ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chennai International Airport
Meenambakkam Airport
சென்னை பன்னாட்டு வானூர்தி நிலையம்
ಐಎಟಿಎ: MAAಐಸಿಎಒ: VOMM
ಸಾರಾಂಶ
ಪ್ರಕಾರPublic
ಮಾಲಕ/ಕಿಭಾರತ ಸರ್ಕಾರ
ನಡೆಸುವವರುAirports Authority of India
ಸೇವೆChennai Metropolitan Area
ಸ್ಥಳTirusulam, ಚೆನ್ನೈ
ಮುಖ್ಯ ವಿಮಾನಯಾನ ಸಂಸ್ಥೆಗಳು
ಸಮುದ್ರಮಟ್ಟಕ್ಕಿಂತ ಎತ್ತರ೫೨ ft / ೧೬ m
ನಿರ್ದೇಶಾಂಕ12°58′56″N 80°9′49″E / 12.98222°N 80.16361°E / 12.98222; 80.16361
ರನ್‌ವೇ
ದಿಕ್ಕು Length Surface
ft m
೦೭/೨೫ ೧೨,೦೦೧ ೩,೬೫೮ Asphalt
೧೨/೩೦ ೬,೭೦೮ ೨,೦೪೫ AsphaltConcrete
Statistics (೨೦೦೭-೦೮)
Passenger movements೧೦,೬೫೯,೭೫೪
Airfreight movements in tonnes೨೭೦,೬೦೮
Aircraft movements೧೧೫,೮೬೫

ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವು (IATA: MAAICAO: VOMM) (ತಮಿಳು:சென்னை பன்னாட்டு வானூர்தி நிலையம் ) ಭಾರತದ ಚೆನ್ನೈನ ದಕ್ಷಿಣ ಭಾಗದಲ್ಲಿರುವ ತಿರುಶೂಲಂನಲ್ಲಿ 7 km (4.3 mi) ನೆಲೆಗೊಂಡಿದೆ. ಇದು ದೇಶದೊಳಗಡೆ ಪ್ರವೇಶ ಪಡೆಯುವ ಅತ್ಯಂತ ದೊಡ್ಡ ಅಂತರಾಷ್ಟ್ರೀಯ ಹೆಬ್ಬಾಗಿಲುಗಳ ಪೈಕಿ ಒಂದಾಗಿದ್ದು, ಭಾರತದಲ್ಲಿನ ಮೂರನೇ ಅತಿ ನಿಬಿಡವಾದ (ದೆಹಲಿ ಮತ್ತು ಮುಂಬಯಿಯ ನಂತರ) ವಿಮಾನ ನಿಲ್ದಾಣವಾಗಿದೆ. ಅಷ್ಟೇ ಅಲ್ಲ, ಇದು ೨೦೦೭ರಲ್ಲಿ ಸುಮಾರು ೧೨ ದಶಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಮೂಲಕ ಹಾಗೂ ೨೫ಕ್ಕೂ ಹೆಚ್ಚಿನ ವಿವಿಧ ವಾಯುಯಾನ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಮೂಲಕ ಒಂದು ಅಂತರರಾಷ್ಟ್ರೀಯ ಕೇಂದ್ರವೆಂಬ ಹೆಸರನ್ನೂ ಪಡೆದಿದೆ. ಇದು ಮುಂಬಯಿ ನಂತರದ ದೇಶದಲ್ಲಿನ ಎರಡನೇ-ಅತಿದೊಡ್ಡ ಸರಕು ಕೇಂದ್ರವೆನಿಸಿಕೊಂಡಿದೆ. ಮೀನಂಬಕ್ಕಂ ಹಾಗೂ ತಿರುಶೂಲಂನ ಉದ್ದಕ್ಕೂ ಇದು ನೆಲೆಗೊಂಡಿದ್ದು, ತಿರುಶೂಲಂನಲ್ಲಿ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶವಿದ್ದರೆ, ಮೀನಂಬಕ್ಕಂನಲ್ಲಿ ಸರಕು ಪ್ರವೇಶಕ್ಕೆ ಅವಕಾಶವಿದೆ.

ಇತಿಹಾಸ[ಬದಲಾಯಿಸಿ]

ಮೀನಂಬಕ್ಕಂನಲ್ಲಿರುವ ಹಳೆಯ ಆಗಮನ ಹಾಗೂ ನಿರ್ಗಮನ ನಿಲ್ದಾಣ

ಭಾರತದ ಮೊಟ್ಟಮೊದಲ ವಿಮಾನ ನಿಲ್ದಾಣಗಳ ಪೈಕಿ ಚೆನ್ನೈ ಒಂದು. ಏರ್‌ ಇಂಡಿಯಾದ ಮೊದಲ ವಿಮಾನ ೧೯೫೪ರಲ್ಲಿ ಮುಂಬಯಿಯಿಂದ ಬೆಳಗಾಂನ ಮೂಲಕ ಚೆನ್ನೈಗೆ ಹಾರಿತು. ಮೊದಲ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ನಿಲ್ದಾಣವನ್ನು , ವಿಮಾನ ನಿಲ್ದಾಣದ ಈಶಾನ್ಯ ಭಾಗದಲ್ಲಿ ಕಟ್ಟಲಾಯಿತು. ಈ ಪ್ರದೇಶವು ಮೀನಂಬಕ್ಕಂನ ಉಪನಗರದಲ್ಲಿ ಬರುವುದರಿಂದ ಸದರಿ ವಿಮಾನನಿಲ್ದಾಣವನ್ನು ಮೀನಂಬಕ್ಕಂ ವಿಮಾನ ನಿಲ್ದಾಣ ಎಂದೇ ಉಲ್ಲೇಖಿಸಲಾಗುತ್ತದೆ. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಒಂದು ಹೊಸ ಸ್ನ್ನುಅಮುಚ್ಛಯವನ್ನು ತರುವಾಯ ತಿರುಶೂಲಂನಲ್ಲಿ ನಿರ್ಮಿಸಲಾಯಿತು. ಇದು ಮತ್ತಷ್ಟು ದಕ್ಷಿಣಕ್ಕೆ ಪಲ್ಲಾವರಂ ಸಮೀಪದಲ್ಲಿದ್ದು, ಇಲ್ಲಿಗೆ ಪ್ರಯಾಣಿಕ ಕಾರ್ಯಾಚರಣೆಗಳು ವರ್ಗಾಯಿಸಲ್ಪಟ್ಟವು. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹಳೆಯ ಕಟ್ಟಡವನ್ನು ಈಗ ಸರಕುಗಳ ಆಗಮನ ಹಾಗೂ ನಿರ್ಗಮನದ ಒಂದು ನಿಲ್ದಾಣವಾಗಿ ಬಳಸಲಾಗುತ್ತಿದ್ದು, ಅದು ಭಾರತೀಯ ಕೊರಿಯರ್‌ ಕಂಪನಿಯಾದ ಬ್ಲ್ಯೂ ಡಾರ್ಟ್‌ಗೆ ಸಂಬಂಧಿಸಿದ ಮೂಲ ಕಾರ್ಯಸ್ಥಾನವಾಗಿದೆ.

