ವಿಷಯಕ್ಕೆ ಹೋಗು

ರಾಜೇಶ್‌ ನಟರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜೇಶ್ ನಟರಂಗ ಒಬ್ಬ ಭಾರತೀಯ ಚಲನಚಿತ್ರ ನಟ, ಬರಹಗಾರ ಮತ್ತು ರೂಪದರ್ಶಿಯಾಗಿದ್ದಾರೆ. ಇವರು ಮುಖ್ಯವಾಗಿ ಕನ್ನಡ ಸಿನಿಮಾ ಮತ್ತು ಕನ್ನಡ ಹಾಗೂ ತೆಲುಗು ದೂರದರ್ಶನದಲ್ಲಿ ಅಭಿನಯಿಸುತ್ತಾರೆ. ರಾಜೇಶ್ 25 ಕ್ಕೂ ಹೆಚ್ಚು ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ.

ರಾಜೇಶ್‌ ನಟರಂಗ
ಜನನ (1977-04-18) ೧೮ ಏಪ್ರಿಲ್ ೧೯೭೭ (ವಯಸ್ಸು ೪೭) []
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ.ಎಸ್ಸಿ
ಶಿಕ್ಷಣ ಸಂಸ್ಥೆನ್ಯಾಷನಲ್ ಕಾಲೇಜು ಬಸವನಗುಡಿ
ವೃತ್ತಿ(ಗಳು)ನಟ, ಬರಹಗಾರ, ನಿರ್ಮಾಪಕ
ಸಕ್ರಿಯ ವರ್ಷಗಳು2002- ಪ್ರಸ್ತುತ
ಸಂಗಾತಿಚೈತ್ರ ರಾಜೇಶ್
ಮಕ್ಕಳು

ವೈಯಕ್ತಿಕ ಜೀವನ

[ಬದಲಾಯಿಸಿ]

ರಾಜೇಶ್ ನಟರಂಗ ಇವರು ಕರ್ನಾಟಕದ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು[] [] [].

ಶಿಕ್ಷಣ ಮತ್ತು ವೃತ್ತಿ ಜೀವನ

[ಬದಲಾಯಿಸಿ]

ರಾಜೇಶ್ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಓದಿದ್ದಾರೆ. ಅಲ್ಲಿ ಓದುತ್ತಿರುವಾಗಲೇ ನಾಟಕ, ನಾಟಕಗಳಲ್ಲಿ ಆಸಕ್ತಿ ಹುಟ್ಟಿ ‘ನಟರಂಗ’ ಎಂಬ ರಂಗ ಸಂಸ್ಥೆಯನ್ನು ಸೇರಿಕೊಂಡರು. ಸಿ.ಆರ್.ಸಿಂಹ, ಲೋಕೇಶ್, ಶ್ರೀನಾಥ್ ಮುಂತಾದ ಇಂಡಸ್ಟ್ರಿಯ ನಟರನ್ನು ನಟರಂಗ ಕೊಟ್ಟಿದೆ. ಅವರು ರಾಜೇಶ್ ನಟರಂಗ ಎಂದು ಜನಪ್ರಿಯರಾಗಿದ್ದಾರೆ. ಇವರು 2002 ರಲ್ಲಿ ಠಫೋರಿ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು[]. ಅವರು ಜಸ್ಟ್ ಮಾತಲ್ಲಿ, ಮೊಗ್ಗಿನ ಮನಸು ಮುಂತಾದ ಚಲನಚಿತ್ರಗಳ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಕೆಲವು ಚಲನಚಿತ್ರಗಳಿಗೆ ಚಿತ್ರಕಥೆಯನ್ನೂ ಬರೆದಿದ್ದಾರೆ.

