ಇರ್ಫಾನ್ ಪಠಾಣ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Irfan Pathan
Irfan Pathan.jpg
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರು Irfan Khan Pathan
ಹುಟ್ಟು 10 27 1984
Baroda, Gujarat, India
ಎತ್ತರ 1.85 m (6 ft 1 in)
ಪಾತ್ರ All rounder
ಬ್ಯಾಟಿಂಗ್ ಶೈಲಿ Left-hand bat
ಬೌಲಿಂಗ್ ಶೈಲಿ Left arm medium fast
ಅಂತರರಾಷ್ಟ್ರೀಯ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 248) 12 December 2003: v Australia
ಕೊನೆಯ ಟೆಸ್ಟ್ ಪಂದ್ಯ 3 April 2008: v South Africa
ODI ಪಾದಾರ್ಪಣೆ (cap 153) 9 January 2004: v Australia
ಕೊನೆಯ ODI ಪಂದ್ಯ 8 February 2009: v Sri Lanka
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
2000–present Baroda
2005 Middlesex
ವೃತ್ತಿಜೀವನದ ಅಂಕಿಅಂಶಗಳು
Test ODI FC List A
ಪಂದ್ಯಗಳು 29 107 85 152
ಒಟ್ಟು ರನ್ನುಗಳು 1,105 1,368 2,878 1,870
ಬ್ಯಾಟಿಂಗ್ ಸರಾಸರಿ 31.57 22.80 31.62 22.53
೧೦೦/೫೦ 1/6 0/5 2/18 0/7
ಅತೀ ಹೆಚ್ಚು ರನ್ನುಗಳು 102 83 111* 83
ಬೌಲ್ ಮಾಡಿದ ಚೆಂಡುಗಳು 5,884 5,194 16,023 7,471
ವಿಕೆಟ್ಗಳು 100 152 292 220
ಬೌಲಿಂಗ್ ಸರಾಸರಿ 32.26 29.90 29.06 28.67
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 7 1 13 1
೧೦ ವಿಕೆಟುಗಳು ಪಂದ್ಯದಲ್ಲಿ 2 n/a 3 n/a
ಶ್ರೇಷ್ಠ ಬೌಲಿಂಗ್ 7/59 5/27 7/35 5/27
ಕ್ಯಾಚುಗಳು /ಸ್ಟಂಪಿಂಗ್‍ಗಳು 8/– 18/– 26/– 27/–

ದಿನಾಂಕ 5 December, 2009 ವರೆಗೆ.
ಮೂಲ: CricketArchive

ಇರ್ಫಾನ್ ಪಠಾಣ್ (ಹಿಂದಿ: इरफ़ान पठान ) ಜನ್ಮನಾಮ ಇರ್ಫಾನ್ ಖಾನ್‌ (ಹಿಂದಿ: इरफ़ान ख़ान ಭಾರತದ ಗುಜಾರಾತ್‌ ರಾಜ್ಯದ ಬರೋಡಾದಲ್ಲಿ ೧೯೮೪, ಅಕ್ಟೋಬರ್ ೨೭ರಂದು ಜನನ) ಭಾರತೀಯ ಕ್ರಿಕೆಟಿಗರಾದ ಇವರು ೨೦೦೩ರಿಂದ ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದ ಸದಸ್ಯರಾಗಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಎಡಗೈ ಮಧ್ಯಮ ವೇಗದ ಸ್ವಿಂಗ್ ಬೌಲರ್ ಆಗಿದ್ದು (ಪಾಕಿಸ್ತಾನದ ಆಟಗಾರ ವಾಸೀಮ್ ಅಕ್ರಮ್ ಗೆ ಹೋಲಿಸಲ್ಪಟ್ಟು), ಪಠಾಣ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಿಕೊಂಡು ಬೌಲಿಂಗ್‌ ಆಲ್‌ರೌಂಡರ್ ಆಗಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಸಹ ಆಡಿದ್ದಾರೆ. ಇದರಿಂದಾಗಿ ಕ್ರಿಕೆಟ್ ವಿಮರ್ಶಕರು ಇವರನ್ನು ಭಾರತದ ಮಾಜಿ ಆಲ್‌ರೌಂಡ್ ಆಟಗಾರ ಕಪಿಲ್ ದೇವ್‌ರಿಗೆ ಹೋಲಿಸತೊಡಗಿದರು.[೧] ಬ್ಯಾಟಿಂಗ್‌ನಲ್ಲಿ ಸುಧಾರಣೆ ಆಯಿತಾದರೂ, ಅದೇ ಸಮಯದಲ್ಲಿ ಅವರು ಬೌಲಿಂಗ್‌ನಲ್ಲಿ ವೇಗ ಹಾಗೂ ಫಾರ್ಮ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲಿಲ್ಲ. ೨೦೦೫ರ ಕೊನೆಯ ಹಾಗೂ ೨೦೦೬ರ ಮೊದಲ ಭಾಗದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಆರಂಭಿಕ ಆಟಗಾರರಾಗಿದ್ದ ಪಠಾಣ್ ಅವರನ್ನು ೨೦೦೬ರ ಅಂತ್ಯದಲ್ಲಿ ಹಾಗೂ ೨೦೦೭ರಲ್ಲಿ ಟೆಸ್ಟ್‌ ಹಾಗೂ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಿಂದ ಬಹುಕಾಲ ಕೈಬಿಡಲಾಯಿತು. ನಂತರದಲ್ಲಿ ಅವರು ಸೆಪ್ಟೆಂಬರ್ ೨೦೦೭ರಲ್ಲಿ ನಡೆದ ಪ್ರಾರಂಭಿಕ ವರ್ಲ್ಡ್‌ ಟ್ವೆಂಟಿ20 ಸರಣಿಗೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂದಿರುಗಿದರು, ಈ ಸರಣಿಯ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು ಮತ್ತು ಆ ಪಂದ್ಯದಲ್ಲಿ ಮೂರು ವಿಕೆಟ್‌ ತೆಗೆದುಕೊಳ್ಳುವುದರೊಂದಿಗೆ ಪಠಾಣ್ ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಪಡೆದರು.

ಆರಂಭದ ದಿನಗಳು[ಬದಲಾಯಿಸಿ]

