ನಂದಿತಾ ದಾಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಂದಿತಾ ದಾಸ್
NanditaDas2008.jpg
ಜನನ (1969-11-07) ನವೆಂಬರ್ ೭, ೧೯೬೯(ವಯಸ್ಸು ೪೭)
ಮುಂಬಯಿ, ಭಾರತ
ರಾಷ್ಟ್ರೀಯತೆ ಭಾರತೀಯ
ವೃತ್ತಿ ನಟಿ, ನಿರ್ದೇಶಕಿ
ಸಕ್ರಿಯ ವರುಷಗಳು ೧೯೮೯, ೧೯೯೬ - present
ಸಂಗಾತಿ(ಗಳು) ಸೌಮ್ಯ ಸೇನ್ (೨೦೦೨–೨೦೦೯)
ಸುಭೋಧ್ ಮಸ್ಕರ (೨೦೧೦-ಪ್ರಸ್ತುತ)
ಜಾಲತಾಣ
http://www.nanditadasonline.com


ನಂದಿತಾ ದಾಸ್ (ಜನನ ೭ ನವೆಂಬರ್ ೧೯೬೯), ಪ್ರಶಸ್ತಿ ವಿಜೇತೆ ಭಾರತೀಯ ಚಲನಚಿತ್ರ ನಟಿ ಹಾಗು ನಿರ್ದೇಶಕಿ ಎಂದು ಹೆಸರಾಗಿದ್ದಾರೆ. ನಟಿಯಾಗಿ, ಈಕೆ ಫೈರ್ (೧೯೯೬), ಅರ್ಥ್ (೧೯೯೮), ಬವನ್ಡರ್ (೨೦೦೦) ಹಾಗು ಆಮಾರ್ ಭುವನ್ (೨೦೦೨) ಚಿತ್ರದಲ್ಲಿನ ನಟನೆಯಿಂದಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕಿಯಾಗಿ, ಫಿರಾಕ್ (೨೦೦೮) ಎಂಬ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ; ಚಿತ್ರವು ಹಲವು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಅವರ ಸಾಧನೆಗಾಗಿ ಫ್ರಾನ್ಸ್ ಸರ್ಕಾರವು ಷೆವಲಿಯರ್ ಆಫ್ ದಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್ ಪುರಸ್ಕಾರ ನೀಡಿ ಗೌರವಿಸಿದೆ.[೧]

ಆರಂಭಿಕ ಜೀವನ[ಬದಲಾಯಿಸಿ]

ದಾಸ್ ನವದೆಹಲಿಯಲ್ಲಿ ಜನಿಸಿದರು, ಇವರ ತಂದೆ ಪ್ರಸಿದ್ಧ ಭಾರತೀಯ ವರ್ಣಚಿತ್ರಕಾರ, ಓರಿಯಪಂಗಡದ ಹಿಂದೂಧರ್ಮದವರಾದ ಜತಿನ್ ದಾಸ್, ಹಾಗು ತಾಯಿ ವರ್ಷಾ ಗುಜರಾತಿ ಜೈನ ಧರ್ಮಕ್ಕೆ ಸೇರಿದ್ದು,ಇವರೂ ಲೇಖಕಿಯಾಗಿದ್ದಾರೆ.[೨]

ಇವರು ನವದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿದರು. ಇವರು ಮಿರಾಂಡ ಹೌಸ್(ದೆಹಲಿ ವಿಶ್ವವಿದ್ಯಾಲಯ)ನಿಂದ ಭೂಗೋಳಶಾಸ್ತ್ರದಲ್ಲಿ ಪದವಿಯನ್ನು ಹಾಗು ಡೆಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.[೩]

ವೃತ್ತಿಜೀವನ[ಬದಲಾಯಿಸಿ]

ನಟನೆ[ಬದಲಾಯಿಸಿ]

ನಂದಿತಾ ದಾಸ್ ತಮ್ಮ ನಟನಾವೃತ್ತಿಯನ್ನು ಜನ್ನತ್ಯ ಮಂಚ್ ಎಂಬ ರಂಗಭೂಮಿ ತಂಡದಿಂದ ಆರಂಭಿಸಿದರು. ಇವರು ರಿಷಿ ವ್ಯಾಲಿ ಸ್ಕೂಲ್ ನಲ್ಲಿ ಬೋಧನೆ ಮಾಡುತ್ತಿದ್ದರು.

