ವಿಷಯಕ್ಕೆ ಹೋಗು

ಮುಳ್ಳಯ್ಯನಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಳ್ಳಯ್ಯನಗಿರಿ
ಮುಳ್ಳಯ್ಯನಗಿರಿ
Highest point
ಎತ್ತರ1,930 m (6,330 ft)
Naming
ಆಂಗ್ಲ ಭಾಷಾನುವಾದಮುಳ್ಳಯ್ಯನಗಿರಿ
Language of nameಕನ್ನಡ
Geography
ಮುಳ್ಳಯ್ಯನಗಿರಿ is located in Karnataka
ಮುಳ್ಳಯ್ಯನಗಿರಿ
ಮುಳ್ಳಯ್ಯನಗಿರಿ
ಮುಳ್ಳಯ್ಯನಗಿರಿ, ಸ್ಥಳ ಕರ್ನಾಟಕ
ಸ್ಥಳಚಿಕ್ಕಮಗಳೂರು, ಕರ್ನಾಟಕ , ಭಾರತ
Parent rangeಬಾಬಾ ಬುಡನ್‌ಗಿರಿ ಬೆಟ್ಟಸಾಲು
ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. 1923 ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).ಪ್ರವಾಸಿಗರ  ಸ್ವರ್ಗ  ಚಿಕ್ಕಮಗಳೂರಿನ  ಪ್ರೇಕ್ಷಣೀಯ  ಸ್ಥಳಗಳಲ್ಲಿ  ಜನಜಾತ್ರೆಯಿಂದ ತುಂಬಿರುತ್ತದೆ.  ಮಂಜಿನ  ಹನಿಗಳ  ನಡುವಿನ  ಚಿತ್ತಾರ,  ಚುಮುಚುಮು  ಚಳಿಯಲ್ಲಿ  ಮಳೆಯ  ಸಿಂಚನ.  ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಭೇಟಿ ನೀಡಿದರೆ ಮನಸ್ಸು ಶಾಂತವಾಗುವುದರಲ್ಲಿ ಎರಡು ಮಾತಿಲ್ಲ.

ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿಯ ಅನುಭವವೇ ಬೇರೆ ಹಾಗಾಗಿ ಸಾಕಷ್ಟು ಪ್ರವಾಸಿಗರು, ಚಾರಣಿಗರು ಈ ಸಮಯದಲ್ಲಿ ಭೇಟಿ ನೀಡುವುದರಿಂದ ಚಿಕ್ಕಮಗಳೂರು ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ.

ಇಲ್ಲಿನ ಗಿರಿಶಿಖರವನ್ನು ಹತ್ತುವಾಗ ಸಿಗುವ ಸಂತೋಷ ಬೇರೆಲ್ಲೂ ಸಿಗಲಾರದು ಮುಳ್ಳಯ್ಯನಗಿರಿ ಅನ್ನೋ ಹೆಸರೇ ನಿಮ್ಮನ್ನು ಆಕರ್ಷಿಸುತ್ತದೆ. ಒಂದು ಸಲ ಆ ನೆಲಕ್ಕೆ ಕಾಲಿಟ್ಟರೆ ಆ ಊರು ಬಹುಬೇಗ ನಿಮ್ಮನ್ನು ಬಿಟ್ಟು ಹೋಗದು.

ಕಾರು ಬೈಕ್ ಮಾತ್ರ ಚಲಿಸಬಹುದಾದ ಕಿರಿದಾದ ಮಾರ್ಗ ಇದರಲ್ಲಿ ಸಂಚರಿಸುವಾಗ ನಾವೆಲ್ಲಿ ಹಿಮಾಲಯದ ಪರ್ವತದ ತಪ್ಪಲಿನಲ್ಲಿ ಇದ್ದೇವೇನೋ ಅನ್ನುವ ಅನುಭವದ  ಜೊತೆಗೆ ಜೀವಭಯ, ಒಂದು ಬದಿಯಲ್ಲಿ ಬೆಟ್ಟದ ಧರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಗಳಷ್ಟು ಆಳವಿರುವ ಕಂದಕ ಇವುಗಳ ನಡುವೆ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು  ಇದರಲ್ಲಿ ಸಂಚರಿಸಲು ತಾಳ್ಮೆ ಜೊತೆಗೆ ಸಹನೆ ಅತ್ಯಗತ್ಯ.

