ಸತ್ಯಮೇವ ಜಯತೇ (ಧಾರಾವಾಹಿ)
ಬಾಲಿವುಡ್ ನ ಅತ್ಯಂತ ಜನಪ್ರಿಯ ನಟ, ಅಮೀರ್ ಖಾನ್ ಪ್ರಾಯೋಜಿಸಿ, ನಡೆಸಿಕೊಡುವ ಟಾಕ್ ಶೊ, ಸತ್ಯಮೇವ ಜಯತೇ ಮೇ, ೬, ೨೦೧೨ ರಂದು, ಬೆಳಿಗ್ಯೆ ೧೧ ಗಂಟೆಗೆ ಏಕಸಮಯದಲ್ಲಿ, ಸ್ಟಾರ್ ಪ್ಲಸ್, ದೂರದರ್ಶನ ವಾಹಿನಿಗಳಲ್ಲಿ ಮೊದಲ ಎಪಿಸೋಡ್ ಬಿತ್ತರಗೊಂಡಿತು. ಪ್ರತಿವಾರವೂ ರವಿವಾರದಂದು ಪ್ರಸಾರವಾಗುವ ಈ ಧಾರಾವಾಹಿ, ಸಮಾಜದ ಹಲವಾರು ಹುಳುಕುಗಳನ್ನು ಎತ್ತಿಹಿಡಿದು ಅದರ ಬಗ್ಗೆ ನೈಜ ದರ್ಶನಮಾಡಿಸುವಲ್ಲಿ ಸಮರ್ಥವಾಗಿದೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳ ಮಹಾಪೂರವೇ ಬಂದಿದೆ. 'ಕನ್ನಡದ ಕಿರಿತೆರೆ' ಮತ್ತು 'ಹಿರಿತೆರೆ ಪ್ರೇಕ್ಷಕರು' ಅಮೀರ್ ಕೊಡುಗೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದರು. 'ಟಾಕ್ 'ಶೋ ನ ಕೇಂದ್ರ ವ್ಯಕ್ತಿ, ಶ್ರೀ ಸಾಮಾನ್ಯ ಹಾಗೂ ಇದು ಪ್ರಮುಖವಾಗಿ ಭಾರತೀಯ ಸಮಾಜದ ಒಂದು ಅನಿಷ್ಟ ಪದ್ಧತಿಗಳ ಪ್ರತಿಬಿಂಬ. ಇಲ್ಲಿ ತೋರಿಸಲಾದ ಸಂಗತಿಗಳು,, ಸಾಮಾನ್ಯ ಜನರ ಬದುಕಿನ ದುಸ್ತರ ಸ್ಥಿತಿಯನ್ನು ಕುರಿತಾದ್ದು. ಶಿಕ್ಷಣ, ನಿರುದ್ಯೋಗ, ಬಾಲಕಾರ್ಮಿಕ ಪದ್ಧತಿ, ಭ್ರೂಣಹತ್ಯೆ, ಆರೋಗ್ಯ, ನೈರ್ಮಲ್ಯ, ಮೊದಲಾದ ದೇಶವನ್ನು ಕಾಡುತ್ತಿರುವ ಪ್ರಸ್ತುತ ಜ್ವಲಂತ ಸಮಸ್ಯೆಗಳು.
'ಮೊಟ್ಟಮೊದಲ ಟಾಕ್ ಶೋ, ಭ್ರೂಣಹತ್ಯೆಯನ್ನು ಕುರಿತಾದದ್ದು'
[ಬದಲಾಯಿಸಿ]ಇವನ್ನು ನಿವಾರಿಸಲು ನಮ್ಮ ಸರಕಾರ ತೋರಿಸುತ್ತಿರುವ ಉದಾಸೀನತೆಯನ್ನು ಎತ್ತಿಹಿಡಿದು, ಈ ನಿಟ್ಟಿನಲ್ಲಿ ಸಕ್ರಿಯರಾಗುವ ಬಗ್ಗೆ ದನಿಯನ್ನು ಎತ್ತಬೇಕಾದ ಆವಶ್ಯಕತೆ, ಸಾಮಾನ್ಯ ಜನರಿಗೆ. ಇಂತಹ ಶೋಗಳನ್ನು ನೋಡಿ ನಮ್ಮ ಪರಿಸ್ಥಿತಿಗೆ ಅದನ್ನು ಅರ್ಥೈಸಿಕೊಂಡು ಜಾಗರೂಕರಾಗುವುದೇ ಎಲ್ಲರ ಉದ್ದೇಶ. ಮೊದಲನೆಯ ದಿನ ಪ್ರಸಾರವಾದ ಸಾಮಾಜಿಕ ಪಿಡುಗು, ಭ್ರೂಣಹತ್ಯೆಯನ್ನು ಕುರಿತಾದದ್ದು. ಸಮಾಜದಲ್ಲಿ ಗಂಡು, ಹೆಣ್ಣು ಅನುಪಾತದಲ್ಲಿರುವ ಅಸಮಾನತೆಯನ್ನು ಕುರಿತಾದದ್ದು. ಈ ಶೋ ಪ್ರಚಾರಕ್ಕೆ ೬.೨೫ ಕೋಟಿ ರೂಪಾಯಿಗಳ ಮೊತ್ತವನ್ನು ಖರ್ಚುಮಾಡಲಾಗಿದೆ. ಇದು ಕಿರುತೆರೆಯ ಇತಿಹಾಸದಲ್ಲಿ ಒಂದು ದಾಖಲೆಗಳಲ್ಲೊಂದು. ಅಂತೆಯೇ ಅಮೀರ್ ಖಾನ್ ಸಂಭಾವನೆಯೂ ದಾಖಲೆಯನ್ನು ಸೃಷ್ಟಿಸುವಂತಹದು.
- [೧] Archived 2012-05-10 ವೇಬ್ಯಾಕ್ ಮೆಷಿನ್ ನಲ್ಲಿ.