ಇವರು ದೀಪಾ ಮೆಹ್ತಾರ ಚಿತ್ರಗಳಾದ ಫೈರ್ , ಅರ್ಥ್ ನಲ್ಲಿ ಅಮೀರ್ ಖಾನ್ ರೊಂದಿಗೆ, ಬವನ್ಡರ್(ಜಗಮೋಹನ್ ಮುಂಧ್ರ ನಿರ್ದೇಶನ) ಹಾಗು ಆಮಾರ್ ಭುವನ್ (ಮೃಣಾಲ್ ಸೇನ್ ನಿರ್ದೇಶನ)ಚಿತ್ರಗಳಲ್ಲಿನ ಅಭಿನಯಕ್ಕಾಗಿ ಖ್ಯಾತರಾಗಿದ್ದಾರೆ.

ದಾಸ್, ಕರಡಿ ಟೇಲ್ಸ್ ರವರ ಮಕ್ಕಳ ಧ್ವನಿಪುಸ್ತಕ ಸರಣಿ "ಅಂಡರ್ ದಿ ಬ್ಯಾನ್ಯನ್" ಗೆ ಕಥೆಗಾರ್ತಿಯಾಗಿ/ನಿರೂಪಕಿಯಾಗಿ ತಮ್ಮ ಧ್ವನಿ ನೀಡಿದ್ದಾರೆ. ಚರಕ ಆಡಿಯೋಬುಕ್ಸ್ ಬಿಡುಗಡೆ ಮಾಡಿದ ಮಹಾತ್ಮಗಾಂಧಿಯವರ ಆತ್ಮಚರಿತ್ರೆ "ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರೂಥ್" ಧ್ವನಿಸುರಳಿಯಲ್ಲೂ ಸಹ ನಿರೂಪಕಿಯಾಗಿ ತಮ್ಮ ಧ್ವನಿ ನೀಡಿದ್ದಾರೆ. ಮಕ್ಕಳ ಸರಣಿ, ದಿ ವಂಡರ್ ಪೆಟ್ಸ್ ನಲ್ಲಿ ಬೆಂಗಾಲ್ ಟೈಗರ್ ಆಗಿಯೂ ಸಹ ತಮ್ಮ ಧ್ವನಿಯನ್ನು ಒದಗಿಸಿದ್ದಾರೆ.

ನಂದಿತಾ ಇಲ್ಲಿಯ ತನಕ ಹತ್ತು ವಿವಿಧ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ: ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು, ಉರ್ದು, ಮರಾಠಿ, ಓರಿಯ ಹಾಗು ಕನ್ನಡ.

ನಿರ್ದೇಶನ[ಬದಲಾಯಿಸಿ]

೨೦೦೮ರಲ್ಲಿ, ತಾವು ನಿರ್ದೇಶಿಸಿದ ಚೊಚ್ಚಲ ಚಿತ್ರ ಫಿರಾಕ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಿದರು.[೪] ಫಿರಾಕ್ ಸಾವಿರಾರು ಸತ್ಯಕಥೆಗಳನ್ನು ಆಧರಿಸಿದ ಕಾದಂಬರಿಯಾಗಿದ್ದು, ೨೦೦೨ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಒಂದು ತಿಂಗಳ ನಂತರ ಜರುಗುವ ಘಟನೆಗಳ ಸುತ್ತ ಹೆಣೆಯಲಾಗಿದೆ. ಇದು ೨೪ ಗಂಟೆಗಳ ಅವಧಿಯಲ್ಲಿ ಹಲವಾರು ಕಥೆಗಳನ್ನು ಹೆಣೆಯಲಾದ ಒಂದು ಸಮಗ್ರ ಚಲನಚಿತ್ರವಾಗಿದೆ, ಚಿತ್ರದಲ್ಲಿ ಸಮಾಜದ ವಿವಿಧ ಸ್ತರದ ಜನರು ಹಿಂಸಾಚಾರದ ದೀರ್ಘಕಾಲಿಕ ಪರಿಣಾಮಕ್ಕೆ ಹೇಗೆ ಸಿಲುಕಿಕೊಳ್ಳುತ್ತಾರೆಂಬುದನ್ನು ತೋರಿಸಲಾಗಿದೆ. ಚಿತ್ರವು ಸಾಮಾನ್ಯ ಜನರ ಭಾವನಾತ್ಮಕ ಪಯಣವನ್ನು ನಿರೂಪಿಸುತ್ತದೆ-ಕೆಲವರು ಇದಕ್ಕೆ ಬಲಿಯಾದರೆ, ಕೆಲವರು ದುಷ್ಕೃತ್ಯವನ್ನು ಎಸಗುತ್ತಾರೆ; ಮತ್ತೆ ಕೆಲವರು ಇದನ್ನು ಮೂಕರಾಗಿ ವೀಕ್ಷಿಸುತ್ತಾರೆ. ಚಿತ್ರದ ತಾರಾಗಣದಲ್ಲಿ ನಸೀರುದ್ದೀನ್ ಶಾ, ರಘುಬೀರ್ ಯಾದವ್, ಪರೇಶ್ ರಾವಲ್, ದೀಪ್ತಿ ನವಲ್, ಸಂಜಯ್ ಸೂರಿ, ಟಿಸ್ಕಾ ಚೋಪ್ರ, ಶಹಾನ ಗೋಸ್ವಾಮಿ ಹಾಗು ನೋವಾಜ್ ಮುಂತಾದವರಿದ್ದಾರೆ.

