ಸೌರ ಫಲಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ್ಯುತಿವಿದ್ಯುಜ್ಜನಕ ಘಟಕ ಪ್ರತ್ಯೇಕ PV ವಿದ್ಯುತ್ಕೋಶಗಳಿಂದ ನಿರ್ಮಿಸಲಾಗಿದೆ.ಸ್ಫಟಿಕದ -ಸಿಲಿಕಾನ್ ಘಟಕವು ಮುಂದಿನ ಭಾಗದಲ್ಲಿ ಅಲ್ಯೂಮಿನಿಯಂ ಹೊದಿಕೆಯನ್ನು ಮತ್ತು ಗಾಜನ್ನು ಹೊಂದಿವೆ.
ISS ನ ಮೇಲೆ A PV ಘಟಕಗಳು.

ಸೌರ ಫಲಕ (ದ್ಯುತಿವಿದ್ಯುಜ್ಜನಕದ ಘಟಕ ಅಥವಾ ದ್ಯುತಿವಿದ್ಯುಜ್ಜನಕ ಫಲಕ ) ಜೋಡಿಸಲಾದ ಅಂತರ ಸಂಪರ್ಕವಿರುವ ಸೌರ ಕೋಶಗಳ ಸಂಯೋಜನೆಯಾಗಿದೆ. ಇದನ್ನು ದ್ಯುತಿವಿದ್ಯುಜ್ಜನಕ ಕೋಶಗಳು ಎಂದೂ ಕೂಡ ಕರೆಯಲಾಗುತ್ತದೆ. ಸೌರ ಫಲಕವನ್ನು ವಾಣಿಜ್ಯಬಳಕೆಗೆ ಮತ್ತು ಗೃಹಬಳಕೆಗೆ ಅಗತ್ಯವಿರುವ ವಿದ್ಯುತ್ ಅನ್ನು ಸರಬರಾಜು ಮಾಡಲು ಬೃಹತ್ ಪ್ರಮಾಣದ ದ್ಯುತಿವಿದ್ಯುಜ್ಜನಕ ವ್ಯವಸ್ಥೆಯಲ್ಲಿ ಘಟಕವಾಗಿ ಬಳಸಲಾಗುತ್ತದೆ.

ಏಕೈಕ ಸೌರ ಫಲಕ ಸ್ವಲ್ಪ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಮಾತ್ರ ಉತ್ಪಾದಿಸಬಹುದಾದ್ದರಿಂದ, ಅನೇಕ ಅಳವಡಿಕೆಗಳು ಹಲವು ಫಲಕಗಳನ್ನು ಒಳಗೊಂಡಿರುತ್ತವೆ. ಇದನ್ನು ದ್ಯುತಿವಿದ್ಯುಜ್ಜನಕ ಸರಣಿ ಎಂದು ಕರೆಯಲಾಗುತ್ತದೆ. ದ್ಯುತಿವಿದ್ಯುಜ್ಜನಕ ಅಳವಡಿಕೆಯು ಸಾಮಾನ್ಯವಾಗಿ ಸೌರ ಫಲಕಗಳ ಸರಣಿಗಳನ್ನು,ಒಂದು ಪರ್ಯಾಯಕ, ಬ್ಯಾಟರಿಗಳನ್ನು ಮತ್ತು ಪರಸ್ಪರ ಸಂಪರ್ಕವಿರುವ ತಂತಿಜಾಲವನ್ನು ಒಳಗೊಂಡಿರುತ್ತದೆ.

ದ್ಯುತಿವಿದ್ಯುಜ್ಜನಕ ವ್ಯವಸ್ಥೆಯನ್ನು,ಗ್ರಿಡ್‌ಸಹಿತ ಅಥವಾ ಗ್ರಿಡ್‌ರಹಿತ(ಸಾರ್ವಜನಿಕ ಸೇವೆ ಬಳಸಿಕೊಳ್ಳದ ಸ್ವಾವಲಂಬಿ ವ್ಯವಸ್ಥೆ) ಬಳಕೆಗಳಿಗೆ ಮತ್ತು ಗಗನ ನೌಕೆಗಳ ಮೇಲೆ ಸೌರ ಫಲಕಗಳಿಗಾಗಿ ಬಳಸಲಾಗುತ್ತದೆ.

== ಸಿದ್ಧಾಂತ ಮತ್ತು ನಿರ್ಮಾಣ ==

ಫಲಕಗಳಲ್ಲಿ PV ವಿದ್ಯುತ್ಕೋಶಗಳು.

ಸೌರ ಫಲಕಗಳು ದ್ಯುತಿವಿದ್ಯುಜ್ಜನಕ ಪರಿಣಾಮದ(ಇದು ದ್ಯುತಿ ವಿದ್ಯುತ್ ಪರಿಣಾಮವಾಗಿದೆ) ಮೂಲಕ ವಿದ್ಯುತ್ ಅನ್ನು ಉತ್ಪಾದಿಸಲು ಸೂರ್ಯನ ಬೆಳಕಿನ ಶಕ್ತಿಯನ್ನು (ಫೋಟಾನ್ ಗಳು) ಉಪಯೋಗಿಸುತ್ತವೆ. ಘಟಕದ ರಾಚನಿಕ(ಹೊರೆಯನ್ನು ಸಾಗಿಸುವ) ಭಾಗ ಮೇಲ್ಪದರ (ಸೂಪರ್‌ಸ್ಟ್ರೇಟ್) ಅಥವಾ ತಳಪದರ (ಸಬ್‌ಸ್ಟ್ರೇಟ್) ವಾಗಿರಬಹುದು. ಬಹುಪಾಲು ಘಟಕಗಳು ವೇಫರ್(ತುಂಬ ತೆಳುವಾದ ಅರೆವಾಹಕ ಸ್ಫಟಿಕ) ಆಧಾರಿತ ಸಿಲಿಕಾನ್ ಸ್ಫಟಿಕದ ಕೋಶಗಳನ್ನು ಅಥವಾ ಸಿಲಿಕಾನ್ ಅಥವಾ ಕ್ಯಾಡ್ಮಿಯಂ ಟೆಲ್ಯುರೈಡ್ಆಧಾರಿತ ತೆಳುವಾದ ಪದರ ಕೋಶವನ್ನು ಬಳಸುತ್ತವೆ. ದ್ಯುತಿವಿದ್ಯುಜ್ಜನಕ (PV) ಘಟಕಗಳಲ್ಲಿ ವೇಫರ್ ರೂಪದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಸಿಲಿಕಾನ್ ಸ್ಫಟಿಕ ಸಾಧಾರಣವಾಗಿ ಅರೆವಾಹಕವಾಗಿ ಬಳಸುವ ಸಿಲಿಕಾನ್‌ನಿಂದ ಹುಟ್ಟಿಕೊಂಡಿದೆ.

