ಶಂಕರ್-ಎಹಸಾನ್-ಲಾಯ್

ವಿಕಿಪೀಡಿಯ ಇಂದ
Jump to navigation Jump to search
Shankar–Ehsaan–Loy
Shankar Ehsaan Loy.jpg
ಹಿನ್ನೆಲೆ ಮಾಹಿತಿ
ಶೈಲಿ/ಗಳುIndian film music
ಸಕ್ರಿಯ ವರುಷಗಳು1997–present
Associated actsShakti
ಜಾಲತಾಣOfficial website
ಸದಸ್ಯರುShankar Mahadevan
Ehsaan Noorani
Loy Mendonsa

ಶಂಕರ್–ಎಹಸಾನ್–ಲಾಯ್ (ಹಿಂದಿ: शंकर - एहसान - लोय) ಭಾರತೀಯ ಸಂಗೀತಗಾರರ ಮೂವರ ತಂಡ, ಶಂಕರ್ ಮಹಾದೇವನ್, ಎಹಸಾನ್ ನೂರಾನಿ ಹಾಗೂ ಲಾಯ್ ಮೆಂಡೋನ್ಸಾ, ಇವರ ತಂಡವು ಹಲವಾರು ಭಾರತೀಯ ಚಿತ್ರಗಳಿಗೆ ಸಂಗೀತ ನೀಡಿದೆ. ಇವರು ಹಿಂದಿ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ ಹಾಗೂ ವಿಮರ್ಶಾತ್ಮಕವಾಗಿ ಉದ್ಘೋಷಿಸಲ್ಪಟ್ಟ ನಿರ್ದೇಶಕರು. ಅವರು ಸಂಗೀತ ನಿರ್ದೇಶಿಸಿದ ಪ್ರಸಿದ್ಧ ಚಲನಚಿತ್ರಗಳೆಂದರೆ ಮಿಶನ್ ಕಾಶ್ಮೀರ್ (2000), ದಿಲ್ ಚಾಹತಾ ಹೈ (2001), ಆಲಾವಂಧನ್ (2001), ಕಲ್ ಹೋ ನಾ ಹೋ (2003), ಬಂಟಿ ಔರ್ ಬಬ್ಲಿ (2005), ಕಭಿ ಅಲ್ವಿದ ನಾ ಕೆಹನಾ (2006), Don: The Chase Begins Again (2006), ತಾರೇ ಝಮೀನ್ ಪರ್ (2007), ರಾಕ್ ಆನ್!! (2008), ಯಾವರಮ್ ನಲಮ್ (2009), ವೇಕ್ ಅಪ್ ಸಿದ್ (2009), ಮೈ ನೇಮ್ ಈಸ್ ಖಾನ್ (2010), ಕಾರ್ತೀಕ್ ಕಾಲಿಂಗ್ ಕಾರ್ತೀಕ್ (2010) ಹಾಗೂ ಹೌಸ್‌ಫುಲ್ (2010).

ಆರಂಭಿಕ ಜೀವನ[ಬದಲಾಯಿಸಿ]

