ಗುಪ್ತಗಾಮಿನಿ (ಧಾರಾವಾಹಿ)
ಗುಪ್ತಗಾಮಿನಿ ಧಾರಾವಾಹಿ ಈ-ಟಿವಿ ಕನ್ನಡದಲ್ಲಿ ಸಂಜೆ ೬.೩೦ ಕ್ಕೆ ಪ್ರಸಾರವಾಗಿತ್ತು. 2003 ರಲ್ಲಿ, ಈ ಧಾರಾವಾಹಿಯು ಕರ್ನಾಟಕ ಪ್ರದೇಶದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಒಂದಾಗಿತ್ತು [೧]. 2008 ರಲ್ಲಿ ಗುಪ್ತಗಾಮಿನಿ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಖ್ಯಾತ ಪತ್ರಕರ್ತೆ ಸಂಧ್ಯಾ ಪೈ ಈ ಧಾರವಾಹಿಯನ್ನು ನಿರ್ಮಿಸಿದ್ದರೆ, ವಿಜಯ್ ಸಾರಾಯಿ ಈ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಈ ಧಾರವಾಹಿ ನಿರ್ಮಾಣವಾಗಿದೆ.
ಗುಪ್ತಗಾಮಿನಿ (ಧಾರಾವಾಹಿ) | |
---|---|
ಶೈಲಿ | ಧಾರಾವಾಹಿ |
ನಿರ್ದೇಶಕರು | ವಿಜಯ್ ಸಾರಾಯಿ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ನಿರ್ಮಾಪಕ(ರು) | ಸಂಧ್ಯಾ ಪೈ, ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್ |
ಸಮಯ | 20-22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಈಟಿವಿ ಕನ್ನಡ |
ಡಿಸೆಂಬರ್ 2008 ರಲ್ಲಿ, ಇದು ಒಟ್ಟು 1300 ಸಂಚಿಕೆಗಳನ್ನು ಪೊರೈಸಿ ಕರ್ನಾಟಕದಲ್ಲಿ ಈ ಧಾರವಾಹಿಯ ಸಂಚಿಕೆಗಳು ದಾಖಲೆಗಳನ್ನು ಮುರಿದಿತ್ತು [೨] . ಕನ್ನಡ ವೀಕ್ಷಕರಿಗೆ ತನ್ನ ಅಭಿರುಚಿಯನ್ನು ಕಾಯ್ದುಕೊಳ್ಳುವ ಕಂಟೆಂಟ್ ಇದರಲ್ಲಿತ್ತು. ಆದ್ದರಿಂದಲೇ ಧಾರಾವಾಹಿ ಇಷ್ಟು ದೀರ್ಘಾವಧಿಯನ್ನು ತಲುಪಿದೆ ಎಂದು ಜನರು ಭಾವಿಸಿದ್ದಾರೆ. ಈ ಧಾರವಾಹಿಯು ಕರ್ನಾಟಕಕ್ಕೆ ಹಲವು ಪ್ರತಿಭಾವಂತ ಕಲಾವಿದರನ್ನು ಪರಿಚಯಿಸಿದೆ [೩].
ಕಥೆ
[ಬದಲಾಯಿಸಿ]ಕೌಟುಂಬಿಕ ಘಟನೆಗಳನ್ನು ಆಧಾರಿತ ಧಾರವಾಹಿ ಗುಪ್ತಗಾಮಿನಿ. ಈ ಧಾರವಾಹಿಯು ಭಾವನ ಪಾತ್ರದಾರಿಯ ಮೇಲೆ ಕೇಂದ್ರಿಕೃತವಾಗಿತ್ತು. ಸ್ವಾಭಿಮಾನದ ಹೆಣ್ಣು, ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ದವಾಗಿರುವ ಹೆಣ್ಣಿನ ಕಥೆ.
ಪ್ರಶಸ್ತಿಗಳು
[ಬದಲಾಯಿಸಿ]- ಧಾರಾವಾಹಿಯಲ್ಲಿನ ಭಾವನ ಪಾತ್ರಕ್ಕಾಗಿ ನಟಿ ಸುಷ್ಮಾಗೆ 2007 ರಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ʼಉತ್ತಮ ನಟಿ ಪ್ರಶಸ್ತಿʼ ಕೂಡಾ ದೊರೆತಿದೆ.
- ನಿರ್ಮಾಪಕಿ ಸಂಧ್ಯಾ ಎಸ್ ಪೈ ಅವರಿಗೆ ಈ ಧಾರಾವಾಹಿಗಾಗಿ 2009 ರಲ್ಲಿ 'ಖ್ಯಾತ ಧಾರಾವಾಹಿ ಎಂಬ ವಿಶೇಷ ಪ್ರಶಸ್ತಿ' ದೊರೆತಿದೆ.
ಕಲಾವಿದರು
[ಬದಲಾಯಿಸಿ]- ಸುಷ್ಮಾ ಕೆ. ರಾವ್[೪] [೫]
- ರಾಜೇಶ್ ನಟರಂಗ
- ಸುಂದರಶ್ರೀ
- ಗ್ರೀಷ್ಮಾ ಉದಯ್
- ಜ್ಯೋತಿ
- ಶಂಕರ್ ಆರ್ಯನ್
- ಮಾನಸಿ ವಾಸುದೇವನ್
ಉಲ್ಲೇಖಗಳು
[ಬದಲಾಯಿಸಿ]- ↑ "ಗುಪ್ತಗಾಮಿನಿ ಧಾರಾವಾಹಿಯ ಪಾತ್ರವರ್ಗ". nettv4u. Retrieved 10 ಸೆಪ್ಟಂಬರ್ 2023.
- ↑ "ಐದುವರುಷಗಳನ್ನು ಪೂರ್ಣಗೊಳಿಸಿದ ಗುಪ್ತಗಾಮಿನಿ". ಫಿಲ್ಮಿಬೀಟ್ ಕನ್ನಡ. Retrieved 29 ಡಿಸೆಂಬರ್ 2008.
- ↑ "ಕನ್ನಡದ ಉತ್ತಮ ಧಾರಾವಾಹಿಗಳು". ದ ಟೈಮ್ಸ್ ಆಪ್ ಇಂಡಿಯಾ. Retrieved 31 ಆಗಸ್ಟ್ 2023.
- ↑ "ಕಿರುತೆರೆ ನಟನೆಗೆ ಮರಳಿದ ಭಾವನ ಆಲಿಯಾಸ್ ಸುಷ್ಮಾ ಕೆ. ರಾವ್". ಹಿಂದೂಸ್ತಾನ ಟೈಮ್ಸ್. Retrieved 7 ಜುಲೈ 2022.
- ↑ "ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿದೆ". Retrieved February 15, 2023.