ಮತಿಘಟ್ಟ ಕೃಷ್ಣಮೂರ್ತಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಮತಿಘಟ್ಟ ಕೃಷ್ಣಮೂರ್ತಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನಲ್ಲಿ ಜುಲೈ ೧೨,೧೯೧೨ರಂದು ಜನಿಸಿದರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯ ಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ.

ಪತ್ರಿಕೋದ್ಯಮ[ಬದಲಾಯಿಸಿ]

೧೯೪೦ರಲ್ಲಿ ಮಯೂರ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ೧೦ ತಿಂಗಳ ಕಾಲ ನಡೆಸಿದರು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಜೈಲಿನಲ್ಲಿದ್ದರು.೧೯೪೧ರ ನಂತರ ತಾಯಿನಾಡು,ಕೈಲಾಸ,ಕನ್ನಡಪ್ರಭ ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ,೧೯೪೫ರಲ್ಲಿ ನಿವೃತ್ತಿ ಹೊಂದಿದರು.

ಕೃತಿಗಳು[ಬದಲಾಯಿಸಿ]

 • ನಾಡ ಪದಗಳು
 • ಕಳಸಾಪುರದ ಹುಡುಗರು - ಚಲನಚಿತ್ರವಾಗಿರುವ ಕಾದಂಬರಿ.
 • ಗೃಹಿಣಿ ಗೀತೆ
 • ಸಾಂಪ್ರದಾಯಿಕ ಗೀತೆಗಳು
 • ಶಕುನದ ಹಕ್ಕಿ,
 • ಹೊನ್ನ ಹೊತ್ತಿಗೆ
 • ಮರುಗಿ ಗಂಡನ ಪೂಜೆ - ನಾಟಕ
 • ಹೊಂಬಾಳೆ - ನಾಟಕ
 • ನಮ್ಮ ಹಳ್ಳಿಯ ಹಾಡು
 • ಸರ್ವೋದಯ
 • ಪಚ್ಚೆತೆನೆ - ಸಣ್ಣ ಕತೆಗಳ ಸಂಕಲನ
 • ಝೇಂಕಾರ , ಉಯ್ಯಾಲೆ - ಜನಪದ ಗೀತೆಗಳ ಧ್ವನಿಸುರುಳಿಗಳು.

ಪ್ರಶಸ್ತಿ, ಸನ್ಮಾನಗಳು[ಬದಲಾಯಿಸಿ]

 • ಜಾನಪದ ರತ್ನ ,
 • ಜಾನಪದ ತಜ್ಞ ,
 • ಜಾನಪದ ಭೀಷ್ಮ
 • ಹಾಸನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ,ಗೌರವಿಸಿದೆ.

ನಿಧನ[ಬದಲಾಯಿಸಿ]

ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು ಜುಲೈ ೨೭,೨೦೦೬ರ ಗುರುವಾರದಂದು ಬೆಂಗಳೂರಿನಲ್ಲಿ, ತಮ್ಮ ೯೪ರ ವಯಸ್ಸಿನಲ್ಲಿ, ನಿಧನರಾದರು.