ಪ್ರಾಯೋಗಿಕ ಬಳಕೆಗಳಿಗೆ ವಿದ್ಯುತ್ಕೋಶ ಬಳಸಲು ಅವು ಕೆಳಕಂಡಂತೆ ಇರಬೇಕು:

 • ಪರಸ್ಪರ ವಿದ್ಯುತ್ ಸಂಪರ್ಕ ಹೊಂದಿರಬೇಕು ಹಾಗೂ ಉಳಿದ ವ್ಯವಸ್ಥೆಯೊಂದಿಗೆ ಕೂಡ.
 • ಉತ್ಪಾದನೆ,ಸಾಗಣೆ ಮತ್ತು ಅಳವಡಿಕೆ ಹಾಗೂ ಬಳಕೆ ಸಂದರ್ಭದಲ್ಲಿ ಯಾಂತ್ರಿಕ ಹಾನಿಯಿಂದ ರಕ್ಷಿಸಬೇಕು. (ವಿಶೇಷವಾಗಿ ಆಲಿಕಲ್ಲು ಮಳೆಯಿಂದ, ಗಾಳಿ ಮತ್ತು ಹಿಮಪಾತಗಳ ವಿರುದ್ಧ) ಇದು ಬಿರುಕುಬಿಡಬಹುದಾದ ವೇಫರ್ ಆಧಾರಿತ ಸಿಲಿಕಾನ್ ವಿದ್ಯುತ್ಕೋಶಗಳಿಗೆ ಅತ್ಯಂತ ಮುಖ್ಯವಾಗಿದೆ.
 • ಲೋಹದ ಸಂಪರ್ಕಗಳು ಮತ್ತು ಅಂತರಸಂಪರ್ಕಗಳನ್ನು ಕೊರೆದುಹಾಕಿ, ಸಾಮರ್ಥ್ಯ ಮತ್ತು ಬಾಳಿಕೆಅವಧಿಯನ್ನು ಕುಗ್ಗಿಸುವ ಆರ್ದ್ರತೆಯಿಂದ ರಕ್ಷಿಸಬೇಕು(ತೆಳು ಪದರದ ಕೋಶಗಳಿಗೆ ಪಾರದರ್ಶಕ ವಾಹಕ ಆಕ್ಸೈಡು ಹೊದಿಕೆ)

ಬಹುಪಾಲು ಘಟಕಗಳು ಸಾಮಾನ್ಯವಾಗಿ ಕಠಿಣ(ಗಡುಸಾಗಿರುತ್ತವೆ)ವಾಗಿರುತ್ತದೆ, ಆದರೆ ತೆಳುವಾದ ಪದರ ವಿದ್ಯುತ್ಕೋಶಗಳಾಧಾರಿತ ಕೆಲವು ಹೊಂದಿಕೊಳ್ಳುವ ಘಟಕಗಳು ಲಭ್ಯವಿದೆ.

ಅಗತ್ಯವಿರುವಷ್ಟು ವೋಲ್ಟೇಜ್ ಉತ್ಪಾದನೆಯನ್ನು ಸಾಧಿಸಲು ಅಥವಾ ಇದಕ್ಕೆ ಸಮಾನಾಂತರವಾಗಿವಿದ್ಯುತ್ ಪ್ರವಾಹದ ಮೂಲ ಸಾಮರ್ಥ್ಯದ ಮೊತ್ತವನ್ನು ಒದಗಿಸಲು ಸರಣಿಗಳಲ್ಲಿ ವಿದ್ಯುತ್ ಸಂಪರ್ಕಗಳನ್ನು ನೀಡಲಾಗಿರುತ್ತದೆ.

ಆಂಶಿಕ ಬೆಳಕಿನ ಸಂದರ್ಭದಲ್ಲಿ ವಿದ್ಯುತ್ಕೋಶಗಳು ಅತಿಯಾಗಿ ಕಾಯುವುದನ್ನು ತಡೆಯಲು ಡಯೋಡ್‌ಗಳು ಒಳಗೊಂಡಿದೆ. ವಿದ್ಯುತ್ಕೋಶಗಳ ಬಿಸಿಯಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಕಾರಣ ತಾಪಮಾನವನ್ನು ಕಡಿಮೆಮಾಡುವುದು ಅಪೇಕ್ಷಣೀಯವಾಗಿದೆ. ತಾಪಮಾನವನ್ನು ಕಡಿಮೆ ಮಾಡಲು ಕೇವಲ ಕೆಲವು ಘಟಕಗಳು ಮಾತ್ರ ಯಾವುದೇ ವಿನ್ಯಾಸದ ಲಕ್ಷಣಗಳನ್ನು ಸೇರಿಸುತ್ತವೆ. ಆದರೂ ಅಳವಡಿಸುವವರು ಘಟಕದ ಹಿಂದೆ ಉತ್ತಮ ವಾತಾಯನ ವ್ಯವಸ್ಥೆಯನ್ನು ಒದಗಿಸಲು ಪ್ರಯತ್ನಿಸುತ್ತಾರೆ.[೧]

ಘಟಕದ ಹೊಸ ವಿನ್ಯಾಸಗಳು ಮಸೂರಗಳ ಅಥವಾ ಕನ್ನಡಿಯ ಸರಣಿಯ ಮೂಲಕ ಸಣ್ಣ ವಿದ್ಯುತ್ಕೋಶಗಳ ಸರಣಿಗಳ ಮೇಲೆ ಬೆಳಕನ್ನು ಕೇಂದ್ರೀಕರಿಸುವ ಸಾರೀಕಾರಕ ಘಟಕಗಳನ್ನು ಒಳಗೊಂಡಿರುತ್ತವೆ. ಇದು ವೆಚ್ಚ ಸ್ಪರ್ಧಾತ್ಮಕ ರೀತಿಯಲ್ಲಿ ಪ್ರತಿ ಯೂನಿಟ್ ಪ್ರದೇಶಕ್ಕೆ(ಉದಾಹರಣೆಗೆ ಗ್ಯಾಲಿಯಂ ಆರ್ಸನೈಡ್) ಅತ್ಯಂತ ಹೆಚ್ಚು ಬೆಲೆಯೊಂದಿಗೆ ವಿದ್ಯುತ್ಕೋಶಗಳನ್ನು ಬಳಸುವ ಅವಕಾಶವನ್ನು ನೀಡುತ್ತದೆ.

