ವಿಷಯಕ್ಕೆ ಹೋಗು

ಮೈಕೇಲ್‌ ಫ್ಯಾರಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Michael Faraday
Engraving by John Cochran after a portrait by Henry William Pickersgill, ca. 1820
ಜನನ(೧೭೯೧-೦೯-೨೨)೨೨ ಸೆಪ್ಟೆಂಬರ್ ೧೭೯೧
Newington Butts, Surrey, England
ಮರಣ25 August 1867(1867-08-25) (aged 75)
Hampton Court, Surrey, England
ವಾಸEngland
ರಾಷ್ಟ್ರೀಯತೆBritish
ಕಾರ್ಯಕ್ಷೇತ್ರಗಳುPhysics and chemistry
ಸಂಸ್ಥೆಗಳುRoyal Institution
ಪ್ರಸಿದ್ಧಿಗೆ ಕಾರಣFaraday's law of induction
Electrochemistry
Faraday effect
Faraday cage
Faraday constant
Faraday cup
Faraday's laws of electrolysis
Faraday paradox
Faraday rotator
Faraday-efficiency effect
Faraday wave
Faraday wheel
Lines of force
InfluencesHumphry Davy
William Thomas Brande
ಗಮನಾರ್ಹ ಪ್ರಶಸ್ತಿಗಳುRoyal Medal (1835 & 1846)
Copley Medal (1832 & 1838)
Rumford Medal (1846)
ಹಸ್ತಾಕ್ಷರ

ಮೈಕೇಲ್‌ ಫ್ಯಾರಡೆ , FRS (22 ಸೆಪ್ಟೆಂಬರ್‌‌ 1791 – 25 ಆಗಸ್ಟ್‌ 1867) ಓರ್ವ ಇಂಗ್ಲಿಷ್‌ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾಗಿದ್ದು (ಅಥವಾ ಆ ಕಾಲದ ಪರಿಭಾಷೆಯಲ್ಲಿ ಹೇಳುವುದಾದರೆ ಭೌತಶಾಸ್ತ್ರಜ್ಞ ), ವಿದ್ಯುತ್ಕಾಂತತೆ ಹಾಗೂ ವಿದ್ಯುದ್ರಸಾಯನಶಾಸ್ತ್ರ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ.

ಒಂದು DC ವಿದ್ಯುತ್‌ ಪ್ರವಾಹವನ್ನು ಹೊತ್ತೊಯ್ಯುತ್ತಿರುವ ವಾಹಕವೊಂದರ ಸುತ್ತ ಇರುವ ಕಾಂತೀಯ ಕ್ಷೇತ್ರವನ್ನು ಫ್ಯಾರಡೆ ಅಧ್ಯಯನ ಮಾಡಿದ, ಮತ್ತು ಭೌತಶಾಸ್ತ್ರದಲ್ಲಿನ ವಿದ್ಯುತ್ಕಾಂತೀಯ ಕ್ಷೇತ್ರದ ಪರಿಕಲ್ಪನೆಗೆ ಸಂಬಂಧಿಸಿದಂತಿರುವ ತಳಹದಿಯನ್ನು ಪ್ರಮಾಣೀಕರಿಸಿದ. ವಿದ್ಯುತ್ಕಾಂತೀಯ ಪ್ರೇರಣೆ, ಪಾರಕಾಂತೀಯತೆ, ಹಾಗೂ ವಿದ್ಯುದ್ವಿಚ್ಛೇದನದ ನಿಯಮಗಳನ್ನು ಅವನು ಆವಿಷ್ಕರಿಸಿದ. ಬೆಳಕಿನ ಕಿರಣಗಳ ಮೇಲೆ ಕಾಂತೀಯತೆಯು ಪ್ರಭಾವ ಬೀರಬಲ್ಲದು ಎಂಬುದನ್ನು ಹಾಗೂ ಈ ಎರಡೂ ವಿದ್ಯಮಾನಗಳ ನಡುವೆ ಒಂದು ಆಧಾರವಾಗಿರುವ ಸಂಬಂಧವಿದೆ ಎಂಬುದನ್ನು ಅವನು ಪ್ರಮಾಣೀಕರಿಸಿದ.[][] ಅವನ ವಿದ್ಯುತ್ಕಾಂತೀಯ ಆವರ್ತಕ ಸಾಧನಗಳ ಆವಿಷ್ಕಾರಗಳು ವಿದ್ಯುತ್‌‌ ಮೋಟಾರಿನ ತಂತ್ರಜ್ಞಾನದ ಬುನಾದಿಯಾಗಿ ಮಾರ್ಪಟ್ಟವು, ಮತ್ತು ತಂತ್ರಜ್ಞಾನದಲ್ಲಿನ ಬಳಕೆಗೆ ಸಂಬಂಧಿಸಿದಂತೆ ವಿದ್ಯುಚ್ಚಕ್ತಿಯು ಕಾರ್ಯಸಾಧ್ಯವಾಗಿ ಪರಿಣಮಿಸಿದ್ದರೆ ಅದಕ್ಕೆ ಹೆಚ್ಚಿನ ರೀತಿಯಲ್ಲಿ ಅವನ ಪ್ರಯತ್ನಗಳೇ ಕಾರಣ ಎನ್ನಬಹುದು.

ಓರ್ವ ರಸಾಯನ ಶಾಸ್ತ್ರಜ್ಞನಾಗಿ, ಮೈಕೇಲ್‌ ಫ್ಯಾರಡೆ ಬೆನ್‌ಜೀನ್‌‌ನ್ನು ಆವಿಷ್ಕರಿಸಿದ, ಕ್ಲೋರೀನ್‌‌‌‌ನ ಕ್ಲಾಥರೇಟ್‌ ಹೈಡ್ರೇಟ್‌‌ನ್ನು ಪತ್ತೆಹಚ್ಚಿದ, ಬುನ್‌ಸೆನ್‌ ಬರ್ನರಿನ ಒಂದು ಆರಂಭಿಕ ಪ್ರಕಾರ ಹಾಗೂ ಉತ್ಕರ್ಷಣ ಸಂಖ್ಯೆಗಳ ಪದ್ಧತಿಯನ್ನು ಆವಿಷ್ಕರಿಸಿದ, ಮತ್ತು ಧನ ವಿದ್ಯುದ್ವಾರ (ಆನೋಡ್‌), ಋಣ ವಿದ್ಯುದ್ವಾರ (ಕ್ಯಾಥೋಡ್‌), ವಿದ್ಯುದ್ವಾರ (ಇಲೆಕ್ಟ್ರೋಡ್‌), ಹಾಗೂ ಅಯಾನು ಇವೇ ಮೊದಲಾದ ಪಾರಿಭಾಷಿಕ ಪದಗಳನ್ನು ಜನಪ್ರಿಯಗೊಳಿಸಿದ.

ಫ್ಯಾರಡೆಯು ಅತ್ಯಲ್ಪ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡನಾದರೂ ಮತ್ತು ಕ್ಯಾಲ್ಕ್ಯುಲಸ್‌ನಂಥ ಉನ್ನತ ಗಣಿತಶಾಸ್ತ್ರದ ಕುರಿತು ಸೀಮಿತ ಜ್ಞಾನವನ್ನು ಹೊಂದಿದ್ದರೂ, ಅವನು ಇತಿಹಾಸದಲ್ಲಿನ ಅತ್ಯಂತ ಪ್ರಭಾವಿ ವಿಜ್ಞಾನಿಗಳಲ್ಲಿ ಒಬ್ಬನಾಗಿದ್ದ. ವಿಜ್ಞಾನದ ಕೆಲವೊಂದು ಇತಿಹಾಸಕಾರರು[] ಅವನನ್ನು ವಿಜ್ಞಾನದ ಇತಿಹಾಸದಲ್ಲಿನ ಅತ್ಯುತ್ತಮ ಪ್ರಯೋಗ ಪರೀಕ್ಷಕ ಎಂದು ಉಲ್ಲೇಖಿಸುತ್ತಾರೆ.[] ಧಾರಣಶಕ್ತಿSI ಏಕಮಾನವಾದ ಫ್ಯಾರಡ್‌‌ನ್ನು ಅವನ ಹೆಸರಿನಲ್ಲಿ ನಾಮಕರಣ ಮಾಡಲಾಗಿದೆ; ಅದೇ ರೀತಿಯಲ್ಲಿ ಒಂದು ಮೋಲ್‌‌‌ನಷ್ಟು ಇಲೆಕ್ಟ್ರಾನುಗಳ (ಸುಮಾರು 96,485 ಕೂಲಾಮ್‌‌ಗಳು) ಮೇಲಿನ ವಿದ್ಯುದಾವೇಶಕ್ಕೆ ಫ್ಯಾರಡೆ ನಿಯತಾಂಕ ಎಂದು ಹೆಸರಿಸಲಾಗಿದೆ. ಫ್ಯಾರಡೆಯ ಚೋದನಾ ನಿಯಮವು ತಿಳಿಸುವ ಪ್ರಕಾರ, ಕಾಲಕ್ರಮೇಣ ಬದಲಾಗುತ್ತಿರುವ ಕಾಂತೀಯ ಪ್ರಸರವು ಒಂದು ಅನುಗುಣವಾದ ವಿದ್ಯುಚ್ಚಾಲಕ ಬಲವನ್ನು ಸೃಷ್ಟಿಸುತ್ತದೆ.

ದಿ ‌ರಾಯಲ್‌ ಇನ್‌ಸ್ಟಿಟ್ಯೂಷನ್‌ ಆಫ್‌ ಗ್ರೇಟ್‌ ಬ್ರಿಟನ್‌‌ನಲ್ಲಿ ಫ್ಯಾರಡೆಯು ಮೊದಲ ಹಾಗೂ ಅಗ್ರಗಣ್ಯ ರಸಾಯನ ಶಾಸ್ತ್ರದ ಫುಲ್ಲೇರಿಯನ್‌ ಪ್ರಾಧ್ಯಾಪಕನಾಗಿದ್ದ, ಮತ್ತು ಈ ಸ್ಥಾನಕ್ಕೆ ಅವನನ್ನು ಆಜೀವ ಪರ್ಯಂತದ ಅವಧಿಗೆ ನೇಮಿಸಲಾಗಿತ್ತು.

ಆಲ್ಬರ್ಟ್‌ ಐನ್‌ಸ್ಟೀನ್ ತನ್ನ ಅಧ್ಯಯನ ಕೋಣೆಯ ಗೋಡೆಯ ಮೇಲೆ ಐಸಾಕ್‌ ನ್ಯೂಟನ್‌ ಹಾಗೂ ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್‌‌‌ರವರ ಚಿತ್ರಗಳ ಜೊತೆಜೊತೆಗೆ ಫ್ಯಾರಡೆಯ ಒಂದು ಛಾಯಾಚಿತ್ರವನ್ನು ಇರಿಸಿಕೊಂಡಿದ್ದ.[]

ಕಟ್ಟಾ ಧಾರ್ಮಿಕ ವ್ಯಕ್ತಿಯಾಗಿದ್ದ ಫ್ಯಾರಡೆ ಸ್ಯಾಂಡೆಮ್ಯಾನಿಯನ್‌ ಚರ್ಚ್‌‌‌‌ನ ಓರ್ವ ಸದಸ್ಯನಾಗಿದ್ದ. ಇದು 1730ರಲ್ಲಿ ಸಂಸ್ಥಾಪಿಸಲ್ಪಟ್ಟ ಒಂದು ಕ್ರಿಶ್ಚಿಯನ್‌‌ ಪಂಗಡವಾಗಿದ್ದು, ಸಂಪೂರ್ಣ ವಿಶ್ವಾಸ ಹಾಗೂ ಬದ್ಧತೆಯನ್ನು ಬಯಸುತ್ತಿತ್ತು. "ಫ್ಯಾರಡೆಯ ಜೀವನ ಹಾಗೂ ಕೆಲಸದ ತುಂಬ ದೇವರು ಮತ್ತು ಪ್ರಕೃತಿಯ ಒಂದು ಪ್ರಬಲವಾದ ಏಕತಾಪ್ರಜ್ಞೆಯು ಆವರಿಸಿಕೊಂಡಿತ್ತು" ಎಂಬುದಾಗಿ ಕೆಲವು ಜೀವನಚರಿತ್ರೆಕಾರ ಉಲ್ಲೇಖಿಸಿದ್ದಾರೆ.[]

ಆರಂಭಿಕ ವರ್ಷಗಳು

[ಬದಲಾಯಿಸಿ]
ಥಾಮಸ್‌ ಫಿಲಿಪ್ಸ್‌ ಬರೆದಿರುವ ಮೈಕೇಲ್‌ ಫ್ಯಾರಡೆ, ಭಾವಚಿತ್ರ c1841-1842[]

ಈಗ ಸೌತ್‌ವಾರ್ಕ್‌‌‌ನ ಲಂಡನ್‌ ಬರೋದ ಭಾಗವಾಗಿರುವ ನೆವಿಂಗ್ಟನ್‌ ಬಟ್ಸ್‌ ಎಂಬಲ್ಲಿ ಫ್ಯಾರಡೆ ಜನಿಸಿದ; ಆದರೆ ಈ ಪ್ರದೇಶವು ಅಂದು ಲಂಡನ್‌ ಸೇತುವೆಗೆ ಒಂದು ಮೈಲುಗಳಷ್ಟು ದಕ್ಷಿಣಕ್ಕಿದ್ದ ಸರ್ರೆಯ ಒಂದು ಉಪನಗರದ ಭಾಗವಾಗಿತ್ತು.[] ಅವನದು ಅಂಥಾ ಸ್ಥಿತವಂತರ ಕುಟುಂಬವಾಗಿರಲಿಲ್ಲ. ಅವನ ತಂದೆಯಾದ ಜೇಮ್ಸ್, ಕ್ರಿಶ್ಚಿಯನ್‌‌ ಧರ್ಮದ ಗ್ಲಾಸ್ಸೈಟ್‌ ಪಂಗಡದ ಓರ್ವ ಸದಸ್ಯನಾಗಿದ್ದ. 1790-1ರ ಚಳಿಗಾಲದ ಅವಧಿಯಲ್ಲಿ ವೆಸ್ಟ್‌ಮಾರ್ಲ್ಯಾಂಡ್‌‌‌ನಲ್ಲಿನ ಔತ್‌ಗಿಲ್‌‌ನಿಂದ ಲಂಡನ್‌ಗೆ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಜೇಮ್ಸ್‌‌ ಫ್ಯಾರಡೆ ಕಳಿಸಿಕೊಟ್ಟ; ಔತ್‌ಗಿಲ್‌ನಲ್ಲಿ ಓರ್ವ ಹಳ್ಳಿ ಕಮ್ಮಾರನ ಬಳಿ ಆತ ಓರ್ವ ಹೊಸಗಸುಬಿಯಾಗಿ ಕಾರ್ಯನಿರ್ವಹಿಸುತ್ತಿದ್ದ.[] ಅದೇ ವರ್ಷದ ಶರತ್ಕಾಲದಲ್ಲಿ ಮೈಕೇಲ್‌ ಜನಿಸಿದ. ನಾಲ್ಕು ಮಕ್ಕಳ ಪೈಕಿ ಮೂರನೆಯವನಾಗಿದ್ದ ಚಿಕ್ಕವಯಸ್ಸಿನ ಮೈಕೇಲ್‌ ಫ್ಯಾರಡೆಯು ಕೇವಲ ತಳಹದಿಯ ಶಾಲಾ ಶಿಕ್ಷಣವನ್ನಷ್ಟೇ ಪಡೆದಿದ್ದರಿಂದ, ಸ್ವತಃ ತನಗೆ ತಾನೇ ಕಲಿಯುವುದು ಬಹಳಷ್ಟಿತ್ತು.[೧೦] ಆತ ಹದಿನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ, ಜಾರ್ಜ್‌ ರೈಬೌ ಎಂಬ ಓರ್ವ ಸ್ಥಳೀಯನ ಬಳಿಯಲ್ಲಿ ಹೊಸಗಸುಬಿಯಾಗಿ ಕೆಲಸಕ್ಕೆ ಸೇರಿಕೊಂಡ. ಜಾರ್ಜ್‌ ರೈಬೌ, ಪುಸ್ತಕಕ್ಕೆ ರಟ್ಟು ಕಟ್ಟುವುದರ ಜೊತೆಗೆ ಪುಸ್ತಕ ವ್ಯಾಪಾರಿಯೂ ಆಗಿದ್ದ. ತನ್ನ ಏಳು-ವರ್ಷಗಳ ಅವಧಿಯ ಶಿಷ್ಯವೃತ್ತಿಯಲ್ಲಿ ಆತ ಐಸಾಕ್‌ ವ್ಯಾಟ್ಸ್‌‌‌‌‌‌ದಿ ಇಂಪ್ರೂವ್‌ಮೆಂಟ್‌ ಆಫ್‌ ದಿ ಮೈಂಡ್‌ ಪುಸ್ತಕವೂ ಸೇರಿದಂತೆ ಅನೇಕ ಪುಸ್ತಕಗಳನ್ನು ಓದಿದ, ಮತ್ತು ಅವು ಒಳಗೊಂಡಿದ್ದ ತತ್ತ್ವಗಳು ಹಾಗೂ ಸಲಹೆಗಳನ್ನು ಉತ್ಸಾಹದಿಂದ ಅಳವಡಿಸಿಕೊಂಡ. ವಿಜ್ಞಾನದಲ್ಲಿ, ಅದರಲ್ಲೂ ವಿಶೇಷವಾಗಿ ವಿದ್ಯುಚ್ಚಕ್ತಿಯ ವಿಷಯದಲ್ಲಿ ಅವನು ಒಂದು ಆಸಕ್ತಿಯನ್ನು ಬೆಳೆಸಿಕೊಂಡ. ನಿರ್ದಿಷ್ಟವಾಗಿ ಹೇಳುವುದಾದರೆ, ಜೇನ್‌ ಮಾರ್ಸೆಟ್‌ ಎಂಬಾತ ಬರೆದಿದ್ದ ಕಾನ್ವರ್ಸೇಷನ್ಸ್‌ ಇನ್‌ ಕೆಮಿಸ್ಟ್ರಿ ಎಂಬ ಪುಸ್ತಕದಿಂದ ಆತ ಅತೀವವಾಗಿ ಪ್ರಭಾವಿತನಾಗಿದ್ದ.[೧೧]

