ಚಂದ್ರಯಾನ-೧
Operator | Indian Space Research Organisation |
---|---|
Mission type | Orbiter |
Launch date | 22 October 2008 00:52 UTC |
Launch vehicle | PSLV-C11[೧] |
Launch site | SDSC, Sriharikota |
Mission duration | Intended: 2 years Achieved: 312 days |
Satellite of | Moon |
Orbital insertion date | 12 November 2008 |
Orbits | 3400 orbits around the Moon.[೨] |
COSPAR ID | 2008-052A |
Homepage | Chandrayaan-1 |
Mass | 523 kg (1,153 lb) |
Orbital elements | |
Eccentricity | near circular |
Inclination | polar |
Apoapsis | initial 7,500 km (4,660 mi), final 100 km (62 mi), final (wef 19 May 2009) 200 km (124 mi) |
Periapsis | initial 500 km (311 mi), final 100 km (62 mi), final (wef 19 May 2009) 200 km (124 mi) |
'ಚಂದ್ರಯಾನ-1 ಎಂದರೆ ವಾಚ್ಯಾರ್ಥವಾಗಿ ಚಂದ್ರನ ಮೇಲೆ ಪ್ರಯಾಣಿಸುವ, ಅಥವಾ ಚಂದ್ರ ವಾಹನ [೩][೪] pronunciation (ಸಹಾಯ·ಮಾಹಿತಿ). ಇದು ಭಾರತದ ಮೊಟ್ಟಮೊದಲ ಮಾನವರಹಿತ ಚಂದ್ರ ಶೋಧಕ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಇದನ್ನು ಅಕ್ಟೋಬರ್ 2008ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್ 2009ರ ತನಕ ಕಾರ್ಯನಿರ್ವಹಿಸಿತ್ತು. ಈ ಯಾತ್ರೆಯಲ್ಲಿ ಚಂದ್ರನ ಉಪಗ್ರಹ ಮತ್ತು ಒಂದು ಇಂಪ್ಯಾಕ್ಟರ್ ಸಹ ಸೇರಿದ್ದವು. PSLVಯ ನವೀಕೃತ ಆವೃತ್ತಿಯಾದ PSLV C11[೧][೫] ಮೂಲಕ ಗಗನನೌಕೆಯನ್ನು 22 ಅಕ್ಟೋಬರ್ 2008ರಂದು 06:22 IST ಸಮಯದಲ್ಲಿ (00:52 UTC) ಉಡಾಯಿಸಲಾಯಿತು.[೬] ಚೆನ್ನೈನಿಂದ 80 ಕಿಮೀ ಉತ್ತರದಲ್ಲಿರುವ, ಆಂಧ್ರ ಪ್ರದೇಶದನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ಚಂದ್ರನ ನೆಲವನ್ನು ಶೋಧಿಸಲು ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು.[೭] 8 ನವೆಂಬರ್ 2008ರಂದು ಚಂದ್ರಯಾನಕ್ಕೆ ತೆರಳಿದ ವಾಹನವನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು.[೮]'
14 ನವೆಂಬರ್ 2008ರಂದು 20:06 IST ಸಮಯಕ್ಕೆ,ಮೂನ್ ಇಂಪ್ಯಾಕ್ಟ್ ಪ್ರೋಬ್(ಚಂದ್ರನಿಗೆ ಘರ್ಷಿಸುವ ಶೋಧಕ) ಚಂದ್ರಯಾನ ಉಪಗ್ರಹದಿಂದ ಪ್ರತ್ಯೇಕವಾಗಿ ನಿಯಂತ್ರಿತ ರೀತಿಯಲ್ಲಿ ದಕ್ಷಿಣ ಧ್ರುವಕ್ಕೆ ಬಡಿಯಿತು. ಹಾಗಾಗಿ, ಭಾರತವು ಚಂದ್ರನ ಮೇಲೆ ತನ್ನ ಧ್ವಜ ನೆಡುವ ನಾಲ್ಕನೆಯ ದೇಶವಾಯಿತು.[೯] ಸಮಯ 20:31ಕ್ಕೆ ಪ್ರೋಬ್ ಷ್ಯಾಕ್ಲ್‌ಟನ್ ಕಂದಕ ಬಳಿ ಬಡಿದು, ಚಂದ್ರನ ನೆಲಗರ್ಭದಿಂದ ಮಣ್ಣಿನ ಧೂಳೆಬ್ಬಿಸಿತು. ಚಂದ್ರನಲ್ಲಿ ಘನೀಕೃತ ನೀರಿನ ಉಪಸ್ಥಿತಿಯನ್ನು ಪತ್ತೆಹಚ್ಚಲು ಇದನ್ನು ವಿಶ್ಲೇಷಿಸಬಹುದಾಗಿದೆ.[೧೦]
ಈ ಯೋಜನೆಯ ಅಂದಾಜು ವೆಚ್ಚ ₹೩೮೬ ಕೋಟಿ (ಯುಎಸ್$೯೦ ದಶಲಕ್ಷ).[೧೧]
ದೂರ ಸಂವೇದಿ ಚಂದ್ರ ಉಪಗ್ರಹವು ಉಡ್ಡಯನದ ಸಮಯದಲ್ಲಿ 1,380 ಕಿಲೋಗ್ರಾಂನಷ್ಟು (3,042 lb)1,380 kilograms (3,042 lb)ತೂಕವನ್ನು ಹೊಂದಿತ್ತು ಹಾಗೂ ಚಂದ್ರನ ಕಕ್ಷೆಯಲ್ಲಿ 675 ಕಿಲೋಗ್ರಾಂ (1,488 lb)675 kilograms (1,488 lb)ತೂಕ ಹೊಂದಿತ್ತು.[೧೨] ಇದು ಅಧಿಕ ಸ್ಪಷ್ಟತೆಯ ದೂರಸಂವೇದಿ ಉಪಕರಣವನ್ನು ದೃಷ್ಟಿಗೋಚರತೆಗೆ ಹಾಗೂ ನಿಯರ್ ಇನ್ಫ್ರಾರೆಡ್ ಹಾಗೂ ಮೃದು ಮತ್ತು ಕಠಿಣ ಕ್ಷಕಿರಣ ತರಂಗಾಂತರಗಳನ್ನು ಹೊಂದಿತ್ತು. ಎರಡು ವರ್ಷಗಳ ಕಾಲಾವಧಿಯಲ್ಲಿ, ಚಂದ್ರನ ಮೇಲ್ಮೈಯ ಸರ್ವೇಕ್ಷಣೆ ನಡೆಸಿ, ಅದರ ರಾಸಾಯನಿಕ ಗುಣಗಳು ಹಾಗೂ ಮೂರು ಆಯಾಮಗಳ ಪ್ರದೇಶದ ಸಂಪೂರ್ಣ ನಕ್ಷೆಯನ್ನು ತಯಾರಿಸುವ ಉದ್ದೇಶವಿತ್ತು. ಧ್ರುವ ವಲಯಗಳಲ್ಲಿ ನೀರ್ಗಲ್ಲು ಇರಬಹುದೆಂಬ ಕಾರಣ ಅವು ವಿಶೇಷ ರೀತಿಯಲ್ಲಿ ಗಮನ ಸೆಳೆಯವಂತಹದ್ದಾಗಿತ್ತು.[೧೩]
ಚಂದ್ರ ಅಭಿಯಾನದಲ್ಲಿ ISROದ ಐದು ಉಪಕರಣಗಳು, ಹಾಗೂ, ನಾಸಾ, ESA ಮತ್ತು ಬಲ್ಗಾರಿಯನ್ ಏರೊಸ್ಪೇಸ್ ಏಜೆನ್ಸಿ ಸೇರಿದಂತೆ ಇತರೆ ಬಾಹ್ಯಾಕಾಶ ಸಂಸ್ಥೆಗಳಿಂದ ಆರು ಉಪಕರಣಗಳನ್ನು ಉಚಿತವಾಗಿ ಒಯ್ಯಲಾಯಿತು.[೧೪]
ಸ್ಟಾರ್ ಸಂವೇದಕಗಳ ವೈಫಲ್ಯ ಹಾಗೂ ಬಹಳ ಕಳಪೆ ಮಟ್ಟದ ಉಷ್ಣತಾ ರಕ್ಷಣಾ ಕವಚ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳಿಗೆ ಈಡಾದ ಚಂದ್ರಯಾನವು, 29 ಆಗಸ್ಟ್ 2009ರಂದು 01:30 IST ಸಮಯಕ್ಕೆ ಸಂಪೂರ್ಣವಾಗಿ ವಿಫಲಗೊಂಡು ಯಾವುದೇ ರೇಡಿಯೊ ಸಂಕೇತಗಳನ್ನು ರವಾನಿಸುವುದನ್ನು ನಿಲ್ಲಿಸಿತು. ಕೂಡಲೇ ISRO ಅಧಿಕೃತವಾಗಿ ಈ ಯಾತ್ರೆಯು ಅಂತ್ಯಗೊಂಡಿತೆಂದು ಘೋಷಿಸಿತು. ಉದ್ದೇಶಿತ ಎರಡು ವರ್ಷಗಳ ಬದಲಿಗೆ ಚಂದ್ರಯಾನ ಕೇವಲ 312 ದಿನಗಳ ಕಾಲ ಕಾರ್ಯನಿರ್ವಹಿಸಿದರೂ ಸಹ, ತನ್ನ ಯೋಜಿತ ಉದ್ದೇಶಗಳ ಪೈಕಿ 95%ರಷ್ಟನ್ನು ಸಾಧಿಸಿತು.[೨][೧೫][೧೬][೧೭] ಇದರ ಮಹತ್ವದ ಸಾಧನೆಗಳ ಪೈಕಿ ಚಂದ್ರನ ನೆಲದಲ್ಲಿ ನೀರಿನ ಕಣಗಳ ವ್ಯಾಪಕ ಉಪಸ್ಥಿತಿಯನ್ನು ಶೋಧಿಸಿದ್ದು ಸಹ ಒಂದಾಗಿದೆ.[೧೮]
ಧ್ಯೇಯಗಳು
[ಬದಲಾಯಿಸಿ]ಚಂದ್ರಯಾನ ಯೋಜನೆಯ ವೈಜ್ಞಾನಿಕ ಧ್ಯೇಯಗಳು ಕೆಳಕಂಡಂತಿದ್ದವು:[೧೯]
- ಭಾರತದಲ್ಲೇ ನಿರ್ಮಿಸಿದ ಉಡ್ಡಯನ ವಾಹನ ಬಳಸಿಕೊಂಡು,ಬಾಹ್ಯಾಕಾಶ ನೌಕೆಯೊಂದರ ವಿನ್ಯಾಸ, ಅಭಿವೃದ್ಧಿ, ಉಡ್ಡಯನ ಮತ್ತು ಚಂದ್ರನ ಸುತ್ತಲಿರುವ ಕಕ್ಷೆಯಲ್ಲಿ ಅಳವಡಿಸುವುದು.
- ಬಾಹ್ಯಾಕಾಶ ನೌಕೆಯಲ್ಲಿರುವ ಉಪಕರಣಗಳನ್ನು ಬಳಸಿಕೊಂಡು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ, ಕೆಳ ದತ್ತಾಂಶವನ್ನು ಪಡೆಯಬಹುದಾಗಿದೆ:
- ಎರಡೂ ಹತ್ತಿರದ ಮತ್ತು ದೂರದ ಚಂದ್ರನ ಬದಿಯ ಮೂರು ಆಯಾಮಗಳ ನಕ್ಷೆಯನ್ನು ತಯಾರಿಸುವುದು.(5–10 m ಅಧಿಕ ಸ್ಥಳವಿಸ್ತಾರದ ಮತ್ತು ಎತ್ತರದ ಸ್ಫುಟತೆಯೊಂದಿಗೆ)
- ಹೆಚ್ಚಿನ ಸ್ಥಳ ವಿಸ್ತಾರದ ಸ್ಪುಟತೆಯಲ್ಲಿ, ಇಡೀ ಚಂದ್ರನ ಮೇಲ್ಮೈಯ ರಾಸಾಯನಿಕ ಮತ್ತು ಖನಿಜದ ಮಾಪನ ಮಾಡುವುದು. ಅದರಲ್ಲೂ ವಿಶಿಷ್ಟವಾಗಿ ಮ್ಯಾಗ್ನೀಸಿಯಮ್, ಅಲ್ಯುಮಿನಿಯಮ್, ಸಿಲಿಕಾನ್, ಕ್ಯಾಲ್ಸಿಯಮ್, ಕಬ್ಬಿಣ, ಟೈಟೇನಿಯಮ್, ರೆಡಾನ್, ಯುರೇನಿಯಮ್ ಹಾಗೂ ತೋರಿಯಮ್ ರಾಸಾಯನಿಕಗಳ ನಿಕ್ಷೇಪಗಳ ಮಾಪನ ನಡೆಸುವುದು.
- ವೈಜ್ಞಾನಿಕ ಜ್ಞಾನ ಹೆಚ್ಚಿಸಿಕೊಳ್ಳುವುದು
- ಮುಂದಿನ ಚಂದ್ರ ಯಾತ್ರೆಗಳು ಸುಸೂತ್ರವಾಗಿ ಇಳಿಯಲು ಮುನ್ಸೂಚಕ ರೂಪದಲ್ಲಿ, ಉಪ-ಉಪಗ್ರಹವನ್ನು ಡಿಕ್ಕಿಹೊಡೆಸುವುದು (ಮೂನ್ ಇಂಪ್ಯಾಕ್ಟ್ ಪ್ರೋಬ್ - MIP)
ನಿರ್ದಿಷ್ಟ ವಿವರಣೆಗಳು
[ಬದಲಾಯಿಸಿ]- ತೂಕ
- ಉಡ್ಡಯನದ ಸಮಯದಲ್ಲಿ 1,380 ಕಿಲೊಗ್ರಾಮ್‌ಗಳು, ಚಂದ್ರನ ಕಕ್ಷೆಯಲ್ಲಿ 675 ಕಿಲೊಗ್ರಾಮ್‌ಗಳು,[೨೦] ಇಂಪ್ಯಾಕ್ಟರ್ ಬಿಡುಗಡೆಗೊಳಿಸಿದ ನಂತರ 523 ಕಿಲೊಗ್ರಾಮ್‌ಗಳು.
- ಆಯಾಮಗಳು
- ಕ್ಯೂಬಾಯ್ಡ್ ಆಕೃತಿ, ಸುಮಾರು 1.5 ಮೀಟರ್
- ಸಂವಹನಗಳು
- ಉಪಕರಣ ದತ್ತಾಂಶ ರವಾನೆಗಾಗಿ X ಬ್ಯಾಂಡ್, 0.7 ಮೀಟರ್ ವ್ಯಾಸದ ಎರಡು ಗಿಂಬಾಲ್ಡ್ ಪ್ಯಾರಾಬೊಲಿಕ್ ಆಂಟೆನಾ.
ಟೆಲಿಮಿಟ್ರಿ, ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ (TTC) ಸಂವಹನವು S ಬ್ಯಾಂಡ್ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ.
- ವಿದ್ಯುತ್ ಪೂರೈಕೆ
- ಬಾಹ್ಯಾಕಾಶ ನೌಕೆಯು ತನ್ನ ಸೌರ ವ್ಯವಸ್ಥೆಯ ಮೂಲಕ ವಿದ್ಯುತ್ ಪಡೆಯುತ್ತದೆ. ಇದು 2.5 ಮೀಟರ್ x 1.8 ಮೀಟರ್ ಒಟ್ಟು ಅಳತೆಯ ಸೌರ ಫಲಕ ಹೊಂದಿರುತ್ತದೆ. ಇದು 750 Wರಷ್ಟು ಗರಿಷ್ಠ ವಿದ್ಯುತ್ ನೀಡುತ್ತದೆ. ಇದನ್ನು 36 A·h ಲಿತಿಯಮ್-ಅಯಾನ್ ವಿದ್ಯುತ್ಕೋಶಗಳಲ್ಲಿ ಶೇಖರಿಸಲಾಗುತ್ತದೆ, ಗ್ರಹಣಗಳು ಸಂಭವಿಸುವ ಸಮಯ ಈ ಫಲಕಗಳಲ್ಲಿರುವ ವಿದ್ಯುತ್ತನ್ನು ಬಳಸಲಾಗುತ್ತದೆ.[೨೧]
- ಪ್ರೇರಕ ಶಕ್ತಿ
- ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ಮುಟ್ಟಲು ಹಾಗೂ ಚಂದ್ರನ ಸುತ್ತ ಪರಿಭ್ರಮಣದಲ್ಲಿ ಕಕ್ಷೆ ಮತ್ತು ಎತ್ತರವನ್ನು ಕಾಯ್ದುಕೊಳ್ಳಲು ಧ್ರವೀಕೃತ ಇಂಧನದ ರಾಕೆಟ್ ಸಂಯೋಜಿತ ಮುನ್ನೂಕುವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ವಿದ್ಯುತ್ ಪೂರೈಕೆಯ ಘಟಕವು ಒಂದು 440 N ಇಂಜಿನ್ ಹಾಗೂ ಎಂಟು 22 N ಥ್ರಸ್ಟರ್‌ಗಳನ್ನು ಹೊಂದಿರುತ್ತದೆ. ಇಂಧನ ಮತ್ತು ಅಕ್ಸಿಡೈಸರ್ 390 ಲೀಟರ್‌ಗಳ ಎರಡು ಟ್ಯಾಂಕ್‌ಗಳಲ್ಲಿ ಶೇಖರಿಸಲಾಗುತ್ತದೆ.[೨೦][೨೧]
- ನೌಕಾಗತಿ ಮತ್ತು ನಿಯಂತ್ರಣ
- ನೌಕೆಯು ಎರಡು ಸ್ಟಾರ್ ಸಂವೇದಿಗಳು, ಗೈರೊಗಳು ಹಾಗೂ ನಾಲ್ಕು ರಿಯಾಕ್ಷನ್ ವೀಲ್‌ಗಳಿಂದ ಮೂರು-ಭಾಗಗಳ ಸ್ಥಿರತೆ ಹೊಂದಿದೆ. ಸ್ಥಾನ ನಿಯಂತ್ರಣ, ಸಂವೇದಕ ಸಂಸ್ಕರಣೆ, ಆಂಟೆನಾ ಸ್ಥಾನನಿರ್ಣಯ ಇತ್ಯಾದಿಗಾಗಿ ಚಂದ್ರನೌಕೆಯು ಎರಡು ಅಧಿಕ ಬಸ್ ನಿರ್ವಹಣೆ ಘಟಕಗಳನ್ನು ಹೊಂದಿದೆ.[೨೦][೨೧]
ಅಧ್ಯಯನದ ನಿರ್ದಿಷ್ಟ ಕ್ಷೇತ್ರಗಳು
[ಬದಲಾಯಿಸಿ]- ಕಾಯಂ ಆಗಿ ಕಪ್ಪು ಛಾಯೆಗೊಳಗಾಗಿರುವ ಉತ್ತರ ಮತ್ತು ದಕ್ಷಿಣ ಧ್ರುವ ವಲಯಗಳ ಉನ್ನತ ಸ್ಪಷ್ಟತೆಯ ಖನಿಜಶಾಸ್ತ್ರೀಯ ಮತ್ತು ರಾಸಾಯನಿಕ ಚಿತ್ರ
- ಚಂದ್ರನ ಮೇಲ್ಮೈ ಅಥವಾ ಉಪ-ಮೇಲ್ಮೈಯಲ್ಲಿ, ಅದರಲ್ಲಿಯೂ ವಿಶಿಷ್ಟವಾಗಿ ಚಂದ್ರನ ಧ್ರುವಗಳಲ್ಲಿ ಚಂದ್ರ ಜಲನೀರ್ಗಡ್ಡೆಗಾಗಿ ಹುಡುಕುವುದು.
- ಚಂದ್ರನ ಮೆಲಿನ ಬಂಡೆಗಳಲ್ಲಿರುವ ರಾಸಾಯನಿಕ ಅಂಶಗಳ ಪತ್ತೆಹಚ್ಚುವಿಕೆ.
