ವಿಷಯಕ್ಕೆ ಹೋಗು

ಜಾವೇದ್ ಅಕ್ತರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Javed Akhtar
ಜನನ (1945-01-17) ೧೭ ಜನವರಿ ೧೯೪೫ (ವಯಸ್ಸು ೭೯)
ಗ್ವಾಲಿಯರ್, India
ವೃತ್ತಿಸಂಗೀತ ಸಾಹಿತಿ, ಕವಿ, ಚಿತ್ರಕಥಾ ಬರಹಗಾರ

ಪ್ರಭಾವಿತರು

www.javedakhtar.com

ಜಾವೇದ್ ಅಕ್ತರ್ ಭಾರತದ ಓರ್ವ ಉರ್ದು ಕವಿ(ಜನಿಸಿದ್ದು 17 ಜನವರಿ,1945) جاوید اختر ; ಹಿಂದಿ:जावेद अख़्तर),(ಉರ್ದು ಗೀತೆ ಮತ್ತು ಚಿತ್ರಕಥೆ ರಚನೆಗಾರ. ಅವರ ಬಹಳಷ್ಟು ಯಶಸ್ವಿ ರಚನೆಗಳು 1970 ಮತ್ತು 1980ರಲ್ಲಿ ಹೊರಬಂದವು.ಸಲಿಮ್ ಖಾನ್ ರೊಂದಿಗೆ ಸೇರಿ ಅರ್ಧಕರ್ಧ ಕಥಾರಚನೆ ಹಾಗು ಗೀತ ರಚನೆಗಳು ಅವರಿಬ್ಬರಿಗೆ ಸಲಿಮ್ -ಜಾವೇದ್ ಎಂಬ ಜಂಟಿ ಜನಪ್ರಿಯ ಹೆಸರನ್ನು ತಂದುಕೊಟ್ಟವು. ಅಕ್ತರ್ ಬಾಲಿವುಡ್ ನಲ್ಲಿ ಯಾವಾಗಲೂ ತಮ್ಮ ಪ್ರಾಧಾನ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ.ಆತ ಒಬ್ಬ ಅತ್ಯುತ್ತಮ ಗೀತರಚನಕಾರ.

ಆರಂಭಿಕ ಬದುಕು

[ಬದಲಾಯಿಸಿ]

ಅವರು ಆಗಿನ ಗ್ವಾಲಿಯರ್ ರಾಜ್ಯದಲ್ಲಿ(ಈಗ ಇದು ಇಂದಿನ ಗ್ವಾಲಿಯರ್ ಮಧ್ಯಪ್ರದೇಶ)ದ ಜಾದೂ ಅಕ್ತರ್ ಆಗಿ;ಬಾಲಿಯುಡ್ ಹಾಡು ಬರಹಗಾರ ಜಾನ್ ನಿಸಾರ್ ಅಕ್ತರ್ ಮತ್ತು ಗಾಯಕಿ,ಶಿಕ್ಷಕಿ ಮತ್ತು ಬರಹಗಾರ್ತಿ ಸಫಿಯಾ ಅಕ್ತರ್ ಅವರ ಪುತ್ರನಾಗಿ ಜನಿಸಿದ ಈ ಜಾದೂ ಅಕ್ತರ್ . ಆತನ ಮೂಲ ಹೆಸರು ಜಾದೂ,ಆತನ ತಂದೆ ಬರೆದ ಹಾಡೊಂದರ ಸಾಲಿನಿಂದ ಪಡೆಯಲಾಗಿದೆ:"ಲಂಬಾ ಲಂಬಾ ಕಿಸಿ ಜಾದೂ ಕಾ ಫಸನಾ ಹೋಗಾ" ಎಂಬ ಹಾಡು ಇದಾಗಿದೆ. ನಂತರ ಅವರ ತಂದೆ ಜಾದೂ ಗೆ ಅತ್ಯಂತ ನಿಕಟವಾಗಿರುವ ಜಾವೇದ್ ಎಂಬ ಹೆಸರನ್ನು ತಮ್ಮ ಪುತ್ರನಿಗೆ [] ಅಧಿಕೃತವಾಗಿಟ್ಟರು. ಆತ ಏಳು ತಲೆಮಾರಿನವರಿಂದಲೂ ಈ ಬರಹದ ವೃತ್ತಿಗೆ ಅಂಟಿಕೊಂಡಂತಿದೆ. ಉರ್ದು ಕವಿ ಮಜಾಜ್ ಇವರ ಚಿಕ್ಕಪ್ಪ ಮತ್ತು ಆತನ ತಾತಾ ಮುಜ್ತರ್ ಖೈರಬ್ದಿ ಅವರ ಸಾಹಿತ್ಯ ಕೃತಿಗಳು ಉರ್ದು ಸಾಹಿತ್ಯದಲ್ಲಿ ಅವರಿಬ್ಬರದೊಂದು ಮೈಲುಗಲ್ಲು. ಅತ್ಯಂತ ಪ್ರಖ್ಯಾತ ತತ್ವಜ್ಞಾನಿ,ಕವಿ,ಧಾರ್ಮಿಕ ಪ್ರತಿಭಾಶಾಲಿ ಹಾಗು ಭಾರತೀಯ 1857ರ ಕ್ರಾಂತಿಯ ಪ್ರವರ್ತಕರಾಗಿದ್ದ,ಅದಲ್ಲದೇ ಘಾಲಿಬ್ ಅವರ ಮೊದಲ ಕೃತಿಗಳನ್ನು ಸಂಪಾದಿಸಿದ್ದ ಮೌಲಾನಾ ಫಜಲ್ -ಇ-ಹಕ್ ಖೈರಬ್ದಿ ಅವರೊಂದಿಗೆ ಸಹ ಅಕ್ತರ್ ಕುಟುಂಬ ಅತ್ಯಂತ ನಿಕಟ ಸಂಬಂಧ ಹೊಂದಿತ್ತು. ಅಕ್ತರ್ ಅವರ ಸಹೋದರ ಸಲ್ಮಾನ್ ಅಕ್ತರ್ U.S.ಮೂಲದ ಭಾರತೀಯ ಮನೋವಿಜ್ಞಾನದ ವಿಶ್ಲೇಷಕ.

