ಮೀಮಾಂಸ ದರ್ಶನ
- ಮೀಮಾಂಸಾ - ಮೀಮಾಂಸ ದರ್ಶನ- ಕರ್ಮ ಮೀಮಾಂಸಾ- ಪೂರ್ವ ಮೀಮಾಂಸಾ- ಕರ್ಮ ಕಾಂಡ.
(ಕನ್ನಡ-ಮೀಮಾಂಸೆ-ಮೀಮಾಂಸ)
ಪೀಠಿಕೆ
[ಬದಲಾಯಿಸಿ]- ಸಾಂಖ್ಯ ದರ್ಶನ, ಯೋಗ ದರ್ಶನ/ರಾಜಯೋಗ/ಪತಂಜಲ ಯೋಗ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸಾ ದರ್ಶನ, ಉತ್ತರ ಮೀಮಾಂಸಾ/ವೇದಾಂತ ದರ್ಶನ , ಇವು ರೂಢಿಯಲ್ಲಿ ಬಂದ ಭಾರತೀಯ ತತ್ವ ಶಾಸ್ತ್ರದ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು); ಮೀಮಾಂಸವು ಅವುಗಳಲ್ಲಿ ಒಂದು
- ದಾರ್ಶನಿಕ ಕ್ಷೇತ್ರದಲ್ಲಿ ವಿಚಿತ್ರವಾದ ದರ್ಶನ -ಮೀಮಾಂಸಾ ದರ್ಶನ . ಅತಿರೇಕದ ವೇದ ನಿಷ್ಠೆ ; ಪ್ರಖರ ವೈಚಾರಿಕತೆ ; ಮತಾಚಾರದಲ್ಲಿ ಅತಿಶ್ರದ್ಧೆ ; ಲೌಕಿಕ ಜೀವನದಲ್ಲಿ ಗೌರವ; ಈ ವಿಚಿತ್ರಗಳ ಮಿಶ್ರಣವಾಗಿದೆ ಮೀಮಾಂಸಾ ದರ್ಶನ .
- ವೇದ ವ್ಯಾಖ್ಯಾನ : ಮೀಮಾಂಸ ವೆಂದರೆ 'ಆಳವಾದ ವಿಚಾರ' , 'ವಿಮರ್ಶೆ', ಎಂದು ಅರ್ಥವಿದ್ದರೂ, ಮೂಲತಃ "ಪೂಜಿತ ವಿಚಾರ" ಎಂದರ್ಥ . ವೇದ ಮತ್ತು ವೈದಿಕ ಧರ್ಮದ ವ್ಯಾಖ್ಯಾನವೇ ಮೀಮಾಂಸೆ..
- ಇದು ವೇದ ವ್ಯಾಖ್ಯಾನದ ನಿಯಮಗಳನ್ನು ಹೇಳುತ್ತದೆ; ಯಜ್ಞಗಳ ದಾರ್ಶನಿಕ ಸಿದ್ಧಾಂತವನ್ನು ಹೇಳುತ್ತದೆ .
ವೇದ
[ಬದಲಾಯಿಸಿ]- ವೇದವೆಂದರೆ ಮಂತ್ರಗಳು ಮತ್ತು ಬ್ರಾಹ್ಮಣಗಳು - ||ಮಂತ್ರ ಬ್ರಾಹ್ಮಣಯೋರ್ವೇದಃ||
- ಇದಕ್ಕೆ ಕರ್ಮಕಾಂಡವೆಂದು ಹೆಸರು. ಕರ್ಮವೆಂದರೆ ಯಜ್ಞ - ವೈದಿಕ ಕರ್ಮ. ಈ ಕರ್ಮಗಳಿಗೆ ಸಂಬಂಧಪಟ್ಟ ವಿಚಾರಗಳು -ಮಂತ್ರಗಳು ವೇದದ ಮೊದಲ ಭಾಗದಲ್ಲಿದೆ ; ಆದ್ದರಿಂದ ಈ ದರ್ಶನಕ್ಕೆ ಪೂರ್ವ ಮೀಮಾಂಸಾ (ಪೂರ್ವ =ಹಿಂದಿನ, ಮೊದಲಿನ ; ಉತ್ತರ = ನಂತರದ -ಉತ್ತರ ಮೀಮಾಂಸ) ಎಂದು ಹೆಸರು . ವೇದಗಳ ಮುಂದಿನ ಭಾಗ ಉಪನಿಷತ್ತುಗಳು ;ಅವು ಸತ್ಯದ ತತ್ವದ ವಿಚಾರಮಾಡುತ್ತವೆ . ಅವಕ್ಕೆ ಉತ್ತರ ಮೀಮಾಂಸಾ ಎಂದು ಹೆಸರು. ಇವೆರಡೂ ಪೂರ್ವಮೀಮಾಂಸಾ ಮತ್ತು ಉತ್ತರ ಮೀಮಾಂಸಾಗಳು ಕರ್ಮಪ್ರಧಾನ ವಾದ ವೈದಿಕರಿಗೂ, ತತ್ವ ಚಿಂತನೆ -ವಿಚಾರ ಮಾಡುವ ವೇದಾಂತಿಗಳಿಗೂ ಗೌರವದ ದರ್ಶನ -ದರ್ಶನಗಳು.