1812ರಲ್ಲಿ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ, ತನ್ನ ಶಿಷ್ಯವೃತ್ತಿಯ ಅಂತ್ಯದ ವೇಳೆಗೆ, ರಾಯಲ್‌ ಇನ್‌ಸ್ಟಿಟ್ಯೂಷನ್‌ ಹಾಗೂ ರಾಯಲ್‌ ಸೊಸೈಟಿಯ ಶ್ರೇಷ್ಠ ಇಂಗ್ಲಿಷ್‌ ರಸಾಯನ ಶಾಸ್ತ್ರಜ್ಞನಾದ ಹಂಫ್ರಿ ಡೇವಿ, ಹಾಗೂ ಸಿಟಿ ಫಿಲಸಾಫಿಕಲ್‌ ಸೊಸೈಟಿಯ ಸಂಸ್ಥಾಪಕನಾದ ಜಾನ್‌ ಟ್ಯಾಟಮ್‌ ಇವರುಗಳು ನೀಡುತ್ತಿದ್ದ ಉಪನ್ಯಾಸಗಳಿಗೆ ಫ್ಯಾರಡೆ ಹಾಜರಾದ. ಈ ಉಪನ್ಯಾಸಗಳಿಗೆ ಸಂಬಂಧಿಸಿದ ಅನೇಕ ಟಿಕೆಟ್ಟುಗಳನ್ನು ಫ್ಯಾರಡೆಗೆ ವಿಲಿಯಂ ಡಾನ್ಸ್‌‌ ಎಂಬಾತ (ರಾಯಲ್‌ ಫಿಲ್‌ಹಾರ್ಮೋನಿಕ್‌ ಸೊಸೈಟಿಯ ಸಂಸ್ಥಾಪಕರಲ್ಲಿ ಒಬ್ಬ) ನೀಡಿದ್ದ. ಇದಾದ ನಂತರ, ಉಪನ್ಯಾಸಗಳ ಅವಧಿಯಲ್ಲಿ ತಾನು ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಸಿದ್ಧಪಡಿಸಿದ ಮುನ್ನೂರು ಪುಟಗಳ ಪುಸ್ತಕವೊಂದನ್ನು ಡೇವಿಗೆ ಫ್ಯಾರಡೆ ಕಳಿಸಿದ. ಇದಕ್ಕೆ ಡೇವಿಯು ತತ್‌ಕ್ಷಣದ, ಸ್ನೇಹಮಯವಾದ, ಹಾಗೂ ಅನುಕೂಲಕರವಾದ ಜವಾಬನ್ನು ನೀಡಿದ. ನೈಟ್ರೋಜೆನ್‌ ಟ್ರೈಕ್ಲೋರೈಡ್‌‌ನಿಂದಾಗಿ ಡೇವಿಯು ಆಕಸ್ಮಿಕವಾಗಿ ತನ್ನ ಕಣ್ಣಿನ ದೃಷ್ಟಿಗೆ ಹಾನಿಮಾಡಿಕೊಂಡಾಗ, ಫ್ಯಾರಡೆಯನ್ನು ತನ್ನ ಓರ್ವ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳಲು ಅವನು ನಿರ್ಧರಿಸಿದ. ರಾಯಲ್‌ ಇನ್‌ಸ್ಟಿಟ್ಯೂಷನ್‌ನ ಸಹಾಯಕರಲ್ಲೊಬ್ಬನಾದ ಜಾನ್‌ ಪಾಯ್ನೆ ಎಂಬಾತನನ್ನು ಕೆಲಸದಿಂದ ತೆಗೆದುಹಾಕಿದಾಗ, ಓರ್ವ ಬದಲಿ ವ್ಯಕ್ತಿಯನ್ನು ಹುಡುಕುವಂತೆ ಸರ್‌‌ ಹಂಫ್ರಿ ಡೇವಿಯನ್ನು ಕೇಳಿಕೊಳ್ಳಲಾಯಿತು. 1813ರ ಮಾರ್ಚ್‌ 1ರಂದು ಆತ ಫ್ಯಾರಡೆಯನ್ನು ರಾಯಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ರಾಸಾಯನಿಕ ಸಹಾಯಕನಾಗಿ ನೇಮಿಸಿಕೊಂಡ.[]

ಆ ಸಮಯದಲ್ಲಿನ ವರ್ಗಾಧಾರಿತ ಇಂಗ್ಲಿಷ್‌ ಸಮಾಜದಲ್ಲಿ, ಓರ್ವ ಕುಲೀನ ಅಥವಾ ಒಳ್ಳೆಯ ಸ್ಥಾನವನ್ನು ಹೊಂದಿರುವವನೆಂಬಂತೆ ಫ್ಯಾರಡೆಯು ಪರಿಗಣಿಸಲ್ಪಡಲಿಲ್ಲ. 1813–15ರಲ್ಲಿ ಡೇವಿಯು ಯುರೋಪ್‌ ಖಂಡಕ್ಕೆ ಒಂದು ಸುದೀರ್ಘ ಪ್ರವಾಸದ ಮೇಲೆ ತೆರಳಿದಾಗ, ಅವನ ಸೇವಕ ಅವನೊಂದಿಗೆ ಹೋಗಲು ಬಯಸಲಿಲ್ಲ. ಫ್ಯಾರಡೆಯು ಡೇವಿಯ ವೈಜ್ಞಾನಿಕ ಸಹಾಯಕನಾಗಿ ಹೋಗುತ್ತಿದ್ದ, ಮತ್ತು ಪ್ಯಾರಿಸ್‌ನಲ್ಲಿ ಓರ್ವ ಬದಲಿ ವ್ಯಕ್ತಿಯು ಸಿಗುವವರೆಗೂ ಡೇವಿಯ ಸೇವಕನ ಕೆಲಸವನ್ನೂ ನಿರ್ವಹಿಸುವಂತೆ ಫ್ಯಾರಡೆಯನ್ನು ಕೇಳಿಕೊಳ್ಳಲಾಯಿತು. ಪ್ರವಾಸದ ಉದ್ದಕ್ಕೂ ಸಹಾಯಕನಾಗಿಯಷ್ಟೇ ಅಲ್ಲದೇ ಸೇವಕನ ಪಾತ್ರವನ್ನೂ ವಹಿಸುವಂತೆ ಫ್ಯಾರಡೆಯನ್ನು ಬಲವಂತ ಮಾಡಲಾಯಿತು. ಫ್ಯಾರಡೆಯನ್ನು ಓರ್ವ ಸರಿಸಮಾನ ವ್ಯಕ್ತಿಯಾಗಿ ಪರಿಗಣಿಸಲು ಡೇವಿಯ ಹೆಂಡತಿಯಾದ ಜೇನ್‌ ಅಪ್ರೀಸ್‌ ನಿರಾಕರಿಸಿದಳು (ಸಾರೋಟಿನ ಹೊರಗಡೆ ಅವನು ಪ್ರಯಾಣಿಸುವಂತೆ, ಸೇವಕರೊಂದಿಗೆ ಆಹಾರ ಸೇವಿಸುವಂತೆ ಮಾಡುವುದು, ಇತ್ಯಾದಿ.) ಮತ್ತು ಎಷ್ಟರಮಟ್ಟಿಗೆ ಅವಳು ಫ್ಯಾರಡೆಗೆ ಸಂಕಟಕರ ಸ್ಥಿತಿಯನ್ನು ತಂದಿತ್ತಳೆಂದರೆ, ಅವನು ಒಬ್ಬನೇ ಇಂಗ್ಲಂಡ್‌ಗೆ ಮರಳುವ ಹಾಗೂ ವಿಜ್ಞಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡುವ ಕುರಿತು ಆಲೋಚಿಸಲು ಶುರುಮಾಡಿದ. ಆದಾಗ್ಯೂ, ಸದರಿ ಪ್ರವಾಸವು ಯುರೋಪಿನ ವೈಜ್ಞಾನಿಕ ಗಣ್ಯರು ಹಾಗೂ ಉತ್ತೇಜಕ ಪರಿಕಲ್ಪನೆಗಳ ಆಶ್ರಯದಾತರೊಂದಿಗೆ ಅವನಿಗೆ ಸಂಪರ್ಕವನ್ನು ಕಲ್ಪಿಸಿತು.[]

ಫ್ಯಾರಡೆ ಓರ್ವ ಧರ್ಮನಿಷ್ಠ ಕ್ರಿಶ್ಚಿಯನ್‌‌ ಆಗಿದ್ದ. ಅವನ ಸ್ಯಾಂಡೆಮ್ಯಾನಿಯಾದ ಪಂಥವು ಸ್ಕಾಟ್ಲೆಂಡಿನ ಚರ್ಚಿನ ಒಂದು ಉಪಶಾಖೆಯಾಗಿತ್ತು. ತನ್ನ ಮದುವೆಯ ಸಾಕಷ್ಟು ದಿನಗಳ ನಂತರ, ಧರ್ಮಾಧಿಕಾರಿಯಾಗಿ ಮತ್ತು ತನ್ನ ಯುವಕವೃಂದದ ಆರಾಧನಾ ಮಂದಿರದಲ್ಲಿ ಓರ್ವ ಚರ್ಚುಹಿರಿಯನಾಗಿ ಎರಡು ಅವಧಿಗಳವರೆಗೆ ಅವನು ಸೇವೆ ಸಲ್ಲಿಸಿದ. ಬಾರ್ಬಿಕಾನ್‌‌‌ನಲ್ಲಿನ ಪಾಲ್‌'ಸ್‌ ಆಲ್ಲೆ ಎಂಬಲ್ಲಿ ಅವನ ಚರ್ಚು ನೆಲೆಗೊಂಡಿತ್ತು. 1862ರಲ್ಲಿ, ಈ ಆರಾಧನಾ ಮಂದಿರವು ಐಸ್ಲಿಂಗ್ಟನ್‌‌‌ಬಾರ್ನ್ಸ್‌ಬರಿ ಗ್ರೂವ್‌‌ಗೆ ಸ್ಥಳಬದಲಾವಣೆ ಮಾಡಿಕೊಂಡಿತು. ಚರ್ಚುಹಿರಿಯನಾಗಿ ಸೇವೆ ಸಲ್ಲಿಸುತ್ತಿದ್ದ ಫ್ಯಾರಡೆಯು ಆ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ಮುಂಚಿತವಾಗಿ, ಆ ಹುದ್ದೆಯಲ್ಲಿನ ತನ್ನ ಎರಡನೇ ಅವಧಿಯ ಕೊನೆಯ ಎರಡು ವರ್ಷಗಳ ಸೇವಾವಧಿಯನ್ನು ಉತ್ತರ ಲಂಡನ್‌ನ ಈ ತಾಣದಲ್ಲಿಯೇ ಕಳೆದ.[೧೨][೧೩]

1821ರ[೧೪] ಜೂನ್‌ 12ರಂದು ಸಾರಾ ಬರ್ನಾರ್ಡ್‌ (1800–1879) ಎಂಬಾಕೆಯನ್ನು ಫ್ಯಾರಡೆ ಮದುವೆಯಾದನಾದರೂ ಅವರಿಗೆ ಎಂದಿಗೂ ಮಕ್ಕಳಾಗಲಿಲ್ಲ.[೧೫] ಸ್ಯಾಂಡೆಮ್ಯಾನಿಯನ್‌ ಚರ್ಚ್‌ನಲ್ಲಿ ತಂತಮ್ಮ ಕುಟುಂಬಗಳ ಮೂಲಕ ಅವರು ಭೇಟಿಯಾದರು. ತಾನು ಮದುವೆಯಾದ ಒಂದು ತಿಂಗಳ ನಂತರ, ಸ್ಯಾಂಡೆಮ್ಯಾನಿಯಾದ ಧಾರ್ಮಿಕ ಕೂಟದೆಡೆಗಿನ ತನ್ನ ವಿಶ್ವಾಸವನ್ನು ಅವನು ನಿವೇದಿಸಿಕೊಂಡ.

ವೈಜ್ಞಾನಿಕ ಸಾಧನೆಗಳು

[ಬದಲಾಯಿಸಿ]

ರಸಾಯನ ಶಾಸ್ತ್ರ

[ಬದಲಾಯಿಸಿ]
ತನ್ನ ಪ್ರಯೋಗಾಲಯದಲ್ಲಿರುವ ಮೈಕೇಲ್‌ ಫ್ಯಾರಡೆ. ಸುಮಾರು 1850ರ ದಶಕ; ಜಲವರ್ಣಗಳಲ್ಲಿ ಫ್ಯಾರಡೆಯ ಜೀವನವನ್ನು ದಾಖಲಿಸಿದ ಹ್ಯಾರಿಯೆಟ್‌ ಜೇನ್‌ ಮೂರ್‌ ಚಿತ್ರಿಸಿರುವ ಕೃತಿ.
ಟೆಟ್ರಾಕ್ಲೋರೋಎಥಿಲೀನ್‌ ಅಣು

ಹಂಫ್ರಿ ಡೇವಿಗೆ ಓರ್ವ ಸಹಾಯಕನಾಗಿ ಕೆಲಸ ಮಾಡಿದ್ದು ಫ್ಯಾರಡೆಯ ಅತ್ಯಂತ ಆರಂಭಿಕ ರಾಸಾಯನಿಕ ಕೆಲಸವಾಗಿತ್ತು. ಫ್ಯಾರಡೆಯು ಕ್ಲೋರೀನ್‌‌‌‌‌‌ ಕುರಿತಾದ ಒಂದು ವಿಶೇಷ ಅಧ್ಯಯನವನ್ನು ಕೈಗೊಂಡ, ಮತ್ತು ಇಂಗಾಲದ ಎರಡು ಹೊಸ ಕ್ಲೋರೈಡುಗಳನ್ನು ಆವಿಷ್ಕರಿಸಿದ. ಜಾನ್‌ ಡಾಲ್ಟನ್‌ ಎಂಬಾತನಿಂದ ಮೊದಲಬಾರಿಗೆ ಎತ್ತಿತೋರಿಸಲ್ಪಟ್ಟಿದ್ದ ಒಂದು ವಿದ್ಯಮಾನವಾಗಿದ್ದ ಅನಿಲಗಳ ವಿಸರಣದ ಕುರಿತಾದ ಮೊದಲ ಸ್ಥೂಲ ಪ್ರಯೋಗಗಳನ್ನೂ ಸಹ ಅವನು ಕೈಗೊಂಡ; ಅನಿಲಗಳ ವಿಸರಣದ ಭೌತಿಕ ಪ್ರಾಮುಖ್ಯತೆಯನ್ನು ಥಾಮಸ್‌ ಗ್ರಹಾಂ ಹಾಗೂ ಜೋಸೆಫ್‌ ಲೋಶ್‌ಮಿಡ್ಟ್‌ ಎಂಬಿಬ್ಬರು ಸಂಪೂರ್ಣವಾಗಿ ಬೆಳಕಿಗೆ ತಂದರು. ಹಲವಾರು ಅನಿಲಗಳನ್ನು ದ್ರವೀಕರಿಸುವಲ್ಲಿ ಅವನು ಯಶಸ್ವಿಯಾದ; ಉಕ್ಕಿನ ಮಿಶ್ರಲೋಹಗಳನ್ನು ಅವನು ಪತ್ತೆಮಾಡಿದ, ಮತ್ತು ದೃಗ್ವೈಜ್ಞಾನಿಕ ಉದ್ದೇಶಗಳಿಗೆ ಸಂಬಂಧಿಸಿದಂತೆ ನಿಯೋಜಿಸಲಾದ ಗಾಜಿನ ಹಲವಾರು ಹೊಸ ವಿಧಗಳನ್ನು ಉತ್ಪಾದಿಸಿದ. ಈ ಭಾರದ ಗಾಜುಗಳ ಪೈಕಿ ಒಂದರ ಮಾದರಿಯೊಂದು ತದನಂತರದಲ್ಲಿ ಐತಿಹಾಸಿಕವಾಗಿ ಪ್ರಮುಖ ವಸ್ತುವಾಗಿ ಪರಿಣಮಿಸಿತು; ಏಕೆಂದರೆ, ಈ ಗಾಜನ್ನು ಒಂದು ಕಾಂತೀಯ ಕ್ಷೇತ್ರದಲ್ಲಿ ಇರಿಸಿದಾಗ ಬೆಳಕಿನ ಧ್ರುವೀಕರಣದ ಸಮತಲದ ಆವರ್ತನವಾಗುವುದನ್ನು ಫ್ಯಾರಡೆ ಪತ್ತೆಮಾಡಿದ. ಅಷ್ಟೇ ಅಲ್ಲ, ಆಯಸ್ಕಾಂತದ ಧ್ರುವಗಳಿಂದ ಮೊದಲು ವಿಕರ್ಷಿಸಲ್ಪಟ್ಟ ವಸ್ತುವಾಗಿಯೂ ಅದು ಪ್ರಾಮುಖ್ಯತೆಯನ್ನು ಪಡೆಯಿತು. ರಸಾಯನ ಶಾಸ್ತ್ರವನ್ನು ಅದರ ಫಲಿತಾಂಶಗಳಿಂದ ಪ್ರತ್ಯೇಕಿಸಲ್ಪಟ್ಟ ರೀತಿಯಲ್ಲಿ, ಅದರ ಸಾರ್ವತ್ರಿಕ ವಿಧಾನಗಳನ್ನು ರೂಪಿಸಲೂ ಸಹ ಸಾಹಸಪಟ್ಟ ಆತ, ಈ ನಿಟ್ಟಿನಲ್ಲಿ ಒಂದಷ್ಟು ಯಶಸ್ಸಿನ್ನು ಗಳಿಸಿದ; ಇದು ವಿಶೇಷ ಅಧ್ಯಯನದ ಮತ್ತು ಜನಪ್ರಿಯ ನಿರೂಪಣೆಯ ವಿಷಯವಾಗಿತ್ತು.

