ಜುನಾಗಢ

Coordinates: 21°31′12″N 70°27′47″E / 21.520°N 70.463°E / 21.520; 70.463
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜುನಾಗಢ
ಪಟ್ಟಣ
ಮೇಲಿನಿಂದ: ಜುನಾಗಢ ಪಟ್ಟಣದ ಬಾಗಿಲು, Statue of ನರಸಿಂಹ್ ಮೆಹ್ತಾ ಪ್ರತಿಮೆ, ಗಿರ್ನಾರ್ ಬೆಟ್ಟಗಳು, ರಾಧಾ ದಾಮೋದರ ಗುಡಿ, ಜುನಾಗಢ, ದಾಮೋದರ ಕೊಳ, ಶ್ರೀ ಸ್ವಾಮಿ ನಾರಾಯಣ ಮಂದಿರ, ಜುನಾಗಢ, ಮಹಬತ್ ಮಕ್ಬಾರಾ
Lua error in ಮಾಡ್ಯೂಲ್:Location_map at line 525: Unable to find the specified location map definition: "Module:Location map/data/India Gujarat" does not exist.
Coordinates: 21°31′12″N 70°27′47″E / 21.520°N 70.463°E / 21.520; 70.463
ದೇಶ ಭಾರತ
ರಾಜ್ಯಗುಜರಾತ್
Regionಸೌರಾಷ್ಟ್ರ
ಜಿಲ್ಲೆಜುನಾಗಢ
Government
 • Typeಪಟ್ಟಣ ಪುರಸಭೆ
 • Bodyಜುನಾಗಢ ಪುರಸಭೆ
 • ಮೇಯರ್ಗೀತಾಬೆನ್ ಪರಮಾರ್[೧]
 • ಮುನ್ಸಿಪಲ್ ಆಯುಕ್ತರುರಾಜೇಶ್ ಎಂ ತನ್ನಾ (ಐಎಎಸ್)
 • ಎಂಎಲ್ಎಸಂಜಯಭಾಯ್ ಕೊರಾಡಿಯಾ
 • ಎಂಪಿರಾಜೇಶ್ ಚೌಡಾಸ್ಮಲ್
Area
 • Total೧೬೦ km (೬೦ sq mi)
 • Rank7th
Elevation
೧೦೭ m (೩೫೧ ft)
Population
 (2011)[೨]
 • Total೩,೧೯,೪೬೨
 • Rank137
 • Density೨,೦೦೦/km (೫,೨೦೦/sq mi)
ಭಾಷೆಗಳು
 • ಅಧಿಕೃತಗುಜರಾತಿ
Time zoneUTC+5:30 (ಐ ಎಸ್ ಟಿ)
ಪಿನ್
362 00X
ದೂರವಾಣಿ ಸಂಕೇತ0285
Vehicle registrationGJ-11
ಲಿಂಗಾನುಪಾತ1.04/
ಸಾಕ್ಷರತಾ ಪ್ರಮಾಣ88.00%
Websitejunagadhmunicipal.org

ಜುನಾಗಢ (જૂનાગઢ ) ಇಂಡಿಯಾ ಗುಜರಾತ್ ರಾಜ್ಯಜುನಾಗಢ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ಪಟ್ಟಣ. ಗಿರ್ನಾರ್ ಬೆಟ್ಟಗಳ ತಪ್ಪಲಲ್ಲಿ, ಅಹ್ಮದಾಬಾದ್ ಮತ್ತು ರಾಜ್ಯ ರಾಜಧಾನಿ ಗಾಂಧಿನಗರದಿಂದ ೩೫೫ ಕಿಲೊಮೀಟರು 355 kilometres (221 mi) ನೈರುತ್ಯ ದಿಕ್ಕಿನಲ್ಲಿರುವ ಇದು ರಾಜ್ಯ ಏಳನೇ ದೊಡ್ಡ ಪಟ್ಟಣವಾಗಿದೆ.

ಜುನಾಗಢ ಎಂದರೆ "ಹಳೆಯ ಕೋಟೆ".[೩] ದೇಶವು ಇಂಡಿಯಾ ಪಾಕಿಸ್ತಾನವಾಗಿ ಬೇರ್ಪಟ್ಟಾಗ ಇಲ್ಲಿನ ರಾಜನು ಪಾಕಿಸ್ತಾನದತ್ತ ಒಲವು ಹೊಂದಿದ್ದರೂ ಜನಾಭಿಪ್ರಾಯವು ಇಂಡಿಯಾದ ಕಡೆಗಿದ್ದುದರಿಂದ ೧೯೪೮ ಫೆಬ್ರವರಿ ೨೦ರಂದು ಇಂಡಿಯಾದಲ್ಲೇ ಉಳಿಯಿತು. ಅದು ಅಂದಿನ ಬೊಂಬಾಯಿ ಸಂಸ್ಥಾನದ ಸೌರಾಷ್ಟ್ರ ರಾಜ್ಯದ ಒಂದು ಭಾಗವಾಗಿತ್ತು. ಮುಂದೆ ೧೯೬೦ರಲ್ಲಿ ಮಹಾಗುಜರಾತ್ ಚಳವಳಿಯ ಪರಿಣಾಮವಾಗಿ ಇದು ಹೊಸದಾಗಿ ರಚಿತವಾದ ಗುಜರಾತ್ ರಾಜ್ಯದ ಭಾಗವಾಯಿತು.

ಮೊದಲ ಇತಿಹಾಸ[ಬದಲಾಯಿಸಿ]

Ashoka's Rock Edict at Girnar, Junagadh

ದಂತಕತೆಯೊಂದರ ಪ್ರಕಾರ ರೋಡ್ ವಂಶದ ಮೊದಲಿಗ ರಾಜಧಾಜ ರೋಡಕುಮಾರ ಅಲಿಯಾಸ್ ರಾಯ ಡ್ಯಾಚನು ಕ್ರಿಸ್ತಪೂರ್ವ ೫ನೇ ಶತಮಾನದಲ್ಲಿ ಜುನಾಗಢ ರಾಜಧಾನಿಯಾಗಿಸಿ ಆಳುತ್ತಿದ್ದನು.[೪] ಪಟ್ಟಣದ ನಡುವೆ ಸಮತಟ್ಟಾದ ಎತ್ತರದ ಪ್ರದೇಶದಲ್ಲಿ ಊಪರ್ಕೋಟ್ ಕೋಟೆ ಎಂಬ ಒಂದು ಪುರಾತನ ಕಟ್ಟೋಣವು ಕಂಡುಬರುತ್ತದೆ. ಅದನ್ನು ಕ್ರಿಸ್ತಪೂರ್ವ ೩೧೯ರಲ್ಲಿ ಚಂದ್ರಗುಪ್ತ ಮೌರ್ಯನು ಕಟ್ಟಿಸಿದನೆಂದು ಹೇಳಲಾಗುತ್ತದೆ.

ಆರನೇ ಶತಮಾನದವರೆಗೆ ಬಳಕೆಯಲ್ಲಿದ್ದ ಈ ಕೋಟೆಯು ಮುಂದಿನ ಮುನ್ನೂರು ವರ್ಷಕಾಲ ಹಾಳುಸುರಿದಿತ್ತು, ಆಮೇಲೆ ಕ್ರಿಸ್ತಶಕ ೯೭೬ರಲ್ಲಿ ಚೂರಾಸಮ ರಾಜ ಗಹರಿಪು ಇದನ್ನು ಪತ್ತೆಮಾಡಿದನು.[೫] ಆಮೇಲೆ ಸಾವಿರ ವರ್ಷಗಳಲ್ಲಿ ಈ ಕೋಟೆಗೆ ಹದಿನಾರು ಸಲ ಮುತ್ತಿಗೆ ಹಾಕಲಾಯಿತು. ಒಂದು ಮುತ್ತಿಗೆಯಂತೂ ಹನ್ನೆರಡು ವರ್ಷಗಳ ಕಾಲ ಮುಂದುವರಿದಿತ್ತು.

ಊಪರ್ಕೋಟ್ ಕೋಟೆಯಿಂದ ಎರಡು ಕಿ.ಮೀ. ದೂರದಲ್ಲಿ ದೊಡ್ಡ ಬಂಡೆಯೊಂದರ ಮೇಲೆ ಅಶೋಕನ ಶಿಲಾಶಾಸನವಿದೆ. [೬] ಕ್ರಿಸ್ತಪೂರ್ವ ೨೫೦ರ ಕಾಲದ ಈ ಶಾಸನಗಳನ್ನು ಬ್ರಾಹ್ಮೀಲಿಪಿಯಲ್ಲಿ ಕೆತ್ತಲಾಗಿದ್ದು ಇದರ ಭಾಷೆಯು ಪಾಳಿಯನ್ನು ಹೋಲುತ್ತದೆ ಇದೇ ಬಂಡೆಯ ಮೇಲೆ ಇನ್ನೊಂದು ಕಲ್ಕೊರೆತದ ಸಂಸ್ಕೃತ ಬರಹವಿದ್ದು ಅದು ಕ್ರಿಸ್ತಶಕ ೧೫೦ರ ಕಾಲದ್ದಾಗಿದ್ದು ಮಾಳ್ವಾವನ್ನು ಆಳುತ್ತಿದ್ದ ಸಿಥಿಯನ್ ವಂಶದ ಪಡುವಣ ಮಹಾಕ್ಷತ್ರಪ ಬಳಗಕ್ಕೆ ಸೇರಿದ (ಮೊದಲ) ರುದ್ರದಾಮನ್ ಕೆತ್ತಿಸಿದ್ದಾನೆ. [೭] ಸಂಸ್ಕೃತ ಭಾಷೆಯಲ್ಲಿ ಸಿಕ್ಕಿರುವ ಕಲ್ಬರಹಗಳಲ್ಲಿ ಇದೇ ಮೊದಲನೆಯದು.[೮] ಇಲ್ಲೇ ಇರುವ ಇನ್ನೊಂದು ಶಾಸನವನ್ನು ಗುಪ್ತವಂಶದ ಕೊನೆಯ ರಾಜ ಸ್ಕಂದಗುಪ್ತನು ಕ್ರಿಸ್ತಶಕ ೪೫೦ರಲ್ಲಿ ಕೆತ್ತಿಸಿದ್ದಾನೆ. ಬಂಡೆಯಲ್ಲಿ ಕೊರೆಯಲಾದ ಬೌದ್ಧ ಗವಿಗಳೂ ಇಲ್ಲಿದ್ದು ಅವನ್ನು ಕ್ರಿಸ್ತಶಕ ೫೦೦ರಲ್ಲಿ ಮಾಡಿದಂತಿದೆ, ಅದರಲ್ಲಿ ಅಲಂಕಾರಿಕ ಕೆತ್ತನೆಗಳೂ ಇವೆ. ಕೋಟೆಯ ಉತ್ತರ ದಿಕ್ಕಿನಲ್ಲಿ ಕಪ್ರಕೊಡಿಯ ಗುಹೆಗಳಿದ್ದು ದಕ್ಷಿಣದಲ್ಲಿ ಬವಪ್ಯಾರಾ ಗುಹೆಗಳಿವೆ. ಬವಪ್ಯಾರದಲ್ಲಿ ಬೌದ್ಧ ಮತ್ತು ಜೈನ ಎರಡೂ ಕಲಾಶೈಲಿಯನ್ನು ಕಾಣಬಹುದು. ಮೈತ್ರಕ ವಂಶದ ರಾಜರು ಗುಜರಾತನ್ನು ಕ್ರಿಸ್ತಶಕ ೪೭೫ರಿಂದ ೭೬೭ರ ಅವಧಿಯಲ್ಲಿ ಆಳಿದರು. ಗುಪ್ತವಂಶಸೌರಾಷ್ಟ್ರ ಸಾಮಂತನಾಗಿದ್ದ ದಣ್ಣಾಯಕ ಭಟ್ಟಾರಕನು ಮೈತ್ರಕ ವಂಶದ ಮೊದಲಿಗನಾಗಿ ಐದನೇ ಶತಮಾನದ ಕೊನೆಯ ಹೊತ್ತಿಗೆ ಸ್ವತಂತ್ರವಾಗಿ ಆಳತೊಡಗಿದ. [೯]

ಚುರಾಸಮ ವಂಶ[ಬದಲಾಯಿಸಿ]

