ಇಳಾ ಅರುಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಇಳಾ ಅರುಣ್ ಭಾರತೀಯ ಜಾನಪದ ಮತ್ತು ಚಲನಚಿತ್ರ ಗಾಯಕಿ. ಇವರು ಹಿಂದಿ ಚಿತ್ರರಂಗದಲ್ಲಿ ರಾಜಸ್ಥಾನಿ ಶೈಲಿಯ ಹಾಡುಗಳನ್ನು ಹಾಡುವುದಕ್ಕೆ ಖ್ಯಾತಿ ಪಡೆದಿದ್ದಾರೆ.

ಮೂಲ[ಬದಲಾಯಿಸಿ]

ಅರುಣ್ ರಾಜಸ್ತಾನದ ಜೈಪುರ ಜಿಲ್ಲೆಯವರು ಅವರ ತಾಯಿ ನಟಿ ಆಗಿದ್ದ ಇಷಿತಾ ಅರುಣ್.

ನಟನೆ[ಬದಲಾಯಿಸಿ]

೧೯೮೦ರ್ ದಶಕದಲ್ಲಿ ಇಳಾ, ದೂರದರ್ಶನದ ಪ್ರಸಿದ್ಧ ಧಾರಾವಾಹಿಗಳಾದ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಹಂಸಾ ಮೆಹ್ತಾ ಪಾತ್ರ ಮಾಡಿ ಹೆಸರು ಮಾಡಿದರು. ಅದರ ನಂತರದಲ್ಲಿ ಕೂಡಾ ಪಾತ್ರ ಮಾಡಿದರು. ಅರುಣ್ ರವರು ೮೦ರ ದಶಕದಲ್ಲಿ,ಗೋವಿಂದ್ ನಿಹಲಾನಿ ನಿರ್ದೇಶನದ, ಶ್ಯಾಂ ಬೆನಗಲ್ ನಿರ್ದೇಶನದ ಹೊಸ ಅಲೆಯ[೧] ಚಿತ್ರಗಳಾದ, ಈ ಚಿತ್ರಗಲಲ್ಲಿ ನಟಿಸಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು. ಕಲಾತ್ಮಕ ಚಿತ್ರ್ತಗಳು ಅಲ್ಲದೆಯೇ, ಇಳಾ ಹಲವು ಕಮರ್ಷಿಯಲ್ ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿಯನ್ನು ಪಡೆದಿದ್ದಾರೆ. ಅವುಗಳಲ್ಲಿ ಮುಖ್ಯವಾದುವು ಅರ್ಧಸತ್ಯ, ಮಂಡಿ, ತ್ರಿಕಾಲ, ಜಾಲ, ಪೊಲೀಸ್ ಪಬ್ಲಿಕ್ಕಾ,ದ್ರೋಹಕಾಲ, ಲಮ್ಹೇ, ಚೈನಾ ಗೇಟ್ ಜೋಧ ಅಕ್ಬರ್, ಬೇಗಂ ಜಾನ್, ಥಗ್ಸ್ ಆಫ್ ಹಿಂದುಸ್ತಾನ್ ಮುಖ್ಯವಾದವು.

ಗಾಯನ[ಬದಲಾಯಿಸಿ]