ಬುನ್‌ಸೆನ್‌ ಬರ್ನರು ಎಂದು ನಂತರದಲ್ಲಿ ಹೆಸರಾದ ಬರ್ನರಿನ ಒಂದು ಆರಂಭಿಕ ಪ್ರಕಾರವನ್ನು ಅವನು ಆವಿಷ್ಕರಿಸಿದ; ಬುನ್‌ಸೆನ್‌ ಬರ್ನರನ್ನು ಸಕಾಲದಲ್ಲಿ ದೊರೆಯುವ ಅಥವಾ ಅನುಕೂಲಕರವಾದ ಶಾಖದ ಒಂದು ಮೂಲವಾಗಿ ವಿಜ್ಞಾನದ ಪ್ರಯೋಗಾಲಯಗಳಲ್ಲಿ ಹೆಚ್ಚೂಕಮ್ಮಿ ಸಾರ್ವತ್ರಿಕವಾಗಿ ಬಳಸಲಾಗುತ್ತದೆ.[೧೬][೧೭] ರಸಾಯನ ಶಾಸ್ತ್ರದ ವಲಯದಲ್ಲಿ ಫ್ಯಾರಡೆ ವ್ಯಾಪಕವಾಗಿ ಕೆಲಸಮಾಡಿದ; ಇದರ ಪರಿಣಾಮವಾಗಿ ಬೆನ್‌ಜೀನ್‌ನಂಥ (ಇದನ್ನು ಆತ ಜಲಜನಕದ ಬೈಕಾರ್ಬ್ಯುರೆಟ್‌ ಎಂದು ಕರೆದ) ರಾಸಾಯನಿಕ ವಸ್ತುಗಳನ್ನು ಆವಿಷ್ಕರಿಸುವ, ಹಾಗೂ ಕ್ಲೋರೀನ್‌‌‌‌ನಂಥ ಅನಿಲಗಳನ್ನು ದ್ರವೀಕರಿಸುವ ಸಾಧನೆಗಳನ್ನು ಅವನು ದಾಖಲಿಸುವಂತಾಯಿತು. ಅನಿಲಗಳು ಕೇವಲ ದ್ರವಪದಾರ್ಥಗಳ ಆವಿಗಳಾಗಿದ್ದು, ಒಂದು ಅತ್ಯಂತ ಕಡಿಮೆ ಮಟ್ಟದ ಕುದಿಯುವ-ಬಿಂದುವನ್ನು ಹೊಂದಿರುತ್ತವೆ ಎಂಬುದನ್ನು ಪ್ರಮಾಣೀಕರಿಸುವಲ್ಲಿ ಅನಿಲಗಳ ದ್ರವೀಕರಣವು ನೆರವಾಯಿತು, ಮತ್ತು ಆಣ್ವಿಕ ಸಮುದಾಯದ ಪರಿಕಲ್ಪನೆಗಳಿಗೆ ಒಂದು ಖಾತ್ರಿಯಾದ ತಳಹದಿಯನ್ನು ಅದು ನೀಡಿತು. 1820ರಲ್ಲಿ, ಇಂಗಾಲ ಮತ್ತು ಕ್ಲೋರೀನ್‌ನಿಂದ ರೂಪಿಸಲಾದ ಸಂಯುಕ್ತಗಳಾದ C2Cl6 ಹಾಗೂ C2Cl4 ಇವುಗಳ ಮೊದಲ ಸಂಶ್ಲೇಷಣೆಯ ಕುರಿತಾಗಿ ಫ್ಯಾರಡೆ ವರದಿಮಾಡಿದ, ಮತ್ತು ತನ್ನ ಫಲಿತಾಂಶಗಳನ್ನು ನಂತರದ ವರ್ಷ ಪ್ರಕಟಿಸಿದ.[೧೮][೧೯][೨೦] ಹಂಫ್ರಿ ಡೇವಿಯಿಂದ 1810ರಲ್ಲಿ ಆವಿಷ್ಕರಿಸಲ್ಪಟ್ಟಿದ್ದ ಕ್ಲೋರೀನ್‌‌‌‌ ಕ್ಲಾಥರೇಟ್‌ ಹೈಡ್ರೇಟ್‌‌ನ ಸಂಯೋಜನೆಯನ್ನೂ ಸಹ ಫ್ಯಾರಡೆ ನಿರ್ಣಯಿಸಿದ.[೨೧][೨೨]

ವಿದ್ಯುದ್ವಿಚ್ಛೇದನದ ನಿಯಮಗಳನ್ನೂ ಸಹ ಫ್ಯಾರಡೆ ಆವಿಷ್ಕರಿಸಿದ ಮತ್ತು ವಿಲಿಯಂ ವೆವೆಲ್‌ನಿಂದ ಹೆಚ್ಚಿನ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿದ್ದ ಶಬ್ದಗಳಾದ ಧನ ವಿದ್ಯುದ್ವಾರ, ಋಣ ವಿದ್ಯುದ್ವಾರ, ವಿದ್ಯುದ್ವಾರ, ಮತ್ತು ಅಯಾನು ಎಂಬಂಥ ಪಾರಿಭಾಷಿಕ ಪದಗಳನ್ನು ಅವನು ಜನಪ್ರಿಯಗೊಳಿಸಿದ.

ಕಾಲಾನಂತರದಲ್ಲಿ ಲೋಹೀಯ ನ್ಯಾನೋಕಣಗಳು ಎಂದು ಕರೆಯಲ್ಪಟ್ಟವುಗಳ ಕುರಿತು ಮೊದಲು ವರದಿ ಮಾಡಿದ ಕೀರ್ತಿಯು ಫ್ಯಾರಡೆಗೆ ಸಲ್ಲುತ್ತದೆ. ಬಂಗಾರದ ಕಲಿಲಗಳ ದೃಗ್ವೈಜ್ಞಾನಿಕ ಗುಣಲಕ್ಷಣಗಳು ಸಂಬಂಧಿಸಿದ ಭಾರೀ ಲೋಹದ ದೃಗ್ವೈಜ್ಞಾನಿಕ ಗುಣಲಕ್ಷಣಗಳಿಗಿಂತ ಭಿನ್ನವಾಗಿದ್ದವು ಎಂಬುದನ್ನು ಅವನು 1847ರಲ್ಲಿ ಆವಿಷ್ಕರಿಸಿದ. ಇದು ಪ್ರಾಯಶಃ ಕ್ವಾಂಟಂ ಗಾತ್ರದ ಪ್ರಭಾವಗಳ ಮೊದಲ ವರದಿ ಮಾಡಲ್ಪಟ್ಟ ವೀಕ್ಷಣೆಯಾಗಿತ್ತು, ಮತ್ತು ನ್ಯಾನೋವಿಜ್ಞಾನದ ಹುಟ್ಟು ಎಂದು ಇದನ್ನು ಪರಿಗಣಿಸಬಹುದಾಗಿದೆ.[೨೩]

ವಿದ್ಯುಚ್ಚಕ್ತಿ ಮತ್ತು ಕಾಂತೀಯತೆ

[ಬದಲಾಯಿಸಿ]

ವಿದ್ಯುಚ್ಚಕ್ತಿ ಮತ್ತು ಕಾಂತೀಯತೆಗೆ ಸಂಬಂಧಿಸಿದಂತೆ ತಾನು ಮಾಡಿದ ಕೆಲಸಕ್ಕಾಗಿ ಫ್ಯಾರಡೆ ಹೆಚ್ಚು ಚಿರಪರಿಚಿತನಾಗಿದ್ದಾನೆ. ಒಂದು ಪ್ರವಾಹ ವಿದ್ಯುತ್ತಿನ ತಗಡುಕಟ್ಟಿನ ನಿರ್ಮಾಣವು ಅವನು ದಾಖಲಿಸಿದ ಮೊದಲ ಪ್ರಯೋಗವಾಗಿತ್ತು; ಸತುವಿನ ಹಾಳೆಯ ಏಳು ತಟ್ಟೆಗಳ ಜೊತೆಗೂಡಿಸಿ ಪೇರಿಸಲ್ಪಟ್ಟಿದ್ದ ಏಳು ಅರ್ಧ ಪೆನಿಗಳ ತುಣುಕುಗಳು, ಹಾಗೂ ಉಪ್ಪಿನ ನೀರಿನಿಂದ ತೇವಗೊಳಿಸಲಾದ ಕಾಗದದ ಆರು ತುಣುಕುಗಳಿಂದ ಈ ತಗಡುಕಟ್ಟು ರೂಪಿಸಲ್ಪಟ್ಟಿತ್ತು. ಈ ತಗಡುಕಟ್ಟಿನ ನೆರವಿನೊಂದಿಗೆ ಅವನು ಮೆಗ್ನೀಷಿಯಾದ ಸಲ್ಫೇಟ್‌ನ್ನು ವಿಘಟಿಸಿದ (ಅಬ್ಬಾಟ್‌ಗೆ ಬರೆದ ಮೊದಲ ಪತ್ರ, 12 ಜುಲೈ 1812).

ಒಂದು ಪ್ರವಾಹ ವಿದ್ಯುತ್ತಿನ ತಗಡುಕಟ್ಟು
ಫ್ಯಾರಡೆಯ ವಿದ್ಯುತ್ಕಾಂತೀಯ ಆವರ್ತನ ಪ್ರಯೋಗ ಸುಮಾರು 1821[೨೪]
ಒಂದು ಉರುಳೆ ಸುರುಳಿ

1821ರಲ್ಲಿ, ಡ್ಯಾನಿಷ್‌ ಭೌತವಿಜ್ಞಾನಿ ಹಾಗೂ ರಸಾಯನ ಶಾಸ್ತ್ರಜ್ಞನಾದ ಹಾನ್ಸ್‌‌ ಕ್ರಿಶ್ಚಿಯನ್‌‌ ಆರ್ಸ್ಟೆಡ್‌ ಎಂಬಾತ ವಿದ್ಯುತ್ಕಾಂತತೆಯ ವಿದ್ಯಮಾನವನ್ನು ಆವಿಷ್ಕರಿಸಿದ ಕೆಲವೇ ದಿನಗಳಲ್ಲಿ, ಡೇವಿ ಹಾಗೂ ಬ್ರಿಟಿಷ್‌ ವಿಜ್ಞಾನಿಯಾದ ವಿಲಿಯಂ ಹೈಡೆ ವೊಲ್ಲಾಸ್ಟನ್‌ ಒಂದು ವಿದ್ಯುತ್ತಿನ ಮೋಟಾರನ್ನು ವಿನ್ಯಾಸಗೊಳಿಸಲು ಪ್ರಯತ್ನಿಸಿದರಾದರೂ, ತಮ್ಮ ಪ್ರಯತ್ನದಲ್ಲಿ ವಿಫಲಗೊಂಡರು.[] ಈ ಇಬ್ಬರೊಂದಿಗೆ ಸಮಸ್ಯೆಯನ್ನು ಚರ್ಚಿಸಿದ ನಂತರ ಫ್ಯಾರಡೆಯು, ತಾನು ಹೆಸರಿಟ್ಟಿದ್ದ ವಿದ್ಯುತ್ಕಾಂತೀಯ ಆವರ್ತನವನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿದ ಎರಡು ಸಾಧನಗಳನ್ನು ನಿರ್ಮಿಸುವಲ್ಲಿ ತನ್ನನ್ನು ತೊಡಗಿಸಿಕೊಂಡ: ಒಂದು ತಂತಿಯ ಸುತ್ತ ಇರುವ ವೃತ್ತಾಕಾರದ ಕಾಂತೀಯ ಬಲದಿಂದ ಉಂಟಾಗುತ್ತಿದ್ದ ಒಂದು ನಿರಂತರ ವೃತ್ತಾಕಾರದ ಚಲನೆ ಮತ್ತು ಒಂದು ಆಯಸ್ಕಾಂತವನ್ನು ಇರಿಸಲಾಗಿರುವ ಪಾದರಸದ ಒಂದು ರಾಶಿಯೊಳಗೆ ಒಂದು ತಂತಿಯು ವಿಸ್ತರಿಸಲ್ಪಟ್ಟಿದ್ದು, ಒಂದು ರಾಸಾಯನಿಕ ಕೋಶದಿಂದ ಒಂದು ವೇಳೆ ವಿದ್ಯುತ್‌ ಪ್ರವಾಹವನ್ನು ಪೂರೈಸಿದಲ್ಲಿ ಅದು ಆಯಸ್ಕಾಂತದ ಸುತ್ತ ಸುತ್ತುತ್ತಿತ್ತು. ಮೇಲೆ ಹೇಳಿದ್ದರ ಪೈಕಿ ಎರಡನೆಯ ಸಾಧನವನ್ನು ಒಂದು ಸಮಧ್ರುವೀಯ ಮೋಟಾರು ಎಂದು ಕರೆಯಲಾಗುತ್ತದೆ. ಈ ಪ್ರಯೋಗಗಳು ಮತ್ತು ಆವಿಷ್ಕಾರಗಳು ಆಧುನಿಕ ವಿದ್ಯುತ್ಕಾಂತೀಯ ತಂತ್ರಜ್ಞಾನದ ತಳಹದಿಯನ್ನು ರೂಪಿಸುತ್ತವೆ. ಅತೀವ ಸಂಭ್ರಮದಲ್ಲಿದ್ದ ಫ್ಯಾರಡೆಯು, ವೊಲ್ಲಾಸ್ಟನ್ ಅಥವಾ ಡೇವಿಯೊಂದಿಗಿನ ತನ್ನ ಕೆಲಸದ ಉಪಕಾರ ಸ್ಮರಣೆಯನ್ನು ಮಾಡದೆಯೇ ಫಲಿತಾಂಶಗಳನ್ನು ಪ್ರಕಟಿಸಿದ. ಇದರ ಪರಿಣಾಮವಾಗಿ ರಾಯಲ್‌ ಸೊಸೈಟಿಯೊಳಗಡೆ ಹೊರಹೊಮ್ಮಿದ ವಿವಾದವು, ಆತನ ಆಪ್ತ ಸಲಹಾಕಾರನಾದ ಡೇವಿಯೊಂದಿಗಿನ ಸಂಬಂಧವನ್ನು ಕುಗ್ಗಿಸಿತು ಮತ್ತು ಇತರ ಚಟುವಟಿಕೆಗಳಿಗೆ ಸಂಬಂಧಿಸಿದ ಫ್ಯಾರಡೆಯ ನಿಗದಿತ ಕಾರ್ಯಕ್ಕೆ ಉತ್ತಮವಾಗಿ ಕೊಡುಗೆ ನೀಡಬಹುದಾಗಿತ್ತು, ಇದರಿಂದಾಗಿ ಹಲವಾರು ವರ್ಷಗಳವರೆಗೆ ವಿದ್ಯುತ್ಕಾಂತೀಯ ಸಂಶೋಧನೆಯಿಂದ ಅವನನ್ನು ತೆಗೆದುಹಾಕಲಾಯಿತು.[೨೫][೨೬]