ಶಂಕರ್ ಮಹಾದೇವನ್ ಅವರು ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್, ಓರ್ಯಾಕಲ್ ಆವೃತ್ತಿ ಆರರ ಮೇಲೆ ಕೆಲಸ ಮಾಡುತ್ತಿದ್ದರು ಹಾಗೂ ಪಾಶ್ಚಿಮಾತ್ಯ, ಹಿಂದೂಸ್ಥಾನಿ ಮತ್ತು ಕಾರ್ನಾಟಿಕ್ ಶಾಸ್ತ್ರೀಯ ಸಂಗೀತಗಳನ್ನು ಅಧ್ಯಯನ ಮಾಡಿದ್ದರು. ಇವರು ಪುಕಾರ್ , ಸಪ್ನೇ ಹಾಗೂ ಬೀವಿ ನಂ.1 ನಂತಹ ಚಿತ್ರಗಳಲ್ಲಿ ಪ್ರಮುಖ ಹಿನ್ನೆಲೆ ಗಾಯಕರಾಗಿದ್ದರು, ಇವರು "ಉಸಿರುಕಟ್ಟಿ" ಹಾಡುವ ಹಾಡನ್ನು ಸಂಯೋಜನೆ ಕೂಡಾ ಮಾಡಿದ್ದಾರೆ. ಎಹಸಾನ್ ನೂರಾನಿಯವರು ಲಾಸ್ ಏಂಜಲೀಸ್‌ನ ಮ್ಯುಸೀಶಿಯನ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ ಹಾಗೂ ರೊನ್ನೀ ದೇಸಾಯಿ ಮತ್ತು ಲೂಯಿಸ್ ಬ್ಯಾಂಕ್ಸ್ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲಿಯನ್ ಡಿಸೈರ್ ಅನ್ನು ಸಂಯೋಜಿಸಿದ್ದಾರೆ, ಲಾಯ್‌ ಜೊತೆಯಲ್ಲಿ ಹಲವಾರು ಜಿಂಗಲ್ಸ್‌ಗಳನ್ನು ಸಂಯೋಜಿಸಿದ್ದಾರೆ, ಬ್ಲೂಸ್-ಅಂಡ್-ಆ‍ಯ್‌ಸಿಡ್ ಜಾಝ್ ಬ್ಯಾಂಡ್‌ನ ಭಾಗವಾಗಿದ್ದರು. ಲಾಯ್ ಮೆಂಡೋನ್ಸಾ ಅವರು ಪಾಶ್ಚಿಮಾತ್ಯ ಸಂಗೀತದಲ್ಲಿ ತರಬೇತಿ ಹೊಂದಿದ್ದಾರೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. ಹಲವಾರು ಬ್ಯಾಂಡ್‌ಗಳ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ,(ಗಾಡ್‌ಸ್ಪೆಲ್, ವೆಸ್ಟ್ ಸೈಡ್ ಸ್ಟೋರಿ, ಜೀಸಸ್ ಕ್ರಿಸ್ಟ್ ಸೂಪರ್‌ಸ್ಟಾರ್ ) ಜಿಂಗಲ್ಸ್‌ಗಳನ್ನು ಹಾಗೂ ಸೂಚಿತರಾಗಗಳನ್ನು (ಫೌಜಿ , ದಿ ವರ್ಲ್ಡ್ ದಿಸ್ ವೀಕ್ ) ಸಂಯೋಜಿಸಿದ್ದಾರೆ .[೧]

ಇವರು ಒಗ್ಗೂಡುವ ಮುನ್ನ ಎಹಸಾನ್ ಜಿಂಗಲ್ಸ್‌ಗಳನ್ನು ಮಾಡುತ್ತಿದ್ದರು ಹಾಗೂ ಲಾಯ್ ದೆಹಲಿಯಲ್ಲಿದ್ದರು. ಲಾಯ್ ಮೊದಲು ದೂರದರ್ಶನಕ್ಕೆ ಬರೆಯುತ್ತಿದ್ದರು. ಅವರ ಮೊದಲ ಪ್ರದರ್ಶನ ಕ್ವಿಝ್ ಟೈಮ್ ಹಾಗೂ ಅವರಿಗೆ ಮೊದಲ ತಿರುವನ್ನು ಕೊಟ್ಟವರು ಸಿದ್ದಾರ್ಥ್ ಬಸು. ನಂತರ ಅವರು ಪ್ರಣಾಯ್ ರಾಯ್ ಅವರ ದಿ ವರ್ಲ್ಡ್ ದಿಸ್ ವೀಕ್ ಮಾಡಿದರು. ನಂತರ ಇನ್ನೂ ಕೆಲವು ಪ್ರದರ್ಶನಗಳ ಜೊತೆಗೆ ಶಾರುಖ್ ಖಾನ್ ಅವರ ಫೌಜಿಗಾಗಿ ಕೆಲಸ ಮಾಡಿದರು. ಲಾಯ್ ಅವರು ಎ. ಆರ್. ರೆಹಮಾನ್ ಅವರ ಜೊತೆಯಲ್ಲಿ ಕೀಬೋರ್ಡ್ ನುಡಿಸುವವರಾಗಿದ್ದರು ಜೊತೆಗೆ ಶಂಕರ್ ಅವರು ಹಲವಾರು ಪ್ರಸಿದ್ಧ ಹಾಡುಗಳನ್ನು ಜೊತೆಯಲ್ಲಿ ಹಾಡಿದ್ದಾರೆ. ನಂತರ ಬಾಂಬೆಗೆ ಬಂದು ಜಿಂಗಲ್‌ಗಳನ್ನು ಮಾಡಲು ಪ್ರಾರಂಭಿಸಿದರು. ಅವರು ಎಹಸಾನ್‌ರನ್ನು ಜೊತೆಗೂಡಿಸಿಕೊಂಡರು ಹಾಗೂ ಅವರು ಸಂಗೀತವನ್ನು ನುಡಿಸಲು ಪ್ರಾರಂಭ್ಹಿಸಿದರು. ಎಹಸಾನ್ ಅವರು ಹಿಟ್ ಆಗಿದ್ದ ಹಾಸ್ಯ ಪ್ರಹಸನಶಾಂತಿ ಗಾಗಿ ಸಂಗೀತ ರಚಿಸಿದರು. ಆನಂತರ ಶಂಕರ್ ಅವರು ಭಾರತೀಯ ಭಾಗ ಕೆಲವು ಭಾಗಗಳನ್ನು ಮಾಡಿದರು. ಆವಾಗಿನಿಂದ ಅವರು ಮೂರು ಜನರ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೨]

