ದಂಗಲ್

ವಿಕಿಪೀಡಿಯ ಇಂದ
Jump to navigation Jump to search

ದಂಗಲ್ (ಕುಸ್ತಿ ಸ್ಪರ್ಧೆ) ನಿತೇಶ್ ತಿವಾರಿಯವರಿಂದ ನಿರ್ದೇಶಿಸಲ್ಪಟ್ಟ ೨೦೧೬ರ ಒಂದು ಹಿಂದಿ ಜೀವನಚರಿತ್ರೆಯ ಕ್ರೀಡಾ ನಾಟಕಾಧಾರಿತ ಚಲನಚಿತ್ರ. ಇದರಲ್ಲಿ ತನ್ನ ಪುತ್ರಿಯರಾದ ಗೀತಾ ಫ಼ೋಗಾಟ್ ಮತ್ತು ಬಬೀತಾ ಕುಮಾರಿಗೆ ಕುಸ್ತಿ ಕಲಿಸಿದ ಮಹಾವೀರ್ ಸಿಂಗ್ ಫ಼ೋಗಾಟ್ಆಗಿ ಆಮಿರ್ ಖಾನ್ ಅಭಿನಯಿಸಿದ್ದಾರೆ[೧]. ಗೀತಾ ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು. ಅವರ ಸಹೋದರಿ ಬಬೀತಾ ಕುಮಾರಿ ೫೧ ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.

ದಂಗಲ್‍ನ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದರು, ಮತ್ತು ಗೀತೆಗಳನ್ನು ಅಮಿತಾಭ್ ಭಟ್ಟಾಚಾರ್ಯ ರಚಿಸಿದ್ದಾರೆ. ಭಾರತೀಯ ಮಹಿಳಾ ಕುಸ್ತಿ ತಂಡದೊಂದಿಗೆ ತರಬೇತುದಾರರಾಗಿರುವ ಕೃಪಾ ಶಂಕರ್ ಬಿಶ್ಣೋಯಿ ಆಮಿರ್ ಖಾನ್ ಮತ್ತು ಸಂಪೂರ್ಣ ಸಿಬ್ಬಂದಿಗೆ ಕುಸ್ತಿ ದೃಶ್ಯಾವಳಿಗಳಿಗಾಗಿ ತರಬೇತಿ ನೀಡಿದರು.

ವಿಶ್ವಾದ್ಯಂತ ೨೩ ಡಿಸೆಂಬರ್ ೨೦೧೬ರಂದು ಬಿಡುಗಡೆಗೊಂಡ ದಂಗಲ್ ಅನ್ನು ಹೆಣ್ಣು ಮಕ್ಕಳ ಆಯ್ದ ಗರ್ಭಪಾತವನ್ನು ಕಡಿಮೆಮಾಡುವ, ಹುಡುಗಿಯರನ್ನು ರಕ್ಷಿಸುವ, ಮತ್ತು ಅವರಿಗೆ ಶಿಕ್ಷಣ ನೀಡುವ ಗುರಿ ಹೊಂದಿದ ಭಾರತ ಸರ್ಕಾರಬೇಟಿ ಬಚಾವೊ ಬೇಟಿ ಪಢಾವೊ ಸಾಮಾಜಿಕ ಅಭಿಯಾನವನ್ನು ಪ್ರಚಾರಮಾಡಲು ನಾಲ್ಕು ಭಾರತೀಯ ರಾಜ್ಯಗಳು - ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣಾ ಮತ್ತು ದೆಹಲಿಯಲ್ಲಿ ತೆರಿಗೆ ಮುಕ್ತವೆಂದು ಘೋಷಿಸಲಾಯಿತು. ೬೨ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ದಂಗಲ್ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ (ತಿವಾರಿ), ಅತ್ಯುತ್ತಮ ಸಾಹಸ (ಶ್ಯಾಮ್) ಮತ್ತು ಅತ್ಯುತ್ತಮ ನಟ ಖಾನ್ ಒಳಗೊಂಡಂತೆ, ನಾಲ್ಕು ಪ್ರಶಸ್ತಿಗಳನ್ನು ಗೆದ್ದಿತು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ದಂಗಲ್&oldid=741133" ಇಂದ ಪಡೆಯಲ್ಪಟ್ಟಿದೆ