1821ರಲ್ಲಿನ ತನ್ನ ಆರಂಭಿಕ ವಿದ್ಯುತ್ಕಾಂತೀಯ (EM) ಆವಿಷ್ಕಾರದಿಂದ, ಮೂಲದ್ರವ್ಯಗಳ ಗುಣಲಕ್ಷಣಗಳ ಒಳಹೊಕ್ಕು ಪರೀಕ್ಷಿಸುವಿಕೆ ಹಾಗೂ ಅವಶ್ಯಕವಾಗಿರುವ ಅನುಭವವನ್ನು ಬೆಳೆಸುವ ತನ್ನ ಪ್ರಯೋಗಾಲಯದ ಕೆಲಸವನ್ನು ಫ್ಯಾರಡೆ ಮುಂದುವರಿಸಿದ. ಕಾಂತೀಯ ಕ್ಷೇತ್ರವೊಂದು ಪಕ್ಕದ ತಂತಿಯೊಂದರಲ್ಲಿನ ಒಂದು ಪ್ರವಾಹದ ಹರಿವನ್ನು ನಿಯಂತ್ರಿಸಬಲ್ಲದೇ ಎಂಬುದನ್ನು ಅಧ್ಯಯನ ಮಾಡಲು 1824ರಲ್ಲಿ ಫ್ಯಾರಡೆಯು ಸಂಕ್ಷಿಪ್ತವಾಗಿ ಒಂದು ವಿದ್ಯುನ್ಮಂಡಲವನ್ನು ಸಜ್ಜುಗೊಳಿಸಿದ, ಆದರೆ ಅಂಥ ಯಾವ ಸಂಬಂಧವೂ ಅವನಿಗೆ ಕಂಡುಬರಲಿಲ್ಲ.[೨೭] ಮೂರು ವರ್ಷಗಳಷ್ಟು ಮುಂಚಿತವಾಗಿ ತದ್ರೂಪವಾದ ಫಲಿತಾಂಶಗಳೊಂದಿಗೆ ಕೈಗೊಳ್ಳಲಾಗಿದ್ದ ಬೆಳಕು ಮತ್ತು ಆಯಸ್ಕಾಂತಗಳೊಂದಿಗಿನ ಕೆಲಸವನ್ನು ಈ ಪ್ರಯೋಗಾಲಯವು ಅನುಸರಿಸಿತು.[೨೮][೨೯] ನಂತರದ ಏಳು ವರ್ಷಗಳ ಅವಧಿಯಲ್ಲಿ, ದೃಗ್ವೈಜ್ಞಾನಿಕ ಗುಣಮಟ್ಟದ (ಭಾರದ) ಗಾಜು ಎಂದು ಕರೆಸಿಕೊಳ್ಳುವ, ಸೀಸದ[೩೦] ಬೋರೋ-ಸಿಲಿಕೇಟ್‌ಗೆ ಸಂಬಂಧಿಸಿದಂತೆ ತಾನು ರೂಪಿಸಿದ್ದ ಸೂತ್ರವನ್ನು ಕರಾರುವಾಕ್ಕಾಗಿಸಿಕೊಳ್ಳಲು ಫ್ಯಾರಡೆ ತನ್ನ ಬಹುಪಾಲು ಸಮಯವನ್ನು ಮೀಸಲಾಗಿಟ್ಟ; ಬೆಳಕನ್ನು ಕಾಂತೀಯತೆಯೊಂದಿಗೆ ಸಂಪರ್ಕಿಸುವ ತನ್ನ ಭವಿಷ್ಯದ ಅಧ್ಯಯನಗಳಲ್ಲಿ ಅವನು ಇದನ್ನು ಬಳಸಿಕೊಂಡ.[೩೧] ಈ ದೃಗ್ವಿಜ್ಞಾನ ಕೆಲಸದಿಂದ ಸಿಕ್ಕ ಹೆಚ್ಚುವರಿ ಸಮಯದಲ್ಲಿ ತನ್ನ ಪ್ರಯೋಗಾತ್ಮಕ ಕೆಲಸಗಳ (ಅವುಗಳಲ್ಲಿ ಕೆಲವು EMಗೆ ಸಂಬಂಧಪಟ್ಟಿದ್ದವು) ಪ್ರಕಟಿಸುವಿಕೆಯನ್ನು ಫ್ಯಾರಡೆ ಮುಂದುವರಿಸಿದ ಮತ್ತು ಡೇವಿಯೊಂದಿಗೆ ಯುರೋಪ್‌ ಪ್ರವಾಸ ಕೈಗೊಂಡಿದ್ದಾಗ ಹಿಂದೆ ಭೇಟಿಯಾಗಿದ್ದ ವಿಜ್ಞಾನಿಗಳೊಂದಿಗಿನ (ಇವರೂ ಸಹ EM ಕುರಿತಾಗಿ ಕೆಲಸ ಮಾಡುತ್ತಿದ್ದರು) ತನ್ನ ವಿದೇಶಿ ಪತ್ರ ವ್ಯವಹಾರವನ್ನು ನಿರ್ವಹಿಸಿದ.[೩೨] ಡೇವಿಯ ಸಾವಿನ ಎರಡು ವರ್ಷಗಳ ನಂತರ, 1831ರಲ್ಲಿ ತನ್ನ ಪ್ರಯೋಗಗಳ ಮಹಾನ್‌ ಸರಣಿಯನ್ನು ಅವನು ಶುರುಮಾಡಿದ; ಈ ಅವಧಿಯಲ್ಲಿ ಅವನು ವಿದ್ಯುತ್ಕಾಂತೀಯ ಪ್ರೇರಣೆಯನ್ನು ಆವಿಷ್ಕರಿಸಿದ. ಇದಕ್ಕೆ ಕೆಲವೇ ತಿಂಗಳುಗಳಷ್ಟು ಮುಂಚಿತವಾಗಿ ಜೋಸೆಫ್‌ ಹೆನ್ರಿಯು ಸ್ವಯಂ-ಚೋದನೆಯನ್ನು ಬಹುಮಟ್ಟಿಗೆ ಆವಿಷ್ಕರಿಸಿದ್ದ ಮತ್ತು ಇಟಲಿಯಲ್ಲಿ 1829 ಮತ್ತು 1830ರಲ್ಲಿ ಫ್ರಾನ್ಸೆಸ್ಕೊ ಝಾಂಟೆಡೆಸ್ಕಿಯು ಕೈಗೊಂಡ ಕೆಲಸದಿಂದ ಎರಡನ್ನೂ ಸಹ ನಿರೀಕ್ಷಿಸಬಹುದಾಗಿತ್ತು.[೩೩]

ಇಂದಿನ ವಿದ್ಯುದ್ರಸಾಯನಶಾಸ್ತ್ರದ ಸಂಸ್ಥಾಪಕರೆಂಬ ಮನ್ನಣೆಗೆ ಪಾತ್ರರಾಗಿರುವ ಇಂಗ್ಲಿಷ್‌ ರಸಾಯನ ಶಾಸ್ತ್ರಜ್ಞರಾದ ಜಾನ್‌ ಡೇನಿಯಲ್‌ (ಎಡಕ್ಕೆ) ಮತ್ತು ಮೈಕೇಲ್‌ ಫ್ಯಾರಡೆ (ಬಲಕ್ಕೆ).

ಫ್ಯಾರಡೆಯು ಒಂದು ಕಬ್ಬಿಣದ ಉಂಗುರದ ಸುತ್ತ ತಂತಿಯ ಎರಡು ನಿರೋಧಿಸಲ್ಪಟ್ಟ ಸುರುಳಿಗಳನ್ನು ಸುತ್ತಿಟ್ಟು, ಒಂದು ಸುರುಳಿಯ ಮೂಲಕ ಒಂದು ವಿದ್ಯುತ್‌ ಪ್ರವಾಹವನ್ನು ಹಾಯಿಸಿದ. ಹೀಗೆ ಮಾಡಿದಾಗ, ಮತ್ತೊಂದು ಸುರುಳಿಯಲ್ಲಿ ಒಂದು ಅಲ್ಪಕಾಲಿಕ ಪ್ರವಾಹವು ಚೋದಿಸಲ್ಪಟ್ಟಿದ್ದನ್ನು ಕಂಡುಕೊಂಡಾಗ, ಅವನು ಕೈಗೊಂಡ ಪ್ರಮುಖ ಪ್ರಗತಿ ಹೊರಹೊಮ್ಮಿದಂತಾಯಿತು.[] ಈ ವಿದ್ಯಮಾನವು ಪರಸ್ಪರ ಪ್ರೇರಣೆ ಎಂದು ಕರೆಸಿಕೊಂಡಿದೆ. ಕಬ್ಬಿಣದ ಉಂಗುರದ-ಸುರುಳಿ ಸಾಧನವನ್ನು ಈಗಲೂ ಸಹ ರಾಯಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಒಂದು ವೇಳೆ ತಂತಿಯ ಕುಣಿಕೆಯೊಂದರ ಮೂಲಕ ಆಯಸ್ಕಾಂತವೊಂದು ಚಲಿಸುವಂತೆ ಮಾಡಿದರೆ, ತಂತಿಯೊಳಗೆ ಒಂದು ವಿದ್ಯುತ್‌ ಪ್ರವಾಹವು ಹರಿಯುತ್ತದೆ ಎಂಬುದನ್ನು ಅವನು ತರುವಾಯದ ಪ್ರಯೋಗಗಳಲ್ಲಿ ಕಂಡುಕೊಂಡ. ಒಂದು ವೇಳೆ ಒಂದು ಸ್ಥಾಯಿ ಆಯಸ್ಕಾಂತದ ಮೇಲೆ ಕುಣಿಕೆಯನ್ನು ಚಾಲಿಸಿದರೆ, ಆಗಲೂ ಸಹ ಪ್ರವಾಹದ ಹರಿವು ಕಂಡುಬಂತು. ಬದಲಾಗುತ್ತಿರುವ ಕಾಂತೀಯ ಕ್ಷೇತ್ರವೊಂದು ಒಂದು ವಿದ್ಯುತ್ತಿನ ಕ್ಷೇತ್ರವನ್ನು ಉಂಟುಮಾಡುತ್ತದೆ ಎಂಬುದನ್ನು ಅವನ ಪ್ರಮಾಣೀಕರಣಗಳು ನಿರೂಪಿಸಿದವು. ಈ ಸಂಬಂಧವು ಫ್ಯಾರಡೆಯ ನಿಯಮ ಎಂಬುದಾಗಿ ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್‌‌ನಿಂದ ಕರಾರುವಾಕ್ಕಾಗಿ ರೂಪಿಸಲ್ಪಟ್ಟಿತು; ಇದೇ ತರುವಾಯದಲ್ಲಿ ನಾಲ್ಕು ಮ್ಯಾಕ್ಸ್‌ವೆಲ್‌ ಸಮೀಕರಣಗಳಲ್ಲಿ ಒಂದೆನಿಸಿಕೊಂಡಿತು. ಕ್ಷೇತ್ರ ಸಿದ್ಧಾಂತ ಎಂಬುದಾಗಿ ಇಂದು ಚಿರಪರಿಚಿತವಾಗಿರುವ ಸಾಮಾನ್ಯೀಕರಣವಾಗಿ ಇವು ಅನುಕ್ರಮವಾಗಿ ವಿಕಸನಗೊಂಡವು.

ಆಧುನಿಕ ವಿದ್ಯುತ್‌ ಉತ್ಪಾದಕಗಳ ಪೂರ್ವರೂಪವಾದ ವಿದ್ಯುತ್ತಿನ ಡೈನಮೊವನ್ನು ರೂಪಿಸಲು ಫ್ಯಾರಡೆಯು ಈ ತತ್ತ್ವವನ್ನು ನಂತರದಲ್ಲಿ ಬಳಸಿಕೊಂಡ.

ವಿದ್ಯುಚ್ಚಕ್ತಿಯ ಮೂಲಭೂತ ಪ್ರವೃತ್ತಿಯನ್ನು ಕಂಡುಹಿಡಿಯುವೆಡೆಗೆ ಗುರಿಯಿಟ್ಟುಕೊಂಡಿದ್ದ ಪ್ರಯೋಗಗಳ ಒಂದು ಸರಣಿಯನ್ನು ಅವನು 1839ರಲ್ಲಿ ಸಂಪೂರ್ಣಗೊಳಿಸಿದ. ಸ್ಥಾಯೀ ವಿದ್ಯುತ್ತಿನ ಆಕರ್ಷಣೆ, ವಿದ್ಯುದ್ವಿಚ್ಛೇದನ, ಕಾಂತೀಯತೆ, ಇತ್ಯಾದಿ ಸಂಗತಿಗಳನ್ನು ಉಂಟುಮಾಡಲು "ಸ್ಥಾಯೀ", ಕೋಶಗಳು, ಹಾಗೂ "ಪ್ರಾಣಿ ವಿದ್ಯುಚ್ಚಕ್ತಿ"ಯನ್ನು ಫ್ಯಾರಡೆ ಬಳಸಿಕೊಂಡ. ವಿದ್ಯುಚ್ಚಕ್ತಿಯ ಹಲವಾರು "ವಿಧಗಳ" ನಡುವಿನ ವಿಭಾಗಗಳು ಭ್ರಾಮಕವಾಗಿದ್ದವು ಎಂಬ ತೀರ್ಮಾನವನ್ನು ಅವನು ತಳೆದ; ಇದು ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ವೈಜ್ಞಾನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದ ತೀರ್ಮಾನವಾಗಿತ್ತು. ಅದರ ಬದಲಿಗೆ ಫ್ಯಾರಡೆಯು ಒಂದು ಏಕ "ವಿದ್ಯುಚ್ಚಕ್ತಿ" ಮಾತ್ರವೇ ಅಸ್ತಿತ್ವದಲ್ಲಿರುತ್ತದೆ, ಮತ್ತು ಪ್ರಮಾಣ ಹಾಗೂ ತೀವ್ರತೆಯ (ಪ್ರವಾಹ ಮತ್ತು ವೋಲ್ಟೇಜು) ಬದಲಾಗುತ್ತಿರುವ ಮೌಲ್ಯಗಳು ಸಂಗತಿಗಳ ವಿಭಿನ್ನ ಗುಂಪುಗಳನ್ನು ಉಂಟುಮಾಡುತ್ತದೆ ಎಂದು ಪ್ರತಿಪಾದಿಸಿದ.[]

ತನ್ನ ವೃತ್ತಿಜೀವನದ ಕೊನೆಕೊನೆಗೆ, ವಾಹಕದ ಸುತ್ತಮುತ್ತ ಇರುವ ಖಾಲಿ ಸ್ಥಳಾವಕಾಶದೊಳಗೆ ವಿದ್ಯುತ್ಕಾಂತೀಯ ಬಲಗಳು ವಿಸ್ತರಣೆಗೊಳ್ಳುತ್ತವೆ ಎಂದು ಫ್ಯಾರಡೆ ಪ್ರತಿಪಾದಿಸಿದ. ಈ ಪರಿಕಲ್ಪನೆಯನ್ನು ಅವನ ಸಹವರ್ತಿ ವಿಜ್ಞಾನಿಗಳು ತಿರಸ್ಕರಿಸಿದರು, ಮತ್ತು ಈ ಪರಿಕಲ್ಪನೆಯು ಅಂತಿಮವಾಗಿ ಸ್ವೀಕರಿಸಲ್ಪಡುವುದನ್ನು ನೋಡಲು ಫ್ಯಾರಡೆಯು ಬದುಕಿರಲಿಲ್ಲ. ವಿದ್ಯುದಾವೇಶಕ್ಕೊಳಗಾದ ಕಾಯಗಳು ಹಾಗೂ ಆಯಸ್ಕಾಂತಗಳಿಂದ ಹೊರಹೊಮ್ಮುತ್ತಿರುವ ಪ್ರಸರ ರೇಖೆಗಳ ಕುರಿತಾದ ಫ್ಯಾರಡೆಯ ಪರಿಕಲ್ಪನೆಯು, ವಿದ್ಯುತ್ತಿನ ಕ್ಷೇತ್ರ ಹಾಗೂ ಕಾಂತೀಯ ಕ್ಷೇತ್ರಗಳನ್ನು ಗೋಚರಗೊಳಿಸುವುದಕ್ಕೆ ಒಂದು ಮಾರ್ಗವನ್ನು ಕಲ್ಪಿಸಿದವು. ವಿದ್ಯುದ್ಯಾಂತ್ರಿಕ ಸಾಧನಗಳ ಯಶಸ್ವಿ ಅಭಿವೃದ್ಧಿಗೆ ಆ ಮಾನಸಿಕ ಮಾದರಿಯು ನಿರ್ಣಾಯಕವಾಗಿತ್ತು; ಈ ವಿದ್ಯುದ್ಯಾಂತ್ರಿಕ ಸಾಧನಗಳು 19ನೇ ಶತಮಾನದ ಉಳಿದ ಭಾಗದಲ್ಲಿ ಎಂಜಿನಿಯರಿಂಗ್‌‌‌ ಹಾಗೂ ಉದ್ಯಮದಲ್ಲಿ ಪ್ರಾಬಲ್ಯವನ್ನು ಸಾಧಿಸಿದವು.

ಪಾರಕಾಂತೀಯತೆ

[ಬದಲಾಯಿಸಿ]
ಒಂದು ಅವಾಹಕ ಮೂಲದ್ರವ್ಯದಲ್ಲಿನ ಬೆಳಕಿನ ಮೇಲೆ ಕಾಂತೀಯತೆಯು ಪರಿಣಾಮ ಬೀರಬಲ್ಲದು ಎಂಬುದನ್ನು ತೋರಿಸಲು 1845ರಲ್ಲಿ ತಾನು ಬಳಸಿದ ಒಂದು ಗಾಜಿನ ಹಲಗೆಯ ಬಗೆಯನ್ನು ಮೈಕೇಲ್‌ ಫ್ಯಾರಡೆ ಹಿಡಿದುಕೊಂಡಿರುವುದು.[೩೪]

ಅನೇಕ ಮೂಲದ್ರವ್ಯಗಳು ಒಂದು ಕಾಂತೀಯ ಕ್ಷೇತ್ರದಿಂದ ಒಂದು ದುರ್ಬಲ ವಿಕರ್ಷಣೆಯನ್ನು ಪ್ರದರ್ಶಿಸುತ್ತವೆ ಎಂದು 1845ರಲ್ಲಿ ಫ್ಯಾರಡೆ ಆವಿಷ್ಕರಿಸಿದ ಮತ್ತು ಈ ಸಂಗತಿಗೆ ಅವನು ಪಾರಕಾಂತೀಯತೆ ಎಂದು ಹೆಸರಿಸಿದ.

ರೇಖೀಯವಾಗಿ ಧ್ರುವೀಕರಿಸಲ್ಪಟ್ಟ ಬೆಳಕಿನ ಧ್ರುವೀಕರಣದ ಸಮತಲವನ್ನು, ಬೆಳಕು ಚಲಿಸುತ್ತಿರುವ ದಿಕ್ಕಿನಲ್ಲಿ ಸಾಲುಗೂಡಿದ ಒಂದು ಬಾಹ್ಯ ಕಾಂತೀಯ ಕ್ಷೇತ್ರದ ಅನ್ವಯಿಸುವಿಕೆಯಿಂದ ತಿರುಗಿಸಲು ಸಾಧ್ಯವಿದೆ ಎಂಬುದನ್ನೂ ಸಹ ಫ್ಯಾರಡೆ ಕಂಡುಕೊಂಡ. ಇದನ್ನೇ ಈಗ ಫ್ಯಾರಡೆ ಪ್ರಭಾವ ಎಂದು ಕರೆಯಲಾಗುತ್ತದೆ. ಈ ಕುರಿತು ತನ್ನ ಟಿಪ್ಪಣಿ ಪುಸ್ತಕದಲ್ಲಿ ಅವನು ಹೀಗೆ ಬರೆದುಕೊಂಡ: "ಬಲರೇಖೆ ಅಥವಾ ಒಂದು ಕಾಂತೀಯ ತಿರುವಿನ ವಿಶದಪಡಿಸುವಿಕೆ ಯಲ್ಲಿ ಮತ್ತು ಒಂದು ಬೆಳಕಿನ ಕಿರಣದ ಕಾಂತೀಕರಿಸುವಿಕೆ ಯಲ್ಲಿ ಕೊನೆಗೂ ನಾನು ಯಶಸ್ವಿಯಾಗಿದ್ದೇನೆ".