ಮೂರು ಜನರ ತಂಡವಾಗಿ ವೃತ್ತಿಜೀವನದ ಆರಂಭ[ಬದಲಾಯಿಸಿ]

ಶಂಕರ್-ಎಹಸಾನ್-ಲಾಯ್ ಅವರು ಜೊತೆಯಾಗಿ ಮುಕುಲ್ ಆನಂದ್ ಅವರ ಚಿತ್ರ ದಸ್‌ ಗೆ ಸಂಗೀತ ನಿರ್ದೇಶಿಸುವುದರೊಂದಿಗೆ ತಮ್ಮ ಮೂರು ಜನ ತಂಡದ ವೃತ್ತಿ ಜೀವನ ಪ್ರಾರಂಭಿಸಿದರು. ಆನಂದ್ ಅವರ ಸಾವಿನಿಂದಾಗಿ ಚಲನಚಿತ್ರ ಪೂರ್ಣಗೊಳ್ಳಲಿಲ್ಲ, ನಂತರ ಆಲ್ಬಂ ಬಿಡುಗಡೆಯಾಯಿತು. ನಂತರದಲ್ಲಿ ಅವರು ರಾಕ್‌ಫೋರ್ಡ್ ಹಾಗೂ ಭೋಪಾಲ್ ಎಕ್ಸ್‌ಪ್ರೆಸ್ ನಂತಹ ಚಿತ್ರಗಳಿಗಾಗಿ ಸಂಗೀತ ನಿರ್ದೇಶಿಸಿದರು, ಆದರೆ ಇವು ಹೆಚ್ಚು ಗಮನಸೆಳೆಯಲಿಲ್ಲ. ಪ್ರಖ್ಯಾತ ಚಲನಚಿತ್ರ ವಿಧು ವಿನೋದ್ ಚೋಪ್ರಾ ಅವರ ಮಿಶನ್ ಕಾಶ್ಮೀರ್ ನಲ್ಲಿ ಸಂಗೀತ ನಿರ್ದೇಶಿಸಿದ್ದು ಮೊದಲ ಬಾರಿಗೆ ಬಾಲಿವುಡ್ ಚಿತ್ರರಂಗದಲ್ಲಿ ಮೂರು ಜನರ ತಂಡಕ್ಕೆ ಹೊಸ ತಿರುವು ತಂದುಕೊಟ್ಟಿತು. ಈ ಚಿತ್ರದಲ್ಲಿ ಸಂಗೀತವು ಉತ್ತಮ ಹೆಸರನ್ನು ಗಳಿಸಿತು. ಅವರು ಇದೇ ಚಿತ್ರಕ್ಕಾಗಿ ಐಐ‌ಎಫ್‌ಎ ನಾರ್ಮನಿರ್ದೇಶಿತಗೊಂಡರು ಕೂಡಾ.[೩] ಅವರ ವೃತ್ತಿ ಜೀವನದಲ್ಲಿ ಸಂಗೀತ ನಿರ್ದೇಶಕರಾಗಿ ಉತ್ತಮ ತಿರುವನ್ನು ಕೊಟ್ಟಂತಹ ಚಿತ್ರಗಳೆಂದರೆ ದಿಲ್ ಚಾಹತಾ ಹೈ , ಇದು ಫರ್ಹಾನ್ ಅಕ್ತರ್ ಅವರ ಮೊದಲ ನಿರ್ದೇಶನದ ಚಿತ್ರವಾಗಿತ್ತು. ಈ ಚಿತ್ರವು ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿತು, ಪ್ರೇಕ್ಷಕರು ಕೂಡಾ ಮೆಚ್ಚಿಕೊಂಡರು.[೪] ಇದರಿಂದಾಗಿ ಮೂರು ಜನರ ಜೋಡಿಯು ಎಕ್ಸೆಲ್ ಎಂಟರ್ಟೈನ್ಮೆಂಟ್ಸ್ ಜೊತೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದಕ್ಕೆ ಒಳ್ಳೆಯ ಆರಂಭವು ಸಿಕ್ಕಿತು.

