ವಿಷಯಕ್ಕೆ ಹೋಗು

ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಕ್ಷಣದ ಅರ್ಥ:

[ಬದಲಾಯಿಸಿ]

ಶಿಕ್ಷಣ ಎಂಬ ಪದವು ಒಂದು ಸಂಕೀರ್ಣ ಪದವಾಗಿದೆ.ಆದಾರಿಂದಲೇ ಈ ಪದಕ್ಕೆ ವಿಷಾಲವಾದ ಅರ್ಥ ಮತ್ತು ವ್ಯಾಪ್ತಿಗಳು ಹೊಂದಲ್ಪಟ್ಟೆವೆ.ಶಿಕ್ಷಣವೆಂದರೆ ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ವಿಕಾಸ ಎಂದು ಎಲ್ಲರಿಂದಲೂ ಸಮ್ಮತವಾಗಿದೆ .ಆ ಶಿಕ್ಷಣವು ಒಂದು ಅರ್ಥದಲ್ಲಿ ನೋಡಿದರೆ, ಮಾನವನ ಉಗಮದಷ್ಟೇ ಪುರಾತನವೆಂದು ತೋರಿಬರುವುದು. ನಾಗರಿಲತೆಗಳ, ಏಳು ಬೀಳುಗಳ ಜೊತೆಯಲ್ಲಿ ಶಿಕ್ಷಣವೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳುತ್ತಾ ವಿಕಾಸ ಹೊಂದಿತು.

ಶಿಕ್ಷಣದ ವ್ಯಾಖ್ಯಾನಗಳು:

[ಬದಲಾಯಿಸಿ]
- " ಶಿಕ್ಷಣವು ನಮ್ಮೆಲ್ಲ ಬಂದಗಳನ್ನು ಕಿತ್ತೊಗೆದು, ಪರಮ ಶಾಂತಿ, ಸುಖ, ಸೌರ್ಹಾದತೆಗಳನ್ನು ನೀಡುವ ಸಾಧನ.ಶಿಕ್ಷಣವು ನೀಡುವ ಸಂಪತ್ತೆಂದರೆ, ಆಂತರಿಕ ಬೆಳಕು, ಶಕ್ತಿಯೆಂದರೆ ಅದಮ್ಯ ಚೇತನ ತುಂಬಿದ ಶ್ರೇಷ್ಠತೆಯ ಪ್ರೀತಿ, ಸತ್ಯದ ಸರ್ವಾದಾ ಅಭಿವ್ಯಕ್ತಿ".
                                                        - ರವೀಂದ್ರನಾಥ್ ಟಾಗೋರ್ .
 -“ ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ”.
                                          - ಡಾ.ರಾಧಾಕೃಷ್ಣಾನ್.

ಶೈಕ್ಷಣಿಕ ತಂತ್ರಜ್ಞಾನದ ಅರ್ಥ:

[ಬದಲಾಯಿಸಿ]

ಶೈಕ್ಷಣಿಕ ತಂತ್ರಜ್ಞಾನದ ಎಂಬ ಪದವು ಎರಡು ಪದಗಳಿಂದ ಕೂಡಿದೆ. 'ಶಿಕ್ಷಣ' ಮತ್ತು 'ತಂತ್ರಜ್ಞಾನ'. ಶಿಕ್ಷಣ ಎಂಬ ಶಬ್ದವು ಅತಿ ವಿಸ್ತಾರವಾದ ಅರ್ಥವನ್ನು ಹೊಂದಿದ್ದು ಅನೇಕ ಶಿಕ್ಷಣ ತಜ್ಞರಿಂದ ಹಾಗೂ ತತ್ವಜ್ಞಾನಿಗಳಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಶಿಕ್ಷಣವನ್ನು ವ್ಯಕ್ತಿಯ ಹಾಗೂ ಸಾಮಾಜಿಕ ಜೀವನದ ಬುದ್ಧಿಪೂರ್ವಕ ವಾಗಿದೆ ಸ್ವಯಂ ಉತ್ತಮತೆಯನ್ನು ಹೆಚ್ಚಿಸುವಂತಹ ಒಂದು ಪ್ರಕ್ರಿಯೆ ಎಂದು ಹೇಳಬಹುದು. ಆದ್ದರಿಂದ ಶಿಕ್ಷಣದ ಮುಖ್ಯ ಉದ್ದೇಶವೆಂದರೆ, ,ವ್ಯಕ್ತಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಕಾಸ ಉಂಟುಮಾಡಿಕೊಳ್ಳಲು ಅವನನ್ನು ಸಶಕ್ತನಾಗಿ ಮಾಡುವುದು. ಶಿಕ್ಷಣ ಮತ್ತು ತಂತ್ರಜ್ಞಾನ ಇವುಗಳನ್ನು ಬೇರ್ಪಡಿಸುವುದು ಇನ್ನೊಂದು ಅಂಶವೆಂದರೆ ತಂತ್ರಜ್ಞಾನದಲ್ಲಿರುವ ಉದ್ದೇಶ ಗುಣ.ತಂತ್ರಜ್ಞಾನವು ಕಾರ್ಯ ಅಥವಾ ಉದ್ದೇಶಗಳು ನಿರ್ದಿಷ್ಟ ವ್ಯಾಪ್ತಿಗಳಾಗಾಗಿ ತಾಂತ್ರಿಕ ವ್ಯವಸ್ಥೆಯನ್ನು ಊಹಿಸವ ಹಾಗೂ ಅಭಿವೃದ್ಧಿಸುವ ಪ್ರಕ್ರಿಯೆ ಪ್ರಕ್ರಿಯೆ ಅಥವಾ ಪದ್ದತಿಯಾಗಿದೆ. ಇದು ಶಿಕ್ಷಣದಂತೆಯೇ ಬದಲಾವಣೆ ಹೊಂದಲಿದ್ದು ಮಾನವನನ್ನು ತನ್ನ ಸುತ್ತಲಿನ ಪರಿಸರವನ್ನು ನಿಯಂತ್ರಿಸಲು ಹಾಗೂ ಪ್ರಕೃತಿಯನ್ನು ಪರಿಶೋಧಿಸಲು ಶಕ್ತ್ಯ ಹಾಗೂ ಸಮರ್ಥನಾಗಿ ಮಾಡುತ್ತದೆ. ಉದಾಹರಣೆಗೆ: ಕೃಷಿ ತಂತ್ರಜ್ಞಾನವನ್ನು ನೋಡಿದಾಗ ಕೇವಲ ಮರದ ನೇಗಿಲು ಹಾಗೂ ಎರಡು ಎರಡು ಎತ್ತುಗಳಿಂದ ಪ್ರಾರಂಭವಾದ ಈ ಜ್ಞಾನವು ಕ್ರಮೇಣ ಹೇಗೆ ಬದಲಾವಣೆ ಹೊಂದಿ ಆಧುನಿಕತೆಯತ್ತ ಬಂದಿದೆ ಎಂದು ಕಂಡುಬರುತ್ತದೆ. ಅದೇ ರೀತಿಯಲ್ಲಿ ಯುದ್ಧ, ಮುದ್ರಣ, ಸಂಪರ್ಕ ಇತ್ಯಾದಿ ಮಾದ್ಯಮಗಳು ಕ್ರಮೇಣ ನಿರ್ದಿಷ್ಟವಾದ ಬದಲಾವಣೆಯನ್ನು ಹೇಗೆ ಹೊಂದಿವೆ ಎಂಬುದನ್ನು ಅವಲೋಕಿಸಬಹುದಾಗಿದೆ. ಹೀಗೆ ಶಿಕ್ಷಣ ಮತ್ತು ತಂತ್ರಜ್ಞಾನ ಇವುಗಳನ್ನು ಸೂಕ್ತವಾಗಿ ಸಮ್ಮಿಳಿಸಿ ಮಗುವಿನ ಸರ್ವಾಂಗ ಪ್ರಗತಿಯತ್ತ ಶ್ರಮಿಸುವಂತದಾಗಿದೆ. ಇದಲ್ಲದೆ ದೇಶದ ಪ್ರಗತಿ ಮತ್ತು ಉನ್ನತಿಗಾಗಿ ಶಿಕ್ಷಣ ರಂಗದಲ್ಲಿ ಹೊಸ ಪ್ರಯೋಗಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಇಂದಿನ ದಿನಗಳಲ್ಲಿ ಶಿಕ್ಷಣ ರೊಗದಲ್ಲಿ ಹೊಸ ಪ್ರಯೋಗಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಇಂದಿನ ದಿನಗಳಲ್ಲಿ ಶೈಕ್ಷಣಿಕ ತಂತ್ರಜ್ಞಾನವನ್ನು ನಮ್ಮ ಭಾರತದಲ್ಲಿ ತನ್ನ ತಳಪಾಯವ ನ್ನು ಭದ್ರಪಡಿಸಿ ಅರ್ಥವತ್ತಾಗಿ ಮುನ್ನಡೆಯುತ್ತಲಿದೆ.

ಶೈಕ್ಷಣಿಕ ತಂತ್ರಜ್ಞಾನದ ವ್ಯಾಖ್ಯಾನಗಳು:

[ಬದಲಾಯಿಸಿ]

ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಮಂತ್ರಾಲಯ ಬ್ರಿಟನ್ನ (೧೯೭೧) ಇವರ ಅಭಿಪ್ರಾಯದಂತೆ-

 “ಶೈಕ್ಷಣಿಕ ತಂತ್ರಜ್ಞಾನವು ಮಾನವ ಕಲಿಕೆಯ ಪ್ರಕ್ರಿಯೆಯನ್ನು ಸುಧಾರಿಸಲು ವ್ಯವಸ್ಥೆಗಳು ಸಾಧನಗಳು ಹಾಗೂ ತಂತ್ರಗಳ ಅಭಿವೃದ್ಧಿ  ಹಾಗೂ ಅವುಗಳ ಪರಿಣಾಮಕಾರಿಯಾದ ಅನ್ವಯಗಳನ್ನು ಒಳಗೊಂಡಿದೆ".

ಶಿವ್. ಕೆ. ಮಿತ್ರಾ ಅವರು ಅಭಿಪ್ರಾಯ ಪಡುವಂತೆ-

 “ಶೈಕ್ಷಣಿಕ ತಂತ್ರಜ್ಞಾನವು ಶೈಕ್ಷಣಿಕ ಗುರಿ ಮತ್ತು ಉದ್ದೇಶಗಳನ್ನು ಸಾಧಿಸುವುದಕ್ಕಾಗಿ ಅನ್ವಯಿಸಿಕೊಳ್ಳುವ ತಾಂತ್ರಿಕತೆ ಮತ್ತು ನವೀನ ಪದ್ದತಿಗಳನ್ನೊಳಗೊಂಡ ವಿಜ್ಞಾನವಾಗಿದೆ".

ಶೈಕ್ಷಣಿಕ ತಂತ್ರಜ್ಞಾನದ ಉದ್ದೇಶಗಳು:

[ಬದಲಾಯಿಸಿ]

ಶೈಕ್ಷಣಿಕ ಉದ್ದೇಷಗಳು ಶಿಕ್ಷಣದ ಗುರಿಗಳನ್ನು ಸಾಧಿಸುವದಕ್ಕಾಗಿ ರೂಪಿಸಲ್ಪಡುತ್ತವೆ, ಸಮಾಜದ ಬೇಕು ಬೇಡಿಕೆಗಳನ್ನು ಅತ್ಯಂತ ಸಮಂಜಸವಾದ ರೀತಿಯಲ್ಲಿ ಪೂರೈಸುವುದೇ ಶಿಕ್ಷಣದ ಗುರಿಗಳಾಗಿವೆ. ಇವುಗಳನ್ನು ಎರಡು ವಿಧದಲ್ಲಿ ವಿಂಗಡಿಸಿ ವಿವರಿಸಬಹುದು.

