ಭೂತೋಚ್ಚಾಟನೆ
ಭೂತೋಚ್ಚಾಟನೆ (ಹಿಂದಿನ ಲ್ಯಾಟಿನ್ ಎಕ್ಸಾರ್ಸಿಮಸ್ , ಗ್ರೀಕ್ನ ಎಕ್ಸಾರ್ಕಿಜೇನ್ -ಪ್ರಮಾಣಕ್ಕೆ ಬದ್ಧವಾಗಿಸುವುದು)ಯು ವ್ಯಕ್ತಿಗೆ ಅಥವಾ ಸ್ಥಳದಲ್ಲಿ ಹಿಡಿದಿರುವ ಭೂತಗಳು ಅಥವಾ ಇತರೆ ಪ್ರೇತಾತ್ಮಗಳನ್ನು ಆ ವ್ಯಕ್ತಿಯಿಂದ ಅಥವಾ ಸ್ಥಳದಿಂದ ಉಚ್ಚಾಟಿಸಿ ಪ್ರೇತಾತ್ಮದಿಂದ ಪ್ರಮಾಣ ಮಾಡಿಸುವ ಆಚರಣೆ. ಈ ಆಚರಣೆಯು ತೀರಾ ಪ್ರಾಚೀನಕಾಲದ್ದಾಗಿದ್ದು, ಅನೇಕ ಸಂಸ್ಕೃತಿಗಳ ನಂಬಿಕೆಯ ವ್ಯವಸ್ಥೆಯ ಭಾಗವಾಗಿದೆ.
ಏಷ್ಯಾದ ಸಂಸ್ಕೃತಿಗಳು
[ಬದಲಾಯಿಸಿ]ಹಿಂದೂ ಧರ್ಮ
[ಬದಲಾಯಿಸಿ]ಭೂತೋಚ್ಚಾಟನೆಯ ನಂಬಿಕೆಗಳು ಮತ್ತು/ಅಥವಾ ಆಚರಣೆಗಳು ಪ್ರಮುಖವಾಗಿ ದಕ್ಷಿಣದ ಪ್ರಾಚೀನ ದ್ರಾವಿಡರಿಗೆ ಸಂಬಂಧಿಸಿದೆ. ನಾಲ್ಕು ವೇದಗಳಲ್ಲಿ(ಹಿಂದುಗಳ ಪವಿತ್ರ ಗ್ರಂಥ)ಮಂತ್ರ ಮತ್ತು ಔಷಧಿಗೆ ಸಂಬಂಧಿಸಿದ ರಹಸ್ಯಗಳನ್ನು ಅಥರ್ವ ವೇದ ಹೊಂದಿತ್ತು.[೧][೨] ಈ ಗ್ರಂಥದಲ್ಲಿರುವ ಅನೇಕ ಧಾರ್ಮಿಕವಿಧಿಗಳಲ್ಲಿ ಭೂತಗಳನ್ನು ಮತ್ತು ಪ್ರೇತಾತ್ಮಗಳನ್ನು ಉಚ್ಚಾಟಿಸುವುದನ್ನು ವಿವರಿಸಲಾಗಿದೆ. ಆ ನಂಬಿಕೆಗಳು ವಿಶೇಷವಾಗಿ ಪಶ್ಚಿಮಬಂಗಾಳ,ಒಡಿಶಾ ಹಾಗೂ ಕೇರಳ ಮುಂತಾದ ದಕ್ಷಿಣದ ರಾಜ್ಯಗಳಲ್ಲಿ ಪ್ರಬಲವಾಗಿ ಆಚರಿಸಲಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು]
ಭೂತೋಚ್ಚಾಟನೆಯ ಮೂಲ ಮಾರ್ಗಗಳು ಮಂತ್ರ ಮತ್ತು ಯಜ್ಞ. ಇವನ್ನು ವೇದ ಮತ್ತು ತಂತ್ರದ ಸಂಪ್ರದಾಯಗಳೆರಡರಲ್ಲೂ ಬಳಸಲಾಯಿತು.
ವೈಷ್ಣವ ಸಂಪ್ರದಾಯಗಳು ನರಸಿಂಹನ ಹೆಸರುಗಳ ವಾಚನ ಮತ್ತು ಧರ್ಮಗ್ರಂಥಗಳನ್ನು(ವಿಶೇಷವಾಗಿ ಭಾಗವತ ಪುರಾಣ)ಗಟ್ಟಿಯಾಗಿ ಓದುವುದನ್ನು ಕೂಡ ಉಪಯೋಗಿಸುತ್ತವೆ. ಪದ್ಮ ಪುರಾಣದ ಗೀತಾ ಮಹಾತ್ಮ್ಯದ ಪ್ರಕಾರ,ಭಗವದ್ಗೀತೆಯ 3ನೇ,7ನೇ ಮತ್ತು 8ನೇ ಅಧ್ಯಾಯ ಓದುವುದು ಮತ್ತು ಅಗಲಿದ ವ್ಯಕ್ತಿಗಳಿಗೆ ಅದರ ಫಲವನ್ನು ಮಾನಸಿಕವಾಗಿ ನೀಡುವುದು ಅವರನ್ನು ದೆವ್ವ ಹಿಡಿದ ಸ್ಥಿತಿಯಿಂದ ಬಿಡುಗಡೆ ಮಾಡಲು ನೆರವಾಗುತ್ತದೆ. ಕೀರ್ತನ, ಮಂತ್ರಗಳ ಸತತ ಪಠಣ,ದೇವರಿಗೆ ಸಂಬಂಧಿಸಿದ ಧರ್ಮಗ್ರಂಥಗಳು,ಪವಿತ್ರ ಚಿತ್ರಗಳನ್ನು(ಶಿವ,ವಿಷ್ಣು,ಬ್ರಹ್ಮ,ಶಕ್ತಿ ಮುಂತಾದವರ)(ವಿಶೇಷವಾಗಿ ನರಸಿಂಹ)ಮನೆಯಲ್ಲಿ ಇಡುವುದು,ಪೂಜೆಯಲ್ಲಿ ಸಮರ್ಪಿಸುವ ಧೂಪವನ್ನು ಉರಿಸುವುದು, ಪವಿತ್ರ ನದಿಗಳ ನೀರನ್ನು ಚಿಮುಕಿಸುವುದು,ಪೂಜೆಯಲ್ಲಿ ಬಳಸುವ ಶಂಖಗಳನ್ನು ಊದುವುದು ಇವು ಇತರೆ ಪರಿಣಾಮಕಾರಿ ಆಚರಣೆಗಳು.[ಸೂಕ್ತ ಉಲ್ಲೇಖನ ಬೇಕು]
ಭೂತ ಮತ್ತು ಸಾವಿಗೆ-ಸಂಬಂಧಿಸಿದ ಮಾಹಿತಿಗೆ ಪುರಾಣದ ಮುಖ್ಯ ಸಂಪನ್ಮೂಲ ಗರುಡ ಪುರಾಣ[ಸೂಕ್ತ ಉಲ್ಲೇಖನ ಬೇಕು]
ಬೌದ್ಧಧರ್ಮ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(October 2009) |
ಬೌದ್ಧಧರ್ಮದಲ್ಲಿ ಬೌದ್ಧ ಪಂಥಗಳನ್ನು ಅವಲಂಬಿಸಿ ಭೂತೋಚ್ಚಾಟನೆಯು ಅಸ್ತಿತ್ವದಲ್ಲಿದೆ. ಪ್ರತಿಯೊಂದು ಒಂದಕ್ಕೊಂದು ವ್ಯತ್ಯಾಸ ಹೊಂದಿದೆ. ಕೆಲವರು ಇದನ್ನು ರೂಪಾಲಂಕಾರ ಅಥವಾ ಗೂಢತತ್ವದ ಹಾಗೂ ವಾಚ್ಯಾರ್ಥ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ. ಕೆಲವು ಟಿಬೆಟ್ ಬೌದ್ಧರು ಭೂತೋಚ್ಚಾಟನೆಯನ್ನು ನಕಾರಾತ್ಮಕ ಯೋಚನೆಗಳನ್ನು ಉಚ್ಚಾಟಿಸಿ,ಪ್ರಬುದ್ಧ ಮನಸ್ಸಾಗಿ ಪರಿವರ್ತಿಸುವ ಕೇವಲ ರೂಪಕಾಲಂಕಾರದ ಸಂಕೇತವೆಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಬೌದ್ಧಧರ್ಮೀಯರು ನಕಾರಾತ್ಮಕ ಯೋಚನೆಗಳಿಂದ ಮತ್ತು/ಮತ್ತು ನಕಾರಾತ್ಮಕ ಆತ್ಮಗಳಿಂದ ಸ್ವತಃ ಬಿಡುಗಡೆಯಾಗಲು ಭೂತೋಚ್ಚಾಟನೆ ಬದಲಿಗೆ ಪ್ರಾರ್ಥನೆಗಳಲ್ಲಿ ನಂಬಿಕೆ ಇರಿಸಿದ್ದಾರೆ.
ಕ್ರೈಸ್ತ ಧರ್ಮ
[ಬದಲಾಯಿಸಿ]ಕ್ರೈಸ್ತ ಮತಾಚರಣೆಯಲ್ಲಿ ಭೂತೋಚ್ಚಾಟಕ ಎಂದು ಹೆಸರಾದ ಭೂತೋಚ್ಚಾಟನೆಯನ್ನು ನಿರ್ವಹಿಸುವ ವ್ಯಕ್ತಿ ಸಾಮಾನ್ಯವಾಗಿ ಚರ್ಚ್ ಸದಸ್ಯರಾಗಿರುತ್ತಾರೆ ಅಥವಾ ವಿಶೇಷ ಶಕ್ತಿ ಅಥವಾ ಕೌಶಲ್ಯಗಳೊಂದಿಗೆ ಅನುಗ್ರಹಿತನಾಗಿರುವ ವ್ಯಕ್ತಿ. ಭೂತೋಚ್ಚಾಟಕ ಪ್ರಾರ್ಥನೆಗಳು ಮತ್ತು ಸೂತ್ರಗಳ ಸಂಗ್ರಹ,ಸಂಕೇತಗಳು,ಚಿಹ್ನೆಗಳು, ಮೂರ್ತಿಗಳು ಮತ್ತು ಯಂತ್ರಗಳು ಮುಂತಾದ ಧಾರ್ಮಿಕ ವಸ್ತುಗಳನ್ನು ಬಳಸಬಹುದು.ಭೂತೋಚ್ಚಾಟಕ ಆಗಾಗ್ಗೆ ಭೂತೋಚ್ಚಾಟನೆಯಲ್ಲಿ ಮಧ್ಯಪ್ರವೇಶಕ್ಕೆ ದೇವರು, ಏಸುಕ್ರಿಸ್ತ ಅಥವಾ ಅನೇಕ ವಿವಿಧ ದೇವತೆಗಳು ಮತ್ತು ಪ್ರಧಾನದೇವತೆಯನ್ನು ಆಹ್ವಾನಿಸಬಹುದು. ಕ್ಯಾಥೋಲಿಕೇತರ ಕ್ರೈಸ್ತರು ಭೂತೋಚ್ಚಾಟನೆಯನ್ನು ನಿರ್ವಹಿಸುವುದಾಗಿ ಹೇಳಿಕೊಂಡಿದ್ದರೂ, ಭೂತೋಚ್ಚಾಟನೆಯು ಮುಖ್ಯವಾಗಿ ಕ್ಯಾಥೋಲಿಕ್ ಚರ್ಚ್‌ಗೆ ಸಂಬಂಧಿಸಿದೆ.
ಸಾಮಾನ್ಯವಾಗಿ ಭೂತ ಹಿಡಿದ ವ್ಯಕ್ತಿಗಳು ಸ್ವತಃ ದುಷ್ಟ ಎಂದು ಪರಿಗಣಿತರಾಗುವುದಿಲ್ಲ ಅಥವಾ ಅವರ ಕ್ರಿಯೆಗಳಿಗೆ ಪೂರ್ಣವಾಗಿ ಜವಾಬ್ದಾರರಾಗಿರುವುದಿಲ್ಲ. ಆದ್ದರಿಂದ ಭೂತೋಚ್ಚಾಟಕರು ಭೂತೋಚ್ಚಾಟನೆಯನ್ನು ಶಿಕ್ಷೆಯ ಬದಲಿಗೆ ಚಿಕಿತ್ಸೆ ಎಂದು ಪರಿಗಣಿಸುತ್ತಾರೆ. ಮುಖ್ಯವಾಹಿನಿ ಆಚರಣೆಗಳು ಇವನ್ನು ಸಾಮಾನ್ಯವಾಗಿ ಗಣನೆಗೆ ತೆಗೆದುಕೊಂಡು,ಭೂತ ಹಿಡಿದವನಿಗೆ ಯಾವುದೇ ಹಿಂಸೆ ಉಂಟಾಗದಂತೆ ಖಾತರಿ ಮಾಡಿಕೊಳ್ಳುತ್ತಾರೆ. ಹಿಂಸೆಗೆ ಸಂಭಾವ್ಯತೆ ಇದ್ದರೆ ಮಾತ್ರ ಅವರನ್ನು ಕಟ್ಟಿಹಾಕಲಾಗುತ್ತದೆ.[೩]
ಏಸುಕ್ರಿಸ್ತ
[ಬದಲಾಯಿಸಿ]ಕ್ರೈಸ್ತ ಧರ್ಮದಲ್ಲಿ,ಕ್ರಿಸ್ತನ ಶಕ್ತಿಯನ್ನು ಅಥವಾ ಏಸು ಹೆಸರನ್ನು ಬಳಸಿಕೊಂಡು ಭೂತೋಚ್ಚಾಟನೆಯನ್ನು ನಿರ್ವಹಿಸಲಾಗುತ್ತದೆ. ಅವನ ಹೆಸರಿನಲ್ಲಿ ದುಷ್ಟ ಪ್ರೇತಗಳನ್ನು ಉಚ್ಚಾಟಿಸುವಂತೆ ತನ್ನ ಅನುಯಾಯಿಗಳಿಗೆ ಏಸುಕ್ರಿಸ್ತ ಆದೇಶ ನೀಡಿದ್ದಾನೆಂದು ನಂಬಿಕೆಯನ್ನು ಇದು ಆಧರಿಸಿದೆ.Matthew 10:1Matthew 10:8Mark 6:7Luke 9:110:17Mark 16:17
ಭೂತೋಚ್ಚಾಟನೆ ಕುರಿತ ಕ್ಯಾಥೋಲಿಕ್ ವಿಶ್ವಕೋಶದಲ್ಲಿನ ಲೇಖನದ ಪ್ರಕಾರ,ತನ್ನ ಉದ್ಧಾರಕ ಗುಣದ ಸಂಕೇತವೆಂದು ಏಸುಕ್ರಿಸ್ತ ತನ್ನ ಸಾಮರ್ಥ್ಯದ ಬಗ್ಗೆ ಗಮನಸೆಳೆದು,ತನ್ನ ಅನುಯಾಯಿಗಳಿಗೆ ಹೀಗೆ ಮಾಡುವ ಅಧಿಕಾರವನ್ನು ನೀಡುತ್ತಾನೆ.[೪].