ದಿಲ್ ಚಾಹತಾ ಹೈ ನಂತರದಲ್ಲಿ, ಅವರ ದೊಡ್ಡ ಸಾಹಸವೆಂದರೆ ಧರ್ಮ ಪ್ರೊಡಕ್ಷನ್ಸ್ ಅವರ ನಿಖಿಲ್ ಅದ್ವಾನಿ ನಿರ್ದೇಶನದ ಕಲ್ ಹೋ ನಾ ಹೋ ಚಿತ್ರ, . ಈ ಆಲ್ಬಂ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅತಿ ಹೆಚ್ಚು ಮಾರಾಟವಾದ ಆಲ್ಬಂ ಆಯಿತು. ಇದರ ಸಂಗೀತವು ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿವುದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿತು.[೫] ಆವಾಗಿನಿಂದ, ಧರ್ಮಾ ಪ್ರೊಡಕ್ಷನ್ಸ್‌ನ ಮಾಲೀಕ ಹಾಗೂ ನಿರ್ದೇಶಕ ಕರಣ್ ಜೋಹರ್,[೬][೭][೮] ತಮ್ಮ ಕಭಿ ಅಲ್ವಿದ ನಾ ಕೆಹನಾ ಚಿತ್ರವನ್ನೂ ಸೇರಿ ಹೆಚ್ಚಿನ ಚಿತ್ರಗಳಲ್ಲಿ ಈ ಜೋಡಿಗೆ ಅವಕಾಶವನ್ನು ನೀಡಿದರು. ಈ ಚಿತ್ರದ ಸಂಗೀತವು ಕಲ್ ಹೋ ನಾ ಹೋ ದಾಖಲೆಯನ್ನು ಮುರಿಯಿತು, ಮತ್ತೊಮ್ಮೆ ಹೆಚ್ಚು ಮಾರಾಟವಾದ ಬಾಲಿವುಡ್ ಸಂಗೀತವಾಯಿತು.

ಶೈಲಿ[ಬದಲಾಯಿಸಿ]

ಮೂರು ಜನರ ತಂಡದ ಪ್ರತಿಯೊಬ್ಬ ಸದಸ್ಯರೂ ತಮ್ಮ ಸ್ವತಃ ಪ್ರತಿಭೆಯನ್ನು ಹಾಗೂ ಅನುಭವಗಳನ್ನು ತಮ್ಮ ಸಂಯೋಜನೆಗಳಲ್ಲಿ ಸೇರಿಸುತ್ತಾರೆ, ಕಾರ್ನಾಟಿಕ್ ಹಾಗೂ ಹಿಂದೂಸ್ಥಾನಿ ಹಾಡುಗಾರಿಕೆಯ ಸಂಪ್ರದಾಯ (ಶಂಕರ್), ಪಾಶ್ಚಿಮಾತ್ಯ ರಾಕ್ (ಎಹಸಾನ್) ಹಾಗೂ ಎಲೆಕ್ಟ್ರಾನಿಕ್ ಸಿಂಥೆಸೈಜರ್ (ಲಾಯ್) ಬಗೆಗೆ ವಸ್ತುತಃ ಪಾಂಡಿತ್ಯ ಹೊಂದಿದ್ದು ಸಮ್ಮಿಳನಗಳ ಬಗೆಗೆ ಆಳವಾದ ಜ್ಞಾನ. ಅವರು ಬಾಲಿವುಡ್ ಸಂಗೀತದಲ್ಲಿ ಇರುವ ಸಂಗೀತ ಸಂಯೋಜಕರು ತಂಡವಾಗಿ ತಮ್ಮೆಲ್ಲಾ ಪ್ರತಿಭೆಯನ್ನು ಸೇರಿಸಿ ಸಂಗೀತ ಸಂಯೋಜನೆ ಮಾಡುವಂತಹ ಸಂಪ್ರದಾಯವನ್ನು ಮುಂದುವರೆಸಿದರು, ಕೆಲವು ಬಾರಿ ಹಿಂದುಸ್ತಾನಿ (ಉತ್ತರ ಕರ್ನಾಟಕ) ಅಥವಾ ಕರ್ನಾಟಿಕ್ (ದಕ್ಷಿಣ ಭಾರತೀಯ) ಶಾಸ್ತ್ರೀಯ ಸಂಗೀತ ಹಾಗೂ ತಂತ್ರಜ್ಞಾನದಲ್ಲಿ ಪರಿಣತಿ ಪಡೆದ ಸಯೋಯಕರು ಹಾಗೂ ಆರ್ಕೆಸ್ಟ್ರಾ ಏರ್ಪಡಿಸುವವರು ಎಲ್ಲರ ಆಳವಾದ ಜ್ಞಾನದಿಂದ ಸಂಗೀತ ಸಂಯೋಜಿಸಲ್ಪಡುತ್ತದೆ. ಶಂಕರ್-ಎಹಸಾನ್-ಲಾಯ್ ಅವರದ್ದು ಬಾಲಿವುಡ್‌ ವೀಕ್ಷಕರಿಗೆ ಉನ್ನತ ಮಟ್ಟದ ಸಂಗೀತ ನೀಡಿಮನರಂಜಿಸಿದ ಮೊದಲ ಜೋಡಿಯಾಗಿದೆ.[೯]