ಇತಿವೃತ್ತ

[ಬದಲಾಯಿಸಿ]
  • ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ ಇದು ಚಾರಣಿಗರ ಸ್ವರ್ಗವೆನಿಸಿದೆ. ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ.
  • ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ ೧೯೨೬ ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ ೧೮ ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು.
  • ಜರಿ ಸಸ್ಯ, ಬಣ್ಣಬಣ್ಣದ ಚಿಗುರುಗಳಿಂದ ಲಾಸ್ಯ ಆಡುವ ಗಿಡಗಳು. ಒಟ್ಟಿನಲ್ಲಿ ಕಣ್ತುಂಬ ಚೆಲುವು. ಗುಂಡಿ ಗೊಟರುಗಳಿಲ್ಲದ ಸುಗಮ ಹಾದಿ. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಕಣ್ಣು ಕುಕ್ಕುವ ಸೌಂದರ್ಯ .ಈ ಬೆಟ್ಟವೇ ಹೀಗೆ. ಪ್ರತಿ ಋತುವಿನಲ್ಲೂ ಭಿನ್ನ-ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಗಿ ನಿಲ್ಲುತ್ತದೆ. ಕ್ಷಣ ಕ್ಷಣವೂ ಹೊಸ ಅನುಭವ. ಮುಳ್ಳಯ್ಯನಗಿರಿಗೆ ಯವಾಗ ಬಂದರೂ ನಿರಾಶೆ ಆಗುವುದಿಲ್ಲ. ಅಲ್ಲಿನ ಸೊಬಗೇ ಹಾಗೆ ಮುಂಗಾರಿನ ಈ ದಿನಗಳಲ್ಲಿ ಈ ದೊಡ್ಡಣ್ಣನ ಸೊಬಗೇ ವಿಸ್ಮಯ.
  • ಜಿಲ್ಲಾ ಕೇಂದ್ರದಲ್ಲಿ ಬಿಸಿಲು. ಬೆಟ್ಟದ ಸಾಲಿನಲ್ಲೂ ಹಾಗೇ ಇರುತ್ತದೆ ಎಂದು ಕೊಂಡು ಹೋದರೆ ಎಲ್ಲಾ ಉಲ್ಟಾ- ಪಲ್ಟಾ! ಪರಸ್ಪರ ಕಾಣದಷ್ಟು ಮಂಜಿನ ಶೃಂಗಾರ. ಸುಯ್ಯ ಗುಡುವ ಗಾಳಿ. ಏದುಸಿರು ಬಿಡುತ್ತಾ ಮೆಟ್ಟಿಲು ಏರುತ್ತಿದ್ದರೆ ಗಾಳಿ ಎಲ್ಲಿ ನಮ್ಮನ್ನು ಹೊತ್ತೊಯ್ಯುತ್ತದೊ ಎನ್ನುವ ಭೀತಿ. ಆ ಪ್ರಮಣದ ಬಿರುಗಾಳಿ. ಶಿಖರದ ಬುಡಕ್ಕೆ ಬಂದೊಡನೆ ಟೋಪಿ, ಶಾಲು, ಸ್ವಟರ್ ಹೀಗೆ ಎಲ್ಲ ರೀತಿಯ ಬೆಚ್ಚನೆ ಉಡುಪುಗಳ ನೆನಪಾಗುತ್ತದೆ. ಇಲ್ಲದಲ್ಲಿ ಸುಖದ ಜೊತೆ ಕಷ್ಟವನ್ನೂ ಅನುಭವಿಸಬೇಕು. ಕಿವಿಗಳು ಗಾಳಿಯಿಂದ ತುಂಬಿಕೊಳ್ಳುತ್ತವೆ.