ಏಸುಕ್ರಿಸ್ತನನ್ನು ಕುರಿತ ಯಹೂದ್ಯ ವಿಶ್ವಕೋಶದ ಲೇಖನದಲ್ಲಿ ಹೀಗೆ ವಿವರಿಸಲಾಗಿದೆ "ಏಸುಕ್ರಿಸ್ತ ವಿಶೇಷವಾಗಿ ಭೂತಗಳ ಉಚ್ಚಾಟನೆಗೆ ತನ್ನನ್ನು ಅರ್ಪಿಸಿಕೊಂಡ" ಮತ್ತು ತನ್ನ ಅನುಯಾಯಿಗಳಿಗೆ ಆ ಶಕ್ತಿಯನ್ನು ವರ್ಗಾಯಿಸಿದ ಎಂದು ನಂಬಲಾಗಿದೆ; ಆದಾಗ್ಯೂ, "ತನ್ನ ಅನುಯಾಯಿಗಳು ಉಚ್ಚಾಟಿಸಲು ವಿಫಲರಾದ ಭೂತಗಳನ್ನು ಉಚ್ಚಾಟಿಸುವ ಮೂಲಕ ತನ್ನ ಬಲಾಢ್ಯತೆಯನ್ನು ಪ್ರದರ್ಶಿಸಿದ".[೫]
ಏಸುಕ್ರಿಸ್ತನ ಕಾಲದಲ್ಲಿ,ಹೊಸ ಒಡಂಬಡಿಕೆ(ಬೈಬಲ್ ವಿಭಾಗ)ಯಲ್ಲದ ಯಹೂದ್ಯ ಮೂಲಗಳು ಭೂತೋಚ್ಚಾಟನೆಯನ್ನು ಔಷಧಗಳ ಜತೆ ವಿಷಯುಕ್ತ ಬೇರಿನ ರಸ ಮತ್ತಿತರ ವಸ್ತುಗಳನ್ನು ಕುಡಿಸುವ ಮೂಲಕ ಬಲಿಗಳನ್ನು ನೀಡಿ ಕೈಗೊಳ್ಳಲಾಗುತ್ತಿತ್ತು ಎಂದು ವರದಿ ಮಾಡಿದೆ.[೬] ಭೂತೋಚ್ಚಾಟನೆಗಳನ್ನು ಯಹೂದಿ ವಿಭಾಗ ಎಸೀನ್ ಕುಮ್ರಾನ್‌ನ (ಮೃತ ಸಮುದ್ರ ದಾಖಲೆಗಳು)ನಿರ್ವಹಿಸುತ್ತದೆಂದು ಅವರು ಪ್ರಸ್ತಾಪಿಸಿದ್ದಾರೆ.
ರೋಮನ್ ಕ್ಯಾಥೋಲಿಸಮ್
[ಬದಲಾಯಿಸಿ]ರೋಮನ್ ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಭೂತೋಚ್ಚಾಟನೆ ನಂಬಿಕೆಯು ಒಂದು ಧಾರ್ಮಿಕವಿಧಿಯಾಗಿದೆ. ಆದರೆ ದೀಕ್ಷಾಸ್ನಾನ ಅಥವಾ ಪಾಪನಿವೇದನೆ ರೀತಿಯಲ್ಲಿ ಸಂಸ್ಕಾರವಲ್ಲ. ಸಂಸ್ಕಾರಕ್ಕೆ ಭಿನ್ನವಾಗಿ ಭೂತೋಚ್ಚಾಟನೆಯ ಪ್ರಾಮಾಣಿಕತೆ ಮತ್ತು ಫಲಪ್ರದತೆಯು... ಬದಲಾಗದ ಸೂತ್ರದ ಕಟ್ಟುನಿಟ್ಟಾದ ಬಳಕೆ ಅಥವಾ ನಿಗದಿತ ಕ್ರಮಗಳ ವ್ಯವಸ್ಥಿತ ಸರಣಿಯ ಮೇಲೆ ಅವಲಂಬಿತವಾಗಿಲ್ಲ. ಇದರ ಫಲಪ್ರದತೆಯು ಎರಡು ಅಂಶಗಳನ್ನು ಅವಲಂಬಿಸಿದೆ:ಕ್ರಮಬದ್ಧ ಮತ್ತು ನಿಷಿದ್ಧವಲ್ಲದ ಚರ್ಚ್ ಆಡಳಿತದಿಂದ ಅಧಿಕಾರ ಮತ್ತು ಭೂತೋಚ್ಚಾಟಕನ ನಂಬಿಕೆ".[೭] ಹಾಗೆ ಹೇಳುವ ಮೂಲಕ,ಕ್ಯಾಥೋಲಿಕ್ ಭೂತೋಚ್ಚಾಟನೆಯು ಅಸ್ತಿತ್ವದಲ್ಲಿರುವ ಎಲ್ಲ ಭೂತೋಚ್ಚಾಟನೆ ವಿಧಿಗಳಿಗಿಂತ ಅತ್ಯಂತ ಕಟ್ಟುನಿಟ್ಟಿನ ಮತ್ತು ವ್ಯವಸ್ಥಿತ ವಿಧಿಯಾಗಿದೆ. ಶಾಸ್ತ್ರೋಕ್ತ ಭೂತೋಚ್ಚಾಟನೆಗಳನ್ನು,ಚರ್ಚ್ ಕಾನೂನು ವ್ಯವಸ್ಥೆಯ ಪ್ರಕಾರ,ವಿಧಿಪೂರ್ವಕವಾಗಿ ನೇಮಕವಾದ ಪಾದ್ರಿ(ಅಥವಾ ಉನ್ನತ ದರ್ಜೆಯ ಚರ್ಚ್ ಅಧಿಕಾರಿ)ಯಿಂದ ನಿರ್ವಹಿಸಲಾಗುತ್ತದೆ. ಸ್ಥಳೀಯ ಬಿಷಪ್‌ರ ಅನುಮತಿಯೊಂದಿಗೆ ಮಾನಸಿಕ ರೋಗದ ಸಾಧ್ಯತೆಯಿಂದ ಹೊರತಾಗಿಸಲು ಎಚ್ಚರಿಕೆಯ ವೈದ್ಯಕೀಯ ಪರೀಕ್ಷೆಯ ನಂತರವೇ ಇದನ್ನು ನಿರ್ವಹಿಸಲಾಗುತ್ತದೆ. ಕ್ಯಾಥೋಲಿಕ್ ವಿಶ್ವಕೋಶ ಹೀಗೆಂದು ನಿರ್ದೇಶಿಸಿದೆ: ಅವುಗಳ ಇತಿಹಾಸದ ಹೆಚ್ಚಿನ ಭಾಗವು ಒಂದಕ್ಕೊಂದು ಬೆಸೆದುಕೊಂಡಿದ್ದರೂ ಕೂಡ ಮೂಢನಂಬಿಕೆಯನ್ನು ಧರ್ಮದ ಜತೆ ಬೆರಸಬಾರದಿತ್ತು. ಮಂತ್ರವಿದ್ಯೆ ಎಷ್ಟೇ ಶುದ್ಧವಾಗಿದ್ದರೂ ಕಾನೂನುಬದ್ಧ ಧಾರ್ಮಿಕ ವಿಧಿ ಜತೆ ಬೆರೆಸಬಾರದಿತ್ತು. ರೋಮನ್ ಆಚರಣೆಯಲ್ಲಿ ಸಂಭಾವ್ಯ ಭೂತ ಹಿಡಿದದ್ದಕ್ಕೆ ಸಂಕೇತಗಳ ಪಟ್ಟಿಯಲ್ಲಿ ಇವುಗಳು ಸೇರಿವೆ. ಭೂತಹಿಡಿವನಿಗೆ ಫೂರ್ವಭಾವಿ ಪರಿಜ್ಞಾನವಿಲ್ಲದೇ ವಿದೇಶಿ ಅಥವಾ ಪ್ರಾಚೀನ ಭಾಷೆಗಳನ್ನು ಮಾತನಾಡುವುದು;ಅಸಾಮಾನ್ಯ ಸಾಮರ್ಥ್ಯಗಳು ಮತ್ತು ಶಕ್ತಿ; ಭೂತಹಿಡಿದವನಿಗೆ ತಿಳಿದಿರದ ಗುಪ್ತ ಅಥವ ದೂರದ ವಸ್ತುಗಳ ಜ್ಞಾನ, ಯಾವುದೇ ಪವಿತ್ರ ವಸ್ತುವಿಗೆ ವಿರೋಧ,ಯಥೇಚ್ಛ ದೈವನಿಂದೆ ಮತ್ತು/ಅಥವಾ ಅಪಚಾರ.
ಕ್ಯಾಥೋಲಿಕ್ ಚರ್ಚ್ ಜನವರಿ 1999ರಲ್ಲಿ ಭೂತೋಚ್ಚಾಟನೆಯ ಹಕ್ಕನ್ನು ಪರಿಷ್ಕರಿಸಿತು. ಆದರೂ ಆಯ್ಕೆಯಾಗಿ ಲ್ಯಾಟಿನ್‌ನಲ್ಲಿ ಭೂತೋಚ್ಚಾಟನೆಯ ಸಾಂಪ್ರದಾಯಿಕ ಹಕ್ಕುಗಳಿಗೆ ಅವಕಾಶ ನೀಡಿತು. ಭೂತೋಚ್ಚಾಟನೆಯ ಕ್ರಿಯೆಯು ನಂಬಲಾಗದಷ್ಟು ಅಪಾಯಕಾರಿ ಧಾರ್ಮಿಕ ಕ್ರಿಯೆಯೆಂದು ಪರಿಗಣಿತವಾಗಿದೆ. ಭೂತಹಿಡಿದ ವ್ಯಕ್ತಿಗಳ ದೇಹದ ಮೇಲೆ ಭೂತವು ನಿಯಂತ್ರಣ ಸಾಧಿಸಿದ್ದರೂ,ಅವರು ತಮ್ಮ ಮುಕ್ತ ಇಚ್ಛೆಯನ್ನು ಉಳಿಸಿಕೊಂಡಿರುತ್ತಾರೆಂದು ಆಚರಣೆ ಭಾವಿಸಿದ್ದು,ಪ್ರಾರ್ಥನೆಗಳು,ಸ್ತುತಿಗಳು,ಎಕ್ಸೋರ್ಸಿಸಮ್ಸ್ ಅಂಡ್ ಸರ್ಟನ್ ಸಪ್ಲಿಕೇಷನ್ಸ್ ಗಳ ದಾಖಲೆಯನ್ನು ಬಳಸಿಕೊಂಡು ದೇವರ ಆವಾಹನೆಗಳು ಒಳಗೊಂಡಿವೆ. ಹಿಂದೆ ಬೆನೆಡಿಕ್ಟ್ ಸಂತನ ಆದೇಶವಾದ ವೇಡ್ ರಿಟ್ರೊ ಸಟಾನ (ಹಿಂದಕ್ಕೆ ಹೋಗು ಸೈತಾನ)ಮುಂತಾದ ಸೂತ್ರಗಳನ್ನು ಬಳಸಿರಬಹುದು. ಮಾನಸಿಕ ಅಥವಾ ದೈಹಿಕ ಕಾಯಿಲೆಗಳು ಹೆಚ್ಚು ಸಂಭವನೀಯವೆಂಬ ಭಾವನೆಯಿಂದ ಆಧುನಿಕ ಯುಗದಲ್ಲಿ ಕ್ಯಾಥೋಲಿಕ್ ಬಿಷಪ್‌ಗಳು ಭೂತೋಚ್ಚಾಟನೆಯ ಅಧಿಕಾರವನ್ನು ಅಪರೂಪವಾಗಿ ನೀಡುತ್ತಿದ್ದರು. ವಿರಳ ಪ್ರಕರಣಗಳಲ್ಲಿ ಸೇಂಟ್ ಮೈಕೇಲ್ ಚಾಪ್ಲೆಟ್ ಬಳಸಬಹುದಿತ್ತು.[ಸೂಕ್ತ ಉಲ್ಲೇಖನ ಬೇಕು].
ಆಂಗ್ಲಿಕಾನ್ ಚರ್ಚ್ ಆಚರಣೆ
[ಬದಲಾಯಿಸಿ]ಚರ್ಚ್ ಆಫ್ ಇಂಗ್ಲೆಂಡ್ 1974ರಲ್ಲಿ "ವಿಮೋಚನೆ ಸಚಿವಾಲಯ"ವನ್ನು ಸ್ಥಾಪಿಸಿತು. ಅದರ ರಚನೆಯ ಭಾಗವಾಗಿ,ಪ್ರತಿಯೊಂದು ಡಯೋಸಿಸು(ಬಿಷಪ್ ಆಡಳಿತ ಪ್ರದೇಶ)ವು ಭೂತೋಚ್ಚಾಟನೆ ಮತ್ತು ಮನೋರೋಗ ಚಿಕಿತ್ಸೆಯಲ್ಲಿ ತರಬೇತಾದ ತಂಡದೊಂದಿಗೆ ಸಜ್ಜಾಗಬೇಕಿತ್ತು. ಅದರ ಪ್ರತಿನಿಧಿಗಳ ಪ್ರಕಾರ,ಅದರ ಮುಂದೆ ತಂದ ಬಹುತೇಕ ಪ್ರಕರಣಗಳು ಸಾಂಪ್ರದಾಯಿಕ ವಿವರಣೆಗಳಾಗಿದ್ದು, ವಾಸ್ತವಿಕ ಭೂತೋಚ್ಚಾಟನೆಗಳು ಬಹು ಅಪರೂಪದ್ದಾಗಿತ್ತು. ಮಾನಸಿಕ ಸಮಸ್ಯೆಯ ಕಾರಣಗಳಿಗಾಗಿ ಜನರಿಗೆ ಕೆಲವು ಬಾರಿ ಆಶೀರ್ವಾದಗಳನ್ನು ಮಾಡಲಾಗುತ್ತಿತ್ತು.[೮]
ಎಪಿಸ್ಕೋಪಲ್ ಚರ್ಚ್‌ನಲ್ಲಿ ಬುಕ್ ಆಫ್ ಅಕೇಷನಲ್ ಸರ್ವೀಸಸ್ ಭೂತೋಚ್ಚಾಟನೆಗೆ ನಿಬಂಧನೆಯನ್ನು ಚರ್ಚಿಸಿದೆ.ಆದರೆ ಅದು ಯಾವುದೇ ನಿರ್ದಿಷ್ಟ ವಿಧಿಯ ಬಗ್ಗೆ ಸೂಚಿಸಿಲ್ಲ ಅಥವಾ "ಭೂತೋಚ್ಚಾಟಕ"ನ ಕಚೇರಿಯನ್ನು ಸ್ಥಾಪಿಸಿಲ್ಲ.[೯] ಡಯೋಸಿಸನ್ ಭೂತೋಚ್ಚಾಟಕರು ಸಾಮಾನ್ಯವಾಗಿ ಚರ್ಚ್‌ನ ಎಲ್ಲ ಕರ್ತವ್ಯಗಳಿಂದ ನಿವೃತ್ತರಾದ ನಂತರ ತಮ್ಮ ಪಾತ್ರವನ್ನು ಮುಂದುವರಿಸುತ್ತಾರೆ. ಆಂಗ್ಲಿಕನ್ ಪಾದ್ರಿಗಳು ಡಯೋಸಿಸನ್ ಬಿಷಪ್ ಅನುಮತಿಯಿಲ್ಲದೇ ಭೂತೋಚ್ಚಾಟನೆಯನ್ನು ನಿರ್ವಹಿಸದಿರಬಹುದು. ಭೂತೋಚ್ಚಾಟನೆಯನ್ನು ಬಿಷಪ್ ಮತ್ತು ಅವನ ವಿಶೇಷತಜ್ಞರ ತಂಡ(ಮನೋವೈದ್ಯ ಮತ್ತು ವೈದ್ಯ)ರ ಅನುಮತಿಯಿಲ್ಲದೇ ಸಾಮಾನ್ಯವಾಗಿ ನಿರ್ವಹಿಸುವುದಿಲ್ಲ.
ಲೂಥರ್ ತತ್ತ್ವ
[ಬದಲಾಯಿಸಿ]ಲುಥೇರನ್ ಚರ್ಚ್ ಭೂತೋಚ್ಚಾಟನೆಯ ಆಚರಣೆಯನ್ನು ದಾರ್ಮಿಕ ಗ್ರಂಥಗಳ ಆಧಾರದ ಮೇಲೆ ಗುರುತಿಸಿದ್ದು,ಏಸು ಕ್ರಿಸ್ತ ಸಣ್ಣ ಆದೇಶದಿಂದ ಭೂತಗಳನ್ನು ಉಚ್ಚಾಟಿಸಿದನೆಂದು ಹೇಳಲಾಗಿದೆ(ಮಾರ್ಕ್ 1:23–26; 9:14–29; Luke 11:14–26)[೧೦] ದೇವದೂತರು ಶಕ್ತಿಯೊಂದಿಗೆ ಏಸುಕ್ರಿಸ್ತನ ಹೆಸರಿನಲ್ಲಿ ಆಚರಣೆಯನ್ನು ಮುಂದುವರಿಸಿದರು(ಮ್ಯಾಥಿವ್ 10:1;ಆಕ್ಸ್ಟ್ 19:11–16).[೧೦] ಕೆಲವು ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ನಂಬಿಕೆಗಳಿಗೆ ವ್ಯತಿರಿಕ್ತವಾಗಿ ಲೂತರ್ ತತ್ತ್ವ ಅನೇಕ ವಾದಗಳ ಆಧಾರದ ಮೇಲೆ ವ್ಯಕ್ತಿಯೊಬ್ಬ ನಂಬಿಕೆಯಿರಲಿ ಅಥವಾ ನಂಬಿಕೆ ಇಲ್ಲದಿರಲಿ ಭೂತಗಳಿಂದ ಪೀಡಿತನಾಗಬಹುದೆಂದು ಪ್ರತಿಪಾದಿಸಿದೆ. ನಂಬುವ ವ್ಯಕ್ತಿಯನ್ನು ಏಸು ಕ್ರಿಸ್ತ ಪಾಪದಿಂದ ವಿಮೋಚನೆ ಮಾಡಿದರೂ(ರೋಮನ್ಸ್ 6:18) ಅವನ ಜೀವನದಲ್ಲಿ ಇನ್ನೂ ಪಾಪದ ಪರಿಮಿತಿಯಲ್ಲಿ ಇರಬಹುದು,ಹಾಗೆಯೇ ಅವನು ಜೀವನದಲ್ಲಿ ಭೂತದಿಂದ ಕೂಡ ಬಂಧಿತನಾಗಿರಬಹುದು"[೧೧]
ಪ್ರೊಟೆಸ್ಟೆಂಟ್ ಸುಧಾರಣೆಯ ನಂತರ,ಮಾರ್ಟಿನ್ ಲೂಥರ್ ಭೂತೋಚ್ಚಾಟನೆಗೆ ಬಳಸಿದ ರೋಮನ್ ಕ್ರಿಯಾವಿಧಿಯನ್ನು ಸಂಕ್ಷೇಪಗೊಳಿಸಿದರು.[೧೨] ಈ ಕ್ರಿಯಾವಿಧಿಯನ್ನು 1526ರಲ್ಲಿ ಮತ್ತಷ್ಟು ಸಂಕ್ಷೇಪಗೊಳಿಸಲಾಯಿತು. ಭೂತೋಚ್ಚಾಟನೆಗೆ ಲುಥೇರನ್ ವಿಧಿ ಯ ಈ ಸ್ವರೂಪವನ್ನು ಬಹುತೇಕ ಲುಥೇರನ್ ಸೇವಾ ಪುಸ್ತಕಗಳಲ್ಲಿ ಅಳವಡಿಸಿ ಜಾರಿಗೆ ತರಲಾಯಿತು.[೧೨][೧೩] ಲುಥೇರನ್ ಚರ್ಚ್‌ನ ಆಧ್ಯಾತ್ಮಿಕ ಕೈಪಿಡಿಯ ಪ್ರಕಾರ,
“ | In general, satanic possession is nothing other than an action of the devil by which, from God's permission, men are urged to sin, and he occupies their bodies, in order that they might lose eternal salvation. Thus bodily possession is an action by which the devil, from divine permission, possesses both pious and impious men in such a way that he inhabits their bodies not only according to activity, but also according to essence, and torments them, either for the punishment or for the discipline and testing of men, and for the glory of divine justice, mercy, power, and wisdom.[೧೨][೧೪] | ” |
ಅನೇಕ ಬಾರಿ ಭಾವಪರವಶತೆ,ಅಪಸ್ಮಾರ,ಅತಿನಿದ್ರೆ,ಮನೋರೋಗ ಮತ್ತು ಮನಸ್ಸಿನ ಉನ್ಮಾದ ಸ್ಥಿತಿ ಮುಂತಾದ ಚಿಹ್ನೆಗಳು ನೈಸರ್ಗಿಕ ಕಾರಣಗಳ ಫಲವಾಗಿದ್ದು ಅದನ್ನು ಭೂತ ಬಾಧೆಯೆಂದು ತಪ್ಪುತಿಳಿಯಬಾರದೆಂದು ಎಚ್ಚರಿಸಿದೆ.[೧೪]
ಲುಥೇರನ್ ಚರ್ಚ್ ಪ್ರಕಾರ,ಭೂತ ಹಿಡಿದಿರುವುದನ್ನು ಸೂಚಿಸುವ ಮತ್ತು ಭೂತೋಚ್ಚಾಟನೆ ಅಗತ್ಯವನ್ನು ಪ್ರತಿಪಾದಿಸುವ ಮುಖ್ಯ ಲಕ್ಷಣಗಳಲ್ಲಿ ಇವು ಸೇರಿವೆ:
- ಗೋಪ್ಯ ವಸ್ತುಗಳ ಬಗ್ಗೆ ಜ್ಞಾನ,ಉದಾಹರಣೆಗೆ ಭವಿಷ್ಯವನ್ನು ಹೇಳಲು ಸಮರ್ಥನಾಗುವುದು, ಕಳೆದುಹೋದ ವ್ಯಕ್ತಿಗಳು ಅಥವಾ ವಸ್ತುಗಳನ್ನು ಪತ್ತೆಮಾಡುವುದು, ಒಬ್ಬರು ಕಲಿತಿರದ ಜಟಿಲ ವಿದ್ಯೆಗಳನ್ನು ತಿಳಿಯುವುದು(ಉದಾ.,ವೈದ್ಯಕೀಯ) ಭವಿಷ್ಯ ಹೇಳುವವರು ಸಾಮಾನ್ಯವಾಗಿ ಪ್ರೇತಾತ್ಮದಿಂದ ನೆರವನ್ನು ಕೇಳುತ್ತಾರೆ ಹಾಗೂ ಈ ಪ್ರೇತಾತ್ಮವು ಅವರಿಗೆ ಕೆಲವು ಶಕ್ತಿಗಳನ್ನು ನೀಡುತ್ತದೆಂದು ಹೇಳಲಾಗಿದೆ. ಆ ಪ್ರಕರಣದಲ್ಲಿ ದುಷ್ಟ ಆತ್ಮವು ನೆರವಾಗುತ್ತಿದ್ದು,ವ್ಯಕ್ತಿಯನ್ನು ದೈಹಿಕವಾಗಿ ಆವರಿಸಿರುವ ಅಗತ್ಯವಿರುವುದಿಲ್ಲ.[೧೪]
- ಒಬ್ಬ ವ್ಯಕ್ತಿ ಹಿಂದೆಂದೂ ಕಲಿಯದಿರದ ಭಾಷೆಗಳ ಬಗ್ಗೆ ಪರಿಜ್ಞಾನ. ಭೂತವು ಒಬ್ಬರ ನಾಲಿಗೆಯನ್ನು ಹತೋಟಿಯಲ್ಲಿಡಲು ಸಾಧ್ಯವಾಗುವಂತೆ(ಲ್ಯೂಕ್ 11:14),ಪೂರ್ವದ ಚರ್ಚ್ ಹಾಗೂ ಸುಧಾರಣೆಯ ಕಾಲಾವಧಿಯಲ್ಲಿ ಕೆಲವು ದೆವ್ವ ಹಿಡಿದ ವ್ಯಕ್ತಿಗಳು ಅವರು ಹಿಂದೆಂದೂ ಕಲಿತಿರದ ಭಾಷೆಗಳನ್ನು ಮಾತನಾಡಲು ಸಾಧ್ಯವಾಯಿತೆಂದು ವರದಿಯಾಗಿದೆ.[೧೪]
- ಅಸಾಮಾನ್ಯ ಶಕ್ತಿ(ಮಾರ್ಕ್ 5:2-3),ಅವರಿಗೆ ಮುಂಚೆ ಇದ್ದ ಶಕ್ತಿಯನ್ನೂ ಮೀರಿ ಅಥವಾ ಲಿಂಗ ಮತ್ತು ದೇಹದ ಗಾತ್ರವನ್ನು ಪರಿಗಣಿಸಿ ಮೀರಿದ ಶಕ್ತಿ. ಭೂತ ಹಿಡಿದಿರುವುದನ್ನು ತೀರ್ಮಾನಿಸುವಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕಾದ ಅಗತ್ಯವಿರುತ್ತದೆ. ಎಲ್ಲ ಸಂದರ್ಭಗಳನ್ನು ಮತ್ತು ಲಕ್ಷಣಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಉನ್ಮಾದತೆಯನ್ನು ಭೂತಹಿಡಿದೆದೆಯೆಂಬ ಗೊಂದಲಕ್ಕೆ ಒಳಗಾಗಬಾರದು. ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ, ಇಂತಹ ಲಕ್ಷಣಗಳ ಅನುಪಸ್ಥಿತಿಯಲ್ಲೂ ಭೂತಹಿಡಿಯಬಹುದು.[೧೪]
ಚರ್ಚ್ ಎರಡನೇ ಲಕ್ಷಣಗಳನ್ನು ಪಟ್ಟಿಮಾಡಿದೆ. ಭಯಾನಕವಾಗಿ ಕೂಗುವುದು(ಮಾರ್ಕ್ 5:5)ದೇವರನಿಂದನೆ ಮತ್ತು ನೆರೆಯವರನ್ನು ಮೂದಲಿಸುವುದು, ಚಲನವಲನಗಳಲ್ಲಿ ದೋಷ(ಉದಾ:ಹೆದರಿಕೆ ಹುಟ್ಟಿಸುವ ಚಲನವಲನಗಳು,ಮುಖವನ್ನು ತಿರುಚುವುದು,ವಿಕಟವಾಗಿ ನಗುವುದು,ಹಲ್ಲನ್ನು ಕಡಿಯುವುದು,ಉಗುಳುವುದು, ಬಟ್ಟೆ ಕಳಚುವುದು,ಸ್ವಯಂ ಹಿಂಸೆ,Mk 9:20; Lk. 8:26f.), ಅಮಾನವೀಯ ಮೋಜು(ಉದಾ:ಸಹಜ ಸಾಮರ್ಥ್ಯವನ್ನು ಮೀರಿ ಆಹಾರ ಸೇವನೆ),ದೇಹಗಳಿಗೆ ಚಿತ್ರಹಿಂಸೆ,ದೇಹಕ್ಕೆ ಮತ್ತು ಸಮೀಪದವರ ದೇಹದಲ್ಲಿ ಅಸಾಧಾರಣ ಗಾಯಗಳು,ದೇಹಗಳ ಅಸಾಮಾನ್ಯ ಚಲನೆ(ಉದಾ:ಭೂತ ಹಿಡಿದಿರುವ ಪ್ರೌಢ ವಯಸ್ಕ ವ್ಯಕ್ತಿ ಕುದುರೆಯಂತೆ ಓಡಲು ಶಕ್ತ)ಮತ್ತು ಮಾಡಿದ ಕೆಲಸಗಳನ್ನು ಮರೆಯುವುದು.[೧೪] ವ್ಯಕ್ತಿಯಲ್ಲಿ ವಿವೇಕಪ್ರಜ್ಞೆ ಕೆಟ್ಟು ಪ್ರಾಣಿಯಂತೆ ವರ್ತಿಸುವುದು, ವಿಷಣ್ಣತೆಗೆ ಗುರಿಯಾಗುವುದು,ವೇಗದ ಗತಿಯಲ್ಲಿ ಸಾವಿನ ಪ್ರಯತ್ನ(ಮಾರ್ಕ್ 9:18[ಆತ್ಮಹತ್ಯೆ ಪ್ರಯತ್ನಗಳ]ಮತ್ತು ಇತರ ಅಸಾಮಾನ್ಯ ಘಟನೆಗಳ ಉಪಸ್ಥಿತಿ ಮುಂತಾದ ಇತರೆ ಲಕ್ಷಣಗಳು ಸೇರಿವೆ.[೧೪]