೧೯೭೯ರಿಂದ ಇಳಾರವರು ಗಾಯನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಳಾರವರ ಹೆಚ್ಚುಗಾರಿಕೆ ರಾಜಸ್ಥಾನಿ ಜಾನಪದ ಶೈಲಿಯ ಹಾಡುಗಳನ್ನು ಉಚ್ಛ ಸ್ಥಾಯಿಯಲ್ಲಿ ಹಾಡುವುದು.[೨] ೧೯೯೦ರಲ್ಲಿ ತೆರೆಕಂಡ ಲಮ್ಹೇ ಚಿತ್ರದಲ್ಲಿ ಲತಾ_ಮಂಗೇಶ್ಕರ್ ಜೊತೆ ಶ್ರೀದೇವಿ ಗಾಗಿ ಹಾಡಿದ ಮೋರ್ನಿ ಬಾಗಾ ಮಾಬೋಲೇ ಹಾಡು ಪ್ರಸಿದ್ಧವಾಯಿತು.ಇವರ ಇಲ್ಲಿಯವರೆಗಿನ ಪ್ರಸಿದ್ಧವಾದ ಹಾಡು ೧೯೯೩ರ ಖಳನಾಯಕ ಚಿತ್ರದಲ್ಲಿ ಅಲ್ಕಾ ಯಾಗ್ನಿಕ್ ರೊಂದಿಗೆ ಹಾಡಿದ ಚೋಲಿಕೆ ಪೀಚೆ ಕ್ಯಾ ಹೇ ಎಂಬ ಹಾಡು. ಈ ಹಾಡಿಗಾಗಿ ಅವರಿಗೆ ಫಿಲಂಫೇರ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸಂದಿತು. ಇಳಾ ಹಿಂದಿ, ತಮಿಳು, ತೆಲುಗು ಮತ್ತು ಇಂಗ್ಲೀಷ್ ಭಾಷೆಯ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಇವರು ತಮಿಳಿನ ಮಿಸ್ಟರ್ ರೋಮಿಯೋ ಎಂಬ ಚಿತ್ರದಲ್ಲಿ ಮುತ್ತು ಮುತ್ತು ಎಂಬ ಹಾಡನ್ನು ಹಾಡಿ ದಕ್ಷಿಣ ಭಾರತದಲ್ಲಿಯೂ ಪ್ರಸಿದ್ಧರಾದರು. ಎಆರ್ ರೆಹಮಾನ್ ಸಂಗೀತ ನಿರ್ದೇಶನದ ಸ್ಲಮ್ಡಾಗ್ ಮಿಲಿಯನೇರ್ ಚಿತ್ರದಲ್ಲಿ ರಿಂಗ ರಿಂಗ ಎಂಬ ಹಾಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯಿತು [೩]

ದ್ವನಿ ಸುರುಳಿ[ಬದಲಾಯಿಸಿ]

ವೋಟ್ ಫಾರ್ ಗಾಗ್ರಾ ಎಂಬ ಬಹಳ ಪ್ರಸಿದ್ಧವಾದ ದ್ವನಿ ಸುರುಳಿ ಹೊರತಂದ ಇಳಾ, ೨೦೦೮ರ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಹಲ್ಲಾ ಬೋಲ್[೪] ಎಂಬ ಆರಂಭ ಗೀತೆಯನ್ನು ಸ್ವತಃ ಹಾಡಿ ನಟಿಸಿ, ಖ್ಯಾತಿಯನ್ನು ಪಡೆದರು. ಹಲವು ಗಳನ್ನು ಹೊರತಂದಿದ್ದಾರೆ ಅವುಗಳಲ್ಲಿ ವೋಟ್ ಫಾರ್ ಗಾಗ್ರ ಮತ್ತು ಗುಡಿ ಕೈಸಿ ಜವಾನಿ ಹೈ, ಬಂಜಾರ, ದಿ ಬೆಸ್ಟ್ ಆಫ್ ಇಳಾ, ಮಾರಿ ಹಿವ್ಡಾ ಮೇ ಚಪ್ಪನ್ ಚೂರಿ ಹೀಗೆ ಹತ್ತು ಹಲವು ಹೆಸರು ಮಾಡಿದ ದ್ವನಿ ಸುರುಳಿಗಳನ್ನು ಹಾಡಿ, ರಾಜಸ್ಥಾನಿ ಶೈಲಿಯ ಹಾಡುಗಳನ್ನು ಜನಪ್ರಿಯ ಮತ್ತು ಆಕರ್ಷಕ ಎಮ್ದು ಅನ್ನಿಸಲು ಇಳಾ ಮುಖ್ಯ ಕಾರಣ ಎನಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

ಇಳಾ ಅರುಣ್ ಐ ಎಮ್ ಡಿ ಬಿನಲ್ಲಿ

  1. https://timesofindia.indiatimes.com/city/bhopal/singer-ila-arun-remembers-bv-karanths-contribution/articleshow/70947422.cms
  2. https://timesofindia.indiatimes.com/entertainment/hindi/music/news/Rajasthans-culture-is-rich-Ila-Arun/articleshow/8177422.cms
  3. "ಆರ್ಕೈವ್ ನಕಲು". Archived from the original on 2018-07-26. Retrieved 2020-03-25.
  4. http://www.bollywoodhungama.com/news/bollywood/ila-arun-to-say-halla-bol-for-ipl-team-of-rajasthan/