ಚಿತ್ರವು ೨೦೦೮ರಲ್ಲಿ ಸಿಂಗಾಪೂರಿನಲ್ಲಿ ನಲ್ಲಿ ನಡೆದ ಏಶಿಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲಂಸ್ ನಲ್ಲಿ ಮನ್ನಣೆ ಗಳಿಸಿತು, ಅಲ್ಲಿ ಚಿತ್ರವು "ಅತ್ಯುತ್ತಮ ಚಿತ್ರ", "ಅತ್ಯುತ್ತಮ ಚಿತ್ರಕಥೆ/ಕಥೆ", ಹಾಗು "ಅತ್ಯುತ್ತಮ ಚಿತ್ರವೆಂದು ಫಾರಿನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಶನ್ ಪರ್ಪಲ್ ಆರ್ಕಿಡ್ ಪ್ರಶಸ್ತಿಯನ್ನು ಗಳಿಸಿತು".[೫][೬] ಚಿತ್ರವು, ಇತರ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರಶಸ್ತಿಯನ್ನು ಗಳಿಸಿದೆ, ಇದರಲ್ಲಿ ಗ್ರೀಸ್ ನಲ್ಲಿ ನಡೆದ ಅಂತರರಾಷ್ಟ್ರೀಯ ಥೆಸ್ಸಲೋನಿಕಿ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ, ಕೇರಳದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ, ಹಾಗು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಗೆ ಸಂದ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಗಳು ಸೇರಿವೆ.[೭] ಚಿತ್ರವು ಭಾರತದಲ್ಲಿ ೨೦ನೇ ಮಾರ್ಚ್ ೨೦೦೯ರಲ್ಲಿ ಬಿಡುಗಡೆಯಾಯಿತು.[೮] ಚಿತ್ರವು ಕಾರಾ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿಯನ್ನು ಗಳಿಸಿತು.

