ವಿಶ್ವವಿದ್ಯಾನಿಲಯ
ಗೋಚರ
(ವಿಶ್ವವಿದ್ಯಾಲಯ ಇಂದ ಪುನರ್ನಿರ್ದೇಶಿತ)
ವಿಶ್ವವಿದ್ಯಾನಿಲಯವು ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶೈಕ್ಷಣಿಕ ಪದವಿಗಳನ್ನು ನೀಡುವ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಸ್ಥಳ. ವಿಶ್ವವಿದ್ಯಾನಿಲಯಗಳು ಸಾಮಾನ್ಯವಾಗಿ ಪದವಿಪೂರ್ವ ಶಿಕ್ಷಣ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸುತ್ತವೆ.
ಆಧುನಿಕ ವಿಶ್ವವಿದ್ಯಾನಿಲಯ ವ್ಯವಸ್ಥೆಯು ತನ್ನ ಮೂಲಗಳನ್ನು ಐರೋಪ್ಯ ಮಧ್ಯಯುಗದ ವಿಶ್ವವಿದ್ಯಾನಿಲಯದಲ್ಲಿ ಹೊಂದಿದೆ. ಇದನ್ನು ಇಟಲಿಯಲ್ಲಿ ಸೃಷ್ಟಿಸಲಾಯಿತು ಮತ್ತು ಇದು ನಂತರದ ಮಧ್ಯಯುಗದ ಅವಧಿಯಲ್ಲಿ ಪಾದ್ರಿಗಳಿಗಾಗಿ ಇದ್ದ ಕ್ಯಾಥೀಡ್ರಲ್ ಶಾಲೆಗಳಿಂದ ವಿಕಸನಗೊಂಡಿತು.[೧]
ಹಿಂದಿನ ಉದಾಹರಣೆಗಳು
[ಬದಲಾಯಿಸಿ]ಬ್ರಿಟಾನಿಕಾ ವಿಶ್ವಕೋಶದ ಪ್ರಕಾರ, ಅತ್ಯಂತ ಮುಂಚಿನ ವಿಶ್ವವಿದ್ಯಾನಿಲಯಗಳನ್ನು ಏಷ್ಯಾ ಮತ್ತು ಆಫ಼್ರಿಕಾದಲ್ಲಿ ಸ್ಥಾಪಿಸಲಾಯಿತು, ಮತ್ತು ಮೊದಲ ಐರೋಪ್ಯ ಮಧ್ಯಕಾಲೀನ ವಿಶ್ವವಿದ್ಯಾನಿಲಯಗಳಿಗಿಂತ ಹಿಂದಿನದವಾಗಿದ್ದವು. ಮೊರೊಕ್ಕೊದಲ್ಲಿ ಫ಼ಾತಿಮಾ ಅಲ್-ಫ಼ಿಹ್ರಿ ೮೫೯ರಲ್ಲಿ ಸ್ಥಾಪಿಸಿದ ಅಲ್ ಕೆರಾವೀನ್ ವಿಶ್ವವಿದ್ಯಾನಿಲಯವು ಅತ್ಯಂತ ಹಳೆಯ ಪದವಿ ಪ್ರದಾನ ಮಾಡುವ ವಿಶ್ವವಿದ್ಯಾನಿಲಯವೆಂದು ಪರಿಗಣಿತವಾಗಿದೆ.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ Haskins, Charles H. (1898). "The Life of Medieval Students as Illustrated by their Letters". The American Historical Review. 3 (2): 203–229. doi:10.2307/1832500. JSTOR 1832500.
- ↑ "Medina of Fez". UNESCO World Heritage Centre. UNESCO. Archived from the original on 29 May 2010. Retrieved 7 April 2016.
- ↑ Esposito, John (2003). The Oxford Dictionary of Islam. Oxford University Press. p. 328. ISBN 978-0-1951-2559-7.