ಜುನಾಗಢದಲ್ಲಿಂದ ಸೌರಾಷ್ಟ್ರವನ್ನಾಳುತ್ತಿದ್ದ ಚುರಾಸಮ ರಾಜರ ಪ್ರಾರಂಭಿಕ ಇತಿಹಾಸ ತಿಳಿದುಬಂದಿಲ್ಲ. ಸಿಕ್ಕಿರುವ ಅರೆಬರೆ ಕತೆಗಳಲ್ಲಿ ರಾಜರ ಹೆಸರುಗಳು, ಅವುಗಳ ಕ್ರಮ ಮತ್ತು ರಾಜರುಗಳ ಸಂಖ್ಯೆ ಗೊಂದಲಮಯವಾಗಿರುವುದರಿಂದ ಅವನ್ನು ನಿಖರವೆಂದು ಪರಿಗಣಿಸಿಲ್ಲ. ಒಂದು ನಂಬುಗೆಯ ಪ್ರಕಾರ ೯ನೇ ಶತಮಾನದ ಚೂರಚಂದ್ರನೇ ಇದರ ಮೊದಲಿಗ ಎಂದು ತಿಳಿಯಲಾಗಿದೆ. ಅವನಾದ ಮೇಲೆ ಬಂದ ಗಹರಿಪು, ನವಘನ ಮತ್ತು ಕೆಂಗರ ಈ ಮೂವರೂ ಚಾಲುಕ್ಯ ಅರಸರಾದ ಮುಲರಾಜ ಮತ್ತು ಜಯಸಿಂಹ ಸಿದ್ಧರಾಜನೊಂದಿಗೆ ಸೆಣಸಿದರೆಂದು ತಿಳಿದುಬರುತ್ತದೆ. ಅಂದು ಸೌರಾಷ್ಟ್ರವು ಚಾಲುಕ್ಯರ ಅಧೀನದಲ್ಲಿತ್ತು. ಈ ಘಟನೆಗಳು ಸಮಕಾಲೀನ ಮತ್ತು ನಂತರದ ಜೈನ ಪರಂಪರೆಯಲ್ಲಿ ದಾಖಲಾಗಿವೆ. ಕೆಂಗರನ ಕಡೆಯವನಾದ ಕೋಳಿ ಜನಾಂಗದ ಮುಖಂಡ ಜೀಸಾಜಿಯ ಸೈನಿಕರು ೧೩೫೦ರಲ್ಲಿ ಮುಹಮ್ಮದ್ ಬಿನ್ ತುಘಲಕ್ ಪರವಾಗಿ ಹೋರಾಡಿ ಜುನಾಗಢವನ್ನು ಅವನಿಗೆ ವಶಪಡಿಸಿಕೊಟ್ಟರು. [೧೦] ಚಾಲುಕ್ಯರ ಆಳ್ವಿಕೆ ಕೊನೆಯಾದ ಮೇಲೆ ವಾಘೇಲ ವಂಶದ ಮತ್ತು ಚೂರಾಸಮ ರಾಜರು ಸ್ವತಂತ್ರರಾಗಿ ಆಳತೊಡಗಿದರೂ, ಅವು ದೆಹಲಿ ಸುಲ್ತಾನರಿಗೆ ಸ್ವಾಗತತೋರಣವಾಗಿದ್ದರು. ಚುರಾಸಮ ರಾಜನಾದ ಮೊದಲ ಮಾಂಡಲಿಕನ ಕಾಲದ ಅನೇಕ ಶಾಸನಗಳು ಕಂಡುಬರುತ್ತವೆ. ಅವನ ಆಳ್ವಿಕೆಯಲ್ಲಿ ದೆಹಲಿಯ ಖಿಲ್ಜಿ ರಾಜನು ಗುಜರಾತಿನ ಮೇಲೆರಗಿದ. ಕ್ರಿಸ್ತಶಕ ೧೪೭೨ರಲ್ಲಿ ರಾಜ್ಯ ವಿಸ್ತರಣೆ ಮಾಡಿದ ಮಹಮುದ್ ಬೆಗದ ಎಂಬ ಗುಜರಾತ್ ಸುಲ್ತಾನನು ರಾಜ ಮೂರನೇ ಮಾಂಡಲಿಕನನ್ನು ಸೋಲಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ.[೧೧][೧೨] ಚೂರಾಸಮ ರಾಜರು ಗಹರಿಪುವಿನ ಕಾಲದಲ್ಲಿ ಜುನಾಗಢದ ಊಪರಕೋಟ್ ಕೋಟೆಯನ್ನು ಆಕ್ರಮಿಸಿಕೊಂಡರು. ಕ್ರಿಸ್ತಶಕ ಹನ್ನೊಂದನೆಯ ಶತಮಾನದ ಕೊನೆಯಲ್ಲಿ ನವಘನನು ಅದನ್ನು ಮರುನಿರ್ಮಾಣ ಮಾಡಿದನಲ್ಲದೆ ತನ್ನ ರಾಜಧಾನಿಯನ್ನು ವಾಮನಸ್ತಲಿಯಿಂದ ಜುನಾಗಢಕ್ಕೆ ಬದಲಿಸಿದನು. ಇವನೇ ಕೋಟೆಯೊಳಗಿನ ನವಘನ ಕುವೊ ಎನ್ನಲಾಗುವ ಅಡಿಕಡಿವಾವ್ ಮೆಟ್ಟಿಲುಬಾವಿ ಮಾಡಿಸಿದನೆಂದು ಹೇಳಲಾಗುತ್ತದೆ. ಅವನ ವಂಶಜ ಹನ್ನೆರಡನೇ ಶತಮಾನದ ರಾಜ ಕೆಂಗರನು ವನತಲಿಗೆ ಹೋಗುವ ದಾರಿಯಲ್ಲಿ ರಾ ಕೆಂಗರ ವಾವ್ ಎಂಬ ಮೆಟ್ಟಿಲಬಾವಿ ಮಾಡಿಸಿದನೆಂದು ಹೇಳುತ್ತಾರೆ.[೧೩][೧೪]

ಗುಜರಾತಿನ ಸುಲ್ತಾನರು[ಬದಲಾಯಿಸಿ]

[[File:Bazaar in Junagadh.jpg|thumb|right|ಜುನಾಗಢ ಸಂತೆಯ ಒಂದು ನೋಟ, ೧೮೯೦ರಲ್ಲಿ ಎಫ್. ನೆಲ್ಸನ್ ತೆಗೆದಿದ್ದು. ಸುಲ್ತಾನ್ ಮಹಮುದ್ ಬೇಗಡನು ಜುನಾಗಢವನ್ನು ಮುಸ್ತಫಾಬಾದ್ ಎಂದು ಬದಲಿಸಿದ್ದಲ್ಲದೆ ಕೋಟೆಯ ಸುತ್ತ ಗೋಡೆಗಳನ್ನು ಕಟ್ಟಿಸಿ ಕೋಟೆಯೊಳಗೊಂದು ಮಸೀದಿ ನಿರ್ಮಿಸಿದನೆಂದು ತಿಳಿದುಬರುತ್ತದೆ.

ಸುಲ್ತಾನರ ಕಾಲದಲ್ಲಿ ಠಾಣಾದಾರ thanadar ನೊಬ್ಬನನ್ನು ಅಹಮದಾಬಾದ್ ನೇಮಿಸುತ್ತಿತ್ತು. ರಾಜನ ಪರವಾಗಿ ಈತನು ತೆರಿಗೆ ಕಂದಾಯಗಳನ್ನು ವಸೂಲು ಮಾಡುತ್ತಿದ್ದ. ಮೊದಲ ಠಾಣಾದಾರನು ಸುಲ್ತಾನನ ದತ್ತುಮಗನಾಗಿದ್ದ ತತರ್ ಖಾನ್ ಮತ್ತು ಅವನಾದ ಮೇಲೆ ಬಂದವನು ಸುಲ್ತಾನನ ಹಿರಿಮಗ ಮಿರ್ಜಾ ಕಲೀಲ್. ಈತನು ತಂದೆಯ ನಂತರ ಪಟ್ಟಕ್ಕೆ ಬಂದು ಮುಝಫ್ಫರ್ ಸುಲ್ತಾನ ಎಂದು ಕರೆದುಕೊಂಡ. ಜುನಾಗಢದ ತನ್ನ ಅವಧಿಯಲ್ಲಿ ಈತ ಕಲೀಲ್ ಪುರ ಎಂಬ ಊರನ್ನು ಕಟ್ಟಿದ. ಅಲ್ಲದೆ ಕೊನೆಯ ಚೂರಾಸಮ ರಾಜ ಮೂರನೇ ಮಾಂಡಲಿಕನ ಮಗ ಭೂಪತಿಸಿಂಗನಿಗೆ ಜುನಾಗಢದಲ್ಲಿ ೨೪ ಹಳ್ಳಿಗಳ ನಾಡು ಸಿಲ್ ಭಗಸರವನ್ನು ಜಾಗೀರಾಗಿ ಕೊಟ್ಟ. ಆಮೇಲೆ ಭೂಪತಿಸಿಂಗನ ಉತ್ತರಾಧಿಕಾರಿಗಳನ್ನು ರಾಯಜಾದಾ ಎಂದು ಕರೆಯಲಾಯಿತು. ಭೂಪತಿಸಿಂಗನ ಮಗನೇ ಕೆಂಗರ[೧೫], ಮುಂದೆ ಅವನ ವಂಶಸ್ಥರೇ ಅಲ್ಲಿ ಆಳುತ್ತಾ ಬಂದರು. ಸುಲ್ತಾನ್ ಮುಝಪರನು ಪಟ್ಟವೇರಿದ ಮೇಲೆ ಅಂದರೆ ಸುಲ್ತಾನ್ ಮಹಮುದನ ಕೊನೆಯ ದಿನಗಳಲ್ಲಿ ಸರ್ಕಾರದ ಕೇಂದ್ರಸ್ಥಾನವು ಜುನಾಗಢದಿಂದ ದಿಯುಗೆ ಎತ್ತಂಗಡಿಯಾಯಿತು. ಏಕೆಂದರೆ ದಿಯು ದ್ವೀಪವು ನೌಕಾನೆಲೆಗೆ ಹೇಳಿ ಮಾಡಿಸಿದಂತಿತ್ತು ಅಲ್ಲದೆ ಅಲ್ಲಿಂದ ಪೋರ್ಚುಗೀಸರ ಅತಿಕ್ರಮಣವನ್ನು ತಡೆಯಬಹುದಿತ್ತು. ಮಲಿಕ್ ಇಯಾಝನು ದಿಯುನಲ್ಲಿ ನೆಲೆನಿಂತು ಜುನಾಗಢಕ್ಕೆ ತತರ್ ಖಾನ್ ಘೋರಿಯನ್ನು ನೇಮಿಸಿದ. ಮಲಿಕ್ ಇಯಾಝನು ಗತಿಸಿದ ಮೇಲೆ ತತರ್ ಖಾನನು ಸ್ವತಂತ್ರನಾದ ಹಾಗೂ ಸುಲ್ತಾನ್ ಬಹಾದುರನು ಸತ್ತ ಮೇಲೆ ಘೋರಿ ವಂಶಸ್ತರು ಜುನಾಗಢವನ್ನು ಆಳತೊಡಗಿದರು. ಆದರೆ ಹೆಸರಿಗೆ ಮಾತ್ರ ತಾವು ಅಹಮದಾಬಾದ್ ಸುಲ್ತಾನರಿಗೆ ಅಧೀನರು ಎಂದು ಹೇಳಿಕೊಳ್ಳುತ್ತಿದ್ದರು. ಇದೇ ನಡವಳಿಕೆಯು ಮೊಘಲ್ ಚಕ್ರವರ್ತಿ ಅಕ್ಬರನು ಗುಜರಾತನ್ನು ವಶಪಡಿಸಿಕೊಳ್ಳುವವರೆಗೂ ಮುಂದುವರಿದಿತ್ತು. ಆಗ ತತರಖಾನನ ಮಗ ಅಮಿನಖಾನ್ ಘೋರಿಯು ಜುನಾಗಢವನ್ನಾಳುತ್ತಿದ್ದ.[೧೫] ೧೬ನೇ ಶತಮಾನದಲ್ಲಿ ಪೋರ್ಚುಗೀಸರು ದಿಯು ಮತ್ತು ದಾಮನ್ ದ್ವೀಪಗಳನ್ನು ಕೈವಶಮಾಡಿಕೊಂಡಾಗ, ಪೋರ್ಚುಗೀಸರ ಒಳನುಗ್ಗುವಿಕೆಯನ್ನು ವಿರೋಧಿಸಿದ ಒಟ್ಟೊಮನ್ ಸಾಮ್ರಾಜ್ಯದ ನೌಕಾಧಿಪತಿಯು, ಈಜಿಪ್ಟ್ ನಲ್ಲಿ ೧೫೩೧ರಲ್ಲಿ ಮಾಡಿದ್ದೆನ್ನಲಾದ ಹದಿನೈದು ಅಡಿಯ ಫಿರಂಗಿಯನ್ನು ಅಲ್ಲೇ ಬಿಟ್ಟುಹೋದ. ಅದೇ ಫಿರಂಗಿಯನ್ನು ಇವೊತ್ತು ಜುನಾಗಢದ ಊಪರ್ಕೋಟ್ ನಲ್ಲಿ ಕಾಣಬಹುದು.

ಮೊಘಲ್ ಸಾಮ್ರಾಜ್ಯದಡಿಯಲ್ಲಿ[ಬದಲಾಯಿಸಿ]