ನಾಟಕ ತಂಡದಿಂದ ನಟನೆ ಕಲಿತು, ಬಿಎಸ್ಸಿ ಮುಗಿಸಿದ ಬಳಿಕ ರಾಜೇಶ್ ಆಪ್ಟೆಕ್ ನಲ್ಲಿ ಆರು ತಿಂಗಳ ಕಂಪ್ಯೂಟರ್ ಕೋರ್ಸ್ ಗೆ ಸೇರಿದರು. ಆದರೆ ಅದನ್ನು ಬಿಟ್ಟು ದೆಹಲಿ ನಗರಕ್ಕೆ ಹೋದರು. ಇಲ್ಲಿ ಇವರು ತೆರೆಮರೆಯ ಚಟುವಟಿಕೆಗಳ ನಿರ್ವಹಣೆಯನ್ನು ಕಲಿಯಲು ಪ್ರಾರಂಭಿಸಿದರು[]. ಅಲ್ಲಿ ಅವರ ಆಸಕ್ತಿ ಮತ್ತಷ್ಟು ಬೆಳೆಯಿತು. ಅಲ್ಲಿಂದ ಹಿಂತಿರುಗಿದ ನಂತರ ಇವರು ಎಂಎಸ್ ಸತ್ಯು ನಿರ್ದೇಶಿಸಿದ “ಸ್ಮಶಾನ ಕುರುಕ್ಷೇತ್ರ” ಧಾರಾವಾಹಿಯ ನಿರ್ಮಾಣ ವ್ಯವಸ್ಥಾಪಕರಾಗಿ ಮತ್ತು ಕಲಾ ನಿರ್ದೇಶಕರಾಗಿ ಕೆಲಸಮಾಡಿದರು. ರಾಜೇಶ್ ಅವರು ಕನ್ನಡದ ಜನಪ್ರಿಯ ಚಾನೆಲ್ ಉದಯ ಟಿವಿಯೊಂದಿಗೆ ಕೆಲಸ ಮಾಡುತ್ತಿದ್ದರು ಮತ್ತು ಅಲ್ಲಿ ಮೂರೂವರೆ ವರ್ಷಗಳ ಕಾಲ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದರು.

ಇವರು ಉದಯ ಟಿವಿಯೊಂದಿಗೆ ಕೆಲಸ ಮಾಡುತ್ತಿದ್ದಾಗ, ಇವರಿಗೆ ಮಾಯಾ ಮೃಗ ಧಾರಾವಾಹಿಯ ಅವಕಾಶ ಬಂದಿತು. ಉದಯ ಟಿವಿಯನ್ನು ತೊರೆದು ಟಿವಿ ಶೋಗಳಲ್ಲಿ ನಟನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಮಾಯಾ ಮೃಗ ಅವರಿಗೆ ಮೊದಲ ವಿರಾಮವನ್ನು ನೀಡಿತು. ಅಲ್ಲಿ ಇವರು ಶ್ರೀಧರ್ ಅಣ್ಣನ ಪಾತ್ರವನ್ನು ನಿರ್ವಹಿಸಿದರು; ಅವರು ಇಂದಿಗೂ ಈ ಪಾತ್ರಕ್ಕಾಗಿ ನೆನಪಿಸಿಕೊಳ್ಳುತ್ತಾರೆ[].

ಹಲವಾರು ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆಯಲ್ಲಿ[] ಕಾಣಿಸಿಕೊಂಡ ನಂತರ ಅವರು ಅಪಾರ ಜನಪ್ರಿಯತೆಯನ್ನು ಪಡೆದುಕೊಂಡರು.

ಸಿನಿಮಾಗಳ ಪಟ್ಟಿ

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]
ಕೀಲಿಮಣೆ
ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೨೦೦೨ ನಾಗರಹಾವು (೨೦೦೨)
೨೦೦೨ ಠಪೋರಿ ಕಾಸ
೨೦೦೩ ಮೂರು ಮನಸು ಮೂರು ಕನಸು
೨೦೦೩ ಆನಂದ ನಿಲಯ
೨೦೦೩ ಮನೆ ಮಗಳು
೨೦೦೪ ರೌಡಿ ಅಳಿಯ ಈಸ್ಟೇಟ್ ಕೆಲಸಗಾರ
೨೦೦೫ ಸೈ
೨೦೦೬ ಮೋಹಿನಿ 9886788888 ರಾಜೇಶ್
೨೦೦೭ ತಮಾಷೆಗಾಗಿ
೨೦೦೮ ಮೊಗ್ಗಿನ ಜಡೆ
೨೦೦೮ ಮೊಗ್ಗಿನ ಮನಸ್ಸು ಪ್ರೋಪೆಸರ್
೨೦೦೯ ಕಳ್ಳರ ಸಂತೆ
೨೦೧೦ ಜಸ್ಟ್ ಮಾತ್ ಮಾತಲ್ಲಿ ಆದಿ
೨೦೧೦ ಆಪ್ತರಕ್ಷಕ ಶೂರ ಸೇನಾ
೨೦೧೦ ನಾನು ನನ್ನ ಕನಸು ಉತ್ತಪ್ಪನ ಸ್ನೇಹಿತನಾಗಿ
೨೦೧೨ ಆರಕ್ಷಕ
೨೦೧೨ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕೃಷ್ಣರಾವ್
೨೦೧೩ ಕಡ್ಡಿಪುಡಿ ಗಾಳಿ
೨೦೧೩ ಸಕ್ಕರೆ ನಂದಕುಮಾರ್
೨೦೧೩ ದ್ಯಾವ್ರೆ
೨೦೧೪ ಗಜಕೇಸರಿ
೨೦೧೪ ಬಾನಾಡಿ
೨೦೧೪ ಫ್ರೀ ಬರ್ಡ್ ಅವಿನಾಶ್
೨೦೧೫ ಕೆಂಡ ಸಂಪಿಗೆ ಎಸಿಪಿ ಎಸ್ ಫುರಂದರ್ ಬರಹಗಾರನಾಗಿ
೨೦೧೫ ಪ್ಲಸ್ ಇನ್ಸ್‌ಪೆಕ್ಟರ್ ಕಿಶೋರ್
೨೦೧೬ ಕಿಲ್ಲಿಂಗ್ ವೀರಪ್ಪನ್ ಎಸ್‌ಟಿಎಫ್ ಆಫೀಸರ್ ಬಾಲು
೨೦೧೬ ಆಸ್ತಿತ್ವ
೨೦೧೬ ಹ್ಯಾಪಿ ಬರ್ತಡೆ
೨೦೧೬ ಜಾಗ್ವರ್
೨೦೧೭ ಸ್ಟೈಲ್ ರಾಜ
೨೦೧೭ ಬಿಬಿ೫
೨೦೧೭ ನೂರೊಂದು ನೆನಪು ಎಮ್‌ಕೆ
೨೦೧೭ ಟೈಗರ್
೨೦೧೭ ಅಪೇರಶನ್ ಅಲಮೇಲಮ್ಮ ಇನ್ಸ್‌ಪೆಕ್ಟರ್ ಅಶೋಕ್