       (ಅ) ವಿಶಾಲತಾಭಾವದ ಉದ್ದೇಶಗಳು
       (ಆ) ಸೂಕ್ಷ್ಮತಾಭಾವದ ಉದ್ದೇಶಗಳು

ವಿಶಾಲತಾಭಾವದ ಉದ್ದೇಶಗಳು:

[ಬದಲಾಯಿಸಿ]
  1. ಶಿಕ್ಷಣದ ಮುಖ್ಯ ಧ್ಯೇಯಗಳನ್ನು ಮತ್ತು ವಿಶಾಭಾವದ ಗುರಿಗಳನ್ನು ಸಾಕಾರಗೊಳಿಸಲು ಸಾಕಾರಗೊಳಿಸಲು ಸಹಯಕಾರಿಯಾಗುವುದು.
  2. ಸಮಾಜದ ಶೈಕ್ಷಣಿಕ ಅವಶ್ಯಕತೆಗಳನ್ನು ಬೇಕುಬೇಡಿಕೆಗಳನ್ನು ಸಮಂಜಸವಾಗಿ ಪೂರೈಸಿಕೊಳ್ಳ್ಲು ಪೂರಕವಾಗಿದೆ.
  3. ಪ್ರಸ್ತುತ ಸಮಯಕ್ಕೆ ತಕ್ಕಂತೆ ಪಠ್ಯಕ್ರಮ ರಚನೆ ಅದರಲ್ಲಿ ವೈಜ್ಞಾನಿಕ ವಿಷುಯಗಳ ಸಮಯೋಚಿತ ಜೋಡಣೆ, ಪ್ರಾಯೋಗಿಕ ಅನುಭವ ಇವುಗಳನ್ನು ಅತ್ಯಂತ ವಸ್ನಿಷ್ಠ್ವವಾಗಿ ಪೂರೈಸಿಕ್ಕೊಳ್ಳುವಂತೆ ಮಾಡುವುದು .
  4. ಮಾನವತಾ ಹಾಗೂ ಸ್ವಾಭಾವಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ತನ್ಮೂಲಕ ಶೈಕ್ಷಣಿಕ ವಿಶಿಷ್ಟ್ ಧ್ಯೇಯಗಳ ಸಾಧಿಸುವಿಕೆಯ ಯುಕ್ತಿಯನ್ನು ಕಂಡುಕೊಳ್ಳುವಲ್ಲಿ ಸಹಾಯವಾಗಲಿದೆ .
  5. ಶಿಕ್ಷಣದ ಸಾರ್ವತ್ರೀಕರಣಕ್ಕೆ ಪೂರಕವಾದ ವಿಧಾನಗಳನ್ನು ರೂಪಿಸಿ ಸಮಾನತೆ, ಏಕತೆಗಳನ್ನು ಬಿಂಬಿಸುವಂತೆ ಮಾಡುವುದು.
  6. ವಿವಿಧ ಶೈಕ್ಷಣಿಕ ಯೋಜನೆಗಳು ಕಾರ್ಯಗತವಾಗುವಂತೆ ಪ್ರೇರೇಪಣೆ ನೀಡುವುದು.
  7. ಶಿಕ್ಷಣವನ್ನು ಜೀವನಾಧಾರವನ್ನಾಗಿ ಮಾಡಿ ಸಾಮಾಜಿಕ ರಂಗದಲ್ಲಿ ಬರಬಹುದಾದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.

ಸೂಕ್ಷ್ಮತಾಭಾವದ ಉದ್ದೇಶಗಳು:

[ಬದಲಾಯಿಸಿ]
  1. ವಿದ್ಯಾರ್ಥಿಗಳ ವೈಶಿಷ್ಟತೆ ಮತ್ತು ಬೇಕು-ಬೇಡಿಕೆಗಳನ್ನು ಕಂದುಹಿಡಿದು ಅವುಗಳನ್ನು ವಿಶ್ಲೇಷಣೆ ಮಾಡುವುದು
  2. ವರ್ಗ ಕೋಣೆಯ ವಿಶಿಷ್ಟ ಬೋಧನಾ ಉದ್ದೇಶಗಳನ್ನು ಅರಿತು ಅವುಗಳನ್ನು ವಿಶಿಷ್ಟ ವರ್ತನಾ ಬದಲಾವಣೆಯೊಂದಿಗೆ ಅರ್ಥೈಸಿಕೊಳ್ಳುವಂತೆ ಮಾಡುವುದು.
  3. ಬೋಧಿಸಲಿರುವ ವಿಷಯ ವಸ್ತುವನ್ನು ವ್ಯವಸ್ಥಿತವಾಗಿ ಸಂಘಟಿಸಿ ಅವುಗಳನ್ನು ವ್ಯವಸ್ಥಿತವಾಗಿ ಅನುಕ್ರಮಣಿಕಾ ಕ್ರಮದಲ್ಲಿ ಭೋಧಿಸುವಂತೆ ಮಾಡುವುದು.
  4. ವರ್ಗ ಭೋದನೆ ಮತ್ತು ಕಲಿಕೆಗೆ ಅವಶ್ಯಕವಿರುವ ಸಾಧನ ಸಲಕರಣೆಗಳನ್ನು ರೂಪಿಸಿ ಅಭೀವೃದ್ಧಿಪಡಿಸುವುದು.
  5. ಶಿಕ್ಷಕರಿಗೆ ಪಾಠವಿಷಯಕ್ಕೆ ತಕ್ಕಂತೆ ಸಾಧನಗಳನ್ನು ಬಳಿಸುಕೊಂಡು ಸರಿಯಾದ ತಂತ್ರದೊಂದಿಗೆ ಮುಂದುವರೆಯುವಂತೆ ಮಾದುವುದು.
  6. ಶಿಕ್ಷಣವನ್ನು ವೈಯಕ್ತೀಕರಣಗೊಳಿಸಿ ವೈಯಕ್ತಿಕ ಭಿನ್ನಾಬಿಪ್ರಾಯಗಳನ್ನು ಮಿತಗೊಳಿಸುವುದು.
  7. ವರ್ಗ ಭೋದನೆಯ ಮತ್ತು ಕಲಿಕೆಯ ಗುಣಮಟ್ಟದ ಸುಧಾರಣೆ.