ಘೋರಿ ಆಳ್ವಿಕೆ

ಕ್ರಿಸ್ತಶಕ ೧೫೨೫ರಲ್ಲಿ ಕೆಂಗರ ಹೋಗಿ ನವಘನ ಬಂದ. ತತರಖಾನ ಘೋರಿಯು ಸಂಪೂರ್ಣ ಸ್ವತಂತ್ರನಾದ. ಈ ಸಮಯದಲ್ಲಿ ಜಾಮ್ ರಾವಲನು ಹಲರನ್ನು ವಶಪಡಿಸಿಕೊಂಡು ನವನಗರವನ್ನು ಕಟ್ಟಿದ. ೧೫೫೧ರಲ್ಲಿ ಅವನ ಮಗ ಶ್ರೀಸಿಂಗನು ಅಧಿಕಾರಕ್ಕೆ ಬಂದು ೧೫೮೬ರವರೆಗೆ ಜೀವಿಸಿದ್ದ. ಈ ಅವಧಿಯಲ್ಲಿ, ತತರಖಾನ ಘೋರಿಯು ಸತ್ತುದರಿಂದ ಅವನ ಮಗ ಅಮಿನಖಾನ್ ಘೋರಿಯು ಪಟ್ಟಕ್ಕೆ ಬಂದ. ಇದೇ ವೇಳೆಯಲ್ಲಿ ಗುಜರಾತು ಅಕ್ಬರನ ತೆಕ್ಕೆಗೆ ಬಂದರೂ ಸೋರಟವು ಘೋರಿಯ ಕೈಯಲ್ಲೇ ಉಳಿಯಿತು. ತತರಖಾನನು ಗತಿಸಿದ ದಿನಾಂಕ ತಿಳಿಯದು, ಆದರೆ ಅವನ ಉತ್ತರಾಧಿಕಾರಿ ಅಮಿನಖಾನನ ಉಲ್ಲೇಖದಿಂದ ಅದು ಬಹುಶಃ ೧೫೭೦-೧೫೭೫ ಅವಧಿಯಲ್ಲಿ ಎನ್ನಬಹುದಾಗಿದೆ. ೧೫೭೩ರಲ್ಲಿ ಅಕ್ಬರನು ಆಗ್ರಾಕ್ಕೆ ಹಿಂದಿರುಗಿ, ಮುಹಮ್ಮದ್ ಹುಸೇನ್ ಮಿರ್ಜಾ ಮತ್ತು ಇಖ್ತಿಯಾರ್ ಉಲ್ ಮುಲ್ಕರು ಸೋತು ಸತ್ತ ಮೇಲೆ, ಅವನು ಸೋರಟ್ ಅನ್ನು ವಶಪಡಿಸಿಕೊಳ್ಳಲು ಅಪ್ಪಣೆ ಕೊಟ್ಟ. ಆ ಪ್ರಕಾರ ವಜೀರ್ ಖಾನನು ಅಮಿನ್ ಖಾನನ ಮೇಲೆ ಎರಗಿ ಬಂದರೂ ಜಯ ಗಳಿಸಿಲಿಲ್ಲ. ಗುಜರಾತಿನ ಮೇಲೆ ಮೊಘಲರ ದಾಳಿ, ಗುಜರಾತ್ ಸುಲ್ತಾನರ ಅವನತಿ, ಜಾಮರ ಅತಿಕ್ರಮಣ, ಘೋರಿಗಳ ಸ್ವಾತಂತ್ರ್ಯಘೋಷಣೆ ಹಾಗೂ ಇವೆಲ್ಲದರ ನಡುವೆ ೧೫೮೩ರಲ್ಲಿ ಮುಜಫ್ಫರ್ ಸುಲ್ತಾನನ ಪಲಾಯನವು ಸೋರಟ್ ನಲ್ಲಿ ವಿಪರೀತ ಗೊಂದಲಗಳನ್ನು ಮೂಡಿಸಿತು.[೧೫] ಈ ವೇಳೆಯಲ್ಲಿ ಅಮಿನ್ ಖಾನ್ ಘೋರಿ ಮತ್ತು ಅವನ ಮಗ ದೌಲತ್ ಖಾನ್ ಘೋರಿಯವರು ಮುಝಫರನಿಗೆ ತಮ್ಮ ನಿಷ್ಠೆ ತೋರಿದರು, ಜಾಮನು ಮತ್ತು ಕೇರ್ಡಿಯ ಲೊಮಾ ಖುಮಾನರೂ ಹಾಗೆಯೇ ಮಾಡಿದರು. ಸುಮಾರು ೧೫೮೯-೯೦ರಲ್ಲಿ ಅಮಿನ್ ಖಾನ್ ತೀರಿಕೊಂಡ. ರಾಯಜಾದಾ ಕೆಂಗರನು ಕೂಡಾ ಮುಝಫರನ ಕಡೆಗೆ ಬಂದ. ೧೫೯೧-೯೨ರಲ್ಲಿ ನೌರಂಗ್ ಖಾನ್, ಸೈಯದ್ ಖಾಸಿಂ ಮತ್ತು ಗುಜರ್ ಖಾನರು ಜುನಾಗಢವನ್ನು ಮುತ್ತಿ ವಶಪಡಿಸಿಕೊಂಡ ಮೇಲೆ ಕೆಂಗರನು ತನ್ನ ಸಿಲ್ ಭಗಾಸರಕ್ಕೆ ಸೀಮಿತನಾದ, ರಾಯಜಾದ ಅಧಿಕಾರ ತಪ್ಪಿಹೋಯಿತು. ದೌಲತ್ ಖಾನ್ ಘೋರಿಯು ಮುತ್ತಿಗೆಯಲ್ಲಾದ ಗಾಯಗಳಿಂದ ಮರಣ ಹೊಂದಿದ, ಹೀಗೆ ಜುನಾಗಢವು ಚಕ್ರವರ್ತಿಯ ಸೇನಾಧಿಪತಿಗಳ ಅಂದರೆ ಸೋರಟ್ ಫೌಜ್ದಾರ್ ಗಳ ವಶವಾಗಿ ಅಹಮದಾಬಾದ್ ಪ್ರಾಂತಾಧಿಕಾರಿಗಳ ಅಧೀನಕ್ಕೆ ಬಂತು.[೧೫]

ಮೊಘಲರ ಆಳ್ವಿಕೆ

ಜುನಾಗಢದ ಮೊದಲ ಫೌಜುದಾರ ನೌರಂಗ್ ಖಾನ್, ಅವನ ನಂತರ ಬಂದವನು ಸೈಯದ್ ಖಾಸಿಂ. ಪ್ರಸಿದ್ಧರಾದವರು ಮಿರ್ಜಾ ಇಸಾ ತಾರ್ ಖಾನ್, ಕುತ್ಬುದ್ದಿನ್ ಕೇಸ್ಗಿ ಮತ್ತು ಸರ್ದಾರ್ ಖಾನ್. ಇವರಲ್ಲಿ ಮಿರ್ಜಾ ಇಸಾ ತಾರ್ ಖಾನನು ಜುನಾಗಢ ಕೋಟೆಯ ಪೌಳಿಗೋಡೆಯನ್ನು ದುರಸ್ತಿ ಮಾಡಿಸಿದ. ಅವನು ಸೋರಟ್ ಅನ್ನು ೧೬೩೩-೧೬೪೨ರವರೆಗೆ ಆಳಿ ಗುಜರಾತ್ ಪ್ರಾಂತ್ಯಾಧಿಕಾರಿಯಾಗಿ ಬಡ್ತಿ ಹೊಂದಿದ. ಆಗ ಅವನು ತನ್ನ ಮಗ ಇನಾಯತ್ ಉಲ್ಲಾನನ್ನು ಫೌಜದಾರನನ್ನಾಗಿ ನೇಮಿಸಿ ತಾನು ಅಹಮದಾಬಾದ್ ನಿಂದ ಗುಜರಾತ್ ಸರ್ಕಾರವನ್ನು ಆಳತೊಡಗಿದ. ಕುತ್ಬುದ್ದಿನ್ ಕೇಸ್ಗಿಯ ಅಧಿಕಾರಾವಧಿ ೧೬೫೩-೧೬೬೬. ಕ್ರಿಸ್ತಶಕ ೧೬೬೪ರಲ್ಲಿ ಅವನು ನವನಗರವನ್ನು ವಶಮಾಡಿಕೊಂಡು ಚಕ್ರವರ್ತಿಯ ಸಾಮ್ರಾಜ್ಯವನ್ನು ವಿಸ್ತರಿಸಿದ. ೧೬೬೬-೧೬೮೬ರಲ್ಲಿ ಆಳಿದ ಸರ್ದಾರ್ ಖಾನನೂ ಒಳ್ಳೆ ಆಡಳಿತಗಾರ, ಅವನ ಕಾಲದಲ್ಲಿ (ಕ್ರಿ.ಶ. ೧೬೮೧) ಸರ್ದಾರ್ ಬಾಗ್ ಅರಮನೆಯೂ ಸರ್ದಾರ್ ಬಾವಿಯೂ ನಿರ್ಮಾಣವಾದವು. ೧೬೭೦ರಲ್ಲಿ ಸ್ವಲ್ಪಕಾಲ ಅವರು ಗುಜರಾತಿನ ಇಡರ್ ಗೆ ಹೋಗಬೇಕಾಯಿತು. ಆ ಸಮಯದಲ್ಲಿ ಸೈಯದ್ ದಿಲರ್ಖಾನನು ಈ ಆಡಳಿತ ನೋಡಿಕೊಂಡ. ಸರ್ದಾರ್ ಬಾಗ್ ನಲ್ಲಿ ಸರ್ದಾರ್ ಖಾನನು ತನಗಾಗಿ ಒಂದು ಸಮಾಧಿಯನ್ನು ಕಟ್ಟಿಕೊಂಡನಾದರೂ ಸಿಂಧ್ ಪ್ರದೇಶದ ತಟ್ಟಾ ಎಂಬಲ್ಲಿ ಅವನ ಮರಣವಾಗಿ ಅಲ್ಲೇ ಹೂಳಲ್ಪಟ್ಟ. ಕೊನೆಯ ಫೌಜುದಾರ ಶೇರ್ ಖಾನ್ ಬಾಬಿಯು ಸ್ವತಂತ್ರನಾಗಿ, ತನ್ನನ್ನು ನವಾಬ್ ಬಹದ್ದೂರ್ ಖಾನ್ ಎಂದು ಕರೆದುಕೊಂಡ.[೧೫]

ಜುನಾಗಢ ಪ್ರಾಂತ್ಯ[ಬದಲಾಯಿಸಿ]

ಜುನಾಗಢದ ನವಾಬರು ಮತ್ತು ಅಧಿಕಾರಿಗಳು, ೧೯ನೇ ಶತಮಾನ.
ಮಹಬತ್ ಖಾನನ ಸಮಾಧಿ

ಕ್ರಿಸ್ತಶಕ ೧೭೩೦ರಲ್ಲಿ, ಮೊಘಲ್ ಸಾಮ್ರಾಜ್ಯಗುಜರಾತ್ ಸುಬಹ್ ನ ರಾಜ್ಯಪಾಲನಿಗೆ ನಿಷ್ಠನಾಗಿದ್ದ ಮೊಹಮ್ಮದ್ ಶೇರ್ ಖಾನ್ ಬಾಬಿ, ಎಂಬಾತನು ಗಾಯಕ್ವಾಡ್ ಸಂತತಿಯ ಮರಾಠರ ದಾಳಿಯ ನಂತರ ಜುನಾಗಢವನ್ನು ಸ್ವತಂತ್ರದೇಶ ಎಂದು ಘೋಷಿಸಿದನು. ಹೀಗೆ ಅವನು ಜುನಾಗಢದ ಬಾಬಿ ವಂಶದ ಮೂಲಪುರುಷ ಎನಿಸಿದನು. ಅವನ ವಂಶಸ್ಥರಾದ ಜುನಾಗಢ ಬಾಬಿ ನವಾಬರು – ಆಫ್ಘಾನಿಸ್ಥಾನದಿಂದ ಬಂದ ಪಷ್ಟುನ್ ಬುಡಕಟ್ಟಿನ ಬಾಬಿ ಅಥವಾ ಬಾಬಾಯಿ – ಸೌರಾಷ್ಟ್ರ ಪ್ರಾಂತ್ಯದ ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡು ಇನ್ನೂರು ವರ್ಷಗಳವರೆಗೂ ಆಳಿದರು. ಮೊದಲಿಗೆ ಅವರು ತಮ್ಮನ್ನು ಮರಾಠ ಸಾಮ್ರಾಜ್ಯದ ಅಧೀನರು ಎಂದು ಗುರುತಿಸಿಕೊಂಡರು ಆಮೇಲೆ ಬ್ರಿಟಿಷರ ಆಳ್ವಿಕೆಯಲ್ಲಿ ಹದಿಮೂರು ಕುಶಾಲತೋಪುಗಳ ಗೌರವಕ್ಕೆ ಪಾತ್ರರಾದರು.[೧೬]

  • ೧೭೩೦-೧೭೫೮, ಮೊಹಮ್ಮದ್ ಬಹಾದುರ್ ಖಾನ್ ಜಿ ಅಥವಾ ಮೊಹಮ್ಮದ್ ಶೇರ್ ಖಾನ್ ಬಾಬಿ [೧೭][೧೮]
  • ೧೭೫೮–೧೭೭೪ – ಮೊಹಮ್ಮದ್ ಮಹಬತ್ ಖಾನ್ಜಿ -೧
  • ೧೭೭೪–೧೮೧೧ – ಮೊಹಮ್ಮದ್ ಹಮೀದ್ ಖಾನ್ಜಿ -೧
  • ೧೮೧೧–೧೮೪೦ – ಮೊಹಮ್ಮದ್ ಬಹಾದುರ್ ಖಾನ್ಜಿ -೨
  • ೧೮೪೦–೧೮೫೧ – ಮೊಹಮ್ಮದ್ ಹಮೀದ್ ಖಾನ್ಜಿ -೨
  • ೧೮೫೧–೧೮೮೨ – ಮೊಹಮ್ಮದ್ ಮಹಬತ್ ಖಾನ್ಜಿ -೨
  • ೧೮೮೨–೧೮೯೨ – ಮೊಹಮ್ಮದ್ ಬಹಾದುರ್ ಖಾನ್ಜಿ --೩
  • ೧೮೯೨–೧೯೧೧ – ಮೊಹಮ್ಮದ್ ರಸೂಲ್ ಖಾನ್ಜಿ
  • ೧೯೧೧–೧೯೪೮ – ಮೊಹಮ್ಮದ್ ಮಹಬತ್ ಖಾನ್ಜಿ -೩

ಬ್ರಿಟಿಷ್ ಕಾಲದಲ್ಲಿ[ಬದಲಾಯಿಸಿ]

ಬ್ರಿಟಿಷರ ಕಾಲದಲ್ಲಿ ಜುನಾಗಢದ ಬಾವುಟ

ಕ್ರಿಸ್ತಶಕ ೧೮೦೭ರಲ್ಲಿ, ಜುನಾಗಢ ರಾಜ್ಯವು ಬ್ರಿಟಿಷ್ ಇಂಡಿಯಾ ಕಾಪಿಗೆ ಬಂದಿತು. ಇದು ೧೮೧೮ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ತೆಕ್ಕೆಗೆ ಬಂದಿತಾದರೂ ಸೌರಾಷ್ಟ್ರವನ್ನು ಅವರು ನೇರವಾಗಿ ಆಳಲಿಲ್ಲ, ಬದಲಿಗೆ ರಾಜ್ಯವನ್ನು ನೂರಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಒಡೆದರು. ಅವು ೧೯೪೭ರವರೆಗೂ ಅಸ್ತಿತ್ವದಲ್ಲಿದ್ದವು. ಈಗಿರುವ ಹಳೆಯ ಪಟ್ಟಣವು ಅಂತಹ ಒಂದು ಪ್ರಾಂತ್ಯ. ಜುನಾಗಢದಲ್ಲಿನ ಸ್ವಾಮಿ ನಾರಾಯಣ ಮಂದಿರವು ಪಾಂಚಾಲದ ಜಿನಾಭಾಯ್ (ಹೇಮಂತ್ ಸಿಂಗ) ದರ್ಬಾರ್ ಕೊಟ್ಟ ಭೂಮಿಯಲ್ಲಿ ೧೮೨೮ ಮೇ ಒಂದರಂದು ಅಸ್ತಿತ್ವಕ್ಕೆ ಬಂತು. ಸ್ವಾಮಿ ನಾರಾಯಣ ಅವರು ಗುಣಾತೀತಾನಂದಸ್ವಾಮಿ ಯವರನ್ನು ಮೊದಲ ಮಹಂತರನ್ನಾಗಿ ನೇಮಿಸಿದರು. ಮಹಂತರು ಇಲ್ಲಿ ೪೦ಕ್ಕೂ ಹೆಚ್ಚು ವರ್ಷಗಳ ಕಾಲ ಗುಡಿಯ ಉಸ್ತುವಾರಿ ಹೊತ್ತು ಬೋಧೆ ನೀಡಿದರು. [೧೯][೨೦]