ರಚನಾ ಸ್ವರೂಪ[ಬದಲಾಯಿಸಿ]

ರಾತ್ರಿಯಲ್ಲಿ ಕಾಣಿಸುವಂತೆ ಚೆನ್ನೈ ವಿಮಾನ ನಿಲ್ದಾಣ

ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಆಗಮನ ಹಾಗೂ ನಿರ್ಗಮನದ ಮೂರು ನಿಲ್ದಾಣಗಳನ್ನು ಒಳಗೊಂಡಿದೆ: ಮೀನಂಬಕ್ಕಂನಲ್ಲಿರುವ ಆಗಮನ ಹಾಗೂ ನಿರ್ಗಮನದ ಹಳೆಯ ನಿಲ್ದಾಣವನ್ನು ಸರಕು ನಿರ್ವಹಣೆಗಾಗಿ ಬಳಸಲಾಗುತ್ತದೆ; ತಿರುಶೂಲಂನಲ್ಲಿರುವ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ಹೊಸ ನಿಲ್ದಾಣ ಸಂಕೀರ್ಣವನ್ನು ಪ್ರಯಾಣಿಕ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತದೆ. ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ನಿಲ್ದಾಣ ಸಂಕೀರ್ಣವು ಸ್ವದೇಶದ ಮತ್ತು ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣಗಳನ್ನು ಒಳಗೊಂಡಿದ್ದು, ಒಂದು ಸಂಯೋಜಕ ಕಟ್ಟಡದಿಂದ ಇವು ಅಂತರ-ಸಂಪರ್ಕವನ್ನು ಹೊಂದಿವೆ. ಈ ಸಂಯೋಜಕ ಕಟ್ಟಡವು ಆಡಳಿತಾತ್ಮಕ ಕಚೇರಿಗಳು ಹಾಗೂ ಒಂದು ಫಲಹಾರ ಮಂದಿರವನ್ನು ಒಳಗೊಂಡಿದೆ. ಸದರಿ ಸಂಕೀರ್ಣವು ಒಂದು ಅಖಂಡವಾದ ರಚನೆಯಾಗಿದ್ದರೂ ಸಹ, ಪೂರ್ವಭಾವಿಯಾಗಿ ಅಸ್ತಿತ್ವದಲ್ಲಿದ್ದ ಮೀನಂಬಕ್ಕಂ ಆಗಮನ ಹಾಗೂ ನಿರ್ಗಮನ ನಿಲ್ದಾಣಕ್ಕೆ ಕಾಮರಾಜ್‌ ಮತ್ತು ಅಣ್ಣಾ ಆಗಮನ ಹಾಗೂ ನಿರ್ಗಮನ ನಿಲ್ದಾಣಗಳನ್ನು ೧೯೮೮ರಲ್ಲಿ ಸೇರಿಸುವುದರೊಂದಿಗೆ ಇದನ್ನು ಹಂತಹಂತವಾಗಿ ಕಟ್ಟಲಾಯಿತು.

ಎರಡು ವಿಮಾನ ಸೇತುವೆಗಳನ್ನು (ಜೆಟ್‌ಮಾರ್ಗಗಳನ್ನು) ಹೊಂದಿದ್ದ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು ಕಟ್ಟಲ್ಪಟ್ಟ ಮೊದಲ ಭಾಗವಾಗಿತ್ತು. ಇದರ ನಂತರ, ಮೂರು ವಿಮಾನ ಸೇತುವೆಗಳನ್ನು ಒಳಗೊಂಡ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ನಿರ್ಮಿಸಲಾಯಿತು. ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣದ ನಿರ್ಮಾಣವು ಸಂಪೂರ್ಣಗೊಂಡ ನಂತರ, ಮೀನಂಬಕ್ಕಂನಲ್ಲಿನ ಹಳೆಯ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ಸರಕು ನಿರ್ವಹಣೆಗಾಗಿ ಪ್ರತ್ಯೇಕವಾಗಿ ಬಳಸಲಾಯಿತು. ಮೂರು ವಿಮಾನ ಸೇತುವೆಗಳನ್ನು ಒಳಗೊಂಡಿರುವ ಒಂದು ಹೊಸ ವಿಭಾಗವನ್ನು ಇತ್ತೀಚೆಗಷ್ಟೇ ಸೇರಿಸುವ ಮೂಲಕ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ಮತ್ತಷ್ಟು ದಕ್ಷಿಣ ಭಾಗಕ್ಕೆ ವಿಸ್ತರಿಸಲಾಯಿತು. ಸದ್ಯಕ್ಕೆ, ಹೊಸ ಅಂತರರಾಷ್ಟ್ರೀಯ ವಿಭಾಗವನ್ನು ನಿರ್ಗಮನಗಳಿಗಾಗಿ ಬಳಸಲಾಗುತ್ತಿದ್ದರೆ, ಹಳೆಯದಾದ ಕಟ್ಟಡವನ್ನು ಆಗಮನಗಳಿಗಾಗಿ ಬಳಸಲಾಗುತ್ತಿದೆ.

ಆಗಮನ ಹಾಗೂ ನಿರ್ಗಮನ ನಿಲ್ದಾಣಗಳು, ವಾಯುಯಾನ ಸಂಸ್ಥೆಗಳು ಮತ್ತು ಗಮ್ಯಸ್ಥಾನಗಳು[ಬದಲಾಯಿಸಿ]

ಸ್ವದೇಶದ ವಿಮಾನಗಳು ಕಾಮರಾಜ್‌ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣದಿಂದ (KDT) ಕಾರ್ಯಾಚರಣೆಯನ್ನು ನಡೆಸಿದರೆ, ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು (AIT) ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಮೀಸಲಾಗಿದೆ. ಮೀನಂಬಕ್ಕಂನಲ್ಲಿರುವ ಹಳೆಯ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ಸರಕು ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆ.

ವೀಕ್ಷಣಾ ಗ್ಯಾಲರಿಯಿಂದ ಕಂಡಂತೆ ಒಂದು ಏರ್‌ ಮಾರಿಷಸ್‌ ಬೋಯಿಂಗ್‌ 767-300ER ವಿಮಾನ
ಮೆಟ್ಟಿಲೇಣಿಯ ನೋಟ

ಟೆಂಪ್ಲೇಟು:Airport-dest-list

ಸರಕು ಆಗಮನ ಹಾಗೂ ನಿರ್ಗಮನ ನಿಲ್ದಾಣ[ಬದಲಾಯಿಸಿ]

ಚಿತ್ರ:Chennaiairport9.jpg
ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಂತಿರುವ ಒಂದು ಕಾರ್ಗೋಲಕ್ಸ್‌ ಬೋಯಿಂಗ್‌ 747-4R7F/SCD ವಿಮಾನ.
ಸರಕು ವಾಯುಯಾನ ಸಂಸ್ಥೆಗಳು
ಏರ್‌ ಇಂಡಿಯಾ ಕಾರ್ಗೋ ಅಟ್ಲಾಸ್‌ ಏರ್‌‌ ಏರ್‌ ಚೈನಾ ಕಾರ್ಗೋ
ಬ್ಲ್ಯೂ ಡಾರ್ಟ್‌ ಏವಿಯೇಷನ್‌ ಬ್ರಿಟಿಷ್‌ ಏರ್‌ವೇಸ್‌ ವರ್ಲ್ಡ್‌ ಕಾರ್ಗೋ ಕಾರ್ಗೋಲಕ್ಸ್‌
ಕ್ಯಾಥಿ ಪೆಸಿಫಿಕ್‌ ಏರ್‌ವೇಸ್‌ ಕಾರ್ಗೋ ಚಾಂಪಿಯನ್‌ ಏರ್‌‌ ಕ್ರೆಸೆಂಟ್‌ ಏರ್‌‌ ಕಾರ್ಗೋ DHL ಏವಿಯೇಷನ್‌
ಡೆಕ್ಕನ್‌ 360 ಈಸ್ಟರ್ನ್‌ ಕೆರಿಬಿಯನ್‌ ಏರ್‌ಲೈನ್ಸ್‌ ಎಮಿರೇಟ್ಸ್‌ ಸ್ಕೈ ಕಾರ್ಗೋ
ಎಥಿಯೋಪಿಯನ್‌ ಏರ್‌ಲೈನ್ಸ್‌ ಕಾರ್ಗೋ ಎಟಿಹಾಡ್‌ ಕ್ರಿಸ್ಟಲ್‌ ಕಾರ್ಗೋ ಯೂರೋ ಕಾರ್ಗೋ ಏರ್‌
ಫೆಡ್‌ಎಕ್ಸ್‌ ಎಕ್ಸ್‌ಪ್ರೆಸ್‌ ಗ್ಲೋಬಲ್‌ ಸಪ್ಲೈ ಸಿಸ್ಟಮ್ಸ್‌ ಗ್ರೇಟ್‌ ವಾಲ್‌ ಏರ್‌ಲೈನ್ಸ್‌
ಗಲ್ಫ್‌ ಏರ್‌ ಕಾರ್ಗೋ ಜೇಡ್‌ ಕಾರ್ಗೋ ಇಂಟರ್‌ನ್ಯಾಷನಲ್‌ ಜೆಟ್‌8 ಏರ್‌ಲೈನ್ಸ್‌ ಕಾರ್ಗೋ
ಕೊರಿಯನ್‌ ಏರ್‌ ಕಾರ್ಗೋ ಲುಫ್ತಾನ್ಸಾ ಕಾರ್ಗೋ ಮಾರ್ಟಿನ್‌ಏರ್‌‌ ಕಾರ್ಗೋ
MASಕಾರ್ಗೋ ಮಿಡೆಕ್ಸ್‌ ಏರ್‌ಲೈನ್ಸ್‌ ನೈಸ್‌ ಹೆಲಿಕಾಪ್ಟರ್ಸ್‌
ಪೋಲಾರ್‌ ಏರ್‌ ಕಾರ್ಗೋ ಕತಾರ್‌‌ ಏರ್‌ವೇಸ್‌ ಕಾರ್ಗೋ ಸ್ಯಾನ್‌ ಜುವಾನ್‌ ಏರ್‌ಲೈನ್ಸ್‌
ಸಿಂಗಪೂರ್‌ ಏರ್‌ಲೈನ್ಸ್‌ ಕಾರ್ಗೋ ಸದರ್ನ್‌ ಏರ್‌ ಶ್ರೀಲಂಕನ್‌ ಕಾರ್ಗೋ
ಥಾಯ್‌ ಏರ್‌ವೇಸ್‌ ಕಾರ್ಗೋ ಟ್ರಾನ್ಸ್‌ಮೈಲ್‌ ಏರ್‌ಸರ್ವೀಸಸ್‌