ಬಾಲಿವುಡ್ ಸಂಗೀತಗಾರರಲ್ಲಿ ಸದಾ ಅನ್ವೇಷಣೆಯಲ್ಲಿ ತೊಡಗಿರುವ ಈ ಜೋಡಿಯು ಪಾಶ್ಚಿಮಾತ್ಯ ವರ್ಚಸ್ಸಿನ ಸಂಗೀತ ವಿಷಯಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಯುವ ಪ್ರೇಕ್ಷಕರಲ್ಲಿ ಆಸಕ್ತಿ ಉಂಟು ಮಾಡಿದೆ. ಒಂದು ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಜಯ ಸಾಧಿಸಿ, ಆರ್ಥಿಕವಾಗಿ ಹಾಗೂ ವಿಮರ್ಶಾತ್ಮಕವಾಗಿ ಯಶಸ್ಸನ್ನು ಸಾಧಿಸಬೇಕಾದರೆ ಚಿತ್ರದ ಸಂಗೀತವು (ಧ್ವನಿಪಥ) ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಇದು ವಿಮರ್ಶಾತ್ಮಕ, "ಚಿತವನ್ನು ಬಿಡುಗಡೆ" ಮಾಡುವ ನಿಟ್ಟಿನಲ್ಲಿ ಈ ಅನ್ವೇಷಣೆಗಳು ಸಂಗೀತ ನಿರ್ದೇಶಕರನ್ನು ಸಾಂಪ್ರದಾಯಿಕ ಹಾಗೂ ಜನಪ್ರಿಯ ಪಾಶ್ಚಿಮಾತ್ಯ ಸಂಗೀತ ಹಾಗೂ ಅಂತರರಾಷ್ಟ್ರೀಯ ಸಂಗೀತವನ್ನು ಸಮ್ಮಿಳನ ಮಾಡಲು ಯಾವಾಗಲೂ ಪ್ರೇರೇಪಿಸುತ್ತವೆ ಹಾಗೂ ಬಾಲಿವುಡ್ ಸಂಗೀತದ ಅತಿ ಹೆಚ್ಚು ಜನಪ್ರಿಯ ಸಂಗೀತವು ಭಾರತೀಯ ರಾಗಗಳಿಂದ ಪ್ರೇರಿತವಾಗಿರುತ್ತವೆ (ಸಂಸ್ಕೃತದಲ್ಲಿ "ರಾಗ"ವೆಂದರೆ "ಬಣ್ಣ" ಅಥವಾ "ಮನಸ್ಸು"). ಶಂಕರ್-ಎಹಸಾನ್-ಲಾಯ್ ಅವರು ಚಿತ್ರರಂಗದ ಕೊರತೆಯನ್ನು ಹೋಗಲಾಡಿಸಿದರು. ಅವರು ಯಶಸ್ಸು ಹಲವಾರು ಅಂಶಗಳಿಗೆ ಸಹಾಯಕವಾಯಿತು, ಅದರಲ್ಲಿ ಆಸಕ್ತಿಯುತ ಸಂಗೀತ ವಾದ್ಯಗಳ ಅಳವಡಿಕೆ ಹಾಗೂ ಅವರ ಆಕೇಸ್ಟ್ರಾದಲ್ಲಿ ಆ ಧ್ವನಿಗಳ ಬಳಕೆ, ಜನಪ್ರಿಯ ಟಿವಿ ಪ್ರದರ್ಶನಗಳಿಂದ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಂದ ಧ್ವನಿಯ ಪರಿಚಯ ಮಾಡಿಸುವುದು, ಹಾಗೂ ಹಾಡಿನ ಸಂದರ್ಭಕ್ಕನು ಸಾರವಾಗಿ ಸಂಗೀತವನ್ನು ’ಅನುಭವಿಸುವಂತೆ’ ಸರಿಯಾದ ರೀತಿಯಲ್ಲಿ ಅದನ್ನು ಸಂಯೋಜಿಸುವುದು.