ಇಂಡಿಯಾದ ತೆಕ್ಕೆಯಲ್ಲಿ[ಬದಲಾಯಿಸಿ]

ದೇಶದ ಸ್ವಾತಂತ್ರ್ಯಕ್ಕೆ ಸ್ವಲ್ಪ ಮುನ್ನ ೧೯೪೭ರ ಇಂಡಿಯಾ ಪಾಕಿಸ್ತಾನ ಬೇರ್ಪಡುವಿಕೆ ಸಂದರ್ಭದಲ್ಲಿ ಬ್ರಿಟಿಷ್ ಇಂಡಿಯಾದಲ್ಲಿರದ ಆದರೆ ಬ್ರಿಟಿಷ್ ಸಾಮ್ರಾಜ್ಯದ ಕೀಲುಗೊಂಬೆಯಾಗಿದ್ದ ೫೬೨ ಪ್ರಾಂತ್ಯಗಳಿಗೆ ಇಂಡಿಯಾ ಅಥವಾ ಪಾಕಿಸ್ತಾನಕ್ಕೆ ಸೇರಿಕೊಳ್ಳಲು ಅಥವಾ ಸ್ವತಂತ್ರರಾಗಿರಲು ಆಯ್ಕೆ ನೀಡಲಾಯಿತು. ಹಾಗಿದ್ದರೂ, ಲೂಯಿಸ್ ಮೌಂಟ್ಬ್ಯಾಟನ್ ಅಭಿಪ್ರಾಯದಂತೆ ಭೌಗೋಳಿಕ ಕಾರಣಗಳಿಗಾಗಿ ಅವರೆಲ್ಲ ಇಂಡಿಯಾದೊಂದಿಗೇ ಇರಲು ಬಯಸಿದರು. ಮೌಂಟ್ಬ್ಯಾಟನ್ ಪ್ರಕಾರ ಯಾರುಯಾರು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದ್ದಾರೋ ಅವರು ಪಾಕಿಸ್ತಾನ ಸೇರಬಹುದು ಎಂಬ ಇಂಗಿತವಿತ್ತು ಆದರೆ ಪ್ರಾಂತ್ಯಗಳು ಹಾಗೆ ಮಾಡುವಂತೆ ಒತ್ತಾಯಿಸುವ ಅಧಿಕಾರ ಅವನಿಗಿರಲಿಲ್ಲ. ೧೯೪೭ ಆಗಸ್ಟ್ ೧೫ರಂದು, ಜುನಾಗಢದ ನವಾಬ ಮುಮ್ಮಡಿ ಮೊಹಮ್ಮದ್ ಮಹಬತ್ ಖಾನ್ಜಿಯು ಜುನಾಗಢವು ಪಾಕಿಸ್ತಾನದೊಂದಿಗೆ ಗಡಿ ಹೊಂದಿಲ್ಲದಿದ್ದರೂ ಪಾಕಿಸ್ತಾನಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದನು. ಪಾಕಿಸ್ತಾನಕ್ಕೂ ಜುನಾಗಢಕ್ಕೂ ಸಮುದ್ರದ ನಂಟಿದೆ ಎಂಬುದು ಅವನ ವಾದವಾಗಿತ್ತು. ಈ ನಡುವೆ ಜುನಾಗಢ ಅಧೀನದಲ್ಲಿದ್ದ ಕಾಥಿಯಾವಾಡ, ಮಂಗ್ರೋಲ್ ಮತ್ತು ಬಾಬರಿಯಾವಾಡದ ಪಾಳೇಗಾರರು ತಾವು ಜುನಾಗಢದಿಂದ ಸ್ವತಂತ್ರರು ಎಂದು ಘೋಷಿಸಿ ಇಂಡಿಯಾದೊಂದಿಗೆ ಸೇರುತ್ತೇವೆ ಎಂದು ಹೇಳಿದರು. ಅದಕ್ಕುತ್ತರವಾಗಿ ನವಾಬನ ಸೇನೆಯು ಅವರ ಮೇಲೆರಗಿ ಅವರ ಪ್ರಾಂತ್ಯಗಳನ್ನು ಕಿತ್ತುಕೊಂಡಿತು. ಕೂಡಲೇ ನೆರೆಹೊರೆಯ ಪ್ರಾಂತ್ಯಗಳ ರಾಜರುಗಳು ಕೋಪಗೊಂಡು ತಂತಮ್ಮ ಸೇನೆಗಳನ್ನು ಜುನಾಗಢದತ್ತ ನುಗ್ಗಿಸಿ ಇಂಡಿಯಾ ಸರ್ಕಾರದ ನೆರವು ಕೇಳಿದರು. ಜುನಾಗಢದಿಂದ ಹೊರದಬ್ಬಲಾಗಿದ್ದ ಒಂದು ಗುಂಪಿನವರು ಸಮಲ್ದಾಸ್ ಗಾಂಧಿಯವರ ನಾಯಕತ್ವದಲ್ಲಿ “ಆರ್ಝಿ ಹುಕುಮತ್” (ತಾತ್ಕಾಲಿಕ ಸರ್ಕಾರ)ವನ್ನು ರಚಿಸಿದರು.[೨೧] ಇಂಡಿಯಾ ದೇಶವು ಜುನಾಗಢವು ತನ್ನಲ್ಲೇ ಇರುತ್ತದೆಂಬ ನಿಲುವು ತಳೆಯಿತು, ಏಕೆಂದರೆ ಅದು ಪಾಕಿಸ್ತಾನ ಸೇರಿದರೆ ಈಗಷ್ಟೆ ಧಾರ್ಮಿಕ ಗಲಭೆಗಳಿಂದ ಉರಿದು ತಣ್ಣಗಾಗುತ್ತಿದ್ದ ಗುಜರಾತು ಮತ್ತೊಮ್ಮೆ ಭುಗಿಲೇಳುವುದು ಎಂದು ಭಾವಿಸಿ ನವಾಬನ ಬಯಕೆಯನ್ನು ಅಲ್ಲಗಳೆಯಿತು. ಮತ್ತೊಂದು ಅಂಶವೆಂದರೆ ಜುನಾಗಢದ ಜನಸಂಖ್ಯೆಯ ಶೇ. ೯೬ರಷ್ಟು ಹಿಂದೂಗಳಾಗಿದ್ದು ಯಾವ ದೇಶಕ್ಕೆ ಸೇರಬೇಕೆಂಬ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕಿತ್ತು. ಇಂಡಿಯಾವು ಜುನಾಗಢಕ್ಕೆ ಇಂಧನ ಮತ್ತು ಕಲ್ಲಿದ್ದಲು ಪೂರೈಕೆಯನ್ನು ನಿಲ್ಲಿಸಿತು, ವಾಯುಮಾರ್ಗ ಮತ್ತು ಅಂಚೆಮಾರ್ಗಗಳನ್ನು ಮುಚ್ಚಿಹಾಕಿತು, ಗಡಿಯಲ್ಲಿ ಸೇನೆ ಜಮಾಯಿಸಿತು, ಹಾಗೂ ಮಂಗ್ರೋಲ್ ಮತ್ತು ಬಾಬರಿಯಾವಾಡಗನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.[೨೨] ಪಾಕಿಸ್ತಾನವು ಜನಾಭಿಪ್ರಾಯ ಏನಿದೆ ತಿಳಿಯೋಣ ಆದರೆ ಅದಕ್ಕೆ ಮುನ್ನ ಸೇನೆ ಹಿಂದೆಗೆದುಕೊಳ್ಳಿ ಎಂದು ವಿನಂತಿಸಿತಾದರೂ ಅದರ ಕೋರಿಕೆಯನ್ನು ತಳ್ಳಿಹಾಕಲಾಯಿತು. ಕೊನೆಗೆ ಜುನಾಗಢ ಸೈನ್ಯ ಮತ್ತು ಇಂಡಿಯಾದ ಸೇನೆ ಮುಖಾಮುಖಿ ಆದಾಗ ಅಕ್ಟೋಬರ್ ೨೬ರಂದು ನವಾಬನು ಸಂಸಾರಸಮೇತ ಪಾಕಿಸ್ತಾನಕ್ಕೆ ಪಲಾಯನಗೈದನು. ನವೆಂಬರ್ ೭ರಂದು ಜುನಾಗಢ ನ್ಯಾಯಾಲಯವು ಅರಾಜಕತೆಯನ್ನು ತಪ್ಪಿಸಲು ತನ್ನ ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳುವಂತೆ ಇಂಡಿಯಾ ಸರ್ಕಾರವನ್ನು ಕೋರಿಕೊಂಡಿತು. ಜುಲ್ಫಿಕರ್ ಅಲಿ ಬುಟ್ಟೊನ ತಂದೆ ಜುನಾಗಢದ ದಿವಾನ ಸರ್ ಶಾ ನವಾಝ್ ಬುಟ್ಟೊನು ಇಂಡಿಯಾ ಸರ್ಕಾರವನ್ನು ಆಹ್ವಾನಿಸುವ ನಿರ್ಧಾರ ತಳೆದು ಸೌರಾಷ್ಟ್ರ ಪ್ರಾಂತೀಯ ಕಮಿಷನರ್ ಬುಚ್ ನಿಗೆ ಮಧ್ಯಸ್ತಿಕೆಗಾಗಿ ಒಂದು ಪತ್ರ ಬರೆಯುತ್ತಾನೆ.[೨೩] ಇಂಡಿಯಾ ಸರ್ಕಾರವು ಪಾಕಿಸ್ತಾನಿ ವಿರೋಧವನ್ನು ತಳ್ಳಿಹಾಕಿ ದಿವಾನನ ಆಹ್ವಾನವನ್ನು ಒಪ್ಪಿಕೊಂಡಿತು.[೨೪] ೧೯೪೮ ಫೆಬ್ರವರಿಯಲ್ಲಿ ಜನಮತಗಣನೆ ನಡೆದಾಗ ಅಂತರಾಷ್ಟ್ರೀಯ ನಿಗಾ ವಹಿಸಲಾಯಿತು. ಪಾಕಿಸ್ತಾನದ ತರ್ಕವು ಜನಾಭಿಪ್ರಾಯದ ಪರವಾಗಿ ಇರಲಿಲ್ಲ, ಆದರೆ ಜನಾಭಿಪ್ರಾಯವಿಲ್ಲದೆಯೇ ಕಾಶ್ಮೀರವನ್ನು ಇಂಡಿಯಾಕ್ಕೆ ಸೇರಿಸಿಕೊಂಡುದರ ಬಗ್ಗೆ ಅದಕ್ಕೆ ಅಸಮಾಧಾನವಿತ್ತು.[೨೫] ಹೀಗೆ ಜುನಾಗಢವು ಬೊಂಬಾಯಿ ಪ್ರಾಂತ್ಯದ ಅಧೀನದಲ್ಲಿದ್ದ ಸೌರಾಷ್ಟ್ರಕ್ಕೆ ಸೇರಿಕೊಂಡಿತು. ೧೯೫೬ ನವೆಂಬರ್ ಒಂದರವರೆಗೆ ಇದು ಮುಂದುವರಿದಿತ್ತು. ೧೯೬೦ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡನೆಯಾದಾಗ ಮಹಾರಾಷ್ಟ್ರ ಮತ್ತು ಗುಜರಾತ್ಗಳು ಬೇರೆಬೇರೆಯಾಗಿ ಜುನಾಗಢವು ಗುಜರಾತಿನಲ್ಲಿ ಉಳಿಯಿತು. ಪಾಕಿಸ್ತಾನಿ ಸರ್ಕಾರವು ಜುನಾಗಢದ ಮೇಲಿನ ತನ್ನ ಹಕ್ಕನ್ನು ಪ್ರತಿಪಾದಿಸಿ ಜುನಾಗಢ, ಮಾಣಾವದರ್ ಮತ್ತು ಸರ್ ಕ್ರೀಕ್ ಅನ್ನು ತನ್ನ ಭೂಪಟದಲ್ಲಿ ತೋರಿಸಿತು.[೨೬][೨೭]

ಆಖ್ಯಾಯಿಕೆಗಳು[ಬದಲಾಯಿಸಿ]

ಆಳಿದ ಸಂತತಿಗಳು[ಬದಲಾಯಿಸಿ]

Various Rulers[೨೮] Time Period[೨೯]
ಮೌರ್ಯ ಸಂತತಿಯ ಆಳ್ವಿಕೆಯಲ್ಲಿ ಜುನಾಗಢ ಕ್ರಿಸ್ತಪೂರ್ವ ೩೧೯ ರಲ್ಲಿ
ಕಳಿಂಗ ಸಂತತಿಯ ಆಳ್ವಿಕೆಯಲ್ಲಿ ಜುನಾಗಢ ಕ್ರಿಸ್ತಪೂರ್ವ ೧೮೫ ರಲ್ಲಿ
ಗ್ರೀಕ್ ಆಳ್ವಿಕೆಯಲ್ಲಿ ಜುನಾಗಢ ಕ್ರಿಸ್ತಪೂರ್ವ ೭೩-೭೦ ರಲ್ಲಿ
ಶಕ (ಸಿಥಿಯನ್) ಆಳ್ವಿಕೆಯಲ್ಲಿ ಜುನಾಗಢ ಕ್ರಿಸ್ತಶಕ ೧೦೦-೨೭೫ ರಲ್ಲಿ
ಕ್ಷತ್ರಪ ರು ಜುನಾಗಢವನ್ನು ಆಳಿದರು ಕ್ರಿಸ್ತಶಕ ೨೭೬-೪೫೫ ರಲ್ಲಿ
ಗುಪ್ತ ಸಾಮ್ರಾಜ್ಯ ವು ಜುನಾಗಢವನ್ನು ಆಳಿತು ಕ್ರಿಸ್ತಶಕ ೪೫೬-೭೭೦ ರಲ್ಲಿ
ಚೀನಾ ಯಾತ್ರಿಕ ಹ್ಯುಯೆನ್ ತ್ಸಾಂಗ್ ಜುನಾಗಢಕ್ಕೆ ಭೇಟಿಕೊಟ್ಟ ಕ್ರಿಸ್ತಶಕ ೬೪೦ ರಲ್ಲಿ
ಚುರಾಸಮ ರಾಜರು ಜುನಾಗಢವನ್ನು ಆಳಿದರು ಕ್ರಿಸ್ತಶಕ ೮೭೫-೧೪೭೨ ರಲ್ಲಿ
ತುರ್ಕ ರಾಜರು ಮಹಮುದ್ ಬೇಗಡ, ಖಲೀಲ್ ಖಾನ್ ಕ್ರಿಸ್ತಶಕ ೧೪೭೨-೧೫೭೨ ರಲ್ಲಿ
ಮೊಘಲ್ ಸಾಮ್ರಾಜ್ಯವು ಜುನಾಗಢವನ್ನು ಆಳಿತು ಕ್ರಿಸ್ತಶಕ ೧೫೭೩-೧೭೩೦ ರಲ್ಲಿ
ಜುನಾಗಢದ ನವಾಬರು ಖಾನ್ಜಿ (ಬಾಬಿ ಪಠಾಣರು) ಆಳಿದ್ದು ಕ್ರಿಸ್ತಶಕ ೧೭೩೦-೧೯೪೯ ರಲ್ಲಿ

