ವಿಷಯಕ್ಕೆ ಹೋಗು

ರವೀಂದ್ರನಾಥ ಠಾಗೋರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರವೀಂದ್ರನಾಥ್ ಟಾಗೋರ್ ಇಂದ ಪುನರ್ನಿರ್ದೇಶಿತ)
ರವೀಂದ್ರನಾಥ ಠಾಗೋರ್
Close-up on a Bengali word handwritten with angular, jaunty letters.
೧೯೧೫ರಲ್ಲಿ ಕೊಲ್ಕತ್ತದಲ್ಲಿ ಠಾಗೋರ್
ಜನನ(೧೮೬೧-೦೫-೦೭)೭ ಮೇ ೧೮೬೧
ಕಲ್ಕತ್ತ
ಮರಣ7 August 1941(1941-08-07) (aged 80)
ಕಲ್ಕತ್ತ
ವೃತ್ತಿಕವಿ, ಬರಹಗಾರ, ತತ್ವಶಾಸ್ತ್ರಜ್ಞ, ಕಲಾವಿದ
ಕಾಲಬಂಗಾಳ ನವೋದಯ
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ
(1913)


ಸಹಿ

ರವೀಂದ್ರನಾಥ ಠಾಗೋರ್ ‌ಅವರು (ಬಂಗಾಳಿ:রবীন্দ্রনাথ ঠাকুর)α[›]β[›](೭ ಮೇ ೧೮೬೧ – ೭ ಆಗಸ್ಟ್ ೧೯೪೧), γ[›] ಅಂಕಿತ ನಾಮ:ಗುರುದೇವ್‌ δ[›]. ಅವರು ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ "ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯ" ಗೀತಾಂಜಲಿ ಕಾವ್ಯಕ್ಕೆ ೧೯೧೩ರ ನೊಬೆಲ್ ಸಾಹಿತ್ಯ ಪ್ರಶಸ್ತಿದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು.

ಕಲ್ಕತ್ತಾದ ಪಿರಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಟಾಗೋರ್ ‌[][][][] ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು.[] ಹದಿನಾರನೇ ವಯಸ್ಸಿನಲ್ಲಿ ಅವರು ಭಾನುಶಿಂಘೊ ("ಸೂರ್ಯ ಸಿಂಹ")[] ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರು ಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ೧೮೭೭ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ-ಇವು ಅವರ ಪ್ರಮುಖ ಕೊಡುಗೆ.

ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ಗೀತಾಂಜಲಿ (ಗೀತೆಗಳು), ಗೋರ (ಸುಂದರ ಮುಖಿ)ಮತ್ತು ಘರೇ ಬೈರೆ((ಮನೆ ಮತ್ತು ಪ್ರಪಂಚ)) ಇವರ ಹಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ ವಾಸ್ತವಿಕತೆ ಗೆ, ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ. ಟಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. 'ಜನ ಗಣ ಮನ' ಭಾರತದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾದರೆ 'ಅಮರ್ ಶೋನರ್ ಬಾಂಗ್ಲಾ' ಬಾಂಗ್ಲಾದೇಶದ್ದು.

ಆರಂಭಿಕ ಜೀವನ (೧೮೬೧–೧೯೦೧)

[ಬದಲಾಯಿಸಿ]
ಹದಿಹರೆಯದ ತಿಳಿ ನಗುವಿನ, ಕಪ್ಪು ಸೂಟ್ ಮತ್ತು ನೆಕ್‌ಟೈಯ, ಹಳೆಯ, ಸಣ್ಣ, ಕಡಿಮೆ-ಗುಣಮಟ್ಟದ, ಕಪ್ಪು-ಬಿಳುಪು ಛಾಯಾಚಿತ್ರ-ಭಾವಚಿತ್ರ.
ಇಂಗ್ಲೆಂಡ್‌ನಲ್ಲಿ ಟಾಗೋರ್, 1879

ದೇಬೇಂದ್ರನಾಥ ಟಾಗೋರ್ (೧೮೧೭-೧೯೦೫)ಮತ್ತು ಶಾರದಾ ದೇವಿ (೧೮೩೦-೧೮೭೫) ದಂಪತಿಗಳಿಗೆ ಕೊಲ್ಕೊತದ ಜೊರಸಂಕೊ ಭವನದಲ್ಲಿ ರವೀಂದ್ರನಾಥ್‌ ಜನಿಸಿದರು. ಬದುಕುಳಿದ ಹದಿಮೂರು ಮಕ್ಕಳಲ್ಲಿ ಈತನೇ ಅತ್ಯಂತ ಕಿರಿಯ. ಟಾಗೋರ್ ಕುಟುಂಬದ ಪೂರ್ವಜರು ಆದಿ ಧರ್ಮದ ಬ್ರಾಹ್ಮೊ ಸಂಸ್ಥಾಪಕರು. ತಾಯಿಯನ್ನು ಬಾಲ್ಯದಲ್ಲೇ ಕಳೆದುಕೊಂಡ, ತಂದೆಯದು ವ್ಯಾಪಕ ಪ್ರವಾಸ - ಹೀಗಾಗಿ ಬಾಲಕ ಟಾಗೋರ್‌ ಹೆಚ್ಚಾಗಿ ಮನೆಯಾಳುಗಳ ದೇಖರೇಖಿಯಲ್ಲಿ ಬೆಳೆದು ಬಂದರು.[] ನಾಲ್ಕು ಗೋಡೆಗಳ ನಡುವಿನ ಶಾಲಾ ಪದ್ಧತಿಯನ್ನು ಇಚ್ಛಿಸದ ಟಾಗೋರ್‌, ಭವನದೊಳಗೆಲ್ಲ ಸುತ್ತಾಡುತ್ತಿದ್ದರು. ಬೋಲ್ಪುರ್, ಪನಿಹಟಿ ಹಾಗೂ ಇನ್ನಿತರ ಊರುಗಳನ್ನು ಸುತ್ತುವುದು ಅಥವಾ ಗ್ರಾಮೀಣ ಪ್ರದೇಶದ ಸರಳ ಸುಂದರ ಪರಿಸರದಲ್ಲಿರುವುದನ್ನು ಇಷ್ಟಪಡುತ್ತಿದ್ದರು.[][] ಹನ್ನೊಂದನೇ ವಯಸ್ಸಿನಲ್ಲಿ ಅವರ ಉಪನಯನ ಸಂಸ್ಕಾರ ನೆರವೇರಿತು. ಇದಾದ ನಂತರ ಟಾಗೋರ್‌ ತಮ್ಮ ತಂದೆಯೊಂದಿಗೆ ಭಾರತ ಪರ್ಯಟನೆ ಆರಂಭಿಸಿದರು. ೧೮೭೩ರ ಫೆಬ್ರುವರಿ ೧೪ರಲ್ಲಿ ಕಲ್ಕತ್ತಾವನ್ನು ಬಿಟ್ಟ ಇವರು ಅನೇಕ ತಿಂಗಳುಗಳ ಕಾಲ ಭಾರತವನ್ನು ಸುತ್ತಿದರು. ತಂದೆಯವರ ಶಾಂತಿನಿಕೇತನ ಎಸ್ಟೇಟಿಗೆ ಭೇಟಿ ನೀಡಿದ ಇವರು ಡಾಲ್‌ಹೌಸಿ ಹಿಮಾಲಯ ಗಿರಿಧಾಮವನ್ನು ತಲುಪುವ ಮೊದಲು ಅಮೃತ್‌ಸರದಲ್ಲಿ ತಂಗಿದರು. ಅಲ್ಲಿ ಕಿರಿಯ "ರಬೀ" ಜೀವನ ಚರಿತ್ರೆಗಳನ್ನು ಓದಿದ, ಇತಿಹಾಸ, ಖಗೋಳ ವಿಜ್ಞಾನ, ಆಧುನಿಕ ವಿಜ್ಞಾನ, ಮತ್ತು ಸಂಸ್ಕೃತದ ಬಗ್ಗೆ ಅಧ್ಯಯನ ಮಾಡಿದ್ದಲ್ಲದೇKālidāsaಶಾಸ್ತ್ರೀಯ ಕಾವ್ಯಗಳ ಒಳ ಹೊಕ್ಕು ನೋಡಿದ.[೧೦][೧೧] ಮೈಥಿಲಿ ಶೈಲಿಯಲ್ಲಿ ರಚಿಸಿದ ದೀರ್ಘ ಪದ್ಯ ಸಂಗ್ರಹವನ್ನೂ ಒಳಗೊಂಡು, ಹಲವಾರು ಪ್ರಮುಖ ಕಾವ್ಯಗಳನ್ನು ೧೮೭೭ರಲ್ಲಿ ಅವರು ರಚಿಸಿದರು. ವಿದ್ಯಾಪತಿ ಎಂಬ ಕವಿ ಮೈಥಿಲಿ ಶೈಲಿಯ ರೂವಾರಿ. ಕಳೆದು ಹೋಗಿದ್ದ ೧೭ನೇ ಶತಮಾನದVaiṣṇava ಕವಿಯ ಕೃತಿಗಳು Bhānusiṃha ಇವು ಎಂದು ತಮಾಷೆಗಾಗಿ ಹೇಳುತ್ತಿದ್ದರು.[೧೨] "ಭಿಕಾರಿಣಿ" (೧೮೭೭; " ಭಿಕ್ಷುಕಿ"—ಬಂಗಾಳಿ ಭಾಷೆಯ ಮೊದಲ ಸಣ್ಣ ಕಥೆ)[೧೩][೧೪] ಮತ್ತು ಸಂಧ್ಯಾ ಸಂಗೀತ (೧೮೮೨) ಪ್ರಸಿದ್ಧ ಪದ್ಯ "ನಿರ್ಝರೇರ್ ಸ್ವಪ್ನಭಂಗ" ("ಜಲಪಾತದ ಭೋರ್ಗರೆತ")ವನ್ನೂ ಒಳಗೊಂಡಂತೆ ಕೆಲವು (೧೮೮೨) ಕೃತಿಗಳನ್ನು ಬರೆದರು.

ಸುಂದರವಾಗಿ ಅಲಂಕೃತಗೊಂಡ ಪುರುಷ ಮತ್ತು ಮಹಿಳೆಯ ಕಪ್ಪು-ಬಿಳುಪು ಛಾಯಾಚಿತ್ರ: ನಗುತ್ತಿರುವ, ಬೆಂಚಿನ ಹಿಂದೆ ಹೆಗಲಲ್ಲಿ ಶಾಲು ಹೊದ್ದುಕೊಂಡ ಸೊಂಟಕ್ಕೆ ಕೈಇಟ್ಟುಕೊಂಡ ಮತ್ತು ಬಂಗಾಳಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ಪುರುಷ.ಬೆಂಚಿನಲ್ಲಿ ಕುಳಿತ, ಭಾರತೀಯ ಉಡುಗೆ ಮತ್ತು ಶಾಲಿನಲ್ಲಿರುವ ಮಹಿಳೆ; ಅವರು ಹೂದಾನಿ ಮತ್ತು ಹರಿವ ಎಲೆಗಳಿಂದ ರೂಪಿಸಿದ ಆಧಾರಕ್ಕೆ ಒರಗಿನಿಂತಿದ್ದಾರೆ.
ಟಾಗೋರ್ ಮತ್ತು ಮೃನಾಲಿನಿ ದೇವಿ, 1883

ಇಂಗ್ಲೆಂಡ್‌ನ ಪೂರ್ವ ಸಸ್ಸೆಕ್ಸ್‌ನ ಬ್ರಿಘ್ಟನ್‌ನಲ್ಲಿ ೧೮೭೮ರಲ್ಲಿ ಸಾರ್ವಜನಿಕ ಶಾಲೆಗೆ ಭಾವಿ ನ್ಯಾಯವಾದಿ ಟಾಗೋರ್‌ ಸೇರಿದರು. ಅವರು ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಕಾನೂನನ್ನು ಅಭ್ಯಸಿಸಿದರು, ಆದರೆ ಶೇಕ್ಸ್‌ಪಿಯರ್ ಮತ್ತು ರೆಲಿಜಿಯೊ ಮೆಡಿಸಿ , ಕೊರಿಯೊಲನಸ್ , ಮತ್ತು ಆಂಟೊನಿ ಮತ್ತು ಕ್ಲಿಯೊಪಾತ್ರ ;[೧೫] ಮೊದಲಾದವುಗಳ ಪರಿಪೂರ್ಣ ಅಧ್ಯಯನ ಮಾಡುವ ಉದ್ದೇಶದಿಂದ ಶಾಲೆಯನ್ನು ಬಿಟ್ಟರು. ಅವರು ೧೮೮೦ರಲ್ಲಿ ಪದವಿ-ಪಡೆಯದೆ ಬಂಗಾಳಕ್ಕೆ ಹಿಂದಿರುಗಿದರು. ಮೃಣಾಲಿನಿ ದೇವಿ (ಭಬತಾರಿಣಿ ತೌರು ಮನೆಯಲ್ಲಿಟ್ಟ ಹೆಸರು. ೧೮೭೩–೧೯೦೦) ಅವರನ್ನು ೧೮೮೩ರ ಡಿಸೆಂಬರ್‌ ೯ರಂದು ಅವರು ಮದುವೆಯಾದರು. ಜನಿಸಿದ ಐವರು ಮಕ್ಕಳಲ್ಲಿ ಇಬ್ಬರು ಪ್ರೌಢರಾಗುವ ಮುನ್ನವೇ ಸಾವನ್ನಪ್ಪಿದರು.[೧೬] ೧೮೯೦ರಲ್ಲಿ ಟಾಗೋರ್‌, ಈಗ ಬಾಂಗ್ಲಾದೇಶದಲ್ಲಿರುವ, ಶಿಲೈದಾಹದಲ್ಲಿರುವ ಅವರ ಕುಟುಂಬದ ವಿಸ್ತಾರವಾದ ಎಸ್ಟೇಟಿನ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೮೯೮ರಲ್ಲಿ ಅವರ ಪತ್ನಿ ಮತ್ತು ಪುತ್ರರೂ ಅವರನ್ನು ಸೇರಿ ಕೊಂಡರು."ಜಮೀನ್ದಾರ್ ಬಾಬು" ಟಾಗೋರ್‌ ಕುಟುಂಬದ ಐಷಾರಾಮಿ ನೌಕಾಗೃಹ ಪದ್ಮ ದಿಂದ ದೂರವಾಗಿ ಜೀವಿಸುತ್ತಿದ್ದ ಸಂದರ್ಭದಲ್ಲಿ ಕರಗಳನ್ನು (ಹೆಚ್ಚಿನವು ಸಾಂಕೇತಿಕ) ಸಂಗ್ರಹಿಸಲು ಮತ್ತು ಅವರ ಗೌರವಾರ್ಥವಾಗಿ ಔತಣಕೂಟಗಳನ್ನು ಏರ್ಪಡಿಸಿದ ಗ್ರಾಮಸ್ಥರನ್ನು ಆಶೀರ್ವದಿಸಲು ತಮ್ಮ ಜಮೀನಿನಾದ್ಯಂತ ಓಡಾಡಿದರು.[೧೭] ೧೮೯೧ರಿಂದ ೧೮೯೫-ಇದನ್ನು ಟಾಗೋರ್‌ರ ಸಾಧನಾ ಅವಧಿ ಎನ್ನುತ್ತಾರೆ. ಅವರ ಪತ್ರಿಕೆಗಳಲ್ಲಿ ಒಂದಕ್ಕೆ ಸಾಧನಾ ಎಂದು ಹೆಸರಿಡಲಾಗಿದೆ. ಈ ಅವಧಿಯು ಹೆಚ್ಚು ಸೃಜನಶೀಲವಾಗಿತ್ತು.[] ಮೂರು-ಸಂಪುಟಗಳ ಅರ್ಧಕ್ಕಿಂತ ಹೆಚ್ಚಿನ ಕಥೆಗಳನ್ನು ಮತ್ತು ಎಂಭತ್ತನಾಲ್ಕು ಕಥೆಗಳ ಸಂಗ್ರಹ ಗಲ್ಪಗುಚ್ಛ ವನ್ನೂ ಈ ಅವಧಿಯಲ್ಲಿಯೇ ಅವರು ಬರೆದುದು.[೧೩] ಬಂಗಾಳಿ ಜೀವನಶೈಲಿಯ ವಿಶೇಷವಾಗಿ ಗ್ರಾಮೀಣ ಜೀವನದ ವಿಸ್ತಾರವಾದ ವ್ಯಾಪ್ತಿಯನ್ನು ಅವರು ವ್ಯಂಗ್ಯ ಮತ್ತು ಭಾವನಾತ್ಮಕ ಪ್ರಭಾವದಿಂದ ಚಿತ್ರಿಸಿದ್ದಾರೆ.[೧೮]

ಶಾಂತಿನಿಕೇತನ (೧೯೦೧–೧೯೩೨)

[ಬದಲಾಯಿಸಿ]
ಗಾಢ ನೀಳುಡುಪಿನಲ್ಲಿರುವ ಗಡ್ಡವಿರುವ ಮಧ್ಯವಯಸ್ಕರ ಕಪ್ಪು-ಬಿಳುಪು ಛಾಯಾಚಿತ್ರ.ಅವರು ಸುಂದರವಾದ ಕೊಠಡಿಯ ನೆಲದಲ್ಲಿ ಮತ್ತು ಬೆಲೆಬಾಳುವ ಸೋಫಾದಲ್ಲಿ ಕುಳಿತಿದ್ದಾರೆ; ಅವರು ಕ್ಯಾಮೆರಾವನ್ನು ನೋಡುತ್ತಿಲ್ಲ.
ಟಾಗೋರ್, ಹ್ಯಾಂಪ್‌ಸ್ಟೆಡ್‌ನಲ್ಲಿ ಜಾನ್ ರೊಥೆನ್‌ಸ್ಟೈನ್‌ರಿಂದ ತೆಗೆದ ಛಾಯಾಚಿತ್ರ, 1912

೧೯೦೧ರಲ್ಲಿ ಟಾಗೋರ್‌ ಶಿಲೈದಾಹವನ್ನು ಬಿಟ್ಟು ಶಾಂತಿನಿಕೇತನಕ್ಕೆ ಬಂದರು. ಅಲ್ಲೊಂದು ಆಶ್ರಮ ಸ್ಥಾಪಿಸಿದರು. ಅಮೃತ ಶಿಲೆಯ ನೆಲದ ಪ್ರಾರ್ಥನಾ ಮಂದಿರ ಅಲ್ಲಿ ತಲೆ ಎತ್ತಿತು. ಗಿಡ ಮರಗಳ ತೋಪು, ಉದ್ಯಾನ, ಗ್ರಂಥಾಲಯ ಜೊತೆಗೊಂದು ಪ್ರಾಯೋಗಿಕ ಶಾಲೆ-ಇವೆಲ್ಲ ಸಿದ್ಧವಾದವು.[೧೯] ಟಾಗೋರ್‌ರ ಪತ್ನಿ ಮತ್ತು ಇಬ್ಬರು ಮಕ್ಕಳು ಇಲ್ಲಿ ಕೊನೆಯುಸಿರೆಳೆದರು. ೧೯೦೫ರ ಜನವರಿ ೧೯ರಂದು ಅವರ ತಂದೆ ವಿಧಿವಶರಾದರು. ಪಿತ್ರಾರ್ಜಿತವಾಗಿ ಇವರಿಗೆ ಸಂದಾಯವಾಗಬೇಕಿದ್ದನ್ನು ಪ್ರತಿ ತಿಂಗಳೂ ಅವರು ಪಡೆಯಲಾರಂಭಿಸಿದರು. ತ್ರಿಪುರದ ಮಹಾರಾಜನಿಂದ ಒಂದಷ್ಟು ಹಣ ಪಡೆದರು. ಕುಟುಂಬದ ಆಭರಣಗಳ ಮಾರಾಟದಿಂದ ಸ್ವಲ್ಪ ಬಂತು, ಪುರಿಯಲ್ಲಿನ ಸುಮುದ್ರತೀರದ ಬಂಗಲೆಯಿಂದ ಇನ್ನಷ್ಟು ಕೈ ಸೇರಿತು, ಇಷ್ಟಲ್ಲದೆ ಅವರ ಬರಹಗಳಿಗೆ ಸಿಕ್ಕಿದ ಸಾಧಾರಣ ರಾಯ ಧನಗಳಿಂದ (Rs. ೨,೦೦೦) ಸಿಗುತ್ತಿದ್ದುದು ಅವರ ಮತ್ತೊಂದು ಆದಾಯ ಮೂಲವಾಯಿತು.[೨೦] ಈ ಹೊತ್ತಿಗೆ ಅವರ ಬರಹಗಳು ಅವರಿಗೆ ಹೆಚ್ಚಿನ ಬಂಗಾಳಿ ಅಭಿಮಾನಿಗಳನ್ನು ಮತ್ತು ವಿದೇಶಿ ಓದುಗರನ್ನು ತಂದು ಕೊಟ್ಟಿತು. ನೈವೇದ್ಯ (೧೯೦೧) ಮತ್ತು ಖೇಯ (೧೯೦೬) ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಸಮಯದಲ್ಲಿ ಅವರು ತಮ್ಮ ಗೀತೆಗಳನ್ನು ಮುಕ್ತ ಛಂದಸ್ಸಿನ ಪದ್ಯಗಳನ್ನಾಗಿ ಅನುವಾದಿಸುವ ಕಾಯಕದಲ್ಲಿ ತೊಡಗಿದರು. ೧೯೧೩ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ತಮ್ಮ ಪಾಲಿಗೆ ಸಂದಿದ್ದು ಟಾಗೋರ್‌ಗೆ ೧೯೧೩ರ ನವೆಂಬರ್ ೧೪ರಂದು ಗೊತ್ತಾಯಿತು. ಗೀತಾಂಜಲಿ: ಪದ್ಯಾರ್ಪಣೆಗಳು ಹಾಗೂ ಇನ್ನಿತರ ಅವರ ಅನುವಾದಿತ ಸಾಹಿತ್ಯ ಪಾಶ್ಚಾತ್ಯ ಓದುಗರಿಗೆ ಸಣ್ಣ ಪ್ರಮಾಣದಲ್ಲಿ ದೊರೆಯುವಂತಾದದ್ದನ್ನು ಹಾಗೂ ಅದರ ಆದರ್ಶವಾದವನ್ನು ಸ್ವೀಡಿಶ್ ಅಕಾಡೆಮಿ ಮೆಚ್ಚಿಕೊಂಡಿತು.[೨೧] ೧೯೧೫ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಟಾಗೋರ್‌ಗೆ ನೈಟ್ ಬಿರುದನ್ನು ನೀಡಿ ಗೌರವಿಸಿತು .