- ಚಂದ್ರನ ದೊಡ್ಡ ಕುಳಿಗಳ ಕೇಂದ್ರೀಯ ಒಳಪ್ರದೇಶಗಳಲ್ಲಿ ದೂರ ಸಂವೇದನದ ಮೂಲಕ ಚಂದ್ರನ ಹೊರಮೈನ ಮತ್ತು ಆಂತರಿಕ ವಸ್ತುಗಳನ್ನು ನಿರೀಕ್ಷಿಸಿರುವ ದಕ್ಷಿಣ ದ್ರುವದ ಐಟ್ಕೆನ್ ವಲಯ (SPAR)ದ ರಾಸಾಯನಿಕ ಸ್ತರವಿಜ್ಞಾನ
- ಚಂದ್ರನ ಮೇಲ್ಮೈಯ ಲಕ್ಷಣಗಳ ಎತ್ತರ ವ್ಯತ್ಯಾಸದ ನಕ್ಷೆ ಮಾಡುವುದು.
- 10 keVಗಿಂತಲೂ ಹೆಚ್ಚಿನ ಕ್ಷ-ಕಿರಣ ಸ್ಪೆಕ್ಟ್ರಮ್‌ನ ಗಮನ, ಹಾಗೂ 5 m ಚಿತ್ರ ಸ್ಪಷ್ಟತೆಯೊಂದಿಗೆ ಚಂದ್ರನ ಮೇಲ್ಮೈಯ ಹೆಚ್ಚು ಭಾಗದ ಸ್ಟೀರಿಯೋಗ್ರಾಫಿಕ್ ಚಿತ್ರಣ
- ಚಂದ್ರನ ಮೂಲ ಮತ್ತು ವಿಕಸನ ತಿಳಿದುಕೊಳ್ಳುವಲ್ಲಿ ಹೊಸ ಒಳನೋಟಗಳು.
ಉಪಕರಣಗಳು
[ಬದಲಾಯಿಸಿ]ವೈಜ್ಞಾನಿಕ ಉಪಕರಣದ ತೂಕ 90 ಕಿಲೊಗ್ರಾಂಗಳಷ್ಟಿತ್ತು. ಇದರಲ್ಲಿ ಐದು ಭಾರತೀಯ ಮತ್ತು ಆರು ವಿದೇಶಿ ಉಪಕರಣಗಳಿದ್ದವು.
ಭಾರತೀಯ ಉಪಕರಣಗಳು
[ಬದಲಾಯಿಸಿ]- TMC ಅಥವಾ ಟೆರೈನ್ ಮ್ಯಾಪಿಂಗ್ ಕ್ಯಾಮೆರಾ(ಪ್ರದೇಶ ಮಾಪಕ ಕ್ಯಾಮೆರಾ) ಒಂದು CCD ಕ್ಯಾಮೆರಾ ಆಗಿದೆ. ಇದರ ಚಿತ್ರ ಸ್ಪಷ್ಟತೆಯು 5 mರಷ್ಟಿದೆ. ಪ್ಯಾನ್‌ಕ್ರೊಮ್ಯಾಟಿಕ್ ಬ್ಯಾಂಡ್‌ನಲ್ಲಿ 40 ಕಿಮೀ ಉದ್ದದ ಪಟ್ಟಿಯನ್ನು ಸಹ ಹೊಂದಿದೆ. ಇದನ್ನು ಚಂದ್ರನ ಹೆಚ್ಚಿನ ಸ್ಪಷ್ಟ ಚಿತ್ರದ ನಕ್ಷೆ ಪಡೆಯಲು ಬಳಸಲಾಯಿತು.[೨೨]
ಚಂದ್ರನ ಮೇಲ್ಮೈಯನ್ನು ಸಂಪೂರ್ಣವಾಗಿ ಅಳೆಯುವುದು ಈ ಉಪಕರಣದ ಧ್ಯೇಯವಾಗಿತ್ತು. ವಿದ್ಯುತ್ಕಾಂತೀಯ ವರ್ಣಪಟಲದ ಗೋಚರವಾಗುವ ವಲಯದಲ್ಲಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತದೆ ಹಾಗೂ ಕಪ್ಪು-ಬಿಳುಪಿನ ಸ್ಟೀರಿಯೊ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಲುನಾರ್ ಲೇಸರ್ ರೇಂಜಿಂಗ್ ಉಪಕರಣ(LLRI)ದಿಂದ ಬಂದ ದತ್ತಾಂಶದೊಂದಿಗೆ ಇವನ್ನು ಬಳಸಿದಲ್ಲಿ, ಚಂದ್ರನ ಗುರುತ್ವಾಕರ್ಷಣ ಕ್ಷೇತ್ರವನ್ನು ಇನ್ನೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ನೆರವಾಗಬಹುದು. ಅಹ್ಮದಾಬಾದ್‌ನಲ್ಲಿರುವ ISROದ ಬಾಹ್ಯಾಕಾಶ ಅನ್ವಯ ಕೇಂದ್ರ (SAC)ದವರಿಂದ TMCಯನ್ನು ನಿರ್ಮಿಸಲಾಗಿತ್ತು.[೨೩] ISTRACನಿಂದ ಹೊರಡಿಸಲಾದ ಆದೇಶಗಳ ಮೂಲಕ TMCಯನ್ನು 29 ಅಕ್ಟೋಬರ್ 2008ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು.[೨೪]
- HySI ಅಥವಾ ಹೈಪರ್ ಸ್ಪೆಕ್ಟ್ರಲ್ ಇಮೇಜರ್ 400-900 nm ಬ್ಯಾಂಡ್‌ನಲ್ಲಿ ಖನಿಜದ ಮಾಪನ ನಡೆಸಿತು. ಇದರ ಸ್ಪೆಕ್ಟ್ರಲ್ ಚಿತ್ರ ಸ್ಪಷ್ಟತೆ 15 nm ಮತ್ತು ಸ್ಥಳವಿಸ್ತಾರದ ಚಿತ್ರ ಸ್ಪಷ್ಟತೆ 80 m ಇತ್ತು.
- LLRI' ಅಥವಾ ಲುನಾರ್ ಲೇಸರ್ ರೇಂಜಿಂಗ್ ಉಪಕರಣ ಚಂದ್ರನ ಮೇಲ್ಮೈಯತ್ತ ಇನ್ ಫ್ರಾರೆಡ್ ಲೇಸರ್ ಬೆಳಕಿನ ಕಿರಣಗಳನ್ನು ರವಾನಿಸಿ, ಆ ಬೆಳಕಿನ ಪ್ರತಿಫಲಿತ ಅಂಶವನ್ನು ಗುರುತಿಸುವುದರ' ಮೂಲಕ, ಮೇಲ್ಮೈ ಸ್ಥಳದ ಎತ್ತರ ನಿರ್ಣಯಿಸುತ್ತದೆ.
ಅದು ಸತತವಾಗಿ ಕಾರ್ಯನಿರ್ವಹಿಸಿ, ಚಂದ್ರನ ಹಗಲು ಹಾಗೂ ಇರುಳಿನ ಎರಡೂ ಬದಿಗಳಲ್ಲಿ ಪ್ರತಿ ಸೆಕೆಂಡ್‌ಗೆ ಹತ್ತು ಅಳತೆಗಳನ್ನು ತೆಗೆದುಕೊಂಡಿತು.[೨೫] ಇದನ್ನು 16 ನವೆಂಬರ್ 2008ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು.[೨೫][೨೬]
- HEX ಎಂಬುದು ಹೆಚ್ಚಿನ ಶಕ್ತಿಯ ಎಜೆ/ಗಾಮಾ ಕ್ಷ-ಕಿರಣ ವರ್ಣಪಟಲ ಮಾಪಕ ಆಗಿದೆ. ೪೦ ಕಿಮೀ ನೆಲದ ಚಿತ್ರ ಸ್ಪಷ್ಟತೆಯೊಂದಿಗೆ 30 – 200 keV ಅಳತೆಗಳಿಗಾಗಿ ಈ ಸ್ಪೆಕ್ಟ್ರೊಮೀಟರ್ ಬಳಸಲಾಗುತ್ತದೆ. HEX, U, Th, 210Pb, 222Rn ಅನಿಲ ತೆಗೆಯುವುದು ಮತ್ತು ಇತರೆ ರೇಡಿಯೊವಿಕಿರಣ ವಸ್ತುಗಳ ಅಳತೆ ಮಾಡುತ್ತದೆ.
- ISROದವರು ಅಭಿವೃದ್ಧಿಪಡಿಸಿದ MIP ಅಥವಾ ಮೂನ್ ಇಂಪ್ಯಾಕ್ಟ್ ಪ್ರೋಬ್ (ಚಂದ್ರನ ಅಪ್ಪಳಿಸುವ ಶೋಧಕ) ವು ಚಂದ್ರನಿಗೆ ಡಿಕ್ಕಿಹೊಡೆಯುವ ಶೋಧಕವಾಗಿದ್ದು, ಎತ್ತರವನ್ನು ಅಳೆಯಲು ಒಂದು C-ಬ್ಯಾಂಡ್ ರೆಡಾರ್ ಅಲ್ಟಿಮೀಟರ್ ಮಾಪಕವನ್ನು ಹೊಂದಿದೆ. ಜೊತೆಗೆ, ಚಂದ್ರನ ಮೇಲ್ಮೈಯಲ್ಲಿರುವ ಛಾಯಾಚಿತ್ರಣಕ್ಕಾಗಿ ವೀಡಿಯೊ ಇಮೇಜಿಂಗ್ ವ್ಯವಸ್ಥೆ, ಹಾಗೂ ಚಂದ್ರನ ವಾಯುಮಂಡಲದ ಅಂಶಗಳನ್ನು ಆಳತೆ ಮಾಡಲು ಒಂದು ಮಾಸ್ಸ್ ವರ್ಣಪಟಲ ಮಾಪಕ ಸಹ MIPಯಲ್ಲಿದೆ.[೨೭] ಇದನ್ನು 14 ನವೆಂಬರ್ 2008ರಂದು 20:00 IST ಸಮಯಕ್ಕೆ ಹೊರತಳ್ಳಲಾಯಿತು. ಮೂನ್ ಇಂಪ್ಯಾಕ್ಟ್ ಪ್ರೋಬ್ 14 ನವೆಂಬರ್ 2008ರಂದು 20:31 IST ಸಮಯಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಅಪ್ಪಳಿಸಿತು. ಭಾರತೀಯ ತ್ರಿವರ್ಣ ಧ್ವಜದ ಚಿತ್ರವೊಂದನ್ನು ಇದು ಒಯ್ದಿತ್ತು. ಚಂದ್ರನ ಮೇಲೆ ತನ್ನ ಧ್ವಜ ನೆಟ್ಟ ಭಾರತ, ಸೊವಿಯತ್ ಒಕ್ಕೂಟ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಜಪಾನ್ ದೇಶಗಳ ನಂತರ, ಚಂದ್ರನ ಮೇಲೆ ಧ್ವಜ ನೆಟ್ಟ ದೇಶಗಳಲ್ಲಿ ನಾಲ್ಕನೆಯ ದೇಶವಾಗಿದೆ.
ಇತರೆ ದೇಶಗಳಿಂದ ಉಪಕರಣಗಳು
[ಬದಲಾಯಿಸಿ]- 1- 10 keV ಒಳಗೊಂಡಿರುವ C1XS ಅಥವಾ ಕ್ಷ-ಕಿರಣ ಪ್ರತಿದೀಪ್ತಿ ವರ್ಣಪಟಲ ಮಾಪಕ (ಸ್ಟೆಕ್ಟ್ರೋಮೀಟರ್), 25 ಕಿ.ಮೀ.ರಷ್ಟು ನೆಲೆಯ ಚಿತ್ರ ಸ್ಪಷ್ಟತೆಯೊಂದಿಗೆ, ಮೇಲ್ಮೈಯಲ್ಲಿ ಹೇರಳವಾಗಿರುವ Mg, Al, Si, Ca, Ti ಮತ್ತು Fe ಅಂಶಗಳ ಮಾಪನ ನಡೆಸಿ, ಸೌರಪ್ರವಹಣದ ಪ್ರಮಾಣವನ್ನೂ ಅಳೆಯಿತು.[೨೮] ಈ ಉಪಕರಣವು U.Kಯ ರುದರ್ಫೋರ್ಡ್ ಆಪ್ಲ್‌ಟನ್ ಲ್ಯಾಬೊರೆಟರಿ, ESA ಮತ್ತು ISROದ ಸಹಯೋಗವಾಗಿದೆ. ಇದನ್ನು 23 ನವೆಂಬರ್ 2008ರಂದು ಸಕ್ರಿಯಗೊಳಿಸಲಾಯಿತು.[೨೯]
- ESAದವರ SARA ಸಬ್-keV ಆಟಮ್ ರಿಫ್ಲೆಕ್ಟಿಂಗ್ ಅನಲೈಸರ್ (ಉಪ-keV ಅಣು ಪ್ರತಿಫಲನಾ ವಿಶ್ಲೇಷಕ) ಚಂದ್ರನ ಮೇಲ್ಮೈಯಿಂದ ಹೊರಸೂಸುವ ಕಡಿಮೆ-ಶಕ್ತಿಯ ತಟಸ್ಥ ಅಣುಗಳನ್ನು ಬಳಸಿ ಖನಿಜ ರಚನೆಗಳನ್ನು ಅಳತೆ ಮಾಡಿತು.[೩೦][೩೧]
- M3 ಬ್ರೌನ್ ವಿಶ್ವವಿದ್ಯಾನಿಲಯ ದ ಮೂನ್ ಮಿನರಾಲಜಿ ಮ್ಯಾಪರ್ (ಚಂದ್ರ ಖನಿಜ ಮಾಪಕ) ಮತ್ತು JPL(ನಾಸಾದವರಿಂದ ಆರ್ಥಿಕ ನೆರವು) , ಚಂದ್ರನ ಮೇಲ್ಮೈಯಲ್ಲಿರುವ ಖನಿಜ ರಚನೆಯನ್ನು ಅಂದಾಜಿಸಲು ವಿನ್ಯಾಸಮಾಡಿದ ಇಮೇಜಿಂಗ್ ವರ್ಣಪಟಲ ಮಾಪಕ(ಸ್ಪೆಕ್ಟ್ರೋಮೀಟರ್) ಇದನ್ನು 17 ಡಿಸೆಂಬರ್ 2008ರಂದು ಕ್ರಿಯಾಶೀಲಗೊಳಿಸಲಾಯಿತು.[೩೨]
- ESAದವರ SIR-2 - ಇದು ಇನ್ಫ್ರಾರೆಡ್ ಸನಿಹದ ವರ್ಣಪಟಲ ಮಾಪಕ. ಇದನ್ನು ಮ್ಯಾಕ್ಸ್ ಪ್ಲ್ಯಾಂಕ್ ಸೌರಮಂಡಲ ಸಂಶೋಧನಾ ಸಂಸ್ಥೆ , ಪೋಲಿಷ್ ವಿಜ್ಞಾನ ಅಕಾಡಮಿ ಮತ್ತು ಬರ್ಗೆನ್ ವಿಶ್ವವಿದ್ಯಾನಿಲಯ ದಲ್ಲಿ ನಿರ್ಮಿಸಲಾಯಿತು. ಇದು ಅವಕೆಂಪು(ಇನ್ಫ್ರಾರೆಡ್) ಗ್ರೇಟಿಂಗ್ ವರ್ಣಪಟಲ ಮಾಪಕ ಬಳಸಿ ಖನಿಜಗಳ ರಚನೆಯನ್ನು ಮಾಪನ ಮಾಡಿತು.
