ಪ್ರೋಟೊಜ಼ೋವ
ಗೋಚರ
ಪ್ರೋಟೊಜ಼ೋವ ಎಂದರೆ ಕೋಶೀಯ ಹಂತದಲ್ಲಿರುವ ಏಕಕೋಶ ಜೀವಿಗಳು ಅಥವಾ ಗುಂಪಾಗಿ, ಸ್ವತಂತ್ರವಾಗಿ ಬದುಕುವ ಏಕಕೋಶ ಜೀವಿಗಳು.
ವರ್ಗಗಳು
[ಬದಲಾಯಿಸಿ]ಚಲನಾಂಗಗಳನ್ನು ಆಧರಿಸಿ ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಲಾಗಿದೆ:
- ಕೋಶದ್ರವ್ಯದ ಮಿಥ್ಯಾಪಾದಗಳ ಮೂಲಕ ಚಲಿಸುವ ಜೀವಿಗಳು ಸಾರ್ಕೊಡೈನಾ ಅಥವಾ ರೈಜೊಪೊಡ.[೧] ಅತ್ಯಂತ ಸರಳಜೀವಿಗಳಾದ ಅಮೀಬಗಳು, ಸಮುದ್ರದಲ್ಲಿ ವಾಸಿಸುವ ಫೊರಾಮಿನಿಫೆರ, ರೇಡಿಯೊಲೇರಿಯ, ಹೀಲಿಯೋಜ಼ೋವಗಳು ರೈಜ಼ೊಪೊಡ ವರ್ಗಕ್ಕೆ ಸೇರುತ್ತವೆ. ಕೆಲವು ಸ್ತನಿಗಳಲ್ಲಿ ಭೇದಿ ಉಂಟುಮಾಡುವ ಎಂಟಮೀಬ ಕೂಡ ಇದೇ ವರ್ಗಕ್ಕೆ ಸೇರುತ್ತದೆ.[೨]
- ಉದ್ದ ಕಶಾಂಗಗಳ ಮೂಲಕ ಚಲಿಸುವವು ಮ್ಯಾಸ್ಟಿಗೊಫೊರ. ಸಿಹಿನೀರಿನಲ್ಲಿ ವಾಸಿಸುವ ಯುಗ್ಲಿನಾ, ಅನೇಕ ಸ್ತನಿ ಹಾಗೂ ಕಶೇರುಕಗಳಲ್ಲಿ ಹಾಗೂ ಮಾನವನಲ್ಲಿ ನಿದ್ರಾಜ್ವರವುಂಟುಮಾಡುವ ಟ್ರಿಪಾನೊಸೋಮಗಳು,[೩] ಭೇದಿ ಉಂಟುಮಾಡುವ ಗಯಾರ್ಡಿಯಗಳು, ಸಮುದ್ರದಲ್ಲಿ ಜೈವಿಕ ಪ್ರಜ್ವಲನೆಯ ಮೂಲಕ ಮಿನುಗುವ ಡೈನೊಫ್ಲಾಜಿಲ್ಲೆಟಗಳೂ[೪][೫] ಮ್ಯಾಸ್ಟಿಗೊಫೊರ ವರ್ಗಕ್ಕೆ ಸೇರುತ್ತವೆ.
- ಸೀಲಿಯ ಅಥವಾ ಶಿಲಿಕಾಂಗಗಳ ಮೂಲಕ ಚಲಿಸುವವು ಸೀಲಿಯೋಫೊರ. ಶಿಲಿಕಾಂಗಗಳಿರುವ ಪ್ಯಾರಾಮೇಸಿಯಮ್, ವರ್ಟಿಸೆಲಗಳು ಸೀಲಿಯೋಫೊರ ವರ್ಗಕ್ಕೆ ಸೇರುತ್ತವೆ.