ಟಾಗೋರ್ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಲಿಯೊನಾರ್ಡ್ ಎಲ್ಮಿರ್ಸ್ಟ್ಸೇರಿಕೊಂಡು ಶಾಂತಿನಿಕೇತನದ ಆಶ್ರಮದ ಹತ್ತಿರದ ಹಳ್ಳಿ ಸುರುಲ್‌ನಲ್ಲಿ ೧೯೨೧ರಲ್ಲಿ ಗ್ರಾಮೀಣ ಪುನರುತ್ಥಾನಕ್ಕಾಗಿ ಸಂಸ್ಥೆಯೊಂದನ್ನು (ಟಾಗೋರ್‌ ಇದಕ್ಕೆ ಶ್ರೀನಿಕೇತನ—"ಸಂಪತ್ತಿನ ನೆಲೆ" ಎಂದು ಮರುಹೆಸರಿಸಿದರು) ಪ್ರಾರಂಭಿಸಿದರು. ಗಾಂಧಿ ನೇತೃತ್ವದ ಪ್ರತೀಕಕ್ಕೆ, ಸ್ವರಾಜ್ ಚಳವಳಿಗೆ ಬೆಂಬಲ ನೀಡಿ ಪರ್ಯಾಯವೊಂದನ್ನು ಟಾಗೋರ್‌ ಒದಗಿಸಲು ಯತ್ನಿಸಿದರು.[೨೨]"ಅಸಹಾಯಕತೆ ಮತ್ತು ಅಜ್ಞಾನದ ತೊಳಲಾಟದಿಂದ ನರಳುತ್ತಿರುವ ಹಳ್ಳಿಗಳನ್ನು" 'ಜ್ಞಾನಾಭಿವೃದ್ಧಿ'ಯಿಂದ ಮುಕ್ತವಾಗಿಸುವ, ಮತ್ತು ಇದಕ್ಕಾಗಿ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ವಿದ್ವಾಂಸರು, ದಾನಿಗಳು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಂದ ನಿಯೋಜಿಸಿದರು.[೨೩][೨೪] ಭಾರತದ "ಜಾತಿ ಪದ್ಧತಿಯ ಕಾಠಿಣ್ಯ" ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು ೧೯೩೦ರ ಆರಂಭದಲ್ಲಿ ಅವರು ಖಂಡಿಸಿದರು.ಈ ಎಲ್ಲ ಅನಿಷ್ಟಗಳ ವಿರುದ್ಧ ದನಿ ಎತ್ತಿದರು, ನಾಟಕ ಮತ್ತು ಕವನಗಳನ್ನು ರಚಿಸಿದರು, ಯಶಸ್ವೀ ಆಂದೋಲನದ ಮೂಲಕ ಗುರುವಾಯೂರ್‌ ದೇವಾಲಯವನ್ನು ದಲಿತರ ಪ್ರವೇಶಕ್ಕಾಗಿ ಮುಕ್ತಗೊಳಿಸಿದರು.[೨೫][೨೬]

ಬದುಕಿನ ಸಂಧ್ಯಾಕಾಲ (೧೯೩೨–೧೯೪೧)

[ಬದಲಾಯಿಸಿ]
ತೆಳ್ಳಗಿನ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುತ್ತಿರುವ, ಗಾಢ ಮೇಲಂಗಿ ಧರಿಸಿದ, ಗಡ್ಡವಿರುವ ವಯಸ್ಸಾದ ವ್ಯಕ್ತಿ. ಅವರು ಹಾಳೆಗಳ ಬಂಡಲು ಅಲ್ಲದೆ ಬೇರೇನೂ ಇಲ್ಲದ ಖಾಲಿ ಮೇಜಿನ ಮುಂದೆ ಕುಳಿತಿದ್ದಾರೆ; ಹಿಂದೆ ತೆಳು-ಬಣ್ಣದ ಕರ್ಟೈನ್ ಇದೆ.
ಬರ್ಲಿನ್‌ನಲ್ಲಿ, 1930

ಕೊನೆಯಲ್ಲಿ ಟಾಗೋರ್‌ ಸಾಂಪ್ರದಾಯಿಕತೆಯನ್ನು ಒರೆ ಹಚ್ಚಿ ನೋಡಿದರು. ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡ ೧೯೩೪ರ ಜನವರಿ ೧೫ರಂದು ಬಿಹಾರ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪವನ್ನು ದಲಿತರ ದಬ್ಬಾಳಿಕೆಯಿಂದಾದ ದೈವದತ್ತ ಪ್ರತಿಫಲ ಎಂಬ ಗಾಂಧಿ ಮಾತಿಗೆ ಅವರು ಛೀಮಾರಿ ಹಾಕಿದರು.[೨೭] ಕಲ್ಕತ್ತಾದ ಸ್ಥಳೀಯ ಬಡತನದ ಬಗ್ಗೆ ಮತ್ತು ಬಂಗಾಳದ ಸಮಾಜಾರ್ಥಿಕ ಪರಿಸ್ಥಿತಿ ಕ್ಷೀಣಿಸಿದ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು. ಇದರಿಂದುಂಟಾದ ದುಃಖವನ್ನು ಪ್ರಾಸಬದ್ಧವಲ್ಲದ ನೂರು-ಸಾಲುಗಳ ಪದ್ಯದಲ್ಲಿ ತೋಡಿಕೊಂಡಿದ್ದಾರೆ. ಸತ್ಯಜಿತ್ ರೈ ಅವರ ಅಪೂರ್ ಸಂಸಾರ್ ಚಿತ್ರಕ್ಕೆ ಇದು ಪೂರ್ವ ಭೂಮಿಕೆ ಒದಗಿಸಿತು.[೨೮][೨೯] ಟಾಗೋರ್‍‌ರ ಬರಹಗಳನ್ನೊಳಗೊಂಡ ಹದಿನೈದು ಹೊಸ ಸಂಪುಟಗಳು ಹೊರ ಬಂದವು. ಅವುಗಳಲ್ಲಿ ಪುನಶ್ಚ (೧೯೩೨), ಶೇಸ್ ಸಪ್ತಕ್ (೧೯೩೫), ಮತ್ತು ಪತ್ರಾಪುಟ್ (೧೯೩೬) ಗದ್ಯ-ಪದ್ಯ ರೂಪದ ಕೃತಿಗಳು. ಪ್ರಯೋಗ ಹೀಗೇ ಮುಂದುವರಿಯಿತು: ಅವರು ಗದ್ಯ ರೂಪದ ಹಾಡುಗಳನ್ನೂ ಹಾಗೂ ನೃತ್ಯನಾಟಕಗಳನ್ನೂ ಬರೆದು ಹೊಸ ಹಾದಿ ಹಾಕಿದರು.ಚಿತ್ರಾಂಗದ (೧೯೧೪),[೩೦] ಶ್ಯಾಮ (೧೯೩೯), ಮತ್ತು ಚಂಡಾಲಿಕಾ (೧೯೩೮) ಮುಂತಾದ ಅನೇಕ ನೃತ್ಯ-ನಾಟಕಗಳನ್ನು ಬರೆದರು ಮತ್ತು ದುಯ್ ಬೋನ್ (೧೯೩೩), ಮಲಂಚ (೧೯೩೪), ಮತ್ತು ಚಾರ್ ಅಧ್ಯಾಯ್ (೧೯೩೪) ಕಾಂದಬರಿ ಗಳನ್ನು ರಚಿಸಿದರು. ಜೀವಿತದ ಕೊನೆಯ ವರ್ಷಗಳಲ್ಲಿ ಟಾಗೋರ್‌ ವಿಜ್ಞಾನ ವಿಷಯದಲ್ಲಿ ಆಸಕ್ತಿ ತಾಳಿ ವಿಶ್ವ-ಪರಿಚಯ್ (೧೯೩೭) ಕೃತಿ ನೀಡಿದರು (ಪ್ರಬಂಧಗಳ ಸಂಗ್ರಹ). ಜೀವಶಾಸ್ತ್ರ, ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರದ ಬಗೆಗಿನ ಅಧ್ಯಯನ ಅವರ ಕಾವ್ಯದ ಮೇಲೆ ಪ್ರಭಾವ ಬೀರಿದವು. ನಿಸರ್ಗವಾದವನ್ನು ವ್ಯಾಪಕವಾಗಿ ಹೊಂದಿದ್ದರಿಂದಾಗಿ ವೈಜ್ಞಾನಿಕ ನಿಯಮಗಳ ಬಗ್ಗೆ ಅವರಿಗಿದ್ದ ಅಪಾರ ಆದರವನ್ನು ಎತ್ತಿ ತೋರುತ್ತದೆ. ವಿಜ್ಞಾನಿಗಳ ಕಥನವನ್ನೂ ಒಳಗೊಂಡಂತೆ, ಸೆ (೧೯೩೭), ತೀನ್ ಸಂಗಿ (೧೯೪೦), ಮತ್ತು ಗಲ್ಪಸಲ್ಪ (೧೯೪೧)ದಂತಹ ಸಂಪುಟಗಳಲ್ಲಿ ಅನೇಕ ಕಥೆಗಳ ಮೂಲಕ ಅವರು ವಿಜ್ಞಾನ ಪ್ರಕ್ರಿಯೆಯನ್ನು ನಿರೂಪಿಸಿದರು.[೩೧]

ಕೊನೆಯ ನಾಲ್ಕು ವರ್ಷ ಟಾಗೋರ್‌ ದೀರ್ಘಕಾಲದ ನೋವಿನಿಂದ ಬಳಲಿದರು ಮತ್ತು ಎರಡು ಬಾರಿ ದೀರ್ಘ ಅಸ್ವಸ್ಥತೆಯಿಂದ ನರಳಿದರು. ೧೯೩೭ರ ಕೊನೆಯಲ್ಲಿ ಟಾಗೋರ್‌ ಸ್ಮರಣೆ ಕಳೆದುಕೊಂಡು ಕೋಮ ಸ್ಥಿತಿ ತಲಪಿ ಸಾವಿನಂಚನ್ನು ತಲಪಿದರು. ಅದರಿಂದ ಗುಣಮುಖರಾಗದ ಅವರನ್ನು ೧೯೪೦ರ ಕೊನೆಯವರೆಗೆ ಸತಾಯಿಸಿತು. ಮೃತ್ಯು ದವಡೆಯಲ್ಲಿ ಇದ್ದುಕೊಂಡೇ ಬರೆದ ಈ ಅವಧಿಯಲ್ಲಿನ ಅವರ ಸಾಹಿತ್ಯ ವಿಭಿನ್ನ, ಉತೃಷ್ಟ ಮಟ್ಟದ್ದು ಎಂದು ಪರಿಗಣಿಸಲಾಗಿದೆ.[೩೨][೩೩] ದೀರ್ಘ ಕಾಲೀನ ಅಸ್ವಸ್ಥತೆಯಿಂದ ನರಳಿದ ಟಾಗೋರ್‌ ತಾವು ಬೆಳೆದುಬಂದ ಜೊರಸಂಕೊ ಭವನದ ಮೇಲ್ಮಹಡಿಯಲ್ಲಿ ೧೯೪೧ರ ಆಗಸ್ಟ್ ೭ರಂದು (೨೨ ಶ್ರಾವಣ ೧೩೪೮) ಕೊನೆಯುಸಿರೆಳೆದರು.[೩೪][೩೫] ಬೆಂಗಾಲೀ ಭಾಷಿಕ ಜಗತ್ತು ದುಃಖ ಸಾಗರದಲ್ಲಿ ಮುಳುಗಿತು.[೩೬]

ಪರ್ಯಟನೆ

[ಬದಲಾಯಿಸಿ]
ಬಹುಃಶ ಪ್ರಾಚೀನ ಪ್ಲೇಟೋಪಂಥಿಗಳಾದ, ಸಾಂಪ್ರದಾಯಿಕ ಉಡುಗೆಯಲ್ಲಿರುವ, ಏಳು ಚೈನೀಸ್ ವ್ಯಕ್ತಿಗಳ ಕಪ್ಪು-ಬಿಳುಪು ಗ್ರೂಪ್ ಛಾಯಾಚಿತ್ರ: ಇಬ್ಬರು ಯುರೋಪಿಯನ್-ಶೈಲಿ ಉಡುಗೆಯನ್ನು ತೊಟ್ಟಿದ್ದಾರೆ, ಐದು ಮಂದಿ ಚೈನೀಸ್ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದಾರೆ; ನಾಲ್ಕು ಮಂದಿ ನೆಲದಲ್ಲಿ ಮುಂಭಾಗದಲ್ಲಿ ಕುಳಿತಿದ್ದಾರೆ; ಕೆಲವರು ಅವರ ಹಿಂದೆ ಕುರ್ಚಿಯಲ್ಲಿ ಕುಳಿತಿದ್ದಾರೆ; ಉಳಿದಿಬ್ಬರು ಹಿಂದೆ ನಿಂತುಕೊಂಡಿದ್ದಾರೆ. ನೀಳುಡುಪು, ಗಡ್ಡವಿರುವ, ಮತ್ತು ಮಧ್ಯದಲ್ಲಿ ಕುರ್ಚಿಯಲ್ಲಿ ಕುಳಿತಿರುವ ಎಂಟನೇ ವ್ಯಕ್ತಿಯನ್ನು ಅವರು ಆವರಿಸಿದ್ದಾರೆ. ಸುಂದರವಾದ ನಾಲ್ಕು ಕಿಟಕಿಗಳು ಅವರ ಹಿಂದೆ ಇವೆ.
ತ್ಸಿಂಘ್ವ ವಿಶ್ವಾವಿದ್ಯಾನಿಲಯದಲ್ಲಿ ಟಾಗೋರ್, 1924

೧೮೭೮ರಿಂದ ೧೯೩೨ರವರೆಗೆ ಟಾಗೋರ್‌ ಐದು ಖಂಡಗಳ ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದರು.[೩೭] ಭಾರತೀಯರಲ್ಲದವರಿಗೆ ಅವರ ಕಾರ್ಯ ಗಳ ಪರಿಚಯ ಮಾಡಿಸುವುದು ಮತ್ತು ಅವರ ರಾಜಕೀಯ ಆಲೋಚನೆಗಳನ್ನು ಬಿತ್ತುವ ಕಾಯಕದಲ್ಲಿ ತೊಡಗುವುದು ಕಠಿಣಮಯವಾಗಿರುತ್ತಿತ್ತು. ೧೯೧೨ರಲ್ಲಿ, ಅವರು ಅನುವಾದಿತ ಪುಸ್ತಕಗಳ ಕಂತೆಗಳನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು. ಅಲ್ಲಿ ಅವರು ಧರ್ಮಪ್ರಚಾರಕರಾದ ಮತ್ತು ಗಾಂಧಿ ಅನುಯಾಯಿಗಳಾದ ಚಾರ್ಲ್ಸ್ F. ಆಂಡ್ರಿವ್ಸ್, ಆಂಗ್ಲೊ-ಐರಿಷ್ ಕವಿ ವಿಲಿಯಮ್ ಬಟ್ಲರ್ ಯೀಟ್ಸ್, ಎಜ್ರ ಪೌಂಡ್, ರಾಬರ್ಟ್ ಬ್ರಿಡ್ಜಸ್, ಅರ್ನೆಸ್ಟ್ ರೈಸ್, ಥಾಮಸ್ ಸ್ಟರ್ಗ್ ಮೋರ್, ಮತ್ತು ಇತರ ಮೇಲೆ ಪ್ರಭಾವ ಬೀರಿದರು.[೩೮] ಅದರ ಫಲವಾಗಿ, ಯೀಟ್ಸ್ ಗೀತಾಂಜಲಿಯ ಇಂಗ್ಲೀಷ್ ಅನುವಾದಕ್ಕೆ ಮುನ್ನುಡಿ ಬರೆದರೆ, ಆಂಡ್ರಿವ್ಸ್ ಶಾಂತಿನಿಕೇತನಕ್ಕೆ ಬಂದು ಟಾಗೋರ್‌ ಜೊತೆ ಸೇರಿಕೊಂಡ. ೧೯೧೨ರ ನವೆಂಬರ್ ೧೦ರಂದು, ಟಾಗೋರ್‌ ಯುನೈಟೆಡ್ ಸ್ಟೇಟ್ಸ್[೩೯] ಮತ್ತು ಯುನೈಟೆಡ್ ಕಿಂಗ್ಡಮ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ಆಂಡ್ರಿವ್ಸ್‌ನ ಪಾದ್ರಿ ಸ್ನೇಹಿತರೊಂದಿಗೆ ಸ್ಟಾಫರ್ಡ್‌ಶೈರ್‌ನ ಬಟ್ಟರ್ಟನ್‌ನಲ್ಲಿ ತಂಗಿದರು.[೪೦] ೧೯೧೬ರ ಮೇ ೩ರಿಂದ ೧೯೧೭ರ ಎಪ್ರಿಲ್‌ವರೆಗೆ, ಟಾಗೋರ್‌ ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಪನ್ಯಾಸ ನಡೆಸಿಕೊಟ್ಟರು[೪೧] ಮತ್ತು ರಾಷ್ಟ್ರೀಯತೆಯ ಕಲ್ಪನೆಯನ್ನು ಬಹಿರಂಗವಾಗಿ ಖಂಡಿಸಿದರು.[೪೨] "ಭಾರತದಲ್ಲಿ ರಾಷ್ಟ್ರೀಯತೆ" ಎಂಬ ಪ್ರಬಂಧವನ್ನು ಅವರು ಬರೆದರು. ಅದು ತಿರಸ್ಕಾರ ಮತ್ತು ಪ್ರಶಂಸೆ ಎರಡಕ್ಕೂ ಅದು ಈಡಾಯಿತು. ರೊಮೈನ್ ರೊಲ್ಯಾಂಡ್‌ನನ್ನು ಒಳಗೊಂಡ ಶಾಂತಿಪ್ರಿಯರಿಂದ ಪ್ರಶಂಸೆ ಪಡೆಯಿತು.[೪೩]

ಆರಾಮ ಉಡುಪು ಮತ್ತು ನೆಕ್‌ಟೈ ಧರಿಸಿರುವ ಮೀಸೆ ಇರುವ ವ್ಯಕ್ತಿ(ಎಡ). ಅವರು ಬಿಳಿ-ಗಡ್ಡವಿರುವ ನೀಳುಡುಪು ಧರಿಸಿರುವ ವ್ಯಕ್ತಿಯ(ಬಲ) ನಂತರ ಕುಳಿತಿದ್ದಾರೆ. ಇಬ್ಬರೂ ಕ್ಯಾಮೆರಾವನ್ನೇ ನೋಡುತ್ತಿದ್ದಾರೆ.
ಆಲ್ಬರ್ಟ್ ಐನ್‌ಸ್ಟೈನ್‌ರೊಂದಿಗೆ ಟಾಗೋರ್, ಅವರ 1930ರ ಜುಲೈ 14ರ ಸಂಭಾಷಣೆಯ ಸಂದರ್ಭದಲ್ಲಿ