ಬಡ ಕುಟುಂಬದಿಂದ ಬಂದ ಪಠಾಣ್, ಅಣ್ಣ ಯೂಸೂಫ್‌ನ ಜೊತೆಯಲ್ಲಿ ಬರೋಡಾದಲ್ಲಿರುವ ಒಂದು ಮಸೀದಿಯಲ್ಲಿ ಬೆಳೆದರು. ಅವರ ತಂದೆ ಮುಯಿಜ್ಜಿನ್‌ ಆಗಿ ಸೇವೆ ಸಲ್ಲಿಸಿದ್ದರು. ಅವರ ಪೋಷಕರು ಅವರನ್ನು ಇಸ್ಲಾಮಿಕ್ ವಿದ್ಯಾರ್ಥಿಗಳನ್ನಾಗಿಸಬೇಕೆಂದು ಬಯಸಿದ್ದರೂ ಕೂಡ, ಇರ್ಫಾನ್ ಮತ್ತು ಅವರ ಅಣ್ಣ ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿಯನ್ನು ತೆಗೆದುಕೊಂಡರು. ಮಸೀದಿಯ ಹೊರ ಮತ್ತು ಒಳ ಆವರಣದಲ್ಲಿನ ಅವರ ಆಟಗಳಿಂದಾಗಿ ಮಸೀದಿಗೆ ಬೇಟಿನೀಡಿದ ಮುಸ್ಲಿಂ ಆರಾಧಕರಿಗೆ ತೊಂದರೆಯುಂಟಾಗುತ್ತಿದ್ದುದರಿಂದ ಅವರ ತಪ್ಪಿಗಾಗಿ ಅವರ ತಂದೆ ಪದೇ ಪದೇ ಕ್ಷಮೆ ಕೇಳಬೇಕಾಗುತ್ತಿತ್ತು. ಪ್ರಾರಂಭದಲ್ಲಿ ಅವರ ಎಸೆತಗಳು ಕ್ರಿಕೆಟ್ ಪಿಚ್‌ನ ಇನ್ನೊಂದು ತುದಿಯನ್ನು ತಲುಪುತ್ತಿರಲಿಲ್ಲ, ಆದರೆ ಉರಿಯುತ್ತಿರುವ ಬಿಸಿಲಿನಲ್ಲಿ ಆರು-ಗಂಟೆಗಳ ಕಠಿಣ ಅಭ್ಯಾಸ ಮತ್ತು ಅವರ ಕುಟುಂಬದ ಶಿಸ್ತಿನ ಪರಿಪಾಲನೆಯಿಂದ ಅವರಲ್ಲಿ ಸ್ಥಿರವಾದ ಪ್ರಗತಿಯು ಕಂಡಿತು. ಭಾರತೀಯ ಕ್ರಿಕೇಟಿನ ಮಾಜಿ ನಾಯಕರಾದ ದತ್ತಾ ಗಾಯಕ್‌ವಾಡ್‌‌ರವರಿಂದ ಮಾರ್ಗದರ್ಶನ ಪಡೆದ ಪಠಾಣ್, ೧೪ ವರ್ಷದ ಕೆಳಗಿನವರ ಬರೋಡಾ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವ ಮಟ್ಟಕ್ಕೆ ಬೆಳೆದರು, ಮತ್ತು ನಂತರದಲ್ಲಿ ಅವರು ೧೫ ವರ್ಷ ಒಳಗಿನ ತಂಡದಲ್ಲಿ ರಾಷ್ಟ್ರೀಯ ಪಂದ್ಯಾವಳಿಯೊಂದರಲ್ಲಿ ಬರೋಡಾವನ್ನು ಪ್ರತಿನಿಧಿಸಲು ಆಯ್ಕೆಯಾದಾಗ, ಆ ಪಂದ್ಯಾವಳಿಯ ಕೊನೆಯಲ್ಲಿ ಅವರಿಗೆ ಒಂದು ಸಂಪೂರ್ಣ ಕ್ರಿಕೆಟ್ ಸಾಧನಗಳಿರುವ ಸೆಟ್‌ಅನ್ನು ಉಡುಗೊರೆಯಾಗಿ ನೀಡಲಾಯಿತು, ಇದಕ್ಕೂ ಮುನ್ನ ಅವರ ಕುಟುಂಬದ ಸೀಮಿತ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಅವರು ಎರಡನೇ ದರ್ಜೆಯ ಕ್ರಿಕೆಟ್ ಸಾಮಗ್ರಿಗಳನ್ನು ಮಾತ್ರ ಬಳಸುವ ಮಿತಿಗೊಳಪಟ್ಟಿದ್ದರು.[5][7] ನಿಧಾನಗತಿಯ ಎಡಗೈ ಬೌಲರ್ ಜಹೀರ್ ಖಾನ್‌ ರಾಷ್ಟ್ರೀಯ ತಂಡಕ್ಕೆ ಆಯ್ಕೆಗೊಂಡ ನಂತರ, ಪಠಾಣ್ ಬರೋಡಾದ ತಂಡ ರಣಜಿ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡುವ ಮೂಲಕ ತಮ್ಮ ಪ್ರಥಮ-ದರ್ಜೆಯ ಕ್ರಿಕೆಟ್‌ಗೆ ೨೦೦೦-೦೧ರ ಸಮಯದಲ್ಲಿ ಪಾದಾರ್ಪಣೆ ಮಾಡಿದರು. ಇದರಿಂದಾಗಿ ಬರೋಡಾ ಇರಾನಿ ಟ್ರೋಫಿಗೆ ಆಯ್ಕೆಯಾಗುವಲ್ಲಿ ಸಫಲವಾಯಿತು, ಮತ್ತು ಆ ಆಟದಲ್ಲಿನ ಪಠಾಣ್‌ರ ಪ್ರದರ್ಶನವು ಜಹೀರ್ ಮತ್ತು ವಿ.ವಿ.ಎಸ್.ಲಕ್ಷ್ಮಣ್‌ರವರ ಆಟವನ್ನು ನೆನಪಿಗೆ ತರುವಂತಿತ್ತು. ಭಾರತೀಯ ಕ್ರಿಕೆಟ್‌ನ ಆಯ್ಕೆಗಾರರಾದ ಕಿರಣ್ ಮೋರೆಯವರ ಶಿಫಾರಸ್ಸಿನ ಮೇರೆಗೆ ಪಠಾಣ್‌‍ ನಂತರದಲ್ಲಿ ಚೆನೈನ MRF ಪೇಸ್ ಫೌಂಡೇಶನ್‌ನಲ್ಲಿ ತಮ್ಮ ಬೌಲಿಂಗ್ಅನ್ನು ಇನ್ನೂ ಉತ್ತಮಪಡಿಸಿಕೊಂಡರು.[೧] ೨೦೦೨ರ ಪ್ರಾರಂಭದಲ್ಲಿ, ನ್ಯೂಜಿಲ್ಯಾಂಡ್‌ನಲ್ಲಿ ನಡೆದ ೧೯ ವರ್ಷದೊಳಗಿನವರ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಆಯ್ಕೆಯಾದರು ಮತ್ತು ಅವರು ಅಲ್ಲಿ ಆರು ವಿಕೆಟ್‌ಗಳನ್ನು ಪಡೆದುಕೊಂಡರು.[೨] ಅವರು ೨೦೦೩ರಲ್ಲಿ, ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿ ಅಲ್ಲಿನ ರಾಷ್ಟ್ರೀಯ ಚಾಲೆಂಜರ್ ಸರಣಿಯಲ್ಲಿ ಆಡಿದ ಭಾರತ A ತಂಡಕ್ಕೆ ಆಯ್ಕೆಗೊಂಡರು.[೩][೪] ೨೦೦೩ರ ಕೊನೆಯಲ್ಲಿ, ಪಾಕಿಸ್ತಾನದಲ್ಲಿ ನಡೆದ ಏಷ್ಯನ್ ODI (ಏಕ ದಿನದ ಅಂತರಾಷ್ಟ್ರೀಯ ಪಂದ್ಯ) ಸ್ಪರ್ಧೆಯಲ್ಲಿ ಸ್ಪರ್ಧಿಸಲು ಭಾರತೀಯ ೧೯ ವರ್ಷದೊಳಗಿನವರ ತಂಡದಲ್ಲಿ ಆಯ್ಕೆಗೊಂಡು, ಅಲ್ಲಿ ೧೮ ವಿಕೆಟ್‌ಗಳನ್ನು ಪಡೆಯುವದರೊಂದಿಗೆ ಅಗ್ರಸ್ಥಾನವನ್ನು ಪಡೆದರು. ಈ ವಿಕೆಟ್ ಸಂಖ್ಯೆಯು ಆ ಪಂದ್ಯದ ಎರಡನೆಯ ಉತ್ತಮ ಬೌಲರ್ ಪಡೆದ ಒಟ್ಟು ವಿಕೆಟ್ ಸಂಖ್ಯೆಯ ಎರಡರಷ್ಟಕ್ಕಿಂತ ಹೆಚ್ಚಾಗಿತ್ತು. ಅವರ ಬೌಲಿಂಗ್ ಸರಾಸರಿ ೭.೩೮ಯು ಪಂದ್ಯಾವಳಿಯಲ್ಲಿಯೇ ಅತಿ ಉತ್ತಮವೆನಿಸಿತ್ತು ಹಾಗೂ ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಎಂಬ ಹೆಸರು ಪಡೆದಿದ್ದರು.[೫] ಬಾಂಗ್ಲಾದೇಶದ ವಿರುದ್ಧ ೯/೧೬ ವಿಕೆಟ್‌ಗಳನ್ನು ಪಡೆದ ನಂತರ ಹಾಗೂ ಫೈನಲ್‌ನಲ್ಲಿ ಶ್ರೀಲಂಕಾದ ವಿರುದ್ಧ ೩/೩೩ ವಿಕೆಟ್‌ಗಳನ್ನು ಪಡೆದು ಭಾರತವು ಜಯವನ್ನು ಸಾಧಿಸಲು ಸಹಾಯ ಮಾಡಿದ ಮೇಲೆ ಪಠಾಣ್‌ರ ಹೆಸರು ಪತ್ರಿಕೆಯ ಮುಖಪುಟಗಳಲ್ಲಿ ಕಾಣಿಸಿತ್ತು.[೬] ಇದರ ಫಲಿತಾಂಶವಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ೨೦೦೩-೦೪ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಅವರನ್ನು ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯಿತು.[೩]

ಆರಂಭದ ಅಂತಾರಾಷ್ಟ್ರೀಯ ವೃತ್ತಿಜೀವನ[ಬದಲಾಯಿಸಿ]