ಭಾರತದಲ್ಲಿ ಶೈಕ್ಷಣಿಕ ತಂತ್ರಜ್ಞಾನದ ಅವಶ್ಯಕತೆ ಹಾಗೂ ಇಂದು ಅದರ ಸ್ಥಾನಮಾನಗಳು:

[ಬದಲಾಯಿಸಿ]

ಈ ಮೊದಲೇ ಹೇಳಿದಂತೆ ಭಾರತವು ತೀರ್ವ ಅಭಿವೃದ್ಧಿ ಹೊಂದುತ್ತಿರುವ ಒಂದು ರಾಷ್ಟ್ರ. ಇಲ್ಲಿ ತನ್ನದೇ ಆದ ಸಮಮಸ್ಯೆ ಗಳು ಸಂಪ್ರದಾಯಗಳು ಸಮಾಜದಲ್ಲಿ ಬೇರೂರಿವೆ. ಶಾಲೆಗಳಲ್ಲಿ ವರ್ಗಗಳು ತುಂಬಿ ತುಳುಕುತ್ತಿವೆ. ಮಕ್ಕಳು ಪಾಠ ಪ್ರವಚನಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಇದರಂತೆ ತರಬೇತಿ ಹೊಂದಿದ ಅಸಂಖ್ಯಾತ ಶಿಕ್ಷಕರಿದ್ದರೂ ಬೋಧನೆ ಪರಿಣಾಮಕರಿಯಾಗದೇ ಇಚ್ಛಿತ ಬದಲಾವಣೆಗಳು ಕಂಡು ಬರುತ್ತಿಲ್ಲ. ಕೇವಲ ನೌಕರಿಗಾಗಿ ಶಿಕ್ಷಣ ಮುಂದುವರೆಯುತ್ತಿದೆಯೇ ವಿನಃ ಜ್ಞಾನ ಮತ್ತು ಅನುಭವಗಳನ್ನು ಪಡೆದು ಅದನ್ನು ಸದುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ವಿರಾಳವಾಗಿದೆ . ಅನೇಕ ಅನುಭವಿಗಳು ನಮ್ಮ ದೇಶದಿಂದ ಅಭಿವೃದ್ಧಿ ಹೂಂದಿದ ದೇಶಗಳಿಗೆ ವಲಸೆ ಹೋಗುತ್ತಿರುತ್ತಾರೆ. ಇದಕ್ಕೆ ಪ್ರ್ತಿಭಾ ಪಲಾಯನ ಎನ್ನುವರು. ಇದರಿಂದ ನಮ್ಮಲ್ಲಿಯ ಮಾನವತಾ ಸಂಪನ್ಮೂಲಗಳ ಕೊರತೆ ಎದ್ದು ಕಾಣುತ್ತಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮತ್ತೆ ಮತ್ತು ಕಾರ್ಯಕ್ಷಮತೆ ಕಡಿಮೆಯಾಗುತ್ತಲಿದ್ದು ಯೋಜನೆಗಳು ಸಫಲವಾಗುತ್ತಿಲ್ಲ. ದೇಶದಲ್ಲಿ ರಾಜಕೀಯ ಅಸ್ಥಿರತೆ ಹಾಗೂ ಆರ್ಥಿಕ ದುರ್ಬಲತೆಯು ಎದ್ದು ಕಾಣುತ್ತಿದ್ದು ಇಂದಿನ ಅಸಂಖ್ಯಾತ ತರುಣ/ತರುಣಿಯರಿಗೆ ತಮ್ಮ ಜೀವನದಾರಿ ತೋರದಂತಾಗಿ ಅಸಮಧಾನ ಹೊಗೆಯಾಡುತ್ತಿದೆ. ಇದಕ್ಕೆಲ್ಲ ಕಾರಣ ಅಭಿವೃದ್ಧಿ ಯೋಜನೆಗಳು ತಪ್ಪು ಗೃಹಿಕೆ ಮತ್ತು ದೋಷಪೂರಿತ ಶಿಕ್ಷಣ ಪದ್ಧತಿಗಳು ಎಂದು ಎಲ್ಲರಿಗೂ ಅನ್ನಿಸುತ್ತದೆ. ಸ್ವಾತಂತ್ರ್ಯದ ನಂತರ ನಮ್ಮ ಸರಕಾರವು ಮೂರು ಮುಖ್ಯ ಶಿಕ್ಷಣ ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಫಲವಾಗಲಿಲ್ಲ. ವಿಶ್ವವಿದ್ಯಾಲಯಗಳಿಂದ ಹಿಡಿದು ಮಹಾವಿಶ್ವವಿದ್ಯಾಲಯಗಳು ತಮ್ಮ ವ್ಯಾಸಾಂಗವನ್ನು ಮುಂದುವರೆಸಿಕೊಳ್ಳಲು ಅನುವು ಮಾಡಿಕೊಟ್ಟಿವೆ ಏನೋ ನಿಜ. ಆದರೆ ಇವುಗಳಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟದ ಅಂಶವನ್ನು ಮತ್ತು ಇತರೇ ಸಂಪನ್ಮೂಲಗಳನ್ನ್ನು ಗಮನಿಸಿದಾಗ ಏನೋ ಮನಸ್ಸಿಗೆ ಖೇದವೆನ್ನಿಸುತ್ತದೆ. ಶಾಲೆಗಳಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲ, ಕರಿ ಹಲಿಗೆ ಬಳಪಗಳಿಲ್ಲ. ಸಾಕಷ್ಟು ಪಠ್ಯ ಪುಸ್ತಕಗಳಿಲ್ಲ. ಮತ್ತು ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರಿಲ್ಲ. ಹೀಗೆ ಪಟ್ಟಿಮಾಡುತ್ತ ಹೋದರೆ, ಅನೇಕ ಸಮಸ್ಯೆಗಳು ಸೇರಿಕೊಳ್ಳುತ್ತವೆ. ಆದ್ದರಿಂದ ಇಂದು ಭಾರತೀಯ ಶಿಕ್ಷಣದಲ್ಲಿ ಮೂಲಭೂತ ಬದಲಾವಣೆಗಳು ಆಗಬೇಕಾಗಿದೆ ಮತ್ತು ಅದಕ್ಕೆ ತಕ್ಕ ಉದ್ದೇಶಗಳು, ಉದ್ದೇಶಗಳಿಗೆ ತಕ್ಕ್ಕ ಪಠ್ಯಕ್ರಮ ಹಾಗೂ ಭೋಧನಾ ವ್ಯವಸ್ಥೆಗಳು ಪ್ರಯೊಗಿಸಲ್ಪಡಬೇಕಾಗಿವೆ. ನಮ್ಮ ಭಾರತದಲ್ಲಿ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿರುವುದರಿಂದ ಒಂದೇ ಬಗೆಯ ಶಿಕ್ಷಣ ನೀತಿಯಿಂದ ನಾವು ಏನನ್ನು ಸಾಧಿಸದವರಾಗಿದ್ದೇವೆ. ಪ್ರಾಯೋಗಿಕ ಅನುಭವಗಳು ಅತಿ ಕಡಿಮೆ ಮತ್ತು ಜೀವನಾಧಾರವಾದ ಶಿಕ್ಷಣವಿರುವದಿಲ್ಲ. ಇವೆಲ್ಲ ಅಂಶಗಳನ್ನು ಲಕ್ಷದಲ್ಲಿಟ್ಟುಕೊಂಡು ಸಮಾಜ-ನಿರ್ಮಾಣದಿಂದ ಹಿಡಿದು ವಗ್ರಕೋಣೆಯಲ್ಲಿಯ ಕಲಿಕೆಯವರೆಗೆ ಬೇಕಾಗುವ ಸಾಧನಾ-ಸಾಮಗ್ರಿಗಳನ್ನು ವ್ಯವಸ್ಥಿತ ಕಾರ್ಯಕ್ರಮಗಳನ್ನು ರೂಪಿಸಬೇಕಾದಗಿದೆ. ಇವೆಲ್ಲ ಅವಶ್ಯಕತೆಗಳನ್ನು ಎತ್ತಿಹಿಡಿದವು. ವ್ಯಕ್ತಿಶಃ ಕಲಿಕೆಯಿಂದ ಸಮೂಹ ಕಲಿಕೆ ಮತ್ತು ಪರಿಣಾಮಕಾರಿಯಾಗಿ ಸಾಗುವ ಸುಲಭ ಸಾಧ್ಯವಾದ ಮಾರ್ಗಗಳನ್ನು ರೂಪಿಸಿಕೊಳ್ಳುವಲ್ಲಿ ಶೈಕ್ಷಣಿಕ ತಂತ್ರಜ್ಞಾನದ ಅನಿವಾರ್ಯ ವೆನಿಸಿದೆ. ಇಂದು ನಮ್ಮ ಭಾರತದಲ್ಲಿ ಶೈಕ್ಷಣಿಕ ತಂತ್ರಜ್ಞಾನ ಶೈಷವಾವಸ್ಥೆಯಲ್ಲಿ ಎದೆಯಾದರೂ ಹೆಚ್ಚಿನ ಉತ್ಸಾಹದೊಂದಿಗೆ ಅಭಿವೃದ್ಧಿ ಹೊಂದುತಲ್ಲಿದೆ, ೧೯೬೬ರ್ ಕೋಠಾರಿ ಆಯೋಗವು ಶೈಕ್ಷಣಿಕ ತಂತ್ರಜ್ಞಾನಕ್ಕೆ ಒಂದು ನಿಶ್ಚಿತ ಮಾರ್ಗ ಕಲ್ಪಿಸಿಕೊಟ್ಟು ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಯ ಅವಶ್ಯಕತೆಯನ್ನು ಒತ್ತಿಹೇಳಿವೆ.ಇಂದು ದೂರದರ್ಶನ ಹಾಗೂ ವಿಡಿಯೋಗಳು ನವೀನತೆ ಮತ್ತು ಪರಿಸರ ರಕ್ಷಣೆ, ಅಭಿವೃದ್ಧಿ ಇವುಗಳನ್ನು ಸಾಧಿಸುವತ್ತ ದಾಪುಗಾಲು ಹಾಕುತ್ತಲಿವೆ. ದೂರದರ್ಶನ ಕಾರ್ಯಕ್ರಮಗಳು ಸಾಮಾಜಿಕ ಜೀವನದಲ್ಲಿ ಹೊಸ ಅಲೆಯನ್ನು ಎಬ್ಬಿಸಿವೆ. ಶಾಲಾ ಪಠ್ಯಕ್ರಮದಲ್ಲಿ. ಮೌಲ್ಯ ಮಾಪನದಲ್ಲಿ ಹೊಸ ತಂತ್ರಗಳು ಬಳಸಲ್ಪಡುತ್ತಿದ್ದು ವಸ್ತುನಿಷ್ಠವಾದ ಶಿಕ್ಷಣ ಕ್ರಮವು ಜಾರಿಯಲ್ಲಿ ಬರುತ್ತಿದೆ. ಕ್ರಮಾಗತ ಬೋಧನಾ ಸರಣಿ ವ್ಯವಸ್ಥಾ ಮಾರ್ಗಗಳ ಬಳಕೆ ಇನ್ನೂ ಆಗಬೇಕಾಗಿದೆ. ಇದೀಗ ಸಂಶೋಧನಾ ಮಟ್ಟದಲ್ಲಿ ಅವುಗಳನ್ನು ಪರೀಕ್ಷಿಸಲಾಗುತ್ತಿದೆ. ಗಣಕಯಂತ್ರ ಮುಖೇನ ಭೋಧನೆಯನ್ನು ಅಲಲ್ಲಿ ಪ್ರಾರಂಭಿಸಲಾಗಿದೆ. ಟಿ.ವ್ಹಿ.ಪಾಠಗಳು ಜನಪ್ರಿಯವಾಗುತ್ತಲಿವೆ.