ಆತನ ಜನನದ ನಂತರ ಆತನ ಪೋಷಕರು ಉತ್ತರ ಪ್ರದೇಶದ ಲಖ್ನೌಗೆ ತೆರಳಿದರು,ಮುಂದಿನ ದಿನಗಳಲ್ಲಿ ಅಲಿಘರ್ ಗೆ ಹೋದರು. ಕಿರಿಯ ವಯಸ್ಸಿನಲ್ಲಿದ್ದಾಗಲೇ ಅಕ್ತರ್ ತಮ್ಮ ತಾಯಿಯನ್ನು ಕಳೆದುಕೊಂಡರು,ಹೀಗಾಗಿ ಅವರ ತಂದೆ ಲಖ್ನೌ ಮತ್ತುಬಾಂಬೆಗಳಿಗೆ ಓಡಾಟ ನಡೆಸಬೇಕಾಯಿತು,ಇದರಿಂದ ಅವರು ಮತ್ತು ಅವರ ಸಹೋದರ ತಮ್ಮ ಸಂಬಂಧಿಕರೊಂದಿಗೆ ಹೆಚ್ಚು ಸಮಯ ಕಳೆದರು.

ಆತ ಎಂಟನೆಯ ವಯಸ್ಸಿನಲ್ಲಿ ಲಖ್ನೌನ ಕೊಲ್ವಿನ್ ತಾಲೂಕಾದಾರ್ ಕಾಲೇಜಿಗೆ ಆರನೆಯ ತರಗತಿಗೆ ಸೇರಿಕೊಂಡರು. ಲಖ್ನೌದಿಂದ ಆತ ಅಲಿಘರಕ್ಕೆ ತೆರಳಿ ತನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದ.

ಆತ ಅಲಿಘರದ ಶಾಲೆ ಮಿಂಟೊ ಸರ್ಕಲ್ ಗೆ ಸೇರಿಕೊಂಡನು.ಈ ಶಾಲೆಯು ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದ ಒಂದು ಭಾಗವಾಗಿತ್ತು. ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದಿಂದ ತನ್ನ ಮೆಟ್ರಿಕುಲೇಶನ್ ಪೂರ್ಣಗೊಳಿಸಿದ. ಮೆಟ್ರಿಕುಲೇಶನ್ ಮುಗಿಸಿದ ನತರ ಅಕ್ತರ್ ಭೂಪಾಲ್ ನಲ್ಲಿರುವ ಸೈಫಿಯಾ ಕಾಲೇಜ್ ನಲ್ಲಿ ತನ್ನ B.A.ಪೂರ್ಣಗೊಳಿಸಿದ. ಆತ ಕಾಲೇಜ್ ನಲ್ಲಿರುವಾಗಲೇ ಉತ್ತಮ ವಾಗ್ಮಿಯಾಗಿ ಹಲವಾರು ಬಾರಿ ರೊಟರಿ ಕ್ಲಬ್ ಬಹುಮಾನ ಗಳಿಸಿದ.