ಈ ಉಪಕರಣವು ಸ್ಮಾರ್ಟ್-1 SIRನ್ನು ಹೋಲುತ್ತದೆ.[೩೩][೩೪] ಇದನ್ನು 19 ನವೆಂಬರ್ 2008ರಂದು ಸಕ್ರಿಯಗೊಳಿಸಲಾಯಿತು. 20 ನವೆಂಬರ್ 2008ರಂದು ವೈಜ್ಞಾನಿಕ ಅವಲೋಕನಗಳನ್ನು ಯಶಸ್ವಿಯಾಗಿ ಅರಂಭಗೊಳಿಸಲಾಯಿತು.[೨೯]
- miniSAR ಉಪಕರಣವನ್ನು ನೌಕಾ ವಾಯು ಸಮರ ಕೇಂದ್ರ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ಅನ್ವಯಿಕ ಭೌತಶಾಸ್ತ್ರ ಪ್ರಯೋಗಾಲಯ, ಸ್ಯಾಂಡಿಯಾ ರಾಷ್ಟ್ರೀಯ ಪ್ರಯೋಗಾಲಯಗಳು, ರೇಯ್ಥಿಯನ್ ಮತ್ತು ನಾರ್ಥ್ರಾಪ್ ಗ್ರುಮ್ಮನ್ ಒಳಗೊಂಡ ದೊಡ್ಡ ತಂಡವು NASAಗಾಗಿ ವಿನ್ಯಾಸ ಮಾಡಿ, ರಚಿಸಿ ಪರೀಕ್ಷಿಸಿತು. ಚಂದ್ರನ ಧ್ರುವಗಳಲ್ಲಿ ನೀರ್ಗಲ್ಲನ್ನು ಶೋಧಿಸಲು ಇದು ಸಕ್ರಿಯವಾಗಿರುವ ಸಿಂಥೆಟಿಕ್ ಅಪರ್ಚರ್ ರೆಡಾರ್(ಸಂಶ್ಲೇಷಿತ ಬೆಳಕುಕಿಂಡಿ ರೆಡಾರ್). ಈ ಉಪಕರಣವು 2.5 GHz ತರಂಗಾಂತರದೊಂದಿಗೆ ಬಲ ಧ್ರುವೀಕೃತ ವಿಕಿರಣಗಳನ್ನು ರವಾನಿಸಿ, ಎಡ ಮತ್ತು ಬಲಕ್ಕೆ ಚದುರಿದ ಧ್ರುವೀಕೃತ ವಿಕಿರಣಗಳನ್ನು ನಿಯಂತ್ರಿಸಿತು. ಈ ಅಳತೆಗಳಿಂದ ಊಹಿಸಿದ ಪ್ರಮುಖ ಪ್ರಮಿತಿಗಳಾವುವೆಂದರೆ ಫ್ರೆಸ್ನೆಲ್ ಪ್ರತಿಫಲನ ಮತ್ತು ವೃತ್ತಾಕಾರದ ಧ್ರುವೀಕರಣದ ಅನುಪಾತ (CPR). ನೀರ್ಗಲ್ಲು ಕೊಹೆರೆಂಟ್ ಬ್ಯಾಕ್ಸ್ಕ್ಯಾಟರ್ ಅಪೊಸಿಷನ್ ಇಫೆಕ್ಟ್ (ಸಂಸಕ್ತ ಹಿಮ್ಮುಖ ಚದುರುವಿಕೆ ಅಭಿಮುಖ ಪರಿಣಾಮ)ಪ್ರದರ್ಶಿಸುತ್ತದೆ. ಇದು ಪ್ರತಿಫಲನಗಳು ಮತ್ತು CPRನ ವರ್ಧನೆಯಲ್ಲಿ ಪ್ರತಿಫಲ ನೀಡುತ್ತದೆ. ಇದರಿಂದಾಗಿ ಚಂದ್ರನ ಧ್ರುವ ಪ್ರದೇಶಗಳಲ್ಲಿ ನೀರಿನ ಅಂಶವನ್ನು ಅಂದಾಜು ಮಾಡಬಹುದಾಗಿದೆ.[೩೫][೩೬]
- ಬಲ್ಗಾರಿಯನ್ ಅಕ್ಯಾಡೆಮಿ ಆಫ್ ಸೈನ್ಸೆಸ್ನRADOM-7 , ರೇಡಿಯೇಷನ್ ಡೋಸ್ ಮಾನಿಟರ್ ಪ್ರಯೋಗ ಚಂದ್ರನ ಸುತ್ತ ವಿಕಿರಣ ಪರಿಸರವನ್ನು ಅಳತೆ ಮಾಡುತ್ತದೆ.[೩೭] 16 ನವೆಂಬರ್ 2008ರಂದು ಇದನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.[೨೫][೨೬]
ಬಾಹ್ಯಾಕಾಶ ಯಾನ
[ಬದಲಾಯಿಸಿ]ISROದ 44.4 ಮೀಟರ್ ಎತ್ತರದ ನಾಲ್ಕು ಹಂತಗಳ PSLV ಉಡ್ಡಯನ ರಾಕೆಟ್ ಬಳಸಿ, ಚಂದ್ರಯಾನ-1ನ್ನು 22 ಅಕ್ಟೋಬರ್ 2008ರಂದು 06:22 IST ಸಮಯಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಉಡಾಯಿಸಲಾಯಿತು. ಚಂದ್ರನ ಅಂತಿಮ ಕಕ್ಷೆಗೆ ಬರಲು 21 ದಿನಗಳನ್ನು ಅದು ತೆಗೆದುಕೊಂಡಿತು. [[ಬೆಂಗಳೂರಿನಪೀಣ್ಯದಲ್ಲಿರುವ ISROದ ದೂರಸ್ಥಮಾಪಕ ವ್ಯವಸ್ಥೆ, ಶೋಧಕ ಮತ್ತು ಆದೇಶ ಜಾಲ (ISTRAC) ಚಂದ್ರಯಾನ-1 ಜಾಡು ಹಿಡಿದು ಅದನ್ನು ನಿಯಂತ್ರಿಸಿತು.|ಬೆಂಗಳೂರಿನಪೀಣ್ಯದಲ್ಲಿರುವ ISROದ ದೂರಸ್ಥಮಾಪಕ ವ್ಯವಸ್ಥೆ, ಶೋಧಕ ಮತ್ತು ಆದೇಶ ಜಾಲ (ISTRAC) ಚಂದ್ರಯಾನ-1 ಜಾಡು ಹಿಡಿದು ಅದನ್ನು ನಿಯಂತ್ರಿಸಿತು.[೩೮]]]
ಚಂದ್ರನತ್ತ ನೇರ ವಿಕ್ಷೇಪ ಪಥದ ಬದಲಿಗೆ ಚಂದ್ರಯಾನ-1ನ್ನು ಭೂಮಿಯ ಸುತ್ತಲಿನ ಅದರ ಕಕ್ಷೆಯನ್ನು ಹೆಚ್ಚಿಸುವ ಕಾರ್ಯಾಚರಣೆಗಳ ಸರಣಿ ಮೂಲಕ ಚಂದ್ರನತ್ತ ಉಡ್ಡಯನ ಮಾಡಲಾಯಿತು.[೩೯] ಉಡ್ಡಯನದ ಸಮಯದಲ್ಲಿ ಬಾಹ್ಯಾಕಾಶ ನೌಕೆಯನ್ನು ಭೂಸ್ಥಿರ ವರ್ಗಾವಣಾ ಕಕ್ಷೆಯಲ್ಲಿ (GTO) ಅಳವಡಿಸಲಾಯಿತು. ಈ ಕಕ್ಷೆಯು ಭೂಮಿಯಿಂದ ಅತಿದೂರದ ಬಿಂದು 22,860 ಕಿಲೋಮಿಟರ್ ಹಾಗೂ ಸಮೀಪದ ಬಿಂದು 255 ಕಿಲೊಮೀಟರ್‌ಗಳಷ್ಟಿತ್ತು. ಉಡ್ಡಯನದ ನಂತರ, 13 ದಿನಗಳ ಅವಧಿಯಲ್ಲಿ ನಡೆಸಲಾದ ಕಕ್ಷೆಯಲ್ಲಿನ ಐದು ದಹನಾ ಪ್ರಕ್ರಿಯೆಗಳ ಮೂಲಕ,ಅತಿ ದೂರದ ಬಿಂದುವನ್ನು ಹೆಚ್ಚಿಸಲಾಯಿತು.[೩೯]
ಚಂದ್ರಯಾನ-1 ಬಾಹ್ಯಾಕಾಶದಲ್ಲಿ ತನ್ನ ಮೊದಲ ನೂರು ದಿನಗಳನ್ನು ಪೂರೈಸಿದಾಗ, 29 ಜನವರಿ 2009ರಂದು ಭಾರತ, U.S. ಮತ್ತು ಯುರೋಪ್ ವಿಜ್ಞಾನಿಗಳು ಚಂದ್ರಯಾನ-1ರ ಬಗ್ಗೆ ಉನ್ನತ ಮಟ್ಟದ ವಿಮರ್ಶೆ ನಡೆಸಿದರು.[೪೦]
ಭೂಮಿ ಕಕ್ಷೆಯಲ್ಲಿನ ದಹನಗಳು
[ಬದಲಾಯಿಸಿ]- ಪ್ರಥಮ ಕಕ್ಷೆ ದಹನ
ದಿನಾಂಕ 23 ಅಕ್ಟೋಬರ್ 2008ರಂದು 09:00 IST ಸಮಯಕ್ಕೆ ಚಂದ್ರಯಾನ-1 ಬಾಹ್ಯಾಕಾಶ ಯಾನದ ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯನ್ನು ನಿರ್ವಹಿಸಲಾಯಿತು. ಈ ನೌಕೆಯ 440 ನ್ಯೂಟನ್ ದ್ರವ ಇಂಜಿನ್‌ನ್ನು ಸುಮಾರು 18 ನಿಮಿಷಗಳ ಕಾಲ ಉರಿಸಲಾಯಿತು. ಬೆಂಗಳೂರಿನ ಪೀಣ್ಯದಲ್ಲಿರುವ ISRO ಟೆಲಿಮಿಟ್ರಿ, ಟ್ರ್ಯಾಕಿಂಗ್ ಅಂಡ್ ಕಮ್ಯಾಂಡ್ ನೆಟ್ವರ್ಕ್ (ISTRAC)ನ ಬಾಹ್ಯಾಕಾಶ ನೌಕಾ ನಿಯಂತ್ರಣ ಕೇಂದ್ರದಿಂದ (SCC) ಬಾಹ್ಯಾಕಾಶ ನೌಕೆಯನ್ನು ನಿಯಂತ್ರಿಸಲಾಯಿತು. ಇದರೊಂದಿಗೆ ಚಂದ್ರಯಾನ-1ರ ದೂರದ ಬಿಂದುವನ್ನು (ಆಪಜೀ) 37,900 ಕಿ.ಮಿ.ಗೆ ಎತ್ತರಿಸಿ, 305 ಕಿ.ಮೀಗೆ ತನ್ನ ಹತ್ತಿರದ ಬಿಂದುವನ್ನು (ಪೆರಿಜೀ) ಏರಿಸಲಾಯಿತು. ಈ ಕಕ್ಷೆಯಲ್ಲಿ ಚಂದ್ರಯಾನ-೧ ಬಾಹ್ಯಾಕಾಶ ನೌಕೆಗೆ ಭೂಮಿಯ ಸುತ್ತ ಒಂದು ಬಾರಿ ಸುತ್ತಲು ಸುಮಾರು 11 ಗಂಟೆಗಳ ಕಾಲ ಅವಧಿ ಹಿಡಿಯಿತು.[೪೧]
- ಕಕ್ಷೆಯಲ್ಲಿ ಎರಡನೆಯ ದಹನ
ದಿನಾಂಕ 25 ಅಕ್ಟೋಬರ್ 2008ರಂದು 05:48 IST ಸಮಯಕ್ಕೆ ಚಂದ್ರಯಾನ-1ರ ಕಕ್ಷೆಯನ್ನು ಎರಡನೆಯ ಬಾರಿ ಎತ್ತರಿಸಲು, ನೌಕೆಯ ಇಂಜಿನ್‌ನ್ನು 16 ನಿಮಿಷಗಳ ಕಾಲ ಉರಿಸಲಾಯಿತು. ಕಕ್ಷೆಯ ದೂರದ ಬಿಂದುವನ್ನು 74,715 ಕಿ.ಮೀ.ಗಳಿಗೆ ಮತ್ತು ಸಮೀಪ ಬಿಂದುವನ್ನು 336 ಕಿ.ಮೀ.ಗಳಿಗೆ ಏರಿಸಲಾಯಿತು.ಹೀಗೆ ಇದರ ಪಯಣದ 20%ರಷ್ಟು ಪೂರ್ಣಗೊಂಡಿತು. ಈ ಕಕ್ಷೆಯಲ್ಲಿ, ಚಂದ್ರಯಾನವು ಭೂಮಿಯ ಸುತ್ತ ಒಮ್ಮೆ ಸುತ್ತಲು ಇಪ್ಪತ್ತೈದುವರೆ ಗಂಟೆ ಬೇಕಾಯಿತು. ಭಾರತೀಯ ಬಾಹ್ಯಾಕಾಶ ಯಾನವೊಂದು 36,000 ಕಿ.ಮೀ. ಎತ್ತರದ ಭೂಸ್ಥಿರ ಕಕ್ಷೆಯನ್ನು ಮೀರಿ ಆ ಎತ್ತರದ ಎರಡರಷ್ಟಕ್ಕಿಂತಲೂ ಹೆಚ್ಚು ಎತ್ತರ ತಲುಪಿದ್ದು ಇದೇ ಮೊದಲ ಬಾರಿ.[೪೨]
- ಕಕ್ಷೆಯಲ್ಲಿ ಮೂರನೆಯ ದಹನ
ದಿನಾಂಕ 26 ಅಕ್ಟೋಬರ್ 2008ರಂದು 07:08 IST ಸಮಯಕ್ಕೆ ಕಕ್ಷೆಯನ್ನು ಮೂರನೆಯ ಬಾರಿ ಏರಿಸುವ ಪ್ರಕ್ರಿಯೆಯಲ್ಲಿ, ಬಾಹ್ಯಾಕಾಶ ನೌಕೆಯ ಇಂಜಿನ್‌ನ್ನು ಸುಮಾರು ಒಂಬತ್ತುವರೆ ನಿಮಿಷಗಳ ಕಾಲ ಉರಿಸಲಾಯಿತು. ಇದರೊಂದಿಗೆ ದೂರದ ಬಿಂದುವನ್ನು 164,600 ಕಿ.ಮೀ.ಗಳಿಗೆ ಹಾಗೂ ಹತ್ತಿರದ ಬಿಂದುವನ್ನು 348 ಕಿ.ಮೀ.ಗಳಿಗೆ ಏರಿಸಲಾಯಿತು. ಈ ಕಕ್ಷೆಯಲ್ಲಿ ಚಂದ್ರಯಾನ-1 ಭೂಮಿಯ ಸುತ್ತ ಒಮ್ಮೆ ಸುತ್ತಲು ಸುಮಾರು 73 ಗಂಟೆಗಳನ್ನು ತೆಗೆದುಕೊಂಡಿತು.[೪೩]
- ಕಕ್ಷೆಯಲ್ಲಿ ನಾಲ್ಕನೆಯ ದಹನ
ದಿನಾಂಕ 29 ಅಕ್ಟೋಬರ್ 2008ರಂದು 07:38 IST ಸಮಯಕ್ಕೆ ಚಂದ್ರಯಾನದ ಕಕ್ಷೆಯನ್ನು ನಾಲ್ಕನೆಯ ಬಾರಿ ಏರಿಸುವ ಪ್ರಕ್ರಿಯೆಯಲ್ಲಿ ಚಂದ್ರಯಾನದ ಇಂಜಿನ್‌ನ್ನು ಸುಮಾರು ಮೂರು ನಿಮಿಷಗಳ ಕಾಲ ಉರಿಸಲಾಯಿತು. ಇದರಿಂದಾಗಿ ಕಕ್ಷೆಯ ದೂರದ ಬಿಂದುವನ್ನು 267,000 ಕಿ.ಮೀ.ಗಳು ಹಾಗೂ ಹತ್ತಿರದ ಬಿಂದುವನ್ನು 465 ಕಿ.ಮೀ.ಗಳಿಗೆ ಏರಿಸಲಾಯಿತು. ಚಂದ್ರಕ್ಕಿರುವ ದೂರದ ಅರ್ಧಕ್ಕಿಂತಲೂ ಹೆಚ್ಚು ದೂರಕ್ಕೆ ಇದು ಕಕ್ಷೆಯನ್ನು ವಿಸ್ತರಿಸಿತು. ಈ ಕಕ್ಷೆಯಲ್ಲಿ, ಚಂದ್ರಯಾನವು ಭೂಮಿಯ ಸುತ್ತ ಒಮ್ಮೆ ಸುತ್ತಲು ಸುಮಾರು ಆರು ದಿನಗಳು ಬೇಕಾದವು.[೪೪]
- ಕಕ್ಷೆಯಲ್ಲಿ ಅಂತಿಮ ದಹನ
ದಿನಾಂಕ 4 ನವೆಂಬರ್ 2008ರಂದು 04:56 IST ಸಮಯಕ್ಕೆ ಚಂದ್ರಯಾನದ ಕಕ್ಷೆಯನ್ನು ಐದನೆಯ ಹಾಗೂ ಅಂತಿಮ ಬಾರಿ ಏರಿಸುವ ಪ್ರಕ್ರಿಯೆ ನಡೆಯಿತು. ಚಂದ್ರಯಾನದ ಇಂಜಿನ್‌ನ್ನು ಸುಮಾರು ಎರಡೂವರೆ ನಿಮಿಷಗಳ ಕಾಲ ಉರಿಸಲಾಯಿತು. ಇದರಿಂದಾಗಿ ಚಂದ್ರಯಾನ-1 ಲುನಾರ್ ಟ್ರಾನ್ಸ್‌ಫರ್ ಟ್ರ್ಯಾಜೆಕ್ಟರಿಯನ್ನು 380,000 ಕಿ.ಮೀ.ದೂರದ ಬಿಂದುವಿನೊಂದಿಗೆ ಪ್ರವೇಶಿಸಿತು.
ಚಂದ್ರನ ಕಕ್ಷೆಯೊಳಗೆ ಅಳವಡಿಕೆ
[ಬದಲಾಯಿಸಿ]ದಿನಾಂಕ 8 ನವೆಂಬರ್ 2008 16:51 IST ಸಮಯಕ್ಕೆ ಚಂದ್ರಯಾನ-1 ಚಂದ್ರನ ಕಕ್ಷೆ ಪ್ರವೇಶ ಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಈ ಪ್ರಕ್ರಿಯೆಯಲ್ಲಿ, ಚಂದ್ರನಿಗಿಂತ ಬಾಹ್ಯಾಕಾಶ ನೌಕೆಯು 500 ಕಿ.ಮೀ.ಗಳಷ್ಟು ದೂರವಿದ್ದಾಗ, ಅದರ ದ್ರವ ಇಂಜಿನ್‌ನ್ನು 817 ಸೆಕೆಂಡುಗಳು(ಸುಮಾರು ಹದಿಮೂರುವರೆ ನಿಮಿಷಗಳು) ಉರಿಸಲಾಯಿತು. ಉಪಗ್ರಹವನ್ನು ಚಂದ್ರನ ಧ್ರುವ ವಲಯಗಳ ಮೇಲೆ ಹಾದುಹೋಗುವ ಅಂಡಾಕಾರಾದ ಕಕ್ಷೆಯಲ್ಲಿ ಅಪೊಸೆಲೀನ್ (ಚಂದ್ರನಿಂದ ಅತಿದೂರದ ಬಿಂದು) 7502 ಕಿ.ಮೀ.ಗಳು ಹಾಗೂ ಪೆರಿಸೆಲೀನ್ (ಚಂದ್ರನಿಗೆ ಅತಿಹತ್ತಿರದ ಬಿಂದು) 504 ಕಿ.ಮೀ.ಗಳೊಂದಿಗೆ ಸ್ಥಿರಗೊಳಿಸಲಾಯಿತು. ಚಂದ್ರನ ಕಕ್ಷೆಯಲ್ಲಿ ಒಮ್ಮೆ ಸುತ್ತಲು ಸುಮಾರು 11 ಗಂಟೆಗಳ ಕಾಲ ಬೇಕೆಂದು ಅಂದಾಜು ಮಾಡಲಾಯಿತು. ಈ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡು, ಚಂದ್ರನ ಕಕ್ಷೆಯಲ್ಲಿ ಉಪಗ್ರಹವೊಂದನ್ನು ಸ್ಥಿರಗೊಳಿಸುವುದರಲ್ಲಿ ಭಾರತ ಐದನೆಯ ರಾಷ್ಟ್ರವಾಯಿತು.[೮]
- ಚಂದ್ರನ ಕಕ್ಷೆಯನ್ನು ತಗ್ಗಿಸುವಿಕೆ
ಚಂದ್ರಯಾನ-1ರ ಮೊದಲ ಚಂದ್ರನ ಕಕ್ಷೆ ತಗ್ಗಿಸುವಿಕೆಯ ಪ್ರಕ್ರಿಯೆಯನ್ನು 9 ನವೆಂಬರ್ 2008ರಂದು 20:03 IST ಸಮಯಕ್ಕೆ ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ಸಮಯದಲ್ಲಿ, ನೌಕೆಯ ಇಂಜಿನ್‌ನ್ನು ಸುಮಾರು 57 ಸೆಕೆಂಡ್‌ಗಳ ಕಾಲ ಉರಿಸಲಾಯಿತು. ಇದು ಪೆರಿಸೆಲೀನ್‌ನ್ನು 504 ಕಿ.ಮೀ.ಗಳಿಂದ 200 ಕಿ.ಮೀ.ಗಳಿಗೆ ಇಳಿಸಿತು, ಆದರೆ ಅಪೋಸೆಲೀನ್ 7,502 ಕಿ.ಮೀ.ಗಳಲ್ಲಿಯೇ ಬದಲಾಗದೆ ಉಳಿದುಕೊಂಡಿತು. ಇಂತಹ ಅಂಡಾಕಾರದ ಕಕ್ಷೆಯಲ್ಲಿ, ಚಂದ್ರಯಾನ-1 ಚಂದ್ರನ ಸುತ್ತ ಒಮ್ಮೆ ಪರಿಭ್ರಮಿಸಲು ಸುಮಾರು ಹತ್ತೂವರೆ ಗಂಟೆ ಕಾಲಾವಧಿ ತೆಗೆದುಕೊಂಡಿತು.[೪೫]
- ಎರಡನೆಯ ಕಕ್ಷೆ ತಗ್ಗಿಸುವಿಕೆ
ಚಂದ್ರಯಾನ-1ರ ಅಪೊಸೆಲೀನ್ 7,502 ಕಿ.ಮೀ.ಗಳಿಂದ 255 ಕಿ.ಮೀ.ಗಳಿಗೆ ಹಾಗೂ ಪೆರಿಸಿಲೀನ್‌ನ್ನು 200 ಕಿ.ಮೀ.ಗಳಿಂದ 187 ಕಿ.ಮೀ.ಗಳಿಗೆ ತೀವ್ರವಾಗಿ ಇಳಿದ ಈ ಪ್ರಕ್ರಿಯೆಯನ್ನು 10 ನವೆಂಬರ್ 2008 21:58 IST ಸಮಯಕ್ಕೆ ನಿರ್ವಹಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಇಂಜಿನ್‌ನ್ನು ಸುಮಾರು 866 ಸೆಕೆಂಡುಗಳ(ಹದಿನಾಲ್ಕುವರೆ ನಿಮಿಷಗಳು)ಕಾಲ ಉರಿಸಲಾಯಿತು. ಚಂದ್ರಯಾನ-1 ಚಂದ್ರನ ಸುತ್ತ ಕಕ್ಷೆಯಲ್ಲಿ ಒಮ್ಮೆ ಸುತ್ತಲು 2 ಗಂಟೆ 16 ನಿಮಿಷಗಳ ಕಾಲ ಬೇಕಾಯಿತು.[೪೬]
- ಮೂರನೆಯ ಕಕ್ಷೆ ತಗ್ಗಿಸುವಿಕೆ
ದಿನಾಂಕ 11 ನವೆಂಬರ್ 2008ರಂದು 18:30 IST ಸಮಯಕ್ಕೆ ಇಂಜಿನ್‌ನ್ನು ಸುಮಾರು 31 ಸೆಕೆಂಡ್‌ಗಳ ಕಾಲ ಉರಿಸುವುದರ ಮೂಲಕ ಮೂರನೇ ಬಾರಿಗೆ ಚಂದ್ರನ ಕಕ್ಷೆಯನ್ನು ಸಂಕುಚಿತಗೊಳಿಸುವ ಪ್ರಕ್ರಿಯೆ ನಡೆಯಿತು. ಇದರ ಫಲವಾಗಿ ಪೆರಿಸೆಲೀನ್ ದೂರವನ್ನು 187 ಕಿ.ಮೀ.ಗಳಿಂದ 101 ಕಿ.ಮೀ.ಗಳಿಗೆ ಇಳಿಸಲಾಯಿತು; ಆದರೆ ಅಪೊಸೆಲೀನ್ ದೂರ 255 ಕಿ.ಮೀ.ಗಳಷ್ಟೇ ಸ್ಥಿರವಾಗಿತ್ತು. ಈ ಕಕ್ಷೆಯಲ್ಲಿ ಚಂದ್ರಯಾನ-1 ಚಂದ್ರನ ಸುತ್ತಲೂ ಒಮ್ಮೆ ಪರಿಭ್ರಮಿಸಲು ಎರಡು ಗಂಟೆ ಒಂಬತ್ತು ನಿಮಿಷಗಳ ಕಾಲ ತೆಗೆದುಕೊಂಡಿತು.[೪೭]
- ಅಂತಿಮ ಕಕ್ಷೆ
ದಿನಾಂಕ 12 ನವೆಂಬರ್ 2008ರಂದು ಚಂದ್ರಯಾನ-1 ಉಪಗ್ರಹವನ್ನು ಚಂದ್ರನ ಧ್ರುವೀಯ ಕಕ್ಷೆಯಲ್ಲಿ ಚಂದ್ರನ ಮೇಲ್ಮೈಗಿಂತಲೂ 100 ಕಿ.ಮೀ. ಎತ್ತರದಲ್ಲಿ ಯಶಸ್ವಿಯಾಗಿ ಇರಿಸಲಾಯಿತು.[೪೮][೪೯] ಕಕ್ಷೆಯನ್ನು ಸಂಕುಚಿತಗೊಳಿಸುವಿಕೆಯ ಅಂತಿಮ ಪ್ರಕ್ರಿಯೆಯಲ್ಲಿ, ಚಂದ್ರಯಾನ-1ರ ಅಪೊಸೆಲೀನ್‌ನ್ನು 255 ಕಿ.ಮೀ.ಗಳಿಂದ 100 ಕಿ.ಮೀ.ಗಳಿಗೆ ಇಳಿಸಲಾಯಿತು. ಪೆರಿಸೆಲೀನ್‌ನ್ನು 101 ಕಿ.ಮೀ.ಗಳಿಂದ 100 ಕಿ.ಮೀ.ಗಳಿಗೆ ತಗ್ಗಿಸಲಾಯಿತು.[೪೯] ಈ ಕಕ್ಷೆಯಲ್ಲಿ ಚಂದ್ರಯಾನ-1 ಚಂದ್ರನ ಸುತ್ತ ಒಮ್ಮೆ ಸುತ್ತಲು ಎರಡು ಗಂಟೆಗಳ ಕಾಲ ಬೇಕಾಗುವುದು. ಹನ್ನೊಂದು ಉಪಗ್ರಹ ಉಪಕರಣಗಳ ಪೈಕಿ ಎರಡು - ಮೇಲ್ಮೈಪ್ರದೇಶ ಮಾಪನ ಕ್ಯಾಮೆರಾ (TMC) ಮತ್ತು ವಿಕಿರಣ ಡೋಸ್ ಮಾನಿಟರ್(RADOM)ಗಳನ್ನು ಯಶಸ್ವಿಯಾಗಿ ಚಾಲನೆಗೊಳಿಸಲಾಯಿತು. TMC ಭೂಮಿ ಮತ್ತು ಚಂದ್ರನ ಛಾಯಾಚಿತ್ರಗಳನ್ನು ಯಶಸ್ವಿಯಾಗಿ ತೆಗೆದುಕೊಂಡಿತ್ತು.[೪೯]
ಚಂದ್ರನ ಮೇಲ್ಮೈ ಮೇಲೆ MIP ಪರಿಣಾಮ
[ಬದಲಾಯಿಸಿ]ಮೂನ್ ಇಂಪ್ಯಾಕ್ಟ್ ಪ್ರೋಬ್ (ಚಂದ್ರ ಘರ್ಷಣ ಶೋಧಕ) (MIP) 14 ನವೆಂಬರ್ 2008ರಂದು 15:01 UTC (20:31 IST ಸಮಯ)ಕ್ಕೆ ಚಂದ್ರನ ಮೇಲ್ಮೈ ಮೇಲೆ, ದಕ್ಷಿಣ ಧ್ರುವದಲ್ಲಿರುವ ಷ್ಯಾಕ್ಲ್‌ಟನ್ ಕಂದಕದ ಬಳಿ ಅಪ್ಪಳಿಸಿತು [೪೮] ಚಂದ್ರಯಾನ-1ರಲ್ಲಿರುವ ಹನ್ನೊಂದು ವೈಜ್ಞಾನಿಕ ಉಪಕರಣಗಳ ಪೈಕಿ MIP ಸಹ ಒಂದಾಗಿತ್ತು.[೫೦]
ಸಮಯ 20:36 IST ಸಮಯ (14:36 UTC)ಕ್ಕೆ ಚಂದ್ರನ ಮೇಲ್ಮೈಯಿಂದ 100 ಕಿ.ಮೀ. ಎತ್ತರದಲ್ಲಿ MIP ಚಂದ್ರಯಾನದಿಂದ ಪ್ರತ್ಯೇಕವಾಗಿ, ಕೆಳಗೆಬೀಳುವ ಕ್ರಿಯೆಯನ್ನು ಆರಂಭಿಸಿ, ಮೂವತ್ತು ನಿಮಿಷಗಳ ಕಾಲ ಕೆಳಗೆ ಬೀಳಲಾರಂಭಿಸಿತು.[೪೮] ಅದು ಬೀಳುವಾಗ, ತನ್ನ ಮಾತೃ ಉಪಗ್ರಹಕ್ಕೆ ಮಾಹಿತಿಯನ್ನು ಕಳುಹಿಸುತ್ತಲಿತ್ತು. ಮಾತೃ ಉಪಗ್ರಹವು ಈ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿತ್ತು. ಉನ್ನತಿಮಾಪಕ (ಆಲ್ಟಿಮೀಟರ್)ಅಳತೆಗಳನ್ನು ದಾಖಲಿಸಿಕೊಳ್ಳಲು ಆರಂಭಿಸಿತು. ಈ ಅಳತೆಗಳ ಮಾಹಿತಿಯು, 2012ರಲ್ಲಿ ಯೋಜಿಸಲಿರುವ ಎರಡನೆಯ ಚಂದ್ರ ಯಾತ್ರೆಯಲ್ಲಿ ರೋವರ್ ವಾಹನವನ್ನು ಚಂದ್ರನ ಮೇಲ್ಮೈನಲ್ಲಿ ಇಳಿಸುವುದಕ್ಕೆ ಸಿದ್ಧತೆಯಾಗಿದೆ.[೯][೫೧][೫೨]
MIPಯ ಯಶಸ್ವೀ ಅಳವಡಿಕೆ ಬಳಿಕ, ಇತರೆ ವೈಜ್ಞಾನಿಕ ಉಪಕರಣಗಳನ್ನು ಸಕ್ರಿಯಗೊಳಿಸಲಾಯಿತು. ಇಲ್ಲಿಗೆ ಚಂದ್ರಯಾನದ ಮುಂದಿನ ಹಂತದ ಆರಂಭವಾಯಿತು.[೫೦]
MIPಯಿಂದ ಪ್ರಾಪ್ತ ದತ್ತಾಂಶದ ವೈಜ್ಞಾನಿಕ ವಿಶ್ಲೇಷಣೆಗಳ ಬಳಿಕ, ಚಂದ್ರನ ಮಣ್ಣಿನಲ್ಲಿ ನೀರಿನ ಅಂಶವಿರುವುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಖಚಿತಪಡಿಸಿತು. ಈ ಮಾಹಿತಿಯನ್ನು ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಅದರ ಅಧ್ಯಕ್ಷ ಜಿ.ಮಾಧವನ್ ನಾಯರ್ ಪ್ರಕಟಿಸಿದರು.
ಬಾಹ್ಯಾಕಾಶ ನೌಕೆಯ ಉಷ್ಣಾಂಶದಲ್ಲಿ ಏರಿಕೆ
[ಬದಲಾಯಿಸಿ]ಚಂದ್ರಯಾನ-1ರ ಉಷ್ಣಾಂಶವು ಸಹಜ ಉಷ್ಣಾಂಶಕ್ಕಿಂತ ಹೆಚ್ಚಾಗಿ, 50°Cಗೆ ಏರಿತ್ತು [೫೩] ಎಂದು ISRO ದಿನಾಂಕ 25 ನವೆಂಬರ್ 2008ರಂದು ವರದಿ ಮಾಡಿತು. ಚಂದ್ರನ ಕಕ್ಷೆಯಲ್ಲಿ ಸಹಜಕ್ಕಿಂತಲೂ ಹೆಚ್ಚು ಉಷ್ಣಾಂಶವಿರುವುದು ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದರು.[೫೩] ಬಾಹ್ಯಾಕಾಶನೌಕೆಯನ್ನು ಸುಮಾರು 20 ಡಿಗ್ರಿಗಳಷ್ಟು ತಿರುಗಿಸಿ ಹಾಗೂ ಕೆಲವು ಉಪಕರಣಗಳ ಚಾಲನೆಯನ್ನು ನಿಲ್ಲಿಸುವುದರ ಮೂಲಕ ಉಷ್ಣಾಂಶವನ್ನು ಸುಮಾರು 10°Cರಷ್ಟು ಕಡಿಮೆಗೊಳಿಸಲಾಯಿತು.[೫೩] ಆನಂತರ, ಸಹಜ ಉಷ್ಣಾಂಶ ಸ್ಥಿತಿಗಳಲ್ಲಿ ಉಪಗ್ರಹವು ಕಾರ್ಯನಿರ್ವಹಿಸುತ್ತಿದೆಯೆಂದು ISRO 27 ನವೆಂಬರ್ 2008ರಂದು ವರದಿ ಮಾಡಿತು.[೫೪] ಆನಂತರದ ವರದಿಗಳಲ್ಲಿ, ISRO , ಉಪಗ್ರಹವು ಸಹಜ ಉಷ್ಣಾಂಶಕ್ಕಿಂತಲೂ ಹೆಚ್ಚು ಉಷ್ಣಾಂಶ ದಾಖಲಿಸುತ್ತಿದ್ದ ಕಾರಣ,ಚಂದ್ರನ ಕಕ್ಷೆಯ ಉಷ್ಣಾಂಶ ಸ್ಥಿರವಾಗುವ ಜನವರಿ 2009ರ ತನಕ ಒಂದೇ ಉಪಕರಣವನ್ನು ಚಾಲಿತಗೊಳಿಸಲಾಗುವುದು ಎಂದು ಹೇಳಿಕೆ ನೀಡಿತು.[೫೫] ಸೂರ್ಯನಿಂದ ವಿಕಿರಣ ಹಾಗೂ ಚಂದ್ರನಿಂದ ಹೊರಸೂಸುತ್ತಿದ್ದ ಇನ್ಫ್ರಾರೆಡ್ ವಿಕಿರಣಗಳ ಕಾರಣ ಉಪಗ್ರಹವು ಹೆಚ್ಚಿನ ಉಷ್ಣಾಂಶವನ್ನು ಅನುಭವಿಸಿತು.[೫೬]
ಖನಿಜಗಳ ಮಾಪನ
[ಬದಲಾಯಿಸಿ]ಉಪಗ್ರಹದಲ್ಲಿರುವ ಮೂನ್ ಮಿನೆರಾಲಜಿ ಮ್ಯಾಪರ್ (ಚಂದ್ರ ಖನಿಜಾಂಶ ಮಾಪಕ) (M3) ಎಂಬ NASA ಉಪಕರಣದ ಮೂಲಕ ಚಂದ್ರನ ಮೇಲ್ಮೈಯ ಖನಿಜಾಂಶವನ್ನು ಅಳತೆಮಾಡಲಾಯಿತು. ಕಬ್ಬಿಣ ಅಂಶದ ಉಪಸ್ಥಿತಿಯನ್ನು ಪುನರುಚ್ಚರಿಸಲಾಯಿತು. ಶಿಲೆ ಮತ್ತು ಖನಿಜ ರಚನೆಗಳಲ್ಲಿ ಬದಲಾವಣೆಗಳನ್ನು ಗುರುತಿಸಲಾಯಿತು. ಚಂದ್ರನ ಒರಿಯೆಂಟಲ್ ಬೇಸಿನ್ ವಲಯವನ್ನು ಮಾಪಿಸಲಾಯಿತು. ಅದರಂತೆ, ಪೈರಾಕ್ಸೀನ್‌ನಂತಹ ಕಬ್ಬಿಣಾಂಶವುಳ್ಳ ಖನಿಜಗಳು ಹೇರಳವಾಗಿರುವುದನ್ನು ಸೂಚಿಸುತ್ತದೆ.[೫೭]
ಅಪೊಲೊ ಇಳಿಯುವ ಸ್ಥಳಗಳ ಮಾಪನ
[ಬದಲಾಯಿಸಿ]ಉಪಗ್ರಹವು ಬಹಳಷ್ಟು ಉಪಕರಣಗಳನ್ನು ಬಳಸಿ, ಅಪೊಲೊ ಚಂದ್ರ ಯಾನಗಳು ಇಳಿದಿದ್ದ ಸ್ಥಳಗಳನ್ನು ಮಾಪನ ಮಾಡಿತು ಎಂದು ISRO ಹೇಳಿಕೊಂಡಿದೆ. ಚಂದ್ರ ಯಾತ್ರೆಗೆ ಮೊದಲ ಬಾರಿ ಮಾನವನನ್ನು ಕರೆತಂದ ಬಾಹ್ಯಾಕಾಶ ವಾಹನ ಅಪೊಲೊ 11 ಸೇರಿದಂತೆ ಆರು ಸ್ಥಳಗಳನ್ನು ಮಾಪನ ಮಾಡಲಾಗಿದೆ.[೫೮]
ಛಾಯಾಚಿತ್ರಗಳ ಪಡೆಯುವಿಕೆ
[ಬದಲಾಯಿಸಿ]ನೌಕೆಯು ಕಕ್ಷೆಯಲ್ಲಿ 3000 ಸುತ್ತುಗಳನ್ನು ಪೂರ್ಣಗೊಳಿಸಿ, ಚಂದ್ರನ ಮೇಲ್ಮೈಯ 70,000 ಛಾಯಾಚಿತ್ರಗಳನ್ನು ಸೆರೆಹಿಡಿಯಿತು.[೫೯][೬೦][೬೧] ಇತರೆ ದೇಶಗಳ ಚಂದ್ರ ಯಾನಗಳಿಗೆ ಹೋಲಿಸಿದರೆ ಇದು ಒಂದು ದಾಖಲೆಯೇ ಆಗಿದೆಯೆಂದು ISROದಲ್ಲಿನ ಹಲವರು ನಂಬಿದ್ದಾರೆ. ಚಂದ್ರಯಾನದ ಕ್ಯಾಮೆರಾಗಳು 75 ದಿನಗಳಲ್ಲಿ 40,000ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ರವಾನಿಸಿದೆಯೆಂದು ISRO ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಪ್ರತಿದಿನ ಅದು ಹೆಚ್ಚುಕಡಿಮೆ 535 ಛಾಯಾಚಿತ್ರಗಳನ್ನು ಕಳುಹಿಸಿದೆ. ಈ ಛಾಯಾಚಿತ್ರಗಳನ್ನು ಮೊದಲು ಬೆಂಗಳೂರಿನ ಬಳಿ ಬ್ಯಾಲಾಳು ಗ್ರಾಮದಲ್ಲಿರುವ ಭಾರತೀಯ ದೂರ ಬಾಹ್ಯಾಕಾಶ ಜಾಲ (ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್)ಗೆ ರವಾನಿಸಲಾಯಿತು. ಇಲ್ಲಿಂದ ಛಾಯಾಚಿತ್ರಗಳನ್ನು ಬೆಂಗಳೂರಿನಲ್ಲಿರುವ ISROದ ಟೆಲಿಮೀಟ್ರಿ ಟ್ರ್ಯಾಕಿಂಗ್ ಅಂಡ್ ಕಮ್ಯಾಂಡ್ ಜಾಲ (ISTRAC)ಕ್ಕೆ ರವಾನಿಸಲಾಯಿತು.
ಈ ಚಿತ್ರಗಳಲ್ಲಿ ಕೆಲವು ಐದು ಮೀಟರ್‌ಗಳ ವರೆಗಿನ ಚಿತ್ರ ಸ್ಪಷ್ಟತೆ ಹೊಂದಿವೆ. ಚಂದ್ರನ ಮೇಲ್ಮೈಯ ನಿಖರ, ಸ್ಪಷ್ಟ ಚಿತ್ರಣ ನೀಡಿವೆ. ಇತರೆ ಚಂದ್ರ ಯಾತ್ರೆಗಳಿಂದ ಪ್ರಾಪ್ತ ಚಿತ್ರಗಳು 100 ಮೀಟರ್‌ಗಳವರೆಗಿನ ಚಿತ್ರ ಸ್ಪಷ್ಟತೆ ಹೊಂದಿದ್ದವು. [ಸೂಕ್ತ ಉಲ್ಲೇಖನ ಬೇಕು]
ದಿನಾಂಕ 29 ಅಕ್ಟೋಬರ್ 2008ರಂದು ಸಕ್ರಿಯಗೊಳಿಸಲಾದ ದೇಶೀಯ ಭೂಪ್ರದೇಶ ಮಾಪನಾ ಕ್ಯಾಮೆರಾ 26 ನವೆಂಬರ್‌ನಲ್ಲಿ ಚಂದ್ರನ ಮೇಲಿರುವ ಶಿಖರಗಳು ಮತ್ತು ಕಂದಕಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಿತು. ಈ ರೀತಿಯ ಛಾಯಾಚಿತ್ರಗಳು ISRO ಅಧಿಕಾರಿಗಳನ್ನು ಅಚ್ಚರಿಗೊಳಿಸಿತು. ಏಕೆಂದರೆ ಚಂದ್ರನ ಮೇಲ್ಮೈ ಬಹುತೇಕ ಕಂದಕಗಳಿಂದ ಕೂಡಿತ್ತು.[೬೨]
ಕ್ಷ-ಕಿರಣ ಸಂಕೇತಗಳ ಪತ್ತೆಹಚ್ಚುವಿಕೆ
[ಬದಲಾಯಿಸಿ]C1XS ಕ್ಷ-ಕಿರಣ ಕ್ಯಾಮೆರಾ ಮೂಲಕ ಅಲ್ಯುಮಿನಿಯಮ್, ಮೆಗ್ನೀಷಿಯಮ್ ಮತ್ತು ಸಿಲಿಕಾನ್‌ನ ಕ್ಷ-ಕಿರಣ ಅಂಶಗಳನ್ನು ಸೆರೆಹಿಡಿಯಲಾಯಿತು. ಕ್ಷ-ಕಿರಣ ಪ್ರತಿದೀಪ್ತಿ ವಿದ್ಯಮಾನ ಸಂಭವಿಸಲು ಕಾರಣವಾದ ಸೌರ ವಾತಾವರಣ ಸ್ಫೋಟ ಸಂಭವಿಸಿದ ಸಮಯ ಈ ಸಂಕೇತಗಳನ್ನು ಪಡೆಯಲಾಯಿತು. ಪ್ರತಿದೀಪ್ತಿಗೆ ಕಾರಣವಾದ ಸ್ಫೋಟವು ಅತಿ ಕಡಿಮೆ C1XS ಸಂವೇದನಾ ಶ್ರೇಣಿಯೊಳಗಿತ್ತು.[೬೩][೬೪][೬೫]
ಭೂಮಿಯ ಸಂಪೂರ್ಣ ಛಾಯಾಚಿತ್ರ
[ಬದಲಾಯಿಸಿ]ದಿನಾಂಕ 25 ಮಾರ್ಚ್ 2009ರಂದು, ಚಂದ್ರಯಾನವು ಭೂಮಿಯ ಸಂಪೂರ್ಣ ಚಿತ್ರಣವನ್ನು ಸೆರೆ ಹಿಡಿದು, ಅದನ್ನು ಭೂಮಿಗೆ ಹಿಂತಿರುಗಿ ಕಳುಹಿಸಿತು. TMC ಬಳಸಿ ಈ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಹಿಂದಿನ ಚಿತ್ರಣವು ಭೂಮಿಯ ಒಂದು ಭಾಗವನ್ನು ಮಾತ್ರ ಚಿತ್ರಿಸಿತ್ತು. ಹೊಸ ಚಿತ್ರಗಳಲ್ಲಿ ಏಷ್ಯಾ ಖಂಡ, ಅಫ್ರಿಕಾದ ಒಂದು ಭಾಗ, ಆಸ್ಟ್ರೇಲಿಯಾ ಕಾಣಸಿಗುತ್ತವೆ. ಭಾರತವು ಮಧ್ಯದಲ್ಲಿದೆ.[೬೬]
ಅಸಮರ್ಪಕ ನಿರ್ವಹಣೆ ಕಾರಣ 200 ಕಿ.ಮೀ.ಗೆ ಕಕ್ಷೆ ಏರಿಕೆ
[ಬದಲಾಯಿಸಿ]ಚಂದ್ರಯಾನದ ಎಲ್ಲಾ ಪ್ರಮುಖ ಧ್ಯೇಯಗಳನ್ನು ಪೂರ್ಣಗೊಳಿಸಿದ ನಂತರ, ನಿರ್ವಹಣೆ ದೋಷ ಕಂಡುಬಂದ ಕಾರಣ, ನವೆಂಬರ್ 2008ರಿಂದ ಚಂದ್ರನ ಮೇಲ್ಮೈಯಿಂದ 100 ಕಿ.ಮೀ. ಎತ್ತರದಲ್ಲಿದ್ದ ಕಕ್ಷೆಯನ್ನು 200 ಕಿ.ಮೀ.ಗಳಿಗೆ ಏರಿಸಲಾಯಿತು. ದಿನಾಂಕ 19 ಮೇ 2009ರಂದು 09:00 IST ಸಮಯದಿಂದ 10:00 IST ಸಮಯದವರೆಗೆ ಕಕ್ಷೆಯನ್ನು ಏರಿಸುವ ಪ್ರಕ್ರಿಯೆಗಳು ನಡೆಯಿತು. ಹೆಚ್ಚಿದ ಎತ್ತರದ ಕಕ್ಷೆಯಲ್ಲಿದ್ದ ನೌಕೆಯಿಂದ ಕಕ್ಷೆಯ ಪ್ರಕ್ಷುಬ್ಧತೆಗಳು, ಚಂದ್ರನ ಗುರುತ್ವಾಕರ್ಷಣಾ ಕ್ಷೇತ್ರ ಬದಲಾವಣೆಗಳು ಹಾಗೂ ವ್ಯಾಪಕವಾಗಿ ಚಂದ್ರನ ಮೇಲ್ಮೈಯ ಚಿತ್ರಣವನ್ನು ಇನ್ನಷ್ಟು ಅಧ್ಯಯನ ಮಾಡಲು ನೆರವಾಯಿತು.[೬೭] ಆದಾಗ್ಯೂ, ಕಕ್ಷೆಯನ್ನು ಬದಲಿಸುವ ನಿಜವಾದ ಕಾರಣವು ಪ್ರೋಬ್‌ನ ಉಷ್ಣಾಂಶವನ್ನು ಕೆಳಮಟ್ಟದಲ್ಲಿ ಇರಿಸುವ ಪ್ರಯತ್ನ ಎಂದು ನಂತರ ಬಹಿರಂಗವಾಯಿತು.[೬೮] "ಚಂದ್ರನ ಮೇಲ್ಮೈಯಿಂದ 100 ಕಿ.ಮೀ. ಎತ್ತರದಲ್ಲಿ ಉಷ್ಣಾಂಶವು(ಬಾಹ್ಯಾಕಾಶ ನೌಕೆಯ ಉಪವ್ಯವಸ್ಥೆಗಳದ್ದು) ಸುಮಾರು 75 ಡಿಗ್ರಿ ಸೆಲ್ಸಿಯಸ್‌ನಷ್ಟಿರಬಹುದು ಎಂದು ಊಹಿಸಲಾಗಿತ್ತು. ಆದರೆ ಅದು 75 ಡಿಗ್ರಿಗಳಿಗಿಂತಲೂ ಹೆಚ್ಚಾಗಿ, ಸಮಸ್ಯೆಗಳು ಉದ್ಭವವಾದವು. ನಾವು ಕಕ್ಷೆಯನ್ನು 200ಕಿ.ಮೀ.ಗಳಿಗೆ ಏರಿಸಬೇಕಾಯಿತು."[೬೯]
ಸ್ಟಾರ್ ಸಂವೇದಿ ವೈಫಲ್ಯದಿಂದ ಸ್ಥಾನ ಸಂವೇದನೆ
[ಬದಲಾಯಿಸಿ]ದಿಕ್ಕಿನ ಅನ್ವೇಷಣೆಗೆ ಚಂದ್ರಯಾತ್ರೆ ಒಯ್ಯುತ್ತಿದ್ದ ಎರಡು ಉಪಕರಣಗಳಲ್ಲಿ ಒಂದಾದ ಸ್ಟಾರ್ ಸಂವೇದಿ 9 ತಿಂಗಳ ಕಾರ್ಯನಿರ್ವಹಣೆ ನಂತರ ಕಕ್ಷೆಯಲ್ಲಿ ವಿಫಲವಾಯಿತು. ಆನಂತರ, ದ್ವಿ-ಅಕ್ಷೀಯ ಸೂರ್ಯ ಸಂವೇವಿಯನ್ನು ಬಳಸಿ, ಭೂಮಿಯಲ್ಲಿರುವ ಕೇಂದ್ರದಿಂದ ಸೂಚನೆ ತೆಗೆದುಕೊಂಡು, ಚಂದ್ರಯಾನದ ದಿಕ್ಕನ್ನು ಬ್ಯಾಕ್ ಅಪ್ ನಿಯಮವನ್ನು ಬಳಸಿಕೊಂಡು ನಿರ್ಣಯಿಸಲಾಯಿತು. ಮೂರು ಅಕ್ಷೀಯ ಭ್ರಮಣದರ್ಶಕ (ಜೈರೊಸ್ಕೋಪ್)ಗಳನ್ನು ಪರಿಷ್ಕರಿಸಲು ಇದನ್ನು ಬಳಸಲಾಯಿತು. ಇದರಿಂದಾಗಿ ಉಪಗ್ರಹದ ಕಾರ್ಯನಿರ್ವಹಣೆಗಳಿಗೆ ಅನುಕೂಲವಾಯಿತು. ಆದರೂ, ಕೆಲವು ವೈಫಲ್ಯಗಳು ನೌಕೆಯ ಜೀವಾವಧಿ ಕಡಿಮೆಗೊಳಿಸಿರಬಹುದು.[೫೯][೬೦][೬೧] ಮೊದಲ ಸಂವೇದಕಗಳು 26 ಏಪ್ರಿಲ್ 2009ರಂದು ವಿಫಲವಾಯಿತು. ದಿನಾಂಕ 16 ಮೇ 2009ರಂದು ಗುರುತಿಸಲಾದ ಎರಡನೆಯ ವೈಫಲ್ಯಕ್ಕೆ ಸೂರ್ಯನ ಮಿತಿಮೀರಿದ ವಿಕಿರಣ ಕಾರಣವೆಂದು ಹೇಳಲಾಯಿತು.[೭೦]
LROದೊಂದಿಗೆ ಬೈಸ್ಟ್ಯಾಟಿಕ್ RADAR ಪ್ರಯೋಗ
[ಬದಲಾಯಿಸಿ]ದಿನಾಂಕ 21 ಆಗಸ್ಟ್ 2009ರಂದು ಚಂದ್ರ ಸ್ಥಳಾನ್ವೇಷಣೆ ಉಪಗ್ರಹದೊಂದಿಗೆ ಚಂದ್ರಯಾನ-1ನ್ನು, ಚಂದ್ರನ ಮೇಲ್ಮೈಯಲ್ಲಿ ಘನೀಕೃತ ನೀರಿನ ಅಂಶವನ್ನು ಪತ್ತೆ ಮಾಡಲು ಬೈಸ್ಟ್ಯಾಟಿಕ್ ರೆಡಾರ್ ಪ್ರಯೋಗಕ್ಕೆ ಬಳಸಲಾಯಿತು. ಈ ಪ್ರಯೋಗದಲ್ಲಿ, ಚಂದ್ರಯಾನವು RADAR ಮಿಡಿತಗಳನ್ನು ಹೊರಸೂಸಿತು. ಮೇಲ್ಮೈಯಿಂದ ಪ್ರತಿಫಲಿಸಿದ ನಂತರ ಚಂದ್ರಯಾನ ಮತ್ತು LROದ ಗ್ರಾಹಕ (ರಿಸೀವರ್)ಗಳ ಮೂಲಕ ಇವು ಗ್ರಹಿಸಲ್ಪಟ್ಟವು. ಚಂದ್ರಯಾನದಲ್ಲಿರುವ Mini-SAR ಹಾಗೂ LROನಲ್ಲಿರುವ Mini-RF ಗ್ರಾಹಕಗಳನ್ನು ನಾಲ್ಕು ನಿಮಿಷಗಳ ಕಾಲ ಎರ್ಲ್ಯಾಂಗರ್ ಕಂದಕದತ್ತ ಹಾಯಿಸಿ, ಅವಲೋಕನಗಳನ್ನು ಮಾಡಲಾಯಿತು.[೭೧][೭೨][೭೩][೭೪] ಇದರ ಫಲವಾದ ಮಾಹಿತಿಯನ್ನು ಇನ್ನೂ ಸಂಸ್ಕರಿಸಿ, ಅರ್ಥೈಸಬೇಕಾಗಿದೆ.
ಚಂದ್ರಯಾತ್ರೆಯ ಅಂತ್ಯ
[ಬದಲಾಯಿಸಿ]ದಿನಾಂಕ 22 ಅಕ್ಟೋಬರ್ 2008ರಂದು ಉಡ್ಡಯನ ಮಾಡಲಾದ ಈ ಯಾನವು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸುವುದೆಂಬ ನಿರೀಕ್ಷೆಯಿತ್ತು. ಆದರೂ, 29 ಆಗಸ್ಟ್ 2009ರಂದು 09.02 (UTC)ಕ್ಕೆ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕ ಇದ್ದಕ್ಕಿದ್ದಂತೆ ಕಡಿತಗೊಂಡಿತು. ಈ ಬಾಹ್ಯಾಕಾಶ ಶೋಧಕವು 312 ದಿನಗಳ ಕಾಲ ಕಾರ್ಯನಿರ್ವಹಿಸಿತ್ತು. ನೌಕೆಯು ಇನ್ನೂ ಸಾವಿರ ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿಯೇ ಉಳಿದು ಅಂತಿಮವಾಗಿ ಚಂದ್ರನ ಮೇಲ್ಮೈಗೆ ಅಪ್ಪಳಿಸುತ್ತದೆ.[೭೫][೭೬]
ಚಂದ್ರಯಾನ-1ರ ವಿಜ್ಞಾನ ಸಲಹಾ ಮಂಡಳಿಯ ಸದಸ್ಯರೊಬ್ಬರು ಸಂಪರ್ಕದ ಕಡಿತಕ್ಕೆ ಯಾವುದೇ ಕಾರಣಗಳನ್ನು ನೀಡಲು ಕಷ್ಟವಾಗುತ್ತದೆಂದು ಹೇಳಿದರು.[೭೬] ISRO ಅಧ್ಯಕ್ಷ ಮಾಧವನ್ ನಾಯರ್, ಮಿತಿಮೀರಿದ ವಿಕಿರಣದ ಕಾರಣ, ಉಪಗ್ರಹದಲ್ಲಿದ್ದ ಎರಡೂ ಕಂಪ್ಯೂಟರ್ ವ್ಯವಸ್ಥೆಗಳನ್ನು ನಿಯಂತ್ರಿಸುವ ವಿದ್ಯುತ್ ಸರಬರಾಜು ಘಟಕಗಳು ವಿಫಲವಾದವು, ಹಾಗಾಗಿ ಸಂವಹನಾ ಸಂಪರ್ಕವು ಕಡಿತವಾಯಿತು.[೭೭] ಅಂತ್ಯಗೊಂಡ ಚಂದ್ರಯಾತ್ರೆಯು ಚಂದ್ರನ ಮೇಲೆ ಜೀವಜಲದ ಕುರುಹನ್ನು ಪತ್ತೆಹಚ್ಚಿತು.[೭೮]
ಪ್ರಾಥಮಿಕ ಉದ್ದೇಶಗಳ ಪೂರ್ಣಗೊಳಿಸುವಿಕೆ
[ಬದಲಾಯಿಸಿ]ಚಂದ್ರಯಾತ್ರೆಯು ಹತ್ತು ತಿಂಗಳಿಗಿಂತಲೂ ಕಡಿಮೆ ಅವಧಿಯಾಗಿ,ಉದ್ದೇಶಿತ ಜೀವಿತಾವಧಿ, ಎರಡು ವರ್ಷಗಳ ಅರ್ಧಬಾಗಕ್ಕಿಂತ ಕಡಿಮೆಯಾಗಿದ್ದರೂ,[೭೫][೭೭][೭೯] ವಿಜ್ಞಾನಿಗಳ ವಿಮರ್ಶೆಯ ಪ್ರಕಾರ, ಪ್ರಾಥಮಿಕ ಉದ್ದೇಶಗಳಲ್ಲಿ 95%ರಷ್ಟು ಸಂಪೂರ್ಣಗೊಂಡಿರುವುದರಿಂದ ಈ ಯಾನವು ಸಫಲ ಎಂದು ಹೇಳಿದ್ದಾರೆ. ಪ್ರಾಧಮಿಕ ಉದ್ದೇಶಗಳು ಕೆಳಕಂಡಂತಿವೆ:
- ಹನ್ನೊಂದು ವೈಜ್ಞಾನಿಕ ಉಪಕರಣಗಳನ್ನು ಬಳಸಿ ಜಟಿಲವಾದ/ಸಂಕೀರ್ಣವಾದ ಬಾಹ್ಯಾಕಾಶ ನೌಕೆಯನ್ನು ನಿರ್ಮಿಸುವುದು.
- ಕಕ್ಷೆಯನ್ನು ಏರಿಸುವ ಪ್ರಕ್ರಿಯೆಗಳ ಮೂಲಕ, ಭೂಮಿಯ ಸಮೀಪ ಕಕ್ಷೆಯಿಂದ ಉಪಗ್ರಹವನ್ನು ಚಂದ್ರನ ಸುತ್ತಲಿನ ವೃತ್ತಾಕಾರದ ಕಕ್ಷೆಯಲ್ಲಿ ಇರಿಸುವುದು.
- ಚಂದ್ರನ ಮೇಲೆ ಭಾರತದ ಧ್ವಜವನ್ನು ಸ್ಥಾಪಿಸುವುದು.
- ಛಾಯಾಚಿತ್ರಣ ಕಾರ್ಯಾಚರಣೆಗಳನ್ನು ನಡೆಸಿ, ಚಂದ್ರನ ಮಣ್ಣಿನಲ್ಲಿ ಖನಿಜಾಂಶಗಳ ಮಾಹಿತಿ ಸಂಗ್ರಹಿಸುವುದು.
- ದೂರದ ಬಾಹ್ಯಾಕಾಶ ಪತ್ತೆಹಚ್ಚುವ ಜಾಲ (ಡೀಪ್ ಸ್ಪೇಸ್ ಟ್ರ್ಯಾಕಿಂಗ್ ನೆಟ್ವರ್ಕ್) ಸ್ಥಾಪಿಸಿ ದೂರದ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಕಾರ್ಯನಿರ್ವಹಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವುದು.
ಚಂದ್ರಯಾತ್ರೆಯಿಂದ ಸಂಗ್ರಹಿಸಿದ ಅಂಕಿಅಂಶವನ್ನು ವಿಶ್ಲೇಷಣೆಗಾಗಿ ಭಾರತೀಯ ವಿಜ್ಞಾನಿಗಳು ಹಾಗೂ ಯುರೋಪ್ ಹಾಗೂ U.S.A. ಸಹಯೋಗಿಗಳಿಗೆ ಸಹ ವಿತರಿಸಲಾಗಿದೆ.[೫೯][೬೦][೬೧][೭೯]
ಸಂಗ್ರಹಿಸಲಾದ ಮಾಹಿತಿ ವಿಶ್ಲೇಷಣೆಯ ಫಲಿತಾಂಶ
[ಬದಲಾಯಿಸಿ]ಚಂದ್ರವು ಒಮ್ಮೆ ಸಂಪೂರ್ಣವಾಗಿ ಕರಗಿದ ಸ್ಥಿತಿಯಲ್ಲಿತ್ತು ಎಂಬ ಶಿಲಾದ್ರವ ಸಾಗರ ಆಧಾರಕಲ್ಪನೆಯನ್ನು ಚಂದ್ರಯಾನದ ಮೂನ್ ಮಿನರಾಲಜಿ ಮ್ಯಾಪರ್(ಚಂದ್ರ ಖನಿಜಶಾಸ್ತ್ರ ಮಾಪಕ)ವು ಖಚಿತಪಡಿಸಿದೆ. "ಶಿಲಾದ್ರವ ಸಾಗರ ಆಧಾರಕಲ್ಪನೆಯನ್ನು ಯಾವುದೇ ಸಂಶಯವಿಲ್ಲದೆ ಸಾಧಿಸುತ್ತದೆ. ಇನ್ಯಾವ ರೀತಿಯಲ್ಲೂ ಸಹ ಈ ದೊಡ್ಡ ಪ್ರಮಾಣದ ಶಿಲೆಯ ವಿಧವು ರೂಪುಗೊಂಡಿರಲಾರದು" ಎಂದು USನ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿರುವ NASA-ಬೆಂಬಲಿತ ಸ್ಪೆಕ್ಟ್ರೊಸ್ಕೊಪಿಕ್ ಕೇಂದ್ರದಲ್ಲಿರುವ ವಿಜ್ಞಾನ ವ್ಯವಸ್ಥಾಪಕ ಕಾರ್ಲ್ ಪೀಟರ್ಸ್ ತಿಳಿಸಿದರು.[೮೦]
ಚಂದ್ರಯಾನ-1ನಲ್ಲಿರುವ ಭೂಪ್ರದೇಶ ಮಾಪಕ ಕ್ಯಾಮೆರಾ ಸುಮಾರು 70,000ಕ್ಕೂ ಹೆಚ್ಚು ಮೂರು ಆಯಾಮದ ಚಿತ್ರಗಳನ್ನು ತೆಗೆದುಕೊಂಡಿರುವುದರ ಜೊತೆಗೆ, US ಬಾಹ್ಯಾಕಾಶ ನೌಕೆ ಅಪೋಲೊ 15 ಚಂದ್ರನ ಮೇಲ್ಮೈ ಮೇಲೆ ಇಳಿದುಕೊಂಡ ಸ್ಥಳದ ಚಿತ್ರಗಳನ್ನೂ ಸಹ ದಾಖಲು ಮಾಡಿದೆ. ಇದರಿಂದಾಗಿ, ನಾಲ್ಕು ದಶಕಗಳ ಹಿಂದೆ ಚಂದ್ರನ ಮೇಲೆ ಇಳಿದ US ಚಂದ್ರಯಾತ್ರೆಯು ಸುಳ್ಳು ಎಂಬ ಒಳಸಂಚಿನ ಸಿದ್ಧಾಂತಗಳನ್ನು ಅದು ತಳ್ಳಿಹಾಕಿದೆ.[೮೧][೮೨]
'ISROದ ಬಾಹ್ಯಾಕಾಶ ಉಪಕರಣಗಳಾದ TMC ಮತ್ತು HySI ಚಂದ್ರನ ಮೇಲ್ಮೈ ವ್ಯಾಪ್ತಿಯ 70%ರಷ್ಟು, M3 95%ಕ್ಕಿಂತಲೂ ಹೆಚ್ಚು ವ್ಯಾಪ್ತಿ, ಹಾಗೂ SIR-2 ಚಂದ್ರನ ಖನಿಜಾಂಶದ ಕುರಿತು ಉನ್ನತ ಚಿತ್ರ ಸ್ಪಷ್ಟತೆಯ ಸ್ಪೆಕ್ಟ್ರಲ್ ದತ್ತಾಂಶವನ್ನು ಒದಗಿಸಿದೆ' ಎಂದು ISRO ತಿಳಿಸಿದೆ.