೨೦೧೭ ಕಾಫಿತೋಟ
೨೦೧೭ ತಾರಕ್
೨೦೧೭ ದಯವಿಟ್ಟು ಗಮನಿಸಿ ಸತ್ಯನಾರಾಯಾಣ
೨೦೧೮ ನನಗಿಷ್ಟ
೨೦೧೮ ಕಟ್ಟು ಕಥೆ
೨೦೧೮ ರಾಜಣ್ಣನ ಮಗ
೨೦೧೯ ಫಾರ್ಚುನರ್ ಪ್ರಹ್ಲಾದ
೨೦೧೯ ರಗಡ್
೨೦೧೯ ವಿಜಯರಥ
೨೦೧೯ ಆಯುಷ್‌ಮಾನ್ ಭವ
೨೦೧೯ ಮನೆ ಮಾರಾಟಕ್ಕೆ ಇದೆ ಶ್ರಾವಣ
೨೦೧೯ ಮಾರ್ಗರೆಟ್
೨೦೧೯ WWW ಮೀನಬಾಜಾರ್.,
೨೦೨೦ Law ಶ್ಯಾಮ ಪ್ರಸಾದ್
೨೦೨೧ ಕದ್ದುಮುಚ್ಚಿ
೨೦೨೧ ಯುವರತ್ನ ಪ್ರೊಪೆಸರ್
೨೦೨೧ ಕೋಟಿಗೊಬ್ಬ೩ ಡಾಕ್ಟರ್
೨೦೨೧ ರತ್ನ ಪ್ರಪಂಚ ಶ್ರೀನಾಥ್
೨೦೨೧ ರೈಡರ್ ರಘುರಾಮ್
೨೦೨೧ ಪಂಚಮ ಅಧ್ಯಾಯ
೨೦೨೨ ತನುಜಾ ಪ್ರದೀಪ್ ಈಶ್ವರ್
೨೦೨೨ ಹೋಮ್ ಮಿನಿಸ್ಟರ್
೨೦೨೨ ಕ್ರಿಟಿಕಲ್ ಕೀರ್ತನೆಗಳು
೨೦೨೨ ಗರುಡ ಭಾರತ ಭಾರ್ಗವ
೨೦೨೨ ಫಿಸಿಕ್ಸ್ ಟೀಚರ್ ರಾಮಸ್ವಾಮಿ
೨೦೨೨ ಚೇಸ್ ಇನ್ ದ ಡಾರ್ಕ್
೨೦೨೨ ರೇಮೋ
೨೦೨೩ ಶ್ರೀ ಲಂಬೋಧರ ವಿವಾಹ
೨೦೨೩ 19.20.21
೨೦೨೩ ಸಿಗ್ನಲ್ ಮಾನ್ 1971
೨೦೨೩ ಗುರುದೇವ ಹೊಯ್ಸಳ
೨೦೨೩ ನಮ್ಮ ನಾಣಿ ಮದುವೆ ಪ್ರಸಂಗ
೨೦೨೩ ಮೆಲೋಡಿ ಡ್ರಾಮ
೨೦೨೩ ಉಸಿರೆ ಉಸಿರೆ
೨೦೨೩ ಫೈಟರ್
೨೦೨೩ ಹೈಡ್ ಆಂಡ್ ಸೀಕ್ † ಬಿಡುಗಡೆಗೆ ಸಿದ್ದವಾಗಿದೆ
೨೦೨೩ ಒಂದು ಸರಳ ಪ್ರೇಮಕಥೆ † ಚಿತ್ರೀಕರಣ ಸಂಪೂರ್ಣವಾಗಿದೆ
TBA ಶಬ್ದ † ನಿರ್ಮಾಣ ಕಾರ್ಯದಲ್ಲಿ
TBA ಮಿ.ನಟ್‌ವಾರ್‌ಲಾಲ್ † ನಿರ್ಮಾಣ ಕಾರ್ಯದಲ್ಲಿ
TBA ಜೋಗ್ 101 † ಪೂರ್ಣವಾಗಿದೆ

