ಕಣ ಉತ್ಕರ್ಷಕ
ಕಣ ಉತ್ಕರ್ಷಕ (Particle Accelarator)ವಸ್ತುವಿನ ಸಣ್ಣ ಕಣಗಳನ್ನು ಅತ್ಯಂತ ವೇಗವಾಗಿ ಚಲಿಸುವಂತೆ ಮಾಡುವ ಸಾಧನ. ಅಯಾನುಗಳು ಹಾಗೂ ಉಪ ಪರಮಾಣು ಕಣ (Sub atomic particle) ಅಂದರೆ ಪರಮಾಣುಗಳಿಗಿಂತಲೂ ಸಣ್ಣದಾದ ಕಣಗಳನ್ನು ಒಂದು ಸಪೂರವಾದ ಕೊಳವೆಯಲ್ಲಿ ಹಾದುಹೋಗುವ ವ್ಯವಸ್ಥೆ ಇದರಲ್ಲಿರುತ್ತದೆ. ಈ ಕೊಳವೆಯಲ್ಲಿ ಹಾದು ಹೋಗುವ ಕಣ ವೇಗವನ್ನು ಉತ್ಕರ್ಷಿಸುವ ವ್ಯವಸ್ಥೆ ಈ ಯಂತ್ರದಲ್ಲಿರುತ್ತದೆ.
ಉಪಯೋಗಗಳು[ಬದಲಾಯಿಸಿ]
ವಿಜ್ಞಾನಿಗಳು ಉಪ ಪರಮಾಣು ಕಣಗಳ ಸಂಶೋಧನೆಗೆ ಮತ್ತು ಅಧ್ಯಯನಕ್ಕೆ ಇದನ್ನು ಬಳಸುತ್ತಾರೆ.ಪ್ರಾಕೃತಿಕವಾಗಿ ಅತ್ಯಂತ ಭಾರವಾದ ಯುರೇನಿಯಮ್ ಗಿಂತಲೂ ಭಾರವಾದ ಕೃತಕ ಮೂಲಧಾತುಗಳ ಸೃಷ್ಟಿ ಹಾಗೂ ಅಧ್ಯಯನಕ್ಕೆ ಕೂಡಾ ಇದನ್ನು ಉಪಯೋಗಿಸುತ್ತಾರೆ. ಕಣ ಉತ್ಕರ್ಷಕದ ಇನ್ನೊಂದು ಮಾದರಿಯಾದ 'ಆಟಂ ಸ್ಮಾಶರ್ಸ್' (Atom Smashers)ನ್ನು ಬೈಜಿಕ ಕೇಂದ್ರಗಳ ಅದ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉದ್ಯಮಗಳಲ್ಲಿ ಗಣಕಯಂತ್ರಗಳ ಸೂಕ್ಶ್ಮ ಚಿಪ್‌ಗಳ ಟ್ರಾನ್ಸಿಸ್ಟರ್‍ಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.ವೈದ್ಯಕೀಯ ಕ್ಷೇತ್ರದಲ್ಲಿ ಅರ್ಬುದರೋಗ ಪತ್ತೆ ಹಾಗೂ ನಿವಾರಣೆಗೆ ಬಳಕೆಯಾಗುತ್ತಿದೆ.