ಇಂಡಿಯಾ ದೇಶಕ್ಕೆ ಸೇರ್ಪಡೆ[ಬದಲಾಯಿಸಿ]

  • ೧೯೪೭ ಆಗಸ್ಟ್ ೧೫ ಪಾಕಿಸ್ತಾನಕ್ಕೆ ಸೇರ್ಪಡೆ.
  • ೧೯೪೭ ಸೆಪ್ಟೆಂಬರ್ ೧೫ ಪಾಕಿಸ್ತಾನದೊಂದಿಗೆ ವಿಲೀನದ ಅಂಗೀಕಾರವಾಯ್ತು.
  • ೧೯೪೭ ನವೆಂಬರ್ ೯ ರಂದು ಇಂಡಿಯಾವು ಆಕ್ರಮಿಸಿಕೊಂಡಿತು.
  • ೧೯೪೭ ನವೆಂಬರ್ ೧೦ರಂದು ಪಾಕಿಸ್ತಾನದೊಂದಿಗೆ ವಿಲೀನ ರದ್ದಾಗಿ, ಇಂಡಿಯಾದ ಭಾಗವಾಯ್ತು.
  • ೧೯೪೮ ಫೆಬ್ರವರಿ ೨೪ ಜನರೊಲವು ಇಂಡಿಯಾದ ಕಡೆಗೆಂದು ಸಾಬೀತಾಯಿತು.
  • ೧೯೪೮ ಫೆಬ್ರವರಿ ೨೫ ಇಂಡಿಯಾ ದೇಶಕ್ಕೆ ಸೇರ್ಪಡೆ ಅಮಲಿಗೆ ಬಂತು.

ಭೂಪ್ರದೇಶ[ಬದಲಾಯಿಸಿ]

ಜುನಾಗಢದ ನೋಟ

[[File:Girnar Hills from Damodar Kund.jpg|thumb|ದಾಮೋದರ ಕೊಳದಿಂದ ಗಿರ್ನಾರ್ ಬೆಟ್ಟಗಳ ನೋಟ.

ಜುನಾಗಢ ಪಟ್ಟಣವು ಗಿರ್ನಾರ್ ಬೆಟ್ಟದ ತಪ್ಪಲಿನಲ್ಲಿ ೨೧.೫೨ ಉತ್ತರ ಅಕ್ಷಾಂಶ, ೭೦.೪೭ ಪೂರ್ವ ರೇಖಾಂಶದಲ್ಲಿದೆ. 21°31′N 70°28′E / 21.52°N 70.47°E / 21.52; 70.47 ಅದರ ನೈಋತ್ಯ ದಿಕ್ಕಿನಲ್ಲಿ ಅರಬ್ಬೀ ಸಮುದ್ರವೂ, ಉತ್ತರಕ್ಕೆ ಪೋರಬಂದರವೂ, ಪೂರ್ವಕ್ಕೆ ಅಮ್ರೇಲಿಯೂ ಇದೆ. ಸಮುದ್ರಮಟ್ಟದಿಂದ ೧೦೭ಮೀ. ಎತ್ತರದಲ್ಲಿದೆ. ಜುನಾಗಢ ಪಟ್ಟಣದಲ್ಲಿ ಸೋನ್ರಖ್ ಮತ್ತು ಕಾಲ್ವೋ ಎಂಬ ಎರಡು ನದಿಗಳಿದ್ದು ಅವು ಈಗ ಪಟ್ಟಣದ ಚರಂಡಿ ನೀರು ಸೇರಿ ಕೊಳಕಾಗಿದೆ. ಪಟ್ಟಣದಲ್ಲಿ ಹಲವಾರು ಕೆರೆಗಳಿದ್ದು ನರಸಿನ್ಹ ಮೆಹ್ತಾ ಸರೋವರ, ದಾಮೋದರಜಿ ಕೆರೆ, ಸುದರ್ಶನ ಕೆರೆ, ವಿಲ್ಲಿಂಗ್ಡನ್ ಅಣೆಕಟ್ಟು, ಹಸನಾಪುರ ಅಣೆಕಟ್ಟು ಮತ್ತು ಆನಂದಪುರ ಬ್ಯಾರೇಜುಗಳು ಪಟ್ಟಣದ ನೀರಾಸರೆಗಳಾಗಿವೆ. ಅಂತರ್ಜಲವು ಪಟ್ಟಣದ ಎಲ್ಲೆಡೆಗಳಲ್ಲೂ ಬಾವಿಗಳ ಮೂಲಕ ಸಿಗುತ್ತವೆ. ಜುನಾಗಢದ ಮಣ್ಣು ಜಿಲ್ಲೆಯ ಇತರ ನೆಲಗಳಲ್ಲಿ ಇರುವಂತೆಯೇ ಇದೆ. ಅದು ದಟ್ಟವೂ ಅಲ್ಲದ ನಸುವೂ ಅಲ್ಲದ ಕಪ್ಪುಬಣ್ಣದ ಕರಾವಳಿ ಎರೆಮಣ್ಣು.ref>"Soil Condition" (PDF). Government of Gujarat. Archived from the original (PDF) on 5 ಅಕ್ಟೋಬರ್ 2011. Retrieved 16 ಅಕ್ಟೋಬರ್ 2011.</ref> ಸಮುದ್ರಕ್ಕೆ ಹತ್ತಿರವಿದ್ದು ಉದ್ದನೆಯ ಸಮುದ್ರದಂಡೆ ಮತ್ತು ಹತ್ತಿರ ಬೆಟ್ಟಸಾಲುಗಳೇ ಇದಕ್ಕೆ ಕಾರಣ. ಜುನಾಗಢವು ಭೂಕಂಪಪೀಡಿತ ವಲಯದಲ್ಲಿದ್ದು ಸೆಸ್ಮಿಕ್ ವಲಯದ ೩ನೇ ತಾಣದಲ್ಲಿದೆ,[೩೦] ಅಂದರೆ ರಿಕ್ಟರ್ ಮಾನದಂಡದ ೬.೫ರವರೆಗಿನ ನೆಲನಡುಗುವಿಕೆಯನ್ನು ಅನುಭವಿಸಬಹುದಾದ ತಾಣ.

ಮಳೆಗಾಳಿ[ಬದಲಾಯಿಸಿ]

ಜುನಾಗಢದ ಮೈಲೈಯಲ್ಲಿ ಒಣಗಾಳಿ ತಂಗಾಳಿ ಎರಡೂ ಸಮನಾಗಿ ಬೆರೆತಿದೆ (Aw) ಆಗಾಗ್ಗೆ ಬಿಸುಪಾದ ಒಣಗಾಳಿ ಬೀಸುತ್ತದೆ (BSh), ಇದಕ್ಕೆ ಎರಡು ಕಾರಣಗಳಿವೆ: ಅಕ್ಟೋಬರಿನಿಂದ ಮೇವರೆಗೆ ಒಣಗಾಳಿ, ಜೂನ್ ನಿಂದ ಸೆಪ್ಟೆಂಬರ್ ವರೆಗೆ ತೇವ. ಅರಬ್ಬೀ ಸಮುದ್ರ ಮತ್ತು ಕ್ಯಾಂಬೇ ಕೊಲ್ಲಿಗಳು ವಾತಾವರಣದ ಮೇಲೆ ಪರಿಣಾಮ ಬೀರುತ್ತವೆ. ಬೇಸಿಗೆಯ ದಿನಗಳಲ್ಲಿ ಶಾಖವು ೨೮-೩೮ ಡಿಗ್ರಿ ಸೆಲ್ಶಿಯಸ್ ಇದ್ದರೆ ಚಳಿಗಾಲದಲ್ಲಿ ೧೦ ರಿಂದ ೨೫ ಡಿಗ್ರಿ ಸೆಲ್ಶಿಯಸ್ ಗೆ ಇಳಿಯುತ್ತದೆ.[೩೧] ಜೂನ್ ನಿಂದ ಸೆಪ್ಟೆಂಬರ್ ವರೆಗೆ ಪಟ್ಟಣವು ನೈರುತ್ಯ ಮುಂಗಾರಿನಿಂದ ತೊಯ್ದು ಹೋಗುತ್ತದೆ. ವರ್ಷದ ಮಳೆಯು ಸರಾಸರಿ ೮೦೦ರಿಂದ ೧೨೦೦ ಮಿಲಿಮೀಟರ್ ಇರುತ್ತದೆ. 800 to 1,200 millimetres (31 to 47 in) ೧೯೮೩ರಲ್ಲಿ ೨೮೦೦ ಮಿ.ಮೀ. ನಷ್ಟು ದಾಖಲೆಯ ಮಳೆ ಸುರಿದಿತ್ತು.2,800 millimetres (110 in).[೩೨]

ಜುನಾಗಢದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) ೨೭.೨ ೨೮.೩ ೩೧.೪ ೩೨.೭ ೩೩.೪ ೩೨.೯ ೩೦ ೨೯.೩ ೩೦.೧ ೩೨.೫ ೩೧.೬ ೨೮.೭
ಕಡಮೆ ಸರಾಸರಿ °C (°F) ೧೩.೧ ೧೪.೭ ೧೮.೧ ೨೧.೬ ೨೫.೨ ೨೬.೫ ೨೫.೭ ೨೪.೭ ೨೩.೯ ೨೧.೯ ೧೮.೩ ೧೪.೯
Average precipitation mm (inches) 0
(0)
0
(0)
2
(0.08)
1
(0.04)
3
(0.12)
118
(4.65)
372
(14.65)
191
(7.52)
116
(4.57)
19
(0.75)
5
(0.2)
1
(0.04)
828
(32.62)
Source: Climate-Data.org[೩೩]

ಜನಗಣತಿ[ಬದಲಾಯಿಸಿ]

As of the ಜನಗಣತಿ 2011ರ ಪ್ರಕಾರ ಜುನಾಗಢ ಪುರಸಭೆಯ ತಲೆಯೆಣಿಕೆ ೩,೧೯,೪೬೨ ಇತ್ತು.[೨] ಪುರಸಭೆಯ ಪ್ರಕಾರ ೧೦೦೦ ಗಂಡಸರಿಗೆ ೯೫೫ ಹೆಂಗಸರಿದ್ದರು. ಒಟ್ಟು ಜನಸಂಖ್ಯೆಯ ಶೇ.೯ರಷ್ಟು ಆರುವರ್ಷಕ್ಕಿಂತ ಕೆಳಗಿನವರು.[೨] ಓದುಬರಹ ಬಲ್ಲವರು ೮೮%, ಅದರಲ್ಲಿ ಗಂಡಸರು ೯೨.೪೬% ಮತ್ತು ಹೆಂಗಸರು ೮೩.೩೮%[೨] ರಾಜ್ಕೋಟ್ಗೆ ಹೋಲಿಸಿದರೆ ಜುನಾಗಢದಲ್ಲಿ ಭೂಮಿಕಾಣಿಯ ಬೆಲೆ ಕಡಿವೆ. ಪಟ್ಟಣವು ವಿಪರೀತ ಬೆಳೆಯುತ್ತಿದ್ದು ಪಟ್ಟಣವ್ಯಾಪ್ತಿಯಲ್ಲಿ ಚೂರುಪಾರು ನೆಲವಷ್ಟೇ ಉಳಿದಿದೆ. ಕೊಳಚೆಪ್ರದೇಶದ ವಿಸ್ತೀರ್ಣವು ೧೯.೫ ಚದರ ಕಿ.ಮೀ. ಅಂದರೆ ಪುರಸಭಾ ಪ್ರದೇಶದ ಶೇ. ೧೪.೫ರಷ್ಟು. ಕೊಳಚೆಪ್ರದೇಶದ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಕಾಲುಭಾಗದಷ್ಟಿದೆ.[೩೪]

Religions in Junagadh[೩೫]
Religion Percent
Hinduism
  
82.31%
Islam
  
16.46%
Jainism
  
0.67%
Others
  
0.56%
ಇತರರು ಅಂದರೆ ಕ್ರೈಸ್ತರು, ಸಿಖ್ಖರು, ಝೊರೊವಾಸ್ತ್ ಮತ್ತು ಬೌದ್ಧರು

ಜುನಾಗಢದ ಧರ್ಮಾಚರಣೆಯಲ್ಲಿ ಹಿಂದೂ, ಮುಸ್ಲಿಂ, ಜೈನ, ಕ್ರಿಸ್ತುವ ಮತ್ತು ಬೌದ್ಧ ಧರ್ಮಗಳಿವೆ. ಇವರಲ್ಲಿ ಹಿಂದೂಗಳು ಮತ್ತು ಮುಸಲ್ಮಾನರೇ ಹೆಚ್ಚು. ಅವರ ನಂತರ ಬರುವವರು ಕ್ರಿಸ್ತುವರು ಮತ್ತು ಜೈನರು. ಸಿಖ್ಖರು ಮತ್ತು ಪಾರ್ಸಿಗಳು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಟಿಬೆಟ್ ವಲಸಿಗರು ಬೌದ್ಧ ಧರ್ಮವನ್ನು ಆಚರಿಸುತ್ತಾರೆ. ಇಲ್ಲಿನ ಮುಖ್ಯವಾದ ನುಡಿ ಗುಜರಾತಿ. ಹಿಂದೀ, ಸಿಂಧೀಗಳು ಇತರ ನುಡಿಗಳು. ಆಫ್ರಿಕಾ ಮೂಲದ ಸಿದ್ದಿ ಎಂಬ ಸಣ್ಣ ಗುಂಪೊಂದು ಗಿರ್ ಕಾಪುಗಾಡಿನ ಒಳಹೊರಗೆ ಜೀವಿಸುತ್ತಿದ್ದಾರೆ. ಸುಮಾರು ೮೮೧೬ ಸಿದ್ದಿಗಳು[೩೬] ಗುಜರಾತ್ ರಾಜ್ಯದಲ್ಲಿದ್ದು ಅದರಲ್ಲಿ ಶೇ.೬೫ರಷ್ಟು ಮಂದಿ ಜುನಾಗಢದಲ್ಲೇ ಇದ್ದಾರೆ.[೩೭] ಪಟ್ಟಣದಲ್ಲಿ ಸ್ವಾಮಿನಾರಾಯಣ ಪಂಥಾನುಯಾಯಿಗಳು ತುಂಬಾ ಮಂದಿ ಇದ್ದಾರೆ. ಲಕ್ಷ್ಮೀನಾರಾಯಣದೇವ ಗಾದಿ ಮತ್ತು ಬೊಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸನ್ಸ್ಥಾ ಎಂಬ ಎರಡು ಗುಡಿಗಳಿವೆ.[೩೮]

ಪೌರಾಡಳಿತ[ಬದಲಾಯಿಸಿ]

ಪಟ್ಟಣದ ಕೇಂದ್ರಭಾಗವು ಮಹಾತ್ಮಗಾಂಧಿ ರಸ್ತೆ ಮತ್ತು ಕಾಲ್ವಾ ಚೌಕ್. ಅದರ ಸುತ್ತಲೂ ಗಾಂಧಿಗ್ರಾಮ, ಜಂಜರ್ದಾ ರಸ್ತೆ, ತಾಲಾವ್ ದರವಾಜಾ, ಬಸ್ಸು ನಿಲ್ದಾಣ, ಸಕ್ಕರ್ ಬಾಗ್, ತಿಂಬವಾಡಿ, ಜೋಷಿಪಾರ ಮತ್ತು ಗಿರ್ನಾರ್ ತಾಲೇಟಿ ಇವೆ. ಇವೆಲ್ಲವೂ ಜುನಾಗಢ ಪಟ್ಟಣ ಪುರಸಭೆಯ ವ್ಯಾಪ್ತಿಯಲ್ಲಿವೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಗಳೇ ಇಲ್ಲಿ ನೇರನೇರ ಸೆಣಸುವುದು. ಉಳಿದಂತೆ ಬಹುಜನ ಸಮಾಜ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗಳೂ ಕಣದಲ್ಲಿರುತ್ತವೆ. ಪ್ರಾದೇಶಿಕ ಪಕ್ಷಗಳು ಮಹಾಗುಜರಾತ್ ಜನತಾ ಪಾರ್ಟಿ, ಸಮತಾ ಪಾರ್ಟಿ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ. ಜುನಾಗಢದಲ್ಲಿ ೧,೯೪,೧೯೬ ಮತದಾರರಿದ್ದು ಅದರಲ್ಲಿ ೧,೦೦,೦೫೦ ಗಂಡಸರು ಹಾಗೂ ೯೪,೧೪೬ ಹೆಂಗಸರು. ಜುನಾಗಢವು ಒಂದು ವಿಧಾನಸಭಾ ಕ್ಷೇತ್ರ. ೨೦೦೭ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ಕಾಂಗ್ರೆಸ್ ಎರಡನೇ ಸ್ಥಾನ ಪಡೆದು ಸೋತಿದೆ.[೩೯].

ಜುನಾಗಢ ಪಟ್ಟಣ ಪುರಸಭೆಯಲ್ಲಿ ೧೭ ವಾರ್ಡುಗಳಿದ್ದು ಒಟ್ಟು ೫೧ ಸ್ಥಾನಗಳಿವೆ. ೨೦೦೯ರ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೨೬ ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ೨೧, ಬಿಎಸ್ಪಿ ೩ ಗೆದ್ದಿವೆ. ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ. ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ಸಿಕ್ಕಿದ್ದರೂ ಹೆಚ್ಚು ಜನಬೆಂಬಲ ಪಡೆದಿದ್ದು ಬಿಜೆಪಿ. ಅಂದರೆ ಬಿಜೆಪಿಗೆ ಸಿಕ್ಕಿದ್ದು ೧,೨೪,೭೩೯ ಮತಗಳು (ಶೇ. ೪೫.೬೨) ಹಾಗೂ ಕಾಂಗ್ರೆಸ್ಸಿಗೆ ದಕ್ಕಿದ್ದು ೧,೨೦,೫೩೩ ಮತಗಳು. (ಶೇ. ೪೦.೮೧)[೪೦] ಮೇಯರ್ ಅಧಿಕಾರಾವಧಿ ಎರಡು ವರ್ಷ ಮತ್ತು ಉಪಮೇಯರ್ ಅಧಿಕಾರಾವಧಿ ಎರಡೂವರೆ ವರ್ಷ.

ಸೌಕರ್ಯಗಳು[ಬದಲಾಯಿಸಿ]

೩,೨೦,೨೫೦ ಜನಸಂಖ್ಯೆಯುಳ್ಳ ಜುನಾಗಢಕ್ಕೆ ದಿನವೊಂದಕ್ಕೆ 30 million litres (6,600,000 imp gal; 7,900,000 US gal) ನೀರು ಬೇಕು, ಇವನ್ನು ಮೂರು ನೆಲಮಟ್ಟದ ನೀರಾಸರೆಗಳಿಂದ ಅಂದರೆ ಆನಂದಪುರ ಬ್ಯಾರೇಜು, ಹಸನಾಪುರ ಜಲಾಶಯ ಮತ್ತು ವೆಲ್ಲಿಂಗ್ಡನ್ ಜಲಾಶಯಗಳಿಂದ ಮತ್ತು ೩೨ ಬಾವಿಗಳಿಂದ ತಂದು ೨೫೦೦೦ ಕೊಳಾಯಿಗಳ ಮೂಲಕ ಪೂರೈಸಲಾಗುತ್ತದೆ. ಇಷ್ಟಲ್ಲದೆ ನೆಲದಾಳದ ನೀರೆತ್ತುವ ೧೦೦೦ ಕೈಪಂಪುಗಳು ಹಾಗೂ ೨೦೦ ನಿಲುವುತೊಟ್ಟಿಗಳನ್ನು ನಗರದ ಎಲ್ಲೆಡೆ ಹಾಕಲಾಗಿದೆ. ಜನವರಿ ೨೦೦೪ರಲ್ಲಿ ಜುನಾಗಢ ಪ್ರದೇಶವನ್ನು ೧೩.೪೭ ಚ.ಕಿ.ಮೀ 13.47 square kilometres (5.20 sq mi) ನಿಂದ ೫೭ ಚ.ಕಿ.ಮೀ. 57 square kilometres (22 sq mi)ಗಳಿಗೆ ವಿಸ್ತರಿಸಲಾಯಿತು. ಅಂದರೆ ಎಂಟು ಗ್ರಾಮಪಂಚಾಯ್ತಿಗಳು ಪಟ್ಟಣದೊಳಕ್ಕೆ ಸೇರ್ಪಡೆಯಾದವು. ಹೊಸದಾಗಿ ಸೇರಿದ ಪ್ರದೇಶದಲ್ಲಿ ಈಗಾಗಲೇ ನೆಲದಾಳದ ನೀರಾಸರೆ ಕೊಳವೆಬಾವಿ ಏರ್ಪಾಡು ಇದೆ.[೪೧] ಪಟ್ಟಣದಿಂದ ದಿನವೂ ಸುಮಾರು ೧೫೦ ಟನ್ 150 tonnes (150 long tons; 170 short tons) ಕಸ ಉತ್ಪನ್ನವಾಗುತ್ತದೆ, ಅದು ದಿನವೊಂದಕ್ಕೆ ಪ್ರತಿ ವ್ಯಕ್ತಿಗೆ ನಿಯಮಿತವಾಗಿರುವ ೪೦೦ಗ್ರಾಮ್ 400 grams (14 oz) ಮಿತಿಯೊಳಗೇ ಇದೆ. ಸರ್ವೋಚ್ಚ ನ್ಯಾಯಾಲಯದ ಪುರಸಭಾ ಕಸ ವಿಲೇವಾರಿ ಮಾರ್ಗಸೂಚಿ ೨೦೦೦ದ ಅನ್ವಯ ಈ ಕಸವನ್ನು ೪೦೦ ಚಕ್ರಬಂಡಿಯ ಮೇಲಿರಿಸಿದ ಆರು ಗುಡಾಣಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದಲ್ಲದೆ ಕಸ ಸಂಗ್ರಹಕ್ಕಾಗಿ ೮೦೦ ಸಮುದಾಯ ಕಸದತೊಟ್ಟಿಗಳನ್ನೂ ಇರಿಸಲಾಗಿದೆ.[೪೨] ಇದು ಜುನಾಗಢದ ಶೇ.೯೦ ಭಾಗಕ್ಕೆ ಸರಿಹೊಂದುತ್ತದೆ. ಜುನಾಗಢದ ಚರಂಡಿಗಳು ೬೨ ಕಿ.ಮೀ. 62 kilometres (39 mi)ಉದ್ದವಿದ್ದು ಅವು ಶೇ.೬೭ರಷ್ಟು ಭಾಗಕ್ಕೆ ಅಂದರೆ ಶೇ.೬೦ರಷ್ಟು ಮಂದಿಗಷ್ಟೇ ಸಾಕಾಗುತ್ತದೆ.[೪೩]

ರಾಜ್ಯಸರ್ಕಾರ ಅಧೀನದ ಪಶ್ಚಿಮ ಗುಜರಾತ್ ವಿಜ್ ಕಂಪೆನಿ ಲಿಮಿಟೆಡ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ದೂರಸಂಪರ್ಕ ಸೇವೆಯನ್ನು ಬಿಎಸ್ಎನ್ಎಲ್ ಮತ್ತು ಇತರರಾದ ರಿಲಯನ್ಸ್, ಏರ್ಟೆಲ್, ಟಾಟಾ ಮುಂತಾದವು ಒದಗಿಸುತ್ತಾರೆ. ಮೊಬೈಲ್ ಸೇವೆಯು ವ್ಯಾಪಕವಾಗಿದ್ದು ವೊಡಾಫೋನ್, ಏರ್ಟೆಲ್, ಐಡಿಯಾ, ಟಾಟಾ ಮುಂತಾವು ಇಲ್ಲಿವೆ. ಬಿಎಸ್ಎನ್ಎಲ್ ಮೂಲಕ ಬ್ರಾಡ್ ಬ್ಯಾಂಡ್ ಸೇವೆಯೂ ಲಭ್ಯವಿದೆ. ಪಟ್ಟಣದೊಳಗೆ ಒಳ್ಳೆಯ ಬೀದಿದೀಪಗಳ ಏರ್ಪಾಟು ಇದೆ. ೧೨,೫೪೫ ಟ್ಯೂಬ್ ಲೈಟುಗಳೂ, ೧೫೨೩ ಸೋಡಿಯಂ ದೀಪಗಳೂ ಇವೆ. ಸರಸಿನ್ಹ ಮೆಹ್ತಾ ಸರೋವರಕ್ಕೆ ಸೌರಶಕ್ತಿ ಯೋಜನೆ ಮಂಜೂರಾಗಿದೆ. [೪೪]

ಸಾರಿಗೆ[ಬದಲಾಯಿಸಿ]

ಜುನಾಗಢವು ರಾಷ್ಟ್ರೀಯ ಹೆದ್ದಾರಿ ೮ಡಿ ಮೂಲಕ ರಾಜಕೋಟ್, ಅಹಮದಾಬಾದ್ ಮತ್ತು ವೆರಾವಲ್ ಅನ್ನು ಸಂಪರ್ಕಿಸುತ್ತದೆ. ಪಟ್ಟಣದ ದಕ್ಷಿಣದಲ್ಲಿರುವ ಗಿರ್ನಾರ್ ತಪ್ಪಲು, ಬಿಲ್ಖಾ ಮತ್ತು ಸಿಂಹ ಕಾಪುಗಾಡನ್ನು ತಲಪಲು ರಸ್ತೆಯಿದೆ. ರಾ.ಹೆ. ೮ಡಿಗಾಗಿ ಬೈಪಾಸ್ ನಿರ್ಮಿಸಿರುವುದರಿಂದ ಸಂಚಾರ ಸುಗಮವಾಗಲಿದೆ. ಕಾಲ್ವೊ ನದಿಯ ಮೇಲೆ ಕಟ್ಟಲಾಗಿರುವ ಫರ್ಗ್ಯುಸನ್ ಸೇತುವೆಯು ಎರಡೂ ಕಡೆಯ ಜನರಿಗೆ ಬಹು ಉಪಯುಕ್ತವೇನಿಸಿದೆ. ಉತ್ತರ ಹೊರವಲಯದಲ್ಲಿ ಸೋನ್ರಾಕ್ ನದಿಯ ಮೇಲೆ ಮತ್ತೊಂದು ಸೇತುವೆ ಕಟ್ಟಲಾಗಿದೆ. ಪ್ರಯಾಣಕ್ಕೆ ಇಲ್ಲಿನ ಜನರು ಅವಲಂಬಿತರಾಗಿರುವುದು ರಿಕ್ಷಾಗಳ ಮೇಲೆಯೇ. ಭವನಾಥ್ ಎಂಬಲ್ಲಿ ಗಿರ್ನಾರ್ ಬೆಟ್ಟದ ಮೇಲಕ್ಕೇರಲು ಹಗ್ಗದಕಾರು ಏರ್ಪಾಟು ಇದೆ.

ಹಣಕಾಸು ಏರ್ಪಾಟು[ಬದಲಾಯಿಸಿ]

ಸುತ್ತಮುತ್ತ ಬೆಟ್ಟಗುಡ್ಡ, ಕಾಡುಗಳೇ ಇರುವುದರಿಂದ ಜುನಾಗಢದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲ. ಇರುವುದು ಲವಣಾಧರಿತ ಸಿಮೆಂಟು ಉದ್ಯಮ, ಕೃಷಿಯಾಧರಿತ ಉದ್ಯಮ ಹಾಗೂ ವಿದ್ಯುತ್ ಉತ್ಪಾದನೆ. ಅಗಾಧ ಪ್ರಮಾಣದ ಸುಣ್ಣದ ಗಣಿಗಳು ಇಲ್ಲಿದ್ದು ಸಿಮೆಂಟುಉದ್ಯಮಕ್ಕೆ ಪೂರಕವಾಗಿವೆ. ಇಲ್ಲಿ ಬೆಳೆಯುವ ಬೆಳೆಗಳು, ಗೋದಿ, ಎಣ್ಣೆ ಬೀಜಗಳು, ಹತ್ತಿ, ಮಾವು, ಬಾಳೆ, ಈರುಳ್ಳಿ ಮತ್ತು ಮೊಟ್ಟೆಬದನೆ. ೨೦೦೬-೨೦೦೭ರಲ್ಲಿ ಜುನಾಗಢದ ಒಟ್ಟು ಎಣ್ಣೆಬೀಜ ಉತ್ಪಾದನೆ ೪,೬೪,೪೦೦ ಮೆಟ್ರಿಕ್ ಟನ್ ಇತ್ತು.[೪೫] ಇದು ಇಡೀ ರಾಜ್ಯದಲ್ಲೇ ಅತಿ ಹೆಚ್ಚು. ಜುನಾಗಢವು ರಾಜ್ಯದಲ್ಲೇ ಹೆಚ್ಚು ನೆಲಗಡಲೆ ಮತ್ತು ಬೆಳ್ಳುಳ್ಳಿಯನ್ನು ಬೆಳೆಯುತ್ತದೆ. ಇದು ಒಟ್ಟು ಉತ್ಪಾದನೆಯ ಶೇ.೨೬ ಮತ್ತು ಶೇ. ೩೪ ಇದೆ. ಏಶಿಯಾದಲ್ಲೇ ಬೃಹತ್ತಾದ ನೆಲಗಡಲೆ ಸಂಶೋಧನೆ ಕೇಂದ್ರ ಜುನಾಗಢದಲ್ಲಿದೆ. ಮಾವು ಮತ್ತು ಈರುಳ್ಳಿಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಜುನಾಗಢದಲ್ಲಿನ ಭಾರೀ ಉದ್ಯಮಗಳೆಂದರೆ ಮದರ್ ಡೈರಿ ಫ್ರೂಟ್ ಅಂಡ್ ವೆಜಿಟಬಲ್ಸ್ ಪ್ರೈ.ಲಿ. (ಜುನಾಗಢ ಡೈರಿ ಎಂದೇ ಜನಜನಿತ), ಆಗ್ರೋ ಮೆರೈನ್ ಎಕ್ಸ್ಪೋರ್ಟ್ಸ್, ಕ್ರಿಯೆಟಿವ್ ಕ್ಯಾಸ್ಟಿಂಗ್ಸ್ ಲಿಮಿಟೆಡ್ ಹಾಗೂ ಆಸ್ಟಿನ್ ಇಂಜಿನಿಯರಿಂಗ್, ಸಿಮರ್ ಗ್ರಾಮದಲ್ಲಿ ೪೦೦೦ ಕೋಟಿರೂಪಾಯಿಗಳ ಬಂಡವಾಳದೊಂದಿಗೆ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಯೋಜನೆಗೆ ಜೆಎಸ್ಡಬ್ಲ್ಯು ಪವರ್ ಕಂಪೆನಿಯು ಕೈಹಾಕಿತಾದರೂ ರೇವು ನಿರ್ಮಾಣದಲ್ಲಿ ಸೋತ ಕಾರಣ ದಹೆಜ್ ಬಂದರಿನ ಬಳಿಗೆ ಎತ್ತಂಗಡಿಯಾಯಿತು.[೪೬] ಬಯೋಟೆಕ್ನಾಲಜಿಯನ್ನು ಉತ್ತೇಜಿಸಬೇಕೆನ್ನುವ ಸರ್ಕಾರದ ಹೊಸ ನೀತಿಯನ್ವಯ ಜುನಾಗಢವನ್ನು ಕೃಷಿ ಬಯೋಟೆಕ್ನಾಲಜಿ ವಲಯವೆಂದು ಗುರುತಿಸಲಾಗಿದೆ. ಪ್ರವಾಸೋದ್ಯಮದಲ್ಲಿಯೂ ಜುನಾಗಢವು ಪ್ರಮುಖವಾಗಿ ಗುರುತಿಸಿಕೊಂಡಿದೆ. ರಾಜ್ಯಸರ್ಕಾರವು ಜುನಾಗಢದಿಂದ ಪ್ರವಾಸಿ ಜಾಲ ಹೆಣೆಯಲು ಹಮ್ಮುಗೆ ಹಮ್ಮಿಕೊಂಡಿದೆ.[೪೭]

ಶಿಕ್ಷಣ[ಬದಲಾಯಿಸಿ]

ಹತ್ತಿರ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಜುನಾಗಢವು ಒಂದು ಶೈಕ್ಷಣಿಕ ಕೇಂದ್ರವಾಗಿದೆ. ಜುನಾಗಢದಲ್ಲಿ ಪುರಸಭೆಯ ವತಿಯಿಂದ ನಡೆಯುವ ಶಾಲೆಗಳೂ, ಖಾಸಗಿಯವರಿಂದ ನಡೆಯುವ ಶಾಲೆಗಳೂ ಇವೆ. ಕೆಲ ಖಾಸಗಿ ಶಾಲೆಗಳಿಗೆ ಸರ್ಕಾರದ ಹಣಕಾಸು ನೆರವು ಸಹ ದೊರೆಯುತ್ತದೆ. ಶಾಲೆಗಳು ಗುಜರಾತ್ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣಾ ಮಂಡಲಿಗೆ ಅಥವಾ ಕೇಂದ್ರೀಯ ಶಿಕ್ಷಣಾ ಮಂಡಲಿ ಅಥವಾ ಅಂತರಾಷ್ಟ್ರೀಯ ಪ್ರಮಾಣಿತ ಶಿಕ್ಷಣಾ ಮಂಡಲಿಗೆ ಜೋಡಣೆಯಾಗಿರುತ್ತವೆ. ಇಲ್ಲಿ ಇಂಗ್ಲಿಷು ಅಥವಾ ಗುಜರಾತಿ ನುಡಿಗಳು ಮುಖ್ಯ ಕಲಿಕಾ ಭಾಷೆಯಾಗಿರುತ್ತವೆ. ಈ ಪಟ್ಟಣವು ಜುನಾಗಢ ಕೃಷಿ ವಿಶ್ವವಿದ್ಯಾಲಯಕ್ಕೆ ಮನೆಯಾಗಿದೆ.

ಸಂಸ್ಕೃತಿ[ಬದಲಾಯಿಸಿ]

ಕ್ರಿಸ್ತಶಕ ೧೮೬೩ರಲ್ಲಿ ಸ್ಥಾಪಿತವಾದ ಜನಪ್ರಿಯ ಸಕ್ಕರಬಾಗ್ ಜೂ ಅಥವಾ ಸಕ್ಕರಬಾಗ್ ಜುವಲಾಜಿಕಲ್ ಗಾರ್ಡನ್ ಎಂಬ ಮೃಗಾಲಯವು ೨೧೦ ಎಕರೆ (೮೪ ಹೆಕ್ಟೇರು) ಗಳಲ್ಲಿ ಹರಡಿದ್ದು ಇದರಲ್ಲಿ ಸಂಕರಗೊಳ್ಳದ ಏಶಿಯನ್ ಸಿಂಹಗಳಿದ್ದು ಇಂಡಿಯಾದ ಮತ್ತು ಇತರ ದೇಶಗಳ ಅಳಿವಿನಂಚಿನ ತಳಿಗಳಿಗೆ ಬೋನಿನೊಳಗಿನ ಸಮಾಗಮವನ್ನು ಏರ್ಪಡಿಸುತ್ತದೆ. ಇದೇ ಮೃಗಾಲಯದಲ್ಲಿ ಕೆಲವರ್ಷಗಳ ಹಿಂದೆ ಆಫ್ರಿಕಾದಿಂದ ಚೀತಾಗಳನ್ನು ತಂದು ಬಿಡಲಾಗಿತ್ತು.[೪೮] ಈ ಮೃಗಾಲಯದಲ್ಲಿ ನೈಸರ್ಗಿಕ ಚರಿತ್ರೆಯನ್ನು ಅರುಹಬಲ್ಲ ವಸ್ತುಸಂಗ್ರಹಾಲಯ ಇದೆ. ಬಾಬಿ ನವಾಬರು, ವಿಲಭಿಯರು, ಕ್ಷತ್ರಪರು, ಮೌರ್ಯರು, ಚುರಾಸಮರು, ಗುಜರಾತ್ ಸುಲ್ತಾನರು ಮುಂತಾದ ರಾಜವಂಶಗಳು ಜುನಾಗಢವನ್ನು ಆಳಿ ಅವರ ಧಾರ್ಮಿಕ ದೃಷ್ಟಿಕೋನಗಳು ಇಲ್ಲಿನ ವಾಸ್ತುಕಲೆಯಲ್ಲಿ ಬಿಂಬಿತವಾಗಿದೆ.

ಊಪರ್ ಕೋಟ್ ಕೋಟೆಯಲ್ಲಿನ ಬೌದ್ಧ ಗುಹೆಗಳು

ಜುನಾಗಢ ಬೌದ್ಧ ಗುಹೆಗಳು ಮತ್ತವುಗಳ ಸುಂದರ ಬಾಗಿಲವಾಡಗಳು, ಚೈತ್ಯಗಳು, ಕಲಾತ್ಮಕ ಕಂಬಗಳು ಮತ್ತು ಪೂಜಾತಾಣಗಳು ಶಿಲ್ಪಕಲಾವೈಭವಕ್ಕೆ ಸಾಕ್ಷಿಗಳಾಗಿವೆ. ಚುರಾಮ ರಜಪೂತರು ನವಘನ ಮೆಟ್ಟಿಲಬಾವಿ, ಅಡಿಕಡಿ ಮೆಟ್ಟಿಲಬಾವಿಗಳನ್ನು ಕೊರೆಯಿಸುವ ಮೂಲಕ ತಮ್ಮ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಜಾಮಿ ಮಸೀದಿಯು ಮುಸ್ಲಿಂ ಶಿಲ್ಪಕಲೆಯನ್ನು ನೆನಪಿಸುತ್ತದೆ. ಅಶೋಕ ಕಲ್ಬರಹಗಳು ಪುರಾತನ ಶಿಲಾಶಾಸನಗಳಿಗೆ ತಕ್ಕ ಉದಾಹರಣೆಗಳಾಗಿವೆ. ಮಖಬಾರಾಗಳೂ ಎಣಿಸಲಾಗದ ಹಳೆಯ ಅರಮನೆಗಳೂ ಜುನಾಗಢದ ಶ್ರೀಮಂತ ಇತಿಹಾಸವನ್ನೂ ಆ ಕಾಲದ ವಾಸ್ತುಶಿಲ್ಪವನ್ನೂ ಕಣ್ಣಿಗೆ ಕಟ್ಟುತ್ತವೆ.[೪೯] ಜುನಾಗಢದಿಂದ ಸುಮಾರು ಎರಡು ಕಿಲೊಮೀಟರು 2 kilometres (1.2 mi) ಮೂಡಣದಲ್ಲಿ ಅಂದರೆ ಗಿರನಾರ್ ಬೆಟ್ಟಕ್ಕೆ ಸುಮಾರು ಮೂರು ಕಿಲೊಮೀಟರು 3 kilometres (1.9 mi) ಪಡುವಣದಲ್ಲಿ ಅಶೋಕನ ಕಲ್ಬರಹವಿದ್ದು, ಸಮತಟ್ಟಾಗಿಲ್ಲದ ಬಂಡೆಯ ಮೇಲೆ ಕ್ರಿಸ್ತಪೂರ್ವ ೩ನೇ ಶತಮಾನದಲ್ಲಿ ಕೆತ್ತಿದ ಬರಹಗಳಿವೆ. ಅವುಗಳಲ್ಲಿ ನೀತಿಬೋಧೆಯಿದ್ದು ಧರ್ಮ, ಸೌಹಾರ್ದ, ಸಹನೆ ಮತ್ತು ಶಾಂತಿಗಳನ್ನು ಎತ್ತಿಹಿಡಿಯಲಾಗಿದೆ. ಈ ಬಂಡೆಯು ಏಳು ಮೀಟರು ಸುತ್ತಳತೆ seven metres (23 ft) ಹೊಂದಿದ್ದು, ಎತ್ತರ ಹತ್ತು ಮೀಟರು ten metres (33 ft)ಇದೆ, ಅದರ ಮೇಲೆ ಅಶೋಕಲಿಪಿಯನ್ನು ಉಳಿಯಿಂದ ಕೆತ್ತಲಾಗಿದೆ.[೫೦] ಜುನಾಗಢದ ಜನರು ಇಂಡಿಯಾದ ಹಬ್ಬಗಳ ಜೊತೆಗೆ ಪಾಶ್ಚಿಮಾತ್ಯ ಹಬ್ಬಗಳನ್ನೂ ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿ, ಮಹಾಶಿವರಾತ್ರಿ, ಹೋಳಿ, ಜನ್ಮಾಷ್ಟಮಿ, ಮುಹರಮ್, ನವರಾತ್ರಿ, ಕ್ರಿಸ್ಮಸ್, ಗುಡ್ ಫ್ರೈಡೇ, ದಸರಾ ಮತ್ತು ಗಣೇಶಚತುರ್ಥಿಗಳು ಈ ಪಟ್ಟಣದ ಜನಪ್ರಿಯ ಹಬ್ಬಗಳು.[೫೧] ಶಿವರಾತ್ರಿ ಮೇಳವನ್ನು ಗಿರ್ನಾರ್ ಬೆಟ್ಟದ ತಪ್ಪಲಿನಲ್ಲಿ ಆಚರಿಸಲಾಗುತ್ತದೆ. ಈ ಮೇಳವು ಆರು ದಿನಗಳ ಕಾಲ ನಡೆಯುತ್ತದೆ. ಸುಮಾರು ಐದುಲಕ್ಷ ಜನರು ಇದರಲ್ಲಿ ಪಾಲುಗೊಳ್ಳುತ್ತಾರೆ.[೫೨] ವರ್ಷಕ್ಕೊಮ್ಮೆ ಸುಮಾರು ೩೨ ಕಿಲೊಮೀಟರು 32 kilometres (20 mi)) ಸುತ್ತಳತೆಯ ಇಡೀ ಗಿರನಾರ್ ಬೆಟ್ಟವನ್ನು ಕಾಲುನಡಿಗೆಯಲ್ಲಿ ಸುತ್ತುಹಾಕುವ ಪರಿಕ್ರಮ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಡೆಯುವ ಈ ಆಚರಣೆಯಲ್ಲಿ ಸುಮಾರು ಹತ್ತುಲಕ್ಷ ಮಂದಿ ಭಾಗವಹಿಸುತ್ತಾರೆ. ಮುಹರಮ್ ಹಬ್ಬವನ್ನು ಮುಸಲ್ಮಾನರು ಆಚರಿಸುತ್ತಾರೆ. ನವಾಬರ ಗುರುಗಳಾದ ಪೀರ್ ಗಳು ಬಳಸಿದ್ದ ಮಂಚಗಳನ್ನು ಹೊರತೆಗೆದು ಹಬ್ಬ ಮಾಡುತ್ತಾರೆ. ಈ ಎಲ್ಲ ಧಾರ್ಮಿಕ ಹಬ್ಬಗಳಲ್ಲದೆ ಇತರ ರಾಷ್ಟ್ರೀಯ ದಿನಗಳನ್ನೂ ಆಚರಿಸಲಾಗುತ್ತದೆ. ಜುನಾಗಢವು ಇಂಡಿಯಾಕ್ಕೆ ಸೇರ್ಪಡೆಯಾದ ೧೯೪೭ ನವೆಂಬರ್ ೯ ಇಲ್ಲಿನವರಿಗೆ ಸ್ಮರಣೀಯ ದಿನ, ಪ್ರತಿವರ್ಷ ನವೆಂಬರ್ ೯ರಂದು ಅವರು ಜುನಾಗಢ ಸ್ವಾತಂತ್ರ್ಯ ದಿನವೆಂದು ಆಚರಿಸುತ್ತಾರೆ.[೫೩] ಅದೇ ರೀತಿ ಮೇ ೧ ಅನ್ನು ಗುಜರಾತ್ ದಿನವೆಂದು ಆಚರಿಸುತ್ತಾರೆ, ಏಕೆಂದರೆ ೧೯೬೦ ಮೇ ಒಂದರಂದು ಗುಜರಾತನ್ನು ರಾಜ್ಯವಾಗಿ ಪರಿಗಣಿಸಲಾಯಿತು.[೫೪]

