ಪ್ಯಾರಿಸ್ ಪ್ರಣಯ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಪ್ಯಾರಿಸ್ ಪ್ರಣಯ
ನಿರ್ದೇಶನನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಪಕಅಮರನಾಥ್ ಗೌಡ
ಹರಿನಾಥ್ ಪೊಲಿಚರ್ಲ
ತುಮಕೂರು ದಯಾನಂದ್
ವಿದ್ಯಾಶಂಕರ್
ಲೇಖಕನಾಗತಿಹಳ್ಳಿ ಚಂದ್ರಶೇಖರ್
ಪಾತ್ರವರ್ಗರಘು ಮುಖರ್ಜಿ
ಮಿನಲ್ ಪಾಟಿಲ್
ತಾರಾ
ಸಂಗೀತಸ್ಟೀಫನ್ ಪ್ರಯೋಗ್
ಛಾಯಾಗ್ರಹಣಕೃಷ್ಣ ಕುಮಾರ್
ಸಂಕಲನಬಸವರಾಜ್ ಅರಸ್
ಸ್ಟುಡಿಯೋಟ್ವೆಂಟಿ ಫ಼ರ್ಸ್ಟ್ ಸೆಂಚುರಿ ಲಯನ್ಸ್ ಸಿನಮಾ
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
 • 18 ಏಪ್ರಿಲ್ 2003 (2003-04-18)
ಅವಧಿ151 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಪ್ಯಾರಿಸ್ ಪ್ರಣಯ ೨೦೦೩ರ ಕನ್ನಡ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ರಘು ಮುಖರ್ಜಿ ಮತ್ತು ಮಿನಲ್ ಪಾಟಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಜೇಶ್, ತಾರ ಮತ್ತು ಶರತ್ ಲೋಹಿತಾಶ್ವ ಇತರ ಗಮನಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.[೧] ಟ್ವೆಂಟಿ ಫ಼ಸ್ಟ್ ಸೆಂಚುರಿ ಲಯನ್ಸ್ ಸಿನಮಾ ಚಿತ್ರವನ್ನು ನಿರ್ಮಿಸಿತು.

ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಯಿತು.[೨] ಪ್ಯಾರಿಸ್, ರೋಮ್, ದಕ್ಷಿಣ ಫ಼್ರಾನ್ಸ್ ಮತ್ತು ಸ್ಪೇನ್ನಂತಹ ಅನೇಕ ಐರೋಪ್ಯ ದೇಶಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣವಾದ ಈ ಚಿತ್ರವು ಡೆಟ್ರಾಯಿಟ್‍ನಲ್ಲಿ ನಡೆದ ವಾರ್ಷಿಕ "ವಿಶ್ವ ಕನ್ನಡ ಸಮ್ಮೇಳನ - ೨೦೦೨"ರ ದೃಶ್ಯವನ್ನು ಒಳಗೊಂಡಿದೆ.[೩]. ಇದು ೨೦೦೩ರ ವರ್ಷಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದಿತು.

ಪಾತ್ರವರ್ಗ[ಬದಲಾಯಿಸಿ]

 • ಕ್ರಿಶ್ ಉರುಫ್ ಕೃಷ್ಣ ಆಗಿ ರಘು ಮುಖರ್ಜಿ
 • ಪೂರ್ವಿ ಆಗಿ ಮಿನಲ್ ಪಾಟಿಲ್
 • ಎಚ್. ಕೆ. ಮಾಸ್ತರ್ ಆಗಿ ರಾಜೇಶ್
 • ಆದಿತ್ಯ ಆಗಿ ಶರತ್ ಲೋಹಿತಾಶ್ವ
 • 'ಸೆಲ್' ಸೀತಾ ಆಗಿ ತಾರಾ
 • ಹರಿನಾಥ್ ಪೋಲಿಚರ್ಲ
 • ಸುಮಲತಾ
 • ಸುಧಾ ಬೆಳವಾಡಿ
 • ನಾಗತಿಹಳ್ಳಿ ಚಂದ್ರಶೇಖರ್ ಅತಿಥಿ ಪಾತ್ರ

ಅಶರೀರವಾಣಿ[ಬದಲಾಯಿಸಿ]

ಸಂಗೀತ[ಬದಲಾಯಿಸಿ]

ಚಿತ್ರದ ಸಂಗೀತವನ್ನು ಸ್ಟೀಫನ್ ಪ್ರಯೋಗ್ ಸಂಯೋಜಿಸಿದ್ದಾರೆ.[೪] ಧ್ವನಿವಾಹಿನಿಯು ಮುಖ್ಯವಾಗಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಗಳ ಮಿಶ್ರಣ ಸಂಗೀತದ ಮೇಲೆ ಕೇಂದ್ರೀಕರಿಸಿತು. ಹಾಡುಗಳಿಗೆ ಜನಪ್ರಿಯ ಬಾಲಿವುಡ್ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದರು. ಇದು ಕನ್ನಡ ಚಿತ್ರರಂಗದಲ್ಲಿ ಘೋಶಾಲ್‍ರ ಪ್ರಥಮ ಪ್ರವೇಶವಾಗಿತ್ತು. ಧ್ವನಿವಾಹಿನಿಯು ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಮತ್ತು ಮೆಚ್ಚುಗೆ ಪಡೆದ ಕವಿ ಜಿ.ಎಸ್.ಶಿವರುದ್ರಪ್ಪ ಬರೆದ ಶುದ್ಧ ಕನ್ನಡ ಸುಗಮ ಸಂಗೀತ ಹಾಡು "ಎದೆ ತುಂಬಿ ಹಾಡಿದೆನು"ವನ್ನು ಒಳಗೊಂಡಿತ್ತು. ಇನ್ನೊಂದೆಡೆ, ಇದು ಲುಡ್ವಿಗ್ ವಾನ್ ಬೆಟ್ಹೋವನ್ ಮತ್ತು ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್‌ರಂತಹ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ದಿಗ್ಗಜರು ನುಡಿಸಿದ ಸಂಗೀತ ತುಣುಕುಗಳನ್ನು ಹೊಂದಿತ್ತು.[೫] "ಕೃಷ್ಣ ನೀ ಬೇಗನೇ ಬಾರೊ" ಹಾಡು ಮೂಲತಃ ಸಂತ ವ್ಯಾಸತೀರ್ಥರು ಬರೆದು ಯಮುನಾ ಕಲ್ಯಾಣಿ ರಾಗದಲ್ಲಿ ಬರೆದು ಸಂಯೋಜಿಸಿದ ಇದೇ ಹೆಸರಿನ ಪ್ರಸಿದ್ಧ ಶಾಸ್ತ್ರೀಯ ಹಾಡಿನ ರೂಪಾಂತರವಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]

 • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
 1. ಅತ್ಯುತ್ತಮ ಸಂಗೀತ ನಿರ್ದೇಶಕ - ಸ್ಟೀಫನ್ ಪ್ರಯೋಗ್
 2. ಅತ್ಯುತ್ತಮ ಗೀತಸಾಹಿತಿ - ನಾಗತಿಹಳ್ಳಿ ಚಂದ್ರಶೇಖರ್
 3. ಅತ್ಯುತ್ತಮ ಹಿನ್ನೆಲೆ ಗಾಯಕಿ - ನಂದಿತಾ
 • ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ
 1. ಅತ್ಯುತ್ತಮ ಚಲನಚಿತ್ರ - ತುಮಕೂರು ದಯಾನಂದ್

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಮೂಲಗಳು[ಬದಲಾಯಿಸಿ]