ಚಂದ್ರನ ಧ್ರುವ ವಲಯಗಳಿಂದ ಕುತೂಹಲಕಾರಿ ದತ್ತಾಂಶವು ಲೂನಾರ್ ಲೇಸರ್ ರೇಂಜಿಂಗ್ ಉಪಕರಣ (LLRI) ಹಾಗೂ ISROದ ಹೆಚ್ಚಿನ ಶಕ್ತಿಯ ಕ್ಷ-ಕಿರಣ ಸ್ಪೆಕ್ಟ್ರೊಮೀಟರ್ (HEX), ಜೊತೆಗೆ, USAದ ಮಿನಿಯೆಚರ್ ಸಿಂತೆಟಿಕ್ ಅಪರ್ಚರ್ ರೆಡಾರ್ (Mini-SAR) ಮೂಲಕ ದೊರೆತಿದೆ.
LLRI ಚಂದ್ರನ ಎರಡೂ ಧ್ರುವಗಳು ಹಾಗೂ ಹೆಚ್ಚುವರಿ ಚಂದ್ರ ವಲಯಗಳನ್ನು ಒಳಗೊಂಡಿತ್ತು. HEX ಚಂದ್ರನ ಧ್ರುವಗಳ ಮೇಲೆ ಸುಮಾರು 200 ಬಾರಿ ಪರಿಭ್ರಮಿಸಿತು. Mini-SAR ಚಂದ್ರನ ಉತ್ತರ ಹಾಗೂ ದಕ್ಷಿಣ ಧ್ರುವಗಳೆರಡರ ಸಂಪೂರ್ಣ ವ್ಯಾಪ್ತಿಯ ಬಗ್ಗೆ ಮಾಹಿತಿ ಒದಗಿಸಿದವು.
ಚಂದ್ರಯಾತ್ರೆಯ ಅವಧಿಯ ಸಂದರ್ಭದಲ್ಲಿ, ಚಂದ್ರಯಾನ-1 ಇನ್ನೊಂದು ESA ಉಪಕರಣವಾದ ಇಮೇಜಿಂಗ್ X-ray ಸ್ಪೆಕ್ಟ್ರೋಮೀಟರ್(ಛಾಯಾಚಿತ್ರಣ ಕ್ಷ-ಕಿರಣ ವರ್ಣಪಟಲ) ಮಾಪಕ (C1XS) ಎರಡು ಡಜನ್‌ಗಿಂತಲೂ ಹೆಚ್ಚು ದುರ್ಬಲ ಸೌರ ಸ್ಫೋಟಗಳನ್ನು ಗುರುತಿಸಿತು. ಬಲ್ಗೇರಿಯಾದ ಬಾಹ್ಯಾಕಾಶ ಉಪಕರಣ ವಿಕಿರಣ ಡೋಸ್ ನಿಗಾ ಘಟಕ (RADOM)) ಉಡ್ಡಯನದ ದಿನದಂದೇ ಸಕ್ರಿಯಗೊಳಿಸಲಾಗಿತ್ತು. ಚಂದ್ರಯಾತ್ರೆ ಅಂತ್ಯದ ವರೆಗೂ ಅದು ಕೆಲಸ ಮಾಡುತ್ತಲಿತ್ತು.
ಭಾರತದ ವಿಜ್ಞಾನಿಗಳು ಹಾಗೂ ಭಾಗವಹಿಸಿದ ನಿಯೋಗಗಳು ಚಂದ್ರಯಾನ-೧ ಯೋಜನೆಯ ಅತ್ಯುತ್ತಮ ನಿರ್ವಹಣೆ ಹಾಗೂ ಬಾಹ್ಯಾಕಾಶ ನೌಕೆ ಕಳುಹಿಸಿದ ಉನ್ನತ ಅಂಕಿಅಂಶ ಮಾಹಿತಿಯ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ISRO ಹೇಳಿದೆ.
ಲಭ್ಯ ದತ್ತಾಂಶದ ಸಂಗ್ರಹಗಳನ್ನು ಆಧರಿಸಿ ವೈಜ್ಞಾನಿಕ ಯೋಜನೆಗಳನ್ನು ಅವರು ರೂಪಿಸಲಾರಂಭಿಸಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ, ಚಂದ್ರನ ಮೇಲ್ಮೈಲಕ್ಷಣ, ಖನಿಜ ಮತ್ತು ಚಂದ್ರನ ರಾಸಾಯನಿಕ ಅಂಶಗಳು ಹಾಗೂ ಸಂಬಂಧಿತ ವಿಚಾರಗಳನ್ನು ಪ್ರಕಟಿಸುವ ನಿರೀಕ್ಷಿಯಿದೆ ಎಂದು ISRO ತಿಳಿಸಿದೆ.[೮೩]
ಕಾಂತೀಯ ಕ್ಷೇತ್ರದ ಅನುಪಸ್ಥಿತಿಯಲ್ಲಿ ಸೌರ ಮಾರುತ ಮತ್ತು ಚಂದ್ರನಂತಹ ಕಾಯದ ನಡುವಿನ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡುವುದರಲ್ಲಿ ಚಂದ್ರಯಾನ-1 ಚಂದ್ರಯಾತ್ರೆಯ ಉಪಕರಣ ವಿಜ್ಞಾನಿಗಳಿಗೆ ನೆರವಾಗಿದೆ ಎಂದು ISRO ಆಯೋಜಿಸಿದ ಸಭೆಯಲ್ಲಿ ತಿಳಿಸಲಾಯಿತು.[೮೪]
ಚಂದ್ರನ ಕಕ್ಷೆಯಲ್ಲಿ ಹತ್ತು ತಿಂಗಳ ಪರಿಭ್ರಣದಲ್ಲಿ, ಚಂದ್ರಯಾನ-1ರ ಕ್ಷ-ಕಿರಣ ಸ್ಪೆಕ್ಟ್ರೊಮೀಟರ್ (C1XS) ಚಂದ್ರನ ಮೇಲ್ಮೈಯಲ್ಲಿ ಟಿಟೇನಿಯಮ್ ಗುರುತಿಸಿದೆ ಹಾಗೂ ಕ್ಯಾಲ್ಸಿಯಂ ಉಪಸ್ಥಿತಿಯನ್ನು ದೃಢಪಡಿಸಿದೆ. ಜೊತೆಗೆ ಚಂದ್ರನ ಮೇಲ್ಮೈನಲ್ಲಿ ಮೆಗ್ನೀಷಿಯಮ್, ಅಲ್ಯೂಮಿನಿಯಮ್ ಮತ್ತು ಕಬ್ಬಿಣದ ಅಂಶಗಳ ಅತಿ ನಿಖರ ಅಳತೆಗಳನ್ನು ಸಂಗ್ರಹಿಸಿದೆ.[೮೫]
ಚಂದ್ರನ ಮೇಲೆ ನೀರಿನ ಅಂಶ ಪತ್ತೆ
[ಬದಲಾಯಿಸಿ]ಚಂದ್ರಯಾನ-1ರಲ್ಲಿದ್ದ ನಾಸಾದ ಚಂದ್ರ ಖನಿಜ ಮಾಪಕ (ಮೂನ್ ಮಿನೆರಾಲಜಿ ಮ್ಯಾಪರ್) (M3) ಚಂದ್ರನ ಮೇಲೆ ನೀರನ್ನು ಪತ್ತೆಮಾಡಿದೆ ಎಂದು ಸೈಯನ್ಸ್ ಮ್ಯಾಗಜೀನ್ ವರದಿ ಮಾಡಿತ್ತು. ಇದನ್ನು 24 ಸೆಪ್ಟೆಂಬರ್ 2009ರಂದು ಖಚಿತಪಡಿಸಲಾಯಿತು.[೮೬] ಚಂದ್ರನ ಮೇಲ್ಮೈಯಲ್ಲಿ 2.8-3.0 µm ಸನಿಹದಲ್ಲಿ M3 ಹೀರಿಕೊಳ್ಳುವ ಲಕ್ಷಣಗಳನ್ನು ಗುರುತಿಸಿತ್ತು. ಸಿಲಿಕೇಟ್ ಕಾಯಗಳಿಗೆ, ಇಂತಹ ಲಕ್ಷಣಗಳನ್ನು ಸಾಮಾನ್ಯವಾಗಿ ಹೈಡ್ರಾಕ್ಸಿಲ್- ಮತ್ತು/ಅಥವಾ ನೀರಿನ ಅಂಶ ಹೊಂದಿರುವ ವಸ್ತುಗಳು ಕಾರಣವೆಂದು ಹೇಳಲಾಗಿದೆ. ಚಂದ್ರನ ಮೇಲೆ, ಈ ಲಕ್ಷಣವು ವ್ಯಾಪಕವಾಗಿ ವಿಸ್ತರಣೆಯಾದ ಹೀರುವಿಕೆಯೆಂದು ಭಾವಿಸಲಾಗಿದೆ. ಹೀರಿಕೊಳ್ಳುವಿಕೆಯು ತಂಪಾಗಿರುವ ಎತ್ತರದ ವಲಯಗಳಲ್ಲಿ ಹಾಗೂ ಹಲವು ಹೊಸ ಫೆಲ್ಡ್‌ಸ್ಪಾರ್ ಕಂದಕಗಳಲ್ಲಿ ಅತಿ ಹೆಚ್ಚಾಗಿರುವುದು ಕಂಡುಬಂದಿದೆ. ಸೂರ್ಯನ ಬೆಳಕಿನಲ್ಲಿರುವ M3 ದತ್ತಾಂಶ ಹಾಗೂ ನ್ಯೂಟ್ರಾನ್ ಸ್ಪೆಕ್ಟ್ರೊಮೀಟರ್ H ಅಬನ್ಡನ್ಸ್ ದತ್ತಾಂಶಗಳಲ್ಲಿ, ಹೀರಿಕೆಯ ಗುಣದಲ್ಲಿ ಸಾಮಾನ್ಯ ಪರಸ್ಪರ ಸಂಬಂಧದ ಕೊರತೆಯಿಂದ,OH ಹಾಗೂ H2O ಕಣಗಳ ರಚನೆ ಮತ್ತು ಧಾರಣೆಯು ಸತತವಾಗಿ ನಡೆಯುವ ಮೇಲ್ಮೈಯ ಪ್ರಕ್ರಿಯೆ ಎಂದು ಸೂಚಿಸುತ್ತದೆ. OH/H2O ರಚನಾ ಪ್ರಕ್ರಿಯೆಗಳು ಧ್ರುವೀಯ ಶೀತಲ ಆವರಣಗಳನ್ನು ಪೋಷಿಸಿ, ಚಂದ್ರನ ರೆಗಲಿತ್ (ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ)ಮಾನವನ ಪರಿಶೋಧನಾ ಯತ್ನಗಳಿಗೆ ದ್ರವ್ಯಗಳ ಸೂಕ್ತ ಮೂಲವಾಗಬಹುದು.
ದಿನಾಂಕ 29 ಆಗಸ್ಟ್ 2009ರಂದು, ಚಂದ್ರಯಾನ-1ರಲ್ಲಿದ್ದ ಅಕಾಲಿಕವಾಗಿ ನಿಂತುಹೋದ 11 ಉಪಕರಣಗಳ ಪೈಕಿ, ಚಂದ್ರನ ಖನಿಜ ಮಾಪಕ (M3) ಎಂಬ ಇಮೇಜಿಂಗ್ ವರ್ಣಪಟಲ ಮಾಪಕ ಸಹ ಒಂದಾಗಿತ್ತು. ಇಡೀ ಚಂದ್ರನ ಮೇಲ್ಮೈಯ ಪ್ರಥಮ ಖನಿಜ ಮಾಪನವನ್ನು ಒದಗಿಸುವುದು M3ಯ ಧ್ಯೇಯವಾಗಿತ್ತು.
ಚಂದ್ರನ ಮೇಲೆ ನೀರಿನ ಕುರುಹುಗಳಿರುವ ಸಾಧ್ಯತೆಯನ್ನು ಕುರಿತು ವಿಜ್ಞಾನಿಗಳು ದಶಕಗಳಿಂದಲೂ ವಾದಿಸಿದ್ದಾರೆ. ದಶಕಗಳ ಕಾಲ ಮುಂದುವರೆದಿದ್ದ ಈ ಚರ್ಚೆಯು ಅಂತ್ಯಗೊಂಡಿದೆ ಎಂದು ವಿಜ್ಞಾನಿಗಳು ಹೆಚ್ಚು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. "ಚಂದ್ರನಲ್ಲಿ ಎಲ್ಲೆಡೆಯೂ ನೀರಿನಂಶಗಳುಂಟು; ಕೇವಲ ಖನಿಜಗಳಲ್ಲಿ ಮಾತ್ರ ಸೇರಿಕೊಂಡಿಲ್ಲ, ಆದರೆ ಒಡೆದಿರುವಂತಹ ಮೇಲ್ಮೈಯಲ್ಲಿ ಹರಡಿಕೊಂಡಿದೆ; ಇನ್ನೂ ಆಳದಲ್ಲಿ ನೀರ್ಗಡ್ಡೆಯ ಫಲಕಗಳು ಅಥವಾ ಬ್ಲಾಕ್‌ಗಳಲ್ಲಿ ಹರಡಿದೆ” NASAದ ಚಂದ್ರ ಶೋಧನಾ ಉಪಗ್ರಹವು ಮೂಲಕ ಪ್ರಾಪ್ತವಾದ ಫಲಿತಾಂಶಗಳೂ ಸಹ ನೀರಿನ ಅಂಶಗಳಿರುವ ವಿವಿಧ ರೂಪದ ಸಂಕೇತಗಳನ್ನು ರವಾನಿಸುತ್ತಿವೆ.[೮೭][೮೮]
ಚಂದ್ರ ಸ್ವಯಂ ನೀರನ್ನು ಉತ್ಪಾದಿಸುವುದು ಹೇಗೆ
[ಬದಲಾಯಿಸಿ]ಚಂದ್ರಗ್ರಹವು ಹೇಗೆ 'ತನ್ನದೇ ಆದ ನೀರಿನ ಅಂಶವನ್ನು ಉತ್ಪಾದಿಸುತ್ತದೆ' ಎಂಬುದನ್ನು ಚಂದ್ರಯಾನ-1ರಿಂದ ಪ್ರಾಪ್ತವಾದ ಹೊಸ ದತ್ತಾಂಶವು ಹೊರಗೆಡಹಿದೆ. ಬೃಹದಾಕಾರದ ಒಂದು ಸ್ಪಂಜಿನಂತೆ, ಸೂರ್ಯನಿಂದ ಹೊರಬರುವ ವಿದ್ಯುದಾವೇಶಿತ ಕಣಗಳನ್ನು ಹೀರಿಕೊಳ್ಳುತ್ತದೆ. ಈ ಕಣಗಳು ಚಂದ್ರನ ಮೇಲ್ಮೈ ಮೇಲೆ ಆಮ್ಲಜನಕದೊಂದಿಗೆ ಪರಸ್ಪರ ಕ್ರಿಯೆ ನಡೆಸಿ, ನೀರನ್ನು ಉತ್ಪಾದಿಸುತ್ತದೆ.
ಚಂದ್ರಯಾನ-1ರಲ್ಲಿರುವ 'ಸಬ್ keV ಅಣು ಪ್ರತಿಫಲಿತ ವಿಶ್ಲೇಷಕ' ಅಥವಾ SARA ಎಂಬ ಒಂದು ವೈಜ್ಞಾನಿಕ ಉಪಕರಣವು ಈ ಸಂಶೋಧನೆ ಮಾಡಿತ್ತು. ಪ್ಲಾನೆಟರಿ ಅಂಡ್ ಸ್ಪೇಸ್ ಸೈಯನ್ಸ್ ಜರ್ನಲ್‌ನ ಇತ್ತೀಚೆಗಿನ ಸಂಚಿಕೆಯಲ್ಲಿ ಇದನ್ನು ಪ್ರಕಟಿಸಲಾಗಿತ್ತು.
ಐರೋಪ್ಯ ಬಾಹ್ಯಾಕಾಶ ನಿಯೋಗ (ಯುರೋಪಿಯನ್ ಸ್ಪೇಸ್ ಏಜೆನ್ಸಿ) (ESA) ವಿಜ್ಞಾನಿಗಳ ಪ್ರಕಾರ, ಸೌರ ವಾಯುಗಳಿಂದ ಹೊರಸೂಸುವ ಜಲಜನಕದ ಬೀಜಕಣಗಳನ್ನು ಚಂದ್ರನ ರೆಗಲಿತ್‌ಗಳು(ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ) ಹೀರಿಕೊಳ್ಳುತ್ತವೆ. ಜಲಜನಕದ ಬೀಜಕಣಗಳು ಹಾಗೂ ಧೂಳುಕಣಗಳಲ್ಲಿರುವ ಆಮ್ಲಜನಕದ ನಡುವೆ ಪರಸ್ಪರ ಕ್ರಿಯೆಯಾಗಿ, ಹೈಡ್ರಾಕ್ಸಿಲ್‌ಗಳು ಹಾಗೂ ನೀರನ್ನು ಉತ್ಪಾದಿಸುವುದೆಂದು ನಿರೀಕ್ಷಿಸಲಾಗಿದೆ.
ESA ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ SARAವನ್ನು ಚಂದ್ರನ ಮೇಲ್ಮೈ ರಚನೆ ಹಾಗೂ ಸೌರ ವಾಯು-ಮೇಲ್ಮೈ ಪರಸ್ಪರ ಕ್ರಿಯೆಗಳ ಅಧ್ಯಯನ ನಡೆಸಲು ವಿನ್ಯಾಸ ಮಾಡಲಾಗಿತ್ತು. ಭಾರತೀಯ ಬಾಹ್ಯಾಕಾಶ ಯಾನದಲ್ಲಿದ್ದ 'ಚಂದ್ರ ಖನಿಜ ಮಾಪಕ' ಎಂಬ ಇನ್ನೊಂದು ಉಪಕರಣವು ಛಾಯಾಚಿತ್ರಣ ಸ್ಪೆಕ್ಟ್ರೊಮೀಟರ್ ಆಗಿದ್ದು, ಇದನ್ನು U.S. ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಮೊದಲು ನೀರಿನ ಕಣಗಳನ್ನು ಪತ್ತೆ ಮಾಡಿತು.
SARA ಹೊರಡಿಸಿದ ಫಲಿತಾಂಶಗಳು ಒಂದು ನಿಗೂಢ ವಿಷಯದ ಬಗ್ಗೆ ಗಮನಸೆಳೆಯಿತು: ಜಲಜನಕದ ಎಲ್ಲಾ ಬೀಜಕಣಗಳನ್ನೂ ಹೀರಿಕೊಳ್ಳಲಾಗುವುದಿಲ್ಲ. ಐದು ಬೀಜಕಣಗಳಲ್ಲಿ ಒಂದು ಬಾಹ್ಯಾಕಾಶಕ್ಕೆ ಹಿಂದಕ್ಕೆ ಪುಟಿದು, ಜಲಜನಕದ ಒಂದು ಅಣುವಾಗುತ್ತದೆ. 'ನಾವು ಇದನ್ನೆಲ್ಲ ನೋಡುತ್ತೇವೆಂದು ನಿರೀಕ್ಷಿಸಲೇ ಇಲ್ಲ' ಎಂದು ಸ್ವೀಡಿಷ್ ಬಾಹ್ಯಾಕಾಶ ಭೌತವಿಜ್ಞಾನ ಸಂಸ್ಥೆಯ ಹಾಗೂ SARAದ ಯುರೋಪಿಯನ್ ಪ್ರಮುಖ ಸಂಶೋಧಕ ಸ್ಟಾಸ್ ಬಾರಾಬಾಷ್ ಉದ್ಗರಿಸಿದರು.
ಚಂದ್ರನ ದುರ್ಬಲ ಗುರುತ್ವಾಕರ್ಷಣೆಯಿಂದ ವಿಚಲನಕ್ಕೊಳಗಾಗದೆ ಜಲಜನಕವು ಪ್ರತಿಸೆಕೆಂಡ್‌ಗೆ ಸುಮಾರು 200 ಕಿ.ಮೀ. ವೇಗದಲ್ಲಿ ಎಗರಿಹೋಗುತ್ತದೆಂದು ತಂಡವು ಪತ್ತೆಹಚ್ಚಿದೆ.
ಬುಧಗ್ರಹದತ್ತ ಕಳುಹಿಸಲು ESAದ ಬೆಪಿಕೊಲೊಂಬೊ ಬಾಹ್ಯಾಕಾಶಯಾನವನ್ನು ಸಿದ್ಧಪಡಿಸುತ್ತಿರುವ ವಿಜ್ಞಾನಿಗಳಿಗೆ ಈ ಜ್ಞಾನವು ಸಮಯೋಪಯುಕ್ತ ಸಲಹೆ ನೀಡಿದೆ. ಈ ಯಾನವು SARAವನ್ನು ಹೋಲುವ ಎರಡು ಉಪಕರಣಗಳನ್ನು ಹೊತ್ತೊಯ್ಯುತ್ತದೆ. ಅತ್ಯಂತ ಒಳಗಿರುವ ಗ್ರಹವು ಚಂದ್ರನಿಗಿಂತಲೂ ಹೆಚ್ಚು ಪಟ್ಟು ಜಲಜನಕವನ್ನು ಪ್ರತಿಫಲಿಸುತ್ತದೆ ಎಂಬುದನ್ನು ಇದು ಪತ್ತೆ ಮಾಡುವ ನಿರೀಕ್ಷೆಯಿದೆ. ಏಕೆಂದರೆ, ಸೂರ್ಯನಿಗೆ ಹತ್ತಿರವಿರುವ ಸೌರವಾಯುವು ಹೆಚ್ಚು ಸಾಂದ್ರತೆ ಹೊಂದಿರುತ್ತದೆ.[೮೯]
ಚಂದ್ರನ ಮೇಲೆ ಗುಹೆಗಳ ಪತ್ತೆ
[ಬದಲಾಯಿಸಿ]ಚಂದ್ರಯಾನ-1 ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಗುಹೆಗಳಿರುವುದನ್ನು ಪತ್ತೆ ಮಾಡಿದೆ. ಇವು ಚಂದ್ರನ ಮೇಲಿನ ಮಾನವನಿಗೆ ಆಶ್ರಯವಾಗಿ ಕಾರ್ಯನಿರ್ವಹಿಸಬಹುದು. ಚಂದ್ರನ ಭೂಮಧ್ಯರೇಖೆಯಲ್ಲಿ ಪತ್ತೆಯಾದ ಸುರಂಗವು ಒಂದು ಖಾಲಿಯಾದ ಜ್ವಾಲಾಮುಖಿಯ ನಾಳವಾಗಿದೆ. ಇದು ಸುಮಾರು ಎರಡು ಕಿ.ಮೀ. ಉದ್ದ ಹಾಗೂ 360 ಮೀಟರ್ ಅಗಲವಿದೆ. ಅಹ್ಮದಾಬಾದ್‌ನಲ್ಲಿರುವ ಬಾಹ್ಯಾಕಾಶ ಅನ್ವಯಿಕ ಕೇಂದ್ರ (SAC)ದ ವಿಜ್ಞಾನಿ ಎ ಎಸ್ ಆರ್ಯ ಅವರ ಪ್ರಕಾರ, ಇದು ಚಂದ್ರನ ಮೇಲೆ ಮಾನವನ ವಸಾಹತಿಗೆ ಸಮರ್ಥ ತಾಣವಾಗಬಹುದು. ಇದಕ್ಕೂ ಮುಂಚೆ, ಕಗೂಯಾ ಎಂಬ ಜಪಾನೀ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಗುಹೆಯನ್ನು ಪತ್ತೆ ಮಾಡಿತ್ತು.[೯೦]
ಚಂದ್ರಯಾನ-1ಕ್ಕೆ ಪ್ರಶಸ್ತಿ
[ಬದಲಾಯಿಸಿ]The ಅಮೆರಿಕನ್ ವಾಯುಯಾನ ಮತ್ತು ಗಗನಯಾನ ಸಂಸ್ಥೆ (AIAA) ISROದ ಚಂದ್ರಯಾನ-1ನ್ನು ಯಾತ್ರೆಯನ್ನು ವಾರ್ಷಿಕ AIAA SPACE 2009 ಪ್ರಶಸ್ತಿ ಪುರಸ್ಕತರ ಪೈಕಿ ಒಂದೆಂದು ಆಯ್ಕೆ ಮಾಡಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವವಾದ ಕೊಡುಗೆಗಳನ್ನು ಗುರುತಿಸಿ ಪುರಸ್ಕರಿಸುತ್ತದೆ.
ಅಂತಾರಾಷ್ಟ್ರೀಯ ಚಂದ್ರ ಪರಿಶೋಧನಾ ಕಾರ್ಯಕಾರೀ ತಂಡವು (ILEWG) ಚಂದ್ರಯಾನ-1 ತಂಡಕ್ಕೆ 'ಅಂತಾರಾಷ್ಟ್ರೀಯ ಸಹಕಾರ ಪ್ರಶಸ್ತಿ' ನೀಡಲು ಆಯ್ಕೆ ಮಾಡಿತು. ಎಂ. ಅಣ್ಣಾದುರೈ, ಚಂದ್ರಯಾನ-1 ಯೋಜನಾ ನಿರ್ದೇಶಕರು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಚಂದ್ರಯಾನ ತಂಡವನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಯಿತು. ಹಿಂದೆಂದೂ ಇರದಷ್ಟು ಬಹುತೇಕ ಅಂತಾರಾಷ್ಟ್ರೀಯ ಮಟ್ಟದ ಚಂದ್ರಯಾನ ಉಪಕರಣಗಳಿಗೆ (ಭಾರತ, 17 ಐರೋಪ್ಯ ದೇಶಗಳನ್ನು ಪ್ರತಿನಿಧಿಸುವಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ, ನಾಸಾ ಹಾಗೂ ಬಲ್ಗೇರಿಯಾಸೇರಿದಂತೆ 20 ರಾಷ್ಟ್ರಗಳ ಉಪಕರಣಗಳು) ಯಾನದಲ್ಲಿ ಸ್ಥಳಾವಾಕಾಶ ಕಲ್ಪಿಸಿದ ಮತ್ತು ಪ್ರಯೋಗಗಳನ್ನು ನಡೆಸಿ, 22 ಅಕ್ಟೋಬರ್ 2008ರಂದು PSLV ರಾಕೆಟ್ ಮೂಲಕ ಶೋಧಕವನ್ನು ಯಶಸ್ವಿಯಾಗಿ ಹಾರಿಸಿ, ಆನಂತರ ಚಂದ್ರನೌಕೆಯನ್ನು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ರವಾನಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.[೯೧]
ತಂಡ
[ಬದಲಾಯಿಸಿ]ಚಂದ್ರಯಾನ-1 ಯೋಜನೆಯ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳೆಂದು ಪರಿಗಣಿತರಾದವರು:[೯೨][೯೩][೯೪]
- ಜಿ. ಮಾಧವನ್ ನಾಯರ್ – ಅಧ್ಯಕ್ಷರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
- ಡಾ. ಟಿ. ಕೆ. ಅಲೆಕ್ಸ್ – ನಿರ್ದೇಶಕರು, ISAC (ISRO ಉಪಗ್ರಹ ಕೇಂದ್ರ)
- ಮೈಲ್‌ಸ್ವಾಮಿ ಅಣ್ಣಾದುರೈ – ಯೋಜನಾ ನಿರ್ದೇಶಕರು, ಚಂದ್ರಯಾನ-1
- ಎಸ್. ಕೆ. ಶಿವಕುಮಾರ್ – ನಿರ್ದೇಶಕರು - ದೂರಸ್ಥಮಾಪಕ, ಟ್ರಾಕಿಂಗ್ ಮತ್ತು ಆದೇಶ ಜಾಲ
- ಎಂ. ಪಿಚೈಮಣಿ – ನಿರ್ವಹಣಾ ನಿರ್ದೇಶಕರು, ಚಂದ್ರಯಾನ-1
- ಲಿಯೊ ಜ್ಯಾಕ್ಸನ್ ಜಾನ್ - ಬಾಹ್ಯಾಕಾಶ ನಿರ್ವಹಣಾ ನಿರ್ದೇಶಕರು, ಚಂದ್ರಯಾನ-1
- ಡಾ. ಕೆ. ರಾಧಾಕೃಷ್ಣನ್ - ನಿರ್ದೇಶಕರು, VSSC
- ಜಾರ್ಜ್ ಕೋಷಿ - ಯೋಜನಾ ನಿರ್ದೇಶಕರು, PSLV-C11
- ಶ್ರೀನಿವಾಸ ಹೆಗ್ಡೆ – ಯೋಜನಾ ನಿರ್ದೇಶಕರು, ಚಂದ್ರಯಾನ-1
- ಎಂ ಸಿ ದತ್ತನ್ – ನಿರ್ದೇಶಕರು, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟ
- ಪ್ರೊ. ಜೆ. ಎನ್. ಗೋಸ್ವಾಮಿ - ನಿರ್ದೇಶಕರು, ಭೌತವೈಜ್ಞಾನಿಕ ಸಂಶೋಧನಾ ಪ್ರಯೋಗಾಲಯ ಹಾಗೂ ಚಂದ್ರಯಾನ-1ರ ಪ್ರಮುಖ ವೈಜ್ಞಾನಿಕ ಸಂಶೋಧನಾಕಾರ
ISRO ಚಂದ್ರಯಾನದ ಎರಡನೆಯ ಆವೃತ್ತಿಯ ಕುರಿತು ಯೋಜನೆ ರೂಪಿಸುತ್ತಿದ್ದು,ಇದಕ್ಕೆ ಚಂದ್ರಯಾನ-2 ಹೆಸರಿಸಲಾಗಿದೆ. ಇಸ್ರೊದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್‌ರ ಪ್ರಕಾರ, 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO), ಚಂದ್ರಯಾನ-2 ಯೋಜನೆಯ ಅಂಗವಾಗಿ, 2013ರಷ್ಟರಲ್ಲಿ ಚಂದ್ರನ ಮೇಲೆ ಒಂದು ಭಾರತೀಯ, ಇನ್ನೊಂದು ರಷ್ಯನ್ ಸೇರಿದಂತೆ ಎರಡು ಮೋಟಾರ್-ಚಾಲಿತ (ರೊವರ್)ಗಳನ್ನು ಇಳಿಸಲು ಆಶಿಸಿದೆ. ಚಂದ್ರನ ಮೈಮೇಲೆ ಗಾಲಿಗಳ ಮೂಲಕ ಸಂಚರಿಸಿ, ಮಣ್ಣು ಅಥವಾ ಶಿಲೆಯ ನಮೂನೆಯನ್ನು ಎತ್ತಿಕೊಂಡು, ಸ್ಥಳದಲ್ಲಿಯೇ ರಾಸಾಯನಿಕ ವಿಶ್ಲೇಷಣೆ ನಡೆಸಿ, ದತ್ತಾಂಶವನ್ನು ಚಂದ್ರನ ಕಕ್ಷೆಯಲ್ಲಿ ಸುತ್ತಲಿರುವ ಮಾತೃ ಬಾಹ್ಯಾಕಾಶ ನೌಕೆ ಚಂದ್ರಯಾನ-2ಕ್ಕೆ ಕಳಿಸುವಂತೆ ರೋವರ್ ವಿನ್ಯಾಸಗೊಳಿಸಲಾಗುವುದು. ಚಂದ್ರಯಾನ-2 ಈ ಎಲ್ಲಾ ದತ್ತಾಂಶವನ್ನು ಭೂಮಿಗೆ ರವಾನಿಸುತ್ತದೆ.'
ಚಂದ್ರನ 'ಹೊರಠಾಣೆ'
[ಬದಲಾಯಿಸಿ]ಚಂದ್ರಯಾನದ ಛಾಯಾಚಿತ್ರಣವನ್ನು ಬಳಸಿ, NASA ಚಂದ್ರ ಸ್ಥಳಾನ್ವೇಷಣಾ ಉಪಗ್ರಹ ಮೂಲಕ ವಿವರವಾಗಿ ಪರಿಶೋಧಿಸಬಹುದಾದ ಪ್ರಮುಖ ಆಸಕ್ತಿದಾಯಕ ವಲಯಗಳನ್ನು ಗುರುತಿಸುತ್ತದೆ. ಇದರಲ್ಲಿ ಪ್ರಮುಖ ವಿಚಾರ, ಮೇಲ್ಮೈಯಲ್ಲಿ ಚಂದ್ರನ ಜಲಾಂಶವನ್ನು ಗುರುತಿಸಿ, ಭವಿಷ್ಯದಲ್ಲಿ ಚಂದ್ರನ 'ಹೊರಠಾಣೆ'ಯೊಂದನ್ನು ಸ್ಥಾಪಿಸಲು ಬಳಸಬಹುದಾಗಿದೆ. ಚಂದ್ರಯಾನದಲ್ಲಿರುವ U.S ಉಪಕರಣಗಳ ಪೈಕಿ Mini-SAR ಘನೀಕೃತ ನೀರಿನ ಅಂಶವನ್ನು ಪತ್ತೆ ಮಾಡಲು ಬಳಸಲಾಯಿತು.[೯೫]
ಇವನ್ನೂ ಗಮನಿಸಿ
[ಬದಲಾಯಿಸಿ]- ISRO ಕಕ್ಷೆಯ ವಾಹನ
- ಭಾರತೀಯ ಉಪಗ್ರಹಗಳ ಪಟ್ಟಿ
- ಚಂದ್ರನ ಮೇಲಿನ ಕೃತಕ ವಸ್ತುಗಳ ಪಟ್ಟಿ
- ಪ್ರಸಕ್ತ ಹಾಗೂ ಭವಿಷ್ಯದ ಚಂದ್ರನ ಯಾತ್ರೆಗಳ ಪಟ್ಟಿ
- ಚಂದ್ರನ ಮೇಲ್ಮೈಯಲ್ಲಿರುವ ಜಲಸಂಪತ್ತು
- ಚಂದ್ರನ ಪರಿಶೋಧನೆ
ಆಕರಗಳು
[ಬದಲಾಯಿಸಿ]- ↑ ೧.೦ ೧.೧ "Mission Sequence". ISRO. Retrieved 5 ನವೆಂಬರ್ 2008.
- ↑ ೨.೦ ೨.೧ "Chandrayaan-I Spacecraft Loses Radio Contact". ISRO. 29 ಆಗಸ್ಟ್ 2009. Retrieved 31 ಆಗಸ್ಟ್ 2009.
- ↑ "chandra". Spoken Sanskrit. Retrieved 5 ನವೆಂಬರ್ 2008.
- ↑ "yaana". Spoken Sanskrit. Retrieved 5 ನವೆಂಬರ್ 2008.
- ↑ "Chandrayaan-1 shifted to VAB". ದಿ ಹಿಂದೂ. 22 ಅಕ್ಟೋಬರ್ 2008. Archived from the original on 17 ಅಕ್ಟೋಬರ್ 2008. Retrieved 15 ಅಕ್ಟೋಬರ್ 2008.
- ↑ "PSLV-C11 Successfully Launches Chandrayaan-1". Indian Express. 22 ಅಕ್ಟೋಬರ್ 2008. Archived from the original on 25 ಅಕ್ಟೋಬರ್ 2008. Retrieved 22 ಅಕ್ಟೋಬರ್ 2008.
- ↑ Pasricha, Anjana (22 ಅಕ್ಟೋಬರ್ 2008). "India Launches First Unmanned Mission to Moon". Voice of America. Archived from the original on 1 ಆಗಸ್ಟ್ 2009. Retrieved 27 ಡಿಸೆಂಬರ್ 2008.
{{cite news}}
: Cite has empty unknown parameter:|coauthors=
(help) - ↑ ೮.೦ ೮.೧ "Chandrayaan-1 Successfully Enters Lunar Orbit". ISRO. Retrieved 8 ನವೆಂಬರ್ 2008.
- ↑ ೯.೦ ೯.೧ "Tricolour's 4th national flag on Moon". Economic Times. 15 ನವೆಂಬರ್ 2008. Retrieved 18 ನವೆಂಬರ್ 2008.
- ↑ "Chandrayaan team over the Moon". The Hindu. 15 ನವೆಂಬರ್ 2008. Archived from the original on 16 ಡಿಸೆಂಬರ್ 2008. Retrieved 14 ಏಪ್ರಿಲ್ 2010.
- ↑ "How India flew to the Moon economy class". The Times of India. 26 ಅಕ್ಟೋಬರ್ 2008. Retrieved 28 ಅಕ್ಟೋಬರ್ 2008.
- ↑ "Spacecraft Description". ISRO. Archived from the original on 28 ಅಕ್ಟೋಬರ್ 2008. Retrieved 4 ನವೆಂಬರ್ 2008.
- ↑ Bhandari N. (2005). "Title: Chandrayaan-1: Science goals" (PDF). Journal of Earth System Science. 114: 699. doi:10.1007/BF02715953.
- ↑ "India sets its sights on the Moon". BBC. 21 ಅಕ್ಟೋಬರ್ 2008. Retrieved 22 ಅಕ್ಟೋಬರ್ 2008.
- ↑ "Chandrayaan-1 mission terminated". The Hindu. 31 ಆಗಸ್ಟ್ 2009. Archived from the original on 2 ಸೆಪ್ಟೆಂಬರ್ 2009. Retrieved 31 ಆಗಸ್ಟ್ 2009.
- ↑ "Chandrayaan, India's first Moon mission is over: Project Director". Press Trust of India. Indian Express. 29 ಆಗಸ್ಟ್ 2009. Archived from the original on 29 ಸೆಪ್ಟೆಂಬರ್ 2012. Retrieved 29 ಆಗಸ್ಟ್ 2009.
- ↑ "Chandrayan not a failure: NASA astronaut". Press Trust of India. Archived from the original on 14 ಸೆಪ್ಟೆಂಬರ್ 2009. Retrieved 17 ಸೆಪ್ಟೆಂಬರ್ 2009.
- ↑ ಲೂನಾರ್ ಮಿಷನ್ಸ್ ಡಿಟೆಕ್ಟ್ ವಾಟರ್ ಆನ್ ಮೂನ್
- ↑ "Objectives". ISRO. Archived from the original on 12 ಅಕ್ಟೋಬರ್ 2009. Retrieved 30 ಅಕ್ಟೋಬರ್ 2008.
- ↑ ೨೦.೦ ೨೦.೧ ೨೦.೨ "Specifications of Chandrayaan 1". Indian Space Research Organisation. 2008. Archived from the original on 23 ಅಕ್ಟೋಬರ್ 2008. Retrieved 22 ಅಕ್ಟೋಬರ್ 2008.
