ಬಿ.ಎ.ವಿವೇಕ್ ರೈ
ಡಾ. ಬಿ. ಎ. ವಿವೇಕ ರೈ ಇವರು ಕನ್ನಡದ ಹಿರಿಯ ಸಂಶೋಧಕರು ,ವಿಮರ್ಶಕರು, ಅನುವಾದಕರು, ಜಾನಪದ ವಿದ್ವಾಂಸರು ,ನಿವೃತ್ತ ಕನ್ನಡ ಪ್ರಾಧ್ಯಾಪಕರು.ಮತ್ತು ವಿಶ್ರಾಂತ ಕುಲಪತಿಗಳು.ಇವರು ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳುವಿನ ಕುರಿತು ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರ ತಾಯ್ನುಡಿ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ತಮ್ಮ ತಂದೆ ಅಗ್ರಾಳ ಪುರಂದರ ರೈ ಅವರ ಮೂಲಕ ಶಿವರಾಮ ಕಾರಂತರ ಸಂಪರ್ಕ ಬೆಳೆಯಿತು. ಆ ಪ್ರಭಾವದಿಂದಾಗಿ ಇವರು ಭಾಷೆ,ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಂಶೋಧನೆಯ ಕೆಲಸಗಳನ್ನು ಮಾಡಿದರು , ಸಂಶೋಧನೆಯ ಯೋಜನೆಗಳನ್ನು ನಿರ್ವಹಿಸಿದರು ಮತ್ತು ಗ್ರಂಥಗಳನ್ನು ಪ್ರಕಟಿಸಿದರು. ಪ್ರಾದೇಶಿಕ ಅಧ್ಯಯನ ಮತ್ತು ಸಂಸ್ಕೃತಿಯ ಅಧ್ಯಯನದ ಕ್ಷೇತ್ರಗಳಲ್ಲಿನ ಇವರ ಕೆಲಸಗಳು ಅಂತಾರಾಷ್ಟ್ರೀಯ ವಿದ್ವಾಂಸರ ಗಮನವನ್ನು ಸೆಳೆದಿವೆ.
ಹುಟ್ಟು
[ಬದಲಾಯಿಸಿ]ವಿವೇಕ ರೈಯವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳದಲ್ಲಿ ೧೯೪೬ ದಶಂಬರ ೮ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು . ಅಗ್ರಾಳ ಪುರಂದರ ರೈಯವರು ಇವರ ತಂದೆ.ಅವರು ಡಾ.ಶಿವರಾಮ ಕಾರಂತರ ಶಿಷ್ಯ ಹಾಗೂ ಅವರ ದೊಡ್ಡ ಅಭಿಮಾನಿ ಆಗಿದ್ದರು . ಪುರಂದರ ರೈಯವರು ಗಾಂಧಿವಾದಿ, ಕೃಷಿಕ, ಸಾಹಿತಿ ಮತ್ತು ಪತ್ರಕರ್ತ ಆಗಿದ್ದರು.ತಂದೆಯವರ ಪ್ರೇರಣೆಯಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡ ವಿವೇಕ ರೈಯವರು, ಕನ್ನಡಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಹಿರಿಯ ವಿದ್ವಾಂಸರಾಗಿದ್ದಾರೆ.
ವಿದ್ಯಾಭ್ಯಾಸ
[ಬದಲಾಯಿಸಿ]ವಿವೇಕ ರೈಯವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚಾದ ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಒಂದರಿಂದ ಎಂಟನೆಯ ತರಗತಿವರೆಗೆ ಅಭ್ಯಾಸ ಮಾಡಿದರು. ಬಳಿಕ ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಹತ್ತನೆಯ ತರಗತಿವರೆಗೆ ಕಲಿತರು. ಆಮೇಲೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಿ.ಎಸ್ಸಿ. ಪದವಿ ಪಡೆದ ರೈಯವರು ,ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿಯನ್ನು ಮೊದಲನೆಯ ಸ್ಥಾನದೊಂದಿಗೆ ಪಡೆದಿದ್ದಾರೆ(೧೯೭೦). ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿರುತ್ತಾರೆ(೧೯೮೧).
