ಜಿ.ಬಿ.ಖಾಡೆ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಹುಟ್ಟು
[ಬದಲಾಯಿಸಿ]ಹಿರಿಯ ಜಾನಪದ ವಿದ್ವಾಂಸ ಗಣಪತಿ ಬಾಪು ಖಾಡೆ ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ 1 ಮಾರ್ಚ 1 943 ರಂದು ಜನಿಸಿದರು.
ಸಾಹಿತ್ಯ
[ಬದಲಾಯಿಸಿ]ಕಳೆದ ಐದು ದಶಕಗಳಿಂದ ಜನಪದ ಸಾಹಿತ್ಯ ಸಂಗ್ರಹ ,ಸಂಪಾದನೆ,ಪ್ರಕಟಣೆ ಕಾರ್ಯ ಮಾಡಿಕೊಂಡು ಬಂದಿರುವ ಖಾಡೆ ಅವರು ಸಂಪಾದಿಸಿರುವ ಜನಪದ ಕೃತಿಗಳನ್ನು ಮೈಸೂರು ವಿಶ್ವ ವಿದ್ಯಾಲಯ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತುಗಳು ಪ್ರಕಟಿಸಿವೆ.ಕಾಡು ಹೂಗಳು,ಹಳ್ಳಿ ಹಬ್ಬಿಸಿದ ಹೂಬಳ್ಳಿ,ಬೆಳವಲದ ಬೆಳಕು,ಜನಪದ ಹಾಸ್ಯ ಕಥೆಗಳು,ಮೊದಲಾದವು ಇವರ ಜನಪದ ಕೃತಿಗಳು.ತಮ್ಮ ಆತ್ಮ ಕಥೆಯನ್ನು' ಬದುಕೆ ಜಾನಪದ ' ಹೆಸರಿನಲ್ಲಿ ಬರೆದು ಪ್ರಕಟಿಸಿದ್ದಾರೆ.ವೃತ್ತಿಯಲ್ಲಿ ಗ್ರಾಮ ಲೆಖ್ಖಾಧಿಕಾರಿಯಾಗಿ ಹಾಲಿಗೇರಿ,ರಡ್ಡೆರ ತಿಮ್ಮಾಪುರ,ಕೆರೂರ,ಗೊರಬಾಳ,ತಳ್ಳಿಕೇರಿ,ಸೂಳೇಭಾವಿ,ಐಹೊಳೆ,ಬದನೂರ,ಭಂಟನೂರ,ಜುನ್ನುರ,ಹಾಗೂ ಲೋಕಾಪುರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.ಅಳಿದು ಹೋಗುತ್ತಿದ್ದ ಕಂಠಸ್ಥ ಜನಪದ ಸಾಹಿತ್ಯವನ್ನು ಊರೂರು ಸುತ್ತಿ ಸಂಗ್ರಹಿಸಿದ ಜಿ.ಬಿ.ಖಾಡೆ ಅವರಿಗೆ ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಜ್ಯ ಜಾನಪದ ಅಕಾಡೆಮಿ 'ಜನಪದ ತಜ್ಞ' ಪ್ರಶಸ್ತಿ ನೀಡಿ ಗೌರವಿಸಿದೆ. ಬಾಗಲಕೋಟ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಿದೆ.ಇವರ ಪುತ್ರರಾದ ಅಶೋಕ ಖಾಡೆ ಲೋಕೋಪಯೋಗಿ ಇಲಾಖೆಯಲ್ಲಿ ಹಿರಿಯ ಅಧಿಕಾರಿ ,ಡಾ.ಪ್ರಕಾಶ ಖಾಡೆ ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ಹೆಸರು ಮಾಡಿದವರು,ಇನ್ನೊಬ್ಬ ಪುತ್ರ ಬಾಪು ಖಾಡೆ ಬೆಳಗಾವಿಯ ಸ್ಟೇಟ್ ಬ್ಯಾಂಕ ವಿಭಾಗೀಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿ.ಬಿ.ಖಾಡೆ ಅವರ ಧರ್ಮಪತ್ನಿ ಗಂಗೂಬಾಯಿ ಖಾಡೆ ಅವರ ಪ್ರೋತ್ಸಾಹ ದೊಡ್ಡದು. ಸಧ್ಯ ತಮ್ಮ ವಿಶ್ರಾಂತ ಬದುಕನ್ನು ಮುಧೋಳದಲ್ಲಿ ತಾವು ಕಟ್ಟಿಸಿದ ಮನೆ ‘ಜನಪದ ನಿಲಯ’ದಲ್ಲಿ ನೆಲೆಸಿರುವ ಜಿ.ಬಿ.ಖಾಡೆ ಯವರು ಸಾಹಿತ್ಯ ಸಾಧನೆ ದೊಡ್ಡದು.ಅವರ ಜಾನಪದ ಕಾಯಕದ ಸಾಧನೆ ನಿರಂತರವಾಗಿರಲು ಅವರ ಕುಟುಂಬ ವರ್ಗದವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿದ್ದಾರೆ.
ಮರಣ
[ಬದಲಾಯಿಸಿ]ಹೆಸರಾಂತ ಸಾಹಿತಿ ಜಿ.ಬಿ.ಖಾಡೆ ಅವರು ತಮ್ಮ ೭೭ ನೇ ವಯಸ್ಸಿನಲ್ಲಿ ದಿ.೩೦.ಮಾರ್ಚ,೨೦೧೯ ರಂದು ಶನಿವಾರ ಮುಂ ೮ ಗಂಟೆಗೆ ತೀರಿಕೊಂಡರು.