"'ಫಿರಾಕ್' ಚಿತ್ರವು ಟೊರೊಂಟೊ, ಲಂಡನ್, ಪುಸನ್ ನಿಂದ ಹಿಡಿದು ಕೊಲ್ಕತ್ತಾ ಹಾಗು ಟ್ರಿವೆಂಡ್ರಂವರೆಗೂ ವಿಶ್ವದಾದ್ಯಂತ ವೀಕ್ಷಕರ ಶ್ಲಾಘನೆಗೆ ಪಾತ್ರವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಎಷ್ಟಾದರೂ, ಮಾನವನ ಭಾವನೆಗಳು ಸಾರ್ವತ್ರಿಕವಾದವು, ಹಾಗು ಜಗತ್ತಿನ ವಿವಿಧ ಭಾಗಗಳಲ್ಲಿ ನನಗೆ ದೊರೆತ ಪ್ರತಿಕ್ರಿಯೆಯಿಂದ, ಆ ಭಾವನೆಗಳು ನನಗೆ ಹೆಚ್ಚು ಅರ್ಥವಾದವು. ವೀಕ್ಷಕರು ಎಲ್ಲೆಡೆಯು ಪಾತ್ರಗಳ ಪಯಣದೊಂದಿಗೆ ಪರಾನುಭೂತಿ ಶಕ್ತಿಯನ್ನು ಅನುಭವಿಸುವಲ್ಲಿ ಸಫಲರಾಗಿದ್ದಾರೆ. ಇದು ಭಾರತದಲ್ಲಿ ನಡೆದಿರುವುದರಿಂದ ಹೆಚ್ಚು ಅನುಭವಕ್ಕೆ ಬರುತ್ತದೆ, ಹಾಗು ಈ ರೀತಿಯಾಗಿ ಇಲ್ಲಿನ ಜನರು ಇದರೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಾರೆ. ಚಿತ್ರವು ಮೌನವಾಗಿ ಉಳಿದಿರುವ ಸನ್ನಿವೇಶಕ್ಕೆ ಧ್ವನಿ ನೀಡಿತೆಂದು ಹೇಳಬಹುದು, ಹಾಗು ಇದನ್ನು ಕಡೆಪಕ್ಷ ಒಂದು ಬಾರಿಯಾದರೂ ವೀಕ್ಷಿಸಬೇಕು. ನಾವು ಪ್ರವೇಶ ಪಡೆದ ಪ್ರತಿಯೊಂದು ಚಲನಚಿತ್ರೋತ್ಸವ ಸ್ಪರ್ಧೆಯಲ್ಲೂ ಪ್ರಶಸ್ತಿಯನ್ನು ಗೆಲ್ಲುವುದು ಹಿರಿಮೆಯ ವಿಷಯವಾಗಿದ್ದರೂ, ವಾಸ್ತವವಾಗಿ ವೀಕ್ಷಕರ ಪ್ರತಿಕ್ರಿಯೆಯು ಇಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತದೆ," ಎಂದು ರೇಡಿಯೋ ಸರ್ಗಂಗೆ ನಂದಿತಾ ದಾಸ್ ಪ್ರತಿಕ್ರಿಯಿಸುತ್ತಾರೆ.[೯]

ವೈಯಕ್ತಿಕ ಜೀವನ[ಬದಲಾಯಿಸಿ]

೨೦೦೨ರಲ್ಲಿ, ದಾಸ್ ತಮ್ಮ ದೀರ್ಘಾವಧಿಯ ಗೆಳೆಯ ಸೌಮ್ಯ ಸೇನ್ ರನ್ನು ವರಿಸುತ್ತಾರೆ.[೧೦] ದಂಪತಿಗಳು, ಸಾಮಾಜಿಕ ಕಳಕಳಿಯ ಜಾಹಿರಾತು ಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಜಾಹಿರಾತು ಸಂಸ್ಥೆ ಲೀಪ್ ಫ್ರಾಗ್ ನ್ನು ಆರಂಭಿಸುತ್ತಾರೆ.[೧೧] ದಂಪತಿಗಳು ೨೦೦೯ರಲ್ಲಿ ವಿಚ್ಛೇದನ ಪಡೆಯುತ್ತಾರೆ.[೧೨] ಕೆಲವು ತಿಂಗಳ ಕಾಲ ಮುಂಬಯಿ ನಗರದಾಚೆ ನೆಲೆಗೊಂಡಿದ್ದ ಕೈಗಾರಿಕೋದ್ಯಮಿ ಸುಬೋಧ್ ಮಸ್ಕಾರ ಜೊತೆಗೆ ನಿಶ್ಚಿತ ಅವಧಿಯನ್ನು ಕಳೆದ ನಂತರ, ಜನವರಿ ೨, ೨೦೧೦ರಲ್ಲಿ ಅವರನ್ನು ವರಿಸಿ, ಮುಂಬಯಿಗೆ ಸ್ಥಳಾಂತರಗೊಳ್ಳುತ್ತಾರೆ.[೧೩][೧೪] ದಾಸ್ ಹಾಗು ಮಸ್ಕಾರ ದಂಪತಿಗೆ ೧೧ ಆಗಸ್ಟ್ ೨೦೧೦ರಲ್ಲಿ ವಿಹಾನ್ ಎಂಬ ಗಂಡು ಮಗು ಜನಿಸಿತು.[೧೫]

ಲೋಕೋಪಕಾರ[ಬದಲಾಯಿಸಿ]

ದಾಸ್ ವಿಶ್ವಾದ್ಯಂತ ತಮ್ಮ ಚಿತ್ರಗಳ ಪ್ರಭಾವದ ಬಗ್ಗೆ ಹಾಗು ಭಾರತಕ್ಕೆ ಅಗತ್ಯವಿರುವ ಶಕ್ತಿಶಾಲಿ ಸಾಮಾಜಿಕ ಚಳವಳಿಗಳ ಬಗ್ಗೆ ಭಾಷಣವನ್ನು ನೀಡುತ್ತಾರೆ. ೧೨ ಏಪ್ರಿಲ್ ೨೦೦೭ರಲ್ಲಿ, ಫೈರ್ ಚಿತ್ರದ ಪ್ರದರ್ಶನದ ನಂತರ MITಯಲ್ಲಿ ಮಾತನಾಡುತ್ತಾರೆ.