ಪಠಾಣ್ ಡಿಸೆಂಬರ್ ೨೦೦೩ರಲ್ಲಿ ಅಡಿಲೇಡ್‌ ಓವಲ್‌‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಅವರ ಟೆಸ್ಟ್ ಕ್ರಿಕೇಟ್‌ಗೆ ಪ್ರಥಮ ಪಾದಾರ್ಪಣೆ ಮಾಡಿದರು. ತನ್ನ ೧೯ನೇ ವಯಸ್ಸಿನಲ್ಲಿ ಪಠಾಣ್, ಹೆಚ್ಚು ಮೊತ್ತವನ್ನು ಗಳಿಸಬೇಕಾದ ಆ ಪಂದ್ಯದಲ್ಲಿ ಬರೋಡಾದ ಎಡಗೈ ಆಟಗಾರನಾದ ಜಹೀರ್ ಖಾನ್ ಗಾಯಗೊಂಡ ಕಾರಣ, ತನ್ನ ಮೊದಲ ಬೌಲಿಂಗನ್ನು ಆರಂಭಿಸಿದರು. ಒಂದೇ ಪಂದ್ಯದಲ್ಲಿ ೧೫೦ ರನ್ನುಗಳನ್ನು ನೀಡಿ ಮ್ಯಾಥ್ಯೂ ಹೇಡನ್‌‌‌ರ ವಿಕೇಟನ್ನು ತೆಗೆದುಕೊಂಡರು.[೭] ಜಹೀರ್ ಮರಳಿದ ನಂತರ ಟೆಸ್ಟ್ ಪಂದ್ಯದಿಂದ ಅವರನ್ನು ಕೈ ಬಿಡಲಾಯಿತು, ಆದರೆ ನಂತರದಲ್ಲಿ ಜಹೀರ್‌ನ ಅನಾರೋಗ್ಯದ ವರಧಿಯ ಕಾರಣ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಾಲ್ಕನೆಯ ಟೆಸ್ಟ್ ಆಡಲು ಪುನಃ ಅವರನ್ನು ಕರೆಸಲಾಯಿತು. ಇನ್ನೊಂದು ಸಮತಟ್ಟಾದ ಪಿಚ್‌ನಲ್ಲಿ ಪಠಾಣ್, ಸ್ಟೀವ್ ವಾ, ಆ‍ಯ್‌ಡಮ್ ಗಿಲ್‌ಕ್ರಿಸ್ಟ್ ಮತ್ತು ರಿಕಿ ಪಾಂಟಿಗ್‌‌ರ ವಿಕೆಟುಗಳನ್ನು ೩/೧೦೬ ರಂತೆ ಪಡೆದು ಕೊಂಡರು[೮]. ಆಸ್ಟ್ರೇಲಿಯಾ ಮತ್ತು ಜಿಂಬಾವ್ವೆ ವಿರುದ್ಧದ ODI ಮೂರು-ರಾಷ್ಟ್ರಗಳ ಪಂದ್ಯಾವಳಿಯಲ್ಲಿ, ಪಠಾಣ್ ೩೧ರ ಸರಾಸರಿಯಂತೆ ೧೬ ವಿಕೆಟುಗಳನ್ನು ಪಡೆದು ಮುಂಚೂಣಿಯಲ್ಲಿರುವ ವಿಕೆಟು ಗಳಿಕೆದಾರರಾದರು.[೯] ಆಸ್ಟ್ರೇಲಿಯಾದ ಎರಡು ಮೂರು-ವಿಕೆಟುಗಳನ್ನು ಪಡೆಯುವದರ ಜೊತೆಗೆ, ಪರ್ತ್‌‍‌ನ WACA ಮೈದಾನದಲ್ಲಿ ಜಿಂಬಾವ್ವೆ ವಿರುದ್ಧ ನಡೆದ ಪಂದ್ಯದಲ್ಲಿ ೪/೨೪ ವಿಕೆಟ್ ಪಡೆದುಕೊಳ್ಳುವುದರ ಮೂಲಕ ತನ್ನ ಮೊದಲ ಅಂತರಾಷ್ಟ್ರೀಯ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.[೧೦][೧೧][೧೨] ಆದಾಗ್ಯೂ, ಆಸ್ಟ್ರೇಲಿಯಾದ ಬ್ಯಾಟ್ಸಮನ್ ಡ್ಯಾಮಿನ್ ಮಾರ್ಟಿನ್‌‌ಔಟ್‌ ಆದ ನಂತರ ಆತನನ್ನು ಅಪಹಾಸ್ಯ ಮಾಡಿದ ಕಾರಣ ಅವರನ್ನು ಎರಡನೆಯ ಫೈನಲ್ ಆಟದಿಂದ ತೆಗೆದು ಹಾಕಿದ್ದರಿಂದ ಅವರ ಈ ಪ್ರಯಾಣವು ಕೆಟ್ಟ ವರಧಿಯೊಂದಿಗೆ ಕೊನೆಗೊಂಡಿತು.[೧೩] ಮುಂದಿನ ೨೦೦೪ರ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಠಾಣ್ ಅದರಲ್ಲಿ ೧೨ ವಿಕೆಟ್‌ಗಳನ್ನು ಪಡೆದುಕೊಂಡು ಮತ್ತು ಬೌಲಿಂಗ್‌ನಲ್ಲಿ ಇತರ ಯಾವುದೇ ಬೌಲರ್‌ಗಳಿಗಿಂತ ಹೆಚ್ಚಿನ ಅನುಪಾತದ ಮೆಡನ್ ಓವರ್‌‌ ಗಳನ್ನು ಮಾಡಿ, ಪಾಕಿಸ್ತಾನದ ವಿರುದ್ಧ ಭಾರತವು ಎರಡು ದಶಕಗಳಲ್ಲಿನ ಮೊದಲ ಸರಣಿ ಜಯವನ್ನು ಸಾಧಿಸಲು ಸಹಾಯ ಮಾಡುವ ಮೂಲಕ ಮತ್ತೆ ಆರಂಭಿಕ ಆಕ್ರಮಣಕಾರೀ ಬೌಲರ್ ಆದರು.[೧] ಲಾಹೋರ್‌‌ನ ಎರಡನೆಯ ಟೆಸ್ಟ್‌ನಲ್ಲಿ ಪ್ರಾರಂಭಿಕ ಆಟಗಾರರು ವಿಫಲಗೊಂಡ ನಂತರ ೪೯ ರನ್‌ಗಳನ್ನು ಮಾಡಿ ಬ್ಯಾಟಿಂಗ್‌ನಲ್ಲೂ ಅವರು ತನ್ನ ಪೌರುಷವನ್ನು ಪ್ರದರ್ಶಿಸಿದರು.[೮] ಲಾಹೋರ್‌ನಲ್ಲಿ ನಡೆದ ಪರಿಣಾಮಕಾರಿ ಐದನೆಯ ಏಕದಿನ ಅಂತರಾಷ್ಟ್ರೀಯ ಪಂದ್ಯವೊಂದರಲ್ಲೇ ಅವರು ಮೊದಲ ಮೂರು ವಿಕೆಟ್‌ಗಳನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಮೂರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ೧೭.೮ರ ಸರಾಸರಿಯಂತೆ ಎಂಟು ವಿಕೆಟ್‌ಗಳನ್ನು ಪಡೆದುಕೊಂಡರು.[೧೦][೧೪] ಎರಡೂ ಕಡೆಯೂ ಚೆಂಡನ್ನು ಸ್ವಿಂಗ್ ಮಾಡುವ ಅವರ ಜಾಣತನ ಮತ್ತು ಲಾಹೋರ್‌ನ ಇನ್ನಿಂಗ್ಸ್‌ ಆಟವು ಅವರು ಒಬ್ಬ ಆಲ್‌ರೌಂಡರ್ ಆಟಗಾರ ಆಗಬಹುದೆಂಬ ನಿರೀಕ್ಷೆಗೆ ಕಾರಣವಾಯಿತು.[೧೫] ಇವರು ೨೦೦೪ರಲ್ಲಿ ICC(ಅಂತರಾಷ್ಟ್ರೀಯ ಕ್ರಿಕೆಟ್ ಕ್ಲಬ್)ಯ ವರ್ಷದ ಉದಯೋನ್ಮುಖ ಆಟಗಾರ ಕರೆಯಲ್ಪಟ್ಟರು.[೧೬] ೨೦೦೪ರಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ ODI ಕ್ರಿಕೆಟ್ ಪಂದ್ಯಗಳಲ್ಲಿ ಪಠಾಣ್ ಅವರು ತಮ್ಮ ಉತ್ಪಾದಕ ಫಾರ್ಮ್‌ಅನ್ನು ಮುಂದುವರೆಸಿದರು, ಅಲ್ಲಿ ಅವರು ಮೂರು ಬಾರಿ ಮೂರು-ವಿಕೆಟ್‌ಗಳನ್ನು ಪಡೆಯುವುದರ ಮೂಲಕ ೧೬.೨೮ ರ ಸರಾಸರಿಯಲ್ಲಿ ೧೪ ವಿಕೆಟ್‌ಗಳ ಸಾಧನೆಯನ್ನು ಮಾಡಿದರು. ಇದು 2004ರ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಕೂಡಾ ಮುಂದುವರೆಯಿತು, ಮತ್ತು ಇಲ್ಲಿ ಅವರು ೯ರ ಸರಾಸರಿಯಲ್ಲಿ ೫ ವಿಕೆಟ್‌ಗಳನ್ನು ಸಾಧಿಸಿದರು.[೧೪][೧೭] ಪಠಾಣ್ ೨೦೦೪ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ವೊಂದರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಪ್ರತಿಭಟನಾತ್ಮಕವಾಗಿ ೩೧ ಮತ್ತು ೫೫ ರನ್‌ಗಳನ್ನು ಬಾರಿಸುವುದರ ಮೂಲಕ ತನ್ನ ಬ್ಯಾಟಿಂಗ್ ಅನ್ನು ಸುಧಾರಿಸಿಕೊಂಡರು. ಇದು ಅವರ ಟೆಸ್ಟ್ ಇತಿಹಾಸದ ಮೊದಲ ಅರ್ಧ-ಶತಕವಾಗಿತ್ತು ಹಾಗೂ ಅವರು ಇದನ್ನು ಪ್ರಾರಂಭದ ಉತ್ತಮ ಬ್ಯಾಟ್ಸ್‌ಮನ್‌ಗಳು ಆಡಲು ವಿಫಲರಾದ ಹಂತದಲ್ಲಿ ಸಾಧಿಸಿದ್ದರು. ಆದರೆ, ಚೆನ್ನೈ ಟೆಸ್ಟ್‌ ಒಂದರಲ್ಲಿ ಒಂದು ಪಕ್ಕೆಯ ಸಹಿಸಲಾರದ ನೋವಿನ ಕಾರಣ ವೃತ್ತಿಜೀವನದಲ್ಲಿ ಒಂದು ಹಿನ್ನೆಡೆಯನ್ನು ಅನುಭವಿಸಬೇಕಾಯಿತು. ಈ ಕಾರಣದಿಂದ ಅವರು ನಾಗಪುರ್ ಮತ್ತು ಮುಂಬಯಿ ಟೆಸ್ಟ್‌ಗಳನ್ನು ಕಳೆದುಕೊಳ್ಳಬೇಕಾಯಿತು.[೧೮][೧೯] ನಂತರ, ಆಯ್ಕೆಗಾರರು ಮೂವರು ಸ್ಪಿನ್ನರ್‌ಗಳನ್ನು ತಂಡದಲ್ಲಿರಿಸಲು ಇವರ ಹೆಸರನ್ನು ಬಿಟ್ಟಿದ್ದರು.[೨೦] ನಂತರ ಎರಡನೇ ಟೆಸ್ಟ್ ಆಟದಲ್ಲಿ ಕೊಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪುನಃ ವಾಪಸ್ಸಾದರು. ನಂತರದಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಬಾಂಗ್ಲಾದೇಶ ಪ್ರವಾಸದ ತಂಡದಲ್ಲಿ ಸಹ ಆಯ್ಕೆಗೊಂಡರು. ಈ ಸರಣಿಯಲ್ಲಿ ಪಠಾಣ್ ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡನ್ನು ಎರಡೂ ಕಡೆಯಿಂದ ಸ್ವಿಂಗ್ ಮಾಡುತ್ತಾ , ಹಲವು LBW ತೀರ್ಪುಗಳನ್ನು ಸೇರಿ, ೫/೪೫ ಹಾಗೂ ೬/೫೧ ಗಳ ಮೂಲಕ ಮೊದಲ ಹತ್ತು-ವಿಕೆಟ್‌ಗಳ ಸಾಧನೆ ಮಾಡಿದರು. ಈ ಆಟದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರಲ್ಲದೇ, ಭಾರತವು ಇನ್ನಿಂಗ್ಸ್ ವಿಜಯದ ಸಾಧನೆ ಮಾಡಿತು.[೨೧] ಇದೇ ರೀತಿಯಲ್ಲಿ ಅವರು ಚಿತ್ತಾಗಾಂಗ್ ಪಂದ್ಯವೊಂದರಲ್ಲಿ ೭/೧೧೮ ವಿಕೆಟ್‌ಗಳನ್ನು ಪಡೆದು, ಸರಣಿಯಲ್ಲಿ ೧೧.೮೮ಕ್ಕೆ ೧೮ ವಿಕೆಟ್‌ಗಳನ್ನು ಪಡೆದು ಸರಣಿಯ ಶ್ರೇಷ್ಠರೆನಿಸಿಕೊಂಡರು.[೮][೨೨][೨೩] ೨೦೦೪ರ ಕೊನೆಯಲ್ಲಿ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ‌ಯವರು ಮೊದಲ ಬಾರಿಗೆ ಅಂತರಾಷ್ಟ್ರೀಯ ಆಟಗಾರರಿಗೆ ಕೇಂದ್ರೀಯ ಒಪ್ಪಂದಗಳನ್ನು ಪರಿಚಯಿಸಿದರು ಹಾಗೂ ಪಠಾಣ್‌ರಿಗೆ B-ಗ್ರೇಡ್ ಸ್ಥಾನವನ್ನು ಕೊಡಲು ಒಪ್ಪಂದವಾಯಿತು. ೨೦೦೫ರ ವರ್ಷವು ಪಠಾಣ್‌ರ ಪಾಲಿಗೆ ನಿರಾಶಾದಾಯಕವಾಗಿತ್ತು. ನಂತರದಲ್ಲಿ ಅವರು ಬೌಲಿಂಗ್‌ನ ದಿಕ್ಕಿನ ಗತಿ ಹಾಗೂ ಅಚ್ಚುಕಟ್ಟುತನವನ್ನು ಕಳೆದುಕೊಂಡು ತವರು ನೆಲದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ ೬೮.೩೩ ರ ಸರಾಸರಿಯಲ್ಲಿ ಕೇವಲ ೬ ವಿಕೆಟ್‌ಗೆ ತೃಪ್ತಿಪಡಬೇಕಾಯಿತು.[೨೪] ನಂತರದಲ್ಲಿ ಅವರನ್ನು ಏಕದಿನ ಅಂತಾರಾಷ್ಟ್ರೀಯ ಸರಣಿಯಿಂದ ಕೈಬಿಡಲಾಯಿತು. ಆಡಿದ ಒಂದೇ ಒಂದು ಪಂದ್ಯದಲ್ಲಿ ಅವರು ೮ ಓವರ್‌ಗಳಿಗೆ ೬೭ ರನ್‌ಗಳನ್ನು ಕೊಟ್ಟು ಯಾವುದೇ ವಿಕೆಟ್ ಅನ್ನು ಪಡೆಯಲಿಲ್ಲ. ಆದಾಗ್ಯೂ, ಅವರು ತನ್ನ ಮೊದಲ ODI ಅರ್ಧ-ಶತಕವನ್ನು, ೬೪ ರನ್‌ಗಳ ಮೂಲಕ ಮಾಡಿದರು.[೧೦] ಪಾಕಿಸ್ತಾನದ ಸರಣಿಯ ನಂತರ ಗ್ರೇಗ್ ಚಾಪೆಲ್‌ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು ಹಾಗೂ ಪಠಾಣ್ ಅವರಲ್ಲಿನ ಆಲ್-ರೌಂಡ್ ಆಟದ ಸಾಮರ್ಥ್ಯವನ್ನು ಅವರು ಗುರುತಿಸಿದ್ದರು. ಅವರು ಪಠಾಣ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಉತ್ತಮಗೊಳಿಸಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಪಠಾಣ್ ೧೯.೬೪ ರ ಸರಾಸರಿಯಲ್ಲಿ ೨೭೫ ಟೆಸ್ಟ್‌ ರನ್ನುಗಳನ್ನು ಗಳಿಸಿದರು. ತರುವಾಯ, ಪಠಾಣ್ ಮಿಡಲ್‌ಸೆಕ್ಸ್ ಕಂಟ್ರಿ ಕ್ರಿಕೆಟ್ ಕ್ಲಬ್‌ ಸದಸ್ಯನಾಗಿ ಸಹಿ ಮಾಡಿದರು, ಮತ್ತು ಅಲ್ಲಿ ತನ್ನ ಆಟದ ಫಾರ್ಮ್‌ನ್ನು ಮರಳಿ ಪಡೆಯಲು ಪ್ರಯತ್ನಿಸಿದರು.[೨೫]

ಚಾಪೆಲ್‌ ಯುಗ[ಬದಲಾಯಿಸಿ]

 ಯುವ ಕಂದು ಚರ್ಮದ, ಪೂರ್ತಿ ಶೇವ್ ಮಾಡಿದ, ನೀಲಿ ತೋಳಿಲ್ಲದ "SAHARA" ಎಂಬ ಕಪ್ಪುಬಣ್ಣದ ಪದವಿರುವ ಟಿಶರ್ಟ್, ಗಾಢಬಣ್ಣದ ಶಾರ್ಟ್ಸ್ ಧರಿಸಿದ ವ್ಯಕ್ತಿಯೊಬ್ಬ ಈಗ ಬಿಳಯ ಕ್ರಿಕೆಟ್ ಬಾಲ್ ಹಿಡಿದು ಎಸೆಯಲು ಸಿದ್ಧನಾಗಿದ್ದಾನೆ.ಚೆಂಡನ್ನು ಎಸೆಯುವ ಅವನ ಎಡ ಕೈ ಅವನ ತಲೆಯಮೇಲಿದೆ ಮತ್ತು ಆತ ಬಿಳಿಯ ಸ್ಪೋರ್ಟ್ಸ್ ಬೂಟುಗಳನ್ನು ಧರಿಸಿದ್ದಾನೆ.ಅವನ ಮುಂದಿರುವ ಬಲಗಾಲು ನೇರವಾಗಿದೆ ಮತ್ತು ಹಿಂದಿರುವ ಎಡಗಾಲು ಬಾಗಿದೆ.ಆತ ಮೋರೆ ಸೊಟ್ಟ ಮಾಡಿದ್ದಾನೆ. ಹಿನ್ನೆಲೆಯಲ್ಲಿ ಬಿಳಿಯ ಗೂಟದ ಬೇಲಿಯಿದೆ ಮತ್ತು ಹಸಿರು ಸಸ್ಯಸಮೂಹವಿದೆ.
Pathan bowling in the nets.