ತನ್ನ ಜೀವನದ ಅಂತ್ಯಕಾಲದಲ್ಲಿ (1862), ಬೆಳಕಿನ ಒಂದು ವಿಭಿನ್ನ ಮಾರ್ಪಾಡಿಗೆ ಸಂಬಂಧಿಸಿದಂತೆ ಶೋಧಿಸಲು, ಒಂದು ಅನ್ವಯಿಕ ಕಾಂತೀಯ ಕ್ಷೇತ್ರದಿಂದ ಉಂಟಾಗುವ ರೋಹಿತದ ಗೆರೆಗಳ ಬದಲಾವಣೆಯನ್ನು ಕಂಡುಕೊಳ್ಳಲು ರೋಹಿತ ದರ್ಶಕವೊಂದನ್ನು ಫ್ಯಾರಡೆಯು ಬಳಸಿಕೊಂಡ. ಆದಾಗ್ಯೂ, ಅವನಿಗೆ ಲಭ್ಯವಾದ ಉಪಕರಣವು ಒಂದು ರೋಹಿತದ ಬದಲಾವಣೆಯ ನಿಶ್ಚಿತ ವ್ಯಾಪ್ತಿನಿರ್ಣಯ ಮಾಡುವುದಕ್ಕೆ ಸಂಬಂಧಿಸಿದಂತೆ ತಕ್ಕನಾಗಿರಲಿಲ್ಲ. ನಂತರದಲ್ಲಿ ಇದೇ ಸಂಗತಿಯನ್ನು ಅಧ್ಯಯನ ಮಾಡಲು ಪೀಟರ್‌ ಝೀಮನ್ ಎಂಬಾತ ಒಂದು ಸುಧಾರಿತ ಸಾಧನವನ್ನು ಬಳಸಿ, 1897ರಲ್ಲಿ ತನ್ನ ಫಲಿತಾಂಶಗಳನ್ನು ಪ್ರಕಟಿಸಿದ ಮತ್ತು ಈ ನಿಟ್ಟಿನಲ್ಲಿ ಅವನಿಗೆ ದಕ್ಕಿದ ಯಶಸ್ಸಿಗೆ ಅವನು 1902ರಲ್ಲಿ ಭೌತಶಾಸ್ತ್ರದಲ್ಲಿನ ನೊಬೆಲ್‌ ಪುರಸ್ಕಾರವನ್ನು ಸ್ವೀಕರಿಸಿದ. 1897ರಲ್ಲಿ ತಾನು ಬರೆದ ಕಾಗದ[೩೫] ಹಾಗೂ ತನ್ನ ನೊಬೆಲ್‌ ಸ್ವೀಕೃತಿ ಭಾಷಣ[೩೬] ಈ ಎರಡರಲ್ಲೂ ಫ್ಯಾರಡೆಯ ಕೆಲಸವನ್ನು ಝೀಮನ್‌ ಉಲ್ಲೇಖಿಸಿದ.

ಫ್ಯಾರಡೆ ಪಂಜರ

[ಬದಲಾಯಿಸಿ]
ಮರುವ್ಯವಸ್ಥೆಯನ್ನು ಮಾಡಲು ಒಂದು ಬಾಹ್ಯ ವಿದ್ಯುತ್ತಿನ ಕ್ಷೇತ್ರವು ವಿದ್ಯುದಾವೇಶಗಳನ್ನು ಉಂಟುಮಾಡುತ್ತದೆ, ಇದು ಒಳಭಾಗದಲ್ಲಿರುವ ಕ್ಷೇತ್ರವನ್ನು ರದ್ದುಮಾಡುತ್ತದೆ.

ಸ್ಥಾಯೀ ವಿದ್ಯುಚ್ಚಕ್ತಿಯ ಕುರಿತಾದ ತನ್ನ ಕೆಲಸದಲ್ಲಿ, ಒಂದು ವಿದ್ಯುದಾವೇಶಕ್ಕೊಳಗಾದ ವಾಹಕದ ಹೊರಭಾಗದ ಮೇಲೆ ಮಾತ್ರವೇ ವಿದ್ಯುದಾವೇಶವು ಉಳಿದುಕೊಂಡಿರುತ್ತದೆ, ಮತ್ತು ಒಂದು ವಾಹಕದೊಳಗೆ ಸೇರಿಸಲ್ಪಟ್ಟಿರುವ ಯಾವುದರ ಮೇಲೂ ಹೊರಭಾಗ ವಿದ್ಯುದಾವೇಶವು ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ ಎಂಬುದನ್ನು ಫ್ಯಾರಡೆ ನಿರೂಪಿಸಿದ. ಹೀಗಾಗಲು ಕಾರಣವೇನೆಂದರೆ, ಹೊರಭಾಗ ವಿದ್ಯುದಾವೇಶಗಳ ಕಾರಣದಿಂದಾಗಿ ಒಳಾಂಗಣದ ಕ್ಷೇತ್ರಗಳು ರದ್ದಾಗುವ ರೀತಿಯಲ್ಲಿ ಹೊರಭಾಗ ವಿದ್ಯುದಾವೇಶಗಳು ಪುನರ್ವಿತರಿಸುತ್ತವೆ. ಈ ರಕ್ಷಕ ಪ್ರಭಾವವು ಈಗ ಚಿರಪರಿಚಿತವಾಗಿರುವ ಫ್ಯಾರಡೆ ಪಂಜರದಲ್ಲಿ ಬಳಸಲ್ಪಟ್ಟಿದೆ.

ಓರ್ವ ಅದ್ಭುತ ಪ್ರಯೋಗ ಪರೀಕ್ಷಕನಾಗಿದ್ದ ಫ್ಯಾರಡೆಯು, ಸ್ಪಷ್ಟ ಹಾಗೂ ಸರಳ ಭಾಷೆಯಲ್ಲಿ ತನ್ನ ಪರಿಕಲ್ಪನೆಗಳನ್ನು ಪ್ರಚುರಪಡಿಸಿದ. ಆದಾಗ್ಯೂ, ತ್ರಿಕೋನಮಿತಿಯವರೆಗೆ ಅಥವಾ ಅತ್ಯಂತ ಸರಳವಾದ ಬೀಜಗಣಿತವನ್ನು ಹೊರತುಪಡಿಸಿದ ಮತ್ಯಾವುದಕ್ಕೂ ಅವನ ಕರಾರುವಾಕ್ಕಾದ ಸಾಮರ್ಥ್ಯಗಳು ವಿಸ್ತರಿಸಲ್ಪಡಲಿಲ್ಲ. ಫ್ಯಾರಡೆಯ ಕೆಲಸವನ್ನು ಕೈಗೆತ್ತಿಕೊಂಡ ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್‌, ಹಾಗೂ ಇತರರು ವಿದ್ಯುತ್ಕಾಂತೀಯ ಸಂಗತಿಯ ಎಲ್ಲಾ ಆಧುನಿಕ ಸಿದ್ಧಾಂತಗಳ ತಳಹದಿಯಲ್ಲಿ ನೆಲೆಗೊಂಡಿರುವ ಸಮೀಕರಣಗಳ ಒಂದು ಜೋಡಿಯೊಂದಿಗೆ ಇದನ್ನು ಕ್ರೋಡೀಕರಿಸಿದರು. ಬಲರೇಖೆಗಳನ್ನು ಫ್ಯಾರಡೆಯು ಬಳಕೆಮಾಡಿಕೊಂಡಿದ್ದರ ಕುರಿತಾಗಿ ಮ್ಯಾಕ್ಸ್‌ವೆಲ್‌ ಬರೆಯುತ್ತಾ, "ಫ್ಯಾರಡೆಯು ವಾಸ್ತವದಲ್ಲಿ ಒಂದು ಉನ್ನತ ವರ್ಗಕ್ಕೆ ಸೇರಿದ ಗಣಿತ ಶಾಸ್ತ್ರಜ್ಞನಾಗಿರಬೇಕಿತ್ತು ಮತ್ತು ಭವಿಷ್ಯದ ಗಣಿತ ಶಾಸ್ತ್ರಜ್ಞರು ಅವನಿಂದ ಮೌಲ್ಯಯುತವಾದ ಹಾಗೂ ಫಲಪ್ರದವಾದ ವಿಧಾನಗಳನ್ನು ಪಡೆಯಲು ಸಾಧ್ಯವಿತ್ತು" ಎಂಬುದನ್ನು ಅವು ಫ್ಯಾರಡೆಗೆ ತೋರಿಸಿದವು ಎಂದು ಅಭಿಪ್ರಾಯಪಟ್ಟ.[೩೭]

ರಾಯಲ್‌ ಇನ್‌ಸ್ಟಿಟ್ಯೂಷನ್‌ ಮತ್ತು ಸಾರ್ವಜನಿಕ ಸೇವೆ

[ಬದಲಾಯಿಸಿ]
ತಂದೆ ಥೇಮ್ಸ್‌‌ನನ್ನು ಭೇಟಿಮಾಡುತ್ತಿರುವ ಮೈಕೇಲ್‌ ಫ್ಯಾರಡೆ; ಪಂಚ್‌ ಪತ್ರಿಕೆಯಿಂದ (21 ಜುಲೈ 1855) ಪಡೆದದ್ದು
1800ರ ದಶಕದ ಮಧ್ಯಭಾಗಕ್ಕೆ ಸೇರಿದ ಬೆಳಕುಮನೆಯ ಲಾಂದ್ರದ ಕೋಣೆ

ಫ್ಯಾರಡೆಯು ದಿ ರಾಯಲ್‌ ಇನ್‌ಸ್ಟಿಟ್ಯೂಷನ್‌ ಆಫ್‌ ಗ್ರೇಟ್‌ ಬ್ರಿಟನ್‌‌‌ನಲ್ಲಿನ ಮೊದಲ ರಸಾಯನ ಶಾಸ್ತ್ರದ ಫುಲ್ಲೇರಿಯನ್‌ ಪ್ರಾಧ್ಯಾಪಕನಾಗಿದ್ದ; ಈ ಸ್ಥಾನಕ್ಕೆ ಅವನನ್ನು ಆಜೀವ ಪರ್ಯಂತ ಅವಧಿಗೆ ನೇಮಿಸಲಾಗಿತ್ತು. ಜಾನ್‌ 'ಮ್ಯಾಡ್‌ ಜಾಕ್‌' ಫುಲ್ಲರ್‌‌ ಅವನ ಪ್ರಾಯೋಜಕ ಹಾಗೂ ಆಪ್ತ ಸಲಹಾಕಾರನಾಗಿದ್ದು, ರಾಯಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಈ ಸ್ಥಾನವು ಸೃಷ್ಟಿಯಾಗಲು ಕಾರಣನಾಗಿದ್ದ. 1824ರಲ್ಲಿ[೧೫] ರಾಯಲ್‌ ಸೊಸೈಟಿಯ ಓರ್ವ ಸದಸ್ಯನಾಗಿ ಚುನಾಯಿಸಲ್ಪಟ್ಟ ಫ್ಯಾರಡೆಯು, 1825ರಲ್ಲಿ ಪ್ರಯೋಗಾಲಯದ ನಿರ್ದೇಶಕನಾಗಿ ನೇಮಿಸಲ್ಪಟ್ಟ; ಮತ್ತು 1833ರಲ್ಲಿ ಸಂಸ್ಥೆಯಲ್ಲಿ ರಸಾಯನ ಶಾಸ್ತ್ರದ ಫುಲ್ಲೇರಿಯನ್‌ ಪ್ರಾಧ್ಯಾಪಕನಾಗಿ ಆಜೀವ ಪರ್ಯಂತ ಅವಧಿಗಾಗಿ ಅವನು ನೇಮಿಸಲ್ಪಟ್ಟ; ಇಲ್ಲಿ ಉಪನ್ಯಾಸಗಳನ್ನು ನೀಡಲೇಬೇಕೆಂಬ ಕಟ್ಟುಪಾಡುಗಳೇನೂ ಇರಲಿಲ್ಲ.

ರಾಯಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ರಸಾಯನ ಶಾಸ್ತ್ರ, ವಿದ್ಯುಚ್ಚಕ್ತಿ, ಹಾಗೂ ಕಾಂತೀಯತೆಯಂಥ ಕ್ಷೇತ್ರಗಳಲ್ಲಿ ತಾನು ಕೈಗೊಂಡ ವೈಜ್ಞಾನಿಕ ಸಂಶೋಧನೆಗಳ ಆಚೆಗೆ, ಖಾಸಗಿ ಉದ್ಯಮ ಹಾಗೂ ಬ್ರಿಟಿಷ್‌ ಸರ್ಕಾರಕ್ಕೆ ಸಂಬಂಧಿಸಿದ ಹಲವಾರು ಸೇವಾ ಯೋಜನೆಗಳನ್ನು ಫ್ಯಾರಡೆಯು ಕೈಗೆತ್ತಿಕೊಂಡ; ಬಹುಪಾಲು ವಿಪರೀತ ಕಾಲಹಿಡಿಯುವ ಯೋಜನೆಗಳು ಇವಾಗಿದ್ದವು. ಕಲ್ಲಿದ್ದಲು ಗಣಿಗಳಲ್ಲಿನ ಆಸ್ಫೋಟಗಳ ತನಿಖೆಗಳು, ನ್ಯಾಯಾಲಯದಲ್ಲಿ ಓರ್ವ ಪರಿಣಿತ ಸಾಕ್ಷಿಯಾಗಿರುವುದು, ಮತ್ತು ಉನ್ನತ-ಗುಣಮಟ್ಟದ ದೃಗ್ವೈಜ್ಞಾನಿಕ ಗಾಜಿನ ತಯಾರಿಕೆ ಇವೆಲ್ಲವನ್ನೂ ಈ ಕೆಲಸವು ಒಳಗೊಂಡಿತ್ತು. 95 ಗಣಿಗಾರರ ಸಾವಿಗೆ ಕಾರಣವಾದ, ಹಾಸ್‌ವೆಲ್‌ ಕೌಂಟಿ ಡರ್ಹಾಮ್‌‌‌‌ನಲ್ಲಿರುವ ಕಲ್ಲಿದ್ದಲ ಗಣಿಯಲ್ಲಿ ಉಂಟಾದ ಒಂದು ಗಂಭೀರವಾದ ಆಸ್ಫೋಟದ ಕುರಿತಾದ ಒಂದು ಸುದೀರ್ಘವಾದ ಹಾಗೂ ವಿವರವಾದ ವರದಿಯನ್ನು ಚಾರ್ಲ್ಸ್‌ ಲೈಯೆಲ್‌ ಜೊತೆಯಲ್ಲಿ ಸೇರಿಕೊಂಡು ಅವನು 1846ರಲ್ಲಿ ಸಿದ್ಧಪಡಿಸಿದ. ಅವರ ವರದಿಯು ಒಂದು ಅತಿ ಸೂಕ್ಷ್ಮದ ನ್ಯಾಯವಿಜ್ಞಾನದ ತನಿಖೆಯಾಗಿತ್ತು ಮತ್ತು ಆಸ್ಫೋಟದ ತೀವ್ರತೆಗೆ ಕಲ್ಲಿದ್ದಲಿನ ಧೂಳು ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಅದು ಸೂಚಿಸಿತು. ಕಲ್ಲಿದ್ದಲಿನ ಧೂಳಿನ ಆಸ್ಫೋಟದ ಅಪಾಯದ ಕುರಿತು ಈ ವರದಿಯು ಕಲ್ಲಿದ್ದಲು ಗಣಿಯ ಮಾಲೀಕರನ್ನು ಎಚ್ಚರಿಸಬೇಕಿತ್ತು; ಆದರೆ ಸುಮಾರು 60 ವರ್ಷಗಳವರೆಗೆ, 1913ರಲ್ಲಿ ಸೆಂಘೆನೈಡ್‌ ಕಲ್ಲಿದ್ದಲ ಗಣಿಯ ದುರ್ಘಟನೆಯಾಗುವವರೆಗೂ ಈ ಅಪಾಯವು ಉಪೇಕ್ಷಿಸಲ್ಪಟ್ಟಿತು.

ಪ್ರಬಲವಾದ ಕಡಲತೀರದ ಹಿತಾಸಕ್ತಿಗಳನ್ನು ಹೊಂದಿರುವ ರಾಷ್ಟ್ರವೊಂದರಲ್ಲಿನ ಓರ್ವ ಗೌರವಾನ್ವಿತ ವಿಜ್ಞಾನಿಯಾಗಿ, ದೀಪದ ಮನೆಗಳ ನಿರ್ಮಾಣ ಹಾಗೂ ನಿರ್ವಹಣೆ ಮತ್ತು ಹಡಗುಗಳ ತಳಭಾಗಗಳನ್ನು ತುಕ್ಕು ಹಿಡಿಯುವಿಕೆಯಿಂದ ರಕ್ಷಿಸುವಂಥ ಯೋಜನೆಗಳ ಕುರಿತಾಗಿ ಫ್ಯಾರಡೆಯು ತನ್ನ ಹೆಚ್ಚಿನ ಸಮಯವನ್ನು ವಿನಿಯೋಗಿಸಿದ.