MRO ವಿಮಾನಖಾನೆ ಸೌಕರ್ಯ[ಬದಲಾಯಿಸಿ]

ಚೆನ್ನೈನಲ್ಲಿ ವಿಮಾನಖಾನೆ ಸೌಕರ್ಯವನ್ನು ಹೊಂದಿರುವ ವಾಯುಯಾನ ಸಂಸ್ಥೆಗಳು
'
ವಾಯುಯಾನ ಸಂಸ್ಥೆಗಳು
ಏರ್‌ ಇಂಡಿಯಾ
ಇಂಡಿಯನ್‌ ಏರ್‌ಲೈನ್ಸ್‌
ಕಿಂಗ್‌ಫಿಶರ್‌ ಏರ್‌ಲೈನ್ಸ್‌

ಅಂಕಿ-ಅಂಶಗಳು[ಬದಲಾಯಿಸಿ]

ಪ್ರಸ್ತುತ, ಚೆನ್ನೈ ವಿಮಾನ ನಿಲ್ದಾಣವು ಪ್ರತಿ ಗಂಟೆಗೆ ಸುಮಾರು ೨೫ ವಿಮಾನ ಚಲನೆಗಳನ್ನು ನಿರ್ವಹಿಸುತ್ತಿದ್ದು, ೨೦೧೪-೧೫ರ ವರ್ಷದ ವೇಳೆಗೆ ಇದು ಗರಿಷ್ಟ ಪ್ರಮಾಣವನ್ನು ಮುಟ್ಟಲಿದೆ. ಆದಾಗ್ಯೂ, ಒತ್ತಡದ-ಅವಧಿಯ ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯವು ಅದಕ್ಕಿಂತ ಸಾಕಷ್ಟು ಮುಂಚಿತವಾಗಿ ಪೂರ್ತಿಯಾಗಿ ಬಳಕೆಗೆ ಒಳಗಾಗಲಿದೆ. ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು ವಾರ್ಷಿಕವಾಗಿ ೩ ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ೨೦೦೭-೦೮ರಲ್ಲಿ ೩,೪೧೦,೨೫೩ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ತನ್ನ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯವನ್ನು ಈಗಾಗಲೇ ದಾಟಿದಂತಾಗಿದೆ. ಅದೇ ರೀತಿಯಲ್ಲಿ, ಕಾಮರಾಜ್‌ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣವು ವಾರ್ಷಿಕವಾಗಿ ೬ ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ೨೦೦೭-೦೮ರಲ್ಲಿ ೭,೨೪೯,೫೦೧ ಪ್ರಯಾಣಿಕರನ್ನು ನಿರ್ವಹಿಸಿದೆ. ಮತ್ತೊಮ್ಮೆ ಇಲ್ಲೂ ಸಹ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಬೇಡಿಕೆಯು ಸಾಮರ್ಥ್ಯವನ್ನು ಹೆಚ್ಚು ಪ್ರಮಾಣದಲ್ಲಿ ದಾಟಿದಂತಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳ ಪೈಕಿ ಚೆನ್ನೈ ವಿಮಾನ ನಿಲ್ದಾಣವು ೨೦೦೭ - ೦೮ರ ವರ್ಷದ ಅವಧಿಯಲ್ಲಿ ೧೦,೬೫೯,೭೫೪ರಷ್ಟು ಸಂಖ್ಯೆಯ ಪ್ರಯಾಣಿಕರ ಒಂದು ಸಾಮರ್ಥ್ಯವನ್ನು ನಿರ್ವಹಿಸಿದೆ. ೨೦೦೭ - ೦೮ರ ವರ್ಷದಲ್ಲಿ[ಸೂಕ್ತ ಉಲ್ಲೇಖನ ಬೇಕು] ಈ ವಿಮಾನ ನಿಲ್ದಾಣವು ಒಟ್ಟಾರೆಯಾಗಿ ೨೭೦,೬೦೮ ಟನ್ನುಗಳಷ್ಟು ಸರಕನ್ನು ನಿರ್ವಹಿಸಿದೆ.

  • ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ೨೦೦೭-೦೮ರಲ್ಲಿ ೧,೧೫,೮೬೫ರಷ್ಟು ಸಂಖ್ಯೆಯ ವಿಮಾನ ಚಲನೆಗಳನ್ನು ನಿರ್ವಹಿಸಿತು ಮತ್ತು ವಿಮಾನ ಚಲನೆಗಳನ್ನು ನಿರ್ವಹಿಸುವಲ್ಲಿನ ಇದರ ಸಾಮರ್ಥ್ಯವು ೨೦೧೪-೧೫ರ ಹೊತ್ತಿಗೆ ಗರಿಷ್ಟ ಪ್ರಮಾಣವನ್ನು ಮುಟ್ಟುವ ಸಾಧ್ಯತೆಯಿದೆ.
  • ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ಪ್ರತಿ ಗಂಟೆಗೆ ಸುಮಾರು ೨೫ ವಿಮಾನ ಚಲನೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಿಸ್ತರಣೆಯ ನಂತರವೂ, ೨೦೧೪-೧೫ರ ವೇಳೆಗೆ ವಿಮಾನ ನಿಲ್ದಾಣವು ಗರಿಷ್ಟ ಪ್ರಮಾಣವನ್ನು ಮುಟ್ಟಲಿದೆ ಹಾಗೂ ಅಷ್ಟು ಹೊತ್ತಿಗೆ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವು ಸಿದ್ಧವಾಗಬೇಕಿದೆ. ಇದೇ ತೆರನಾದ ತರ್ಕವನ್ನು ಮುಂಬಯಿಯಲ್ಲಿ ಅನ್ವಯಿಸಲಾಗಿದ್ದು, ಅಲ್ಲಿನ ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅದೇ ವೇಳೆಗೆ ಸಿದ್ಧವಾಗಬೇಕಿದೆ, ಮತ್ತು ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ಸರಿಸುಮಾರು ಅದೇ ಸಮಯಕ್ಕೆ ಗರಿಷ್ಟ ಪ್ರಮಾಣವನ್ನು ಮುಟ್ಟುತ್ತದೆ.
  • ಸ್ವದೇಶದ ಆಗಮನ ಹಾಗೂ ನಿರ್ಗಮನದ ಒಂದು ಹೊಸ ನಿಲ್ದಾಣವನ್ನು ನಿರ್ಮಿಸಲು ಹಾಗೂ ಅಲ್ಲಿ ಅಡ್ಡ-ಓಡುದಾರಿಗಳನ್ನು ಏಕಕಾಲಿಕವಾಗಿ ಬಳಸಲು ಅನುವು ಮಾಡಿಕೊಡುವ ಒಂದು ತರ್ಕಬದ್ಧವಾದ ದೃಷ್ಟಿಕೋನವನ್ನು AAI ಹೊಂದಿದೆ. ಈ ಎಲ್ಲಾ ಕೆಲಸಕಾರ್ಯಗಳೂ ಕಾರ್ಯಗತಗೊಳ್ಳಲು ನಾವು ೨೦೧೫ರವರೆಗೂ ಕಾಯಬೇಕಾಗುತ್ತದೆ.

