ಬಂಡವಾಳ ಪಟ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಣಕಾಸಿನಲ್ಲಿ, ಬಂಡವಾಳ ಪಟ್ಟಿಯು ಸಂಸ್ಥೆಗಳು ಅಥವಾ ಒಬ್ಬ ವ್ಯಕ್ತಿ ಖಾಸಗಿಯಾಗಿ ಹೊಂದಿರುವ ಹೂಡಿಕೆಗಳ ಒಂದು ಅಂದಾಜಿನ ಮಿಶ್ರಣ ಅಥವಾ ಸಂಗ್ರಹ. ಬಂಡವಾಳ ಪಟ್ಟಿಯನ್ನು ಹೊಂದಿರುವುದು ಬಹುಹೂಡಿಕೆ (ಡಿವರ್ಸಫಿಕೇಶನ್) ಎಂದು ಕರೆಯಲಾಗುವ ಒಂದು ಹಣಹೂಡಿಕೆ ತಂತ್ರ ಮತ್ತು ನಷ್ಟವನ್ನು ಮಿತಿಯಲ್ಲಿಡುವ ತಂತ್ರದ ಒಂದು ಭಾಗವಾಗಿದೆ. ಹಲವಾರು ಆಸ್ತಿಗಳನ್ನು ಹೊಂದಿರುವುದರಿಂದ, ನಷ್ಟಗಳ ಕೆಲವೊಂದು ಪ್ರಕಾರಗಳನ್ನು (ವಿಶೇಷವಾಗಿ ನಿರ್ದಿಷ್ಟ ನಷ್ಟ) ಕಡಿಮೆ ಮಾಡಬಹುದು.