ವಿಷಯಕ್ಕೆ ಹೋಗು

ಮರುಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೌದಿ ಅರೇಬಿಯದ ಮರುಭೂಮಿಯ ಒಂದು ನೋಟ
ಅಟಕಾಮಾ ಮರುಭೂಮಿ

ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ.

ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ. ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.

ಉಷ್ಣವಲಯದ ಮರುಭೂಮಿಗಳಲ್ಲಿ ತಾಪಮಾನವು ೫೮ ಡಿಗ್ರಿ (ಸೆಂ)ವರೆಗೆ ತಲುಪುತ್ತದೆ.

ಮರುಭೂಮಿಯ ಸಸ್ಯಗಳು

[ಬದಲಾಯಿಸಿ]

೨೫ ಸೆಮೀಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಮರುಭೂಮಿಯ ಸಸ್ಯಗಳು. ಇದಕ್ಕೆ ಇನ್ನೊಂದು ಹೆಸರು ಕ್ಸಿರೊಫೈಟ್ಸ್. ಬಾಹ್ಯ ಹಾಗೂ ಒಳರಚನೆಯಲ್ಲಿ ಅನೇಕ ಹೊಂದಾಣಿಕೆ, ಮಾರ್ಪಾಟುಗಳು ಕಂಡುಬರುತ್ತವೆ. ಅಧಿಕ ತಾಪಮಾನವನ್ನು ತಡೆಯಲು ಇವುಗಳು ಅನೇಕ ಬಾಹ್ಯ ಹಾಗೂ ಆಂತರಿಕ ಬದಲಾವಣೆಗಳನ್ನು ಹೊಂದಿರುತ್ತವೆ. ಕಳ್ಳಿ ಗಿಡಗಳಂತಹ ಗಿಡಗಳಲ್ಲಿ ನೀರು ಇಂಗುವಿಕೆಯನ್ನು ಕಡಿಮೆಮಾಡಲು ಬಹಳ ಕಡಿಮೆ ಎಲೆಗಳಿರುತ್ತವೆ. ಫ್ರೀಟೊಫೈಟ್ಸ್ ತಮ್ಮ ಅತಿಯಾದ ಉದ್ದ ಬೇರುಗಳಿಂದ ಬಹಳ ಕೆಳ ಮಟ್ಟಕ್ಕೆ ತಲುಪಿ ನೀರನ್ನು ಎಳೆದುಕೊಳ್ಳುವ ಸಾಮರ್ಥ್ಯವಿರುತ್ತದೆ. [] ಬಹಳ ವರ್ಷಗಳ ಕಾಲಾವಧಿಯಲ್ಲಿ ಜೀವಿಸುವ ಗಿಡಗಳಿಗೆ ರಸಹೀನ ಬಹುವಾರ್ಷಿಕ ಸಸ್ಯಗಳೆಂದು ಕರೆಯಲಾಗಿದೆ. ಇವು ಶುಷ್ಕವಾಗಿರುವ ಮರುಭೂಮಿಯ ಸಸ್ಯಗಳು. ಇವುಗಳಿಗೆ ಮಾಂಸಲದೇಹವಿಲ್ಲಿ. ಇವು ನೀರನ್ನು ದೇಹದಲ್ಲಿ ಶೇಖರಿಸದೆಯೇ ನೇರವಾಗಿ ನೀರಿನ ಆಭಾವವನ್ನು ಎದುರಿಸಿ, ಇತರ ವಿಧಾನಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತವೆ.[]

ವಿವಿಧ ಪಾಪಸ್ ಕಳ್ಳಿಗಿಡಗಳು

[ಬದಲಾಯಿಸಿ]

ಒಟ್ಟಿನಲ್ಲಿ ಮರುಭೂಮಿ ಸಸ್ಯಗಳ ನೂರಾರು ಹೊಂದಾಣಿಕೆಗಳಲ್ಲಿ ಕೆಲವು ಹೀಗಿವೆ: ರಸಭರಿತ ಕಾಂಡ, ಎಲೆ (ಉದಾ; ಕಳ್ಳಿಗಿಡ, ಅಗೇವ್) ; ಎಲೆಗಳಿಲ್ಲದ ಮುಳ್ಳುಗಳಿಂದಾವೃತ ದೇಹ (ಉದಾ; ಕಳ್ಳಿಗಿಡ) ; ಹಸುರು ಕಾಂಡ (ಕ್ಯಾಸ್ಪರಿನಾ, ಮೊಹಲಂಬಿಕಿಯಾ, ಕಳ್ಳಿ ಇತ್ಯಾದಿ) ಮೇಣ (ವ್ಯಾಕ್ಸ್) ದಿಂದಾಗಿ ಹೊಳೆಯುವ ಹೊರಮೈ (ಅಗೇವ್) , ನೀರನ್ನು ಹುಡುಕಿಕೊಂಡು ಆಳಕ್ಕೆ ಇಳಿಯುವ ಬೇರು (ಅಲ್ಹಗೀ), ಅತಿ ಉಷ್ಣ ಹಾಗೂ ಬಿಸಿಲಿನ ಪರಿಸ್ಥಿತಿಯಲ್ಲಿ ಎಲೆಗಳನ್ನು ಸುರಳಿಯಂತೆ ಸುತ್ತಿಕೊಳ್ಳುವ ಅಥವಾ ಉದ್ದಕ‍್ಕೆ ಮಡಚಿಕೊಳ್ಳುವ ಎಲೆಗಳು (ಮರುಭೂಮಿಯ ಹುಲ್ಲುಗಳು), ಬಾಷ್ಪವಿಸರ್ಜನೆಯನ್ನು ಕಡಿಮೆಗೊಳಿಸಲು ಎಲೆಗಳಲ್ಲಿ ಕಡಿಮೆ ಪತ್ರರಂಧ್ರಗಳು, ಇತ್ಯಾದಿ.

ಉದಾಹರಣೆಗಳು

[ಬದಲಾಯಿಸಿ]

ಎಲಿಫ್ಯಾಂಟ್ ಮರ- ಇದು ಅತಿ ಅಪರೂಪದ ಸಸ್ಯ. ಯು.ಎಸ್.ಎ ದೇಶದಲ್ಲಿ ಬೆಳೆಯುತ್ತದೆ. ಮರದ ಕಾಂಡ ಬಹಳ ದಪ್ಪವಾಗಿದ್ದು ನೀರನ್ನು ಹಿಡಿದುಕೊಳ್ಳುವ ಶಕ್ತಿಯಿದೆ. ಇದರ ಆಕಾರ ಚಿಕ್ಕದಾಗಿದ್ದು ಇದರ ರೆಂಬೆಗಳು ಕಾಂಡಕ್ಕಿಂತ ಚಿಕ್ಕದಾಗಿದೆ. ಇದು ತನ್ನ ಬುಡದಲ್ಲಿ ಹಾಗೂ ಕಾಂಡದಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಮೊಗ್ಗು ಸಣ್ಣ ಹಾಗೂ ಹಳದಿ ವೃತ್ತಾಕಾರದಲ್ಲಿದ್ದು ಅದು ಅರಳಿದ ನಂತರ ಬಿಳಿ ಹಾಗೂ ನಕ್ಷತ್ರಾಕಾರವನ್ನು ಹೊಂದಿರುತ್ತದೆ. ಈ ಗಿಡಗಳ ಎಲ್ಲಾ ತಳಿಗಳು ಬರಗಾಲ ಹಾಗೂ ಅತ್ಯಂತ ಚಳಿಗಾಲದಲ್ಲಿ ಮಾತ್ರ ಎಲೆಗಳನ್ನು ಹೊಂದಿರುವುದಿಲ್ಲ.

ಆರ್ಗನ್ ಪೈಪ್ ಕಳ್ಳಿಗಿಡ- ಈ ಗಿಡದ ಎಲ್ಲಾ ತಳಿಗಳನ್ನು ಮೆಕ್ಸಿಕೊ ಹಾಗೂ ಯು.ಎಸ್.ಎ ನ ಮರುಭೂಮಿಯಲ್ಲಿ ನೋಡಬಹುದು. ಈ ಕಾಂಡವು ನೇರ ಹಾಗೂ ತೆಳುವಾದ ಕೊಂಬೆಗಳನ್ನು ಹೊಂದಿದೆ. ಇದು ಪೂರ್ಣವಾಗಿ ಬೆಳೆಯಲು ಸುಮಾರು ೧೫೦ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ ಬೆಳೆಯುವ ಹಣ್ಣುಗಳು ಕಲ್ಲಂಗಡಿಗಿಂತಲೂ ಸಿಹಿಯಾಗಿರುವುದು. ಈ ಹಣ್ಣುಗಳನ್ನು ಅಮೇರಿಕಾದವರು ತಿನ್ನಲು ಹಾಗೂ ಇದನ್ನು ‍‍‌‌‍‍‍‍‍‍‌ಔಷಧಿಯನ್ನಾಗಿ ಬಳಸುವರು.

ಡೆಸರ್ಟ್ ಸೇಜ್[]- ಇದರ ಎತ್ತರ ೨-೩ ಮೀಟರ್. ಇದರ ಹೂಗಳು ನೀಲಿ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಲಕ್ಷಣವೇನೆಂದರೆ ಇದು ಪೂರ್ತಿಯಾಗಿ ಬೆಳೆದ ನಂತರ ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಔಷಧಿಯ ಗುಣಗಳೂ ಕೂಡ ಇವೆ. ಇದರ ಕಾಂಡ ಹಾಗೂ ಎಲೆಗಳನ್ನು ಕಾಡಿನ ಜನರು ನೆಗಡಿಗಾಗಿ ಔಷಧಿಯನ್ನಾಗಿ ಬಳಸಿಕೊಂಡರು. ಇದನ್ನು ತಲೆನೋವು, ಹೊಟ್ಟೆನೋವು, ಜ್ವರ, ಹಾಗೂ ಇನ್ನಿತರ ಕಣ್ಣು ನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ಡೆಸರ್ಟ್ ಮ್ಯಾರಿಗೋಲ್ಡ್[]- ಇವು ಆಸ್ಟರ್ ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು ೧೦ ರಿಂದ ೩೦ ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.

ಡೆಸರ್ಟ್ ಲಿಲ್ಲಿ- ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ ೮-೨೦ ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.[]

ಡೆಸರ್ಟ್ ವಿಲ್ಲೋ ಮರ- ಖಿಲೋಪ್ಸಿಸ್ ಎಂದೂ ಕರೆಯುತ್ತಾರೆ. ಇದು ಮೆಕ್ಸಿಕೊ ಹಾಗೂ ಯು.ಎಸ್.ಎನಲ್ಲಿ ಕಾಣುವ ಸೂಕ್ಷ್ಮ, ಸಣ್ಣದಾದ ಪತನಶೀಲ ಹೊದರು. ಇದು ಮೇ ತಿಂಗಳಲ್ಲಿ ಬೆಳೆದು ಸೆಪ್ಟೆಂಬರ್ ತಿಂಗಳವರೆಗೂ ಇರುತ್ತದೆ. ಈ ಹೂವಿನ ಪರಾಗಸ್ಪರ್ಷವನ್ನು ಜೇನುನೊಣ ಮಾಡುತ್ತದೆ. ಇದು ಶುಷ್ಕ ಸ್ಥಿತಿಯನ್ನು ತಡೆಕೊಳ್ಳುವುದು.[]

ತಾಳೆ ಜಾತಿಯ ಮರ- ಇದು ಉಷ್ಣವಲಯದ, ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುವುದು. ಇದು ಅತಿ ಶೀತಲ ಸ್ಥಿತಿಯನ್ನು ತಡೆಯುವುದಿಲ್ಲ. ಇದು ಸುಮಾರು ೨೬೦೦ ತಳಿಗಳನ್ನು ಹೊಂದಿದೆ. ಇದರ ಕಾಂಡವು ಬಹಳ ಉದ್ದವಾಗಿದ್ದು, ಇದರ ಉದ್ದದ ಎಲೆಗಳ ಗೊಂಚಲು ಕಾಂಡದ ತುದಿಯಲ್ಲಿ ಇರುವುದು. ಈ ಮರದಿಂದ ತೆಗೆದ ತೈಲವು ಖಾದ್ಯವಾಗಿದೆ. ಈ ಸಸ್ಯದ ರಸವನ್ನು ಹುದುಗಿಸಿ ಪಾಮ್ ವೈನ್ ತಯಾರಿಸುತ್ತಾರೆ. ಈ ಮರದಿಂದ ಬರುವ ತೆಂಗಿನಗರಿಯಿಂದ ಹಗ್ಗ, ಹಾಸಿಗೆ, ಕುಂಚವನ್ನು ಮಾಡಲಾಗುತ್ತದೆ.

ಸ್ಯಾಗ್ವರೊ- ಈ ಸಸ್ಯವು ಕಳ್ಳಿ ಗಿಡದ ತಳಿ. ಇದರ ಆಯಸ್ಸು ಸುಮಾರು ೧೫೦ ವರ್ಷ. ಇದರ ಬೆಳವಣಿಗೆ ಮರುಭೂಮಿಯ ವಾತಾವರಣದ ಮೇಲೆ ಅವಲಂಭಿಸಿರುತ್ತದೆ. ಇದರ ಬೆನ್ನುಹುರಿ ಒಂದು ದಿನಕ್ಕೆ ಸುಮಾರು ಒಂದು ಮಿಲಿ ಮೀಟರ್ನಷ್ಟು ಬೆಳೆಯುವುದು. ಇದರ ಹೂಗಳು ರಾತ್ರಿಯ ಸಮಯದಲ್ಲಿ ಬೆಳೆಯುವುದು. ಇದರಲ್ಲಿ ಬೆಳೆಯುವ ಕೆಂಪು ಹಣ್ಣುಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಇದರ ಒಂದೊಂದು ಹಣ್ಣುಗಳಲ್ಲಿ ಸುಮಾರು ೨೦೦೦ ಬೀಜಗಳಿದ್ದು ಅವುಗಳ ಪರಾಗಸ್ಪರ್ಷ ಸುಲಭವಾಗಿದೆ.

ಕಳ್ಳಿಗಿಡ- ಇದು ಸಾಮಾನ್ಯವಾಗಿ ಬೆಳೆಯುವ ಸಸ್ಯವಾಗಿದ್ದು ಇದರ ಎತ್ತರ ಸುಮಾರು ೧-೧೦ ಮೀಟರ್. ಇದರ ಬೆನ್ನುಹುರಿಯು ಚುಚ್ಚಿದರೆ ರೋಗನಿರೋಧಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.[]

ಇದನ್ನೂ ನೋಡಿ

[ಬದಲಾಯಿಸಿ]

ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://www.conserve-energy-future.com/various-desert-plants.php
  2. ೨.೦ ೨.೧ https://desertplantsadaptation.wordpress.com/xerophytes/
  3. https://www.laspilitas.com/nature-of-california/plants/610--salvia-dorrii
  4. "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.
  5. https://www.arborday.org/trees/treeguide/TreeDetail.cfm?ItemID=1077
  6. https://www.desertusa.com/cactus/the-cactus.html
"https://kn.wikipedia.org/w/index.php?title=ಮರುಭೂಮಿ&oldid=1232920" ಇಂದ ಪಡೆಯಲ್ಪಟ್ಟಿದೆ