ಗೌರವ ಪ್ರಶಸ್ತಿಗಳು[ಬದಲಾಯಿಸಿ]

  • ಪಯಣಿಸುವ ಪ್ರಯಾಣಿಕರ ಸಂಖ್ಯೆಗೆ ಸಂಬಂಧಿಸಿದಂತೆ ಇದು ದೇಶದಲ್ಲಿನ ಮೂರನೇ ಅತಿದೊಡ್ಡ, ಹಾಗೂ ಸರಕು ನಿರ್ವಹಣೆಗೆ ಸಂಬಂಧಿಸಿದಂತೆ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.
  • ಇದು ದೇಶದಲ್ಲಿನ ಮೊಟ್ಟಮೊದಲ ISO 9000 ಪ್ರಮಾಣಿತ ವಿಮಾನ ನಿಲ್ದಾಣವಾಗಿದೆ. ಈ ಪ್ರಶಸ್ತಿಯನ್ನು ಇದು ೨೦೦೧ರಲ್ಲಿ ಸ್ವೀಕರಿಸಿತು.
  • ಇದು ಅಂತರರಾಷ್ಟ್ರೀಯ, ಸ್ವದೇಶದ ಮತ್ತು ಸರಕು ಆಗಮನ ಹಾಗೂ ನಿರ್ಗಮನದ ನಿಲ್ದಾಣಗಳನ್ನು ಒಂದಕ್ಕೊಂದು ತಾಗಿಕೊಂಡಿರುವಂತೆ ಹೊಂದಿರುವ ಮೊಟ್ಟಮೊದಲ ವಿಮಾನ ನಿಲ್ದಾಣವಾಗಿದೆ.
  • ಇದು (ಸ್ವದೇಶದ ಆಗಮನ ಹಾಗೂ ನಿರ್ಗಮನದ ನಿಲ್ದಾಣದಲ್ಲಿ) ವಿಮಾನ ಸೇತುವೆಯನ್ನು ಹೊಂದುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
  • ಇದು ವಾಕಲೇಟರ್‌ಗಳನ್ನು (ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನದ ನಿಲ್ದಾಣದಲ್ಲಿ) ಹೊಂದುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
  • ಇದು ಅಂತರರಾಷ್ಟ್ರೀಯ ವಿಮಾನಗಳಿಗೆ ಸಂಬಂಧಿಸಿದಂತೆ ಸ್ವದೇಶದ ಆಗಮನ ಹಾಗೂ ನಿರ್ಗಮನದ ನಿಲ್ದಾಣವನ್ನು ಸರಾಗವಾಗಿ ಬಳಸಿಕೊಳ್ಳುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
  • ಕಾಮರಾಜ್‌ ಸ್ವದೇಶದ ಆಗಮನ ಹಾಗೂ ನಿರ್ಗಮನದ ನಿಲ್ದಾಣವಷ್ಟೇ ಅಲ್ಲದೇ, ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನದ ನಿಲ್ದಾಣದಲ್ಲಿ ಗೊತ್ತುಪಡಿಸಿದ ನೀರು ಶೀತಕಯಂತ್ರಗಳ ಮೂಲಕ ಉಚಿತವಾಗಿ ಖನಿಜ ಜಲವನ್ನು (ಮಿನರಲ್‌ ವಾಟರ್‌) ಪೂರೈಕೆ ಮಾಡುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
  • ಇದು ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಕಾಗದದ ಬಟ್ಟಲುಗಳನ್ನು ಅಲ್ಲಿ ಪರಿಚಯಿಸುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
  • ಇಲ್ಲಿನ ಉಪನಗರದ ಪ್ರತ್ಯೇಕವಾದ ವಿಮಾನ ನಿಲ್ದಾಣ ರೈಲು ನಿಲ್ದಾಣ ವಿಮಾನ ನಿಲ್ದಾಣವು ಶೀಘ್ರದಲ್ಲಿಯೇ ಒಂದು ಸಂಯೋಜಿತ ಮೆಟ್ರೋ ರೈಲಿನ ಅಂತಿಮ ನಿಲ್ದಾಣವಾಗಿಯೂ ಮಾರ್ಪಾಡಾಗಲಿದೆ.
  • ಭಾರತದ ಖಾಸಗಿ ವಾಯುಯಾನ ಸಂಸ್ಥೆಗಳಿಂದ ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳನ್ನು (ಜೆಟ್‌ ಏರ್‌ವೇಸ್‌ನಿಂದ ಕೊಲೊಂಬೊಗೆ) ಕೈಗೊಳ್ಳುವಲ್ಲಿ ಇದು ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
  • ನದಿಯೊಂದರ ಮೇಲೆ ಹಾದುಹೋಗುವ (ಆಡ್ಯಾರ್‌ ನದಿಯ ಮೇಲಿನ ದ್ವಿತೀಯಕ ಓಡುದಾರಿ)(ನಿರ್ಮಾಣದ ಹಂತದಲ್ಲಿದೆ) ಓಡುದಾರಿಯೊಂದನ್ನು ಹೊಂದುವಲ್ಲಿ ಇದು ೨ನೇ ವಿಮಾನ ನಿಲ್ದಾಣವೆನಿಸಿಕೊಂಡಿದೆ.

ಆಧುನಿಕೀಕರಣ ಮತ್ತು ವಿಸ್ತರಣೆ[ಬದಲಾಯಿಸಿ]

ಚಿತ್ರ:Chennai Upgraded Terminal.jpg
ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣದಲ್ಲಿನ ಉನ್ನತೀಕರಿಸಲ್ಪಟ್ಟ ಸಾಮಾನು-ಸರಂಜಾಮು ಪಡೆಯುವ ಪ್ರದೇಶ

ಚೆನ್ನೈ ವಿಮಾನ ನಿಲ್ದಾಣವು ಆಧುನಿಕೀಕರಣ ಮತ್ತು ವಿಸ್ತರಣೆಗಾಗಿ ಸಿದ್ಧಗೊಳಿಸಲ್ಪಟ್ಟಿದೆ. ಇದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಕೈಗೊಳ್ಳಬೇಕಿದೆ. ಒಂದು ಸಮಾನಾಂತರ ಓಡುದಾರಿ, ಟ್ಯಾಕ್ಸಿ ಮಾರ್ಗಗಳು, ಗಟ್ಟಿ ನೆಲಗಟ್ಟುಗಳು ಮತ್ತು ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹೊಸ ಕಟ್ಟಡಗಳ ಸೃಷ್ಟಿಯು ಈ ಕಾಮಗಾರಿಗಳಲ್ಲಿ ಸೇರಿಕೊಂಡಿದೆ. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಸನಿಹದ ಪ್ರದೇಶಗಳಿಂದ ಸ್ವಾಧೀನಪಡಿಸಿಕೊಳ್ಳುವುದನ್ನು ವಿಸ್ತರಣಾ ಕಾಮಗಾರಿಗಳು ಒಳಗೊಳ್ಳಲಿವೆ. ಇದನ್ನು ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಒಂದು ನಿರ್ಣಯವು ಅಂಗೀಕರಿಸಲ್ಪಟ್ಟ ನಂತರ, ಸದರಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯವನ್ನು ಶ್ರೀಪೆರುಂಬುದೂರ್‌ ತಾಲ್ಲೂಕಿನಲ್ಲಿರುವ ಮನಪಕ್ಕಂ, ಕೋಲಪಕ್ಕಂ, ಗೆರುಗಂಬಕ್ಕಂ ಹಾಗೂ ತಾರಾಪಕ್ಕಂಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಈ ಪ್ರದೇಶಗಳಲ್ಲಿರುವ ಸುಮಾರು ೯೪೭ ಕುಟುಂಬಗಳಿಗೆ ಸರ್ಕಾರವು ಸೂಕ್ತವಾದ ಪರಿಹಾರವನ್ನು ಹಾಗೂ ಪುನರ್‌ವಸತಿಯನ್ನು ಒದಗಿಸಲಿದೆ.[ಸೂಕ್ತ ಉಲ್ಲೇಖನ ಬೇಕು] ವಿಸ್ತರಣಾ ಕಾಮಗಾರಿಯ ಮೊದಲನೆಯ ಹಂತದಲ್ಲಿಯೇ ಸದರಿ ಕುಟುಂಬಗಳ ಪುನರ್‌ವಸತಿಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.