ಹುದ್ದೆಗಳು
[ಬದಲಾಯಿಸಿ]ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತುಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ (ಮಂಗಳ ಗಂಗೋತ್ರಿ) ವಿಭಾಗದಲ್ಲಿ ಉಪನ್ಯಾಸಕರಾಗಿ, ರೀಡರ್, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಹೀಗೆ ಬೇರೆ-ಬೇರೆ ಹುದ್ದೆಯಲ್ಲಿ ೩೪ ವರ್ಷಗಳ ಕಾಲ (೧೯೭೦ ರಿಂದ ೨೦೦೪) ಅಧ್ಯಾಪನ, ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
- ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಕುಲಪತಿಗಳಾಗಿ(೨೦೦೪-೨೦೦೭)
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇದರ ಕುಲಪತಿಗಳಾಗಿ(೨೦೦೭-೨೦೦೯)
- ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.(೨೦೦೯-೨೦೧೨)
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ(೧೯೯೪-೧೯೯೮)
- ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ(೧೯೯೩-೧೯೯೮)
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ(೧೯೮೪-೧೯೮೭)
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಯ ಸದಸ್ಯರಾಗಿ(೧೯೯೨-೧೯೯೫)
- ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ(೧೯೯೬-೧೯೯೮)
- ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸದಸ್ಯರಾಗಿ(೧೯೯೫-)
- ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಟ್ರಸ್ಟ್‌ನ ಸದಸ್ಯರಾಗಿ೨೦೦೦-೨೦೧೭)
- ಮಂಗಳೂರು ದರ್ಶನ ಸಂಪುಟದ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
- ಅಧ್ಯಕ್ಷರು ಸಲಹಾ ಸಮಿತಿ :ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ,ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಕನಕದಾಸ ಅಧ್ಯಯನ ಕೇಂದ್ರ, ಮಾಹೆ ( ಮಣಿಪಾಲವಿಶ್ವವಿದ್ಯಾಲಯ) ,ಉಡುಪಿ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ:
- ಸ್ಥಾಪಕ ನಿರ್ದೇಶಕ, ಪ್ರಸಾರಾಂಗ(೧೯೯೧-೧೯೯೬)
- ಸ್ಥಾಪಕ ಸಂಯೋಜಕ,ಎಸ್ ಡಿ ಎಂ ತುಳುಪೀಠ(೧೯೯೨-೨೦೦೪)
- ಸ್ಥಾಪಕ ನಿರ್ದೇಶಕ, ಡಾ.ಶಿವರಾಮ ಕಾರಂತ ಪೀಠ(೧೯೯೪-೨೦೦೩)
ಕೃತಿಗಳು
[ಬದಲಾಯಿಸಿ]- ತುಳು ಗಾದೆಗಳು(೧೯೭೧)
- ತುಳು ಒಗಟುಗಳು(೧೯೭೧)
- ತೌಳವ ಸಂಸ್ಕೃತಿ(೧೯೭೫)
- ತುಳುವ ಅಧ್ಯಯನ: ಕೆಲವು ವಿಚಾರಗಳು(೧೯೮೦)
- ತುಳು ಜನಪದ ಸಾಹಿತ್ಯ(೧೯೮೫)
- ಆನ್ವಯಿಕ ಜಾನಪದ(೧೯೮೫;೧೯೯೫)
- ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು(ಅನುವಾದ)(೧೯೮೬;೨೦೧೩)
- ಗಿಳಿಸೂವೆ(೧೯೯೫)
- ಇರುಳಕಣ್ಣು(೨೦೦೯;೨೦೧೩)
- ಹಿಂದಣ ಹೆಜ್ಜೆ(೨೦೦೯)
- ರಂಗದೊಳಗಣ ಬಹಿರಂಗ(೨೦೦೯)