ಶ್ರೀಲಂಕಾದಲ್ಲಿ ಆಗಸ್ಟ್‌ನಲ್ಲಿ ನಡೆದ 2005 ಇಂಡಿಯನ್‌ ಆಯಿಲ್‌ ಕಪ್‌ಗಾಗಿ ಪಠಾಣ್‌‌ರವರನ್ನು ODI (ಏಕ ದಿನ ಅಂತರಾಷ್ಟ್ರೀಯ ಪಂದ್ಯ) ತಂಡಕ್ಕೆ ವಾಪಾಸು ಕರೆಯಲಾಯಿತು. ಇದು ಚಾಪೆಲ್‌ರವರು ತರಬೇತುದಾರನ ಹೊಣೆ ಹೊತ್ತುಕೊಂಡ ಮೊದಲ ಸರಣಿಯಾಗಿದ್ದು, ಇದರಲ್ಲಿ ಪಠಾಣ್‌ ಎಲ್ಲ ಪಂದ್ಯಗಳಲ್ಲಿಯೂ ಆಡಿದರು ಮತ್ತು ೬ ವಿಕೆಟ್‌ಗಳನ್ನು ತೆಗೆದುಕೊಂಡರು. ಅವರು ಜಿಂಬಾಂಬ್ವೆಯಲ್ಲಿ ನಡೆದ ವಿಡಿಯೋಕಾನ್‌ ತ್ರಿಕೋನ ಸರಣಿಯಲ್ಲಿ, ನಾಲ್ಕು ಪಂದ್ಯಗಳಲ್ಲಿ ೧೬.೧ಕ್ಕೆ ೧೦ ವಿಕೆಟ್‌ಗಳನ್ನು ಗಳಿಸುವ ಮತ್ತು ಒಂದು ಅರ್ಧಶತಕ ಗಳಿಸುವುದರ ಮೂಲಕ ಮತ್ತೆ ಅಗ್ರಸ್ಥಾನಕ್ಕೆ ಬರುವ ಸೂಚನೆ ನೀಡಿದರು. ಇದು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಅವರ ODI ವೃತ್ತಿ ಜೀವನ ಸರ್ವ ಶ್ರೇಷ್ಠ ೫/೨೭ ಪ್ರದರ್ಶನ ಒಳಗೊಂಡಿದೆ.[೧೦][೧೧][೧೪] ಆನಂತರದಲ್ಲಿ, ಭಾರತ ಜಿಂಬಾವ್ವೆ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ೨-೦ ಅಂತರದಲ್ಲಿ ವಿಜಯಿಯಾದಾಗ ಅವರು ವಿಕೆಟ್-ಪಡೆಯುವ ಪ್ರಮುಖರಲ್ಲಿ ಒಬ್ಬರಾದರು. ಬೂಲಾವಾಯೊನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ, ಪಂದ್ಯಶ್ರೇಷ್ಠ ಪ್ರದರ್ಶನ ಕೊಟ್ಟ ಪಠಾಣ್‌ರವರು ೫/೫೮ ಮತ್ತು ೪/೫೩ ಜೊತೆಗೆ ೫೨ ರನ್‌ಗಳನ್ನೂ ಗಳಿಸಿ ಭಾರತ ಇನ್ನಿಂಗ್ಸ್‌ ಗೆಲುವು ಸಾಧಿಸಲು ಸಹಾಯ ಮಾಡಿದರು. ಇದಾದ ನಂತರ ಅವರು ಆಕರ್ಷಣೀಯ ೭/೫೯ ಗಳಿಸಿದರು, ಇದು ಇವರ ಟೆಸ್ಟ್‌ ವೃತ್ತಿ ಜೀವನದ ಶ್ರೇಷ್ಠ ಗಳಿಕೆ, ಮತ್ತು ಹರಾರೆಯಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ೫/೬೭ ಗಳಿಸಿದರು, ಇದು ಹತ್ತು-ವಿಕೆಟ್‌ ಜಯ ತಂದುಕೊಟ್ಟ ಇವರ ಎರಡನೇ ಪಂದ್ಯ. ಆತ ಮತ್ತೆ ಪಂದ್ಯಶ್ರೇಷ್ಠನಾದರು, ಮತ್ತು ೧೧.೨೯ರನ್‌ಗಳಲ್ಲಿ ೨೧ ವಿಕೆಟ್‌ಗಳನ್ನು ಗಳಿಸಿ ಸರಣಿ ಶೇಷ್ಠರೂ ಆದರು. ಇದರಿಂದ, ಅನಿಲ್‌ ಕುಂಬ್ಳೆ ಮತ್ತು ಜಾನಿ ಬ್ರಿಗ್ಸ್‌ ನಂತರ ಎರಡು-ಪಂದ್ಯದ ಸರಣಿಯಲ್ಲಿ ೨೧ ವಿಕೆಟ್‌ಗಳನ್ನು ಗಳಿಸಿದ ಮೂರನೇ ಬೌಲರ್‌ ಆದರು.[೮][೨೨][೨೩][೨೬] ಇನ್ನು ಭಾರತದ ತಂಡವು ಹಿಂತಿರುಗಿದಾಗ, ೨೦೦೫ರ ಸರಣಿಯಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ ವಿರುದ್ಧ ನಿಯಮಿತ ಓವರ್‌ಗಳ ಚಾಲೆಂಜರ್‌ ಸರಣಿಯಲ್ಲಿ ಪಠಾಣ್‌ರನ್ನು ಪ್ರಾರಂಭದ ಆಟಗಾರನಾಗಿ ಉಪಯೋಗಿಸುವ ಪ್ರಯೋಗವನ್ನು ತರೆಬೇತುದಾರ ಚಾಪೆಲ್‌ ಮಾಡಿದರು. ಆನಂತರ, ನಾಗ್‌ಪೂರ್‌ನಲ್ಲಿ ನಡೆದ ಶ್ರೀಲಂಕಾದ ವಿರುದ್ಧದ ಮೊದಲನೇ ODI ಪಂದ್ಯದಲ್ಲಿ ಪಠಾಣ್‌ರನ್ನು ಬ್ಯಾಟಿಂಗ್‌ ಪಟ್ಟಿಯಲ್ಲಿ ೩ನೇ ಸ್ಥಾನದಲ್ಲಿ ಬಳಸಿಕೊಳ್ಳಲಾಯಿತು. ಇಲ್ಲಿ ಅವರು ೭೦ ಬಾಲ್‌ಗಳಿಂದ ೮೩ ರನ್‌ಗಳನ್ನು ಪಡೆದು ಭಾರತವು ೬/೩೫೦ ರನ್‌ಗಳನ್ನು ಪೇರಿಸಲು ಸಹಾಯ ಮಾಡಿದರು.[೧೦] ಮೊಹಾಲಿ ಮತ್ತು ಬರೋಡಾದಲ್ಲಿ ಕ್ರಮವಾಗಿ ೪/೩೭ ಮತ್ತು ೩/೩೮ ವಿಕೇಟ್ ಗಳಿಸಿ ಎರಡು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗಳಿಸಿದರು. ಆ ಸರಣಿಯಲ್ಲಿ ೨೫.೬ಕ್ಕೆ ಹತ್ತು ವಿಕೆಟ್‌ಗಳನ್ನು ಗಳಿಸಿದರು.[೧೪] ಬೆಂಗಳೂರ‍್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ೩/೨೩ ಮತ್ತು ೩೭ ರನ್‌ಗಳನ್ನು ಗಳಿಸಿ ಪಂದ್ಯ ಶ್ರೇಷ್ಠರಾದರು, ತಮ್ಮ ಉತ್ಕೃಷ್ಟ ODI ಪ್ರದರ್ಶನವನ್ನು ಮುಂದುವರೆಸಿದರು.[೧೧] ಶ್ರೀಲಂಕಾದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎರಡು ಡಕ್‌ಗಳನ್ನು ಗಳಿಸಿದ ನಂತರ, ವೀರೇಂದ್ರ ಸೆಹವಾಗ್ ಅನಾರೋಗ್ಯದಿಂದ ಹೊರಗುಳಿದ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಪಠಾಣ್‌ರಿಗೆ ಆರಂಭಿಕ ಆಟಗಾರನಾಗಿ ಭಡ್ತಿ ನೀಡಲಾಯಿತು. ಗೆಲುವಿನ ಗುರಿ ತಲುಪಲು ಸಹಾಯವಾಗುವಂತೆ ಪಠಾಣ್‌ ೯೩ ರನ್‌ಗಳನ್ನು ಗಳಿಸಿದರು. ಅಹಮದಾಬಾದ್‌ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ, ಅವರು ೮೨ ರನ್‌ಗಳನ್ನು ಗಳಿಸಿದರು ಮತ್ತು ವಿ.ವಿ.ಎಸ್‌. ಲಕ್ಷ್ಮಣ್‌ರ ಜೊತೆ ಶತಕದ ಜೊತೆಯಾಟ ಆಡುವ ಮೂಲಕ ಪ್ರಾರಂಭದ ಬ್ಯಾಟಿಂಗ್‌ ವೈಪಲ್ಯದಿಂದ ಭಾರತ ಚೇತರಿಸಿಕೊಳ್ಳುವಂತೆ ಮಾಡಿದರು. ಈ ಸರಣಿಯಲ್ಲಿ ೨೬ ರನ್‌ಗಳ ಸರಾಸರಿಯಲ್ಲಿ ೭ ವಿಕೆಟ್‍ಗಳನ್ನು ಪಡೆದರು ಮತ್ತು ಭಾರತವು ೨–೦ ಅಂತರದಲ್ಲಿ ಗೆದ್ದಿತು.[೮][೨೨] ಪಠಾಣ್‌ರವರು ಟೆಸ್ಟ್‌ನಲ್ಲಿ ಶತಕ ಗಳಿಸುವಲ್ಲಿ ವಿಪಲವಾಗಿದ್ದಕ್ಕೆ ಬೇಸರವಾಗಿದೆ ಎಂದು ನಂತರ ಒಪ್ಪಿಕೊಂಡರು.[೨೭] ೨೦೦೫ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಠಾಣ್‌ರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ A-ದರ್ಜೆ ಗುತ್ತಿಗೆಯ ಆಟಗಾರರಾಗಿ ಬಡ್ತಿ ನೀಡಿತು.[೨೮] ೨೦೦೬ರಲ್ಲಿ ಪಾಕಿಸ್ತಾನದ ಟೆಸ್ಟ್‌ ಟೂರ್‌ನೊಂದಿಗೆ ಪಠಾಣ್‌ರವರು ಕಠಿಣ ಹೊಸವರ್ಷವನ್ನು ಪ್ರಾರಂಭಿಸಿದರು. ಲಾಹೋರ್‌ ಮತ್ತು ಫೈಸಲಾಬಾದ್‌ನಲ್ಲಿ ನಡೆದ ಮೊದಲ ಎರಡು ಟೆಸ್ಟ್‌ ಪಂದ್ಯಗಳಲ್ಲಿ, ಪಾಕಿಸ್ತಾನದ ಬ್ಯಾತ್ಸ್‌ಮನ್‌ಗಳ ವಿರುದ್ಧ ಸಮತಟ್ಟಾದ ಅಂಕಣದಲ್ಲಿ ಆಡಿದ ಪಂದ್ಯಗಳಲ್ಲಿ ಯಶಸ್ಸು ಕಾಣಲಿಲ್ಲ, ಆ ಪಂದ್ಯಗಳಲ್ಲಿ ೩೧೯ ರನ್‍ಗಳನ್ನು ಕೊಟ್ಟು ಎರಡು ವಿಕೆಟ್‍ಗಳನ್ನು ಗಳಿಸಿದರು. ಆದಾಗ್ಯೂ, ಫೈಸಲಾಬಾದ್‌ನಲ್ಲಿ ಅಲ್ಲಿನ ಉತ್ತಮ ಬ್ಯಾಟಿಂಗ್‌ಗೆ ಅನಕೂಲ ವಾತಾವರಣ ಬಳಸಿಕೊಂಡು, ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿಯೊಂದಿಗಿನ ಜೊತೆಯಾಟದ ದ್ವಿಶತಕದಲ್ಲಿ, ೯೦ ರನ್‌ಗಳನ್ನು ಗಳಿಸಿದರು. ಕರಾಚಿಯಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಪಠಾಣ್‌ರವರು ಬೌಲಿಂಗ್‌ನಲ್ಲಿ ಯಶಸ್ಸು ಗಳಿಸಿದರು. ಟೆಸ್ಟ್‌ ಪಂದ್ಯದಲ್ಲಿ, ಮೊದಲನೇ ಓವರ್‌ನಲ್ಲಿಯೆ ಹ್ಯಾಟ್ರಿಕ್‌ ಪಡೆದ ಮೊದಲ ಆಟಗಾರರಾದರು ಮತ್ತು ವಿದೇಶಿ ನೆಲದಲ್ಲಿ ಆಡಿದ ಟೆಸ್ಟ್‌ನಲ್ಲಿ ಹ್ಯಾಟ್ರಿಕ್‌ ಪಡೆದ ಮೊದಲ ಭಾರತೀಯ ಆಟಗಾರರಾದರು.[೨೯] ಬ್ಯಾಟ್ಸ್‌ಮನ್‌ಗಳು ಔಟ್ ಆದ ಸರಾಸರಿಯನ್ನು ನೋಡಿದಾಗಲೂ ಇದು ಅತ್ಯಂತ ಹೆಚ್ಚಿನದಾಗಿದೆ (೧೩೦.೧೮: ಸಲ್ಮಾನ್ ಭಟ್ ೩೪.೨೭, ಯೂನಿಸ್ ಖಾನ್ ೪೬.೦೪, ಮಹಮ್ಮದ್ ಯೂಸುಫ್ ೪೯.೮೬)[೨೯] ಆ ಆಟವನ್ನು ೫/೬೧ ರ ಆಕರ್ಷಕ ಬಾಲಿಂಗ್ ಪ್ರದರ್ಶನದೊಂದಿಗೆ ಮುಗಿಸಿದರು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ದುರ್ಬಲ ಬೌಲಿಂಗ್‌ ಮಾಡಿದರು, ಪಾಕಿಸ್ತಾನ ಭಾರತ ತಲುಪಲಾರದ ಗುರಿಯನ್ನು ಪೇರಿಸುವುದಕ್ಕೆ ಸರಿಯಾಗಿ ೧ ವಿಕೆಟ್‌ ಗಳಿಸಿ ೧೦೬ ರನ್‌ಗಳನ್ನು ನೀಡಿದರು.[೮] ಈ ಟೆಸ್ಟ್‌ ಪಂದ್ಯಗಳ ಹಿನ್ನಡೆಯ ನಡುವೆಯೂ, ಪಠಾಣ್‌ ODIನಲ್ಲಿ ತಮ್ಮ ಪ್ರಬಲ ಆಟವನ್ನು ಮುಂದುವರೆಸಿದರು, ಮುಂದಿನ ಮೂರು ಪಂದ್ಯಗಳಲ್ಲಿ ಸತತ ಮೂರು ಬಾರಿ ಮೂರು ವಿಕೆ‌ಟ್‌ಗಳನ್ನು ಗಳಿಸುವ ಮುನ್ನ ಪೆಶಾವರ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಮೊದಲ ODIನ ಮೇಲ್ಪಂಕ್ತಿಯಲ್ಲಿ ೬೫ ರನ್‌ಗಳನ್ನು ಗಳಿಸಿದರು. ಇದು ರಾವಲ್‍ಪಿಂಡಿಯಲ್ಲಿ ೪೩ ರನ್‌ಗಳಿಗೆ ೩ ವಿಕೆಟ್‌ಗಳನ್ನು ಪಡೆದ ಆಕರ್ಷಕ ಆಟವನ್ನು ಒಳಗೊಂಡಿತ್ತು, ಸರಣಿಗೆ ೧೮.೮೮ರಲ್ಲಿ ೯ ವಿಕೆಟ್‌ಗಳನ್ನು ಗಳಿಸಿದರು.[೧೦][೧೧][೧೪] ಭಾರತಕ್ಕೆ ವಾಪಾಸಾದ ನಂತರ, ಪಠಾಣ್ ಇಂಗ್ಲೆಂಡ್‌ ವಿರುದ್ಧ ನಿರಾತಂಕ ಪ್ರದರ್ಶನ ನೀಡಿದರು. ೩೯.೩೭ ಸರಾಸರಿ ರನ್‌ಗಳಿಗೆ ೮ ವಿಕೆಟ್‍ಗಳನ್ನು ಪಡೆದರು ಮತ್ತು ಮೂರು ಟೆಸ್ಟ್‌ಗಳಲ್ಲಿ ಸರಾಸರಿ ೨೪.೨ರನ್‌ಗಳಂತೆ ೧೨೧ ರನ್‌ಗಳನ್ನು ಗಳಿಸಿದರು.[೨೨] ಮತ್ತೆ ಆತನ ಏಕದಿನ ಆಟದ ಲಹರಿಗೆ ಯಾವುದೇ ಭಂಗವಿರಲಿಲ್ಲ. ಗೋವಾದಲ್ಲಿ ಪೇರಿಸಿದ ೪/೫೧ ಸೇರಿ ೧೫.೬೩ಕ್ಕೆ ೧೧ ವಿಕೆಟ್‌ಗಳನ್ನು ಗಳಿಸಿದರು, ಮತ್ತು ೧೨೩ ರನ್‌ಗಳನ್ನು ಪಡೆಯುವ ಮೂಲಕ ಭಾರತ ೬–೧ ಸುಲಬ ಜಯವನ್ನು ಗಳಿಸುವಂತೆ ಮಾಡಿದರು.[೧೦][೧೪]

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಕ್ಕೆ[ಬದಲಾಯಿಸಿ]

ಪಠಾಣ್‌‍ ಅವರು ಮೇ ೨೦೦೬ರಲ್ಲಿ, ವೆಸ್ಟ್‌ಇಂಡೀಸ್ ಟೂರ್‌‍ನಲ್ಲಿ ಫಾರ್ಮ್‌ ಕಳೆದುಕೊಂಡು ಬ್ಯಾಟಿಂಗ್‌ಲ್ಲಿ ಕೇವಲ್ ೬ ರನ್‌ಗಳ ಸರಾಸರಿಯಲ್ಲಿ ೨೪ರನ್‌ಗಳನ್ನು ಹಾಗೂ ಬೌಲಿಂಗ್‌ನಲ್ಲಿ ೨೯.೮೩ರನ್‌ಗಳ ಸರಾಸರಿಯಲ್ಲಿ ೬ ವಿಕೆಟ್‌ಗಳನ್ನು ODI ಕಣದಲ್ಲಿ ಪಡೆದರು. ಮೊದಲ-ದರ್ಜೆ ಒಂದು ಪ್ರವಾಸಿ ಪಂದ್ಯದ ಕಳಪೆ ಪ್ರದರ್ಶನದ ನಂತರ ಅವರನ್ನು ಟೆಸ್ಟ್ ಟೀಮಿನಿಂದ ಕೈಬಿಡಲಾಯಿತು ಹಾಗೆಯೆ ವಿ.ಆರ್.ವಿ.ಸಿಂಗ್ ಅವರು ಥರ್ಡ್ ಫೇಸ್ ಬೌಲರ್ ಆದರು ಮತ್ತು ಆಗಿನ ನಾಯಕ ರಾಹುಲ್ ದ್ರಾವಿಡ್ ಆಟದಲ್ಲಿ ೫ ಬೌಲರ್‌ಗಳನು ಬಳಸುವ ನೀತಿ ಕೈ ಬಿಟ್ಟರು. ಪಠಾಣ ಅವರು ಒಂದು ಸಾರಿ ಮಾತ್ರ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಆಡಿದರು, ಶಾಂತಕುಮಾರನ್ ಶ್ರೀಶಾಂತ್ ಗಾಯಗೊಂಡು ಪಂದ್ಯದಿಂದ ಹೊರಗುಳಿದಾಗ. ಚಾಪಲ್ ಅವರ ಹೇಳಿಕೆಯ ಪ್ರಕಾರ, ಪಠಾಣ ಅವರು ಮಿತಿಮೀರಿದ ಶ್ರಮದಿಂದ ಆಯಾಸಗೊಂಡಿದ್ದರು ಆದರೆ ಅವರಿಗೆ ಪಠಾಣ್ "ತಮ್ಮ ಕುಸಿತದಿಂದ ಚೇತರಿಸಿಕೊಳ್ಳುತ್ತಾರೆ ಮತ್ತು ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ" ಎಂಬ ಕುರಿತು ವಿಶ್ವಾಸವಿತ್ತು. ಏಕೆಂದರೆ ಪಠಾಣ ಅವರು ಸಾಧನೆ ಮಾಡುವ ಯುವಕ ಮತ್ತು ಕಲಿಯುತ್ತಿದ್ದಾರೆ.[೩೦] ಭಾರತದ ಹಿಂದಿನ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಪಠಾಣ ಅವರ ಕುಗ್ಗುತ್ತಿರುವ ಬಾಲಿಂಗ್‌ ವೇಗದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು ಹಾಗೂ ಪಠಾಣ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗಲು ಅವರ ಬಾಲಿಂಗ್‌ನಲ್ಲಿ ’ಸ್ವಿಂಗ್’ ಇರುವುದು ಮುಖ್ಯವಾಗಿದೆ ಎಂದು ಹೇಳಿದ್ದರು.[೩೧] ಇವೆಲ್ಲ ಆತಂಕಗಳು ಅಗತ್ಯಕ್ಕಿಂತ ಹೆಚ್ಚಿಗೆ ೨೦೦೬ರ ಕೊನೆಯಲ್ಲಿಯೂ ಮುಂದುವೆರೆದವು. 2006 ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ನಡೆಯುತ್ತಿರುವಾಗ ODI ಪಂದ್ಯಗಳಿಂದ ಪ್ರಾರಂಭಿಕ ಬೌಲರ್ ಸ್ಥಾನದಿಂದ ಹಿಂಬಡ್ತಿ ನೀಡಲಾಯಿತು. ಇದರಿಂದಾಗಿ ಅವರ ಆಟದ ಕುರಿತಂತೆ ಕಳವಳಗಳು ಇನ್ನೂ ಹೆಚ್ಚಿದವು. ನಂತರ ಕೆಲವು ಪಂದ್ಯಗಳಿಂದ ಹೊರಗಿಡಲಾಯಿತು ಮತ್ತು ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ODI ಪ್ರವಾಸದ ಪಂದ್ಯಗಳಲ್ಲಿ ಅವರ ಹಾಜರಿ ವಿರಳವಾಯಿತು.[೧೦][೧೪] ಮೇ ೨೦೦೬ ರ ವೆಸ್ಟ್ ಇಂಡಿಸ್ ಪ್ರವಾಸದ ವೆರೆಗೆ ಪಠಾಣ ಅವರು ಪಡೆವ ವಿಕೆಟ್ ಸರಾಸರಿ ೪೧.೩೩ ಕ್ಕೆ ಸೀಮಿತವಾಗಿತ್ತು. ಹಿಂದಿನ ವರ್ಷ ಈ ಪಟ್ಟಿಯಲ್ಲಿ ನಾಮಾಂಕಿತರಾಗಿದ್ದು ನಂತರದಲ್ಲಿ ಅವರು ಐಸಿಸಿಯ ಟಾಂಪ್‌ ೧೦ ಬೌಲಿಂಗ್‌ ಶ್ರೇಣಿಯಿಂದ ಮತ್ತು ಟಾಪ್‌ ೫ಆಲ್‌ರೌಂಡರ‍್ ಶ್ರೇಣಿಯಿಂದ ಹೊರಬಿದ್ದರು. ಹಾಗಿದ್ದಾಗಿಯೂ, ಭಾರತ ತಂಡದ ನಾಯಕರಾದ ರಾಹುಲ್ ದ್ರಾವಿಡ್ ಅವರು ಪಠಾಣ್ ಅವರ ಉಜ್ವಲ ಭವಿಷ್ಯದ ಬಗ್ಗೆ ಆಶಾವಾದದ ದೃಷ್ಟಿ ಉಳಿಸಿಕೊಂಡು, "ಇರ್ಫಾನ್ ಅವರು ಎಷ್ಟು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎನ್ನುವುದು ಅವರು ಪಂದ್ಯ ವಿಜೇತರು ಎನ್ನುವುದರ ಬಗ್ಗೆ ನಮಗೆ ಇರುವ ಪುರಾವೆಯಾಗಿದೆ" ಎಂದು ಹೇಳಿಕೆ ನೀಡಿದ್ದಾರೆ. ಅವರು ಬೇಗ ವಿಕೆಟ್ ಪಡೆಯುತ್ತಾರೆ, ಬ್ಯಾಟ್ ಮೂಲಕವೂ ಕೊಡುಗೆಯನ್ನು ನೀಡುತ್ತಾರೆ, ಮತ್ತು ಕ್ಷೇತ್ರ ರಕ್ಷಣೆಯಲ್ಲಿ ಕೂಡ ಉತ್ತಮವಾಗಿದ್ದಾರೆ.[೩೨] ಪೋಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಮೊದಲನೆ-ದರ್ಜೆಯ ಅಭ್ಯಾಸ-ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ, ಹಲವಾರು ಮೇಲ್ಮಟ್ಟದ ವಿಶೇಷ ಬ್ಯಾಟ್ಸ್‌ಮನ್‌ಗಳು ಅಲ್ಲಿನ ಪುಟಿದೇಳುವ ಕ್ಷೇತ್ರದಲ್ಲಿ ಆಡಲು ವಿಫಲಗೊಂಡಾಗ, ಅತ್ಯಂತ ಹೆಚ್ಚಿನ ರನ್ ಗಳಿಸಿದ್ದರೂ ಕೂಡ, ಅವರು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟರು. ಅವರು ಚಾಪೆಲ್ ಅವರ ತರಬೇತಿಯಲ್ಲಿ ೩೫ಕ್ಕೆ ೫೬೦ ರನ್‌ಗಳನ್ನು ಮಾಡಿದ್ದರೂ ಸಹ ಅವರ ಪ್ರಥಮ ಜವಾಬ್ದಾರಿಯಾದ ಬೌಲಿಂಗ್ ನಿರಂತರವಾಗಿ ಇಳಿಯುತ್ತಿರುವುದನ್ನು ಅವರು ಗುರುತಿಸಿದ್ದರು.[೩೩][೩೪] ಆ ನಂತರದ ಪ್ರವಾಸದಲ್ಲಿ ಒಂದು ಪಂದ್ಯದಲ್ಲಿ ೧೧ ಓವರ್ ಗೆ ೭೪ ರನ್ ನೀಡಿ ಒಂದು ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ನಂತರ, ಪಠಾಣ್ ಪ್ರವಾಸದ ಸಮಯದಲ್ಲಿ ಬಿಸಿಸಿಐನಿಂದ ಮನೆಗೆ ಕಳುಹಿಸಲ್ಪಟ್ಟ ಮೊದಲ ಆಟಗಾರನಾದರು. ನಂತರದಲ್ಲಿ ಕಿರಣ್ ಮೊರೆ ಅವರಿಂದ ಭಹಿರಂಗಗೊಂಡಿದ್ದೆಂದರೆ, ಪಠಾಣ್ ಅವರು ಕೊನೆಯ ಟೆಸ್ಟ್‌ಗಳನ್ನು ಬದಿಯ ಸಾಲಿನಲ್ಲಿ ಕುಳಿತು ನೋಡುವುದರ ಬದಲು ಬರೋಡಾಗಾಗಿ ರಣಜಿ ಟ್ರೋಫಿಯ ಕೊನೆಯ ಎರಡು ಪಂದ್ಯಗಳನ್ನು ಆಡಬಹುದು ಮತ್ತು ಆ ಮೂಲಕ ತಾವು ಕಳೆದುಕೊಂಡ ಫಾರ್ಮ್‌ ಅನ್ನು ಮತ್ತೆ ಮರಳಿಪಡೆಯಲು ಪ್ರಯತ್ನಿಸಬಹುದು ಎಂಬ ಪರಸ್ಪರ ಒಪ್ಪಂದವಾಗಿತ್ತು.[೩೫][೩೬] ನಂತರದಲ್ಲಿ ಅವರು ೮೨ ರನ್‌ಗಳನ್ನು ಗಳಿಸಿ ಉತ್ತರ ಪ್ರದೇಶವನ್ನು ಸೋಲಿಸಿ ಬರೋಡಾವನ್ನು ಸೆಮಿ‌ಫೈನಲ್‌ಗೆ ಕೊಂಡೊಯ್ಯಲು ಸಹಾಯ ಮಾಡಿದರು, ಆದರೆ ಅವರ ಬೌಲಿಂಗ್ ಮಾತ್ರ ಅಪರಿಣಾಮಕಾರಿಯಾಗಿಯೇ ಉಳಿಯಿತು.[೩೬] ಭಾರತದ ಮಾಜೀ ನಾಯಕ ಸುನಿಲ್ ಗವಾಸ್ಕರ್ ಅವರು ಪಠಾಣ ಅವರ ಆ ಪರಿಸ್ಥಿತಿಗೆ ನಿರ್ವಹಣೆಯಲ್ಲಿನ ದೋಷವೇ ಕಾರಣ ಎಂದು ಹೇಳಿದ್ದಾರೆ, ಅಲ್ಲದೇ ಅವರನ್ನು ಆಟದಿಂದ ಹೊರಹಾಕಿದ್ದು ಪರೋಕ್ಷವಾಗಿ ಒಂದು ಅನೈತಿಕ ಘಟನೆಯಿರಬಹುದು ಎಂದು ಹೇಳಿದ್ದಾರೆ.[೩೭] ಪ್ರಾರಂಭದಲ್ಲಿ ಅತಿಥೇಯ ಭಾರತ ವೆಸ್ಟ್ ಇಂಡಿಸ್ ವಿರುದ್ಧ ಆಡಿದ ODI ಸರಣಿಯಲ್ಲಿ ಪಠಾಣ್ ಅವರನ್ನು ಕೈಬಿಡಲಾಯಿತಾದರೂ, ಮುಂಬಯಿ ವಿರುದ್ಧದ ರಣಜಿ ಟ್ರೋಫಿ ಸೆಮಿ ಫೈನಲ್‌ನಲ್ಲಿ ೭ ವಿಕೆಟ್ ಪಡೆದಿದ್ದರಿಂದ ಅವರ ತವರೂರಲ್ಲಿ ನಡೆದ ODI ಸರಣಿಯ ಫೈನಲ್‌ಗೆ ಇವರನ್ನು ಮತ್ತೆ ಕರೆಯಿಸಿಕೊಳ್ಳಲಾಯಿತು.[೩೮] ೭ ಓವರ್‌ಗಳಲ್ಲಿ ೧/೪೩ ಪಡೆದ ಅವರ ಆಟದ ಪ್ರದರ್ಶನವು ನೀರಸವಾಗಿತ್ತು.[೧೦][೩೯] ಆದರೂ ಆಯ್ಕೆದಾರರು 2007ರ ವರ್ಲ್ಡ್ ಕಪ್‌ ಕ್ರಿಕೆಟ್‌ಗೆ ಇವರ ಹೆಸರನ್ನು ಧೃಡಪಡಿಸಿದರು, ಆದರೆ ಇವರಿಗಾದ ಗಾಯದಿಂದ ಇವರನ್ನು ಶ್ರೀಲಂಕಾ ವಿರುದ್ಧದ ODI ಸರಣಿಯಲ್ಲಿ ಆಡದಂತೆ ತಡೆಯಲಾಯಿತು ಮತ್ತು ಫಾರ್ಮ್‌ ಅನ್ನು ಮರಳಿ ಪಡೆಯುವ ಅವರ ಅವಕಾಶವನ್ನು ಕಳೆದುಕೊಂಡರು.[೧೦][೪೦][೪೧] ಪಠಾಣ ಅವರು ವರ್ಲ್ಡ್ ಕಪ್‌[೧೦] ನಲ್ಲಿ ಒಂದು ಪಂದ್ಯವನ್ನೂ ಆಡಲಿಲ್ಲ, ಮತ್ತು ಭಾರತವು ಪ್ರಥಮ ಸುತ್ತಿನಲ್ಲಿ ಹೊರನಡೆದ ನಂತರ ಕೈಬಿಡಲಾದ ಕೆಲವು ಆಟಗಾರರಲ್ಲಿ ಪಠಾಣ್ ಅವರೂ ಒಬ್ಬರು.[೪೨] ಬಾಂಗ್ಲಾದೇಶ ಮತ್ತು ಇಂಗ್ಲೆಂಡಿನ ಪ್ರವಾಸಗಳಲ್ಲಿ ಇವರು ಯಾವುದೇ ಪಾತ್ರ ವಹಿಸಲಿಲ್ಲ.[೪೩][೪೪] ಬದಲಿಗೆ, ಆಫ್ರಿಕಾಕ್ಕೆ ಪ್ರವಾಸ ಕೈಗೊಂಡ ಭಾರತ A ತಂಡದದೊಂದಿಗೆ ಅವರನ್ನು ಕಳುಹಿಸಲಾಯಿತು.[೪೫]

ಅಂತರಾಷ್ಟ್ರೀಯ ಕ್ರಿಕೇಟ್‌ಗೆ ಮರುಪ್ರಯಾಣ[ಬದಲಾಯಿಸಿ]

ಆರಂಭಿಕ ವರ್ಲ್ಡ್ ಟ್ವೆಂಟಿ20 ಪ್ರಕಾರದ ಸರಣಿಯಲ್ಲಿ ಭಾರತದ ಹಿರಿಯ ಆಟಗಾರರ ಆಯ್ಕೆಯ ನಂತರದಲ್ಲಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅನೇಕ ಯುವ ಆಟಗಾರರಲ್ಲಿ ಪಠಾಣ್ ಕೂಡಾ ಒಬ್ಬರಾಗಿದ್ದರು[೪೬]. ಇದರ ಪರಿಣಾಮವಾಗಿ ಭಾರತವು ಪಂದ್ಯಾವಳಿಯ ಕೊನೆಯ ಘಟ್ಟವನ್ನು ತಲುಪಿತ್ತು ಮತ್ತು ಬದ್ಧ ವೈರಿಯಾದ ಪಾಕಿಸ್ತಾನವನ್ನು ಎದುರಿಸಿತ್ತು. ಪಠಾಣ್ ತಮ್ಮ ಅಚ್ಚುಕಟ್ಟಾದ ಎಸೆತಗಳ ಮೂಲಕ ೩/೧೬ ವಿಕೇಟ್ ಪಡೆದುಕೊಂಡು, ಕೇವಲ ಮೂರು ಎಸೆತಗಳ ಅಂತರದಲ್ಲಿ ಪಾಕಿಸ್ತಾನದ ನಾಯಕ ಶೊಯಬ್ ಮಲ್ಲಿಕ್ ಒಳಗೊಂಡಂತೆ,[೪೭] ಶಾಹಿದ್ ಅಫ್ರಿದಿಯನ್ನೂ ಹೊರಕಳಿಸುವುದರ ಮೂಲಕ ಪಂದ್ಯ ಪುರುಷೋತ್ತಮರಾಗಿ ಘೋಷಿಸಲ್ಪಟ್ಟರು.[೪೭] ಇದರ ಫಲವಾಗಿ ಪಠಾಣರು ODI (ಒನ್‌ಡೇ ಇಂಟರ್‌ನ್ಯಾಶನಲ್) ಟೀಮ್‌ಗೆ ಪುನಃ ಕರೆಯಲ್ಪಟ್ಟರು ಮತ್ತು ೨೦೦೭ರಲ್ಲಿ ತಮ್ಮ ತವರು ನೆಲದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನಾಡಿದರು. ಆ ಪಂದ್ಯಾವಳಿಯಲ್ಲಿ ಅವರು ೧೨ ಪಂದ್ಯಗಳನ್ನು ಆಡಿದ್ದರು, ೧೮.೭೧ರ ಸರಾಸರಿಯಲ್ಲಿ ೧೩೧ ರನ್‌ಗಳನ್ನು ಗಳಿಸಿದರು ಮತ್ತು ೪೬.೦೦ರ ಸರಾಸರಿಯಲ್ಲಿ ೧೨ ವಿಕೆಟ್‌ಗಳನ್ನು ಗಳಿಸಿದರು, ಇದು ಅವರ ಒಟ್ಟಾರೇ ವೃತ್ತಿಜೀವನದಲ್ಲಿ ಗಳಿಸಿದ ಸರಾಸರಿ ಅಂಕಿಅಂಶಗಳಿಗಿಂತ ಅತ್ಯಂತ ಕೆಟ್ಟದಾಗಿತ್ತು[೧೪]. ೨೦೦೭ ರ ಉತ್ತರಾರ್ಧದಲ್ಲಿ ಪಾಕಿಸ್ತಾನದ ವಿರುದ್ಧ ಸ್ವಂತ ನೆಲದಲ್ಲಿ ಟೆಸ್ಟ್‌ ಸರಣಿ ಆಡಲು ಭಾರತವು ಮೈದಾನದಲ್ಲಿ ಎರಡು ವೇಗದ ಮತ್ತು ಎರಡು ಸ್ಪಿನ್ ಬೌಲರ್‌ಗಳನ್ನು ಆರಿಸಿಕೊಂಡಾಗ ಅವರ ಸಹ ಆಟಗಾರರೊಬ್ಬರಿಗೆ ಗಾಯವಾಗಿದ್ದ ಕಾರಣ ಬೆಂಗಳೂರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇವರನ್ನು ಪುನಃ ಕರೆಯಲಾಯಿತು ಆದರೆ ಪಠಾಣ್ ಇದಕ್ಕೂ ಮುನ್ನ ಎರಡು ಪಂದ್ಯನ್ನು ತಪ್ಪಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಪಠಾಣ್ ಔಟ್‌ ಆಗದೇ ತಮ್ಮ ಮೊದಲ ಶತಕವನ್ನು ಸಿಕ್ಸ್ ಹೊಡೆಯುವುದರೊಂದಿಗೆ ಪೂರೈಸಿದರು, ಮತ್ತು ಅವರು ಈ ಸಾಧನೆಯನ್ನು ಮಾಡಿದಾಗ ಅವರೊಡನೆ ತಂಡದ ಕೊನೆಯ ಆಟಗಾರರಾಗಿ ಇಶಾಂತ್ ಶರ್ಮ ಆಟವಾಡುತ್ತಿದ್ದರು.[೪೮][೪೯][೫೦] ೨೦೦೭–೦೮ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಠಾಣ್ ಸ್ಥಾನ ಗಳಿಸಿದ್ದರು, ಆದರೆ ಮೊದಲ ಎರಡು ಸರಣಿಯಲ್ಲಿ ಕೇವಲ ಇಬ್ಬರು ವೇಗದ ಬೌಲರ್‌ಗಳನ್ನು ಆರಿಸಿದ್ದರಿಂದ ಇವರಿಗೆ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಪರ್ಥ್[೫೧] ನ ಚೆಂಡು ಪುಟಿದೇಳುವ WACA ಮೈದಾನದಲ್ಲಿ ಮೂರನೆಯ ಟೆಸ್ಟ್‌ ಸರಣಿಯು ನಡೆಸಲಾಗಿತ್ತು ಇಲ್ಲಿ ಎರಡನೆಯ ಸ್ಪಿನ್ನರ್ ಹರ್ಭಜನ್ ಸಿಂಗ್‌ರ ಬದಲಿಗೆ ಪಠಾಣ್ ಆಟವಾಡಿದರು.[೫೨][೫೩] ಇವರು ಕ್ರಮವಾಗಿ ೨೮ ಮತ್ತು ೪೬ ರನ್ ಗಳನ್ನು ಗಳಿಸುವುದರೊಂದಿಗೆ ಉತ್ತಮ ಬ್ಯಾಟಿಂಗ್ ಮಾಡಿದ್ದರು. ದಿನದ ಕೊನೆಯಲ್ಲಿ ಹೊಸ ಚೆಂಡಿನಿಂದ ಇತರ ಬ್ಯಾಟ್ಸ್‌ಮನ್‌ಗಳನ್ನು ರಕ್ಷಿಸಲು ರಾತ್ರಿಕಾವಲುಗಾರನಾಗಿ ಆಡಬೇಕಾದುದು ಅವರ ಎರಡನೇ ಇನ್ನಿಂಗ್ಸ್‌ನ ಸಾಧನೆಯಾಗಿತ್ತು. ಪ್ರತಿಯೊಂದು ಇನ್ನಿಂಗ್ಸ್‌ಗಳಲ್ಲೂ ಆಸ್ಟ್ರೇಲಿಯಾದ ಪ್ರಾರಂಭಿಕ ಆಟಗಾರರನ್ನು ಒಳಗೊಂಡಂತೆ ೨/೬೩ ಮತ್ತು ೩/೫೪ರಂತೆ ವಿಕೆಟ್ ಗಳಿಸುವುದರ ಮೂಲಕ ಪಠಾಣ್‌ ಚೆಂಡನ್ನು ಸ್ವಿಂಗ್‌ ಮಾಡುವ ತಮ್ಮ ಸಾಮರ್ಥ್ಯವನ್ನು ಪುನಃ ಕಂಡುಕೊಂಡರು.[೫೨] ಈ ಆಟದಲ್ಲಿ ಅವರು ಪಂದ್ಯ ಶ್ರೇಷ್ಟ ಪುರುಷ ಪ್ರಶಸ್ತಿಯಿಂದ ಗೌರವಿಸಲ್ಪಟ್ಟರು.[೮][೨೨][೨೩][೫೪] ಪರ್ಥ್‌ನಲ್ಲಿನ ಇವರ ಬ್ಯಾಟಿಂಗ್ ಪ್ರದರ್ಶನದ ನಂತರ, ಅಡಿಲೇಡ್‌ನಲ್ಲಿ ನಡೆದ ನಾಲ್ಕನೇ ಸರಣಿಯಲ್ಲಿ ಇವರಿಗೆ ವಸಿಮ್ ಜಾಫರ್ ಬದಲು ಪ್ರಾರಂಭಿಕ ಆಟಗಾರರಾಗಿ ಬಡ್ತಿ ಕೊಡಲಾಯಿತು ಮತ್ತು ಇದು ಹರ್ಭಜನ್‌‌ರನ್ನು ಐದು ಬೌಲರ್‌ಗಳ ಆಕ್ರಮಣಕ್ಕೆ ಮರಳಲು ಅನುವುಮಾಡಿಕೊಟ್ಟಿತು. ಅತ್ಯಂತ ಹೆಚ್ಚು ರನ್ನು ಗಳಿಸಿದ ಈ ಪಂದ್ಯದಲ್ಲಿ, ಪಠಾಣ್ ೩/೧೧೨ ವಿಕೆಟ್ ಪಡೆದರು, ಆದರೆ ಇವರು ಪ್ರಾರಂಭಿಕ ಆಟಗಾರನ ಜವಾಬ್ದಾರಿಯಲ್ಲಿ ತೀವ್ರ ಪ್ರಯಾಸಪಟ್ಟು ಒಮ್ಮೆ ಒಂಭತ್ತು ಮತ್ತು ಇನ್ನೊಮ್ಮೆ ಶೂನ್ಯ ಗಳಿಸಿದ್ದರು.[೮][೨೨] ಈ ಟೆಸ್ಟ್ ಸರಣಿಯಿಂದಾಗಿ, ಇವರು ODI ತಂಡದಲ್ಲಿ ಸ್ಥಾನ ಪಡೆದರು ಮತ್ತು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ೪/೪೧ ವಿಕೆಟ್ ಒಳಗೊಂಡು[೧೪],ಕಾಮನ್ ವೆಲ್ತ್ ಬ್ಯಾಂಕ್ ಟ್ರೋಫಿಯ ಎಲ್ಲ ೧೦ ಪಂದ್ಯಗಳಲ್ಲಿ ೧೯.೬೬ ಸರಾಸರಿಯಲ್ಲಿ ೧೧೮ ರನ್ ಗಳಿಸಿದರು ಮತ್ತು ೩೪.೨೭ ಸರಾಸರಿಯಲ್ಲಿ ೧೧ ವಿಕೆಟ್ ಪಡೆದರು.[೧೦] ೨೦೦೭ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವು ಫೋರ್‌ಮ್ಯಾನ್ ಅಟ್ಯಾಕ್ ತಂತ್ರ ಬಳಸಿದ್ದರಿಂದ, ಪಠಾಣ್‌ ಕೇವಲ ಎರಡನೆಯ ಟೆಸ್ಟ್‌ನಲ್ಲಿ ಮಾತ್ರ ಆಡಿದ್ದರು. ಭಾರತದ ೭೬ ರನ್ನಿನ ಮೊದಲ ಇನ್ನಿಂಗ್ಸ್‌ನಲ್ಲಿ, ಪಠಾಣ್ ಅಗ್ರ ೨೧* ರನ್ ಗಳಿಸಿದರು ಮತ್ತು ಪುನಃ ಎರಡನೆಯ ಇನ್ನಿಂಗ್ಸ್‌ನಲ್ಲಿ ಔಟಾಗದೇ ೪೩ ರನ್ ಸಂಪಾದಿಸಿದ್ದರು. ಹಾಗಿದ್ದರೂ, ಅವರು ಇನ್ನಿಂಗ್ಸ್‌ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು ಮತ್ತು ಮುಂದಿನ ಟೆಸ್ಟ್‌ನಿಂದ ಹೊರಗುಳಿಯಲ್ಪಟ್ಟರು.