ಪರಿಸರೀಯ ವಿಜ್ಞಾನ ಅಥವಾ ಪರಿಸರೀಯ ಎಂಜಿನಿಯರಿಂಗ್‌‌‌ ಎಂದು ಈಗ ಕರೆಯಲ್ಪಡುತ್ತಿರುವ ಕ್ಷೇತ್ರಗಳಲ್ಲೂ ಸಹ ಫ್ಯಾರಡೆ ಸಕ್ರಿಯನಾಗಿದ್ದ. ಸ್ವಾನ್‌ಸೀಯಲ್ಲಿನ ಕೈಗಾರಿಕಾ ಮಾಲಿನ್ಯದ ಕುರಿತಾಗಿ ಆತ ಕ್ರಮಬದ್ಧವಾದ ತನಿಖೆಯನ್ನು ಕೈಗೊಂಡ ಮತ್ತು ರಾಯಲ್‌ ಮಿಂಟ್‌‌‌ನಲ್ಲಿನ ವಾಯುಮಾಲಿನ್ಯದ ಕುರಿತಾಗಿ ಅವನ ಸಲಹೆಯನ್ನು ಪಡೆಯಲಾಯಿತು. ಥೇಮ್ಸ್‌ ನದಿಯ ಹೊಲಸು ಸ್ಥಿತಿಗತಿಯ ವಿಷಯದ ಕುರಿತಾಗಿ 1855ರ ಜುಲೈನಲ್ಲಿ ದಿ ಟೈಮ್ಸ್‌‌‌ಗೆ ಫ್ಯಾರಡೆ ಪತ್ರವೊಂದನ್ನು ಬರೆದ; ಇದು ಪಂಚ್‌‌‌ನಲ್ಲಿ ಹಲವುಬಾರಿ-ಮರುಮುದ್ರಿತಗೊಂಡ ಒಂದು ವ್ಯಂಗ್ಯಚಿತ್ರಕ್ಕೆ ಕಾರಣವಾಯಿತು. (ಇದನ್ನೂ ನೋಡಿ: ದಿ ಗ್ರೇಟ್‌ ಸ್ಟಿಂಕ್‌.)

ಲಂಡನ್‌ನಲ್ಲಿ 1851ರಲ್ಲಿ ನಡೆದ ಗ್ರೇಟ್‌ ಎಗ್ಸಿಬಿಷನ್‌‌‌ಗೆ ಸಂಬಂಧಿಸಿದಂತೆ ಪ್ರದರ್ಶನಗಳ ಯೋಜನೆ ಹಾಗೂ ತೀರ್ಮಾನಿಸುವಿಕೆಗಳೊಂದಿಗೆ ಫ್ಯಾರಡೆ ನೆರವಾದ. ನ್ಯಾಷನಲ್‌ ಗ್ಯಾಲರಿಗೆ ಅದರ ಕಲಾಕೃತಿ ಸಂಗ್ರಹಗಳ ಶುದ್ಧೀಕರಣ ಮತ್ತು ರಕ್ಷಣೆಯ ಕುರಿತಾಗಿಯೂ ಅವನು ಸಲಹೆನೀಡಿದ, ಮತ್ತು 1857ರಲ್ಲಿ ನ್ಯಾಷನಲ್‌ ಗ್ಯಾಲರಿ ಸೈಟ್‌ ಕಮಿಷನ್‌ನಲ್ಲಿಯೂ ಅವನು ಸೇವೆ ಸಲ್ಲಿಸಿದ.

ಶಿಕ್ಷಣವು ಫ್ಯಾರಡೆಗೆ ಸಂಬಂಧಿಸಿದ ಮತ್ತೊಂದು ಸೇವಾಕ್ಷೇತ್ರವಾಗಿತ್ತು. ಈ ವಿಷಯದ ಕುರಿತಾಗಿ 1854ರಲ್ಲಿ ಅವನು ರಾಯಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಉಪನ್ಯಾಸ ನೀಡಿದ. 1862ರಲ್ಲಿ ಒಂದು ಸಾರ್ವಜನಿಕ ಶಾಲೆಗಳ ಆಯೋಗದ ಮುಂದೆ ಹಾಜರಾದ ಆತ, ಗ್ರೇಟ್‌ ಬ್ರಿಟನ್‌ನಲ್ಲಿನ ಶಿಕ್ಷಣದ ಕುರಿತಾದ ತನ್ನ ಅಭಿಪ್ರಾಯಗಳನ್ನು ನೀಡಿದ. ಸಾರ್ವಜನಿಕರು ಮತ್ತು ರಾಷ್ಟ್ರ ಈ ಎರಡರ ಶೈಕ್ಷಣಿಕ ವ್ಯವಸ್ಥೆಯನ್ನೂ ದಂಡಿಸುವಂಥ ಮೇಜು ತಿರುಗಿಸುವ ಅಲೌಕಿಕ ಘಟನೆ, ಸಮ್ಮೋಹನ, ಮತ್ತು ಪ್ರೇತಭೇಟಿ ಕೂಟಗಳ ಕಡೆಗೆ ಸಾರ್ವಜನಿಕರು ಹೊಂದಿರುವ ಆಕರ್ಷಣೆಯ ಕುರಿತಾಗಿಯೂ ಆಕ್ರಮಣಕಾರಿಯಾದ ಅಭಿಪ್ರಾಯವನ್ನು ಫ್ಯಾರಡೆಯು ನೇತ್ಯಾತ್ಮಕವಾಗಿ ಮಂಡಿಸಿದ.[೩೮]

ಜ್ವಾಲೆಯ ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರದ ಕುರಿತಾದ ದಿ ಕೆಮಿಕಲ್‌ ಹಿಸ್ಟರಿ ಆಫ್‌ ಎ ಕ್ಯಾಂಡಲ್‌‌ ಎಂಬ ಶೀರ್ಷಿಕೆಯ ಉಪನ್ಯಾಸಗಳ ಒಂದು ಯಶಸ್ವೀ ಸರಣಿಯನ್ನು ರಾಯಲ್‌ ಇನ್‌ಸ್ಟಿಟ್ಯೂಷನ್‌‌‌ನಲ್ಲಿ ಫ್ಯಾರಡೆ ನೀಡಿದ. ಇದು ಯುವಜನರಿಗೋಸ್ಕರ ನೀಡಲ್ಪಟ್ಟ ಅತ್ಯಂತ ಆರಂಭಿಕ ಕ್ರಿಸ್‌ಮಸ್‌ ಉಪನ್ಯಾಸಗಳಲ್ಲಿ ಒಂದಾಗಿತ್ತು; ಈ ಉಪನ್ಯಾಸಗಳನ್ನೂ ಈಗಲೂ ಪ್ರತಿವರ್ಷವೂ ನೀಡಲಾಗುತ್ತಿದೆ. 1827 ಮತ್ತು 1860ರ ನಡುವೆ ಒಂದು ದಾಖಲಾರ್ಹವೆನ್ನಬಹುದಾದ ಹತ್ತೊಂಬತ್ತು ಬಾರಿ ಕ್ರಿಸ್‌ಮಸ್‌ ಉಪನ್ಯಾಸಗಳನ್ನು ಫ್ಯಾರಡೆ ನೀಡಿದ.

ನಂತರದ ಜೀವನ

[ಬದಲಾಯಿಸಿ]
ವೃದ್ಧಾಪ್ಯದಲ್ಲಿರುವ ಫ್ಯಾರಡೆ.
1856ರಲ್ಲಿ ಮೈಕೇಲ್‌ ಫ್ಯಾರಡೆಯು ಒಂದು ಕ್ರಿಸ್‌ಮಸ್‌ ಉಪನ್ಯಾಸವನ್ನು ನೀಡುತ್ತಿರುವುದು.

1832ರ ಜೂನ್‌ನಲ್ಲಿ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ಫ್ಯಾರಡೆಗೆ ಡಾಕ್ಟರ್‌ ಆಫ್‌ ಸಿವಿಲ್‌ ಲಾ ಡಿಗ್ರಿ ಎಂಬ (ಗೌರವಾರ್ಥ) ಡಾಕ್ಟರೇಟ್‌ ಪದವಿಯನ್ನು ನೀಡಿ ಗೌರವಿಸಿತು. ತನ್ನ ಜೀವಿತಾವಧಿಯಲ್ಲಿ ನೈಟ್‌ ಪದವಿಯೊಂದನ್ನು ಫ್ಯಾರಡೆ ತಿರಸ್ಕರಿಸಿದ ಮತ್ತು ರಾಯಲ್‌ ಸೊಸೈಟಿಯ ಅಧ್ಯಕ್ಷನಾಗಲೆಂದು ಎರಡುಬಾರಿ ಬಂದ ಅವಕಾಶವನ್ನು ನಿರಾಕರಿಸಿದ. 1838ರಲ್ಲಿ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌‌‌ನ ಓರ್ವ ವಿದೇಶಿ ಸದಸ್ಯನಾಗಿ ಫ್ಯಾರಡೆ ಚುನಾಯಿತನಾದ, ಹಾಗೂ 1844ರಲ್ಲಿ ಫ್ರೆಂಚ್‌ ಅಕಾಡೆಮಿ ಆಫ್‌ ಸೈನ್ಸಸ್‌‌‌ಗೆ ಚುನಾಯಿತರಾದ ಎಂಟುಮಂದಿ ವಿದೇಶಿ ಸದಸ್ಯರ ಪೈಕಿ ಒಬ್ಬನೆನಿಸಿಕೊಂಡ.[೩೯]

ಪ್ರಿನ್ಸ್‌ ಕಾನ್ಸರ್ಟ್‌ ವತಿಯಿಂದ ಬಂದ ಪ್ರಾತಿನಿಧ್ಯಗಳ ಒಂದು ಫಲವಾಗಿ, ಮೈಕೇಲ್‌ ಫ್ಯಾರಡೆಗೆ 1848ರಲ್ಲಿ ಸರ್ರೆಹ್ಯಾಂಪ್ಟನ್‌ ಕೋರ್ಟ್‌ ಎಂಬಲ್ಲಿ ಒಂದು ರಾಜಪ್ರಭುತ್ವದ ಕೊಡುಗೆಯ ಮನೆಯನ್ನು ಪ್ರದಾನ ಮಾಡಲಾಯಿತು; ಇದಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳು ಅಥವಾ ದುರಸ್ತಿಯ ವೆಚ್ಚವು ಉಚಿತವಾಗಿತ್ತು ಎಂಬುದೊಂದು ವಿಶೇಷ. ಮಾಸ್ಟರ್‌ ಮ್ಯಾಸನ್‌ನ ಮನೆಯಾಗಿದ್ದ ಇದನ್ನು ನಂತರದಲ್ಲಿ ಫ್ಯಾರಡೆ ಮನೆ ಎಂದು ಕರೆಯಲಾಯಿತು; ಈಗ ಇದನ್ನು No.37 ಹ್ಯಾಂಪ್ಟನ್‌ ಕೋರ್ಟ್‌ ರೋಡ್‌ ಎಂದು ಕರೆಯಲಾಗುತ್ತದೆ. 1858ರಲ್ಲಿ ನಿವೃತ್ತಿ ಹೊಂದಿದ ಫ್ಯಾರಡೆ ಅಲ್ಲಿ ವಾಸಿಸಿದ.[೪೦]

ಕ್ರಿಮಿಯನ್‌ ಯುದ್ಧದಲ್ಲಿನ (1853–1856) ಬಳಕೆಗಾಗಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿದಂತೆ ಸಲಹೆನೀಡುವಂತೆ ಬ್ರಿಟಿಷ್‌ ಸರ್ಕಾರವು ಅವನನ್ನು ಕೇಳಿಕೊಂಡಾಗ, ನೈತಿಕ ಕಾರಣಗಳನ್ನು ಮುಂದೊಡ್ಡುವ ಮೂಲಕ ಇದರಲ್ಲಿ ಪಾಲ್ಗೊಳ್ಳಲು ಫ್ಯಾರಡೆ ನಿರಾಕರಿಸಿದ.[೪೧]

ಹ್ಯಾಂಪ್ಟನ್‌ ಕೋರ್ಟ್‌‌‌ನಲ್ಲಿನ ತನ್ನ ಮನೆಯಲ್ಲಿ 1867ರ ಆಗಸ್ಟ್‌ 25ರಂದು ಫ್ಯಾರಡೆ ಮರಣಹೊಂದಿದ. ವೆಸ್ಟ್‌ಮಿನಿಸ್ಟರ್‌ ಆಬೆಯಲ್ಲಿ ತನ್ನ ಶವವನ್ನು ಹೂಳದಿರುವಂತೆ ಅವನು ಮುಂಚಿತವಾಗಿಯೇ ತಿಳಿಸಿದ್ದ, ಆದರೆ ಅಲ್ಲಿನ ಐಸಾಕ್‌ ನ್ಯೂಟನ್‌‌‌‌ನ ಸಮಾಧಿಯ ಬಳಿಯಲ್ಲಿ ಅವನಿಗಾಗಿ ಒಂದು ಸ್ಮಾರಕ ಅಲಂಕಾರಿಕ ಫಲಕವನ್ನು ವ್ಯವಸ್ಥೆಗೊಳಿಸಲಾಗಿದೆ. ಹೈಗೇಟ್‌ ಸ್ಮಶಾನದ ಭಿನ್ನಮತೀಯರ (ಆಂಗ್ಲಿಕನ್‌-ಅಲ್ಲದವರ) ವಿಭಾಗದಲ್ಲಿ ಫ್ಯಾರಡೆಯ ಕಳೇಬರವನ್ನು ದಫನ್‌ ಮಾಡಲಾಯಿತು.

ಸ್ಮಾರಕಗಳು

[ಬದಲಾಯಿಸಿ]
ಲಂಡನ್‌ನ ಸವಾಯ್‌ ಪ್ಲೇಸ್‌ ಎಂಬಲ್ಲಿರುವ ಮೈಕೇಲ್‌ ಫ್ಯಾರಡೆಯ ಪ್ರತಿಮೆ.ಶಿಲ್ಪಿ ಜಾನ್‌ ಹೆನ್ರಿ ಫೋಲೆ RA

ಲಂಡನ್‌ನ ಸವಾಯ್‌ ಪ್ಲೇಸ್‌ ಎಂಬಲ್ಲಿ, ದಿ ಇನ್‌‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ ಹೊರಗಡೆ ಫ್ಯಾರಡೆಯ ಪ್ರತಿಮೆಯೊಂದನ್ನು ನಿಲ್ಲಿಸಲಾಗಿದೆ. ಲಂಡನ್‌ನಲ್ಲಿರುವ ಮೈಕೇಲ್‌ ಫ್ಯಾರಡೆ ಮೆಮರಿಯಲ್‌‌ ಎಂಬ ಸ್ಮಾರಕವನ್ನು ಕ್ರೂರಿ ವಾಸ್ತುಶಿಲ್ಪಿ ಎಂದೇ ಹೆಸರಾದ ರಾಡ್ನಿ ಗೋರ್ಡಾನ್‌ ಎಂಬಾತ ವಿನ್ಯಾಸಗೊಳಿಸಿದ್ದು, ಇದು 1961ರಲ್ಲಿ ಸಂಪೂರ್ಣಗೊಂಡಿತು; ಇದು ಫ್ಯಾರಡೆಯ ಜನ್ಮಸ್ಥಳವಾದ ನೆವಿಂಗ್ಟನ್‌ ಬಟ್ಸ್‌ ಸಮೀಪದಲ್ಲಿರುವ ಎಲಿಫೆಂಟ್‌ & ಕ್ಯಾಸಲ್‌ ಗೈರೇಟರಿ ಸಿಸ್ಟಮ್‌ ಎಂಬಲ್ಲಿ ನೆಲೆಗೊಂಡಿದೆ.

ಲಂಡನ್‌ನ ವಾಲ್‌ವರ್ತ್‌ ಎಂಬಲ್ಲಿರುವ ಫ್ಯಾರಡೆ ಗಾರ್ಡನ್ಸ್‌‌ ಒಂದು ಪುಟ್ಟ ಉದ್ಯಾನವನವಾಗಿದ್ದು, ಇದು ನೆವಿಂಗ್ಟನ್‌ ಬಟ್ಸ್‌‌ನಲ್ಲಿನ ಅವನ ಜನ್ಮಸ್ಥಳಕ್ಕೆ ಸಾಕಷ್ಟು ಸಮೀಪದಲ್ಲಿದೆ. ಸೌತ್‌ವಾರ್ಕ್‌ನ ಲಂಡನ್‌ ಬರೋದಲ್ಲಿನ ಫ್ಯಾರಡೆಯ ಸ್ಥಳೀಯ ಪರಿಷತ್ತು ವಿಭಾಗದ ವ್ಯಾಪ್ತಿಯೊಳಗೆ ಈ ಉದ್ಯಾನವನವು ನೆಲೆಗೊಂಡಿದೆ.

ಲೌಬರೋ ವಿಶ್ವವಿದ್ಯಾಲಯದಲ್ಲಿರುವ ಭವನವೊಂದಕ್ಕೆ 1960ರಲ್ಲಿ ಫ್ಯಾರಡೆಯ ಹೆಸರನ್ನಿಡಲಾಯಿತು. ಇದರ ಭೋಜನ ಕೋಣೆಯ ಪ್ರವೇಶದ್ವಾರದ ಸಮೀಪದಲ್ಲಿ ಒಂದು ಕಂಚಿನ ಪ್ರತಿಮೆಯಿದ್ದು, ಇದು ವಿದ್ಯುತ್‌‌ ಪರಿವರ್ತಕವೊಂದರ ಸಂಕೇತವನ್ನು ಚಿತ್ರಿಸುತ್ತದೆ, ಮತ್ತು ಕೋಣೆಯ ಒಳಭಾಗದಲ್ಲಿ ಒಂದು ಭಾವಚಿತ್ರವನ್ನು ನೇತುಹಾಕಲಾಗಿದೆ; ಇವೆರಡೂ ಸಹ ಫ್ಯಾರಡೆಯ ಗೌರವಾರ್ಥ ಮಾಡಲಾಗಿರುವ ವ್ಯವಸ್ಥೆಗಳು ಎಂಬುದು ಗಮನಾರ್ಹ. ಎಡಿನ್‌ಬರ್ಗ್ ವಿಶ್ವವಿದ್ಯಾಲಯ‌ದ ವಿಜ್ಞಾನ ಮತ್ತು ಎಂಜಿನಿಯರಿಂಗ್‌‌‌ ಆವರಣದಲ್ಲಿರುವ ಒಂದು ಐದಂತಸ್ತಿನ ಕಟ್ಟಡಕ್ಕೆ ಫ್ಯಾರಡೆಯ ಹೆಸರನ್ನಿಡಲಾಗಿದೆ; ಅಷ್ಟೇ ಅಲ್ಲ, ಬ್ರುನೆಲ್‌ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ಒಂದು ವಸತಿ ವ್ಯವಸ್ಥೆಯ ಭವನಕ್ಕೆ ಹಾಗೂ ಸ್ವಾನ್‌ಸೀ ವಿಶ್ವವಿದ್ಯಾಲಯದಲ್ಲಿನ ಮುಖ್ಯ ಎಂಜಿನಿಯರಿಂಗ್‌‌‌ ಕಟ್ಟಡಕ್ಕೆ ಫ್ಯಾರಡೆಯ ಹೆಸರನ್ನು ಇಡಲಾಗಿದೆ. ಅಂಟಾರ್ಟಿಕಾದಲ್ಲಿರುವ ಹಿಂದಿನ UK ಫ್ಯಾರಡೆ ಸ್ಟೇಷನ್‌‌‌ Archived 2013-05-18 ವೇಬ್ಯಾಕ್ ಮೆಷಿನ್ ನಲ್ಲಿ. ಗೆ ಕೂಡಾ ಅವನ ಹೆಸರನ್ನೇ ಇರಿಸಲಾಗಿತ್ತು.

ಫ್ಯಾರಡೆಯ ಹೆಸರನ್ನು ಇಟ್ಟುಕೊಂಡಿರುವ ಬೀದಿಗಳನ್ನು ಅನೇಕ ಬ್ರಿಟಿಷ್‌ ನಗರಗಳಲ್ಲಿ (ಉದಾಹರಣೆಗೆ, ಲಂಡನ್‌, ಫೈಫ್‌, ಸ್ವಿಂಡನ್‌, ಬೇಸಿಂಗ್‌ಸ್ಟೋಕ್‌, ನಾಟಿಂಗ್‌ಹ್ಯಾಂ, ವಿಟ್‌ಬಿ, ಕಿರ್ಕ್‌ಬಿ, ಕ್ರಾವ್ಲೆ, ನ್ಯೂಬರಿ, ಆಯ್ಲೆಸ್‌ಬರಿ ಮತ್ತು ಸ್ಟೀವೆನೇಗ್‌) ಮಾತ್ರವೇ ಅಲ್ಲದೇ, ಫ್ರಾನ್ಸ್‌‌ (ಪ್ಯಾರಿಸ್‌), ಜರ್ಮನಿ (ಹರ್ಮ್ಸ್‌ಡೊರ್ಫ್), ಕೆನಡಾ (ಕ್ಯುಬೆಕ್‌), ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ (ರೆಸ್ಟಾನ್‌, VA) ಕಾಣಬಹುದು.

1991ರಿಂದ 2001ರವರೆಗೆ, ಫ್ಯಾರಡೆಯ ಚಿತ್ರವನ್ನು ಬ್ಯಾಂಕ್‌ ಆಫ್‌ ಇಂಗ್ಲಂಡ್‌ ವತಿಯಿಂದ ನೀಡಲಾಗುವ 20£ ಮೌಲ್ಯದ ಸರಣಿ E ಬ್ಯಾಂಕಿನ ನೋಟುಗಳ ಹಿಂಭಾಗದಲ್ಲಿ ನೀಡಲಾಗಿದೆ. ಆಯಸ್ಕಾಂತೀಯ-ವಿದ್ಯುತ್‌ ಕಿಡಿಯ ಸಾಧನದ ನೆರವಿನೊಂದಿಗೆ ರಾಯಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಅವನು ಉಪನ್ಯಾಸವೊಂದನ್ನು ನಿರ್ವಹಿಸುತ್ತಿರುವಂತೆ ಅವನನ್ನು ಇದರಲ್ಲಿ ತೋರಿಸಲಾಗಿತ್ತು.[೪೨]

ಗ್ರಂಥಸೂಚಿ

[ಬದಲಾಯಿಸಿ]

ಕೆಮಿಕಲ್‌ ಮ್ಯಾನಿಪ್ಯುಲೇಷನ್‌ ಎಂಬ ಪುಸ್ತಕವನ್ನು ಹೊರತುಪಡಿಸಿದರೆ, ಫ್ಯಾರಡೆಯ ಪುಸ್ತಕಗಳು ವೈಜ್ಞಾನಿಕ ಪ್ರಬಂಧಗಳ ಸಂಗ್ರಹಗಳು ಅಥವಾ ಉಪನ್ಯಾಸಗಳ ಪ್ರತಿನಕಲುಗಳಾಗಿವೆ.[೪೩] ಫ್ಯಾರಡೆಯ ಸಾವಿನ ನಂತರ, ಅವನ ದಿನಚರಿ ಪುಸ್ತಕವನ್ನು ಮಾತ್ರವಲ್ಲದೆ, ಅವನು ಬರೆದ ಪತ್ರಗಳು ಹಾಗೂ 1813–1815ರ ಅವಧಿಯಲ್ಲಿ ಡೇವಿಯೊಂದಿಗೆ ಪಯಣಿಸುವಾಗ ಬರೆದ ದಿನವರದಿಯ ಹಲವಾರು ಬೃಹತ್‌ ಸಂಪುಟಗಳನ್ನು ಪ್ರಕಟಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  • "ನಥಿಂಗ್‌ ಈಸ್‌ ಟೂ ವಂಡರ್‌ಫುಲ್‌ ಟು ಬಿ ಟ್ರೂ ಇಫ್‌ ಇಟ್‌ ಬಿ
ಕನ್ಸಿಸ್ಟೆಂಟ್‌ ವಿತ್‌ ದಿ ಲಾಸ್‌ ಆಫ್‌ ನೇಚರ್‌, ಅಂಡ್‌ ಇನ್‌ ಸಚ್‌ ಥಿಂಗ್ಸ್‌ ಆಸ್‌ ದೀಸ್‌, ಎಕ್ಸ್‌ಪರಿಮೆಂಟ್‌ ಈಸ್‌ ದಿ ಬೆಸ್ಟ್‌ ಟೆಸ್ಟ್‌ ಆಫ್‌ ಸಚ್‌ ಕನ್ಸಿಸ್ಟೆನ್ಸಿ."[೪೪]
  • "ವರ್ಕ್‌. ಫಿನಿಶ್‌‌. ಪಬ್ಲಿಷ್‌." — ಕಿರಿಯ ವಿಲಿಯಂ ಕ್ರೂಕ್ಸ್‌‌ಗೆ ಅವನು ನೀಡಿದ ಸಲಹೆ
  • "ದಿ ಇಂಪಾರ್ಟೆಂಟ್‌ ಥಿಂಗ್‌ ಈಸ್‌ ಟು ನೋ ಹೌ ಟು ಟೇಕ್‌ ಆಲ್‌ ಥಿಂಗ್ಸ್‌ ಕ್ವಯೆಟ್ಲಿ."
  • ಭವಿಷ್ಯಕ್ಕೆ ಸಂಬಂಧಿಸಿದಂತೆ, "ಸ್ಪೆಕ್ಯುಲೇಷನ್ಸ್‌‌? ಐ ಹ್ಯಾವ್‌ ನನ್‌. ಐಯಾಮ್‌ ರೆಸ್ಟಿಂಗ್‌ ಆನ್‌ ಸರ್ಟನಿಟೀಸ್‌."
  • "ನೋ ವಂಡರ್‌ ದಟ್‌ ಮೈ ರಿಮೆಂಬ್ರೆನ್ಸ್‌ ಫೇಲ್ಸ್‌ ಮಿ, ಫಾರ್‌ ಐ ಶಲ್‌ ಕಂಪ್ಲೀಟ್‌ ಮೈ 70 ಇಯರ್ಸ್‌ ನೆಕ್ಸ್ಟ್‌ ಸಂಡೆ (ದಿ 22); - ಅಂಡ್‌ ಡ್ಯೂರಿಂಗ್‌ ದೀಸ್‌ 70 ಇಯರ್ಸ್‌ ಐ ಹ್ಯಾವ್‌ ಹ್ಯಾಡ್‌ ಎ ಹ್ಯಾಪಿ ಲೈಫ್‌; ವಿಚ್‌ ಸ್ಟಿಲ್‌ ರಿಮೈನ್ಸ್‌ ಹ್ಯಾಪಿ ಬಿಕಾಸ್‌ ಆಫ್‌ ಹೋಪ್‌ ಅಂಡ್‌ ಕಂಟೆಂಟ್‌.[೪೫]
  • ಪೆನ್ಸಿಲ್ವೇನಿಯಾದ ಕಾಲೇಜ್‌ವಿಲ್ಲೆಯಲ್ಲಿರುವ ಅರ್ಸಿನಸ್‌ ಕಾಲೇಜ್‌‌ನಲ್ಲಿನ ಫಾಹ್ಲರ್‌ ವಿಜ್ಞಾನಭವನದ ಬಾಗಿಲದಾರಿಗಳ ಮೇಲ್ಭಾಗದಲ್ಲಿ, ಮೈಕೇಲ್‌ ಫ್ಯಾರಡೆಯ ಉಕ್ತಿಯೊಂದನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು ಅದು ಈ ರೀತಿಯಲ್ಲಿದೆ: "ಬಟ್‌ ಸ್ಟಿಲ್‌ ಟ್ರೈ, ಫಾರ್‌ ಹೂ ನೋಸ್‌ ವಾಟ್‌ ಈಸ್‌ ಪಾಸಿಬಲ್‌..."[೪೬]
  • "ಇಫ್‌ ಯು ವುಡ್‌ ಕಾಸ್‌ ಯುವರ್‌ ವ್ಯೂ... ಟು ಬಿ ಅಕ್‌ನಾಲೆಜ್ಡ್‌ ಬೈ ಸೈಂಟಿಫಿಕ್‌ ಮೆನ್‌; ಯು ವುಡ್‌ ಡೂ ಎ ಗ್ರೇಟ್‌ ಸರ್ವೀಸ್‌ ಟು ಸೈನ್ಸ್‌. ಇಫ್‌ ಯು ವುಡ್‌ ಈವನ್‌ ಗೆಟ್‌ ದೆಮ್‌ ಟು ಸೇ ಯೆಸ್‌ ಆರ್‌ ನೋ ಟು ಯುವರ್‌ ಕನ್‌ಕ್ಲೂಷನ್ಸ್‌ ಇಟ್‌ ವುಡ್‌ ಹೆಲ್ಪ್‌ ಟು ಕ್ಲಿಯರ್‌ ದಿ ಫ್ಯೂರ್‌ ಪ್ರೋಗ್ರೆಸ್‌. ಐ ಬಿಲೀವ್‌ ಸಮ್‌ ಹೆಸಿಟೇಟ್‌ ಬಿಕಾಸ್‌ ದೆ ಡು ನಾಟ್‌ ಲೈಕ್‌ ದೆರ್‌ ಥಾಟ್ಸ್‌ ಡಿಸ್ಟರ್ಬ್ಡ್‌."[೪೭]
ಹೈಗೇಟ್‌ ಸ್ಮಶಾನದಲ್ಲಿನ ಮೈಕೇಲ್‌ ಫ್ಯಾರಡೆಯ ಸಮಾಧಿ