ಮಕ್ಕಳ ಉಳಿವು, AIDS ವಿರುದ್ಧ, ಹಾಗು ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರದ ವಿರುದ್ಧವಾಗಿಯೂ ಸಹ ಅವರು ಪ್ರಚಾರಾಂದೋಲನ ಕೈಗೊಳ್ಳುತ್ತಾರೆ.[೧೬] ೨೦೦೯ರಲ್ಲಿ ಇವರನ್ನು ಚಿಲ್ಡ್ರನ್'ಸ್ ಫಿಲಂ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಯಿತು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

೨೦೦೧ ಸಾಂತ ಮೋನಿಕಾ ಚಲನಚಿತ್ರೋತ್ಸವ
 • ಗೆಲುವು - ಅತ್ಯುತ್ತಮ ನಟಿ - ಬವನ್ಡರ್
೨೦೦೨ ಕೈರೋ ಚಲನಚಿತ್ರೋತ್ಸವ
 • ಗೆಲುವು - ಅತ್ಯುತ್ತಮ ನಟಿ - ಅಮಾರ್ ಭುವನ್
೨೦೦೨ ತಮಿಳು ನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು
 • ಗೆಲುವು - ವಿಶೇಷ ಪ್ರಶಸ್ತಿ - ಕಣ್ಣತಿಲ್ ಮುತ್ತಮಿಟ್ಟಾಲ್
೨೦೦೮ ಕ್ಯಾನ್ಸ್ ಚಲನಚಿತ್ರೋತ್ಸವ
೨೦೦೬ ನಂದಿ ಪ್ರಶಸ್ತಿಗಳು
 • ಗೆಲುವು - ಅತ್ಯುತ್ತಮ ನಟಿ - ಕಮಲಿ
೨೦೦೮ ಏಶಿಯನ್ ಫಿಲಂಸ್ ಆಫ್ ಫಸ್ಟ್ ಫಿಲಂಸ್
 • ಗೆಲುವು - ಅತ್ಯುತ್ತಮ ಚಲನಚಿತ್ರ - ಫಿರಾಕ್
 • ಗೆಲುವು - ಅತ್ಯುತ್ತಮ ಚಿತ್ರಕಥೆ - ಫಿರಾಕ್
 • ಗೆಲುವು - ಅತ್ಯುತ್ತಮ ಚಲನಚಿತ್ರಕ್ಕಾಗಿ ಫಾರಿನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಶನ್ ಪರ್ಪಲ್ ಆರ್ಕಿಡ್ ಪ್ರಶಸ್ತಿ - ಫಿರಾಕ್
೨೦೦೮ ಫ್ರಾನ್ಸ್ ಸರ್ಕಾರ
 • ಗೆಲುವು - ಷೆವಲಿಯರ್ ಆಫ್ ದಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್
೨೦೦೯ ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
 • ಗೆಲುವು - ವಿಶೇಷ ಜ್ಯೂರಿ ಪ್ರಶಸ್ತಿ - ಫಿರಾಕ್
೨೦೦೯ ಅಂತಾರಾಷ್ಟ್ರೀಯ ಥೆಸ್ಸಲೋನಿಕಿ ಚಲನಚಿತ್ರೋತ್ಸವ
 • ಗೆಲುವು - ವಿಶೇಷ ಪ್ರಶಸ್ತಿ (ಎವೆರಿಡೇ ಲೈಫ್: ಟ್ರ್ಯಾನ್ಸೆನ್ಡೆನ್ಸ್ ಆರ್ ರಿಕನ್ಸಿಲಿಯೇಶನ್ ಪ್ರಶಸ್ತಿ) - ಫಿರಾಕ್
 • ನಾಮನಿರ್ದೇಶನ - ಗೋಲ್ಡನ್ ಅಲೆಕ್ಸ್ಯಾನ್ಡರ್ - ಫಿರಾಕ್
೨೦೧೦ ಫಿಲಂಫೇರ್ ಪ್ರಶಸ್ತಿಗಳು
 • ಗೆಲುವು - ವಿಶೇಷ ಪ್ರಶಸ್ತಿ - ಫಿರಾಕ್

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ನಟಿ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು
೧೯೮೯ ಪರಿಣತಿ ಒರಿಯಾ
೧೯೯೬ ಫೈರ್ ಸೀತಾ ಇಂಗ್ಲೀಷ್
೧೯೯೮ ಅರ್ಥ್ ಶಾಂತ, ದಾದಿ ಹಿಂದಿ
ಹಜಾರ್ ಚೌರಾಸಿ ಕಿ ಮಾ ನಂದಿನಿ ಮಿತ್ರ ಹಿಂದಿ
ಜನ್ಮದಿನಂ ಸರಸು ಮಲಯಾಳಂ
ಬಿಸ್ವಪ್ರಕಾಶ್ ಅಂಜಲಿ ಒರಿಯಾ
೧೯೯೯ ದೇವೀರಿ ದೇವೀರಿ(ಅಕ್ಕ) ಕನ್ನಡ
ರಾಕ್ ಫೋರ್ಡ್ ಲಿಲಿ ವೇಗಾಸ್ ಇಂಗ್ಲೀಷ್
ಪುನರಾಧಿವಾಸಂ - ಮಲಯಾಳಂ
೨೦೦೦ ಹರಿ-ಭರಿ ಅಫ್ಸಾನ ಹಿಂದಿ
ಸಾಂಜ್ಹ್ ಉರ್ದು
ಬವನ್ಡರ್ ಸನ್ವಾರಿ ರಾಜಸ್ಥಾನಿ ಗೆಲುವು , ಸಾಂತ ಮೋನಿಕಾ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ .
೨೦೦೧ ಅಕ್ಸ್ ಸುಪ್ರಿಯ ವರ್ಮ ಹಿಂದಿ
ಡಾಟರ್ಸ್ ಆಫ್ ದಿ ಸೆಂಚುರಿ ಚಾರು ಹಿಂದಿ
೨೦೦೨ ಆಮಾರ್ ಭುವನ್ ಸಕೀನ ಬಂಗಾ‍ಳಿ ಗೆಲುವು , ಕೈರೋ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ.
ಗೆಲುವು , ಅತ್ಯುತ್ತಮ ನಟಿ ಎಂದು ಜೀ ಸಿನೆ ಪ್ರಶಸ್ತಿ
ಕನ್ನಕಿ ಕನ್ನಕಿ ಮಲಯಾಳಂ
ಪಿತಃ ಪಾರೋ ಹಿಂದಿ
ಅಳಗಿ ಧನಲಕ್ಷ್ಮಿ ತಮಿಳು
ಕಣ್ಣತಿಲ್ ಮುತ್ತಮಿಟ್ಟಾಲ್ ಶ್ಯಾಮಾ ತಮಿಳು
ಲಾಲ್ ಸಲಾಂ ರೂಪಿ(ಅಲಿಯಾಸ್ ಚಂದ್ರಕ್ಕ) ಹಿಂದಿ
೨೦೦೩ ಏಕ್ ಅಲಗ್ ಮೌಸಂ ಅಪರ್ಣ ವರ್ಮ ಹಿಂದಿ
ಬಸ್ ಯೂ ಹೀ ವೇದ ಹಿಂದಿ
ಸುಪಾರಿ ಮಮತಾ ಸಿಕ್ರಿ ಉರ್ದು
ಶುಭೋ ಮಹೂರತ್ ಮಲ್ಲಿಕಾ ಸೇನ್ ಬಂಗಾ‍ಳಿ
ಕಗಾರ್: ಲೈಫ್ ಆನ್ ದಿ ಎಡ್ಜ್ ಅದಿತಿ ಹಿಂದಿ
ಏಕ್ ದಿನ್ ೨೪ ಘಂಟೆ ಸಮೀರಾ ದತ್ತಾ ಹಿಂದಿ
೨೦೦೪ ವಿಶ್ವ ತುಳಸಿ ಸೀತಾ ತಮಿಳು
೨೦೦೫ ಫ್ಲೀಟಿಂಗ್ ಬ್ಯೂಟಿ ಭಾರತೀಯ ಮಹಿಳೆ ಇಂಗ್ಲೀಷ್
೨೦೦೬ ಮಾಟಿ ಮಾಯ್ ಚಂದಿ ಮರಾಠಿ ಅತುಲ್ ಕುಲಕರ್ಣಿ ಜೊತೆಗಿನ ಚಿತ್ರ ಪಾಲೇಕರ್ ನಿರ್ದೇಶನದ ಮರಾಠಿ ಚಿತ್ರ
ಪೋಡೋಕ್ಖೆಪ್ ಮೇಘಾ ಬಂಗಾ‍ಳಿ
ಕಮಲಿ ಕಮಲಿ ತೆಲುಗು ಗೆಲುವು , ಅತ್ಯತ್ತಮ ನಟನೆಗಾಗಿ ನಂದಿ ಪ್ರಶಸ್ತಿ (ತೆಲುಗು)
೨೦೦೭ ಬಿಫೋರ್ ದಿ ರೈನ್ಸ್ ಸಜನಿ ಇಂಗ್ಲೀಷ್
ಪ್ರವೋಕ್ಡ್ ರಾಧಾ ದಲಾಲ್ ಇಂಗ್ಲೀಷ್
ನಾಲು ಪೆಣ್ಣುನ್ಗಳ್ ಕಾಮಾಕ್ಷಿ ಮಲಯಾಳಂ
ಪಾನಿ: ಎ ಡ್ರಾಪ್ ಆಫ್ ಲೈಫ್ ಮೀರಾ ಬೆನ್ ಹಿಂದಿ
೨೦೦೮ ರಾಮಚಂದ್ ಪಾಕಿಸ್ತಾನಿ ಚಂಪಾ ಉರ್ದು
೨೦೦೯ ಬಿಫೋರ್ ದಿ ರೈನ್ಸ್ ಸಜನಿ ಇಂಗ್ಲಿಷ್ ,ಮಲಯಾಳಂ
೨೦೧೦ ಮಿಡ್‌‌ನೈಟ್ಸ್ ಚಿಲ್ಡ್ರನ್ [೧೭] ಪದ್ಮ ಪ್ರಕಟಿಸಲಾಗಿದೆ