[೮] ದಕ್ಷಿಣ ಆಫ್ರಿಕಾ ಸರಣಿಯ ನಂತರ ಪಠಾಣ್, 2008ರ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಪಾಲ್ಗೊಂಡರು ಮತ್ತು ೨೩.೩೩[೫೫] ಸರಾಸರಿಯಲ್ಲಿ ೧೫ ವಿಕೆಟ್ ಗಳಿಸಿದರು. IPLನ ತರುವಾಯ ಪಠಾಣರು ಕಿಟ್ ಪ್ಲೈ ಕಪ್ ಮತ್ತು 2008 ರ ಏಷ್ಯಾ ಕಪ್ ನಂತಹ ಅಂತರರಾಷ್ಟ್ರೀಯ ಆಟದಲ್ಲಿ ಮುಂದುವರೆದರು, ಅವುಗಳಲ್ಲಿ ೨೮.೬೬ ಸರಾಸರಿಯಂತೆ ಒಟ್ಟೂ ಮೊತ್ತವಾದ ೮೬ ರನ್ ಹಾಗೂ ೫೧.೪೨ ಸರಾಸರಿಯಂತೆ ಏಳು ವಿಕೆಟ್ ಗಳಿಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಜೂನ್ ೨೦೦೯ ರಲ್ಲಿ ಪಠಾಣ್, ತಮ್ಮ ಕಳೆದ ಆರು ವರ್ಷಗಳ ಗೆಳತಿಯಾದ ಮತ್ತು ಆಸ್ಟ್ರೇಲಿಯಾದಲ್ಲಿರುವ ಭಾರತದ ರಾಯಭಾರಿಯ ಮಗಳಾದ ಶಿವಾಂಗಿ ದೇವ್ ಅವರನ್ನು ಮದುವೆಯಾಗುವುದಾಗಿ ತಿಳಿಸಿದರು. ಶಿವಾಂಗಿಯವರು ಆಸ್ಟ್ರೇಲಿಯಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು ನೃತ್ಯವನ್ನೂ ಕೂಡ ಕಲಿಸಿಕೊಡುತ್ತಾರೆ. ಪಠಾಣ್‌ ೨೦೦೬ರಲ್ಲಿ ಮದುವೆಯ ಬಗ್ಗೆ ಇವರಲ್ಲಿ ಪ್ರಸ್ತಾಪಿಸಿದರು.[೫೬]

#ಪ್ರಶಸ್ತಿಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
 • ೨೦೦೪ - ICC ವರ್ಷದ ಉದಯೋನ್ಮುಖ ಆಟಗಾರ
ಪೂರ್ವಾಧಿಕಾರಿ
New award
Emerging Player of the Year
೨೦೦೪
ಉತ್ತರಾಧಿಕಾರಿ
Kevin Pietersen
 1. REDIRECT Template:India Squad 2007 ICC World Twenty20

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ Cite error: Invalid <ref> tag; no text was provided for refs named bbc_youth
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ ೮.೨ ೮.೩ ೮.೪ ೮.೫ ೮.೬ ೮.೭ ೮.೮ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. ೧೦.೦೦ ೧೦.೦೧ ೧೦.೦೨ ೧೦.೦೩ ೧೦.೦೪ ೧೦.೦೫ ೧೦.೦೬ ೧೦.೦೭ ೧೦.೦೮ ೧೦.೦೯ ೧೦.೧೦ ೧೦.೧೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ೧೧.೦ ೧೧.೧ ೧೧.೨ ೧೧.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. ೧೪.೦ ೧೪.೧ ೧೪.೨ ೧೪.೩ ೧೪.೪ ೧೪.೫ ೧೪.೬ ೧೪.೭ ೧೪.೮ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. ೨೨.೦ ೨೨.೧ ೨೨.೨ ೨೨.೩ ೨೨.೪ ೨೨.೫ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. ೨೩.೦ ೨೩.೧ ೨೩.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. ೨೯.೦ ೨೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. ೩೬.೦ ೩೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. "'We picked the best possible team' - Vengsarkar". Cricinfo. ೨೦೦೮-೦೩-೨೭. Retrieved ೨೦೦೮-೦೫-೨೬.  Check date values in: |access-date=, |date= (help)
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Vasu, Anand (೨೦೦೭-೦೪-೨೦). "Tendulkar and Ganguly rested for Bangladesh one-dayers". Cricinfo. Retrieved ೨೦೦೮-೦೫-೨೮.  Check date values in: |access-date=, |date= (help)
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Premachandran, Dileep (೨೦೦೭-೦೯-೦೭). "Generation X". Cricinfo. Retrieved ೨೦೦೮-೦೫-೨೮.  Check date values in: |access-date=, |date= (help)
 47. ೪೭.೦ ೪೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Premachandran, Dileep (೨೦೦೭-೧೨-೦೯). "Ganguly and Pathan pile on the agony for Pakistan". Cricinfo. Retrieved ೨೦೦೮-೦೭-೨೧.  Check date values in: |access-date=, |date= (help)
 49. Binoy, George (೨೦೦೭-೧೨-೦೯). "Pathan proves a point". Cricinfo. Retrieved ೨೦೦೮-೦೭-೨೧.  Check date values in: |access-date=, |date= (help)
 50. "Pathan, VRV and Ishant drafted in". Cricinfo. ೨೦೦೭-೧೨-೦೫. Retrieved ೨೦೦೮-೦೭-೨೧.  Check date values in: |access-date=, |date= (help)
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. ೫೨.೦ ೫೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. "Most wickets Indian Premier League, 2007/08". Cricinfo. Retrieved ೨೦೦೮-೦೭-೨೨.  Check date values in: |access-date= (help)
 56. Thomas, Varghese. "Pathan to wed long-time girlfriend". Yahoo News. Retrieved ೨೦೦೯-೦೭-೦೧.  Text "cite web " ignored (help); Check date values in: |access-date= (help)