ಭಾರತಕ್ಕೆ ಹಿಂದಿರುಗಿದ ಅಲ್ಪಾವಧಿಯಲ್ಲೇ ಪೆರುವಿಯನ್ ಸರಕಾರ ತಮ್ಮ ದೇಶಕ್ಕೆ ಭೇಟಿ ನೀಡಿರೆಂದು ಟಾಗೋರ್‌ರನ್ನು ಆಮಂತ್ರಿಸಿತು. ಆಗ ಅವರಿಗೆ ತಮ್ಮ ೬೩ ವರ್ಷ. ನಂತರ ಅವರು ಮೆಕ್ಸಿಕೊಗೆ ಪ್ರಯಾಣ ಬೆಳೆಸಿದರು. ಅವರ ಭೇಟಿಯ ಸ್ಮರಣಾರ್ಥವಾಗಿ ಶಾಂತಿನಿಕೇತನದ ಶಾಲೆ ಗೆಂದು (ವಿಶ್ವ-ಭಾರತಿ) $೧೦೦,೦೦೦ ಅನ್ನು ಪ್ರತೀ ಸರಕಾರವು ನೀಡಿದವು.[೪೪] ಟಾಗೋರ್‌ ೧೯೨೪ರ ನವೆಂಬರ್ ೬ರಲ್ಲಿ ಅರ್ಜೆಂಟೈನಾದ ಬ್ಯುನೋಸ್ ಐರೆಸ್‌ಗೆ [೪೫] ತಲುಪಿದ ಒಂದು ವಾರದ ನಂತರ ವಿಕ್ಟೋರಿಯ ಒಕಾಂಪೊಕೋರಿಕೆಯ ಮೇರೆಗೆ ವಿಲ್ಲಾ ಮಿರಾಲ್ರಿಯೊಗೆ ಭೇಟಿ ನೀಡಿದರು. ೧೯೨೫ರ ಜನವರಿಯಲ್ಲಿ ಅವರು ಭಾರತಕ್ಕೆ ಪ್ರಯಾಣ ಬೆಳೆಸಿದರು. ೧೯೨೬ರ ಮೇ ೩೦ರಲ್ಲಿ ಟಾಗೋರ್‌ ಇಟಲಿಯ ನೇಪಲ್ಸ್ ಅನ್ನು ತಲುಪಿದರು; ಮರುದಿನವೇ ರೋಮ್‌ನಲ್ಲಿ ಫ್ಯಾಷಿಸ್ಟ್ ಮನೋಭಾವದ ನಿರಂಕುಶಾಧಿಕಾರಿ ಬೆನಿಟೊ ಮುಸ್ಸೋಲಿನಿ ಅವರನ್ನು ಭೇಟಿ ಮಾಡಿದರು.[೪೬] ೧೯೨೬ರ ಜುಲೈ ೨೦ರಂದು ಟಾಗೋರ್‌ ಮುಸ್ಸೋಲಿನಿ ವಿರುದ್ಧ ಮಾತನಾಡಿದರು. ಪರಿಣಾಮವಾಗಿ ಅವರ ಆರಂಭದ ಸೌಹಾರ್ದ ಸಂಬಂಧದ ಉತ್ಸಾಹ ಬತ್ತಿ ಹೋಯಿತು.[೪೭]

ಭವ್ಯ ಕಟ್ಟಡದ ಮುಂಭಾಗದಲ್ಲಿ ಒಟ್ಟುಸೇರಿದ ಹಲವಾರು ಮಂದಿಯ ಗ್ರೂಪ್ ಶಾಟ್; ಅದರಲ್ಲಿ ಎರಡು ಸಾಲುಗಳಿವೆ. ಎಲ್ಲರೂ ಕ್ಯಾಮೆರಾವನ್ನು ನೋಡುತ್ತಿದ್ದಾರೆ. ಮುಂಭಾಗದ ಮಧ್ಯದಲ್ಲಿ, ತಿಳಿ-ಬಣ್ಣದ ಪರ್ಷಿಯನ್ ಉಡಿಗೆ ಧರಿಸಿರುವ ಒಬ್ಬ ಮಹಿಳೆ ಹಾಗೂ ಅವಳ ಎಡಕ್ಕೆ, ಮೊದಲ ಸಾಲಿನಲ್ಲಿ, ಬಿಳಿಗಡ್ಡವನ್ನು ಹೊಂದಿರುವ ಗಾಢ-ಬಣ್ಣದ ಪೂರ್ವದೇಶದ ಟೋಪಿ ಮತ್ತು ನೀಳುಡುಪನ್ನು ಧರಿಸಿರುವ ಪುರುಷ ಹೀಗೆ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಆರಾಮ ಉಡುಪನ್ನು ಧರಿಸಿದ್ದಾರೆ. ಟಾಗೋರ್ (ಮೊದಲ ಸಾಲು, ಬಲದಿಂದ ಮೂರನೇ ವ್ಯಕ್ತಿ) 1932ರ ಏಪ್ರಿಲ್ ಅಥವಾ ಮೇನಲ್ಲಿ, ಟೆಹ್ರಾನ್‌ನಲ್ಲಿ ಇರಾನಿಯನ್ ಮಜ್ಲಿಸ್ ಸದಸ್ಯರನ್ನು ಭೇಟಿ ಮಾಡುತ್ತಿದ್ದಾರೆ. ಟಾಗೋರ್‌ರವರು ಶಿರಾಜ್‌ರನ್ನು ಅದೇ ವರ್ಷದಲ್ಲಿ ಭೇಟಿ ಮಾಡಿದರು.
ಮಜ್ಲಿಸ್, ತೆಹ್ರಾನ್, ೧೯೩೨

೧೯೨೭ರ ಜುಲೈ ೧೪ರಂದು ಇಬ್ಬರು ಅನುಯಾಯಿಗಳ ಜೊತೆಗೂಡಿ ಟಾಗೋರ್‌ ನಾಲ್ಕು-ತಿಂಗಳ ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡರು. ಅಲ್ಲಿ ಅವರು ಬಲಿ, ಜಾವ, ಕ್ವಾಲಲುಂಪುರ್, ಮಲಾಕ್ಕ, ಪೆನಾಂಗ್, ಸಿಯಾಮ್, ಮತ್ತು ಸಿಂಗಾಪುರ್‌ಗೆ ಭೇಟಿ ನೀಡಿದರು. "ಜಾತ್ರಿ" ಸಂಕಲನ ಟಾಗೋರ್‌ ಬರೆದ ಪ್ರವಾಸ ಕಥನ.[೪೮] ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಮಾರು ಒಂದು ವರ್ಷದ ಪ್ರಯಾಣಕ್ಕಾಗಿ ೧೯೩೦ರ ಆರಂಭದಲ್ಲಿ ಅವರು ಬಂಗಾಳವನ್ನು ಬಿಟ್ಟರು. ಅವರ ವರ್ಣಚಿತ್ರಗಳು ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಸಂದರ್ಭದಲ್ಲಿ ಅವರು UKಗೆ ಹೋಗಿದ್ದರು. ಆಗ ಅವರು ಬರ್ಮಿಂಘ್ಯಾಮ್‌ನಲ್ಲಿನ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಅವರು ಆಕ್ಸ್‌ಫರ್ಡ್ ವಿಶ್ವಾವಿದ್ಯಾನಿಲಯಕ್ಕಾಗಿ ಹಿಬ್ಬರ್ಟ್ ಲೆಕ್ಚರ್ಸ್ ಅನ್ನು ಬರೆದರು (ಅದು " ದೇವರ ಮಾನವೀಯತೆ ಕಲ್ಪನೆ, ಅಥವಾ ಮಾನವನ ದೈವತ್ವ "ದ ಕುರಿತಾಗಿದೆ) ಮತ್ತು ಲಂಡನ್‌ನ ವಾರ್ಷಿಕ ಕ್ವೇಕರ್ ಕೂಟದಲ್ಲಿ ಮಾತನಾಡಿದರು.[೪೯] ಅಲ್ಲಿ ಟಾಗೋರ್‌(ನಂತರದ ಎರಡು ವರ್ಷಗಳಲ್ಲಿ ಅವರು ಎದುರಿಸಲಿದ್ದ ವಿಷಯ, ಬ್ರಿಟಿಷ್ ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಸಂಬೋಧಿಸಿ), "ಅಗಲಿಕೆಯ ಕಂದರದ ಕರಾಳ ಮುಖ"ದ ಬಗ್ಗೆ ಮಾತನಾಡಿದರು.[೫೦] ನಂತರ ಅವರು ಅಗಾ ಖಾನ್ III‌ರನ್ನು ಭೇಟಿ ಮಾಡಿದರು, ಡಾರ್ಟಿಂಗ್ಟನ್ ಹಾಲ್‌ನಲ್ಲಿ ತಂಗಿ, ಅಲ್ಲಿಂದ ೧೯೩೦ರ ಜೂನ್‌ನಿಂದ ಮಧ್ಯ-ಸೆಪ್ಟೆಂಬರ್‌ವರೆಗೆ ಸ್ವಿಟ್ಜರ್‌ಲ್ಯಾಂಡ್‌, ಡೆನ್ಮಾರ್ಕ್‌ಗೆ ಮತ್ತು ಜರ್ಮನಿ ಪ್ರವಾಸ ಮುಗಿಸಿ ನಂತರ ಸೋವಿಯತ್ ಒಕ್ಕೂಟಕ್ಕೆ ಪ್ರಯಾಣ ಬೆಳೆಸಿದರು.[೫೧] ಅಂತಿಮವಾಗಿ ೧೯೩೨ರ ಎಪ್ರಿಲ್‌ನಲ್ಲಿ, ಪರ್ಷಿಯನ್ ಯೋಗಿ ಹಫೆಜ್‌ರ ಚರಿತ್ರೆ ಮತ್ತು ಬರಹಗಳ ಪರಿಚಯವಿದ್ದ ಟಾಗೋರ್‌ಗೆ ಇರಾನ್‌ನ ರೇಜ ಶಾಹ್ ಪಹ್ಲಾವಿ ಆತಿಥ್ಯ ನೀಡಿದರು.[೫೨][೫೩] ಆ ರೀತಿಯ ವ್ಯಾಪಕ ಪ್ರವಾಸ ಟಾಗೋರ್‌ಗೆ ಹೆನ್ರಿ ಬರ್ಗ್ಸನ್, ಆಲ್ಬರ್ಟ್ ಐನ್‌ಸ್ಚೈನ್, ರಾಬರ್ಟ್ ಫ್ರೋಸ್ಟ್, ಥಾಮಸ್ ಮ್ಯಾನ್, ಜಾರ್ಜ್ ಬರ್ನಂಡ್ ಶಾ, H.G. ವೆಲ್ಸ್ ಮತ್ತು ರೊಮೈನ್ ರೊಲ್ಯಾಂಡ್ ಮೊದಲಾದ ಅನೇಕ ಪ್ರಸಿದ್ಧ ಸಮಕಾಲೀನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಸಹಕಾರಿಯಾಯಿತು.[೫೪][೫೫] ಟಾಗೋರ್‌ರವರ ಪರ್ಷಿಯಾ ಮತ್ತು ಇರಾಕ್ ಭೇಟಿ (೧೯೩೨ರಲ್ಲಿ) ಮತ್ತು ೧೯೩೩ರಲ್ಲಿ ಸಿಲೋನ್ ಭೇಟಿಯನ್ನೂ ಒಳಗೊಂಡು, ಕೊನೆಯ ವಿದೇಶಿ ಪ್ರಯಾಣವು ಮಾನವನ ಪ್ರತ್ಯೇಕತಾ ಒಲವು ಮತ್ತು ರಾಷ್ಟ್ರೀಯತೆಯ ಬಗೆಗಿನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ಸಾಣೆ ಹಿಡಿಯಿತು.[೫೬]

ಕೃತಿಗಳು

[ಬದಲಾಯಿಸಿ]
ಬಂಗಾಳಿ ಲಿಪಿಯಲ್ಲಿ "ರಾ" ಮತ್ತು "ತಾ" ಎಂದು ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಬರೆದ ಮರದ ತುಂಡಿನ ಕಪ್ಪು-ಬಿಳುಪು ಸಮೀಪ-ಛಾಯಾಚಿತ್ರ. ಟಾಗೋರ್‌ರವರ ಬಂಗಾಳಿ-ಭಾಷಾ ಪ್ರಾರಂಭವು ಈ "ರಾ-ತಾ" ಮರದ ಗುರುತಿನಿಂದ ಆಗಿದೆ. ಅದು ಸಾಂಪ್ರದಾಯಿಕ ಹೈದ ಕೆತ್ತನೆಯಲ್ಲಿ ಬಳಸಿದ ವಿನ್ಯಾಸಕ್ಕೆ ಸಮೀಪದ ಹೋಲಿಕೆಯನ್ನು ಹೊಂದಿದೆ. ಟಾಗೋರ್‌ರವರು ಅವರ ಹಸ್ತಪ್ರತಿಗಳನ್ನು ಇಂತಹ ಕಲೆಗಳಿಂದ ಸುಂದರಗೊಳಿಸಿದ್ದಾರೆ.

ಕಾವ್ಯಕ್ಕೆ ಹೆಸರುವಾಸಿಯಾದರೂ, ಟಾಗೋರ್‌ ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚಿಸಿದ್ದಾರೆ. ಗದ್ಯ ಪ್ರಕಾರದಲ್ಲಿ ಟಾಗೋರ್‌ರ ಕಿರು ಕಥೆಗಳು ಅತ್ಯುತ್ಕೃಷ್ಟ ಎನಿಸಿವೆ. ಬೆಂಗಾಲಿ ಭಾಷೆಯ ಹೊಸ ಶೈಲಿಯ ಜನಕ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಲಯಬದ್ಧತೆ, ಆಶಾವಾದ, ಮತ್ತು ಗೇಯ ಗುಣದಿಂದಾಗಿ ಅವರ ಬರಹಗಳು ಗುರುತಿಸಲ್ಪಟ್ಟಿವೆ. ಜನ ಸಾಮಾನ್ಯರ ಜೀವನದ ಸುಲಭ ಸರಳ ವಿಷಯಗಳಿಂದ ಅವರ ಕಿರುಕಥೆಗಳ ಹಂದರ ನಿರ್ಮಿಸಲಾಗಿದೆ.

ಕಾದಂಬರಿಗಳು ಮತ್ತು ಅಕಲ್ಪಿತ ಕೃತಿ ಟಾಗೋರ್‌ರವರು ಎಂಟು ಕಾದಂಬರಿಗಳನ್ನೂ, ನಾಲ್ಕು ಕಥೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ -

  • ಚತುರಂಗ , ಶೇಶರ್ ಕೋಬಿತ , ಚಾರ್ ಓಧಯ್ , ಮತ್ತು ನೌಕದುಬಿ . ಘರೆ ಬೈರೆ (ಮನೆ ಮತ್ತು ವಿಶ್ವ )—ಆದರ್ಶಾತ್ಮಕ ಜಮೀನ್ದಾರ್ ನಾಯಕ ನಿಖಿಲ್‌ನ ಮಾರ್ಗದರ್ಶನದ ಮೂಲಕ—ಭಾರತೀಯ ರಾಷ್ಟ್ರೀಯತೆ, ಭಯೋತ್ಪಾದನೆಯ ಬೆಳವಣಿಗೆಯನ್ನು ಮತ್ತು ಸ್ವದೇಶಿ ಚಳವಳಿಯಲ್ಲಿನ ಧಾರ್ಮಿಕ ಹುರುಪನ್ನು ತೀವ್ರವಾಗಿ ಟೀಕಿಸಿದೆ; ಇದು ಟಾಗೋರ್‌ರ ಭಾವನಾತ್ಮಕ ಸಂಘರ್ಷದ ನೇರ ಅಭಿವ್ಯಕ್ತಿಯಾಗಿದೆ, ಅದು ೧೯೧೪ರ ಕುಸಿತದ ಶಕ್ತಿಪರೀಕ್ಷೆಯಾಗಿ ಹೊರಹೊಮ್ಮಿತು.
  • ಕಾದಂಬರಿಯು ಹಿಂದು-ಮುಸ್ಲಿಮ್ ಹಿಂಸೆ ಮತ್ತು ನಿಖಿಲ್‌ಗೆ (ಮಾರಣಾಂತಿಕ) ಗಾಯವಾಗುವುದರೊಂದಿಗೆ ಕೊನೆಯಾಗುತ್ತದೆ.[೫೭] ಹಾಗೆಯೇ, ಗೋರ ಭಾರತೀಯತೆಯ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ಸೃಷ್ಟಿಸಿದೆ. ಘೋರೆ ಬೈರೆ ಯಲ್ಲಿರುವಂತೆ, ಸ್ವಂತ ಅಸ್ತಿತ್ವ (jāti ), ವೈಯಕ್ತಿಕ ಸ್ವಾತಂತ್ರ್ಯ, ಮತ್ತು ಧರ್ಮವು ಸಂಗತಿಗಳು ಕೌಟುಂಬಿಕ ಕಥೆ ಮತ್ತು ತ್ರಿಕೋನ ಪ್ರೇಮ ರೂಪದಲ್ಲಿ ಹೊರಹೊಮ್ಮಿದೆ.[೫೮]
  • ಜೋಗಾಜೋಗ್ ‌ನಲ್ಲಿ (ಸಂಬಂಧಗಳು ), ರವರು ಚಿತ್ರಿಸಿರುವ ಶಿವ-ಸತಿ ಆದರ್ಶರೂಪಗಳಿಂದ ಪರಿಮಿತಿಗೊಳಪಟ್ಟ ನಾಯಕಿ ಕುಮುದಿನಿಯು ಅವಳ ಪ್ರಗತಿಶೀಲ ಮತ್ತು ಸಹಾನುಭೂತಿಯುಳ್ಳ ಅಣ್ಣನ ಕಳೆಗುಂದುತ್ತಿದ್ದ ಭವಿಷ್ಯ ಮತ್ತು ಅವನ ಸೋಲಿಗಾಗಿ ಮರುಕಪಡುವುದರಲ್ಲೇ ಹಾಗೂ ಅವಳನ್ನು ಶೋಷಿಸುವ, ಲಂಪಟ ಸ್ವಭಾವದ, ವಯಸ್ಸಾದ ಪತಿಯಿಂದಾಗಿ ಅವಳು ಛಿದ್ರಛಿದ್ರವಾಗಿ ಹೋಗುತ್ತಾಳೆ. ಗರ್ಭಿಣಿಯಾಗುವುದು, ದುಡಿಯುವುದು, ಮತ್ತು ಕುಟುಂಬದ ಗೌರವ ಕಾಪಾಡುವುದು ಎಂಬ ಪಾಶಕ್ಕೆ ಒಳಗಾದ ಬಂಗಾಳಿ ಮಹಿಳೆಯ ಅವಸ್ಥೆ ಮತ್ತು ಸಾವನ್ನು ಚಿತ್ರಿಸಲು ಕರುಣಾರಸ ವನ್ನು ಬಳಸಿಕೊಂಡು ಟಾಗೋರ್‌ ತಮ್ಮ ಸ್ತ್ರೀ ಪರ ನಿಲುವನ್ನು ಅದರಲ್ಲಿ ತೋರಿದ್ದಾರೆ; ಏಕಕಾಲದಲ್ಲಿ, ಅವರು ಬಂಗಾಳಕ್ಕೆ ಬಂದಿದ್ದ ಮಿತಜನಾಧಿಪತ್ಯವನ್ನು ನಿರಾಕರಿಸುತ್ತಾರೆ.

ನಾಟಕ ಸಾಹಿತ್ಯ' ಹದಿನಾರನೇ ವಯಸ್ಸಿನಲ್ಲಿ ಅವರ ಸಹೋದರ ಜ್ಯೋತಿರೀಂದ್ರನಾಥರ ಮೊಲೈರೆಯ ಲಿ ಬೌರ್ಗಿಯೋಸ್ ಗೆಂಟಿಲ್ಹೊಮ್ಮೆ ಯನ್ನು ಸೂಕ್ತ ಮಾರ್ಪಾಡಿನೊಂದಿಗೆ ನಡೆಸಿದರು.[೫೯] ಇಪ್ಪತ್ತರ ವಯಸ್ಸಿನಲ್ಲಿ ಅವರು ವಾಲ್ಮೀಕಿ ಪ್ರತಿಭಾ (ವಾಲ್ಮೀಕಿಯ ಪ್ರತಿಭೆ ) ಎಂಬ ಮೊದಲ ಗೀತ-ನಾಟಕವನ್ನು ಬರೆದರು. ಅದು ದರೋಡೆಕೋರ ವಾಲ್ಮೀಕಿಯು ಹೇಗೆ ಅವನ ಗುಣವನ್ನು ಬದಲಾಯಿಸಿಕೊಂಡ, ಸರಸ್ವತಿಯಿಂದ ಹೇಗೆ ಹರಸಲ್ಪಟ್ಟ, ಮತ್ತು ರಾಮಾಯಣ ವನ್ನು ಬರೆದ ಎಂಬುದನ್ನು ವಿವರಿಸುತ್ತದೆ.[೬೦] ಇದರ ಮೂಲಕ ಟಾಗೋರ್‌ ನಾಟಕ ಶೈಲಿಗಳ ಮತ್ತು ಭಾವನೆಗಳ ವಿಸ್ತಾರವನ್ನು ಅತ್ಯುತ್ಸಾಹದಿಂದ ಹೆಚ್ಚಿಸಿದರು ಹಾಗೂ ಪರಿಷ್ಕರಿಸಿದ ಕೀರ್ತನೆಗಳ ಬಳಕೆ ಮತ್ತು ಸಾಂಪ್ರದಾಯಿಕ ಇಂಗ್ಲೀಷ್ ಮತ್ತು ಐರಿಷ್ ಜಾನಪದ ಮಧುರ ಗೀತಗಳನ್ನು ಕುಡಿತದ ಹಾಡುಗಳಾಗಿ ಪರಿವರ್ತಿಸಿದರು.[೬೧] ಇನ್ನೊಂದು ಪ್ರಮುಖ ನಾಟಕ ಡಾಕ್ ಘರ್ (ಅಂಚೆ ಕಛೇರಿ ). ಅದು ಮಗುವೊಂದು ಸಂಕೋಲೆಗಳಿಂದ ಹೊರಬರಲು ಹೇಗೆ ಹೆಣಗಾಡುತ್ತದೆ ಹಾಗೂ ಅಂತಿಮವಾಗಿ "ದೀರ್ಘನಿದ್ರೆಗೆ ಜಾರುತ್ತದೆ" ಎಂಬುದನ್ನು ವಿವರಿಸುತ್ತದೆ (ಅದು ಅವರ ಭೌತಿಕ ಸಾವಿನ ಸಂಕೇತ). ವಿಶ್ವವ್ಯಾಪಿ ಮೆಚ್ಚುಗೆ ಪಡೆದ ಕಥೆ (ಇದು ಯುರೋಪ್‌ನಲ್ಲಿ ಅಬ್ಬರದ ವಿಮರ್ಶೆಗಳನ್ನು ಪಡೆಯಿತು) ಡಾಕ್ ಘರ್ ಮರಣದೊಂದಿಗೆ, ಟಾಗೋರ್‌ ಮಾತುಗಳಲ್ಲಿ, ಇದು "ಕೂಡಿಟ್ಟ ಸಂಪತ್ತು ಮತ್ತು ಪ್ರಮಾಣೀಕರಿಸಿದ ಸಿದ್ಧಾಂತಗಳಿಂದ ತುಂಬಿದ ಪ್ರಪಂಚ"ದಿಂದ "ಆಧ್ಯಾತ್ಮಿಕ ಸ್ವಾತಂತ್ರ್ಯ".[೬೨][೬೩] ವಿಶ್ವ ಸಮರ IIರ ಸಂದರ್ಭದಲ್ಲಿ, ಪೋಲಿಶ್ ವೈದ್ಯ ಮತ್ತು ಶಿಕ್ಷಣತಜ್ಞ ಜನುಸ್ಜ್ ಕೋರ್ಸ್‌ಜ್ಯಾಕ್ "ಅಂಚೆ ಕಛೇರಿ"ಯನ್ನು ವಾರ್ಸವ್ ಘೆಟ್ಟೊದಲ್ಲಿ ಅವನ ಕಾಳಜಿಯಲ್ಲಿದ್ದ ಅನಾಥರು ಪ್ರದರ್ಶಿಸುವ ನಾಟಕವಾಗಿ ಆಯ್ಕೆ ಮಾಡಿದನು. ಇದು ೧೯೪೨ರ ಜುಲೈ ೧೮ರಲ್ಲಿ, ಅವರು ಟ್ರೆಬ್ಲಿಂಕಾ ನಿರ್ನಾಮ ಶಿಬಿರಕ್ಕೆ ಬರುವ ಮೂರು ವಾರಗಳ ಮೊದಲು ಸಂಭವಿಸಿತು. ಆತನ ಪ್ರಮುಖ ಇಂಗ್ಲೀಷ್-ಭಾಷಾ ಆತ್ಮಚರಿತ್ರೆಕಾರ ಬೆಟ್ಟಿ ಜೀನ್ ಲಿಫ್ಟನ್‌ ಅವರ ಪುಸ್ತಕ ದ ಕಿಂಗ್ ಆಫ್ ಚಿಲ್ಡ್ರನ್ ‌‌ನಲ್ಲಿ 'ಒಬ್ಬರು ಯಾವಾಗ ಮತ್ತು ಹೇಗೆ ಸಾಯ ಬಹುದು ಎಂದು ನಿರ್ಧರಿಸ ಬಹುದಾ' ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಬಹುದಾ ಎಂಬ ಅದ್ಭುತ ವಿಷಯವನ್ನು ಡಾ.ಕೋರ್ಸ್‌ಜ್ಯಾಕ್‌ರವರು ಯೋಚಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಮರಣವನ್ನು ಸ್ವೀಕರಿಸುವ ಹಾದಿಯನ್ನು ಅವರ ಅನಾಥಾಲಯದಲ್ಲಿದ್ದ ಮಕ್ಕಳಿಗಾಗಿ ಹುಡುಕಲು ಪ್ರಯತ್ನಿಸಿರಬಹುದು.

ತಿರುಳಿರುವ ಯೋಚನೆಯನ್ನು ಕೇಂದ್ರೀಕರಿಸಿದ ಸಾಹಿತ್ಯದ ಹರಿವು ಮತ್ತು ಭಾವನಾತ್ಮಕ ಲಯಗಳನ್ನು ಹೊಂದಿದ್ದ ಅವರ ಸಾಧನೆಗಳು ಹಿಂದಿನ ಬಂಗಾಳಿ ನಾಟಕಗಳಿಗಿಂತ ಭಿನ್ನ. ಅವರ ಸಾಧನೆಗಳನ್ನು ಟಾಗೋರ್‌ ಮಾತುಗಳಲ್ಲಿ ಹೇಳುವುದಾದರೆ " ಭಾವನೆಗಳಿಂದ ತುಂಬಿರುವ ಅಭಿನಯವಿಲ್ಲದ ನಾಟಕ"ವನ್ನು ಸುಸಂಬದ್ಧವಾಗಿ ನಡೆಸಲು ಮಾಡಿದ ಪ್ರಯತ್ನ. ೧೮೯೦ರಲ್ಲಿ ಅವರು ವಿಸರ್ಜನ್ (ತ್ಯಾಗ )ವನ್ನು ಬರೆದರು, ಅದು ಅವರ ಅತ್ಯುತ್ತಮ ನಾಟಕ.[೬೦] ಬಂಗಾಳಿ-ಭಾಷೆಯು ಆದಿಕಾಲದಲ್ಲಿ ಸಂಕೀರ್ಣ ಕಥಾವಸ್ತು ಹೊಂದಿದ್ದ ಮತ್ತು ವಿಸ್ತಾರ ಏಕಪಾತ್ರಾಭಿನಯವನ್ನು ನಾಟಕ ಒಳಗೊಂಡಿರುತ್ತಿತ್ತು. ನಂತರದ ಅವರ ನಾಟಕಗಳು ಹೆಚ್ಚು ತತ್ವಶಾಸ್ತ್ರದ ಮತ್ತು ಗೂಡಾರ್ಥದ ವಿಷಯಗಳನ್ನು ಒಳಹೊಕ್ಕು ನೋಡಿದವು; ಇವುಗಳಲ್ಲಿ ಡಾಕ್ ಘರ್ ಕೂಡಾ ಒಂದು.ಟಾಗೋರ್‌ರವರ ಮತ್ತೊಂದು ನಾಟಕ ಚಂಡಾಲಿಕಾ (ಅಸ್ಪೃಶ್ಯ ಹುಡುಗಿ ). ಅದು ಗೌತಮ ಬುದ್ಧನ ಅನುಯಾಯಿ ಆನಂದನು ಆದಿವಾಸಿ ("ಅಸ್ಪೃಶ್ಯ") ಹುಡುಗಿಯಿಂದ ಹೇಗೆ ನೀರನ್ನು ಕೇಳುತ್ತಾನೆ ಎಂಬುದನ್ನು ವಿವರಿಸುವ ಪುರಾತನ ಬೌದ್ಧ ಕಥೆಯ ನಿರೂಪಣೆಯನ್ನು ಹೊಂದಿದೆ.[೬೪][168]ಕೊನೆಯದಾಗಿ, ಅವರ ಹೆಚ್ಚು ಜನಪ್ರಿಯ ನಾಟಕಗಳಲ್ಲಿ ಒಂದಾದ ರಕ್ತಕಾರವಿ ಯು (ಕೆಂಪು ಕರವೀರಗಳು ) ದರೋಡೆಕೋರ ರಾಜನು ಅವನ ಪ್ರಜೆಗಳಿಗೆ ಗಣಿ ಅಗೆಯುವ ಕೆಲಸಗಳನ್ನು ಹೇರುತ್ತಾ ತಾನು ಶ್ರೀಮಂತನಾದುದನ್ನು ವಿವರಿಸುತ್ತದೆ.ನಾಯಕಿ ನಂದಿನಿಯು ದಾಸ್ಯಕ್ಕೆ ಗುರಿಮಾಡುವಿಕೆಯ ಈ ಕುರುಹುಗಳನ್ನು ನಾಶಪಡಿಸಲು ಅಂತಿಮವಾಗಿ ಸಾಮಾನ್ಯ ಜನರನ್ನು ಒಟ್ಟಗೂಡಿಸುತ್ತಾಳೆ. ಟಾಗೋರ್‌ರವರ ಇತರ ನಾಟಕಗಳು ಇವು -ಚಿತ್ರಾಂಗದ , ರಾಜ , ಮತ್ತು ಮಾಯರ್ ಖೇಲ .ಟಾಗೋರ್‌ರವರ ನಾಟಕಗಳನ್ನು ಆಧಾರಿತ ನೃತ್ಯ ನಾಟಕಗಳನ್ನು ಸಾಮಾನ್ಯವಾಗಿ ರವೀಂದ್ರ ನೃತ್ಯ ನಾಟ್ಯಗಳು ಎಂದು ಕರೆಯುತ್ತಾರೆ.

ಸಣ್ಣ ಕಥೆಗಳು

ಕೆದರಿದ ಕೂದಲಿನ, ಹೊರಗೆ ಕುಳಿತಿರುವ, ಈಟಿಯಂತಹುದನ್ನು ಹಿಡಿದುಕೊಂಡಿರುವ ಮತ್ತು ಚಕ್ರವಿರುವ ಕೆಂಪು ಬಣ್ಣದ ಕುದುರೆ ಬೊಂಬೆಯೊಂದಿಗೆ ಆಡುತ್ತಿರುವ ಹುಡುಗನ ಚಿತ್ರಣ; ಹಿನ್ನೆಲೆಯಾಗಿ, ದೊಡ್ಡ ನೀಲಿ ಪಲ್ಲಕ್ಕಿ ಮತ್ತು ಅದನ್ರ ಕಂಬವನ್ನು ಹಿಡಿದುಕೊಂಡಿರುವ ಹಗ್ಗವಿದೆ.
ಟಾಗೋರ್‌ರವರ ಸಣ್ಣಕಥೆ "ದ ಹೀರೊ"ವನ್ನು ನಿರೂಪಿಸುವ ನಂದಲಾಲ್ ಬೋಸ್‌ರವರು ರಚಿಸಿದ ಚಿತ್ರಕಲೆ, ಅದು 1913 ಮ್ಯಾಕ್‌ಮಿಲನ್‌ರ ಬಿಡುಗಡೆ ದ ಕ್ರೆಸೆಂಟ್ ಮೂನ್‌ನಲ್ಲಿ ಕಂಡುಬಂದಿತು

ಅರ್ಧಕ್ಕಿಂತ ಹೆಚ್ಚು ಕಥೆಗಳನ್ನು ಹೊಂದಿರುವ ಮೂರು-ಸಂಪುಟದಲ್ಲಿರುವ, ಎಂಭತ್ತ-ನಾಲ್ಕು ಕಥೆಗಳ ಸಂಗ್ರಹ ಗಲ್ಪಗುಚ್ಛ ವನ್ನು ಬರೆದ "ಸಾಧನ" ಅವಧಿಯು (೧೮೯೧–೧೮೯೫) ಟಾಗೋರ್‌‌ ಪಾಲಿಗೆ ಸಮೃದ್ಧಿಯ ಕಾಲ.[೧೩] ಅಂತಹ ಕಥೆಗಳು ಸಾಮಾನ್ಯವಾಗಿ ಟಾಗೋರ್‌ ಸುತ್ತಮುತ್ತದ ಪರಿಸ್ಥಿತಿ, ಆಧುನಿಕ ಮತ್ತು ಸಾಂಪ್ರದಾಯಿಕ ಚಿಂತನೆಗಳು ಮತ್ತು ಆಸಕ್ತಿದಾಯಕ ಪದಬಂಧಗಳ (ಅದರೊಂದಿಗೆ ಟಾಗೋರ್‌ ಅವರ ಬುದ್ಧಿಶಕ್ತಿಯನ್ನು ಪರಿಶೀಲಿಸುತ್ತಿದ್ದರು) ಮೇಲಿನ ಪರ್ಯಾಲೋಚನೆಯನ್ನು ತೋರಿಸುತ್ತವೆ.ಅವರ ಆರಂಭದ ಕಥೆಗಳನ್ನು ("ಸಾಧನ " ಅವಧಿಯಲ್ಲಿ ರಚಿಸಿದ) ಟಾಗೋರ್‌ ಚೈತನ್ಯ ಮತ್ತು ಸ್ವಾಭಾವಿಕ ಸಮೃದ್ಧಿಯಿಂದ ವಿಶಿಷ್ಟವಾಗಿ ಸಂಯೋಜಿಸಿದ್ದಾರೆ; ಈ ವೈಶಿಷ್ಟ್ಯಗಳು ಟಾಗೋರ್‌ ಜೀವನವನ್ನು ಅವರ ಕುಟುಂಬದ ವಿಸ್ತಾರ ಆಸ್ತಿಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಪಾತಿಸರ್, ಶಾಜದ್ಪುರ್, ಮತ್ತು ಶಿಲೈದ ಸಾಮಾನ್ಯ ಹಳ್ಳಿಗಳೊಂದಿಗೆ ಆತ್ಮೀಯ ಸಂಬಂಧವನ್ನು ಕಲ್ಪಿಸಿದವು.[170]ಅಲ್ಲಿ ಅವರು ಭಾರತೀಯ ಬಡ ಮತ್ತು ಸಾಮಾನ್ಯ ಜನರ ಜೀವನಗಳನ್ನು ಅವಲೋಕಿಸಿದರು; ಅವರ ಜೀವನದ ಆಳಕ್ಕಿಳಿದು ಟಾಗೋರ್‌ ಅಳೆಯಲಾರಂಭಿಸಿದರು. ಈ ಕಾಲ ಘಟ್ಟದ ವರೆಗೆ ಭಾರತೀಯ ಸಾಹಿತ್ಯದಲ್ಲಿ ಈ ರೀತಿಯ ಅನುಸಂಧಾನ ಆದದ್ದು ಇದೇ ಮೊದಲು.[೬೫]

"ದ ಫ್ರೂಟ್‌ಸೆಲ್ಲರ್ ಫ್ರಮ್ ಕಾಬುಲ್"‌ನಲ್ಲಿ ಟಾಗೋರ್‌, ಅಫ್ಘಾನಿ ವ್ಯಾಪಾರಿಯನ್ನು ಅನಿರೀಕ್ಷಿತವಾಗಿ ಸಂಧಿಸಿದ ನಗರ ವಾಸಿ ಮತ್ತು ಕಾದಂಬರಿಕಾರನ ನಡುವಿನ ಸಂಭಾಷಣೆಯನ್ನು ಪ್ರಥಮ ಪುರುಷದಲ್ಲಿ ನಿರೂಪಿಸಿದ್ದಾರೆ.ಪ್ರಪಂಚದ ಮತ್ತು ಭಾರತೀಯ ನಗರ ಜೀವನದ ಜೀವನೋಪಾಯ ಜಮೀನಿನ ಮಿತಿಯ ಬಲೆಯಲ್ಲಿ ಸಿಕ್ಕಿದವರಿಂದ ಭಾವಿಸಿದ ತವಕದ ಹಂಬಲಿಕೆಯನ್ನು ಸಾರೀಕರಿಸಲು ಅವರು ಪ್ರಯತ್ನಿಸಿದರು, ದೂರ ಮತ್ತು ಗುಡ್ಡಗಾಡು ಪ್ರದೇಶಗಳ ವಿವಿಧ ಜೀವನದ ಕನಸಿನ ನಾಟಕಗಳನ್ನು ನೀಡುತ್ತಾ: "ರಾಜನು ಗೆಲುವಿನ ಸಾಧನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಶರತ್ಕಾಲದ ಬೆಳಗಿತ್ತು; ಮತ್ತು ಕಲ್ಕತ್ತಾದ ನನ್ನ ಸಣ್ಣ ಮೂಲೆಯಿಂದ ಕದಲದ ನಾನು ನನ್ನ ಮನಸ್ಸನ್ನು ಸಂಪೂರ್ಣ ಪ್ರಪಂಚ ಸುತ್ತಲು ಬಿಡುತ್ತಿದ್ದೆ.ಮತ್ತೊಂದು ದೇಶದ ಹೆಸರು ಬಂದ ಕೂಡಲೇ ನನ್ನ ಹೃದಯ ಅಲ್ಲಿಗೆ ಹೋಗಿಬಿಡುತ್ತಿತ್ತು ...ನಾನು ಬೆಟ್ಟಗುಡ್ಡಗಳ, ಕಣಿವೆಗಳ, ಕಾಡುಗಳ ಕನಸಿನ ಜಾಲ ಹೆಣೆಯುತ್ತಿದ್ದೆ ....".[೬೬] ಹೆಚ್ಚಿನ ಇತರ ಗಲ್ಪಗುಚ್ಛ ಕಥೆಗಳು ಟಾಗೋರ್‌ರ ಸಬೂಜ್ ಪತ್ರ ಅವಧಿಯಲ್ಲಿ (೧೯೧೪–೧೯೧೭; ಟಾಗೋರ್‌ರವರ ಪತ್ರಿಕೆಗಳಲ್ಲಿ ಒಂದಕ್ಕೆ ಹೀಗೆಯೇ ಹೆಸರಿಡಲಾಗಿದೆ) ಬರೆಯಲ್ಪಟ್ಟಿವೆ.[176]

ಗೊಲ್ಪೊಗುಚ್ಛೊ (ಕಥೆಗಳ ಹಂದರ ) ಅನೇಕ ಯಶಸ್ವೀ ಚಲನಚಿತ್ರಗಳಿಗೆ ಮತ್ತು ನಾಟಕಗಳಿಗೆ ವಿಷಯ ವಸ್ತುವನ್ನು ಒದಗಿಸಿದೆ. ಅದು ಬಂಗಾಳಿ ಸಾಹಿತ್ಯದ ಕಲ್ಪಿತ ಕಥನ ಸಾಹಿತ್ಯದಲ್ಲಿ ಹೆಚ್ಚು ಪ್ರಸಿದ್ಧವಾದುದು.ಸತ್ಯಜಿತ್ ರೈರ ಚಾರುಲತ ಚಿತ್ರವು ಟಾಗೋರ್‌ರ ವಿವಾದಾತ್ಮಕ ಕಥೆ ನಷ್ಟನಿರ್ಹ್ (ಒಡೆದುಹೋದ ಗೂಡು )ಅನ್ನು ಆಧಾರಿಸಿದೆ.ಅತಿಥಿ ಯಲ್ಲಿ (ಇದನ್ನೂ ಸಹ ಚಲನಚಿತ್ರವಾಗಿ ಮಾಡಲಾಗಿದೆ), ಬ್ರಾಹ್ಮಣ ಹುಡುಗ ತಾರಪಾದ ಹಳ್ಳಿಯ ಜಮೀನ್ದಾರನ ದೋಣಿ ಪ್ರಯಾಣದಲ್ಲಿ ಜೊತೆಗೂಡುತ್ತಾನೆ. ಎಂದಿಗೂ ಎಲ್ಲೆಡೆ ಸುತ್ತಾಟ ಮಾಡುತ್ತಿರಬೇಕು ಎಂಬ ಉದ್ದೇಶದಿಂದ ಮನೆ ಬಟ್ಟು ಓಡಿ ಬಂದಿದ್ದೇನೆ ಎಂದು ಹುಡುಗ ಹೇಳುತ್ತಾನೆ.ಕರುಣೆತೋರಿದ ಜಮೀನ್ದಾರ ನು ಅವನನ್ನು ದತ್ತು ತೆಗೆದುಕೊಳ್ಳುತ್ತಾನೆ ಮತ್ತು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ.ಆದರೆ, ಮದುವೆಯ ಹಿಂದಿನ ರಾತ್ರಿ ತಾರಪದ ಮತ್ತೆ ಓಡಿ ಹೋಗುತ್ತಾನೆ. ಸ್ಟ್ರಿರ್ ಪತ್ರ ವು (ಪತ್ನಿಯಿಂದ ಬಂದ ಪತ್ರ ) ಬಂಗಾಳಿ ಸಾಹಿತ್ಯದ ಆರಂಭದ ದಿಟ್ಟ ಮಹಿಳಾ ಸ್ವಾತಂತ್ರ್ಯದ ಚಿತ್ರಣವನ್ನು ಹೊಂದಿದೆ.ಬಂಗಾಳಿ ಮಧ್ಯಮ ವರ್ಗದ ಪುರುಷ ಪ್ರಧಾನ ಸಾಂಕೇತಿಕ ವ್ಯಕ್ತಿಯ ಪತ್ನಿ, ಮೃಣಾಲ. ಅವಳೇ ನಾಯಕಿ. ಅವಳು ಪ್ರಯಾಣಿಸುತ್ತಿದ್ದಾಗ ಪತ್ರವೊಂದನ್ನು ಬರೆಯುತ್ತಾಳೆ (ಅದು ಸಂಪೂರ್ಣ ಕಥೆಯನ್ನು ಹೇಳುತ್ತದೆ).ಕ್ಷುಲ್ಲಕ ಬಾಳಿನ ಅವಳ ಹೋರಾಟವನ್ನು ಅದು ವಿವರಿಸುತ್ತದೆ.ಅವಳು ಅಮಿಯೊ ಬಚ್ಚೊ ಎಂಬ ಹೇಳಿಕೆಯೊಂದಿಗೆ, "ಪತಿಯ ಮನೆಗೆ ಹಿಂದಿರುಗುವುದಿಲ್ಲ, ಎಂದು ಸಾರುತ್ತಾಳೆ. ನಾನು ಬದುಕುತ್ತೇನೆ ಮತ್ತು ಇಲ್ಲಿಯೇ ಬದುಕುತ್ತೇನೆ..." ಎಂದು ಹೇಳುತ್ತಾಳೆ. ಐ ಬಚ್ಲುಮ್ : "ಮತ್ತು ನಾನು ಬದುಕಬೇಕು.ಇಲ್ಲಿ ನಾನು ಬದುಕುತ್ತೇನೆ".

ಹಿಂದು ಮದುವೆಯ ಆಚರಣೆ ಮತ್ತು ವಿವಾಹಿತ ಬಂಗಾಳಿ ಮಹಿಳೆಯರ ವಿಷಾದಕರ ಬರಡು ಜೀವನ, ಮಧ್ಯಮ ವರ್ಗದ ಭಾರತೀಯರ ಬೂಟಾಟಿಕೆಯ ಮೇಲೆ ಹೈಮಂತಿ ಯಲ್ಲಿ, ಟಾಗೋರ್‌ ವಾಗ್ದಾಳಿ ನಡೆಸಿದ್ದಾರೆ. ಸೂಕ್ಷ್ಮ ಸ್ವಭಾವದ ಯುವತಿ ಹೈಮಂತಿಯು ಅವಳ ನವಿರು ಸ್ವಭಾವದಿಂದಾಗಿ ಜೀವನವನ್ನು ಹೇಗೆ ತೊರೆಯಬೇಕಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.ರಾಮನ ಸಂಶಯದಿಂದಾಗಿ ಪ್ರಾಣತ್ಯಾಗದ ಪರೀಕ್ಷೆಗೊಳಪಟ್ಟ ಸೀತೆಯ ಸ್ಥಿತಿಯನ್ನು ವೈಭವೀಕರಿಸುವ ಹಿಂದು ಸಂಪ್ರದಾಯದ ಮೇಲೆ ಟಾಗೋರ್‌ ನೇರ ಆಕ್ರಮಣ ನಡೆಸುತ್ತಾರೆ.ಹಿಂದು-ಮುಸ್ಲಿಮ್ ಬಿಕ್ಕಟ್ಟುಗಳನ್ನು ಮುಸಲ್ಮಾನಿ ದೀದಿ ಯಲ್ಲಿ ಟಾಗೋರ್‌ ಪರಾಮರ್ಶಿಸಿದ್ದಾರೆ. ಅದು ಅವರ ಮಾನವೀಯ ಮುಖವನ್ನು ಅನೇಕ ರೂಪದಲ್ಲಿ ಅನಾವರಣಗೊಳಿಸುತ್ತದೆ.ಇನ್ನೊಂದೆಡೆ ಯುವಕನೊಬ್ಬ ತನ್ನ ಸಾಹಿತ್ಯ ಆಕಾಂಕ್ಷೆಗಳನ್ನು ಗುಪ್ತವಾಗಿಡುವುದನ್ನು ವಿವರಿಸುವ ಮೂಲಕ ದರ್ಪಹರಣ್‌ ಟಾಗೋರ್‌ರ ಸ್ವಪ್ರಜ್ಞೆಯನ್ನು ಬಿಂಬಿಸುತ್ತದೆ.ಅವರು ಪತ್ನಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಸ್ವಂತ ಸಾಹಿತ್ಯಕ ಭವಿಷ್ಯವನ್ನು ದಮನಿಸಿದರು. ಇದು ವನಿತೆಯರ ಕ್ಷೇತ್ರವಲ್ಲ ಎಂಬ ಅವರ ತಿಳಿವು ಹೀಗಾಗಲು ಕಾರಣವಾಯಿತು. ತಮ್ಮ ಯೌವನದಲ್ಲಿ ಟಾಗೋರ್‌ ಸ್ತ್ರೀಯರ ಬಗ್ಗೆ ಸಂಕೋಚ ಪ್ರವೃತ್ತಿ ಹೊಂದಿದ್ದರೆಂದು ತೋರುತ್ತದೆ.ತನ್ನ ಪತ್ನಿಯ ಪ್ರಬುದ್ಧ ನಿಲುವುಗಳಿಗಾಗಿ ಪತಿ ಹಪಹಪಿಸುವುದನ್ನು ದರ್ಪಹರಣ್‌ ಬಿಚ್ಚಿಡುತ್ತದೆ. ಇತರ ಟಾಗೋರ್ ಕಥೆಗಳಲ್ಲಿ ಒಂದಾದ ಜಿಬಿಟೊ ಒ ಮ್ರಿಟೊ ಬಂಗಾಳಿಗರಿಗೆ ಅವರು ಹೆಚ್ಚು ಬಳಸುತ್ತಿದ್ದ ನುಡಿಗಟ್ಟೊಂದನ್ನು ವಿವರಿಸುತ್ತದೆ. ಆ ನುಡಿಗಟ್ಟು ಹೀಗಿದೆ - ಕಾದೊಂಬಿನಿ ಮೊರಿಯ ಪ್ರೊಮಾನ್ ಕೊರಿಲೊ ಶಿ ಮೋರ್ ನೈ ("ಕಾದೊಂಬಿನಿ ಸತ್ತಳು, ಅದರ ಮೂಲಕ ಅವಳಿಲ್ಲ ಎಂಬುದನ್ನು ಸಾಬೀತು ಮಾಡಿದಳು").

ಕಾವ್ಯ

ನಾಲ್ಕು ಮಧ್ಯವಯಸ್ಕ ವ್ಯಕ್ತಿಗಳು ಮಸುಕಾದ ಹೊರಾಂಗಣದಲ್ಲಿ, ಮುಖಾಮುಖಿಯಾಗಿ ಕುಳಿತುಕೊಂಡು ಸಾಂಪ್ರದಾಯಿಕ ವಾದ್ಯಗಳಾದ ಮೃದಂಗ, ಕೊಳಲು, ಲೂಟ್ ವಾದ್ಯ, ಮತ್ತು ಮತ್ತೊಂದು ವಾದ್ಯವನ್ನು ನುಡಿಸುತ್ತಿದ್ದಾರೆ; ಅವರ ಸುತ್ತ ಅರ್ಧ-ಡಜನ್‌ನಷ್ಟು ಪ್ರೇಕ್ಷಕರು ಕುಳಿತುಕೊಂಡಿದ್ದಾರೆ, ನಿಂತುಕೊಂಡಿದ್ದಾರೆ.
ಶಾಂತಿನಿಕೇತನದಲ್ಲಿ ಹೋಲಿಯ ಸಂದರ್ಭದಲ್ಲಿ

ಶಾಸ್ತ್ರೀಯ ಸಾಂಪ್ರದಾಯಿಕತೆಯಿಂದ ವಿನೋದ, ಕಲ್ಪನೆ, ಮತ್ತು ಭಾವಪರವಶತೆಯ ಶೈಲಿಗೆ ಬದಲಾವಣೆಗೊಂಡ ಟಾಗೋರ್‌ರ ಕಾವ್ಯ ೧೫ನೇ ಮತ್ತು ೧೬ನೇ ಶತಮಾನದ [178] ಕವಿಗಳಿಂದ ಹುಟ್ಟಿದ ಪರಂಪರೆಯ ಮುಂದುವರಿಕೆ. ಉಪನಿಷತ್ತುಅನ್ನು ರಚಿಸಿದ ವ್ಯಾಸ ಮುಂತಾದ ಋಷಿ -ಸಾಹಿತಿಗಳು, ಭಕ್ತ-ಸೂಫಿ ಆಧ್ಯಾತ್ಮಿಕಾರ್ಥದ ಕಬೀರ, ಮತ್ತು ರಾಂಪ್ರಸಾದ್ ಮೊದಲಾದವರ ಅಧ್ಯಾತ್ಮ ಜ್ಞಾನದಿಂದ ಟಾಗೋರ್‌ ಪ್ರಭಾವಿತರಾದವರು.[180]ಗ್ರಾಮೀಣ ಬಂಗಾಳದ ಜಾನಪದ ಸಂಗೀತಕ್ಕೆ ಟಾಗೋರ್‌ ಒಡ್ಡಿಕೊಂಡ ನಂತರ ಅವರ ಕಾವ್ಯಕ್ಕೆ ಹೊಸಹೊಸ ಆಯಾಮಗಳು ದೊರೆಯಿತು ಮತ್ತು ಪಕ್ವವಾಯಿತು, ಅದು [181] ಜಾನಪದ ಗಾಯಕರಿಂದ, ವಿಶೇಷವಾಗಿ ಪ್ರಾಚೀನ ಕವಿಗಳು [[ಲಲನ್|ಟೆಂಪ್ಲೇಟು:ಯೂನಿಕೋಡ್]], ಹಾಡಲ್ಪಟ್ಟ ಲಾವಣಿಗಳನ್ನು ಒಳಗೊಂಡಿದೆ.[183][185]ಟಾಗೋರ್‌ರಿಂದ ಪುನಶ್ಯೋಧಿಸಲ್ಪಟ್ಟ ಮತ್ತು ಜನಪ್ರಿಯಗೊಳಿಸಲ್ಪಟ್ಟ ಇವು ೧೯ನೇ ಶತಮಾನದ Kartābhajā ಸ್ತ್ರೋತ್ರಗಳನ್ನು ಹೋಲುತ್ತವೆ. ಅವು ಅಂತರಂಗದ ದೈವತ್ವಕ್ಕೆ ಒತ್ತು ನೀಡುತ್ತವೆ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಸಾಂಪ್ರದಾಯಿಕತೆಯ ವಿರುದ್ಧ ಬಂಡಾಯವೇಳುತ್ತವೆ.[೬೭][೬೮] ಅವರು ಶಿಲೈದಾಹದಲ್ಲಿದ್ದ ಸಂದರ್ಭದಲ್ಲಿ, ಅವರ ಪದ್ಯಗಳು ಮಾನರ್ ಮಾನುಸ್ ‌ನಿಂದ (ಬೌಲ್ಸ್‌ರ "ಹೃದ್ಗತ ಮಾನವ") ಮಾತನಾಡುವ ಮೂಲಕ ಅಥವಾ ಜೀವನ್ ದೇವತಾ ("ಅಂತರ್ಗತ ದೈವ")ದ ಬಗ್ಗೆ ಧ್ಯಾನ ಮಾಡುವ ಮೂಲಕ ಸಾಹಿತ್ಯಕ ಗುಣಮಟ್ಟವನ್ನು ಪಡೆದುಕೊಂಡವು. ಇವು ಈ ರೀತಿಯಾಗಿ, ಪ್ರಕೃತಿ ಮಾತೆಗೆ ಮನವಿ ಮತ್ತು ಮಾನವನ ಅಂತರಂಗದ ಭಾವನಾತ್ಮಕ ನಾಟಕದ ಕೊಂಡಿ ಸೇರಿಸುವ ಮೂಲಕ ದೈವತ್ವದೊಂದಿಗೆ ಸಂಪರ್ಕವನ್ನು ತರಲು ಪ್ರಯತ್ನಿಸಿದವು. ಎಂತಹ ಕಲಾತಂತ್ರಗಳನ್ನು ತಮ್ಮ Bhānusiṃha ಗೀತೆಗಳಲ್ಲಿ ಟಾಗೋರ್‌ ಬಳಸುತ್ತಿದ್ದರೆಂದರೆ (ಅವು ರಾಧ ಮತ್ತು ಕೃಷ್ಣರ ಪ್ರೇಮ ಪ್ರಸಂಗವನ್ನು ನಿರೂಪಿಸುತ್ತವೆ) ಅವುಗಳನ್ನು ಅವರು ಎಪ್ಪತ್ತು ವರ್ಷಗಳ ಕಾಲ ಪುನಃಪುನಃ ಪರಿಷ್ಕರಣೆಗೆ ಒಳಪಡಿಸುತ್ತಿದ್ದರು.[೬೯][೭೦]

ಪ್ರಾಯೋಗಿಕ ಸಾಧನೆಗಳ ಮೂಲಕ ಬಂಗಾಳ ಸಾಹಿತ್ಯದಲ್ಲಿನ ಆಧುನಿಕತೆ ಮತ್ತು ವಾಸ್ತವಿಕತೆಯ ಸಂಕಟಸ್ಥಿತಿಗೆ ಟಾಗೋರ್‌ ೧೯೩೦ರಲ್ಲಿ, ಪ್ರತಿಕ್ರಿಯಿಸಿದರು.[೭೧] ಅಂತಹ ಬರಹಗಳಿಗೆ ಉದಾಹರಣೆಗಳೆಂದರೆ - ಆಫ್ರಿಕ ಮತ್ತು ಕ್ಯಾಮಲಿಯ , ಇವು ನಂತರದ ಅವರ ಪದ್ಯಗಳಲ್ಲಿ ಪ್ರಸಿದ್ಧವಾದವು.ಅವರು ಅಗೊಮ್ಮೆ ಈಗೊಮ್ಮೆ ಶಾಧು ಭಾಷಾ ವನ್ನು (ಸಂಸ್ಕೃತಭೂಯಿಷ್ಟ ಬಂಗಾಳಿ ಪ್ರಾಂತಭಾಷೆ) ಬಳಸಿಕೊಂಡು ಕಾವ್ಯ ರಚಿಸುತ್ತಿದ್ದರು. ನಂತರ ಅವರು ಚೋಲ್ತಿ ಭಾಷಾ ವನ್ನು (ಜನಪ್ರಿಯ ಪ್ರಾಂತ ಭಾಷೆ) ಬಳಸಲು ಪ್ರಾರಂಭಿಸಿದರು.ಮಾನಸಿ , ಸೋನಾರ್ ತೋರಿ (ಬಂಗಾರದ ದೋಣಿ ), ಬಲಕ (ಕಾಡು ಬಾತುಗಳು —ವಲಸೆಹೋಗುವ ಆತ್ಮಗಳು ಎಂಬುದಕ್ಕೆ ಇರುವ ರೂಪಕಾಲಂಕಾರ),[೭೨] ಮತ್ತು ಪುರೊಬಿ ಇವು ರವೀಂದ್ರರ ಇತರ ಗಮನಾರ್ಹ ಬರಹಗಳು. ಜೀವನ ಮತ್ತು ಸಾಧನೆಯ ಕ್ಷಣಿಕ ಗುಣದೊಂದಿಗೆ ಸಂಬಂಧವನ್ನು ಹೊಂದಿದ ಸೋನಾರ್ ತೋರಿಯು ಸುಪ್ರಸಿದ್ಧ ಪದ್ಯ. ಅದೇ ಹೆಸರಿನಿಂದ ಅದು ಮುಂದುವರಿಯುತ್ತದೆ; ಹಾಗೂ ಚಿರಸ್ಮರಣೀಯ ಸೂಕ್ತಿಯೊಂದಿಗೆ ಕೊನೆಗೊಳ್ಳುತ್ತದೆ "শূন্য নদীর তীরে রহিনু পড়ি / যাহা ছিল লয়ে গেল সোনার তরী" ("ಶುನ್ನೊ ನೊಡಿರ್ ಟೈರ್ ರೊಹಿನು ಪೊರಿ / ಜಹ ಚಿಲೊ ಲೊಯ್ ಗೆಲೊ ಶೊನಾರ್ ತೋರಿ"—"ನಾನು ಸಾಧಿಸಿದ ಎಲ್ಲವೂ ಬಂಗಾರದ ದೋಣಿಯಲ್ಲಿ ಕೊಂಡೊಯ್ಯಲ್ಪಟ್ಟಿದೆ-ನಾನು ಉಳಿದಿದ್ದೇನೆ."). ಅಂತಾರಾಷ್ಟ್ರೀಯವಾಗಿ, ಗೀತಾಂಜಲಿ (ಬಂಗಾಳಿ:গীতাঞ্জলি)ಯು ಟಾಗೋರ್‌ರವರ ಸರ್ವಶ್ರೇಷ್ಠ ಸಂಗ್ರಹವಾಗಿದೆ ಹಾಗೂ ಅದು ಅವರಿಗೆ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿದೆ.[೭೩] ಗೀತಾಂಜಲಿಹಾಡು VII (গীতাঞ্জলি ೧೨೭):

ಇತರೆ ಉನ್ನತ ಕೃತಿಗಳು:

  • ಶೇಶರ್ ಕೋಬಿಟ (ಲಾಸ್ಟ್ ಪೋಯಮ್ ಮತ್ತು ಫೇರ್‌ವೆಲ್ ಸಾಂಗ್ ಎಂಬುದಾಗಿ ಎರಡು ಬಾರಿ ಅನುವಾದಿಸಿದ್ದಾರೆ) ಇದು ಅವರ ಹೆಚ್ಚು ಭಾವಗೀತಾತ್ಮಕವಾದ ಕಾದಂಬರಿ. ಪ್ರಮುಖ ಪಾತ್ರ ವಹಿಸಿರುವ ಕವಿಯೊಬ್ಬ ಇದರಲ್ಲಿ ಗೀತೆಗಳನ್ನು ರಚಿಸುತ್ತಾನೆ. ವಿಡಂಬನೆ ಹಾಗೂ ನವ್ಯೋತ್ತರತೆಯ ಅಂಶಗಳನ್ನು ಇದು ಒಳಗೊಂಡಿದೆ. ಕಾಲಕ್ಕೊಗ್ಗದ, ಕಂದಾಚಾರದ ಹೆಸರಾಂತ ಕವಿಯೊಬ್ಬನ ಖ್ಯಾತಿಯ ಮೇಲೆ ಕೆಲವು ಪಾತ್ರಗಳು ಮುತ್ತಿಗೆ ಹಾಕುತ್ತವೆ. ಪ್ರಾಸಂಗಿಕವಾಗಿ, ಆ ಕವಿಯ ಹೆಸರು ರವೀಂದ್ರನಾಥ ಟಾಗೋರ್‌ ಎಂದು ತಿಳಿದು ಬರುತ್ತೆ. ಇವರ ಬರಹಗಳಲ್ಲಿ ಕನಿಷ್ಠ ಮೆಚ್ಚುಗೆ ಪಡೆದ ಪ್ರಕಾರವೆಂದರೆ ಕಾದಂಬರಿಗಳು. ಸತ್ಯಜಿತ್ ರೈ ಮತ್ತು ಇನ್ನಿತರರಿಂದ ಚಲನಚಿತ್ರಗಳಾಗಿ ರೂಪಾಂತರ ಹೊಂದಿದ ಮೇಲೆ ಈ ಪ್ರಕಾರದ ಅವರ ಬರಹ ಹೊಸದಾಗಿ ಗಮನ ಸೆಳೆದವು. ಚೋಖೇರ್ ಬಾಲಿ , ಮತ್ತು ಘರೆ ಬೈರೆ ಇದಕ್ಕೆ ಉದಾಹರಣೆ. ಇವುಗಳ ಸೌಂಡ್‌ ಟ್ರ್ಯಾಕ್‌ (ಧ್ವನಿ ಪಥ) ರವೀಂದ್ರ ಸಂಗೀತ ವೆಂದೇ ವಿಶೇಷವಾಗಿ ಗುರುತಿಸಲ್ಪಟ್ಟಿವೆ. ಟಾಗೋರ್‌ ಭಾರತೀಯ ಇತಿಹಾಸ ದಿಂದ ಹಿಡಿದು ಭಾಷಾಶಾಸ್ತ್ರದವರೆಗೆ ಅನೇಕ ವಿಷಯಗಳ ವಾಸ್ತವ ಕೃತಿಗಳನ್ನು ಬರೆದಿದ್ದಾರೆ.ಆತ್ಮಚರಿತ್ರೆಗೆ ಸಂಬಂಧಿಸಿದ ಬರಹಗಳಲ್ಲದೆ, ಅವರ ಪ್ರವಾಸ ಕಥನಗಳು, ಪ್ರಬಂಧಗಳು, ಮತ್ತು ಯುರೋಪ್ ಜಾತ್ರಿರ್ ಪತ್ರೊ (ಯುರೋಪ್‌‌ನಿಂದ ಪತ್ರಗಳು ) ಮತ್ತು ಮನುಶೇರ್ ಧೊರ್ಮೊ (ಮಾನವನ ಧರ್ಮ ) ಮೊದಲಾದ ಉಪನ್ಯಾಸಗಳನ್ನು ಅನೇಕ ಸಂಪುಟಗಳಲ್ಲಿ ಹೊರತರಲಾಗಿದೆ.

ಸಂಗೀತ ಮತ್ತು ಕಲೆ

[ಬದಲಾಯಿಸಿ]
ಕೆಂಪು ಮತ್ತು ಕಿತ್ತಳೆ ಬಣ್ಣದ ಗೆರೆಗಳಿಂದ ಮಾಡಿದ, ಅಂಗಾಲು ಮತ್ತು ಕಾಲುಗಳನ್ನು ವಿಲಕ್ಷಣವಾಗಿ ರೂಪಿಸಿದ, ಮಹಿಳಾ ಉಡುಪು ಧರಿಸಿರುವ, ಭಾಗಶಃ ಮಸುಕಾಗಿರುವ ತಲೆ, ಮೇಲೆ ಚಾಚಿರುವ ಕೈಗಳನ್ನು ಹೊಂದಿರುವ ಸಿಟ್ಟನಿಂದಿರುವ ಅಥವಾ ಕೆರಳಿದಂತಿರುವ ಚಿತ್ರಕಲೆ. ಚಿತ್ರವು ಚಲನೆಯೊಂದಿಗೆ ಜೀವಂತವಾಗಿದೆ; ಹಿಂದಕ್ಕೆ ಕಂದುಬಣ್ಣದ ಹಿನ್ನೆಲೆಯನ್ನು ಹೊಂದಿದೆ.
"ನರ್ತಿಸುತ್ತಿರುವ ಹುಡುಗಿ", ದಿನಾಂಕ ಸೂಚಿಸದ ಹಾಳೆಯ ತುಣುಕಿನಲ್ಲಿ ಟಾಗೋರ್‌ ರವರಿಂದ ಗೀಚಲ್ಪಟ್ಟ ಶಾಹಿ.

ಸರಿ ಸುಮಾರು ೨,೨೩೦ ಪದ್ಯಗಳನ್ನು ಟಾಗೋರ್‌ ರಚಿಸಿದ್ದಾರೆ ಮತ್ತು ಅವರೊಬ್ಬ ಯಥೇಚ್ಛವಾಗಿ ಚಿತ್ರಗಳನ್ನು ಬಿಡಿಸಿರುವ ಕಲಾವಿದ. ಅವರ ಪದ್ಯಗಳು ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗ-ರವೀಂದ್ರ ಸಂಗೀತ (ಬಂಗಾಳಿ:রবীন্দ্র সংগীত—"ಟಾಗೋರ್ ಗೀತೆಗಳು")ವನ್ನು ಒಳಗೊಂಡಿದೆ. ರವೀಂದ್ರರ ಸಂಗೀತ ಮತ್ತು ಸಾಹಿತ್ಯ ಬೇರ್ಪಡಿಸಲಾಗಂಥವು-ಗೀತೆಗಳು, ಕಾದಂಬರಿಗಳ ಅಥವಾ ಕಿರುಕಥೆಗಳ ಭಾಗಗಳು, ಅಥವಾ ನಾಟಕಗಳು—ಅವರ ಹೆಚ್ಚಿನ ಪದ್ಯಗಳಿಗೆ ಗ್ರಾಸ ಒದಗಿಸಿತು.ಪ್ರಾಥಮಿಕವಾಗಿ ಅವರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಠುಮುರಿ ಶೈಲಿಯಿಂದ ಪ್ರಭಾವಿತರಾದವರು. ಅವರ ಆರಂಭದ ಶೋಕಗೀತೆ ಮಾದರಿಯ ಬ್ರಾಹ್ಮೋ ಭಕ್ತಿ ಶ್ಲೋಕಗಳಿಂದ ಹಿಡಿದು, ಹೆಚ್ಚೂ ಕಡಿಮೆ ಶೃಂಗಾರ ಕಾವ್ಯದಂತೆ ಮಾನವನ ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಸ್ವರಶ್ರೇಣಿಯ ಹಾಡುಗಳನ್ನು ಹರಿಯಬಿಟ್ಟರು.[೭೪] ಅವು ಬೇರೆಬೇರೆ ಮಟ್ಟದಲ್ಲಿ ಶಾಸ್ತ್ರೀಯ ರಾಗಗಳ ಸ್ವರ ವಿನ್ಯಾಸವನ್ನು ಮೀರಲು ಪ್ರಯತ್ನಿಸಿದವು. ಕೆಲವೊಮ್ಮೆ ಅವರ ಪದ್ಯಗಳು ರಾಗದ ಇಂಪು ಮತ್ತು ಲಯಗಳನ್ನು ಯಶಸ್ವಿಯಾಗಿ ಅನುಕರಿಸಿದರೂ ಸಹ ವಿವಿಧ ರಾಗಗಳ ಆಂಶಿಕ ಸಂಮ್ಮಿಶ್ರಣ ಮಾಡಿ ಅವರು ಹೊಸತನ್ನು ಸ್ಋಷ್ಟಿಸುತ್ತಿದ್ದರು.[೭೫]

ಭಾವೋತ್ತೇಜಕ ಶಕ್ತಿ ಮತ್ತು ಸುಂದರತೆಯ ಸಮ್ಮಿಲನ ಬಂಗಾಳಿಗರಲ್ಲಿ ಟಾಗೋರ್‌ ಕಾವ್ಯಕ್ಕಿಂತಲೂ ಮಿಗಿಲಾದವು ಎಂದು ವಿವರಿಸಲ್ಪಟ್ಟಿದೆ. ಆಧುನಿಕ ಪುನರವಲೋಕನ ಆಧುನಿಕ ವಿಮರ್ಶಕರು ಹೀಗೆ ಹೇಳುತ್ತಾರೆ, "ಬಂಗಾಳದಲ್ಲಿ ರವೀಂದ್ರನಾಥರ ಪದ್ಯಗಳನ್ನು ಹಾಡದ ಅಥವಾ ಹಾಡಲು ಪ್ರಯತ್ನಿಸದ ಸುಸಂಸ್ಕೃತ ಮನೆಯೇ ಇಲ್ಲ. ಹಳ್ಳಿಯ ಅನಕ್ಷರಸ್ಥರೂ ಸಹ ಅವರ ಪದ್ಯಗಳನ್ನು ಹಾಡುತ್ತಿದ್ದರು". ದ ಅಬ್ಸರ್ವರ್ ‌ನ ಅರ್ಥೂರ್ ಸ್ಟ್ರಾಂಗ್‌ವೇಸ್ಹಿಂದುಸ್ಥಾನಿ ಸಂಗೀತ ದಲ್ಲಿ ರವೀಂದ್ರ ಸಂಗೀತ ಕ್ಕೆ ಬಂಗಾಳಿಯರಲ್ಲದವರನ್ನೂ ಪರಿಚಯಿಸಿದರು, ಅದನ್ನು ಹೀಗೆಂದು ಹೇಳುತ್ತಾ "ವ್ಯಕ್ತಿತ್ವದ ವಾಹಿನಿ. [ಅದು] ಸ್ವಾಧೀನಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳು ಹಸ್ತವನ್ನು ಚಾಚಿದ ಆ ಧ್ವನಿ ಮಾಧುರ್ಯಕ್ಕಾಗಿ ಸಂಗೀತ ವ್ಯವಸ್ಥೆಯ ಹಿಂದೆ ಹೋಗುತ್ತದೆ."[೭೬] ಬಾಂಗ್ಲಾದೇಶದ ರಾಷ್ಟ್ರಗೀತೆ ಅಮರ್ ಶೋನರ್ ಬಾಂಗ್ಲ (ಬಂಗಾಳಿ:আমার সোনার বাঙলা) ಮತ್ತು ಭಾರತದ ರಾಷ್ಟ್ರಗೀತೆ ಜನ ಗಣ ಮನ{/0 {2/} } ಅವುಗಳಲ್ಲಿ ಪ್ರಮುಖವಾದವು. ಎರಡು ರಾಷ್ಟ್ರ ಗೀತೆಗಳನ್ನು ರಚಿಸಿದ ಟಾಗೋರ್‌ಗೆ ವ್ಯಕ್ತಿ ವೈಶಿಷ್ಟ್ಯದ ಛಾಪನ್ನು ನೀಡಿದವು.ಸಿತಾರ್ ಪರಿಣತರಾದ ವಿಲಾಯತ್ ಖಾನ್, ಮತ್ತು ಸರೋದ್‌ವಾದಕರಾದ ಬುದ್ಧದೇವ್ ದಾಸ್‌ಗುಪ್ತ ಮತ್ತು ಅಮ್ಜದ್ ಆಲಿ ಖಾನ್‌ರಂತಹ ಸಂಗೀತಗಾರರ ಶೈಲಿಯ ಮೇಲೆ ಇವರು ಗಾಢ ಪರಿಣಾಮ ಬೀರಿದರು.[೭೫]

ಬುಡಕಟ್ಟು ಜನಾಂಗದ ಶವಸಂಸ್ಕಾರದ ಉಡುಗೆಯನ್ನು ಒಳಗೊಂಡ ವಿಲಕ್ಷಣ ಚಿತ್ರಣದ ಕಪ್ಪು-ಬಿಳುಪು ಛಾಯಾಚಿತ್ರ.
ಟಾಗೋರ್‌ರವರು ಪ್ರಾಕ್ತನತೆಯಲ್ಲಿ ತೊಡಗಿದರು: ಉತ್ತರ ನ್ಯೂ ಐರ್ಲ್ಯಾಂಡ್‌ನ ನೀಲಿಬಣ್ಣದ ಮಲಗನ್ ಉಡುಗೆಯ ಚಿತ್ರಣ

ಅರವತ್ತರ ವಯಸ್ಸಿನಲ್ಲಿ ಟಾಗೋರ್‌ ರೇಖಾ ಚಿತ್ರ ಮತ್ತು ವರ್ಣ ಚಿತ್ರ ಕಲೆಯನ್ನು ಪ್ರಾರಂಭಿಸಿದರು; ಅವರ ಅನೇಕ ಸಾಧನೆಗಳ ಯಶಸ್ವೀ ಪ್ರದರ್ಶನಗಳು ಯುರೋಪ್‌ನಾದ್ಯಂತ ನಡೆಯಿತು. ದಕ್ಷಿಣ ಫ್ರಾನ್ಸ್‌ನಲ್ಲಿ[೭೭] ಅವರು ಭೇಟಿ ಮಾಡಿದ ಕಲಾವಿದರಿಂದ ಪ್ರೋತ್ಸಾಹಿಸಿಲ್ಪಟ್ಟರು ಮತ್ತು ಪ್ಯಾರಿಸ್‌ನಲ್ಲಿ ಅದು ಪ್ರಥಮ ಪ್ರದರ್ಶನ ಕಂಡಿತು. ಟಾಗೋರ್‌—ಹೆಚ್ಚಾಗಿ ಪ್ರದರ್ಶನಗೊಂಡ ಪ್ರೊಟನೋಪಿಯ ("ವರ್ಣ ಅಂಧತೆ"), ಅಥವಾ ಬಣ್ಣ ಗ್ರಹಣಶಕ್ತಿಯ ಭಾಗಶಃ ಕೊರತೆ ( ಟಾಗೋರ್‌ರಲ್ಲಿದ್ದಂತೆ ಕೆಂಪು-ಹಸಿರು,)-ಕಲಾತ್ಮಕವಾದ ಮತ್ತು ಬಣ್ಣ ರೂಪರೇಖೆಯಲ್ಲಿ ವೈಶಿಷ್ಟತೆಯಿರುವ ಶೈಲಿಯಲ್ಲಿ ಚಿತ್ರಬಿಡಿಸಿದ್ದಾರೆ. ಅದೇನೇ ಇದ್ದರೂ, ಉತ್ತರ ನ್ಯೂ ಐರ್ಲ್ಯಾಂಡ್‌ನ ಕರಕುಶಲ ಕೆಲಸಗಳು, ಕೆನಡದ ಪಶ್ಚಿಮ ಕರಾವಳಿಯ(ಬ್ರಿಟಿಷ್ ಕೊಲಂಬಿಯ)ಹೈದಕೆತ್ತನೆಯ ಶಿಲ್ಪಗಳು, ಮತ್ತು ಮ್ಯಾಕ್ಸ್ ಪೆಚ್ಸ್ಟೈನ್‌ನ ಮರದ ಪಡಿಯಚ್ಚುಗಳನ್ನೂ ಒಳಗೊಂಡು, ಟಾಗೋರ್‌ ಅಸಂಖ್ಯಾತ ಶೈಲಿಗಳನ್ನು ಉತ್ಸಾಹದಿಂದ ಅನುಸರಿಸಿದ್ದಾರೆ.[೭೮] ಟಾಗೋರ್‌ ಸರಳ ಸಮಂಜಸ ರಚನೆಗಳನ್ನೂ ಒಳಗೊಂಡು, ಅವರ ಸ್ವಂತ ಬರವಣಿಗೆಗಳನ್ನು, ಅವಸರದಲ್ಲಿ ಬರೆದ ಕೈಬರಹಗಳನ್ನು, ಹೊಡೆದುಹಾಕಿದವುಗಳನ್ನು, ಮತ್ತು ಅವರ ಹಸ್ತಪ್ರತಿಯಲ್ಲಿರುವ ಪದ ವಿನ್ಯಾಸಗಳನ್ನು ಸರಳ ಕಲಾತ್ಮಕ ಸ್ವರಪುಂಜಗಳಾಗಿ ಅಂದಗೊಳಿಸುವ ಕಲಾತ್ಮಕ ನಿಲುವು ಅವರಲ್ಲಿತ್ತು.

ಹಳದಿ ಬಣ್ಣದ ಶೀರ್ಷಿಕೆಯಿರುವ ಒಂದು ಹಳೆಯ ಪುಸ್ತಕದ ಸಮೀಪಚಿತ್ರ: ರವೀಂದ್ರನಾಥ ಟಾಗೋರ್‌ರವರ "ಗೀತಾಂಜಲಿ (ಪದ್ಯ ಅರ್ಪಣೆ). W. B. ಯೀಟ್ಸ್‌ರವರ ಪೀಠಿಕೆಯೊಂದಿಗೆ ಮೂಲ ಬಂಗಾಳಿ ಲೇಖಕರಿಂದ ರಚಿಸಲ್ಪಟ್ಟ ಗದ್ಯ ಅನುವಾದಗಳ ಸಂಗ್ರಹ.
ಮ್ಯಾಕ್‌ಮಿಲನ್ ಮತ್ತು ಕೊ ಲಿಮಿಟೆಡ್, ಸೈಂಟ್. ಮಾರ್ಟಿನ್ಸ್ ಸ್ಟ್ರೀಟ್, ಲಂಡನ್, 1913." ಗೀತಾಂಜಲಿಯ 1913 ಮ್ಯಾಕ್‌ಮಿಲನ್ ಆವೃತ್ತಿಯ ಶೀರ್ಷಿಕೆ ಪುಟ
তোমার কাছে খাটে না মোর কবির গর্ব করা,
মহাকবি তোমার পায়ে দিতে যে চাই ধরা।
জীবন লয়ে যতন করি যদি সরল বাঁশি গড়ি,
আপন সুরে দিবে ভরি সকল ছিদ্র তার।
Amar e gan chheŗechhe tar shôkol ôlongkar
Tomar kachhe rakhe ni ar shajer ôhongkar
Ôlongkar je majhe pôŗe milônete aŗal kôre,
Tomar kôtha đhake je tar mukhôro jhôngkar.
Tomar kachhe khaţe na mor kobir gôrbo kôra,
Môhakobi, tomar paee dite chai je dhôra.
Jibon loe jôton kori jodi shôrol bãshi goŗi,
Apon shure dibe bhori sôkol chhidro tar.
ಮೂರ-ಸಂಪುಟದ ಕೈಬರಹದ ಸಂಯೋಜನೆ; ಪ್ರತೀ ಸಂಪುಟವು ಮೂಲ ಬಂಗಾಳಿ ಮತ್ತು ಕೆಳಗೆ ಇಂಗ್ಲೀಷ್-ಭಾಷಾ ಅನುವಾದವನ್ನು ಹೊಂದಿದೆ: "ಮೈ ಫ್ಯಾನ್ಸೀಸ್ ಆರ್ ಫೈರ್‌ಫ್ಲೈಸ್: ಕತ್ತಲೆಯಲ್ಲಿ ಮಿನುಗುತ್ತಿರುವ ಬೆಳಕಿನ ಸಣ್ಣ ಚುಕ್ಕೆ. ದಾರಿಪಕ್ಕದಲ್ಲಿ ಹುಟ್ಟಿದ ಅವಸರದ ದೃಷ್ಟಿಹಾಯಿಸುವ ಅದೇ ಧ್ವನಿ ಈ ಅಸಂಬದ್ಧ ಸಾಲುಗಳಲ್ಲಿ ಗುಣುಗುಣಿಸುತ್ತದೆ. ಚಿಟ್ಟೆಯು ವರ್ಷಗಳನ್ನು ಲೆಕ್ಕ ಮಾಡುವುದಿಲ್ಲ ನಿಮಿಷಗಳನ್ನು. ಹಾಗಾಗಿ ಸಾಕಷ್ಟು ಸಮಯವನ್ನು ಹೊಂದಿದೆ.
"ಟಾಗೋರ್‌ರವರ ಕೈಯಿಂದ ಹುಂಗರಿಯಲ್ಲಿ ಅರ್ಪಿಸಲಾದುದು, 1926: ಬಂಗಾಳಿ ಮತ್ತು ಇಂಗ್ಲೀಷ್

ಟಾಗೋರ್‌ರವರಿಂದ ಅನುವಾದಿತವಾದ ಮುಕ್ತಕವಿತೆ (ಗೀತಾಂಜಲಿ , ಪದ್ಯ VII):[೭೯]

ಅವಳುಟ್ಟು ತೊಟ್ಟುದನೆಲ್ಲಾ ಕಿತ್ತೆಸೆದವು ನನ್ನ ಗೀತೆಗಳು. ಅವಳಿಗೆ ವಸ್ತ್ರ ಒಡವೆಗಳ ಹಮ್ಮುಬಿಮ್ಮುಗಳಿಲ್ಲ. ಅಡ್ಡ ಬಂದಾವವು ನಮ್ಮ ಮಿಲನೋತ್ಸವಕೆ;ನಿನ್ನ ನನ್ನ ನಡುವೆ ತೊಡರಾದಾವವು;ನುಂಗಿ ಬಿಟ್ಟೀತದರ ಗಿಲಿಗಿಲಿ ನಾದ ನಿನ್ನ ಪಿಸು ದನಿಯ. .
ನನ್ನ ಕವಿತ್ವದ ಜಂಬ ನಾಚಿ ಸಾಯಲು ಸಾಕು ನಿನದೊಂದು ನೋಟ, ಓ ಮಹಾ ಕವಿಯೇ ಕುಳಿತಿಹೆನು ನಾನು ನಿನ್ನ ಚರಣದಡಿ, ಸಂಗೀತ ಹೊಮ್ಮಿಸಲು ಕೊಳಲಿನಾ ನಳಿಕೆ ನಿನಗಿದ್ದಂತೆ, ಸರಳ ಸಜ್ಜನಿಕೆಯ ಜೀವನವದೊಂದು ಸಾಕೆನಗೆ.

ಗೀತಾಂಜಲಿ ಯ ಆರನೇ ಪದ್ಯ "ಕ್ಲಾಂತಿ" (ಬಂಗಾಳಿ:ক্লান্তি; "ಫಟಿಗ್"), ಹೀಗಿದೆ:

এই দীনতা ক্ষমা করো,প্রভু,
পিছন-পানে তাকাই যদি কভু।
দিনের তাপে রৌদ্রজ্বালায় শুকায় মালা পূজার থালায়,
সেই ম্লানতা ক্ষমা করো, ক্ষমা করো প্রভু।।
Klanti amar khôma kôro, probhu
Pôthe jodi pichhie poŗi kobhu
Ei je hia thôro thôro kãpe aji êmontôro,
Ei bedona khôma kôro, khôma kôro probhu.
Ei dinota khôma kôro, probhu,
Pichhon-pane takai jodi kobhu.
Diner tape roudrojalae shukae mala pujar thalae,
Shei mlanota khôma kôro, khôma kôro, probhu.