ಸಾಮಾನ್ಯ ಸಹಯೋಗಿಗಳು[ಬದಲಾಯಿಸಿ]

ಶಂಕರ್-ಎಹಸಾನ್-ಲಾಯ್ ಅವರು ತಮ್ಮ ಹೆಚ್ಚಿನ ಸಂಯೋಜನೆಗಳನ್ನು ಫರ್ಹಾನ್ ಅಕ್ತರ್ ಹಾಗೂ ರಿತೇಶ್ ಸಿಧ್ವಾನಿ ಅವರ ಒಡೆತನದ ಎಕ್ಸೆಲ್ ಎಂಟರ್ಟೈನ್ಮೆಂಟ್ಗಾಗಿ ಮಾಡಿದ್ದಾರೆ. ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಜೊತೆಗೂ ಹಲವು ಸಂಯೋಜನೆಗಳನ್ನು ಮಾಡಿದ್ದಾರೆ. ಇತರೆ ಗಮನೀಯ ಸಹಯೋಗಗಳೆಂದರೆ ನಿರ್ದೇಶಕರುಗಳಾದ ನಿಖಿಲ್ ಅದ್ವಾನಿ, ಶಾದ್ ಅಲಿ, ಶ್ರೀರಾಂ ರಾಘವಂ ಮತ್ತು ಸಾಜಿದ್ ಖಾನ್ ಅವರಿಗಾಗಿ ಸಂಯೋಜಿಸಿರುವುದು.

ಮೂರು ಜನರ ತಂಡವು ಸಂಯೋಜನೆ ಮಾಡಿರುವಂತಹ ಹೆಚ್ಚಿನ ಹಾಡುಗಳು ಜಾವೆದ್ ಅಕ್ತರ್ ಅವರು ಬರೆದಿರುವಂತಹವಾಗಿವೆ; ಆದಾಗ್ಯೂ, ಸಾಹಿತ್ಯಕಾರರಾದ ಗುಲ್ಜಾರ್, ಸಮೀರ್, ಹಾಗೂ ಪ್ರಸೂನ್ ಜೋಶಿಯವರ ಹಾಡುಗಳು ಕೂಡಾ ಇವರು ಸಂಯೋಜಿಸಿದ ಹಾಡುಗಳಲ್ಲಿ ಸೇರಿವೆ.

ಪ್ರಶಸ್ತಿಗಳು[ಬದಲಾಯಿಸಿ]

ಮೂರು ಜನರ ತಂಡವು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ (ಬಂಟಿ ಔರ್ ಬಬ್ಲಿ, ಕಲ್ ಹೋ ನಾ ಹೋ ), ಆರ್‌ಡಿ ಬರ್ಮನ್ ಪ್ರಶಸ್ತಿ (ದಿಲ್ ಚಾಹತಾ ಹೈ ) ಹಾಗೂ ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ (ಮಿಶನ್ ಕಾಶ್ಮೀರ್, ಬಂಟಿ ಔರ್ ಬಬ್ಲಿ, ದಿಲ್ ಚಾಹತಾ ಹೈ ). 2004ರಲ್ಲಿ, ಕಲ್ ಹೋ ನಾ ಹೋ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಸಂಗೀತ ನಿರ್ದೇಶಕರಾಗಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]