ನಿರ್ದೇಶನ[ಬದಲಾಯಿಸಿ]

ವರ್ಷ ಶೀರ್ಷಿಕೆ ಭಾಷೆ ಇತರೆ
2008 ಫಿರಾಕ್ ಹಿಂದಿ,ಉರ್ದು ಮತ್ತು ಗುಜರಾತಿ ಗೆಲುವು , ಏಶಿಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲಂಸ್ ನಲ್ಲಿ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ.
ಗೆಲುವು , ಏಶಿಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲಂಸ್ ನಲ್ಲಿ ಪರ್ಪಲ್ ಆರ್ಕಿಡ್ ಪ್ರಶಸ್ತಿ .
ಗೆಲುವು , ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ.
ಗೆಲುವು , ಅಂತಾರಾಷ್ಟ್ರೀಯ ಥೆಸ್ಸಲೋನಿಕಿ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ.
ಅಂತಾರಾಷ್ಟ್ರೀಯ ಥೆಸ್ಸಲೋನಿಕಿ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಅಲೆಕ್ಸ್ಯಾನ್ಡರ್ ಪ್ರಶಸ್ತಿಗಾಗಿ ನಾಮನಿರ್ದೇಶನ .

ಉಲ್ಲೇಖಗಳು[ಬದಲಾಯಿಸಿ]

 1. 'ನನ್ನ ಕೆಲಸವು ಭಾರತದಲ್ಲಿ ಹೆಚ್ಚು ಗಮನವನ್ನು ಸೆಳೆದಿಲ್ಲ'—ಇಂಡಿಯಾ ಬಜ್ಜ್-ಎಂಟರ್ಟೈನ್ಮೆಂಟ್ ದಿ ಟೈಮ್ಸ್ ಆಫ್ ಇಂಡಿಯಾ, ೨೩ ಏಪ್ರಿಲ್ ೨೦೦೮.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. http://www.firaaqthefilm.com
 9. Nandita Das talks about her directorial debut Firaaq. Radio Sargam. 26 January 2009. 
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Jha, Subhash K (6 January 2010). "Nandita Das marries, moves to Mumbai by SUBHASH K JHA". The Times of India. 
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]

ಬಾಹ್ಯ ಕೊಂಡಿಗಳು[ಬದಲಾಯಿಸಿ]