ಟಾಗೋರ್‍ ಕಾವ್ಯಗಳಿಗೆ ಅನೇಕ ಸಂಗೀತಕಾರರು ಸಂಗೀತ ಸಂಯೋಜನೆ ನೀಡಿದ್ದಾರೆ, ಶಾಸ್ತ್ರೀಯ ಸಂಗೀತಕಾರ ಅರ್ಥೂರ್ ಶೆಫರ್ಡ್‌ರವರ ಅತ್ಯುಚ್ಚ ತಾರ ಸ್ಥಾಯಿಯಲ್ಲಿ ತ್ರಿಸ್ವರ ಮತ್ತು ತಂತಿವಾದ್ಯ ಚತುಷ್ಕ ಹಾಗೂ ಟಾಗೋರ್‌ರ ಕಾವ್ಯ ಗೀತಾಂಜಲಿಯ "ಸ್ಟ್ರೀಮ್ ಆಫ್ ಲೈಫ್"‌ನ ರೂಪಾಂತರ, ಸಂಗೀತಕಾರ ಗ್ಯಾರಿ ಸ್ಕೈಮ್ಯನಾನ್‌ರವರ "ಪ್ರಾಣ್" ಮೊದಲಾದವು ಅವುಗಳಲ್ಲಿ ಪ್ರಮುಖವಾದವುಗಳು. ಅನಂತರದವುಗಳಿಗೆ, ಇಂಟರ್ನೆಟ್ ಪ್ರಖ್ಯಾತಿ ಮಟ್ ಹಾರ್ಡಿಂಗ್‌ನ ೨೦೦೮ ವೈರಲ್ ವೀಡಿಯೊಗೆ ಜತೆಗೂಡಲು ಪಲ್ಬಾಶ ಸಿದ್ದಿಕೀ ಸಂಗೀತ ನೀಡಿದ್ದಾರೆ ಹಾಗೂ ಅವು ಅವರ ಧ್ವನಿಯಿಂದಲೇ ಮೂಡಿಬಂದಿವೆ.[೮೦]

ರಾಜಕೀಯ ನಿಲುವು

[ಬದಲಾಯಿಸಿ]
At a formal function, an aged bald man and an old women are humbly dressed and seated side-by-side with legs folded on a rug-strewn dais at right; the man looks at a bearded, robed, and garlanded old man seated on another dais at left, who is reading from a sheet of paper held in his left hand. In the foreground, various dishes and ceremonial objects are arrayed; in the background, a half-dozen dignitaries and dozens of ordinary people observe.
ಗಾಂಧಿ ಮತ್ತು ಪತ್ನಿ ಕಸ್ತೂರಬಾ ಜೊತೆಯಲ್ಲಿ ಶಾಂತಿನಿಕೇತನದಲ್ಲಿ ೧೯೪೦ರಲ್ಲಿ

ಟಾಗೋರ್‌ರ ರಾಜಕೀಯ ಚಿಂತನೆ ಕ್ಲಿಷ್ಟಕರ.ಸಾರ್ವಭೌಮತ್ವವನ್ನು ವಿರೋಧಿಸಿದ ಅವರು ಭಾರತೀಯ ರಾಷ್ಟ್ರೀಯತಾವಾದಿಗಳನ್ನು ಬೆಂಬಲಿಸಿದರು.[೮೧][೮೨][೮೩] ಹಿಂದು-ಜರ್ಮನ್ ಗುಪ್ತಕೂಟ ಪ್ರಯೋಗದ ಸಂದರ್ಭದಲ್ಲಿ ಅವರು ಮಂಡಿಸಿದ ರುಜುವಾತುಗಳು ಮತ್ತು ನಂತರದ ವಿವರಣೆಗಳು ಘಾದರೈಟ್ ಗುಪ್ತಕೂಟದ ಬಗ್ಗೆ ಅವರಿಗೆ ಅರಿವಿತ್ತಂಬುದನ್ನು ದೃಢೀಕರಿಸಿವೆ. ಅವರು ಜಪಾನಿನ ಪ್ರಧಾನ ಮಂತ್ರಿ ತೆರೌಚಿ ಮಸಟೇಕ್ ಮತ್ತು ಮಾಜಿ ಪ್ರಧಾನ ಸಚಿವ ಒಕುಮ ಶಿಗೆನೊಬು‌ರವರ ಬೆಂಬಲಕ್ಕಾಗಿ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.[೮೪] ಆದರೂ ಅವರು ಸ್ವದೇಶಿ ಚಳವಳಿಯನ್ನು ಅವರ ೧೯೨೫ರ ಪ್ರಬಂಧ "ದ ಕಲ್ಟ್ ಆಫ್ ದ ಚರಕ"ದಲ್ಲಿ ತೀಕ್ಷ್ಣ ವಿಡಂಬನೆಗೆ ಈಡು ಮಾಡಿದ್ದಾರೆ.ಬ್ರಿಟಿಷ್ ಸಾರ್ವಭೌಮತ್ವವನ್ನು "ನಮ್ಮ ಸಾಮಾಜಿಕ ರೋಗದ ರಾಜಕೀಯ ಲಕ್ಷಣಗಳು" ಎಂದು ಟೀಕಿಸಿದರು. "ಅಂಧ ಕ್ರಾಂತಿಯ ಪ್ರಶ್ನೆಯೇ ಇಲ್ಲ, ಆದರೆ ದೃಢ ಮತ್ತು ಉದ್ದೇಶಪೂರ್ಣ ಶಿಕ್ಷಣದ ಅಗತ್ಯವಿದೆ" ಎಂಬುದನ್ನು ಸ್ವೀಕರಿಸಲು ಭಾರತೀಯರನ್ನು ಪ್ರೇರೇಪಿಸಿದರು. ಈ ಮೂಲಕ, ಅವರು ಸ್ವ-ಸಹಾಯ ಮತ್ತು ವೈಚಾರಿಕ ಸಮ್ಋದ್ಧಿ ಜನಸಾಮಾನ್ಯರಲ್ಲಿ ಬೆಳೆಯಲಿ, ಅದೊಂದೇ ಪರ್ಯಾಯ ಮಾರ್ಗ ಎಂದರು.[೮೫][೮೬]

ಇಂತಹ ಅಭಿಪ್ರಾಯಗಳು ಅನೇಕರನ್ನು ಅನಿವಾರ್ಯವಾಗಿ ಕೆರಳಿಸಿತು. ೧೯೧೬ರಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೊ ಹೋಟೆಲ್‌ನಲ್ಲಿ ತಂಗಿದ್ದಾಗ ಭಾರತೀಯ ವಲಸಿಗರಿಂದ ಹತ್ಯೆಯಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಹತ್ಯೆಗೆ ಹೊಂಚು ಹಾಕಿದ್ದ ಕೊಲೆಪಾತಕರು ಜಗಳದಲ್ಲಿ ತೊಡಗಿದ್ದರಿಂದ ಆ ಸಂಚು ವಿಫಲವಾಯಿತು.[೮೭] ಆದರೂ ಟಾಗೋರ್‌ ಭಾರತೀಯ ಸ್ವತಂತ್ರ ಚಳವಳಿಯನ್ನು ಪ್ರತಿಬಿಂಬಿಸುವ ಹಾಡುಗಳನ್ನು ಬರೆದರು ಮತ್ತು ೧೯೧೯ರ ಜಲಿಯನ್‌ವಾಲಾ ಬಾಘ್ ಹತ್ಯಾಕಾಂಡದ ವಿರುದ್ಧದ ಪ್ರತಿಭಟನಾರ್ಥ ಅವರ ನೈಟ್‌ಹುಡ್‌ ಪದವಿಯನ್ನು ಪರಿತ್ಯಜಿಸಿದರು.[೮೮] ಟಾಗೋರ್‌ರ ಹೆಚ್ಚು ರಾಜಕೀಯ ಜವಾಬ್ದಾರಿಯುತ ಕಾರ್ಯಗಳೆಂದರೆ - "ಚಿಟ್ಟೊ ಜೇಥ ಭಾಯ್‌ಶುನ್ಯೊ" ("ಅಂಜಿಕೆಯಿಲ್ಲದ ಮನವಿದ್ದಲ್ಲಿ") ಮತ್ತು ಹೆಚ್ಚಾಗಿ ಗಮನಸೆಳೆದ ಹಾಗೂ ಗಾಂಧಿಯವರಿಂದ ಮೆಚ್ಚುಗೆಗೆ ಪಾತ್ರವಾದ "ಎಕ್ಲ ಚಲೊ ರೆ" ("ನಿನ್ನ ಕರೆಗೆ ಅವರು ಓಗೊಡದಿದ್ದರೆ, ನಡೆ ಒಬ್ಬನೇ ಮುನ್ನಡೆ").[೮೯] ಗಾಂಧಿ-ಟಾಗೋರ್‌ ಅವರದು ಪ್ರಕ್ಷುಬ್ಧ ಸಂಬಂಧ.ಆದರೂ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರ ಸಮುದಾಯ ನಿರ್ಮಾಣವಾಗ ಬೇಕು ಎಂಬ ಗಾಂಧಿ-ಅಂಬೇಡ್ಕರ್ ನಡುವಿನ ಜಗಳವನ್ನು ಪರಿಹರಿಸುವಲ್ಲಿ ಹಾಗೂ ಗಾಂಧಿಯವರ "ಆಮರಣ" ಉಪವಾಸವನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.[೯೦][೯೧]

ಒಂದು ಹಕ್ಕಿಯನ್ನು ಪಂಜರದಲ್ಲಿಟ್ಟು, ಅದು ಸಾಯುವವರೆಗೆ ಪುಸ್ತಕದ ಹರಿದ ಪುಟಗಳನ್ನು ಬಲವಂತವಾಗಿ ತಿನ್ನಿಸುವ ಕಥೆ "ದ ಪ್ಯಾರೊಟ್ಸ್ ಟ್ರೈನಿಂಗ್"‌ನಲ್ಲಿ ಟಾಗೋರ್‌ ಸಾಂಪ್ರದಾಯಕ ಶಾಲಾ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ.[೯೨][೯೩] ಈ ಸಾಧನೆಗಳು ಟಾಗೋರ್‌ರವರು, ೧೯೧೭ರ ಅಕ್ಟೋಬರ್ ೧೧ರಲ್ಲಿ ಹೊಸರೀತಿಯ ವಿಶ್ವಾವಿದ್ಯಾನಿಲಯವನ್ನು ರೂಪಿಸಲು ಕ್ಯಾಲಿಫೋರ್ನಿಯಾದ ಸಂತ ಬಾರ್ಬರಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕನಸು ಕಂಡರು. "[ಅವರ ಆಶ್ರಮ] ಶಾಂತಿನಿಕೇತನವನ್ನು ಭಾರತ ಮತ್ತು ಪ್ರಪಂಚದ ಸಂಪರ್ಕ ಸೇತುವಾಗಿ ಮಾಡಬೇಕು, [ಹಾಗೂ] ರಾಷ್ಟ್ರ ಮತ್ತು ಭೌಗೋಳಿಕ ಸೀಮಾ ರೇಖೆಯ ಮಿತಿಗಳನ್ನು ದಾಟಿ ಮಾನವೀಯತೆ ಶಿಕ್ಷಣದ ವಿಶ್ವಕೇಂದ್ರವಾಗಿ ಮಾಡಬೇಕು" ಎಂದು ಅಪೇಕ್ಷಿಸಿದರು. ಅವರು ವಿಶ್ವ-ಭಾರತಿζ[›] ಎಂದು ಹೆಸರಿಸಿದ ಶಾಲೆಯ ಅಡಿಪಾಯ ೧೯೧೮ರ ಡಿಸೆಂಬರ್ ೨೨ರಲ್ಲಿ ಹಾಕಲ್ಪಟ್ಟಿತು; ಅದನ್ನು ೧೯೨೧ರ ಡಿಸೆಂಬರ್ ೨೨ರಲ್ಲಿ ಉದ್ಘಾಟಿಸಲಾಯಿತು.[೯೪] ವಿದ್ಯಾರ್ಥಿಗಳಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲು ಗುರುಗಳ ನ್ನು ನೇಮಕಮಾಡಿಕೊಂಡು ಬ್ರಹ್ಮಚರ್ಯ ಶೈಕ್ಷಣಿಕ ಸಂಸ್ಥೆಯನ್ನು ಇಲ್ಲಿ ಟಾಗೋರ್‌ ಸ್ಥಾಪಿಸಿದರು. ಶಾಲೆಗಾಗಿ ಮತ್ತು ಶಾಲಾ ಸಿಬ್ಬಂದಿ ವರ್ಗಕ್ಕಾಗಿ ಹಣ ಸಂಗ್ರಹಿಸಲು ಟಾಗೋರ್‌ ತುಂಬಾ ಶ್ರಮಿಸಿದರು. ಅವರ ನೊಬೆಲ್ ಪ್ರಶಸ್ತಿಯ ಹಣವನ್ನೆಲ್ಲಾ ಅದಕ್ಕಾಗಿ ವಿನಿಯೋಗಿಸಿದರು.ಶಾಂತಿನಿಕೇತನದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಮಾಡುವಂಥ ಜಬಾಬ್ದಾರಿಗಳಲ್ಲಿ ಟಾಗೋರ್‌ ಸದಾ ಕಾರ್ಯನಿರತರಾಗಿರುವಂತೆ ಮಾಡಿದವು. ಬೆಳಗ್ಗೆ ತರಗತಿಗಳಲ್ಲಿ ಬೋಧಿಸಿದರೆ ಮಧ್ಯಾಹ್ನ ಮತ್ತು ಸಂಜೆ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನು ಬರೆಯುವುದರಲ್ಲಿ ತಲ್ಲೀನರಾಗಿರುತ್ತಿದ್ದರು.ಶಾಲೆಗಾಗಿ ೧೯೧೯ ಮತ್ತು ೧೯೨೧ರ ನಡುವಿನ ಅವಧಿಯಲ್ಲಿ ಯುರೋಪ್ ಮತ್ತು U.S.ನಲ್ಲಿ ಟಾಗೋರ್‌ ಹಣ ಸಂಗ್ರಹಿಸಿದರು.

ಪರಿಣಾಮ ಮತ್ತು ಆಸ್ತಿ

[ಬದಲಾಯಿಸಿ]
ಗುಲಾಬಿ ಬಣ್ಣದ ಗೋಡೆಗಳನ್ನು ಮತ್ತು ಮರದ ಫಲಕ ಜೋಡಣೆಯನ್ನು ಹೊಂದಿರುವ, ಸಣ್ಣ ಅಲಂಕೃತ ಅಷ್ಟಕೋನೀಯ ವಸ್ತುಸಂಗ್ರಹಾಲಯವನ್ನು ಹೊಂದಿರುವ, ದೊಡ್ಡ ಕಂಬಗಳ ಮೇಲಿರುವ ಉದ್ದ ಮರದ ಪೀಠಕ್ಕೆ ಒರಗಿ ನಿಂತಿರುವ ಕಂಚಿನ ಎದೆಯ ಮಧ್ಯ-ವಯಸ್ಸಿನ ಮತ್ತು ಉದ್ದ ಗಡ್ಡವನ್ನು ಹೊಂದಿರುವ ವ್ಯಕ್ತಿ; ಎಡದಲ್ಲಿ, ವೇಷಭೂಷಣದಿಂದ ಅಲಂಕೃತಗೊಂಡ ಯುವಜನರು ನಾಟಕವಾಡುತ್ತಿರುವ ದೃಶ್ಯ ಹಾಗೂ ಬಲದಲ್ಲಿ, ಕಪ್ಪು ಮತ್ತು ಬಿಳಿ ನೀಳುಡುಪನ್ನು ಧರಿಸಿರುವ ಉದ್ದ ಬಿಳಿ ಗಡ್ಡದ ವಯಸ್ಸಾದ ಗಂಡಸಿನ ಪ್ರತಿಕೃತಿಯನ್ನು ತೋರಿಸುವ ಟಾಗೋರ್‌ರವರ ಎರಡು ಚಿತ್ರಕಲೆಯಿರುವ ಗೋಡೆಗೆ ಮುಖಮಾಡಿ ನಿಂತುಕೊಂಡಿದ್ದಾನೆ.
ಟಾಗೋರ್ರವರ ಕೊಠಡಿ, ಸರ್ದಾರ್ ಪಟೇಲ್ ಮೆಮೋರಿಯಲ್, ಅಹ್ಮದಾಬಾದ್

ಟಾಗೋರ್‌ ಇಂದಿಗೂ ಎಷ್ಟು ಪ್ರಸ್ತುತ ಎಂಬುದಕ್ಕೆ ಅವರ ಗೌರವಾರ್ಥ ಆಚರಿಸಲಾಗುವ ಹಬ್ಬಗಳೇ ಒಂದು ಮಾನದಂಡ: ಟಾಗೋರ್‌ ಜನ್ಮದಿನೋತ್ಸವ ಕಬಿಪ್ರಾಣಮ್ ; ಅಮೇರಿಕ ಸಂಯುಕ್ತ ಸಂಸ್ಥಾನದ ಇಲ್ಲಿನೋಯಿಸ್‌ನ ಉರ್ಬಾನದಲ್ಲಿ ನಡೆದ ಟಾಗೋರ್ ವಾರ್ಷಿಕೋತ್ಸವ; ರವೀಂದ್ರ ಪಥ ಪರಿಕ್ರಮ ಯಾತ್ರಾರ್ಥಿಗಳು ಕಲ್ಕತ್ತಾದಿಂದ ಶಾಂತಿನಿಕೇತನಕ್ಕೆ ಹೋಗುವುದು; ಪ್ರಮುಖ ವಾರ್ಷಿಕೋತ್ಸವಗಳಲ್ಲಿ ನಡೆಸಲ್ಪಡುವ ಟಾಗೋರ್‌ರ ಕಾವ್ಯದ ವಿಧ್ಯುಕ್ತ ವಾಚನ; ಹಾಗೂ ಇತ್ಯಾದಿಗಳು.[೩೯][೯೫][೯೬] ಭಾಷೆ ಮತ್ತು ಕಲೆಯಿಂದ ಇತಿಹಾಸ ಮತ್ತು ರಾಜಕೀಯದವರೆಗೆ ಅನುರಣಿಸಿದ ಈ ಆಸ್ತಿ ಬಂಗಾಳಿ ಸಂಸ್ಕೃತಿಯಲ್ಲಿ ಸ್ಫುಟವಾಗಿ ಗೋಚರಿಸುತ್ತದೆ.ಅವರೊಬ್ಬ 'ಶಿಖರಪ್ರಾಯ ಪುರುಷ', 'ಬಹುಮುಖಿ ವ್ಯಕ್ತಿತ್ವದ ಇವರ ಚಿಂತನೆ ಇಂದಿಗೂ ಪ್ರಸ್ತುತ' ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಟಾಗೋರ್‌ ಅವರನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.[೯೬] ಟಾಗೋರ್‌ರ ಬಂಗಾಳಿ-ಭಾಷಾ ಬರಹಗಳನ್ನು—೧೯೩೯ Rabīndra Rachanāvalī —ಬಂಗಾಳದ ಅಮೂಲ್ಯ ಸಾಂಸ್ಕೃತಿಕ ಸಂಪತ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. "ಭಾರತ ಸೃಷ್ಟಿಸಿದ ಮಹಾ ಕವಿ" ಎಂದು ಟಾಗೋರ್‌ ತಮ್ಮನ್ನು ತಾವು ಬಣ್ಣಿಸಿಕೊಂಡಿದ್ದಾರೆ.[೯೭]


ಟಾಗೋರ್‌ ಯುರೋಪ್, ಉತ್ತರ ಅಮೇರಿಕ, ಮತ್ತು ಪೂರ್ವ ಏಷ್ಯಾದ್ಯಂತ ಪ್ರಖ್ಯಾತರು. ಅವರು ಪ್ರಗತಿಶೀಲ ಸಹಶಿಕ್ಷಣ ಸಂಸ್ಥೆ[೯೮] ಡಾರ್ಟಿಂಗ್‌ಟನ್ ಹಾಲ್ ಸ್ಕೂಲ್‌ ಸ್ಥಾಪನೆಯ ಪ್ರಮುಖ ರೂವಾರಿ; ಜಪಾನಿನಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಯಶುನಾರಿ ಕವಬತರಂತಹ ಅನೇಕ ವ್ಯಕ್ತಿಗಳ ಮೇಲೆ ತಮ್ಮ ಪ್ರಭಾವ ಬೀರಿದರು.[೯೯] ಬಹುವಾಗಿ ಇಂಗ್ಲೀಷ್, ಡಚ್, ಜರ್ಮನ್, ಸ್ಪ್ಯಾನಿಶ್, ಮತ್ತು ಇತರ ಯುರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿವೆ. ಜೆಕ್ ದೇಶದ ಇತಿಹಾಸಜ್ಞ ವಿನ್ಸೆಂಕ್ ಲೆಸ್ನಿ,[೧೦೦] ಫ್ರೆಂಚ್ ನೊಬೆಲ್ ಪ್ರಶಸ್ತಿ ವಿಜೇತ ಆಂಡ್ರೆ ಗೈಡ್, ರಷ್ಯಾದ ಕವಿ ಅನ್ನ ಅಖ್ಮತೋವ,[೧೦೧] ಮಾಜಿ ಟರ್ಕಿಶ್ ಪ್ರಧಾನ ಮಂತ್ರಿ ಬುಲೆಂಟ್ ಎಸೆವಿಟ್,[೧೦೨] ಮತ್ತು ಇತರರಿಂದ ಟಾಗೋರ್‌ರ ಬರಹಗಳು ಅನುವಾದಿಸಲ್ಪಟ್ಟಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಾಗೋರ್‌ ನೀಡಿದ ಉಪನ್ಯಾಸವು ಬಹು ಜನಪ್ರಿಯ (ವಿಶೇಷವಾಗಿ ೧೯೧೬–೧೯೧೭ರ ಅವಧಿಯದ್ದು). ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ಶ್ರೋತೃಗಳಿಂದ ಮುಕ್ತ ಪ್ರಶಂಸೆಗೆ ಒಳಗಾದ ಉಪನ್ಯಾಸಗಳಿವು.ಇವರ ಸುತ್ತಲೂ ಎದ್ದ ವಿವಾದಗಳ ಹುತ್ತη[›] ಜಪಾನ್ ಮತ್ತು ಉತ್ತರ ಅಮೇರಿಕಾದಲ್ಲಿ ಅವರ ಜನಪ್ರಿಯತೆ ಕುಗ್ಗಲು ಕಾರಣವಾಯಿತು. ೧೯೨೦ರ ನಂತರದ ವಿದ್ಯಮಾನವಿದು. ಕೊನೆಗೆ ಬಂಗಾಳದ ಆಚೆ ಇವರ ವರ್ಚಸ್ಸಿಗೆ 'ಗ್ರಹಣ' ಹಿಡಿದಂತಾಯಿತು.[೧೦೩]

ಅನುವಾದಗಳ ಮೂಲಕ ಟಾಗೋರ್‌ ಸ್ಪ್ಯಾನಿಶ್ ಸಾಹಿತ್ಯದ ಮೇಲೆ ಪ್ರಭಾವ ಬೀರಿದರು: ಚಿಲಿ ದೇಶದವರಾದ ಪಬ್ಲೊ ನೆರುಡ ಮತ್ತು ಗಾಬ್ರಿಯೆಲ ಮಿಸ್ಟ್ರಲ್, ಮೆಕ್ಸಿಕನ್ ಬರಹಗಾರ ಒಕ್ಟಾವಿಯೊ ಪಾಜ್, ಮತ್ತು ಸ್ಪೇನ್ ದೇಶದವರಾದ ಜೋಸ್ ಒರ್ಟೆಗ ವೈ ಗ್ಯಾಸೆಟ್, ಜೆನೊಬಿಯ ಕ್ಯಾಂಪ್ರುಬಿ, ಮತ್ತು ಜ್ವಾನ್ ರಾಮನ್ ಜಿಮೆನೆಜ್.೧೯೧೪ ಮತ್ತು ೧೯೨೨ರ ಮಧ್ಯೆ, ಜಿಮೆನೆಜ್-ಕ್ಯಾಂಪ್ರುಬಿ ದಂಪತಿಗಳು ಟಾಗೋರ್‌ರ ಇಪ್ಪತ್ತೆರಡು ಪುಸ್ತಕಗಳನ್ನು ಇಂಗ್ಲಿಷ್‌ನಿಂದ ಸ್ಪ್ಯಾನಿಶ್‌ಗೆ ಅನುವಾದಿಸಿದರು ಮತ್ತು ವ್ಯಾಪಕ ಪರಿಷ್ಕರಣೆಗೆ ಒಳಪಡಿಸಿ ಅದಕ್ಕೆ ಟಾಗೋರ್‌ರ ದ ಕ್ರಿಸೆಂಟ್ ಮೂನ್ ಎಂದು ಹೆಸರಿಸಿದರು. ಈ ಸಂದರ್ಭದಲ್ಲಿ, ಜಿಮೆನೆಜ್‌ರವರು ಪ್ರಮುಖ ಹೊಸಕಲ್ಪನೆ "ನೇಕೆಡ್ ಪೋಯೆಟ್ರಿ"ಯನ್ನು (ಸ್ಪ್ಯಾನಿಶ್: «ಪೊಯೆಸಿಯ ದೆಸ್ನುಡ») ಸೃಷ್ಟಿಸಿದರು. ಇದು ಅನ್ವೇಷಣೆಯ ಹೆಗ್ಗುರುತಾಯಿತು.[೧೦೪] "ಪರಿಪೂರ್ಣತೆಗಾಗಿ ನಾವೆಲ್ಲ ಹಪಹಪಿಸುವುದರ ಬಗ್ಗೆ ತುಟಿ ತೆಗೆದು ಆಡಿದ ಮಾತುಗಳೇ ಟಾಗೋರ್‌ರ ಇಷ್ಟೊಂದು ಜನಾದರಣೀಯತೆಗೆ ಕಾರಣ" ಎಂದು ಒರ್ಟೆಗ ವೈ ಗ್ಯಾಸೆಟ್ ಬರೆದಿದ್ದಾನೆ.ಬಾಲಿಶ ಕೌತುಕದ ಸುಪ್ತ ಪ್ರಜ್ಞೆಯನ್ನು ಟಾಗೋರ್‌ ಜಾಗೃತಿಗೊಳಿಸುತ್ತಾರೆ ಮತ್ತು ಪೂರ್ವದೇಶದ ಅಧ್ಯಾತ್ಮದ ಬಗ್ಗೆ ಆಳವಾಗಿ ಗಮನಹರಿಸುವ ಓದುಗರನ್ನು ಮೋಡಿಗೊಳಿಸುವ ಎಲ್ಲಾ ರೀತಿಯ ಭಾಷೆಯೊಂದಿಗೆ ಅವರನ್ನು ಆರ್ದ್ರಗೊಳಿಸುತ್ತಾರೆ". ೧೯೨೦ರಲ್ಲಿ ದಾಂತೆ ಅಲಿಘೈರಿ, ಮಿಗ್ವೆಲ್ ದೆ ಸರ್ವಾಂಟೆಸ್, ಜೋಹನ್ ವೋಲ್ಫ್‌ಗಂಗ್ ವನ್ ಗೊಯಥೆ, ಪ್ಲೇಟೊ, ಮತ್ತು ಲಿಯೊ ಟಾಲ‌್‌ಸ್ಟಾಯ್ ಮೊದಲಾದವರ ಸಮಕಾಲೀನದಲ್ಲಿ ಟಾಗೋರ್‌‌ರವರ ಬರವಣಿಗೆಗಳು ಉಚಿತ ಆವೃತ್ತಿಗಳಾಗಿ ಪ್ರಸರಣಗೊಂಡಿದ್ದವು.

ಸಲ್ಲಬೇಕಾದ್ದಕ್ಕಿಂತಲೂ ಮೀರಿದ ಗೌರವಾದರವನ್ನು ಟಾಗೋರ್‌ಗೆ ನೀಡಲಾಯಿತು ಎಂದು ಕೆಲವು ಪಾಶ್ಚಾತ್ಯರು ಪರಿಗಣಿಸಿದ್ದಾರೆ."ಯೀಟ್ಸ್‌ ಹೊರತು ಪಡಿಸಿ ಬೇರೆ ಯಾರಾದರೂ ಅವರ ಕವನಗಳನ್ನು ಇನ್ನೂ ಗಂಭೀರವಾಗಿ ಪರಿಗಣಿಸಬಹುದು" ಎಂದು[೧೦೩]}ಗ್ರಹಮ್ ಗ್ರೀನಿ ಸಂಶಯಿಸುತ್ತಾರೆಟಾಗೋರ್‌ ಬಗ್ಗೆ ಗೌರವಾದರವನ್ನು ಹೊಂದಿದ್ದ ಗತಕಾಲದ ಲ್ಯಾಟಿನ್ ಅಮೇರಿಕನ್‌ನ ಆಧುನಿಕ ಕುರುಹುಗಳು ಕಂಡುಬಂದಿವೆ. ಸಲ್ಮಾನ್ ರುಶ್ದಿಯು ಆತನ ನಿಕರಾಗುವದ ಭೇಟಿ ಸಮಯದಲ್ಲಿ ಸೋಜಿಗಕ್ಕೆ ಒಳಗಾಗಿದ್ದು ಇದಕ್ಕೊಂದು ನಿದರ್ಶನ.

ಗ್ರಂಥ ಋಣ (ಆಂಶಿಕ)

[ಬದಲಾಯಿಸಿ]

ಇದನ್ನೂ ನೋಡಿರಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
This article contains Indic text. Without proper rendering support, you may see question marks or boxes, misplaced vowels or missing conjuncts instead of Indic text.
ಹಿನ್ನೆಲೆಯಲ್ಲಿ ಇಟ್ಟಿಗೆ-ಕೆಂಪು ಬಣ್ಣದ ಕಟ್ಟಡ; ಮುಂಭಾಗದಲ್ಲಿ ಒಪ್ಪವಾದ ಪೊದೆಗಳಿಂದ ಆವರಿಸಲ್ಪಟ್ಟ ಹಸ್ತಾಲಂಕಾರದ ಹುಲ್ಲುಹಾಸು.
ಟಾಗೋರ್‌ರವರ ಬಾಲ್ಯ ಮನೆ: ಜೊರೊಸಂಕೊ ಥಾಕುರ್ಬರಿ, ಕಲ್ಕತ್ತಾ
  • ^ α: Bengali pronunciation:
    ಟೆಂಪ್ಲೇಟು:IPA2; ಹಿಂದಿ ಸ್ಪೆಲ್ಲಿಂಗ್: रवीन्द्रनाथ ठाकुर ; ಹಿಂದಿ pronounced [ɾəʋiːn̪d̪ɾənaːt̪ʰ ʈʰaːkuɾ].
  • ^ β: Romanized transliteration from Tagore's name in Bengali script:
    Robindronath Ţhakur .
  • ^ γ: Bengali calendar: 25 Baishakh, 1268 – 22 Srabon, 1348 (২৫শে বৈশাখ, ১২৬৮ – ২২শে শ্রাবণ, ১৩৪৮ বঙ্গাব্দ).
  • ^ δ: Gurudev translates as "divine mentor".[೧೧೨]
  • ^ ε: Tagore was born at No. 6 Dwarkanath Tagore Lane, Jorasanko—the address of the main mansion (the Jorasanko Thakurbari) inhabited by the Jorasanko branch of the Tagore clan, which had earlier suffered an acrimonious split. Jorasanko was located in the Bengali section of Calcutta, near Chitpur Road., near Chitpur Road.[೧೧೩]
  • ^ ζ: Etymology of "Visva-Bharati": from the Sanskrit term for "world" or "universe" and the name of a Rigveda goddess ("Bharati") associated with Saraswati, the Hindu patron goddess of learning.[೯೪] "Visva-Bharati" also translates as "India in the World".
  • ^ η: Tagore was mired in several notable controversies, including his dealings with Indian nationalists Subhas Chandra Bose[೧೦೩] and Rash Behari Bose,[೧೧೪] his expressions of admiration for Soviet-style Communism,[೧೧೫][೧೧೬] and papers confiscated from Indian nationalists in New York allegedly implicating Tagore in a plot to use German funds to overthrow the British Raj.[೧೧೭] The latter allegation caused Tagore's book sales and popularity among the U.S. public to plummet.[೧೧೪] Lastly, his relations with and ambivalent opinion of Italian dictator Benito Mussolini revolted many,[೧೧೮] causing Romain Rolland (a close friend of Tagore's) to state that "[h]e is abdicating his role as moral guide of the independent spirits of Europe and India".[೧೧೯]

ಉಲ್ಲೇಖಗಳು

[ಬದಲಾಯಿಸಿ]
  1. Datta, Pradip Kumar (2003), "Introduction", Rabindranath Tagore's The Home and the World: A Critical Companion, Orient Longman, p. 2, ISBN 8-1782-4046-7
  2. Kripalani, Krishna (1971), "Ancestry", Tagore: A Life, Orient Longman, pp. 2–3, ISBN 8-1237-1959-0
  3. Kripalani, Krishna (1980), Dwarkanath Tagore (1st ed.), pp. 6, 8 {{citation}}: Unknown parameter |reprint= ignored (help)
  4. Thompson 1926, p. 12
  5. Some Songs and Poems from Rabindranath Tagore, East-West Publications, 1984, p. xii, ISBN 0-8569-2055-X
  6. Thompson 1926, pp. 27–28
  7. ೭.೦ ೭.೧ Thompson 1926, p. 20
  8. Das, S (2009), Tagore’s Garden of Eden, retrieved 14 August 2009, [...] the garden in Panihati where the child Rabindranath along with his family had sought refuge for some time during a dengue epidemic. That was the first time that the 12-year-old poet had ever left his Chitpur home to come face-to-face with nature and greenery in a Bengal village. {{citation}}: Unknown parameter |day= ignored (help); Unknown parameter |month= ignored (help)
  9. Thompson 1926, pp. 21–24
  10. Dutta & Robinson 1995, pp. 55–56
  11. Stewart & Twichell 2003, p. 91
  12. Stewart & Twichell 2003, p. 3
  13. ೧೩.೦ ೧೩.೧ ೧೩.೨ ಉಲ್ಲೇಖ ದೋಷ: Invalid <ref> tag; no text was provided for refs named Chakravarty_1961_45
  14. Dutta & Robinson 1997, p. 265
  15. Thompson 1926, p. 31
  16. Dutta & Robinson 1995, p. 373
  17. Dutta & Robinson 1995, pp. 109–111
  18. Dutta & Robinson 1995, p. 109
  19. Dutta & Robinson 1995, p. 133
  20. Dutta & Robinson 1995, pp. 139–140
  21. Hjärne, H (1913), The Nobel Prize in Literature 1913:Presentation Speech, The Nobel Foundation, retrieved 13 August 2009, Tagore's Gitanjali: Song Offerings (1912), a collection of religious poems, was the one of his works that especially arrested the attention of the selecting critics. {{citation}}: Unknown parameter |day= ignored (help); Unknown parameter |month= ignored (help)
  22. Dutta & Robinson 1995, pp. 239–240
  23. Dutta & Robinson 1995, pp. 308–309
  24. Dutta & Robinson 1995, p. 242
  25. Dutta & Robinson 1995, p. 309
  26. Dutta & Robinson 1995, p. 303
  27. Dutta & Robinson 1995, pp. 312–313
  28. Dutta & Robinson 1995, p. 342
  29. Dutta & Robinson 1995, pp. 335–338
  30. ೩೦.೦ ೩೦.೧ ""ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಲ್ಲಿ ಚಿತ್ರಾ"". Archived from the original on 2008-09-26. Retrieved 2009-11-06.
  31. "Tagore, Rabindranath", Banglapedia, Asiatic Society of Bangladesh, archived from the original on 21 ಫೆಬ್ರವರಿ 2009, retrieved 13 August 2009
  32. "Recitation of Tagore's poetry of death", Hindustan Times, Indo-Asian News Service, 2005
  33. Dutta & Robinson 1995, p. 338
  34. Dutta & Robinson 1995, p. 363
  35. Dutta & Robinson 1995, p. 367
  36. "68th Death Anniversary of Rabindranath Tagore", The Daily Star, Dhaka, 2009, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  37. Dutta & Robinson 1995, pp. 374–376
  38. Dutta & Robinson 1995, pp. 178–179
  39. ೩೯.೦ ೩೯.೧ [http: //tagore. business.uiuc.edu/history.html "History of the Tagore Festival"], Tagore Festival Committee, University of Illinois at Urbana-Champaign: College of Business, retrieved 13 August 2009 {{citation}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  40. Chakravarty 1961, pp. 1–2
  41. Dutta & Robinson 1995, p. 206
  42. Hogan, PC; Pandit, L (2003), Rabindranath Tagore: Universality and Tradition, Fairleigh Dickinson University Press, p. 56–58, ISBN 0-8386-3980-1
  43. Chakravarty 1961, p. 182
  44. Dutta & Robinson 1995, p. 253
  45. Dutta & Robinson 1995, p. 256
  46. Dutta & Robinson 1995, p. 267
  47. Dutta & Robinson 1995, pp. 270–271
  48. Chakravarty 1961, p. 1
  49. Dutta & Robinson 1995, pp. 289–292
  50. Dutta & Robinson 1995, pp. 303–304
  51. Dutta & Robinson 1995, pp. 292–293
  52. Chakravarty 1961, p. 2
  53. Dutta & Robinson 1995, p. 315
  54. Chakravarty 1961, p. 99
  55. Chakravarty 1961, pp. 100–103
  56. Dutta & Robinson 1995, p. 317
  57. Dutta & Robinson 1995, pp. 192–194
  58. Dutta & Robinson 1995, pp. 154–155
  59. Lago, M (1976), Rabindranath Tagore, Twayne's world authors series, vol. 402, Twayne Publishers, p. 15, ISBN 0-8057-6242-6
  60. ೬೦.೦ ೬೦.೧ Chakravarty 1961, p. 123
  61. Dutta & Robinson 1995, pp. 79–80
  62. Chakravarty 1961, pp. 123–124
  63. Dutta & Robinson 1997, pp. 21–23
  64. Chakravarty 1961, p. 124
  65. Chakravarty 1961, pp. 45–46
  66. Chakravarty 1961, pp. 48–49
  67. Urban 2001, p. 16
  68. Urban 2001, pp. 6–7
  69. Stewart & Twichell 2003, p. 95
  70. Stewart & Twichell 2003, p. 7
  71. Dutta & Robinson 1995, p. 281
  72. Dutta & Robinson 1995, p. 192
  73. Stewart & Twichell 2003, pp. 95–96
  74. Dutta & Robinson 1995, p. 94
  75. ೭೫.೦ ೭೫.೧ Dasgupta, A (2001), "Rabindra-Sangeet As A Resource For Indian Classical Bandishes", Parabaas, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  76. Dutta & Robinson 1995, p. 359
  77. Dutta & Robinson 1997, p. 222
  78. ಉಲ್ಲೇಖ ದೋಷ: Invalid <ref> tag; no text was provided for refs named Dyson_2001
  79. Tagore 1977, p. 5
  80. YouTubeನಲ್ಲಿನ ವೀಡಿಯೊ.
  81. Dutta & Robinson 1997, p. 127
  82. Dutta & Robinson 1997, p. 210
  83. Dutta & Robinson 1995, p. 304
  84. Brown 1948, p. 306
  85. Dutta & Robinson 1997, pp. 239–240
  86. Chakravarty 1961, p. 181
  87. Dutta & Robinson 1995, p. 204
  88. Dutta & Robinson 1995, pp. 215–216
  89. Chakraborty, SK; Bhattacharya, P (2001), Leadership and Power: Ethical Explorations, Oxford University Press, p. 157, ISBN 0-1956-5591-5
  90. Dutta & Robinson 1995, pp. 306–307
  91. Dutta & Robinson 1995, p. 339
  92. Dutta & Robinson 1997, p. 267
  93. Tagore, R; Pal, PB (translator) (2004), "The Parrot's Tale", Parabaas, retrieved 13 August 2009, The King felt the bird. It didn't open its mouth and didn't utter a word. Only the pages of books, stuffed inside its stomach, raised a ruffling sound. {{citation}}: |first2= has generic name (help); Unknown parameter |day= ignored (help); Unknown parameter |month= ignored (help)
  94. ೯೪.೦ ೯೪.೧ Dutta & Robinson 1995, p. 220 ಉಲ್ಲೇಖ ದೋಷ: Invalid <ref> tag; name "Dutta_1995_220" defined multiple times with different content
  95. Chakrabarti, I (2001), "A People's Poet or a Literary Deity", Parabaas, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  96. ೯೬.೦ ೯೬.೧ Hatcher, BA (2001), "Aji Hote Satabarsha Pare: What Tagore Says To Us A Century Later", Parabaas, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  97. Kämpchen, M (2003), "Rabindranath Tagore In Germany", Parabaas, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  98. Farrell, G (1999), Indian Music and the West, Clarendon Paperbacks Series (3 ed.), Oxford University Press, p. 162, ISBN 0-1981-6717-2
  99. Dutta & Robinson 1995, p. 202
  100. Cameron, R (2006), "Exhibition of Bengali film posters opens in Prague", Radio Prague, retrieved 13 August 2009, Lesny was the first European person to translate Rabindranath Tagore from the original into a European language, the first European or westerner ever. {{citation}}: Unknown parameter |day= ignored (help); Unknown parameter |month= ignored (help)
  101. Sen, A (2006), The Argumentative Indian: Writings on Indian History, Culture, and Identity, Picador, p. 90, ISBN 0-3124-2602-X
  102. Kinzer, S (2006), "Bülent Ecevit, who turned Turkey toward the West, dies", ದ ನ್ಯೂ ಯಾರ್ಕ್ ಟೈಮ್ಸ್, retrieved 13 August 2009, He published several volumes of poetry and translated the works of T. S. Eliot and Rabindranath Tagore. {{citation}}: Unknown parameter |day= ignored (help); Unknown parameter |month= ignored (help)
  103. ೧೦೩.೦ ೧೦೩.೧ ೧೦೩.೨ Sen 1997 ಉಲ್ಲೇಖ ದೋಷ: Invalid <ref> tag; name "Sen_1997" defined multiple times with different content
  104. Dutta & Robinson 1995, pp. 254–255
  105. ""ಗೀತಾಂಜಲಿ (ಪದ್ಯ ಅರ್ಪಣೆಗಳು)"". Archived from the original on 2009-02-12. Retrieved 2009-11-06.
  106. "ದ ಕ್ರಿಸೆಂಟ್ ಮೂನ್"
  107. ""ದ ಹಂಗ್ರಿ ಸ್ಟೋನ್ಸ್"". Archived from the original on 2007-01-18. Retrieved 2009-11-06.
  108. ""ಸಾಧನ: ದ ರಿಯಲೈಸೇಶನ್ ಆಫ್ ಲೈಫ್"". Archived from the original on 2009-10-22. Retrieved 2009-11-06.
  109. "ಸಾಂಗ್ಸ್ ಆಫ್ ಕಬೀರ್"
  110. "ಸ್ಟ್ರೇ ಬರ್ಡ್ಸ್"
  111. "ಥೋಟ್ ರೆಲಿಕ್ಸ್"
  112. Sil, NP (2005), "Devotio Humana: Rabindranath's Love Poems Revisited", Parabaas, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  113. Dutta & Robinson 1995, p. 34
  114. ೧೧೪.೦ ೧೧೪.೧ Dutta & Robinson 1995, p. 214
  115. Dutta & Robinson 1995, p. 297
  116. Dutta & Robinson 1995, pp. 214–215
  117. Dutta & Robinson 1995, p. 212
  118. Kundu, K (2009), "Mussolini and Tagore", Parabaas, retrieved 13 August 2009 {{citation}}: Unknown parameter |day= ignored (help); Unknown parameter |month= ignored (help)
  119. Dutta & Robinson 1995, p. 273

ಆಕರಗಳು

[ಬದಲಾಯಿಸಿ]

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಶ್ಲೇಷಣೆಗಳು
ಶ್ರವ್ಯಪುಸ್ತಕಗಳು
ಜೀವನಚರಿತ್ರೆ
ಸಂಭಾಷಣೆಗಳು
ಸ್ಥಾಪನೆ
ಪಠ್ಯಗಳು

ಟೆಂಪ್ಲೇಟು:Nobel Prize in Literature Laureates 1901-1925