ನಿರ್ಮಾಣವನ್ನು ಅವಲಂಬಿಸಿ, ವಿದ್ಯುಜ್ಜನಕವು ಬೆಳಕಿನ ತರಂಗಾಂತರಗಳ ವ್ಯಾಪ್ತಿಯನ್ನು ಆವರಿಸಬಲ್ಲದು ಮತ್ತು ಅವುಗಳ ಮೂಲಕ ವಿದ್ಯುತ್ ಅನ್ನು ಉತ್ಪಾದಿಸಬಲ್ಲದು, ಆದರೆ ಕೆಲವೊಮ್ಮೆ ಇಡೀ ಸೌರ ರೋಹಿತಗಳನ್ನು ವ್ಯಾಪಿಸುವುದು ಸಾಧ್ಯವಿಲ್ಲ(ವಿಶೇಷವಾಗಿ, ನೇರಳಾತೀತ ವಿಕಿರಣಗಳು, ಅವರೋಹಿತ ಮತ್ತು ಅಲ್ಪ ಪ್ರಮಾಣದ ಅಥವಾ ಚದುರಿಹೋದ ಬೆಳಕು). ಆದ್ದರಿಂದ ಸೌರ ಫಲಕಗಳಿಗೆ ಬಳಸಿದಾಗ ಬಹುತೇಕ ಮೇಲೆ ಬೀಳುವ ಸೂರ್ಯನ ಬೆಳಕು ವ್ಯರ್ಥವಾಗುತ್ತದೆ.ಆದರೆ ಏಕವರ್ಣೀಯ ಬೆಳಕಿನಿಂದ ಬೆಳಗಿಸಿದಾಗ,ಅವು ಹೆಚ್ಚಿನ ಸಾಮರ್ಥ್ಯಗಳನ್ನು ನೀಡುತ್ತವೆ. ಬೆಳಕನ್ನು ವಿಭಿನ್ನ ತರಂಗಾಂತರ ಶ್ರೇಣಿಗಳಾಗಿ ವಿಭಜಿಸುವುದು ಮತ್ತು ಸೂಕ್ತ ತರಂಗಾಂತರ ಶ್ರೇಣಿಗಳಿಗೆ ಹೊಂದಿಕೆಯಾದ ವಿದ್ಯುತ್ಕೋಶಗಳಿಗೆ ರಶ್ಮಿಯನ್ನು ಹರಿಸುವುದು ಮತ್ತೊಂದು ವಿನ್ಯಾಸ ಪರಿಕಲ್ಪನೆಯಾಗಿದೆ.[೨] ಇದು 50% ರಿಂದ ದಕ್ಷತೆಯನ್ನು ಹೆಚ್ಚಿಸಲು ಮಾಡಿದ ಯೋಜನೆಯಾಗಿದೆ. ಅಲ್ಲದೇ ಅವರೋಹಿತ ದ್ಯುತಿವಿದ್ಯುಜ್ಜನಕ ವಿದ್ಯುತ್ಕೋಶಗಳು ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ಬಿಡುಗಡೆ ಮಾಡುವ ಮೂಲಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ.

ಸೂರ್ಯನ ಬೆಳಕಿನ ಪರಿವರ್ತನ ದರಗಳು(ಘಟಕದ ಸಾಮರ್ಥ್ಯಗಳು) ವಾಣಿಜ್ಯ ಉತ್ಪಾದನೆಯಲ್ಲಿ(ಸೌರ ಫಲಕಗಳು) 5 ರಿಂದ 18% ರವರೆಗೆ ವ್ಯತ್ಯಾಸವಾಗಬಲ್ಲದು. ವಿದ್ಯುತ್ಕೋಶ ಪರಿವರ್ತನೆಗಿಂತ ಕಡಿಮೆ.

ಸನ್ ಪವರ್ ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಅತ್ಯಂತ ಹೆಚ್ಚು ದಕ್ಷತೆಯುಳ್ಳ ಸೌರ ಶಕ್ತಿಯಾಗಿದೆ. ಇವುಗಳ ಸೌರಫಲಕಗಳು 19.3% [೩] ರಷ್ಟು ಪರಿವರ್ತನ ಅನುಪಾತವನ್ನು ಹೊಂದಿವೆ. ಸ್ಯಾನೊ ಜೊತೆಯಲ್ಲಿ 20.4% ರಷ್ಟು ಪರಿವರ್ತನ ಅನುಪಾತವನ್ನು ನೀಡುವಂತಹ ಅತ್ಯಂತ ಸಮರ್ಥ ಘಟಕವಾಗಿದೆ.[೪] ಆದರೂ ಹೊಸದಾಗಿ ಆರಂಭವಾಗುತ್ತಿರುವ ಬಹುಪಾಲು ಕಂಪನಿಗಳು ((ಹೋಲೋಸನ್, ಗಾಮಾ ಸೋಲಾರ್, ನ್ಯಾನೊಹಾರಿಜನ್ಸ್)) ದ್ಯುತಿವಿದ್ಯುಜ್ಜನಕ ಘಟಕಗಳಲ್ಲಿ ಸುಮಾರು 18% ಪರಿವರ್ತನ ಅನುಪಾತದೊಂದಿಗೆ ಹೊಸ ನಾವೀನ್ಯಗಳನ್ನು ನೀಡುತ್ತಿವೆ. ಈ ಹೊಸ ನಾವೀನ್ಯತೆಗಳು ಹಿಂದಿನ ಮತ್ತು ಮುಂದಿನ ಭಾಗಗಳಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಹೆಚ್ಚಿನ ಉತ್ಪಾದನೆಗಳನ್ನು ಒಳಗೊಂಡಿದೆ. ಆದರೂ ಬಹುಪಾಲು ಕಂಪನಿಗಳು ಅವುಗಳ ವಿನ್ಯಾಸ ಯೋಜನೆಗಳಿಂದ ಕಾರ್ಯನಿರ್ವಹಿಸುವ ವ್ಯವಸ್ಥೆಗಳನ್ನು ಉತ್ಪಾದಿಸಿಲ್ಲ. ಅಲ್ಲದೇ ಇವು ಸಕ್ರಿಯವಾಗಿ ತಂತ್ರಜ್ಞಾನವನ್ನು ಇನ್ನೂ ಅಭಿವೃದ್ಧಿಪಡಿಸುತ್ತಲಿವೆ.