ದೂರದರ್ಶನ

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ವಾಹಿನಿ ಟಿಪ್ಪಣಿಗಳು
೧೯೯೮ ಮಾಯಾಮೃಗ ಶ್ರೀಧರ್ ಡಿಡಿ ಚಂದನ []
೨೦೦೩ ಗುಪ್ತಗಾಮಿನಿ ತೇಜಸ್ವಿ ಈ-ಟಿವಿ ಕನ್ನಡ
೨೦೦೩ ಬದುಕು ಈ-ಟಿವಿ ಕನ್ನಡ [೧೦]
೨೦೦೪ ಮುಕ್ತ ಈ-ಟಿವಿ ಕನ್ನಡ
? ಶಕ್ತಿ
೨೦೧೭ ತ್ರಿವೇಣಿ ಸಂಗಮ ಸ್ಟಾರ್ ಸುವರ್ಣ
೨೦೨೩ ಅಮೃತಧಾರೆ ಗೌತಮ್ ಝೀ ಕನ್ನಡ [೧೧] [೧೨] [೧೩]


ನಿರ್ಮಾಪಕನಾಗಿ

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ವಾಹಿನಿ ಟಿಪ್ಪಣಿಗಳು
೨೦೨೧ ನಿನ್ನಿಂದಲೇ ನಿರ್ಮಾಪಕ ಉದಯ ಟಿವಿ

ಬಾಹ್ಯಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಧಾರಾವಾಹಿ ನಟರ ನಿಜವಾದ ವಯಸೆಷ್ಟು?". ವಿಜಯ ಕರ್ನಾಟಕ. Retrieved 10 ಸೆಪ್ಟಂಬರ್ 2023.
  2. "ರಾಜೇಶ್ ನಟರಂಗ ಬಯೋಗ್ರಫಿ". ಫಿಲ್ಮಿಬೀಟ್ ಕನ್ನಡ. Retrieved 30 ಅಕ್ಟೋಬರ್ 2023.
  3. "ರಾಜೇಶ್ ನಟರಂಗ ಜನನ ಮತ್ತು ಜೀವನ". ವಿಕಿ. Retrieved 30 ಅಕ್ಟೋಬರ್ 2023.
  4. "ಅಪ್ಪನಂತೆ ಗೆದ್ದ ಬೀಗಿದ ಮಗಳು: ರಾಜೇಶ್ ನಟರಂಗ ಪುತ್ರಿ ಮಲಯಾಳಂ ಚಿತ್ರದಲ್ಲಿ ಶೈನಿಂಗ್". ಫಿಲ್ಮಿಬೀಟ್ ಕನ್ನಡ. Retrieved 9 ಜೂನ್ 2023.
  5. "ಠಪೋರಿ ಕನ್ನಡ ಸಿನಿಮಾ". ಕನ್ನಡ ಮೂವೀಸ್ ಇನ್‌ಫೋ. Retrieved 18 ಜನವರಿ 2017.
  6. "ರಾಜೇಶ್ ನಟರಂಗ ಹಿಂದಿನ ಜೀವನ". ಫಿಲ್ಮಿಬೀಟ್ ಕನ್ನಡ. Retrieved 30 ಅಕ್ಟೋಬರ್ 2023.
  7. "ರಾಜೇಶ್ ನಟರಂಗ ಶಿಕ್ಷಣ ಮತ್ತು ವೃತ್ತಿ ಜೀವನ". nettv4u. Retrieved 30 ಅಕ್ಟೋಬರ್ 2023.
  8. "'ಅಮೃತಧಾರೆ' ಧಾರಾವಾಹಿಯ ಆ ಒಂದು ದೃಶ್ಯವನ್ನು 30 ಬಾರಿ ನೋಡಿದ ಕನ್ನಡ ನಟ ಕಿರಣ್; ಯಾಕೆ?". ವಿಜಯ ಕರ್ನಾಟಕ. Retrieved 14 ಅಕ್ಟೋಬರ್ 2023.
  9. "ಮತ್ತೆ ಮುಗಿದ ಮಾಯಾಮೃಗ". ವಿಜಯ ಕರ್ನಾಟಕ. Retrieved 5 ಅಕ್ಟೋಬರ್ 2023.
  10. "ಸುದೀರ್ಘ ಬದುಕಿಗೆ ಭಾವಪೂರ್ಣ ವಿದಾಯ". ವಿಜಯ ಕರ್ನಾಟಕ. Retrieved 16 ಫೆಬ್ರವರಿ 2015.
  11. "ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ". ಸುವರ್ಣ ನ್ಯೂಸ್. Retrieved 20 ಏಪ್ರಿಲ್ 2023.
  12. "New soap opera Amruthadhaare to premiere on monday". The Times of India. Retrieved 27 ಮೇ 2023.
  13. "ಭೂಮಿಕಾ-ಗೌತಮ್ ಕಲ್ಯಾಣೋತ್ಸವ, 'ಅಮೃತಧಾರೆ'ಯಲ್ಲಿ ಸಂಭ್ರಮಮೋ ಸಂಭ್ರಮ". News18 Kannada. Retrieved 5 ಸೆಪ್ಟಂಬರ್ 2023.