ಆಧುನಿಕೀಕರಣ ಮತ್ತು ಹೊಸದಾಗಿ ರಚಿಸುವ ಕಾಮಗಾರಿಗಳಿಗಾಗಿ ಸುಮಾರು ೨,೩೫೦ ಕೋಟಿ ರೂಪಾಯಿಗಳು ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಇದರ ಪೈಕಿ ಓಡುದಾರಿ, ಟ್ಯಾಕ್ಸಿ ಮಾರ್ಗ ಹಾಗೂ ಗಟ್ಟಿ ನೆಲಗಟ್ಟಿನ ನಿರ್ಮಾಣದ ವೆಚ್ಚವೇ ಸುಮಾರು ೧,೧೦೦ ಕೋಟಿ ರೂಪಾಯಿಗಳಾಗಲಿವೆ. ಇನ್ನುಳಿದಂತೆ, ಆಗಮನ ಹಾಗೂ ನಿರ್ಗಮನ ನಿಲ್ದಾಣದ ಕಟ್ಟಡ, ಸರಕು ಕಟ್ಟಡ, ಕಾರು ನಿಲುಗಡೆ ತಾಣ ಮತ್ತು ಮೇಲ್ಮೈ ಸ್ವರೂಪವರ್ಧನೆಯ ನಿರ್ಮಾಣಕ್ಕಾಗಿ ೧,೨೫೦ ಕೋಟಿ ರೂಪಾಯಿಗಳು ವೆಚ್ಚವಾಗಲಿವೆ.[ಸೂಕ್ತ ಉಲ್ಲೇಖನ ಬೇಕು]

ಆಧುನಿಕೀಕರಣ ಯೋಜನೆಯ ಅನುಸಾರ, ಸೇತುವೆಯೊಂದರ ಮುಖಾಂತರ ದ್ವಿತೀಯಕ ಓಡುದಾರಿಯು ಆಡ್ಯಾರ್‌ ನದಿಯ ಮೇಲೆ ನಿರ್ಮಾಣವಾಗಲಿದೆ. ಆಡ್ಯಾರ್‌ ನದಿಗೆ ಅಡ್ಡಲಾಗಿ ಓಡುದಾರಿಯು ವಿಸ್ತರಣೆಗೊಳ್ಳಲಿದೆ. ಓಡುದಾರಿ ಹಾಗೂ ಒಂದು ಟ್ಯಾಕ್ಸಿ ಮಾರ್ಗಕ್ಕೆ ಸ್ಥಳಾವಕಾಶ ಕಲ್ಪಿಸಿಕೊಡುವ ಸಲುವಾಗಿ, ನದಿಯ ಮೇಲೆ ಒಂದು ಸೇತುವೆಯನ್ನು ಕಟ್ಟಲಾಗುತ್ತದೆ. ಇದು ನದಿಯೊಂದಕ್ಕೆ[ಸೂಕ್ತ ಉಲ್ಲೇಖನ ಬೇಕು] ಅಡ್ಡಲಾಗಿ ಒಂದು ಓಡುದಾರಿಯನ್ನು ಹೊಂದುವಲ್ಲಿನ ಭಾರತದಲ್ಲಿನ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಖ್ಯಾತಿಯುನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಂದುಕೊಡಲಿದೆ. ಮುಂಬಯಿಯಲ್ಲಿ ಮಿಥಿ ನದಿಯ ಮೇಲೆ ಓಡುದಾರಿಯ ಕೇವಲ ಅಂತ್ಯಭಾಗ ಮಾತ್ರವೇ ಸಾಗುತ್ತದೆ. ದ್ವಿತೀಯಕ ಓಡುದಾರಿಯ ವಿಸ್ತರಣಾ ಕಾರ್ಯಕ್ಕೆ ಸುಮಾರು ೪೩೦ ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು, ಇದು ೨೦೧೦ರ[ಸೂಕ್ತ ಉಲ್ಲೇಖನ ಬೇಕು] ವೇಳೆಗೆ ಸಂಪೂರ್ಣಗೊಳ್ಳಲಿದೆ. [೩]

ಪ್ರಸ್ತಾವಿತ ಚೆನ್ನೈ ಮೆಟ್ರೊ ರೈಲು ಯೋಜನೆಯು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರದ ಹಲವಾರು ಭಾಗಗಳಿಗೆ ಸಂಪರ್ಕ ಕಲ್ಪಿಸಲಿದೆ. ತಾತ್ಕಾಲಿಕವಾಗಿ, ಸದರಿ ಯೋಜನೆಯು ೨೦೧೩-೨೦೧೪ನೇ ಹಣಕಾಸು ವರ್ಷದಲ್ಲಿ ಸಂಪೂರ್ಣಗೊಳ್ಳುವ ರೀತಿಯಲ್ಲಿ ಕಾರ್ಯಸೂಚಿಯನ್ನು ರೂಪಿಸಲಾಗಿದೆ.[೪]

ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ಪ್ರಸ್ತಾವಿತ ಹೊಸ ನಿಲ್ದಾಣಗಳು[ಬದಲಾಯಿಸಿ]

ಸ್ವದೇಶದ ಆಗಮನ ಹಾಗೂ ನಿರ್ಗಮನದ ಹೊಸ ನಿಲ್ದಾಣವೊಂದರ ನಿರ್ಮಾಣ ಮತ್ತು ಈಗಿರುವ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನದ ನಿಲ್ದಾಣದ ವಿಸ್ತರಣಾ ಕಾರ್ಯಗಳು ಪ್ರಸಕ್ತ ಅಭಿವೃದ್ಧಿ ಯೋಜನೆಗಳಲ್ಲಿ ಸೇರಿಕೊಂಡಿವೆ. ನಾಲ್ಕು ಸಂಸ್ಥೆಗಳ ಸಹಯೋಗದ ಪ್ರಯತ್ನದೊಂದಿಗೆ ಇದರ ವಿನ್ಯಾಸವನ್ನು ರೂಪಿಸಲಾಗಿದೆ. ಭೂದೃಶ್ಯದ ವಿನ್ಯಾಸವನ್ನು ಹರ್‌ಗ್ರೀವ್ಸ್‌ ಅಸೋಸಿಯೇಟ್ಸ್‌ ಸಂಸ್ಥೆಯು ಕೈಗೊಂಡಿದ್ದರೆ, ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಕಟ್ಟಡಗಳು, ನಿಲುಗಡೆ ಗ್ಯಾರೇಜಿನ ರಚನಾ ಸ್ವರೂಪಗಳು ಮತ್ತು ಸಂಪರ್ಕ ಕಲ್ಪಿಸುವ ರಸ್ತೆಮಾರ್ಗದ ಸಂಪರ್ಕ ವ್ಯವಸ್ಥೆಯ ವಿನ್ಯಾಸದ ಜವಾಬ್ದಾರಿಯನ್ನು ಜೆನ್ಸ್‌ಲರ್‌ ಅಂಡ್‌ ಫ್ರೆಡೆರಿಕ್‌ ಷ್ವಾರ್ಟ್ಜ್‌ ಸಂಸ್ಥೆಯ ವಾಸ್ತುಶಿಲ್ಪಿಗಳು ಹೊತ್ತುಕೊಂಡಿದ್ದಾರೆ. ದಿ ಕ್ರಿಯೇಟಿವ್‌ ಗ್ರೂಪ್‌ ಸಂಸ್ಥೆಯು ಸದರಿ ಯೋಜನೆಗೆ ಸಂಬಂಧಿಸಿದ ಸ್ಥಳೀಯ ವಾಸ್ತುಶಿಲ್ಪಿಗಳ ಪಾತ್ರವನ್ನು ವಹಿಸಲಿದೆ. ಪ್ರಸ್ತಾವಿತ ವಿನ್ಯಾಸವನ್ನು ಈಗಿರುವ ಆಗಮನ ಹಾಗೂ ನಿರ್ಗಮನ ನಿಲ್ದಾಣದ ವಿನ್ಯಾಸ ಘಟಕಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಹಿಂದೆ ವರದಿಯಾಗಿದ್ದರ ಪ್ರಕಾರ, ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹೊಸ ಕಟ್ಟಡಗಳು ೧೦ ದಶಲಕ್ಷ ಪ್ರಯಾಣಿಕರ ಒಂದು ನಿರ್ವಹಣಾ ಸಾಮರ್ಥ್ಯವನ್ನು ಹೊಂದಲಿವೆ. ಅಷ್ಟೇ ಅಲ್ಲ, ಈಗಿರುವ ಆಗಮನ ಹಾಗೂ ನಿರ್ಗಮನದ ನಿಲ್ದಾಣಗಳೊಂದಿಗೆ ಇವನ್ನು ಸಂಯೋಜಿಸಿದಾಗ ವಾರ್ಷಿಕವಾಗಿ ೨೩ ದಶಲಕ್ಷ ಪ್ರಯಾಣಿಕರ ಒಂದು ನಿರ್ವಹಣಾ ಸಾಮರ್ಥ್ಯವನ್ನು ಇವು ಒದಗಿಸಲಿವೆ. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹೊಸ ಕಟ್ಟಡಗಳು ಸುಮಾರು ೧, ೪೦,೦೦೦ ಚದರ ಮೀಟರುಗಳಷ್ಟು ವಿಸ್ತೀರ್ಣದ ಒಂದು ಪ್ರದೇಶವನ್ನು ಹೊಂದಲಿವೆ ಎಂದು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲ, ೧೪೦ ದಾಖಲಾಗುವಿಕೆಯ (ಚೆಕ್‌-ಇನ್‌) ಕೌಂಟರುಗಳು ಹಾಗೂ ೬೦ ವಲಸೆಗಾರಿಕೆಯ (ಇಮಿಗ್ರೇಷನ್‌) ಕೌಂಟರುಗಳು ಇದರಲ್ಲಿ ಸೇರಿಕೊಳ್ಳಲಿವೆ ಮತ್ತು ಎರಡು ಓಡುದಾರಿಗಳು ಟ್ಯಾಕ್ಸಿ ಮಾರ್ಗಗಳ ಒಂದು ಜಾಲದಿಂದ ಪರಸ್ಪರ ಸಂಪರ್ಕವನ್ನು ಹೊಂದಲಿವೆ. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಸಂಕೀರ್ಣವು ಒಂದು ಮೇಲ್ಸೇತುವೆಯ ಟ್ರಾವೆಲೇಟರ್‌‌ ನ್ನು ಹೊಂದಲಿದ್ದು, ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣ ಮತ್ತು ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣಗಳ ನಡುವಿನ ಸುಮಾರು ೧ ಕಿ.ಮೀ. ಅಂತರವನ್ನು ಇದು ಸಂಪರ್ಕಿಸುತ್ತದೆ. ತುತ್ತತುದಿಯಲ್ಲಿ ಇದು ಒಂದು ಮೇಲೆತ್ತರಿಸಿದ ರಸ್ತೆಯನ್ನು ಹಾಗೂ ಕೆಳಭಾಗದಲ್ಲಿ ಒಂದು ಸುರಂಗ ಮಾರ್ಗವನ್ನು ಹೊಂದಲಿದ್ದು, ಅದು ಎರಡು ವಾಕಲೇಟರ್‌‌‌ಗಳನ್ನು [೫] ಒಳಗೊಳ್ಳಲಿದೆ.

ಓಡುದಾರಿಗಳ ವಿನ್ಯಾಸದ ವಿವರಗಳು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದ್ದರೆ, ಓಡುದಾರಿಯ ಭೂಪಾರ್ಶ್ವದ ಮೇಲಿನ ಕಟ್ಟಡಗಳ ವಿನ್ಯಾಸಕಾರ್ಯಕ್ಕೆ ವಾಸ್ತುಶಿಲ್ಪದ ಸಂಸ್ಥೆಗಳನ್ನು ಸೀಮಿತಗೊಳಿಸಲಾಗಿದೆ. ಸದ್ಯದ ಪ್ರಸ್ತಾವವು ಈಗ ಅಸ್ತಿತ್ವದಲ್ಲಿರುವ ಓಡುದಾರಿಗೆ ಸಮಾನಾಂತರದ್ದಾಗಿದೆ. "ಎರಡು ಹುಲುಸಾಗಿರುವ ಸಮರ್ಥನೀಯ ತೋಟಗಳು" ಹಾಗೂ ರೆಕ್ಕೆಯಂಥ ಛಾವಣಿಗಳ ಸುತ್ತ ವ್ಯವಸ್ಥೆಗೊಳಿಸಲಾಗುತ್ತಿರುವ ಈ ಸಮಗ್ರ ವಿನ್ಯಾಸವು, ಮಳೆಯ ನೀರನ್ನು ಸಂಗ್ರಹಿಸುವಲ್ಲಿ ಹಾಗೂ ತೋಟದ ಒಂದು ಭಾಗವಾಗಿರುವ ನಿಟ್ಟಿನಲ್ಲಿ ನೆರವಾಗುತ್ತದೆ.[೬]

ಪ್ರಸ್ತಾವಿತ ಹೊಸ ಸಂಯೋಜಿತ ಸರಕು ಸಂಕೀರ್ಣ[ಬದಲಾಯಿಸಿ]

ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಂಕೀರ್ಣದಲ್ಲಿ ಒಂದು ಸಂಯೋಜಿತ ಸರಕು ಸಂಕೀರ್ಣವನ್ನು ನಿರ್ಮಿಸಲಾಗುವುದು. ಸದರಿ ಸಂಕೀರ್ಣವನ್ನು ಸುಮಾರು ೧೪೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ೧೫ ತಿಂಗಳಲ್ಲಿ ನಿರ್ಮಿಸಲಾಗುವುದು. ನೆಲ ಅಂತಸ್ತು ೨೧,೦೦೦ ಚದರ ಮೀಟರುಗಳಷ್ಟು ವಿಸ್ತೀರ್ಣವನ್ನು ಹೊಂದಲಿದ್ದರೆ, ಮೊದಲ ಅಂತಸ್ತನ್ನು ೧೨,೧೦೦ ಚದರ ಮೀಟರುಗಳ ವಿಸ್ತೀರ್ಣದ ಪ್ರದೇಶದ ಮೇಲೆ ಕಟ್ಟಲಾಗುತ್ತದೆ. ಹೊಸ ಕಟ್ಟಡವನ್ನು ಆಮದು ಸಂಬಂಧಿ ಚಟುವಟಿಕೆಗಳಿಗಾಗಿ ಪ್ರತ್ಯೇಕವಾಗಿ ಬಳಸಲಾಗುತ್ತದೆ. ಸಿವಿಲ್‌ ಕಾಮಗಾರಿಗಳು ಒಮ್ಮೆಗೆ ಸಂಪೂರ್ಣಗೊಂಡ ನಂತರ, ಯಾಂತ್ರೀಕೃತ ಶೇಖರಣೆ ಹಾಗೂ ಮರುಗಳಿಕೆಯ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಇದಕ್ಕಾಗಿ ೭೫ ಕೋಟಿ ರೂಪಾಯಿಗಳು ವೆಚ್ಚವಾಗಲಿವೆ.[೭]

ಹೊಸ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ[ಬದಲಾಯಿಸಿ]

ತಿರುಶೂಲಂನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ವಿಸ್ತರಣೆಯನ್ನು ಹೊರತುಪಡಿಸಿ, ಶ್ರೀಪೆರುಂಬುದೂರ್‌ ಮತ್ತು ತಿರುವಳ್ಳೂರು ತಾಲ್ಲೂಕುಗಳಲ್ಲಿ ಒಂದು ಹೊಸ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದರ ಕುರಿತು ತಮಿಳು ನಾಡುಡಿನ ಮುಖ್ಯಮಂತ್ರಿಯಾದ M. ಕರುಣಾನಿಧಿಯವರು ಪ್ರಕಟಣೆಯನ್ನು ನೀಡಿದ್ದಾರೆ.

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವು ...3,486.66 acres (14.1100 km2)ರಂದು ಬಳಕೆಗೆ ಬರಲಿದ್ದು, ಸುಮಾರು ೨,೦೦೦ ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಚೆನ್ನೈ ವಿಮಾನ ನಿಲ್ದಾಣದ ವಿಸ್ತರಣೆಯು ...1,069.99 acres (4.3301 km2)ರಂದು ನೆರವೇರಲಿದೆ.

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಆರಂಭದಲ್ಲಿ ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (AAI) ವಹಿಸಿಕೊಡುವುದಿತ್ತು. ಆದಾಗ್ಯೂ, ಚೆನ್ನೈ ಸಮೀಪದ ಶ್ರೀಪೆರುಂಬುದೂರಿನಲ್ಲಿ ಮೇಲೇಳುತ್ತಿರುವ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವು ಒಂದು ಸಾರ್ವಜನಿಕ-ಖಾಸಗಿ ಭಾಗೀದಾರಿಕೆಯ ಅಡಿಯಲ್ಲಿ ಅಭಿವೃದ್ಧಿಗೊಳ್ಳಲಿದೆ. ಪ್ರಧಾನ ಮಂತ್ರಿಯವರ ಸಮಿತಿಯು ಈ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪೂರ್ವಭಾವಿ-ಕಾರ್ಯಸಾಧ್ಯತಾ ವರದಿಯೊಂದನ್ನು ಒದಗಿಸಲೂ ಸಹ ಕೇಳಿಕೊಂಡಿದೆ.

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವು ನಾಲ್ಕು ಓಡುದಾರಿಗಳನ್ನು ಹೊಂದಲಿದೆ. ಚೆನ್ನೈ ವಿಮಾನ ನಿಲ್ದಾಣದ ಮೇಲೆ ಕಣ್ಣಿಟ್ಟಿರುವ ಅಗ್ರಗಣ್ಯ ಜಾಗತಿಕ ವಿಮಾನ ನಿಲ್ದಾಣ ಅಭಿವರ್ಧಕ ಕಂಪನಿಗಳು ಸದರಿ ಯೋಜನೆಗೆ ಸಂಬಂಧಿಸಿದ ಹರಾಜು ಕೂಗುವಿಕೆಗಾಗಿ ಭಾರತೀಯ ಕಂಪನಿಗಳೊಂದಿಗೆ ಸೇರುವೆಯ ಒಪ್ಪಂದಗಳನ್ನು ಮಾಡಿಕೊಳ್ಳಲು ಮುನ್ನುಗ್ಗುತ್ತಿವೆ. ಈ ಯೋಜನೆಯಲ್ಲಿ ಆಸಕ್ತಿ ತೋರಿಸಿರುವ ಕಂಪನಿಗಳಲ್ಲಿ ಸಿಂಗಪೂರ್‌ ಷಾಂಗೈ ಏರ್‌ಪೋರ್ಟ್‌, ಮ್ಯಾಕ್‌ಕ್ವಾರೀ ಗ್ರೂಪ್‌, GMR ಗ್ರೂಪ್‌, GVK ಇಂಡಸ್ಟ್ರೀಸ್‌ ಲಿಮಿಟೆಡ್‌. ಮತ್ತು ಟಾಟಾ ಗ್ರೂಪ್ ಸೇರಿವೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಪ್ರಫುಲ್‌ ಪಟೇಲ್‌ ಈ ಕುರಿತು ಸ್ಪಷ್ಟೀಕರಣವನ್ನು ನೀಡಿ, "ಚೆನ್ನೈ ಸಮೀಪದಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವಲ್ಲಿ AAI ಯಾವುದೇ ಪಾತ್ರವನ್ನು ಹೊಂದಿಲ್ಲ" ಎಂದು ತಿಳಿಸಿದ್ದಾರೆ.

ಕಾಮಗಾರಿಗಳು ಶುರುವಾದ ೨೮ ತಿಂಗಳೊಳಗಾಗಿ ಹೊಸ ವಿಮಾನ ನಿಲ್ದಾಣವು ಸಂಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗುವುದೇ?[ಬದಲಾಯಿಸಿ]

ಶ್ರೀಪೆರುಂಬುದೂರ್‌ನಲ್ಲಿನ ಅತಿ-ನಿರೀಕ್ಷಿತ ಎರಡನೇ ವಿಮಾನ ನಿಲ್ದಾಣದ ಯೋಜನೆಯು ಕೈಗೂಡದಿರಬಹುದು. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸದರಿ ಯೋಜನೆಯನ್ನು ಕೈಬಿಡಲು ಸಿದ್ಧತೆ ನಡೆಸುತ್ತಿವೆ.

ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯು (ICAO) ಸದರಿ ಯೋಜನೆಯ ಕುರಿತಾದ ಒಂದು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಂಡಿದ್ದರೂ ಸಹ, ಕೇಂದ್ರ ನಾಗರಿಕ ವಿಮಾನಯಾನ ಖಾತೆಯಲ್ಲಿನ ಓರ್ವ ಹಿರಿಯ ಅಧಿಕಾರಿಯು ಹೇಳಿರುವ ಪ್ರಕಾರ, ಮೀನಂಬಕ್ಕಂನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ವಿಸ್ತರಣೆಗೆ ಒಳಗಾಗುತ್ತಿರುವುದರಿಂದ, ಸದರಿ ನಗರದಲ್ಲಿ ಎರಡನೇ ವಿಮಾನ ನಿಲ್ದಾಣವವೊಂದನ್ನು ನಿರ್ಮಿಸುವ ತುರ್ತು ಅಗತ್ಯ ಕಂಡುಬರುತ್ತಿಲ್ಲ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ.[೮]

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಪ್ರಸ್ತಾವವು ಇನ್ನೂ ಬಿಡಲ್ಪಟ್ಟಿಲ್ಲ[ಬದಲಾಯಿಸಿ]

ಚೆನ್ನೈ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಆಧುನಿಕೀಕರಣವು ಮುಂದಿನ ವರ್ಷದ ವೇಳೆಗೆ ಸಂಪೂರ್ಣಗೊಳ್ಳಲಿದೆ ಮತ್ತು ಒಂದು ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಸರ್ಕಾರವು 'ಅಗತ್ಯ ಕ್ರಮಗಳನ್ನೂ' ಸಹ ಕೈಗೊಳ್ಳುತ್ತಿದೆ ಎಂದು ಇಂದು ರಾಜ್ಯ ವಿಧಾನಸಭೆಗೆ ತಿಳಿಸಲಾಯಿತು.

ಶಾಸನಸಭೆಯಲ್ಲಿ ಸಚಿವ K N ನೆಹರುರವರಿಂದ ಮಂಡಿಸಲ್ಪಟ್ಟ ಸಾರಿಗೆ ಇಲಾಖೆಯ ಕಾರ್ಯನೀತಿಯ ಟಿಪ್ಪಣಿಯು ಹೇಳುವ ಪ್ರಕಾರ, ದಕ್ಷಿಣದ ಒಂದು ಪ್ರಮುಖ ಮಹಾನಗರವು ಅತ್ಯಂತ ವೇಗವಾಗಿ ಹೂಡಿಕೆಯ ಗಮ್ಯಸ್ಥಾನವಾಗಿ ಮಾರ್ಪಡುತ್ತಿದೆ ಎಂಬ ಅಂಶವನ್ನು ಸರ್ಕಾರ ಅಂಗೀಕರಿಸಿರುವುದರಿಂದ ಸದ್ಯದ ಆಧುನಿಕೀಕರಣದ ಪ್ರಯತ್ನವು ತ್ವರಿತ ಗತಿಯಲ್ಲಿದೆ.

"ವಿಮಾನ ನಿಲ್ದಾಣದ ಆಧುನಿಕೀಕರಣವು ೨೦೧೧ರ ವೇಳೆಗೆ ಸಂಪೂರ್ಣಗೊಳ್ಳಲಿದೆ.

"೧೨೭.೦೬ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈಗಾಗಲೇ ೧೨೬ ಎಕರೆಗಳಷ್ಟು ಭೂಮಿಯನ್ನು ಸರ್ಕಾರವು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಅದನ್ನು ವರ್ಗಾಯಿಸಲಾಗಿದೆ" ಎಂದು ಸದರಿ ಟಿಪ್ಪಣಿಯು ಹೇಳಿದೆ.

AAI ಸಂಸ್ಥೆಯು ಸದರಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂಸ್ಥೆಯಾಗಿತ್ತು ಮತ್ತು ೧,೮೦೮ ಕೋಟಿ ರೂಪಾಯಿಗಳ (೧೮.೦೮ ಶತಕೋಟಿ ರೂಪಾಯಿಗಳು) ಒಂದು ಅಂದಾಜು ವೆಚ್ಚದಲ್ಲಿ ಸದರಿ ಕಾಮಗಾರಿಯನ್ನು ಅದು ಕೈಗೆತ್ತಿಕೊಂಡಿತ್ತು ಎಂದು ಕಾರ್ಯನೀತಿಯ ಟಿಪ್ಪಣಿಯು ತಿಳಿಸಿದೆ. ಮೇಲಾಗಿ, ಇಲ್ಲಿಗೆ ಸಮೀಪದ ಒಂದು ಕೈಗಾರಿಕಾ ಕೇಂದ್ರವಾದ ಶ್ರೀಪೆರುಂಬುದೂರಿನಲ್ಲಿ ಒಂದು ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ರಾಜ್ಯ ಸರ್ಕಾರವೂ ಸಹ 'ಅಗತ್ಯ ಕ್ರಮವನ್ನು' ತೆಗೆದುಕೊಳ್ಳುತ್ತಿದೆ ಎಂದು ಟಿಪ್ಪಣಿಯು ತಿಳಿಸಿತು.

ಸಾರಿಗೆ ಕೊಂಡಿಗಳು[ಬದಲಾಯಿಸಿ]

ದಟ್ಟಣೆಯನ್ನು ಹೊಂದಿರುವ ಗ್ರಾಂಟ್‌ ಸದರ್ನ್‌ ಟ್ರಂಕ್‌ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ ೪೫) ಹೊಂದಿಕೊಂಡಂತೆ ವಿಮಾನ ನಿಲ್ದಾಣವು ಸ್ಥಾಪಿತಗೊಂಡಿದೆ ಮತ್ತು ಉಪನಗರದ ರೈಲುಮಾರ್ಗದ ಜಾಲದ ಮೇಲಿರುವ ವಿಮಾನ ನಿಲ್ದಾಣ ಕೇಂದ್ರದಿಂದಲೂ (ತಿರುಶೂಲಂ) ಇದಕ್ಕೆ ಸೇವೆಯು ದೊರೆಯುತ್ತಿದೆ. ಪ್ರಸ್ತಾವಿತ ಮೆಟ್ರೋ ರೈಲು ವ್ಯವಸ್ಥೆಯು (ಚೆನ್ನೈ ಮೆಟ್ರೊ) ಸದರಿ ವಿಮಾನ ನಿಲ್ದಾಣವನ್ನು ಚೆನ್ನೈನಲ್ಲಿನ ಇತರ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ.

ಘಟನೆಗಳು ಮತ್ತು ಅಪಘಾತ[ಬದಲಾಯಿಸಿ]

೧೯೮೪ರ ಆಗಸ್ಟ್‌ನಲ್ಲಿ, ವಿಮಾನ ನಿಲ್ದಾಣಕ್ಕೆ ಸುಮಾರು ೧,೨೦೦ ಮೀಟರುಗಳ ಅಂತರದಲ್ಲಿ ಸಂಭವಿಸಿದ ಒಂದು ಬಾಂಬ್‌ ಸ್ಫೋಟದಿಂದಾಗಿ ೩೩ ವ್ಯಕ್ತಿಗಳು ಮರಣ ಹೊಂದಿದರು ಹಾಗೂ ಇತರ ೨೭ ವ್ಯಕ್ತಿಗಳು ಗಾಯಗೊಂಡರು.[೯]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal box

ಆಕರಗಳು[ಬದಲಾಯಿಸಿ]

  1. Airport information for VOMM at World Aero Data. Data current as of October 2006.Source: DAFIF.
  2. Airport information for MAA at Great Circle Mapper. Source: DAFIF (effective Oct. 2006).
  3. ಆಡ್ಯಾರ್‌ ನದಿಗೆ ಅಡ್ಡಲಾಗಿರುವ ಓಡುದಾರಿಯನ್ನು ಹೊಂದಲಿರುವ ಚೆನ್ನೈ ವಿಮಾನ ನಿಲ್ದಾಣ
  4. "ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕವನ್ನು ಕಲ್ಪಿಸಲಿರುವ ಚೆನ್ನೈ ಮೆಟ್ರೊ ರೈಲು ವ್ಯವಸ್ಥೆ". Archived from the original on 2010-05-28. Retrieved 2010-05-26.
  5. ಒಂದು ‘ಮೇಲ್ಸೇತುವೆಯ ಟ್ರಾವೆಲೇಟರ್‌’ನ್ನು ಪಡೆಯಲಿರುವ ವಿಮಾನ ನಿಲ್ದಾಣ[ಶಾಶ್ವತವಾಗಿ ಮಡಿದ ಕೊಂಡಿ]
  6. "ಪ್ರಸ್ತಾವಿತ ಹೊಸ ಚೆನ್ನೈ ವಿಮಾನ ನಿಲ್ದಾಣ - ಯೋಜನೆ". Archived from the original on 2008-09-25. Retrieved 2010-05-26.
  7. "ಪ್ರಸ್ತಾವಿತ ಹೊಸ ಚೆನ್ನೈ ವಿಮಾನ ನಿಲ್ದಾಣದ ಸರಕು ಸಂಕೀರ್ಣ - ಯೋಜನೆ". Archived from the original on 2009-01-23. Retrieved 2010-05-26.
  8. ಶ್ರೀಪೆರುಂಬುದೂರ್‌ ಏರ್‌ಪೋರ್ಟ್‌ ಮೇ ನಾಟ್‌ ಟೇಕ್‌ ಆಫ್‌, ದಿ ಟೈಮ್ಸ್‌ ಆಫ್‌ ಇಂಡಿಯಾ, ಚೆನ್ನೈ, ೨೦೧೦ರ ಫೆಬ್ರುವರಿ ೨೭
  9. ಈಳಂ ಆರ್ಮಿ ಚೀಫ್‌ ಹೆಲ್ಡ್‌ ಫಾರ್‌ ಚೆನ್ನೈ ಬ್ಲಾಸ್ಟ್‌ Archived 2009-10-07 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ನ್ಯೂಸ್‌ ಸರ್ವೀಸ್‌, ೧೯೯೮ರ ಫೆಬ್ರವರಿ ೮

ಬಾಹ್ಯ ಕೊಂಡಿಗಳು[ಬದಲಾಯಿಸಿ]


  1. REDIRECT Template:Chennai topics