ಮಾಯಾಮೃಗ (ಧಾರಾವಾಹಿ)
ಮಾಯಾಮೃಗ (ಧಾರಾವಾಹಿ) | |
---|---|
ಬರೆದವರು | ಟಿ.ಎನ್.ಸೀತಾರಾಂ |
ನಿರ್ದೇಶಕರು | ಟಿ.ಎನ್.ಸೀತಾರಾಂ, ಪಿ.ಶೇಷಾದ್ರಿ ಮತ್ತು ನಾಗೇಂದ್ರ ಶಾ [೧] |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ನಿರ್ಮಾಪಕ(ರು) | ಭೂಮಿಕಾ ಪ್ರೊಡಕ್ಷನ್ಸ್ |
ಸಮಯ | ೨೪ ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಡಿಡಿ ಚಂದನ, ಝೀ ಕನ್ನಡ[೧] |
ಚಿತ್ರ ಶೈಲಿ | 576i (SDTV), |
Original airing |
|
"ಮಾಯಾಮೃಗ''ವು ಕನ್ನಡ ಭಾಷೆಯ ಒಂದು ಟೆಲಿಧಾರಾವಾಹಿಯಾಗಿದ್ದು ಟಿ. ಎನ್. ಸೀತಾರಾಮ್ ಅವರು ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜತೆ ಜಂಟಿಯಾಗಿ ನಿರ್ದೆದೇಶಿದ್ದಾರೆ. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ [೨][೩] ಮತ್ತೆ ಪ್ರಸಾರವಾಯಿತು.
ಕಥಾವಸ್ತು
[ಬದಲಾಯಿಸಿ]ಈ ಕಥೆಯು ತಮ್ಮ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಸಮಾಜವನ್ನು ಉತ್ತಮಗೊಳಿಸಲು ಪ್ರಯತ್ನಿಸುವ ಇಬ್ಬರು ಮಧ್ಯಮ ವರ್ಗದ ಹುಡುಗಿಯರ ಕುರಿತಾಗಿದೆ. ಮಾಳವಿಕಾಳು ಮಧ್ಯಮ ವರ್ಗದಲ್ಲಿ ಜನಿಸಿದ ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿದ್ದು, ಸಮಾನತೆ ಮತ್ತು ವಿಮೋಚನೆ ಹೊಂದಿದ ಮಹಿಳೆಯರು ಇರುವಂತಹ ಒಂದು ಆದರ್ಶ ಸಮಾಜದ ಕನಸು ಕಾಣುತ್ತಾಳೆ. ತನ್ನ ಶಿಕ್ಷಕ ಕೃಷ್ಣ ಪ್ರಸಾದನಲ್ಲಿ ಅವಳು ಒಬ್ಬ ಆದರ್ಶ ವ್ಯಕ್ತಿಯನ್ನು ಕಂಡುಕೊಂಡಾಗ, ಅವಳು ತನ್ನ ಹೆತ್ತವರನ್ನು ವಿರೋಧಿಸಿ ಅವನನ್ನು ಮದುವೆಯಾಗುತ್ತಾಳೆ. ಅವಳು ತನ್ನ ಮಾವನ ವ್ಯವಹಾರ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ; ಅವಳ ಮಾವ ಅವಳನ್ನು ತನ್ನ ಮಗನಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾನೆ.[೪]
ಮತ್ತೊಂದು ಕುಟುಂಬದಲ್ಲಿ, ಶ್ರೀಲಕ್ಷ್ಮಿ ತನ್ನ ಒಡಹುಟ್ಟಿದವರಾದ ಶ್ಯಾಮಾ ಮತ್ತು ಶಾರದಾ ಮತ್ತು ತಂದೆ ಎಲ್.ಎನ್.