  • ಚಳಿ ಮೈನಡುಗಿಸುತ್ತದೆ. ಮಂಜು ತೋಯ್ದು ತೊಪ್ಪೆ ಮಡುತ್ತದೆ. ಬೆಚ್ಚನೆ ಉಡುಪು ಇದ್ದವರು ಹೊದ್ದು ಕೊಂಡು ರಕ್ಷಣೆ ಪಡೆದರೆ ಇಲ್ಲದವರು ಅಂ ನಾವೂ ತರಬೇಕಿತ್ತು ಎಂದು ಕೊಳ್ಳುತ್ತಾರೆ.ಅದೂ ಒಂಥರಾ ಖುಷಿಯ ಕ್ಷಣ. ಎತ್ತ ನೋಡಿದರತ್ತ ಬೆಳ್ನೊರೆ. ದಟ್ಟ ಹೊಗೆ ಆವರಿಸಿದಂತೆ. ಗಾಳಿಯ ಚಲನಕ್ಕೆ ಅನುಗುಣವಾಗಿ ಚಲಿಸುತ್ತಾ, ದಿಕ್ಕು ಬದಲಿಸುತ್ತಾ, ಕೆಲವೊಮ್ಮೆ ತೆಳುವಾಗಿ ಕ್ಷಣಾರ್ಧದಲ್ಲಿ ದಟ್ಟವಾಗುವ ಮಂಜಿನ ನೃತ್ಯ ಮನಮೋಹಕ. ಇದಕ್ಕೆ ಹಿಮ್ಮೇಳ ಎನ್ನುವಂತೆ ಸುಯ ಗಾಳಿ. ಗಾಳಿಯ ರಭಸಕ್ಕೆ ಕೆಲ ಗಿಡಗಳಲ್ಲಿ ಎಲೆಗಳೂ ನಿಂತಿರುವುದಿಲ್ಲ.
  • ಸೌಂದರ್ಯಕ್ಕೆ ಕಳಶ ಇಟ್ಟಂತೆ ನೆಲದಾಳದಿಂದ ಹೊರ ಬಂದು ನಗುತ್ತಾ ನಿಂತ ಹೂಗಳು, ಹುಲ್ಲಿನ ಹಾಸಿನ ಮೇಲೆ ಮಂಜಿನ ಮುತ್ತುಗಳು. ಕಷ್ಟಪಟ್ಟು ನೂರಾರು ಮೆಟ್ಟಿಲು ಏರಿದರೂ ಸೆಕೆ ಎನ್ನುವುದಿಲ್ಲ. ಬಿರುಗಾಳಿಗೆ ಮೈಕೊರೆಯುವ ಛಳಿ, ಕೂಲ್-ಕೂಲ್. ಎತ್ತ ನೋಡಿದರೂ ಒಂದೇ ದೃಶ್ಯ. ಎಲ್ಲವೂ ಶ್ವೇತ ಮಯ. ಆಕಾಶ -ಭೂಮಿ ಒಂದಾದಂತೆ. ಮಂಜು-ಗಾಳಿಯ ಜುಗಲ್ಬಂದಿ. ರಸ್ತೆಯಲ್ಲಿ ಸಾಗುವಾಗಲೇ ಇದರ ಅನುಭವ. ಮಂಜಿನ ಚೆಲ್ಲಾಟಕ್ಕೆ ಚಾಲಕರೂ ಸುಸ್ತು.
  • ಹಾಗೆಂದು ಮುಳ್ಳಯನಗಿರಿ ಮುಂಗಾರಿನಲ್ಲಿ ಮಾತ್ರ ಚೆಲುವನ್ನು ಹೊದ್ದು ನಿಂತಿರುವುದಿಲ್ಲ. ಎಲ್ಲಾ ಋತುಗಳಲ್ಲೂ ಅದು ಸಂಭ್ರಮಿಸುತ್ತಿರುತ್ತದೆ. ಮೋಡ, ಮಂಜು ಇಲ್ಲದಾಗ ಶುಭ್ರ ಪರಿಸರ. ಕ್ಷಣಮಾತ್ರದಲ್ಲಿ ಬದಲಾವಣೆ. ಮೋಡ, ಮಂಜು ಕರಗಿ ಸುತ್ತಲ ವೈಯಾರ ಅನಾವರಣ ಆಗುತ್ತದೆ. ಸುತ್ತಲ ಹಚ್ಚ ಹಸಿರಿನ ಪರಿಸರ, ಅಂಕು ಡೊಂಕಿನ ಹಾದಿ, ಎದುರಿಗೆ ನಿಲ್ಲುವ ಬಂಡೆಗಳು ಹೀಗೆ ಎಲ್ಲದನ್ನು ನೋಡಬಹುದು.
Mullayyanagiri.JPG






