ತರುವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತರುವಾ
ಮೂಲ
ಮೂಲ ಸ್ಥಳಭಾರತ ಮತ್ತು ನೇಪಾಳ
ಪ್ರಾಂತ್ಯ ಅಥವಾ ರಾಜ್ಯಮಿಥಿಲಾ
ವಿವರಗಳು
ಮುಖ್ಯ ಘಟಕಾಂಶ(ಗಳು)ತರಕಾರಿಗಳು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು

ತರುವಾ[೧] ತೆಳುವಾಗಿ ಕತ್ತರಿಸಿದ ತರಕಾರಿಗಳನ್ನು ಅಕ್ಕಿ ಹಿಟ್ಟಿನಿಂದ ಲೇಪಿಸಿ ಎಣ್ಣೆಯಲ್ಲಿ ಕರಿದು ತಯಾರಿಸುವ ಭಕ್ಷ್ಯವಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಹುಟ್ಟಿಕೊಂಡಿತು ಮತ್ತು ಭಾರತ ಹಾಗೂ ನೇಪಾಳದ ಮೈಥಿಲರಲ್ಲಿ ಜನಪ್ರಿಯವಾಗಿದೆ.[೨] ಇದು ಮಿಥಿಲಾ ಪ್ರದೇಶದ ಜನಪ್ರಿಯ ಮತ್ತು ವಿಶೇಷ ಖಾದ್ಯವಾಗಿದೆ. ತರುವಾವನ್ನು ಬಡಿಸದೆ ಅತಿಥಿಯನ್ನು ಸ್ವಾಗತಿಸುವುದು ಅಸಾಧ್ಯವೆಂದು ನಂಬಲಾಗಿದೆ.[೩][೪]

ತಯಾರಿಕೆ[ಬದಲಾಯಿಸಿ]

ಹಸಿರು ತರಕಾರಿಗಳು ಮತ್ತು ತರಕಾರಿ ಎಲೆಗಳನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಿ ತರುವಾವನ್ನು ತಯಾರಿಸಲಾಗುತ್ತದೆ. ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ತಯಾರಿಸಿದ ತೆಳು ಕಣಕದಲ್ಲಿ ಕರಿ ಮೆಣಸು, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೂರುಗಳನ್ನು ಮುಳುಗಿಸಿ ನಂತರ ಅವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ.[೫]

ವ್ಯತ್ಯಾಸಗಳು[ಬದಲಾಯಿಸಿ]

ತರುವಾವನ್ನು ಯಾವುದೇ ಹಸಿರು ತರಕಾರಿಯಿಂದ ತಯಾರಿಸಬಹುದು.[೬] ತರುವಾದ ಅತ್ಯಂತ ಜನಪ್ರಿಯ ವಿಧಗಳಲ್ಲಿ ತೊಂಡೆ ಎಲೆಯ ತರುವಾ,[೭] ಮತ್ತು ಆಲೂಗಡ್ಡೆಯ ತರುವಾ ಸೇರಿವೆ. ತರುವಾದ ಇತರ ವಿಧಗಳಲ್ಲಿ ಬೆಂಡೆಕಾಯಿಯಿಂದ ತಯಾರಿಸಿದ ಭಿಂಡಿ ತರುವಾ, ಹೂಕೋಸಿನಿಂದ ತಯಾರಿಸಿದ ಗೋಬಿ ತರುವಾ, ಬದನೆಕಾಯಿಯಿಂದ ತಯಾರಿಸಿದ ಬೈಂಗನ್ ತರುವಾ, ಕುಂಬಳಕಾಯಿಯಿಂದ ತಯಾರಿಸಿದ ಕದಿಮಾ ತರುವಾ, ಸೋರೆಕಾಯಿಯಿಂದ ತಯಾರಿಸಿದ ಕದ್ದು ತರುವಾ, ಹಾಗಲಕಾಯಿಯಿಂದ ತಯಾರಿಸಿದ ಕರೇಲಾ ತರುವಾ, ಸುವರ್ಣ ಗೆಡ್ಡೆಯಿಂದ ತಯಾರಿಸಿದ ಓಳ್ ತರುವಾ, ಕೆಸುವಿನಿಂದ ತಯಾರಿಸಿದ ಔರಬಿ ತರುವಾ, ಬೂದುಗುಂಬಳದಿಂದ ತಯಾರಿಸಿದ ಕುಮಹರ್ ತರುವಾ, ಖಮ್‍ಹರುವಾ ತರುವಾ, ಮೊನಚಾದ ಸೋರೆಕಾಯಿಯಿಂದ ತಯಾರಿಸಿದ ಪರ್ವಲ್ ತರುವಾ ಸೇರಿವೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Vidyarthi, Lalita Prasad; Prasad, Ramakant; Upadhyay, Vijay S. (1979). Changing Dietary Patterns and Habits: A Socio-cultural Study of Bihar (in ಇಂಗ್ಲಿಷ್). Concept Publishing Company.
  2. Maithlik Bhojan Sambandhi Shabdawali (in Maithili) (1ST ed.). Mithila Research Society. 2011.{{cite book}}: CS1 maint: unrecognized language (link)
  3. ೩.೦ ೩.೧ "मिथिला का तरूआ तो तरूआ है, पकौड़ा नहीं है". aajtak.intoday.in (in ಹಿಂದಿ). 19 February 2018. Retrieved 2020-05-21.
  4. "मिथिलांचल में वैदिक रीति से होता अतिथि सत्कार" [Hospitality in Mithila]. Dainik Jagran (in ಹಿಂದಿ). Retrieved 2020-05-21.
  5. Lal, -Rajeev Ranjan. "मिथिला के तरुआ" [Tarua of Mithila] (in ಮೈಥಿಲಿ). Retrieved 2020-05-21.
  6. "मिथिला का तरूआ तो तरूआ है, पकौड़ा नहीं है". aajtak.intoday.in (in ಹಿಂದಿ). 19 February 2018. Retrieved 2020-05-21."मिथिला का तरूआ तो तरूआ है, पकौड़ा नहीं है". aajtak.intoday.in (in Hindi). 19 February 2018. Retrieved 2020-05-21.
  7. "Maithil Cuisine". Cook With Tutu (in ಅಮೆರಿಕನ್ ಇಂಗ್ಲಿಷ್). 2018-09-15. Archived from the original on 2020-11-30. Retrieved 2020-05-22.
"https://kn.wikipedia.org/w/index.php?title=ತರುವಾ&oldid=1222186" ಇಂದ ಪಡೆಯಲ್ಪಟ್ಟಿದೆ