ವಿಷಯಕ್ಕೆ ಹೋಗು

ಮಲೆನಾಡು ಗಿಡ್ಡ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲೆನಾಡು ಗಿಡ್ಡ
ತಳಿಯ ಹೆಸರುಮಲೆನಾಡು ಗಿಡ್ಡ
ಮೂಲಮಲೆನಾಡು ಪ್ರದೇಶ - ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ – ಕರ್ನಾಟಕ
ವಿಭಾಗಕೆಲಸಗಾರ ತಳಿ, ಸಣ್ಣ ಗಾತ್ರ
ಬಣ್ಣಕೆಂಪು, ಕಂದು, ಕಪ್ಪು, ಬಿಳಿ ಹಾಗೂ ಕಪಿಲಾ
ಮುಖಸಪೂರವಾಗಿ ಉದ್ದ
ಕೊಂಬುಸಣ್ಣದು

ಮಲೆನಾಡು ಗಿಡ್ಡ ತಳಿ ಕೆಲಸಗಾರ ವಿಭಾಗಕ್ಕೆ ಬರುತ್ತದೆ. ಗಾತ್ರದಲ್ಲಿ ಕಿರಿದಾಗಿದ್ದರೂ, ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಈ ತಳಿಯ ಗೋವುಗಳು ಕಡಿಮೆ ಆಹಾರ ತಿಂದು, ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಾಗೂ ಪೌಷ್ಟಿಕಾಂಶಯುಕ್ತ ಹಾಲನ್ನು ನೀಡುತ್ತವೆ. ದಿನದಲ್ಲಿ ಹೆಚ್ಚಿನಕಾಲ (ಬೆಳಗ್ಗೆಯಿಂದ ಮುಸ್ಸಂಜೆಯವರೆಗೂ) ಗುಡ್ಡ ಕಾಡುಗಳಲ್ಲಿ ಅಡ್ಡಾಡುತ್ತಾ ಎಲೆ, ಹುಲ್ಲು, ಚಿಗುರುಗಳನ್ನು ತಿನ್ನುತ್ತಿರುತ್ತವೆ. ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿನ ಅನೇಕ ಗಿಡಮರಬಳ್ಳಿಗಳು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿವೆಯೆಂದು ಅನೇಕ ಆಯುರ್ವೇದೀಯ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಹಾಗಾಗಿ ಇವುಗಳನ್ನು ತಿಂದ ಈ ಗೋವುಗಳ ಹಾಲು, ಮೂತ್ರ, ಗೋಮಯ ಎಲ್ಲವೂ ಔಷಧೀಯವಾಗಿ ಅತಿ ಶ್ರೇಷ್ಠವಾಗಿವೆ.

ಮಲೆನಾಡು ಗಿಡ್ಡ ತಳಿಗಳ ಗೋಮೂತ್ರ ಸೌಮ್ಯ ಗುಣ ಹೊಂದಿದ್ದು, ಉತ್ತರ ಭಾರತದ ತಳಿಗಳ ಗೋಮೂತ್ರ ತೀಕ್ಷ್ಣ ಗುಣ ಹೊಂದಿದ್ದರೂ, ಔಷಧೀಯವಾಗಿ ಎರಡರ ಗುಣಧರ್ಮ ಒಂದೇ ಆಗಿದೆ. ಆದರೆ ಈ ತಳಿಯ ಗೋವುಗಳು ಹೆಚ್ಚಿನ ಸ್ವಾತಂತ್ರ್ಯವನ್ನು ಅಪೇಕ್ಷಿಸುತ್ತವೆ. ಸಣ್ಣ ಗಾತ್ರ ಹಾಗೂ ಶಕ್ತಿಯುತ ಕಾಲುಗಳನ್ನು ಹೊಂದಿರುವುದರಿಂದ ಆರು ಅಡಿಗಿಂತಲೂ ಹೆಚ್ಚಿನ ಎತ್ತರದ ಬೇಲಿ / ತಡೆಗೋಡೆಗಳನ್ನು ಸುಲಭವಾಗಿ ಹಾರುವ ಸಾಮರ್ಥ್ಯ ಹೊಂದಿವೆ. ಈ ತಳಿಯ ಕೆಲವು ಗೋವುಗಳು ಪ್ರತಿವರ್ಷ (ಅಂದರೆ ಸಾಮಾನ್ಯವಾಗಿ ೧೪-೧೬ ಕರುಗಳು) ಕರು ಹಾಕಿದ ಉದಾಹರಣೆಗಳಿವೆ ಎಂದು ಹಲವಾರು ವರ್ಷಗಳಿಂದ ಈ ತಳಿಗಳನ್ನು ಸಾಕಿದ ಕರಾವಳಿ ಪ್ರದೇಶದ ಜನರು ಹೇಳುತ್ತಾರೆ. ಇವುಗಳ ಸಾಮರ್ಥ್ಯಕ್ಕೊಂದು ಸಣ್ಣ ಉದಾಹರಣೆ ಎಂದರೆ ಇವು ಗರ್ಭ ಧರಿಸಿ ದಿನ ತುಂಬಿದರೂ ಸಹಜವಾಗಿ ಗುಡ್ಡ ಮೇಡುಗಳಲ್ಲಿ ಮೇಯಲು ಹೋಗುತ್ತವೆ. ಆ ಸಂದರ್ಭದಲ್ಲಿ ಕರು ಹಾಕಿದರೂ ಕೆಲವೇ ಹೊತ್ತಿನಲ್ಲಿ ತಾಯಿ ದನದೊಡನೆ ಅದರ ಕರು ಕೂಡ ತಮ್ಮನ್ನು ಸಾಕಿದ ಮನೆಗೆ ನಡೆದುಕೊಂಡು ಬಂದ ಅನೇಕ ಉದಾಹರಣೆಗಳಿವೆ. ಹೀಗೆ ವೈಶಿಷ್ಟ್ಯತೆಗಳಲ್ಲಿ, ಔಷಧೀಯ ಗುಣಗಳಲ್ಲಿ, ಉಪಯೋಗದಲ್ಲಿ ಈ ರೀತಿ ಯಾವ ಗುಣವಾದರೂ ಭಾರತೀಯ ತಳಿಗಳಲ್ಲಿ ಕಿರೀಟಪ್ರಾಯವಾಗಿ ಮಲೆನಾಡು ಗಿಡ್ಡ ನಿಲ್ಲುತ್ತದೆ.

ಕರಾವಳಿ, ಮಲೆನಾಡು ಪ್ರದೇಶದಲ್ಲಿ ಇಂದಿಗೂ ಆಧುನಿಕತೆ ತಲುಪದ ಅನೇಕ ಕಡೆ ಈ ತಳಿಯ ಗೋವುಗಳು, ಹೋರಿಗಳೂ ಕಾಣಲು ಸಿಗುತ್ತವೆ. ಆಧುನಿಕ ಶಿಕ್ಷಣ / ಚಿಂತನೆ ಹೆಚ್ಚಾದ ಹಾಗೆ ಈ ತಳಿಗಳ ಸಂಕರವೂ ಹೆಚ್ಚಾಗಿ ಶುದ್ಧತಳಿಗಳ ಸಂಖ್ಯೆ ಕಡಿಮೆಯಾಗಿದೆ. ಕರಾವಳಿ, ಮಲೆನಾಡು ಪ್ರದೇಶದ ಜನಜೀವನದ ಅವಿಭಾಜ್ಯ ಅಂಗವಾಗಿ ಹತ್ತು-ಹಲವು ವರ್ಷಗಳಿಂದ ಇರುವ ಈ ಮಲೆನಾಡು ಗಿಡ್ಡ ತಳಿ ಭಾರತ ಸರ್ಕಾರದ ಗೋತಳಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ಚಿತ್ರಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.