ವಿಷಯಕ್ಕೆ ಹೋಗು

ಕ್ರೆಡಿಟ್ ಕಾರ್ಡುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Smartcard2.png
ಕ್ರೆಡಿಟ್ ಕಾರ್ಡ್‌
ಕ್ರೆಡಿಟ್ ಕಾರ್ಡ್‌ನ ಮುಂಭಾಗದ ಮುಖದ ಉದಾಹರಣೆ:
ಕ್ರೆಡಿಟ್ ಕಾರ್ಡ್‌ನ ಹಿಂಭಾಗದ ಮುಖಕ್ಕೆ ಉದಾಹರಣೆ: ಮ್ಯಾಗ್ನೆಟಿಕ್ ಸ್ಟ್ರೈಪ್ ಸಿಗ್ನೇಚರ್ ಸ್ಟ್ರಿಪ್‌ಕಾರ್ಡ್ ಸೆಕ್ಯುರಿಟಿ ಕೋಡ್

ಕ್ರೆಡಿಟ್ ಕಾರ್ಡ್ ಒಂದು ಸಣ್ಣ ಪ್ಲಾಸ್ಟಿಕ್ ಕಾರ್ಡ್ ಆಗಿದ್ದು, ಇದನ್ನು ಬಳಕೆದಾರರಿಗೆ ಹಣ ಸಂದಾಯ ಮಾಡುವುದಕ್ಕಾಗಿ ಬಳಸಲು ಜಾರಿಗೊಳಿಸಿರುವ ಒಂದು ವ್ಯವಸ್ಥೆಯಾಗಿದೆ. ಈ ಕಾರ್ಡನ್ನು ಹೊಂದಿರುವವರು ತಮಗೆ ಬೇಕಾದ ವಸ್ತುಗಳು ಮತ್ತು ಸೇವೆಗಳಿಗೆ ತಕ್ಕ ಮೌಲ್ಯವನ್ನು ತೆರುವ ಭರವಸೆ ನೀಡುವ ಆಧಾರದಲ್ಲಿ ತಮಗೆ ಬೇಕಾಗುವ ಅಗತ್ಯ ವಸ್ತು ಮತ್ತು ಸೇವೆಗಳನ್ನು ಪಡೆಯಲು ಇದು ಅವಕಾಶ ನೀಡುತ್ತದೆ.[] ಈ ಕಾರ್ಡನ್ನು ನೀಡುವವರು ಒಂದು ಆವರ್ತ ಖಾತೆಯನ್ನು ರಚಿಸಿಸುವ ಮೂಲಕ ಗ್ರಾಹಕ ರಿಗೆ (ಅಥವಾ ಬಳಕೆದಾರರಿಗೆ) ಒಂದು ಸೀಮಿತ ವ್ಯಾಪ್ತಿಯ ಸಾಲವನ್ನು (ಕ್ರೆಡಿಟ್) ಒದಗಿಸುತ್ತಾರೆಯಲ್ಲದೇ, ಇದರ ಮೂಲಕ ಬಳಕೆದಾರರು ವ್ಯಾಪಾರಿಗೆ ಅಥವಾ ಬಳಕೆದಾರನಿಗೆ ನಗದು ಮುಂಗಡ ವಾಗಿ ನೀಡಲು ಹಣವನ್ನು ತೆಗೆದುಕೊಳ್ಳಬಹುದಾಗಿದೆ.

ಕ್ರೆಡಿಟ್ ಕಾರ್ಡ್ ಚಾರ್ಜ್ ಕಾರ್ಡ್‌ಗಿಂತ ಭಿನ್ನವಾಗಿದೆ: ಚಾರ್ಜ್ ಕಾರ್ಡಿಗೆ ಪ್ರತಿ ತಿಂಗಳೂ ಕೂಡ ಹಣ ಪಾವತಿಸುವುದಕ್ಕಾಗಿ ಅದರಲ್ಲಿ ಪೂರ್ಣ ಪ್ರಮಾಣದ ಮೊತ್ತವಿರಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಕ್ರೆಡಿಟ್ ಕಾರ್ಡ್ಗಳು ಗ್ರಾಹಕರು ಸೂಕ್ತವಾದ ಬಡ್ಡಿಯನ್ನು ವಿಧಿಸುವ ಮೂಲಕ ತಮ್ಮ ಸಾಲದ ಬಾಕಿಯನ್ನು ಮುಂದುವರೆಸಲು ಅವಕಾಶವಿದೆ. ಹಾಗೆಯೇ ಈ ಕ್ರೆಡಿಟ್ ಕಾರ್ಡ್ ಕೂಡ ಕ್ಯಾಶ್ ಕಾರ್ಡ್(ನಗದು ಕಾರ್ಡ್) ಗಿಂತ ಭಿನ್ನವಾಗಿದ್ದು, ಇದನ್ನು ಕಾರ್ಡಿನ ಮಾಲೀಕರು ನಾಣ್ಯ ಪದ್ಧತಿ (ಕರೆನ್ಸಿ)ಯಾಗಿ ಕೂಡ ಬಳಸಬಹುದಾಗಿದೆ. ಹೆಚ್ಚಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್ ಗಳು ಅಥವಾ ಕ್ರೆಡಿಟ್ ಯೂನಿಯನ್ಗಳಿಂದ ನೀಡಲಾಗುತ್ತದೆ ಮತ್ತು ಅವುಗಳ ಆಕಾರ ಮತ್ತು ಗಾತ್ರವನ್ನು ಐಎಸ್‌ಒ/ ಐಇಸಿ ೭೮೧೦ ಸ್ಟಾಂಡರ್ಡ್‌ನಿಂದ ID-೧. ಎಂದು ನಮೂದಿಸಲಾಗುತ್ತದೆ. ಇದನ್ನು 85.60 mm × 53.98 mm (3.370 in × 2.125 in) (೩/ × ೨/ ಇಂಚುಗಳು) ಗಾತ್ರದ್ದೆಂದು ಹೇಳಲಾಗುತ್ತದೆ

ಇತಿಹಾಸ

[ಬದಲಾಯಿಸಿ]

ಖರೀದಿಗಾಗಿ ಕಾರ್ಡ್ಗಳನ್ನು ಬಳಸುವ ಈ ಪರಿಕಲ್ಪನೆಯು ೧೮೮೭ ಎಡ್ವರ್ಡ್ ಬೆಲ್ಲೆಮಿ ಎಂಬವರಿಂದ ತಮ್ಮ ಯುಟೋಪಿಯನ್ ಕಾದಂಬರಿ ಲುಕಿಂಗ್ ಬ್ಯಾಕ್ವರ್ಡ್ ನಲ್ಲಿ ವಿವರಿಸಲ್ಪಟ್ಟಿದೆ. ಬೆಲ್ಲೆಮಿ ಈ ಕ್ರೆಡಿಟ್ ಕಾರ್ಡ್ ಎಂಬ ಪದವನ್ನು ಅವರು ತಮ್ಮ ಕಾದಂಬರಿಯಲ್ಲಿ ಹನ್ನೊಂದು ಬಾರಿ ಬಳಸಿದ್ದಾರೆ.[] ಈಗಿನ ಆಧುನಿಕ ಕ್ರೆಡಿಟ್ ಕಾರ್ಡ್ ಇದು ಅನೇಕ ವ್ಯಾಪಾರಿ ಕ್ರೆಡಿಟ್ ಯೋಜನೆಗಳ ಯಶಸ್ಸಿನಿಂದಾಗಿ ಜಾರಿಯಾಗಿದೆ. ಇದನ್ನು ೧೯೨೦ರಲ್ಲಿ ಮೊದಲ ಬಾರಿಗೆ ಅಮೆರಿಕಾದಲ್ಲಿ ಬಳಸಲಾಯಿತಲ್ಲದೇ, ವಿಶೇಷವಾಗಿ ಹೆಚ್ಚುತ್ತಿರುವ ಅಟೋಮೊಬೈಲ್ ಮಾಲೀಕರಿಗೆ ಇಂಧನ ವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಬಳಸಲಾಯಿತು. ೧೯೩೮ ರಲ್ಲಿ ಅನೇಕ ಕಂಪನಿಗಳು ಪರಸ್ಪರ ಒಬ್ಬರಿಗೊಬ್ಬರ ಕಾರ್ಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದವು. ಪಶ್ಚಿಮ ಒಕ್ಕೂಟ ೧೯೨೧ ರಲ್ಲಿ ತಮ್ಮಲ್ಲಿಗೆ ಆಗಾಗ ಬರುವ ಗ್ರಾಹಕರಿಗಾಗಿ ಚಾರ್ಜ್ ಕಾರ್ಡನ್ನು ನೀಡಲು ಪ್ರಾರಂಭಿಸಿತು. ಕೆಲವು ಚಾರ್ಜ್ ಕಾರ್ಡ್ಗಳು ಪೇಪರ್ ಕಾರ್ಡ್‌ಗಳಲ್ಲಿ ಮುದ್ರಣಗೊಂಡವು ಆದರೆ, ಅವುಗಳನ್ನು ಸುಲಭವಾಗಿ ನಕಲಿಯಾಗಿ ಮುದ್ರಿಸಲು ಅನುಕೂಲವಾಯಿತು. ಚಾರ್ಜಾ ಪ್ಲೇಟ್ ಈ ಕ್ರೆಡಿಟ್ ಕಾರ್ಡ್ನ ಆರಂಭಿಕ (ಮೂಲಸ್ಥಳ) ಜನಕನಾಗಿರುವುದಲ್ಲದೇ ಇದನ್ನು ಅಮೆರಿಕಾದಲ್ಲಿ ೧೯೩೦ ರಿಂದ ಪ್ರಾರಂಭವಾಗಿ ೧೯೫೦ರ ಅಂತ್ಯದವರೆಗೂ ಬಳಸಲಾಯಿತು. ಅದು ೨½" × ೧¼" ಗಾತ್ರದಲ್ಲಿದ್ದು ಆಯತಾಕಾರದಲ್ಲಿ ಶೀಟ್ ಮೆಟಲ್ ನಲ್ಲಿದೆ ಹಾಗೆಯೇ ಮಿಲಿಟರಿ ಡಾಗ್ ಟ್ಯಾಗ್ ಹೊಂದಿದ್ದು ಅದರಲ್ಲಿ ಗ್ರಾಹಕರ ಹೆಸರು, ನಗರ ಮತ್ತು ರಾಜ್ಯದ ಹೆಸರನ್ನು ಉಬ್ಬಿದ ಅಕ್ಷರಗಳಲ್ಲಿ ರಚಿಸಲಾಗಿದೆ. ಅದು ಸಹಿಗಾಗಿ ಸಣ್ಣದಾದ ಒಂದು ಪೇಪರ್ ಕಾರ್ಡನ್ನು ಹೊಂದಿದೆ. ಯಾವುದೇ ಖರೀದಿಯನ್ನು ದಾಖಲಿಸುವುದಕ್ಕಾಗಿ ಪ್ಲೇಟೋಂದನ್ನು ಪೇಪರ್ ನ “ಚಾರ್ಜ್ ಸ್ಲಿಪ್” ನೊಂದಿಗೆ ಅಚ್ಚುಯಂತ್ರದಲ್ಲಿ ಮೇಲ್ಮುಖವಾಗಿ ಗುಪ್ತಸ್ಥಾನದಲ್ಲಿಡಲಾಗುತ್ತದೆ. ಅಚ್ಚು ಯಂತ್ರವು(ಮುದ್ರಣ ಯಂತ್ರ) ಚಾರ್ಜ್ ಸ್ಲಿಪ್ ಪ್ರತಿಯಾಗಿ ಇಂಕ್ಡ್ ರಿಬ್ಬನ್ನ ಮೇಲೆ ಒತ್ತಲ್ಪಡುವುದರಿಂದ ವ್ಯವಹಾರದ ದಾಖಲೆಯಲ್ಲಿ ಉಬ್ಬಕ್ಷರದಲ್ಲಿ ರಚಿಸಲಾಗಿರುವ ಮಾಹಿತಿಯ ಮೊಹರು/ಮುದ್ರೆಯು ಕೂಡ ಒಳಗೊಂಡಿರುತ್ತದೆ.[] ಚಾರ್ಜಾ ಪ್ಲೇಟ್ ಫ್ಯಾರಿಂಗ್ಟನ್ ಉತ್ಪಾದನಾ ಕಂಪನಿಯ ಒಂದು ಟ್ರೇಡ್ ಮಾರ್ಕ್(ವ್ಯಾಪಾರ ಚಿಹ್ನೆ)ಯಾಗಿದ್ದವಲ್ಲದೇ, ಈ ಚಾರ್ಜಾ ಪ್ಲೇಟ್ಗಳನ್ನು ಹೆಚ್ಚಿನ ಪ್ರಮಾಣದ ವ್ಯಾಪಾರಿಗಳು ತಮ್ಮ ನಿರಂತರ ಗ್ರಾಹಕರಿಗಾಗಿ ನೀಡುತ್ತಿದ್ದರಲ್ಲದೇ, ಅವುಗಳು ಹೆಚ್ಚಾಗಿ ಇಂದಿನ ಕಾಲದ ವಿಭಾಗಗಳ ಸಂಗ್ರಹಣಾ ಕ್ರೆಡಿಟ್ ಕಾರ್ಡ್‌ಗಳನ್ನು ಹೋಲುತ್ತಿದ್ದವು. ಕೆಲವೊಂದು ಪ್ರಕರಣಗಳಲ್ಲಿ ಈ ಪ್ಲೇಟ್ಗಳನ್ನು ಗ್ರಾಹಕರಿಗೆ ನೀಡುವ ಬದಲಾಗಿ ಜಾರಿಗೊಳಿಸುವ ಸಂಗ್ರಹಣಾ ಕೇಂದ್ರಗಳಲ್ಲಿ ಇಡಲಾಗುತ್ತದೆ. ಒಂದೊಮ್ಮೆ ಅಧಿಕೃತ ಬಳಕೆದಾರನು ಖರೀದಿಯನ್ನು ಮಾಡಿದರೆ ಕ್ಲರ್ಕ್ ಸ್ಟೋರ್‌ನ ಕಡತಗಳಿಂದ ಪ್ಲೇಟ್‌ಗಳನ್ನು ಹುಡುಕಬೇಕಾಗುತ್ತದೆ ಮತ್ತು ನಂತರ ಅವನು ಖರೀದಿಯ ಬಗೆಗಿನ ಪ್ರಕ್ರಿಯೆಯನ್ನು ದಾಖಲಿಸಬೇಕಾಗುತ್ತದೆ. ಕಂಪ್ಯೂಟರ್‍ಗಳು ಜಾರಿಗೆ ಬರುವುದಕ್ಕಿಂತ ಮೊದಲು ಚಾರ್ಜಾ ಪ್ಲೇಟ್‌ಗಳು ಪುಸ್ತಕದಲ್ಲಿ ನೋಂದಾಯಿಸುವ ಪ್ರಕ್ರಿಯೆ ವಿಧಾನಕ್ಕಿಂತ ವೇಗವಾಗಿ ನಡೆಯುತ್ತಿದ್ದವಲ್ಲದೇ, ಪ್ರತಿ ಅಂಗಡಿಗಳಲ್ಲಿ ಇವುಗಳನ್ನು ಪೇಪರ್ ಲೆಡ್ಜರ್‌ನಲ್ಲಿ ಕೈಕೆಲಸದ ಮೂಲಕ ಮಾಡಬೇಕಾಗಿತ್ತು. ವಿಭಿನ್ನ ವ್ಯಾಪಾರಿಗಳಿಗೆ ಗ್ರಾಹಕರು ಒಂದೇ ಕಾರ್ಡನ್ನು ನೀಡುವ ವಿಧಾನವು ೧೯೫೦ ರಲ್ಲಿ ಜಾರಿಯಾಯಿತಲ್ಲದೇ, ಇದನ್ನು ಬಹು ಕಾರ್ಡ್‌ಗಳನ್ನು ಕ್ರೋಢೀಕರಿಸುವುದಕ್ಕಾಗಿ ಡೈನರ್ಸ್ ಕ್ಲಬ್ನ ಸಂಸ್ಥಾಪಕರಾದ ರಾಲ್ಫ್ ಸ್ನೈಡರ್ ಮತ್ತು ಫ್ರಾಂಕ್ ಮೆಕ್ ನಮಾರಾ ಮೊದಲ ಬಾರಿಗೆ ಅಳವಡಿಸಿದರು. ಈ ಡೈನರ್ಸ್ ಕ್ಲಬ್ ಮೊದಲಿಗೆ ಡೈನ್ ಮತ್ತು ಸೈನ್ ಎಂಬುದರೊಂದಿಗೆ ವಿಲೀನಗೊಂಡು ಭಾಗಶಃವಾಗಿ ರಚಿಸಲ್ಪಟ್ಟಿತ್ತಲ್ಲದೇ, ಇದು ಮೊದಲಿಗೆ “ಸಾಮಾನ್ಯ ಉದ್ದೇಶ”ಕ್ಕಾಗಿ ಚಾರ್ಜ್ ಕಾರ್ಡ್ನ್ನು ರಚಿಸಿತಲ್ಲದೇ, ಇಲ್ಲಿ ಸಂಪೂರ್ಣ ಬೆಲೆಯನ್ನು ಪಾವತಿಸುವ ಸಂದರ್ಭದಲ್ಲಿ ಪ್ರತಿ ಪಟ್ಟಿಯೊಂದಿಗೆ ನೀಡಬೇಕಾಗಿತ್ತು. ಇದು ಮೊದಲ ಬಾರಿಗೆ ಕಾರ್ಟ್ ಬ್ಲಾಂಚ್ನಲ್ಲಿ ಅನುಸರಿಸಲ್ಪಟ್ಟಿತ್ತಲ್ಲದೇ ತದನಂತರದಲ್ಲಿ ೧೯೫೮ರಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್‌ನಲ್ಲಿ ಬಳಸಲ್ಪಡುವ ಮೂಲಕ ನಂತರ ವಿಶ್ವಾದ್ಯಂತ ಈ ಕ್ರೆಡಿಟ್ ಕಾರ್ಡ್ ಜಾಲವನ್ನೇ ರಚಿಸಿತು (ಹೀಗಿದ್ದರೂ ಪ್ರಾರಂಭದಲ್ಲಿ ಇವುಗಳು ಚಾರ್ಜ್ ಕಾರ್ಡ್‌ನಂತಿದ್ದರೂ ಬ್ಯಾಂಕ್ ಅಮೆರಿಕಾ ಕಾರ್ಡ್ ಈ ಪರಿಕಲ್ಪನೆಯನ್ನು ಶಕ್ಯತೆಯನ್ನು ಪ್ರತಿಪಾದಿಸಿದ ನಂತರ ಇವುಗಳು ಕ್ರೆಡಿಟ್ ಕಾರ್ಡ್ ಲಕ್ಷಣವನ್ನು ಪಡೆಯಿತು).

ಹಾಗಿದ್ದರೂ, ೧೯೫೮ ರವರೆಗೆ ಮೂರನೇ ತಂಡವಾದ ಬ್ಯಾಂಕ್ನಿಂದ ನೀಡಲಾದ ಈ ರಿವಾಲ್ವಿಂಗ್ ಕ್ರೆಡಿಟ್ ಸಾಲ ಸೌಲಭ್ಯವನ್ನು ಪಡೆಯಲು ಸಾಮಾನ್ಯವಾಗಿ ವ್ಯಾಪಾರಿಗಳು ಹೆಚ್ಚಾಗಿ ಸ್ವೀಕರಿಸುತ್ತಿದ್ದರಲ್ಲದೇ ಇದರ ಹೊರತಾಗಿ ಯಾರೊಬ್ಬರಿಗೂ ಕೂಡ ತಿಳಿದಿರಲಿಲ್ಲ (ಅನೇಕರ ಅಡ್ಡಿಯ ಹಿನ್ನೆಲೆಯಲ್ಲಿ, ವ್ಯಾಪಾರಿಗಳಿಂದ ನೀಡಲಾಗುತ್ತಿದ್ದ ಈ ರಿವಾಲ್ವಿಂಗ್ ಕಾರ್ಡ್‌ಗಳನ್ನು, ಕೇವಲ ಕೆಲವೇ ವ್ಯಾಪಾರಿಗಳು ಮಾತ್ರ ಸ್ವೀಕರಿಸುತ್ತಿದ್ದರು). ಅಮೆರಿಕಾದ ಸಣ್ಣ ಬ್ಯಾಂಕ್ಗಳಿಂದ ಹನ್ನೆರಡು ಬಾರಿ ಸಣ್ಣ ಪ್ರಯೋಗಗಳನ್ನು ನಡೆಸಲಾಯಿತು (ಮತ್ತು ಈ ಪ್ರಯತ್ನಗಳು ವಿಫಲವಾಯಿತು.) ೧೯೫೮ ರ ಸೆಪ್ಟೆಂಬರ್ನಲ್ಲಿ ಬ್ಯಾಂಕ್ ಆಫ್ ಅಮೇರಿಕಾ ಬ್ಯಾಂಕ್ಅಮೆರಿಕಾಕಾರ್ಡ್ ನ್ನು ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿ ಆರಂಭಿಸಿತು. ಬ್ಯಾಂಕ್ಅಮೆರಿಕಾಕಾರ್ಡ್ ಮೊಟ್ಟಮೊದಲ ಬಾರಿಗೆ ಒಂದು ಯಶಸ್ವೀ ಆಧುನಿಕ ಕ್ರೆಡಿಟ್ ಕಾರ್ಡ್ ಆಗಿ ಮಾನ್ಯತೆ ಪಡೆಯಿತು/ಗುರುತಿಸಲ್ಪಟ್ಟಿತು(ಇದರ ಆರಂಭಿಕ ಕಾಲ್ಪನಿಕ ಹುಟ್ಟಿನ ಸಂದರ್ಭದಲ್ಲಿ ಇದರ ನಿರ್ಮಾತೃ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿ ಸಂಭವಿಸಿದ ಕೆಲವೊಂದು ತೊಂದರೆಗಳ ಹೊರತಾಗಿಯೂ ಕೂಡ), ಹಾಗೆಯೇ ಇದು ಸಾಗರೋತ್ತರವಾಗಿ ಸ್ವೀಕರಿಸಲ್ಪಟ್ಟದ್ದರಿಂದ ಕ್ರಮೇಣವಾಗಿ ವೀಸಾ ವ್ಯವಸ್ಥೆಯಾಗಿ ಕೂಡ ಪ್ರಕಟಿಸಲ್ಪಟ್ಟಿತು. ೧೯೬೬ರಲ್ಲಿ ಬ್ಯಾಂಕ್ಅಮೆರಿಕಾಕಾರ್ಡ್‌ನೊಂದಿಗೆ ಸ್ಪರ್ಧೆ ನೀಡುವುದಕ್ಕಾಗಿ, ಕ್ಯಾಲಿಫೋರ್ನಿಯಾ ಬ್ಯಾಂಕ್‌ಗಳ ಗುಂಪು ಮಾಸ್ಟರ್ ಚಾರ್ಜ್ ಎಂಬ ಕಾರ್ಡನ್ನು ರಚಿಸುವ ಮೂಲಕ, ಮಾಸ್ಟರ್ ಕಾರ್ಡ್ ಮೂಲ ವ್ಯವಸ್ಥೆಯು ಕೂಡ ಹುಟ್ಟಿಕೊಂಡಿತು. ಸಿಟಿಬ್ಯಾಂಕ್ ತನ್ನ ಸ್ವಾಮ್ಯತೆಯ (ಎಲ್ಲವೂ ಕಾರ್ಡಿನಲ್ಲಿ ಲಭಿಸುವ ವ್ಯವಸ್ಥೆ)ಎವ್ರಿಥಿಂಗ್ ಕಾರ್ಡ್ (೧೯೬೭ ರಲ್ಲಿ ಜಾರಿಯಾಯಿತು)ನ್ನು ಮಾಸ್ಟರ್ ಚಾರ್ಜ್‌ನೊಂದಿಗೆ ೧೯೬೯ ರಲ್ಲಿ ವಿಲೀನಗೊಳಿಸುವ ಮೂಲಕ ಇದು ಪ್ರಮುಖ ವೃದ್ಧಿಯನ್ನು ಕಂಡಿತು. ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಬ್ಯಾಂಕ್ ಅಮೆರಿಕಾರ್ಡ್ ಅತೀ ಹೆಚ್ಚು ಪ್ರಸಿದ್ಧಿಯಲ್ಲಿದ್ದವಲ್ಲದೇ, ಇವುಗಳನ್ನು ಎಲ್ಲಾ ಸಮೂಹಕ್ಕಾಗಿ ರಚಿಸಲ್ಪಟ್ಟಿತು ಮತ್ತು ಕ್ರೆಡಿಟ್ ರಿಸ್ಕ್‌ಗೆ ಇದು ಉತ್ತಮ ವಿಧಾನವೆಂದು ಯೋಚಿಸಿದ ಹಿನ್ನೆಲೆಯಲ್ಲಿ ಯಾವುದೇ (ಅರ್ಜಿ)ಮನವಿಯಿಲ್ಲದೆ ಬ್ಯಾಂಕ್ ಗ್ರಾಹಕರಿಗೆ ಸಮೂಹ ಅಂಚೆ ವ್ಯವಸ್ಥೆಯ ಮೂಲಕ ರವಾನೆ ಮಾಡಲ್ಪಡುತ್ತಿತ್ತು. ಆದರೆ, “ಅವುಗಳನ್ನು ನಿರುದ್ಯೋಗಿಗಳಿಗೆ, ಕುಡುಕರಿಗೆ ಮಾದಕವಸ್ತು ವ್ಯಸನಿಗಳಿಗೆ ಅದರಲ್ಲೂ ಕಡ್ಡಾಯ ಸಾಲಗಾರಿಗೆ ರವಾನಿಸುವುದನ್ನು ನಿಲ್ಲಿಸಲಾಯಿತಲ್ಲದೇ, ಆಗಿನ ಅಮೆರಿಕಾ ಅಧ್ಯಕ್ಷರಾಗಿದ್ದ ಜಾನ್ಸನ್ ಅವರ ವಿಶೇಷ ಸಹಾಯಕರಾಗಿದ್ದ ಬೆಟ್ಟಿ ಫರ್ನೆಸ್ ಅವರ ಪ್ರಕಾರ, ಈ ಪ್ರಕ್ರಿಯೆಯು ‘ ಮಧುಮೇಹಿಗಳಿಗೆ ಸಕ್ಕರೆಯನ್ನು ನೀಡುವ’ ಪ್ರಕ್ರಿಯೆಯಂತಿತ್ತು.[] ಈ ಕಾರ್ಡನ್ನು ಸಮೂಹಕ್ಕೆ ರವಾನೆ ಮಾಡುವುದನ್ನು ಬ್ಯಾಂಕಿಂಗ್ ಪದಬಳಕೆ ವ್ಯವಸ್ಥೆಯಲ್ಲಿ “ಡ್ರಾಪ್ಸ್” ಎಂದು ಕರೆಯಲಾಗುತ್ತಿತ್ತಲ್ಲದೇ, ೧೯೭೦ ರಲ್ಲಿ ಇವುಗಳು ಆರ್ಥಿಕ ಸಮಸ್ಯೆಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ಕಾನೂನುಬಾಹಿರ ವ್ಯವಸ್ಥೆಯೆಂದು ಘೋಷಿಸಲ್ಪಟ್ಟಿತು, ಆದರೆ ಅಮೆರಿಕನ್ನರಿಗೆ ೧೦೦ ಮಿಲಿಯನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡದಿರಲು ನಿರ್ಧರಿಸಲಾಯಿತು. ೧೯೭೦ ರ ನಂತರವಷ್ಟೇ ಈ ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ಯಾವುದೇ ಮನವಿ(ಅರ್ಜಿ)ಗಳಿಲ್ಲದೇ ಸಮೂಹ ಅಂಚೆಗಳಲ್ಲಿ ರವಾನೆ ಮಾಡಲು ಪ್ರಾರಂಭಿಸಲಾಯಿತು. ಅಮೆರಿಕಾದ ಈ ನಿಯಂತ್ರಿತ ಬ್ಯಾಂಕಿಂಗ್ ವ್ಯವಸ್ಥೆಯು ಗ್ಲಾಸ್ ಸ್ಟೀಗಲ್ ನಿಯಮ ದ ವ್ಯಾಪ್ತಿಯಲ್ಲಿತ್ತು, ಅಂದರೆ ಕ್ರೆಡಿಟ್ ಕಾರ್ಡ್‌ಗಳು ದೇಶಾದ್ಯಂತ ಪ್ರಯಾಣಿಸುವ ನಾಗರಿಕರಿಗೆ ಒಂದು ಪರಿಣಾಮಕಾರಿ ವಿಧಾನವಾಯಿತಲ್ಲದೇ, ಈ ರೀತಿ ಪ್ರಯಾಣಿಸುವವರು ಆ ಪ್ರದೇಶದಲ್ಲಿ ತಮ್ಮ ಬ್ಯಾಂಕಿಂಗ್ ಸೌಲಭ್ಯಗಳನ್ನು ಸರಾಗವಾಗಿ ಬಳಕೆಯಾಗದಿರುವಲ್ಲಿ ಈ ವ್ಯವಸ್ಥೆಯನ್ನು ಬಳಸಲು ಅವಕಾಶ ನೀಡಿತು. ೧೯೬೬ ರಲ್ಲಿ ಅಮೆರಿಕಾದ ಹೊರಭಾಗದಲ್ಲಿ ಯು ಕೆಯಲ್ಲಿನ ಬಾರ್ಕ್ಲೇಕಾರ್ಡ್ನಲ್ಲಿ ಮೊದಲ ಕ್ರೆಡಿಟ್ ಕಾರ್ಡನ್ನು ಬಿಡುಗಡೆಗೊಳಿಸಲಾಯಿತು. ಈಗ ಗ್ರಾಹಕರಿಗೆ ನೀಡಲಾಗುವ ಈ ರಿವಾಲ್ವಿಂಗ್ ಕ್ರೆಡಿಟ್(ಆವರ್ತ ಸಾಲ)ನ ಮೂಲ ಪರಿಕಲ್ಪನೆಯಲ್ಲಿ (ಬ್ಯಾಂಕ್‌ಗಳಿಂದ ನೀಡಲಾಗುತ್ತಿತ್ತಲ್ಲದೇ ಇವುಗಳಿಗೆ ಆರ್ಥಿಕ ಸಂಸ್ಥೆಗಳ ಜಾಲದಿಂದ ಮಾನ್ಯತೆ ಲಭಿಸುತ್ತಿತ್ತು) ಅಪರಿಮಿತ ವ್ಯತ್ಯಾಸಗಳಾಗಿವೆಯಲ್ಲದೇ, ಸಾಂಸ್ಥಿಕ ಮುದ್ರೆಯ ಕ್ರೆಡಿಟ್ ಕಾರ್ಡ್ಗಳು, ಕಾರ್ಪೋರೇಟ್ ಯೂಸರ್ ಕ್ರೆಡಿಟ್ ಕಾರ್ಡ್‌ಗಳು, ಸ್ಟೋರ್ ಕಾರ್ಡ್‌ಗಳು ಹೀಗೆಯೇ ಅನೇಕ ರೀತಿಯ ಕಾರ್ಡ್‌ಗಳನ್ನೊಳಗೊಂಡಿವೆ. ಇಪ್ಪತ್ತರ ಶತಮಾನದ ಮಧ್ಯದ ಅವಧಿಯಲ್ಲಿ ಈ ಕ್ರೆಡಿಟ್ ಕಾರ್ಡ್‌ಗಳು ಅಮೆರಿಕಾ, ಕೆನಡಾ ಮತ್ತು ಯು ಕೆ ಗಳಲ್ಲಿರುವ ಹೆಚ್ಚಿನ ಪ್ರಮಾಣದ ಜನರಿಗೆ ದೊರೆತಿದೆಯಲ್ಲದೇ, ಎಲ್ಲಾ ವ್ಯವಹಾರಗಳೂ ಕೂಡ ಹೆಚ್ಚಾಗಿ ಕಾರ್ಟೇ ಬ್ಲ್ಯೂ ಅಥವಾ ಯುರೋಕಾರ್ಡ್ (ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್ ಮತ್ತು ಇತರ ಕಡೆಗಳಲ್ಲಿ) ಗಳಂತಹ ನಗದು ಆಧರಿತ ನೆಲೆಯಲ್ಲಿ ಅಥವಾ ನಗದು ರಹಿತ ಹಣ ಪಾವತಿಯ ಸುಧಾರಿತ ಪರ್ಯಾಯ ರೀತಿಯಲ್ಲಿ ನಡೆಯುತ್ತವೆ. ಈ ಸ್ಥಳಗಳಲ್ಲಿ ಈ ಕ್ರೆಡಿಟ್ ಕಾರ್ಡ್‌ಗಳನ್ನು ಆರಂಭದಲ್ಲಿ ತುಂಬಾ ಸಣ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲಾಯಿತು. ಅಮೆರಿಕಾ, ಕೆನಡಾ, ಅಥವಾ ಯು ಕೆ ಯಲ್ಲಿ ಇದು ಮಾರುಕಟ್ಟೆ ಹಂತಗಳಲ್ಲಿ ಶೇಕಡಾವಾರು ಮಟ್ಟವನ್ನು ಮುಟ್ಟಲು ೧೯೯೦ ರವರೆಗಿನ ಅವಧಿಯನ್ನು ತೆಗೆದುಕೊಂಡಿತು. ಕೆಲವೊಂದು ರಾಷ್ಟ್ರಗಳಲ್ಲಿ ಇನ್ನೂ ಕೂಡ ಈ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು ಸ್ವೀಕರಿಸಿದ ಪ್ರಮಾಣ ತುಂಬಾ ಕಡಿಮೆಯಿದ್ದು ಈ ವ್ಯವಸ್ಥೆಯು ಬ್ಯಾಂಕಿಂಗ್ ವ್ಯವಸ್ಥೆಯು ಒಂದು ನಂಬಲರ್ಹ ವ್ಯವಸ್ಥೆಯಾಗಿದೆಯೇ ಎಂಬ ಪರಿಕಲ್ಪನೆಯನ್ನು ಅವಲಂಭಿಸಿದೆ. ಜಪಾನ್ ದೇಶವು ನಗದು ಆಧಾರಿತ ನೆಲೆಯನ್ನು ಹೊಂದಿರುವ ದೇಶವಾಗಿ ಉಳಿದಿದ್ದು, ಇಲ್ಲಿ ಕ್ರೆಡಿಟ್ ಕಾರ್ಡ್ ಸ್ವೀಕೃತಿ ವ್ಯವಸ್ಥೆಯು ಸೀಮಿತವಾಗಿದ್ದು ಅದು ಕೂಡ ದೊಡ್ಡ ಪ್ರಮಾಣದ ವ್ಯಾಪಾರಿಗಳು ಮಾತ್ರ ಇದನ್ನು ಸ್ವೀಕರಿಸುತ್ತಾರಲ್ಲದೇ, ಅದರಲ್ಲೂ ಸೆಲ್ಫೋನ್‌ಗಳೊಳಗೆ ಆರ್ ಎಫ್ ಐ ಡಿ ಗಳನ್ನಾಧರಿತ ಪರ್ಯಾಯ ವ್ಯವಸ್ಥೆಗೆ ಅಲ್ಲಿ ಸಮ್ಮತಿಯಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವು ದೇಶಗಳು ಅದರಲ್ಲೂ ಫ್ರಾನ್ಸಿನಲ್ಲಿ (ಬ್ಯಾಂಕ್ ಖಾತೆಯಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಹಣ ಪಡೆಯುವ ವ್ಯವಸ್ಥೆ)ಓವರ್ಡ್ರಾಫ್ಟ್ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿರ್ಬಂಧಗಳಿರುವ ಕಾರಣ, ಕ್ರೆಡಿಟ್ ಯೋಜನೆಗಳಲ್ಲಿ ನಕಲಿಯನ್ನು ತಪ್ಪಿಸುವುದಕ್ಕಾಗಿ ಚಿಪ್ ಆಧಾರಿತ ಕ್ರೆಡಿಟ್ ಕಾರ್ಡ್ಗಳನ್ನು ಅಳವಡಿಸಲು ಅತೀ ಬೇಗನೆ ಅಭಿವೃದ್ಧಿಪಡಿಸಿ ಅಳವಡಿಸಲು ಮುಂದಾಗಿವೆ. ಕೆಲವೊಂದು ದೇಶಗಳಲ್ಲಿ ಈ ಕ್ರೆಡಿಟ್ ಕಾರ್ಡ್ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಡೆಬಿಟ್ ಕಾರ್ಡ್‌ಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ನ ವಿನ್ಯಾಸವನ್ನು ಮಾರಾಟ ಮಾಡುವುದು ಪ್ರಮುಖ ಅಂಶವಾಗಿದೆ. ಕಾರ್ಡ್ ನೀಡುವವರ ಮೌಲ್ಯವು ಕೆಲವೊಮ್ಮೆ ಗ್ರಾಹಕರು ಬಳಸುವ ಕಾರ್ಡ್ನೊಂದಿಗೆ ಸಂಬಂಧ ಹೊಂದಿರುತ್ತದೆ ಅಥವಾ ಗ್ರಾಹಕರ ಆರ್ಥಿಕ ಅರ್ಹತೆಯ ಮೇಲೆ ಕೂಡ ಸಂಬಂಧ ಹೊಂದಿರುತ್ತದೆ. ಇದು ಕೋ ಬ್ರಾಂಡ್(ಬಹು ಬ್ರಾಂಡ್) ಮತ್ತು ಅಫಿನಿಟಿ ಕಾರ್ಡ್‌ಗಳ ಉಗಮಕ್ಕೆ ಕಾರಣವಾಗುವುದಲ್ಲದೇ, ಇಲ್ಲಿ ಕಾರ್ಡ್‌ನ ವಿನ್ಯಾಸವು “ಅಫಿನಿಟಿ” ಯೊಂದಿಗೆ ಸಂಬಂಧ ಹೊಂದುವ ಮೂಲಕ (ಉದಾಹರಣೆಗೆ ವಿಶ್ವವಿದ್ಯಾನಿಲಯ ಅಥವಾ ವೃತ್ತಿಪರ ಸಮಾಜ) ಹೆಚ್ಚಿನ ಪ್ರಮಾಣದ ಕಾರ್ಡ್ಗಳ ಬಳಕೆಗೆ ಕಾರಣವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಡಿನ ಶೇಕಡ ಪ್ರಮಾಣದ ಮೌಲ್ಯವು ಸಾಮ್ಯತೆಯ ಗುಂಪನ್ನು ಅವಲಂಭಿಸಿದೆ.

ಸಂಗ್ರಹ ಮಾಡಬಹುದಾದಂತಹ ಕ್ರೆಡಿಟ್ ಕಾರ್ಡುಗಳು

[ಬದಲಾಯಿಸಿ]

ಅಭಿವೃದ್ಧಿ ಹೊಂದುತ್ತಿರುವ ನ್ಯೂಮಿಸ್ಮ್ಯಾಟಿಕ್ಸ್ /ನಾಣ್ಯ ಮುದ್ರಣ ಶಾಸ್ತ್ರ (ಹಣದ ಬಗೆಗಿನ ಅಧ್ಯಯನ) , ಅಥವಾ ಅತೀ ವಿಶೇಷವಾಗಿ ಎಕ್ಸೊನ್ಯೂಮಿಯಾ (ನಾಣ್ಯಗಳ ಹೊರತಾದ ಟೋಕನ್ನಂತಹ) (ಯಾವುದೇ ಹಣದ ಮೌಲ್ಯವನ್ನು ಹೊಂದಿರುವ ವಸ್ತುಗಳ ಅಧ್ಯಯನ), ಕ್ರೆಡಿಟ್ ಕಾರ್ಡ್ ಸಂಗ್ರಹಣಾಕಾರರು ಹಿಂದೆ ಮರ್ಚೆಂಟ್ ಕ್ರೆಡಿಟ್ ಕಾರ್ಡ್ನ ರೂಪದಲ್ಲಿದ್ದ ಆ ಕಾಲದ ವ್ಯಾಪಾರ ಆಧರಿತ ಕಾಗದದ ಕಾರ್ಡ್ಗಳು ಮತ್ತು ಲೋಹದ ಟೋಕನ್‌ಗಳಿಗೆ ಬದಲಾಗಿ, ಈಗ ಪ್ರಚಲಿತದಲ್ಲಿರುವ ಅನೇಕ ರೀತಿಯ ಸಾಲದ ಮೂರ್ತ ರೂಪಗಳಾಗಿರುವ ಪ್ಲಾಸ್ಟಿಕ್ ಕಾರ್ಡ್‌ಗಳನ್ನು ಸ್ವೀಕರಿಸಲು ಬಯಸುತ್ತಾರೆ. ಮೊದಲಿಗೆ ಈ ಕ್ರೆಡಿಟ್ ಕಾರ್ಡ್‌ಗಳನ್ನು ಸೆಲ್ಯುಲೋಯ್ಡ್ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟರೆ, ನಂತರದಲ್ಲಿ ಲೋಹ, ಫೈಬರ್ (ನಾರು ಪದಾರ್ಥ), ನಂತರ ಪೇಪರ್‌ನಿಂದ ರಚಿಸಲ್ಪಟ್ಟರೆ, ಈಗ ಅವುಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್‌ನಲ್ಲಿ ತಯಾರಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್‌ಗಳು ಹೇಗೆ ಕೆಲಸ ಮಾಡುತ್ತವೆ

[ಬದಲಾಯಿಸಿ]

ಕ್ರೆಡಿಟ್ ಪ್ರೊವೈಡರ್(ಸಾಲ ವಿತರಕರು) ಗ್ರಾಹಕರ ಖಾತೆಯನ್ನು ಅನುಮೋದಿಸಿದ ನಂತರವಷ್ಟೇ ಈ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್, ಕ್ರೆಡಿಟ್ ಯೂನಿಯನ್ ಕ್ರೆಡಿಟ್ ಕಾರ್ಡ್ ಜಾರಿಗೊಳಿಸುವ ವಿಭಾಗದ ಅಧಿಕಾರಿಗಳು ನೀಡುತ್ತಾರೆ ನಂತರದಲ್ಲಿ ವ್ಯಾಪಾರಿಗಳು ಈ ಕಾರ್ಡನ್ನು ಸ್ವೀಕರಿಸುವಂತಿದ್ದರೆ ಈ ಕಾರ್ಡ್ ಹೊಂದಿರುವವರು ಅವರ ಬಳಿಯಿಂದ ತಮಗೆ ಬೇಕಾಗುವ ವಸ್ತುಗಳನ್ನು ಖರೀದಿಸಬಹುದಾಗಿದೆ. ವ್ಯಾಪಾರಿಗಳು ಆಗಾಗ ತಾವು ಯಾವೆಲ್ಲಾ ಸ್ವೀಕೃತಿ ಗುರುತುಗಳಿರುವ ಕಾರ್ಡ್‌ಗಳನ್ನು - ಸಾಮಾನ್ಯವಾಗಿ ಕೆಲವೊಂದು ಲೋಗೋಗಳಿಂದ ರಚಿಸಿರುವ ಕಾರ್ಡ್‌ಗಳು - ಅಥವಾ ಇದರ ಬಗ್ಗೆ ಬಾಯ್ಮಾತಿನ ಮೂಲಕ ತಿಳಿದುಕೊಂಡು ಸ್ವೀಕರಿಸುತ್ತೇವೆಂಬುದರ ಬಗ್ಗೆ ಜಾಹೀರಾತು ನೀಡುತ್ತಾರೆ, ಅಂದರೆ ಕ್ರೆಡಿಟ್ ಕಾರ್ಡ್‌ನಲ್ಲಿರುವಂಟೆ “ ಕ್ರೆಡಿಟ್ ಕಾರ್ಡ್‌ಗಳು ಉತ್ತಮವಾಗಿವೆ” (ಇದರ ಉದ್ದೇಶಿತ ಅರ್ಥ “ಪ್ರಮುಖ ಬ್ರಾಂಡ್‌ಗಳು”) ಮೊದಲಿಗೆ ತಿಳಿದುಕೊಳ್ಳುತ್ತಾರೆ. “ನಾವು ಈ ಕಾರ್ಡ್(ಎಕ್ಸ್, ವೈ, ಝೆಡ್ ಬ್ರಾಂಡ್‌ನ ಕಾರ್ಡ್) ಗಳನ್ನು ” ಅಥವಾ “ ನಾವು ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದೂ ಕೂಡ ಜಾಹೀರಾತು ನೀಡುತ್ತಾರೆ. ಯಾವಾಗ ಗ್ರಾಹಕರು ಖರೀದಿಯನ್ನು ಮಾಡುತ್ತಾರೆಯೋ, ಆಗ ಈ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಾರ್ಡ್ ನೀಡಿದವರಿಗೆ ಹಣ ಪಾವತಿಸಲು ಒಪ್ಪಿಗೆ ನೀಡುತ್ತಾರೆ. ಕಾರ್ಡ್ ಹೊಂದಿರುವವರು ಕಾರ್ಡ್‌ನ ಮಾಹಿತಿಯನ್ನು ಹೊಂದಿರುವ ರಶೀದಿಗಳಿಗೆ ಸಹಿ ಹಾಕುವ ಮೂಲಕ ಹಣ ಪಾವತಿಸಲು ತನ್ನ ಒಪ್ಪಿಗೆಯಿದೆ ಎಂಬುದನ್ನು ಸೂಚಿಸುತ್ತಾರಲ್ಲದೇ, ಪಾವತಿಸಬೇಕಾಗಿರುವ ಹಣದ ಮೊತ್ತವನ್ನು ಸೂಚಿಸುತ್ತಾರೆ ಅಥವಾ ತನ್ನ ಪರ್ಸನಲ್ ಐಡೆಂಟಿಫಿಕೇಶನ್ ನಂಬರ್(ವ್ಯಕ್ತಿಯ ಗುರುತಿನ ಸಂಖ್ಯೆ) ಪಿನ್ ನಂಬರನ್ನು ದಾಖಲಿಸುತ್ತಾರೆ. ಹಾಗೆಯೇ, ಅನೇಕ ವ್ಯಾಪಾರಿಗಳು ಕಾರ್ಡ್ ನಾಟ್ ಪ್ರೆಸೆಂಟ್ ಟ್ರಾನ್ಸಾಕ್ಷನ್ (ವ್ಯವಹಾರದಲ್ಲಿ ಈಗ ಕಾರ್ಡ್ ಬಳಕೆ ಇಲ್ಲ) (ಸಿ ಎನ್ ಪಿ) ಎಂದು ಕರೆಯಲಾಗುವ ವ್ಯವಸ್ಥೆ ಎಂಬುದನ್ನು ಪರಿಗಣಿಸಿ ಕೂಡ ಕೆಲವೊಮ್ಮೆ ಅಧಿಕೃತವಾಗಿ ಬಾಯ್ಮಾತಿನ ಮೂಲಕ ಇಲ್ಲವೇ ದೂರವಾಣಿ ಮತ್ತು ಅಂತರಜಾಲ (ಇಂಟರನೆಟ್)ದ ಮೂಲಕ ಅಧಿಕೃತವಾಗಿ ಎಲೆಕ್ಟ್ರಾನಿಕ್ ಮಾಧ್ಯಮ ಬಳಸಿಕೊಂಡು ತಮ್ಮ ವ್ಯವಹಾರ ವ್ಯವಸ್ಥೆಯನ್ನು ತಿಳಿಸುತ್ತಾರೆ. ಈಗ ಎಲೆಕ್ಟ್ರಾನಿಕ್ ಪರಿಶೀಲನಾ ವ್ಯವಸ್ಥೆಯ ಸಹಾಯದಿಂದ ವ್ಯಾಪಾರಿಗಳು ಕೆಲವೇ ಕ್ಷಣಗಳಲ್ಲಿ ಕ್ರೆಡಿಟ್ ಕಾರ್ಡ್ ಸೂಕ್ತವಾಗಿದೆಯೇ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರ ಖಾತೆಯಲ್ಲಿ ಖರೀದಿ ಪ್ರಮಾಣಕ್ಕಾಗುವ ಸಾಕಷ್ಟು ಹಣಕಾಸು ಇದೆಯೇ ಎಂಬುದನ್ನು ಪತ್ತೆಹಚ್ಚಲು ಅನುಕೂಲ ಕಲ್ಪಿಸುತ್ತದಲ್ಲದೇ, ಗ್ರಾಹಕರು ಸಾಮಾನುಗಳನ್ನು ಖರೀದಿಸುವ ಸಂದರ್ಭದಲ್ಲಿಯೇ ಅದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ವ್ಯಾಪಾರಿಯು ತಾನು ಹಣಕಾಸು ಪಡೆಯುವ ಬ್ಯಾಂಕನ್ನು ಸಂಪರ್ಕಿಸುವ ಮೂಲಕ, ಕ್ರೆಡಿಟ್ ಕಾರ್ಡ್ ಪಾವತಿಯ ಅಂತಿಮ ಹಂತವನ್ನು ಅಥವಾ ಪಾಯಿಂಟ್ ಆಫ್ ಸೇಲ್/ಮಾರಾಟದ ಅಂಶದ ವ್ಯವಸ್ಥೆ (ಪಿ ಒ ಎಸ್)ಯನ್ನು ಬಳಸಿಕೊಂಡು ಈ ಪರಿಶೀಲನೆಯನ್ನು ನಡೆಸಬಹುದಾಗಿದೆ. ಈ ಕಾರ್ಡ್ನಿಂದ ಅದರಲ್ಲಿರುವ ಕಾಂತೀಯ ಪಟ್ಟಿ/ಮ್ಯಾಗ್ನೇಟಿಕ್ ಸ್ಟ್ರೈಪ್ ಯಿಂದ ಅಥವಾ ಕಾರ್ಡ್ನಲ್ಲಿರುವ ಚಿಪ್ ನಿಂದ ಮಾಹಿತಿಯನ್ನು ಪಡೆಯಬಹುದಾಗಿದ್ದು, ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೆಂಡ್‌ನಲ್ಲಿ ಈ ಚಿಪ್ ಮತ್ತು ಪಿನ್ ಎನ್ನಲಾಗುವ ಎರಡನೆಯ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು ಅದನ್ನು ಇ ಎಮ್ ವಿ ಕಾರ್ಡ್ ಆಗಿ ಬಳಸಲಾಗುತ್ತದೆ. ಕಾರ್ಡ್ ನಾಟ್ ಪ್ರೆಸೆಂಟ್ ಟ್ರಾನ್ಸಾಕ್ಷನ್ ವ್ಯವಸ್ಥೆಯಲ್ಲಿ ಕಾರ್ಡನ್ನು ತೋರಿಸಲಾಗುವುದಿಲ್ಲ (ಉದಾ, ಇ –ಕಾಮರ್ಸ್, ಮೈಲ್ ಆರ್ಡರ್, ಮತ್ತು ಟೆಲಿಫೋನ್ ಸೇಲ್ಸ್ನಂತಹ ಸಂದರ್ಭದಲ್ಲಿ) ವ್ಯಾಪಾರಿಗಳು ಪೂರಕವಾಗಿ ಗ್ರಾಹಕರು ಕಾರ್ಡನ್ನು ಭೌತಿಕ ರೂಪದಲ್ಲಿ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಾರೆ ಹಾಗೆಯೇ ಅವರು ಅಧಿಕೃತ ಗ್ರಾಹಕರೆಂಬುದನ್ನು ಖಚಿತಗೊಳಿಸುವುದಕ್ಕಾಗಿ, ಕೆಲವೊಂದು ಪೂರಕ ಮಾಹಿತಿಗಳಾದ ಕಾರ್ಡ್‌ನ ಹಿಂಬದಿಯಲ್ಲಿ ಮುದ್ರಿತಗೊಂಡಿರುವ ಸೆಕ್ಯೂರಿಟಿ ಕೋಡ್, ಅವಧಿ ಮುಗಿಯುವ ದಿನಾಂಕ ಮತ್ತು ಬಿಲ್ಲಿಂಗ್ ವಿಳಾಸ ಇತ್ಯಾದಿಯನ್ನು ಪಡೆಯುತ್ತಾರೆ.

ಪ್ರತಿ ತಿಂಗಳೂ ಕೂಡ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅವರು ಕಾರ್ಡಿನಿಂದ ಖರೀದಿಸಿದ ಮೊತ್ತದ ಬಗ್ಗೆ, ಯಾವುದೇ ಹೆಚ್ಚುವರಿ ಶುಲ್ಕ, ಮತ್ತು ಅವರು ಹೊಂದಿರುವ ಬಾಕಿ ಮೊತ್ತದ ಬಗ್ಗೆ ಒಂದು ಲೆಕ್ಕಪಟ್ಟಿಯನ್ನು ಕಳುಹಿಸಲಾಗುತ್ತದೆ. ಈ ಲೆಕ್ಕಪಟ್ಟಿಯನ್ನು ಸ್ವೀಕರಿಸಿದ ನಂತರ ಕಾರ್ಡ್ ಹೊಂದಿರುವ ಗ್ರಾಹಕರು ಅವನು ಅಥವಾ ಅವಳು ಶುಲ್ಕದಲ್ಲಿನ ಅಸಮರ್ಪಕತೆಯ ಬಗ್ಗೆ ಸಮಸ್ಯೆಗಳಿದ್ದಲ್ಲಿ ಚರ್ಚಿಸಬಹುದಾಗಿದೆ.(ಅನಧಿಕೃತ ಕ್ರೆಡಿಟ್ ಕಾರ್ಡ್ನ ಬಳಕೆಗೆ ಕಾರ್ಡ್ ಹೊಂದಿರುವವರು $೫೦ ನಷ್ಟು ದಂಡ ತೆರಲರ್ಹರಾಗುತ್ತಾರೆ ಮತ್ತು ಅಮೆರಿಕಾದ ನಿರ್ಬಂಧಗಳ ಮಾಹಿತಿಗಾಗಿ ಫೇರ್ ಕ್ರೆಡಿಟ್ ಬಿಲ್ಲಿಂಗ್ ಆ‍ಯ್‌ಕ್ಟ್ ಅನ್ನು ನೋಡಿರಿ.15 U.S.C. § 1643) ಇಲ್ಲದಿದ್ದಲ್ಲಿ, ಕಾರ್ಡ್ ಹೋಲ್ಡರ್ ನಿಗದಿತ ದಿನಾಂಕಕ್ಕೆ ನಿಗದಿಗೊಳಿಸಿದ ಬಿಲ್ಲಿನ ಕನಿಷ್ಠ ಮೊತ್ತವನ್ನು ಪಾವತಿಸಬೇಕು ಅಥವಾ ಬಾಕಿಯಿರುವ ಸಂಪೂರ್ಣ ಮೊತ್ತದವರೆಗೆ ಹೆಚ್ಚಿನ ಮೊತ್ತವನ್ನು ಪಾವತಿಸುವ ಆಯ್ಕೆಯನ್ನು ತೆಗೆದುಕೊಳ್ಳಬೇಕು. ಸಾಲ ನೀಡುವವರು ಒಂದೊಮ್ಮೆ ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸದಿದ್ದರೆ ಅದಕ್ಕೆ ಬಡ್ಡಿ ಯನ್ನು ವಿಧಿಸುತ್ತಾರೆ (ವಿಶಿಷ್ಟವಾಗಿ ಸಾಲದ ಇತರ ರೂಪಗಳಿಗಿಂತ ಭಿನ್ನವಾಗಿ ಇಲ್ಲಿ ಹೆಚ್ಚಿನ ಪ್ರಮಾಣದ ಬಡ್ಡಿಯನ್ನು ವಿಧಿಸುತ್ತಾರೆ) ಇದಕ್ಕೆ ಪೂರಕವಾಗಿ, ಕ್ರೆಡಿಟ್ ಕಾರ್ಡ್ ಹೊಂದಿದವರು ನಿಗದಿತ ದಿನಾಂಕದಂದು ಕನಿಷ್ಟ ಪ್ರಮಾಣದ ಮೊತ್ತವನ್ನು ಭರಿಸಲು ವಿಫಲವಾದಲ್ಲಿ, ಸಾಲ ನೀಡಿದವರು ಬಳಕೆದಾರರ ಮೇಲೆ “ಲೇಟ್ ಫೀ(ವಿಳಂಬ ಶುಲ್ಕ) ” ಮತ್ತು/ಅಥವಾ ಇತರ ದಂಡಗಳನ್ನು ವಿಧಿಸಬಹುದು. ಇದನ್ನು ಕಡಿಮೆಗೊಳಿಸುವುದಕ್ಕಾಗಿ, ಕೆಲವೊಂದು ಹಣಕಾಸು ಸಂಸ್ಥೆಗಳು ಅಟೋಮ್ಯಾಟಿಕ್ ಹಣಪಾವತಿ ವ್ಯವಸ್ಥೆಯನ್ನು ಏರ್ಪಾಡು ಮಾಡುತ್ತವೆ, ಇದರಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತ ಪಾವತಿಯನ್ನು (ಅಟೋಮ್ಯಾಟಿಕ್ ಪೇಮೆಂಟ್) ಕಳೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿವೆ. ಕಾರ್ಡ್ ಹೊಂದಿರುವವರು ತನ್ನಲ್ಲಿ ಸಾಕಷ್ಟು ಹಣಕಾಸು ನಿಧಿಗಳನ್ನು ಹೊಂದಿರುವವರೆಗೆ ಇಂತಹ ದಂಡಗಳನ್ನು ತಪ್ಪಿಸಬಹುದಾಗಿದೆ.

ಜಾಹೀರಾತು, ಅನುಮತಿ, ಅರ್ಜಿ ಹಾಗೂ ಮಂಜೂರಾತಿ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ ಶೂಮರ್ ಬಾಕ್ಸ್ ಪ್ರಕಟಣಾ ಅಗತ್ಯತೆಯನ್ನೊಳಗೊಂಡಂತೆ ಕೆಲವೊಂದು ನಿರ್ಬಂಧಗಳ ಬಗ್ಗೆ ಕೂಡ ಜಾಹೀರಾತುಗಳನ್ನು ನೀಡುತ್ತದೆ. ಪ್ರಮುಖ ಕ್ರೆಡಿಟ್ ರಿಪೋರ್ಟಿಂಗ್ ಏಜೆನ್ಸಿಗಳಿಂದ ನೀಡಲಾಗುವ ಪಟ್ಟಿಯಲ್ಲಿ ಜಂಕ್ ಮೇಲ್‌ನ ಹೆಚ್ಚಿನ ಪಾಲು ಕ್ರೆಡಿಟ್ ಕೊಡುಗೆಗಳು ಒಳಗೊಂಡಿರುತ್ತವೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಮೂರು ಪ್ರಮುಖ ಯು ಎಸ್ ಕ್ರೆಡಿಟ್ ಬ್ಯೂರೋಗಳು (ಈಕ್ವಿಫ್ಯಾಕ್ಸ್, ಟ್ರಾನ್ಸ್ ಯೂನಿಯನ್ ಮತ್ತು ಎಕ್ಸ್ಪೀರಿಯನ್) ಗ್ರಾಹಕರಿಗೆ ಆಪ್ಟ್ ಔಟ್ ಪ್ರೀ ಸ್ಕ್ರೀನ್ ಕಾರ್ಯಕ್ರಮದ ಮೂಲಕ ಸಂಬಂಧಿತ ಕ್ರೆಡಿಟ್ ಕಾರ್ಡ್ ಕೋರಿಕೆಯ ಕೊಡುಗೆಗಳನ್ನು ಆರಿಸಲು ಅವಕಾಶ ನೀಡುತ್ತದೆ.

ಬಡ್ಡಿ ಶುಲ್ಕಗಳು

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ ನೀಡಿಕೆದಾರರು ಸಾಮಾನ್ಯವಾಗಿ ಬಾಕಿ ಉಳಿಕೆ ಹಣವನ್ನು ಪ್ರತಿ ತಿಂಗಳು ಸಂಪೂರ್ಣವಾಗಿ ಪಾವತಿಸಿದ ಸಂದರ್ಭದಲ್ಲಿ ಬಡ್ಡಿದರವನ್ನು ಮನ್ನಾ ಮಾಡುತ್ತಾರೆ, ಆದರೆ, ಸಂಪೂರ್ಣವಾಗಿ ಬಾಕಿ ಉಳಿದ ಹಣವನ್ನು ಪಾವತಿಸದೇ ಇದ್ದಲ್ಲಿ ವಿಶೇಷವಾಗಿ ಆಗ ಪ್ರತಿ ಖರೀದಿ ಮಾಡಿದ ದಿನಾಂಕದಿಂದ ಸಂಪೂರ್ಣ ಪ್ರಮಾಣದ ಬಡ್ಡಿ ದರವನ್ನು ವಿಧಿಸುತ್ತಾರೆ.

ಉದಾಹರಣೆಗೆ, ಒಂದು ವೇಳೆ ಬಳಕೆದಾರರು $೧,೦೦೦ ಮೊತ್ತದ ಹಣಕಾಸು ವ್ಯವಹಾರವನ್ನು ನಡೆಸಿದ್ದು ಅವರೊಂದು ವೇಳೆ ಈ ಸಂಪೂರ್ಣ ಮೊತ್ತವನ್ನು ಈ ರಿಯಾಯಿತಿ ಅವಧಿಯಲ್ಲಿ ಪಾವತಿಸಿದಲ್ಲಿ ಅಂತಹ ಬಳಕೆದಾರರಿಗೆ ಯಾವುದೇ ಬಡ್ಡಿ ದರವನ್ನು ವಿಧಿಸುವುದಿಲ್ಲ. ಹೀಗಿದ್ದರೂ, ಗ್ರಾಹಕರು ಒಂದು ವೇಳೆ $೧.೦೦ ಒಟ್ಟು ಮೊತ್ತವನ್ನು ಪಾವತಿಸದೇ ಹಾಗೆಯೇ ಉಳಿಸಿಕೊಂಡಲ್ಲಿ, ಆಗ $೧,೦೦೦ ಮೊತ್ತದ ಖರೀದಿಯ ದಿನಾಂಕದಿಂದ ಹಣಪಾವತಿಯನ್ನು ಪಡೆಯುವವರೆಗೆ ಬಡ್ಡಿಯನ್ನು ವಿಧಿಸಬಹುದಾಗಿದೆ. ಕೆಲವೊಂದು ಖಚಿತ ಸಂದರ್ಭದಲ್ಲಿ , ವಿಧಿಸಲಾಗುವ ಬಡ್ಡಿದರವನ್ನು ಸಾಮಾನ್ಯವಾಗಿ ಕಾರ್ಡ್ ಹೊಂದಿರುವವರಿಗೆ ನೀಡಲಾಗುವ ಕರಾರಿನಲ್ಲಿ ವಿವರಿಸಲ್ಪಟ್ಟಿರುತ್ತದೆಯಲ್ಲದೇ, ಮಾಸಿಕ ಲೆಕ್ಕಪಟ್ಟಿಯ ಹಿಂಭಾಗದಲ್ಲಿ ಅದನ್ನು ಸವಿವರವಾಗಿ ನೀಡಲಾಗಿರುತ್ತದೆ. ಹೆಚ್ಚಿನ ಹಣಕಾಸು ಸಂಸ್ಥೆಗಳು ಬಡ್ಡಿಯ ಮೊತ್ತವನ್ನು ನಿರ್ಧರಿಸಲು ಈ ಸಾಮಾನ್ಯ ಲೆಕ್ಕಾಚಾರದ ನಿಯಮವನ್ನು ಬಳಸುತ್ತವೆ ಅದೆಂದರೆ (ವಾರ್ಷಿಕ ಶೇಕಡಾವಾರು ದರ)APR/೧೦೦ x (ಸರಾಸರಿ ದೈನಂದಿನ ಬಾಕಿ) ADB/೩೬೫ x ಆವರ್ತಗೊಂಡ ದಿನಗಳ ಸಂಖ್ಯೆ. ವಾರ್ಷಿಕ ಶೇಕಡಾ ದರವನ್ನು (ಎ ಪಿ ಆರ್) ತೆಗೆದುಕೊಂಡು ಅದನ್ನು ೧೦೦ ರಿಂದ ಭಾಗಾಗಾರ ಮಾಡಿರಿ ನಂತರ ದೈನಂದಿನ ಸರಾಸರಿ ಬಾಕಿ(ಎ ಡಿ ಬಿ)ಯನ್ನು ೩೬೫ ಭಾಗಾಕಾರ ಮಾಡಿರಿ ನಂತರ ಈ ಮೊತ್ತವನ್ನು ತೆಗೆದುಕೊಂಡು ಖಾತೆಗೆ ಪಾವತಿಸುವ ಮೊದಲಿದ್ದ ಒಟ್ಟು ಆವರ್ತ ಮೊತ್ತವನ್ನು ಒಟ್ಟು ಆವರ್ತಗೊಂಡ(ಕಳೆದ ದಿನಗಳು) ದಿನಗಳಿಂದ ಗುಣಿಸಿರಿ. ಹಣಕಾಸು ಸಂಸ್ಥೆಗಳು ಒಂದು ವೇಳೆ ಆರ್ ಆರ್ ಎಫ್ ಸಿ ಅಥವಾ ರೆಸಿಡ್ಯುವಲ್ ರೀಟೇಲ್ ಫೈನಾನ್ಸ್ ದರ(ಬಾಕಿಯುಳಿಕೆಯ ಫೈನಾನ್ಸ್ ದರ)ಕ್ಕೆ ಅನುಗುಣವಾದ ಸಂಪೂರ್ಣ ಮಾಹಿತಿಯಿಲ್ಲದಿದ್ದರೆ, ಹಣಕಾಸು ವ್ಯವಹಾರ ನಡೆಸಿದ ಮೂಲ ಅವಧಿಯವರೆಗೆ ವಿಧಿಸಿದ ಬಡ್ಡಿಯನ್ನು ಉಲ್ಲೇಕಿಸುತ್ತವೆಯಲ್ಲದೇ , ಹಣಪಾವತಿಯಾದ ಸಮಯದವರೆಗಿನ ಬಡ್ಡಿಯನ್ನು ಕೂಡ ಉಲ್ಲೇಕಿಸುತ್ತವೆ. ಒಂದು ವೇಳೆ ಸಂಪೂರ್ಣ ಮೊತ್ತವು ಆವರ್ತಗೊಂಡರೆ ಇಲ್ಲವೇ ಹಣಪಾವತಿಯನ್ನು ಸಂಪೂರ್ಣವಾಗಿ ಮಾಡಿದ್ದರೆ, ಕಾರ್ಡ್ನ ಬಳಕೆದಾರರು ಮುಂದಿನ ಲೆಕ್ಕಪಟ್ಟಿಯಲ್ಲಿರುವಂತೆ ಸಂಪೂರ್ಣವಾಗಿ ಪಾವತಿಸಿದರೆ, ಅವರು ಹೊಂದಿರುವ ಲೆಕ್ಕ ಪಟ್ಟಿಯಂತೆಯೇ ಬಡ್ಡಿಯ ದರವನ್ನು ಆವರೆಗೂ ಪಡೆಯುತ್ತಾರೆ(ವಾಸ್ತವದಲ್ಲಿ ನಿರ್ದಿಷ್ಟ ಆ ದಿನದವರೆಗೆ ಪಾವತಿಸಲಾದ ಸಂಪೂರ್ಣ ಬಾಕಿ ಹಣಕ್ಕೆ ಕೇವಲ ವಿಧಿಸಲಾದ ಬಡ್ಡಿಗೆ ಸಂಗ್ರಹಿಸಿದ ದರವನ್ನು ಮಾತ್ರ ಆ ಲೆಕ್ಕಪಟ್ಟಿ(ಸ್ಟೇಟ್ಮೆಂಟ್) ಹೊಂದಿರುತ್ತದೆ. ಅಂದರೆ, ಆವರ್ತಗೊಳ್ಳುವ ಬಾಕಿಯು ರದ್ದುಗೊಳ್ಳುತ್ತದೆ.) ಕ್ರೆಡಿಟ್ ಕಾರ್ಡ್ ಸುಲಭ ರೀತಿಯಲ್ಲಿ ಒಂದು ರಿವಾಲ್ವಿಂಗ್ ಕ್ರೆಡಿಟ್(ಆವರ್ತ ಸಾಲದ) ವಿಧವಾಗಿ ಕೆಲಸ ನಿರ್ವಹಿಸಬಹುದು, ಇಲ್ಲವೇ ಒಂದೇ ಛತ್ರಿಯಡಿಯ ಸಾಲದ ಮಿತಿಯಲ್ಲಿ ಅದು ಬಹು ಭಾಗದ ಬಾಕಿಯೊಂದಿಗೆ ವಿಭಿನ್ನ ಬಡ್ಡಿಯ ದರದ ರೂಪದಲ್ಲಿ ಒಂದು ಸಂಕೀರ್ಣ ಆರ್ಥಿಕ ಸಾಧನವಾಗಿ ಮಾರ್ಪಾಡಾಗುವ ಸಾಧ್ಯತೆಗಳೂ ಇರಬಹುದು, ಅಥವಾ ವಿಭಿನ್ನ ಭಾಗದ ಬಾಕಿಗೆ ಪ್ರತ್ಯೇಕ ಸಾಲ ಮಿತಿಗಳು ಕೂಡ ಅನ್ವಯವಾಗಬಹುದು. ಸಾಮಾನ್ಯವಾಗಿ ಈ ವರ್ಗೀಕರಣಗಳು ಜಾರಿ ಬ್ಯಾಂಕುಗಳು ನೀಡುವ ವಿಶೇಷ ಭತ್ಯಾ ಕೊಡುಗೆಗಳ ಪರಿಣಾಮದಿಂದಾಗಿದೆಯಲ್ಲದೇ ಇವುಗಳು ಇತರ ಕಾರ್ಡ್ ನೀಡಿಕೆದಾರರಿಂದ (ಬ್ಯಾಲೆನ್ಸ್ ಟ್ರಾನ್ಸ್ಫರ್)ಬಾಕಿ ಹಣದ ವರ್ಗಾವಣೆಯನ್ನು ಪ್ರೋತ್ಸಾಹಿಸುವುದಕ್ಕಾಗಿದೆ. ಈ ಪ್ರಸಂಗದಲ್ಲಿ ಅನೇಕ ಬ್ಯಾಲೆನ್ಸ್ ವಿಭಾಗಗಳಿಗೆ ಹಲವು ಬಡ್ಡಿದರಗಳು ಅನ್ವಯವಾಗುತ್ತವೆ, ಪಾವತಿ ಹಂಚಿಕೆಗಳು ಸಾಮಾನ್ಯವಾಗಿ ಜಾರಿ ಮಾಡುವ ಬ್ಯಾಂಕ್ಗಳ ವಿವೇಚನೆಯಲ್ಲಿರುತ್ತವೆ ಮತ್ತು ಹಾಗಾಗಿ ಈ ಮರುಪಾವತಿಗಳು ಸಾಮಾನ್ಯವಾಗಿ ಯಾವುದೇ ಬಾಕಿ ಹಣವನ್ನು ಹೆಚ್ಚಿನ ದರದಲ್ಲಿ ಪಾವತಿಸುವುದಕ್ಕಿಂತ ಮೊದಲು ಸಂಪೂರ್ಣವಾಗಿ ಹಣಪಾವತಿಯಾಗುವವರೆಗೆ ಕಡಿಮೆ ಬಡ್ಡಿಯ ದರದಲ್ಲಿ ಹಂಚಿಕೆಯಾಗುತ್ತವೆ. ಬಡ್ಡಿಯ ದರಗಳು ಕಾರ್ಡಿನಿಂದ ಕಾರ್ಡಿಗೆ ಗಣನೀಯವಾಗಿ ವಿಭಿನ್ನವಾಗಿರಬಹುದು, ಮತ್ತು ಕೆಲವೊಮ್ಮೆ ಕಾರ್ಡ್ ಹೊಂದಿದ ಗ್ರಾಹಕರು ಆ ಕಾರ್ಡಿಗೆ ಅಥವಾ ಇತರ ಯಾವುದೇ ಸಾಲ ಸೌಲಭ್ಯಕ್ಕೆ/ಕ್ರೆಡಿಟ್ ಇನ್ಸ್ಟ್ರುಮೆಂಟ್ಗೆ ತಡವಾಗಿ ಹಣ ಪಾವತಿಸಿದರೆ ಅಂತಹ ಸಂದರ್ಭದಲ್ಲಿ ಆ ಕಾರ್ಡಿಗೆ ವಿಧಿಸುವ ಬಡ್ಡಿಯ ದರದಲ್ಲಿ ಅನಿರೀಕ್ಷಿತವಾಗಿ ಏರುಪೇರಾಗಬಹುದು, ಅಥವಾ ಕೆಲವೊಮ್ಮೆ ಜಾರಿ ಮಾಡುವ ಬ್ಯಾಂಕ್ ತನ್ನ ಕಂದಾಯವನ್ನು ಹೆಚ್ಚಿಸಲು ನಿರ್ಧರಿಸಿದಲ್ಲಿ ಕೂಡ ಬಡ್ಡಿಯ ದರದಲ್ಲಿ ಏರುಪೇರಾಗಬಹುದು.

ಗ್ರಾಹಕರಿಗಾಗುವ ಪ್ರಯೋಜನಗಳು

[ಬದಲಾಯಿಸಿ]

ಪ್ರತಿಯೊಬ್ಬ ಗ್ರಾಹಕನಿಗೂ ಆಗುವ ಮುಖ್ಯ ಪ್ರಯೋಜನವೆಂದರೆ ಸಿದ್ಧವಾದ ಹಣಕಾಸು ಸೌಲಭ್ಯವಾಗಿದೆ. ಡೆಬಿಟ್ ಕಾರ್ಡ್ಸ್ ಮತ್ತು ಚೆಕ್ಗಳಿಗೆ ಹೋಲಿಸಿದರೆ, ಕ್ರೆಡಿಟ್ ಕಾರ್ಡ್ ಕಿರು ಅವಧಿಯ ಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ಅತೀ ಬೇಗನೆ ದೊರೆಯಲು ಅವಕಾಶ ಮಾಡಿಕೊಡುತ್ತದೆಯಲ್ಲದೇ, ಇದರಲ್ಲಿ ಕಾರ್ಡ್ಗೆ ಒಟ್ಟು ನೀಡಲಾದ ದರವು ಗರಿಷ್ಠ ಸಾಲದ ಮಿತಿಯನ್ನು ಮೀರಿರುವುದಿಲ್ಲ ಹಾಗೆಯೇ ಪ್ರತಿ ಹಣಕಾಸು ವ್ಯವಹಾರದ ಮೊದಲು ಯಾವುದೇ ಉಳಿದಿರುವ ಬಾಕಿಯನ್ನು ಲೆಕ್ಕಾಚಾರ ಮಾಡುವ ಅವಶ್ಯಕತೆಯಿರುವುದಿಲ್ಲ. ಕ್ರೆಡಿಟ್ ಕಾರ್ಡ್ಗಳು ಡೆಬಿಟ್ ಕಾರ್ಡ್ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮೋಸದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಯುನೈಟೆಡ್ ಕಿಂಗ್ಡಮ್ನಲ್ಲಿ £೧೦೦ಗಿಂತಲೂ ಹೆಚ್ಚಿನ ದೋಷಪೂರ್ಣ ಉತ್ಪನ್ನಗಳನ್ನು ಖರೀದಿ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ವ್ಯಾಪಾರಿಯೊಂದಿಗೆ ಜಂಟಿಯಾಗಿ ದಂಡನೆಗೊಳಗಾಗುತ್ತದೆ.[] ಅನೇಕ ಕ್ರೆಡಿಟ್ ಕಾರ್ಡ್ಗಳು ಯಾವುದೇ ವೆಚ್ಚವಿಲ್ಲದೇ ಉಚಿತವಾಗಿ ವಿಸ್ತೃತ ಉತ್ಪನ್ನಗಳ ಬಗ್ಗೆ ಖಾತರಿ , ಉಚಿತ ನಷ್ಟ/ಹಾನಿಗೊಳಗಾದ ಸಂದರ್ಭದಲ್ಲಿ ಹೊಸ ಖರೀದಿ ವ್ಯಾಪ್ತಿಗಳು ಮತ್ತು ಹಿಂದಕ್ಕೆ ಪಡೆದುಕೊಳ್ಳುವಂತಹ ಅಂಶಗಳನ್ನು ಒಳಗೊಂಡ ನಗದು, ಉತ್ಪನ್ನಗಳು, ಅಥವಾ ವಿಮಾನಯಾನ ಟಿಕೆಟ್ಗಳ ನೀಡಿಕೆಯಂತಹ ಕೊಡುಗೆ ಪ್ಯಾಕೇಜ್ಗಳಂತಹ ಸಂಭಾವನೆಗಳು ಮತ್ತು ಪ್ರಯೋಜನಾತ್ಮಕ ಪ್ಯಾಕೇಜ್ಗಳನ್ನು ನೀಡುತ್ತವೆ. ಇದಕ್ಕೆ ಪೂರಕವಾಗಿ, ಹೆಚ್ಚಿನ ಉದ್ದೇಶಗಳಿಗೆ ಬೇಕಾಗುವ ನಗದು ಹಣವನ್ನು ಒಯ್ಯುವುದನ್ನು ತಪ್ಪಿಸುವುದರಿಂದ ಕೆಲವೊಂದು ಗ್ರಾಹಕರಿಗೆ ಈ ಕ್ರೆಡಿಟ್ ಕಾರ್ಡ್ಗಳನ್ನು ಹೊತ್ತೊಯ್ಯುವುದು ಹೆಚ್ಚು ಅನುಕೂಲಕರವಾಗಿದೆ.

ಗ್ರಾಹಕರಿಗಾಗುವ ತೊಂದರೆಗಳು

[ಬದಲಾಯಿಸಿ]

ಹೆಚ್ಚಿನ ಬಡ್ಡಿ ಹಾಗೂ ದಿವಾಳಿತನ

[ಬದಲಾಯಿಸಿ]

ಪ್ರಾರಂಭಿಕವಾಗಿ ಕಡಿಮೆ ಪ್ರಮಾಣದ ಕ್ರೆಡಿಟ್ ಕಾರ್ಡ್ ದರಗಳು ನಿಶ್ಚಿತ ಅವಧಿಗೆ ಸೀಮಿತವಾಗಿದ್ದು, ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ದರವನ್ನು ವಿಧಿಸಿದ ನಂತರ ಅದು ೬ ರಿಂದ ೧೨ ತಿಂಗಳುಗಳವರೆಗೆ ಇರುತ್ತದೆ. ಎಲ್ಲಾ ಕ್ರೆಡಿಟ್ ಕಾರ್ಡ್ಗಳು ಶುಲ್ಕ ಮತ್ತು ಬಡ್ಡಿಯ ದರಗಳನ್ನು ವಿಧಿಸುವುದಲ್ಲದೇ, ಕೆಲವೊಂದು ಗ್ರಾಹಕರು ತಮಗೆ ಕ್ರೆಡಿಟ್ ಕಾರ್ಡ್ ನೀಡಿದವರಡಿಯಲ್ಲಿ ಸಾಲಗಾರರಾಗಿರುತ್ತಾರಲ್ಲದೇ, ಅವರು ದಿವಾಳಿಯಾಗುತ್ತಾರೆ. ಕೆಲವೊಂದು ಕ್ರೆಡಿಟ್ ಕಾರ್ಡ್ಗಳು ಕೆಲವೊಮ್ಮೆ ಹಣ ಪಾವತಿಯು ತಪ್ಪಿದಲ್ಲಿ ೨೦ ರಿಂದ ೩೦ ಶೇಕಡಾದಷ್ಟು ತೆರಿಗೆಯ ದರವನ್ನು ವಿಧಿಸುತ್ತವೆ; ಇತರ ಸಂದರ್ಭಗಳಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಿಲ್ಲದೇ ನಿಗದಿತ ದರವನ್ನು ವಿಧಿಸುತ್ತವೆ. ಕೆಲವೊಂದು ಸನ್ನಿವೇಶಗಳಳಲ್ಲಿ ಸಾರ್ವತ್ರಿಕ ನ್ಯೂನತೆಗಳು ಅನ್ವಯವಾಗುತ್ತವೆ: ಒಬ್ಬರಿಂದಲೇ ಒದಗಿಸಲಾದ ಅವರಿಗೆ ಸಂಬಂಧಿಸದ ಖಾತೆಯಲ್ಲಿ ಯಾವುದೇ ಮರುಪಾವತಿ ತಪ್ಪಿದಾಗ ಆ ಕಾರ್ಡ್ ಸೂಕ್ತವಾಗಿದ್ದರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ದೋಷದ ಪ್ರಮಾಣ ಉಂಟಾಗುತ್ತದೆ. ಇದು ಸ್ನೋಬಾಲ್ /ಶೀತಲ ಪರಿಣಾಮಕ್ಕೆ ಕಾರಣವಾಗುವುದಲ್ಲದೇ ಇಲ್ಲಿ ಗ್ರಾಹಕರು ಅನಿರೀಕ್ಷಿತವಾಗಿ ಹೆಚ್ಚಿನ ಪ್ರಮಾಣದ ಬಡ್ಡಿಯ ದರಗಳನ್ನು ತೆರಬೇಕಾಗುತ್ತದೆ. ಭವಿಷ್ಯದಲ್ಲಿ ಹೆಚ್ಚಿನ ಕಾರ್ಡ್ ಹೋಲ್ಡರ್ಗಳ ಒಪ್ಪಂದಗಳು ಯಾವುದೇ ಕಾರಣಕ್ಕಾಗಿ ಸೂಕ್ತವೆನಿಸಿದಾಗ ಬಡ್ಡಿಯ ದರವನ್ನು ನಿರಂಕುಶವಾಗಿ ಏರಿಸುವ ನಿಟ್ಟಿನಲ್ಲಿ ಕಾರ್ಡ್ ಜಾರಿಮಾಡುವವರನ್ನು ಸುಭದ್ರಗೊಳಿಸಬಲ್ಲುದು. ೨೦೦೯ ರ ಡಿಸೆಂಬರ್ನಲ್ಲಿ ತಿಳಿದುಬಂದಂತೆ, ಫಸ್ಟ್ ಪ್ರೀಮಿಯರ್ ಬ್ಯಾಂಕ್ ಶೇಕಡಾ ೭೯.೯% ಬಡ್ಡಿಯ ದರ ದೊಂದಿಗೆ ಕ್ರೆಡಿಟ್ ಕಾರ್ಡ್ನ್ನು ನೀಡುತ್ತಿದೆ ಎಂದು ವರದಿಯಾಗಿದೆ.[]

ಎಲ್ಲಾ ಗ್ರಾಹಕರಿಗೂ ಏರಿಕೆಯ ಬೆಲೆ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ಗಳನ್ನು ಸ್ವೀಕರಿಸುವ ವ್ಯಾಪಾರಿಗಳು ಎಲ್ಲಾ ಕ್ರೆಡಿಟ್ ಕಾರ್ಡ್ ವ್ಯವಹಾರಗಳ ಮೇಲೆ ಇಂಟರ್ಚೇಂಜ್ ಫೀ(ವಿನಿಮಯ ಶುಲ್ಕ) ಗಳು ಮತ್ತು ರಿಯಾಯಿತಿ ಶುಲ್ಕಗಳನ್ನು ತೆರಬೇಕಾಗುತ್ತದೆ.[][] ಕೆಲವೊಂದು ಪ್ರಕರಣಗಳಲ್ಲಿ ಈ ಶುಲ್ಕಗಳನ್ನು ನೇರವಾಗಿ ತಮ್ಮ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಜಾರಿಗೊಳಿಸುವಾಗ ಅಥವಾ ಕನಿಷ್ಠ ಮೊತ್ತದ ಹಣಕಾಸು ವ್ಯವಹಾರಗಳನ್ನು ನಡೆಸುವಾಗ ತಮ್ಮ ಕ್ರೆಡಿಟ್ ಒಪ್ಪಂದಗಳಿಂದಾಗಿ ವ್ಯಾಪಾರಿಗಳು ಕೆಲವೊಂದು ನಿರ್ಬಂಧಗಳಿಗೊಳಗಾಗುತ್ತಾರೆ (ಯುನೈಟೆಡ್ ಸ್ಟೇಟ್ಸ್ನಲ್ಲಿ ಇದು ದೀರ್ಘಕಾಲದವರೆಗೆ ನಿರ್ಬಂಧಿತವಾಗಿಲ್ಲ.) [] ಇದರ ಪರಿಣಾಮವಾಗಿ ವ್ಯಾಪಾರಿಗಳು ಎಲ್ಲಾ ಗ್ರಾಹಕರಿಗೆ(ಯಾರು ತಮ್ಮಲ್ಲಿರುವ ಕ್ರೆಡಿಟ್ ಕಾರ್ಡ್ಗಳನ್ನು ಬಳಸದಿರುವವರನ್ನು ಕೂಡ ಒಳಗೊಂಡಂತೆ) ಕ್ರೆಡಿಟ್ ಕಾರ್ಡ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಸರಿದೂಗಿಸಲು ಹೆಚ್ಚಿನ ದರವನ್ನು ಪಾವತಿಸಲು ದರ ನಿಗದಿಪಡಿಸಬಹುದು.[] ೨೦೦೮ ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಒಟ್ಟು $೪೮ ಡಾಲರ್ ಬಿಲಿಯನ್ ಮೊತ್ತದ ಹಣವನ್ನು ವಿನಿಮಯ ಶುಲ್ಕದಿಂದ ಸಂಗ್ರಹಿಸಿವೆ. ಅಥವಾ ಸರಾಸರಿ $೪೨೭ ಡಾಲರ್ನಷ್ಟು ಹಣವನ್ನು ಪ್ರತಿ ಕುಟುಂಬದಿಂದ ಪ್ರತಿ ಹಣಕಾಸು ವ್ಯವಹಾರಕ್ಕೆ ಸುಮಾರು ಶೇಕಡಾ ೨% ರಷ್ಟು ಸರಾಸರಿ ಶುಲ್ಕದ ದರವನ್ನು ಸಂಗ್ರಹಿಸಿವೆ.[]

ಹೆಚ್ಚಿನ ಗಡುವಿನ ಅವಧಿ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ನ ರಿಯಾಯಿತಿ ಅವಧಿಯೆಂದರೆ ಅದು ಗ್ರಾಹಕರು ಬಾಕಿಯುಳಿದಿರುವ ಮೊತ್ತಕ್ಕೆ ಬಡ್ಡಿಯನ್ನು ವಿಧಿಸುವ ಮೊದಲು ಪಾವತಿಸಬೇಕಾದ ಬಾಕಿ ಹಣವಾಗಿರುತ್ತದೆ. ಈ ಗ್ರೇಸ್(ರಿಯಾಯಿತಿ ಅವಧಿಗಳು) ವಿಭಿನ್ನವಾಗಿರಬಹುದು, ಆದರೆ ಸಾಮಾನ್ಯವಾಗಿ ಅವುಗಳ ವ್ಯಾಪ್ತಿಯು ಕ್ರೆಡಿಟ್ ಕಾರ್ಡ್‌ನ ಮಾದರಿ ಮತ್ತು ಜಾರಿ ಮಾಡಿದ ಬ್ಯಾಂಕನ್ನು ಅವಲಂಬಿಸಿ ಈ ಅವಧಿಯು ಸಾಮಾನ್ಯವಾಗಿ ೨೦ ರಿಂದ ೫೦ ದಿನಗಳವರೆಗೆ ಇರುತ್ತದೆ. ಕೆಲವೊಂದು ನೀತಿಗಳು ಕೆಲವೊಂದು ನಿರ್ದಿಷ್ಠ ಷರತ್ತುಗಳು ಪೂರ್ಣಗೊಂಡಮೇಲೆ ಪುನರ್ಸ್ಥಾಪನೆ ವ್ಯವಸ್ಥೆಗೆ ಅವಕಾಶ ಮಾಡಿಕೊಡುತ್ತದೆ.

ಸಾಮಾನ್ಯವಾಗಿ, ಒಂದೊಮ್ಮೆ ಗ್ರಾಹಕರು ಬಾಕಿ ಹಣವನ್ನು ತಡವಾಗಿ ಪಾವತಿಸಿದರೆ ಹಣಕಾಸು ಶುಲ್ಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ ಮತ್ತು ಈ ರಿಯಾಯಿತಿ ಅವಧಿಯು ಈ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ. ಇಲ್ಲಿ ಒಳಗೊಳ್ಳುವ ಹಣಕಾಸು ಶುಲ್ಕವು ರಿಯಾಯಿತಿ ಅವಧಿ ಮತ್ತು ಬಾಕಿ ಹಣವನ್ನು ಅವಲಂಭಿಸಿರುತ್ತದೆ; ಹೆಚ್ಚಿನ ಕ್ರೆಡಿಟ್ ಕಾರ್ಡ್ಗಳಿಗೆ ಅದರಲ್ಲೂ ಒಂದು ವೇಳೆ, ಹಿಂದಿನ ಬಿಲ್ಲಿಂಗ್‌ನ ಆವರ್ತದಲ್ಲಿ ಯಾವುದಾದರೂ ಬಾಕಿ ಉಳಿದ ಹಣವಿದ್ದರೆ ಅಥವಾ ಲೆಕ್ಕಪಟ್ಟಿಯು ಬಾಕಿಯಿದ್ದರೆ ಅದಕ್ಕೆ ಯಾವುದೇ ರಿಯಾಯಿತಿ ಅವಧಿಗಳಿರುವುದಿಲ್ಲ (ಅಂದರೆ, ಇಲ್ಲಿ ಹಿಂದಿನ ಬಾಕಿ ಮತ್ತು ಹೊಸ ವ್ಯವಹಾರಗಳೆರಡಕ್ಕೂ ಬಡ್ಡಿಯು ಅನ್ವಯವಾಗುತ್ತದೆ) ಹೀಗಿದ್ದರೂ, ಕೆಲವೊಂದು ಕ್ರೆಡಿಟ್ ಕಾರ್ಡ್ಗಳು ಹೊಸ ವ್ಯವಹಾರಗಳನ್ನು ಹೊರತುಪಡಿಸಿ, ಕೇವಲ ಹಿಂದಿನ ಅಥವಾ ಹಳೆಯ ಬಾಕಿಗೆ ಹಣಕಾಸು ಶುಲ್ಕವನ್ನು ಅಳವಡಿಸುತ್ತವೆ.

ವ್ಯಾಪಾರಿಗಳಿಗಾಗುವ ಪ್ರಯೋಜನಗಳು

[ಬದಲಾಯಿಸಿ]
ರಸ್ತೆಬದಿಯ ಮಾರುಕಟ್ಟೆಯಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿರುವುದು.ಕ್ರೆಡಿಟ್ ಕಾರ್ಡುಗಳನ್ನು ಸ್ವೀಕರಿಸುವ ಗುರುತುಗಳು.

ವ್ಯಾಪಾರಿಗಳಿಗೆ ಈ ಕ್ರೆಡಿಟ್ ಕಾರ್ಡ್ ವ್ಯವಹಾರವು ಇತರ ಪಾವತಿ ವ್ಯವಹಾರ ವಿಧಾನಗಳಾದ ಚೆಕ್‌ಗಳ ಪಾವತಿ ಇತ್ಯಾದಿಗಳಿಂದ ಹೆಚ್ಚು ಸುಭದ್ರವಾಗಿದೆ, ಯಾಕೆಂದರೆ, ಕಾರ್ಡ್ ಜಾರಿಗೊಳಿಸುವ ಬ್ಯಾಂಕ್ಗಳು ಒಂದೊಮ್ಮೆ ವ್ಯವಹಾರವು ಅಧಿಕೃತಗೊಂಡ ತಕ್ಷಣವೇ ಗ್ರಾಹಕನೊಂದು ವೇಳೆ ಕ್ರೆಡಿಟ್ ಕಾರ್ಡ್ ಪಾವತಿಮಾಡಲು ವಿಫಲನಾಗಿದ್ದರೂ ಕೂಡ, ಅದನ್ನು ಪರಿಗಣಿಸದೇ (ನ್ಯಾಯಸಮ್ಮತ ವಿವಾದಗಳನ್ನು ಹೊರತುಪಡಿಸಿ, ಕೆಳಗೆ ವಿವರಿಸಲಾದ ಮತ್ತು ಕೆಲವೊಮ್ಮೆ ವ್ಯಾಪಾರಿಗಳಿಗೆ ಹಿಂತಿರುಗಿಸಿ ಪಾವತಿಸುವ ಹಣದ ಮೇಲೆ ಪರಿಣಾಮ ಬೀರಬಹುದು) ವ್ಯಾಪಾರಿಗಳಿಗೆ ಹಣ ಪಾವತಿಸಲು ಬದ್ಧವಾಗಿರುತ್ತದೆ. ಹೆಚ್ಚಿನ ಸನ್ನಿವೇಶಗಳಲ್ಲಿ, ನಗದಿಗಿಂತ ಕಾರ್ಡ್‌ಗಳೇ ಹೆಚ್ಚು ಸುರಕ್ಷಿತವಾಗಿವೆ ಯಾಕೆಂದರೆ, ಇವುಗಳು ವ್ಯಾಪಾರಿಗಳಿಂದ, ನೌಕರರ ಕೈಯಿಂದ ಮತ್ತು ಕೆಲವೊಮ್ಮೆ ಬ್ಯಾಂಕ್ನ ಆವರಣದಲ್ಲಿ ನಗದು ಮೊತ್ತ ಕಳವಾಗುವುದನ್ನು ತಡೆಯುತ್ತದೆ. ಕ್ರೆಡಿಟ್ ಕಾರ್ಡ್ ಸ್ವೀಕರಿಸುವುದಕ್ಕೆ ಮುಂಚಿತವಾಗಿ, ಪ್ರತಿಯೊಬ್ಬ ವ್ಯಾಪಾರಿಯು ಕೂಡ ಸಾಲವನ್ನು ವಿಸ್ತರಿಸುವುದಕ್ಕಿಂತ ಮೊದಲು, ಪ್ರತಿಯೊಬ್ಬ ಗ್ರಾಹಕನ ಸಾಲದ ಚರಿತ್ರೆ/ಕ್ರೆಡಿಟ್ ಹಿಸ್ಟರಿ ಯನ್ನು ವಿಶ್ಲೇಷಿಸಬೇಕು. ಈ ಕೆಲಸವನ್ನು ಈಗ ಬ್ಯಾಂಕ್ನಿಂದಲೇ ನಿರ್ವಹಿಸಲ್ಪಡುತ್ತದೆ ಅಂದರೆ ಅದು ಮೊದಲೇ ಕ್ರೆಡಿಟ್ ರಿಸ್ಕ್ (ಸಾಲದಿಂದಾಗುವ ಗಂಡಾಂತರವನ್ನು) ಗ್ರಹಿಸುತ್ತದೆ. ಕ್ರೆಡಿಟ್ ಕಾರ್ಡ್ಗಳು ಕೆಲವೊಮ್ಮೆ ವಿಶೇಷವಾಗಿ ಒಂದು ವೇಳೆ ಗ್ರಾಹಕರು ತಮ್ಮಲ್ಲಿ ಅಥವಾ ತನ್ನ ಪಾಲುದಾರನಲ್ಲಿ ಅಥವಾ ಖಾತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಇಲ್ಲದಿದ್ದಾಗ ಅವುಗಳು ಮಾರಾಟವನ್ನು ಸುಭದ್ರಗೊಳಿಸುವಲ್ಲಿ ಸಹಕರಿಸುತ್ತವೆ. ಹೆಚ್ಚುವರಿ ಹಣಕಾಸು ವ್ಯವಹಾರಗಳು ಗ್ರಾಹಕನು ವಸ್ತುಗಳನ್ನು ಖರೀದಿಸಬಹುದಾದ ಮತ್ತು/ಅಥವಾ ತಕ್ಷಣ ಲಭಿಸಬಹುದಾದ ಸೇವೆಗಳು ಮತ್ತು ಅವನು ಅಥವಾ ಅವಳ ಪಾಕೆಟ್ನಲ್ಲಿರುವ ಒಟ್ಟು ನಗದು ಹಣದ ಮೇಲೆ ಕಡಿಮೆ ಅಡ್ಡಿಯೊಡ್ಡುವ ಅಂಶಗಳು ಮತ್ತು ತಕ್ಷಣದಲ್ಲಿ ಅವನು ಅಥವಾ ಅವಳ ಬ್ಯಾಂಕ್ನಲ್ಲಿರುವ ಬಾಕಿ ಉಳಿಕೆ ಹಣದ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ. ಹೆಚ್ಚಿನ ವ್ಯಾಪಾರಿಗಳ ಮಾರುಕಟ್ಟೆ ವ್ಯವಹಾರವು ಈ ನೇರವಾದ ಮತ್ತು ತುರ್ತು ವಿಧಾನವನ್ನು ಅವಲಂಬಿಸಿದೆ. ಪ್ರತಿಯೊಂದು ಖರೀದಿಗೂ , ಬ್ಯಾಂಕ್ ಈ ಸೇವೆಗಾಗಿ ವ್ಯಾಪಾರಿಗಳಿಗೆ ಒಂದು ರುಸುಮು(ಕಮಿಷನ್) (ರಿಯಾಯಿತಿ ಶುಲ್ಕವನ್ನು ವಿಧಿಸುತ್ತದೆ ಮತ್ತು ಕೆಲವೊಮ್ಮೆ ಒಪ್ಪಿದ ಪಾವತಿಹಣವನ್ನು ವ್ಯಾಪಾರಿಯಿಂದ ಪಡೆಯುವಲ್ಲಿ ಕೆಲವೊಮ್ಮೆ ವಿಳಂಬವಾಗಬಹುದು. ರುಸುಮು (ಕಮಿಷನ್) ಅಂದರೆ ವ್ಯವಹಾರ ಮೊತ್ತದ ಶೇಕಡಾವಾರು ಹಣ ಮತ್ತು ನಿಶ್ಚಿತ ಶುಲ್ಕ(ವಿನಿಮಯ ದರ) ವಾಗಿದೆ. ಇದಕ್ಕೆ ಪೂರಕವಾಗಿ , ಕೆಲವೊಮ್ಮೆ ವ್ಯಾಪಾರಿಗಳಿಗೆ ದಂಡಗಳನ್ನು ತೆರಬಹುದು ಅಥವಾ ಒಂದು ವೇಳೆ ವಿವಾದಗಳಿಂದಾಗಿ, ಅನೇಕ ಬಾರಿ ವಜಾಗೊಳ್ಳುವಿಕೆ ಅಥವಾ ಶುಲ್ಕಗಳು ಹಿಂಚಲನೆಯಾಗುವಂತಹ ಸಂದರ್ಭದಲ್ಲಿ ಅವರಿಗೆ ಕ್ರೆಡಿಟ್ ಕಾರ್ಡ್ ಬಳಸಿ ಹಣಪಾವತಿಯನ್ನು ಪಡೆಯುವ ವಿಧಾನವನ್ನು ನಿರ್ಬಂಧಿಸಬಹುದು. ಕೆಲವೊಂದು ಸಣ್ಣ ವ್ಯಾಪಾರಿಗಳು ಕ್ರೆಡಿಟ್ ಕಾರ್ಡ್ಗಳ ಮೂಲಕ, ಖರೀದಿ ನಡೆಸಲು ವ್ಯವಹಾರ ವೆಚ್ಚಗಳಿಗಾಗಿ ಕನಿಷ್ಠ ಪ್ರಮಾಣದ ಪರಿಹಾರ ಮೊತ್ತವನ್ನು ಹೊಂದಿರಬೇಕಾಗುತ್ತದೆ.

ಕೆಲವೊಂದು ದೇಶಗಳಲ್ಲಿ, ಉದಾಹರಣೆಗೆ, ನಾರ್ಡಿಕ್ ದೇಶಗಳಲ್ಲಿ, ಕಳೆದುಹೋದ ಕಾರ್ಡ್ಗಳ ಸಂದರ್ಭದಲ್ಲಿ, ಐಡಿ ಕಾರ್ಡ್(ಗುರುತಿನ ಚೀಟಿ) ನ್ನು ಪರಿಶೀಲಿಸಿ, ಐಡಿ ಕಾರ್ಡ್ ಸಂಖ್ಯೆ/ನಾಗರಿಕ ನೋಂದಣಿ ಸಂಖ್ಯೆಯನ್ನು ರಶೀದಿಯಲ್ಲಿ ಬರೆದು ಸಹಿಮಾಡಿ ನೀಡಿದಾಗ ಆಗ ಕಾರ್ಡ್ ಕಳೆದುಕೊಂಡವರಿಗೂ ಬ್ಯಾಂಕ್ಗಳು ಹಣಪಾವತಿಯನ್ನು, ನೀಡುತ್ತವೆ. ಅದಕ್ಕಾಗಿ ಇಂತಹ ದೇಶಗಳಲ್ಲಿ ವ್ಯಾಪಾರಿಗಳು ಸಾಮಾನ್ಯವಾಗಿ ಗುರುತಿನ ಚೀಟಿಗಳನ್ನು(ಐ ಡಿ) ಕೇಳುತ್ತಾರೆ. ನಾನ್ ನಾರ್ಡಿಕ್ ನಾಗರಿಕರು ನಾರ್ಡಿಕ್ ಗುರುತಿನ ಚೀಟಿಯ ಕಾರ್ಡ್ ಅಥವಾ ಚಾಲನಾ ಪರವಾನಗಿಯನ್ನು ಹೊಂದಿರದಿದ್ದಲ್ಲಿ, ಅದರ ಬದಲಾಗಿ ಅವರು ಪಾಸ್ಪೋರ್ಟ್ ಸಂಖ್ಯೆಯನ್ನು ರಶೀದಿಯೊಂದರಲ್ಲಿ ಬರೆದು ತಮ್ಮ ಪಾಸ್ಪೋರ್ಟ್ನ್ನು ತೋರಿಸಬೇಕು ಹಾಗೆಯೇ ಕೆಲವೊಮ್ಮೆ ಇತರ ಮಾಹಿತಿಗಳನ್ನು ಕೂಡ ಈ ರಶೀದಿಯಲ್ಲಿ ನಮೂದಿಸಿರಬೇಕಾಗುತ್ತದೆ. ಕೆಲವೊಂದು ಅಂಗಡಿಗಳು ಗುರುತಿಗಾಗಿ ಕಾರ್ಡಿನ ಪಿನ್ನ್ನು ಬಳಸುತ್ತವೆ ಮತ್ತು ಅಂತಹ ಸಂದರ್ಭದಲ್ಲಿ, ಐಡಿ ಕಾರ್ಡ್ನ್ನು ತೋರಿಸುವ ಅಗತ್ಯವಿರುವುದಿಲ್ಲ.

ವ್ಯಾಪಾರಿಗಳಿಗೆ ತಗಲುವ ಶುಲ್ಕಗಳು

[ಬದಲಾಯಿಸಿ]

ವ್ಯಾಪಾರಿಗಳು ಕ್ರೆಡಿಟ್ ಕಾರ್ಡ್ಗಳ ವಿಶೇಷ ಸವಲತ್ತುಗಳನ್ನು ಪಡೆಯುವುದಕ್ಕಾಗಿ, ಅನೇಕ ರೀತಿಯ ಶುಲ್ಕಗಳನ್ನು ವಿಧಿಸುತ್ತಾರೆ. ವ್ಯಾಪಾರಿಗಳು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ನಲ್ಲಿ ನಡೆಸುವ ಪ್ರತಿ ಹಣಕಾಸು ವ್ಯವಹಾರದ ಶೇಕಡಾ ೧ ರಿಂದ ೩ ರಷ್ಟು ಮೌಲ್ಯದ ರುಸುಮು (ಶೇಕಡಾವಾರು ಹಣ) ಗ್ರಾಹಕರಿಗೆ ವಿಧಿಸುತ್ತಾರೆ ವ್ಯಾಪಾರಿಗಳು ಕೂಡ ಪ್ರತಿಯೊಂದು ಹಣಕಾಸು ವ್ಯವಹಾರಕ್ಕೆ, ಅನೇಕ ಶುಲ್ಕಗಳನ್ನು ಪಾವತಿಸುತ್ತಾರಲ್ಲದೇ, ಅದನ್ನು ವಿನಿಮಯ ದರ/ಇಂಟರ್ಚೇಂಜ್ ರೇಟ್ (ಪರ್ಯಾಯ ದರ) ಎಂದು ಕರೆಯಲಾಗುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಸೀಮಿತ/ಕಡಿಮೆ ಮೌಲ್ಯದ ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವುದರಿಂದ ವ್ಯಾಪಾರಿಗಳು ಲಾಭದ ಪ್ರಮಾಣ /ಪ್ರಾಫಿಟ್ ಮಾರ್ಜಿನ್ ಕಡಿಮೆಯಾಗಬಹುದು ಅಥವಾ ವ್ಯವಹಾರದ ಮೇಲೆ ಹಣವನ್ನು ಕೂಡ ಕಳೆದುಕೊಳ್ಳಲು ಕೂಡ ಕಾರಣವಾಗಬಹುದು. ಕ್ರೆಡಿಟ್ ಕಾರ್ಡ್ ವ್ಯವಹಾರಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ, ತಮ್ಮ ಹಕ್ಕನ್ನು ಉಳಿಸಿಕೊಳ್ಳಲು, ವ್ಯಾಪಾರಿಗಳು ಈ ವ್ಯವಹಾರವನ್ನು ತಮ್ಮ ವೆಚ್ಚದ ಭಾಗವೆಂದು ಸ್ವೀಕರಿಸಬೇಕಾಗುತ್ತದೆ. ಕಡಿಮೆ ಸರಾಸರಿ ಬೆಲೆಯ ವ್ಯವಹಾರಗಳನ್ನು ನಡೆಸುವ ಅಥವಾ ಹೆಚ್ಚಿನ ಸರಾಸರಿ ಬೆಲೆಯ ವ್ಯವಹಾರ ನಡೆಸುವ ವ್ಯಾಪಾರಿಗಳು, ಈ ಕ್ರೆಡಿಟ್ ಕಾರ್ಡ್ಗಳನ್ನು ಸ್ವೀಕರಿಸಲು, ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೆಲವೊಂದು ಸನ್ನಿವೇಶದಲ್ಲಿ ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ನ[೧೦] ಮೂಲಕ ಪಾವತಿಸುವ ಹಣಕ್ಕಾಗಿ “ಕ್ರೆಡಿಟ್ ಕಾರ್ಡ್ ಸಪ್ಲಿಮೆಂಟ್” ಗಾಗಿ ವ್ಯಾಪಾರಿಗಳು ಒಂದು ನಿಶ್ಚಿತವಾದ ಮೊತ್ತ ಅಥವಾ ಶೇಕಡಾವಾರು ಮೊತ್ತವನ್ನು ವಿಧಿಸಬಹುದು. ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ಪ್ರಕ್ರಿಯೆ/ಚಟುವಟಿಕೆಯನ್ನು ಕ್ರೆಡಿಟ್ ಕಾರ್ಡ್ ಒಪ್ಪಂದಗಳು ನಿರ್ಬಂಧಿಸಿವೆಯಲ್ಲದೇ, ಈ ಒಪ್ಪಂದಗಳು ವ್ಯಾಪಾರಿಗಳಿಗೆ ನಗದು ಪಾವತಿಗಾಗಿ ರಿಯಾಯಿತಿ ನೀಡಲು ಅವಕಾಶ ಕೂಡ ಕಲ್ಪಿಸಿವೆ.

ಒಳಗೊಂಡಿರುವ ಕಕ್ಷಿದಾರರು

[ಬದಲಾಯಿಸಿ]
  • ಕಾರ್ಡ್ ಹೋಲ್ಡರ್: ಕಾರ್ಡ್ ಹೊಂದಿರುವ ಗ್ರಾಹಕ(ಕಾರ್ಡ್ ಹೋಲ್ಡರ್) ಏನಾದರೂ ಖರೀದಿಸಲು ಕಾರ್ಡನ್ನು ಬಳಸುತ್ತಾನೆ; ಗ್ರಾಹಕ.
  • ಕಾರ್ಡ್ ಜಾರಿಗೊಳಿಸುವ ಬ್ಯಾಂಕ್: ಹಣಕಾಸು ಸಂಸ್ಥೆ ಅಥವಾ ಇತರ ಸಂಘಟನೆಗಳು ಕಾರ್ಡ್ ಹೋಲ್ಡರ್ಗೆ ಜಾರಿಗೊಳಿಸುತ್ತದೆ. ಈ ಬ್ಯಾಂಕ್ಗಳು ಹಣ ಮರುಪಾವತಿಗಾಗಿ ಗ್ರಾಹಕರಿಗೆ ಬಿಲ್ ತಯಾರಿಸುತ್ತದೆಯಲ್ಲದೇ, ವಂಚನಾತ್ಮಕವಾಗಿ ಕಾರ್ಡ್ ಬಳಕೆಯಾದ ಸಂದರ್ಭದಲ್ಲಿ ಗಂಡಾಂತರಗಳನ್ನು ನಿರ್ವಹಣೆ ಮಾಡುತ್ತದೆ. ಈ ಹಿಂದೆ ೨೦೦೭ ರವರೆಗೆ ಕೇವಲ ಅಮೆರಿಕನ್ ಎಕ್ಸ್ಪ್ರೆಸ್ ಮತ್ತು ಡಿಸ್ಕವರ್ಗಳು ತಮ್ಮ ನಿರ್ದಿಷ್ಟ ಬ್ರಾಂಡ್ಗಳಿಗೆ ಕಾರ್ಡ್ ಜಾರಿಮಾಡುವ ಏಕಮಾತ್ರ ಬ್ಯಾಂಕ್ಗಳಾಗಿದ್ದವು , ಆದರೆ ಈ ಸನ್ನಿವೇಶ ದೀರ್ಘ ಸಮಯದವರೆಗೆ ಉಳಿಯಲಿಲ್ಲ. ವಿವಿಧ ದೇಶಗಳಲ್ಲಿ ಈ ಬ್ಯಾಂಕ್ಗಳಿಂದ ಕಾರ್ಡ್ಹೋಲ್ಡರ್ಗಳಿಗೆ ಕಾರ್ಡ್ಗಳು ಜಾರಿಯಾಗುವ ವಿಧಾನಕ್ಕೆ ಆಫ್ಶೋರ್ ಕ್ರೆಡಿಟ್ ಕಾರ್ಡ್ಗಳೆಂದು ಕರೆಯಲಾಗುವುದು.
  • ವ್ಯಾಪಾರಿ: ಕಾರ್ಡ್ ಹೋಲ್ಡರ್ಗೆ ಉತ್ಪನ್ನಗಳಿಗಾಗಿ ಅಥವಾ ಸೇವೆಗಳನ್ನು ಮಾರಾಟ ಮಾಡುವ ವ್ಯಕ್ತಿ ಅಥವಾ ಕ್ರೆಡಿಟ್ ಕಾರ್ಡ್ ಹಣಪಾವತಿಯನ್ನು ಸ್ವೀಕರಿಸುವ ವ್ಯವಹಾರ ನಡೆಸುವವನು.
  • ಅಕ್ವೈರಿಂಗ್ ಬ್ಯಾಂಕ್/ಸಂಪಾದಿಸುವ/ಪಡೆಯುವ ಬ್ಯಾಂಕ್: ವ್ಯಾಪಾರಿಯ ಪರವಾಗಿ ಉತ್ಪನ್ನಗಳಿಗಾಗಿ ಅಥವಾ ಸೇವೆಗಳಿಗಾಗಿ ಹಣಪಾವತಿಯನ್ನು ಸ್ವೀಕರಿಸುವ ಹಣಕಾಸು ಸಂಸ್ಥೆ.
  • ಸ್ವತಂತ್ರ ಮಾರಾಟ ಸಂಸ್ಥೆ/ಸಂಘಟನೆ: ಸಂಪಾದನಾ ಬ್ಯಾಂಕ್ನ ಸೇವೆಗಳನ್ನು ಮರುಬಿಕರಿ /ಪುನರ್ ಮಾರಾಟ ಮಾಡುವ ರೀಸೆಲ್ಲರ್ಗಳು (ವ್ಯಾಪಾರಿಗಳಿಗೆ)
  • ವರ್ತಕ/ವಾಣಿಜ್ಯ ಖಾತೆ: ಇದು ಗಳಿಕೆ/ಸಂಪಾದನಾ ಬ್ಯಾಂಕ್ನ್ನು ಅಥವಾ ಸ್ವತಂತ್ರ ಮಾರಾಟ ಸಂಸ್ಥೆಯನ್ನು ಉಲ್ಲೇಖಿಸುತ್ತದೆ. ಆದರೆ ಸಾಮಾನ್ಯವಾಗಿ ಸಂಘಟನೆ/ಸಂಸ್ಥೆಯೆಂದರೆ ವ್ಯಾಪಾರಿ ವ್ಯವಹಾರ ನಡೆಸುವ ಕೇಂದ್ರವಾಗಿರುತ್ತದೆ.
  • ಕ್ರೆಡಿಟ್ ಕಾರ್ಡ್ ಅಸೋಸಿಯೇಷನ್: ವೀಸಾ, ಮಾಸ್ಟರ್ ಕಾರ್ಡ್, ಡಿಸ್ಕವರ್, ಅಮೆರಿಕನ್ ಎಕ್ಸ್ಪ್ರೆಸ್, ಇತ್ಯಾದಿಗಳು ಕಾರ್ಡ್ಗಳನ್ನು ಜಾರಿಮಾಡುವಂತಹ ಬ್ಯಾಂಕ್ಗಳ ಸಂಘಟನಾ ಸಂಸ್ಥೆಯಾಗಿದ್ದು ಇವುಗಳು ವ್ಯಾಪಾರಿಗಳು, ಕಾರ್ಡ್ ಜಾರಿಮಾಡುವ ಬ್ಯಾಂಕ್ಗಳು, ಮತ್ತು ಸಂಪಾದನಾ /ಪುನರ್ಗಳಿಸುವ ಬ್ಯಾಂಕ್ಗಳಿಗೆ ಕೆಲವೊಂದು ವ್ಯವಹಾರದ ಷರತ್ತುಗಳನ್ನು ವಿಧಿಸುತ್ತದೆ.
  • ವ್ಯವಹಾರ ಸಂಪರ್ಕಜಾಲ/ಟ್ರಾನ್ಸಾಕ್ಷನ್ ನೆಟ್ವರ್ಕ್: ಎಲೆಕ್ಟ್ರಾನಿಕ್ ವ್ಯವಹಾರಗಳ ತಂತ್ರಜಾÕನವನ್ನು ಅಳವಡಿಸುವ ವ್ಯವಸ್ಥೆಯಾಗಿದೆ. ಇದನ್ನು ಒಂದು ಸ್ವತಂತ್ರ ಕಂಪನಿಯು ನಿರ್ವಹಿಸಲ್ಪಡಬಲ್ಲುದು ಮತ್ತು ಏಕೈಕ ಕಂಪನಿಯು ಬಹು ಜಾಲಬಂಧಗಳಲ್ಲಿ ಕಾರ್ಯ ನಿರ್ವಹಿಸಬಲ್ಲುದು.
  • ಅಫಿನಿಟಿ ಪಾರ್ಟ್ನರ್/ಸಾಮ್ಯ ಪಾಲುದಾರ: ಕೆಲವೊಂದು ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸಲು ತಮ್ಮ ಹೆಸರುಗಳನ್ನು ಜಾರಿಗೊಳಿಸುವ ಸಂಸ್ಥೆಗಳಿಗೆ ಮಾರಿಕೊಳ್ಳುತ್ತವೆಯಲ್ಲದೇ, ಅವುಗಳು ಆ ಸಂಸ್ಥೆಯೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿರುತ್ತವೆ ಮತ್ತು ತಮ್ಮ ಹೆಸರನ್ನು ಬಳಸಿಕೊಂಡು ಜಾರಿಗೊಳಿಸಿದ ಪ್ರತಿ ಕಾರ್ಡಿಗೆ ಕೂಡ, ಬಾಕಿ ಹಣದ ಶೇಕಡಾವಾರು ಹಣ ಅಥವಾ ನಿರ್ದಿಷ್ಟ ಶುಲ್ಕವನ್ನು ಪಡೆಯುತ್ತವೆ.

ಈ ವಿಶಿಷ್ಠ ರೀತಿಯ ಅಫಿನಿಟಿ ಪಾರ್ಟ್ನರ್/ಸಾಮ್ಯ ಪಾಲುದಾರರಿಗೆ ಉದಾಹರಣೆಗಳೆಂದರೆ, ಕ್ರೀಡಾ ತಂಡಗಳು, ವಿಶ್ವವಿದ್ಯಾನಿಲಯಗಳು, ಚಾರಿಟಿಗಳು(ಧನಸಹಾಯ ಸಂಸ್ಥೆಗಳು), ವೃತ್ತಿಪರ ಸಂಘಟನೆಗಳು, ಮತ್ತು ಪ್ರಮುಖ ಸಗಟು ಸಂಸ್ಥೆ/ರೀಟೇಲರ್ಗಳು. ಈ ತಂಡಗಳ ನಡುವೆ ಕಾರ್ಡ್ ಅಸೋಸಿಯೇಷನ್ಗಳ ಮೂಲಕ, ಯಾವಾಗಲೂ ಮಾಹಿತಿಗಳು ಮತ್ತು ಹಣಕಾಸು ವ್ಯವಹಾರಗಳು ನಡೆಯುತ್ತಿರುತ್ತವೆ - ಇದನ್ನು ವಿನಿಮಯ ದರ ಎನ್ನಲಾಗುತ್ತದೆ ಮತ್ತು ಇದು ಕೆಲವೊಂದು ಹಂತಗಳನ್ನು ಒಳಗೊಂಡಿದೆ.

ವಹಿವಾಟು ಹಂತಗಳು

[ಬದಲಾಯಿಸಿ]
  • ಆಥರೈಸೇಶನ್/ಅಧಿಕೃತತೆ : ಕಾರ್ಡ್ ಹೋಲ್ಡರ್ ಖರೀದಿಗಾಗಿ ಹಣ ಪಾವತಿಸುತ್ತಾನೆ ಮತ್ತು ವ್ಯಾಪಾರಿ ಈ ಹಣಕಾಸನ್ನು ಪಡೆಯುವಂತಹವರಿಗೆ (ಸಂಪಾದನಾ/ಪುನರ್ಪಡೆಯುವ ಬ್ಯಾಂಕ್) ಸಲ್ಲಿಸುತ್ತಾನೆ.

ಪಡೆಯುವವರು (ಅಕ್ವೈರರ್) ಕ್ರೆಡಿಟ್ ಕಾರ್ಡ್ ನಂಬರ್, ಟ್ರಾನ್ಸಾಕ್ಷನ್ ಮಾದರಿ(ವ್ಯವಹಾರ ಮಾದರಿ) ಮತ್ತು ಇಶ್ಯೂವರ್ (ಕಾರ್ಡ್ ಇಶ್ಯೂಯಿಂಗ್ ಬ್ಯಾಂಕ್)ನೊಂದಿಗಿರುವ ಮೊತ್ತ ಮತ್ತು ವ್ಯಾಪಾರಿಗೆ ಕಾರ್ಡ್ ಹೋಲ್ಡರ್ನ ಸಾಲ ಮಿತಿಯ ಮೊತ್ತವನ್ನು ಮುಂಗಡವಾಗಿ ಕಾದಿರಿಸುತ್ತಾರೆ. ಈ ಅಧೀಕೃತತೆಯು ಅನುಮೋದನಾ ಕೋಡ್ನ್ನು ಒದಗಿಸುವುದಲ್ಲದೇ, ಇದನ್ನು ವ್ಯಾಪಾರಿಯು ತನ್ನ ಹಣಕಾಸು ವ್ಯವಹಾರದೊಂದಿಗೆ ಉಳಿಸಿಕೊಳ್ಳುತ್ತಾನೆ.

  • ಬ್ಯಾಚಿಂಗ್ :ಅಧಿಕೃತ ವ್ಯವಹಾರಗಳು “ಬ್ಯಾಚಸ್”ನಲ್ಲಿ ಸಂಗ್ರಹಿತಗೊಂಡಿರುತ್ತವೆಯಲ್ಲದೇ ನಂತರ ಅವುಗಳನ್ನು ಅಕ್ವೈರರ್ಗೆ ಕಳುಹಿಸಲಾಗುತ್ತದೆ. ಬ್ಯಾಚಸ್ಗಳನ್ನು ವಿಶೇಷವಾಗಿ ಪ್ರತಿ ದಿನ ದಿನದ ವ್ಯವಹಾರದದ ಕೊನೆಯಲ್ಲಿ ಒಂದು ಬಾರಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಬ್ಯಾಚ್ ರೂಪದಲ್ಲಿ ಸಲ್ಲಿಸದಿದ್ದರೆ, ಈ ಅಧಿಕೃತತೆಯು ಇಶ್ಯೂವರ್ ನಿಗದಿಗೊಳಿಸಿದ ಅವಧಿಯವರೆಗೆ ಮಾತ್ರ ಊರ್ಜಿತವಾಗಿರುತ್ತದೆ. ಮತ್ತು ನಂತರದಲ್ಲಿ ಪಾವತಿಸಲಾದ ಮೊತ್ತವನ್ನು ಕಾರ್ಡ್ಹೋಲ್ಡರ್ನಲ್ಲಿ ಲಭ್ಯವಿರುವ ಕ್ರೆಡಿಟ್ಗೆ ಹಿಂದಿರುಗಿಸಲಾಗುತ್ತದೆ(ಆಥರೈಝೇಷನ್ ಹೋಲ್ಡ್ ನ್ನು ನೋಡಿರಿ.) ಕೆಲವೊಂದು ವ್ಯವಹಾರಗಳು ಮುಂಚಿತವಾಗಿ ಯಾವುದೇ ಅಧಿಕೃತತೆಯಿಲ್ಲದೆಯೂ ಕೂಡ, ಬ್ಯಾಚ್ನಲ್ಲಿ ಸಲ್ಲಿಸಬಹುದಾಗಿದ್ದು, ಇವುಗಳು ವ್ಯಾಪಾರಿಯ ಫ್ಲೋರ್ ಲಿಮಿಟ್ನ ವ್ಯಾಪ್ತಿಯಲ್ಲಿ ಬರುವ ವ್ಯವಹಾರಗಳಿರಬಹುದು ಅಥವಾ ಒಂದೊಮ್ಮೆ ಅಧಿಕೃತತೆಯು ಅಸಮಂಜಸವಾಗಿರಲೂಬಹುದು, ಆದರೆ ವ್ಯಾಪಾರಿಯು ನಿರಂತರ ವ್ಯವಹಾರ ನಡೆಸಲು ಪ್ರಯತ್ನಿಸಬೇಕು.

(ಇವುಗಳು ಕಾರ್ಡ್ ಹೋಲ್ಡರ್ ಹಾಜರಿಲ್ಲದಿರುವಂತಹ ಸನ್ನಿವೇಶಗಳಲ್ಲಿರಬಹುದು, ಆದರೆ, ಕಾರ್ಡ್ ಹೋಲ್ಡರ್, ಹೋಟೇಲಲ್ಲಿ ತಂಗುವ ದಿನವನ್ನು ವಿಸ್ತರಿಸಲು ಅಥವಾ ಕಾರ್ನ ಬಾಡಿಗೆಯ ರೂಪದಲ್ಲಿ ವ್ಯಾಪಾರಿಗೆ ಹೆಚ್ಚುವರಿ ಹಣವನ್ನು ನೀಡುತ್ತಾನೆ.)

  • ಕ್ಲಿಯರಿಂಗ್/ತೀರಿಸುವಿಕೆ ಮತ್ತು ಸೆಟ್ಲ್ಮೆಂಟ್/ಚುಕ್ತಾ ಮಾಡುವುದು : ಅಕ್ವೈರರ್ ಬ್ಯಾಚ್ ಟ್ರಾನ್ಸಾಕ್ಷನ್ಗಳನ್ನು ಕ್ರೆಡಿಟ್ ಕಾರ್ಡ್ ಅಸೋಸಿಯೇಷನ್ಗಳ ಮೂಲಕ ಕಳುಹಿಸುತ್ತದೆ, ನಂತರ ಅದು ಇಶ್ಯೂವರ್ಗಳ ಹಣಪಾವತಿಗಾಗಿ ಡೆಬಿಟ್ ಆಗುವುದಲ್ಲದೇ, ಅಕ್ವೈರರ್ಗಳಿಗೆ ಹಣವನ್ನು ಕ್ರೆಡಿಟ್ ಮಾಡುತ್ತದೆ. ಇಲ್ಲಿ ಅಗತ್ಯವಾಗಿ , ಇಶ್ಯೂವರ್ ಟ್ರಾನ್ಸಾಕ್ಷನ್ಗಾಗಿ ಅಕ್ವೈರರ್ಗೆ ಹಣ ಪಾವತಿಸುತ್ತಾರೆ.
  • ಫಂಡಿಂಗ್ : ಒಂದೊಮ್ಮೆ ಅಕ್ವೈರರ್ಗೆ ಹಣ ಪಾವತಿಸಲ್ಪಟ್ಟರೆ, ನಂತರ ಅಕ್ವೈರರ್ ವ್ಯಾಪಾರಿಗೆ ಹಣ ಪಾವತಿಸುತ್ತಾರೆ. ವ್ಯಾಪಾರಿಯು ಬ್ಯಾಚ್ನಲ್ಲಿನ ಒಟ್ಟು ಫಂಡ್ಗಳನ್ನು “ರಿಯಾಯಿತಿ ದರ”. “ಮಿಡ್ ಕ್ವಾಲಿಫೈಡ್ ದರ”, ಅಥವಾ “ನಾನ್ ಕ್ವಾಲಿಫೈಡ್ ದರ” ಇವುಗಳನ್ನು ಕಳೆದು ಟೋಟಲಿಂಗ್ ಮಾಡುವ ಮೂಲಕ, ಒಟ್ಟು ಮೊತ್ತವನ್ನು ಪಡೆಯುತ್ತಾನೆ. ಅದು ಟ್ರಾನ್ಸಾಕ್ಷನ್ಗಾಗಿ ಅಕ್ವೈರರ್ಗೆ ವ್ಯಾಪಾರಿಯು ಪಾವತಿಸುವ ಶ್ರೇಣಿ ಶುಲ್ಕವಾಗಿದೆ.
  • ಚಾರ್ಜ್‌ ಬ್ಯಾಕ್‌ಗಳು : ಟ್ರಾನ್ಸಾಕ್ಷನ್ಗೆ ಸಂಬಂಧಿಸಿದಂತೆ, ವಿವಾದಗಳುಂಟಾದ ಸನ್ನಿವೇಶಗಳಲ್ಲಿ, ವಾಣಿಜ್ಯ ಖಾತೆಗೆ ಪಾವತಿಸುವ ಹಣವೇ, ಈ ಚಾರ್ಜ್‌ ಬ್ಯಾಕ್‌ಗಳು

ಈ ಚಾರ್ಜ್‌ ಬ್ಯಾಕ್‌ಗಳು ವಿಶೇಷವಾಗಿ ಕಾರ್ಡ್ಹೋಲ್ಡರ್ಗಳಿಂದ ಪ್ರಾರಂಭಗೊಂಡಿದೆ. ಚಾರ್ಜ್‌ಬ್ಯಾಕ್‌ಗಳ ಸನ್ನಿವೇಶದಲ್ಲಿ, ಇಶ್ಯೂವರ್ ಟ್ರಾನ್ಸಾಕ್ಷನನ್ನು ಪರಿಹಾರ ಪಡೆಯುವುದಕ್ಕಾಗಿ ಅಕ್ವೈರರ್ಗೆ ಹಿಂದಿರುಗಿಸುತ್ತಾರೆ. ಅಕ್ವೈರರ್ ನಂತರ ಚಾರ್ಜ್‌ಬ್ಯಾಕನ್ನು ವ್ಯಾಪಾರಿಗೆ ಕಳುಹಿಸುತ್ತಾನೆ, ಅಲ್ಲಿ ವ್ಯಾಪಾರಿಯು ಈ ಚಾರ್ಜ್‌ಬ್ಯಾಕನ್ನು ಸ್ವೀಕರಿಸಬಹುದು ಅಥವಾ ಅದಕ್ಕೆ ವ್ಯಾಜ್ಯ ಹೂಡಬಹುದು.

ಸುರಕ್ಷಿತವಾದ ಕ್ರೆಡಿಟ್ ಕಾರ್ಡುಗಳು

[ಬದಲಾಯಿಸಿ]

ಸುರಕ್ಷಿತ ಕ್ರೆಡಿಟ್ ಕಾರ್ಡ್ ಒಂದು ಮಾದರಿಯ ಕ್ರೆಡಿಟ್ ಕಾರ್ಡ್ ಆಗಿದ್ದು, ಇದು ಕಾರ್ಡ್ ಹೋಲ್ಡರ್ನ ಮಾಲಿಕತ್ವದಲ್ಲಿರುವ ಡಿಪಾಸಿಟ್ ಖಾತೆ ಯಿಂದ ಭದ್ರಗೊಳಿಸಲ್ಪಡುತ್ತದೆ. ವಿಶೇಷವಾಗಿ ಇಲ್ಲಿ ಕಾರ್ಡ್ ಹೋಲ್ಡರ್ ತಾನು ಬಯಸುವ ಒಟ್ಟು ಕ್ರೆಡಿಟ್ ಮೊತ್ತದ ಶೇಕಡಾ ೧೦೦% ರಿಂದ ೨೦೦% ರ ಪ್ರಮಾಣದ ಠೇವಣಿಯನ್ನು ಕಡ್ಡಾಯವಾಗಿ ಇಡಬೇಕಾಗುತ್ತದೆ. ಹಾಗಾಗಿ, ಒಂದು ವೇಳೆ, ಕಾರ್ಡ್ ಹೋಲ್ಡರ್ $೧೦೦೦ ಮೊತ್ತವನ್ನು ತೆಗೆದರೆ, ಅವರಿಗೆ ನೀಡಲಾಗುವ ಸಾಲದ ಮಿತಿಯು $೫೦೦–$೧೦೦೦ ದಷ್ಟಾಗಿರುತ್ತದೆ. ಕೆಲವೊಂದು ಸಂದರ್ಭದಲ್ಲಿ, ಕ್ರೆಡಿಟ್ ಕಾರ್ಡ್ ನೀಡುವವರು ತಮ್ಮ ಸೆಕ್ಯೂರ್ಡ್ ಕಾರ್ಡ್ ಪೋರ್ಟ್ಫೋಲಿಯೋಗಳ ಮೇಲೆ ಕೆಲವೊಂದು ಪ್ರೋತ್ಸಾಹಕಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಾಲದ ಮಿತಿಯ ಅಗತ್ಯತೆಗಿಂತ ಠೇವಣಿಯ ಅಗತ್ಯತೆಯು ಕಡಿಮೆಯಾಗಿರುತ್ತದೆಯಲ್ಲದೇ, ಅದು ಕೆಲವೊಮ್ಮೆ ಕ್ರೆಡಿಟ್ ಮಿತಿಯ ಶೇಕಡಾ ೧೦% ರಷ್ಟಾಗಿರಬಹುದಾಗಿದೆ. ಈ ಠೇವಣಿಯನ್ನು ವಿಶೇಷ ಉಳಿತಾಯ ಖಾತೆಯಲ್ಲಿ ಇಡಲಾಗುತ್ತದೆ. ಗ್ರಾಹಕರು ತಾವು ಬಾಕಿ ಹಣವನ್ನು ಪಾವತಿಸದಿದ್ದರೆ, ಸ್ವಲ್ಪ ಮೊತ್ತವನ್ನು ಕಳೆದುಕೊಳ್ಳುತ್ತೇವೆಂದು ತಿಳಿದುಕೊಳ್ಳುತ್ತಾರೆ ಹಾಗಾಗಿ ಹಣಪಾವತಿಯಾಗದೇ ಲೋಪವಾಗುವುದನ್ನು ಗಮನಿಸಿ ಅದನ್ನು ಕಡಿಮೆ ಮಾಡುವುದಕ್ಕಾಗಿ ಕ್ರೆಡಿಟ್ ಕಾರ್ಡ್ ನೀಡುವವರು ಈ ಕೊಡುಗೆಯನ್ನು ನೀಡುತ್ತಾರೆ. ಸುರಕ್ಷಿತ ಕ್ರೆಡಿಟ್ ಕಾರ್ಡ್ ಹೋಲ್ಡರ್ ರೆಗ್ಯುಲರ್ ಕ್ರೆಡಿಟ್ ಕಾರ್ಡ್ನೊಂದಿಗೆ ನಿರಂತರವಾಗಿ ಹಣಪಾವತಿಸುವುದನ್ನು ನಿರೀಕ್ಷಿಸುತ್ತಾರೆ, ಆದರೆ ಅವರು ಹಣಪಾವತಿಸುವಲ್ಲಿ ವಿಫಲರಾದಲ್ಲಿ ಕಾರ್ಡ್ ನೀಡುವವರು ಠೇವಣಿಯ ಹೊರತಾಗಿ ವ್ಯಾಪಾರಿಗಳಿಗೆ ಖರೀದಿ ಮಾಡಿರುವುದಕ್ಕಾಗಿ ಗ್ರಾಹಕರು ಪಾವತಿಸುವ ವೆಚ್ಚವನ್ನು ಪುನರ್ಪಡೆಯುವುದಕ್ಕಾಗಿ ಆಯ್ಕೆಯನ್ನು ಹೊಂದಿರುತ್ತಾರೆ. ಋಣಾತ್ಮಕ/ನೆಗೆಟಿವ್ ಅಥವಾ ಯಾವುದೇ ಸಾಲ ಹಿನ್ನೆಲೆ/ಸಾಲ ಚರಿತ್ರೆಯಿಲ್ಲದಿರುವ ವ್ಯಕ್ತಿಗೆ ಈ ಸೆಕ್ಯೂರ್ಡ್ ಕಾರ್ಡ್ನಿಂದಾಗುವ ಪ್ರಯೋಜನವೆಂದರೆ, ಹೆಚ್ಚಿನ ಕಂಪನಿಗಳು ಪ್ರಮುಖ ಕ್ರೆಡಿಟ್ ಬ್ಯೂರೋಗಳಿಗೆ ನಿರಂತರವಾಗಿ ಇದರ ಬಗ್ಗೆ ಮಾಹಿತಿಯನ್ನು ತಿಳಿಸುತ್ತವೆ. ಇದು ಧನಾತ್ಮಕ ಕ್ರೆಡಿಟ್ ಹಿಸ್ಟರಿಯ ರಚನೆಗೆ ಅವಕಾಶ ಮಾಡಿಕೊಡುತ್ತದೆ. ಹೀಗಿದ್ದರೂ, ಗ್ರಾಹಕರಿಂದ ಯಾವುದೇ ಡಿಫಾಲ್ಟ್ ಸನ್ನಿವೇಶಗಳು ಸಂಭವಿಸುವಂತಹ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಇಶ್ಯೂವರ್ನ ಕೈಯಲ್ಲಿ ಸೆಕ್ಯೂರಿಟಿಯ ರೂಪದಲ್ಲಿ ಠೇವಣಿ ಹಣವು ಇರುವುದಲ್ಲದೇ, ಈ ಠೇವಣಿ ಹಣವನ್ನು ಕೇವಲ ಒಂದು ಅಥವಾ ಎರಡು ಬಾರಿ ಹಣಪಾವತಿ ತಪ್ಪಿದಂತಹ ಸಂದರ್ಭದಲ್ಲಿ ಡೆಬಿಟ್ ಮಾಡಲಾಗುವುದಿಲ್ಲ. ಸಾಮಾನ್ಯವಾಗಿ ಖಾತೆಯನ್ನು ಮುಚ್ಚಿದಂತಹ ಸಂದರ್ಭದಲ್ಲಿ ಗ್ರಾಹಕರ ಮನವಿಯ ಹಿನ್ನೆಲೆ ಅಥವಾ ಒಮ್ಮೆಯೂ ಮರುಪಾವತಿ ಮಾಡದೇ ಇರುವಂತಹ ಗಂಭೀರ ಸನ್ನಿವೇಶಗಳಲ್ಲಿ (೧೫೦ ರಿಂದ ೧೮೦ ದಿನಗಳು) ಮಾತ್ರ ಆಫ್ಸೆಟ್(ಸರಿದೂಗಿಸುವ ಮೊತ್ತ) ಆಗಿ ಠೇವಣಿಯನ್ನು ಬಳಸಲಾಗುತ್ತದೆ. ಅಂದರೆ, ಗ್ರಾಹಕನು ತನ್ನ ಖಾತೆಗೆ ೧೫೦ ದಿನಗಳಿಗಿಂತ ಕಡಿಮೆ ದಿನಗಳವರೆಗೆ ಯಾವುದೇ ಹಣ ಪಾವತಿಸಿದೇ ತಪ್ಪಿದ್ದರೆ, ಅಂತಹ ಖಾತೆಯಿರುವ ಗ್ರಾಹಕರಿಗೆ ಬಡ್ಡಿ ಮತ್ತು ಶುಲ್ಕಗಳನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆಯಲ್ಲದೇ, ಇದು ಬಾಕಿ ಹಣದ ಮೇಲೆ ಪರಿಣಾಮ ಬೀರುವುದಲ್ಲದೇ, ಇದು ಕಾರ್ಡಿನಲ್ಲಿರುವ ನೈಜ ಸಾಲ ಮಿತಿಗಿಂತ ಈ ಬಡ್ಡಿ ಮತ್ತು ಶುಲ್ಕಗಳು ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಒಟ್ಟು ಸಾಲವು ಮೂಲ ಠೇವಣಿಗಿಂತ ತುಂಬಾ ಹೆಚ್ಚಾಗಬಹುದಾಗಿದ್ದು, ಕಾರ್ಡ್ ಹೋಲ್ಡರ್ ತನ್ನ ಠೇವಣಿಗಾಗಿ ದಂಡ ತೆರಬೇಕಾಗುತ್ತಲ್ಲದೇ ಹೆಚ್ಚುವರಿ ಸಾಲಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಇಂತಹ ಹೆಚ್ಚಿನ ಸನ್ನಿವೇಶಗಳನ್ನು ಕಾರ್ಡ್ ಹೋಲ್ಡರ್ನ ಒಪ್ಪಂದದಲ್ಲಿ ವಿವರಿಸಲಾಗಿದೆಯಲ್ಲದೇ, ಇದನ್ನು ಕಾರ್ಡ್ ಹೋಲ್ಡರ್ ತನ್ನ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಇದಕ್ಕೆ ಸಹಿ ಹಾಕುತ್ತಾರೆ. ದುರ್ಬಲ ಕ್ರೆಡಿಟ್ ಚರಿತ್ರೆ ಹೊಂದಿರುವಂತಹ ವ್ಯಕ್ತಿಗಳಿಗೆ ಅಥವಾ ಯಾವುದೇ ಸಾಲ ಹಿನ್ನೆಲೆಯಿಲ್ಲದವರು/ಸಾಲದ ಚರಿತ್ರೆಯಿಲ್ಲದಂತಹವರಿಗೆ ಕ್ರೆಡಿಟ್ ಕಾರ್ಡ್ನ್ನು ಹೊಂದಲು ಈ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳು, ಅವಕಾಶವನ್ನು ನೀಡುವುದಲ್ಲದೇ, ಬೇರೆಲ್ಲಿಯೂ ಈ ಆಯ್ಕೆಗೆ ಅವಕಾಶವಿರುವುದಿಲ್ಲ. ಅವುಗಳು ಕೆಲವೊಮ್ಮೆ ಒಬ್ಬರ ಸಾಲವನ್ನು ಪುನರ್ನಿರ್ಮಿಸುವ ಸಾಧನವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಸುಭದ್ರವಾಗಿಲ್ಪಡುವ ಕ್ರೆಡಿಟ್ ಕಾರ್ಡ್ಗಳಿಗೆ ವಿಧಿಸಲಾಗುವ ಶುಲ್ಕಗಳು ಮತ್ತು ಸೇವಾ ದರಗಳು ಕೆಲವೊಮ್ಮೆ ಆರ್ಡಿನರಿ ನಾನ್ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳ ಮಿತಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತವೇ, ಹೀಗಿದ್ದರೂ, ಕೆಲವೊಂದು ನಿಗದಿತ ಸನ್ನಿವೇಶಗಳಲ್ಲಿ ಜನರಿಗೆ (ಉದಾಹರಣೆಗೆ, ಇತರ ಕ್ರೆಡಿಟ್ ಕಾರ್ಡ್ಗಳಿಗೆ ಶುಲ್ಕ ವಿಧಿಸುವುದು ಅಥವಾ ವಿವಿಧ ರೂಪದ ಸಾಲವನ್ನು ಪಾವತಿಸದೇ ದೀರ್ಘ ಕಾಲದಿಂದ ವಿಫಲರಾಗಿರುವಂತಹ ಜನರಿಗೆ ಹೆಚ್ಚು ಶುಲ್ಕ ವಿಧಿಸುವುದು), ಈ ಸೆಕ್ಯೂರ್ಡ್ ಕಾರ್ಡ್ಗಳು ಯಾವಾಗಲೂ ನಾನ್ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳಿಗಿಂತ ಹೆಚ್ಚು ಕಡಿಮೆ ದುಬಾರಿಯಾಗಿರುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ಗಳು ಈಕ್ವಿಟಿಯ ರೂಪದಲ್ಲಿ ಖರೀದಿದಾರರ ಮನೆಯಲ್ಲಿ ಸುಭದ್ರವಾಗಿಲ್ಪಡುತ್ತದೆ.

ಪ್ರೀಪೇಯ್ಡ್ "ಕ್ರೆಡಿಟ್" ಕಾರ್ಡುಗಳು

[ಬದಲಾಯಿಸಿ]

ಪ್ರೀ ಪೇಯ್ಡ್ ಕ್ರೆಡಿಟ್ ಕಾರ್ಡ್ ವಾಸ್ತವವಾಗಿ ಒಂದು ನೈಜ ಕ್ರೆಡಿಟ್ ಕಾರ್ಡ್ ಅಲ್ಲ,[೧೧] ಏಕೆಂದರೆ ಕಾರ್ಡ್ ನ್ನು ಕೊಡುವ ವ್ಯಕ್ತಿ ಯಾವುದೇ ರೀತಿಯ ಸಾಲವನ್ನು ನೀಡುವುದಿಲ್ಲ: ಕಾರ್ಡ್ ದಾರನು ಈ ಮೊದಲೇ ತಾನು ಜಮಾ ಮಾಡಿದ ಹಣವನ್ನು ಅಥವಾ ಪೋಷಕ ಅಥವಾ ಉದ್ಯಮಿಯಂತಹ ಇತರ ಮೂಲದ ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಬಳಸುವನು. ಆದರೆ ,ಇದು ಒಂದು ಕ್ರೆಡಿಟ್ ಕಾರ್ಡ್ ಬ್ರಾಂಡ್ ( ವಿಸಾ, ಮಾಸ್ಟರ್ ಕಾರ್ಡ್, ಅಮೇರಿಕನ್ ಎಕ್ಸ್ ಪ್ರೆಸ್, ಡಿಸ್ಕವರ್, ಅಥವಾ JCB) ಮತ್ತು ಇವುಗಳನ್ನು ಸಾಮಾನ್ಯವಾಗಿ ಬಳಸುವ ಕ್ರೆಡಿಟ್ ಕಾರ್ಡ್‌ನಂತೆಯೇ ಉಪಯೋಗಿಸಬಹುದು. ಡೆಬಿಟ್ ಕಾರ್ಡ್ ಗಳಂತೆ , ಪ್ರೀ ಪೇಯ್ಡ್ ಕ್ರೆಡಿಟ್ ಕಾರ್ಡ್ ಗಳಿಗೆ PIN ನ ಅಗತ್ಯವಿಲ್ಲ. EMV ಚಿಪ್ ಹೊಂದಿರುವ ಪ್ರೀ ಪೇಯ್ಡ್ ಕಾರ್ಡ್ ಗಳು ಇದಕ್ಕೆ ಒಂದು ಆಕ್ಷೇಪಣೆ. ಈ ಕಾರ್ಡುಗಳಿಗೆ ಚಿಪ್ ಮತ್ತು ಪಿನ್ ತಂತ್ರ ಜ್ಞಾನದ ಮೂಲಕ ಹಣಸಂದಾಯವಾಗಲು ಒಂದು ಪಿನ್ ನ ಅಗತ್ಯವಿರುತ್ತದೆ.

ಕಾರ್ಡ್‌ನ್ನು ಕೊಂಡುಕೊಂಡ ನಂತರ , ಕಾರ್ಡುದಾರನು ಕಾರ್ಡನ ಪೂರ್ವ ನಿಗಧಿತ ಅವಧಿಯವರೆಗೆ ಎಷ್ಟು ಮೊತ್ತದ ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದು, ನಂತರ ಒಂದು ಮಾದರಿ ಕ್ರೆಡಿಟ್ ಕಾರ್ಡನ್ನು ಕೊಂಡುಕೊಳ್ಳಲು ಬಳಸುವಂತೆ ಇದನ್ನೂ ಸಹ ಬಳಸಬಹುದು. ಸಾಲದ ವಯೋಮತಿ ಒಳಗೊಂಡಿರದೇ ಇರುವುದರಿಂದ ಪ್ರೀ ಪೇಯ್ಡ್ ಕ್ರೆಡಿಟ್ ಕಾರ್ಡನ್ನು ಅಪ್ರಾಪ್ತ ವಯಸ್ಕರಿಗೂ ( ೧೩ ವರ್ಷಗಳ ಮೇಲ್ಪಟ್ಟು) ನೀಡಬಹುದು. ಸುರಕ್ಷಿತ ಕ್ರೆಡಿಟ್ ಕಾರ್ಡ್ ಗಳ ಒಂದು ಪ್ರಮುಖ ಉಪಯೋಗವೆಂದರೆ( ಮೇಲಿನ ಭಾಗವನ್ನು ನೋಡಿರಿ) ನೀವು ಖಾತೆಯನ್ನು ತೆರೆಯಲು $೫೦೦ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹೂಡುವ ಅಗತ್ಯವಿಲ್ಲ.[೧೨] ಪ್ರೀ ಪೇಯ್ಡ್ ಕಾರ್ಡ್ ಗಳ ಮೂಲಕ ಕೊಳ್ಳುವವರ ಮೇಲೆ ಯಾವುದೇ ಬಡ್ಡಿಯನ್ನು ಹೇರಲಾಗುವುದಿಲ್ಲ.ಆದರೆ ಕೆಲವೊಮ್ಮೆ ಒಂದು ನಿಗಧಿತ ಅವಧಿಯ ನಂತರ ಕೊಂಡ ಶುಲ್ಕ ಹಾಗೂ ಮಾಸಿಕ ಶುಲ್ಕವನ್ನು ಹೇರಲಾಗುವುದು. ಸಾಮಾನ್ಯವಾಗಿ ಇನ್ನು ಇತರ ಶುಲ್ಕಗಳು ಪ್ರೀ ಪೇಯ್ದ್ ಕಾರ್ಡ್ ಗೆ ಅನ್ವಯಿಸುತ್ತದೆ.[೧೧]

ಕೆಲವು ಸಂದರ್ಭಗಳಲ್ಲಿ ಪ್ರೀ ಪೇಯ್ಡ್ ಕಾರ್ಡ್ ಗಳನ್ನು ತಮ್ಮ ಪೋಷಕರ ಸಂಪೂರ್ಣ ವ್ಯವಹಾರವಿಲ್ಲದೇ ಅಪ್ರಾಪ್ತ ವಯಸ್ಕರಿಗೂ[೧೧] ಆನ್ ವ್ಯಾಪಾರಕ್ಕಾಗಿ ಅವಕಾಶ ಕಲ್ಪಿಸಲಾಗುತ್ತದೆ.[೧೩]

ಬ್ರಾಂಡ್‌ನ ಪ್ರೀಪೇಯ್ಡ್ ಕಾರ್ಡುಗಳ ಖರೀದಿ ಮತ್ತು ಅವುಗಳ ಬಳಕೆ ಗೆ ಹಲವಾರು ಶುಲ್ಕಗಳು ಅನ್ವಯವಾಗುವುದರಿಂದ , ಫೈನಾನ್ಸಿಯಲ್ ಕಂಜೀಮರ್ ಆಫ್ ಕೆನಡಾ ಇದನ್ನು "ನಿಮ್ಮ ಹಣವನ್ನು ದುಬಾರಿಯಾಗಿ ಖರ್ಚು ಮಾಡುವುದಕ್ಕಿರುವ ಒಂದು ವಿಧಾನ " ಎಂದು ವಿವರಿಸಿದೆ.[೧೪] ಪ್ರೀ ಪೇಯ್ಡ್ ಕಾರ್ಡ್ಸ್ [೧೫] ಎಂಬ ಶಿರ‍ೋನಾಮೆಯುಳ್ಳ ಒಂದು ಪುಸ್ತಕವನ್ನು ಪ್ರಕಟಿಸುವ ಒಂದು ಏಜೆನ್ಸಿಯು ಈ ರೀತಿಯ ಕ್ರೆಡಿಟ್ ಕಾರ್ಡ್ ಗಳ ಉಪಯೋಗ ಮತ್ತು ದುರುಪಯೋಗಗಳ ಬಗ್ಗೆ ವಿವರಿಸುತ್ತದೆ.

ವಿಶಿಷ್ಟ ಲಕ್ಷಣಗಳು

[ಬದಲಾಯಿಸಿ]

ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್ ಗಳು ಅನುಕೂಲಕರವಾದ , ಸುಲಭವಾದ ಸಾಲಗಳನ್ನು ಒದಗಿಸುವುದರ ಮೂಲಕ ಗ್ರಾಹಕರಿಗೆ ಖರ್ಚುಗಳ ಪಥವನ್ನು ಅನುಸರಿಸಲು ಸುಲಭ ದಾರಿಯನ್ನು ಮಾಡಿಕೊಡುತ್ತವೆ, ಇದು ತಮ್ಮ ವೈಯಕ್ತಿಕ ಖರ್ಚುಗಳನ್ನು ನಿರ್ವಹಿಸಲು ಹಾಘೂ ಉದ್ಯೋಗ ಸಂಬಂಧ ತೆರಿಗೆಮತ್ತು ಮರುಪಾವತಿ ಉದ್ದೇಶಗಳ ಪಥವನ್ನು ಹಾಕಿಕೊಳ್ಳಲು ಸಹಾಯಕವಾಗಿವೆ. ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಪಂಚಾದಂತ್ಯ ಎಲ್ಲಾ ಕಡೆ ಸ್ವೀಕರಿಸಲಾಗುತ್ತದೆ. ಮತ್ತು ಅತಿ ಹೆಚ್ಚು ವೈವಿದ್ಯಮಯ ಸಾಲದ ಮಿತಿಗಳಲ್ಲಿ ಸಿಗುತ್ತವೆ, ಮರುಪಾವತಿ ವ್ಯವಸ್ಥೆಗಳು ಮತ್ತು ಇತರ ವಿಶ್ವಾಸಗಳೊಂದಿಗೆ ( ಕಾರ್ಡ್ ನಿಂದ ಖರೀದಿ ಮಾಡಿದ ಸರಕುಳಿಗೆ ಇನ್ನೂ ಇತರ ಸರಕು ಗಳನ್ನು ಕೊಳ್ಳಲು ಪಾಯಿಂಟ್ಸ್‌ಗಳನ್ನು ನೀಡುವ ಬಹುಮಾನ ಯೋಜನೆಗಳು ಮತ್ತು ಸೇವೆಗಳು ಅಥವಾ ಕ್ರೆಡಿಟ್ ಕಾರ್ಡ್ ನಗದು ಮರುಪಾವತಿ) ಲಭ್ಯವಿರುತ್ತವೆ.

ಅಮೇರಿಕಾ ಸಂಯುಕ್ತ ಸಂಸ್ಥಾನ,ಯು.ಕೆ. ಮತ್ತು ಫ್ರಾನ್ಸ್‌ನಂತಹ ದೇಶಗಳು ಗ್ರಾಹಕನೊಬ್ಬನ ಕ್ರೆಡಿಟ್ ಕಾರ್ಡ್ ಕಳೆದು ಹೋಗುವುದು ಅಥವಾ ಕಳವು ಆಗುವುದರಿಂದ ಉಂಟಾಗುವ ಮೋಸದ ವ್ಯವಹಾರಗಳ ಕಾರ‍ಣದಿಂದ ಗ್ರಾಹಕನ ಮೊತ್ತವನ್ನು ಪಡೆಯಬಹುದಾದ ಜವಾಬ್ದಾರಿ ಯನ್ನು ನಿಗಧಿಗೊಳಿಸಿವೆ

ಭದ್ರತೆಯ ಸಮಸ್ಯೆಗಳು ಮತ್ತು ಪರಿಹಾರಗಳು

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್‌ನ ಸುರಕ್ಷತೆಯು ಪ್ಲಾಸ್ಟಿಕ್ ಕಾರ್ಡ್ ನ ಭೌತಿಕ ಸುರಕ್ಷತೆ ಹಾಗೂ ಕ್ರೆಡಿಟ್ ಕಾರ್ಡ್ ಸಂಖ್ಯೆಯ ಪ್ರತ್ಯೇಕತೆಯನ್ನು ಒಳಗೊಂಡಿದೆ. ಆದ್ದರಿಂದ, ಕಾರ್ಡು ದಾರನಲ್ಲದೇ ಬೇರೊಬ್ಬ ವ್ಯಕ್ತಿಯು ಕಾರ್ಡನ್ನು ಅಥವಾ ಅದರ ಸಂಖ್ಯೆಯನ್ನು ಬಳಸಿಕೊಂಡರೆ, ಸುರಕ್ಷತೆಯು ಶಕ್ಯವಾಗಿ ಸಂಧಾನಗೊಳ್ಳುತ್ತದೆ. ಕೆಲವೊಮ್ಮೆ ವ್ಯಾಪಾರಿಗಳು ಮೇಲ್ ಆರ್ಡರ್ ಖರೀದಿಗಳಿಗೆ ಹೆಚ್ಚುವರಿ ಪರಿಶೀಲನೆ ಇಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸುತ್ತಾರೆ. ವಂಚಿತ ಖರೀದಿಗಳನ್ನು ಕಡಿಮೆ ಮಾಡಲು ಖಾತ್ರಿ ಹೊಂದಿದ ವಿಳಾಸಗಳನ್ನು ರದ್ದು ಗೊಳಿಸುವುದು ಒಂದು ಸುರಾಕ್ಷಾತ್ಮಕ ಸಾಧನವನ್ನಾಗಿ ಬಳಸುವುದು ಸರ್ವೇ ಸಾಮಾನ್ಯ ವಾಗಿದೆ. ಕೆಲವು ವ್ಯಾಪಾರಿಗಳು ಇನ್ ಸ್ಟೋರ್ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಸ್ವೀಕರಿಸುತ್ತಾರೆ, ಆದರೆ ಸಂಖ್ಯೆಗೆ ಅನುವು ಮಾಡಿಕೊಡುವುದು ಸುಲಭ ವಂಚನೆಗೆ ಅನುವು ಮಾಡಿಕೊಡುತ್ತದೆ. ಆದರೆ ಅನೇಕರು ಕಾರ್ಡ್‌ನ್ನು ತೋರಿಸಿ ಸಹಿಯನ್ನು ಹಾಕುವಂತೆ ಕೇಳುತ್ತಾರೆ. ಕಳೆದು ಹೋದ ಅಥವಾ ಕಳ್ಳತನವಾದ ಒಂದು ಕಾರ್ಡ್ ನ್ನು ರದ್ದು ಪಡಿಸಬಹುದು ಮತ್ತು ಇದನ್ನು ಅತಿ ಶೀಘ್ರವಾಗಿ ಮಾಡುವುದರಿಂದ ಈ ರೀತಿಯಲ್ಲಿ ನಡೆಯುವ ಮೋಸವನ್ನು ನಿಯಂತ್ರಿಸಬಹುದು. ಯೂರೋಪಿಯನ್ ಬ್ಯಾಂಕುಗಳಲ್ಲಿ ಒಬ್ಬ ಕಾರ್ಡು ದಾರನು ಕಾರ್ಡನ್ನು ಬಳಸಿ ಕೊಂಡುಕೊಳ್ಳಲು ಸುರಕ್ಷಿತ ಪಿನ್ ಅಗತ್ಯ.

PCI SSC (ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಸೆಕ್ಯುರಿಟಿ ಸ್ಟ್ಯಾಂಡರ್ಡ್ಸ್ ಕೌನ್ಸಿಲ್) ನಿಂದ ವಿತರಿಸಲ್ಪಟ್ಟ PCI DSS ಗುಣಮಟ್ಟದ ಸುರಕ್ಷತೆಯ ವಿಧಾನವಾಗಿದೆ. ಈ ದತ್ತ ಸುರಕ್ಷತಾ ಗುಣಮಟ್ಟವನ್ನು ಕಾರ್ಡು ದಾರರು ತಮ್ಮ ವರ್ತಕರ ಮೇಲೆ ದತ್ತ ಸುರಕ್ಷತಾ ಕ್ರಮಗಳನ್ನು ಏರಲು ಬ್ಯಾಂಕ್‌ಗಳು ಬಳಸಿಕೊಳ್ಳುತ್ತವೆ.

ಕ್ರೆಡಿಟ್ ಕಾರ್ಡ್‌ಗಳ ಪ್ರಮುಖ ಉದ್ದೇಶವೆಂದರೆ ಮೋಸದ ವ್ಯವಹಾರವನ್ನು ನಿರ್ಮೂಲ ಮಾಡುವುದಲ್ಲ, ಆದರೆ "ತಕ್ಕ ಮಟ್ಟಿಗೆ ಇದನ್ನು ಕಡಿಮೆ ಮಾಡುವುದು".[೧೬] ಇದು ನಕಲನ್ನು ಕಡಿಮೆ ಮಾಡುವುದರಿಂದ ಗಳಿಸಬಹುದಾದ ಲಾಭವನ್ನು ಅವುಗಳ ಬೆಲೆಯು ಮೀರಿದಲ್ಲಿ ಉಚ್ಚ -ಬೆಲೆ- ಕಡಿಮೆ ಮರುಪಾವತಿ ನಕಲು ತಡೆಯುವ ಕ್ರಮಗಳು ಇಲ್ಲಿ ಉಪಯೋಗವಾಗಲಾರವು ಎಂಬುದನ್ನು ಸೂಚಿಸುತ್ತದೆ.-ಏಕೆಂದರೆ ಸಂಸ್ಥೆಗಳ ಪ್ರಮುಖ ಗುರಿ ತಮ್ಮ ಲಾಭವನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸಿಕೊಳ್ಳುವುದು ಅವುಗಳ ಪ್ರಮುಖ ಗುರಿಯಾಗಿರುತ್ತದೆ.

ಇಂಟರ್ನೆಟ್ ವಂಚನೆಯನ್ನು ಚಾರ್ಜ್‌ಬ್ಯಾಕ್ ಎಂದು ಹಕ್ಕಿನ ಮೂಲಕ ಕೇಳಬಹುದು, ಅಥವಾ ಕ್ರೆಡಿಟ್ ಕಾರ್ಡ್‌ನ ಮಾಹಿತಿಯನ್ನು ಹಲವು ವಿಧಾನಗಳಲ್ಲಿ ಕದಿಯುವ ಸಾಧ್ಯತೆಗಳಿವೆ ಆನ್‌ಲೈನ್ ಇರಬಹುದು ಅಥವಾ ಆಫ್‌ಲೈನ್ ಇರಬಹುದು. ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ದೂರದ ಖರೀದಿಗಳನ್ನು ಮಾಡಲು ಸುರಕ್ಷತಾ ವಿಧಾನಗಗಳನ್ನು ಸುಧಾರಿಸುವ ಪ್ರಯತ್ನಗಳ ಹೊರತಾಗಿಯೂ, ವರ್ತಕರ ದುರ್ಬಲ ವ್ಯವಹಾರದಿಂದಾಗಿ ಸಹಜವಾಗಿಯೇ ಸುರಕ್ಷತಾ ಉಲ್ಲಂಘನೆಗಳು ಉಂಟಾಗುತ್ತವೆ. ಉದಾಹರೆಣೆಗೆ, SSL ನ್ನು ಸುರಕ್ಷಿತವಾಗಿ ಬಳಸುವ ವೆಬ್ ಸೈಟ್ ಸಂಗ್ರಹಿಸಿದ ದತ್ತಾಂಶಗಳನ್ನು ಒಬ್ಬ ವ್ಯಕ್ತಿಯಿಂದ ಪಡೆದು ನಂತರ ಅದನ್ನು ಮೇಲ್ ಮಾಡಬಹುದು, ಒಬ್ಬ ವರ್ತಕನು ಸಂಗ್ರಹಿಸದೇ ಇರುವ ವಿವರಗಳನ್ನು ಇಂಟರ್ ನೆಟ್ ಮೂಲಕ ಅಥವಾ ಒಬ್ಬ ನೌಕರನ ಮೂಲಕ ಪಡೆಯಬಹುದು : ಅಂದರೆ ಪರಿಷ್ಕರಣೆ ಹೊಂದದೇ ಇರುವ ಕಾರ್ಡ್ ವಿವರಗಳು ಯಾವಾಗಲೂ ಅಪಾಯಕಾರಿ. ಸಂಗ್ರಹಿತ ದತ್ತಾಂಶಗಳೂ ಸಹ ಅಳಿಸಿ ಹೋಗುವ ಸಾಧ್ಯತೆಗಳಿರುತ್ತವೆ.

ಸಿಟಿ ಬ್ಯಾಂಕ್ ನಂತಹ ಹಲವಾರು ಬ್ಯಾಂಕ್ ಗಳು ( ವಾಸ್ತವಿಕ ಖಾತೆ ಸಂಖ್ಯೆಗಳು) ಬಳಸುವ ನಿಯಂತ್ರಿತ ಪಾವತಿ ಸಂಖ್ಯೆಗಳು, ಡಿಸ್ಕವರ್ ( ಸುರಕ್ಷಿತ ಆನ್-ಲೈನ್ ಖಾತೆ ಸಂಖ್ಯೆಗಳು, ಬ್ಯಾಂಕ್ ಆಫ್ ಅಮೇರಿಕಾ), ೫ ಬ್ಯಾಂಕುಗಳು ಬಳಸುವ ಫ್ರಾನ್ಸ್ ನಲ್ಲಿ ಬಳಸುವ ಇಕಾರ್ಟ್ ಬ್ಲ್ಯೂ ಮತ್ತು ಸಿಎಮ್‌ಬಿಗಳು ಮತ್ತು ಸ್ವೀಡ್ ಬ್ಯಾಂಕ್ ನ ಸ್ವೀಡನ್ಸ್ ಇ ಕೊರ್ಟ್ ಉತ್ಪನ್ನ ಕ್ರೆಡಿಟ್ ಕಾರ್ಡ್ ವಂಚನೆಯಿಂದ ರಕ್ಷಿಸುವ ಇತರ ಅವಕಾಶಗಳಾಗಿವೆ. ಇವು ಸಾಮಾನ್ಯವಾಗಿ ಒಂದು ಸಾರಿ ಬಳಸುವ ಸಂಖ್ಯೆಗಳಾಗಿದ್ದು ವಾಸ್ತವ ಖಾತೆ ( ನಗದು /ಸಾಲ) ಸಂಖ್ಯೆಯನ್ನು ಮೊದಲುಗೊಳ್ಳುತ್ತವೆ ಮತ್ತು ಆನ್ -ಲೈನ್ ನ ಒಂದು ಸಾರಿ ಖರೀದಿಗೆ ಉತ್ಪತ್ತಿ ಮಾಡಲಾಗುತ್ತದೆ. ಅವು ಖರೀದಿಯ ನಿಜವಾದ ಮೊತ್ತ ಅಥವಾ ಗ್ರಾಹಕನ ಬೆಲೆಯ ಮಿತಿಗೆ ತಕ್ಕಂತೆ ಕೇವಲ ಅಲ್ಪಾವಧಿಯವರೆಗೆ ಮಾತ್ರ ಬೆಲೆ ಬಾಳುತ್ತವೆ. ಅವುಗಳ ಉಪಯೋಗವನ್ನು ಒಬ್ಬ ವ್ಯಾಪಾರಿಗೆ ನಿಗಧಿಪಡಿಸಬಹುದು. ವ್ಯಾಪಾರಿಗೆ ಕೊಡಲ್ಪಟ್ಟ ಒಂದು ಸಂಖ್ಯೆಯು ಸಂಧಾನಗೊಂಡರೆ, ಮತ್ತೆ ಅದನ್ನೇ ಉಪಯೋಗಿಸುವ ಪ್ರಯತ್ನವನ್ನು ಮಾಡಿದಾಗ ಅದು ರದ್ದಾಗುತ್ತದೆ.

ಇದೇ ರೀತಿಯ ಒಂದು ನಿಯಂತ್ರಿತ ವ್ಯವಸ್ಥೆಯನ್ನು ಭೌತಿಕ ಕಾರ್ಡುಗಳಿಗೂ ಬಳಸಬಹುದು. ಕಾರ್ಡು‌ದಾರರು ಸನ್ನಿವೇಶಗಳ ಬದಲಾವಣೆಗೆ ತಕ್ಕಂತೆ( ಅಂದರೆ ಅವರು, ಭೌಗೋಳಿಕ, ಕಾಲಬದ್ಧ ಮತ್ತು ತಮ್ಮ ಮೂಲ ಹಾಗೂ ಸಹಾಯಕ ಕಾರ್ಡುಗಳ ಪರಿಮಿತಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು) ಬ್ಯಾಂಕುಗಳು ಹಲವಾರು ನಿಯಂತ್ರಣಗಳನ್ನು ಮಾಡಲು ತಂತ್ರ ಜ್ಞಾನವು ಅವಕಾಶವನ್ನು ಕಲ್ಪಿಸಿದೆ. ಇಂತಹ ನಿಯಂತ್ರಣಗಳಿಂದಾಗುವ ಲಾಭವಷ್ಟೇ ಅಲ್ಲದೆ : ಸುರಕ್ಷತೆಯ ದೃಷ್ಟಿ ಕೋನದಿಂದಲೂ ಸಹ ಒಬ್ಬ ಗ್ರಾಹಕನು ಒಂದು ಚಿಪ್ ಮತ್ತು ಪಿನ್‌ನ್ನು ಹೊಂದಿದ್ದು ತನ್ನ ಕಾರ್ಡ್ ನ್ನು ತನ್ನ ಮಾತೃ ರಾಷ್ಟ್ರದಲ್ಲಿ ಮಿತವಾಗಿ ಬಳಸುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಕಾಲ ಕ್ರಮೇಣ ಚಿಪ್‌ನ್ನು ಹೊಂದಿರದ ಮತ್ತು ಪಿನ್ (EMV) ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿ ಇವುಗಳನ್ನು ಬಳಸಿ ವಿವರಗಳನ್ನು ಕದ್ದುಕೊಳ್ಳುವುದನ್ನು ತಡೆಯಲು ಸಾಧ್ಯವಿದೆ. ಇದೇ ರೀತಿಯಲ್ಲಿ ನೈಜ್ಯ ಕಾರ್ಡ್‌ಗಳನ್ನು ಆನ್-ಲೈನ್ ನಲ್ಲಿ ಬಳಸುವುದನ್ನು ನಿಯಂತ್ರಿಸುವುದರ ಮೂಲಕ ಕಳವು ಮಾಡಬಹುದಾದ ವಿವರಗಳು ಇಂತಹ ಪ್ರಯತ್ನದಿಂದ ನಿರಾಕರಿಸುವಂತೆ ಮಾಡಬಹುದು. ನಂತರ ಕಾರ್ಡ್ ಬಳಕೆದಾರರು ಆನ್ ಲೈನ್ ವ್ಯಾಪಾರವನ್ನು ಮಾಡುವಾಗ ವಾಸ್ತವ ಖಾತೆ ಸಂಖ್ಯೆಗಳನ್ನು ಬಳಸಬಹುದು. ಈ ಎರಡೂ ಪ್ರಕರಣಗಳಲ್ಲಿ ಗ್ರಾಹಕನೊಬ್ಬನು ತನ್ನ ಪರಿಮಿತಿಗಳನ್ನು ಉಲ್ಲಂಘಿಸುವ ವಂಚನೆಯ ಪ್ರಯತ್ನವನ್ನು ಗುರುತಿಸುವಂತೆ ಒಂದು ಎಚ್ಚರಿಕೆಯ ವ್ಯವಸ್ಥೆಯನ್ನು ನಿರ್ಮಿಸಬಹುದು ಮತ್ತು ಸರಿಯಾದ ಸಮಯದಲ್ಲಿ ದತ್ತಾಂಶವನ್ನು ಪಡೆಯಬಹುದು. ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆ ಇದು ಅತ್ಯುತ್ತಮ ವಿಧಾನವಾಗಿದ್ದು, ಇದು ಅತಿ ಉನ್ನತ ಮಟ್ಟದ ಸುರಕ್ಷತೆಯನ್ನು, ನಿಯಂತ್ರಣವನ್ನು ಮತ್ತು ನೈಜ್ಯತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ.

ಇದರೊಂದಿಗೆ, ಭೌತಿಕ ಕಾರ್ಡ್‌ನ ಮೇಲೆ ಸುರಕ್ಷತಾ ಲಕ್ಷಣಗಳನ್ನು ಹೊಂದಿದ್ದು ನಕಲು ಮಾಡುವುದನ್ನು ತಡೆಯಲು ಸಹಾಯಕವಾಗಿದೆ. ಉದಾಹರಣೆಗೆ, ಸಾಕಷ್ಟು ಆಧುನಿಕ ಕ್ರೆಡಿಟ್ ಕಾರ್ಡ್‌ಗಳು ವಾಟರ್ ಮಾರ್ಕ್ ನ್ನು ಹೊಂದಿದ್ದು ನೇರಳಾತೀತ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಒಂದು ವಿಸಾ ಕಾರ್ಡ್ ನಲ್ಲಿ ಸಹಜ ವಿಸಾ ಚಿಹ್ನೆಯ ಮೇಲೆ V ಅಕ್ಷರವಿರುತ್ತದೆ ಮತ್ತು ಒಂದು ಮಾಸ್ಟರ್ ಕಾರ್ಡ್ ನಲ್ಲಿ ಅದರ ಮುಂಭಾಗಕ್ಕೆ ಅಡ್ಡಲಾಗಿ MC ಎಂಬ ಅಕ್ಷರಗಳಿರುತ್ತವೆ. ಹಳೆಯ ವಿಸಾ ಕಾರ್ಡ್ ಗಳಲ್ಲಿ ಮುಂಭಾಗದಲ್ಲಿ ಬೋಳಾದ ಗರುಡ ಅಥವಾ ಪಾರಿವಾಳ ಇರುತ್ತದೆ. ಮೇಲೆ ಹೇಳಿದ ಈ ಎರಡೂ ಪ್ರಕರಣಗಳಲ್ಲಿ, ಸುರಕ್ಷತಾ ಲಕ್ಷಣಗಳನ್ನು ಕೇವಲ ನೇರಳಾತೀತ ಬೆಳಕಿನಲ್ಲಿ ಮಾತ್ರ ನೋಡಬಹುದು ಮತ್ತು ಸಾಮಾನ್ಯ ಬೆಳಕಿನಲ್ಲಿ ಇವು ಗೋಚರವಾಗುವುದಿಲ್ಲ,

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕ್ರೆಡಿಟ್ ಕಾರ್ಡ್ ವಂಚನೆಯಲ್ಲಿ ತೊಡಗಿರುವ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಮತ್ತು ಯು.ಎಸ್ ಪೋಸ್ಟಲ್ ಇನ್ ಸ್ಪೆಕ್ಷನ್ ಸರ್ವೀಸ್ ಗಳು ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ಆದರೆ ಎಲ್ಲಾ ಅಪರಾಧಿಗಳ ಬೆನ್ನು ಹತ್ತಿ ಹಿಡಿಯಲು ಸರಿಯಾದ ಸಂಪನ್ಮೂಲಗಳು ಇಲ್ಲ. ಒಟ್ಟಾರೆ ಹೇಳುವುದಾದರೆ, ಫೆಡರಲ್ ಅಧಿಕಾರಿಗಳು ಮಾತ್ರ US$೫,೦೦೦ ಮೀರಿದ ಪ್ರಕರಣಗಳಿಗೆ ಶಿಕ್ಷೆ ವಿಧಿಸುತ್ತಾರೆ. ಸಾಮಾನ್ಯ ಕ್ರೆಡಿಟ್ ಕಾರ್ಡ್ ಅಂತರಜಾಲಗಳ ಸುರಕ್ಷತೆಗಾಗಿ ಮೂರು ಸುಧಾರಣೆಗಳನ್ನು ಪರಿಚಯಿಸಲಾಗಿದೆ, ಆದರೆ ಯಾವುದೂ ಸಹ ಇಲ್ಲಿಯವರೆಗೆ ಕ್ರೆಡಿಟ್ ಕಾರ್ಡ್ ನ ವಂಚನೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿಲ್ಲ. ಮೊದಲು, ವ್ಯಾಪಾರಿಗಳು ಬಳಸುವ ಆನ್ ಲೈನ್ ಪರಿಶೀಲನಾ ವ್ಯವಸ್ಥೆಯನ್ನು ಕಾರ್ಡು ದಾರನಿಗೆ ಮಾತ್ರ ಗೊತ್ತಿರುವ ವೈಯಕ್ತಿಕ ಗುರುತು ಸಂಖ್ಯೆ (PIN) ಯನ್ನು ೪ ಅಂಕಿಗಳಿಗೆ ಏರಿಸುವುದು. ಎರಡು, ನಕಲ ನ್ನು ಮಾಡಲು ಹೆಚ್ಚು ಕಷ್ಟಕರವಾಗುವ ಒಂದೇ ರೀತಿಯಲ್ಲಿ ಕಾಣುವ ವಿರೂಪ -ನಿರೋಧಕ ಸ್ಮಾರ್ಟ್ ಕಾರ್ಡ್ ಗಳು ಈ ಕಾರ್ಡುಗಳ ಸ್ಥಳವನ್ನು ಆಕ್ರಮಿಸಿವೆ. ಸ್ಮಾರ್ಟ್ ಕಾರ್ಡ್ (IC ಕಾರ್ಡ್) ಆಧಾರಿತ ಬಹುಪಾಲು ಕ್ರೆಡಿಟ್ ಕಾರ್ಡ್ ಗಳು ಇಎಮ್‌ವಿ (ಯುರೋಪೇ ಮಾಸ್ಟರ್ ಕಾರ್ಡ್ ವೀಸಾ) ಗೆ ಮಾನ್ಯತೆಯನ್ನು ನೀಡುತ್ತವೆ. ಮೂರು, ಪ್ರಸಕ್ತವಲ್ಲದ ಕಾರ್ಡುಗಳ ವ್ಯವಹಾರಗಳ ಬಳಕೆಗೆ ಈಗಿನ ಬಹುಪಾಲು ಕಾರ್ಡ್ ಗಳ ಹಿಂಭಾಗದಲ್ಲಿ ಇರುವ ೩ ಅಥವಾ ೪ ಅಂಕಿಗಳ ಹೆಚ್ಚುವರಿ ಕಾರ್ಡ್ ಸೆಕ್ಯೂರಿಟಿ ಕೋಡ್ (CSC) ಎಲೆಕ್ಟ್ರಾನಿಕ್ ಪಾವತಿಗಳ ಎಲ್ಲಾ ಹಂತಗಳಲ್ಲಿ ಸ್ಟೇಕ್ ಹೋಲ್ಡರ್ ಗಳು ಸುರಕ್ಷತೆಗಾಗಿ ಸ್ಥಿರ ಜಾಗತಿಕ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಿಕೊಳ್ಳುವ ಅಗತ್ಯತೆಯನ್ನು ಕಂಡು ಕೋಡಿವೆ ಮತ್ತು ಪ್ರಸಕ್ತ ಹಾಗೂ ಉದಯೋನ್ಮುಖ ಭದ್ರತಾ ತಂತ್ರ ಜ್ಞಾನಗಳನ್ನು ಸಮಗ್ರವನ್ನಾಗಿ ಮಾಡುವ ಅವಶ್ಯಕತೆಯನ್ನು ಮನಗಂಡಿವೆ. ಅವರು ಈ ಅವಶ್ಯಕತೆಗಳನ್ನು ೦}ಪಿಸಿಐ ಡಿಎಸ್‌ಎಸ್ ಮತ್ತು ಸೆಕ್ಯೂರ್ ಪಿಒಎಸ್ ವೆಂಡರ್ ಅಲೈಯನ್ಸ್ನಂತಹ ಸಂಸ್ಥೆಗಳ ಮೂಲಕ ಆರಂಭಿಸಿವೆ.[೧೭]

ಕೋಡ್ ೧೦

[ಬದಲಾಯಿಸಿ]

ವರ್ತಕರು ಒಂದು ಕ್ರೆಡಿಟ್ ಕಾರ್ಡ್‌ನ್ನು ಒಪ್ಪಿಕೊಳ್ಳಲು ಯಾವುದಾದರೂ ಅನುಮಾನ ವ್ಯಕ್ತ ಪಡಿಸಿದಲ್ಲಿ ಕೋಡ್ ೧೦ ಕರೆಗಳನ್ನು ಮಾಡಲಾಗುತ್ತದೆ. ನಂತರ ಆಪರೇಟರ್, ವರ್ತಕನು ಕಾರ್ಡ್ ಅಥವಾ ಕಾರ್ಡ್ ದಾರನ ಬಗ್ಗೆ ಏನಾದರೂ ಅನುಮಾನವಿದೆಯೇ ಎಂಬುದನ್ನು ಕಂಡುಹಿಡಿಯಲು ಹೌದು ಅಥವಾ ಅಲ್ಲ ಎಂಬ ಪ್ರಶ್ನೆಗಳ ಸರಮಾಲೆಯನ್ನು ಹಾಕುತ್ತಾನೆ. ಕಾರ್ಡನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂದಲ್ಲಿ ವ್ಯಾಪಾರಿಯು ಹಾಗೆ ಮಾಡಬಹುದು.

ಸಾಲದ ಇತಿಹಾಸ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ ದಾರರು ತಾವು ತಮ್ಮ ಬಾಕಿಗಳನ್ನು ಮರುಪಾವತಿ ಮಾಡುವ ರೀತಿಯು ಅವರ ಸಾಲದ ಚರಿತ್ರೆಯ ಮೇಲೆ ಒಂದು ಪ್ರಮುಖ ಪರಿಣಾಮವನ್ನು ಬೀರುತ್ತದೆ. ಕ್ರೆಡಿಟ್ ಕಛೇರಿಗೆ ವರದಿ ಮಾಡಿದ ಪ್ರಮುಖ ಅಂಶಗಳಲ್ಲಿ ಎರಡು ಮುಖ್ಯ ಅಂಶಗಳೆಂದರೆ ಸಾಲಗಳನ್ನು ನಿಗಧಿತ ಕಾಲದಲ್ಲಿ ಮರುಪಾವತಿ ಮಾಡುವುದು ಮತ್ತು ಸಾಲದ ಮೊತ್ತವನ್ನು ಕ್ರೆಡಿಟ್ ಮಿತಿಯಲ್ಲಿ ಕೊಡುವುದು. ಸಾಲ ಕೊಡುವವರು ಮರುಪಾವತಿಗಳನ್ನು ಒಪ್ಪಂದದಂತೆ, ಸಾಮಾನ್ಯವಾಗಿ ತಿಂಗಳಿಗೆ ಮತ್ತು ಸಾಲದ ಮಿತಿಯ ಸುಮಾರು ಮೂರನೇ ಒಂದು ಭಾಗದ ಸಾಲದ ಬಾಕಿಯನ್ನು ಪಡೆಯಲಿಚ್ಛಿಸುತ್ತಾರೆ. ಸಾಮಾನ್ಯವಾಗಿ ಸಾಲದ ಮಾಹಿತಿಯು ಸಾಲದ ವರದಿಯಲ್ಲಿ ಸುಮಾರು ೭ ವರ್ಷಗಳ ಕಾಲ ಇರುತ್ತದೆ. ಆದರೆ, ಕಾಲ ಚೌಕಟ್ಟು ವ್ಯತ್ಯಾಸವಾಗಬಹುದಾದ ಕೆಲವು ಕಾನೂನು ಇತಿಮಿತಿಗಳು ಮತ್ತು ಸನ್ನಿವೇಶಗಳು ಇವೆ.

ಲಾಭಗಳು ಮತ್ತು ನಷ್ಟಗಳು

[ಬದಲಾಯಿಸಿ]

ಇತ್ತೀಚೆಗಿನ ದಿನಗಳಲ್ಲಿ , ಕ್ರೆಡಿಟ್ ಕಾರ್ಡ್ ಖಾತೆಗಳು ಬ್ಯಾಂಕ್ ಗಳಿಗೆ ತುಂಬಾ ಲಾಭದಾಯಕವಾಗಿವೆ, ಏಕೆಂದರೆ ಕಳೆದ ತೊಂಬತ್ತರ ದಶಕದಲ್ಲಿ ಉಂಟಾದ ದಿಢೀರ್ ಆರ್ಥಿಕ ಬೆಳವಣಿಗೆಯೆ ಇದಕ್ಕೆ ಕಾರಣ. ಆದರೆ ಕ್ರೆಡಿಟ್ ಕಾರ್ಡ್ ಗಳ ಪ್ರಕರಣಗಳಲ್ಲಿ, ಇಂತಹ ಉನ್ನತ ಮರುಪಾವತಿಗಳು ಅಪಾಯಕಾರಿ ರೀತಿಯಲ್ಲಿ ಜೊತೆ ಜೊತೆಯಾಗಿ ಹೋಗುತ್ತವೆ, ಏಕೆಂದರೆ ವ್ಯಾಪಾರವು ಅಸುರಕ್ಷತಾ ಸಾಲಗಳನ್ನು ಅನಿವಾರ್ಯವಾಗಿ ಮಾಡಬೇಕಾದ ಸನ್ನಿವೇಶಗಳನ್ನು ಹೊಂದಿದ್ದು ಸಾಲಗಾರರನ್ನು ಮಾತ್ರ ಅವಲಂಬಿಸಿದ್ದು ಹೆಚ್ಚಿನ ಪ್ರಮಾಣದಲ್ಲಿ ವಿಫಲತೆ ಉಂಟಾಗುವ ಸಾಧ್ಯತೆಗಳಿರುತ್ತವೆ.

ವೆಚ್ಚ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ ನೀಡುವವರು (ಬ್ಯಾಂಕುಗಳು) ಸಹ ಹಲವಾರು ರೀತಿಯ ವೆಚ್ಚಗಳನ್ನು ಹೊಂದಿರುತ್ತಾರೆ:

ಬಡ್ಡಿ ವೆಚ್ಚಗಳು

[ಬದಲಾಯಿಸಿ]

ಬ್ಯಾಂಕುಗಳು ಸಾಮಾನ್ಯವಾಗಿ ಹಣವನ್ನು ಸಾಲವಾಗಿ ತೆಗೆದುಕೊಂಡು ನಂತರ ಗ್ರಾಹಕರಿಗೆ ಸಾಲ ಕೊಡುತ್ತವೆ. ಇತರ ಉದ್ಯಮಗಳಿಂದ ಅವು ಅತಿ ಕಡಿಮೆ ಅತಿ ಕಡಿಮೆ ಬಡ್ಡಿಗೆ ಸಾಲಗಳನ್ನು ಪಡೆಯುತ್ತವೆ, ತಮ್ಮ ಗ್ರಾಹಕರಿಗೆ ಎಷ್ಟು ಬೇಕೋ ಅಷ್ಟು ಮೊತ್ತವನ್ನು ಪಡೆದು, ಇತರರಿಗೆ ತಮ್ಮ ಬಂಡವಾಳವನ್ನು ಅತಿ ಹೆಚ್ಚು ಬಡ್ಡಿ ದರಗಳಲ್ಲಿ ನೀಡುತ್ತವೆ. ಗ್ರಾಹಕನ ಮೇಲೆ ಒಬ್ಬ ಕಾರ್ಡ್ ವಿತರಕನು ೧೫% ರಷ್ಟು ಹಣವನ್ನು ಹೇರಿದರೆ ಮತ್ತು ಇದು ಹಣವನ್ನು ಪಡೆಯಲು ೫% ರಷ್ಟಾದರೆ ಒಂದು ವರ್ಷಕ್ಕೆ ಕಾರ್ಡ್ ವಿತರಕನೊಬ್ಬನು ಸಾಲದ ಮೇಲೆ ೧೦% ರಷ್ಟು ಸಂಪಾದನೆಯನ್ನು ಮಾಡುತ್ತಾನೆ. ಈ ೧೦% ವ್ಯತ್ಯಾಸವು "ನಿವ್ವಳ ಬಡ್ಡಿ" ಮತ್ತು ೫% "ಬಡ್ಡಿಯ ವೆಚ್ಚ ವಾಗುತ್ತದೆ".

ಕಾರ್ಯ ನಿರ್ವಹಿಸುವ ವೆಚ್ಚಗಳು

[ಬದಲಾಯಿಸಿ]

ಇದು ಕ್ರೆಡಿಟ್ ಕಾರ್ಡ್ ಖಾತೆಯನ್ನು ನಡೆಸಲು ತಗುಲುವ ವೆಚ್ಚವಾಗಿದೆ , ಇದು ಪ್ಲಾಸ್ಟಿಕ್ ಮುದ್ರಣಗಳ ಕಂಪನಿಯನ್ನು ನಡೆಸುವ ಕಾರ್ಯನಿರ್ವಾಹಕರ ಹಣ ಪಾವತಿಯಿಂದ ಹಿಡಿದು, ವರದಿಗಳನ್ನು ಮೇಲ್ ಮಾಡುವುದು, ಪ್ರತಿಯೊಬ್ಬ ಕಾರ್ಡು ದಾರನ ಬಾಕಿ ವಿವರಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸುವುದು, ತಮ್ಮ ಹಲಾವರು ಅಹವಾಲುಗಳನ್ನು ಆಲಿಸಲು ಪೋನ್ ಕರೆಗಳನ್ನು ತೆಗೆದುಕೊಳ್ಳುವುದು ಮತ್ತು ಮೋಸದ ಕರೆಗಳಿಂದ ಗ್ರಾಹಕರನ್ನು ಸಂರಕ್ಷಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ವಿತರಕನನ್ನು ಅವಲಂಬಿಸಿ, ಮಾರುಕಟ್ಟೆ ಕಾರ್ಯಕ್ರಮಗಳು ಖರ್ಚಿನ ಒಂದು ಪ್ರಮುಖ ಭಾಗವಾಗಿ ಕಾರ್ಯ ನಿರ್ವಹಿಸುತ್ತವೆ.

ಚಾರ್ಜ್ ಆಫ್‌ಗಳು

[ಬದಲಾಯಿಸಿ]

ಒಬ್ಬ ಗ್ರಾಹಕನು ಸಾಲದಿಂದ ತೀವ್ರ ಬಾಧೆಗೆ ಒಳಗಾದರೆ ( ಕೆಲವೊಮ್ಮೆ ಆರು ತಿಂಗಳುಗಳವರೆಗೆ ಮರುಪಾವತಿ ಮಾಡದೇ ಇರುವುದು) , ಸಾಲ ನೀಡಿದವನ್ನು ಆ ಸಾಲವನ್ನು ಚಾರ್ಜ್ -ಆಫ್ ಎಂದು ಘೋಷಿಸಬಹುದು. ನಂತರ ಇದನ್ನು ಸಾಲಗಾರನ, ಸಾಲದ ಬ್ಯೂರೋ ವರದಿಗಳಲ್ಲಿ ಪಟ್ಟಿ ಮಾಡಲಾಗುವುದು (ಈಕ್ವಿಫ್ಯಾಕ್ಸ್, ಉದಾಹರಣೆಗೆ, ಪಟ್ಟಿಯಲ್ಲಿ "R೯" ನಲ್ಲಿರುವ ಕಾಲಂ ಚಾರ್ಜ್ -ಆಫ್ ನ್ನು ಸೂಚಿಸುತ್ತದೆ..)

ಚಾರ್ಜ್-ಆಫ್ ನ್ನು "ಸಂಗ್ರಹಿಸಲಾಗದ ಲಿಖಿತ ದಾಖಲೆ" ಎಂದು ಪರಿಗಣಿಸಲಾಗುವುದು. ಬ್ಯಾಂಕುಗಳಿಗೆ, ಕೆಟ್ಟದಾದ ಸಾಲಗಳು ಮತ್ತು ಮೋಸದ ವ್ಯವಹಾರಗಳೂ ಸಹ ವ್ಯಾಪಾರದ ಒಂದು ಭಾಗವಾಗಿ ಬಿಡುತ್ತವೆ.

ಆದರೆ, ಸಾಲವು ಕಾನೂನಿನ ರೀತಿಯಲ್ಲಿ ನ್ಯಾಯ ಸಮ್ಮತವಾಗಿರುತ್ತದೆ ಮತ್ತು ಸಾಲ ನೀಡಿದವನು ಕಾನೂನು ನೀಡಿದ ಅನುಮತಿಯಡಿಯಲ್ಲಿ, ಸಾಧಾರಣವಾಗಿ ೩ ರಿಂದ ೭ ವರ್ಷಗಳ ವರೆಗೆ ತನ್ನ ಸಂಪೂರ್ಣ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸಬಹುದು. ಇದು ಆಂತರಿಕ ಸಂಗ್ರಹಣಾ ಸಿಬ್ಬಂದಿ ಅಥವಾ ಹೆಚ್ಚಾಗೆ ಹೊರಗಿನ ಸಂಗ್ರಹ ಏಜೆನ್ಸಿ ಯ ಸಂಪರ್ಕವನ್ನು ಒಳಗೊಂಡಿರುತ್ತದೆ. ಒಂದು ವೇಳೆ ಮೊತ್ತವು ಹೆಚ್ಚಾಗಿದ್ದರೆ ( ಸಾಮಾನ್ಯವಾಗಿ $೧೫೦೦–$೨೦೦೦ಗಿಂತ ಹೆಚ್ಚು), ಒಂದು ದಾವೆ ಅಥವಾ ಮಧ್ಯಸ್ಥಿಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ.

ಬಹುಮಾನಗಳು

[ಬದಲಾಯಿಸಿ]

ಬಹಳಷ್ಟು ಕ್ರೆಡಿಟ್ ಕಾರ್ಡ್‌ಗಳು ಕಾರ್ಡುಗಳನ್ನು ಬಳಸುವುದಕ್ಕೆ ಪ್ರಿಕ್ವೆಂಟ್ ಫ್ಲೈಯರ್ ಪಾಯಿಂಟ್ ಗಳು, ಉಡುಗೊರೆ ಪ್ರಮಾಣ ಪತ್ರಗಳು ಅಥವಾ ನಗದು ಹಿಂಬಾಕಿ ಯಂತಹ ಬಹುಮಾನಗಳನ್ನು ಪಡೆಯುತ್ತವೆ. ಬಹುಮಾನಗಳು ಸಾಮಾನ್ಯವಾಗಿ ಒಂದು ವಸ್ತುವನ್ನು ಖರೀದಿಸಿದ್ದಕ್ಕೆ ಅಥವಾ ಕಾರ್ಡ್ ನ್ ಮೇಲಿನ ಸೇವೆಗೆ ಅನ್ವಯವಾಗುತ್ತವೆ ಅಥವಾ ಇವು ಬಾಕಿ ವರ್ಗಾವಣೆ ಗಳು ನಗದು ಮುಂಗಡಗಳು, ಅಥವಾ ವಿಶೇಷ ಉಪಯೋಗಗಳನ್ನು ಒಳಗೊಂಡಿರುವುದಿಲ್ಲ. ಕಾರ್ಡ್‌ನ ವಿಧವನ್ನು ಅವಲಂಬಿಸಿ , ಬಹುಮಾನಗಳು ಸಾಮಾನ್ಯವಾಗಿ ೦.೨೫% ಮತ್ತು ೨.೦% ವಿತರಣೆಯ ಮಧ್ಯೆಯ ಬೆಲೆಯನ್ನು ಹೊಂದಿರುತ್ತವೆ. ವಿಸಾ ಅಥವಾ ಮಾಸ್ಟರ್ ಕಾರ್ಡುಗಳು ವಿತರಕರಿಗೆ ತಮ್ಮ ಬಹುಮಾನ ವ್ಯವಸ್ಥೆಗಳಿಗೆ ಹಣ ಸಹಾಯ ಮಾಡುವ ಶುಲ್ಕವನ್ನು ಹೆಚ್ಚಿಸಿವೆ. ಕೆಲವು ವಿತರಕರು ತಮ್ಮ ಕಾರ್ಡುದಾರರಿಗೆ ಬಹುಮಾನಗಳನ್ನು ಪಡೆಯಲು ಗ್ರಾಹಕ ಸೇವೆಯನ್ನು ಸಂಪರ್ಕಿಸುವಂತೆ ಹೇಳಿ ಅವರ ಉತ್ಸಾಹವನ್ನು ಕುಗ್ಗಿಸುತ್ತಾರೆ. ಅವರ ಸೇವಾ ವೆಬ್ ಸೈಟ್, ಬಹುಮಾನಗಳನ್ನು ನೀಡುವುದು ಸಾಮಾನ್ಯವಾಗಿ ವಿತರಕರಿಂದ ರಹಸ್ಯವಾಗಿಡಲ್ಪಡುವ ಒಂದು ಲಕ್ಷಣವಾಗಿದೆ. ಪೈಪೋಟಿಯ ಹಾಗೂ ಹರಿದು ಹೋಗಿರುವ ವಾತಾವರಣದಲ್ಲಿ , ಬಹುಮಾನದ ಪಾಯಿಂಟ್ ಗಳು ವಿತರಕನ ಕೆಳ ಸ್ತರದಲ್ಲಿ ನಾಟಕೀಯವಾಗಿ ಕುಸಿಯುತ್ತವೆ ಮತ್ತು ಬಹುಮಾನದ ಪಾಯಿಂಟ್‌ಗಳು ಮತ್ತು ಸಂಬಂಧಿಸಿದ ಪ್ರೋತ್ಸಾಹಕ ಧನವನ್ನು ಲಾಭದಾಯಕಖಾತೆಯಲ್ಲಿ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಉಪಯೋಗಿಸದ ಕ್ರೆಡಿಟ್ ಕಾರ್ಡುಗಳನ್ನು ಹೊರತು ಪಡಿಸಿ ಅಂತಹ ಪ್ರಕರಣಗಳಲ್ಲಿ ಅಮೇರಿಕಾದಲ್ಲಿ ಬ್ರೇಕೇಜ್ ರಾಜ್ಯದ ಖಜಾನೆಗೆ ಜಮಾ ಆಗುತ್ತದೆ. ಪರಿಹಾರ ಪಡೆಯದ ಕಾರ್ಡು ಗಳು ವಿತರಕನಲ್ಲಿಯೇ ಉಳಿಯುತ್ತವೆ.

ವಂಚನೆ

[ಬದಲಾಯಿಸಿ]

೨೦೦೬ ರ ಲೆಕ್ಕಾ ಚಾರದ ಪ್ರಕಾರ ಪ್ರತಿ ೧೦೦ ಡಾಲರ್ ಗಳಿಗೆ ೭ ಸೆಂಟ್ ಗಳಂತೆ ( (೭ ಮೂಲ ಪಾಯಿಂಟ್ ಗಳು) ಸಾಪೇಕ್ಷ ಸಂಖ್ಯೆಗಳ ಪ್ರಕಾರ ಬ್ಯಾಂಕುಗಳಲ್ಲಿ ಕಳೆದುಕೊಂಡ ಕಾರ್ಡ್ ಗಳ ವಂಚನೆಗಳು ಚಿಕ್ಕ ಪ್ರಮಾಣದವುಗಳಾಗಿವೆ.[೧೮] ೨೦೦೪ರಲ್ಲಿ, ಯು.ಕೆ. ನಲ್ಲಿ ವಂಚನೆಯು £೫೦೦ ಮಿಲಿಯನ್ ಮೀರಿತ್ತು.[೧೯] ಒಂದು ವೇಳೆ ಕಾರ್ಡ್ ಕಳೆದು ಹೋದಲ್ಲಿ ಅಥವಾ ಅನದಿಕೃತ ನಕಲಾದಲ್ಲಿ, ಗ್ರಾಹಕರು ಕೊಂಡುಕೊಳ್ಳದೇ ಇದ್ದ ಎಲ್ಲಾ ಅಥವಾ ಕೆಲವು ಬೆಲೆಯನ್ನು ಬಹಳಷ್ಟು ಕಾರ್ಡ್ ವಿತರಕರು ಮರು ಪಾವತಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಈ ಮರುಪಾವತಿಗಳಲ್ಲಿ ಬಹುಪಾಲನ್ನು ವ್ಯಾಪಾರಿಯಿಂದ ವಿಶೇಷವಾಗಿ ಮೇಲ್ ಆರ್ಡರ್ ಪ್ರಕರಣಗಳಲ್ಲಿ ವಸೂಲಿ ಮಾಡುತ್ತಾರೆ ಏಕೆಂದರೆ ವ್ಯಾಪಾರಿಯು ಕಾರ್ಡ್ ನ ಸ್ವರೂಪವನ್ನು ಪ್ರಶ್ನೆಮಾಡಲು ಅವಕಾಶವಿರುವುದಿಲ್ಲ. ಅನೇಕ ರಾಷ್ಟ್ರಗಳಲ್ಲಿ ವರ್ತಕರು ID ಕಾರ್ಡ್ ನ್ನು ಕೇಳದಿದ್ದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ಇಂತಹ ರಾಷ್ಟ್ರಗಳಲ್ಲಿ ವರ್ತಕರು ID ಕಾರ್ಡ್‍ನ್ನು ಸಾಮಾನ್ಯವಾಗಿ ಕೇಳುತ್ತಾರೆ. ಕ್ರೆಡಿಟ್ ಕಾರ್ಡ್ ಕಂಪನಿಗಳು ಸಾಮಾನ್ಯವಾಗಿ ಗ್ರಾಹಕನು ತನ್ನ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ಪಾವತಿಸದೇ ಇದ್ದರೂ ವರ್ತಕರಿಗೆ ನ್ಯಾಯ ಸಮ್ಮತ ವ್ಯವಹಾರಗಳ ಮೇಲೆ ಹಣ ಪಾವತಿಯ ಖಾತ್ರಿಯನ್ನು ಕೊಡುತ್ತವೆ ಹಲವಾರು ಬ್ಯಾಂಕ್ ಸೇವೆಗಳು ತಮ್ಮದೇ ಆದ ಕ್ರೆಡಿಟ್ ಸೇವೆಗಳನ್ನು ಹೊಂದಿದ್ದು ಮೋಸದ ಪ್ರಕರಣಗಳನ್ನು ನಿಯಂತ್ರಿಸುತ್ತವೆ ಮತ್ತು ಅಂತಹ ಮೋಸದ ಪ್ರಯತ್ನಗಳು ನಡೆದಾಗ ತಮಗೆ ಸಾಧ್ಯವಾದ ಶಿಸ್ತಿನ ಕ್ರಮವನ್ನು ಜರುಗಿಸುತ್ತವೆ. ಮೋಸದ ಪ್ರಕರಣಗಳನ್ನು ನಿಯಂತ್ರಿಸುವುದರಲ್ಲಿ ತಜ್ಞರಾದ ನೌಕರರನ್ನು ಕೆಲವೊಮ್ಮೆ ಅಪಾಯಗಳ ನಿಯಂತ್ರಣ, ವಂಚನೆ ಮತ್ತು ಅಧಿಕಾರ ವರ್ಗ ಅಥವಾ ಕಾರ್ಡ್ಸ್ ಅಂಡ್ ಅನ್ ಸೆಕ್ಯೂರ್ಡ್ ಬ್ಯುಸಿನೆಸ್ ನಲ್ಲಿ ಇರಿಸಿರುತ್ತಾರೆ. ಮೋಸದ ನಿಯಂತ್ರಣವು , ಯಾರು ಅಂತಹ ಪ್ರಕರಣಗಳಿಗೆ ಕಾರಣಕರ್ತರೋ ಅವರನ್ನು ಪತ್ತೆ ಹಚ್ಚುವ ಮತ್ತು ಅದರಿಂದಾಗುವ ನಷ್ಟವನ್ನು ಕಡಿಮೆ ಮಾಡುವದರ ಕಡೆಗೆ ಹೆಚ್ಚು ಗಮನವನ್ನು ಕೊಡುತ್ತದೆ. ಕ್ರೆಡಿಟ್ ಕಾರ್ಡ್ ವಂಚನೆಯು ಹಲವಾರು ದಶಕಗಳಿಂದ ಒಂದು ಪ್ರಮುಖ ಪ್ರತಿಷ್ಟಿತ ಅಪರಾದವಾಗಿದ್ದು, ಕೆಲವು ರಾಷ್ಟ್ರಗಳಲ್ಲಿ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಚಿಪ್ ಆಧಾರಿತ ಕಾರ್ಡ್ ಗಳು(EMV) ಬಂದಿದ್ದರೂ ಸಹ ಇದು ಮುಂದುವರೆಯುತ್ತಲೇ ಇದೆ. ಇಂತಹ ಕ್ರಮಗಳ ಅನುಷ್ಠಾನದಿಂದಲೂ ಸಹ, ಕ್ರೆಡಿಟ್ ಕಾರ್ಡ್ ವಂಚನೆಯ ಈ ಸಮಸ್ಯೆ ಮುಂದುವರೆದು ಹೋಗುತ್ತಲೇ ಇದೆ.

ಬಡ್ತಿ ಖರೀದಿಗಳೆಂದರೆ ಯಾವುದೇ ಒಂದು ಖರೀದಿಯು ಪ್ರತ್ಯೇಕ ವಾಯಿದೆ ಮತ್ತು ನಿಯಮಗಳನ್ನು ಹೊಂದಿದ್ದು ಒಂದು ಸಾಧಾರಣ ಖರೀದಿಗೆ ಹೊರತಾಗಿ ಪ್ರತಿಯೊಂದು ವ್ಯವಹಾರವನ್ನೂ ಕಾರ್ಡು ದಾರನ ಖಾತೆಯ ದಾಖಲೆ ಮತ್ತು ಅವರ ಬೆಲೆಯ ಸ್ವಭಾವದ ಆಧಾರದ ಮೇಲೆ ಮಾಡುವುದೇ ಆಗಿದೆ. ಎಲ್ಲಾ ಬಡ್ತಿ ಖರೀದಿಗಳನ್ನೂ ತನ್ನದೇ ಬಾಕಿಗಳನ್ನು ಹೊಂದಿರುವ ಒಂದು ನಿರ್ಧಿಷ್ಟ ಖಾತೆಯಲ್ಲಿ ನಿರ್ವಹಿಸಲಾಗುತ್ತದೆ ,ಇದನ್ನು ಬಡ್ತಿ ಬಾಕಿ ಎನ್ನುವರು.

ಆದಾಯಗಳು

[ಬದಲಾಯಿಸಿ]

ಈ ಕೆಳಕಂಡ ತೆರಿಗೆಗಳನ್ನು ಆಫ್ ಸೆಟ್ಟಿಂಗ್ ಬೆಲೆಗಳು ಎನ್ನುವರು:

ಆಂತರಿಕ ವಿನಿಮಯ ಶುಲ್ಕ

[ಬದಲಾಯಿಸಿ]

ಕಾರ್ಡ್ ದಾರನು ಪಾವತಿಸುವ ಶುಲ್ಕದೊಂದಿಗೆ, ವರ್ತಕರೂ ಸಹ ಕಾರ್ಡ್ ವಿತರಿಸುವ ಬ್ಯಾಂಕುಗಳು ಮತ್ತು ಕಾರ್ಡ್ ಸಂಸ್ಥೆಗಳಿಗೆ ಆಂತರಿಕ ವಿನಿಮಯ ಶುಲ್ಕ ಪಾವತಿಸಬೇಕಾಗುತ್ತದೆ.[೨೦][೨೧] ಒಬ್ಬ ಮಾದರಿ ಕ್ರೆಡಿಟ್ ಕಾರ್ಡ್ ವಿತರಕನಿಗೆ ಆಂತರಿಕ ವಿನಿಮಯ ತೆರಿಗೆಗಳು ಒಟ್ಟು ತೆರಿಗೆಯ ನಾಲ್ಕನೇ ಒಂದು ಭಾಗದಷ್ಟಿರುತ್ತದೆ.[೨೨]

ಈ ಶುಲ್ಕಗಳು ಪ್ರತಿಯೊಂದು ಮಾರಾಟಕ್ಕೂ ಶೇಕಡಾ ೧ ರಿಂದ ೬ ರಷ್ಟು ಇರುತ್ತದೆ, ಆದರೆ ವರ್ತಕನಿಂದ ವರ್ತಕನಿಗೆ ಇದು ಭಿನ್ನವಾಗುತ್ತದೆ (ಹೆಚ್ಚು ವರ್ತಕರು ಕಡಿಮೆ ಬಡ್ಡಿ ದರಗಳಿಗೆ ಸಡಿಲಿಕೆಯನ್ನು ಮಾಡಬಹುದು[೨೨]), ಆದರೆ ಕಾರ್ಡ್ ನಿಂದ ಕಾರ್ಡ್‌ಗೆ , ವ್ಯಾಪಾರದ ಕಾರ್ಡುಗಳು ಮತ್ತು ಬಹುಮಾನದ ಕಾರ್ಡುಗಳು ವರ್ತಕರಿಗೆ ಸಾಮಾನ್ಯವಾಗಿ ಹೆಚ್ಚು ಬೆಲೆಯನ್ನು ತೆರುವಂತೆ ಮಾಡುತ್ತವೆ. ಒಂದು ನಿರ್ಧಿಷ್ಟ ವ್ಯವಹಾರಕ್ಕೆ ಮಾತ್ರ ಅನ್ವಯಿಸುವ ಆಂತರಿಕ ವಿನಿಮಯ ಶುಲ್ಕವು ಇತರ ಅಂಶಗಳಾದ ವರ್ತಕನ ವಿಧ, ವ್ಯಾಪಾರಿಯ ಒಟ್ಟು ಕಾರ್ಡು ಗಳ ಮಾರಾಟ, ವ್ಯಾಪಾರಿಯ ವ್ಯಾವಹಾರದ ಸರಾಸರಿಯ ಮೊತ್ತ, ಬಹುತಿಕವಾಗಿ ಕಾರ್ಡುಗಳು ಇವೆಯೆ, ವ್ಯವಹಾರಕ್ಕೆ ಬೇಕಾದ ಮಾಹಿತಿಯನ್ನು ಹೇಗೆ ಪಡೆಯಲಾಯಿತು, ಕಾರ್ಡಿನ ವಿಧ, ವ್ಯವಹಾರವನ್ನು ಯಾವಾಗ ಬಗೆಹರಿಸಲಾಯಿತು ಮತ್ತು ಅಧಿಕೃತ ವ್ಯವಹಾರದ ವಿವರ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ,ವರ್ತಕರು ಆಂತರಿಕ ವಿನಿಮಯ ಶುಲ್ಕವನ್ನು ಸರಿದೂಗಿಸಲು ಕ್ರೆಡಿಟ್ ಕಾರ್ಡ್‌‍ಗಳ ಮೇಲೆ ಸರ್ ಚಾರ್ಜ್ ಗಳನ್ನು ಹಾಕುತ್ತಾರೆ , ಇದರ ಮೂಲಕ ತಮ್ಮ ಗ್ರಾಹಕರನ್ನು ನಗದು, ಡೆಬಿಟ್ ಕಾರ್ಡ್ ಅಥವಾ ಚೆಕ್ಕುಗಳನ್ನೂ ಸಹ ಉಪಯೋಗಿಸಲು ಪ್ರೋತ್ಸಾಹಿಸುತ್ತಾರೆ.

ಬಾಕಿ ಇರುವ ಮೊತ್ತಕ್ಕೆ ಬಡ್ಡಿ

[ಬದಲಾಯಿಸಿ]

ಬಡ್ಡಿ ದರಗಳು ಕಾರ್ಡ್ ವಿತರಕನಿಂದ ಮತ್ತೊಬ್ಬ ಕಾರ್ಡ್ ವಿತರಕನಿಗೆ ವ್ಯಾಪಕವಾಗಿ ಭಿನ್ನವಾಗಿರುತ್ತದೆ. ಆರಂಭದ ಅವಧಿಗಳಲ್ಲಿ ಕೆಲವೊಮ್ಮೆ "ಟೀಸರ್ ದರಗಳು ಚಾಲ್ತಿಯಲ್ಲಿದ್ದವು ( ಆರು ತಿಂಗಳುಗಳವರೆಗೆ ಸೊನ್ನೆ ಬಡ್ಡಿ ದರದಲ್ಲಿ) , ಆದರೆ ನಿರಂತರ ದರಗಳು ಶೇಕಡಾ ೪೦ ಕ್ಕೆ ಏರಿದವು. ಯು. ಎಸ್. ನಲ್ಲಿ ಬಡ್ಡಿಗಳ ಮೇಲೆ ಯಾವುದೇ ರೀತಿಯ ಫೆಡರಲ್ ಮಿತಿ ಇರುವುದಿಲ್ಲ ಅಥವಾ ವಿಳಂಬ ಕ್ರೆಡಿಟ್ ಕಾರ್ಡ್ ವಿತರಕರು ಶುಲ್ಕವನ್ನು ತೆರಬೇಕಾಗುತ್ತದೆ; ಬಡ್ಡಿಯ ದರಗಳನ್ನು ರಾಜ್ಯವು ನಿಗಧಿ ಪಡಿಸುತ್ತದೆ, ದಕ್ಷಿಣ ಡಕೋತಾ ದಂತಹ ರಾಜ್ಯಗಳಲ್ಲಿ ಕೆಲವು ಬ್ಯಾಂಕುಗಳು ಮುಂದೆ ಬಂದು ಕ್ರೆಡಿಟ್ ಕಾರ್ಡ್ ವ್ಯವಹಾರವನ್ನು ಮಾಡುವಂತೆ ಅಲ್ಲಿ ನಿಗಧಿತ ಬಡ್ಡಿ ದರಗಳು ಮತ್ತು ಶುಲ್ಕಗಳನ್ನು ರದ್ದು ಪಡಿಸಲಾಗಿದೆ. ಇತರ ರಾಜ್ಯಗಳು ಉದಾಹರಣೆಗೆ ದೆಲಾವರೆ, ಬಹಳ ದುರ್ಬಲವಾದ ಹೆಚ್ಚಿನ ಬಡ್ಡಿಗೆ ಸಾಲಕೊಡುವ ಕಾನೂನುಗಳನ್ನು ಹೊಂದಿದೆ. ಗ್ರಾಹಕನು ತನ್ನ ಬಿಲ್ಲುಗಳನ್ನು ನಿಗಧಿತ ಕಾಲದಲ್ಲಿ ಪಾವತಿಸದೇ ಇದ್ದಲ್ಲಿ ಟೀಸರ್ ದರ ಗಳು ಅನ್ವಯವಾಗುವುದಿಲ್ಲ ಮತ್ತು ಇವು ದಂಡ ಬಡ್ಡಿ ದರಗಳಿಂದ ( ಉದಾಹರಣೆಗೆ ೨೩.೯೯%) ಸ್ಥಾನಾಂತರ ಗೊಳ್ಳುತ್ತವೆ.

ಗ್ರಾಹಕರಿಗೆ ತಗಲುವ ಶುಲ್ಕಗಳು

[ಬದಲಾಯಿಸಿ]

ಪ್ರಮುಖ ಶುಲ್ಕಗಳೆಂದರೆ:

  • ವಿಳಂಬಿತ ಪಾವತಿಗಳು ಅಥವಾ ಅವಧಿ ಮೀರಿದ ಪಾವತಿಗಳು
  • ಕಾರ್ಡ್ ನ ಮಿತಿಯನ್ನು ದಾಟಿ (ಉದ್ದಶ ಪೂರ್ವಕವಾಗಿ ಅಥವಾ ಕೈ ತಪ್ಪಿನಿಂದ ಆದಾಗ) ದಾಗ ಹಾಕುವ ಚಾರ್ಜ್ ಗಳನ್ನು ಮಿತಿಮೀರಿದ ಶುಲ್ಕಗಳು ಎನ್ನುವರು.
  • ಹಿಂದಿರುಗಿಸಿದ ಚೆಕ್ ಶುಲ್ಕಗಳು ಅಥವಾ ಹಣ ಪಾವತಿ ಪ್ರಕ್ರಿಯೆ ಶುಲ್ಕ ( ಉದಾ: ಪೋನ್ ಶುಲ್ಕ)
  • ನಗದು ಮುಂಗಡಗಳು ಮತ್ತು ಅನುಕೂಲಕರ ಚೆಕ್ ಗಳು( ಕೆಲವು ವೇಳೆ ಮೊತ್ತದ ೩% ರಷ್ಟು)
  • ಒಂದು ಹೊರದೇಶದ ಚಲಾವಣೆಯ ವ್ಯವಹಾರದಲ್ಲಿ ( ಮೊತ್ತದ ೩% ರಷ್ಟು)

ಕೆಲವು ಹಣಕಾಸು ಸಂಸ್ಥೆಗಳು ಇದಕ್ಕೆ ಶುಲ್ಕ ವನ್ನು ತೆಗೆದುಕೊಳ್ಳುವುದಿಲ್ಲ.

  • ಸದಸ್ಯತ್ವ ಶುಲ್ಕವು( ವಾರ್ಷಿಕ ಅಥವಾ ಮಾಸಿಕ) ಕೆಲವು ಸಮಯಗಳಲ್ಲಿ ಕ್ರೆಡಿಟ್ ಕಾರ್ಡ್ ಮಿತಿಯ ಒಂದು ಶೇಕಡಾ ಭಾಗವಾಗಿರುತ್ತದೆ.
  • ವಿನಿಮಯ ದರ ಶುಲ್ಕಗಳು ( ಕೆಲವೊಮ್ಮೆ ಇವು ಗ್ರಾಹಕನ ವರದಿಯಲ್ಲಿ ಪ್ರಕಟವಾಗಿರುವುದಿಲ್ಲ).[೨೩]

೨೦೦೯ರ ಲೋನ್ಲಿ ಪ್ಲಾನೆಟ್ ವರದಿಯ ಪ್ರಕಾರ ವಿವಿಧ ಕ್ರೆಡಿಟ್ ಕಾರ್ಡ್ ಗಳಿಗೆ ಅನ್ವಯವಾಗುವ ವಿನಿಮಯ ದರಗಳು ಬಹಳ ಗಣನೀಯವಾಗಿದ್ದು ೧೦% ರಷ್ಟು ಇರುತ್ತವೆ.[೨೪]

ಮಿತಿ ಮೀರಿದ ಶುಲ್ಕಗಳು

[ಬದಲಾಯಿಸಿ]

ತಮ್ಮ ಸಾಲದ ಮಿತಿಯಲ್ಲಿರುವ ಗ್ರಾಹಕರು ಯಾವಾಗಲೂ ಉತ್ತಮ ಕ್ರಮದಲ್ಲಿ ತಮ್ಮ ಖಾತೆಯನ್ನು ಇರಿಸಿಕೊಂಡಿರುತ್ತಾರೆ ಮತ್ತು ಎಲ್ಲಾ ಸಮಯಗಳಲ್ಲೂ ಪ್ರತಿ ತಿಂಗಳೂ ಪಾವತಿಗಳನ್ನು ಸರಿಯಾಗಿ ಮಾಡುತ್ತಾ ತಮ್ಮ ಕಾರ್ಡು ವಿತರಕರಿಂದ ಬಡ್ಡಿಯ ದರಗಳು ಏರದಂತೆ ಕಾಳಜಿ ವಹಿಸುತ್ತಾರೆ. ಎಚ್ಚರಿಕೆಯಿಲ್ಲದಿರುವ ಮತ್ತು ನಿರಂತರವಾಗಿ ತಮ್ಮ ಕಾರ್ಡ್ ಮಿತಿಯನ್ನು ಮೀರುವ ಅಥವಾ ಪಾವತಿಗಳಲ್ಲಿ ವಿಳಂಬವನ್ನು ಮಾಡುವ ಗ್ರಾಹಕರು £೨೫ - £೩೫ [೨೫] ನಷ್ಟು ಬೆಲೆಯನ್ನು ಆಫೀಸ್ ಆಫ್ ಫೇರ್ ಟ್ರೇಡಿಂಗ್[೨೬] ನಿಂದ ಪಾವತಿಸುತ್ತಾರೆ. ಆದ್ದರಿಂದ ಕಾರ್ಡ್ ವಿತರಕರ ಬಹುಪಾಲು ಈ ಶುಲ್ಕವನ್ನು ಸರಿಯಾಗಿ ಅದೇ ಮಟ್ಟಕ್ಕೆ ಕಡಿಮೆ ಮಾಡಿಕೊಳ್ಳುತ್ತಾರೆ

ಯುಎಸ್

[ಬದಲಾಯಿಸಿ]

ಅಧ್ಯಕ್ಷರಾದ ಜಿ. ಡಬ್ಲ್ಯೂ. ಬುಷ್ ರವರ ಅವಧಿಯಲ್ಲಿ ಆರಂಭಗೊಂಡ ೨೦೦೯ರ ಕ್ರೆಡಿಟ್ ಕಾರ್ಡ್ ಸಂರಕ್ಷಣಾ ಕಾಯಿದೆಯು, ಅಧ್ಯಕ್ಷರಾದ ಒಬಾಮ ರವರ ಅವಧಿಯಲ್ಲಿ ಒಂದು ಕಾನೂನು ಆಗಿ ಸಹಿ ಹಾಕಲ್ಪಟ್ಟಿದೆ, ಇದು ಗ್ರಾಹಕರಿಗೆ ಅತ್ಯುನ್ನತ ಮಿತಿ ಮೀರಿದ ಶುಲ್ಕಗಳನ್ನು ನಿಗಧಿ ಪಡಿಸುತ್ತದೆ. ಆದ್ದರಿಂದ ಕೆಲವು ಕಾರ್ಡ್ ವಿತರಕರು ಮಿತಿ ಮೀರಿದ ಶುಲ್ಕಗಳನ್ನು ಪಾವತಿಸುವಂತೆ ಗ್ರಾಹಕರನ್ನು ಕೋರಲು ಪ್ರಾರಂಭಿಸಿದ್ದಾರೆ, ಇದು ಭವಿಷ್ಯದ ವ್ಯವಹಾರಗಳು ರದ್ದಾಗಂತೆ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಇತರ ಕೆಲವು ಕಾರ್ಡ್ ವಿತರಕರು ಮಿತಿಮೀರಿದ ಶುಲ್ಕಗಳನ್ನು ವಸೂಲಿ ಮಾಡುವುದನ್ನು ಬಿಟ್ಟಿದ್ದಾರೆ. ಒಬ್ಬ ಗ್ರಾಹಕನು ಮಿತಿ ಮೀರಿದ ಶುಲ್ಕವನ್ನು ಪಾವತಿಸಬಹುದು ಅಥವಾ ಇಲ್ಲದೇ ಯೂ ಇರಬಹುದು, ಬ್ಯಾಂಕುಗಳಿಗೆ ಮಾತ್ರ ವ್ಯವಹಾರಗಳನ್ನು ಸಾಲದ ಮಿತಿಯನ್ನು ಮೀರುವುದು ಅಥವಾ ಇಲ್ಲದೇ ಇರುವುದರಿಂದ ಅಂತಹವುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಇದೆ. ಆದರೆ, ಅನುಮೋದನೆಗೊಂಡ ಮಿತಿ ಮೀರಿದ ವ್ಯವಹಾರಗಳು ಗ್ರಾಹಕರು ಮಿತಿಮೀರಿದ ಶುಲ್ಕವನ್ನು ಪಾವತಿಸುವುದಕ್ಕೆ ಕಾರಣವಾಗುತ್ತವೆ. ಈ ಶಾಸನವು ಫೆಬ್ರವರಿ ೨೨, ೨೦೧೦ರಿಂದ ಜಾರಿಗೆ ಬಂತು.

ಯುನೈಟೆಡ್ ಕಿಂಗ್‌ಡಮ್

[ಬದಲಾಯಿಸಿ]

ಒಬ್ಬ ಗ್ರಾಹಕನ ತಪ್ಪಿನಿಂದ ಆದ ಲಾಭಗಳಿಗೆ ಯು.ಕೆ. ಕಾನೂನಿನಲ್ಲಿ ಯಾವುದೇ ಅವಕಾಶಗಳನ್ನು ನೀಡಿರುವುದಿಲ್ಲ, ಗುತ್ತಿಗೆಯ ಉಲ್ಲಂಘನೆಗಳು ನಡೆದಾಗ ಮಾತ್ರ ಶುಲ್ಕವನ್ನು ದಂಡದ ರೂಪದಲ್ಲಿ ತೆರಬೇಕಾಗುತ್ತದೆ ಅಥವಾ ೧೯೯೯ರ ಗ್ರಾಹಕರ ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ವೈಯಕ್ತಿಕಚಾಲ್ತಿ ಖಾತೆಗಳ ಕಾಲಕ್ರಮೇಣ ನಿಯಮಗಳು ದುರ್ಬಲ ಗುತ್ತಿಗೆಯಿಂದಾಗಿ ಈ ಶುಲ್ಕಗಳನ್ನು ದಂಡದ ರೂಪದಲ್ಲಿ ಪಡೆಯಲಾಗಿದೆ ಎಂದು ಹೇಳುತ್ತವೆ ಮತ್ತು OFT's ನಿಯಮಗಳ ಪ್ರಕಾರ ಯಾವುದೇ ಮುಂದಿನ ಪರೀಕ್ಷೆಗಳನ್ನು ಇದಕ್ಕೆ ಸಂಬಂಧಿಸಿದಂತೆ ಮಾಡಬಹುದಾಗಿದೆ.

ಹಲವಾರು ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಗಳ ಮೇಲೆ ತಾವು ಪಾವತಿಸಿರುವ ಬೆಲೆಗಳನ್ನು ಕೇಳಿದ್ದಾರೆ, ಇದರೊಂದಿಗೆ ತಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸದಿದ್ದರೆ ತಮಗೆ ಬರಬಹುದಾಗಿದ್ದ ಬಡ್ಡಿಯನ್ನೂ ಸಹ ಬೇಡಿಕೆಯಲ್ಲಿಟ್ಟಿದ್ದಾರೆ. £೧೨ ಗಿಂತ ಪಾವತಿಸಿದ ಹೆಚ್ಚುವರಿ ಶುಲ್ಕಗಳು ಯಶಸ್ವಿಯಾಗುತ್ತವೆ, ಆದರೆ OFT's £೧೨ ಗರಿಷ್ಟ ಮಟ್ಟದ ಶುಲ್ಕಗಳು ಹೆಚ್ಚು ವಿವಾದಕ್ಕೆ ಒಳಗಾಗುತ್ತವೆ.

ತಟಸ್ಥ ಗ್ರಾಹಕನ ವ್ಯವಹಾರ ಕೌಶಲ್ಯಗಳು

[ಬದಲಾಯಿಸಿ]

ಕೆನಡಾ

[ಬದಲಾಯಿಸಿ]

ಕೆನಡಾ ಸರ್ಕಾರವು ಡೇಟಾ ಬೇಸ್ ಶುಲ್ಕ , ಲಕ್ಷಣಗಳು , ಬಡ್ಡಿ ದರಗಳು ಮತ್ತು ಬಹುಮಾನ ಕಾರ್ಯಕ್ರಮಗಳನ್ನು ಕೆನಡಾದ ಸುಮಾರು ೨೦೦ ಕ್ರೆಡಿಟ್ ಕಾರ್ಡ್ ಗಳ ಮೂಲಕ ನಿಯಂತ್ರಿಸುತ್ತದೆ. ಈ ಡೇಟಾ ಬೇಸ್ ನ್ನು ಕ್ರೆಡಿಟ್ ಕಾರ್ಡ್ ಕಂಪನಿಗಳು ನೀಡುವ ತ್ರೈಮಾಸಿಕ ಮಾಹಿತಿಯ ಆಧಾರದ ಮೇಲೆ ಸರಿ ಪಡಿಸುತ್ತವೆ. ಡೇಟಾ ಬೇಸ್ ನಲ್ಲಿರುವ ಮಾಹಿತಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಫೈನಾನ್ಷಿಯಲ್ ಕನ್ಸ್ಯೂಮರ್ ಏಜೆನ್ಸಿ ಆಫ್ ಕೆನಡಾ (FCAC) ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಡೇಟಾ ಬೇಸ್ ನಲ್ಲಿರುವ ಮಾಹಿತಿಯನ್ನು ಎರಡು ನಮೂನೆಗಳಲ್ಲಿ ಪ್ರಕಟಿಸಲಾಗುವುದು. ಇದು PDF ಹೋಲಿಕೆ ಕೋಷ್ಟಕಗಳಲ್ಲಿ ಲಭ್ಯವಿದ್ದು ಕ್ರೆಡಿಟ್ ಕಾರ್ಡ್ ನ ವಿಧಕ್ಕೆ ಅನುಗುಣವಾಗಿ ಮಾಹಿತಿಯನ್ನು ಕೋಷ್ಟಕದಲ್ಲಿ ಹಾಕಲಾಗಿರುತ್ತದೆ, ಇದು ಓದುವವನಿಗೆ ಲಕ್ಷಣಗಳನ್ನು ಹೋಲಿಸಲು ಅನುಕೂಲಕರವಾಗಿರುತ್ತದೆ , ಉದಾಹರಣೆಗೆ ಡೇಟಾ ಬೇಸ್ ನಲ್ಲಿ ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು.

ಡೇಟಾ ಬೇಸ್ FCAC ವೆಬ್ ಸೈಟ್ ನಲ್ಲಿ ಆಂತರಿಕ ಕ್ರಿಯಾತ್ಮಕ ಸಾಧನವನ್ನೂ ಸಹ ನೀಡುತ್ತದೆ.[೨೭] ಆಂತರಿಕ ಕ್ರಿಯಾತ್ಮಕ ಸಾಧನಗಳು ಕ್ರೆಡಿಟ್ ಕಾರ್ಡ್ ಬಳಕೆದಾರರ ವಿವರಗಳನ್ನು ನಿರ್ಮಿಸಲು ಹಲವಾರು ಸಂದರ್ಶನದ ಪ್ರಶ್ನೆಗಳನ್ನು ಉಪಯೋಗಿಸುತ್ತದೆ , ಅವರ ಹವ್ಯಾಸಗಳು, ಅವಶ್ಯಕತೆಗಳು ಮುಂತಾದವುಗಳನ್ನು ತಿಳಿದುಕೊಂಡು ಬೇಡದೇ ಇರುವ ವಿವರವಳನ್ನು ತೆಗೆದು ಹಾಕುತ್ತದೆ, ಇದರಿಂದ ಗ್ರಾಹಕನು ಅತಿ ಕಡಿಮ್ ಕಾರ್ಡುಗಳನ್ನು ಬಳಸಿ ಬಡ್ದಿಯ ದರಗಳು , ಬಹುಮಾನ ಯೋಜನೆಗಳು ಮತ್ತು ಮುಂತಾದ ಲಕ್ಷಣಗಳ ಬಗ್ಗೆ ತಿಳಿಯಲು ಅನುಕೂಲವಾಉತ್ತದೆ.

ವಿವಾದ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್ಸ್‌ಗಳು ಗಣನೀಯವಾಗಿ ಹೆಚ್ಚುತ್ತಿವೆ. ೧೯೯೦ ರ ಕೊನೆಯ ಭಾಗದಿಂದಲೂ, ಕಾನೂನು ತಜ್ಞರು, ಗ್ರಾಹಕ ನ್ಯಾಯವಾದಿ ಗುಂಪುಗಳು, ಕಾಲೇಜು ಅಧಿಕಾರಿಗಳು ಮತ್ತು ವಿದ್ಯಾವಂತರು ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಗಣನೀಯವಾಗಿ ಹೆಚ್ಚುತ್ತಿರುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಬಹುಪಾಲು ಕ್ರೆಡಿಟ್ ಕಾರ್ಡ್ ಕಂಪನಿಗಳು ತಮ್ಮ ಗುರಿಯನ್ನು ಹದಿಹರೆಯದವರ ಮೇಲೆ ಇರಿಸಿರುವುದರಿಂದ ನಿಂದನೆಗೆ ಒಳಗಾಗಿವೆ , ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು, ಇವರಲ್ಲಿ ಅನೇಕರು ಈಗಾಗಲೇ ಕಾಲೇಜು ಟ್ಯೂಷನ್ ಶುಲ್ಕ ಮತ್ತು ಕಾಲೇಜು ಸಾಲಗಳು ಮತ್ತು ತಮ್ಮ ಹಣಕಾಸು ನಿರ್ವಹಣೆಯಲ್ಲಿ ಅಲ್ಪ ಅನುಭವ ಹೊಂದಿರುವವರಾಗಿದ್ದಾರೆ. ಕ್ರೆಡಿಟ್ ಕಾರ್ಡ್‌ಗಳು ಅರೆಕಾಲಿಕ ಮತ್ತು ಪೂರ್ಣ ಕಾಲಿಕ ಅವಧಿಗಳಲ್ಲಿ ಕಾರ್ಯ ನಿರ್ವಹಿಸುವುದರಿಂದ ಅವುಗಳ ಗ್ರೇಡ್ ಗಳ ಮೇಲೆ ನಕಾರಾತ್ಮಕವಾದ ಪರಿಣಾಮಗಳೂ ಬೀರಬಹುದು.[೨೮]

ಇನ್ನೊಂದು ವಿವಾದಾತ್ಮಕ ಕ್ಷೇತ್ರವೆಂದರೆ ಉತ್ತರ ಅಮೇರಿಕಾದ ಹಲವಾರು ಕ್ರೆಡಿಟ್ ಕಾರ್ಡ್ ಗುತ್ತಿಗೆಗಳಲ್ಲಿ ಕಂಡು ಬರುವ ಸಾರ್ವತ್ರಿಕ ವಿಫಲತೆ ಯ ಲಕ್ಷಣ. ಒಬ್ಬ ಕಾರ್ಡುದಾರನು ತನ್ನ ಕಾರ್ಡ್ ವಿತರಕನಿಗೆ ತಡವಾಗಿ ಪಾವತಿಯನ್ನು ಮಾಡುವಾಗ , ಕಾರ್ದ್ ನ ಬಡ್ಡಿ ದರವನ್ನು ಕೆಲವೊಮ್ಮೆ ಗಣನೀಯವಾಗಿ ಹೆಚ್ಚಿಸಬಹುದು. ಸಾರ್ವತ್ರಿಕ ವಿಫಲತೆಯೊಂದಿಗೆ, ಒಬ್ಬ ಗ್ರಾಹಕನ ಇತರ ಕ್ರೆಡಿಟ್ ಕಾರ್ಡುಗಳು, ತಾನು ಪ್ರಸಕ್ತ ಪಾವತಿಗಳನ್ನು ಮಾಡಬಹುದಾದ ಕಾರ್ಡುಗಳ ಮೇಲೆಯೂ ಸಹ ದರಗಳು ಮತ್ತು ಸಾಲದ ಮಿತಿಗಳು ಬದಲಾಗುತ್ತವೆ. ಸಾರ್ವತ್ರಿಕ ವಿಫಲತೆಯು ಸಾಲಗಾರರು ಕಾಲಕಾಲಕ್ಕೆ ಕಾರ್ಡು ದಾರರ ವ್ಯಾಪಾರವನ್ನು ಪರೀಕ್ಷಿಸುವಂತೆ ಮಾಡುತ್ತವೆ, ಇದು ಇತರ ಸಂಸ್ಥೆಗಳು ಕಾರ್ಡ್ ಗಳ ಮಿತಿಯನ್ನು ಕಡಿಮೆ ಮಾಡುವಂತೆ ಅನುವು ಮಾಡಿಕೊಡುತ್ತವೆ ಮತ್ತು ಇನ್ನೊಬ್ಬ ಕಾರ್ಡ್ ವಿತರಕನೊಂದಿಗೆ ವಿಳಂಬ ಮಾಡಿದ ಕಾರ್ಡು ದಾರರ ಬಡ್ಡಿಯ ದರವನ್ನು ಹೆಚ್ಚಿಸುವುದಕ್ಕೆ ಆಸ್ಪದ ಮಾಡಿಕೊಡುತ್ತವೆ. ಕ್ರೆಡಿಟ್ ಕಾರ್ಡ್‌ನ ವಿಳಂಬವು ಎಲ್ಲಾ ಕ್ರೆಡಿಟ್ ಕಾರ್ಡುಗಳ ಕಾರ್ಡು ದಾರರ ಮೇಲೆ ಪರಿಣಾಮವನ್ನು ಬೀರುತ್ತದೆ. ಸಿಟಿ ಬ್ಯಾಂಕ್ ಮಾರ್ಚ್ ೨೦೦೭ ರಲ್ಲಿ ಹಾಗೂ ಚೇಸ್ ನವಂಬರ್೨೦೦೭ ರಲ್ಲಿ ಇದನ್ನು ವೈಯಕ್ತಿಕವಾಗಿ ನಿಲ್ಲಿಸಿತು.[೨೯] ಕ್ರೆಡಿಟ್ ಕಾರ್ಡ್ ಕಂಪನಿಗಳು ತಮ್ಮ ಬಡ್ಡಿಯ ದರಗಳನ್ನು ಪ್ರಸಕ್ತ ಸಾಲದ ಬಡ್ಡಿಯ ದರಗಳನ್ನು ಏರಿಸಿದಾಗ ಉಂಟಾಗುವ ಹೊಂದಾಣಿಕೆಯ ದರ ಆಧಾರದಲ್ಲಿ ಸಾಲಗಳ ಮೇಲಿನ ವಿವಿಧ ಬಡ್ಡಿಯ ದರಗಳನ್ನು ಬದಲಾಯಿಸಬಹುದು. ಆದರೆ, ಈ ಎರಡೂ ಪ್ರಕರಣಗಳಲ್ಲಿ ಇದನ್ನು ಮುಂಚಿತವಾಗಿ ಒಪ್ಪಿಕೊಂಡಿರಬೇಕಾಗುತ್ತದೆ ಮತ್ತು ವ್ಯಾಪಾರವು ಅತ್ಯಂತ ಕಡಿಮೆ ಬಡ್ಡಿ ದರವನ್ನು ಮತ್ತು ಮಾರುಕಟ್ಟೆ ದರಕ್ಕಿಂತ ಇನ್ನೂ ಕಡಿಮೆ ದರವನ್ನು ಅನುವು ಮಾಡಿಕೊಡುವ ಸಾಧ್ಯತೆ ಇರುತ್ತದೆ( ಗ್ರಾಹಕನು ತನ್ನ ಸಾಲದ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ) ಸಾರ್ವತ್ರಿಕ ವಿಫಲಗಳು ವಾಸ್ತವವಾಗಿ ಫೆಡರಲ್ ಕಾನೂನುಗಳಿಂದ ಪ್ರೋತ್ಸಾಹಿಸಲ್ಪಟ್ಟವು , ವಿಶೇಷವಾಗಿ ಹಣ ಚಲಾವಣೆಯ ಕಂಪ್ಟ್ರೋಲರ್ ಕಛೇರಿ (OCC) ಯು ಕಾರ್ಡ್ ದಾರರ ವಿವರಗಳ ಬದಲಾವಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತು.

ಇನ್ನೊಂದು ವಿವಾದಾತ್ಮಕ ಕ್ಷೇತ್ರವೆಂದರೆ ಇಳಿಮುಖ ಬಡ್ಡಿ ಯ ವಿವಾದ ಇಳಿಮುಖ ಬಡ್ದಿಯೆಂದರೆ ಅದರ ಎಷ್ಟು ಮೊತ್ತವನ್ನು ಪಾವತಿಸಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಇಡೀ ಬಿಲ್ಲಿನ ಮೇಲೆ ಹೇರುವ ಬಡೀಇಯಾಗಿದೆ. ಯು.ಎಸ್.ನ ಸೆನೆಟ್ ಸದಸ್ಯರಾದ ಕಾರ್ಲ್ ಕೆವಿನ್ ರಹಸ್ಯ ಶುಲ್ಕ, ಚಕ್ರ ಬಡ್ಡಿ ಮತ್ತು ಗುಪ್ತ ವಾಯಿದೆಗಳಿಂದ ನರಳುತ್ತಿರುವ ಮಿಲಿಯಾಂತರ ಅಮೇರಿಕನ್ನರ ವಿವಾವದವನ್ನು ಎತ್ತಿದರು. ಸೆನೆಟ್ ಸದಸ್ಯರಾದ ಲೆವಿನ್ ರವರ ಅಧ್ಯಕ್ಷತೆಯಲ್ಲಿ ಶಾಶ್ವತ ಸೆನೆಟ್ ಉಪಸಮಿತಿಯಲ್ಲಿ ನಡೆದ ತನಿಖಾ ವಿಚಾರಣೆಯಲ್ಲಿ ಅವರು ಮಾಡಿದ ಪ್ರಮಾಣಗಳನ್ನು ಆಲಿಸಲಾಯಿತು, ಇದರಲ್ಲಿ ಅವರು ಹೇಳಿರುವಂತೆ ತಾವು ಕ್ರೆಡಿಟ್ ಕಾರ್ಡ್ ಕಂಪನಿಗಳ ಮೇಲೆ ಗಮನವಿಡುವ ಉದ್ದೇಶವನ್ನು ಹೊಂದಿದ್ದು ಕೈಗಾರಿಕೆಗಳನ್ನು ಭೇದಿಸಲು ಶಾಸನದ ಕ್ರಮಗಳನ್ನು ಕೈಕೊಳ್ಳುವುದು ಅಗತ್ಯ ಎಂದು ಹೇಳಿದರು.[೩೦] ೨೦೦೯ರಲ್ಲಿ, ಲೆವಿನ್ ಎಬ್ಬಿಸಿದ್ದ ಹಲವಾರು ವಿವಾದಗಳನ್ನು ಸಂರಕ್ಷಿಸಲು C.A.R.D. ಕಾಯಿದೆಯನ್ನು ಒಂದು ಕಾನೂನಾಗಿ ಪರಿವರ್ತಿಸಲು ಸಹಿ ಹಾಕಲಾಯಿತು

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕೆಲವು ಕಾಯಿದೆಗಳನ್ನು ಜಾರಿಗೆ ತರಲು ಕಾಂಗ್ರೇಸ್ ಗೆ ಕರೆಕೊಟ್ಟರು, ಇದರ ಮೂಲಕ ದರಗಳ ಬೆಲೆ ಏರಿಕೆಯನ್ನು ಸ್ಪಷ್ಟವಾಗಿ ತೆರೆದಿಡುವುದು , ಬಾಕಿ ಹಣ ಪಾವತಿಯ ಪಾರದರ್ಶಕತೆ ಮತ್ತು ಸಾರ್ವತ್ರಿಕ ವಿಫಲತೆ ಯನ್ನು ಕಾನೂನು ಬಾಹಿರವಾಗಿ ಮಾಡುವುದು ಇದರ ಉದ್ದೇಶವಾಗಿತ್ತು. ಮಾರ್ಚ್ ೧, ೨೦೦೭ ರ ಒಂದು ಕಾಂಗ್ರೇಸ್ ನ ವಿಚಾರಣೆಯಲ್ಲಿ , ಸಿಟಿ ಬ್ಯಾಂಕ್ ತಾನು ಇದನ್ನು ಇನ್ನು ಮುಂದೆ ನಡೆಸದೇ ತಕ್ಷಣವೇ ಜಾರಿಗೆ ತರುವುದಾಗಿ ಘೋಷಿಸಿತು. ಇಂತಹ ಕಾಯಿದೆಯ ವಿರೋಧಿಗಳು ಗ್ರಾಹಕರು ಸಾಲಕೊಡುವವರ ವಾಯಿದೆಗಳ ಸಡಿಲಿಕೆ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಸ್ವಯಂ ಜವಾಬ್ದಾರಿಯನ್ನು ಹೊತ್ತುಕೊಂಡು ಹೆಚ್ಚು ಕ್ರಿಯಾಶೀಲರಾಗಲೇ ಬೇಕು ಎಂದು ವಾದಿಸಿದರು. ರಾಷ್ಟ್ರದ ಮಂಚೂಣಿಯಲ್ಲಿರುವ ಕೆಲವು ಪ್ರಭಾವಿತ ಕ್ರೆಡಿಟ್ ಕಾರ್ಡ್ ವಿತರಕರು, ಅವರಲ್ಲಿ ರಾಜಕೀಯ ಸಂಘಟನೆಗಳಿಗೆ ಕೊಡುಗೆಯನ್ನು ನೀಡುವಂತಹ ಐವತ್ತು ವಿತರಕರು ಯಶಸ್ವಿಯಾಗಿ ಇದನ್ನು ವಿರೋಧಿಸಿದರು.

ಗುಪ್ತ ಶುಲ್ಕಗಳು

[ಬದಲಾಯಿಸಿ]

ಯುನೈಟೆಡ್ ಸಾಮ್ರಾಜ್ಯದಲ್ಲಿ, ವರ್ತಕರು ದಿ ಕ್ರೆಡಿಟ್ ಕಾರ್ಡ್ ( ಬೆಲೆ ವಿವೇಚನೆ) ಆದೇಶ ೧೯೯೦[೩೧] ಮೂಲಕ ವಿವಿಧ ಪಾವತಿ ವಿಧಾನದ ಮೂಲಕ ಗ್ರಾಹಕರ ಮೇಲೆ ವಿವಿಧ ಬೆಲೆಗಳನ್ನು ಏರುವ ಹಕ್ಕನ್ನು ಪಡೆದುಕೊಂಡರು. ೨೦೦೭ರಂತೆ, ಯುನೈಟೆಡ್ ಕಿಂಗ್ ಡಮ್ UK ಪಾವತಿಗಳ ಆಡಳಿತ ಲಿಮಿಟೆಡ್ ಪ್ರಕಾರ ಪ್ರತಿ ಗ್ರಾಹಕನಿಗೆ ೨.೪ ಕ್ರೆಡಿಟ್ ಕಾರ್ಡ್ ಗಳೊಂದಿಗೆ ಪ್ರಪಂಚದ ಅತಿ ಹೆಚ್ಚು ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಇದೂ ಒಂದಾಗಿದೆ.[೩೨]

೧೯೮೪ ರವರೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಫೆಡರಲ್ ಕಾನೂನು ಕಾರ್ಡ್ ವ್ಯವಹಾರಗಳ ಮೇಲಿನ ಸರ್ ಚಾರ್ಜನ್ನು ನಿಷೇಧಿಸಿತ್ತು. ಫೆಡರಲ್ ಟ್ರುತ್ ಲೆಂಡಿಂಗ್ ಆಕ್ಟ್ ಆ ವರ್ಷದಲ್ಲಿ ಮುಗಿದ ಸರ್ ಚಾರ್ಜುಗಳ ನಿಷೇಧಕ್ಕೆ ಅವಕಾಶ ಕಲ್ಪಿಸಿಕೊಟ್ಟರೂ , ಕ್ಯಾಲಿ ಫೋರ್ನಿಯಾ, ಕೊಲೊರಾಡೊ, ಕನೆಕ್ಟಿ ಕಟ್, ಫ್ಲೋರಿಡಾ,ಕಾನಾಸ್, ಮಸ್ಸಾಚುಸೆಟ್ಸ್, ಮೈನ್, ನ್ಯೂಯಾರ್ಕ್, ಓಕ್ಲಾಹೋಮಾ ಮತ್ತು ಟೆಕ್ಸಾಸ್ ನಂತಹ ರಾಷ್ಟ್ರಗಳು ಸರ್ ಚಾರ್ಜ್ ಗಳಿಗೆ ವಿರೋಧವಾದ ಕಾನೂನುಗಳನ್ನು ಹೊಂದಿವೆ ಮತ್ತು ಹಲವಾರು ರಾಷ್ಟ್ರಗಳು ಇದನ್ನು ಮುಂದುವರೆಸುವ ಕಾನೂನುಗಳನ್ನು ಜಾರಿಗೊಳಿಸಿವೆ. ೨೦೦೬ ರಂತೆ ಅಮೇರಿಕಾ ಸಂಯುಕ್ತ ಸಂಸ್ಥಾನವು ೯೮೪ ಮಿಲಿಯನ್ ಬ್ಯಾಂಕ್ ವಿಸಾ ಮತ್ತು ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ಗಳನ್ನು ಹೆಚ್ಚು ಕಡಿಮೆ ೨೨೦ ಮಿಲಿಯನ್ ವಯಸ್ಕರಿಗೆ ವಿತರಿಸುವುದರೊಂದಿಗೆ ಪ್ರಾಯಶಃ ಪ್ರಪಂಚದ ಕ್ರೆಡಿಟ್ ಕಾರ್ಡ್ ತಲಾ ಅನುಪಾತದಲ್ಲಿ ಮಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.[೩೩] ೨೦೦೩[೩೪] ರವರೆಗೆ US ನ ಕ್ರೆಡಿಟ್ ಕಾರ್ಡ್ ನ ತಲಾ ಅನುಪಾತ ಹೆಚ್ಚು ಕಡಿಮೆ ೪:೧ ಇದ್ದು , ೨೦೦೬ ರಲ್ಲಿ ೫:೧ ರಷ್ಟು ಹೆಚ್ಚಾಗಿತ್ತು.[೩೫]

ಕ್ರೆಡಿಟ್ ಕಾರ್ಡ್‌ ಸಂಖ್ಯೀಕರಣ

[ಬದಲಾಯಿಸಿ]

ಕ್ರೆಡಿಟ್ ಕಾರ್ಡ್‌ಗಳ ಮೇಲೆ ಕಂಡು ಬರುವ ಸಂಖ್ಯೆಗಳು ಒಂದು ಪ್ರಮಾಣದ ಆಂತರಿಕ ರಚನೆಯನ್ನು ಹೊಂದಿರುತ್ತವೆ ಮತ್ತು ಒಂದು ಸಾಮಾನ್ಯ ರೂಪುರೇಖೆಯ ಸಂಖ್ಯೆಯನ್ನು ಹಂಚಿಕೊಳ್ಳುತ್ತವೆ.

ಕಾರ್ಡ್ ಸಂಖ್ಯೆಯ ಬ್ಯಾಂಕ್ ಗುರುತು ಸಂಖ್ಯೆ, ಸೂಚಿಸುವ ಪೂರ್ವಪದ ವು ಒಂದು ಸಂಖ್ಯೆಯ ಅನುಕ್ರಮಣಿಕೆಯಲ್ಲಿರುವ ಆರಂಭದ ಅಂಕಿಯಾಗಿದ್ದು ಕ್ರೆಡಿಟ್ ಕಾರ್ಡ್ ಸಂಖ್ಯೆಯು ಯಾವ ಬ್ಯಾಂಕಿಗೆ ಸೇರಿದೆ ಎಂಬುದನ್ನು ನಿರ್ಧರಿಸುತ್ತದೆ. ಇದು ಮಾಸ್ಟರ್ ಕಾರ್ಡ್ ಮತ್ತು ವಿಸಾ ಕಾರ್ಡ್‌ನ ಮೊದಲ ಆರು ಅಂಕಿಗಳಾಗಿವೆ. ಮುಂದಿನ ಒಂಬತ್ತು ಅಂಕಿಗಳು ವೈಯಕ್ತಿಕ ಖಾತೆ ಸಂಖ್ಯೆಯಾಗಿದ್ದು , ಅಂತಿಮ ಅಂಕಿಯು ಒಂದು ಸಮರ್ಥನೀಯ ಚೆಕ್ ಕೋಡ್ ಆಗಿರುತ್ತದೆ.

ಮುಖ್ಯ ಕ್ರೆಡಿಟ್ ಕಾರ್ಡ್ ಸಂಖ್ಯೆಯೊಂದಿಗೆ, ಕ್ರೆಡಿಟ್ ಕಾರ್ಡ್ ಗಳು ವಿತರಣೆ ಹಾಗೂ ಮುಕ್ತಾಯದ ದಿನಾಂಕಗಳನ್ನೂ ( ಹತ್ತಿರದ ತಿಂಗಳಿಗೆ ನೀಡಲಾಗಿರುತ್ತದೆ) ಹಾಗೂ ವಿತರಣಾ ಸಂಖ್ಯೆಗಳು ಮತ್ತು ಸುರಕ್ಷಾ ಕೋಡ್ ಗಳಂತಹ ಹೆಚ್ಚುವರಿ ಕೋಡ್ ಗಳನ್ನು ನೀಡಲಾಗಿರುತ್ತದೆ. ಎಲ್ಲಾ ಕ್ರೆಡಿಟ್ ಕಾರ್ಡುಗಳೂ ಅದೇ ಹೆಚ್ಚುವರಿ ಕೋಡ್ ಗಳನ್ನು ಅಥವಾ ಅದೇ ಅಂಕಿಗಳನ್ನು ಬಳಸುವುದಿಲ್ಲ.

ಎ‌ಟಿಎಮ್‌ಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳು

[ಬದಲಾಯಿಸಿ]

ಹಲವಾರು ಕ್ರೆಡಿಟ್ ಕಾರ್ಡ್ ಗಳನ್ನು ಕಾರ್ಡ್ ನ ಮಿತಿ ದಾಟಿದಾಗ ಹಣವನ್ನು ಸೆಳೆಯಲು ಎಟಿಎಮ್ ನ್ನು ಬಳಸಿಕೊಳ್ಳುತ್ತವೆ,ಆದರೆ ಅನೇಕ ಕಾರ್ಡ್ ವಿತರಕರು ಖರೀದಿಗಳನ್ನು ಮಾಡುವುದಕ್ಕಿಂತ ಮುಂಚೆ ನಗದು ಮುಂಗಡಗಳ ಮೇಲೆ ಬಡ್ಡಿಯನ್ನು ಹಾಕುತ್ತಾರೆ. ನಗದು ಮುಂಗಡಗಳ ಮೇಲಿನ ಬಡ್ಡಿಯನ್ನು ಸಾಮಾನ್ಯವಾಗಿ ಮಾಸಿಕ ಬಿಲ್ಲಿನ ದಿನಾಂಕಕ್ಕಿಂತ ಯಾವ ದಿನಾಂಕದಂದು ನಗದನ್ನು ಸೆಳೆಯಲಾಗಿದೆಯೋ ಅಲ್ಲಿಂದ ಹೇರಲಾಗುತ್ತದೆ. ಹಲವಾರು ಕಾರ್ಡ್ ವಿತರಕರು ಎಟಿಎಮ್ ತಮ್ಮ ಕಾರ್ಡ್ ವಿತರಣಾ ಬ್ಯಾಂಕುಗಳಿಗಳದ್ದೇ ಆಗಿದ್ದರೂ ಸಹ ಕಮಿಶನ್ ನ್ನು ಪಡೆಯುತ್ತಾರೆ. ವ್ಯಾಪಾರಿಗಳು ಕ್ರೆಡಿಟ್ ಕಾರ್ಡ್‌ನ ವ್ಯವಹಾರಗಳ ಆಧಾರದ ಮೇಲೆ ನಗದು ಮರುಪಾವತಿಗೆ ಅವಕಾಶ ಕೊಡುತ್ತಾರೆ ಏಕೆಂದರೆ ತಮ್ಮ ಬಾಂಕು ಅಥವಾ ವ್ಯಾಪಾರಿ ಸೇವೆಗಳ ವಿತರಕರಿಗೆ ನಗದು ಮೊತ್ತಕ್ಕಾಗಿ ಹೆಚ್ಚುವರಿ ಕಮಿಷನ್ ನ್ನು ಪಾವತಿಸುತ್ತಾರೆ.

ಹಲವಾರು ಕ್ರೆಡಿಟ್ ಕಾರ್ಡ್ ಕಂಪನಿಗಳೂ ಸಹ, ಒಂದು ಕಾರ್ಡಿ ಗೆ ಪಾವತಿಗಳನ್ನು ಹಾಕುವಾಗ, ಒಂದು ಬಿಲ್ಲಿನ ಚಕ್ರದ ಕೊನೆಯಲ್ಲಿ ಇದನ್ನು ಮಾಡುತ್ತವೆ ಮತ್ತು ಇಂತಹ ಪಾವತಿಗಳಿಗೆ ನಗದು ಮುಂಗಡಗಳಿಗಿಂತ ಮುಂಚೆಯೇ ಅರ್ಜಿ ಹಾಕುತ್ತವೆ. ಈ ಕಾರಣದಿಂದಾಗಿ , ಹಲವಾರು ಗ್ರಾಹಕರು ಅತಿ ದೊಡ್ಡ ಪ್ರಮಾಣದಲ್ಲಿ ನಗದು ಬಾಕಿಯನ್ನು ಹೊಂದಿರುತ್ತಾರೆ, ಇದಕ್ಕೆ ಯಾವುದೇ ಹೆಚ್ಚುವರಿ ಅವಧಿ ಇರುವುದಿಲ್ಲ ಮತ್ತು ಖರೀದಿಯ ದರಕ್ಕಿಂತ ಬಡ್ಡಿಯ ದರ ಹೆಚ್ಚಾಗಿರುತ್ತದೆ, ಆದ್ದರಿಂದ ಅವರು ಪ್ರತಿ ತಿಂಗಳು ಅವರ ಬಾಕಿಯ ಮೊತ್ತವನ್ನು ಪಾವತಿಸಿದರೂ ಇದು ಈ ಬಾಕಿಗಳನ್ನು ಹಲವಾರು ವರ್ಷಗಳವರೆಗೆ ಮುಂದುವರೆಸಿಕೊಂಡು ಹೋಗುತ್ತದೆ.

ಉದ್ಯಮಿಗಳಿಗೆ ಹಣಕಾಸು ಸಹಾಯಕವಾಗಿ ಕ್ರೆಡಿಟ್ ಕಾ‌ರ್ಡ್‌ಗಳ ಪಾತ್ರ

[ಬದಲಾಯಿಸಿ]

ದೊಡ್ದ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ಆರಂಭಿಸಲು ಹೂಡಬೇಕಾದ ಬಂಡವಾಳಕ್ಕೆ ಹೆಚ್ಚು ಅನುಕೂಲಕರವಾದ ಹಣಕಾಸು ವ್ಯವಸ್ಥೆಯ ಲಭ್ಯತೆ ಇಲ್ಲದಿರುವಾಗ ಕ್ರೆಡಿಟ್ ಕಾರ್ಡುಗಳ ಬಳಕೆ ಅವರಿಗೆ ಒಂದು ತೊಂದರೆಯ ಮಾರ್ಗವಾಗಿ ಆಯ್ಕೆಯಾಗುತ್ತದೆ. ಸಿಸ್ಕೋ ಸಿಸ್ಟಮ್ ಗಳನ್ನು ಪ್ರಾರಂಭಿಸಲು ಲೆನ್ ಬೊಸಾಕ್ ಮತ್ತು ಸ್ಯಾಂಡಿ ಲರ್ನರ್ ತಮ್ಮ ವೈಯಕ್ತಿಕ ಕ್ರೆಡಿಟ್ ಕಾರ್ಡುಗಳನ್ನೇ[೩೬] ಬಳಸಬೇಕಾಯಿತು ಎಂದು ವ್ಯಾಪಕವಾಗಿ ವರದಿ ಮಾಡಲಾಯಿತು. ಲ್ಯಾರಿ ಪೇಜ್ ಹಾಗೂ ಸೆರ್ಜಿ ಬ್ರಿನ್'ರವರು ಗೂಗಲ್ ನ್ನು ಪ್ರಾರಂಭಿಸಲು ಬೇಕಾದ ಅಗತ್ಯ ಕಂಫ್ಯೂಟರ್ ಗಳನ್ನು ಹಾಗೂ ಕಛೇರಿ ಸಲಕರಣೆಗಳನ್ನು ವಿಶೇಷವಾಗಿ ಹಾರ್ಡ್ ಡಿಸ್ಕ್ ಗಳ ಟೆರಾ ಬೈಟ್ ನ್ನು ಕೊಂಡುಕೊಳ್ಳಲು ಕ್ರೆಡಿಟ್ ಕಾರ್ಡ್ ಗಳ ಮೂಲಕ ಹಣಸಹಾಯ ಪಡೆದರು ಎಂಬ ವದಂತಿ ಇತ್ತು.[೩೭] ಇದೇ ರೀತಿಯಲ್ಲಿ, ನಿರ್ಮಾಪಕರಾದ ರಾಬರ್ಟ್ ಟೌನ್ ಸೆಂಡ್ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಹಾಲಿ ವುಡ್ ಶಫಲ್ ಚಿತ್ರದ ಒಂದು ಭಾಗಕ್ಕೆ ಹಣ ಸಹಾಯ ಮಾಡಿದರು..[೩೮] ನಿರ್ದೇಶಕರಾದ ಕೆವಿನ್ ಸ್ಮಿತ್ ಹಲವಾರು ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಕ್ಲೆರ್ಕ್ಸ್ ಚಿತ್ರಕ್ಕೆ ಹಣ ಸಂಗ್ರಹಣ ಮಾಡಿದರು. ರಿಚರ್ಡ್ ಹ್ಯಾಚ್ ಎಂಬ ನಟರು ತಮ್ಮ ಪ್ರೊಡಕ್ಷನ್Battlestar Galactica: The Second Coming ಕ್ಕೆ ಕ್ರೆಡಿಟ್ ಕಾರ್ಡ್ ಗಳ ಮುಖಾಂತರ ಭಾಗಶಃ ಹಣಸಹಾಯ ಪಡೆದುಕೊಂಡರು. ಫೇಮ್ಡ್ ಹೆಡ್ಜ್ ಫಂಡ್ ನ ವ್ಯವಸ್ಥಾಪಕರಾದ ಬ್ರೂಸ್ ಕೌವ್ನರ್ ಹಣಕಾಸು ಮಾರುಕಟ್ಟೆಯಲ್ಲಿ ತಮ್ಮ ವೃತ್ತಿ ಜೀವನವನ್ನು ( ಮತ್ತು ನಂತರ ಅವರ ಉದ್ಯಮವಾದ ಕ್ಯಾಕ್ಸ್ ಟನ್ ಅಸೋಸಿಯೇಟ್ಸ್) ತಮ್ಮ ಕ್ರೆಡಿಟ್ ಕಾರ್ಡ್ ಗಳಲ್ಲಿ ಸಾಲ ಪಡೆಯುವುದರ ಮೂಲಕ ಪ್ರಾರಂಭಿಸಿದರು. UK ನ ಉದ್ಯಮಿಯಾದ ಜೇಮ್ಸ್ ಕ್ಯಾನ್ ( ಡ್ರಾಗನ್ಸ್ ಡೆನ್ ನಲ್ಲಿ ನೋಡುವಂತೆ) ತಮ್ಮ ಪ್ರಪ್ರಥಮ ಹಣಕಾಸು ವ್ಯಾಪಾರವನ್ನು ಹಲವಾರು ಕ್ರೆಡಿಟ್ ಕಾರ್ಡ್ ಗಳ ಸಹಾಯದಿಂದ ಆರಂಭಿಸಿದರು.

ಇವನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sullivan, arthur (2003). Economics: Principles in action. Upper Saddle River, New Jersey 07458: Prentice Hall. p. 261. ISBN 0-13-063085-3. Archived from the original on 2016-12-20. Retrieved 2021-02-24. {{cite book}}: Unknown parameter |coauthors= ignored (|author= suggested) (help)CS1 maint: location (link)
  2. (ಅಧ್ಯಾಯಗಳು ೯, ೧೦, ೧೧, ೧೩, ೨೫ ಹಾಗೂ ೨೬) ಮತ್ತು ೩ ಬಾರಿ (ಅಧ್ಯಾಯಗಳು ೪, ೮ ಹಾಗೂ ೧೯) , ಸಮಾನತೆ
  3. "ಕ್ರೆಡಿಟ್ ಕಾರ್ಡ್ ಇಂಪ್ರಿಂಟರ್". Archived from the original on 2011-07-25. Retrieved 2011-03-27.
  4. ಪೌಲ್ ಓ’ನೀಲ್, “ಎ ಲಿಟಲ್ ಗಿಫ್ಟ್ ಫ್ರಂ ಯುವರ್ ಫ್ರೆಂಡ್ಲಿ ಬ್ಯಾಂಕರ್”, ಲೈಫ್, ಏಪ್ರಿಲ್ ೨೭, ೧೯೭೦
  5. "ಆರ್ಕೈವ್ ನಕಲು". Archived from the original on 2011-04-05. Retrieved 2011-03-27.
  6. "ಆರ್ಕೈವ್ ನಕಲು". Archived from the original on 2011-07-11. Retrieved 2011-03-27.
  7. Martin, Andrew (January ೪, ೨೦೧೦). "How Visa, Using Card Fees, Dominates a Market". New York Times. Retrieved ೨೦೧೦-೦೧-೦೬. The fees, roughly 1 to 3 percent of each purchase, are forwarded to the cardholder's bank to cover costs and promote the issuance of more Visa cards. {{cite news}}: Check date values in: |accessdate= and |date= (help); Cite has empty unknown parameter: |coauthors= (help)
  8. ೮.೦ ೮.೧ ೮.೨ Dickler, Jessica (2008-07-31). "Hidden credit card fees are costing you". CNN. Retrieved 2010-04-30.
  9. http://blog.visa.com/2010/09/02/minimizing-confusion-over-minimums/
  10. "ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕನಿಗೆ ವಿಧಿಸಲಾಗುವ ಪೂರಕ ಶುಲ್ಕಕ್ಕೆ ಉದಾಹರಣೆ". Archived from the original on 2011-07-08. Retrieved 2011-03-27.
  11. ೧೧.೦ ೧೧.೧ ೧೧.೨ "Credit Cards and You - About Pre-paid Cards". Financial Consumer Agency of Canada. Archived from the original on 2007-03-07. Retrieved ೨೦೦೮-೦೧-೦೯. {{cite web}}: Check date values in: |accessdate= (help) ಡಾಕ್ಯುಮೆಂಟ್ ಡಾಕ್ಯುಮೆಂಟ್ "Pre-paid Cards" (PDF). Financial Consumer Agency of Canada. Archived from the original (pdf) on ೨೦೦೮-೦೨-೨೯. Retrieved ೨೦೦೮-೦೧-೦೯. {{cite web}}: Check date values in: |accessdate= and |archivedate= (help)
  12. ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಸ್
  13. "ಗುರುತಿನ ಚೀಟಿ ಅಥವಾ ವಯಸ್ಸಿನ ಮಿತಿಯಿಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಖರೀದಿಸುವುದು? Archived 2011-11-25 ವೇಬ್ಯಾಕ್ ಮೆಷಿನ್ ನಲ್ಲಿ.… ಏನು ತಪ್ಪಾಗಬಹುದು?" Archived 2011-11-25 ವೇಬ್ಯಾಕ್ ಮೆಷಿನ್ ನಲ್ಲಿ.. NetworkWorld.com Community
  14. ಪ್ರಿಪೇಡ್ ಕ್ರೆಡಿಟ್ ಕಾರ್ಡ್ ಗೈಡ್ ಅನ್ನು ಎಫ್‌ಸಿಎಸಿ ಬಿಡುಗಡೆ ಮಾಡಿದೆ
  15. ಪ್ರಿ-ಪೇಯ್ಡ್ ಕಾರ್ಡ್ಸ್
  16. ಥ್ರೈವ್ ಬಿಸಿನೆಸ್ ಸಲ್ಯೂಶನ್ಸ್, http://www.thrivesolution.com/index.php?option=com_content&task=view&id=28&Itemid=33
  17. "Secure POS Vendor Alliance is launched by Hypercom, Ingenico and VeriFone". ECommerce Journal. 2009. {{cite journal}}: Cite journal requires |journal= (help)
  18. "ಕ್ರೆಡಿಟ್ ಕಾರ್ಡ್ ಇಶ್ಯೂಯರ್ ಫ್ರಾಡ್ ಮ್ಯಾನೆಜ್ಮೆಂಟ್, ರಿಪೋರ್ಟ್ ಹೈಲೈಟ್ಸ್, ಡಿಸೆಂಬರ್, 2008" (PDF). Archived from the original (PDF) on 2009-12-29. Retrieved 2017-10-02.
  19. ಪ್ಲ್ಯಾಸ್ಟಿಕ್ ಫ್ರಾಡ್ ಲಾಸ್ ಆನ್ ಯುಕೆ-ಇಶ್ಯೂಡ್ ಕಾರ್ಡ್ಸ್ 2004/2005 Archived 2006-06-16 ವೇಬ್ಯಾಕ್ ಮೆಷಿನ್ ನಲ್ಲಿ.. Cardwatch.org.uk. ಈ ತಾಣವನ್ನು ೭ ಜುಲೈ ೨೦೦೬ರಲ್ಲಿ ಫುನಃ ಪರಿಷ್ಕರಿಸಲಾಯಿತು
  20. ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಛೇಂಜ್ ಕಮಿಷನ್ FORM S-1, ನವೆಂಬರ್ ೯, ೨೦೦೭.
  21. ಡೆಬಿಟ್ ಕಾರ್ಡ್ಸ್ ಕ್ಯಾಶ್ ಇನ್ ಆನ್ ರಿವಾರ್ಡ್ಸ್ ರಿಚಸ್ ತಂಪಾ ಟ್ರೈಬ್ಯೂನ್ , ಫೆಬ್ರವರಿ. ೧೫, ೨೦೦೮.
  22. ೨೨.೦ ೨೨.೧ ದಿ ಇಂಟರ್ಚಾರ್ಜ್ ಡಿಬೇಟ್: ಇಶ್ಯೂಸ್ ಅಂಡ್ ಎಕನಾಮಿಕ್ಸ್ Archived 2008-03-22 ವೇಬ್ಯಾಕ್ ಮೆಷಿನ್ ನಲ್ಲಿ. ಜೇಮ್ಸ್ ಲ್ಯಾನ್, ಜನವರಿ. ೧೯, ೨೦೦೬
  23. Gracia, Mike (2008-05-09). "credit cards abroad". creditchoices.co.uk. Archived from the original on 2008-06-12. Retrieved 2008-05-09.
  24. "ಕಂಪ್ಯಾರಿಸನ್ ಆಫ್ ಎಕ್ಸ್‌ಚೇಂಜ್ ರೇಟ್ಸ್ ಯೂಸಿಂಗ್ ವೀಸಾ ಅಂಡ್ ಡೈನರ್ಸ್ ಕ್ಲಬ್ ಕಾರ್ಡ್ಸ್ ಇನ್ ಬಾಲಿ". Archived from the original on 2011-07-11. Retrieved 2011-03-27.
  25. ದಿಸ್ ಈಸ್ ಮನಿ ಕಾರ್ಡ್ ಚಾರ್ಜಸ್ ಟು ಬಿ ಸ್ಲ್ಯಾಶ್ಡ್ - ಮಾರ್ಚ್ 2006
  26. "ಒಎಫ್‌ಟಿ ಕರೆಂಟ್ ಕ್ರೆಡಿಟ್ ಕಾರ್ಡ್ ಡಿಫಾಲ್ಡ್ ಚಾರ್ಜಸ್ ಅನ್‌ಫೇರ್ - ಏಪ್ರಿಲ್ 2006". Archived from the original on 2010-03-27. Retrieved 2011-03-27.
  27. ಎಫ್‌ಸಿಎಸಿ - ಗ್ರಾಹಕರಿಗಾಗಿ - ಪರಿಣಾಮಕಾರಿ ಟೂಲ್‌ಗಳು - ಕ್ರೆಡಿಟ್ ಕಾರ್ಡುಗಳು ಮತ್ತು ನೀವು
  28. ನ್ಯಾಷನಲ್ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಅಂಡ್ ಹೈಯರ್ ಎಜುಕೇಶನ್
  29. CNN http://money.cnn.com/news/newsfeeds/articles/djf500/200712032215DOWJONESDJONLINE000777_FORTUNE5.htm. {{cite news}}: Missing or empty |title= (help)
  30. ಕ್ರೆಡಿಟ್ ಕಾರ್ಡ್ ಎಕ್ಸಿಕ್ಯುಟಿವ್ಸ್ ಟಫ್ ಔಟ್ ಸೆನೇಟ್ ಹಿಯರಿಂಗ್
  31. ಸ್ಟ್ಯಾಚುಟರಿ ಇನ್‌ಸ್ಟ್ರುಮೆಂಟ್ 1990 ಸಂಖ್ಯೆ. 2159: ದಿ ಕ್ರೆಡಿಟ್ ಕಾರ್ಡ್ಸ್ (ಪ್ರೈಸ್ ಡಿಸ್ಕ್ರಿಮಿನೇಶನ್) ಆರ್ಡರ್ 1990
  32. ""ಪ್ಲ್ಯಾಸ್ಟಿಕ್ ಕಾರ್ಡ್ಸ್ ಇನ್ ದಿ ಯುಕೆ ಅಂಡ್ ಹೌ ವಿ ಯೂಸ್ಡ್ ದೆಮ್ ಇನ್ 2007"". Archived from the original on 2008-12-25. Retrieved 2011-03-27.
  33. "ಯುಎಸ್ ಸೆನ್ಸಸ್: 2005–2007 ಅಮೇರಿಕನ್ ಕಮ್ಯುನಿಟಿ ಸರ್ವೇ 3-ವರ್ಷಗಳ ಅಂದಾಜುಗಳು". Archived from the original on 2020-02-12. Retrieved 2021-08-09.
  34. "ಎಕ್ಸ್‌ಪೆರಿಯನ್ಸ್ ನ್ಯಾಷನಲ್ ಸ್ಕೋರ್ ಇಂಡೆಕ್ಸ್". Archived from the original on 2011-07-14. Retrieved 2011-03-27.
  35. "ಫಾರಿನ್ ಪಾಲಿಸಿ: ಪ್ರೈಮ್ ನಂಬರ್ಸ್: ದಿ ಪ್ಲ್ಯಾಸ್ಟಿಕ್ ರೆವೊಲ್ಯೂಶನ್". Archived from the original on 2009-01-15. Retrieved 2011-03-27.
  36. "ಎ ಸ್ಟಾರ್ಟ್-ಅಪ್ಸ್ ಟ್ರೂ ಟೇಲ್". Archived from the original on 2019-10-10. Retrieved 2011-03-27.
  37. ಗೂಗಲ್ ಅಬೌಟ್ ಪೇಜ್ ಅಂಡರ್ 1998 ೩೦ ಮೇ ೨೦೦೭ರಲ್ಲಿ ಪುನಃ ಪರಿಷ್ಕರಿಸಲಾಯಿತು.[not in citation given]
  38. ಹಾಲಿವುಡ್ ಶಫಲ್ ಟ್ರಿವಿಯಾ ಅಟ್ ಐಎಮ್‌ಡಿಬಿ ೭ ಜುಲೈ ೨೦೦೬ ರಲ್ಲಿ ಪುನಃ ಪರಿಷ್ಕರಿಸಲಾಯಿತು.


ಬಾಹ್ಯ ಕೊಂಡಿಗಳು‌

[ಬದಲಾಯಿಸಿ]