ಚಿತ್ರಾಪುರ ಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಚಿತ್ರಾಪುರ ಮಠ
ಚಿತ್ರಾಪುರ ಮಠ
ಚಿತ್ರಾಪುರ ಮಠ
ಭೂಗೋಳ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಉತ್ತರ ಕನ್ನಡ
ಸ್ಥಳಶಿರಾಲಿ
[ಶಾಶ್ವತವಾಗಿ ಮಡಿದ ಕೊಂಡಿ] ಚಿತ್ರಾಪುರ ಮಠ

ಶ್ರೀ ಚಿತ್ರಾಪುರ ಮಠವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು ಗೋಕರ್ಣ, ಮಂಗಳೂರು, ಮಲ್ಲಾಪುರ, ಬೆಂಗಳೂರು ಮತ್ತು ಮಹಾರಾಷ್ಟ್ರದ ಕಾರ್ಲಾದಲ್ಲಿವೆ.  

ಈ ಮಠದದಲ್ಲಿ ಶ್ರೀ ಪರಮಶಿವನ ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ ಆದಿ ಶಂಕರಾಚಾರ್ಯ ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ.

ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿಗಳಿಂದ ಪ್ರಾರಂಭಗೊಂಡಿದೆ.

ಚಿತ್ರಾಪುರ ಸಾರಸ್ವತ ಬ್ರಾಹ್ಮಣರು[ಬದಲಾಯಿಸಿ]

ಕರಾವಳಿಯ ಭಾಗದದಲ್ಲಿ ಕೊಂಕಣಿ ಮಾತೃಭಾಷೆಯಾಗಿ ಹೊಂದಿರುವ ಈ ಸಣ್ಣ ಜನಾಂಗವು ಮೂಲತಃ ಗೌಡ ಸಾರಸ್ವತ ಬ್ರಾಹ್ಮಣರು. ೧೭೦೮ ರಲ್ಲಿ ಚಿತ್ರಾಪುರ ಮಠ ಪರಂಪರೆ ಪ್ರಾರಂಭಗೊಂಡ ನಂತರ ಈ ಮಠದ ಅನುಯಾಯಿಗಳನ್ನು ಚಿತ್ರಾಪುರ ಸಾರಸ್ವತ ಬ್ರಾಹ್ಮಣರು ಎಂದು ಗುರುತಿಸಲಾಯಿತು. [೧]

ಈ ಸಮುದಾಯಯಕ್ಕೆ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಬಾನಪರು ಎಂಬುದಾಗಿಯೂ ಗುರುತಿಸುತ್ತಾರೆ.  

೨೦೦೧ರ ಚಿತ್ರಾಪುರ ಸಾರಸ್ವತ ಜನಗಣತಿಯ ಪ್ರಕಾರ ಇಡೀ ಜಗತ್ತಿನಲ್ಲಿ ಕೇವಲ ೨೨೪೯೮ ಮಂದಿ ಈ ಸಮುದಾಯದವರಾಗಿದ್ದಾರೆ.[೨]

ಇತಿಹಾಸ[ಬದಲಾಯಿಸಿ]

ಮಠದ ಪ್ರಥಮ ಮಠಾಧಿಪತಿಯಾಗಿದ್ದ ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು.

ದ್ವಿತೀಯ ಮಠಾಧಿಪತಿಯಾಗಿ ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.  

ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ) ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ) ಎಂದು ನಾಮವನ್ನಿತ್ತರು.

ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ ಶ್ರೀಮತ್ ಕೇಶವಾಶ್ರಮ ಸ್ವಾಮಿಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು ಶ್ರೀಮತ್ ವಾಮನಾಶ್ರಮ ಸ್ವಾಮಿಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮಿಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಗಳನ್ನು.

ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು ಶ್ರೀಮತ್ ಆನಂದಾಶ್ರಮ ಸ್ವಾಮಿಗಳಿಗೆ ನೀಡಿದರು.

ಶಿವಗಂಗಾ[ಶಾಶ್ವತವಾಗಿ ಮಡಿದ ಕೊಂಡಿ] ಸರೋವರ

ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು.

ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು, ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ[ಶಾಶ್ವತವಾಗಿ ಮಡಿದ ಕೊಂಡಿ] link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ]] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು.

ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು, ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು.

ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ.

ಶ್ರೀ ಭವಾನಿ ಶಂಕರ[ಬದಲಾಯಿಸಿ]

ಶ್ರೀ[ಶಾಶ್ವತವಾಗಿ ಮಡಿದ ಕೊಂಡಿ] ಭವಾನಿ ಶಂಕರ

ಮಠದ ಆರಾಧ್ಯ ದೇವವಾಗಿರುವ ಭವಾನಿಶಂಕರನು ಶ್ರೀ ಪರಮಶಿವನ ಒಂದು ವಿಶೇಷ ರೂಪ. ಇಲ್ಲಿ ಶಿವನು ಚತುರ್ಭುಜನಾಗಿದ್ದು, ಬಲಗೈಗಳಲ್ಲಿ ವರದಹಸ್ತ ಮತ್ತು ಪರಶುಧರನಾಗಿದ್ದಾನೆ ಹಾಗೂ ಎಡಗೈಗಳಲ್ಲಿ ಅಭಯಹಸ್ತ ಮತ್ತು ಮೃಗಧರನಾಗಿದ್ದು. ಶಕ್ತಿರೂಪವಾದ ಭವಾನಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ.

ಸಂಪ್ರದಾಯ[ಬದಲಾಯಿಸಿ]

ಶ್ರೀ ಮಠವು ಭಾಗವತ ಸಂಪ್ರದಾಯವನ್ನು ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ.

ಗುರು ಪರಂಪರೆ[ಬದಲಾಯಿಸಿ]

ಶ್ರೀಮತ್[ಶಾಶ್ವತವಾಗಿ ಮಡಿದ ಕೊಂಡಿ] ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ

ಮಠದ ಗುರುಪರಂಪರೆ ಪ್ರಾರಂಭವಾಗಿದ್ದು ೧೭೦೮ರಿಂದ ಇಲ್ಲಿಯ ವರೆಗೆ ೧೧ ಗುರುಗಳು ಮಠಾಧಿಪತಿಗಳಾಗಿದ್ದಾರೆ.[೩]

ಗುರು ಪರಂಪರೆ
ಸ್ವಾಮಿಗಳು ಜನ್ಮಸ್ಥಳ ಅವಧಿ ಸಮಾಧಿ ಸ್ಥಳ
ಶ್ರೀಮತ್  ಪರಿಜ್ಞಾನಾಶ್ರಮ ಸ್ವಾಮೀಜಿ (ಪ್ರಥಮ) ನಿಖರ ಮಾಹಿತಿ ಇಲ್ಲ ೧೭೦೮-೧೭೨೦ ಗೋಕರ್ಣ
ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ(ಪ್ರಥಮ) ಹರಿಟಾ ೧೭೨೦-೧೭೫೭ ಶಿರಾಲಿ
ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ದ್ವಿತೀಯ) ಕೊಲ್ಲೂರು ೧೭೫೭-೧೭೭೦ ಶಿರಾಲಿ
ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ (ದ್ವಿತೀಯ) ಮಲ್ಲಾಪುರ ೧೭೭೦-೧೭೮೫ ಮಲ್ಲಾಪುರ
ಶ್ರೀಮತ್ ಕೇಶವಾಶ್ರಮ ಸ್ವಾಮೀಜಿ ಕಂಡ್ಳೂರು ೧೭೮೫-೧೮೨೩ ಶಿರಾಲಿ
ಶ್ರೀಮತ್ ವಾಮನಾಶ್ರಮ ಸ್ವಾಮೀಜಿ ಮಂಗಳೂರು ೧೮೨೩-೧೮೩೯ ಮಂಗಳೂರು
ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿ ವಿಠ್ಠಲ ೧೮೩೯-೧೮೬೩ ಶಿರಾಲಿ
ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮೀಜಿ ಮಂಗಳೂರು ೧೮೬೩-೧೯೧೫ ಶಿರಾಲಿ
ಶ್ರೀಮತ್ ಆನಂದಾಶ್ರಮ ಸ್ವಾಮೀಜಿ ಶಿರಾಲಿ ೧೯೧೫-೧೯೬೬ ಶಿರಾಲಿ
ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ತೃತೀಯ) ಶಿರಾಲಿ ೧೯೬೬-೧೯೯೧ ಕಾರ್ಲಾ
ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಮುಂಬೈ ೧೯೯೭- ಇಂದಿನ ವರೆಗೆ --

ಚಿತ್ರಾಪುರ ರಥೋತ್ಸವ[ಬದಲಾಯಿಸಿ]

ಚಿತ್ರಾಪುರ[ಶಾಶ್ವತವಾಗಿ ಮಡಿದ ಕೊಂಡಿ] ರಥೋತ್ಸವ

ಪ್ರತಿ ಸಂವತ್ಸರದ ಚೈತ್ರ ಪೂರ್ಣಿಮೆಯಂದು ನಡೆಯುವ ಈ ರಥೋತ್ಸವವು ಸಕಲ ಚಿತ್ರಾಪುರ ಸಾರಸ್ವತ ಸಮಾಜದ ಬಹುಮುಖ್ಯ ಆರಾಧನೆ. ಮಠದ ಆರಾಧ್ಯ ದೇವನನ್ನು ಏಳು ದಿನಗಳ ಕಾಲ ವಿವಿಧ ವಿಧಿವಿಧಾನಗಳಿಂದ ಪೂಜಿಸಿ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡುವ ಪದ್ದತಿಯನ್ನು ೧೮೬೨ ರಲ್ಲಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿಯವರು ಪ್ರಾರಂಭಿಸಿದರು. ಕೆಲವೊಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ೧೯೩೮ ರಲ್ಲಿ ಉತ್ಸವನ್ನು ನಿಲ್ಲಿಸಲಾಯಿತು. ೧೯೭೨ ರಲ್ಲಿ ಮತ್ತೆ ಪುನರಾರಂಭಗೊಂಡು ಇಂದಿಗೂ ಯಾವುದೇ ಅಡೆ-ತಡೆಯಿಲ್ಲದೆ ಸಾಗಿಕೊಂಡುಬಂದಿದೆ.[೪]

ಸಾಮಾಜಿಕ ಸೇವೆ[ಬದಲಾಯಿಸಿ]

ಈ ಮಠವು ಆಧ್ಯಾತ್ಮದೊಂದಿಗೆ ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.

ಶಿರಾಲಿ, ಮಲ್ಲಾಪುರ, ಮಂಗಳೂರು, ಕೋಟೆಕಾರ್, ಕಾರ್ಲಾ ಮತ್ತು ವಿರಾರ್ ನಲ್ಲಿ ಶ್ರೀ ಮಠವು ಶಾಲೆಗಳನ್ನು ಹೊಂದಿದೆ. ಮಹಿಳಾ ಸಬಲೀಕರಣಕ್ಕಾಗಿ ಪರಿಮೋಚನಾ[೫] ಎಂಬ ಸ್ವಸಹಾಯಗುಂಪುಗಳ ಒಂದು ಯೋಜನೆಯನ್ನು ಹುಟ್ಟುಹಾಕಿದೆ. ಸಂವಿತ್ ಸುಧಾ ಎಂಬ ಹೊಲಿಗೆ ತರಬೇತಿ ಕೇಂದ್ರ ಮತ್ತು ಕೈ ಕಾಗದದ  ಕಾರ್ಖಾನೆ ಯನ್ನು ಸ್ಥಾಪಿಸಿದೆ. ಮಠಕ್ಕೆ ಹೊಂದಿಕೊಂಡಂತೆ ವಸ್ತುಸಂಗ್ರಹಾಲಯನ್ನು ತೆರೆದಿದೆ.