ಈ ನಿರ್ಣಯಗಳನ್ನು ಕೈಗೊಂಡ ಬಳಿಕ,ಚರ್ಚ್ ಅನುಭವಿ ವೈದ್ಯರಿಗೆ ವ್ಯಕ್ತಿಯ ನಡವಳಿಕೆಗೆ ವೈದ್ಯಕೀಯ ವಿವರಣೆಯಿದೆಯೇ ಎಂದು ನಿರ್ಧರಿಸುವಂತೆ ಶಿಫಾರಸು ಮಾಡುತ್ತಾರೆ.[೧೪] ನಿಜವಾದ ಭೂತಬಾಧೆ ಗುರುತಿಸಿದಾಗ,ಚರ್ಚ್‌ನ ಸಚಿವರಿಂದ ಆರೈಕೆಗೆ ಭೂತಪೀಡಿತನನ್ನು ಒಪ್ಪಿಸುತ್ತಾರೆ. ನಿಷ್ಕಳಂಕ ಜೀವನ ನಡೆಸುವ ಅವರು,ಕೊಳಕು ಲಾಭಕ್ಕೆ ಯಾವುದನ್ನೂ ಮಾಡದೇ ಅಂತರಾತ್ಮದಿಂದ ಎಲ್ಲವನ್ನೂ ಮಾಡುವ ಅವರು ಸುಭದ್ರ ಸಿದ್ಧಾಂತವನ್ನು ಭೋಧಿಸುತ್ತಾರೆ.[೧೪] ಈ ಹಂತದವರೆಗೆ ಭೂತಬಾಧೆಯ ವ್ಯಕ್ತಿ ಯಾವ ರೀತಿಯ ಜೀವನ ನಡೆಸಿದ್ದಾನೆಂದು ಚರ್ಚಿನ ಧರ್ಮಗುರು ಶ್ರದ್ಧೆಯಿಂದ ವಿಚಾರಿಸಿಕೊಂಡು ಅವನ ಅಥವಾ ಅವಳ ಪಾಪಗಳನ್ನು ಗುರುತಿಸಲು ಕಾನೂನಿನ ಮೂಲಕ ಮುನ್ನಡೆಸುತ್ತಾರೆ.[೧೪] ಈ ವಾಗ್ದಂಡನೆ ಅಥವಾ ಸಾಂತ್ವನದ ಬಳಿಕ,ಸಾಮಾನ್ಯ ವೈದ್ಯನ ಸೇವೆಯನ್ನು ಬಳಸಿಕೊಂಡು ಸೂಕ್ತ ಔಷಧಿಗಳ ಮೂಲಕ ಭೂತ ಹಿಡಿದವನನ್ನು ಹಾನಿಕರ ದ್ರವಗಳಿಂದ ಸ್ವಚ್ಛಗೊಳಿಸುತ್ತಾರೆ.[೧೪] ಧರ್ಮಗುರುವಿನ ಕೈಪಿಡಿಯಲ್ಲಿ ನಂತರ ತಿಳಿಸಲಾಗುತ್ತದೆ:
“ |
|
” |
ಮೆಥೋಡಿಸ್ಟರ ತತ್ತ್ವ
[ಬದಲಾಯಿಸಿ]"ಭೂತೋಚ್ಚಾಟನೆಯ ಕ್ರಿಯಾವಿಧಿಯು ವ್ಯಕ್ತಿಯನ್ನು ಹಿಡಿದಿರುವ ವಾಸ್ತವಿಕ ದುಷ್ಟ ಶಕ್ತಿಯನ್ನು ಉಚ್ಚಾಟಿಸುವುದನ್ನು ಒಳಗೊಂಡಿದೆ ಎಂದು ಮೆಥೋಡಿಸ್ಟ್ ಚರ್ಚ್ ಪ್ರತಿಪಾದಿಸಿದೆ.".[೧೫] ಇದಲ್ಲದೇ,ಮೆಥೋಡಿಸ್ಟ್ ಚರ್ಚ್ ಬೋಧಿಸುತ್ತದೆ, "ಕ್ರೈಸ್ತನ ಸಚಿವಾಲಯ ವಿಶ್ವದಲ್ಲಿ ಮುಂದುವರಿಯುವ ಮಾರ್ಗಗಳಲ್ಲಿ ಒಂದಾಗಿ,ಚರ್ಚ್‌ಗೆ ಭೂತೋಚ್ಚಾಟನೆಯ ಅಧಿಕಾರವನ್ನು ನೀಡಲಾಗಿದೆ".[೧೬] ನೇಮಿತ ಪಾದ್ರಿಯು ಭೂತೋಚ್ಚಾಟನೆಯನ್ನು ಕೈಗೊಳ್ಳಲು ಮೊದಲಿಗೆ ಜಿಲ್ಲಾ ಸೂಪರಿಂಟೆಂಡೆಂಟ್ ಅವರನ್ನು ಭೇಟಿಯಾಗಬೇಕು.[೧೭] ಸಹಾಯ ಕೋರುವ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಕ್ರೈಸ್ತನ ಸಾನ್ನಿಧ್ಯ ಮತ್ತು ಪ್ರೀತಿಯ ಖಾತರಿ ಮಾಡುವುದು ಅತ್ಯಂತ ಅವಶ್ಯಕವೆಂದು ಮೆಥೋಡಿಸ್ಟ್ ಚರ್ಚ್ ಹೇಳುತ್ತದೆ.[೧೮]
ಇದರ ಜತೆಗೆ, ಬೈಬಲ್, ಪ್ರಾರ್ಥನೆ ಮತ್ತು ಮತಸಂಸ್ಕಾರಗಳ ಸಚಿವಾಲಯವನ್ನು ಈ ವ್ಯಕ್ತಿಗಳಿಗೆ ವಿಸ್ತರಿಸಬೇಕು.[೧೯] ಈ ವಸ್ತುಗಳ ಸಂಯೋಗವು ಪರಿಣಾಮಕಾರಿಯೆಂದು ಸಾಬೀತಾಗಿದೆ.[೨೦] ಉದಾಹರಣೆಗೆ, ಒಂದು ನಿರ್ದಿಷ್ಟ ಪ್ರಕರಣದಲ್ಲಿ ತನ್ನ ಮನೆಗೆ ಭೂತ ಆವರಿಸಿದೆಯೆಂದು ರೋಮನ್ ಕ್ಯಾಥೋಲಿಕ್ ಮಹಿಳೆಯೊಬ್ಬಳು ನಂಬಿಕೊಂಡು,ಸಹಾಯಕ್ಕಾಗಿ ಅವಳ ಪಾದ್ರಿಯನ್ನು ಭೇಟಿಯಾಗುತ್ತಾಳೆ. ಮಹಿಳೆಯ ಮನೆಯಿಂದ ಭೂತಗಳನ್ನು ಓಡಿಸಲು ಅವರು ಲಭ್ಯವಾಗದಿದ್ದರಿಂದ ಅವಳು ಮೆಥೋಡಿಸ್ಟ್ ಧರ್ಮಗುರುವನ್ನು ಸಂಪರ್ಕಿಸುತ್ತಾಳೆ. ಅವರು ಮನೆಯಲ್ಲಿ ಸಂಕಟದ ಮೂಲವೆಂದು ನಂಬಲಾದ ದುಷ್ಟಶಕ್ತಿಗಳನ್ನು ಮನೆಯ ಕೋಣೆಯಿಂದ ಉಚ್ಚಾಟನೆ ಮಾಡುತ್ತಾರೆ ಮತ್ತು ಅದೇ ಸ್ಥಳದಲ್ಲಿ ಪವಿತ್ರ ಪ್ರಭುಭೋಜನ ಸಂಸ್ಕಾರವನ್ನು ಆಚರಿಸಿದರು.[೨೦] ಈ ಕ್ರಮಗಳ ಬಳಿಕ ಮನೆಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸಲಿಲ್ಲ.[೨೦]
ಪೆಂಟಿಕಾಸ್ಟಲ್ ತತ್ತ್ವ
[ಬದಲಾಯಿಸಿ]ಪೆಂಟೆಕೋಸ್ಟಲ್ ಚರ್ಚ್‌ನಲ್ಲಿ ಚಾರಿಸ್ಮಾಟಿಕ್ ಮೂವೆಮೆಂಟ್(ಪವಿತ್ರ ಆತ್ಮದ ಪಾತ್ರವನ್ನು ಪ್ರತಿಪಾದಿಸುವ ಕೈಸ್ತ ಧರ್ಮದ ಒಂದು ರೂಪ)ಮತ್ತು ಇತರೆ ಕಡಿಮೆ ಶಾಸ್ತ್ರೋಕ್ತವಾದ ಕ್ರೈಸ್ತಧರ್ಮದ ವರ್ಗಗಳಲ್ಲಿ ಭೂತೋಚ್ಚಾಟನೆ ಕ್ರಿಯಾವಿಧಿಯು ಅನೇಕ ಸ್ವರೂಪಗಳನ್ನು ಮತ್ತು ನಂಬಿಕೆಯ ರಚನೆಗಳನ್ನು ಪಡೆಯಬಹುದು. ಇವುಗಳಲ್ಲಿ ಅತೀ ಸಾಮಾನ್ಯ ವಿಚೋಚನೆ ಕ್ರಿಯಾವಿಧಿ. ವಿಮೋಚನೆ ಕ್ರಿಯಾವಿಧಿಯು ಭೂತೋಚ್ಚಾಟನೆ ಕ್ರಿಯಾವಿಧಿಗಿಂತ ಭಿನ್ನವಾಗಿದ್ದು, ಅದರಲ್ಲಿ ವ್ಯಕ್ತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳದೇ ಅವನ ಜೀವನದೊಳಕ್ಕೆ ಭೂತವು ಪ್ರವೇಶ ಪಡೆದಿರುತ್ತದೆ. ಸಂಪೂರ್ಣ ನಿಯಂತ್ರಣವನ್ನು ಭೂತವು ಸಾಧಿಸಿದರೆ, ಪೂರ್ಣ ಸ್ವರೂಪದ ಭೂತೋಚ್ಚಾಟನೆ ಅವಶ್ಯಕತೆಯಿರುತ್ತದೆ. ಆದಾಗ್ಯೂ,ಚೈತನ್ಯ ಭರಿತ ಕ್ರೈಸ್ತ"ನಲ್ಲಿ ಅವನ ನಂಬಿಕೆಗಳ ಆಧಾರದ ಮೇಲೆ ಭೂತ ಹಿಡಿಯಲು ಸಾಧ್ಯವಿಲ್ಲ. ಈ ನಂಬಿಕೆಯ ವ್ಯವಸ್ಥೆಯಲ್ಲಿ,ಭೂತವು ಆಸರೆ ಪಡೆಯಲು ಕಾರಣಗಳನ್ನು ಮತಧರ್ಮಶಾಸ್ತ್ರದ ಸಿದ್ಧಾಂತದಿಂದ ಒಂದು ರೀತಿಯಲ್ಲಿ ಅಡ್ಡಹಾದಿ ಹಿಡಿದಿದ್ದರಿಂದ ಅಥವಾ ಮತಾಂತರ ಪೂರ್ವ ಚಟುವಟಿಕೆಗಳ ಕಾರಣದಿಂದ(ನಿಗೂಢ ಆಚರಣೆಗಳಲ್ಲಿ ತೊಡಗುವುದು ಮುಂತಾದವು)ಎಂದು ಸಾಮಾನ್ಯವಾಗಿ ವಿವರಿಸಲಾಗಿದೆ.[೨೧][೨೨]
ವಿಮೋಚನೆ ಕ್ರಿಯಾವಿಧಿ ವ್ಯಕ್ತಿಯೊಬ್ಬನಿಗೆ ಅಗತ್ಯ ಎಂದು ನಿರ್ಧರಿಸುವ ಸಾಂಪ್ರದಾಯಿಕ ವಿಧಾನವನ್ನು ಪ್ರೇತಾತ್ಮದ ಒಳಹೊಕ್ಕು ನೋಡುವ ಶಕ್ತಿಯನ್ನು ಪಡೆದ ಉಪಸ್ಥಿತಿ ವ್ಯಕ್ತಿ ನಿರ್ವಹಿಸುತ್ತಾನೆ. ಇದು ಹೋಲಿ ಸ್ಪಿರಿಟ್ 1 ಕಾರಿಯಾಂತಸ್ 12ನಿಂದ ಲಭಿಸಿದ ಶಕ್ತಿಯಾಗಿದ್ದು,ದುಷ್ಟ ಶಕ್ತಿಗಳ ಉಪಸ್ಥಿತಿಯ ಬಗ್ಗೆ ಒಂದು ರೀತಿಯಲ್ಲಿ "ಗ್ರಹಿಸಲು" ವ್ಯಕ್ತಿಗೆ ಅವಕಾಶ ನೀಡುತ್ತದೆ.[೨೩] ಗುಂಪಿನಲ್ಲಿ ಸಾಮಾನ್ಯವಾಗಿ ಆರಂಭಿಕ ಗುರುತಿಸುವಿಕೆಗೆ ವಿರೋಧವಿರುವುದಿಲ್ಲ. ಆದರೆ ಅನೇಕ ಜನರು ಒಂದು ಗುಂಪಿನಲ್ಲಿ ಈ ಶಕ್ತಿಯ ಅನುಗ್ರಹ ಹೊಂದಿದ್ದರೆ,ಫಲಿತಾಂಶಗಳು ಭಿನ್ನವಾಗಿರುತ್ತವೆ.[೨೪]