ಮುಳ್ಳಯ್ಯನಗಿರಿಯು ಭಾರತ ದೇಶದ, ಕರ್ನಾಟಕ ರಾಜ್ಯದ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಅತಿ ಎತ್ತರದ ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿಯು ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).ಮುಳ್ಳಯ್ಯ ಎಂಬ ಸಾಧಕ ಈ ಗಿರಿಯ ಗುಹೆಯಲ್ಲಿ ಆಧ್ಯಾತ್ಮಿಕ ಸಾಧನೆಗಾಗಿ ತಪಗ್ಯೆದ ಸ್ಥಳವಾದ್ದರಿಂದ ಈ ಗಿರಿಗೆ ಮುಳ್ಲಯ್ಯನಗಿರಿ ಎಂಬ ಹೆಸರು ಬಂದಿದೆ.

ದೇವಾಲಯದ ಅಕ್ಕ ಪಕ್ಕದಲ್ಲಿ ಊಟಕ್ಕಾಗಿ ಅಥವಾ ಮುಳ್ಳಯ್ಯನ ಗಿರಿಯಲ್ಲಿಯೇ ರಾತ್ರಿ ತಂಗಲು ಯಾವುದೇ ವಿಧವಾದ ಹೋಟೆಲ್,ಲಾಡ್ಜ್ ವ್ಯವಸ್ಥೆ ಇಲ್ಲ.ಮುಂಚಿತವಾಗಿಯೇ ಅರ್ಚಕರಿಗೆ ವಿಷಯ ತಿಳಿಸಿದರೆ ಊಟಕ್ಕೆ ಬಹುತೇಕ ವ್ಯವಸ್ಥೆ ಆಗಬಹುದು.ಅರ್ಚಕರಿಗೆ ವಿನಂತಿಸಿಕೊಂಡು ದೇವಸ್ಥಾನದ ಹೊರಗೆ ತಂಗಬಹುದು, ಆದರೆ ಹೆಚ್ಚು ಗಾಳಿ ಹಾಗು ಶೀತವಿರುವುದರಿಂದ ಬೆಚ್ಚನೆಯ ಹೊದಿಕೆಗಳ ಅಗತ್ಯವಿರುತ್ತದೆ.


ಮುಳ್ಳಯ್ಯನ ಗಿರಿಗೆ ಹೋಗುವ ಮೊದಲು ಸರ್ಪನ ಹಾದಿಯನ್ನು ಬಿಟ್ಟು ಡಾಂಬರು ರಸ್ತೆಯನ್ನು ಹಿಡಿದು ಹತ್ತ ಹೊರಟರೆ ಮೊದಲು ಸಿಗುವುದು ಶೀತಾಳಯ್ಯನ ಗಿರಿ.ಶೀತಾಳಯ್ಯನ ಗಿರಿಯಿಂದ ಕಾಲ್ನಡಿಗೆಯಅಲ್ಲಿ ಹೊರಟರೆ ನಲವತ್ತು ಐವತ್ತು ನಿಮಿಷಗಳಲ್ಲಿ ಮುಳ್ಳಯ್ಯನಗಿರಿ ಬೆಟ್ಟದ ತಪ್ಪಲನ್ನು ಸೇರುತ್ತೇವೆ.ಈ ತಪ್ಪಲಿನಿಂದ ಕಡಿದಾದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಈ ತಪ್ಪಲಿನ ಕಡಿದಾದ ಮೆಟ್ಟಿಲುಗಳನ್ನುಹತ್ತುತ್ತಾ ಹೊರಟರೆ-ಸರಿಸುಮಾರು ಹತ್ತಿಪ್ಪತ್ತು ನಿಮಿಷಗಳಲ್ಲಿ ಮುಳ್ಳಯ್ಯನ ಗಿರಿಯ ಶಖರವನ್ನು ತಲುಪುತ್ತೇವೆ. ಇಲ್ಲಿಂದ ಸುತ್ತಲ ರಮ್ಯ ಮನೋಹರವಾದ ಪರಿಸರ ಸ್ವರ್ಗ ಸದೃಶವಾಗಿ ಗೋಚರಿಸುತ್ತದೆ ಹಾಗೂ ವರ್ಣಿಸಲಸದಳವಾದ ಶಬ್ದಾತೀತ ಅನುಭವವಾಗುತ್ತದೆ.



ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ ಇದು ಚಾರಣಿಗರ ಸ್ವರ್ಗವೆನಿಸಿದೆ. ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ.ಮಳೆಗಾಲದ ದಿನಗಳಲ್ಲಿ ಕ್ಯೆಗೆ ತಾಗುವ ಮೋಡಗಳು ಮನಸ್ಸಿಗೆ ಅಮಿತಾನಂದವನ್ನು ನೀಡುತ್ತವೆ.


ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ ೧೯೨೬ ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ ೧೮ ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು.ಜರಿ, ಸಸ್ಯ, ಬಣ್ಣಬಣ್ಣದ ಚಿಗುರುಗಳಿಂದ ಲಾಸ್ಯ ಆಡುವ ಗಿಡಗಳು. ಒಟ್ಟಿನಲ್ಲಿ ಕಣ್ತುಂಬ ಚೆಲುವು. ಗುಂಡಿ ಗೊಟರುಗಳಿಲ್ಲದ ಸುಗಮ ಹಾದಿ. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಕಣ್ಣು ಕುಕ್ಕುವ ಸೌಂದರ್ಯ .ಈ ಬೆಟ್ಟವೇ ಹೀಗೆ. ಪ್ರತಿ ಋತುವಿನಲ್ಲೂ ಭಿನ್ನ-ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಗಿ ನಿಲ್ಲುತ್ತದೆ. ಕ್ಷಣ ಕ್ಷಣವೂ ಹೊಸ ಅನುಭವ. ಮುಳ್ಳಯ್ಯನಗಿರಿಗೆ ಯವಾಗ ಬಂದರೂ ನಿರಾಶೆ ಆಗುವುದಿಲ್ಲ. ಅಲ್ಲಿನ ಸೊಬಗೇ ಹಾಗೆ ಮುಂಗಾರಿನ ಈ ದಿನಗಳಲ್ಲಿ ಈ ದೊಡ್ಡಣ್ಣನ ಸೊಬಗೇ ವಿಸ್ಮಯ.


ಜಿಲ್ಲಾ ಕೇಂದ್ರದಲ್ಲಿ ಬಿಸಿಲು. ಬೆಟ್ಟದ ಸಾಲಿನಲ್ಲೂ ಹಾಗೇ ಇರುತ್ತದೆ ಎಂದು ಕೊಂಡು ಹೋದರೆ ಎಲ್ಲಾ ಉಲ್ಟಾ- ಪಲ್ಟಾ! ಪರಸ್ಪರ ಕಾಣದಷ್ಟು ಮಂಜಿನ ಶೃಂಗಾರ. ಸುಯ್ಯ ಗುಡುವ ಗಾಳಿ. ಏದುಸಿರು ಬಿಡುತ್ತಾ ಮೆಟ್ಟಿಲು ಏರುತ್ತಿದ್ದರೆ ಗಾಳಿ ಎಲ್ಲಿ ನಮ್ಮನ್ನು ಹೊತ್ತೊಯ್ಯುತ್ತದೊ ಎನ್ನುವ ಭೀತಿ. ಆ ಪ್ರಮಣದ ಬಿರುಗಾಳಿ. ಶಿಖರದ ಬುಡಕ್ಕೆ ಬಂದೊಡನೆ ಟೋಪಿ, ಶಾಲು, ಸ್ವಟರ್ ಹೀಗೆ ಎಲ್ಲ ರೀತಿಯ ಬೆಚ್ಚನೆ ಉಡುಪುಗಳ ನೆನಪಾಗುತ್ತದೆ. ಇಲ್ಲದಲ್ಲಿ ಸುಖದ ಜೊತೆ ಕಷ್ಟವನ್ನೂ ಅನುಭವಿಸಬೇಕು. ಕಿವಿಗಳು ಗಾಳಿಯಿಂದ ತುಂಬಿಕೊಳ್ಳುತ್ತವೆ.ಚಳಿ ಮೈನಡುಗಿಸುತ್ತದೆ. ಮಂಜು ತೋಯ್ದು ತೊಪ್ಪೆ ಮಡುತ್ತದೆ. ಬೆಚ್ಚನೆ ಉಡುಪು ಇದ್ದವರು ಹೊದ್ದು ಕೊಂಡು ರಕ್ಷಣೆ ಪಡೆದರೆ ಇಲ್ಲದವರು ಅಂ ನಾವೂ ತರಬೇಕಿತ್ತು ಎಂದು ಕೊಳ್ಳುತ್ತಾರೆ.ಅದೂ ಒಂಥರಾ ಖುಷಿಯ ಕ್ಷಣ. ಎತ್ತ ನೋಡಿದರತ್ತ ಬೆಳ್ನೊರೆ. ದಟ್ಟ ಹೊಗೆ ಆವರಿಸಿದಂತೆ. ಗಾಳಿಯ ಚಲನಕ್ಕೆ ಅನುಗುಣವಾಗಿ ಚಲಿಸುತ್ತಾ, ದಿಕ್ಕು ಬದಲಿಸುತ್ತಾ, ಕೆಲವೊಮ್ಮೆ ತೆಳುವಾಗಿ ಕ್ಷಣಾರ್ಧದಲ್ಲಿ ದಟ್ಟವಾಗುವ ಮಂಜಿನ ನೃತ್ಯ ಮನಮೋಹಕ. ಇದಕ್ಕೆ ಹಿಮ್ಮೇಳ ಎನ್ನುವಂತೆ ಸುಯ ಗಾಳಿ. ಗಾಳಿಯ ರಭಸಕ್ಕೆ ಕೆಲ ಗಿಡಗಳಲ್ಲಿ ಎಲೆಗಳೂ ನಿಂತಿರುವುದಿಲ್ಲ.ಸೌಂದರ್ಯಕ್ಕೆ ಕಳಶ ಇಟ್ಟಂತೆ ನೆಲದಾಳದಿಂದ ಹೊರ ಬಂದು ನಗುತ್ತಾ ನಿಂತ ಹೂಗಳು, ಹುಲ್ಲಿನ ಹಾಸಿನ ಮೇಲೆ ಮಂಜಿನ ಮುತ್ತುಗಳು. ಕಷ್ಟಪಟ್ಟು ನೂರಾರು ಮೆಟ್ಟಿಲು ಏರಿದರೂ ಸೆಕೆ ಎನ್ನುವುದಿಲ್ಲ. ಬಿರುಗಾಳಿಗೆ ಮೈಕೊರೆಯುವ ಛಳಿ, ಕೂಲ್-ಕೂಲ್. ಎತ್ತ ನೋಡಿದರೂ ಒಂದೇ ದೃಶ್ಯ. ಎಲ್ಲವೂ ಶ್ವೇತ ಮಯ. ಆಕಾಶ -ಭೂಮಿ ಒಂದಾದಂತೆ. ಮಂಜು-ಗಾಳಿಯ ಜುಗಲ್ಬಂದಿ. ರಸ್ತೆಯಲ್ಲಿ ಸಾಗುವಾಗಲೇ ಇದರ ಅನುಭವ. ಮಂಜಿನ ಚೆಲ್ಲಾಟಕ್ಕೆ ಚಾಲಕರೂ ಸುಸ್ತು.ಹಾಗೆಂದು ಮುಳ್ಳಯನಗಿರಿ ಮುಂಗಾರಿನಲ್ಲಿ ಮಾತ್ರ ಚೆಲುವನ್ನು ಹೊದ್ದು ನಿಂತಿರುವುದಿಲ್ಲ. ಎಲ್ಲಾ ಋತುಗಳಲ್ಲೂ ಅದು ಸಂಭ್ರಮಿಸುತ್ತಿರುತ್ತದೆ. ಮೋಡ, ಮಂಜು ಇಲ್ಲದಾಗ ಶುಭ್ರ ಪರಿಸರ. ಕ್ಷಣಮಾತ್ರದಲ್ಲಿ ಬದಲಾವಣೆ. ಮೋಡ, ಮಂಜು ಕರಗಿ ಸುತ್ತಲ ವೈಯಾರ ಅನಾವರಣ ಆಗುತ್ತದೆ. ಸುತ್ತಲ ಹಚ್ಚ ಹಸಿರಿನ ಪರಿಸರ, ಅಂಕು ಡೊಂಕಿನ ಹಾದಿ, ಎದುರಿಗೆ ನಿಲ್ಲುವ ಬಂಡೆಗಳು,ಗಿಡ-ಮರಗಳು ಹೀಗೆ ಎಲ್ಲವನ್ನೂ ನೋಡಬಹುದು.


ಮುಳ್ಳಯ್ಯನ ಗಿರಿಗೆ ಹೋಗುವ ಮೊದಲು ಸರ್ಪನ ಹಾದಿಯನ್ನು ಬಿಟ್ಟು ಡಾಂಬರು ರಸ್ತೆಯನ್ನು ಹಿಡಿದು ಹತ್ತ ಹೊರಟರೆ ಮೊದಲು ಸಿಗುವುದು ಶೀತಾಳಯ್ಯನ ಗಿರಿ. ಈ ಸ್ಥಳದಲ್ಲಿ ಶೀತಾಳಯ್ಯ ತಪಸ್ಸು ಮಾಡಿದ್ದರಿಂದ ಈ ಗಿರಿಗೆ ಶೀತಾಲಯ್ಯನ ಗಿರಿ ಎಂದು ಹೆಸರು ಬಂದಿದೆ.ಇಲ್ಲಿ ಈಶ್ವರನ ದೇವಾಲಯವೂ ಇದೆ. ಇಲ್ಲಿಂದ ಪೂರ್ವಾಂಬುದಿಯ ಕಡೆ ನಡೆಯುತ್ತ ಹೊರಟರೆ ಸುಮಾರು ಎರಡು ಕಿ.ಮೀ ಗಳ ಅಂತರದಲ್ಲಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರು ಪಡೆದಿರುವ ಮುಳ್ಲಯ್ಯನ ಗಿರಿ ಶಿಖರದ ಕಲಶ ಕಾಣಸಿಗುತ್ತದೆ.

ಮುಳ್ಲಯ್ಯನ ಗಿರಿಯ ಪಶ್ಚಿಮ ದಿಕ್ಕಿಗೆ ಶೀತಾಳಯ್ಯನ ಗಿರಿ ಇದ್ದರೆ ಪೂರ್ವ ದಿಕ್ಕಿಗೆ ಬಾಬಾ ಬುಡನ್ ಹಾಗು ದತ್ತ ಪೀಠವಿದೆ. ಈ ದತ್ತ ಪೀಠದಿಂದ ದಕ್ಷಿಣ ದಿಕ್ಕಿಗೆ ಮಾಣಿಕ್ಯ ಧಾರ ಯಾತ್ರಾ ಸ್ಥಳವಿದೆ. ಹಾಗೆಯೇ ಬಾಬಾ ಬುಡನ್ ಹಾಗು ದತ್ತ ಪೀಠದಿಂದ ಉತ್ತರಕ್ಕೆ ಗಾಳಿಕೆರೆ ಇದೆ. ಬಾಬಾ ಬುಡನ್ ಹಾಗು ದತ್ತ ಪೀಠ,ಮಾಣಿಕ್ಯ ಧಾರ ಮತ್ತು ಗಾಳಿಕೆರೆ ಈ ಮೂರೂ ಒಂದೆರಡು ಕಿ.ಮೀ ಗಳ ಅಂತರದಲ್ಲಿವೆ.

ಮುಳ್ಲಯ್ಯನ ಗಿರಿಯ ಪೂರ್ವ ದಿಕ್ಕಿಗೆ ಅತ್ಯಂತ ಪ್ರಸಿದ್ಧವಾದ ಅಕ್ಕಯ್ಯಮ್ಮನ ಬೆಟ್ಟವಿದೆ. ದೀಪಅವಳಿ ಹಬ್ಬದ ನರಕ ಚತುರ್ದಶಿಯಂದು ರಾತ್ರಿ ಸಾವಿರಾರು ಭಕ್ತರು ದೇವಿಯ ದರ್ಶನಾರ್ಥವಾಗಿ ಇಡೀ ರಾತ್ರಿ ಕತ್ತಲು-ಬೆಳಕೆನ್ನದೆ ಜೀವದ ಹಂಗು ತೊರೆದು ಈ ಅಕ್ಕಯ್ಯಮ್ಮನ ಬೆಟ್ಟವನ್ನು ಹತ್ತುತ್ತಾರೆ.ಈ ಅಕ್ಕಯ್ಯಮ್ಮನ ಬೆಟ್ಟವನ್ನು ಎರಡು ಕಡೆಯಿಂದ ಹತ್ತಬಹುದು.೧)ತರೀಕೆರೆ ಕಡೆಯಿಂದ ಚಿಕ್ಕಮಗಲೂರು ಸೇರಲು ಲಿಂಗದಳ್ಲಿ ಮಾರ್ಗವಾಗಿ ಚಲಿಸುವಾಗ ಮಾರ್ಗ ಮಧ್ಯದಲ್ಲಿ ಬಲಗಡೆಯಿಂದ ಕಾಲು ದಾರಿಯಲ್ಲಿ ಆರೋಹಣ ಮಾಡಬಹುದು. ಈ ದಾರಿ ದುರ್ಗಮವಾದರೂ ಹತ್ತಿರದ್ದಾಗಿದೆ. ೨)ಚಿಕ್ಕಮಗಳೂರಿನಿಂದ ಹೊರಟು ಬಾಬಾ ಬುಡನ್ ಹಾಗು ದತ್ತ ಪೀಠಕ್ಕೆ ತಲುಪಿ ಅಲ್ಲಿಂದ,ಮಾಣಿಕ್ಯ ಧಾರಾಗೆ ಹತ್ತಿ-ಅಲ್ಲಿಮದ ಪೂರ್ವ ದಿಕ್ಕಿಗೆ ಇಳಿದು ನಡೆದರೆ ಸ್ವಲ್ಪ ದೂರದಲ್ಲಿಯೇ ಅಕ್ಕಯ್ಯಮ್ಮನ ಬೆಟ್ಟವಿದೆ.


ಕಾಡ್ಗಿಚ್ಚು

[ಬದಲಾಯಿಸಿ]

ಚಾರಣಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ ತಪ್ಪಲಿಗೆ ೧೮ ಫೆಬ್ರುವರಿ ೨೦೧೭ ರಂದು ಕಾಡ್ಗಿಚ್ಚು ಹರಡಿ, ಅಂದಾಜು 25 ಹೆಕ್ಟೇರ್‌ಗೂ ಹೆಚ್ಚಿನ ಶೋಲಾ ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ಬೆಂಕಿಗೆ ಆಹುತಿಯಾಯಿತು.[]

ಉಲ್ಲೇಖಗಳು

[ಬದಲಾಯಿಸಿ]

ಇವನ್ನು ನೋಡಿ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]