ಸಿಲಿಕಾನ್ ಸ್ಪಟಿಕದ ಘಟಕಗಳು[ಬದಲಾಯಿಸಿ]

ಪ್ರಸ್ತುದಲ್ಲಿ ಬಹುಪಾಲು ಸೌರ ಘಟಕಗಳನ್ನು ಸಿಲಿಕಾನ್ PV ವಿದ್ಯುತ್ಕೋಶಗಳು ಗಳಿಂದ ಉತ್ಪಾದಿಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಏಕಸ್ಫಟಿಕದಂಥ ಅಥವಾ ಬಹುಸ್ಫಟಿಕದಂಥ ಘಟಕಗಳಾಗಿ ವಿಂಗಡಿಸಲಾಗಿದೆ.

ತೆಳುವಾದ ಪದರ ಘಟಕಗಳು[ಬದಲಾಯಿಸಿ]

ಮೂರನೆ ಪೀಳಿಗೆಯ ವಿದ್ಯುತ್ಕೋಶಗಳು ಮುಂದುವರೆದ ತೆಳು ಪದರದ ವಿದ್ಯುತ್ಕೋಶಗಳಾಗಿವೆ. ಅವು ಅತ್ಯಂತ ಹೆಚ್ಚು ಸಾಮರ್ಥ್ಯದ ಪರಿವರ್ತನೆಯನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುತ್ತವೆ.

ಕಠಿಣ ತೆಳು ಪದರದ ಘಟಕಗಳು[ಬದಲಾಯಿಸಿ]

ಕಠಿಣ ತೆಳುಪದರ ಘಟಕಗಳಲ್ಲಿ , ವಿದ್ಯುತ್ಕೋಶಗಳನ್ನು ಮತ್ತು ಘಟಕಗಳನ್ನು ಒಂದೇ ಉತ್ಪಾದನಾಕ್ರಮದಲ್ಲಿ ತಯಾರಿಸಲಾಗುತ್ತದೆ.

ವಿದ್ಯುತ್ಕೋಶಗಳನ್ನು ಗಾಜಿನ ತಳಪದರ ಅಥವಾ ಮೇಲ್ಪದರಗಳ ಮೇಲೆ ನಿರ್ಮಿಸಲಾಗುತ್ತದೆ (ರಚಿಸಲಾಗುತ್ತದೆ) ಹಾಗು ವಿದ್ಯುತ್ ಸಂಪರ್ಕಗಳನ್ನು "ಮೊನೊಲಿಥಿಕ್ ಅನುಕಲನ" ಎಂದು ಕರೆಯಲಾಗುವ ಇನ್ ಸಿಟು ವಿನಲ್ಲಿ ರಚಿಸಲಾಗುತ್ತದೆ. ಮುಂದಿನ ಅಥವಾ ಹಿಂದಿನ ಶೀಟ್‌ಗೆ ತಳಪದರ ಅಥವಾ ಮೇಲ್ಪದರವನ್ನು ಎನ್‌ಕ್ಯಾಪ್ಸುಲೆಂಟ್‌ನಿಂದ ವಿಶೇಷವಾಗಿ ಇನ್ನೊಂದು ಗ್ಲಾಸ್ ಶೀಟ್ ಜತೆಗೆ ಅಂಟಿಸಬೇಕು.

ಈ ವರ್ಗದಲ್ಲಿ ಬರುವಂತಹ ಪ್ರಮುಖ ವಿದ್ಯುತ್ಕೋಶಗಳೆಂದರೆ;CdTe, ಅಥವಾ a-Si, ಅಥವಾ a-Si+uc-Si tandem, ಅಥವಾ CIGS (ಅಥವಾ ಇತರೆ) ಅಮಾರ್ಫಸ್ ಸಿಲಿಕಾನ್ 6-12% ರಷ್ಟು ಸೂರ್ಯನ ಬೆಳಕಿನ ಪರಿವರ್ತನ ದರವನ್ನು ಹೊಂದಿವೆ.

ಹೊಂದಿಕೊಳ್ಳುವ ತೆಳುಪದರ ಕೋಶದ ಘಟಕಗಳು[ಬದಲಾಯಿಸಿ]

ಹೊಂದಿಕೊಳ್ಳುವ ತೆಳುಪದರ ವಿದ್ಯುತ್ಕೋಶಗಳನ್ನು ಮತ್ತು ಘಟಕಗಳನ್ನು ಹೊಂದಿಕೊಳ್ಳುವ ತಳಪದರದ ಮೇಲೆ ಫೋಟೋಆಕ್ಟೀವ್ ಪದರವನ್ನು ಮತ್ತು ಅಗತ್ಯವಿರುವ ಪದರಗಳನ್ನು ಇರಿಸುವ ಮೂಲಕ ಒಂದೇ ರೀತಿಯ ಉತ್ಪಾದನಕ್ರಮದಲ್ಲಿ ಉತ್ಪಾದಿಸಲಾಗುತ್ತದೆ.

ತಳಪದರವು ನಿರೋಧಕವಾದಾಗ (e.g. ಪಾಲಿಯೆಸ್ಟರ್ ಅಥವಾ ಪಾಲಿಮೈಡ್ ಪದರ) ಮೊನೊಲಿತಿಕ್(ಡೈ)ಅನುಕಲನವನ್ನು ಬಳಸಬಹುದು.

ಅದು ವಾಹಕವಾದಲ್ಲಿ ವಿದ್ಯುತ್ ಸಂಪರ್ಕಕ್ಕೆ ಮತ್ತೊಂದು ವಿಧಾನವನ್ನು ಬಳಸಬೇಕಾಗುತ್ತದೆ.

ಕೋಶಗಳ ಮುಂಭಾಗದಿಂದ ಪಾರದರ್ಶಕ ವರ್ಣರಹಿತ ಫ್ಲೋರೋಪಾಲಿಮರ್ ಗೆ ಅಂಟಿಸುವ ಮೂಲಕ (ಸಾಮಾನ್ಯವಾಗಿ ETFE ಅಥವಾ FEP)ಮತ್ತು ಮತ್ತೊಂದು ಭಾಗದಲ್ಲಿ ಕೊನೆಯ ತಳಪದರಕ್ಕೆ ಹೊಂದುವ ಪಾಲಿಮರ್ ಅನ್ನು ಅಂಟಿಸುವ ಮೂಲಕ ವಿದ್ಯುತ್ಕೋಶಗಳನ್ನು ಘಟಕಗಳಾಗಿ ಜೋಡಿಸಲಾಗುತ್ತದೆ. ವಾಣಿಜ್ಯ ರೀತಿಯಲ್ಲಿ ಲಭ್ಯವಿರುವ ( MW ಪರಿಮಾಣದಲ್ಲಿ) ಹೊಂದಿಕೊಳ್ಳುವ ಘಟಕ ಮಾತ್ರ ಅಸ್ಫಾಟಿಕ ಸಿಲಿಕಾನ್ಮೂರು ಜಂಕ್ಷನ್(ಯುನಿಸೋಲಾರ್ ನಿಂದ) ಗಳನ್ನು ಬಳಸುತ್ತದೆ.

ಸಂಯುಕ್ತ ಅರೆವಾಹಕ ತಂತ್ರಜ್ಞಾನದಿಂದ ತಯಾರಿಸಿದ ಇನ್‌ವರ್ಟಡ್ ಮೆಟಾಮಾರ್ಫಿಕ್ (IMM) ಮಲ್ಟಿಜಂಕ್ಷನ್ ಸೌರ ವಿದ್ಯುತ್‌ಕೋಶಗಳು ಜುಲೈ 2008ರಲ್ಲಿ ವಾಣಿಜ್ಯೀಕರಣಗೊಂಡಿತು. ನಾರ್ತ್ ಅಮೆರಿಕನ್ ಸೋಲಾರ್ ಚಾಲೆಂಜ್‌ನ್ನು ಜುಲೈ 2008ರಲ್ಲಿ ಗೆದ್ದುಕೊಂಡ ಮಿಚಿಗನ್ ವಿಶ್ವವಿದ್ಯಾನಿಲಯದ ಸೌರ ಕಾರು IMMತೆಳು-ಪದರದ ಹೊಂದಿಕೊಳ್ಳುವ ಸೌರ ವಿದ್ಯುತ್ ಕೋಶಗಳನ್ನು ಬಳಸಿದೆ.

ವಾಣಿಜ್ಯಬಳಕೆಗಳ ಮತ್ತು ಗೃಹಬಳಕೆಗಳ ಅಗತ್ಯಗಳು ಭಿನ್ನವಾಗಿರುತ್ತದೆ. ಇದರಲ್ಲಿ ಗೃಹಬಳಕೆಯ ಅಗತ್ಯಗಳು ಸರಳವಾಗಿರುತ್ತವೆ ಮತ್ತು ಪ್ಯಾಕೇಜ್ ಮಾಡಬಹುದು. ಸೌರ ವಿದ್ಯುತ್ಕೋಶಗಳ ತಂತ್ರಜ್ಞಾನ ಮುಂದುವರೆದಂತೆ ಬ್ಯಾಟರಿ, ಪರ್ಯಾಯಕ ಮತ್ತು ವೋಲ್ಟೇಜ್ ಅನ್ನು ಗುರುತಿಸುವ ಟ್ರಾನ್ಸ್ ಫರ್ ಸ್ವಿಚ್‌ನಂತಹ ಇತರ ಬೇಸ್ ಲೈನ್ ಸಾಧನವನ್ನು ಗೃಹಬಳಕೆಗಾಗಿ ಜೋಡಿಸುವ ಅಗತ್ಯವಿದೆ. ಸೇವೆಯ ಗಾತ್ರವನ್ನು ಆಧರಿಸಿ ವಾಣಿಜ್ಯ ಬಳಕೆಯನ್ನು ದ್ಯುತಿವಿದ್ಯುಜ್ಜನಕದ ಕೋಶದ ರಂಗದಲ್ಲಿ ಸೀಮಿತಗೊಳಿಸಲಾಗುತ್ತದೆ.ಹೆಚ್ಚು ಜಟಿಲ ಪ್ಯಾರಾಬೋಲಿಕ್ ಪ್ರತಿಫಲಕಗಳು ಮತ್ತು ಸೌರ ಸಾಂದ್ರಕಗಳು ಹೆಚ್ಚು ಪ್ರಬಲ ತಂತ್ರಜ್ಞಾನವಾಗುತ್ತಿದೆ.

ಇಂಟರ್‌ಟೆಕ್ ಪೈರ ನಡೆಸಿದ ಪ್ರಮುಖ ಹೊಸ ಅಧ್ಯಯನದ ಪ್ರಕಾರ ಎಲ್ಲಾ PV ಉದ್ಯಮಗಳಲ್ಲಿ ಎಚ್ಚರಿಕೆಯ ಹೊರತಾಗಿಯೂ ಜಾಗತಿಕ ಹೊಂದಿಕೆಯ ತೆಳುಪದರದ ದ್ಯುತಿವಿದ್ಯುಜ್ಜನಕ (PV) ಮಾರುಕಟ್ಟೆ 2019 ರ ಹೊತ್ತಿಗೆ 32GW ಅನ್ನು ಮೀರಿಸಿ ಸುಮಾರು 35% ಕ್ಕಿಂತ ಹೆಚ್ಚು CAGR ಅನ್ನು ಅನುಭವಿಸುತ್ತದೆಂದು ನಿರೀಕ್ಷಿಸಲಾಗಿದೆ.[೫]

ಘಟಕಗಳಲ್ಲಿ ಅಳವಡಿಸಿದ ವಿದ್ಯುನ್ಮಾನಗಳು[ಬದಲಾಯಿಸಿ]

ಅನೇಕ ಕಂಪನಿಗಳು PV ಘಟಕಗಳಲ್ಲಿ ವಿದ್ಯುನ್ಮಾನಗಳನ್ನು ಅಳವಡಿಸಲು ಪ್ರಾರಂಭಿಸಿದವು. ಇದು ಪ್ರತಿ ಘಟಕಕ್ಕೆ ಪ್ರತ್ಯೇಕವಾಗಿ ಮ್ಯಾಕ್ಸಿಮಮ್ ಪವರ್ ಪಾಯಿಂಟ್ ಟ್ರ್ಯಾಕಿಂಗ್ (MPPT)ಅನ್ನು ನೀಡಲು ಹಾಗೂ ಘಟಕದ ಮಟ್ಟದಲ್ಲಿ ಮೇಲ್ವಿಚಾರಣೆ ವಹಿಸಲು ಮತ್ತು ತಪ್ಪು ಗುರುತಿಸಲು ಸಾಧನೆ ಅಂಕಿಅಂಶದ ಮಾಪನಕ್ಕೆ ಅನುಕೂಲ ಕಲ್ಪಿಸುತ್ತದೆ. ಕೆಲವು ಸೊಲ್ಯೂಷನ್‌ಗಳು ವಿದ್ಯುತ್ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತವೆ.ಸೌರ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳಿಂದ ವಿದ್ಯುತ್ ಉತ್ಪನ್ನವನ್ನು ಗರಿಷ್ಠಗೊಳಿಸಲು DC ಇಂದ DC ಪರಿವರ್ತಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಘಟಕಗಳ ಸಾಮರ್ಥ್ಯ ಮತ್ತು ಬಾಳಿಕೆಅವಧಿ[ಬದಲಾಯಿಸಿ]

ಘಟಕಗಳ ಸಾಮರ್ಥ್ಯವನ್ನು ಸಾಮಾನ್ಯವಾಗಿ ಸ್ಟಾಂಡರ್ಡ್ ಟೆಸ್ಟ್ ಕಂಡಿಷನ್ಸ್ (STC) ಅನ್ನು ಆಧರಿಸಿ ನಿರ್ಧರಿಸಲಾಗುತ್ತದೆ: 1,000 W/m² ನಷ್ಟು ಉಜ್ಜ್ವಲತೆ ಸಾಮರ್ಥ್ಯ , AM1.5 ನಷ್ಟು ಸೌರ ರೋಹಿತ, ಮತ್ತು 25 °C ನಲ್ಲಿ ಘಟಕದ ತಾಪಮಾನ.

ವಿದ್ಯುತ್‌ನ ಲಕ್ಷಣಗಳು, ನಾಮಿನಲ್ ಪವರ್ (W ನಲ್ಲಿ ಅಳತೆ ಮಾಡಲಾದ PMAX), ಓಪನ್ ಸರ್ಕ್ಯೂಟ್ ವೋಲ್ಟೇಜ್(VOC), ಶಾರ್ಟ್ ಸರ್ಕ್ಯೂಟ್ ಕರೆಂಟ್ (ಆಂಪಿಯರ್ ಗಳಿಂದ ಅಳತೆಮಾಡಲಾದ ISC),ಮ್ಯಾಕ್ಸಿಮಮ್ ಪವರ್ ವೋಲ್ಟೇಜ್(ಗರಿಷ್ಠ ವಿದ್ಯುತ್ ವೋಲ್ಟೇಜ್) (VMPP) , ಮ್ಯಾಕ್ಸಿಮಮ್ ಪವರ್ ಕರೆಂಟ್ (IMPP) ಮತ್ತು ಘಟಕದ ಸಾಮರ್ಥ್ಯ(%) ಗಳನ್ನು ಒಳಗೊಂಡಿರುತ್ತವೆ.

kWp ಯಲ್ಲಿ , kW ಕಿಲೋವಾಟ್ ಆಗಿದೆ ಮತ್ತು p “ಗರಿಷ್ಠ” ಎಂದರೆ ಗರಿಷ್ಠ ಸಾಧನೆ. “p” ಗರಿಷ್ಠ ಸಾಧನೆಯನ್ನು ತೋರಿಸದಿದ್ದರೂ, STC ಯ ಪ್ರಕಾರ ಗರಿಷ್ಠ ಉತ್ಪಾದಕತೆಯನ್ನು ತೋರಿಸುತ್ತದೆ[೬].

ಸೌರ ಫಲಕಗಳು ಬಿಸಿಲು, ಚಳಿ, ಮಳೆ ಮತ್ತು ಆಲಿಕಲ್ಲುಗಳನ್ನು ಅನೇಕ ವರ್ಷಗಳವರೆಗೆ ತಡೆದುಕೊಳ್ಳಬೇಕು. ಅನೇಕ ಸ್ಫಟಿಕದ ಸಿಲಿಕಾನ್ ಘಟಕಗಳ ತಯಾರಕರು 90% ವಿದ್ಯುತ್ ಉತ್ಪಾದನೆ ದರದಲ್ಲಿ 10 ವರ್ಷಗಳ ವಿದ್ಯುತ್ ಉತ್ಪಾದನೆಯ ಖಾತರಿ ಅಥವಾ 80% ರಲ್ಲಿ 25 ವರ್ಷಗಳ ಖಾತರಿಯನ್ನು ನೀಡುವ ವಾರಂಟಿಗಳನ್ನು ನೀಡುತ್ತಾರೆ.

ಉತ್ಪಾದನೆ[ಬದಲಾಯಿಸಿ]

2009 ರಲ್ಲಿ 7.5 GWಅಳವಡಿಕೆಗಳನ್ನು ಸಂಪೂರ್ಣಗೊಳಿಸಲಾಯಿತು ಮತ್ತು ಸಂಪರ್ಕ ಹೊಂದಿಸಲಾಯಿತು. PV ಘಟಕಗಳ ಸಾಗಣೆ ಅತ್ಯಂತ ಹೆಚ್ಚಾಗಿರುತ್ತದೆ ಎಂದು IMS ಸಂಶೋಧನೆ ಅಂದಾಜುಮಾಡಿದೆ. ಚೇತರಿಸಿಕೊಂಡ ಐರೋಪ್ಯ ಮಾರುಕಟ್ಟೆಗಳಾದ ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ಜೆಕ್ ರಿಪಬ್ಲಿಕ್ ಮುಂತಾದ ಕಡೆ,2010ರ ಪ್ರಥಮ ತ್ರೈಮಾಸಿಕದಲ್ಲಿ ಮುಕ್ತಾಯವಾದ ಅಳವಡಿಕೆಗಳನ್ನು ಪೂರೈಸಲು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ದಾಖಲೆಯ ಮೊತ್ತದ ಘಟಕಗಳನ್ನು ಸಾಗಣೆ ಮಾಡಿದ್ದರಿಂದ ಸಾಗಣೆಗಳು ಅಳವಡಿಸುವಿಕೆಗಳನ್ನು ಮೀರಿಸಿದವು.

ಅಗ್ರ ಹತ್ತು[ಬದಲಾಯಿಸಿ]

ಪ್ರಮುಖ ತೆಳು ಪದರದ ಕೋಶದ ತಯಾರಕರಾದ ಫರ್ಸ್ಟ್ ಸೋಲಾರ್ 2009ರಲ್ಲಿ PV ಘಟಕ ಪೂರೈಕೆದಾರರ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಇದು ತನ್ನ ಎಲ್ಲ ಸ್ಫಟಿಕ ಎದುರಾಳಿಗಳನ್ನು ಮೀರಿಸಿ, ಹೆಚ್ಚು ಘಟಕಗಳ GWಅನ್ನು ಸಾಗಣೆ ಮಾಡಿ,ಕೈಗಾರಿಕೆಯ ಅತ್ಯಂತ ದೊಡ್ಡ ಪೂರೈಕೆದಾರ ಎನಿಸಿತು.

2009 ರ ಅಗ್ರ ಹತ್ತು ಸರಬರಾಜುದಾರರು ಈ ಕೆಳಗಿನಂತಿದ್ದಾರೆ:[೭]

 1. ಫರ್ಸ್ಟ್ ಸೋಲಾರ್
 2. ಸನ್ ಟೆಕ್
 3. ಶಾರ್ಪ್ [೮]
 4. ಯಿಂಗ್ಲಿ
 5. ಟ್ರಿನ ಸೋಲಾರ್
 6. ಸನ್ ಪವರ್ ಕಾರ್ಪೋರೇಷನ್
 7. ಕ್ಯೂಸೆರ ಕಾರ್ಪೋರೇಷನ್
 8. ಕ್ಯಾಂಡಿಯನ್ ಸೋಲಾರ್ Inc.[೯]
 9. ಸೋಲಾರ್ ವಲ್ಡ್ AG
 10. ಸ್ಯಾನ್ಯೊ ಎಲೆಕ್ಟ್ರಿಕ್ [೧೦]

ದರ[ಬದಲಾಯಿಸಿ]

ಸರಾಸರಿ ದರ ಮಾಹಿತಿಯು ಮೂರು ದರ ವರ್ಗಗಳಲ್ಲಿ ವಿಭಜನೆಯಾಗಿದೆ: ಅಲ್ಪ ಪ್ರಮಾಣದಲ್ಲಿ ಖರೀದಿದಾರರು(ವಾರ್ಷಿಕ ಕಿಲೋವಾಟ್ ಶ್ರೇಣಿಯಲ್ಲಿ ಬರುವ ಎಲ್ಲಾ ಗಾತ್ರದ ಘಟಕಗಳು) ಮಧ್ಯಮ ವರ್ಗದ ಖರೀದಿದಾರರು (ವಿಶೇಷವಾಗಿ ವಾರ್ಷಿಕ 10 MWp ಯಷ್ಟಿರುವ), ಮತ್ತು ಬೃಹತ್ ಪ್ರಮಾಣದ ಖರೀದಿದಾರರು(ಸ್ವಯಂ ವಿವರಣೆ-ಕಡಿಮೆ ಬೆಲೆಗಳಿಗೆ ಅವಕಾಶ.) ದೀರ್ಘಕಾಲದಲ್ಲಿ ಮಾತ್ರ ವಿದ್ಯುತ್ಕೋಶಗಳ ಮತ್ತು ಘಟಕಗಳ ಬೆಲೆಯ ಮೇಲೆ ಸ್ಪಷ್ಟವಾಗಿ ವ್ಯವಸ್ಥಿತ ಕಡಿತವಿರುತ್ತದೆ. ಉದಾಹರಣೆಗೆ 1998 ರಲ್ಲಿ ಪ್ರತಿ ವ್ಯಾಟ್‌ನ ಪರಿಮಾಣದ ವೆಚ್ಚ ಸುಮಾರು $4.50 ನಷ್ಟಿತ್ತು ಎಂದು ಅಂದಾಜು ಮಾಡಲಾಗಿದೆ. ಇದು 1970ರಲ್ಲಿದ್ದ $150ನಷ್ಟು ಬೆಲೆಗಿಂತ 33 ಪಟ್ಟು ಕಡಿಮೆ ಎಂದು ಅಂದಾಜುಮಾಡಲಾಗಿದೆ.[೧೧][೧೨]

RMI,ಬ್ಯಾಲೆನ್ಸ್-ಆಫ್-ಸಿಸ್ಟಮ್ (BoS) ಅಂಶಗಳನ್ನು ಅನುಸರಿಸಿ, ಇವು ಮೈಕ್ರೋಇನ್ವರ್ಟರ್ ರಹಿತ ಸೌರ ಫಲಕಗಳ ಘಟಕರಹಿತ ವೆಚ್ಚವಾಗಿದ್ದು,(ವೈರಿಂಗ್,ಇನ್ವರ್ಟರ್‌ಗಳು,ರ‌್ಯಾಂಕಿಂಗ್ ವ್ಯವಸ್ಥೆಗಳು ಮತ್ತು ವಿವಿಧ ಬಿಡಿಭಾಗಗಳು)ಅಳವಡಿಕೆಗಳ ಒಟ್ಟು ವೆಚ್ಚದ ಅರ್ಧದಷ್ಟು ತುಂಬುತ್ತದೆ. ಅಲ್ಲದೇ ಪ್ರಮಾಣಕ್ಕನುಸಾರ ತಂತ್ರಜ್ಞಾನಗಳು ಬೃಹತ್ ಪ್ರಮಾಣದಲ್ಲಿ ಸೌರ ಫಲಕಗಳನ್ನು ಅಳವಡಿಸಲು ಪ್ರೋತ್ಸಾಹಿಸುವ ಮೂಲಕ ಪ್ರಮಾಣಾನುಗುಣ ಉಳಿತಾಯವನ್ನು ಒದಗಿಸುತ್ತದೆ.

ಸ್ಥಾಪಿಸುವ ವ್ಯವಸ್ಥೆಗಳು[ಬದಲಾಯಿಸಿ]

ಟ್ರಾಕರ್ಸ್[ಬದಲಾಯಿಸಿ]

ಸೋಲಾರ್ ಟ್ರಾಕರ್ಸ್ ಪ್ರತಿ ಫಲಕಕ್ಕೆ ಉತ್ಪತ್ತಿಯಾಗುವ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಸ್ಥಿರಗೊಳಿಸಿದ ರ‌್ಯಾಕ್ಸ್[ಬದಲಾಯಿಸಿ]

ಸೂರ್ಯ ಆಕಾಶದಲ್ಲಿ ಚಲಿಸುತ್ತಿದ್ದಂತೆ ಸ್ಥಿರ ರ‌‌್ಯಾಕ್‌ಗಳು ಫಲಕಗಳನ್ನು ಏಕೈಕ ಸ್ಥಳದಲ್ಲಿ ಹಿಡಿದಿಡುತ್ತದೆ.

ಸ್ಥಿರ ರ‌‌್ಯಾಕ್ ಫಲಕವನ್ನು ಹಿಡಿದಿಡುವ ದಿಕ್ಕಿನಲ್ಲಿ ಕೋನವನ್ನು ಸ್ಥಾಪಿಸುತ್ತದೆ. ವಾಲುವ ಕೋನಗಳು ಅಳವಡಿಸುವ ಉಪಕರಣಗಳ ಅಕ್ಷಾಂಶಕ್ಕೆ ಸಮನಾಗಿರುವುದು ಸಾಮಾನ್ಯವಾಗಿದೆ.

ಪ್ರಮಾಣಕ[ಬದಲಾಯಿಸಿ]

ಪ್ರಮಾಣಕಗಳನ್ನು ಸಾಮಾನ್ಯವಾಗಿ ದ್ಯುತಿವಿದ್ಯುಜ್ಜನಕ ಫಲಕಗಳಲ್ಲಿ ಬಳಸಲಾಗುತ್ತದೆ:

ದ್ಯುತಿವಿದ್ಯುಜ್ಜನಕ ಘಟಕಗಳೊಡನೆ ಸಾಧನಗಳು[ಬದಲಾಯಿಸಿ]

ಸೌರ ಫಲಕಗಳನ್ನು ಒಳಗೊಂಡ ವಿದ್ಯುತ್ ಸಾಧನಗಳು:

ಇವನ್ನೂ ಗಮನಿಸಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

ಉಲ್ಲೇಖಗಳು[ಬದಲಾಯಿಸಿ]

 1. http://www.kpsec.freeuk.com/components/diode.htm
 2. "STO: ವೆರಿ ಹೈ ಇಫಿಷಿಂಟ್ ಸೋಲಾರ್ ಸೆಲ್ಸ್". Archived from the original on 2007-11-16. Retrieved 2010-08-09.
 3. http://www.sunpowercorp.com/Products-and-Services/~/media/Downloads/for_products_services/spwr_315ewh_com_en.ashxt[ಶಾಶ್ವತವಾಗಿ ಮಡಿದ ಕೊಂಡಿ]
 4. "ಆರ್ಕೈವ್ ನಕಲು" (PDF). Archived from the original (PDF) on 2011-07-16. Retrieved 2010-08-09.
 5. "Global flexible and thin-film PV market expected to reach US$58b in 2019,reports by IntertechPira study". Globalsolartechnology. 2009-09-11.[ಶಾಶ್ವತವಾಗಿ ಮಡಿದ ಕೊಂಡಿ]
 6. "ಆರ್ಕೈವ್ ನಕಲು". Archived from the original on 2009-01-25. Retrieved 2021-08-09.
 7. "ಆರ್ಕೈವ್ ನಕಲು". Archived from the original on 2010-05-19. Retrieved 2010-08-09.
 8. http://www.sharp-solar.com/index.html Archived 2010-08-13 ವೇಬ್ಯಾಕ್ ಮೆಷಿನ್ ನಲ್ಲಿ.?
 9. http://www.canadian-solar.com
 10. "ಆರ್ಕೈವ್ ನಕಲು". Archived from the original on 2010-02-28. Retrieved 2010-08-09.
 11. Harnessing Light. National Research Council. 1998. p. 162.
 12. Paula Mints (24 September 2009). "Module Pricing: Rational, Or Just Plain Nuts?". Photovoltaics World Magazine. Archived from the original on 11 ಡಿಸೆಂಬರ್ 2011. Retrieved 9 ಆಗಸ್ಟ್ 2010.
 13. "ಆರ್ಕೈವ್ ನಕಲು". Archived from the original on 2010-01-21. Retrieved 2010-08-09.
 14. http://www.pcworld.com/article/164943/meet_gyy_the_first_solar_powered_netbook.html

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಸೌರ_ಫಲಕ&oldid=1216992" ಇಂದ ಪಡೆಯಲ್ಪಟ್ಟಿದೆ