- ಮಿಥ್ಯಾಪಾದಗಳು ಅಥವಾ ಶಿಲಿಕಾಂಗಗಳೆರಡೂ ಇರುವ, ಚಲನೆಯಿಲ್ಲದ ಜೀವಿಗಳು ಸ್ಪೊರೊಜೋವ. ಮಲೇರಿಯ ಉಂಟುಮಾಡುವ ಪ್ಲಾಸ್ಮೋಡಿಯಮ್, ತಲೆಶೂಲೆ, ಉದರಶೂಲೆ ತರಿಸುವ ಅನೇಕ ಪ್ರಭೇದಗಳು, ರೇಷ್ಮೆ ಕೀಟಗಳಲ್ಲಿ ಉಂಟಾಗುವ ಪೆಬ್ರಿನ್ ರೋಗಕಾರಕ ನೋಸಿಮಾ ಮುಂತಾದವು ಸ್ಪೊರೊಜ಼ೋವ ವರ್ಗಕ್ಕೆ ಸೇರುತ್ತವೆ.
ದೇಹರಚನೆ
[ಬದಲಾಯಿಸಿ]ಪ್ರೊಟೊಜ಼ೋವಾಗಳು ಸರಳ ಜೀವಿಗಳಾಗಿದ್ದು ಅವುಗಳ ಕೋಶದಲ್ಲಿ ಒಂದು ಅಥವಾ ಎರಡು ಕೋಶಕೇಂದ್ರಗಳು ಹಾಗೂ ಇನ್ನುಳಿದ ಕೋಶಾಂಗಗಳಿರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ವರ್ಣಕಗಳಿರುವುದಿಲ್ಲ. ಅನೇಕ ಪ್ರಭೇದಗಳಲ್ಲಿ ನಿರ್ಲಿಂಗ ಪ್ರಜನನವನ್ನು ಮಾತ್ರ ಕಾಣುತ್ತೇವೆ.[೬] ಕೆಲವು ಪ್ರಭೇದಗಳಲ್ಲಿ ಲೈಂಗಿಕ ಪ್ರಜನನವಿದ್ದರೂ ಅದರ ವಿಧಾನ ಸರಳವಾಗಿಯೇ ಇರುತ್ತದೆ.[೭] ಮಾನವನಲ್ಲಿ ಹಾಗೂ ಇತರ ಪ್ರಾಣಿಗಳಲ್ಲಿ ರೋಗ ಉಂಟುಮಾಡುವ ಸೂಕ್ಷ್ಮಜೀವಿಗಳನ್ನೊಳಗೊಂಡ ಈ ಗುಂಪು ಸೂಕ್ಷ್ಮಜೀವಿ ಪ್ರಪಂಚದಲ್ಲಿ ಮುಖ್ಯವಾದುದು.
ಉಲ್ಲೇಖಗಳು
[ಬದಲಾಯಿಸಿ]- ↑ Alberts Eds.; et al. (2007). Molecular Biology of the Cell 5th Edition. New York: Garland Science. p. 1037. ISBN 9780815341055.
- ↑ Britannica, The Editors of Encyclopaedia. "Entamoeba". Encyclopedia Britannica, 10 Nov. 2023, https://www.britannica.com/science/Entamoeba. Accessed 28 March 2024.
- ↑ "Trypanosomiasis, human African (sleeping sickness)". www.who.int (in ಇಂಗ್ಲಿಷ್). Retrieved 14 May 2020.
- ↑ Castro P, Huber ME (2010). Marine Biology (8th ed.). McGraw Hill. p. 95. ISBN 978-0-0711-1302-1.
- ↑ Hastings JW (1996). "Chemistries and colors of bioluminescent reactions: a review". Gene. 173 (1 Spec No): 5–11. doi:10.1016/0378-1119(95)00676-1. PMID 8707056.
- ↑ Rodriguez, Margaret (2015-12-15). Microbiology for Surgical Technologists (in ಇಂಗ್ಲಿಷ್). Cengage Learning. p. 135. ISBN 978-1-133-70733-2.
- ↑ Khan, Naveed Ahmed (2008-01-13). Emerging Protozoan Pathogens (in ಇಂಗ್ಲಿಷ್). Garland Science. pp. 472–474. ISBN 978-0-203-89517-7.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: