ವಿಷಯಕ್ಕೆ ಹೋಗು

ಕ್ಯಾಡ್ಮಿಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


48 ಬೆಳ್ಳಿಕ್ಯಾಡ್ಮಿಯಂಇಂಡಿಯಮ್
ಸತುವು

Cd

ಪಾದರಸ
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಕ್ಯಾಡ್ಮಿಯಂ, Cd, 48
ರಾಸಾಯನಿಕ ಸರಣಿ[[transition metals]]
ಗುಂಪು, ಆವರ್ತ, ಖಂಡ 12, 5, d
ಸ್ವರೂಪಬೆಳ್ಳಿಯ ಬಣ್ಣ
ಅಣುವಿನ ತೂಕ 112.411 g·mol−1
ಋಣವಿದ್ಯುತ್ಕಣ ಜೋಡಣೆ [Kr] 5s2 4d10
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18,2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)8.65 g·cm−3
ದ್ರವಸಾಂದ್ರತೆ at ಕ.ಬಿ.7.996 g·cm−3
ಕರಗುವ ತಾಪಮಾನ594.22 K
(321.07 °C, 609.93 °ಎಫ್)
ಕುದಿಯುವ ತಾಪಮಾನ1040 K
(767 °C, 1413 °F)
ಸಮ್ಮಿಲನದ ಉಷ್ಣಾಂಶ6.21 kJ·mol−1
ಭಾಷ್ಪೀಕರಣ ಉಷ್ಣಾಂಶ99.87 kJ·mol−1
ಉಷ್ಣ ಸಾಮರ್ಥ್ಯ(25 °C) 26.020 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 530 583 654 745 867 1040
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು3
(base oxide)
ವಿದ್ಯುದೃಣತ್ವ1.69 (Pauling scale)
ಅಣುವಿನ ತ್ರಿಜ್ಯ155 pm
ಅಣುವಿನ ತ್ರಿಜ್ಯ (ಲೆಖ್ಕಿತ)161 pm
ತ್ರಿಜ್ಯ ಸಹಾಂಕ148 pm
ವಾನ್ ಡೆರ್ ವಾಲ್ಸ್ ತ್ರಿಜ್ಯ158 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ವಿದ್ಯುತ್ ರೋಧಶೀಲತೆ72.7Ω·m
ಉಷ್ಣ ವಾಹಕತೆ(300 K) 96.6 W·m−1·K−1
ಉಷ್ಣ ವ್ಯಾಕೋಚನ(25 °C) 30.8 µm·m−1·K−1
ಯಂಗ್ ಮಾಪಾಂಕ50 GPa
ವಿರೋಧಬಲ ಮಾಪನಾಂಕ19 GPa
ಸಗಟು ಮಾಪನಾಂಕ42 GPa
ವಿಷ ನಿಷ್ಪತ್ತಿ 0.30
ಮೋಸ್ ಗಡಸುತನ2.0
ಬ್ರಿನೆಲ್ ಗಡಸುತನ203 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-43-9
ಉಲ್ಲೇಖನೆಗಳು

ಕ್ಯಾಡ್ಮಿಯಂ ಒಂದು ಮೂಲವಸ್ತು. ಇದು ಒಂದು ಲೋಹ. ಜರ್ಮನಿಫ್ರೆಡರಿಕ್ ಸ್ಟ್ರೋಮೆಯರ್ ಎಂಬವರು ೧೮೧೭ರಲ್ಲಿ ಇದನ್ನು ಕಂಡು ಹಿಡಿದರು.[] ಇದಕ್ಕೆ ಸತುವಿನಂತೆ ಹೊಳಪಾದ ಬಿಳಿ ಬಣ್ಣವಿದೆ. ಬ್ಯಾಟರಿ ಉತ್ಪಾದನೆಯಲ್ಲಿ, ಕಬ್ಬಿಣಕ್ಕೆ ಹೊಳಪು ಕೊಡಲು ಹಾಗೂ ಅನೇಕ ಸಂಯುಕ್ತ ವಸ್ತುಗಳನ್ನು ತಯಾರಿಸಲು ಹೆಚ್ಚಾಗಿ ಬಳಸುತ್ತಾರೆ. (ಅತ್ಯಂತ ಮುಖ್ಯವಾದುದು ಇದನ್ನು ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ನ್ಯೂಟ್ರಾನ್‍ಗಳನ್ನು ಹೀರಿಕೊಳ್ಳಲು ಬಳಸುತ್ತಾರೆ)

ಕ್ಯಾಡ್ಮಿಯಂ ಆವರ್ತಕೋಷ್ಟಕದಲ್ಲಿ ಎರಡನೆಯ ಗುಂಪಿನ ಐದನೆಯ ಆವರ್ತದ (ಪೀರಿಯಡ್) ಸಂಕ್ರಾಂತಿ ಲೋಹದಾತು.  ರಾಸಾಯನಿಕ ಸಂಕೇತ Cd. ಪರಮಾಣು ತೂಕ ೧೧೨.೪೦. ಪರಮಾಣು ಸಂಖ್ಯೆ ೪೮. ಇದರ ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d7 4s2. ಸತುವನ್ನು ಕರಗಿಸುವ ಮೂಸೆಯಲ್ಲಿ ಕ್ಯಾಡ್ಮಿಯಮನ್ನು ಮೊದಲಬಾರಿಗೆ ಗುರುತಿಸಲಾಯಿತು. ಈ ಲೋಹ ಅದರ ಸಲ್ಫೈಡ್ ಮತ್ತು ಕಾರ್ಬೊನೇಟ್ ರೂಪದಲ್ಲಿ ದೊರೆಯುತ್ತದೆ. ಗ್ರೀನೋಕೈಟ್ ಎಂಬ ವಿರಳವಾದ ಅದುರು ಕ್ಯಾಡ್ಮಿಯಂ ಸಲ್ಫೈಡನ್ನು ಮುಖ್ಯಾಂಶವನ್ನಾಗಿ ಒಳಗೊಂಡಿದೆ. ಇದು ಗ್ರೀನ್‌ಲೆಂಡ್, ಸ್ಕಾಟ್‌ಲೆಂಡ್ ಮತ್ತು ಪೆನ್ಸಿಲ್ವೇನಿಯ ದೇಶಗಳಲ್ಲಿ ದೊರೆಯುತ್ತದೆ. ಔದ್ಯೋಗಿಕ ದೃಷ್ಟಿಯಿಂದ ಸತುವಿನ ಅದುರುಗಳೊಂದಿಗೆ ೧% ಪ್ರಮಾಣದಲ್ಲಿ ಸಲ್ಫೈಡ್ ಮತ್ತು ಕಾರ್ಬೊನೇಟ್ ರೂಪಗಳಲ್ಲಿ ದೊರೆಯುವ ಅದುರುಗಳು ಮುಖ್ಯವಾದುವು.

ಉತ್ಪಾದನೆ

[ಬದಲಾಯಿಸಿ]

ಕ್ಯಾಡ್ಮಿಯಂ ಲೋಹವನ್ನು ಸಾಮಾನ್ಯವಾಗಿ ಸತುವಿನ ಲೋಹವನ್ನು ಪಡೆಯುವಾಗಲೇ ತೆಗೆಯುತ್ತಾರೆ.[] ಅದುರುಗಳನ್ನು ಕಾಯಿಸಿದಾಗ ಇವೆರಡು ಲೋಹಗಳೂ ಆವಿಯ ರೂಪದಲ್ಲಿ ಹೊರಬೀಳುತ್ತವೆ. ಕ್ಯಾಡ್ಮಿಯಮಿನ ಬಾಷ್ಪಶೀಲತೆ (ವೋಲಟೈಲಿಟಿ) ಸತುವಿಗಿಂತ ಅಧಿಕವಾಗಿರುವುದರಿಂದ ಲೋಹವನ್ನು ಆಂಶಿಕಾಸವನದ ಮೂಲಕ (ಫ್ರಾಕ್ಷನಲ್ ಡಿಸ್ಟಿಲೇಷನ್) ಸತುವಿನಿಂದ ಬೇರ್ಪಡಿಸಬಹುದು. ಅಶುದ್ಧವಾದ ಈ ಆವಿಯಲ್ಲಿ ಲೋಹ ಮತ್ತು ಲೋಹದ ಆಕ್ಸೈಡ್ ಸೇರಿರುತ್ತವೆ. ಈ ಮಿಶ್ರಣವನ್ನು ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ವಿಲೀನಮಾಡಿ ಕ್ಯಾಡ್ಮಿಯಮನ್ನು ಕಾರ್ಬೊನೇಟ್ ರೂಪಕ್ಕೆ ಪರಿವರ್ತಿಸುತ್ತಾರೆ. ಕಾರ್ಬೊನೇಟನ್ನು ಕಾಯಿಸಿದಾಗ ದೊರೆಯುವ ಆಕ್ಸೈಡನ್ನು ಇಂಗಾಲದಿಂದ ೮೦೦ ಸೆಂ.ನಲ್ಲಿ ಅಪಕರ್ಷಿಸಿ ಶುದ್ಧವಾದ ಲೋಹವನ್ನು ಪಡೆಯಬಹುದು.[] ಇನ್ನೊಂದು ವಿಧಾನದಲ್ಲಿ ವಿದ್ಯುಚ್ಛಕ್ತಿಯನ್ನು ಸತುವು ಮತ್ತು ಕ್ಯಾಡ್ಮಿಯಂ ಮಿಶ್ರಿತ ಲವಣಗಳ ದ್ರಾವಣದ ಮೂಲಕ ಹಾಯಿಸಿ ಕ್ಯಾಡ್ಮಿಯಮನ್ನು ಬೇರ್ಪಡಿಸುತ್ತಾರೆ. ಮಾರುಕಟ್ಟೆಯಲ್ಲಿ ಈ ಲೋಹ ಪುಡಿ, ಶುದ್ಧವಾದ ಕಡ್ಡಿಗಳು, ಗಟ್ಟಿಗಳು, ಹಲಗೆಗಳು ಮತ್ತು ಶುದ್ಧವಾದ ಹರಳುಗಳ ರೂಪದಲ್ಲಿ ಮಾರಾಟವಾಗುತ್ತದೆ.

ಗುಣಗಳು

[ಬದಲಾಯಿಸಿ]

ಕ್ಯಾಡ್ಮಿಯಂ ಬೆಳ್ಳಿಯಂತೆ ಬೆಳ್ಳಗಿರುವ, ಸತುವಿಗಿಂತ ಮೃದುವಾದ ಆದರೆ ತವರಕ್ಕಿಂತ ಕಠಿಣವಾದ ಲೋಹ. ಇದನ್ನು ತೆಳುವಾಗಿ ಎಳೆಯಬಹುದು ಮತ್ತು ತಟ್ಟಬಹುದು. ಜಲಮಿಶ್ರಿತ ಗಾಳಿಯಲ್ಲಿ ಇದು ಮಸಕಾಗುವುದು. ಕ್ಯಾಡ್ಮಿಯಮಿನ ಅನೇಕ ಲವಣಗಳನ್ನು ತಯಾರಿಸಲಾಗಿದೆ. ಬಹುತೇಕ ಲವಣಗಳಲ್ಲಿ, ಕ್ಯಾಡ್ಮಿಯಂ ದ್ವಿವೇಲೆನ್ಸಿ ಉಳ್ಳದ್ದು. ಕ್ಯಾಡ್ಮಿಯಂ ಸಯನೈಡ್ (CN) ಮತ್ತು ಅಮೋನಿಯಂ (NH4+) ಅಯಾನುಗಳೊಂದಿಗೆ ಸಂಕೀರ್ಣ ಅಣುವನ್ನು ಉಂಟುಮಾಡುತ್ತದೆ. ಕ್ಯಾಡ್ಮಿಯಂ ಕ್ಲೋರೈಡಿನ ಜಲೀಯ ದ್ರಾವಣ ವಿದ್ಯುತ್ತನ್ನು ಅಲ್ಪಪರಿಮಾಣದಲ್ಲಿ ವಹನಿಸುತ್ತದೆ. ಇದರ ಹರಳಿನ ರಚನೆ, ಕ್ಲೋರೈಡ್, ನಿಜವಾದ ಅಯಾನಿಕ್ ಸಂಯುಕ್ತ ಅಲ್ಲವೆಂದು ತೋರಿಸುತ್ತದೆ. ಈ ಗುಣದಿಂದ ಮತ್ತು ಸ್ವಯಂಸಂಕೀರ್ಣ ಹೊಂದುವ ಗುಣದಿಂದಾಗಿ ಈ ಲವಣ ಅಲ್ಪಪರಿಮಾಣದಲ್ಲಿ ಅಯಾನೀಕರಿಸುತ್ತದೆ. ದ್ರಾವಣದಲ್ಲಿ ಕ್ಯಾಡ್ಮಿಯಂ ಕ್ಲೋರೈಡ್ ಮುಂದೆ ಬರೆದಿರುವಂತೆ ವರ್ತಿಸುವುದೆಂದು ಭಾವಿಸಲಾಗಿದೆ.

Cd Cl2 ↔     Cd+++cl-

Cd Cl2    ↔     Cd+++ [Cd Cl4 =] ಸ್ವಯಂ ಸಂಕೀರ್ಣ

ಉಪಯೋಗಗಳು

[ಬದಲಾಯಿಸಿ]

ಕ್ಯಾಡ್ಮಿಯಮನ್ನು ಅಧಿಕ ಮೊತ್ತದ್ದಲ್ಲಿ ಕಬ್ಬಿಣ ಮತ್ತು ಉಕ್ಕಿನ ವಸ್ತುಗಳಿಗೆ ರಕ್ಷಾಲೇಪನದಂತೆ ಉಪಯೋಗಿಸುತ್ತಾರೆ. ಈ ಲೋಹವನ್ನೊಳಗೊಂಡಿರುವ ಮಿಶ್ರಲೋಹಗಳಿಗೆ ಅಲ್ಯೂಮಿನಿಯಂ ಬೆಸುಗೆ, ಬಾಲ್‌ಬ್ಯಾರಿಂಗ್, ಫ್ಯೂಸ್ ತಂತಿಗಳು, ಟ್ರಾಲಿತಂತಿಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉಪಯೋಗ ಉಂಟು. ಹೊಗೆಬಾಂಬುಗಳು, ಸಿಡಿಮದ್ದುಗಳು, ದೀಪಗಳು, ವಿದ್ಯುತ್ ಸಲಕರಣೆಗಳು, ತಾಪದೀಪ್ತ ದೀಪಗಳ ತಂತುಗಳು (ಇನ್‌ಕ್ಯಾಂಡೆಸೆಂಟ್ ಲ್ಯಾಂಪ್ ಫಿಲಮೆಂಟ್ಸ್) ಮುಂತಾದವುಗಳ ತಯಾರಿಕೆಯಲ್ಲಿಯೂ, ದಂತಚಿಕಿತ್ಸೆ. ಪಿಂಗಾಣಿ ಕೈಗಾರಿಕೆ, ಗಾಜಿನ ತಯಾರಿಕೆ, ಮುದ್ರಣಕಾರ್ಯ, ನಿಕೆಲ್ ಪ್ಲೇಟಿಂಗ್,[] ಲಿಥೋಗ್ರಫಿ, ವಿದ್ಯುತ್‌ಕೋಶಗಳು. ನಿಕೆಲ್-ಕ್ಯಾಡ್ಮಿಯಂ ಸ್ಟೋರೇಜ್ ಬ್ಯಾಟರಿಗಳಲ್ಲಿಯೂ ಕ್ಯಾಡ್ಮಿಯಮನ್ನು ಬಳಸುತ್ತಾರೆ.[] ಇತ್ತೀಚೆಗೆ ಇದನ್ನು ಪರಮಾಣು ರೀಯಾಕ್ಟರಿನಲ್ಲಿ ಪರಮಾಣುವಿದಳನವನ್ನು ನಿಧಾನಗೊಳಿಸುವ (ಮಾಡರೇಟರ್) ವಸ್ತುವಾಗಿ ಉಪಯೋಗಿಸುತ್ತಿದ್ದಾರೆ.[] ಕ್ಯಾಡ್ಮಿಯಂ ಟಂಗ್‌ಸ್ಟೇಟನ್ನು ಫ್ಲೂರಸೆಂಟ್ ಬಣ್ಣವಾಗಿ ಉಪಯೋಗಿಸುತ್ತಾರೆ.[]

                       ಕ್ಯಾಡ್ಮಿಯಂ ಮಿಶ್ರಲೋಹಗಳು
----------------------------------------------------------------
ಬೆಸುಗೆ ಹಾಕಬಲ್ಲ (ಫ್ಯೂಸಿಬಲ್) ಮಿಶ್ರ ಲೋಹಗಳು                    ಲೋಹಗಳ ಪ್ರಮಾಣ
   ದ್ರವೀಕರಣ ಉಷ್ಣತೆ
----------------------------------------------------------------
೭೦ಸೆಂ (ವುಡ್ಸ್‌ನ ಲೋಹ) . . . ..        ೧೮% ಕ್ಯಾಡ್ಮಿಯಂ, ೫೦% ತವರ, ೩೨%ಸೀಸ
೭೦ಸೆಂ.(ಲಿಪೋವಿಡ್ಸ್‌ನ ಲೋಹ). . ..       ೧೨.೫% ಕ್ಯಾಡ್ಮಿಯಂ, ೫೦% ಬಿಸ್ಮತ್, 
                                                ೨೫% ಸೀಸ, ೧೨.೫% ತವರ
೯೧.೫ ಸೆಂ                . . .. .    ೮% ಕ್ಯಾಡ್ಮಿಯಂ, ೫೨% ಬಿಸ್ಮತ್, ೪೦% ಸೀಸ
೧೪೫ ಸೆಂ                . .. ..      ೧೮% ಕ್ಯಾಡ್ಮಿಯಂ, ೫೦% ತವರ, ೩೨% ಸೀಸ
-----------------------------------------------------------------
                        ಇತರ ಮಿಶ್ರ ಲೋಹಗಳು
----------------------------------------------------------------
೪೨೦ ಸೆಂ.          . . . .           ೯೦% ಕ್ಯಾಡ್ಮಿಯಂ       ೧೦% ಬೆಳ್ಳಿ
೬೧೦ ಸೆಂ.          . . . .           ೭೦%               ೩೦% 
೭೬೦ ಸೆಂ.          . . . .           ೫೦%               ೫೦% 
೨೮೦ ಸೆಂ            . . . .          ೯೦%                ೧೦% ಸತು
೨೯೫ ಸೆಂ          . . .. ..          ೭೦%                ೩೦% ಸತು
೩೨೭ ಸೆಂ          . . . . .          ೫೦%                ೫೦% 
----------------------------------------------------------------

ಉಲ್ಲೇಖಗಳು

[ಬದಲಾಯಿಸಿ]
  1. Hermann, C. S. (1818). "Noch ein schreiben über das neue Metall". Annalen der Physik. 59 (5): 113–116. Bibcode:1818AnP....59..113H. doi:10.1002/andp.18180590511.
  2. Golberg, D. C.; et al. (1969). Trends in Usage of Cadmium: Report. US NRC/NAS/NAE. pp. 1–3.
  3. Scoullos, M. J. (2001). Mercury, Cadmium, Lead: Handbook for Sustainable Heavy Metals Policy and Regulation. Springer. pp. 104–116. ISBN 978-1-4020-0224-3.
  4. Smith, C.J.E.; Higgs, M.S.; Baldwin, K.R. (20 April 1999). "Advances to Protective Coatings and their Application to Ageing Aircraft". RTO MP-25. Archived from the original (PDF) on 17 May 2011. Retrieved 29 May 2011.
  5. Krishnamurthy, N. (2 July 2013). Engg. Chemistry, 2/e. New York: PHI Learning Private Limited. pp. 82–83. ISBN 978-81-203-3666-7.
  6. Scoullos, Michael J.; Vonkeman, Gerrit H.; Thornton, Iain; Makuch, Zen (2001). Mercury, Cadmium, Lead: Handbook for Sustainable Heavy Metals Policy and Regulation. Springer. ISBN 978-1-4020-0224-3.
  7. Buxbaum, Gunter; Pfaff, Gerhard (2005). "Cadmium Pigments". Industrial inorganic pigments. Wiley-VCH. pp. 121–123. ISBN 978-3-527-30363-2.[ಶಾಶ್ವತವಾಗಿ ಮಡಿದ ಕೊಂಡಿ]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: