ದೊಡ್ಡಗದ್ದವಳ್ಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಕ್ಷ್ಮೀ ದೇವಿ ದೇವಾಲಯ,ದೊಡ್ಡಗದ್ದವಳ್ಳಿ


ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯು ಹೊಯ್ಸಳ ಶೈಲಿಯ ಪುರಾತನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಸಿದ್ಧಿ. ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ ೧೬ ಕಿ.ಮೀ. ಸಾಗಿದರೆ ದೊಡ್ಡಗದ್ದವಳ್ಳಿ ಸಿಗುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾದ ಮಹಾಲಕ್ಷ್ಮಿ ದೇವಸ್ಥಾನವನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಕ್ರಿ.ಶ. ೧೧೧೪ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಚತುಷ್ಕುಟ(ಒಂದೇ ಜಗತಿಯ ಮೇಲೆ ನಾಲ್ಕು ಮುಖ್ಯ ಗರ್ಭಗುಡಿಗಳು ಮತ್ತು ನಾಲ್ಕು ಮುಖ್ಯ ಶಿಖರಗಳಿರುವುದು) ದೇವಾಲಯವಾಗಿದ್ದು , ಕಾಲಿಮಾತೆ, ಮಹಾಲಕ್ಷ್ಮಿ, ಶಿವಲಿಂಗ, ಮತ್ತು ವಿಷ್ಣು ( ನಲವತ್ತು ವರುಷಗಳ ಹಿಂದೆ ಮೂಲ ವಿಷ್ಣು ವಿಗ್ರಹವು ಕಳುವಾಗಿದ್ದು ಸದ್ಯ ಕಾಲಭೈರವನ ಮೂರ್ತಿಯು ಇಲ್ಲಿದೆ)ವಿನ ವಿಗ್ರಹಗಳಿವೆ. ಇದು ಪೂಜೆಗೊಳ್ಳುವ ಆಲಯವಾಗಿದ್ದು ಭಾರತೀಯ ಪುರಾತತ್ವ ಸರ್ವೇಕ್ಷಣದ ಸುಪರ್ದಿಗೊಳಪಟ್ಟಿದೆ. ೧೯೫೮ ರಲ್ಲಿ ಈ ಆಲಯವನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ದೇವಾಲಯವು ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೆ ತೆರೆದಿರುತ್ತದೆ.