ಇತಿಹಾಸ
[ಬದಲಾಯಿಸಿ]- ಕ್ರಿ.ಪೂ. ೪೦೦ ರ ೧೬ ಅಧ್ಯಾಯ, ೨೩೪೪ ಸೂತ್ರಗಳಿರುವ , ವೇದವ್ಯಾಸರ ಶಿಷ್ಯರಾದ ಜೈಮಿನಿ ಮಹರ್ಷಿಗಳು ರಚಿಸಿರುವ ಜೈಮಿನಿಯ ಸೂತ್ರಗಳು ವೇದ ವಿಚಾರದ ಬಗೆಗೆ, ತಿಳಿಸುವ ಪ್ರವರ್ತಕ ಗ್ರಂಥ ಮತ್ತು ಮೀಮಾಂಸೆಗೆ ಮೂಲ. ಇದಕ್ಕೆ ಅನೇಕ ಭಾಷ್ಯ - ಟೀಕೆಗಳಿವೆ. ಶಬರಸ್ವಾಮಿಯ ಭಾಷ್ಯ ಪ್ರಸಿದ್ಧವಾದುದು. ಬೌದ್ಧರ ಪ್ರಚಂಡ ತರ್ಕದಿಂದ ವೈದಿಕ ಮತವನ್ನು ರಕ್ಷಿಸಿ ಲೋಕಪ್ರಿಯಗೊಳಿಸಿದವನು ಕುಮಾರಿಲ ಭಟ್ಟ.. ಶಾಬರ ಭಾಷ್ಯದ ಮೇಲಿನ ಅವನ ಮೂರು ವೃತ್ತಿ ಗ್ರಂಥಗಳು "ಮೀಮಾಸಾ ದರ್ಶನ" ದ ಆಧಾರ ಸ್ಥಂಬಗಳು. ಇದನ್ನು ಭಾಟ್ಟ ಮತವೆನ್ನುತ್ತಾರೆ. ಇಂದಿಗೂ ರೂಢಿಯಲ್ಲಿದೆ.
- ಪ್ರಭಾಕರನ ಪ್ರಭಾಕರ ಮತ, ಮುರಾರಿಮಿಶ್ರನ ಮೂರನೆಯ ಸಂಪ್ರದಾಯ ಪ್ರಸಿದ್ಧ , || ಮುರಾರೇ ಸ್ತ್ರಿತೀಯಾ ಪಂಥಾಃ || .
ಪ್ರಮಾಣಗಳು
[ಬದಲಾಯಿಸಿ]- ಪ್ರಮೆ ಯಾಗಿರುವುದು ಪ್ರಮಾಣ. "ಪ್ರಮೆ" ಅಥವಾ "ಯತಾರ್ಥ ಜ್ಞಾನ"ವನ್ನು ಮಾಡುವ /ಕೊಡುವ ಸಾಧನಗಳು -ಪ್ರಮೆ. ||ಪ್ರಮಾಕರಣಂ ಪ್ರಮಾಣಂ ||. "ದೋಷ ರಹಿತವಾದ ಜ್ಞಾನಕ್ಕೆ ಪ್ರಮೆ" ಯೆಂದು ಹೆಸರು.
- ನೆನಪು, ಅನುವಾದ, ತಪ್ಪು ತಿಳುವಳಿಕೆ, ಸಂಶಯವುಳ್ಳದ್ದು , ಪ್ರಮೆಯಲ್ಲ.
- ಇವರ ಪ್ರಕಾರ ಆರು ಪ್ರಮಾಣಗಳು. ಪ್ರತ್ಯಕ್ಷ, ಅನುಮಾನ*, ಉಪಮಾನ , ಶಬ್ದ, ಅರ್ಥಾಪತ್ತಿ , ಮತು ಅನುಪಲಬ್ಧಿ . : ಇದು ಕುಮಾರಿಲ ಪಂಥ . (ಅಭಿಪ್ರಾಯ: ಮೊದಲಿನ ಮೂರು ಪ್ರಮಾಣಗಳಲ್ಲಿ ನ್ಯಾಯವನ್ನು ಹೋಲುತ್ತದೆ)
- ಇವರು ಪ್ರತ್ಯಕ್ಷದಲ್ಲಿ ಎರಡೇ ಸನ್ನಿಕರ್ಷಗಳನ್ನು ಒಪ್ಪುತ್ತಾರೆ. ಅವು "ಸಂಯೋಗ" , "ಸಂಯುಕ್ತ" ಈ ಎರಡೇ ತದಾತ್ಮ್ಯಗಳು ಸಾಕೆನ್ನುತ್ತಾರೆ.
- ಪಂಚವಾಕ್ಯಗಳ ಬದಲಿಗೆ' ಪ್ರತಿಜ್ಞಾ , ಹೇತು , ದೃಷ್ಟಾಂತ; ಅಥವಾ ದೃಷ್ಟಾಂತ ಉಪನಯ, ನಿಗಮ , ಈ ಮೂರೇ ಸಾಕೆನ್ನುತ್ತಾರೆ.
- (*inference :The reasoning involved in drawing a conclusion or making a logical judgment on the basis ofcircumstantial evidence and prior conclusions rather than on the basis of direct observation)
ಶಬ್ದ -ವೇದ
[ಬದಲಾಯಿಸಿ]- ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ , ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು 'ಶಬ್ದ ಪ್ರಮಾಣ'ದಿಂದ ತಿಳಿಯಬಹುದು . ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದ ವೊಂದೇ ಸಾಧನ ಅಥವಾ ಪ್ರಮಾಣ. ಬೇರೆ ಪ್ರಮಾಣಗಳು ಅನುಪಯುಕ್ತವೆಂದು ತೋರಿಸಲು ಅವುಗಳನ್ನು (ಶಬ್ದ ಪರಮಾಣವನ್ನು) ಉಪಯೋಗಿಸಬೇಕಾಗುವುದು.
- ಶಬ್ದ ಎಂದರೆ ಮಾತು. ಅದು ಎರಡು ವಿಧ . ಪೌರುಷೇಯ ಮತ್ತು ಅಪೌರುಷೇಯ .
- ಪೌರುಷೇಯ ಲೌಕಿಕ ವಿಷಯಕ್ಕೆ ಸಂಬಧಿಸಿದ ಪ್ರಮಾಣ. ಅದನ್ನು ಆಪ್ತ ವಾಕ್ಯ ವೆಂದು ಕರೆಯಬಹುದು . ಆದರೆ ಅದು ಸಾಪೇಕ್ಷ ಸತ್ಯ..