ಅಲ್ಲದೆ ಸ್ಥಳೀಯವಾಗಿ ಉಚಿತ ಆರೋಗ್ಯಕೇಂದ್ರ ಸ್ಥಾಪಿಸಿದ್ದು, ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂರಕ್ಷಣೆಗೆ ಒತ್ತುನೀಡಿದೆ.

ವಿಶೇಷ ಅಂಚೆ ಚೀಟಿಗಳು[ಬದಲಾಯಿಸಿ]

ಅಮೇರಿಕಾದ ಸಂಯುಕ್ತ ಸಂಸ್ಥಾನವು  ೪೧ ಯು ಎಸ್ ಸೆಂಟ್ಸ್ ಮುಖಬೆಲೆಯ ಅಂಚೆಚೀಟಿಯನ್ನು  ೨೦೦೮ರಲ್ಲಿ ಶ್ರೀ ಚಿತ್ರಾಪುರ ಮಠವು  ೩೦೦ವರ್ಷ ಪೂರೈಸಿದ ಸವಿನೆನಪಿಗೆ ಹೊರತಂದಿತ್ತು. ಅದರೊಂದಿಗೆ  ೨೦೧೧ರಲ್ಲಿ  [[ಭಾರತೀಯ[ಶಾಶ್ವತವಾಗಿ ಮಡಿದ ಕೊಂಡಿ] link|date=ಆಗಸ್ಟ್ 2021 |bot=InternetArchiveBot |fix-attempted=yes }} ಚಿತ್ರಾಪುರ ಮಠ]] ಶ್ರೀ ಚಿತ್ರಾಪುರ ಮಠವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು ಗೋಕರ್ಣ, ಮಂಗಳೂರು, ಮಲ್ಲಾಪುರ, ಬೆಂಗಳೂರು ಮತ್ತು ಮಹಾರಾಷ್ಟ್ರದ ಕಾರ್ಲಾದಲ್ಲಿವೆ.  

ಈ ಮಠದದಲ್ಲಿ ಶ್ರೀ ಪರಮಶಿವನ ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ ಆದಿ ಶಂಕರಾಚಾರ್ಯ ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ.

ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿಗಳಿಂದ ಪ್ರಾರಂಭಗೊಂಡಿದೆ.

ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು.

ದ್ವಿತೀಯ ಮಠಾಧಿಪತಿಯಾಗಿ ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.  

ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ) ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ) ಎಂದು ನಾಮವನ್ನಿತ್ತರು.

ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ ಶ್ರೀಮತ್ ಕೇಶವಾಶ್ರಮ ಸ್ವಾಮಿಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು ಶ್ರೀಮತ್ ವಾಮನಾಶ್ರಮ ಸ್ವಾಮಿಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮಿಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಗಳನ್ನು.

ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು ಶ್ರೀಮತ್ ಆನಂದಾಶ್ರಮ ಸ್ವಾಮಿಗಳಿಗೆ ನೀಡಿದರು.

ಶಿವಗಂಗಾ[ಶಾಶ್ವತವಾಗಿ ಮಡಿದ ಕೊಂಡಿ] ಸರೋವರ

ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು.

ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು, ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ[ಶಾಶ್ವತವಾಗಿ ಮಡಿದ ಕೊಂಡಿ] link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ]] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು.

ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು, ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ[ಶಾಶ್ವತವಾಗಿ ಮಡಿದ ಕೊಂಡಿ] link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ]] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು.

ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು, ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು.

ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://www.angelfire.com/sc/saraswat/bhanaps.html
  2. https://talageri.blogspot.com/2016/05/the-chitrapur-saraswat-community.html
  3. https://web.archive.org/web/20070927030418/http://www.chitrapurmath.net/parampara/guru_parampara.htm
  4. ಸಂತೋಷಕುಮಾರ್ ಗುಲ್ವಾಡಿ, ಶ್ರೀ ಚಿತ್ರಾಪುರ ರಥೋತ್ಸವ, ಮಹೇಶ್ ಪಬ್ಲಿಕೇಷನ್, ಮುಂಬೈ
  5. "ಆರ್ಕೈವ್ ನಕಲು". Archived from the original on 2020-07-13. Retrieved 2020-07-13.