{{cite web}}
: Unknown parameter|month=
ignored (help) - ↑ ೨೧.೦ ೨೧.೧ ೨೧.೨ "FAQ on Chandrayaan 1". Indian Space Research Organisation. 2008. Archived from the original on 7 ನವೆಂಬರ್ 2008. Retrieved 22 ಅಕ್ಟೋಬರ್ 2008.
{{cite web}}
: Unknown parameter|month=
ignored (help) - ↑ A. S. Kiran Kumar, A. Roy Chowdhury (2005). "Terrain mapping camera for Chandrayaan-1" (PDF). J. Earth Syst. Sci. 114 (6): 717–720. doi:10.1007/BF02715955.
- ↑ "Chandrayaan 1 - The payloads". Archived from the original on 14 ನವೆಂಬರ್ 2008. Retrieved 17 ನವೆಂಬರ್ 2008.
- ↑ "Chandrayaan-1 Camera Tested". ISRO. Archived from the original on 3 ನವೆಂಬರ್ 2008. Retrieved 1 ನವೆಂಬರ್ 2008.
- ↑ ೨೫.೦ ೨೫.೧ ೨೫.೨ "LASER Instrument on Chandrayaan-1 Successfully Turned ON". ISRO. Archived from the original on 18 ನವೆಂಬರ್ 2008. Retrieved 17 ನವೆಂಬರ್ 2008.
- ↑ ೨೬.೦ ೨೬.೧ "Laser instrument on board Chandrayaan-1 activated". ದಿ ಹಿಂದೂ. 17 ನವೆಂಬರ್ 2008. Archived from the original on 7 ಫೆಬ್ರವರಿ 2009. Retrieved 17 ನವೆಂಬರ್ 2008.
- ↑ "Chandrayaan-1: The Payloads". ISRO. Archived from the original on 14 ನವೆಂಬರ್ 2008. Retrieved 14 ಜನವರಿ 2009.
- ↑ "The Chandrayaan-1 X-ray Spectrometer: C1XS". Rutherford Appleton Laboratory. Archived from the original on 16 ಜುಲೈ 2011. Retrieved 21 ಅಕ್ಟೋಬರ್ 2008.
{{cite web}}
: Italic or bold markup not allowed in:|publisher=
(help) - ↑ ೨೯.೦ ೨೯.೧ "Chandrayaan-1 Starts Observations Of The Moon". Space Daily. 24 ನವೆಂಬರ್ 2008. Retrieved 26 ನವೆಂಬರ್ 2008.
- ↑ Bhardwaj, A., S. Barabash, Y. Futaana, Y. Kazama, K. Asamura, D. McCann, R. Sridharan, M. Holmström, P. Wurz, R. Lundin (2005). "Low energy neutral atom imaging on the Moon with the SARA instrument aboard Chandrayaan-1 Mission" (PDF). J. Earth System Sci. 114 (6): 749–760. doi:10.1007/BF02715960.
{{cite journal}}
: CS1 maint: multiple names: authors list (link) - ↑ "Sub keV Atom Reflecting Analyser (SARA)". ISRO. Archived from the original on 22 ಅಕ್ಟೋಬರ್ 2008. Retrieved 3 ನವೆಂಬರ್ 2008.
- ↑ "NASA Instrument Inaugurates 3-D Moon Imaging". JPL. Archived from the original on 1 ಜನವರಿ 2009. Retrieved 19 ಡಿಸೆಂಬರ್ 2008.
- ↑ Basilevsky A. T., Keller H. U., Nathues A., Mall J., Hiesinger H., Rosiek M. (2004). "Scientific objectives and selection of targets for the SMART-2 Infrared Spectrometer (SIR)". Planetary and Space Science. 52: 1261–1285. doi:10.1016/j.pss.2004.09.002.
{{cite journal}}
: CS1 maint: multiple names: authors list (link) - ↑ "Near-IR Spectrometer (SIR-2)". ISRO. Archived from the original on 22 ಅಕ್ಟೋಬರ್ 2008. Retrieved 3 ನವೆಂಬರ್ 2008.
- ↑ P. D. Spudis, B. Bussey, C. Lichtenberg, B. Marinelli, S. Nozette (2005). "mini-SAR: An Imaging Radar for the Chandrayaan 1 Mission to the Moon". Lunar and Planetary Science. 26: 1153.
{{cite journal}}
: Cite has empty unknown parameter:|unused_data=
(help)CS1 maint: multiple names: authors list (link) - ↑ "Miniature Synthetic Aperture Radar (Mini-SAR)". ISRO. Archived from the original on 6 ನವೆಂಬರ್ 2008. Retrieved 3 ನವೆಂಬರ್ 2008.
- ↑ "Radiation Dose Monitor Experiment ( RADOM )". ISRO. Archived from the original on 19 ಜನವರಿ 2012. Retrieved 3 ನವೆಂಬರ್ 2008.
- ↑ "Chandrayaan-1 successfully put into earth's orbit". Indian express. 22 ಅಕ್ಟೋಬರ್ 2008. Archived from the original on 6 ಅಕ್ಟೋಬರ್ 2012. Retrieved 22 ಅಕ್ಟೋಬರ್ 2008.
- ↑ ೩೯.೦ ೩೯.೧ "How Chandrayaan-1 is raised to higher orbits". ದಿ ಹಿಂದೂ. 30 ಅಕ್ಟೋಬರ್ 2008. Archived from the original on 1 ನವೆಂಬರ್ 2008. Retrieved 31 ಅಕ್ಟೋಬರ್ 2008.
- ↑ "ಚಂದ್ರಯಾನ-1 ಕಂಪ್ಲೀಟೆಡ್ ಇಟ್ಸ್ 100 ಡೇಸ್ ಇನ್ ಸ್ಪೇಸ್". Archived from the original on 29 ನವೆಂಬರ್ 2009. Retrieved 14 ಏಪ್ರಿಲ್ 2010.
- ↑ "Objectives". ISRO. Retrieved 30 ಅಕ್ಟೋಬರ್ 2008.
- ↑ "Chandrayaan-1 Spacecraft's Orbit Raised Further". ISRO. Retrieved 30 ಅಕ್ಟೋಬರ್ 2008.
- ↑ "Chandrayaan-1 enters Deep Space". ISRO. Archived from the original on 29 ಅಕ್ಟೋಬರ್ 2008. Retrieved 30 ಅಕ್ಟೋಬರ್ 2008.
- ↑ "Chandrayaan-1's orbit closer to Moon". ISRO. Archived from the original on 1 ನವೆಂಬರ್ 2008. Retrieved 30 ಅಕ್ಟೋಬರ್ 2008.
- ↑ "First Lunar Orbit Reduction Manoeuvre of Chandrayaan-1 Successfully Carried Out". ISRO. Archived from the original on 13 ನವೆಂಬರ್ 2008. Retrieved 10 ನವೆಂಬರ್ 2008.
- ↑ "Now, one step closer to Moon". ದಿ ಹಿಂದೂ. Archived from the original on 16 ಡಿಸೆಂಬರ್ 2008. Retrieved 10 ನವೆಂಬರ್ 2008.
- ↑ "Chandrayaan's orbit further reduced". ದಿ ಹಿಂದೂ. Archived from the original on 16 ಡಿಸೆಂಬರ್ 2008. Retrieved 11 ನವೆಂಬರ್ 2008.
- ↑ ೪೮.೦ ೪೮.೧ ೪೮.೨ Jonathan McDowell (15 ನವೆಂಬರ್ 2008). "Jonathan's Space Report No. 603". Jonathan's Space Report. Archived from the original on 26 ಆಗಸ್ಟ್ 2009. Retrieved 16 ನವೆಂಬರ್ 2008.
- ↑ ೪೯.೦ ೪೯.೧ ೪೯.೨ "Chandrayaan-1 Successfully Reaches its Operational Lunar Orbit". ISRO. Retrieved 12 ನವೆಂಬರ್ 2008.
- ↑ ೫೦.೦ ೫೦.೧ "Chandrayaan-I Impact Probe lands on the Moon". Times Of India. Retrieved 14 ನವೆಂಬರ್ 2008.
- ↑ "India kisses the Moon, Chandrayaan MIP lands". IBN Live. 14 ನವೆಂಬರ್ 2008. Archived from the original on 17 ನವೆಂಬರ್ 2008. Retrieved 18 ನವೆಂಬರ್ 2008.
- ↑ "Chandrayaan-1 lands probe on Moon". The Hindu. 15 ನವೆಂಬರ್ 2008. Archived from the original on 3 ಸೆಪ್ಟೆಂಬರ್ 2012. Retrieved 18 ನವೆಂಬರ್ 2008.
- ↑ ೫೩.೦ ೫೩.೧ ೫೩.೨ "India Moon craft hit by heat rise". BBC. 25 ನವೆಂಬರ್ 2008. Retrieved 26 ನವೆಂಬರ್ 2008.
- ↑ "All fine with Chandrayaan-1: ISRO chief". Times of India. 27 ನವೆಂಬರ್ 2008. Retrieved 27 ನವೆಂಬರ್ 2008.
- ↑ "Chandrayaan-1 takes summer break till mid Jan". Economic Times. 27 ನವೆಂಬರ್ 2008. Retrieved 27 ನವೆಂಬರ್ 2008.
- ↑ "Indian Moon probe feels the heat". New Scientist. 27 ನವೆಂಬರ್ 2008. Retrieved 27 ನವೆಂಬರ್ 2008.
- ↑ "Chandrayaan reveals changes in rock composition". Times Of India. 26 ಡಿಸೆಂಬರ್ 2008. Retrieved 12 ಜನವರಿ 2009.
- ↑ "Apollo landing sites mapped by Chandrayaan". Times Of India. 11 ಜನವರಿ 2009. Retrieved 12 ಜನವರಿ 2009.
- ↑ ೫೯.೦ ೫೯.೧ ೫೯.೨ "Chandrayaan sensor fails; craft's life may be reduced". The Hindu. Archived from the original on 6 ನವೆಂಬರ್ 2012. Retrieved 17 ಜುಲೈ 2009.
- ↑ ೬೦.೦ ೬೦.೧ ೬೦.೨ "Chandrayaan-1 spacecraft completes 3000 orbits around the Moon". ISRO. Archived from the original on 20 ಜುಲೈ 2009. Retrieved 18 ಜುಲೈ 2009.
- ↑ ೬೧.೦ ೬೧.೧ ೬೧.೨ "Chandrayaan falters as 'star sensors' fail". The Hindu. Archived from the original on 23 ಜುಲೈ 2009. Retrieved 18 ಜುಲೈ 2009.
- ↑ "Chandrayaan beams back 40,000 images in 75 days". Times Of India. 15 ಜನವರಿ 2009. Retrieved 16 ಜನವರಿ 2009.
- ↑ "C1XS Catches First Glimpse of X-rays from the Moon". ISRO. 23 ಜನವರಿ 2009. Archived from the original on 20 ಫೆಬ್ರವರಿ 2009. Retrieved 16 ಫೆಬ್ರವರಿ 2009.
- ↑ "Chandrayaan detects X-ray signals". The Hindu. 24 ಜನವರಿ 2009. Archived from the original on 26 ಜನವರಿ 2009. Retrieved 25 ಜನವರಿ 2009.
- ↑ "Chandrayaan-1 Instrument Detects First X-ray Signature from Moon". Universe Today. 23 ಜನವರಿ 2009. Retrieved 25 ಜನವರಿ 2009.
- ↑ "Chandrayaan's first image of Earth in its entirety". Hindu. 11 ಏಪ್ರಿಲ್ 2009. Archived from the original on 13 ಏಪ್ರಿಲ್ 2009. Retrieved 11 ಏಪ್ರಿಲ್ 2009.
- ↑ "The Orbit of Chandrayaan-1 Raised". ISRO. Archived from the original on 23 ಮೇ 2009. Retrieved 21 ಮೇ 2009.
- ↑ "ಮೂನ್ಸ್ ಹೀಟ್ ಹೇಸ್ಟೆನ್ಡ್ ಇಂಡಿಯನ್ ಪ್ರೋಬ್ಸ್ ಡಿಮೈಸ್" ನ್ಯೂ ಸಯಂಟಿಸ್ಟ್, 12 ಸೆಪ್ಟೆಂಬರ್ 2009, ಪಿ. 5.
- ↑ "ಚಂದ್ರಯಾನ್-1 ವಾಸ್ ಕಿಲ್ಡ್ ಬೈ ಹೀಟ್ ಸ್ಟ್ರೋಕ್" ದಿ ಟೈಮ್ಸ್ ಆಫ್ ಇಂಡಿಯಾ, 7 ಸೆಪ್ಟೆಂಬರ್ 2009.
- ↑ "Chandrayaan's first sensor failed much earlier". The Hindu. Archived from the original on 22 ಜುಲೈ 2009. Retrieved 19 ಜುಲೈ 2009.
- ↑ Atkinson, Nancy (19 ಆಗಸ್ಟ್ 2009). "LRO, Chandrayaan-1 Team Up For Unique Search for Water Ice". Universe Today. Retrieved 20 ಆಗಸ್ಟ್ 2009.
- ↑ "Nasa Radar Tandem Searches For Ice On The Moon". NASA. Archived from the original on 8 ಆಗಸ್ಟ್ 2009. Retrieved 20 ಆಗಸ್ಟ್ 2009.
- ↑ "NASA And ISRO Satellites Perform In Tandem To Search For Ice On The Moon". NASA. Archived from the original on 28 ಡಿಸೆಂಬರ್ 2018. Retrieved 22 ಆಗಸ್ಟ್ 2009.
- ↑ "ISRO-NASA Joint Experiment To Search for Water Ice on the Moon". ISRO. 21 ಆಗಸ್ಟ್ 2009. Archived from the original on 14 ಆಗಸ್ಟ್ 2013. Retrieved 22 ಆಗಸ್ಟ್ 2009.
- ↑ ೭೫.೦ ೭೫.೧ "ಚಂದ್ರಯಾನ್ 1 ಮಿಷನ್ ಟರ್ಮಿನೇಟೆಡ್". Archived from the original on 13 ಆಗಸ್ಟ್ 2011. Retrieved 14 ಏಪ್ರಿಲ್ 2010.
- ↑ ೭೬.೦ ೭೬.೧ "ISRO ಲಾಸಸ್ ಚಂದ್ರಯಾನ್-1". Archived from the original on 16 ಜುಲೈ 2011. Retrieved 14 ಏಪ್ರಿಲ್ 2010.
- ↑ ೭೭.೦ ೭೭.೧ ಚಂದ್ರಯಾನ್-1 ಮಿಷನ್ ಟರ್ಮಿನೇಟೆಡ್ Archived 2 September 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ. 31 ಆಗಸ್ಟ್ 2009
- ↑ http://timesofindia.indiatimes.com/news/india/Indian-scientists-rejoice-as-Chandrayaan-1-traces-water-on-moon/articleshow/5049459.cms
- ↑ ೭೯.೦ ೭೯.೧ ಉಲ್ಲೇಖ ದೋಷ: Invalid
<ref>
tag; no text was provided for refs namedBagla
- ↑ "Chandrayaan confirms moon was once completely molten: Scientist". Economic Times. 2 ಸೆಪ್ಟೆಂಬರ್ 2009. Archived from the original on 6 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "Scientist Rubbishes Apollo 15 Conspiracy Theory". Moondaily.com. 4 ಸೆಪ್ಟೆಂಬರ್ 2009. Archived from the original on 8 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "Chandrayaan sends images of Apollo 15 landing". Times of India. 2 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "Chandrayaan Enables Study Interaction Without Magnetic Field". SpaceDaily.com. 10 ಸೆಪ್ಟೆಂಬರ್ 2009. Archived from the original on 14 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "Chandrayaan enables study interaction without magnetic field". DNAIndia.com. 8 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "Solar flares shine light on moon's minerals". The Hindu. 19 ಸೆಪ್ಟೆಂಬರ್ 2009. Archived from the original on 23 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "Character and Spatial Distribution of OH/H2O on the Surface of the Moon Seen by M3 on Chandrayaan-1". Science Mag. 15 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ "It's not lunacy, probes find water in moon dirt". The Washington Post. 23 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Water discovered on moon?: "A lot of it actually"". The Hindu. 23 ಸೆಪ್ಟೆಂಬರ್ 2009. Archived from the original on 26 ಸೆಪ್ಟೆಂಬರ್ 2009. Retrieved 26 ಸೆಪ್ಟೆಂಬರ್ 2009.
- ↑ http://www.moondaily.com/reports/How_The_Moon_Produces_Its_Own_Water_999.html
- ↑ http://www.siliconindia.com/shownews/After_water_now_Indian_scientists_find_cave_on_Moon-nid-65281-cid--sid-.html
- ↑ http://www.tribuneindia.com/2008/20081201/nation.htm#14
- ↑ "The men behind the mission". NDTV. 22 ಅಕ್ಟೋಬರ್ 2008. Archived from the original on 26 ಅಕ್ಟೋಬರ್ 2008. Retrieved 31 ಅಕ್ಟೋಬರ್ 2008.
- ↑ "Looking beyond Chandrayaan-1". Economic Times. 15 ಅಕ್ಟೋಬರ್ 2008. Retrieved 30 ಅಕ್ಟೋಬರ್ 2008.
- ↑ "The Chandrayaan Team". Zee News. Retrieved 30 ಅಕ್ಟೋಬರ್ 2008.
- ↑ ಮೂನ್‌ಬೇಸ್: ಇನ್ ದಿ ಡಾರ್ಕ್ ಆನ್ ಲುನಾರ್ ಐಸ್ | Space.com | 26 ಡಿಸೆಂಬರ್ 2006
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಚಂದ್ರಯಾನ
- ISRO ಛಾಯಾಚಿತ್ರಗಳ ಸಂಗ್ರಹ: ಪಿಕ್ಟರ್ಸ್ Archived 17 July 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
| ಸ್ಪೇಸ್‌ಕ್ರಾಫ್ಟ್, ಕಂಪೋನೆಂಟ್ ಅಂಡ್ ಗ್ರೌಂಡ್ ಸೆಗ್ಮೆಂಟ್ Archived 18 July 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. | ಫಸ್ಟ್ ರಿಸಲ್ಟ್ಸ್ Archived 18 August 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಅಫಿಷಿಯಲ್ ಹೋಮ್ಪೇಜ್ ಆಫ್ ಚಂದ್ರಯಾನ-1 Archived 12 April 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- Pages with reference errors
- CS1 errors: empty unknown parameters
- CS1 errors: unsupported parameter
- CS1 errors: markup
- CS1 maint: multiple names: authors list
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಸೆಪ್ಟೆಂಬರ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles using Template:Infobox spacecraft
- Articles with hAudio microformats
- Articles with unsourced statements from September 2009
- Articles with hatnote templates targeting a nonexistent page
- Commons link is locally defined
- Use dmy dates
- ಬಾಹ್ಯಾಕಾಶದ ಪರಿಶೋಧನೆ
- 2008ರಲ್ಲಿ ಬಾಹ್ಯಾಕಾಶ ಪರಿಶೋಧನೆ
- 2008ರಲ್ಲಿ ಭಾರತ
- 2008ರಲ್ಲಿ ವಿಜ್ಞಾನ
- ಐರೋಪ್ಯ ಬಾಹ್ಯಾಕಾಶ ಸಂಸ್ಥೆ
- ಭಾರತೀಯ ಬಾಹ್ಯಾಕಾಶ ಅಭಿಯಾನ
- ಚಂದ್ರನ ಬಾಹ್ಯಾಕಾಶ ನೌಕೆ
- ಮಾನವರಹಿತ ಬಾಹ್ಯಾಕಾಶ ನೌಕೆ
- ಭಾರತೀಯ ಚಂದ್ರ ಪರಿಶೋಧನಾ ಅಭಿಯಾನ
- 2008ರಲ್ಲಿ ಬಾಹ್ಯಾಕಾಶ ಯಾತ್ರೆ
- ಬಾಹ್ಯಾಕಾಶ ಅನ್ವೇಷಣೆ