ವೃತ್ತಿ ಜೀವನ

[ಬದಲಾಯಿಸಿ]

ಅಕ್ತರ್ 4ಅಕ್ಟೋಬರ್ 1964ರಲ್ಲಿ ಮುಂಬೈಗೆ ಬಂದಿಳಿದ. ಮುಂಬೈನ ಆರಂಭಿಕ ಜೀವನದಲ್ಲಿ ಆತ ಸಣ್ಣ ಚಿತ್ರಗಳಿಗಾಗಿ ಸಂಭಾಷಣೆಗಳನ್ನು ಕೇವಲ 100ರೂಪಾಯಿಗಳಿಗೆ ಬರೆದುಕೊಟ್ಟ ಉದಾಹರಣೆಗಳಿವೆ. 100. ಆಯಾ ಸಂದರ್ಭಗಳಲ್ಲಿ ಆತ ಸಹಾಯಕನಾಗಿ ಕೆಲಸ ಮಾಡಿದ. ಆತ ಯಕೀನ್ ಚಿತ್ರಕ್ಕಾಗಿ ಚಿತ್ರಕಥೆ ಬರೆಯುವ ಕೆಲಸ ಗಿಟ್ಟಿಸಿಕೊಂಡ ಆದರೆ ಇದು ಬಾಕ್ಸ್ ಆಫೀಸಿನಲ್ಲಿ ಯಶಸ್ವಿಯಾಗಲಿಲ್ಲ. ಅಕ್ತರ್ ನಂತರ ಅಧಿಕಾರ್ ಚಿತ್ರದ ಕಥೆ ವಿಸ್ತರಿಸುವ ಕೆಲಸಕ್ಕಾಗಿ ಸಲಿಮ್ ಖಾನ್ ಅವರೊಂದಿಗೆ ಸೇರಿಕೊಂಡ. They were hired by G. P. Sippy's Sippy Films as resident ಅವರಿಬ್ಬರೂ ನಂತರ ಜಿ.ಪಿ.ಸಿಪ್ಪಿಯವರ ಸಿಪ್ಪಿ ಫಿಲ್ಮ್ಸ್ ಸೇರಿ ಸ್ಥಳೀಯ ಚಿತ್ರಕಥಾ ರಚನೆಕಾರರಾಗಿ ಯಶಸ್ವಿ ಚಿತ್ರಗಳಿಗೆ ನಿರ್ಮಾಪಕರಾದರು.ಅಂದಾಜ್ ,ಸೀತಾ ಔರ್ ಗೀತಾ ,ಶೊಲೆ ಮತ್ತು ಡಾನ್ ಚಿತ್ರಗಳು ಯಶಸ್ವಿಯಾದವು.

ಮೊದಮೊದಲು ಅಕ್ತರ್ ತನ್ನ ಚಿತ್ರಕಥೆಗಳನ್ನು ಉರ್ದುವಿನಲ್ಲಿ ಬರೆಯುತ್ತಿದ್ದರು,ನಂತರ ಆತನ ಸಹಾಯಕರು ಅದನ್ನು ಹಿಂದಿಗೆ ಭಾಷಾಂತರಿಸುತ್ತಿದ್ದರು. ಇನ್ನೊಬ್ಬ ಸಹಾಯಕ ಅದನ್ನು ಒಂದೇ ವಾಕ್ಯದ ಇಂಗ್ಲೀಷ ಭಾಷೆಗೆ ಭಟ್ಟಿ ಇಳಿಸುತ್ತಿದ್ದರು. ಆತನ ಸಂಪರ್ಕವು ಸಲಿಮ್ ಖಾನ್ ಅವರೊಂದಿಗೆ 1980ರವರೆಗೆ ಮುಂದುವರೆಯಿತು. ಇದರ ನಂತರ ಅಕ್ತರ್ ತಾವೇ ಸ್ವತಹ ಚಿತ್ರಕತೆಗಳನ್ನು ಬರೆಯಲು ಆರಂಭಿಸಿದರು.ಇದರಲ್ಲಿ ಅವರು ಯಶಸ್ವಿಯಾದರು.

ಚಲನಚಿತ್ರಗಳಿಗೆ ಗೀತ ರಚನೆಯಲ್ಲದೇ ಗಂಭೀರವಾಗಿ ಉರ್ದು ಕವಿತೆಗಳನ್ನು ಬರೆಯುವ ಪ್ರಯತ್ನ ಮಾಡಿಸಿದರು. ಅವರ ಬಹುಮುಖ್ಯ ಕೃತಿಗಳನ್ನು ತರ್ಕಾಶ್ ನಲ್ಲಿ ಸಂಕಲನಗೊಳಿಸಿ, ಅವರದೇ ಧ್ವನಿಯಲ್ಲಿ ಆಡಿಯೊ ತಯಾರಿಸಲಾಗಿದೆ. ಪ್ರಸಿದ್ದ ಗಾಯಕರಾದ ಜಗಜೀತ್ ಸಿಂಗ್ ಮತ್ತು ದಿವಂಗತ ನುಸ್ರತ್ ಫತೆಹ್ ಅಲಿ ಖಾನ್ ಅವರು ಇವರ ಸಿನೆಮಾಗೆ ಹೊರತಾದ ಕವಿತೆಗಳಿಗೆ ಸಂಗೀತ ಧ್ವನಿ ನೀಡಿದ್ದಾರೆ.

ಪ್ರತಿಭಾವಂತ ಗಾಯಕರ ಹುಡುಕಾಟದ ಇಂಡಿಯನ್ ಐಡೊಲ4 ಕಾರ್ಯಕ್ರಮದಲ್ಲಿ ಅಕ್ತರ್; ಅಣ್ಣು ಮಲಿಕ್ ಕೈಲಾಶ್ ಖೇರ್ ಮತ್ತು ಸೊನಾಲಿ ಬೇಂದ್ರೆಯವರೊಂದಿಗೆ ತೀರ್ಪುಗಾರರಾಗಿದ್ದರು. ಏಶಿಯನ್ ಅಕಾಡಮಿ ಆಫ್ ಫಿಲ್ಮ್ &ಟೆಲೆವಿಸನ್ ನ ಮಂಡಳಿಯ ಸಲಹೆಗಾರರಾಗಿದ್ದಾರೆ.

ವೈಯಕ್ತಿಕ ಬದುಕು

[ಬದಲಾಯಿಸಿ]

ಹಿಂದಿ ಚಲನಚಿತ್ರಗಳಿಗೆ ಚಿತ್ರಕಥೆ ಬರೆವ ಹನಿ ಇರಾನಿಯವರನ್ನು ಅಕ್ತರ್ ವಿವಾಹವಾದರು;ಇವರಿಬ್ಬರ ಮಕ್ಕಳಾದ ಫರಾ ಅಕ್ತರ್ ಮತ್ತು ಜೊಯಾ ಅಕ್ತರ್ ಇಬ್ಬರೂ ಚಿತ್ರ ನಿರ್ದೇಶಕರಾಗಿದ್ದಾರೆ. ತಂದೆ ಮತ್ತು ಪುತ್ರ ಇಬ್ಬರೂ ಒಟ್ಟಿಗೇ ದಿಲ್ ಚಾಹತಾ ಹೈ ,ಲಕ್ಷ್ಯ ಮತ್ತು ರಾಕ್ ಆನ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

ಜಾವೇದ್ ಅವರು ಇರಾನಿ ಅವರೊಂದಿಗಿನ ವಿಚ್ಛೇದನದ ನಂತರ ಉರ್ದು ಕವಿ ಕೈಫಿ ಆಜ್ಮಿಯವರ ಪುತ್ರಿ ಚಿತ್ರನಟಿ ಶಬಾನಾ ಆಜ್ಮಿಯವರನ್ನು ವಿವಾಹವಾದರು.

ಇತ್ತೀಚಿಗೆ 26 ಫೆಬ್ರವರಿ 2005ರ"ಆಧ್ಯಾತ್ಮ,ಸುಳ್ಳು ಅಥವಾ ಪೊಳ್ಳು"ಎಂಬ ಭಾಷಣದಲ್ಲಿ ಅವರು ತಾವು ನಾಸ್ತಿಕರೆಂದು ಹೇಳಿಕೊಂಡಿದ್ದಾರೆ. ತಮಗೆ ಧಾರ್ಮಿಕ ಯಾವುದೇ ಆಧ್ಯಾತ್ಮದ ನಂಬಿಕೆಯಿಲ್ಲ [] ಎಂದಿದ್ದಾರೆ

ಪ್ರಶಸ್ತಿಗಳು

[ಬದಲಾಯಿಸಿ]

ಜಾವೇದ್ ಅಕ್ತರ್ ಅವರಿಗೆ ಭಾರತ ಸರ್ಕಾರದಿಂದ 1999ರಲ್ಲಿ ಪದ್ಮಶ್ರೀ ಮತ್ತು 2007ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳು ದೊರಕಿವೆ. ಅಕ್ತರ್ ಅವರು ಹದಿನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದ್ದಾರೆ.ಅಳು ಬರಿ ಅತ್ಯುತ್ತಮ ಚಿತ್ರಕಥೆ,ಏಳು ಬಾರಿ ಅತ್ಯುತ್ತಮ ಗೀತ ರಚನೆಗೆ ವಿಶೇಷವಾಗಿ "ಏಕ್ ಲಡಕಿಕೊ ದೇಖಾ..."1942ರ ಲವ್ ಎ ಸ್ಟೊರಿ ,ಘರ್ ಸೆ ನಿಕ್ಲತೆ ಹಿ..."ಪಾಪಾ ಕೆಹತೆ ಹೈ ಗಾಗಿ,"ಸಂದೇಶೆ ಆತೆ ಹೈ...."ಗಾಗಿ ಬಾರ್ಡರ್ ನಲ್ಲಿ,"ಪಂಛಿ ನದಿಯಾ ಪವನಕೆ ಝೊಂಕೆ..."ರೆಫೂಜ್ ಗಾಗಿ,"ರಾಧಾ ಕೈಸೆ ನಾ ಜಲೆ"ಲಗಾನ್ ಗಾಗಿ,"ಕಲ್ ಹೊ ನಾ ಹೊ "ಕಲ್ ಹೊ ನಾ ಹೊಗಾಗಿ"ತೆರೆ ಲಿಯೆ..."ವೀರ್ ಝರಾ ಮತ್ತು "ಜಸ್ನ್ -ಇ-ಬಹಾರ" ಜೋಧಾ ಅಕ್ಬರ್ ಗಾಗಿ

ಅಕ್ತರ್ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಅವರು 1996ರಲ್ಲಿ ಸಾಜ್ ಚಿತ್ರಕ್ಕಾಗಿ ಅತ್ಯುತ್ತಮ ಗೀತ ರಚನೆಗಾಗಿ ಮತ್ತು 1997ರಲ್ಲಿ ಬಾರ್ಡರ್ ಗೀತ ರಚನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಮತ್ತೆ 1998ರಲ್ಲಿ ಗಾಡ್ ಮದರ್ ಗಾಗಿ ರಾಷ್ಟ್ರ ಪ್ರಶಸ್ತಿ ದೊರಕಿತು. ಇಸವಿ 2000ರಲ್ಲಿ ತೆರೆ ಕಂಡ ರೆಫೂಜಿ ಸಿನೆಮಾದ "ಪಂಛಿ ನದಿಯಾ ಪವನ್ ಕೆ ಝೊಂಕೆ"ಹಾಗು 2001ರಲ್ಲಿನ ಲಗಾನ್ ನ "ರಾಧಾ ಕೈಸೆ ನಾ ಜಲೆ"ಗಾಗಿ ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದರು.

ಅವರು 1995 ಮತ್ತು 1997ರಲ್ಲಿ ಸ್ಕ್ರೀನ್ ವಿಡಿಯಿ ಕಾನ್ ಅವಾರ್ಡ್ ಪಡೆದರು. ಮೊಟ್ಟ ಮೊದಲ ಬಾರಿಗೆ ಅತ್ಯುತ್ತಮ ಗೀತ ರಚನೆಗಾಗಿ ಬಾರ್ಡರ್ ನ "ಸಂದೇಶೆ ಆತೆ ಹೈ"ಗಾಗಿ ಝೀ ಪ್ರಶಸ್ತಿ ಪಡೆದರು. ಮತ್ತೆ ವಿಡಿಯೊಕಾನ್ ಸ್ಕ್ರೀನ್ ಅವಾರ್ಡ್ ಮತ್ತು ಝೀ ಲಕ್ಸ್ ಸಿನೆ ಅವಾರ್ಡ್ ಗಳನ್ನು "ಪಂಛಿ ನದಿಯಾ ಪವನ್ ಕೆ ಝೊಂಕೆ..."ಯ ರೆಫೂಜಿ ಗಾಗಿ ಗಳಿಸಿದರು.

ಅಕ್ತರ್ 2001ರಲ್ಲಿ ಆಲ್ ಇಂಡಿಯಾ ಅಂಟಿ-ಟೆರೊರಿಸ್ಟ್ ಅಸೋಶಿಯೇಶನ್ ನಿಂದ "ನ್ಯಾಶನಲ್ ಇಂಟಿಗ್ರೇಶನ್ ಅವಾರ್ಡ್ ಮತ್ತುU.P.ಸರ್ಕಾರದಿಂದ ಅವಧ್ ರತನ್ ಪ್ರಶಸ್ತಿಗೆ ಪಾತ್ರರಾದರು. ಅವರು ಉದೈಯಪುರ್ ದ ಮಹಾರಾಣಾ ಮೆವಾರ್ ಫೌಂಡೇಶನ್ ನ 2003ರ ಹಕೀಮ್ ಖಾನ್ ಸುರ್ ಸಮ್ಮಾನ್ ಅವಾರ್ಡ್ ನ್ನು ಗಿಟ್ಟಿಸಿದರು.

ಪ್ರಶಂಸೆಗಳು

[ಬದಲಾಯಿಸಿ]

ಕಥಾ ಬರಹ

[ಬದಲಾಯಿಸಿ]
ಸಲಿಮ್ -ಜಾವೇದ್ ಅವರ ತಂಡ ಬರೆದ ಕಥಾ ಸಾಹಿತ್ಯ.

ಫಿಲ್ಮ್ ಫೇರ್ ಬೆಸ್ಟ್ ಲಿರಿಸಿಸ್ಟ್ ಅವಾರ್ಡ್ ನ್ನು 19ಬಾರಿ ಗಳಿಸಿದರು.

ಗೀತ ರಚನೆಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Chopra, Anupama (2000). Sholay: The Making of a Classic. Penguin Books India. p. 16. ISBN 0140299970. {{cite book}}: Check |isbn= value: checksum (help)
  2. ಸ್ಪಿರ್ಚುವಾಲಿಟಿ, ಹಾಲೊ ಆರ್ ಹೋಕ್ಸ್ Archived 2008-12-29 ವೇಬ್ಯಾಕ್ ಮೆಷಿನ್ ನಲ್ಲಿ. - Javedakhtar.com, Spirituality, Halo or Hoax, 26 February 2005. "ಕೆಲವೊಂದು ವಿಷಯಗಳನ್ನು ನಾನು ಮುಕ್ತವಾಗಿ ಚರ್ಚಿಸಲು ಬಯಸುತ್ತೇನೆ" ನನ್ನ ಹೆಸರನ್ನು ಬಳಸಿ ಎಲ್ಲ ಪಡೆಯಲಿಕ್ಕಾಗದು-ಜಾವೇದ್ ಅಕ್ತರ್ ನಾನು ಒಂದು ರಹಸ್ಯವನ್ನು ಹೊರಹಾಕುತ್ತಿದ್ದೇನೆ,ನಾನು ಇದನ್ನು ಹಲವಾರು ಬಾರಿ ಹೇಳಿದ್ದೇನೆ;ಟೀವಿಗಳಲ್ಲಿ ಅಥವಾ ಬರಹಗಳಲ್ಲಿ ಸಾರ್ವಜನಿಕವಾಗಿ ನಾನೊಬ್ಬ ಮುಸ್ಲಿಮ್ ಎಂದು....


  • ಚೊಪ್ರಾ, ಅನುಪಮಾ, ಶೊಲೆ- ದಿ ಮೇಕಿಂಗ್ ಆಫ್ ಎ ಕ್ಲಾಸಿಕ್ (ಪೆಂಗಿನ್ಸ್ ಬುಕ್ಸ್) 2000 ISBN 0-14-029970-X

ಬಾಹ್ಯ ಕೊಂಡಿಗಳು

[ಬದಲಾಯಿಸಿ]