ಈ ಶಕ್ತಿಯನ್ನು ಹೊಂದಿದ ಜನರನ್ನು Fr.ಗೇಬ್ರಿಲೆ ಅಮೋರ್ಥ್ "ತ್ರಿಕಾಲ ಜ್ಞಾನಿಗಳು ಮತ್ತು ಅತೀ ಸಂವೇದನಾಶೀಲ" ಎಂದು ಕರೆದಿದ್ದು, ಅನೇಕ ಸಂದರ್ಭಗಳಲ್ಲಿ ಅವರನ್ನು ಬಳಸಿಕೊಂಡಿದ್ದಾರೆ; ದುಷ್ಟಶಕ್ತಿಯ ಉಪಸ್ಥಿತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ. ಆದಾಗ್ಯೂ,ಸದಾ ಅವರ ನಿರ್ಧಾರ ಸರಿಯಾಗಿರುವುದಿಲ್ಲ: ಅವರ ಭಾವನೆಗಳನ್ನು ಪರೀಕ್ಷಿಸಬೇಕು" ಎಂದು ಹೇಳುತ್ತಾರೆ. ಅವರ ಉದಾಹರಣೆಗಳಲ್ಲಿ, ಭೂತವು ಪ್ರವೇಶ ಪಡೆಯಬಹುದಾದ ಸಂದರ್ಭಗಳನ್ನು ಗುರುತಿಸಲು ಅವರು ಸಮರ್ಥರಾಗಿರುತ್ತಾರೆ ಅಥವಾ ವ್ಯಕ್ತಿಯನ್ನು ಹಿಡಿದಿರುವ ದುಷ್ಟ ಶಕ್ತಿಯನ್ನು ಪತ್ತೆಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅವರು ಸದಾ ನಮ್ರರಾಗಿರುತ್ತಾರೆಂದು ಅವರು ಗಮನಸೆಳೆಯುತ್ತಾರೆ[೨೫]
ಪೌರಸ್ತ್ಯ ಸಾಂಪ್ರದಾಯಿಕತೆ
[ಬದಲಾಯಿಸಿ]ಇಥಿಯೋಪಿಯನ್ ಸಂಪ್ರದಾಯ ಟೆವಾಹೆಡೊ ಚರ್ಚ್‌ನಲ್ಲಿ ಭೂತಗಳು ಅಥವಾ ಬೂಡಾ ದಿಂದ ಪೀಡಿತರಾಗಿದ್ದಾರೆಂದು ನಂಬಲಾದ ಜನರ ಪರವಾಗಿ ಪಾದ್ರಿಗಳು ಮಧ್ಯಪ್ರವೇಶಿಸಿ ಭೂತೋಚ್ಚಾಟನೆ ಕ್ರಿಯಾವಿಧಿ ನೆರವೇರಿಸುತ್ತಾರೆ. ಭೂತ ಹಿಡಿದ ವ್ಯಕ್ತಿಗಳನ್ನು ಚರ್ಚ ಅಥವಾ ಪ್ರಾರ್ಥನಾ ಸಭೆಗೆ ಕರೆತರಲಾಗುತ್ತದೆ.[೨೬] ಸಾಮಾನ್ಯವಾಗಿ ಅಸ್ವಸ್ಥ ವ್ಯಕ್ತಿಯು ಆಧುನಿಕ ವೈದ್ಯಕೀಯ ಚಿಕಿತ್ಸೆಗೆ ಪ್ರತಿಕ್ರಿಯಿಸದಿದ್ದಾಗ,ಈ ಬಾಧೆಗೆ ಭೂತಗಳೇ ಕಾರಣವೆನ್ನಲಾಗುತ್ತದೆ.[೨೬] ಅಪಸಾಮಾನ್ಯ ಅಥವಾ ವಿಶೇಷವಾಗಿ ವಿಕೃತ ಕೃತ್ಯಗಳನ್ನು ವಿಶೇಷವಾಗಿ ಸಾರ್ವಜನಿಕರ ಎದುರಿನಲ್ಲೇ ನಿರ್ವಹಿಸಿದಾಗ, ಭೂತ ಹಿಡಿದಿದ್ದರ ಸಂಕೇತವೆನ್ನಲಾಗುತ್ತದೆ.[೨೬] ಹೊಸ ಒಡಂಬಡಿಕೆಯಲ್ಲಿ ವಿವರಿಸಿರುವಂತೆ ಅಸಾಮಾನ್ಯ ಶಕ್ತಿ-ಬಂಧನದಿಂದ ಬಿಡಿಸಿಕೊಳ್ಳುವುದು ಮುಂತಾದವು ಜತೆಗೆ ಅಪರಿಚಿತ ಭಾಷಾಜ್ಞಾನವು ಪೀಡಿತ ವ್ಯಕ್ತಿಯಲ್ಲಿ ಕಂಡುಬರುತ್ತದೆ.[೨೬] ಇಥಿಯೋಪಿಯನ್ ಕ್ರಿಶ್ಚಿಯನ್ ಭೂತೋಚ್ಚಾಟನೆಗೆ ಸಮಾನವಾದ ಅಂಶಗಳನ್ನು ಆಧುನಿಕ ಪ್ರಕರಣದ ಅಧ್ಯಯನ ಅಮ್ಸಾಲು ಗೆಲೇಟಾ ನಿರೂಪಿಸುತ್ತದೆ:
ಇದು ಪ್ರಶಂಸೆಯ ಹಾಗೂ ವಿಜಯದ ಹಾಡುಗಳನ್ನು ಹಾಡುವುದು,ಧಾರ್ಮಿಕ ಗ್ರಂಥಗಳನ್ನು ಓದುವುದು,ಪ್ರಾರ್ಥನೆ ಮಾಡುವುದು ಹಾಗೂ ಏಸುಕ್ರಿಸ್ತನ ಹೆಸರಿನಲ್ಲಿ ಪ್ರೇತಾತ್ಮವನ್ನು ಎದುರಿಸುವುದು. ಭೂತೋಚ್ಚಾಟನೆ ಕ್ರಿಯಾವಿಧಿಯ ಇನ್ನೊಂದು ಮುಖ್ಯಭಾಗ ಪ್ರೇತಾತ್ಮದ ಜತೆ ಮಾತನಾಡುವುದು. ಇದು ಸಲಹೆಗಾರರಿಗೆ(ಭೂತೋಚ್ಚಾಟಕ)ಪ್ರೇತಾತ್ಮವು ಭೂತಹಿಡಿದವನ ಜೀವನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆಂದು ತಿಳಿಯಲು ನೆರವಾಗುತ್ತದೆ. ವಿಮೋಚನೆಯ ಬಳಿಕ ಬಲಿಪಶುವಾದ ವ್ಯಕ್ತಿಯು ಪ್ರೇತಾತ್ಮ ಪ್ರಸ್ತಾಪಿಸಿದ ಲಕ್ಷಣಗಳು ಮತ್ತು ಸಂದರ್ಭಗಳನ್ನು ದೃಢಪಡಿಸುತ್ತಾನೆ.[೨೬]
ಭೂತೋಚ್ಚಾಟನೆಯು ಸದಾ ಯಶಸ್ವಿಯಾಗುವುದಿಲ್ಲ,ಗೆಲಾಟಾ ಸಾಮಾನ್ಯ ವಿಧಾನಗಳು ಅಯಶಸ್ವಿಯಾಗುವ ಬಗ್ಗೆ ಇನ್ನೊಂದು ಉದಾಹರಣೆ ನೀಡುತ್ತದೆ,ಭೂತಗಳು ವ್ಯಕ್ತಿಯನ್ನು ಸ್ಪಷ್ಟವಾಗಿ ಕಾಣುವಂತೆ ಆನಂತರ ತ್ಯಜಿಸುತ್ತವೆ. ಒಟ್ಟಿನಲ್ಲಿ "ಯಾವುದೇ ಪ್ರಕರಣಗಳಲ್ಲಿ ಪ್ರೇತಾತ್ಮಕ್ಕೆ ಏಸುಕ್ರಿಸ್ತನ ಹೆಸರಿನಲ್ಲಲ್ಲದೇ ಬೇರಾವುದೇ ಹೆಸರಿನಲ್ಲಿ ಆದೇಶ ನೀಡಲಾಗುವುದಿಲ್ಲ"[೨೬]
ಮನೋವಿಜ್ಞಾನ
[ಬದಲಾಯಿಸಿ]ಕ್ರೈಸ್ತ ಆಚರಣೆಯ ಭೂತೋಚ್ಚಾಟನೆಯಲ್ಲಿ ಭೂತೋಚ್ಚಾಟನೆಯ ಕ್ರಿಯಾವಿಧಿಗೆ ಅಧಿಕಾರ ನೀಡುವ ಮುಂಚೆ, ವ್ಯಕ್ತಿಯ ಮಾನಸಿಕ ಅಥವಾ ದೈಹಿಕ ಅಸ್ವಸ್ಥತೆಯನ್ನು ಊಹಿಸುವ ವಿಧಾನವನ್ನು ಅನುಸರಿಸಲಾಗುತ್ತದೆ. ದೈಹಿಕ ಅಥವಾ ಮಾನಸಿಕ ಕಾರಣಗಳಿಂದ ಅಸ್ವಸ್ಥತೆ ಉಂಟಾಗಿರುವ ಬಗ್ಗೆ ನಿರ್ಣಯಿಸಲು ಮಾನಸಿಕ ಆರೋಗ್ಯ ಹಾಗೂ ವೈದ್ಯಕೀಯ ವೃತ್ತಿಪರರನ್ನು ನೇಮಿಸಿಕೊಳ್ಳಲಾಗುತ್ತದೆ. ಹಾನಿಕರವಲ್ಲದ ಸಂಭವನೀಯ ಎಲ್ಲ ಕಾರಣಗಳನ್ನು ತಳ್ಳಿಹಾಕಿದ ನಂತರ,ಪ್ರಕರಣವನ್ನು ಹಾನಿಕರ ಭೂತಪೀಡಿತ ಎಂದು ತೀರ್ಮಾನಿಸಿ ಭೂತೋಚ್ಚಾಟನೆ ಕ್ರಿಯಾವಿಧಿಯನ್ನು ನಿರ್ವಹಿಸಲಾಗುತ್ತದೆ.
ಗಮನಾರ್ಹ ಉದಾಹರಣೆಗಳು
[ಬದಲಾಯಿಸಿ]- ಸಾಲ್ವಡೋರ್ ಡಾಲಿ 1947ರಲ್ಲಿ ಫ್ರಾನ್ಸ್‌ನಲ್ಲಿದ್ದಾಗ ಇಟಾಲಿಟನ್ ಫ್ರಯರ್ ಗೇಬ್ರಿಲೆ ಮಾರಿಯ ಬೆರಾರ್ಡಿ ಅವರಿಂದ ಭೂತೋಚ್ಚಾಟನೆಯನ್ನು ಮಾಡಿಸಿಕೊಂಡಿದ್ದು ಜನಜನಿತವಾಗಿದೆ. ಶಿಲುಬೆಯಲ್ಲಿ ಕ್ರಿಸ್ತನ ಕೆತ್ತನೆಯನ್ನು ಸೃಷ್ಟಿಸಿದ ಡಾಲಿ ಅದನ್ನು ಫ್ರಯರ್‌ಗೆ ಅಭಿನಂದನಾಪೂರ್ವಕವಾಗಿ ನೀಡಿದ.[೨೭]
- ಅನ್ನೆಲೀಸ್ ಮೈಕೇಲ್ ಜರ್ಮನಿಯ ಕ್ಯಾಥೋಲಿಕ್ ಮಹಿಳೆಯಾಗಿದ್ದು,6 ಅಥವಾ ಅದಕ್ಕಿಂತ ಹೆಚ್ಚು ಭೂತಗಳ ಬಾಧೆಗೆ ಒಳಗಾಗಿದ್ದಳೆಂದು ಹೇಳಲಾಗಿದ್ದು, ತರುವಾಯ 1975ರಲ್ಲಿ ಭೂತೋಚ್ಚಾಟನೆಗೆ ಒಳಗಾದಳು. ಎರಡು ಚಲನಚಿತ್ರಗಳು ದಿ ಎಕ್ಸಾರ್‌ಸಿಸಮ್ ಆಫ್ ಎಮಿಲಿ ರೋಸ್ ಮತ್ತು ರಿಕ್ವೆಯಮ್ ಅನ್ನೆಲೀಸಾ ಕಥೆಯನ್ನು ಕೊಂಚಮಟ್ಟಿಗೆ ಆಧರಿಸಿವೆ. ಎಕ್ಸಾರ್ಸಿಸಮ್ ಆಫ್ ಅನ್ನೆಲೀಸ್ ಮೈಕೇಲ್ (ಪಾಲಿಶ್ ಭಾಷೆಯಲ್ಲಿ, ಆದರೆ ಇಂಗ್ಲೀಷ್ ಉಪಶೀರ್ಷಿಕೆಗಳು ಕೂಡ ಲಭ್ಯವಿದೆ)ಎಂಬ ಸಾಕ್ಷ್ಯಚಿತ್ರ ಸಹ ತಯಾರಾಗಿದ್ದು, ಭೂತೋಚ್ಚಾಟನೆಯ ವಿಧಿವಿಧಾನಗಳ ಧ್ವನಿಮುದ್ರಿತ ಟೇಪ್‌ಗಳನ್ನು ಒಳಗೊಂಡಿದೆ.[೨೮]
- "ರಾಬ್ಬಿ" ಎ.ಕೆ.ಎ.ಎಂಬ ಗುಪ್ತನಾಮದಿಂದ ಗುರುತಿಸಲಾದ ಬಾಲಕರಾಬ್ಬಿ ಡೋಯಿ"1949ರಲ್ಲಿ ಭೂತೋಚ್ಚಾಟನೆಗೆ ಒಳಗಾಗಿದ್ದನು. ಇದು ವಿಲಿಯಂ ಪೀಟರ್ ಬ್ಲ್ಯಾಟಿ ಬರೆದ ಭಯಾನಕ ಕಾದಂಬರಿ ಮತ್ತು ಚಿಲನಚಿತ್ರ ದಿ ಎಕ್ಸಾರ್ಸಿಸ್ಟ್ ಗೆ ಮುಖ್ಯ ಸ್ಫೂರ್ತಿಯನ್ನು ಒದಗಿಸಿತು. 1950ರಲ್ಲಿ ಜಾರ್ಜ್‍ಟೌನ್ ವಿಶ್ವವಿದ್ಯಾನಿಲಯದ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ,ಈ ಪ್ರಕರಣದ ಬಗ್ಗೆ ಬ್ಲ್ಯಾಟಿಗೆ ತಿಳಿದುಬಂತು. ಭೂತೋಚ್ಚಾಟನೆಯನ್ನು ಕಾಟೇಜ್ ಸಿಟಿ ಮೆರಿಲ್ಯಾಂಡ್ ಮತ್ತು ಬೆಲ್-ನಾರ್,ಮಿಸ್ಸೌರಿ ಎರಡೂ ಕಡೆ ಆಂಶಿಕವಾಗಿ ನಿರ್ವಹಿಸಲಾಯಿತು.[೨೯] ಫಾದರ್ ವಿಲಿಯಂ S.ಬೌಡರ್ನ್,S.J.,ಫಾದರ್ ರೇಮಂಡ್ ಬಿಷಪ್ S.J. ಮತ್ತು ಆಗಿನ ಜೆಸ್ಯೂಟ್,ಪಾದ್ರಿ ಪದವಿ ಪಡೆದಿರದ Fr. ವಾಲ್ಟರ್ ಹ್ಯಾಲೋರನ್,S.J. ಭೂತೋಚ್ಚಾಟನೆಯನ್ನು ನಿರ್ವಹಿಸಿದರು.[೩೦]
- ಮದರ್ ತೆರೇಸಾ ಇಳಿವಯಸ್ಸಿನಲ್ಲಿ ಕೊಲ್ಕತ್ತಾದ ಆರ್ಕ್‌ಬಿಷಪ್ ಹೆನ್ರಿ ಡಿಸೌಜಾ ನಿರ್ದೇಶನದ ಮೇಲೆ ಭೂತೋಚ್ಚಾಟನೆ ಕ್ರಿಯಾವಿಧಿಗೆ ಒಳಗಾದರು. ಮದರ್ ತೆರೇಸಾ ನಿದ್ರೆಯಲ್ಲಿ ತೀವ್ರ ತಳಮಳಕ್ಕೆ ಗುರಿಯಾಗಿ ದುಷ್ಟಶಕ್ತಿ ಹಿಡಿದಿದೆಯೆಂಬ ಅವರ ಭಯವನ್ನು ಗಮನಿಸಿದ ಆರ್ಕ್‌ಬಿಷಪ್ ಭೂತೋಚ್ಚಾಟನೆಗೆ ನಿರ್ದೇಶನ ನೀಡಿದ್ದರು.[೩೧]
- ನ್ಯೂಜಿಲೆಂಡ್ ಉಪನಗರ ವೈನುಯೊಮೋಟಾದ ವೆಲ್ಲಿಂಗ್ಟನ್ನಲ್ಲಿ ಅಕ್ಟೋಬರ್ 2007ರ ಭೂತೋಚ್ಚಾಟನೆಯಿಂದ ಮಹಿಳೆಯೊಬ್ಬಳು ಮೃತಪಟ್ಟಳು ಮತ್ತು ಹದಿವಯಸ್ಕನ(ಳ)ನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸುದೀರ್ಘ ವಿಚಾರಣೆಯ ನಂತರ, ಕುಟುಂಬದ ಐವರನ್ನು ತಪ್ಪಿತಸ್ಥರನ್ನಾಗಿಸಿ ಕಸ್ಟಡಿಯೇತರ ಶಿಕ್ಷೆಗಳಿಗೆ ಗುರಿಪಡಿಸಲಾಯಿತು.[೩೨]
- ಜೋಹನ್ ಬ್ಲಮ್‌ಹಾರ್ಡ್ ಗಾಟ್ಲೀಬಿನ್ ಡಿಟ್ಟಸ್‌ಗೆ ಭೂತೋಚ್ಚಾಟನೆಯನ್ನು 1842-1844ರವಗೆ 2 ವರ್ಷಗಳ ಅವಧಿಯಲ್ಲಿ ಜರ್ಮನಿಯ ಮಾಟ್ಲಿಂಜೆನ್‌ನಲ್ಲಿ ಕೈಗೊಂಡರು. ಪಾದ್ರಿ ಬ್ಲಮ್‌ಹಾರ್ಡ್ ಅವರ ಹೋಬಳಿಯು ತರುವಾಯ ಪಾಪ ನಿವೇದನೆ ಮತ್ತು ಚಿಕಿತ್ಸೆಯಿಂದ ಎದ್ದುಕಾಣುವಂತಹ ಬೆಳವಣಿಗೆ ಸಾಧಿಸಿತು.ಯಶಸ್ವಿ ಭೂತೋಚ್ಚಾಟನೆ ಇದಕ್ಕೆ ಕಾರಣವೆಂದು ಅವರು ಹೇಳಿದರು.[೩೩][೩೪]
ವೈಜ್ಞಾನಿಕ ದೃಷ್ಟಿಕೋನ
[ಬದಲಾಯಿಸಿ]ಭೂತ ಹಿಡಿಯುವುದು DSM-IV ಅಥವಾ ICD-10 ಗುರುತಿಸಿದ ಕ್ರಮಬದ್ಧ ಮಾನಸಿಕ ಅಥವಾ ವೈದ್ಯಕೀಯ ರೋಗನಿರ್ಣಯವಲ್ಲ. ಭೂತಹಿಡಿದಿದೆಯೆಂದು ನಂಬಿಕೆಯನ್ನು ತೋರ್ಪಡಿಸುವವರು ಕೆಲವುಬಾರಿ ಮಾನಸಿಕ ರೋಗಗಳಿಗೆ ಸಂಬಂಧಿಸಿದ ಉನ್ಮಾದತೆ,ಬುದ್ಧಿವಿಕಲ್ಪ,ಮನೋವಿಕಾರ,ಟೌರೆಟ್ ಸಿಂಡ್ರೋಮ್,ಅಪಸ್ಮಾರ,ಛಿದ್ರಮನಸ್ಕತೆ, ವಿಘಟಿತ ವ್ಯಕ್ತಿತ್ವಗಳ ವ್ಯಾಧಿಯನ್ನು ಭೂತಹಿಡಿದಿದೆಯೆಂದು ಹೊಣೆಮಾಡುತ್ತಾರೆ.[೩೫][೩೬][೩೭] ವಿಘಟಿತ ವ್ಯಕ್ತಿತ್ವದ ವ್ಯಾಧಿಯ ಪ್ರಕರಣಗಳಲ್ಲಿ,ಬದಲಾದ ವ್ಯಕ್ತಿತ್ವದ ಗುರುತನ್ನು ಪ್ರಶ್ನಿಸಿದಾಗ, 29% ತಮ್ಮನ್ನು ಭೂತಗಳೆಂದು ಗುರುತಿಸಿಕೊಂಡರೆಂದು ವರದಿಯಾಗಿದೆ.[೩೮] ಇದರ ಜತೆಗೆ ಡಿಮೋನೊಮ್ಯಾನಿಯ ಅಥವಾ ಡೆಮೊನೊಪಥಿ ಎಂದು ಕರೆಯುವ ಏಕೋನ್ಮಾದ(ಒಂದೇ ವಿಷಯದ ಮೇಲೆ ಗೀಳು)ದ ರೂಪವೊಂದಿದ್ದು, ಅದರಲ್ಲಿ ರೋಗಿಯು ಒಂದು ಅಥವಾ ಅದಕ್ಕಿಂತ ಹೆಚ್ಚು ಭೂತಗಳು ತನ್ನನ್ನು ಹಿಡಿದಿದೆಯೆಂದು ಭ್ರಮಿಸುತ್ತಾನೆ.
ಭೂತಹಿಡಿದ ಲಕ್ಷಣಗಳನ್ನು ಅನುಭವಿಸುವ ಜನರ ಮೇಲೆ ಭೂತೋಚ್ಚಾಟನೆ ಪ್ರಭಾವ ಬೀರುವುದು ಪ್ಲಸೇಬೊ ಪರಿಣಾಮದಿಂದ ಮತ್ತು ಸಲಹೆಯ ಪ್ರಭಾವದಿಂದ ಎಂದು ಕೆಲವರು ಕಾರಣ ನೀಡುತ್ತಾರೆ.[೩೯] ಕೆಲವು ಭೂತಹಿಡಿದಿದೆಯೆಂದು ಹೇಳುವ ವ್ಯಕ್ತಿಗಳು ವಾಸ್ತವವಾಗಿ ಸ್ವಪ್ರಶಂಸಕರು ಅಥವಾ ಕಡಿಮೆ ಸ್ವಾಭಿಮಾನದಿಂದ ಬಳಲುವವರಾಗಿದ್ದು,ಗಮನ ಸೆಳೆಯುವ ಉದ್ದೇಶದಿಂದ "ಭೂತ ಹಿಡಿದ ವ್ಯಕ್ತಿ"ಯಂತೆ ನಟನೆ ಮಾಡುತ್ತಾರೆ.[೩೫]
ಅದೇನೇ ಇದ್ದರೂ,ಮನೋವೈದ್ಯ M.ಸ್ಕಾಟ್ ಪೆಕ್ ಭೂತೋಚ್ಚಾಟನೆಯನ್ನು ಸಂಶೋಧನೆ ಮಾಡಿ(ಆರಂಭಿಕವಾಗಿ ಭೂತ ಹಿಡಿದಿದ್ದನ್ನು ಅಲ್ಲಗಳೆಯುವ ಯತ್ನ)ಸ್ವತಃ ತಾವೇ ಎರಡು ಭೂತೋಚ್ಚಾಟನೆಯನ್ನು ನಿರ್ವಹಿಸಿದ್ದಾಗಿ ಹೇಳಿದ್ದಾರೆ. ಭೂತ ಹಿಡಿಯುವ ಕ್ರೈಸ್ತರ ಪರಿಕಲ್ಪನೆಯು ನೈಜ ವಿದ್ಯಮಾನ ಎಂದು ಅವರು ತೀರ್ಮಾನಿಸಿದರು. ರೋಗಪತ್ತೆಮಾಡುವ ಮಾನದಂಡವು ರೋಮನ್ ಕ್ಯಾಥೋಲಿಕ್ ಚರ್ಚ್ ಬಳಸುತ್ತಿದ್ದ ಮಾನದಂಡಕ್ಕಿಂತ ವ್ಯತ್ಯಾಸವಿದೆಯೆಂದು ಅವರು ಪತ್ತೆಮಾಡಿದರು. ಭೂತೋಚ್ಚಾಟನೆಯ ವಿಧಿವಿಧಾನಗಳು ಮತ್ತು ಪ್ರಗತಿಯಲ್ಲಿ ಭಿನ್ನತೆಗಳಿವೆಂದು ಕೂಡ ಅವರು ಹೇಳಿದರು. ಅವರ ಅನುಭವಗಳ ನಂತರ,ತಮ್ಮ ಸಂಶೋಧನೆಯನ್ನು ದೃಢೀಕರಿಸುವ ಪ್ರಯತ್ನವಾಗಿ,DSMIVಯಲ್ಲಿ "ಇವಿಲ್(ದುಷ್ಟಶಕ್ತಿ)" ಎಂಬ ವ್ಯಾಖ್ಯೆಯನ್ನು ಮನೋವೈದ್ಯರ ಸಮುದಾಯವು ಸೇರಿಸುವುದರಲ್ಲಿ ಅವರು ವಿಫಲರಾದರು.[೪೦]
ಸಾಂಸ್ಕೃತಿಕ ಉಲ್ಲೇಖಗಳು
[ಬದಲಾಯಿಸಿ]This article appears to contain trivial, minor, or unrelated references to popular culture. (January 2010) |
Lists of miscellaneous information should be avoided. (January 2010) |
ಭೂತೋಚ್ಚಾಟನೆಯು ಕಾಲ್ಪನಿಕ ಕಥೆಗಳಲ್ಲಿ ಜನಪ್ರಿಯ ವಿಷಯವಾಗಿದೆ. ವಿಶೇಷವಾಗಿ ಭಯಾನಕಕಥಾವಸ್ತುವಿನಲ್ಲಿ ಜನಪ್ರಿಯವಾಗಿದೆ.
- ದಿ ಡೈಬಕ್ ( S. ಆನ್ಸ್ಕಿ)ಯವರ 1914ರ ನಾಟಕ.
- ದಿ ಎಕ್ಸಾರ್ಸಿಸ್ಟ್ (1971 ಕಾದಂಬರಿವಿಲಿಯಂ ಪೀಟರ್ ಬ್ಲ್ಯಾಟಿ)
- ದಿ ಎಕ್ಸಾರ್ಸಿಸ್ಟ್ (1973ರ ಚಲನಚಿತ್ರ)ಹಾಗೂ ಅದರ ನಂತರದ ಭಾಗಗಳು ಮತ್ತು ಪೂರ್ವಭಾಗಗಳು ಕ್ಯಾಥೋಲಿಕ್ ಭೂತೋಚ್ಚಾಟನೆ ಕ್ರಿಯಾವಿಧಿಗಳಿಂದ ಮತ್ತು ವಿಲಿಯಂ ಪೀಟರ್ ಬ್ಲ್ಯಾಟಿಯ ಕಾದಂಬರಿಗಳ ಆಧಾರಿತವಾದ ಜನಪದ ಕಥೆಯಿಂದ ಪ್ರೇರಣೆ ಹೊಂದಿದೆ.
- ರಿಪೊಸೆಸ್ಸಡ್ (1990 ಹಾಸ್ಯ ಚಲನಚಿತ್ರದಲ್ಲಿ ಲಿಂಡಾ ಬ್ಲೇರ್ ಮತ್ತು ಲೆಸ್ಲಿ ನೀಲ್ಸನ್ ಪಾತ್ರವರ್ಗ)
- ಕ್ಯಾ ಡಾರ್ಕ್ ಲೀನಿಯೇಜ್ (2003 ವಿಡಿಯೋ ಗೇಮ್)
- ಸೂಪರ್ನ್ಯಾಚುರಲ್ (2005 ಕಿರುತೆರೆ ಸರಣಿ)
- ಕಾನ್ಸ್ಟಾಂಟೈನ್ (2005 ಚಲನಚಿತ್ರ) DC/ವರ್ಟಿಗೊ ಕಾಮಿಕ್ ಪುಸ್ತಕ ಹೆಲ್ಬ್ಲೇಜರ್ ಆಧಾರಿತವಾಗಿದೆ.
- ದಿ ಎಕ್ಸರ್ಸಿಸಂ ಆಫ್ ಎಮಿಲಿ ರೋಸ್ (2005 ಚಲನಚಿತ್ರ) ಅನ್ನೆಲೀಸಿ ಮೈಕೇಲ್ ಪ್ರಕರಣದಿಂದ ಪ್ರೇರಿತವಾಗಿದೆ.
- ರೀಕ್ವಿಯಂ (2006 ಜರ್ಮನ್-ಭಾಷೆಯ ಚಲನಚಿತ್ರ ಹ್ಯಾನ್ಸ್-ಕ್ರಿಶ್ಚಿಯನ್ ಸ್ಕಿಮಿಡ್ ಅವರಿಂದ) ಅನ್ನೆಲೀಸಿ ಮೈಕೇಲ್ ಪ್ರಕರಣದ ಆಧಾರಿತವಾಗಿದೆ.
- D.ಗ್ರೇ ಮ್ಯಾನ್ (2006 ಜಪಾನೀಸ್ ಆನಿಮೇಷನ್ ಸರಣಿ ಹೋಶಿನೊ ಕಾಟ್ಸುರಾ ಅವರಿಂದ).
- ಎ ಹಾಂಟಿಂಗ್ ಭೂತಗಳು ಮತ್ತು ಭೂತೋಚ್ಚಾಟನೆ ಒಳಗೊಂಡ ನೈಜ ಕತೆಗಳನ್ನು ತೋರಿಸುತ್ತದೆ.
- ಸ್ಟಿಗ್ಮಾಟಾ (1999 ಚಲನಚಿತ್ರ ಪ್ಯಾಟ್ರಿಸಿಯ ಆರ್ಕ್ವೆಟ್ಟೆ ಮತ್ತು ಗೇಬ್ರಿಯಲ್ ಬ್ರೈನ್ ಪಾತ್ರವರ್ಗದಲ್ಲಿ)
- ಗ್ರಡ್ಜ್ 2 (2006ನೇ ಇಂಗ್ಲೀಷ್ ಚಲನಚಿತ್ರ ಜಪಾನಿನ ಜು-ಆನ್ ಸರಣಿ ಆಧಾರಿತವಾಗಿದೆ)
- ಎಲ್ ಆರ್ಫಾಂಟೊ (ದಿ ಆರ್ಫನೇಜ್) (ಜಾನ್ ಆಂಟೋನಿಯೊ ಬಯೋನ ನಿರ್ದೇಶಿಸಿದ ಮತ್ತು ಗಿಲ್ಲೆರ್ಮೊ ಡೆಲ್ ಟೋರೊ ನಿರ್ಮಾಣ ಮಾಡಿದ 2008ನೇ ಚಲನಚಿತ್ರ)
- 1920 (2008 ಬಾಲಿವುಡ್ ಚಲನಚಿತ್ರ)
- ಟ್ರೂ ಬ್ಲಡ್ (2008 HBO ಕಿರುತೆರೆ ಸರಣಿ)
- ಅಪ್ಪಾರಿಷನ್ಸ್ (2008 TV ಸರಣಿ)
- ಸೌಲ್ ಅಬ್ಸೆಷನ್ , a 2007 ಅಮಿ ಉಲ್ಫ್ ಸಾರ್ಟರ್ ಅವರಿಂದ 2007ರ ಕಾದಂಬರಿ, ಜಿವಿಷ್ ಭೂತೋಚ್ಚಾಟನೆಯ ವಿವರವಿದೆ.
- ಬಾಯ್ಸ್ ಡು ಕ್ರೈ (ಕ್ಯುಹಾಗ್ ಪಟ್ಟಣದ ಬಗ್ಗೆ 2007 ಫ್ಯಾಮಿಲಿ ಗೈ ವಿದ್ಯಮಾನ,,ಸ್ಟೀವಿಗೆ ಭೂತೋಚ್ಚಾಟನೆ ಮಾಡುವ ಪ್ರಯತ್ನದಿಂದ, ಕುಟುಂಬವು ರೋಢ್ ದ್ವೀಪವನ್ನು ಬಲವಂತವಾಗಿ ತ್ಯಜಿಸುತ್ತದೆ).
- ಮೈಕೊ d'ಅಬುರ್ (2007 ಫ್ರೆಂಚ್ ಚಲನಚಿತ್ರ)
- ಪ್ಯಾರಾನಾರ್ಮಲ್ ಸ್ಟೇಟ್ (2008 A&E TV ಸರಣಿ)
- ಜಾನ್ ಸಫ್ರಾನ್ ವರ್ಸಸ್ ಗಾಡ್ ,ತನ್ನ ಆತಿಥೇಯ ಜಾನ್ ಸಾಫ್ರಾನ್ ಅವರು ಭೂತೋಚ್ಚಾಟನೆಗೆ ಒಳಗಾಗುವ ಆಸ್ಟ್ರೇಲಿಯನ್ ಸಾಕ್ಷ್ಯಚಿತ್ರ.
- ಡೇಸ್ ಆಫ್ ಅವರ್ ಲೈವ್ಸ್ (1995ರಲ್ಲಿ ದಿನದ ಸೋಪ್ ಆಪರ ಮೇಲೆ ಪ್ರಪ್ರಥಮ ಭೂತೋಚ್ಚಾಟನೆ ಕ್ರಿಯಾವಿಧಿ)
- ಪೆನ್ & ಟೆಲ್ಲರ್: ಬುಲ್ಶಿಟ್! (ಶೋಟೈಮ್ TV ಸರಣಿ) ಭಾಗ 5, ಸಂಚಿಕೆ 5 - "ಎಕ್ಸೋರ್ಸಿಸಮ್", ಪ್ರಸಾರ ದಿನಾಂಕ: ಏಪ್ರಿಲ್ 19, 2007. ಭೂತೋಚ್ಚಾಟನೆಯ ಉಪಯುಕ್ತತೆ ಮತ್ತು ವೈಜ್ಞಾನಿಕ ಕ್ರಮಬದ್ಧತೆ ಬಗ್ಗೆ ಅನುಮಾನಾಸ್ಪದ ವಿಮರ್ಶೆಯನ್ನು ಒದಗಿಸುತ್ತದೆ.
ಇವನ್ನೂ ನೋಡಿ
[ಬದಲಾಯಿಸಿ]- ಎಕ್ಸಾರ್ಸಿಸ್ಟ್
- ಭೂತೋಚ್ಚಾಟನೆ ವಿಭಾಗದ ಸಚಿವಾಲಯ
- ಭೂತೋಚ್ಚಾಟಕರ ಅಂತಾರಾಷ್ಟ್ರೀಯ ಒಕ್ಕೂಟ
- ಕೇಸಕ್
- ಭೂತೋಚ್ಚಾಟಕರ ಪಟ್ಟಿ
- ಯೋರುಬಾ ಧರ್ಮ
- ಅನ್ಬಾರ್ನ್
- ಆಡಂಬರದ ಭೂತೋಚ್ಚಾಟನೆ
ಆಕರಗಳು
[ಬದಲಾಯಿಸಿ]- ↑ Werner 1994, p. 166
- ↑ Monier-Williams 1974, pp. 25–41
- ↑ ಮಲಾಚಿ M. (1976) ಹಾಸ್ಟೇಜ್ ಟು ದಿ ಡೆವಿಲ್: ಐವರು ಅಮೆರಿಕನ್ನರಿಗೆ ಭೂತಹಿಡಿಯುವುದು ಮತ್ತು ಭೂತೋಚ್ಚಾಟನೆ ಸಾನ್ ಫ್ರಾನ್ಸಿಸ್ಕೊ, ಹಾರ್ಪೆಕಾಲಿನ್ಸ್ p.462 ISBN 0-06-065337-X
- ↑ Herbermann, Charles, ed. (1913). . Catholic Encyclopedia. New York: Robert Appleton Company.
{{cite encyclopedia}}
: Cite has empty unknown parameters:|HIDE_PARAMETER4=
,|HIDE_PARAMETER2=
,|HIDE_PARAMETERq=
,|HIDE_PARAMETER20=
,|HIDE_PARAMETER5=
,|HIDE_PARAMETER8=
,|HIDE_PARAMETER7=
,|HIDE_PARAMETER6=
,|HIDE_PARAMETER9=
,|HIDE_PARAMETER1=
, and|HIDE_PARAMETER3=
(help) - ↑ JewishEncyclopedia.com - JESUS OF NAZARETH
- ↑ ಜೋಸೆಫಸ್, "B. J." vii. 6, § 3; Sanh. 65b.
- ↑ ಮಾರ್ಟಿನ್ M. 1976) ಹಾಸ್ಟೇಜ್ ಟು ದಿ ಡೆವಿಲ್: ದಿ ಪೊಸೆಷನ್ ಅಂಡ್ ಎಕ್ಸಾರ್ಸಿಸಮ್ ಆಫ್ ಫೈವ್ ಕಂಟೆಂಪರರಿ ಅಮೇರಿಕನ್ಸ್ . ಹಾರ್ಪರ್ ಸಾನ್ ಫ್ರಾನ್ಸಿಸ್ಕೊ ಅನುಬಂಧ ಒಂದು "ದಿ ರೋಮನ್ ರಿಚ್ಯುಯಲ್ ಆಫ್ ಎಕ್ಸಾರ್ಸಿಸಮ್" p.459 ISBN 0-06-065337-X
- ↑ Batty, David (2001-05-02). "Exorcism: abuse or cure?". Guardian Unlimited. Retrieved 2007-12-29.
- ↑ "ಕನ್ಸರ್‌ನಿಂಗ್ ಎಕ್ಸಾರ್ಸಿಸಂ", ಬುಕ್ ಆಫ್ ಅಕೇಷನಲ್ ಸರ್ವೀಸಸ್ , ಚರ್ಚ್ ಪಬ್ಲಿಷಿಂಗ್
- ↑ ೧೦.೦ ೧೦.೧ "Exorcism". Lutheran Church Missouri Synod. Archived from the original on 2004-11-10. Retrieved 2009–05–27.
{{cite web}}
: Check date values in:|accessdate=
(help) - ↑ "Can a Christian Have a Demon?". Kaohsiung Lutheran Mission. Archived from the original on 2010-01-25. Retrieved 2009–05–27.
{{cite web}}
: Check date values in:|accessdate=
(help) - ↑ ೧೨.೦ ೧೨.೧ ೧೨.೨ "Exorcism". Christian Classics Ethereal Library. Retrieved 2009–05–27.
{{cite web}}
: Check date values in:|accessdate=
(help) - ↑ Ferber, Sarah (2004). Demonic possession and exorcism in early modern France. Routledge. p. 38. ISBN 0415212650. Retrieved 2009-05-25.
- ↑ ೧೪.೦೦ ೧೪.೦೧ ೧೪.೦೨ ೧೪.೦೩ ೧೪.೦೪ ೧೪.೦೫ ೧೪.೦೬ ೧೪.೦೭ ೧೪.೦೮ ೧೪.೦೯ ೧೪.೧೦ ೧೪.೧೧ "Quotes and Paraphrases from Lutheran Pastoral Handbooks of the 16th and 17th Centuries on the Topic of Demon Possession". David Jay Webber. Retrieved 2009–05–27.
{{cite web}}
: Check date values in:|accessdate=
(help) - ↑ The Methodist Conference - Friday 25th June, 1976 (Preston). The Methodist Church of Great Britain.
...the casting out of an objective power of evil which has gained possession of a person.
{{cite book}}
:|access-date=
requires|url=
(help); Check date values in:|accessdate=
(help) - ↑ The Methodist Conference - Friday 25th June, 1976 (Preston). The Methodist Church of Great Britain.
...the authority to exorcise has been given to the Church as one of the ways in which Christ's Ministry is continued in the world.
{{cite book}}
:|access-date=
requires|url=
(help); Check date values in:|accessdate=
(help) - ↑ The Methodist Conference - Friday 25th June, 1976 (Preston). The Methodist Church of Great Britain.
The form of any service of healing for those believed to be possessed should be considered in consultation with the ministerial staff of the circuit (or in one-minister circuits with those whom the Chairman of the District suggests).
{{cite book}}
:|access-date=
requires|url=
(help); Check date values in:|accessdate=
(help) - ↑ The Methodist Conference - Friday 25th June, 1976 (Preston). The Methodist Church of Great Britain.
Since pastoral guidance is first and foremost concerned to assure the presence and love of Christ, it is important to follow this practice in these cases also.
{{cite book}}
:|access-date=
requires|url=
(help); Check date values in:|accessdate=
(help) - ↑ The Methodist Conference - Friday 25th June, 1976 (Preston). The Methodist Church of Great Britain.
The ministry of bible, prayer and sacraments should be extended to those seeking help.
{{cite book}}
:|access-date=
requires|url=
(help); Check date values in:|accessdate=
(help) - ↑ ೨೦.೦ ೨೦.೧ ೨೦.೨ "Exorcism in 2006" (PDF). Westminster Methodist Central Hall (Rev. Martin Turner). Archived from the original (PDF) on 2011-07-17. Retrieved 2009–05–25.
{{cite web}}
: Check date values in:|accessdate=
(help) - ↑ ಪೊಲೋಮಾ M. (1982) ದಿ ಚಾರಿಸ್ಮಾಟಿಕ್ ಮ್ಯೂಮೆಂಟ್: ಈಸ್ ದೇರ್ ಎ ನ್ಯೂ ಪೆಂಟೆಕೋಸ್ಟ್? p97 Isbn. 0805797211
- ↑ ಕ್ಯೂನಿಯೊ M. (2001) ಅಮೆರಿಕನ್ ಎಕ್ಸಾರ್ಸಿಸಮ್: ಎಕ್ಸ್‌ಪೆಲಿಂಗ್ ಡೆಮನ್ಸ್ ಇನ್ ದಿ ಲ್ಯಾಂಡ್ ಆಫ್ ಪ್ಲೆಂಟಿ ಡಬಲ್‌ಡೇ : ನ್ಯೂಯಾರ್ಕ್. pp.111-128 isbn. 0385501765
- ↑ ಪೊಲೋಮಾ M. (1982) ದಿ ಚಾರಿಸ್ಮಾಟಿಕ್ ಮ್ಯೂಮೆಂಟ್: ಈಸ್ ದೇರ್ ಎ ನ್ಯೂ ಪೆಂಟೆಕಾಸ್ಟ್ ? p60 isbn:0805797211
- ↑ ಕ್ಯುನಿಯೊ M. (2001)ಅಮೆರಿಕನ್ ಎಕ್ಸಾರ್ಸಿಸಮ್ : ಎಕ್ಸ್‌ಪೆಲಿಂಗ್ ಡೆಮನ್ಸ್ ಇನ್ ದಿ ಲ್ಯಾಂಡ್ ಆಫ್ ಪ್ಲೆಂಟಿ ಡಬಲ್‌ಡೇ: ನ್ಯೂಯಾರ್ಕ್. pp.118-119 Isbn: 0385501765
- ↑ ಅಮೋರ್ತ್ G. (1990) ಆನ್ ಎಕ್ಸಾರ್ಸಿಸ್ಟ್ ಟೆಲ್ಸ್ ಹಿಸ್ ಸ್ಟೋರಿ. tns. ಮೆಕೆಂಜಿ N. ಇಗ್ನೇಷಿಯಸ್ ಪ್ರೆಸ್: ಸ್ಯಾನ್ ಫ್ರಾನ್ಸಿಸ್ಕೊ. pp157-160 isbn. 0898707102
- ↑ ೨೬.೦ ೨೬.೧ ೨೬.೨ ೨೬.೩ ೨೬.೪ ೨೬.೫ ಗೆಲೇಟಾ ಅಮ್‌ಸಾಲು ಟೆಡೆಸೆ. "ಕೇಸ್ ಸ್ಟಡಿ: ಡೆಮೋನೈಸೇಷನ್ ಅಂಡ್ ದಿ ಪ್ರ್ಯಾಕ್ಟೀಸ್ ಆಫ್ ಎಕ್ಸಾರ್ಸಿಸಮ್ ಇನ್ ಇಥಿಯೋಪಿಯನ್ ಚರ್ಚಸ್ Archived 2010-01-01 ವೇಬ್ಯಾಕ್ ಮೆಷಿನ್ ನಲ್ಲಿ.". ವಿಶ್ವ ಸುವಾರ್ತೆ ಬೋಧನೆಯ ಲೌಸಾನೆ ಸಮಿತಿ, ನೈರೋಬಿ, ಆಗಸ್ಟ್ 2000.
- ↑ ಡಾಲಿ`ಸ್ ಗಿಫ್ಟ್ ಟು ಎಕ್ಸಾರ್ಸಿಸ್ಟ್ ಅನ್‌ಕವರ್ಡ್ Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ. ಕ್ಯಾಥೋಲಿಕ್ ನ್ಯೂಸ್ 14 ಅಕ್ಟೋಬರ್ 2005
- ↑ https://www.youtube.com/watch?v=y0Ak-3wS7cQ
- ↑ "St. Louis - News - Hell of a House". Archived from the original on 2009-05-27. Retrieved 2010-04-14.
- ↑ ಪಾರ್ಟ್ I - ದಿ ಹಾಂಟಡ್ ಬಾಯ್: ದಿ ಇನ್‌ಸ್ಪೈರೇಷನ್ ಫಾರ್ ದಿ ಎಕ್ಸಾರ್ಸಿಸ್ಟ್
- ↑ ಆರ್ಕ್‌ಬಿಷಪ್: ಮದರ್ ಥೆರೇಸಾ ಅಂಡರ್‌ವೆಂಟ್ ಎಕ್ಸಾರ್ಸಿಸಮ್ Archived 2005-09-17 ವೇಬ್ಯಾಕ್ ಮೆಷಿನ್ ನಲ್ಲಿ. CNN 04 ಸೆಪ್ಟೆಂಬರ್ 2001
- ↑ http://www.stuff.co.nz/dominion-post/wellington/2497284/Deadly-curse-verdict-five-found-guilty
- ↑ "Blumhardt's Battle: A Conflict With Satan". Thomas E. Lowe, LTD. Archived from the original on 2009-08-26. Retrieved 2009–09–23.
{{cite web}}
: Check date values in:|accessdate=
(help) - ↑ Friedrich Zuendel. "The Awakening: One Man's Battle With Darkness" (PDF). The Plough. Retrieved 2009–09–23.
{{cite web}}
: Check date values in:|accessdate=
(help) - ↑ ೩೫.೦ ೩೫.೧ ಹೌ ಎಕ್ಸಾರ್ಸಿಸಮ್ ವರ್ಕ್ಸ್
- ↑ "J. ಗುಡ್ವಿನ್, S. ಹಿಲ್, R. ಅಟ್ಟಿಯಾಸ್ "ಹಿಸ್ಟೋರಿಕಲ್ ಎಂಡ್ ಫೋಲ್ಕ್ ಟೆಕ್ನಿಕ್ಸ್ ಆಫ್ ಎಕ್ಸಾರ್ಸಿಸಮ್: ಅಪ್ಲಿಕೇಷನ್ಸ್ ಟು ದಿ ಟ್ರೀಟ್‌ಮೆಂಟ್ ಆಫ್ ಡಿಸೋಸಿಯೇಟಿವ್ ಡಿಸಾರ್ಡರ್ಸ್"". Archived from the original on 2006-09-08. Retrieved 2010-04-14.
- ↑ ಜರ್ನಲ್ ಆಫ್ ಪರ್ಸನಾಲಿಟಿ ಅಸ್ಸೆಸ್‌ಮೆಂಟ್ (ಆಬ್‌ಸ್ಟ್ರಾಕ್ಟ್)
- ↑ "ಮೈಕ್ರೋಸಾಫ್ಟ್ ವರ್ಡ್ - ಹರಾಲ್ಡರ್ ಎರ್ಲೆಂಡ್‌ಸನ್ 1.6.03 ಮಲ್ಟಿಪಲ್ ಪರ್ಸನಾಲಿಟಿ" (PDF). Archived from the original (PDF) on 2009-03-19. Retrieved 2010-04-14.
- ↑ ವಾಯ್ಸ್ ಆಫ್ ರೀಸನ್: ಎಕ್ಸಾರ್ಸಿಸಮ್ಸ್, ಫಿಕ್ಷನಲ್ ಎಂಡ್ ಫೇಟಲ್
- ↑ Peck M. MD (1983). People of the Lie: the Hope for Healing Human Evil. New York: Touchstone.
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- ವಿಲಿಯಂ ಬಾಲ್ಡ್ವಿನ್, D.D.S., Ph.D., "ಸ್ಪಿರಿಟ್ ರಿಲೀಸ್ಮೆಂಟ್ ಥೆರಪಿ". ISBN 0-9728223-8-0 ವ್ಯಾಪಕ ಗ್ರಂಥಸೂಚಿಗಳಿರುವ ಸ್ಪಿರಿಟ್ ರಿಲೀಸ್ಮೆಂಟ್ ಚಿಕಿತ್ಸೆಯ ವೈದ್ಯವೃತ್ತಿಗಾರ ಮತ್ತು ಬೋಧಕ
- ಶಕುಂತಲಾ ಮೋದಿ, M.D., "ರಿಮಾರ್ಕೇಬಲ್ ಹೀಲಿಂಗ್ಸ್, ಎ ಸೈಕಿಯಾಟ್ರಿಸ್ಟ್ ಡಿಸ್ಕವರ್ಸ್ ಅನ್ಸಸ್ಪೆಕ್ಟಡ್ ರೂಟ್ಸ್ ಆಫ್ ಮೆಂಟಲ್ ಅಂಡ್ ಫಿಸಿಕಲ್ ಇಲ್ನೆಸ್." ISBN 1-57174-079-1 ಚಿಕಿತ್ಸೆಯಿಂದ ನಿವಾರಣೆಯಾಗುವ ಬೇನೆಗಳ ವಿಧಗಳ ಬಗ್ಗೆ ಪ್ರಕರಣಗಳು ಮತ್ತು ಅಂಕಿಅಂಶ ಆಧಾರಿತ ಸಾರಾಂಶಗಳನ್ನು ನೀಡುತ್ತದೆ.
- ಬಾಬ್ಬಿ ಜಿಂಡಾಲ್, BEATING A DEMON: ಫಿಸಿಕಲ್ ಡೈಮೆನ್ಷನ್ಸ್ ಆಫ್ ಸ್ಪಿರಿಚ್ಯುಯಲ್ ವಾರ್ಫೇರ್ . (ನ್ಯೂ ಆಕ್ಸ್ಫರ್ಡ್ ರಿವ್ಯೂ, ಡಿಸೆಂಬರ್ 1994)
- ಮಲಾಚಿ ಮಾರ್ಟಿನ್, ಹಾಸ್ಟೇಜ್ ಟು ದಿ ಡೆವಿಲ್ . ISBN 0-06-065337-X.
- M. ಸ್ಕಾಟ್ ಪೆಕ್, ಗ್ಲಿಂಪ್ಸಸ್ ಆಫ್ ದಿ ಡೆವಿಲ್ :
ಮನೋವೈದ್ಯರೊಬ್ಬರ ಭೂತಹಿಡಿಯುವಿಕೆ,ಭೂತೋಚ್ಚಾಟನೆ ಮತ್ತು ವಿಮೋಚನೆಯ ವೈಯಕ್ತಿಕ ವಿವರಗಳು . ISBN 0-87311-016-1
- ಮ್ಯಾಕ್ಸ್ ಹೈಂಡೆಲ್, ದಿ ವೆಬ್ ಆಫ್ ಡೆಸ್ಟಿನಿ (ಅಧ್ಯಾಯ I - ಭಾಗ III: "ದಿ ಡ್ವೆಲ್ಲರ್ ಆನ್ ದಿ ಥ್ರೆಶೋಲ್ಡ್" ಅರ್ತ್ -ಬೌಂಡ್ ಸ್ಪಿರಿಟ್ಸ್, ಭಾಗ IV: ದಿ "ಸಿನ್ ಬಾಡಿ"—ಪೊಸೆಷನ್ ಬೈ ಸೆಲ್ಫ್-ಮೇಡ್ ಡೆಮನ್ಸ್—ಎಲಿಮೆಂಟಲ್ಸ್, ಭಾಗ V: ಆಬ್ಸೆಷನ್ ಆಫ್ ಮ್ಯಾನ್ ಅಂಡ್ ಆಫ್ ಎನಿಮಲ್ಸ್), ISBN 0-911274-17-0
- ಫ್ರೆಡೆರಿಕ್ M ಸ್ಮಿತ್, ದಿ ಸೆಲ್ಫ್ ಪೊಸೆಸ್‌ಡ್: ಡೈಟಿ ಎಟ್ ಸ್ಪಿರಿಟ್ ಪೊಸೆಷನ್ ಇನ್ ಸೌತ್ ಏಷ್ಯನ್ ಲಿಟರೇಚರ್ ಅಂಡ್ ಸಿವಿಲೈಸೇಷನ್ . ನ್ಯೂಯಾರ್ಕ್: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್, 2006. ISBN 0-486-20070-1
- ಗ್ಯಾಬ್ರಿಲೆ ಅಮೋರ್ತ್, ಎನ್ ಎಕ್ಸಾರ್ಸಿಸ್ಟ್ ಟೆಲ್ಸ್ ಹಿಸ್ ಸ್ಟೋರಿ . ಸ್ಯಾನ್ ಫ್ರಾನ್ಸಿಸ್ಕೊ: ಇಗ್ನೇಷಿಯಸ್ ಪ್ರೆಸ್, 1999. ವ್ಯಾಟಿಕನ್ ಮುಖ್ಯ ಭೂತೋಚ್ಚಾಟಕ ತನ್ನ ಸ್ವಂತ ಅನುಭವದ ಅನೇಕ ಉಪಾಖ್ಯಾನಗಳೊಂದಿಗೆ ಭೂತೋಚ್ಚಾಟನೆಯ ರೋಮನ್ ಕ್ಯಾಥೋಲಿಕ್ ಕ್ರಿಯಾವಿಧಿಗಳ ಬಗ್ಗೆ ವಿವರಣೆ.
- G. ಪ್ಯಾಕ್ಸಿಯಾ, ದಿ ಡೆವಿಲ್ಸ್ ಸ್ಕೌರ್ಜ್ - ಎಕ್ಸಾರ್ಸಿಸಮ್ ಡ್ಯುರಿಂಗ್ ದಿ ಇಟಾಲಿಯನ್ ರೆನೈಸೇನ್ಸ್ , Ed. ವೈಸರ್‌ಬುಕ್ಸ್ 2002.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸ್ಪೆಷಲೈಸ್ಡ್ ಕ್ಯಾಥೋಲಿಕ್ ವೆಬ್ ಎಬೌಟ್ ಪೊಸೆಷನ್ ಅಂಡ್ ಎಕ್ಸಾರ್ಸಿಸಮ್ ಸ್ಪೇನ್ ಎಕ್ಸಾರ್ಸಿಸ್ಟ್ ಫಾದರ್ ಜೋಸ್ ಆಂಟೊನಿಯೊ ಫೋರ್ಟಿಯ
- ಮೋರ್ ಅಬೌಟ್ ಎಕ್ಸಾರ್ಸಿಸಮ್ಸ್ ಇನ್ ದಿ ಕ್ಯಾಥೋಲಿಕ್ ಚರ್ಚ್ Archived 2009-07-27 ವೇಬ್ಯಾಕ್ ಮೆಷಿನ್ ನಲ್ಲಿ.
- ಇನ್ಫೋರ್ಮೇಷನ್ಸ್, ಡಾಕ್ಯುಮೆಂಟ್ಸ್, ಟೀಚಿಂಗ್ಸ್ ಆನ್ ಮಿನಿಸ್ಟ್ರಿ ಆಫ್ ಡೆಲಿವರೇನ್ಸ್ ಇನ್ ದಿ ಕ್ಯಾಥೋಲಿಕ್ ಚರ್ಚ್
- Bobby Jindal. BEATING A DEMON: ಆಧ್ಯಾತ್ಮಿಕ ಯುದ್ಧದ ದೈಹಿಕ ಆಯಾಮಗಳು (ನ್ಯೂ ಆಕ್ಸ್ಫರ್ಡ್ ರಿವ್ಯೂ ಡಿಸೆಂಬರ್ 1994)
- Herbermann, Charles, ed. (1913). . Catholic Encyclopedia. New York: Robert Appleton Company.
{{cite encyclopedia}}
: Cite has empty unknown parameters:|HIDE_PARAMETER4=
,|HIDE_PARAMETER2=
,|HIDE_PARAMETERq=
,|HIDE_PARAMETER20=
,|HIDE_PARAMETER5=
,|HIDE_PARAMETER8=
,|HIDE_PARAMETER7=
,|HIDE_PARAMETER6=
,|HIDE_PARAMETER9=
,|HIDE_PARAMETER1=
, and|HIDE_PARAMETER3=
(help) - ಜಿವಿಷ್ ಎನ್ಸೈಕ್ಲೋಪೀಡಿಯ: ಎಕ್ಸಾರ್ಸಿಸಮ್
- ಎನ್ಸೈಕ್ಲೋಪೀಡಿಯ ಬ್ರಿಟಾನಿಕಾ :ಎಕ್ಸಾರ್ಸಿಸಮ್ Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ.
- ಡಯೋಸಿಸ್ ಆಫ್ ವೋರ್ಸೆಸ್ಟರ್ ವೆಬ್ಪೇಜಸ್ ಆನ್ ಮಿನಿಸ್ಟ್ರಿ ಆಫ್ ಡೆಲಿವರೇನ್ಸ್ Archived 2007-01-08 ವೇಬ್ಯಾಕ್ ಮೆಷಿನ್ ನಲ್ಲಿ. ಆಂಗ್ಲಿಕನ್ ದೃಷ್ಟಿಕೋನ
- ಎಕ್ಸೋರ್ಸಿಸಮ್ ಇನ್ ದಿ ಆರ್ಥೋಡಾಕ್ಸ್ ಚರ್ಚ್
- Harv and Sfn no-target errors
- CS1 errors: empty unknown parameters
- Articles incorporating a citation from the 1913 Catholic Encyclopedia with Wikisource reference
- CS1 errors: dates
- CS1 errors: access-date without URL
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Articles with unsourced statements from August 2009
- Articles with invalid date parameter in template
- Articles needing additional references from October 2009
- All articles needing additional references
- Articles with unsourced statements from July 2008
- Articles with trivia sections from January 2010
- All articles with trivia sections
- ಭೂತೋಚ್ಚಾಟನೆ
- ಭೂತೋಚ್ಚಾಟನೆಯ ಕ್ಯಾಥೋಲಿಕ್ ಕ್ರಿಯಾವಿಧಿ
- ಆಧ್ಯಾತ್ಮಿಕ ಯುದ್ಧ
- ಏಸುಕ್ರಿಸ್ತನ ತತ್ವಗಳು ಮತ್ತು ಬೋಧನೆಗಳು
- ಕ್ರಿಶ್ಚಿಯನ್ ಧರ್ಮಾಚರಣೆ, ಕ್ರಿಯಾವಿಧಿಗಳು ಮತ್ತು ಪ್ರಾರ್ಥನಾ ಸೇವೆಗಳು
- ಇಸ್ಲಾಂ ಮತ್ತು ಇತರೆ ಧರ್ಮಗಳು
- ಕ್ರೈಸ್ತ ಪದಗಳು