ಹೆಸರುವಾಸಿಗಳು[ಬದಲಾಯಿಸಿ]

ಇನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Junagadh Gets New Mayor, Deputy Mayor, Other Office Holders". DeshGujarat. 31 ಜನವರಿ 2022. Retrieved 2 ಫೆಬ್ರವರಿ 2022.
  2. ೨.೦ ೨.೧ ೨.೨ ೨.೩ "Junagadh City Population Census 2011 | Gujarat". www.census2011.co.in. Retrieved 23 ಅಕ್ಟೋಬರ್ 2017.
  3. Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 179.
  4. MUSHTAQ ALI SHAH (2014). Mystic Melodies: Shah Abdul Latif Bhittai. Bloomington,IN,US: Author House. ISBN 9781496996060.
  5. K. V. Soundara Rajan; Archaeological Survey of India (1985). Junagadh. Archaeological Survey of India. Retrieved 30 ಜೂನ್ 2011.
  6. M1 Ranchodji Amarji, Târikh-i-Soraṭh: A History of the Provinces of Soraṭh and Hâlâr in Kâthiâwâd, pp. 36–46, Trubner & Co. (1882) – translation of the edicts.
  7. "Junagadh Rock Inscription of Rudradaman", Project South Asia. Archived 23 February 2009 ವೇಬ್ಯಾಕ್ ಮೆಷಿನ್ ನಲ್ಲಿ.
  8. |Meaning, that is not very short. Quoted from D.D. Kosambi in Keay, John, India, a History, p. 132, 2000, HarperCollins, ISBN 0002557177
  9. "ગિરનાર ઇતિહાસ | Rahasya" (in ಅಮೆರಿಕನ್ ಇಂಗ್ಲಿಷ್). Archived from the original on 12 ಮೇ 2021. Retrieved 20 ಮಾರ್ಚ್ 2021.
  10. Williams, Raymond Brady; Trivedi, Yogi (2016). Swaminarayan Hinduism: Tradition, Adaptation, and Identity (in ಇಂಗ್ಲಿಷ್). New Delhi, India: Oxford University Press. ISBN 978-0-19-908959-8. Retrieved 14 ಏಪ್ರಿಲ್ 2023. The most famous leader of the Khant Kolis was Jesa or Jesing, who helped Muhammad bin Tughluq capture Junagadh (1350) from Ra Khengar. In return for this, the sultan is said to have bestowed on the Khants the hill of Girnar and the twenty-four villages of Bilkha chovisi.
  11. "Gujarat, Malwa and Khandesh". The Cambridge Shorter History of India. Cambridge: Cambridge University Press. 1934. pp. 307–308. Retrieved 21 ಮೇ 2012.
  12. Gupta, R. K.; Bakshi, S. R., eds. (2008). Studies in Indian History: Rajasthan Through The Ages: Marwar and British Administration. Vol. 5. New Delhi: Sarup & Sons. pp. 22–23. ISBN 978-8-17625-841-8. Retrieved 21 ಮೇ 2012.
  13. Ward (1 ಜನವರಿ 1998). Gujarat–Daman–Diu: A Travel Guide (in ಇಂಗ್ಲಿಷ್). Orient Longman Limited. ISBN 9788125013839.
  14. Jha, Saurav; Roy, Devapriya (15 ಮೇ 2015). The Heat and Dust Project: The Broke Couple's Guide to Bharat (in ಅರೇಬಿಕ್). HarperCollins India. ISBN 9789351367505.
  15. ೧೫.೦ ೧೫.೧ ೧೫.೨ ೧೫.೩ ೧೫.೪ Watson, James W., ed. (1884). Gazetteer of the Bombay Presidency : Kathiawar. Vol. VIII. Bombay: Government Central Press. pp. 489–502. ಟೆಂಪ್ಲೇಟು:PD-notice
  16. "Junagadh Princely State (13 gun salute)". Archived from the original on 20 ಮೇ 2017. Retrieved 24 ಏಪ್ರಿಲ್ 2015.
  17. Nawabs of Junagadh Archived 9 February 2012 ವೇಬ್ಯಾಕ್ ಮೆಷಿನ್ ನಲ್ಲಿ. British Library.
  18. Desai, Shambhuprasad Harprasd (1990). Saurashtrano Itihas. pp. 746–748.
  19. Williams, Raymond (2001). An Introduction To Swaminarayan Hinduism. United Kingdom: Cambridge University Press. pp. 38. ISBN 0-521-65422-X.
  20. Ishwarcharandas, Sadhu (2007). Aksharbrahma Gunatitanand Swami. Ahmedabad: Swaminarayan Aksharpith. p. 94. ISBN 978-81-7526-302-4.
  21. Lumby 1954, pp. 237–238
  22. Lumby 1954, p. 238
  23. "Letter Inviting India to Intervene". Archived from the original on 26 ಮಾರ್ಚ್ 2012. Retrieved 16 ಅಕ್ಟೋಬರ್ 2011.
  24. Lumby 1954, pp. 238–239
  25. Furber, Holden (ಡಿಸೆಂಬರ್ 1951). "The Unification of India, 1947–1951". Pacific Affairs. 24 (4): 359. doi:10.2307/2753451. JSTOR 2753451.
  26. "After Nepal, Pakistan unveils new political map; Jammu & Kashmir and Ladakh claimed, India retorts". Himalayan Times. 4 ಆಗಸ್ಟ್ 2020. Retrieved 4 ಆಗಸ್ಟ್ 2020.
  27. Siddiqui, Naveed (4 ಆಗಸ್ಟ್ 2020). "In landmark move, PM Imran unveils 'new political map' of Pakistan". Dawn. Retrieved 5 ಆಗಸ್ಟ್ 2020.
  28. Soszynski, Henry (23 ಜನವರಿ 2018). "Junagadh (Princely State) – (13 gun salute)". Indian Princely States. Archived from the original on 20 ಮೇ 2017. Retrieved 14 ಸೆಪ್ಟೆಂಬರ್ 2019.
  29. "History of Junagadh". Archived from the original on 25 ಏಪ್ರಿಲ್ 2012. Retrieved 22 ಜೂನ್ 2010.
  30. "Junagadh District Profile" (PDF). Government of Gujarat. Archived from the original (PDF) on 15 ಡಿಸೆಂಬರ್ 2011. Retrieved 17 ಅಕ್ಟೋಬರ್ 2011.
  31. "Junagadh weather maximum temperature in 2012 was 47 degrees Celsius and minimum recorded was 1 degree". Maps of India. Retrieved 16 ಅಕ್ಟೋಬರ್ 2011.
  32. "Annual weather report" (PDF). Junagadh Agriculture University. Archived from the original (PDF) on 19 ಆಗಸ್ಟ್ 2014. Retrieved 16 ಅಕ್ಟೋಬರ್ 2011.
  33. "Climate Data for Junagadh". Retrieved 7 ಏಪ್ರಿಲ್ 2013.
  34. "Housing and Slums". Engineering Works. Archived from the original on 11 ಮೇ 2016. Retrieved 17 ಅಕ್ಟೋಬರ್ 2011.
  35. "Junagadh City Census 2011 data". Census 2011. Retrieved 14 ಸೆಪ್ಟೆಂಬರ್ 2019.
  36. "Brief Profile of PTG Communities in Gujarat" (PDF). Archived from the original (PDF) on 16 ಮೇ 2013. Retrieved 20 ಅಕ್ಟೋಬರ್ 2011.
  37. "African Settlements in India" (PDF). Abdulaziz Y. Lodhi, Uppsala University, Sweden. Archived from the original (PDF) on 22 ಏಪ್ರಿಲ್ 2018. Retrieved 17 ಅಕ್ಟೋಬರ್ 2011.
  38. "Shree Swaminarayan Mandir". Shree Swaminarayan Mandir, Junagadh.
  39. Statistical Report on General Election, 2007, to the Legislative Assembly of Gujarat (Report). Election Commission of India. 2006. http://eci.nic.in/eci_main/StatisticalReports/SE_2007/StatReport_DEC_2007_GUJARAT_after_IC.pdf. Retrieved 8 September 2019. 
  40. "Municipal Corporation Elections: July 2009" (PDF). Election Commission of Gujarat. Archived from the original (PDF) on 4 ಏಪ್ರಿಲ್ 2016. Retrieved 31 ಆಗಸ್ಟ್ 2023.
  41. "Water works". Water works department, Junagadh. Archived from the original on 11 ಮೇ 2016. Retrieved 31 ಆಗಸ್ಟ್ 2023.
  42. "Solid waste management". Junagadh Municipal Corporation. Archived from the original on 11 ಮೇ 2016. Retrieved 31 ಆಗಸ್ಟ್ 2023.
  43. "Drainage system". JMC. Archived from the original on 12 ಮೇ 2016. Retrieved 31 ಆಗಸ್ಟ್ 2023.
  44. "Street Lights". Junagadh Municipal Corporation. Archived from the original on 11 ಮೇ 2016. Retrieved 31 ಆಗಸ್ಟ್ 2023.
  45. "Junagadh District Profile, Agriculture" (PDF). Government of Gujarat. Archived from the original (PDF) on 15 ಡಿಸೆಂಬರ್ 2011. Retrieved 17 ಅಕ್ಟೋಬರ್ 2011.
  46. "Spotlight to be on energy sector". The Times of India. 11 ಜನವರಿ 2005. Archived from the original on 12 ಮೇ 2013.
  47. "Junagadh District Profile, Tourism" (PDF). Government of Gujarat. Archived from the original (PDF) on 15 ಡಿಸೆಂಬರ್ 2011. Retrieved 17 ಅಕ್ಟೋಬರ್ 2011.
  48. "Cheetahs". Junagadh city district news. 3 ಫೆಬ್ರವರಿ 2010.
  49. "Junagadh Architecture". Maps of India.
  50. Keay, John (2000). India: A History. New York: Grove Press. pp. 129–131. ISBN 0-8021-3797-0.
  51. "Festivals celebrated in Gujarat". Gujarat state Tourism.
  52. "Shivaratri Fair". Festivals of India. Archived from the original on 1 ಏಪ್ರಿಲ್ 2018. Retrieved 31 ಆಗಸ್ಟ್ 2023.
  53. "Junagadh City District Independence day November 9, 1947(Junagadh Aazad Din-Divas)". Historical Junagadh. 12 ನವೆಂಬರ್ 2009.
  54. "Parlianmentary Details". Archived from the original on 4 ಮಾರ್ಚ್ 2016. Retrieved 18 ಅಕ್ಟೋಬರ್ 2011.
  55. Mandal, Bindeshwar Prasad (2021). A Handbook of Sociology (in ಇಂಗ್ಲಿಷ್). New Delhi, India: K.K. Publications. p. 255. Retrieved 14 ಏಪ್ರಿಲ್ 2023.

ಹೊರಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜುನಾಗಢ]]

ಟೆಂಪ್ಲೇಟು:Gujarat

"https://kn.wikipedia.org/w/index.php?title=ಜುನಾಗಢ&oldid=1189359" ಇಂದ ಪಡೆಯಲ್ಪಟ್ಟಿದೆ