ವಿಷಯಕ್ಕೆ ಹೋಗು

ದಾರ್ಜೀಲಿಂಗ್ ಪರ್ವತ ರೈಲುಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ಪರ್ವತ ರೈಲುಮಾರ್ಗಗಳು*
UNESCO ವಿಶ್ವ ಪರಂಪರೆಯ ತಾಣ

ದಾರ್ಜೀಲಿಂಗ್ ಪರ್ವತ ರೈಲುಮಾರ್ಗ
ರಾಷ್ಟ್ರ Indiaಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv
ಆಕರ 944ter
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1999  (23ನೆಯ ಅಧಿವೇಶನ)
ವಿಸ್ತರಣೆ 2005, 2008
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.


ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಭಾರತಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಿಂದ ದಾರ್ಜೀಲಿಂಗ್‌ ಪಟ್ಟಣಕ್ಕೆ ಹಾಸಲಾಗಿರುವ ನ್ಯಾರೋ ಗೇಜ್ ರೈಲುಮಾರ್ಗವಾಗಿದೆ. ಈ ಮಾರ್ಗದ ಹಳಿಗಳ ನಡುವಿನ ಅಂತರ ಕೇವಲ ಎರಡು ಅಡಿಗಳಿದ್ದು ಇದರ ಮೇಲೆ ಸಾಗುವ ರೈಲನ್ನು ಆಟಿಗೆ ರೈಲು ಎಂದು ಸಹ ಕರೆಯಲಾಗುತ್ತದೆ. ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ೧೮೭೯ ರಿಂದ ೧೮೮೧ರ ಮಧ್ಯೆ ನಿರ್ಮಿಸಲಾಯಿತು. ಸರಾಸರಿ ಸಮುದ್ರಮಟ್ಟದಿಂದ ೧೦೦ ಮೀಟರ್ ಎತ್ತರದಲ್ಲಿರುವ ಸಿಲಿಗುರಿಯಿಂದ ಹೊರಡುವ ಈ ಮಾರ್ಗವು ೨೨೦೦ ಮೀಟರ್ ಎತ್ತರದಲ್ಲಿರುವ ದಾರ್ಜೀಲಿಂಗ್‌ಗೆ ಸಾಗುತ್ತದೆ. ಇಂದು ಸಹ ಈ ಮಾರ್ಗದಲ್ಲಿ ಉಗಿ ಇಂಜಿನ್‌ಗಳನ್ನು ಬಳಸಲಾಗುತ್ತದೆ. ಅಂಚೆ ಸಾಗಿಸುವ ರೈಲಿಗೆ ಮಾತ್ರ ಡೀಸೆಲ್ ಇಂಜಿನ್‌ ಅಳವಡಿಸಲಾಗಿದೆ. ೧೯೯೯ರಲ್ಲಿ ಯುನೆಸ್ಕೋ ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. ಮುಂದೆ ೨೦೦೫ರಲ್ಲಿ ನೀಲಗಿರಿ ಪರ್ವತ ರೈಲುಮಾರ್ಗವನ್ನು ಸಹ ಈ ಮೂಲ ಘೋಷಣೆಗೆ ಹೆಚ್ಚುವರಿಯಾಗಿ ಸೇರಿಸಲಾಯಿತು.

ಇವನ್ನೂ ನೋಡಿ

[ಬದಲಾಯಿಸಿ]

ಪಶ್ಚಿಮ ಬಂಗಾಳ

ವಿಶ್ವ ಪರಂಪರೆಯ ತಾಣ

ದಾರ್ಜೀಲಿಂಗ್ ಪರ್ವತ ರೈಲುಮಾರ್ಗದಲ್ಲಿ ಒಂದು ಉಗಿ ಇಂಜಿನ್‌.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ದಾರ್ಜೀಲಿಂಗ್ ರೈಲು ನಿಲ್ದಾಣದ ಒಂದು ನೋಟ

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