- ಬ್ಲಾಗಿಲನು ತೆರೆದು( ಬ್ಲಾಗ್ ಬರಹಗಳು) (೨೦೧೧)
- ಜರ್ಮನಿಯ ಒಳಗಿನಿಂದ(2೦೧೨)
- ಕನ್ನಡ ನುಡಿನಡೆಯ ಬರಹಗಳು(೨೦೧೩)
- ಅರಿವು ಸಾಮಾನ್ಯವೆ(೨೦೧೩)
- ನೆತ್ತರ ಮದುವೆ ( ಅನುವಾದ- ನಾಟಕ) (೨೦೧೩)
- ಚಿಲಿಯಲ್ಲಿ ಭೂಕಂಪ(೨೦೧೫)
- ಮೊದಲ ಮೆಟ್ಟಿಲು(೨೦೧೬)
- ಕನ್ನಡ ದೇಸಿ ಸಮ್ಮಿಲನದ ನುಡಿಗಳು(೨೦೧೭)
- 80 ದಿನಗಳಲ್ಲಿ ವಿಶ್ವ ಪರ್ಯಟನ( ಅನುವಾದ- ಕಥೆ) (೨೦೧೭)
- ಅಕ್ಕರ ಮನೆ(೨೦೧೮)
- ಕಲಿತದ್ದು ಕಲಿಸಿದ್ದು(೨೦೧೯)
- ಸ್ಲಾವೊಮೀರ್ ಮ್ರೋಜೆಕ್ ನ ಕತೆಗಳು ( ಅನುವಾದ) (೨೦೨೧)
- ಹೊತ್ತಗೆಗಳ ಹೊಸ್ತಿಲಲ್ಲಿ(೨೦೨೧)
- ಕ್ಯಾಮರಾ ಕಣ್ಣಿನಲ್ಲಿ ಜರ್ಮನಿ (೨೦೨೧)
- ನೀವು ಕಂಡರಿಯದ ಕುದ್ಮುಲ್ ರಂಗರಾವ್( ಅನುವಾದ) (೨೦೨೪)
- ಬದುಕು ಕಟ್ಟಿದ ಬಗೆಗಳು (೨೦೨೪)
ಇಂಗ್ಲಿಷ್ ಗ್ರಂಥಗಳು:
- Siri Epic as Performed by Gopala Naika ( Ed.with Lauri Honko ,Anneli Honko and Chinnappa Gowda):Finland, 1998
- The Tubingen Tulu Manuscript: Two South Indian Oral Epics collected in the 19th Century: (Edited with Heidrun Bruckner):Germany, 2015
- Oral Traditions in South India : Essays on Tulu Oral Epics :( Edited with Heidrun Bruckner.):Germany, 2017
- Classical Kannada Poetry and Prose : A Reader ( with Prof.C N Ramachandran):( Kannada University, Hampi,2015)
- ಜರ್ಮನ್ ಅನುವಾದ:
Die fligende Eidechse( Translation of Poornachandra Tejasvi's Kannada novel ' Karvalo ' into German language) : Translation- with Katrin Binder (Germany, 2018)
- A Handbook of Kannada Prosody
(Published by Central University of Karnataka, Kalburgi; 2020)
- Medieval Kannada Literature: A Reader (With Prof.C N Ramachandran);( Kannada University, Hampi,2022)
ಸಂಪಾದನೆಯ ಗ್ರಂಥಗಳು - ಕನ್ನಡದಲ್ಲಿ:
- ತುಳು ಸಾಹಿತ್ಯ ಚರಿತ್ರೆ(ಪ್ರಧಾನ ಸಂಪಾದಕರು)(ಕನ್ನಡ ವಿಶ್ವವಿದ್ಯಾಲಯ, ಹಂಪಿ,೨೦೦೭)
- ಸಮಗ್ರ ಕನ್ನಡ ಜೈನ ಸಾಹಿತ್ಯ- ೧೯ ಸಂಪುಟಗಳು(ಪ್ರಧಾನ ಸಂಪಾದಕರು)( ಕನ್ನಡ ವಿಶ್ವವಿದ್ಯಾಲಯ, ಹಂಪಿ,೨೦೦೬-೨೦೦೭)
- ಮಂಗಳೂರು ದರ್ಶನ: ೩ ಸಂಪುಟಗಳು (ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ)(೨೦೧೬)
- ವಚನ(ಶಿವಶರಣರ ೨೫೦೦ ವಚನಗಳ ತುಳು ಅನುವಾದ)(ಬಸವ ಸಮಿತಿ, ಬೆಂಗಳೂರು, ೨೦೧೫)
- ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು(೧೯೮೭)
- ಕಡೆಂಗೋಡ್ಲು ಸಾಹಿತ್ಯ(೧೯೮೭)
- ಶಾಂಭವಿ(೧೯೮೭)
- ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯ(೧೯೮೯)
- ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು(೧೯೮೯)
- ಜನಪದ ಆಟಗಳು(೧೯೯೦)
- ತುಳು ಕಬಿತಗಳು(೧೯೯೬)
- ಮಲೆಕುಡಿಯರು(೧೯೯೬)
- ಯಕ್ಷಗಾನ ಪ್ರಸಂಗ ಸಂಪುಟ(೧೯೯೬)
- ಪೊನ್ನ ಕಂಠಿ(೧೯೯೭)
- ಭೂತಾರಾಧನೆಯ ಬಣ್ಣಗಾರಿಕೆ(೨೦೦೧)
- ಅಗ್ರಾಳ ಪುರಂದರ ರೈ ಸಮಗ್ರಸಾಹಿತ್ಯ(೨೦೦೧)
- ಶತಮಾನದ ಕೊನೆಯಲ್ಲಿ ಶಿವರಾಮ ಕಾರಂತ(೨೦೦೨)
- ಪುಟ್ಡುಬಳಕೆಯ ಪಾಡ್ದನಗಳು(೨೦೦೪)
- ರಾಘವಾಂಕನ ಸಮಗ್ರ ಕಾವ್ಯ(೨೦೦೪)
- ರೂಪಾಂತರ(೨೦೧೩)
ಬ್ಲಾಗ್ ಬರಹ
[ಬದಲಾಯಿಸಿ][https://bavivekrai.wordpress.com/
ವಿದೇಶ ಪ್ರವಾಸ
[ಬದಲಾಯಿಸಿ]ಜರ್ಮನಿ, ಫಿನ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಜಪಾನ್, ಅಮೆರಿಕ, ಇಂಗ್ಲೆಂಡ್, ,ಪೋಲಂಡ್, ದುಬೈ, ಅಬುದಾಬಿ, ಶಾರ್ಜಾ,ಕುವೈಟ್, ಕತಾರ್- ಈ ದೇಶಗಳಿಗೆ ಸಂಶೋಧನೆ,ಅಧ್ಯಯನ,ಅಧ್ಯಾಪನ ಮತ್ತು ಉಪನ್ಯಾಸಗಳ ಉದ್ದೇಶಗಳಿಗಾಗಿ ಪ್ರವಾಸಮಾಡಿದ್ದಾರೆ..
ಪ್ರಶಸ್ತಿಗಳು
[ಬದಲಾಯಿಸಿ]- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ
- ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್
- ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ
- ಡಾ.ಹಾ ಮಾ ನಾಯಕ ಗೌರವ ಪ್ರಶಸ್ತಿ( ಕರ್ನಾಟಕ ಸಂಘ,ಮಂಡ್ಯ)
- ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ
- ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ
- ಚಂದನ ದೂರದರ್ಶನ ಪ್ರಶಸ್ತಿ
- ಶಿವಮೊಗ್ಗ ಕರ್ನಾಟಕ ಸಂಘದ ಗೌರವ ಪ್ರಶಸ್ತಿ
- ಮಣಿಪಾಲ ವಿಶ್ವವಿದ್ಯಾಲಯದ ೨೦೧೭ರ ಹೊಸವರ್ಷದ ಪ್ರಶಸ್ತಿ.
- ಮಾಸ್ತಿ ಪ್ರಶಸ್ತಿ(ಮಾಸ್ತಿ ಟ್ರಸ್ಟ್)
- ಶಿವರಾಮ ಕಾರಂತ ಪ್ರಶಸ್ತಿ (ಶಿವರಾಮ ಕಾರಂತ ಪ್ರತಿಷ್ಠಾನ, ಮೂಡಬಿದಿರೆ)
- ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಪ್ರಶಸ್ತಿ.
- ಡಾ.ಜೀ ಶಂ ಪರಮಶಿವಯ್ಯ ಜಾನಪದ ಪ್ರಶಸ್ತಿ(ಕರ್ನಾಟಕ ಜಾನಪದ ಪರಿಷತ್ತು)
- ಶ್ರೀ ಸಾಹಿತ್ಯ ಪ್ರಶಸ್ತಿ' ( ಬಿ ಎಂ ಶ್ರೀ ಪ್ರತಿಷ್ಠಾನ)
- ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ( ಸಂದೇಶ ಪ್ರತಿಷ್ಠಾನ)
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಪುಸ್ತಕ ಬಹುಮಾನ: ' ನೆತ್ತರ ಮದುವೆ' ಅನುವಾದ ನಾಟಕ.
- ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
- ಕರ್ನಾಟಕ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
- ಕರ್ನಾಟಕ ದೇಸಿ ಸಮ್ಮೇಳನದ ಅಧ್ಯಕ್ಷತೆ
- ಕುವೈತ್ ತುಳು ಸಮ್ಮೇಳನದ ಅಧ್ಯಕ್ಷತೆ,
- ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನದ ಅಧ್ಯಕ್ಷತೆ[೧]-೨೦೧೩
ನೋಡಿ
[ಬದಲಾಯಿಸಿ]- ಜೀವನ ಕಥನ:ಸಂದರ್ಶನ[೨]:
ಉಲ್ಲೇಖ
[ಬದಲಾಯಿಸಿ]