ಭಾರತದ ರಾಜಕೀಯ ಪಕ್ಷಗಳು
ವಿಕಿಪೀಡಿಯ ಇಂದ
ಭಾರತದ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ರಾಜಕೀಯ ಪಕ್ಷಗಳು
ಭಾರತದ ಸಂವಿಧಾನದ ಪ್ರಕಾರ ಭಾರತದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರಕ್ಕೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು.
ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಸದಸ್ಯರಿರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳೆಂದು ಕರೆಯಲಾಗುತ್ತವೆ. ಇವುಗಳಲ್ಲಿ ಮುಖ್ಯವಾದವು:
- ಬಹುಜನ ಸಮಾಜ ಪಕ್ಷ (BSP) - ಮಾಯಾವತಿ ಕುಮಾರಿ ಅವರ ನೇತೃತ್ವದಲ್ಲಿ.
- ಭಾರತೀಯ ಜನತಾ ಪಕ್ಷ (BJP) - ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ.
- ಭಾರತೀಯ ಕಮ್ಯುನಿಷ್ಟ್ ಪಕ್ಷ (CPI) - ಎ. ಬಿ. ಬರ್ಧನ್ ಅವರ ನೇತೃತ್ವದಲ್ಲಿ.
- ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) (CPI(M)) - ಪ್ರಕಾಶ್ ಕರಾಟ್ ಅವರ ನೇತೃತ್ವದಲ್ಲಿ.
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) - ಸೋನಿಯ ಗಾಂಧಿ ಅವರ ನೇತೃತ್ವದಲ್ಲಿ.
- ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (NCP) - ಶರದ್ ಪವಾರ್ ಅವರ ನೇತೃತ್ವದಲ್ಲಿ.