ಶೈಕ್ಷಣಿಕ ತಂತ್ರಜ್ಞಾನ ದಲ್ಲಿರುವ ಹಂತಗಳು:

[ಬದಲಾಯಿಸಿ]

ಹೇಗೆ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ರೀತಿಯಲ್ಲಿ ಬಿಡಿಸಿಕೊಳ್ಳಲಾಗುತ್ತದೆಯೋ ಅದೇ ತಳಹದಿಯಮೇಲೆ ಶೈಕ್ಷಣಿಕ ತಂತ್ರಜ್ಞಾನದಲ್ಲಿ ಹಂತಗಳನ್ನು ಕಾಣಬಹುದಾಗಿದೆ . ಅವುಗಳು:-

  1. ಭೋಧನಾ ಮತ್ತು ಕಲಿಕಾ ಕಾರ್ಯಗಳನ್ನು ವಿಧಾನಗಳನ್ನು ವಿಶಿಷ್ಟ ವರ್ತಾನಾ ವಿಧಾನಗಳೊಂದಿಗೆ ವಿಶ್ಲೇಷಿಸುವುದು.
  2. ಶೈಕ್ಷಣಿಕ ಗುರಿ ಮತ್ತು ಉದ್ದೇಶಗಳಿಗೆ ಪೂರಕವಾಗಿರುವ ಮತ್ತು ಬೋಧನೆಗೆ ಅವಶ್ಯಕವಿರುವ ಮತ್ತು ಬೋಧನೆಗೆ ಅವಶ್ಯಕವಿರುವ ಎಲ್ಲ ಸಂಗತಿಗಳು ಹಾಗೂ ಸಾಮಗ್ರಿಗಳನ್ನು ಗುರುತಿಸುವುದು.
  3. ವರ್ಗದ ವಿಶಿಷ್ಟ ಬೋಧನೆ ಹಾಗೂ ಕಲಿಕೆಗೆ ಅವಶ್ಯವಿರುವ ವಿಶಿಷ್ಟ ಸಾಧನ ಸಲಕರಣೆ ಮತ್ತು ತಂತ್ರಗಳನ್ನು ಬಳಸಿಕೊಲಳ್ಳುವುದು.
  4. ಸಾಧನ ಸಂಪರ್ಕಗಳಿಂದ ಪರಿಣಾಮಕಾರಿಯಾದ ಭೋಧನೆ ಮಾಡುವುದು.
  5. ಕಲಿಕೆಯ ಪರಿಣಾಮಗಳನ್ನು ಮೌಲೀಕರಿಸುವುದು.
  6. ಸರಿಯಾದ ಪ್ರತಿ ಪುಷ್ಠೀಕರಣ ನೀಡಿ ದೋಷಗಳನ್ನು ತಿದ್ದಿಕೊಂಡು ಮುಂದುವರೆಯುವ್ಂತೆ ಮಾಡಿ ಶೈಕ್ಷಣಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುವಂತೆ ಮಾಡುವುದು.
  7. ವ್ಯವಸ್ಥಿತ ಸರಣಿಗಳನ್ನು ಹೊಸ ಹೊಸ ಸಂದರ್ಭಗಳಿಗೆ ಅನ್ವಯಿಸಿಕೊಳ್ಳುವುದು.
ಯೋಜಕ

ಶೈಕ್ಷಣಿಕ ತಂತ್ರಜ್ಞಾನದಲ್ಲಿಯ ಉಪಕ್ರಮಗಳು / ವ್ಯವಸ್ಥೆಗಳು:

[ಬದಲಾಯಿಸಿ]
     ಎ. ಎ. ಲುವ್ಸು ಡೈಸ್ (೧೯೬೪) ರವರು ಹೇಳುವಂತೆ ಶೈಕ್ಷಣಿಕ ತಂತ್ರಜ್ಞಾನವನ್ನು ಮೂರು ವಿಧಗಳಲ್ಲಿ ವಿಂಗಡಿಸಬಹುದಾಗಿದೆ.
  • ಶೈಕ್ಷಣಿಕ ತಂತ್ರಜ್ಞಾನ - ೧-ಗಡಸು ಸಾಮರ್ಗಿಗಳ ಯಂತ್ರಾಂಶಗಳ ಉಪಕ್ರಮ.
  • ಶೈಕ್ಷಣಿಕ ತಂತ್ರಜ್ಞಾನ - ೨-ಮೃದು ಸಾಮಗ್ರಿಗಳ ತಂತ್ರಾಂಶಗಳ ಉಪಕ್ರಮ.
  • ಶೈಕ್ಷಣಿಕ ತಂತ್ರಜ್ಞಾನ - ೩-ವ್ಯವಸ್ಥಾಪಕ ಉಪಕ್ರಮ
ಸಿ.ಡಿ.

ಶೈಕ್ಷಣಿಕ ತಂತ್ರಜ್ಞಾನದ ಮುಖ್ಯ ಉಪಯೋಗಗಳು (ಮಹತ್ವಗಳು):

[ಬದಲಾಯಿಸಿ]
  1. ವ್ಯಕ್ತಿಗತ ಬೋಧನೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವಲ್ಲಿ ಸಹಾಯಕಾರಿಯಾಗಿದೆ.
  2. ಬೋಧನ ಹಾಗೂ ಕಲಿಕಾ ಗುಣಮಟ್ಟವನ್ನು ಸುಧಾರಿಸಿ ಉತ್ತಮ ಪಡಿಸುವಲ್ಲಿ ಶಿಕ್ಷಣ ಹಾಗೂ ವಿದ್ಯಾರ್ಥಿಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುತ್ತದೆ.
  3. ವರ್ಗ ಸಂಖ್ಯೆಯು ಅತಿಯಾಗಿದ್ದರು ಪರಿಣಾಮಕಾರಿಯಾದ ಬೋಧನೆ / ಕಲಿಕೆಯಾಗುವ್ಂತೆ ಮಾಡುತ್ತದೆ.
  4. ಸರ್ವರಿಗೂ ಸಮಾನ ಅವಕಾಷಗಳನ್ನು ಕಲ್ಪಿಸಿ ಪ್ರತಿಯೊಬ್ಬರ ಬೇಡಿಕೆಗಳನ್ನು ಪೂರೈಸಿ ಸಮಾನ್ನೀಕರಣ ತತ್ವಗಳನ್ನು ಪೂರೈಸುತ್ತಾದೆ.
  5. ಶೈಕ್ಷಣಿಕ ಅಭಿವೃದ್ಧಿ ವಿಸ್ತರಣೆ ಕಾರ್ಯಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.
  6. ಪ್ರತಿಯೊಬ್ಬ ವ್ಯಕ್ತಿಯು ತನ್ನ್ನ ಜೀವನದುದ್ದಕ್ಕೂ ಶಿಕ್ಷಣವನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತೆ ಪ್ರೇರಣೆ ನೀಡುತ್ತದೆ.
  7. ಶಿಕ್ಷಕನಿಗೆ ತನ್ನ ಗುಣಮಟ್ಟವನ್ನು ಸುಧಾರಿಸಿಕೊಂಡು ಪಾಠಪ್ರವಚನಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮುಂದೌವರೆಸಿಕೊಂಡು ಹೋಗುವಂತೆ ಮಾಡುತ್ತದೆ.
  8. ಶಿಕ್ಷಕ ಕಲಿಸುವುದಕ್ಕಿಂತಲೂ, (ಹೆಚ್ಚಿನ ವೇಗದಲ್ಲಿ) ವಿದ್ಯಾರ್ಥಿಗಳು ಕಲಿತು ಕೊಳ್ಳುವರು (ಸ್ವ ಅಧ್ಯಾಯ) ಎಂಬ ಯುಕ್ತಿಯನ್ನು ಅರುಹುವುದು.
  9. ಶೈಕ್ಷಣಿಕ ಸಂಶೋಧನೆಗಳು ಮತ್ತು ಯೋಜನೆಗಳು ಪರಿಣಾಮಕಾರಿಯಾಗಿ ಸರಕಾರಗೊಳ್ಳಲು ಸಹಾಯಕಾರಿಯಾಗಿದೆ.
  10. ಪರಿಸರ ಮಾಲಿನ್ಯ ಪರಿಸರ ರಕ್ಷಣೆ ಮುಂತಾದವುಗಳ ಬಗ್ಗೆ ಯೋಗ್ಯ ಭಾವನೆಗಳು ಮಾಡುವಂತೆ ಮಾಡುತ್ತದೆ.

ಶೈಕ್ಷಣಿಕ ತಂತ್ರಜ್ಞಾನದ ಇತಿಮಿತಿಗಳು:

[ಬದಲಾಯಿಸಿ]

ಭಾರತವು ಒಂದು ಅಭಿವೃದ್ಧಿ ಶೀಲ ರಾಷ್ಟ್ರ ನವೀನತೆಯು ಇಲ್ಲಿ ಅಭಿವೃದ್ಧಿಯ ಪ್ರತೀಕ. ಉತ್ಪಾದನೆ ಮತ್ತು ರಾಷ್ಟ್ರೀಯತೆ ಮತ್ತು ಕ್ರಮವು ಜಾರಿಯಲ್ಲಿ ಬರಬೇಕಾಗಿದೆ. ಇದಕ್ಕಾಗಿ ನಮ್ಮ ಶಿಕ್ಷಣ ತಜ್ಞರು ಶಿಕ್ಷಣದಲ್ಲಿ ನವೀನ ತಂತ್ರಜ್ಞಾನವು ಅತ್ಯಂತ ಸೂಕ್ತವಾದ ಮಾರ್ಗವಾದರೂ ನಮ್ಮ ದೇಷದಲ್ಲಿ ತನ್ನದೇ ಆದ ಸಮಸ್ಯೆಗಳಿವೆ. ಇವುಗಳಿಂದ ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಅನೇಕ ಅಡೆಗಡೆಗಳು ಅಡ್ಡಲಾಗುತ್ತಿವೆ. ಅವುಗಳು:

