ರಾಬರ್ಟ್ ಮಿಲಿಕನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಬರ್ಟ್ ಮಿಲಿಕನ್

ಜೀವನ[ಬದಲಾಯಿಸಿ]

ರಾಬರ್ಟ್ ಮಿಲಿಕನ್ ಅಮೆರಿಕಾದ ಪ್ರಸಿದ್ಧ ಭೌತವಿಜ್ಞಾನಿ. ಇವರು ಕ್ರಿ.ಶ ೧೮೬೮ರಲ್ಲಿ ಜನಿಸಿದರು. ಇವರು ಎಲೆಕ್ಟ್ರಾನ್ ನ ವಿದ್ಯುತ್ ಆವೇಶವನ್ನು ನಿಖರವಾಗಿ ಅರಿಯಲು ಎಣ್ಣೆ ಬಿಂದುವಿನ ಪ್ರಯೋಗಗಳನ್ನು ನಡೆಸಿದರು. ಇವರ ಸಂಶೋಧನೆಗಳ ಮೂಲಕ ಪ್ಲಾಂಕ್ ನ ನಿಯತಾಂಕದ (b) ನಿಖರವಾದ ಬೆಲೆ ತಿಳಿಯಿತು. [೧]

ಸಾಧನೆಗಳು[ಬದಲಾಯಿಸಿ]

ಇವರು ೧ ೯ ೨ ೧ರಲ್ಲಿ ಕ್ಯಾಲ್ ಟೆಕ್ ಎಂಬ ಸಂಸ್ಥೆಗೆ ನಿರ್ದೇಶಕರಾದರು. ರಾಬರ್ಟ್, ವಿಶ್ವ ಕಿರಣಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ಈ ರೀತಿಯ ಕಿರಣಗಳಿಗೆ ವಿಶ್ವಕಿರಣ (ಕಾಸ್ಮಿಕ್ ರೇ) ಎಂದು ಇವರೇ ಹೆಸರಿಸಿದರು. ಎಲೆಕ್ಟ್ರಾನ್ ನ ವಿದ್ಯುತ್ ಆವೇಶವನ್ನು , ಪ್ಲಾಂಕ್ ನ ನಿಯತಾಂಕವನ್ನು ನಿಖರವಾಗಿ ಕಂಡುಹಿದಿದುದಕ್ಕಾಗಿ ಇವರಿಗೆ ೧೯೨೬ರಲ್ಲಿ ಭೌತವಿಜ್ಞಾನನೋಬಲ್ ಪ್ರಶಸ್ತಿಲಭಿಸಿತು. [೨]

ಇವರಿಗೆ ಗಣಿತವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಭೂಕಂಪಗಳ ಕುರಿತು ಇವರು ಸಂಶೋಧನೆಯನ್ನು ಕೈಗೊಂಡರು. ಇವರು ೧೯೫೩ರಲ್ಲಿ ವಿಧಿವಶರಾದರು.

ಉಲ್ಲೇಖಗಳು[ಬದಲಾಯಿಸಿ]

  1. http://www.aps.org/programs/outreach/history/historicsites/millikan.cfm
  2. http://www.nobelprize.org/nobel_prizes/physics/laureates/1923/