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦ ೧.೧ ೧.೨ ಮೈಕೇಲ್‌ ಫ್ಯಾರಡೆ; ಲವ್‌ಟುನೋದಿಂದ ಆಯೋಜಿಸಲ್ಪಟ್ಟ 1911ರ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿನ ನಮೂದು, 2007ರ ಜನವರಿಯಲ್ಲಿ ಮರುಸಂಪಾದಿಸಲಾಯಿತು.
  2. ೨.೦ ೨.೧ ೨.೨ ೨.೩ "ಆರ್ಕೀವ್ಸ್‌ ಬಯಾಗ್ರಫೀಸ್‌: ಮೈಕೇಲ್‌ ಫ್ಯಾರಡೆ", ದಿ ಇನ್‌‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ.
  3. Russell, Colin (2000). Michael Faraday: Physics and Faith. New York: Oxford University Press. {{cite book}}: Cite has empty unknown parameter: |coauthors= (help)
  4. "ಬೆಸ್ಟ್ ಎಕ್ಸ್‌ಪರಿಮೆಂಟಲಿಸ್ಟ್‌ ಇನ್‌ ದಿ ಹಿಸ್ಟರಿ ಆಫ್‌ ಸೈನ್ಸ್‌." ಬಾತ್‌ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗಕ್ಕೆ ಸೇರಿದ ಡಾ. ಪೀಟರ್‌ ಫೋರ್ಡ್‌ನ್ನು ಉಲ್ಲೇಖಿಸುತ್ತಾ. 2007ರ ಜನವರಿಯಲ್ಲಿ ಸಂಪರ್ಕಿಸಲಾಯಿತು.
  5. "ಐನ್‌ಸ್ಟೀನ್‌'ಸ್‌ ಹೀರೋಸ್‌: ಇಮ್ಯಾಜಿನಿಂಗ್‌ ದಿ ವರ್ಲ್ಡ್‌ ಥ್ರೂ ದಿ ಲಾಂಗ್ವೇಜ್‌ ಆಫ್‌ ಮ್ಯಾಥಮೆಟಿಕ್ಸ್‌", -ರಾಬಿನ್‌ ಅರಿಯಾನ್ರ್‌ಹಾಡ್‌ UQP, ಜೇನ್‌ ಗ್ಲೀಸನ್‌-ವೈಟ್‌ನಿಂದ ವಿಮರ್ಶಿಸಲ್ಪಟ್ಟಿತು, 10 ನವೆಂಬರ್‌ 2003, ದಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌.
  6. Baggott, Jim (2 September 1991). "The myth of Michael Faraday: Michael Faraday was not just one of Britain's greatest experimenters. A closer look at the man and his work reveals that he was also a clever theoretician". New Scientist. Retrieved 2008-09-06.
  7. ನೋಡಿ: ನ್ಯಾಷನಲ್‌ ಪೋರ್ಟ್ರೇಟ್‌ ಗ್ಯಾಲರಿ NPG 269
  8. ಬಾಲ್ಯವನ್ನೂ ಒಳಗೊಂಡಂತೆ ಫ್ಯಾರಡೆಯ ಜೀವನದ ಒಂದು ಸಂಕ್ಷಿಪ್ತ ವಿವರಣೆಗಾಗಿ, EVERY SATURDAY: A JOURNAL OF CHOICE READING ಕೃತಿಯ 175-83 ಪುಟಗಳನ್ನು ನೋಡಿ; ಸಂಪುಟ III; ಆಸ್‌ಗುಡ್‌ & ಕಂ.ನಿಂದ ಕೇಂಬ್ರಿಜ್‌ನಲ್ಲಿ ಪ್ರಕಟಿತ.
  9. ದಿ ಇಂಪ್ಲಿಕೇಷನ್‌ ವಾಸ್‌ ದಟ್‌ ಜೇಮ್ಸ್‌ ದಿಸ್ಕವರ್ಡ್‌ ಜಾಬ್‌ ಆಪರ್ಚುನಿಟೀಸ್‌ ಎಲ್ಸ್‌ವೇರ್‌ ಥ್ರೂ ಮೆಂಬರ್‌ಷಿಪ್‌ ಆಫ್‌ ದಿಸ್‌ ಸೆಕ್ಟ್‌. ಜೇಮ್ಸ್‌‌ ಜಾಯಿನ್ಡ್‌ ದಿ ಲಂಡನ್‌ ಮೀಟಿಂಗ್‌ ಹೌಸ್‌ ಆನ್‌ 20 ಫೆಬ್ರುವರಿ 1791, ಅಂಡ್‌ ಮೂವ್ಡ್‌ ಹಿಸ್‌ ಫ್ಯಾಮಿಲಿ ಷಾರ್ಟ್ಲಿ ದೇರ್‌ಆಫ್ಟರ್‌. ಕ್ಯಾಂಟರ್‌‌ (1991) ಬರೆದಿರುವ ಮೈಕೇಲ್‌ ಫ್ಯಾರಡೆ, ಸ್ಯಾಂಡ್‌ಮ್ಯಾನಿಯನ್‌ ಅಂಡ್‌ ಸೈಂಟಿಸ್ಟ್‌ ಕೃತಿಯ 57-8 ಪುಟಗಳನ್ನು ನೋಡಿ.
  10. "ಮೈಕೇಲ್‌ ಫ್ಯಾರಡೆ." ಹಿಸ್ಟರಿ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ. ಹೌಗ್‌ಟನ್‌ ಮಿಫ್ಲಿನ್‌ ಕಂಪನಿ, 2004. Answers.com 4 ಜೂನ್‌ 2007
  11. John H. Lienhard (1992). "Jane Marcet's Books". The Engines of Our Ingenuity. Episode 744. NPR. KUHF-FM Houston. 
  12. ನೋಡಿ: ಜೆಫ್ರಿ ಕ್ಯಾಂಟರ್‌‌ನ (1991) ಮೈಕೇಲ್‌ ಫ್ಯಾರಡೆ, ಸ್ಯಾಂಡ್‌ಮ್ಯಾನಿಯನ್‌ ಅಂಡ್‌ ಸೈಂಟಿಸ್ಟ್‌ ಕೃತಿ, ಪುಟಗಳು 41-43, 60-4, ಮತ್ತು 277-80.
  13. ಪಾಲ್‌'ಸ್‌ ಆಲ್ಲೆ ವಾಸ್‌ ಲೊಕೇಟೆಡ್‌ 10 ಹೌಸಸ್‌ ಸೌತ್‌ ಆಫ್‌ ದಿ ಬಾರ್ಬಿಕಾನ್‌. ಎಲ್ಮೆ (1831) ಬರೆದಿರುವ ಟೋಪೋಗ್ರಾಫಿಕಲ್‌ ಡಿಕ್ಷ್‌ನರಿ ಆಫ್‌ ದಿ ಬ್ರಿಟಿಷ್‌ ಮೆಟ್ರೊಪೊಲಿಸ್‌ ಕೃತಿಯ 330ನೇ ಪುಟವನ್ನು ನೋಡಿ.
  14. ದಿ ರಿಜಿಸ್ಟರ್‌ ಅಟ್‌ ಸೇಂಟ್‌ ಫೇಯ್ತ್‌‌-ಇನ್‌-ದಿ-ವರ್ಜಿನ್‌ ನಿಯರ್‌ ಸೇಂಟ್‌ ಪಾಲ್‌'ಸ್‌ ಕೆಥೆಡ್ರಲ್‌, ರೆಕಾರ್ಡ್ಸ್‌ 12 ಜೂನ್‌ ಆಸ್‌ ದಿ ಡೇಟ್‌ ದೆರ್‌ ಲೈಸೆನ್ಸ್‌ ವಾಸ್‌ ಇಷ್ಯೂಡ್‌. ದಿ ವಿಟ್ನೆಸ್‌ ವಾಸ್‌ ಸಾರಾ'ಸ್‌ ಫಾದರ್‌, ಎಡ್ವರ್ಡ್‌. ದೆರ್‌ ಮ್ಯಾರೇಜ್‌ ವಾಸ್‌ 16 ಇಯರ್ಸ್‌ ಪ್ರಯರ್‌ ಟು ದಿ ಮ್ಯಾರೇಜ್‌ ಅಂಡ್‌ ರಿಜಿಸ್ಟ್ರೇಷನ್‌ ಆಕ್ಟ್‌ ಆಫ್‌ 1837. ಕ್ಯಾಂಟರ್‌‌‌‌ (1991) ಬರೆದಿರುವ ಮೈಕೇಲ್‌ ಫ್ಯಾರಡೆ, ಸ್ಯಾಂಡ್‌ಮ್ಯಾನಿಯನ್‌ ಅಂಡ್‌ ಸೈಂಟಿಸ್ಟ್‌ ಕೃತಿಯ 59ನೇ ಪುಟವನ್ನು ನೋಡಿ.
  15. ೧೫.೦ ೧೫.೧ ಫ್ರಾಂಕ್‌ A. J. L. ಜೇಮ್ಸ್‌‌, ‘ಫ್ಯಾರಡೆ, ಮೈಕೇಲ್‌‌ (1791–1867)’, ಆಕ್ಸ್‌‌ಫರ್ಡ್‌ ಡಿಕ್ಷ್‌ನರಿ ಆಫ್‌ ನ್ಯಾಷನಲ್‌ ಬಯಾಗ್ರಫಿ, ಆಕ್ಸ್‌‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌‌, ಸೆಪ್ಟೆಂಬರ್‌‌ 2004; ಆನ್‌ಲೈನ್‌ ಆವೃತ್ತಿ, ಜನವರಿ 2008 2009ರ ಮಾರ್ಚ್‌ 3ರಂದು ಸಂಪರ್ಕಿಸಲಾಯಿತು
  16. Jensen, William B. (2005). "The Origin of the Bunsen Burner" (PDF). Journal of Chemical Education. 82 (4). {{cite journal}}: Cite has empty unknown parameter: |coauthors= (help)
  17. ಫ್ಯಾರಡೆಯ ಕೆಮಿಕಲ್‌ ಮ್ಯಾನಿಪ್ಯುಲೇಷನ್‌, ಬೀಯಿಂಗ್‌ ಇನ್ಸ್‌ಟ್ರಕ್ಷನ್ಸ್‌ ಟು ಸ್ಟೂಡೆಂಟ್ಸ್‌ ಇನ್‌ ಕೆಮಿಸ್ಟ್ರಿ (1827) ಕೃತಿಯ 127ನೇ ಪುಟವನ್ನು ನೋಡಿ
  18. Faraday, Michael (1821). "On two new Compounds of Chlorine and Carbon, and on a new Compound of Iodine, Carbon, and Hydrogen". Philosophical Transactions. 111: 47. doi:10.1098/rstl.1821.0007.
  19. Faraday, Michael (1859). Experimental Researches in Chemistry and Physics. London: Richard Taylor and William Francis. pp. 33–53.
  20. Williams, L. Pearce (1965). Michael Faraday: A Biography. New York: Basic Books. pp. 122–123. {{cite book}}: Cite has empty unknown parameter: |coauthors= (help)
  21. Faraday, Michael (1823). "On Hydrate of Chlorine". Quartly Journal of Science. 15: 71.
  22. Faraday, Michael (1859). Experimental Researches in Chemistry and Physics. London: Richard Taylor and William Francis. pp. 81–84.
  23. "The Birth of Nanotechnology". Nanogallery.info. 2006. Archived from the original on 2019-12-05. Retrieved 2007-07-25. Faraday made some attempt to explain what was causing the vivid coloration in his gold mixtures, saying that known phenomena seemed to indicate that a mere variation in the size of gold particles gave rise to a variety of resultant colors. {{cite web}}: Cite has empty unknown parameters: |month= and |coauthors= (help)
  24. [37] ಫಲಕ 4ನ್ನು ನೋಡಿ.
  25. ‌‌‌ಹ್ಯಾಮಿಲ್ಟನ್‌‌ನ ಎ ಲೈಫ್‌ ಆಫ್‌ ಡಿಸ್ಕವರಿ: ಮೈಕೇಲ್‌ ಫ್ಯಾರಡೆ, ಜೈಂಟ್‌ ಆಫ್‌ ದಿ ಸೈಂಟಿಫಿಕ್‌ ರೆವಲ್ಯೂಷನ್‌ (2004) ಪುಟಗಳು 165-71, 183, 187-90.
  26. ಕ್ಯಾಂಟರ್‌‌‌‌ನ ಮೈಕೇಲ್‌ ಫ್ಯಾರಡೆ, ಸ್ಯಾಂಡ್‌ಮ್ಯಾನಿಯನ್‌ ಅಂಡ್‌ ಸೈಂಟಿಸ್ಟ್‌ (1991) ಪುಟಗಳು 231-3.
  27. ಥಾಂಪ್ಸನ್‌‌‌ನ ಮೈಕೇಲ್‌ ಫ್ಯಾರಡೆ, ಹಿಸ್‌ ಲೈಫ್‌ ಅಂಡ್‌ ವರ್ಕ್‌‌ (1901) ಪುಟ 95.
  28. ಥಾಂಪ್ಸನ್‌‌‌ (1901) ಪುಟ 91. ದಿಸ್‌ ಲ್ಯಾಬ್‌ ಎಂಟ್ರಿ ಇಲಸ್ಟ್ರೇಟ್ಸ್‌ ಫ್ಯಾರಡೆ'ಸ್‌ ಕ್ವೆಸ್ಟ್‌ ಫಾರ್‌ ದಿ ಕನೆಕ್ಷನ್‌ ಬಿಟ್ವೀನ್‌ ಲೈಟ್‌ ಅಂಡ್‌ ಎಲೆಕ್ಟ್ರೋಮ್ಯಾಗ್ನೆಟಿಕ್‌ ಫೆನಾಮೆನನ್‌ 10 ಸೆಪ್ಟೆಂಬರ್‌ 1821.
  29. ಕ್ಯಾಂಟರ್‌‌‌‌ನ ಮೈಕೇಲ್‌ ಫ್ಯಾರಡೆ, ಸ್ಯಾಂಡ್‌ಮ್ಯಾನಿಯನ್‌ ಅಂಡ್‌ ಸೈಂಟಿಸ್ಟ್‌ (1991) ಪುಟ 233.
  30. ಥಾಂಪ್ಸನ್‌‌‌ನ ಪುಟಗಳು 95-98 (1901).
  31. ಥಾಂಪ್ಸನ್‌‌‌ (1901) ಪುಟ 100.
  32. ಫ್ಯಾರಡೆ'ಸ್‌ ಇನಿಷಿಯಲ್‌ ಇಂಡಕ್ಷನ್‌ ಲ್ಯಾಬ್‌ ವರ್ಕ್‌ ಅಕ್ಕರ್ಡ್‌ ಇನ್‌ ಲೇಟ್‌ ನವೆಂಬರ್‌ 1825. ಹಿಸ್‌ ವರ್ಕ್‌ ವಾಸ್‌ ಹೆವಿಲಿ ಇನ್‌ಫ್ಲುಯೆನ್ಸ್ಡ್‌ ಬೈ ದಿ ಆನ್‌ಗೋಯಿಂಗ್‌ ರಿಸರ್ಚ್‌ ಆಫ್‌ ಫೆಲೊ ಯುರೋಪಿಯನ್‌ ಸೈಂಟಿಸ್ಟ್ಸ್‌ ಆಂಪೀರ್‌, ಅರಗೊ, ಅಂಡ್‌ ಆಯಿರ್‌ಸ್ಟೆಡ್‌ ಆಸ್‌ ಇಂಡಿಕೇಟೆಡ್‌ ಬೈ ಹಿಸ್‌ ಡೈರಿ ಎಂಟ್ರೀಸ್‌. ಕ್ಯಾಂಟರ್‌‌‌‌ನ ಮೈಕೇಲ್‌ ಫ್ಯಾರಡೆ: ಸ್ಯಾಂಡ್‌ಮ್ಯಾನಿಯನ್‌ ಅಂಡ್‌ ಸೈಂಟಿಸ್ಟ್‌ (1991) ಪುಟಗಳು 235-44.
  33. Brother Potamian (1913). "Francesco Zantedeschi article at the Catholic Encyclopedia". Wikisource. Retrieved 2007-06-16. {{cite web}}: Cite has empty unknown parameters: |month= and |coauthors= (help)
  34. ಸುಮಾರು 1857ರಲ್ಲಿ ಮೌಲ್‌ & ಪಾಲಿಬ್ಲಾಂಕ್‌ರಿಂದ ತೆಗೆಯಲ್ಪಟ್ಟ ಒಂದು ಮುಂಚಿನ ಛಾಯಾಚಿತ್ರವನ್ನು ಆಧರಿಸಿ ಹೆನ್ರಿ ಆಡ್‌ಲಾರ್ಡ್‌ ಮಾಡಿರುವ ಒಂದು ಉಬ್ಬುಕೆತ್ತನೆಯ ವಿವರ.ನೋಡಿ: ನ್ಯಾಷನಲ್‌ ಪೋರ್ಟ್ರೇಟ್‌ ಗ್ಯಾಲರಿ, UK
  35. Zeeman, Pieter (1897). "The Effect of Magnetisation on the Nature of Light Emitted by a Substance". Nature. 55: 347. doi:10.1038/055347a0.
  36. "Pieter Zeeman, Nobel Lecture". Retrieved 2008-05-29.
  37. ದಿ ಸೈಂಟಿಫಿಕ್‌ ಪೇಪರ್ಸ್‌ ಆಫ್‌ ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್‌ ಸಂಪುಟ 1 ಪುಟ 360; ಕೊರಿಯರ್‌ ಡೋವರ್‌‌ 2003, ISBN 0-486-49560-4
  38. ಫ್ಯಾರಡೆಯ ವ್ಯಾಖ್ಯಾನಗಳಿಗಾಗಿ ನೋಡಿ: ದಿ ಇಲಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌ , ಜುಲೈ 1853.
  39. Gladstone, John Hall (1872). Michael Faraday. London: Macmillan and Company. p. 53.
  40. ಟ್ವಿಕನ್‌ಹ್ಯಾಮ್‌ ಮ್ಯೂಸಿಯಂ ಆನ್‌ ಫ್ಯಾರಡೆ ಅಂಡ್‌ ಫ್ಯಾರಡೆ ಹೌಸ್‌ Archived 2014-12-14 ವೇಬ್ಯಾಕ್ ಮೆಷಿನ್ ನಲ್ಲಿ., 2006ರ ಜೂನ್‌ನಲ್ಲಿ ಸಂಪರ್ಕಿಸಲಾಯಿತು
  41. Croddy, Eric (2005). Weapons of Mass Destruction: An Encyclopedia of Worldwide Policy, Technology, and History. ABC-CLIO. pp. Page 86. ISBN 1851094903. {{cite book}}: Unknown parameter |coauthors= ignored (|author= suggested) (help)
  42. "Withdrawn banknotes reference guide". Bank of England. Archived from the original on 2011-06-10. Retrieved 2008-10-17.
  43. ಹ್ಯಾಮಿಲ್ಟನ್‌‌‌ನ ಎ ಲೈಫ್‌ ಆಫ್‌ ಡಿಸ್ಕವರಿ: ಮೈಕೇಲ್‌ ಫ್ಯಾರಡೆ, ಜೈಂಟ್‌ ಆಫ್‌ ದಿ ಸೈಂಟಿಫಿಕ್‌ ರೆವಲ್ಯೂಷನ್‌ (2002) ಕೃತಿಯ 220ನೇ ಪುಟವನ್ನು ನೋಡಿ
  44. ಫ್ರಂ ದಿ ಎಂಟ್ರಿ ಆಫ್‌ 19 ಮಾರ್ಚ್‌ 1849 ಇನ್‌ ಫ್ಯಾರಡೆ'ಸ್‌ ಡೈರಿ
  45. ಲೆಟರ್‌ ಆಫ್‌ ಫ್ಯಾರಡೆ ಟು ಕ್ರಿಶ್ಚಿಯನ್‌‌ ಫ್ರೆಡ್ರಿಕ್‌ ಸ್ಕೋನ್‌ಬೀನ್‌, 19 ಸೆಪ್ಟೆಂಬರ್‌‌ 1861. ದಿ ಲೆಟರ್ಸ್‌ ಆಫ್‌ ಫ್ಯಾರಡೆ ಅಂಡ್‌ ಸ್ಕೋನ್‌ಬೀನ್‌ 1836-1862 ಕೃತಿಯ 349ನೇ ಪುಟವನ್ನು ನೋಡಿ (1899, ಲಂಡನ್‌: ವಿಲಿಯಮ್ಸ್‌ & ನೋಗೇಟ್‌) ಈ ತಾಣದಲ್ಲಿ.
  46. ನೋಡಿ: ಬಟ್‌ ಸ್ಟಿಲ್‌ ಟ್ರೈ
  47. ಲೈಫ್‌ ಅಂಡ್‌ ಲೆಟರ್ಸ್‌ , 2:389, ಇದರಿಂದ ಪಡೆದದ್ದು.


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಆತ್ಮಚರಿತ್ರೆಗಳು

[ಬದಲಾಯಿಸಿ]
  • Bence Jones, Henry (1870). The Life and Letters of Faraday. Philadelphia: J. B. Lippincott and Company.
  • Cantor, Geoffrey (1991). Michael Faraday, Sandemanian and Scientist. Macmillian. ISBN 0-333-55077. {{cite book}}: Check |isbn= value: length (help)
  • Gladstone, J. H. (1872). Michael Faraday. London: Macmillan.
  • Hamilton, James (2002). Faraday: The Life. London: Harper Collins. ISBN 0-00-716376-2.
  • Hamilton, James (2004). A Life of Discovery: Michael Faraday, Giant of the Scientific Revolution. New York publisher = Random House: Random House. ISBN 1-4000-6016-8. {{cite book}}: Missing pipe in: |location= (help)
  • Hirshfeld, Alan W. (2006). The Electric Life of Michael Faraday. Walker and Company. ISBN 978-0802714701.
  • Thompson, Silvanus (1901). Michael Faraday, His Life and Work. London: Cassell and Company. ISBN 1-4179-7036-7.
  • Tyndall, John (1868). Faraday as a Discoverer. London: Longmans, Green, and Company.
  • Williams, L. Pearce (1965). Michael Faraday: A Biography. New York: Basic Books.
  • ದಿ ಬ್ರಿಟಿಷ್‌ ಇಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ (1931). ಫ್ಯಾರಡೆ . R. & R. ಕ್ಲಾರ್ಕ್‌, ಲಿಮಿಟೆಡ್‌., ಎಡಿನ್‌ಬರ್ಗ್‌, 1931.
  • Agassi, Joseph (1971). Faraday as a Natural Philosopher. Chicago: University of Chicago Press.
  • Ames, Joseph Sweetman (Ed.) (c1900). The Discovery of Induced Electric Currents. Vol. 2. New York: American Book Company. {{cite book}}: Check date values in: |year= (help)CS1 maint: year (link)
  • Gooding, David (Ed.) (1985). Faraday Rediscovered: Essays on the Life and Work of Michael Faraday, 1791-1867. London/New York: Macmillan/Stockton.
  • Thomas, John Meurig (1991). Michael Faraday and the Royal Institution: The Genius of Man and Place. Bristol: Hilger. ISBN 0-7503-0145-7.
  • Russell, Colin A. (Ed. Owen Gingerich) (2000). Michael Faraday: Physics and Faith (Oxford Portraits in Science Series). New York: Oxford University Press. ISBN 0-19-511763-8.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಆತ್ಮಚರಿತ್ರೆಗಳು

[ಬದಲಾಯಿಸಿ]
ಪ್ರೊಫೆಸರ್‌ ಜಾನ್‌ ಟಿಂಡಾಲ್‌ ನೀಡಿರುವ ಜೀವನಚರಿತ್ರೆಯ ಪರಿಚಯದೊಂದಿಗಿನ ಮೂಲ ಪಠ್ಯ, 1914, ಜನಸಾಮಾನ್ಯರ ಆವೃತ್ತಿ‌.

ಟೆಂಪ್ಲೇಟು:Copley Medallists 1801-1850