ಗಿರೀಶ್ ಕಾಸರವಳ್ಳಿ
ಗಿರೀಶ್ ಕಾಸರವಳ್ಳಿ | |
---|---|
ಜನನ | ಡಿಸೆಂಬರ್ ೩, ೧೯೫೦ ಕೆಸಲೂರು, ತೀರ್ಥಹಳ್ಳಿ, ಶಿವಮೊಗ್ಗ |
ವೃತ್ತಿ(ಗಳು) | ಸಿನಿಮಾ ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ |
ಸಂಗಾತಿ | ವೈಶಾಲಿ ಕಾಸರವಳ್ಳಿ |
ಪ್ರಶಸ್ತಿಗಳು | Multiple ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು[೧] |
ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೪ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು, ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು ಸತ್ಯಜಿತ್ ರೇ( ೬ ಸ್ವರ್ಣ ಕಮಲಗಳು)(ಮೃಣಾಲ್ ಸೇನ್ ಮತ್ತು ಕಾಸರವಳ್ಳಿ) ನಂತರ ನಾಲ್ಕು ಸ್ವರ್ಣ ಕಮಲಗಳನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ. ಇವರು "ಘಟಶ್ರಾದ್ಧ" ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ ೨೭.ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂದು ಹೆಸರು ಪಡೆದರು."ಘಟಶ್ರಾದ್ಧ"ಕತೆಯನ್ನು ಆಧರಿಸಿ ಅರುಣ್ ಕೌಲ್ ನಿರ್ದೇಶನದಲ್ಲಿ "ದೀಕ್ಷಾ " ಎಂಬ ಹೆಸರಿನಲ್ಲಿ ಹಿಂದಿ ಚಿತ್ರವೊಂದು ತಯಾರಾಗಿದೆ.
ಖಾಸಗೀ ಜೀವನ
[ಬದಲಾಯಿಸಿ]ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿ ಕನ್ನಡ ಚಲನಚಿತ್ರ ನಟಿ ಹಾಗು ದೂರದರ್ಶನ ಧಾರಾವಾಹಿಗಳ ನಿರ್ದೇಶಕಿ. 'ನೀನಾಸಂ-ರಂಗಶಾಲೆ'ಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ.
ಪ್ರಶಸ್ತಿಗಳು
[ಬದಲಾಯಿಸಿ]- ದಕ್ಷಿಣ ಏಷ್ಯಾ ಫೆಡರೇಷನ್ ನ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ, ೨೦೦೯
- ಪದ್ಮಶ್ರೀ, ೨೦೧೧
ಚಿತ್ರಗಳು
[ಬದಲಾಯಿಸಿ]ವರ್ಷ | ಹೆಸರು | ಪ್ರಶಸ್ತಿ |
1977 | ಘಟಶ್ರಾದ್ಧ | ಸ್ವರ್ಣ ಕಮಲ ಪ್ರಶಸ್ತಿ[೨][೩][೪] |
1979 | ಆಕ್ರಮಣ | |
1981 | ಮೂರು ದಾರಿಗಳು | |
1987 | ತಬರನ ಕಥೆ | ಸ್ವರ್ಣ ಕಮಲ ಪ್ರಶಸ್ತಿ |
1988 | ಬಣ್ಣದ ವೇಷ | |
1990 | ಮನೆ | |
1992 | ಕ್ರೌರ್ಯ | |
1998 | ತಾಯಿ ಸಾಹೇಬ | ಸ್ವರ್ಣ ಕಮಲ ಪ್ರಶಸ್ತಿ |
2002 | ದ್ವೀಪ | ಸ್ವರ್ಣ ಕಮಲ ಪ್ರಶಸ್ತಿ |
2005 | ಹಸೀನಾ | ಉತ್ತಮ ಕುಟುಂಬ ಕಲ್ಯಾಣ ಚಿತ್ರ |
2006 | ನಾಯಿ ನೆರಳು | ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ |
2008 | ಗುಲಾಬಿ ಟಾಕೀಸ್ | |
2010 | ಕನಸೆಂಬ ಕುದುರೆಯನೇರಿ | |
2012 | ಕೂರ್ಮಾವತಾರ | |
2020 | ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ[೫][೬] |
ಇವರ "ಕನಸೆಂಬ ಕುದುರೆಯನೇರಿ" ಚಿತ್ರ ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ ಚಿತ್ರ.೨೦೧೦ರ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ. 2010ನೇ ಸಾಲಿನ ರೋಮ್ ನ ಏಷ್ಯಾಲಿಕಾ ಚಿತ್ರೋತ್ಸವ, ಶ್ರೇಷ್ಠ ಏಷ್ಯನ್ ಚಿತ್ರ NETPAC ಅವಾರ್ಡ್ ಈ ಚಿತ್ರಕ್ಕೆ ಸಂದಿದೆ. ಇವರ ನಿರ್ದೇಶನದ "ಕೂರ್ಮಾವತಾರ" ಸಿನಿಮಾ ೨೦೧೨ರ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಜತೆಗೆ ರಜತ ಕಮಲ ಪ್ರಶಸ್ತಿ ಪಡೆದುಕೊಂಡಿದೆ.
ಉಲ್ಲೇಖ
[ಬದಲಾಯಿಸಿ]- ↑ Girish Kasaravalli gets 'Excellence in Cinema' award in UK
- ↑ imdb
- ↑ Akramana, 1979
- ↑ Mooru Daarigalu, 1981
- ↑ ಏಳು ವರ್ಷಗಳ ಬಳಿಕ ನಿರ್ದೇಶಕನಕ್ಕೆ ಮರಳಿದ ಗಿರೀಶ್ ಕಾಸರವಳ್ಳಿ
- ↑ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ನಿರ್ದೇಶಕ ಗಿರೀಶ್ ಕಾಸರವಳ್ಳಿ ಮನದಾಳ