ಶಾಸ್ತ್ರಿ ಮತ್ತು ತಾಯಿ ಕಮಲಮ್ಮ ಅವರೊಂದಿಗೆ ವಾಸಿಸುತ್ತಿದ್ದಾರೆ. ಶ್ರೀಲಕ್ಷ್ಮಿಗೆ ಮಾಡೆಲಿಂಗ್ ಗೆ ಅವಕಾಶ ಸಿಕ್ಕಾಗ, ಆಕೆಯ ಸಾಂಪ್ರದಾಯಿಕ ತಂದೆ ಶಾಸ್ತ್ರಿ ಅವಳನ್ನು ಅದಕ್ಕೆ ಬಿಡುವುದಿಲ್ಲ. ಒಂದು ದಿನ, ಶಾಸ್ತಿಯ ಶಿಷ್ಯರಲ್ಲಿ ಒಬ್ಬರಾದ ರಘುವು ಶ್ರೀಲಕ್ಷ್ಮಿಯನ್ನು ಮದುವೆಯಾಗುವ ಪ್ರಸ್ತಾಪದೊಂದಿಗೆ ಶಾಸ್ತ್ರಿಗಳಲ್ಲಿಗೆ ಬರುತ್ತಾನೆ. ಆದರೆ ನಿಶ್ಚಿತಾರ್ಥದ ದಿನದಂದು ಸನ್ಯಾಸಿಯಾಗುತ್ತಾನೆ. ಶಾಸ್ತ್ರಿಗಳ ದೃಡ ನಿಶ್ಚಯದ ಸ್ವಭಾವದಿಂದಾಗಿ, ಅವನ ಮಕ್ಕಳು ಎಲ್ಲರೂ ತಮ್ಮ ಹಣೆಬರಹಗಳನ್ನು ಹುಡುಕಿಕೊಂಡು ಮನೆಯಿಂದ ಹೊರಟು ಹೋಗುತ್ತಾರೆ ಮತ್ತು ಶಾಸ್ತ್ರಿಗಳು ಕೂಡ ತನ್ನ ಸಹೋದರನೊಂದಿಗೆ ಜಗಳ ಎದುರಾದಾಗ ಪತ್ನಿ ಕಮಲಮ್ಮಳೊಂದಿಗೆ ಮನೆಯಿಂದ ಹೊರಟು ಹೋಗುತ್ತಾರೆ.
ಪಾತ್ರವರ್ಗ
[ಬದಲಾಯಿಸಿ]- ಶಾಸ್ತ್ರಿಗಳ ಪಾತ್ರದಲ್ಲಿ ಎಚ್. ಜಿ. ದತ್ತಾತ್ರೇಯ
- ಲಕ್ಷ್ಮಿ ಚಂದ್ರಶೇಖರ್
- ಕೃಷ್ಣಪ್ರಸಾದ್ ಪಾತ್ರದಲ್ಲಿಅವಿನಾಶ್
- ಶಾರದೆಯಾಗಿ ಜಯಶ್ರೀ
- ಶ್ರೀಲಕ್ಷ್ಮಿಯಾಗಿ ರೇಖಾ
- ರಾಜೇಶ್ ಪಾತ್ರದಲ್ಲಿ ನಟನಾ ರಾಜೇಶ್
- ಬೃಂದಾ ಪಾತ್ರದಲ್ಲಿ ಮಂಜು ಭಾಷಿಣಿ
- ಮಾಳವಿಕಾ ಪಾತ್ರದಲ್ಲಿ ಮಾಳವಿಕ ಅವಿನಾಶ್ [೫]
- ನಾರಾಯಣಮೂರ್ತಿ ಪಾತ್ರದಲ್ಲಿ ಎಸ್. ಎನ್. ಸೇತುರಾಂ
- ಮೋಹನಮೂರ್ತಿ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು
- ವೈಶಾಲಿ ಕಾಸರವಳ್ಳಿ
- ವಿದ್ಯಾ ಆಗಿ ಎಂ. ಡಿ. ಪಲ್ಲವಿ
ಉಲ್ಲೇಖ
[ಬದಲಾಯಿಸಿ]- ↑ ೧.೦ ೧.೧ ೧.೨ "Photos: TN Seetharam's Mayamruga Lead Casts-Other Actors in Mayamruga". filmibeat.com (in ಇಂಗ್ಲಿಷ್). 10 March 2014. Retrieved 27 August 2018.
- ↑ "His USP is middle class-ness". ದಿ ಹಿಂದೂ. 28 April 2006. Retrieved 17 February 2016.
- ↑ "Mayamruga will be relaunched soon". ದಿ ಟೈಮ್ಸ್ ಆಫ್ ಇಂಡಿಯಾ. 4 March 2014. Retrieved 17 February 2016.
- ↑ "Mayamruga - Tele Serial - 23 DVDs Set, Kannada Store Kannada DVD Buy DVD, VCD, Blu-ray, Audio CD, MP3 CD, Books, Free Shipping". www.kannadastore.com (in ಇಂಗ್ಲಿಷ್). Retrieved 27 August 2018.
- ↑ "Small-screen "Anni" thinks big". ದಿ ಹಿಂದೂ. 12 May 2003. Archived from the original on 30 June 2003. Retrieved 17 February 2016.