ಮಾಧವನ್ ಚಂದ್ರದತ್ತನ್
ಮಾಧವನ್ ಚಂದ್ರದತ್ತನ್ | |
---|---|
ಜನನ | ವರ್ಕಲಾ, ಕೇರಳ, ಭಾರತ |
ರಾಷ್ಟ್ರೀಯತೆ | ಭಾರತೀಯ |
ಸಂಸ್ಥೆಗಳು | ಇಸ್ರೋ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ |
ಅಭ್ಯಸಿಸಿದ ವಿದ್ಯಾಪೀಠ | ಬಿರ್ಲಾ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್, ತ್ರಿಶೂರ್ ಶ್ರೀ ನಾರಾಯಣ ಕಾಲೇಜ್, ವರ್ಕಲಾ. |
ಪ್ರಸಿದ್ಧಿಗೆ ಕಾರಣ | ಭಾರತೀಯ ಬಾಹ್ಯಕಾಶ ಪ್ರೊಗ್ರಾಮ್ ಚಂದ್ರಯಾನ-೧ ಮಾರ್ಸ್ ಆರ್ಬಿಟರ್ ಮಿಷನ್ |
ಗಮನಾರ್ಹ ಪ್ರಶಸ್ತಿಗಳು | ಪದ್ಮಶ್ರೀ (2014) |
ಮಾಧವನ್ ಚಂದ್ರದತ್ತನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ವಿಕ್ರಮ್ ಸಾರಾಭಾಯಿ ಬಾಹ್ಯಕಾಶ ಕೇಂದ್ರದ ಮಾಜಿ ನಿರ್ದೇಶಕರು.[೧]ಇವರಿಗೆ 2014ರಲ್ಲಿ ಭಾರತ ಸರ್ಕಾರವು ವಿಜ್ಞಾನ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಜನನ
[ಬದಲಾಯಿಸಿ]ಮಾಧವನ್ ಚಂದ್ರದತ್ತನ್ ಕೇರಳದ ವರ್ಕಲಾದಲ್ಲಿ ಜನಿಸಿದರು. ತಂದೆ ಮಾಧವನ್, ತಾಯಿ ವಾಸುಮತಿ. 1971ರಲ್ಲಿ ತ್ರಿಶೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ರಾಸಾಯನಿಕ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದರು.[೨] ನಂತರ ಬಿರ್ಲಾ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತರ ಪದವಿಯನ್ನು ಪಡೆದರು.
ಆರಂಭಿಕ ಜೀವನ
[ಬದಲಾಯಿಸಿ]ಎಂ.ಸಿ.ದತ್ತನ್ ರವರು 1972ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆ ಕೇಂದ್ರದಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ಎಸ್. ಎಲ್. ವಿ-೩ ಯೋಜನೆಗಾಗಿ ಕೆಲಸವನ್ನು ಮಾಡಿದರು. 2008ರಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 2013ರಲ್ಲಿ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್[೩] ನ ನಿರ್ದೇಶಕರಾಗಿ ಆಯ್ಕೆಗೊಂಡರು. 2014ರಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದರು. ಅಲ್ಲದೆ ಚಂದ್ರಯಾನ-೧ ಯೋಜನೆಯ ಉಡಾವಣೆ ಮಂಡಳಿಯ ಮುಖ್ಯಸ್ಥರಾಗಿದ್ದರು. ಮೇ 2016ರಲ್ಲಿ ಕೇರಳ ಸರ್ಕಾರವು ಎಂ. ಸಿ. ದತ್ತನ್ ರವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ವೈಜ್ಞಾನಿಕ ಸಲಹೆಗಾರನಾಗಿ ನೇಮಿಸಿತು.[೪]
ಗೌರವಗಳು
[ಬದಲಾಯಿಸಿ]- ಪರ್ಫಾರ್ಮೆನ್ಸ್ ಎಕ್ಸಲೆನ್ಸ್ ಅವಾರ್ಡ್ (2009)
- ಅತ್ಯುತ್ತಮ ರಾಸಾಯನಿಕ ಎಂಜಿನಿಯರ್ ಪ್ರಶಸ್ತಿ (2009)
- ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ (2014)[೫]
ಉಲ್ಲೇಖಗಳು
[ಬದಲಾಯಿಸಿ]- ↑ "Chandradathan". www.vssc.gov.in. Archived from the original on 22 ಜುಲೈ 2019. Retrieved 29 December 2019.
- ↑ "Veterans who like poetry and books". www.telegraphindia.com. Retrieved 29 December 2019.
{{cite news}}
: Cite has empty unknown parameter:|1=
(help) - ↑ "Shri M. Chandradathan". www.lpsc.gov.in. Retrieved 29 December 2019.
- ↑ Jun 4, Laxmi Prasanna. "VSSC former director MC Dathan to be scientific advisor to Kerala CM | Thiruvananthapuram News - Times of India". The Times of India. Retrieved 29 December 2019.
{{cite news}}
: Cite has empty unknown parameters:|1=
and|2=
(help)CS1 maint: numeric names: authors list (link) - ↑ "Madhavan Chandradathan". Edubilla.com. Retrieved 29 December 2019.
{{cite news}}
: Cite has empty unknown parameter:|1=
(help)