲ್ ಸ್ಟೇಟ್‌ಮೆಂಟ್ಸ್ ಆಫ್ ಪಬ್ಲಿಕ್ ಕಂಪನೀಸ್" (ಜರ್ನಲ್ ಆಫ್ ಮ್ಯಾನೆಜ್‌ಮೆಂಟ್ ಆಫ್ ವ್ಯಾಲ್ಯು, Universidad Francisco Marroquín, ಮಾರ್ಚ್ 2006) p. 41, UFM.edu.gt
 51. ಬ್ರಾಟುನ್, ವಿಲಿಯಮ್ ಡಬ್ಲ್ಯೂ. "ಎನ್ರಾನ್ ಆ‌‍೦ಡ್ ದ ಡಾರ್ಕ್ ಸೈಡ್ ಆಫ್ ಶೇರ್‌ಹೋಲ್ಡರ್ ವಾಲ್ಯೂ" (ತುಲನ್ಸ್ ಲಾ ರೀವ್ಯೂ , ನ್ಯೂ ಆರ್ಲೀನ್ಸ್, ಮೇ 2002) ಪು. 61
 52. "Enron files for bankruptcy". BBC News. 2001-12-03. Retrieved 2008-03-15.
 53. ಆಯೇಶಾ ಡೇ, ಮತ್ತು ಥಾಮಸ್ ಜೆಡ್ ಲೈಸ್. : "ಟ್ರೆಂಡ್ಸ್ ಇನ್ ಅರ್ನಿಂಗ್ಸ್ ಮ್ಯಾನೇಜ್‌ಮೆಂಟ್ ಆ‍ಯ್‌೦ಡ್ ಇನ್‌ಫಾರ್ಮೇಟಿವ್‌ನೆಸ್ ಆಫ್ ಅರ್ನಿಂಗ್ಸ್ ಅನೌನ್ಸ್‍ಮೆಂಟ್ಸ್ ಇನ್ ದ ಪ್ರಿ-ಆ‍ಯ್‌೦ಡ್ ಪೊಸ್ಟ್-ಸರ್ಬೆನ್ಸ್ ಒಕ್ಸ್ಲೆ ಪಿರಿಯಡ್ಸ್ (ಕೆಲ್ಲಾಗ್ ಸ್ಕೂಲಾಫ್ ಮ್ಯಾನೆಜ್‌ಮೆಂಡ್ , ಎವಾನ್‌‌ಸ್ಟನ್, ಇಲಿನಾಯ್ಸ್, ಫೆಬ್ರವರಿ, 2005) ಪು. 5