- ಅಪೌರುಷೇಯ ವಾಕ್ಯಗಳು ವೇದಗಳು ವೇದಗಳು ಈಶ್ವರನಿಂದ ಬಾರದಿದ್ದರೂ, ಅವು ಸ್ವತಃ ಸಿದ್ಧ ವಾಕ್ಯಗಳು . ;ಮೀಮಾಂಸಕರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ವೇದವನ್ನು ಒಪ್ಪುತ್ತಾರೆ .
- ಋಷಿಗಳು ಸ್ವತಃ-ಸಿದ್ಧ ವಾಕ್ಯಗಳನ್ನು ಕಂಡವರು.; ದೃಷ್ಠಾರರು ಅವರು ಕರ್ತೃಗಳಲ್ಲ .
- ಶಬ್ದ- ಅರ್ಥ, ಅದರ ಸಂಬಂಧಗಳು ನಿತ್ಯ ವಾದದ್ದು . ವರ್ಣ(ಅಕ್ಷರ)(ಲಿಪಿ ) ರೂಪವುಳ್ಳದ್ದು . ವರ್ಣಗಳ ಸಮೂಹವೇ ಪದ. ಧ್ವನಿಯು ಮತ್ತು ರೂಪಗಳು ವರ್ಣದ ಅಭಿವ್ಯಕ್ತಿ ರೂಪ. ಧ್ವನಿಯು ಅನಿತ್ಯ ವರ್ಣವು ನಿತ್ಯ.
- ಶಬ್ದಕ್ಕೆ ನಿತ್ಯ, ಅನಿತ್ಯ ಎಂಬ ಎರಡು ರೂಪಗಳಿರುತ್ತವೆ. ಅವ್ಯಕ್ತ ರೂಪದಲ್ಲಿ ಅದು ನಿತ್ಯವೂ ಸರ್ವಗತವೂ ಆಗಿರುತ್ತದೆ.
- ವರ್ಣ. 'ಧ್ವನಿ'ಗೆ ಹುಟ್ಟುಸಾವುಗಳಿವೆ. ವರ್ಣಗಳು ನಿತ್ಯವಾದ್ದರಿಂದ,ಅವುಗಳ ಸಮೂಹವಾದ ಪದವೂ ನಿತ್ಯ.
- ಈ ಶಬ್ದಗಳು ತಿಳಿಸುವ ಅರ್ಥವೂ ನಿತ್ಯವೇ. ಶಬ್ದ ಮತ್ತು ಅರ್ಥಗಳ ಸಂಬಂಧವೂ ನಿತ್ಯ. ಕಾರಣ, 'ದನ', ಎಂಬ ಶಬ್ದಕ್ಕೆ ಅದೇ ಅರ್ಥಬರಲು ಮಾನವೇಚ್ಛೆ ಅಥವಾ ಈಶ್ವರೇಚ್ಛೆ ಕಾರಣವಲ್ಲ. ಅದು ಸ್ವತಃಸಿದ್ಧ. ಭಾಷೆ ಸಹಜವಾದದ್ದು. ಶಬ್ಧಾರ್ಥಗಳ ಸಂಬಂಧವು ತನ್ನಿಂದತಾನೆ ಹುಟ್ಟಿಕೊಂಡಿದೆ. ರೂಢಿ -ಅರ್ಥವನ್ನು ತಿಳಿಸುವ ಸಾಧನ ಮಾತ್ರಾ. ವಸ್ತುವನ್ನು ತಿಳಿಯಲು ಬೆಳಕಿದ್ದಂತೆ. .
- ವೇದಗಳ, 'ಪದ', 'ಪಾಠ ಕ್ರಮ', ವಿಶಿಷ್ಠವಾಗಿದ್ದು ಬದಲಾಯಿಸಲಾಗದ್ದು. ಬದಲಾಯಿಸಲು ಬಾರದ್ದಾಗಿರುವುದರಿಂದ, ಈ ಅನುಪೂರ್ವಿಯು ಸ್ವಯಂ ಸಿದ್ಧವೂ ನಿತ್ಯವೂ ಆಗಿದೆ .
- ವೇದಗಳಲ್ಲಿ ಐದು ಪ್ರಕಾರದ ವಿಷಯಗಳಿವೆ : ವಿದಿ , ಮಂತ್ರ , ನಾಮಧೇಯ , ನಿಷೇಧ , ಮತ್ತು ಅರ್ಥವಾದ ; :ಮಾಡಬೇಕಾದ್ದು , 'ವಿಧಿ' ; ಮಾಡಬಾರದ್ದು 'ನಿಷೇಧ' ; ಅನುಷ್ಠಾನಕಾರಕಗಳು, 'ಮಂತ್ರಗ'ಳು (ಅರ್ಥಸ್ಮಾರಕ) , ಯಜ್ಞದ ಹೆಸರು, 'ನಾಮಧೇಯ'.
- ವೇದ ವಾಕ್ಯಗಳಲ್ಲಿ , ಸಿದ್ಧಾರ್ಥವಾಕ್ಯ, ವಿಧಾಯಕ ವಾಕ್ಯಗಳುಂಟು.ಇದ್ದದ್ದನ್ನು ಹೇಳುವುದು ; ಉದಾ: "ಸತ್ಯಂ ಜ್ಞಾನಮನಂತಂ ಬ್ರಹ್ಮ" ; ಇದು ಬ್ರಹ್ಮದ ಪರಿಚಯ . ವೇದದ ತಾತ್ಪರ್ಯವಿರುವುದು- ವಿಧಿ ವಾಕ್ಯಗಳಲ್ಲಿ .- ಉದಾ: ಸ್ವರ್ಗ ಕಾಮೋ ಯಜೇತ ; 'ಸ್ವರ್ಗ ಬಯಸುವವನು ಯಜ್ಞ ಮಾಡಬೇಕು'. ಆದ್ದರಿಂದ ವೇದ ವಿಹಿತ ಕರ್ಮವೇ ಧರ್ಮ. ಅದೇ ಜೀವನದ ಗುರಿ . ಸಿದ್ಧಾರ್ಥದ ವಾಕ್ಯಗಳು ವ್ಯರ್ಥ. ಆದ್ದರಿಂದ ಮೀಮಾಂಸೆಯು ವಿದಿ ವಿಚಾರವನ್ನು ನಿರ್ಣಯಿಸುತ್ತದೆ.
ಅರ್ಥಾಪತ್ತಿ
[ಬದಲಾಯಿಸಿ]- ಪ್ರಮಾಣ : ಮೀಮಾಂಸಕರು ಹೊಸದಾಗಿ ಸೇರಿಸಿದ ಪ್ರಮಾಣ . ಕೇಳಿದ ಸಂಗತಿಯಲ್ಲಿ ವಿರೋಧವನ್ನು ಪರಿಹರಿಸಿಕೊಳ್ಳಲು ಅರ್ಥಾಂತರವನ್ನು ಕಲ್ಪಿಸಿಕೊಳ್ಳುವುದು - ಇದು ಅರ್ಥಾಪತ್ತಿ. ಉದಾಹರಣೆ; 'ದೇವದತ್ತನು ಹಗಲಿನಲ್ಲಿ ಊಟಮಾಡುವುದಿಲ್ಲ, ಆದರೆ ದಪ್ಪಗಿದ್ದಾನೆ'; -'ಹಾಗಿದ್ದರೆ ರಾತ್ರಿ ಊಟಮಾಡುತ್ತಾನೆ', ಎಂದು ಕಲ್ಪಿಸಿಕೊಳ್ಳುವುದು. (ಕಾರಣ -ಇಲ್ಲದಿದ್ದರೆ ತೆಳ್ಳಗಿರಬೇಕಾಗಿತ್ತು). ಇದರಲ್ಲಿ, 'ದೃಷ್ಟ' ಕಂಡಿದ್ದು; 'ಶಬ್ದ ' (ಮಾತು ) , ಎಂದು ಎರಡು ವಿಧ. ನ್ಯಾಯದಲ್ಲಿ ಇದನ್ನು ಅನುಮಾನ ಪ್ರಮಾಣದಲ್ಲಿ ಸೇರಿಸುತ್ತಾರೆ. ಅರ್ಥಾಪತ್ತಿ ಪ್ರಮಾಣವನ್ನು ಮರಣಾನಂತರ ಆತ್ಮವಿರುತ್ತದೆ, ಎಂಬುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕರ್ಮಕ್ಕೆ ಫಲವಿರುವುರಿಂದ - ಇಲ್ಲಿ ಭೋಗಿಸದ ಕರ್ಮ ಫಲವನ್ನು ಭೋಗಿಸಲು ಮರಣಾನಂತರ ಆತ್ಮವಿರುತ್ತದೆ -ಇರಬೇಕು.
- ಅನುಪಲಬ್ಧಿ : ಅಭಾವ , ಇಲ್ಲದ್ದನ್ನು ತಿಳಿಯಲು ಪ್ರಮಾಣ. ಉದಾ: ನೆಲದ ಮೇಲೆ ಗಡಿಗೆ ಇಲ್ಲ. ಪ್ರತ್ಯಕ್ಷ ವಸ್ತು ಇಲ್ಲ. ಅಭಾವವನ್ನು ಶೂನ್ಯವೆಂದು ಹೇಳಲಾಗದು. ಆದ್ದರಿಂದ ಅಭಾವವನ್ನು ತಿಳಿಯಲೂ ಪ್ರಮಾಣ ಬೇಕು.
ಸ್ವತಃ ಪ್ರಾಮಾಣ್ಯವಾದ
[ಬದಲಾಯಿಸಿ]- ಪ್ರಮಾಣಗಳಿಂದ ದೊರೆತ ಜ್ಞಾನದ ಸತ್ಯತೆಯನ್ನು ತೀರ್ಮಾನಿಸುವುದು, ಹೇಗೆಂಬುದು ಜ್ಞಾನ ಮೀಮಾಂಸೆಯ ಸಮಸ್ಯೆ . ಇಂದ್ರಿಯಗಳು ಉಪಕರಣಗಳು ದೋಷರಹಿತವಾಗಿದ್ದರೆ ಜ್ಞಾನ ಯತಾರ್ಥ. ಉದಾ : ಕಣ್ಣು -ಬೆಳಕನ್ನೂ , ಕೆಂಪು ಲೇಖನಿಯನ್ನೂ ಸರಿಯಾಗಿ ಗುರುತಿಸುವುದು. ಅಂದರೆ ಜ್ಞಾನವು ಹುಟ್ಟಿನಲ್ಲಿಯೂ (ಉತ್ಪತ್ತಿಯಲ್ಲಿಯೂ) (ಉತ್ಪತ್ತೌ), ಜ್ಞಪ್ತಿಯಲ್ಲಿಯೂ, ಪ್ರಾಮಾಣಿಕವಾಗಿರುತ್ತದೆ.
- ೧. ಜ್ಞಾನದ ಪ್ರಾಮಾಣಿಕತೆಯು, ಬಾಹ್ಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದರೆ ಅದು ಜ್ಞಾನಗಳನ್ನು ಉಂಟುಮಾಡುವ ವಸ್ತುಗಳ ಜೊತೆಗೇ ಹುಟ್ಟುತ್ತದೆ. (ಪ್ರಮಾಣಂ ಸ್ವತಃ ಉತ್ಪದ್ಯತೇ)
- ೨. ಜ್ಞಾನವು ಹುಟ್ಟಿದ ಕ್ಷಣದಲ್ಲಿಯೇ ಅದರ ಪ್ರಮಾಣ್ಯದ ಜ್ಞಾನವೂ ಉಂಟಾಗುತ್ತದೆ. ಅದಕ್ಕೆ ಇತರ ಪ್ರಮಾಣದ ಅವಶ್ಯಕತೆ ಇಲ್ಲ. (ಪ್ರಮಾಣ ಸ್ವತಃ ಜ್ಞಾಯತೇ) ; ಇದು ಮೀಮಾಂಸಕರ ಸ್ವತಃ ಪ್ರಾಮಾಣ್ಯವಾದ.
- ಜ್ಞಾನವೆಲ್ಲವೂ ಸತ್ಯವಾದುದು ಎಂಬುದು ಮೀಮಾಂಸಕರ ನಿಲುವು. ಒಮೆ ಅದು ತಪ್ಪಾಗಿದ್ದರೆ , ಸರಿಪಡಿಸಿಕೊಂಡಿದ್ದು ಸತ್ಯ ಜ್ಞಾನ . -ಅಲ್ಲಿಯವರೆಗೆ ಅದು ಸತ್ಯ. (ಕಪ್ಪೆ ಚಿಪ್ಪು -ಬೆಳ್ಳಿಯಂತೆ) (ಅಪ್ರಾಮಣ್ಯಂ ಪರತಃ) ಇತರೆ ಪ್ರಮಾಣಗಳಿಂದ ಜ್ಞಾನದ ಪ್ರಾಮಾಣಿಕತೆಯನ್ನು ತಿಳಿಯುತ್ತೇವೆ.
- ಪರತಃ ಪ್ರಾಮಾಣ್ಯವನ್ನು ನ್ಯಾಯದಂತೆ ಇವರು ಒಪ್ಪುವುದಿಲ್ಲ. ನೀರನ್ನು ಕುಡಿದಾಗ ಮಾತ್ರಾ ಪ್ರಮಾಣವೆಂದು ಒಪ್ಪುವುದು ನ್ಯಾಯದ ನಿಲುವು. ನೋಡಿದರೆ ಸಾಕೆಂದು ಮೀಮಾಂಸಕರು. ; ಏಕೆಂದರೆ ಅದು ಅವ್ಯವಹಾರಿಕ. ಎಲ್ಲವನ್ನೂ ದೃಢಪಡಿಸುವುದೇ ಬೇರೆ. ನೀರನ್ನು ಕುಡಿದದ್ದರಿಂದ ತಿಳಿಯಿತೋ ದೃಢಪಟ್ಟಿತೋ ? ಲೋಕವ್ಯವಹಾರವು ನಡೆಯುವುದು ನಾವು ತಿಳಿದಿದ್ದು ಸತ್ಯವೆಂಬ ನಂಬುಗೆಯಿಂದ . ಅಂದರೆ ಜ್ಞಾನವು ಸ್ವತಃ ಸಿದ್ಧವಾಗಿದೆ.
- ಮೀಮಾಂಸಕರ ಈ ವಾದಕ್ಕೆ ಕಾರಣವೇನೆಂದರೆ.-ಪರತಃ ಜ್ಞಾನವನ್ನು (ಪರೀಕ್ಷಿಸದ) ಒಪ್ಪಿದರೆ, ವೇದ ವಾಕ್ಯಗಳ , ಸ್ವತಃ ಸಿದ್ಧ ಸತ್ಯತೆಯನ್ನು ಸಂದೇಹಿಸಬೇಕಾಗುತ್ತದೆ. ಸ್ವತಃ ಪ್ರಾಮಾಣ್ಯ ವಾದವನ್ನು ಅವಲಂಬಿಸಿದರೆ ಸಂದೇಹಿಸುವ ಅಗತ್ಯವಿಲ್ಲ. :ಪೌರುಷೇಯ ಪ್ರಾಮಾಣ್ಯವನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ ಅಪೌರುಷೇಯ ವೇದ ವಾಕ್ಯಗಳು ಸ್ವತಃ ಸಿದ್ಧವಾದ್ದರಿಂದ ಪರೀಕ್ಷಿಸದೆ ನಂಬಬೇಕಾಗುತ್ತದೆ.
- ಆಖ್ಯಾತಿವಾದ :
- ಎರಡು ಭಿನ್ನವಾದ ಜ್ಞಾನಗಳ ಬೇಧವನ್ನು ತಿಳಿಯುವುದರಿಂದ , -ತಿಳಿಯಲಾರದ್ದರಿಂದ ತಪ್ಪು ಜ್ಞಾನವಾಗುತ್ತದೆ. ಇದು ಭ್ರಮೆ _ (ಉದಾ: ಚಿಪ್ಪು - ಬೆಳ್ಳಿ) ಇದಕ್ಕೆ ಆಖ್ಯಾತ ವಾದವೆಂದು ಹೆಸರು .
- ವಿಪರೀತ ಖ್ಯಾತಿ ವಾದ :-
- ಬೆಳ್ಳಿಯ ಜ್ಞಾನ - ಕಪ್ಪೆ ಚಿಪ್ಪಿನಲ್ಲಿ ಅದರ ಆರೋಪ. -ಇದರಿಂದ ಭ್ರಮೆ . ಇದು ವಿಪರೀತ ಖ್ಯಾತಿವದ -ಇದು ಕುಮಾರಿಲ ಭಟ್ಟರ ಮತ.
ಜಗತ್ತು
[ಬದಲಾಯಿಸಿ]- ಮೀಮಾಂಸ ಜಗತ್ತನ್ನು ನಿತ್ಯವೆಂದು ಹೇಳುತ್ತದೆ.
- ಬದಲಾವಣೆಗಳನ್ನು ಒಪ್ಪಿದರೂ ಅದು ಅನಿತ್ಯವಲ್ಲ, ವಾಸ್ತವ (ಸತ್ಯ).ಅದು ಪರಿಣಾಮ ನಿತ್ಯವಾಗಿದೆ. ಅದಕ್ಕೆ ಆದಿಯೂಇಲ್ಲ , ಅಂತ್ಯವೂ ಇಲ್ಲ. ಪ್ರಳಯ ಕೇವಲ ಕಲ್ಪನೆ. ಸಂಸಾರದಲ್ಲಿ (ಜಗತ್ತು) ನಮಗೆ ಮೂರು ವಸ್ತುಗಳ ಜ್ಞಾನವಾಗುತ್ತದೆ. -ಶರೀರ , ಇಂದ್ರಿಯಗಳು . ಪದಾರ್ಥಗಳು. ಆತ್ಮವು ಇದರಲ್ಲಿದ್ದುಕೊಂಡು, ಸುಖ , ದುಃಖವನ್ನು ಅನುಭವಿಸುತ್ತದೆ. ಈಂದ್ರಿಯಗಳು ಭೋಗ ಸಾಧನಗಳು. ಪದಾರ್ಥಗಳು ಭೋಗ ವಿಷಯಗಳು.
- ಕುಮಾರಿಲ ಮತದಲ್ಲಿ ಪದಾರ್ಥಗಳು ಐದು. ದ್ರವ್ಯ , ಗುಣ , ಕರ್ಮ, ಮತ್ತು ಸಾಮಾನ್ಯಗಳು-ಭಾವ ಪದಾರ್ಥಗಳು , ಅಭಾವವು ಐದನೆಯದು. ದ್ರವ್ಯದಲ್ಲಿ ತಮಸ್ಸು , ಶಬ್ದ ಸೇರಿದೆ. ಕತ್ತಲೆಗೆ -ಕಪ್ಪು ಬಣ್ಣ , ಚಲನೆಗೆ ಶಕ್ತಿ ಇದೆ ಎಂಬುದು ಇವರ ವಾದ.
- ಆದರೆ ವೈಶೇಷಿಕರು , ಬೆಳಕಿನ ಅಭಾವವೇ ಕತ್ತಲೆ ಎನ್ನುತ್ತಾರೆ. ಆದರೆ ಮುರಾರಿ ಮಿಶ್ರನು , ಬ್ರಹ್ಮ ವೊಂದೇ ಪರಮಾರ್ಥಪದಾರ್ಥವೆಂದಿದ್ದಾನೆ. ಕೆಲವರು ಪರಮಾಣು ವಾದವನ್ನು ಒಪ್ಪಿದರೂ, ಕುಮಾರಿಲರು ಮೀಮಾಂಸಕರಿಗೆ ಪರಮಾಣುವಾದವು ಅವಶ್ಯವಿಲ್ಲವೆನ್ನುತ್ತಾರೆ.
ಆತ್ಮ
[ಬದಲಾಯಿಸಿ]- ಮೀಮಾಂಸಕರು ಶರೀರ, ಇಂದ್ರಿಯ, ಬುದ್ಧಿಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತಾರೆ. ಆತ್ಮವೇ ಇಲ್ಲದಿದ್ದರೆ ಇದ್ದಾಗ ಮತ್ತು ಸತ್ತಮೇಲೆ ಕರ್ಮಫಲವನ್ನು ಭೋಗಿಸುವವನೇಇಲ್ಲವಾದೀತು.
ಇವರ ಪ್ರಕಾರ , ಆತ್ಮದಲ್ಲಿ ಪರಿಣಾಮ ಅಥವಾ ಬದಲಾವಣೆ ಇದೆ. ಆದರೆ ಅನಿತ್ಯವಲ್ಲ . ಅದು ಜ್ಞಾನ ಸ್ವರೂಪಿಯಲ್ಲ. ಜ್ಞಾನವು ಆತ್ಮದ ಕ್ರಿಯೆ. ಆತ್ಮದಲ್ಲಿ ಚಿತ್ , ಅಚಿತ್ , ಅಂಶಗಳಿವೆ . ಚಿತ್ ಅಂಶದಿಂ ಜ್ಞಾನ , ಅಚಿತ್ನಿಂದ ಬದಲಾವಣೆ. ಆತ್ಮವು ಸರ್ವವ್ಯಾಪಿ , ಆದರೆ , ಪ್ರತಿಯೊಂದು ಶರೀರಕ್ಕೂ ಒಂದೊಂದು ಆತ್ಮವಿದೆ . ಪ್ರಭಾಕರನ ಪ್ರಕಾರ, ಅಹಂ ಪ್ರತ್ಯಯ ವೇದ್ಯ. ನಾನು ಎಂಬ ತಿಳುವಿನಿಂದ ತಿಳಿಯಲ್ಪಡುತ್ತದೆ. ಅದರಲ್ಲಿ ಕ್ರಿಯೆ ಇಲ್ಲ. ಆದರೆ ಕೆಲವರು ಅದಕ್ಕೆ ಎರಡೂ ಗುಣಗಳಿವೆ ಎನ್ನುತ್ತಾರೆ. ಅದು ಮಾನಸ ಪ್ರತ್ಯಕ್ಷ ವೆನ್ನುತ್ತಾರೆ .
ಕರ್ಮ
[ಬದಲಾಯಿಸಿ]- ಈ ದರ್ಶನದಲ್ಲಿ ಪ್ರಧಾನವಾದುದು ಕರ್ಮತತ್ವ. ವೇದ ವಿಹಿತವಾದ ಯಾಗಾದಿಗಳ ಆಚರಣೆಯೇ, ಧರ್ಮ . ಇದೇ ಕರ್ಮ ಅಥವಾ ಕರ್ತವ್ಯ. ವೇದ ನಿಷೇಧವಾದದ್ದು ಅಧರ್ಮ. ವೇದ ವಿಧಿಸಿದ ಕರ್ಮಗಳು ಮೂರು ವಿಧ. :- ನಿತ್ಯ , ನೈಮಿತ್ತಿಕ , ಕಾಮ್ಯ .
- ೧. ಸಂಧ್ಯಾವಂದನೆ , ದೇವರ ಪೂಜೆ ಮೊದಲಾದವು -ನಿತ್ಯಕರ್ಮ.
- ೨. ಶ್ರಾದ್ಧಾದಿ ವಿಶೇಷ ಕರ್ಮಗಳು ನೈಮಿತ್ತಿಕ ಕರ್ಮಗಳು.
- ೩. ಕಾಮನೆಯ (ಬಯಕೆಯ) ಪೂರ್ತಿಗಾಗಿ ಮಾಡುವುದು ಕಾಮ್ಯ ಕರ್ಮ.
- ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.
- ೧. ನಿತ್ಯ ಕರ್ಮಗಳಿಗೆ ಫಲವಿಲ್ಲ. ಬಿಟ್ಟರೆ ಪ್ರತ್ಯವಾಯು (ಲೋಪ) ಸಂಭವಿಸುತ್ತದೆ. ಆದರೆ ಮಾಡಿದ್ದರಿಂದ ಪಾಪಗಳು ಕ್ಷಯಿಸುತ್ತವೆ ಎಂದು ಕುಮಾರಿಲರು ಹೇಳುತ್ತಾರೆ. ಮಾಡಿದ್ದರಿಂದ ಪುಣ್ಯವಿದೆ ಬಿಟ್ಟದ್ದರಿಂದ ಪಾಪವಿಲ್ಲ ಎಂದು ಕೆಲವರು ಹೇಳುತ್ತಾರೆ.
ಅಪೂರ್ವ
[ಬದಲಾಯಿಸಿ]ಕರ್ಮಫಲವು ಹೇಗೆ ಉಂಟಗುತ್ತದೆ ? ಈವಿಚಾರ :
- ಕರ್ಮವನ್ನು ಮಾಡುವಾಗ ಫಲವಿಲ್ಲ; ಕರ್ಮವನ್ನು ಅನುಭವಿಸುವಾಗ ಕರ್ಮವಿಲ್ಲ. ಇದೊಂದು ವಾದ. ಕರ್ಮ (ಯಜ್ಞ) ಮಾಡುವಾಗ ಯಜಮಾನನಲ್ಲಿ ಒಂದು ವಿಶಿಷ್ಟವಾದ (ಅಪೂರ್ವವಾದ)ಶಕ್ತಿಯು ಹುಟ್ಟಿಕೊಂಡು, ಫಲವನ್ನು (ಯಥಾಕಾಲದಲ್ಲಿ ) ಕೊಡುತ್ತದೆ. ಇದು ಅಪೂರ್ವ.
ಮೋಕ್ಷ :
[ಬದಲಾಯಿಸಿ]- ಜೈಮಿನಿ ಅವರ ಶಿಷ್ಯರಾದ , ಶಬರಸ್ವಾಮಿಗಳ ಮಾತುಗಳಲ್ಲಿ ಮೋಕ್ಷದ ಪ್ರಸ್ತಾಪವಿಲ್ಲ. ಸ್ವರ್ಗವೇ ಮೊದಲಾದ ಅಭ್ಯುದಯದ ಪ್ರಸ್ತಾಪ ಮಾತ್ರಾ ಇದೆ. ಪುನರ್ಜನ್ಮವಿಲ್ಲ ದಿರುವುದೇ ಮೋಕ್ಷವೆಂದು ಕುಮಾರಿಲರು; ಕರ್ಮಶೇಷವಿಲ್ಲದಾಗ , ಶರೀರ , ಇಂದ್ರಿಯ, ಪದಾರ್ಥಗಳಿಂದ ಬಿಡುಗಡೆಯಾದಾಗ, ಮೋಕ್ಷ . ಮೋಕ್ಷದ ಸ್ಥಿತಿಯಲ್ಲಿ ಆನಂದಾನುಭವಗಳಿಲ್ಲ. ಇಂದ್ರಿಯಗಳಿಲ್ಲದಾಗ, ಭೋಗ ಸಾಧನವಿಲ್ಲದೆ ಆನಂದವಿಲ್ಲ.
ಮೋಕ್ಷಕ್ಕೆ ಜ್ಞಾನವು ನೇರ ಸಾಧನವಲ್ಲ . ನಿತ್ಯ -ನೈಮಿತ್ತಿಕ ಕರ್ಮಗಳನ್ನು ಆಚರಿಸಿ, ಜ್ಞಾನ ಮತ್ತು ಕರ್ಮದಿಂದ ಮೋಕ್ಷ. ಮೀಮಾಂಸಕರು ಜ್ಞಾನ -ಕರ್ಮ ಸಂಯೋಗವನ್ನು ಪ್ರತಿಪಾದಿಸುತ್ತಾರೆ.
ಈಶ್ವರ :
[ಬದಲಾಯಿಸಿ]- ಈ ದರ್ಶನದಲ್ಲಿ ಈಶ್ವರನಿಗೆ ಯಾವ ಸ್ಥಾನವೂ ಇಲ್ಲ. ಪ್ರಪಂಚವು ಅನಾದಿ, ಅನಂತ ; ವೇದವೂ ಅನಾದಿ , ಅನಂತ.ಅವುಗಳಿಗೆ ಅವನನ್ನು (ಈಶ್ವರನನ್ನು) ಕರ್ತೃವೆಂದು ಹೇಳುವಂತಿಲ್ಲ. ಕರ್ಮಫಲವನ್ನು ವಿತರಿಸಲೂ, ಅವನ ಅವಶ್ಯಕತೆ ಇಲ್ಲ . ಅಪೂರ್ವವೆನ್ನುವ ಶಕ್ತಿಯೇ ಆ ಕೆಲಸ ಮಾಡುತ್ತದೆ. ಪ್ರಾಚೀನ ಮೀಮಾಂಸಕರು ಈಶ್ವರನ ಪ್ರಸ್ತಾಪವನ್ನು ಎತ್ತುವುದಿಲ್ಲ. ಕುಮಾರಿಲರು ,ಶ್ಲೋಕ ವಾರ್ತಿಕದಲ್ಲಿ ಈಶ್ವರನ ಅಸ್ತಿತ್ವವನ್ನು ನಿರಾಕರಿಸುತ್ತಾರೆ.
ಹಾಗಾದರೆ ವೇದಗಳಲ್ಲಿ ಹೇಳಿದ ದೇವತೆಗಳ ವಿಚಾರವೇನು ಎಂದು ಕೇಳಿದರೆ- ದೇವತೆಗಳಿಗೆ ದೇಹವಿಲ್ಲ, ಏಕೆಂದರೆ ಅನೇಕ ಕಡೆ ಯಾಗ ಮಾಡಿದಾಗ, ಅನೇಕ ಕಡೆ ಅವರು ಇರುವುದು (ಒಂದೇ ದೇಹವಿದ್ದಲ್ಲಿ ) ಸಾದ್ಯವಿಲ್ಲ. ,ಅಗ್ನಿ, ಇಂದ್ರ, ಮೊದಲಾದ ದೇವತೆಗಳು ಶಬ್ದಗಳೇ ವಿನಃ ರೂಪವಲ್ಲ. ಯಜ್ಞದಲ್ಲಿ ಕೊಡುವುದು, ತ್ಯಾಗ ಬುದ್ಧಿ, ; ದ್ರವ್ಯವನ್ನು ಯಜ್ಞದಲ್ಲಿ ಕೊಟ್ಟು ತ್ಯಾಗವನ್ನು ಮಾಡಬೇಕು. ದೇವತೆಗಳು ಅಪ್ರಧಾನ ; ಇದ್ದರೂ ಅವರಿಗೆ ಮಹತ್ವವಿಲ್ಲ.
- ನಂತರದ ಮೀಮಾಂಸಕರು, ಈಶ್ವರನನ್ನು ಈ ಸಿದ್ಧಾಂತದಲಿ ಸೇರಿಸಲು ಪ್ರಯತ್ನಿಸಿದ್ದಾರೆ.
- ಆದರೆ ಕುಮಾರಿಲರು, ತಮ್ಮ ವಾರ್ತಿಕದ ಆರಂಭದಲ್ಲಿ ಶಿವನನ್ನು ಸ್ತುತಿಸಿರುವುದು ವಿಶೇಷ.
ಸಮೀಕ್ಷೆ -ಉಪಸಂಹಾರ
[ಬದಲಾಯಿಸಿ]- ಈಗಿನ ಪಂಡಿತರ-ವಿದ್ವಾಂಸರ ಅಭಿಪ್ರಾಯ : ಮೀಮಾಂಸೆಯು ಎತ್ತಿ ಹಿಡಿದಿರುವ ಯಜ್ಞ ಧರ್ಮವು ಶುಷ್ಕವಾದುದು. ಅವರ ಕರ್ಮಯೋಗದ ಆದರ್ಶ ದೊಡ್ಡದು. ಅವರ ತರ್ಕ ವಾದಗಳು , ಶೈಲಿ, ಧರ್ಮಜಿಜ್ಞಾಸೆಗೆ ಉತ್ತಮ ಕೊಡಿಗೆ.
- ಮೀಮಾಂಸಕರ ಈಶ್ವರ ಖಂಡನೆಯು, ತುಂಬಾ ಪ್ರಬಲವಾಗಿದೆ. ಕುಮಾರಿಲರು (೮ ನೇ ಶತಮಾನದಲ್ಲೇ) ;ಈಶ್ವರನನ್ನು ಒಪ್ಪಿದರೆ, ಜಗತ್ತಿನಲ್ಲಿರುವ ಅನ್ಯಾಯವನ್ನು ವಿವರಿಸಲು ಅಸಾದ್ಯವೆಂದು ಧೀರವಾಗಿ ಹೇಳಿದ್ದಾರೆ.
- ಅವರು ಪುರಾಣ ಕಥೆಗಳು ನೀತಿ ಬೋಧಕಗಳೇ ಹೊರತು, ನಿಜವಲ್ಲವೆಂದು ಹೇಳಿದ್ದಾರೆ. ಅವರ ಧೈರ್ಯ ಮೆಚ್ಚಬೇಕಾದದ್ದು.
- ಮೀಮಾಂಸಕರ ಜೀವನ ಪ್ರೀತಿ, , ಗೃಹಸ್ಥಾಶ್ರಮಕ್ಕೆ ಅವರು ನೀಡಿದ ಪ್ರಾಮುಖ್ಯತೆ, ಶ್ಲಾಘ್ಯವಾದುದು. ;ಕುಮಾರಿಲರು ಯೋಗ ಸಿದ್ಧಿ ; ಸಂನ್ಯಾಸಗಳನ್ನು ಲೇವಡಿ ಮಾಡಿದ್ದಾರೆ .
- ಮೀಮಾಂಸದ ಪ್ರವರ್ತಕರು, ಪ್ರತಿಪಾದಕರು , ಅಸಾಧಾರಣ ಯೋಗ್ಯತೆಯ ಚಿಂತಕರಾಗಿದ್ದರು . [೧][೨]
- ಓಂ ತತ್ಸತ್
ನೋಡಿ
[ಬದಲಾಯಿಸಿ]ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ
ಆಧಾರ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]