  1. ದೇಷದಲ್ಲಿ ಏಕತೆಯ ಅಭಾವ, ಇದರಿಂದ ನವೀನ ಶೈಕ್ಷಣಿಕ ವಿಧಾನಗಳನ್ನು ಅಳವಡಿಸುವುದು ಕಷ್ಟಕರವಾದ ಕೆಲಸವಾಗಿದೆ.
  2. 80% ಜನ ಕೃಷಿ ಸಾಗುವಳಿ ತೊಡಗಿ ಸಾಮಾನ್ಯ ಶಿಕ್ಷಣಕ್ಕೆ ಮಹತ್ವ ಕೊಡುತ್ತಿಲ್ಲ.
  3. ಬಡತನದಿಂದ ಅಸಂಖ್ಯಾತ ಮಕ್ಕಳು ಶಾಲೆಗಳಿಗೆ ಹೋಗುತ್ತಿಲ್ಲ. ಇದರಿಂದ ಶಿಕ್ಷಣ ಸೌಲಭ್ಯದಿಂದ ವಂಚಿತರಾಗುತ್ತಿದ್ದರೆ.
  4. ಭಾರತಕ್ಕೆ ಯೋಗ್ಯ ಬಲಿಷ್ಠ ರಾಜಕೀಯ ನೀತಿ, ವಿದೇಶಿ ನೀತಿಯ ಅಭಾವವಿರುವದರಿಂದ ಅಭಿವೃದ್ಧಿಗೆ ಅಡ್ಡಿಯಾಗತೊಡಗಿದೆ.
  5. ಬೇಡಿಕೆ-ನೀಡಿಕೆಯ ಪರಿಮಾಣ ಸರಿಯಾಗಿ ಇರುವುದಿಲ್ಲ.
  6. ಇಂದಿನ ಆಡಳಿತ ವ್ಯವಸ್ಥೆ ವಿಸ್ತರಣೆ ವ್ಯವಸ್ಥೆಗಳು ಸರಿಯಾಗಿ ಇರುವುದಿಲ್ಲ.
  7. ಇಂದಿನ ಪಠ್ಯಕ್ರಮ ಹಾಗೂ ಚಟುವಟಿಕೆಗಳು ಮತ್ತು ಪರೀಕ್ಷೆಗಳು ಶೈಕ್ಷಣಿಕ ತಂತ್ರಜ್ಞಾನವನ್ನು ಅಳವಡಿಸಲು ಪ್ರಶಸ್ತವಾಗಿಲ್ಲ.
  8. ನವೀನ ಕಠಿಣ ಸಾಮಗ್ರಿಗಳನ್ನು ಪರಿಣಾಮಕಾರಿಯಾಗಿ ಬಳಸುವ ತಂತ್ರಗಳ ಕೊರತೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವ ಸಲಹಕಾರ ಕೊರತೆ.

ಉಪಸಂಹಾರ:

[ಬದಲಾಯಿಸಿ]

ನಮ್ಮ ದೇಶದಲ್ಲಿ ಅನೇಕ ಅಡೆತಡೆಗಳು ಮತ್ತು ತೊಂದರೆಗಳು ಇದ್ದರೂ ಅಭಿವೃದ್ಧಿಪರರಾದ ನಮಗೆ ಉತ್ತಮ ಶಿಕ್ಷಣ ಬೇಕು. ವ್ಯಕ್ತಿಶಃ ಕಲಿಕೆಗೆ ವಿಶೇಷ ಮಹತ್ವ ಬರಬೇಕು. ಶಿಕ್ಷಾಕ ತನ್ನ ಮಕ್ಕಳಿಗೆ ಭವಿಷ್ಯದ ಅರಿವನ್ನು ಮೂಡಿಸಿ ಅವರಿಗೆ ನವೀನ ಅನುಭವಗಳನ್ನು ಮಾಡಿಕೊಳ್ಳಲು ಅಣಿಯಾಗಬೇಕು. ಇದಕ್ಕೆಲ್ಲ ಶೈಕ್ಷಣಿಕ ತಂತ್ರಜ್ಞವು ಇಂದು ಅವಶ್ಯಕವಾಗಿದೆ. ಪ್ರಾಥಮಿಕ ರಂಗದಿಂದ ಹಿಡಿದು ಉಚ್ಚ ಶಿಕ್ಷಣ, ಸಂಶೋಧನೆಗಳವರೆಗೆ ಶೈಕ್ಷಣಿಕ ತಂತ್ರಜ್ಞವನ್ನು ಅತ್ಯಂತ ಅಚ್ಚುಕಟ್ಟಾಗಿ ಅಳವಡಿಸಬೇಕಾಗಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಕ ತರಬೇತಿ ಕೇಂದ್ರಗಳನ್ನು ಪುನರ ರಚಿಸಬೇಕಾಗಿದೆ, ಇದರಿಂದ ನಮ್ಮ ಶಿಕ್ಷಣ ತಜ್ಞರು, ರಾಜಕಾರಣಿಗಳು, ಆಡಳಿತಗಾರರು ಯೋಗ್ಯ ದಿಶೆಯಲ್ಲಿ ವಿಚಾರಿಸಿ ಭಾರತದಲ್ಲಿಯ ವಿವಿಧ ರೀತಿಯ ಪರಿಸರಕ್ಕೆ ತಕ್ಕ್ಕ್ಕಂತೆ ಶೈಕ್ಷಣಿಕ ತಂತ್ರಜ್ಞಾನವನ್ನು ಶಿಕ್ಷಣ ಕ್ರಮದಲ್ಲಿ ಹೆಣೆಯಬೇಕು.

ಉಲ್ಲೇಖ:

[ಬದಲಾಯಿಸಿ]

ಡಾ.ಆರ್.ಟಿ.ಜಂತಲಿ,"ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯ".