ಎರ್ನೆಸ್ಟ್ ಥಾಮಸ್ ಸಿಂಟನ್ ವಾಲ್ಟನ್
ಎರ್ನೆಸ್ಟ್ ಥಾಮಸ್ ಸಿಂಟನ್ ವಾಲ್ಟನ್ | |
---|---|
Born | ಎರ್ನೆಸ್ಟ್ ಥಾಮಸ್ ಸಿಂಟನ್ ವಾಲ್ಟನ್ ೧೯೦೩ ಅಕ್ಟೋಬರ್ ೬ ಐರ್‌ಲೆಂಡ್ |
Nationality | ಐರ್‌ಲೆಂಡ್ |
ಐರ್‌ಲೆಂಡಿನ ಭೌತವಿಜ್ಞಾನಿಯಾಗಿದ್ದ ಎರ್ನೆಸ್ಟ್ ಥಾಮಸ್ ಸಿಂಟನ್ ವಾಲ್ಟನ್‌ರವರು ೧೯೦೩ರ ಅಕ್ಟೋಬರ್ ೬ರಂದು ವಾಟರ್‌ಫೋರ್ಡ್ ಕೌಂಟಿಯ ಡುಂಗಾರ್ವನ್ ಪ್ರದೇಶದಲ್ಲಿ ಜನಿಸಿದರು. ವಾಲ್ಟನ್‌ರವರು ಇನ್ನೊಬ್ಬ ವಿಜ್ಞಾನಿ ಜಾನ್ ಡೊಗ್ಲಾಸ್ ಕಾಕ್‌ಕ್ರಾಫ್ಟ್‌ರವರ ಜೊತೆ ಸೇರಿಕೊಂಡು ೧೯೩೨ರಲ್ಲಿ ಮೊತ್ತಮೊದಲ ಯಶಸ್ವೀ ಕಣ ವೇಗೋತ್ಕರ್ಷಕವನ್ನು (particle accelerator) ನಿರ್ಮಿಸಿದರು. ಆ ಸಾಧನದಲ್ಲಿ ೫೦೦,೦೦೦ ಇಲೆಕ್ಟ್ರಾನ್-ವೋಲ್ಟ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವೇಗೋತ್ಕರ್ಷಕ್ಕೆ ಒಳಗಾದ ಪ್ರೋಟಾನ್‌ಗಳ ಧೂಲವನ್ನು ಉತ್ಪತ್ತಿ ಮಾಡಬಹುದಾಗಿದೆ. ಆ ಕಣ ವೇಗೋತ್ಕರ್ಷಕವನ್ನು ಉಪಯೋಗಿಸಿಕೊಂಡು ಮೊದಲ ಸಲವಾಗಿ ಕೃತಕ ದ್ರವ್ಯಾಂತರಣ ಕ್ರಿಯೆಯನ್ನು (artificial transmutation) ನಡೆಸಲಾಯಿತು. ಮುಂದೆ ವಾನ್ ಡಿ ಗ್ರಾಫ್‌ರವರು (೧೯೦೭-೧೯೬೭) ನಿರ್ಮಿಸಿದ ಜನರೇಟರ್‌ಗಳು ಮತ್ತು ಎರ್ನೆಸ್ಟ್ ಲಾರೆನ್ಸ್‌ರವರು (೧೯೦೧-೧೯೫೮) ನಿರ್ಮಿಸಿದ ಸೈಕ್ಲೋಟ್ರಾನ್ ಸಾಧನಗಳು ವಾಲ್ಟನ್-ಕಾಕ್‌ಕ್ರಾಫ್ಟ್‌ರವರ ಕಣ ವೇಗೋತ್ಕರ್ಷಕವನ್ನು ಹಿಂದೆ ಹಾಕಿತು. ಅದೇನೇ ಇರಲಿ ಅವರುಗಳ ಸಂಶೋಧನೆ ಬೈಜಿಕ ಭೌತವಿಜ್ಞಾನದ ಮುನ್ನಡೆಗೆ ನಾಂದಿಯಾಯಿತು. ೧೯೫೧ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ವಾಲ್ಟನ್‌ರವರಿಗೆ ಕಾಕ್‌ಕ್ರಾಫ್ಟ್‌ರವರ ಜೊತೆ ನೀಡಲಾಯಿತು.[೧] ವಾಲ್ಟನ್‌ರವರು ೧೯೯೫ ಜೂನ್ ೨೫ರಂದು ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]