ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಸಮೃಧ್ದ ಜಾನಪದವನ್ನೂ ಯಕ್ಷಗಾನ ಕಲೆಯನ್ನೂ ಪ್ರೋತ್ಸಹಿಸುವ ಮತ್ತು ಅವುಗಳನ್ನು ಕಾಪಾಡಿಕೊಂಡು ಬರುವ ದೃಷ್ಠಿಯಿಂದ ಈ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದೆ(೧೯೮೦). ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ.

ಅಕಾಡೆಮಿಯ ಉದ್ದೇಶಗಳು[ಬದಲಾಯಿಸಿ]

ಜಾನಪದ ಮತ್ತು ಯಕ್ಷಗಾನ ಕಲೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರದೇಶಗಳ ನಡುವೆ ವಿಚಾರ ವಿನಿಮಯ, ಜನಪದ ಸಾಹಿತ್ಯ ಸಂಗ್ರಹಣೆ, ಪ್ರಕಟಣೆ, ಗ್ರಂಥಭಂಡಾರದ ಸ್ಥಾಪನೆ, ಕಲೆ ಕಲಾವಿದರನ್ನು ಗುರುತಿಸಿ ಗೌರವಿಸುವುದು, ಜಾನಪದಕ್ಕೆ ಅಗತ್ಯ ಪ್ರಚಾರ ಹಾಗೂ ಸೌಲಭ್ಯ ನೀಡುವುದು ಮುಂತಾದವುಗಳು.

ಅಕಾಡೆಮಿ ಅಧ್ಯಕ್ಷರು, ಸದಸ್ಯರು ಮತ್ತು ಸಮಿತಿಗಳು[ಬದಲಾಯಿಸಿ]

ಅಧ್ಯಕ್ಷರೇ ಅಕಾಡೆಮಿಯ ಮುಖ್ಯಸ್ಥರು ಇವರ ಕಾಲಾವಧಿ ಮೂರುವರ್ಷಗಳು ಇವರೊಡನೆ ೧೦ ನಾಮಕರಣಗೊಂಡ ಸದಸ್ಯರಿರುತ್ತಾರೆ. ಇವರ ಕಾಲಾವಧಿ ಮೂರುವರ್ಷಗಳು. ಸದಸ್ಯರನ್ನು ಸರ್ಕಾರ ನಾಮಕರಣ ಮಾಡುತ್ತದೆ. ಹೀಗೆ ನಾಮಕರಣಗೊಂಡ ಸದಸ್ಯರು ಮತ್ತೆ ಮೂರು ಸಹ ಸದಸ್ಯರನ್ನು ಆಯ್ದುಕೊಳ್ಳಲು ಅವಕಾಶವಿದೆ. ಆಡಳಿತದಲ್ಲಿ ನೆರವು ನೀಡಲು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಒಬ್ಬರು ರಿಜಿಸ್ಟಾರ್ ಮತ್ತು ಲೆಕ್ಕಪತ್ರಗಳನ್ನು ನೋಡಿಕೊಳ್ಳಲು ಒಬ್ಬರು ವಿತ್ತಾಧಿಕಾರಿಗಳನ್ನೂ ಸರ್ಕಾರ ನಿಯೋಜಿಸುವುದು. ಕಾರ್ಯಕ್ರಮಗಳನ್ನು ರೂಪಿಸಲು, ಯೋಜನೆಗಳನ್ನು ತಯಾರಿಸಲು ಅಧ್ಯಕ್ಷರು, ಅಧಿಕಾರಿಗಳ ಜೊತೆ ಸ್ಥಾಯಿಸಮಿತಿಗಳೂ ಉಪಸಮಿತಿಗಳೂ ಇರುತ್ತವೆ. ಯೋಜನೇತರ ಕಾರ್ಯಕ್ರಮಗಳನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಜಾರಿಗೊಳಿಸಲಾಗುತ್ತದೆ.

ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು[ಬದಲಾಯಿಸಿ]

  1. ಎಚ್.ಎಲ್.ನಾಗೇಗೌಡ ಮೊದಲನೆಯ ಅಧ್ಯಕ್ಷರಾಗಿ ಎರಡು ಅವಧಿಗೆ ಕೆಲಸ ನಿರ್ವಹಿಸಿದ್ದಾರೆ(೧೯೮೦-೮೭)[೧]
  2. ಎಸ್.ಕೆ.ಕರೀಂಖಾನ್(೧೯೮೭-೯೦)
  3. ಜಿ.ಶಂ.ಪರಮಶಿವಯ್ಯ(೧೯೯೧-೯೫)[೨]
  4. ಎಚ್.ಜೆ.ಲಕ್ಕಪ್ಪಗೌಡ(೧೯೯೫-೯೮)[೩]
  5. ಕಾಳೇಗೌಡ ನಾಗವಾರ(೧೯೯೮-೨೦೦೧)[೪]
  6. ಹಿ.ಶಿ.ರಾಮಚಂದ್ರೇಗೌಡ(೨೦೦೧-೨೦೦೪)
  7. ಕೆರೆಮನೆ ಶಂಭು ಹೆಗಡೆ(೨೦೦೫-)[೫]

ಅಕಾಡೆಮಿಯ ಕಾರ್ಯಗಳು[ಬದಲಾಯಿಸಿ]

ಜಾನಪದ ಕೃತಿಗಳ ಪ್ರಕಟಣೆ, ಸಂಗ್ರಹಣೆ, ಸಂಪಾದನೆಗೆ ವಿಶೇಷ ಮಹತ್ವನೀಡಿದೆ. ಜಾನಪದ ಗಂಗೋತ್ರಿ ಎಂಬ ತ್ರೈಮಾಸಿಕ ಪತ್ರಿಕೆ ಪ್ರಕಟಿಸುತ್ತಿದೆ. ಕರ್ನಾಟಕದ ವಿವಿಧೆಡೆ ನಡೆವ ಜಾತ್ರೆಗಳ ಬಗ್ಗೆ ವಿವರ ನೀಡುವ ಜಾತ್ರೆಯ ಮಾಲಿಕೆ ಪ್ರಕಟಿಸಿದೆ. ಶಿಷ್ಟಸಾಹಿತ್ಯಕ್ಕೂ ಜಾನಪದ ಸಾಹಿತ್ಯಕ್ಕೂ ಇರುವ ನಿಕಟ ಸಂಬಂಧ ಹಾಗೂ ಸಂವೇದನೆಗಳನ್ನೂ ತೆರೆದು ತೋರಿಸುವ ಮಾಲಿಕೆಯನ್ನು ಹೊರತಂದಿದೆ. ಇವಲ್ಲದೆ ಜನಪದಕ್ಕಾಗಿದುಡಿದ ಮಹನೀಯರ ಬಗ್ಗೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಜಾನಪದದ ಬಗ್ಗೆ ಮಾಹಿತಿಗಳನ್ನು ನೀಡುವ ಹತ್ತು ಹಲವು ಕೃತಿಗಳನ್ನು ಕೂಡ ಪ್ರಕಟಿಸಿದೆ. ಜಾನಪದ ಸಂಬಂಧವಾದ ವಸ್ತುವಿಷಯ, ಸಂಕಿರಣ, ಕಮ್ಮಟ, ಕಾರ್ಯಗಾರ ಇತ್ಯಾದಿಗಳ ವಿವರ ನೀಡುವ ಜಾನಪದ ಸಮಾಚಾರ ಎಂಬ ಪತ್ರಿಕೆಯನ್ನು ೧೯೯೫ ರಿಂದ ಅನಿಯತಕಾಲಿಕವಾಗಿ ಪ್ರಕಟಿಸುತ್ತಿದೆ.ಪುಸ್ಥಕ ಪ್ರಕಟಣೆಯ ಜೊತೆಗೆ ಜನಪದ ಸಂಸ್ಕೃತಿಯ ವಿಡಿಯೋ ಚಿತ್ರೀಕರಣ, ಧ್ವನಿಮುದ್ರಣ ಕೆಲಸಗಳನ್ನೂ ಅಕಾಡೆಮಿ ನಡೆಸಿಕೊಂಡು ಬರುತ್ತಿದೆ. ಇವುಗಳಲ್ಲಿ ಕರ್ನಾಟಕದ ಬುಡಕಟ್ಟುಗಳು, ದೊಡ್ಡಾಟ, ಯಕ್ಷಗಾನ, ಜಾತ್ರೆ-ಆಚರಣೆಗಳು ಇವುಗಳಿಗೆ ಸಂಬಂಧಿಸಿದಂತೆ ವಿಡಿಯೋ ದಾಖಲಾತಿಗಳ ಬೃಹತ್ ಭಂಡಾರವೇ ಇದೆ.

ಅಕಾಡೆಮಿಯ ವಿಶೇಷ ಕಾರ್ಯಕ್ರಮಗಳು[ಬದಲಾಯಿಸಿ]

ಕಾಲಕಾಲಕ್ಕೆ ಜಾನಪದಕ್ಕೆ ಸಂಬಂಧಿಸಿದಂತೆ ವಿಚಾರಸಂಕಿರಣ, ಕಮ್ಮಟ, ಕಾರ್ಯಾಗಾರಗಳನ್ನೂ ಅಕಾಡೆಮಿ ನಡೆಸುತ್ತಿದೆ. ಇವುಗಳಲ್ಲಿ

  • ಸಮೂಹ ಮಾಧ್ಯಮಗಳು ಮತ್ತು ಜಾನಪದ
  • ಜನಪದ ಆಟಗಳು
  • ಜಾನಪದ ವೈಜ್ಞಾನಿಕ ನೆಲೆಗಳು
  • ವೃತ್ತಿಗಾಯಕರ ಮೇಳ
  • ವಾದ್ಯಸಮ್ಮೇಳನ
  • ಸ್ವಾತಂತ್ರ್ಯ ಸಂಗ್ರಾಮದ ಲಾವಣಿ ಸಮ್ಮೇಳನ
  • ನವರಾತ್ರಿ ಜಾನಪದ ರಂಗೋತ್ಸವ
  • ಆದಿವಾಸಿ ಜಾನಪದ ಕಲಾಮಹೋತ್ಸವ
  • ರೈತ ಜಾನಪದೀಯ ಅಧ್ಯಯನ
  • ಜಾನಪದ ಮತ್ತು ಜಾಗತೀಕರಣ
  • ಜನಪದ ಮಹಾಕಾವ್ಯಗಳು
  • ಗೀಗೀ ಸಂಭ್ರಮ
  • ಮೂಡಲವೈಭವ
  • ಹೊಯ್ಸಳ ವೈಭವ
  • ಸ್ವಾತಂತ್ರ್ಯ ಸಂಗ್ರಾಮ ಹಾಗೂ ಜಾನಪದ
  • ವೀರ ಜಾನಪದ
  • ಮಹಿಳಾ ಜಾನಪದ
  • ಪರಿಸರ ಜಾನಪದ

ಕರ್ನಾಟಕವನ್ನು ಮುಖ್ಯಲಕ್ಷ್ಯವನ್ನಾಗಿಟ್ಟುಕೊಂಡ ಅಕಾಡೆಮಿ ಕೇಂದ್ರ ಮಾನವಸಂಪನ್ಮೂಲ ಇಲಾಖೆ, ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರಗಳಿಂದ(ತಂಜಾವೂರು, ನಾಗಪುರ) ನೆರವು ಪಡೆದು ಅನೇಕ ಕರ್ಯಕ್ರಮಗಳನ್ನು ನಡೆಸಿದೆ. ಅಕಾಡೆಮಿ ಜಾನಪದಕ್ಕಾಗಿ ದುಡಿಯುತ್ತಿರುವವರನ್ನು ಗುರುತಿಸಿ ಗೌರವಿಸಿದೆ. ಜಾನಪದ ಸಂಬಂಧಿಯಾದ ಕೃತಿಗಳಿಗೆ ಪ್ರಶಸ್ತಿ ನೀಡುವುದು, ವಿದ್ವಾಂಸರಿಗೆ ಜಾನಪದತಜ್ಞ ಎಂಬ ಪ್ರಶಸ್ತಿ ನೀಡುವುದು. ಇಂಥ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ

ಅಕಾಡೆಮಿಯಿಂದ ಪ್ರಕಟವಾಗಿರುವ ಪುಸ್ತಕಗಳು[ಬದಲಾಯಿಸಿ]

  1. ಕರ್ನಾಟಕ ಜಾನಪದ -ಪ್ರ.ಸಂ.ಎಸ್.ಕೆ.ಕರೀಂಖಾನ್
  2. ಜಾನಪದ ವಿವಿಧ ಮುಖಗಳು -ಸಂ.ಶ್ರೀಕಂಠ ಕೂಡಿಗೆ
  3. ರತ್ನತ್ರಯರು ಮತ್ತು ಜಾನಪದ -ಸರಸ್ವತಿ ವಿಜಯಕುಮಾರ್

ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೃತಿಗಳು[ಬದಲಾಯಿಸಿ]

ಅಕಾಡೆಮಿ ಹೊರ ತಂದಿರುವ ಪತ್ರಿಕೆಗಳು[ಬದಲಾಯಿಸಿ]

  • ಜಾನಪದ ಗಂಗೋತ್ರಿ
  • ಜಾನಪದ ಸಮಾಚಾರ

ಜಾನಪದ ತಜ್ಞ ಪ್ರಶಸ್ತಿ ಪಡೆದವರು[ಬದಲಾಯಿಸಿ]

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಜಾನಪದ ವಿದ್ವಾಂಸರು ಮತ್ತು ಕಲೆಗಾರರಿಗೆ ಜಾನಪದ ತಜ್ಞ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.[೬]

ಎ.ವಿ.ನಾವಡ
ಬಿ.ಎ.ವಿವೇಕ್ ರೈ

ಈ ಪ್ರಶಸ್ತಿ ಪಡೆದವರಿನಲ್ಲಿ ಕೆಲವರು:

  1. ಎ. ವಿ. ನಾವಡ
  2. ಸೋಮಶೇಖರ ಇಮ್ರಾಪೂರ
  3. ಸಿ.ಪಿ. ಕೃಷ್ಣಕುಮಾರ್
  4. ಹಿ. ಚಿ. ಬೋರಲಿಂಗಯ್ಯ
  5. ಎಂ. ಎನ್. ವಾಲಿ
  6. ಪಿ.ಕೆ.ರಾಜಶೇಖರ
  7. ಚಂದ್ರಶೇಖರ ಕಂಬಾರ
  8. ಮತಿಘಟ್ಟ ಕೃಷ್ಣಮೂರ್ತಿ
  9. ದೇವೇಂದ್ರಕುಮಾರ ಹಕಾರಿ
  10. ಸಿಂಪಿ ಲಿಂಗಣ್ಣ
  11. ಸಿದ್ಧಲಿಂಗಯ್ಯ
  12. ಬಿ.ಎ.ವಿವೇಕ್ ರೈ
  13. ಮುದೇನೂರು ಸಂಗಣ್ಣ
  14. ಜಿ.ಬಿ.ಖಾಡೆ
  15. ಬಸವರಾಜ ಮಲಶೆಟ್ಟಿ
  16. ಡಿ.ಕೆ. ರಾಜೇಂದ್ರ
  17. ಮೈಲಹಳ್ಳಿ ರೇವಣ್ಣ

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-03-15. Retrieved 2016-01-12.
  2. "ಆರ್ಕೈವ್ ನಕಲು". Archived from the original on 2016-03-06. Retrieved 2021-08-09.
  3. "ಆರ್ಕೈವ್ ನಕಲು". Archived from the original on 2014-04-03. Retrieved 2021-08-09.
  4. https://kanaja.in/archives/28648[ಶಾಶ್ವತವಾಗಿ ಮಡಿದ ಕೊಂಡಿ]
  5. http://www.sobagu.in/ಕೆರೆಮನೆ-ಶಂಭು-ಹೆಗಡೆ-2
  6. http://kannada.oneindia.com/news/2005/08/20/award.html